` rajkumar, - chitraloka.com | Kannada Movie News, Reviews | Image

rajkumar,

 • ``ಅವರು ರಾಜ್ ಕುಮಾರ್. ಅವರೊಬ್ಬರೇ ಇರಲಿ. ನಾವು ಫಾಲೋ ಮಾಡೋಣ''

  there can be only one rajkumar says shivarajkumar

  ಹ್ಯಾಟ್ರಿಕ್ ಹೀರೋ ಎಂಬ ಬಿರುದನ್ನು ಮೊನ್ನೆ ಮೊನ್ನೆ ಕೊಟ್ಟ ಹಾಗಿದೆ. ಸೆಂಚುರಿ ಸ್ಟಾರ್ ಪಟ್ಟ ಹತ್ತಿದ ಮೇಲೂ ಅಷ್ಟೇ ಆಕ್ಟಿವ್ ಆಗಿರುವ ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಬಂದು 34 ವರ್ಷ. ವಯಸ್ಸು 58 ವರ್ಷ. ಆನಂದ್ ಚಿತ್ರದಿಂದ ಆರ್‍ಡಿಎಕ್ಸ್‍ವರೆಗೆ ಶಿವಣ್ಣ ಬದಲಾಗದೇ ಇರುವುದು ವ್ಯಕ್ತಿತ್ವದಲ್ಲಿ. ನಟನಾಗಿ ಒಂದೊಂದೇ ಮಜಲು ಏರುತ್ತಿರುವ ಶಿವರಾಜ್ ಕುಮಾರ್ ಮನಸ್ಸಿಗೆ ಅನ್ನಿಸಿದ್ದನ್ನು ಓಪನ್ ಆಗಿ ಹೇಳಿ ಬಿಡ್ತಾರೆ. ಈ ಬಾರಿಯೂ ಅಷ್ಟೇ.. ನೀವು ರಾಜ್‍ಕುಮಾರ್ ಸ್ಟೈಲ್ ಫಾಲೋ ಮಾಡ್ತೀರಾ ಎಂಬ ಪ್ರಶ್ನೆ ಎದುರಾದಾಗ ಶಿವಣ್ಣ ಉತ್ತರಿಸಿದ್ದು ಹೀಗೆ.

  ನನಗೆ ವಯಸ್ಸು 58 ಆಗಿದೆ. ಹಾಗಂತ ಜೀನ್ಸ್, ಟೀಷರ್ಟ್ ಹಾಕಬಾರದು ಅಂತಾ ರೂಲ್ಸ್ ಇದೆಯಾ..? ನಾನು ಸಾಧು ಅಲ್ಲ. ಮನುಷ್ಯ. ಆಸೆಗಳಿವೆ. ಚೆನ್ನಾಗಿ ಕಾಣಬೇಕು, ಜನ ನೋಡಬೇಕು ಅನ್ನೋ ಆಸೆಯಿದೆ. ಅಪ್ಪ ಹಾಗೆ ಇರ್ತಿದ್ರು ಅಂತಾ ನಾನೂ ಹಾಗೇ ಇರೋಕೆ ಆಗಲ್ಲ. ಅವರು ರಾಜ್‍ಕುಮಾರ್. ರಾಜ್‍ಕುಮಾರ್ ಒಬ್ಬರೇ ಆಗಿರಲಿ, ಅದು ನನ್ನ ಆಸೆ. ಅವರನ್ನು ಫಾಲೋ ಮಾಡೋಣ, ಅವರ ಸ್ಟೈಲ್‍ಗಳನ್ನಲ್ಲ. ಅಪ್ಪನ ಸ್ಟೈಲ್ ಅಪ್ಪನದ್ದು. ಇದು ಅವರ ಮಗನ ಫಿಗರ್ ಎಂದಿದ್ದಾರೆ ಶಿವಣ್ಣ.

 • 10 ಎಂಜಿಆರ್‍ಗೆ ಒಬ್ಬ ರಾಜ್‍ಕುಮಾರ್ ಸಮ - ರಜನಿಕಾಂತ್

  rajinikanth says 10 mgr is equal to 1 rajkumar

  ಡಾ.ರಾಜ್‍ಕುಮಾರ್ ಬಗ್ಗೆ ಭಾರತೀಯ ಚಿತ್ರರಂಗದ ಸೂಪರ್‍ಸ್ಟಾರ್‍ಗಳೆಲ್ಲ ಪ್ರೀತಿ, ಅಭಿಮಾನದಿಂದ ಮಾತನಾಡ್ತಾರೆ. ರಜನಿಕಾಂತ್ ಕೂಡಾ ಅದಕ್ಕೆ ಹೊರತೇನಲ್ಲ. ಇತ್ತೀಚೆಗೆ ರಜನಿ ತಮ್ಮ 2.0 ಸಿನಿಮಾ ಕುರಿತ ಟಿವಿ ಸಂದರ್ಶನದಲ್ಲಿ ಡಾ.ರಾಜ್ ಬಗ್ಗೆ ಮಾತನಾಡಿದ್ದರು. ಅಲ್ಲಿದ್ದ ಪ್ರಶ್ನೆ ಒಂದೇ..

   `ನಿಮ್ಮ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಾರೆ. ಹಾಗೆ.. ನೀವು ಯಾರ ಸಿನಿಮಾಗಾಗಿ ಕಾಯುತ್ತಿದ್ದಿರಿ' ನಿರೂಪಕಿ ಕೇಳಿದ ಈ ಪ್ರಶ್ನೆಗೆ ರಜನಿ ನೀಡಿದ ಉತ್ತರ ಇದು.

