ಮೋಜೋ..ಸಂಪೂರ್ಣ ಹೊಸಬರೇ ಮಾಡಿರುವ ಈ ಸಿನಿಮಾ, ಬಿಡುಗಡೆಗೆ ಮುನ್ನವೇ ಭರ್ಜರಿ ಸದ್ದು, ಸುದ್ದಿ ಮಾಡುತ್ತಿದೆ. ಚಿತ್ರದಲ್ಲಿರೋದು ಸಸ್ಪೆನ್ಸ್ ಕಥಾಹಂದರ. ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ. ಪ್ರತಿ 5 ನಿಮಿಷಕ್ಕೊಂದು ಟ್ವಿಸ್ಟ್ ಇದೆಯಂತೆ. ಒಂದು ಮರ್ಡರ್ ಮಿಸ್ಟರಿಯನ್ನು sixth sense ಮೂಲಕವೇ ಬೇಧಿಸುವ ವಿಭಿನ್ನ ಕಥೆಯ ಚಿತ್ರ ಮೋಜೋ.
ಸಿಕ್ಸ್ತ್‍ಸೆನ್ಸ್‍ನಿಂದ ಕೊಲೆ ರಹಸ್ಯ ಬೇಧಿಸೋದು ಸಾಧ್ಯಾನಾ..? ಹೇಗೆ..? ಅನ್ನೋ ಒಂದು ಕುತೂಹಲವೇ ಸಾಕು, ಚಿತ್ರದ ನಿರೀಕ್ಷೆ ಹೆಚ್ಚಿಸಿಬಿಡುತ್ತೆ. ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಚಿತ್ರ ಮೆಚ್ಚುಗೆ ಗಳಿಸಿದೆ. ಪ್ರಶಸ್ತಿಯನ್ನೂ ಗಳಿಸಿದೆ.
ಈ ಚಿತ್ರದ ಟೈಟಲ್ ಇದೆಯಲ್ಲ.. ಮೋಜೋ.. ಇದು ಕನ್ನಡದ್ದಲ್ಲ, ಅಷ್ಟೇ ಯಾಕೆ ಭಾರತದ ಸಾವಿರಾರು ಭಾಷೆಗಳಲ್ಲಿ ಯಾವ ಭಾಷೆಯದ್ದೂ ಅಲ್ಲ. ದಕ್ಷಿಣ ಆಫ್ರಿಕಾದ ಕ್ರಿಯೋಲ್ ಭಾಷೆಯ ಪದ ಮೋಜೋ. ಅದರ ಅರ್ಥ ಮ್ಯಾಜಿಕ್ ಎಂದು. ಹಾಗೆಂದು ಚಿತ್ರದಲ್ಲಿ ಮಾಟ, ಮಂತ್ರ ಇಲ್ಲ.
ಚಿತ್ರಕ್ಕೆ ನಿರ್ದೇಶಕ ಯೋಗರಾಜ್ ಭಟ್ ಧ್ವನಿ ನೀಡಿದ್ದಾರೆ. ಲಾಸ್ಟ್ ಬಸ್ ನಿರ್ದೇಶಕ ಅರವಿಂದ್ ಸಂಗೀತ ನೀಡಿದ್ದಾರೆ. ಚಿತ್ರ ಕ್ಲೈಮಾಕ್ಸ್‍ವರೆಗೆ ಪ್ರೇಕ್ಷಕರನ್ನು ಥ್ರಿಲ್ ಆಗಿಸುತ್ತಲೇ ಹೋಗುತ್ತೆ ಎನ್ನುತ್ತಾರೆ ನಿರ್ದೇಶಕ ಶ್ರೀಶ.