` rajkumar, - chitraloka.com | Kannada Movie News, Reviews | Image

rajkumar,

 • ಕನ್ನಡದ ಬಾಂಡ್ 999ಗೆ 50 ವರ್ಷ

  jedara bale movie image

  ಆ್ಯಮ್ ಪ್ರಕಾಶ್. ಸಿಐಡಿ 999. ಡಾ.ರಾಜ್ ನಿರ್ಲಿಪ್ತ ಮುಖಭಾವದಲ್ಲಿ ಇಂಥಾದ್ದೊಂದು ಡೈಲಾಗ್ ಹೇಳುತ್ತಿದ್ದರೆ, ಆಗುತ್ತಿದ್ದ ಥ್ರಿಲ್ಲೇ ಬೇರೆ. ಬಾಂಡ್ ಎಂದರೆ ಜೇಮ್ಸ್‍ಬಾಂಡ್. ಆದರೆ, ಕನ್ನಡದಲ್ಲಿ ಬಾಂಡ್ ಎಂದರೆ ಡಾ.ರಾಜ್. ಕನ್ನಡದಲ್ಲಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಬಾಂಡ್ ಸರಣಿಯನ್ನು ಅನುಸರಿಸಿ ಚಿತ್ರ ಮಾಡಿದ ಇನ್ನೊಬ್ಬ ಸಾಹಸಿ ಇರಲಿಲ್ಲ. ಅಂಥಾದ್ದೊಂದು ವಿಭಿನ್ನ ಪ್ರಯೋಗ ಮಾಡಿ ಗೆದ್ದವರು ದೊರೈ-ಭಗವಾನ್. ಒತ್ತಾಸೆಯಾಗಿ ನಿಂತವರು ಎಂದಿನಂತೆ ಅಣ್ಣಾವ್ರು. ಅಂದಹಾಗೆ ಕನ್ನಡದ ಮೊತ್ತಮೊದಲ ಬಾಂಡ್ ಚಿತ್ರ ತೆರೆಗೆ ಬಂದು 50 ವರ್ಷಗಳಾಗಿವೆ. ಜೇಡರ ಬಲೆ ಚಿತ್ರ ತೆರೆಗೆ ಬಂದಿದ್ದು 1968ರಲ್ಲಿ. 

  ಅದು ಶುರುವಾಗಿದ್ದು ಹೀಗಂತೆ. ಬಿಡುವಿದ್ದಾಗಲೆಲ್ಲ ಸಿನಿಮಾ ನೋಡೋಕೆ ಹೋಗುತ್ತಿದ್ದ ಡಾ.ರಾಜ್, ವರದಪ್ಪ, ದೊರೆ, ಭಗವಾನ್.. `ಡಾ.ನೋ' ಸಿನಿಮಾ ನೋಡೋಕೆ ಹೋಗಿದ್ದಾರೆ. ಬಾಂಡ್ ಇಷ್ಟವಾಗಿದ್ದಾನೆ. ಸಿನಿಮಾ ನೋಡಿಕೊಂಡು ಹೊರಬಂದ ಮೇಲೆ, ನಿರ್ದೇಶಕ ದೊರೆ, ನಮ್ಮಲ್ಲೂ ಇಂಥ ಪ್ರಯತ್ನ ಮಾಡಬೇಕು ಎಂದಿದ್ದಾರೆ.ಡಾ.ರಾಜ್ ಜಮಾಯ್ಸಿಬಿಡಿ ಎಂದಿದ್ದಾರೆ. ಆಗ ಶುರುವಾಗಿದ್ದೇ ಜೇಡರಬಲೆ.

  ಸಿನಿಮಾ ಸಿದ್ಧವಾದ ಮೇಲೆ ನೆಗೆಟಿವ್ ತರೋಕೂ ಪರದಾಡುತ್ತಿದ್ದಾಗ, 50 ಸಾವಿರ ರೂ. ಹೊಂದಿಸಿಕೊಟ್ಟಿದ್ದ ಪಾರ್ವತಮ್ಮನವರನ್ನು ನೆನಪಿಸಿಕೊಳ್ಳುವ ಭಗವಾನ್, ಈಗ 50ನೇ ಚಿತ್ರ ನಿರ್ದೇಶಿಸುತ್ತಿದ್ದಾರೆ. ಫೆಬ್ರವರಿ 25ಕ್ಕೆ ಇದಕ್ಕಾಗಿಯೇ ಬ್ಯೂಗಲ್‍ರಾಕ್‍ನಲ್ಲಿ ಒಂದು ಸಮಾರಂಭ ಇಟ್ಟುಕೊಳ್ಳಲಾಗಿದೆ.