  `ಡಾ.ರಾಜ್‍ಕುಮಾರ್. ಕನ್ನಡದ ಸೂಪರ್‍ಸ್ಟಾರ್. ಅವರ ಸಿನಿಮಾಗಳಿಗಾಗಿ ನಾನು ಕ್ಯೂ ನಿಲ್ಲುತ್ತಿದ್ದೆ. ನಾವು ಅವರ ದೊಡ್ಡ ಅಭಿಮಾನಿ. ತಮಿಳಿನಲ್ಲಿ ಎಂಜಿಆರ್ ಹೇಗೋ.. ಹಾಗೆ ಕನ್ನಡದಲ್ಲಿ ಡಾ.ರಾಜ್. 10 ಎಂಜಿಆರ್ ಸೇರಿದರೆ ಒಬ್ಬ ಡಾ.ರಾಜ್‍ಗೆ ಸಮ..' ಹೀಗೆ ರಾಜ್ ಗುಣಗಾನ ಮಾಡಿದ್ದಾರೆ ರಜನಿ.

  ಇತ್ತೀಚೆಗೆ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದ ವೇಳೆ, ಅಭಿಮಾನಿಗಳ ಉತ್ಸಾಹ, ಎಕ್ಸೈಟ್‍ಮೆಂಟ್ ಕಂಡ ರಜನಿಕಾಂತ್ `ನಿಮ್ಮ ಉತ್ಸಾಹ ನನಗೆ ಅರ್ಥವಾಗುತ್ತೆ. ನಾನೂ ರಾಜ್‍ಕುಮಾರ್ ಅವರನ್ನು ನೋಡಲು ಹೀಗೆಯೇ ಹೋಗುತ್ತಿದ್ದೆ. ಮೊದಲ ಬಾರಿ ಅವರನ್ನು ಕಂಡಾಗ ಕಾಲು ಮುಟ್ಟಿ ನಮಸ್ಕರಿಸಿದ್ದೆ' ಎಂದು ಹೇಳಿದ್ದರು. 

 • 35th Anniversary of Gokak Chaluvali - Exclusive

  Gokak Cheluvli Image

  This year is the 35th anniversary of the Gokak Chaluvali. The movement started by Kannada literary personalities to bring back Kannada as the medium of school education became a popular movement of the common man with the entry of Dr Rajkumar and other Kannada film actors in its support. The event is a landmark in the history of modern Karnataka. Rajkumar has become synonymous as the face of the movement. At its 35th anniversary, here is a look at what it meant.

  In 1968 the Central government introduced the three-language formula in education. For north Indian Hindi speaking states, the formula wanted them to study Hindi, English and a modern Indian language. For south Indian states including Karnataka, school children had to study Hindi, English and a regional language. However in practice, north Indian states studied only Hindi and English while Tamil Nadu rejected the formula and taught only Tamil and English. But in Karnataka, most schools taught Hindi, Sanskrit and English while Kannada was ignored. 

  gokak_2_17.jpg

  Kannada writers opposed this development and demanded that the Karnataka government make Kannada the primary medium of education in schools. A committee was formed by the Governemtn on 5th July 1980. Professor V. K. Gokak who later won the Jnanapita award was its Chairman. The committee submitted its report and said that Kannada should be the medium of instruction in schools. However this was opposed by minority linguistic groups. Kannada writers demanded the implementation of the report. 

  The movement did not catch popular attention. But things changed rapidly when Dr Rajkumar agreed to the call by Kannada writers to join the movement. Along with other Kannada actors, Rajkumar travelled the length and breadth of Karnataka addressing rallies and garnering support for the implementation of the Gokak Report. The people of Karnataka responded overwhelmingly. The Gokak Chaluvali turned out to be one of the most important events in the history of Karnataka post 1947. 

  It was because of this movement that Kannada was declared as athe official language of the Karnataka government. Though the demand for primary education in Kannada for all students is still a matter of demand, the movement brought to focus the importance of Kannada in the administration and education. It still stands  testimony to Dr Rajkumar's contribution to the cause of Kannada. Later the government also constituted the Sarojini Mahishi committee which gave a report for reservation for Kannadigas. 

  Very few people who participated in the Gokak Chaluvali are around now. One of the few people who was in the middle of the movement and watched every step of Rajkumar during 1983 is Sa Ra Govindu. 

 • 66 Years of Bedara Kannappa & Annavru

  Bedara Kannappa Image

  On this day, 66 years ago, Indian film industry witnessed the birth of a superstar on the silver screen with the release of Kannada feature film which introduced Rajkumar in the lead character portraying the character of Bedara Kannappa. 

  History 25 - Rajkumar's First Film

  The film went onto create a milestone in the Indian film industry with the lead actor eventually turning out to be as one of the greatest actors on the planet. Rajkumar soon became the premier actor of Kannada film industry and later the only actor to act in more than 200 plus films, in the lead as hero with 100 per cent success rate.

  History 27 - Landmark Film Bedara Kannappa

  The film - Bedara Kannappa, directed by H L N Simha and produced by Gubbi Veeranna and two others released on May 7, 1954. It also featured Pandari Bai, Raja Sulochana, and even marked the debut of one of the greatest comedian Narasimharaju.

  The movie was also remade in Telugu, which was again a huge hit. It stands out to be the only non-Kannada movie featuring Dr. Rajkumar in his long drawn career.

  Apart from winning national award for best film, the film was remade in other languages such as Tamil, Telugu and Hindi which makes it the first-ever pan-India movie from the Kannada film industry.

  Also Read

  History 25 - Rajkumar's First Film

  History 27 - Landmark Film Bedara Kannappa

 • Babruvahana Set for Gulf

  babruvahana image

  The new old film, Babruvahana, that released last week is set for release in several Gulf centers later this month. The 1977 film which was digitally enhanced and given the latest sound technology was released last week to a good response all over Karnataka.

  Now the Rajkumar starrer film is also in demand from overseas audience. To fulfil this demand for the film, it is being scheduled for release many centres in the Gulf region. It will be screened in several emirates of UAE and other countries in the Middle-East.

  As of now, some of the places it is scheduled to be released later this month include Dubai, Sharjah and Abu Dhabi. In Oman it is scheduled for release in Salalah, Muscat and Sohar.

 • Babruvahana to be Released for Dr Rajakumar's Birthday

  babruvahana image

  Two years back Dr Rajakumar's evergreen hit 'Kasturi Nivasa' was released by K C N Mohan. This year his brother and producer K C N Chandrashekhar is all set to release Dr Rajakumar's another classic film 'Babruvahana' with technology on his birthday.

  chitraloka_group1.gif

  'Babruvahana' was directed by Hunsur Krishnamurthy and the film was released 35 years back. Now K C N Chandru is all set to release the film in DI, DTS and 7.1 Surround Sound. K C N Chandru has announced that the film will be released during the occasion of Dr Rajakumar's birthday and the film will be hitting the screens on the 22nd of April this year.

 • Dodmane Hudga Mahalaya Amavasye Coincidence

  dodmane huduga mahalaya amavasye coincidence

  16 years on the Mahalaya Amavasye festival Dr Rajkumar was kidnapped by forest brigand Veerappan. In a strange coincidence today, Puneeth Rajkumar's 25th film Dodmane Hudga has released on the same Mahalaya Amavasye day.

  It may be a coincidence but significant. The film has opened to tremendous response and has had many early morning shows in many theatres in Bengaluru and other parts of Karnataka. Even in main theatre Nartaki the first show was at 7 am.

 • Dr Rajakumar Back With Bhaktha Ambarisha - Exclusive

  bhaktha ambarish image

  It was a long pending dream of Matinee Idol Dr Rajakumar to act in 'Bhaktha Ambarisha'. Though the film was launched, the film got shelved due to various reasons. Now Dr Rajakumar is all set to make a comeback with 'Bhaktha Ambarisha'.

  Wonder how is it possible, as the actor died almost Ten years back. Dr Rajakumar will be brought alive through animation and the film is said to be his 207th film as an actor. The film is being produced by Muniraju who is releasing Dr Rajakumar's yesteryear film using modern technology in the recent times. More details about the film are yet awaited.

  Recently the team of 'Nagarahavu' had created Vishnuvardhan through digital head technology for the film 'Nagarahavu'. It was said that Vishnuvardhan plays a pivotal role in the film and 'Nagarahavu' will be his 201st film in his career.

 • Overseas Market - KS Prasad is First Distributor Writes Nagendra

  usa ks prasad image

  In mid-1990’s, Kannada movie was screened for the first time in America. It was such a massive effort with plenty of people getting involved. Mr. K S Prasad, one of the very well-known producer (Dr Raj Kumar’s Baalu Belagithu and Bhagyada Bagilu) and distributor of Kannada movies in Karnataka moved to USA. Prasad made this effort possible with the help of local Kannada koota and Kannada fans.

  Overseas Market For Kannada Movies - Atlanta Nagendra

  This was the beginning trend to screen movies abroad. You need to get the 35 mm reels in a big metal box and ship it to USA. All these efforts were done to show case that kanndaa movies were screened only for the promotion of language and culture not for money. 99% of time, only the print and shipping costs were recovered. After these problems, it was a still a very good start.  It was a commendable effort by Prasad. 

  usa_prasad_ks2.jpg

  Slowly, more and more Kannada movies made its way to America. Then, the 35 mm picture reels box was shared with few other distributors in other countries (Australia, Canada) to start screening Kannada movies.

  The main challenge was to ship the 70 pounds reel box to different countries. People who just want to show case their movie (without any monetary benefits) used send the prints and screen with the help of the local folks. Lots and Lots of volunteers came forward to make it happen. 

  (Article by Atlanta Nagendra)

  (to be continued)

  Also See

  Overseas Market For Kannada Movies - Atlanta Nagendra

  Chitraloka Updates Round The Clock - Atlanta Nagendra

   

 • Parvathamma Burial At Raj Samadi

  parvathamma rajkumar image

  Iron Lady of Kannada film indutry, Smt Parvathamma Rajkumar passed away on early hours of 31st May. She was the wife of veteran actor Dr Rajkumar.

  The cremation is at 6.30 and the last remains of Parvathamma Rajkumar will be held at Raj Samadhi. 

  Related Articles :-

  Parvathamma Rajkumar Expired - Breaking New

   

 • Rajkumar Stickers Go Viral

  rajkumar stickers go viral

  Within weeks of media sharing App WhatsApp released its sticker service it has become very popular. Closer home Sandalwood is also making use of it big time. In the last two days stickers of Rajkumar have gone viral.

  Images from his popular films from Bhakta Prahalada to Kaviratna Kalidasa have been used along with popular dialogues to create dozens of stickers which fans are sharing big time. Film makers like Sreeni have released stickers of their new film Birbal Trilogy to capture audience attention.

 • S P Varadaraju Awards For Ashok Basti And SK Padmadevi

  sp varadaraju, rajkumar image

  The 11th S P Varadaraju (Dr Rajakumar's brother) award for the year 2017 will be conferred to well known theater artiste Ashok Basti and film actress S K Padmadevi.

  The award function has been organised by S P Varadaraju Atmeeyara Balaga and the programme is held on the 05th of February at 5.30 PM at the Nayana Auditorium in Kannada Bhavana. Kannada Sahitrya Parishath president Dr Manu Baligar, actor Ashok and others will be present at the event.