  ಅಂದಹಾಗೆ ಜೇಡರಬಲೆಯಿಂದ ಶುರುವಾದ ಬಾಂಡ್ ಚಿತ್ರಗಳ ಸರಣಿಯಲ್ಲಿ, ಗೋವಾದಲ್ಲಿ ಸಿಐಡಿ 999, ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿಐಡಿ 999 ಹಾಗೂ ಆಪರೇಷನ್ ಡೈಮಂಡ್ ರ್ಯಾಕೆಟ್ ಚಿತ್ರಗಳು ಬಂದಿವೆ. ಎಲ್ಲ ಚಿತ್ರಗಳೂ ಸೂಪರ್ ಹಿಟ್ ಎನ್ನುವುದು ವಿಶೇಷ.

 • ಕಾಡಿನಲ್ಲಿದ್ದ ರಾಜ್ ಜೊತೆ ಫೋನ್ ನಲ್ಲಿ ಮಾತನಾಡಿದ ವ್ಯಕ್ತಿ ಯಾರು?

  rajkumar, veerappan, rockline venkatesh image

  ಡಾ. ರಾಜ್ ಕುಮಾರ್ ಅಪಹರಣದ ಸಮಯದಲ್ಲಿ ಬಹಳಷ್ಟು ಓಡಾಡಿದವರು ರಾಕ್ ಲೈನ್ ವೆಂಕಟೇಶ್. ಮೊಟ್ಟ ಮೊದಲ ಬಾರಿಗೆ ರಾಕ್ ಲೈನ್ ಚಿತ್ರಲೋಕ ಜೊತೆಗೆ ಅನೇಕ ವಿಷಯಗಳನ್ನ ತಿಳಿಸಿದ್ದಾರೆ. ಈ ಸಂಚಿಕೆಯಲ್ಲಿ ರಾಕ್ ಲೈನ್ ಭಾವುಕರಾಗುತ್ತಾರೆ. ಕಾರಣ... ವಿಡಿಯೋ ನೋಡಿ..

   

 • ಕಾಡಿನಿಂದ ಬಿಡುಗಡೆಗೊಂಡ ರಾಜ್‌ರನ್ನು ಮೊದಲು ನೋಡಿದ್ದು ಯಾರು?

  rajkuma released from veerappan image

  ನವೆಂಬರ್ 14, 2000. ವರನಟ ಡಾ. ರಾಜ್ ಕುಮಾರ್ ವೀರಪ್ಪನ್ ಕಪಿ ಮುಷ್ಠಿಯಿಂದ ಬಿಡುಗಡೆಗೊಂಡ ದಿನ. ಆ ದಿನ ಕಾಡಿನಿಂದ ಬಂದ ರಾಜ್ ಅವರನ್ನ ಮೊದಲು ನೋಡಿದ್ದು ಯಾರು? ಆ ಸಮಯದಲ್ಲಿ ಅವರು ಎಲ್ಲಿದ್ದರು? ಎಲ್ಲವನ್ನೂ ವಿವರಿಸಿದ್ದಾರೆ ರಾಕ್ ಲೈನ್ ವೆಂಕಟೇಶ್

  November 14, 2000. Dr Rajkumar came out from the clutches for forest brigand Veerappan. When he came out from the forest who was the first person to meet him? What happened that day? Rockline Venkatesh explains in details. 