 • Shivarajkumar wants to see Dr Raj’s Wax Idol in Madam Tussads museum

  shivarjakumar, rajkumar image

  Actor Shivarajakumar has said that he wants to see Dr Rajakumar’s wax idol at the Madam Tussads museum in London. Shivarajakumar was talking to media persons about his recent visit to London with his family during the release of ‘Shivalinga’ in London.

  ‘It was a very good experience in London and I loved the hospitality of the people there. During my visit I happen to visit Madam Tussads museum. I want to see my father Dr Rajakumar’s was idol in that museum and I talked to the authorities regarding that. I explained the significance and contribution of Dr Rajakumar to the authorities. I explained to them about the Gokak issue and how an actor of Dr Rajkumar stature responded to the issue. I hope to see the wax statute of my father’ said Shivarajakumar.

 • Strange Coincidence In Parvathamma's Death

  parvathamma rajkuamr death coincidence

  There is a strange coincidence on the day of Parvathamma Rajkumar's death. Her death today has created a gloom in Sandalwood. But one thing that has been noticed is the similarity between the deaths of Parvathamma and that of Rajkumar and Varadappa.

  All the three died on Wednesday! Rajkumar's death 11 years ago was on a Wednesday. Before that his brother Varadappa died on a Wednesday. Varadappa had a big hand in the development of Rajkumar's career. Likewise Parvathamma had a big hand in Rajkumar's career having produced scores of his films.

  It is really a strange coincidence that all three died on a Wednesday.

  Related Articles :-

  Parvathamma Burial At Raj Samadi

  Parvathamma Rajkumar Expired - Breaking New

 • ಅಭಿಮಾನಿಗಳ ಎದುರು ಅಣ್ಣಾವ್ರನ್ನು ನೆನಪಿಸಿಕೊಂಡ ರಜಿನಿಕಾಂತ್

  rajanikanh shares an incident about rajkumar

  ತಮಿಳರ ಆರಾಧ್ಯದೈವವಾಗಿರುವ ಸೂಪರ್ ಸ್ಟಾರ್ ರಜಿನಿಕಾಂತ್, ಸರಳತೆಯನ್ನೇ ಮೈಗೂಡಿಸಿಕೊಂಡವರು. ಡಿ.31ಕ್ಕೆ ರಾಜಕೀಯ ಪ್ರವೇಶ ಕುರಿತಂತೆ ಅಧಿಕೃತವಾಗಿ ಪ್ರಕಟಿಸುವುದಾಗಿ ಹೇಳಿರುವ ರಜಿನಿಕಾಂತ್, ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ರಜಿನಿ ದರ್ಶನಕ್ಕೆ ಬಂದ ಆಭಿಮಾನಿಗಳು ಕಾಲಿಗೆ ಬಿದ್ದು ನಮಸ್ಕರಿಸಿದ್ದನ್ನು ಕಂಡ ರಜಿನಿಕಾಂತ್, ಅಭಿಮಾನಿಗಳಿಗೆ ದೇವರು, ತಂದೆ, ತಾಯಿ ಕಾಲಿಗೆ ಮಾತ್ರ ಬಿದ್ದು ನಮಸ್ಕರಿಸಿ. ಜನಪ್ರಿಯತೆ, ಅಧಿಕಾರದ ಕಾರಣಕ್ಕೆ ಕಾಲಿಗೆ ಬೀಳಬೇಡಿ ಎಂದು ಮನವಿ ಮಾಡಿದರು. ಆದರೂ ಅಭಿಮಾನಿಗಳು ಕೇಳಲಿಲ್ಲ. ಆಗ ಸ್ವತಃ ತಮ್ಮ ಅನುಭವ ಹೇಳಿಕೊಂಡ ರಜಿನಿ, ಅಣ್ಣಾವ್ರನ್ನು ಸ್ಮರಿಸಿದರು.

  ತಾವು ಮೊದಲ ಬಾರಿ ಡಾ.ರಾಜ್‍ರನ್ನು ಭೇಟಿ ಮಾಡಿದಾಗ, ಅವರಾಗಲೇ ಸೂಪರ್ ಸ್ಟಾರ್. ನನಗಾಗ 16ನೇ ವಯಸ್ಸು. ಅವರನ್ನು ಆ ದಿನ ಉತ್ಸಾಹದಿಂದ ಹೋಗಿ ಮುಟ್ಟಿ ಪುಳಕಗೊಂಡಿದ್ದೆ. ಎಂಜಿಆರ್, ಶಿವಾಜಿಗಣೇಶನ್ ಇಬ್ಬರೂ ಸೇರಿದರೆ ಅದು ಡಾ.ರಾಜ್‍ಕುಮಾರ್. ಅವರ ಸರಳ ವ್ಯಕ್ತಿತ್ವ ನನಗೆ ಸದಾ ಸ್ಫೂರ್ತಿ ಎಂದು ಸ್ಮರಿಸಿದ್ದಾರೆ.

 • ಇಂದಿರಾ ವಿರುದ್ಧ ರಾಜ್ ನಿಲ್ಲಲಿಲ್ಲ ಏಕೆ.? ರಾಘು ಹೇಳಿದ ರಾಜ್ ರಹಸ್ಯ

  inidra gandhi, sm krishna, rajkumar, raghavendra rajkumar image

  ಡಾ.ರಾಜ್‍ಕುಮಾರ್ ಅನ್ನೋ ಕನ್ನಡಿಗರ ಆರಾಧ್ಯ ದೈವ, 1978ರಲ್ಲಿ ರಾಜಕೀಯ ಪ್ರವೇಶಿಸಬೇಕಿತ್ತು. ಆಗ ಲೋಕಸಭೆಯಲ್ಲಿ ಸೋತಿದ್ದ ಇಂದಿರಾ ಗಾಂಧಿ, ಚಿಕ್ಕಮಗಳೂರಿನಲ್ಲಿ ಭವಿಷ್ಯ ಅರಸಿ ಚುನಾವಣೆಗೆ ನಿಂತಿದ್ದರು. ಅವರನ್ನು ಸೋಲಿಸಲು ಪಣ ತೊಟ್ಟಿದ್ದ ಜನತಾ ಪಕ್ಷದವರು ಇಂದಿರಾಗೆ ಎದುರಾಗಿ ನಿಲ್ಲಿಸಲು ಡಾ.ರಾಜ್‍ರನ್ನು ಆಯ್ಕೆ ಮಾಡಿದರು. ಆದರೆ, ಡಾ.ರಾಜ್ ಕುಮಾರ್, ಯಾರ ಕೈಗೂ ಸಿಗದೆ, ಚುನಾವಣೆ ಬಿಸಿ ತಣ್ಣಗಾಗುವವರೆಗೆ ಅಕ್ಷರಶಃ ನಾಪತ್ತೆಯಾಗಿಬಿಟ್ಟರು. ರಾಜಕೀಯಕ್ಕೆ ಬರಲಿಲ್ಲ. ಕನ್ನಡಿಗರ ಹೃದಯದಲ್ಲಿ ಅಣ್ಣಾವ್ರಾಗಿಯೇ ಉಳಿದರು.

  ಆದರೆ, ಡಾ.ರಾಜ್ ಏಕೆ ರಾಜಕೀಯಕ್ಕೆ ಬರಲಿಲ್ಲ..? ಅದನ್ನು ರಾಜ್‍ಕುಮಾರ್ ಬಹಿರಂಗವಾಗಿ ಹೇಳಿಕೊಳ್ಳಲೇ ಇಲ್ಲ. ಇದುವರೆಗೆ ನಮಗೆ ಸಿಕ್ಕಿರುವುದು ಅವರಿವರು ಊಹಿಸಿಕೊಂಡು ಹೇಳಿರುವ ಮಾತುಗಳಷ್ಟೆ. ಈಗ.. ರಾಜ್ ನಿಧನರಾದ 12 ವರ್ಷಗಳ ನಂತರ, ರಾಘವೇಂದ್ರ ರಾಜ್‍ಕುಮಾರ್, ತಮ್ಮ ತಂದೆ ಏಕೆ ರಾಜಕೀಯದಿಂದ ದೂರವೇ ಉಳಿದರು ಅನ್ನೋದನ್ನ ಹೇಳಿದ್ದಾರೆ.

  `ಅಪ್ಪಾಜಿಗೆ ರಾಜಕೀಯಕ್ಕೆ ಸೇರಲು ಆಹ್ವಾನ ಬಂದಾಗ, ನಾನು ಪಿಯುಸಿ ಮುಗಿಸಿದ್ದೆ. ಮೆಡಿಕಲ್ ಸೇರಲು ಸಿದ್ಧನಾಗುತ್ತಿದ್ದೆ. ಆಗ ನಾನು ಅಪ್ಪಾಜಿಯನ್ನು ಕೇಳಿದಾಗ.. `ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ' ಎಂದಿದ್ದರು. ನಿನಗೆ ಇನ್ನೂ ಅರ್ಥವಾಗುವುದಿಲ್ಲ, ಸಮಯ ಬಂದಾಗ ಹೇಳುತ್ತೇನೆ ಎಂದಿದ್ದರು.

  ಅದಾದ ಮೇಲೆ ಅವರಿಗೆ 2005ರಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆ ಆಯ್ತು. ಆಗ ಆಸ್ಪತ್ರೆಯಲ್ಲಿದ್ದಾಗ ಅವರು ರಾಜಕೀಯಕ್ಕೆ ಏಕೆ ಬರಲಿಲ್ಲ ಅನ್ನೋದಕ್ಕೆ ನನ್ನ ಬಳಿ ಕಾರಣ ಹೇಳಿದರು. ಆಗ ಅಮ್ಮ, ಅಣ್ಣ, ತಮ್ಮ, ಬರಗೂರು ರಾಮಚಂದ್ರಪ್ಪ ಯಾರೂ ಆಸ್ಪತ್ರೆಯಲ್ಲಿ ಇರಲಿಲ್ಲ. 

  ಗೋಕಾಕ್ ಚಳವಳಿಗೆ ನನ್ನನ್ನು ಕರೆದಾಗ, ನನ್ನ ಭಾಗವಹಿಸುವಿಕೆಯಿಂದ ಏನೋ ಒಂದು ಬದಲಾವಣೆ ಮಾಡಬಹುದು ಎನಿಸಿತ್ತು. ಹಾಗಾಗಿ ಎರಡನೇ ಯೋಚನೆ ಮಾಡದೆ ಹೋರಾಟಕ್ಕೆ ಹೊರಟೆ. ಆದರೆ, ಇಂದಿರಾ ಗಾಂಧಿಯ ವಿರುದ್ಧ ನಿಲ್ಲಿ ಎಂದಾಗ, ಅದರಲ್ಲಿ ನನಗೆ ಧನಾತ್ಮಕ ಚಿಂತನೆಯೇ ಕಾಣಲಿಲ್ಲ. ಅಲ್ಲಿ, ಅವರಿಗೆ ಇಂದಿರಾ ಅವರನ್ನು ಸೋಲಿಸಲು ಒಬ್ಬ ವ್ಯಕ್ತಿ ಬೇಕಿತ್ತು. ಅದು ನನಗೆ ಇಷ್ಟವಾಗಲಿಲ್ಲ. ಹಾಗಾಗಿ ಚುನಾವಣೆಗೆ ನಿಲ್ಲಲಿಲ್ಲ ಎಂದು ಹೇಳಿಕೊಂಡರು.