   

 • ಕುರುಕ್ಷೇತ್ರ ಆಗ ಬಂದಿದ್ರೆ.. ರಾಜ್ ಒಬ್ರೇ ಅಂದ್ರು ದರ್ಶನ್

  darshan - rajkumar image

  ಕುರುಕ್ಷೇತ್ರ ಬಾಕ್ಸಾಫೀಸ್‍ನಲ್ಲಿ ದಾಖಲೆಗಳನ್ನು ಕೊಳ್ಳೆ ಹೊಡೆಯುತ್ತಿದೆ. ಪ್ರವಾಹ ಇಲ್ಲದೇ ಹೋಗಿದ್ದರೆ ಇನ್ನೂ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತಿದ್ದ ಕುರುಕ್ಷೇತ್ರ ಅಕಸ್ಮಾತ್ 70-80ರ ದಶಕದಲ್ಲಿ ಬಂದಿದ್ದರೆ.. ಇಂಥಾದ್ದೊಂದು ಪ್ರಶ್ನೆ ಸ್ವತಃ ದುರ್ಯೋಧನ ದರ್ಶನ್ ಅವರಿಗೆ ಎದುರಾಗಿದೆ. ಆ ಕಾಲದಲ್ಲೇ ಏನಾದರೂ ಕುರುಕ್ಷೇತ್ರ ಬಂದಿದ್ದರೆ ದುರ್ಯೋಧನನ ಪಾತ್ರಕ್ಕೆ ಯಾರು ಸೂಕ್ತವಾಗಿರುತ್ತಿದ್ದರು ಅನ್ನೋದು ದರ್ಶನ್ ಎದುರು ಬಂದ ಪ್ರಶ್ನೆ.

  ಕನ್ನಡ ಚಿತ್ರರಂಗದಲ್ಲಿ ದಿಗ್ಗಜರು ಅಂತಾ ಬಂದ್ರೆ ಹಲವರಿದ್ದಾರೆ. ಆದರೆ ಈ ಪಾತ್ರಕ್ಕೆ ಅಣ್ಣಾವ್ರನ್ನು ಬಿಟ್ರೆ ಬೇರೆ ಯಾರೂ ಸೂಕ್ತ ಆಯ್ಕೆ ಆಗುತ್ತಿರಲಿಲ್ಲ ಎಂದಿದ್ದಾರೆ ದರ್ಶನ್.

  ದುರ್ಯೋಧನನ ಪಾತ್ರಕ್ಕೆ ತಯಾರಾಗಲು ತಾವು ಭಕ್ತ ಪ್ರಹ್ಲಾದ ಚಿತ್ರವನ್ನು 200ಕ್ಕೂ ಹೆಚ್ಚು ಬಾರಿ ನೋಡಿದ್ದೇನೆ. ರಾಜ್ ಅವರ ಹಿರಣ್ಯಕಶಿಪು ಪಾತ್ರವನ್ನು ನೋಡಿಕೊಂಡು ನನಗೆ ಹೊಂದುವ ರೀತಿಯಲ್ಲಿ ಬದಲಿಸಿಕೊಂಡಿದ್ದೇನೆ ಎಂದು ಮುಕ್ತವಾಗಿ ಹೇಳಿಕೊಂಡಿದ್ದರು ದರ್ಶನ್.

 • ಗಾನಕೋಗಿಲೆ ರಾಜ್ ಶಾರೀರದ ಗುಟ್ಟು ಹೇಳಿದ ರಾಘಣ್ಣ

  secret behind dr raj's voice

  ಡಾ.ರಾಜ್‍ಕುಮಾರ್, ವರನಟನಷ್ಟೇ ಅಲ್ಲ, ಗಾನಕೋಗಿಲೆಯೂ ಹೌದು. ಡಾ.ರಾಜ್‍ರ ಕನ್ನಡ, ಕನ್ನಡದ ಉಚ್ಛಾರಣೆ, ಪದ ಪ್ರಯೋಗದಲ್ಲಿನ ಏರಿಳಿತ, ಹ್ರಸ್ವ, ದೀರ್ಘ, ಅನುಸ್ವಾರಗಳನ್ನು ಸಲೀಸಾಗಿ ಬಳಸುತ್ತಿದ್ದ ರೀತಿ.. ಪ್ರತಿಯೊಬ್ಬರಿಗೂ ಮಾದರಿ. ಅದ್ಭುತ ಗಾಯನಕ್ಕಾಗಿಯೇ ರಾಷ್ಟ್ರ ಪ್ರಶಸ್ತಿ ಪಡೆದಿರುವ ಡಾ.ರಾಜ್‍ಕುಮಾರ್ ಅವರ ಕಂಠಸಿರಿಯ ರಹಸ್ಯ ಏನು..? ಅದನ್ನು ಡಾ.ರಾಜ್‍ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್‍ಕುಮಾರ್ ಹೇಳಿಕೊಂಡಿದ್ದಾರೆ.

  ರಾಜ್ ಅವರ ಕಂಠ ಶುದ್ಧಿ ಮಾಡಿದ್ದವರು ಅವರ ತಾತ. ರಾಜ್ ಮನೆಯವರು ರಂಗಭೂಮಿ ಹಿನ್ನೆಲೆಯವರು. ಹೀಗಾಗಿ ಚಿಕ್ಕ ವಯಸ್ಸಿನಿಂದಲೇ ಅಭ್ಯಾಸ ಮಾಡಿಸಿದ್ದರಂತೆ. ರಾತ್ರಿ ವೇಳೆ ದೊಡ್ಡದೊಂದು ಮಡಕೆಯಲ್ಲಿ ನೀರನ್ನು ತುಂಬಿಸಿಡುತ್ತಿದ್ದರಂತೆ ತಾತ. ಬೆಳಗ್ಗೆಯ ಹೊತ್ತಿಗೆ ಆ ನೀರು ಐಸ್ ವಾಟರ್‍ನಷ್ಟು ತಣ್ಣಗಿರುತ್ತಿತ್ತು. ಮಡಕೆಯೂ ಫ್ರಿಜ್‍ನಂತಾಗಿರುತ್ತಿತ್ತು. ಆಗ ಬಾಲಕ ರಾಜ್, ಆ ಮಡಿಕೆಯನ್ನು ಬೆಳಗ್ಗೆಯೇ ತಬ್ಬಿ ಹಿಡಿಯಬೇಕಿತ್ತು. ಸಹಜವಾಗಿಯೇ ಮೈ ನಡುಕ ಶುರುವಾಗುತ್ತಿತ್ತು. ಆ ಮೈ ನಡುಕ ನಿಂತ ಮೇಲೆ ಸತತ ಒಂದು ಗಂಟೆ ಅಭ್ಯಾಸ ಮಾಡಿಸುತ್ತಿದ್ದರಂತೆ ಅವರ ತಾತ. 

  ಗಾನ ಕಂಠೀರವ ಡಾ.ರಾಜ್‍ಕುಮಾರ್ ಅವರ ಸುಶ್ರಾವ್ಯ ಕಂಠದ ರಹಸ್ಯವನ್ನು ಸ್ವತಃ ರಾಘವೇಂದ್ರ ರಾಜ್‍ಕುಮಾರ್, ರಿಯಾಲಿಟಿ ಶೋದಲ್ಲಿ ಬಹಿರಂಗಪಡಿಸಿದ್ದಾರೆ.

 • ಮತ್ತೆ ಮತ್ತೆ ರಾಜ್ ವಿಷ್ಣು - ಕನ್ನಡ ಬೆಳ್ಳಿತೆರೆಯಲ್ಲಿ ಇವತ್ತಿಗೂ ಇವರೇ ರಾಜರು

  rajkumar, vishnuvardhan, yash, puneeth

  ಸುಮ್ಮನೆ ನೆನಪಿಸಿಕೊಳ್ಳಿ. ಇತ್ತೀಚೆಗೆ ಹಿಟ್ ಆದ ಎರಡು ಚಿತ್ರಗಳಲ್ಲಿ ಒಂದು ರಾಜಕುಮಾರ. ಇಡೀ ಚಿತ್ರದಲ್ಲಿ ರಾಜ್ಕುಮಾರ್ ಛಾಯೆ ಇದ್ದೇ ಇದೆ. ಚಿತ್ರದ ಹಾಡುಗಳಲ್ಲಿ, ಡೈಲಾಗುಗಳಲ್ಲಿ, ಚಿತ್ರದಲ್ಲಿ, ಚಿತ್ರದ ಕಥೆಯಲ್ಲಿ ರಾಜ್ ಇದ್ದೇ ಇರುತ್ತಾರೆ.

  ಇನ್ನೊಂದು ಹಿಟ್ ಚಿತ್ರ ಬಂಗಾರ S/O ಬಂಗಾರದ ಮನುಷ್ಯ ಚಿತ್ರದಲ್ಲೂ ಹಾಗೇ. ಚಿತ್ರದುದ್ದಕ್ಕೂ ರಾಜ್ ಕಾಡುತ್ತಲೇ ಹೋಗುತ್ತಾರೆ. ನಾಗರಹಾವು ಚಿತ್ರದಲ್ಲಿ ರಾಜ್ಕುಮಾರ್ರನ್ನು ಒಂದು ವಿಶೇಷ ಪಾತ್ರವಾಗಿ ತೋರಿಸಲಾಗಿತ್ತು. ಗ್ರಾಫಿಕ್ಸ್ನಲ್ಲಿ ಮರುಸೃಷ್ಟಿ ಮಾಡಿ ಚಿತ್ರದ ಬಗ್ಗೆ ದೊಡ್ಡ ಹೈಪ್ ಸೃಷ್ಟಿಸಲಾಗಿತ್ತು.

  ಯಶ್ ಅಭಿನಯದ ಸೂಪರ್ ಹಿಟ್ ಚಿತ್ರ ನಡೆಯುವುದೇ ವಿಷ್ಣುವರ್ಧನ್ರ ರಾಮಾಚಾರಿ ನೆನಪಿನಲ್ಲಿ. ಯಶ್ ಅಭಿನಯದ ಇನ್ನೊಂದು ಚಿತ್ರ ಗಜಕೇಸರಿಯಲ್ಲೂ ಅಷ್ಟೆ, ಯಶ್, ರಾಜ್ಕುಮಾರ್ ಅಭಿಮಾನಿ. ಚಿತ್ರದ ಕಥೆಯಲ್ಲಿ ರಾಜ್ ನೆನಪಾಗುತ್ತಲೇ ಇರುತ್ತಾರೆ. ಸುದೀಪ್ ಅಭಿನಯದ ಕೋಟಿಗೊಬ್ಬ 2 ಟೈಟಲ್ನಲ್ಲೇ ವಿಷ್ಣು ಇದ್ದರು. ಕೋಟಿಗೊಬ್ಬ 3ರಲ್ಲೂ ವಿಷ್ಣು ನೆನಪು ಕಾಡುತ್ತೆ. ಸುದೀಪ್ ಅಭಿನಯದ ಸೂಪರ್ ಹಿಟ್ ಚಿತ್ರವೊಂದರ ಹೆಸರೇ ವಿಷ್ಣುವರ್ಧನ.

  ಆ ಚಿತ್ರದಲ್ಲಿ ಸುದೀಪ್ ಪಾತ್ರದ ಹೆಸರೂ ವಿಷ್ಣುವರ್ಧನ. ಇದು ಹೊಸದೇನಲ್ಲ. ಇನ್ನು ಈಗ ಬರುತ್ತಿರುವ ಚಿತ್ರಗಳಲ್ಲೂ ರಾಜ್ ಇದ್ದಾರೆ. ವಿಷ್ಣುವೂ ಇದ್ದಾರೆ. ಶರಣ್ ಮತ್ತು ಚಿಕ್ಕಣ್ಣ ಅಭಿನಯದ ರಾಜ್ ವಿಷ್ಣು ಚಿತ್ರದಲ್ಲಿ ಇಬ್ಬರೂ ದಿಗ್ಗಜರ ನೆನಪಾಗುತ್ತಿದೆ. ದುನಿಯಾ ವಿಜಿ ಅಭಿನಯದ ಕನಕ  ಚಿತ್ರದಲ್ಲೂ ಅಷ್ಟೆ. ಹೀರೋ ರಾಜ್ ಕುಮಾರ್ ಅಭಿಮಾನಿ ಮತ್ತು ಆಟೋ ಡ್ರೈವರ್ ಎನ್ನುವುದಷ್ಟೇ ನಿರ್ದೇಶಕ ಹೇಳಿರುವ ಕಥೆಯ ಎಳೆ. ಸಂಭ್ರಮವವೇ ಇರಲಿ, ಸಂದೇಶವೇ ಇರಲಿ.. ಹಾಸ್ಯ, ವಿಷಾದ, ಜೀವನ..ಹೀಗೆ ಯಾವುದೇ ಇರಲಿ.

  ಚಿತ್ರರಂಗ ರಾಜ್ ವಿಷ್ಣು ಇಬ್ಬರನ್ನೂ ಮರೆಯೋದಿಲ್ಲ ಎನ್ನುವುದಕ್ಕೆ ಪದೇ ಪದೇ ಸಾಕ್ಷಿಗಳು ಸಿಗುತ್ತಲೇ ಹೋಗುತ್ತವೆ. ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಸ್ಟಾರ್ಗಳು ವರ್ಷಕ್ಕೆ ಒಂದೋ ಎರಡೋ ಚಿತ್ರ ಮಾಡಿದರೆ ಹೆಚ್ಚು. ಆದರೆ, ರಾಜ್ ವಿಷ್ಣು ಪ್ರತೀ ವರ್ಷ ರಿಲೀಸ್ ಆಗುವ 100 ಚಿತ್ರಗಳಲ್ಲಿ ಕನಿಷ್ಠ ಹತ್ತರಲ್ಲಾದರೂ ಒಂದು ಪಾತ್ರವಾಗಿರುತ್ತಾರೆ. ಕಥೆಯಾಗಿರುತ್ತಾರೆ.

  ಭೌತಿಕವಾಗಿ ಇಬ್ಬರೂ ಇಲ್ಲದೇ ಇರಬಹುದು. ಆದರೆ, ಕನ್ನಡ ಚಿತ್ರರಂಗದ ಹಾಲಿ ಸ್ಟಾರ್ಗಳ ಲಿಸ್ಟಲ್ಲಿ ಅವರನ್ನೂ ಸೇರಿಸಿಕೊಳ್ಳಬಹುದು.

   

 • ಮಾನ್ವಿತಾ ಪೇಂಯ್ಟಿಂಗ್ ಕೂಡಾ ಮಾಡ್ತಾರೆ..!

  manvitha draws sketches of rajkumar and rajanikanth

  ಟಗರು ಪುಟ್ಟಿ ಮಾನ್ವಿತಾ ಪೇಂಯ್ಟಿಂಗ್ ಕೂಡಾ ಮಾಡ್ತಾರೆ. ಹೌದು, ಟಗರು ಚಿತ್ರದ ಈ ಕೆಂಡಸಂಪಿಗೆ, ಫ್ರೀ ಇದ್ದಾಗ ಬೇರೆ ಬೇರೆ ಹವ್ಯಾಸಗಳನ್ನಿಟ್ಟುಕೊಂಡಿದ್ದಾರೆ. ಓದುವುದು ಅವರ ನೆಚ್ಚಿನ ಹವ್ಯಾಸ. ಇದರ ಜೊತೆ ಪೇಂಯ್ಟಿಂಗ್, ಡ್ರಾಯಿಂಗ್ ಹವ್ಯಾಸವೂ ಇದೆ. 

  ಹೀಗೆಯೇ ಇತ್ತೀಚೆಗೆ ಡಾ.ರಾಜ್ ಕುಮಾರ್ ಹಾಗೂ ರಜನಿಕಾಂತ್ ಚಿತ್ರಗಳನ್ನು ಡ್ರಾಯಿಂಗ್ ಮಾಡಬೇಕು ಎನಿಸಿದೆ. ತಕ್ಷಣ ಬ್ರಷ್ ತೆಗೆದುಕೊಂಡಿದ್ದಾರೆ. ಬ್ಲೂ ಇಂಕ್ ಪೆನ್‍ನಲ್ಲಿ ಒಮ್ಮೆಯೂ ಅಳಿಸದೆ ಇಬ್ಬರೂ ಸ್ಟಾರ್ ನಟರ ಚಿತ್ರವನ್ನು ಅರಳಿಸಿದ್ದಾರೆ.

  ಅನಿಮೇಷನ್ ಕೋರ್ಸ್ ಮಾಡಿರೋದ್ರಿಂದ ಪೆನ್ ಹಾಗೂ ಪೆನ್ಸಿಲ್ ಸ್ಕೆಚ್ ಮಾಡೋದು ಗೊತ್ತು. ಡ್ರಾಯಿಂಗ್ ಮಾಡೋದೆಂದರೆ ನನಗೆ ಬಹಳ ಇಷ್ಟ. ಅದು ನನ್ನ ಬಾಲ್ಯವನ್ನು ನೆನಪಿಸುತ್ತೆ ಎಂದು ಹೇಳಿಕೊಂಡಿದ್ದಾರೆ ಮಾನ್ವಿತಾ.