  ಅಷ್ಟೇ ಅಲ್ಲ, ರಾಜಕೀಯಕ್ಕೆ, ಜನಸೇವೆ ಮಾಡೋಕೆ ಶಿಕ್ಷಣವೂ ಮುಖ್ಯ. ನನಗೆ ಶಿಕ್ಷಣ ಕಡಿಮೆ. ಅಲ್ಲಿ ಹೋಗಿ ಏನು ಮಾಡಲಿ ಅನ್ನೋದು ಕೂಡಾ ಅಪ್ಪಾಜಿ ಚುನಾವಣೆಯಿಂದ ದೂರ ನಿಲ್ಲೋಕೆ ಒಂದು ಕಾರಣವಾಗಿತ್ತು.

  ನನ್ನನ್ನು ದೇವರು ಕಳಿಸಿರುವುದು ಕಲಾಸೇವೆಗೆ. ಸಿನಿಮಾಗೆ. ನನಗೆ ಗೊತ್ತಿಲ್ಲದ ಕ್ಷೇತ್ರದಲ್ಲಿ ಹೋಗುವುದು ಸರಿಯಲ್ಲ. ಎಂಬುದು ಕೂಡಾ ಡಾ.ರಾಜ್ ನಂಬಿಕೆಯಾಗಿತ್ತು.

  ಆದರೆ ಈಗ ನೋಡಿ..ಡಾ.ರಾಜ್ ತಮ್ಮ ಬಳಿ ಯಾವ್ಯಾವ ಅರ್ಹತೆಗಳಿಲ್ಲ ಎಂದು ರಾಜಕೀಯದಿಂದ ದೂರವುಳಿದರೋ, ಆ ಅರ್ಹತೆಗಳಲ್ಲಿ ನಯಾಪೈಸವೂ ಇಲ್ಲದವರು ಈಗ ರಾಜಕೀಯ ರಂಗವನ್ನಾಳುತ್ತಿದ್ದಾರೆ. 

 • ಎನ್‍ಟಿಆರ್ ಸಿನಿಮಾದಲ್ಲಿ ರಾಜ್ ಪಾತ್ರ ಏನು..?

  role of rajkumar in ntr movies

  ಎನ್‍ಟಿಆರ್ ಅವರ ಜೀವನ ಚರಿತ್ರೆ ಸಿನಿಮಾ ಆಗುತ್ತಿರುವುದು ಗೊತ್ತೇ ಇದೆ. ಆ ಚಿತ್ರದಲ್ಲಿ ಡಾ. ರಾಜ್ ಅವರ ಪಾತ್ರವೂ ಇರಲಿದೆಯಂತೆ. ಪಾತ್ರ  ಯಾರು ಮಾಡುತ್ತಾರೆ ಎಂಬುದು ಫೈನಲ್ ಆಗಿಲ್ಲ. ಎನ್‍ಟಿಆರ್ ಚಿತ್ರದಲ್ಲಿ ರಾಜ್ ಅಷ್ಟೇ ಅಲ್ಲ, ಎಂಜಿಆರ್, ಶಿವಾಜಿ ಗಣೇಶನ್, ಅಕ್ಕಿನೇನಿ ನಾಗೇಶ್ವರ ರಾವ್, ಶೋಭನ್ ಬಾಬು ಮೊದಲಾದವರೂ ಪಾತ್ರಗಳಾಗಲಿದ್ದಾರೆ. 

  ಎನ್‍ಟಿಆರ್ ಮತ್ತು ರಾಜ್ ಮಧ್ಯೆ ಉತ್ತಮ ಬಾಂಧವ್ಯವಿತ್ತು. ಎನ್‍ಟಿಆರ್, ರಾಜ್‍ರನ್ನು ಸಹೋದರ ಎಂದೇ ಕರೆಯುತ್ತಿದ್ದರು. ಪೌರಾಣಿಕ ಚಿತ್ರಗಳ ಶೂಟಿಂಗ್ ವೇಳೆ ಪರಸ್ಪರ ಭೇಟಿ, ವಿಚಾರ ವಿನಿಮಯ ಇದ್ದೇ ಇರುತ್ತಿತ್ತು. ಕುಟುಂಬಗಳ ನಡುವೆಯೂ ಉತ್ತಮ ಬಾಂಧವ್ಯವಿತ್ತು. ಇತ್ತೀಚೆಗಷ್ಟೇ ಬಾಲಕೃಷ್ಣ ಅಭಿನಯದ ಗೌತಮಿಪುತ್ರ ಶಾತಕರ್ಣಿ ಚಿತ್ರದಲ್ಲಿ ಶಿವರಾಜ್ ಕುಮಾರ್ ಅತಿಥಿಯಾಗಿ ನಟಿಸಿದ್ದರು. ಪುನೀತ್ ರಾಜ್‍ಕುಮಾರ್ ಅಭಿನಯದ ಪವರ್ ಚಿತ್ರದಲ್ಲಿ ಜ್ಯೂ.ಎನ್‍ಟಿಆರ್ ಹಾಡು ಹಾಡಿದ್ದರು. 

  ನಟರಾಗಿ ಅಷ್ಟೇ ಅಲ್ಲ, ರಾಜಕಾರಣಿಯಾಗಿಯೂ ಎನ್‍ಟಿಆರ್‍ಗೆ ಕರ್ನಾಟಕದ ಜೊತೆ ಉತ್ತಮ ಬಾಂಧವ್ಯವಿದೆ. ಕಾಂಗ್ರಸ್‍ನವರು ಎನ್‍ಟಿಆರ್ ಸರ್ಕಾರವನ್ನು ಪತನಗೊಳಿಸಲು ಮುಂದಾದಾಗ, ಎನ್‍ಟಿಆರ್ ತಮ್ಮ ಶಾಸಕರನ್ನು ರಕ್ಷಿಸಿಕೊಂಡಿದ್ದುದು ಬೆಂಗಳೂರಿನಲ್ಲಿಯೇ. 

  ಅಂದಹಾಗೆ ಇದು ರಾಮ್‍ಗೋಪಾಲ್ ವರ್ಮಾ ನಿರ್ದೇಶನದ ಲಕ್ಷ್ಮೀಸ್ ಎನ್‍ಟಿಆರ್ ಚಿತ್ರವಲ್ಲ. ಅದು ವಿವಾದಾತ್ಮಕ ಚಿತ್ರ. ಈ ಚಿತ್ರವೇ ಬೇರೆ. ಈ ಚಿತ್ರದಲ್ಲಿ ನಂದಮೂರಿ ತಾರಕರಾಮರಾವ್ ಪಾತ್ರವನ್ನು ಪೋಷಿಸುತ್ತಿರುವುದು ಅವರ ಮಗ ನಂದಮೂರಿ ಬಾಲಕೃಷ್ಣ. ವರ್ಮಾ ಚಿತ್ರಕ್ಕೂ, ಈ ಚಿತ್ರಕ್ಕೂ ಸಂಬಂಧವಿಲ್ಲ.

 • ಒಂದೇ ಕಡೆ ರಾಜ್, ವಿಷ್ಣು, ಅಂಬಿ ಸ್ಮಾರಕ ಇರಲಿ - ಶಿವಣ್ಣ

  shivarajkumar talks about raj, vishnu, ambareesh smaraka

  ಡಾ.ರಾಜ್ ಹುಟ್ಟುಹಬ್ಬದಂದು ಮತ್ತೊಮ್ಮೆ ವಿಷ್ಣುವರ್ಧನ್ ಸ್ಮಾರಕ ಚರ್ಚೆ ಬಂದಿದೆ. ಅಂಬರೀಷ್ ಸ್ಮಾರಕದ ವಿಚಾರವೂ ಮುನ್ನೆಲೆಗೆ ಬಂದಿದೆ. 

  ರಾಜ್ ಮತ್ತು ವಿಷ್ಣುವರ್ಧನ್ ಸ್ಮಾರಕ ಮೊದಲು ಆಗಲಿ, ಆಮೇಲೆ ಅಂಬಿ ಸ್ಮಾರಕದ ಬಗ್ಗೆ ನೋಡೋಣ ಎಂದಿದ್ದಾರೆ ಸುಮಲತಾ ಅಂಬರೀಷ್. ಇದಕ್ಕಿಂತಲೂ ವಿಭಿನ್ನವಾದ ಆಲೋಚನೆ ಮುಂದಿಟ್ಟಿರುವುದು ಶಿವರಾಜ್‍ಕುಮಾರ್.

  ರಾಜ್, ವಿಷ್ಣು ಮತ್ತು ಅಂಬರೀಷ್, ಮೂವರ ಸ್ಮಾರಕವೂ ಒಂದೇ ಕಡೆ ಇದ್ದರೆ ಚೆಂದ ಎಂದಿದ್ದಾರೆ ಶಿವಣ್ಣ. ಅದು ಈ ತ್ರಿಮೂರ್ತಿಗಳ ಗೆಳೆತನಕ್ಕೆ ನಾವು ನೀಡುವ ಉಡುಗೊರೆ ಎಂದಿದ್ದಾರೆ ಶಿವಣ್ಣ.

 • ಒಡಹುಟ್ಟಿದವರ ಹುಟ್ಟುಹಬ್ಬ, ಪುಣ್ಯಸ್ಮರಣೆ ಒಂದೇ ದಿನ..!

  raj birthday and ambareesh punya thithi on same day

  ಏಪ್ರಿಲ್ 24, ಡಾ.ರಾಜ್ ಹುಟ್ಟುಹಬ್ಬ. ವಿಶೇಷವೇನು ಗೊತ್ತೇ.. ಅದೇ ದಿನ ಅಂಬರೀಷ್ ಪುಣ್ಯಸ್ಮರಣೆ ದಿನವೂ ಹೌದು. ಅದು 5ನೇ ಮಾಸಿಕ ಪುಣ್ಯಸ್ಮರಣೆ. ಹೀಗಾಗಿಯೇ ಕಂಠೀರವ ಸ್ಟುಡಿಯೋದಲ್ಲಿ ಒಡಹುಟ್ಟಿದವರ ಅಭಿಮಾನಿಗಳ ಸೈನ್ಯವೇ ಜಮಾಯಿಸಿತ್ತು. ಇಬ್ಬರೂ ಮೇರುನಟರ ಸಮಾಧಿ ಸ್ಥಳವೂ ಒಂದೇ ಕಡೆ ಇರುವುದು ಕೂಡಾ ಇದಕ್ಕೆ ಕಾರಣ.

  ಡಾ.ರಾಜ್ ಕುಟುಂಬ, ಸುಮಲತಾ ಅಂಬರೀಷ್, ರಾಕ್‍ಲೈನ್ ವೆಂಕಟೇಶ್, ಫಿಲಂ ಚೇಂಬರ್ ಅಧ್ಯಕ್ಷರಾದ ಚಿನ್ನೇಗೌಡ, ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ಚೇಂಬರ್‍ನ ಇತರೆ ಪದಾಧಿಕಾರಿಗಳು ಸೇರಿದಂತೆ ಹಲವರು ಡಾ.ರಾಜ್ ಮತ್ತು ಅಂಬಿ ಸಮಾಧಿಗೆ ನಮನ ಸಲ್ಲಿಸಿದರು.

  ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಸಂಘಟನೆಗಳು ರಕ್ತದಾನ ಶಿಬಿರ, ಅನ್ನ ಸಂತರ್ಪಣೆ ಆಯೋಜಿಸಿದ್ದವು. ಸ್ವತಃ ಶಿವಣ್ಣ ಸೇರಿದಂತೆ ರಾಜ್ ಕುಟುಂಬ ಸದಸ್ಯರೂ ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು. ಹಲವು ಅಭಿಮಾನಿಗಳು ಡಾ.ರಾಜ್ ಹೆಸರಲ್ಲಿ ನೇತ್ರದಾನ ಮಾಡಿದರು.ನ

 • ಕನ್ನಡದ ಬಾಂಡ್ 999ಗೆ 50 ವರ್ಷ

  jedara bale movie image

  ಆ್ಯಮ್ ಪ್ರಕಾಶ್. ಸಿಐಡಿ 999. ಡಾ.ರಾಜ್ ನಿರ್ಲಿಪ್ತ ಮುಖಭಾವದಲ್ಲಿ ಇಂಥಾದ್ದೊಂದು ಡೈಲಾಗ್ ಹೇಳುತ್ತಿದ್ದರೆ, ಆಗುತ್ತಿದ್ದ ಥ್ರಿಲ್ಲೇ ಬೇರೆ. ಬಾಂಡ್ ಎಂದರೆ ಜೇಮ್ಸ್‍ಬಾಂಡ್. ಆದರೆ, ಕನ್ನಡದಲ್ಲಿ ಬಾಂಡ್ ಎಂದರೆ ಡಾ.ರಾಜ್. ಕನ್ನಡದಲ್ಲಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಬಾಂಡ್ ಸರಣಿಯನ್ನು ಅನುಸರಿಸಿ ಚಿತ್ರ ಮಾಡಿದ ಇನ್ನೊಬ್ಬ ಸಾಹಸಿ ಇರಲಿಲ್ಲ. ಅಂಥಾದ್ದೊಂದು ವಿಭಿನ್ನ ಪ್ರಯೋಗ ಮಾಡಿ ಗೆದ್ದವರು ದೊರೈ-ಭಗವಾನ್. ಒತ್ತಾಸೆಯಾಗಿ ನಿಂತವರು ಎಂದಿನಂತೆ ಅಣ್ಣಾವ್ರು. ಅಂದಹಾಗೆ ಕನ್ನಡದ ಮೊತ್ತಮೊದಲ ಬಾಂಡ್ ಚಿತ್ರ ತೆರೆಗೆ ಬಂದು 50 ವರ್ಷಗಳಾಗಿವೆ. ಜೇಡರ ಬಲೆ ಚಿತ್ರ ತೆರೆಗೆ ಬಂದಿದ್ದು 1968ರಲ್ಲಿ. 

  ಅದು ಶುರುವಾಗಿದ್ದು ಹೀಗಂತೆ. ಬಿಡುವಿದ್ದಾಗಲೆಲ್ಲ ಸಿನಿಮಾ ನೋಡೋಕೆ ಹೋಗುತ್ತಿದ್ದ ಡಾ.ರಾಜ್, ವರದಪ್ಪ, ದೊರೆ, ಭಗವಾನ್.. `ಡಾ.ನೋ' ಸಿನಿಮಾ ನೋಡೋಕೆ ಹೋಗಿದ್ದಾರೆ. ಬಾಂಡ್ ಇಷ್ಟವಾಗಿದ್ದಾನೆ. ಸಿನಿಮಾ ನೋಡಿಕೊಂಡು ಹೊರಬಂದ ಮೇಲೆ, ನಿರ್ದೇಶಕ ದೊರೆ, ನಮ್ಮಲ್ಲೂ ಇಂಥ ಪ್ರಯತ್ನ ಮಾಡಬೇಕು ಎಂದಿದ್ದಾರೆ.ಡಾ.ರಾಜ್ ಜಮಾಯ್ಸಿಬಿಡಿ ಎಂದಿದ್ದಾರೆ. ಆಗ ಶುರುವಾಗಿದ್ದೇ ಜೇಡರಬಲೆ.

  ಸಿನಿಮಾ ಸಿದ್ಧವಾದ ಮೇಲೆ ನೆಗೆಟಿವ್ ತರೋಕೂ ಪರದಾಡುತ್ತಿದ್ದಾಗ, 50 ಸಾವಿರ ರೂ. ಹೊಂದಿಸಿಕೊಟ್ಟಿದ್ದ ಪಾರ್ವತಮ್ಮನವರನ್ನು ನೆನಪಿಸಿಕೊಳ್ಳುವ ಭಗವಾನ್, ಈಗ 50ನೇ ಚಿತ್ರ ನಿರ್ದೇಶಿಸುತ್ತಿದ್ದಾರೆ. ಫೆಬ್ರವರಿ 25ಕ್ಕೆ ಇದಕ್ಕಾಗಿಯೇ ಬ್ಯೂಗಲ್‍ರಾಕ್‍ನಲ್ಲಿ ಒಂದು ಸಮಾರಂಭ ಇಟ್ಟುಕೊಳ್ಳಲಾಗಿದೆ.

  ಅಂದಹಾಗೆ ಜೇಡರಬಲೆಯಿಂದ ಶುರುವಾದ ಬಾಂಡ್ ಚಿತ್ರಗಳ ಸರಣಿಯಲ್ಲಿ, ಗೋವಾದಲ್ಲಿ ಸಿಐಡಿ 999, ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿಐಡಿ 999 ಹಾಗೂ ಆಪರೇಷನ್ ಡೈಮಂಡ್ ರ್ಯಾಕೆಟ್ ಚಿತ್ರಗಳು ಬಂದಿವೆ. ಎಲ್ಲ ಚಿತ್ರಗಳೂ ಸೂಪರ್ ಹಿಟ್ ಎನ್ನುವುದು ವಿಶೇಷ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery