` kichcha sudeepa - chitraloka.com | Kannada Movie News, Reviews | Image

kichcha sudeepa

  • Anupama Gowda Eliminated From Big Boss 5

    anupama eliminated this week

    This week it was Anupama Gowda who was eliminated from Kichcha Sudeep's show Big Boss season 5.

    Anupama gowda of Akka fame, was one of the toughest contender in the show by staying for 99 days in the house. She saw her ups and downs in the show and was always in the talk because of her outspoken behavior, she also performed extremely well in almost all the given tasks. Big Boss was surely an emotional roller coaster ride for her.

    Anupama Gowda has already bagged the role in (ex big boss contestant) Dayal Padmanabhan's next 'Karaala Ratri' which is based on a play of Mohan Habbu, co starring JK. Surely, Anupama has a long way to go and we wish her all the luck.

    we wish heartfelt Congratulations to Chandan Shetty, Divakar, Sameer Acharya, Niveditha, Jayram Karthik and Shruthi Prakash for entering the Semi Finale.

  • Big Boss 5 To Be Aired In Colors Super

    vig boss 5

    Kannada television's hugely popular reality show 'Big Boss 5' is all set to be aired from the 15th of this month. This time the show will be aired in Colors Super instead of Colors Kannada.

    Yes, there is a major change in the schedule this time. In the last seasons, the programme was being aired in Colors Kananda. This time it has been shifted to Colors Super. The programme will be aired from 8 to 9 instead of 9 to 10. Another major change is common man will also participate in this programme along with celebrities.

    Last time, Sudeep had cooked for the contestants. This time, it is being said that he will be cooking on every Sunday.

  • Krishi Thapanda Eliminated

    krishi thapanda eliminated

    This week it was Krishi Thapanda who was eliminated from Kichcha Sudeep's show Big Boss season 5. Krishi was evicted from the house before and got second chance to enter the house.

    Though, Krishi was not seen much before, after her return to the house for the second time Krishi gained quite a number of fans. The show is heading to its finale and not so soon enough we will see the winner of the season.

     

  • Mitra Out of Bigg Boss3

    mitra image

    Well known comedian Mitra has been out of Bigg boss3 house. Mitra who had entered the bigg boss house through wild card just three weeks back is out of the Bigg Boss today. This week five contestants including Mitra, Chandan, Ayyappa, Krithika and Rehman were nominated for the elimination. However, Rehman, Ayyappa, Krithika and Chandan got saved by the audience, hereby eliminating Mitra from the show.

    Mitra out this time is not a surprise for many since Mitra is running a resort and he has a huge job for the New Year Preparation!

    First to come out of Bigg boss3 was Madhuri Itagi followed by Jayashri, Huchcha Venkat, Ravi Mooroor, Nethra.

     

  • Pailwaan Simultaneously in 5 Continents 

    pailwaan image

    Pailwaan is being billed as the biggest release ever for a Kannada film for a reason. The film before its release on September 12 is getting bigger by the day. 

    The simultaneous release of the film is now confirmed in over 30 countries. The number is going to go up further as the number of countries in Europe has to be finalized in the next couple of days. The number of countries in Asia is also to be added. The final count will be more than 50 easily, distributors of the film say. 

    A significant milestone for the film is the release in a minimum of 5 African countries simultaneously. The film therefore will release in 5 Continents simultaneously barring Antarctica and South America. The film is also releasing in 5 language in most of these countries which is given below.

    USA, Canada, UK, Europe (Various countries), Singapore, Malaysia, Sri Lanka, UAE (All 7 Emirates), Qatar, Bahrain, Oman, Kuwait, Australia, New Zealand, Nigeria, Ghana, Liberia, DR Congo, Congo (IVR)

  • Sudeep Celebrates Parents' 50th Wedding Anniversary

    sudeep with parents image

    Kichcha Sudeep was pleasantly surprised when hundreds of fans started congratulating his parents on their 50th wedding anniversary. After the hundreds of congratulatory messages Sudeep personally thanked fans saying "it means a lot".

    Sudeep's parents are Sanjeev Manjappa and Saroja. They played an important role in shaping not only his early life but also career by supporting his love for films.

     

  • Sudeep's First Look Poster Of Risen Released

    risen first look

    The first look poster of Sudeep's maiden Hollywood film 'Risen' has been released on Monday evening via social media.

    Earlier, Sudeep had said that Australian film maker Eddia Arya, who is directing the film will be coming to Bangalore in October and having discussions with him. Sudeep had also said that the team is planning a photo shoot for his character and likewise, the photo shoot was done last month. Now the first look poster of Sudeep has been released.

    'Risen' is a sci-fi thriller based on the Chelabynsk meteorite explosion in Russia which happened a few years ago. The shooting for the film will start soon and Sudeep will be joining the sets after completing his portion in Prem's 'The Villain'.

  • Tiger In Bigg Boss

    tiger in big boss 5

    The team of Tiger Galli will be on the Bigg Boss weekend show with Kichcha Sudeep this evening. The film which released on Friday is doing good business at the box office. Sudeep has supported in the promotion of Ninasam Sathish's films including Tiger Galli and Beautiful Manasugalu.

    He had also appeared in a promotional video of the film focusing on the fact that it was Sathish's first action film. Now taking it forward Sathish and his team will appear on the Bigg Boss Kannada weekend show and talk about the film. The film is directed by Ravi Srivatsa who has earlier written dialogues for Sudeep's film Ranna. The action and dialogues in the film has been appreciated by fans. 

     

  • ಅಕ್ಟೋಬರ್​ನಲ್ಲೇ ಪೈಲ್ವಾನ್ ರಿಲೀಸ್..!

    pailwan will release in oct?

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಶೂಟಿಂಗ್ ಇನ್ನೂ ಶುರುವಾಗಿಲ್ಲ. ನಾಯಕಿಯ ಆಯ್ಕೆಯೇ ಆಗಿಲ್ಲ. ಚಿತ್ರತಂಡ ಇನ್ನೂ ಪ್ರಿ ಪ್ರೊಡಕ್ಷನ್ ಹಂತದಲ್ಲಿದೆ. ಅಭಿಮಾನಿಗಳಿಗೆ ಚಿತ್ರತಂಡ ಕೊಟ್ಟಿರೋದು ಒಂದೇ ಒಂದು ಫಸ್ಟ್ ಲುಕ್ ಪೋಸ್ಟರ್ ಮಾತ್ರ. ಹೀಗಿರುವಾಗ ಆಗಲೇ ರಿಲೀಸ್ ಡೇಟ್ ಫಿಕ್ಸಾಗೋಯ್ತಾ..? ಸಿನಿಮಾನ ಆಕ್ಟೋಬರ್​ನಲ್ಲೇ ರಿಲೀಸ್ ಮಾಡ್ತಾರಾ..? ಹೇಗೆ ಸಾಧ್ಯ..? ಸೆಪ್ಟೆಂಬರ್ ಮುಗಿಯೋಕೆ ವಾರವೂ ಇಲ್ಲ. ಹೇಗೆ..? ಹೇಗೆ..? ಹೇಗೆ..?

    ಉತ್ತರ ಇಲ್ಲಿದೆ. ಸಿನಿಮಾ ಅಕ್ಟೋಬರ್​ನಲ್ಲೇ ರಿಲೀಸ್ ಅಂತಾ ಹೇಳಿರೋದು ಚಿತ್ರತಂಡ ಅಲ್ಲ. ನಿರ್ದೇಶಕ ಕೃಷ್ಣ ಅಥವಾ ನಾಯಕ ಸುದೀಪ್ ಸೇರಿದಂತೆ  ಯಾರೊಬ್ಬರೂ ಇನ್ನೂ ಚಿತ್ರದ ರಿಲೀಸ್ ಬಗ್ಗೆ ಮಾತನಾಡಿಯೇ ಇಲ್ಲ. ಇಂಥಾದ್ದೊಂದು ಎಡವಟ್ಟು ಮಾಡಿರೋದು ಬುಕ್ ಮೈ ಶೋ. 

    ಬುಕ್ ಮೈ ಶೋನಲ್ಲಿ ಪೈಲ್ವಾನ್ ಚಿತ್ರ ಅಕ್ಟೋಬರ್​ನಲ್ಲಿ ರಿಲೀಸ್ ಎಂದು ಅನೌನ್ಸ್ ಮಾಡಲಾಗಿದೆ. ಇದು ಹೇಗಾಯ್ತು ಅನ್ನೋದು ಪೈಲ್ವಾನ್ ತಂಡಕ್ಕಂತೂ ಗೊತ್ತಿಲ್ಲ. ಬುಕ್ ಮೈ ಶೋದವರೇ ಉತ್ತರ ಕೊಡಬೇಕು.

  • ಅಭಿಮಾನಿಯ ಅತಿರೇಕಕ್ಕೆ ಕಿಚ್ಚನ ಬುದ್ದಿವಾದ

    sudeep image

    ಅಭಿಮಾನಿಗಳು ಅಭಿಮಾನದ ಹುಚ್ಚು ಹೊಳೆಯಲ್ಲಿ ಮುಳುಗೇಳುವುದು ಹೊಸದೇನೂ ಅಲ್ಲ. ಕಿಚ್ಚ ಸುದೀಪ್ ಅಭಿಮಾನಿಗಳೂ ಇದರಕ್ಕೆ ಹೊರತಲ್ಲ. ಅಂತಹ ಒಬ್ಬ ಹುಚ್ಚು ಅಭಿಮಾನಿಯ ಅತಿರೇಕಕ್ಕೆ ಕಿಚ್ಚ ಸುದೀಪ್ ಬುದ್ದಿಮಾತು ಹೇಳಿದ್ದಾರೆ.

    ಅರುಣ್ ಎಂಬ ಹೊಸಕೋಟೆಯ ಹುಡುಗ ತಮ್ಮ ಕೈ ಮೇಲೆ ರಕ್ತದಲ್ಲಿ ಕಿಚ್ಚ ಎಂದು ಬರೆದುಕೊಂಡಿದ್ದ. ಕೈ ಕೊಯ್ದುಕೊಂಡು, ಅದರ ಮೇಲೆ ಹರಿಶಿಣ ಹಾಕಿ ಫೋಟೋ ತೆಗೆದು ಸುದೀಪ್‍ಗೆ ಟ್ವೀಟ್ ಮಾಡಿದ್ದ. ಇದಕ್ಕೆ ಕಿಚ್ಚ ಸುದೀಪ್ ಬುದ್ದಿಮಾತು ಹೇಳಿದ್ದಾರೆ.

    ನಿಮ್ಮ ಅಭಿಮಾನ, ಪ್ರೀತಿಗೆ ಚಿರಋಣಿ. ಆದರೆ, ಅಭಿಮಾನವನ್ನು ವ್ಯಕ್ತಪಡಿಸಲು ಬೇರೆ ಬೇರೆ ದಾರಿಗಳಿವೆ. ನಿಮ್ಮನ್ನೇ ನೀವು ಕತ್ತರಿಸಿಕೊಳ್ಳುವಂತಹ ಪ್ರೀತಿಯ ಅಭಿಮಾನ ಬೇಡ. ದಯವಿಟ್ಟು ಇನ್ನೊಮ್ಮೆ ಇಂತಹ ಕೆಲಸ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

    ಇದು ಸುದೀಪ್‍ಗೆ ಹೊಸದೇನೂ ಅಲ್ಲ. ರಕ್ತದಲ್ಲಿ ಪತ್ರ ಬರೆಯುವ ಯಾವ ಅಭಿಮಾನಿಯನ್ನೂ ಸುದೀಪ್ ಪ್ರೋತ್ಸಾಹಿಸುವುದಿಲ್ಲ. ಬದಲಿಗೆ ಪ್ರತಿಯೊಬ್ಬರಿಗೂ ಬುದ್ದಿಮಾತು ಹೇಳುತ್ತಾರೆ. ಸುದೀಪ್‍ರ ಆ ಅಭಿಮಾನಿಗೆ, ಕಿಚ್ಚನ ಬೇರೆ ಅಭಿಮಾನಿಗಳು ಕೂಡಾ ಬುದ್ದಿ ಹೇಳಿದ್ದಾರೆ. ಬೇಕಾದರೆ ರಕ್ತದಾನ ಮಾಡು ಎಂದು ಸಲಹೆ ಕೊಟ್ಟಿದ್ದಾರೆ. ಕಿಚ್ಚನ ಆ ಅಭಿಮಾನಿ ಅರುಣ್ ಕೂಡಾ ಥ್ಯಾಂಕ್ಯೂ ಅಣ್ಣ. ಇನ್ನೊಮ್ಮೆ ಹೀಗೆ ಮಾಡುವುದಿಲ್ಲ ಎಂದು ಹೇಳಿದ್ದಾನೆ.

     

  • ಅವರು ಕೇಳಿದರು, ಕಿಚ್ಚ ಬಿಚ್ಚಿ ಕೊಟ್ಟೇಬಿಟ್ಟರು..!

    sudeep, rj sudesh

    ಕಿಚ್ಚ ಸುದೀಪ್ ಆರ್‍ಜೆ ಸುದೇಶ್‍ಗೆ ತಮ್ಮ ಜ್ಯಾಕೆಟ್‍ನ್ನು ಕೊಟ್ಟು ಸುದ್ದಿಯಾಗಿದ್ದಾರೆ. ಕಿಚ್ಚ ಸುದೀಪ್ ಧರಿಸಿದ್ದ ಬಿಳಿ ಜಾಕೆಟ್‍ವೊಂದು ಆರ್.ಜೆ. ಸುದೇಶ್‍ಗೆ ಇಷ್ಟವಾಗಿಬಿಟ್ಟಿದೆ. ತಕ್ಷಣ ಟ್ವಿಟರ್‍ನಲ್ಲೇ ಬೇಡಿಕೆಯಿಟ್ಟ ಸುದೇಶ್ ``ಸ್ವೀಟ್ ಶರ್ಟ್. ಬಿಳಿ ಜರ್ಕಿನ್, ದಯವಿಟ್ಟು ನನಗೆ ಕೊಡ್ತೀರಾ..? ಇದನ್ನು ಏನು ಬೇಕಾದರೂ ಅಂದುಕೊಳ್ಳಿ, ದಯವಿಟ್ಟು ನಿರ್ಲಕ್ಷ್ಯ ಮಾಡಬೇಡಿ'' ಎಂದಿದ್ದಾರೆ.

    ಸುದೀಪ್ ಕೂಡಾ ಇದಕ್ಕೆ ಸ್ಪಂದಿಸಿದ್ದಾರೆ. ಹಲೋ ಸುದೇಶ್, ಕೆಲವನ್ನು ಉಡುಗೊರೆಯಾಗಿ ಪಡೆಯಲು ಬರುವುದಿಲ್ಲ. ಗಳಿಸಬೇಕು. ನೀನು ನನ್ನ ಗೆಳೆಯ. ಅದನ್ನು ಗಳಿಸಿದ್ದೀಯ. ನಿನಗೆ ಶುಭವಾಗಲಿ ಎಂದು ಬರೆದು ಜರ್ಕಿನ್‍ನ್ನು ಕಳಿಸಿಕೊಟ್ಟಿದ್ದಾರೆ. 

    ಆರ್. ಜೆ. ಸುದೇಶ್ ಅಂತೂ ಸುದೀಪ್ ಕಳಿಸಿದ ಉಡುಗೊರೆ ನೋಡಿ ಥ್ರಿಲ್ಲಾಗಿ ಬಿಟ್ಟಿದ್ದಾರೆ.

  • ಕಿಚ್ಚ ಸುದೀಪ್ ವಿಡಿಯೋ ಲೀಕ್ ಬೆದರಿಕೆ ಹಾಕಿದ್ದು ಚಿತ್ರರಂಗದವರೇ..!

    ಕಿಚ್ಚ ಸುದೀಪ್ ವಿಡಿಯೋ ಲೀಕ್ ಬೆದರಿಕೆ ಹಾಕಿದ್ದು ಚಿತ್ರರಂಗದವರೇ..!

    ಕಿಚ್ಚ ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಮಾಡುತ್ತೇನೆ ಎಂದು ಅವಾಚ್ಯ ಶಬ್ಧಗಳಿಂದ ಬೈದು, ಬೆದರಿಕೆ ಹಾಕಿರುವ ಪತ್ರವೊಂದು ಸುದೀಪ್ ಅವರ ನಿವಾಸಕ್ಕೇ ಬಂದಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಕಿಚ್ಚ ಸುದೀಪ್ ಕುಟುಂಬ ಸದಸ್ಯರು. ಸುದೀಪ್ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಸುದ್ದಿ ಹೊರಬೀಳುವುದಕ್ಕೂ ಪತ್ರ ಬಂದಿರುವುದಕ್ಕೂ ತಾಳೆಯಾಗಿದೆ. ಕಾಕತಾಳೀಯವೇ ಇರಬಹುದು, ಆದರೆ ಹಾಗೆ ಕಾಣುತ್ತಿಲ್ಲ.

    ಕಿಚ್ಚನ ಈ ಹೇಳಿಕೆ ಈಗ ಸ್ಯಾಂಡಲ್ ವುಡ್ನಲ್ಲಿ ಸಂಚಲನ ಮೂಡಿಸಿದೆ. ಸುದೀಪ್ ಅವರನ್ನು ಎದುರು ಹಾಕಿಕೊಂಡ ಸ್ಟಾರ್ ಯಾರು? ಕಿಚ್ಚನಿಗೆ ಬೆದರಿಕೆ ಹಾಕಿ ಪತ್ರ ಬರೆದಿದ್ದು ಯಾರು ಎಂದು ತಲೆಕೆಡಿಸಿಕೊಂಡಿದ್ದಾರೆ.

    ನಮ್ಮ ಮನೆ ಅಡ್ರೆಸ್ ಗೊತ್ತಿದೆ. ಪತ್ರ ಬರೆದು ಹಾಕಿದ್ದಾರೆ. ಇದು ರಾಜಕೀಯದಲ್ಲಿ ಇರುವವರ ಕೈವಾಡ ಅಲ್ಲವೇ ಅಲ್ಲ. ಸಿನಿಮಾರಂಗದಲ್ಲಿ ಇರುವವರೇ ಈ ರೀತಿಯ ಕೃತ್ಯ ಮಾಡಿದ್ದಾರೆ. ಅವರು ಯಾರು ಎನ್ನುವುದು ನನಗೆ ಗೊತ್ತಿದೆ. ಅದು ಯಾರು ಅಂತ ಗೊತ್ತು. ಇವತ್ತು ಮಾತನಾಡಲ್ಲ. ಇದಕ್ಕೆ ಹೇಗೆ ಉತ್ತರ ಕೊಡಬೇಕೋ ಹಾಗೆ ಕೊಡುತ್ತೇನೆ ಎಂದು ಹೇಳಿದ್ದಾರೆ ಸುದೀಪ್.

    ಎಲ್ಲಾ ಚಿತ್ರರಂಗದಲ್ಲೂ ಕೆಲವರು ಆಗದೆ ಇರೋರು ಇರುತ್ತಾರೆ. ನನ್ನ ಮಾತು ಏನಿದ್ದರೂ ಪ್ರೀತಿ ತೋರಿಸೋರಿಗೆ. ಪತ್ರ ಕಳುಹಿಸಿರೋರಿಗೂ ಒಂದು ಉತ್ತರ ಕೊಟ್ಟೇ ಕೊಡ್ತೀನಿ. ಯಾಕಂದ್ರೆ, ಅದು ಬೇರೆಯವರಿಗೂ ಪಾಠ ಆಗಬೇಕು ಎನ್ನುವುದು ಸುದೀಪ್ ಮಾತು. ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.  ಸುದೀಪ್ ಅವರ ಆಪ್ತ, ನಿರ್ಮಾಪಕ ಜಾಕ್ ಮಂಜು ದೂರು ನೀಡಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 506, ಸೆಕ್ಷನ್ 504 ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಸದ್ಯ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.

    ಇದೂವರೆಗೆ ಪತ್ರ ಬರೆದಿರುವುದು ಯಾರು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಈ ಮೇಲ್, ಸೋಷಿಯಲ್ ಮೀಡಿಯಾ ಮೂಲಕ ಬೆದರಿಕೆ ಹಾಕಿದರೆ, ಡಿಜಿಟಲ್ ಟ್ರ್ಯಾಕ್ ಮಾಡುತ್ತಾರೆ ಎಂಬ ಕಾರಣಕ್ಕೇ ಖದೀಮ ಈ ರೀತಿಯ ಬೆದರಿಕೆ ಹಾಕಿದ್ದಾನೆ. ಪೊಲೀಸರು ಆರೋಪಿಯ ಹುಡುಕಾಟದಲ್ಲಿದ್ದಾರೆ.

  • ಕಿಚ್ಚ ಸುದೀಪ್ ವಿರುದ್ಧ ಸಂಚು : ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಅವನು..!

    ಕಿಚ್ಚ ಸುದೀಪ್ ವಿರುದ್ಧ ಸಂಚು : ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಅವನು..!

    ಕಿಚ್ಚ ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದವನ ತನಿಖೆ ಚುರುಕಾಗಿ ಸಾಗುತ್ತಿದೆ. ಖದೀಮ ಯಾರೆಂದು ಇನ್ನೂ ಗೊತ್ತಾಗಿಲ್ಲ. ಸಿಸಿಬಿ ತನ್ನ ತನಿಖೆ ಮುಂದುವರಿಸಿದ್ದು, ಕೇಸ್ನಲ್ಲಿ ಒಂದೊಂದೇ ಸುಳಿವುಗಳು ದೊರೆಯುತ್ತಿವೆ. ನಟ ಸುದೀಪ್ಗೆ ಬೆದರಿಕೆ ಪತ್ರ ನೀಡಲು ಸ್ವಿಫ್ಟ್ ಕಾರು ಬಳಕೆ ಮಾಡಲಾಗಿದೆ ಎಂಬುದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ, ಕಾರಿನ ನಂಬರ್ ಪ್ಲೇಟ್ ಅನ್ನು ದುಷ್ಕರ್ಮಿಗಳು ಬದಲಿಸಿದ್ದಾರೆ. ಬೆಂಗಳೂರಿನ ದೊಮ್ಮಲೂರು ಪೋಸ್ಟ್ ಆಫೀಸ್ಗೆ ಸ್ವಿಫ್ಟ್ ಕಾರಿನಲ್ಲಿ ಆರೋಪಿಗಳು ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ವಿಫ್ಟ್ ಕಾರಿನಲ್ಲಿ ಬಂದು ಪೋಸ್ಟ್ ಬಾಕ್ಸ್ಗೆ ಪತ್ರ ಹಾಕಲಾಗಿದೆ. ಈ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ವಿಫ್ಟ್ ಕಾರು ಬೆಂಗಳೂರಿನ ಕೆಂಗೇರಿ ಬಳಿಯ ವ್ಯಕ್ತಿಗೆ ಸೇರಿದ್ದು, ವಿಚಾರಣೆ ಮಾಡಿದಾಗ ಆತನಿಗೂ ಪತ್ರಕ್ಕೂ ಸಂಬಂಧ ಇಲ್ಲ ಎನ್ನುವುದು ಗೊತ್ತಾಗಿದೆ. ಇದು ಗೊತ್ತಾಗಿ ಪೊಲೀಸರೂ ಶಾಕ್ ಆಗಿದ್ದಾರೆ. ಆರೋಪಿಗಳು ಸ್ವಿಫ್ಟ್ ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ನಟ ಕಿಚ್ಚ ಸುದೀಪ್ಗೆ ಬೆದರಿಕೆ ಪತ್ರ ಪೋಸ್ಟ್ ಮಾಡಲು ಬಳಸಿದ್ದಾರೆ. . ಸದ್ಯ, ಈ ಸುಳಿವು ದೊರೆತಿದ್ದು, ಆರೋಪಿಗಳು ಯಾರು ಎನ್ನುವುದು ಇನ್ನಷ್ಟೇ ಪತ್ತೆಯಾಗಬೇಕಿದೆ.

    ನಟ ಕಿಚ್ಚ ಸುದೀಪ್ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದು, ಬೊಮ್ಮಾಯಿ ಅವರಿಗೆ ಹಾಗೂ ಸಿಎಂ ಹೇಳಿದ ಕಡೆ ಪ್ರಚಾರ ಮಾಡುವುದಾಗಿ ಘೋಷಿಸಿದ್ದರು. ಅದಕ್ಕೆ ಮುನ್ನವೇ ಈ ಪತ್ರ ಬಂದಿತ್ತು. ಆದರೆ ಸುದೀಪ್ ಈ ಪತ್ರದ ಹಿನ್ನೆಲೆಯಲ್ಲಿ ಚಿತ್ರರಂಗದವರಿದ್ದಾರೆ ಎಂದು ಆರೋಪಿಸಿದ್ದರು. ಕಿಚ್ಚ ಸುದೀಪ್ ಬಳಿ ಈ ಹಿಂದೆ ಕೆಲಸ ಮಾಡುತ್ತಿದ್ದ ಕಾರು ಚಾಲಕನೇ ಈ  ಕೃತ್ಯ ನಡೆಸಿರಬಹುದು ಎಂಬ ಶಂಕೆಯೂ ಪೊಲೀಸರಿಗೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ.            

  • ಕಿಚ್ಚ ಸುದೀಪ್`ಗೆ ಭಾರತೀಯ ಅಂಚೆ ಇಲಾಖೆ ಗೌರವ

    ಕಿಚ್ಚ ಸುದೀಪ್`ಗೆ ಭಾರತೀಯ ಅಂಚೆ ಇಲಾಖೆ ಗೌರವ

    ಅಭಿಮಾನಿಗಳ ಹೃದಯದಲ್ಲಿ ಕಿಚ್ಚನಾಗಿ ಅರಮನೆಯನ್ನೇ ಕಟ್ಟಿಕೊಂಡಿರುವ ನಟ ಸುದೀಪ್ ಅವರಿಗೆ ಹಲವಾರು ಪ್ರಶಸ್ತಿ, ಪುರಸ್ಕಾರ, ಗೌರವಗಳು ಸಂದಿವೆ. ಈಗ ಆ ಗೌರವದ ದೊಡ್ಡ ಹೆಜ್ಜೆ ರಾಷ್ಟ್ರೀಯ ಮಟ್ಟದ ಗೌರವ. ಅದೂ ಅಂಚೆ ಇಲಾಖೆಯಿಂದ.

    ಹೌದು, ಕಿಚ್ಚ ಸುದೀಪ್ ಅವರಿಗಾಗಿ ಭಾರತೀಯ ಅಂಚೆ ಇಲಾಖೆ ವಿಶೇಷ ಲಕೋಟೆ ಸಿದ್ಧಪಡಿಸಿದೆ. ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವ ಸುದೀಪ್ ಅವರ ಮನೆಗೆ ತೆರಳಿದ್ದ ಅಂಚೆ  ಇಲಾಖೆ ಅಧೀಕ್ಷಕರಾದ ಮಾದೇಶ್, ಈ ಅಂಚೆ ಲಕೋಟೆಗೆ ಸುದೀಪ್ ಅವರಿಗೆ ನಿರಾಕ್ಷೇಪಣ ಪತ್ರ ಪಡೆದರು.

    ಈ ಅಂಚೆ ಲಕೋಟೆಯ ಬಿಡುಗಡೆ ಕಾರ್ಯಕ್ರಮವನ್ನು ಅಂಚೆ ಇಲಾಖೆಯೇ ಆಯೋಜಿಸಲಿದ್ದು, ಆ ಕಾರ್ಯಕ್ರಮದ ನಂತರ ಎಲ್ಲೆಡೆ ಪೋಸ್ಟ್ ಆಫೀಸುಗಳಲ್ಲಿ ಸುದೀಪ್ ಎನ್ವಲಪ್ ಕವರ್ ಸಿಗುತ್ತವೆ.

  • ಕಿಚ್ಚನ ಹುಡುಗಿಯರ ಹೃದಯ ಮೆಚ್ಚುವ ಸೇವೆ

    social work by kichchana hudugeeru

    ಕನ್ನಡದಲ್ಲಿ ಅತೀ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಸುದೀಪ್ ಕೂಡಾ ಒಬ್ಬರು. ಆ ಮಹಿಳಾ ಅಭಿಮಾನಿಗಳು ಸುಮ್ಮನೆ ಅಭಿಮಾನಿಗಳಾಗಿಲ್ಲ. ತಮ್ಮದೇ ಸಂಘ ಕಟ್ಟಿಕೊಂಡು ಸಮಾಜಸೇವೆಗೂ ಇಳಿದಿದ್ದಾರೆ.

    ಕಿಚ್ಚನ ಹೆಬ್ಬುಲಿ ಹುಡುಗೀರು ಕಿಚ್ಚ ಸುದೀಪ ಸೇನಾ ಸಮಿತಿ ಎಂಬ ಸಂಘಟನೆ ಮಾಡಿಕೊಂಡು ಸಮಾಜ ಸೇವೆಯನ್ನೂ ಮಾಡುತ್ತಿದ್ದಾರೆ. ನಿರಾಶ್ರಿತರಿಗೆ, ರಸ್ತೆ ಬದಿಯಲ್ಲಿ ಮಲಗುವವರಿಗೆ ಹೊದಿಕೆ ನೀಡುವುದು, ಸ್ಲಮ್ ಮಕ್ಕಳಿಗೆ ಆಟಿಕೆಗಳನ್ನು ನೀಡುವುದು, ನಿರುದ್ಯೋಗಿಗಳಿಗೆ ಉದ್ಯೋಗದ ಸಂಪೂರ್ಣ ಮಾಹಿತಿ ನೀಡುವುದೇ ಮೊದಲಾದ ಸೇವೆಗಳಲ್ಲಿ ತೊಡಗಿದ್ದಾರೆ.

    ಉಷಾ ಎಂಬ ಕಿಚ್ಚನ ಅಭಿಮಾನಿ, ಈ ಸಂಘದ ಅಧ್ಯಕ್ಷೆ. ಕಿಚ್ಚ ಸುದೀಪ್ ಸೇನಾ ಸಮಿತಿಯ ಜಗ್ಗಿ ಮತ್ತು ನವೀನ್ ತಂಡದವರೂ ಈ ಸಂಘಕ್ಕೆ ಬೆಂಬಲ ನೀಡಿದ್ದಾರೆ. ಹುಡುಗಿಯರೇ ಕಟ್ಟಿರುವ ಈ ಸಂಘದ ನೆರವನ್ನು ಹೆಚ್ಚು ಹೆಚ್ಚು ಜನರು ಪಡೆದುಕೊಳ್ಳಬೇಕು ಎನ್ನುವುದೇ ನಮ್ಮ ಆಸೆ. ಆಗಲೇ ನಮ್ಮ ಶ್ರಮ ಸಾರ್ಥಕ ಎಂದಿದ್ದಾರೆ ಉಷಾ.

  • ಚಂದನ್ ಶೆಟ್ಟಿ ಬಿಗ್‍ಬಾಸ್ 

    big boss 5 winner

    ಮೂರೇ ಮೂರು ಪೆಗ್ಗಿಗೆ ಹಾಡಿನ ಮೂಲಕ ಸಂಗೀತ ಲೋಕದಲ್ಲಿ ಸಂಚಲನ ಮೂಡಿಸಿದ್ದ ಚಂದನ್ ಶೆಟ್ಟಿ, ಬಿಗ್‍ಬಾಸ್‍ನಲ್ಲೂ ಮಿಂಚಿದ್ದು ಹಾಡು, ಸಂಗೀತದ ಮೂಲಕ. ಮಧ್ಯೆ ಮಧ್ಯೆ ಏನೇ ಜಗಳ, ಕಿರಿಕ್ಕುಗಳಾದರೂ... ಚಂದನ್ ಶೆಟ್ಟಿ ಒಳ್ಳೆಯ ಎಂಟರ್‍ಟೈನರ್ ಆಗಿದ್ದರು. ಆ ಸಾಧನೆಯೇ ಅವರನ್ನೀಗ ಬಿಗ್‍ಬಾಸ್ ವಿನ್ನರ್ ಆಗಿಸಿದೆ.

    ಬಿಗ್‍ಬಾಸ್ ಫಿನಾಲೆಯಲ್ಲಿ ಕಿಚ್ಚ ಸುದೀಪ್, ಚಂದನ್ ಶೆಟ್ಟಿಯವರನ್ನು ವಿನ್ನರ್ ಎಂದು ಘೋಷಿಸುತ್ತಿದ್ದಂತೆ, ಆನ್‍ಲೈನ್‍ನಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂತು. ಈ ಬಾರಿ ಸೀಕ್ರೆಟ್ ಕಾಪಾಡುವ ಸಲುವಾಗಿ, ಅಭಿಮಾನಿಗಳನ್ನು ಶೋ ಶೂಟಿಂಗ್‍ನಿಂದ ಹೊರಗಿಡಲಾಗಿತ್ತು. ಹೀಗಾಗಿ, ವಿನ್ನರ್ ಯಾರು ಎಂಬ ಕುತೂಹಲವನ್ನು ಕಾರ್ಯಕ್ರಮದಲ್ಲಿಯೇ ತಿಳಿದುಕೊಳ್ಳುವಂತಾಯ್ತು.

    ಇನ್ನು ಸಾಮಾನ್ಯ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ದಿವಾಕರ್, ರನ್ನರ್ ಅಪ್ ಆಗಿರುವುದು ವಿಶೇಷ. ಅದನ್ನು ಕೂಡಾ ಸಾಧನೆಯೆಂದೇ ಹೇಳಬೇಕು. ಏಕೆ ಗೊತ್ತೇ..? ಅವರಿಗೆ ಸ್ಪರ್ಧಿಯಾಗಿದ್ದವರು ಕಿರುತೆರೆಯ ಸೂಪರ್‍ಸ್ಟಾರ್ ಜೆಕೆ. ಕಟ್ಟಕಡೆಯವರೆಗೂ ರೇಸ್‍ನಲ್ಲಿದ್ದ ಜೆಕೆ, 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

    ಅಲ್ಲಿಗೆ ಬಿಗ್‍ಬಾಸ್ ಸೀಸನ್ 5 ಮುಕ್ತಾಯವಾಯಿತು.

    Related Articles :-

    Kannada Rapper Chandan Shetty Wins Big Boss 5

  • ಜಾತಿ ನೋಡಿ ಪ್ರಚಾರಕ್ಕೆ ಬಂದಿಲ್ಲ : ಸುದೀಪ್

    ಜಾತಿ ನೋಡಿ ಪ್ರಚಾರಕ್ಕೆ ಬಂದಿಲ್ಲ : ಸುದೀಪ್

    ಕಿಚ್ಚ ಸುದೀಪ್ ಯಾವ ಜಾತಿ..? ಅಭಿಮಾನಿಗಳನ್ನು ಕೇಳಿದರೆ ಅಣ್ಣಾವ್ರ ಶೈಲಿಯಲ್ಲಿ ಕಲಾವಿದರ ಜಾತಿ ಅಂತಾರೆ. ಆದರೆ ರಾಜಕೀಯಕ್ಕೆ ಯಾವುದೋ ಒಂದು ರೀತಿಯಲ್ಲಿ ಒಂದು ಕಾಲಿಟ್ಟ ಮೇಲೆ ಜಾತಿ, ಒಳ ಪಂಗಡ ಸೇರಿ ಎಲ್ಲವನ್ನೂ ಅಳೆದು ಬಿಡ್ತಾರೆ. ಹಾಗೆ ಗೊತ್ತಾಗಿದ್ದೇ ಸುದೀಪ್ ಜಾತಿ. ಸುದೀಪ್ ಬೊಮ್ಮಾಯಿ ಹಾಗೂ ಬಿಜೆಪಿಯ ಕೆಲವರ ಪರ ಪರ ಪ್ರಚಾರ ಮಾಡುತ್ತಿದ್ದಾರೆ. ಅದನ್ನು ಅವರು ಅಧಿಕೃತವಾಗಿ ಘೋಷಿಸಿಯೇ ಪ್ರಚಾರಕ್ಕೆ ಹೊರಟವರು. ಹೀಗಾಗಿ ಸುದೀಪ್ ಎಲ್ಲಿಗೇ ಹೋದರೂ ಸುದೀಪ್ ಅವರ ಜಾತಿಯ ಪ್ರಶ್ನೆಯೂ ಎದುರಾಗುತ್ತಿದೆ.

    ಇತ್ತೀಚೆಗೆ ಬೆಳಗಾವಿಯ ಯಮಕನಮರಡಿಗೆ ಪ್ರಚಾರಕ್ಕೆ ಹೋಗಿದ್ದಾರೆ ಸುದೀಪ್ ಅವರಿಗೆ ಮತ್ತೊಮ್ಮೆ ಈ ಪ್ರಶ್ನೆ ಎದುರಾಯ್ತು. ನಾನು ಎಲ್ಲಿ ಹುಟ್ಟಿದೆ. ಯಾವ ಜನಾಂಗ ಅನ್ನೋದು ಮುಖ್ಯ ಅಲ್ಲ. ಒಬ್ಬ ಮನುಷ್ಯನಾಗಿರುವುದು, ಸ್ನೇಹಿತನಾಗಿರುವುದು ಮೊದಲು ಮುಖ್ಯ. ಆವಾಗ ಮಾತ್ರ ಮನಸ್ಸುಗಳನ್ನು ಗೆಲ್ಲಲು ಸಾಧ್ಯ. ಇಲ್ಲಿ ನಾನು ನಿಮ್ಮ ಸಹೋದರ, ಸ್ನೇಹಿತನಾಗಿ ಬಂದಿದ್ದೇನೆ. ನನ್ನ ಬಾಂಧವರ ಪರ ತುಂಬಾ ಪ್ರೀತಿ ಇದೆ. 25 ವರ್ಷ ಚಿತ್ರರಂಗದಲ್ಲಿ ಇದ್ದೀನಿ ಅಂದ್ರೆ ನಿಮ್ಮಿಂದಾ. ನನ್ನ ಮೊದಲನೇ ಪ್ರೀತಿ ಕನ್ನಡ, ಕನ್ನಡಚಿತ್ರರಂಗ, ಅಭಿಮಾನಿಗಳು. ನನ್ನ ತಂದೆ ತಾಯಿ ಹೆಸರಿಟ್ಟಿದ್ದು ಬಹಳಷ್ಟು ಜನರಿಗೆ ಗೊತ್ತಿದೆಯೋ ಗೊತ್ತಿಲ್ಲಾ. ಆದರೆ ಕಿಚ್ಚ ಕಿಚ್ಚ ಎನ್ನುವ ಹೊಸ ಜನ್ಮ ಕೊಟ್ಟಿದ್ದೀರಾ ನೀವೆಲ್ಲ. ಕೊನೆವರೆಗೂ ಅದನ್ನ ಕಾಪಾಡಿಕೊಂಡು ಹೋಗುತ್ತೇನೆ  ಎಂದಿದ್ದಾರೆ ಸುದೀಪ್.

    ರೋಡ್ ಶೋ, ಪ್ರಚಾರವನ್ನೆಲ್ಲ ಮುಗಿಸಿ ಹೊರಡುವಾಗ ವೀರ ಮದಕರಿ ಚಿತ್ರದ ಡೈಲಾಗ್ ಹೇಳುವಂತೆ ಅಭಿಮಾನಿಗಳು ಒತ್ತಾಯ ಮಾಡಿದ್ರು. ಮದಕರಿ ಚಿತ್ರದ ಡೈಲಾಗ್ ಹೇಳಿ ಅಂತೀರಾ.. ಹೇಳಿದ್ರೆ ಜಾತಿ ಹೆಸರು ಹೇಳಿ ಟೀಕೆ ಮಾಡ್ತಾರೆ. ಇದು ಯಾವ ನ್ಯಾಯ ಎಂದ ಸುದೀಪ್, ಅಭಿಮಾನಿಗಳ ಆಸೆಯನ್ನೇನೂ ಹುಸಿ ಮಾಡಲಿಲ್ಲ. ವೀರ ಮದಕರಿ ಚಿತ್ರದ ಡೈಲಾಗ್ ಹೊಡೆದರು.

    ಅಂದಹಾಗೆ ಸುದೀಪ್ ಈ ಪ್ರಚಾರಕ್ಕೆ ಬರುತ್ತಿರುವುದು ಬೊಮ್ಮಾಯಿ ಮಾಮನಿಗಾಗಿ ಎಂದಿದ್ದರು. ಬಸವರಾಜ ಬೊಮ್ಮಾಯಿ ಸುದೀಪ್ ಜಾತಿಯವರಲ್ಲ. ಬೊಮ್ಮಾಯಿ ಜೊತೆಯಲ್ಲಿ ಈ ಮಾತು ಹೇಳಿದಾಗ ವೇದಿಕೆಯಲ್ಲಿದ್ದ ಸುಧಾಕರ್, ಮುನಿರತ್ನ, ಆರ್.ಅಶೋಕ್ ಕೂಡಾ ಸುದೀಪ್ ಜಾತಿಗೆ ಸೇರಿದವರಲ್ಲ.  

  • ದಿ ವಿಲನ್ ಟೀಸರ್‍ಗೇ 500 ರೂ. ಟಿಕೆಟ್.. ಯಾಕೆ ಗೊತ್ತಾ..?

    the villain teaser on june 28th

    ದಿ ವಿಲನ್. ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ಶಿವರಾಜ್‍ಕುಮಾರ್, ಸುದೀಪ್ ಮತ್ತು ಪ್ರೇಮ್ ಹಾಗೂ ಸಿ.ಆರ್.ಮನೋಹರ್ ಕಾಂಬಿನೇಷನ್ ಚಿತ್ರದ ಬಗ್ಗೆ ಗೌರಿಶಂಕರದಷ್ಟು ನಿರೀಕ್ಷೆ ಹುಟ್ಟಿಸಿದೆ. ಚಿತ್ರದ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲವಾದರೂ, ಹೇಳಿದಂತೆ ಜೂನ್ ತಿಂಗಳಲ್ಲೇ ಚಿತ್ರದ ಟೀಸರ್ ಹೊರತರುತ್ತಿದ್ದಾರೆ ನಿರ್ದೇಶಕ ಪ್ರೇಮ್. ಜೂನ್ 28ರಂದು ಬೆಂಗಳೂರಿನ ಜಿ.ಟಿ.ಮಾಲ್‍ನಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. 

    ಕನ್ನಡ ಚಿತ್ರರಂಗದಲ್ಲಿ ಹಲವು ಹೊಸತುಗಳಿಗೆ ಮುನ್ನುಡಿ ಬರೆಯುತ್ತಿರುವ ಚಿತ್ರ, ಟೀಸರ್ ಬಿಡುಗಡೆಯಲ್ಲೂ ವಿಭಿನ್ನ ಹಾದಿ ತುಳಿದಿದೆ. ಚಿತ್ರದ ಟೀಸರ್ ಪ್ರದರ್ಶನಕ್ಕೂ ಟಿಕೆಟ್ ನೀಡಲಾಗುತ್ತಿದೆ. ಒಂದು ಟಿಕೆಟ್‍ಗೆ 500 ರೂ.

    ಶಿವಣ್ಣ ಮತ್ತು ಸುದೀಪ್ ಇಬ್ಬರಿಗೂ ಪ್ರತ್ಯೇಕ ಟೀಸರ್ ರೆಡಿ ಮಾಡಲಾಗಿದೆಯಂತೆ. ಅಂದಹಾಗೆ ಟೀಸರ್ ನೋಡೋಕೆ ನೀವು ಕೊಡೋ 500 ರೂ. ವ್ಯರ್ಥವಾಗುವುದಿಲ್ಲ. ಆ ಹಣ ಕನ್ನಡ ಚಿತ್ರರಂಗದಲ್ಲಿ ಸಂಕಷ್ಟದಲ್ಲಿರುವ ನಿರ್ದೇಶಕರ ನೆರವಿಗಾಗಿ ನೀಡಲು ಚಿತ್ರತಂಡ ನಿರ್ಧರಿಸಿದೆ. ಅದೇ ದಿನ ಹಣವನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ತಲುಪಿಸಲು ಚಿತ್ರತಂಡ ಪ್ಲಾನ್ ಮಾಡಿದೆ. ಸಿಎಂ ಮೂಲಕವೇ ಸಂಕಷ್ಟದಲ್ಲಿರುವ ಆಯ್ದ ನಿರ್ದೇಶಕರಿಗೆ ಈ ಮೊತ್ತ ತಲುಪಲಿದೆ ಎಂದು ಹೇಳಿಕೊಂಡಿದೆ ಚಿತ್ರತಂಡ. 

  • ಪೈಲ್ವಾನ ಸುದೀಪ್..ಹೇಗಿರ್ತಾರೋ ನೋಡ್ಬೇಕು..

    pailwanan first look

    ಕಿಚ್ಚ ಸುದೀಪ್ `ಪೈಲ್ವಾನ'ರಾಗುತ್ತಿದ್ದಾರೆ. ಅದೂ ಅಂತಿಂಥ ಪೈಲ್ವಾನ ಅಲ್ಲ. ಗರಡಿ ಮನೆಯ ಕಟ್ಟಾಳು. ಚಿತ್ರದ ಫಸ್ಟ್‍ಲುಕ್ ಹೊರಬಿದ್ದಿದೆ. ಗರಡಿ ಮನೆಯ ಮಣ್ಣು ಮೆತ್ತಿಕೊಂಡಿರುವ ಹುರಿಗಟ್ಟಿದ ದೇಹದ ಸುದೀಪ್‍ರನ್ನು ನೋಡಿದವರು ವ್ಹಾವ್ ಎಂದಿದ್ದಾರೆ. 

    ಪೈಲ್ವಾನ ಚಿತ್ರದ ಸಂಪೂರ್ಣ ಕಥೆಯೇ ಪೈಲ್ವಾನನ ಕ್ರೀಡೆಯ ಕಥೆ. ದಾವಣಗೆರೆ, ವಿಜಯಪುರ, ಬಾಗಲಕೋಟೆಗಳಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. ಮೊದಲ ಚಿತ್ರದಲ್ಲಿ ಯೋಧನೊಬ್ಬನ ಕಥೆ ಹೇಳಿದ್ದ ಕೃಷ್ಣ, ಎರಡನೇ ಚಿತ್ರದಲ್ಲಿ ಪೈಲ್ವಾನನ ಕಥೆ ಆರಿಸಿಕೊಂಡಿದ್ದಾರೆ. ಜೀವನ ಪ್ರತಿಯೊಬ್ಬರಿಗೂ ಎರಡನೇ ಅವಕಾಶ ಕೊಡುತ್ತೆ. ಹಾಗೆ ತನಗೆ ಸಿಕ್ಕ ಸೆಕೆಂಡ್ ಚಾನ್ಸ್‍ನ್ನು ದಕ್ಕಿಸಿಕೊಳ್ಳಲು ನಾಯಕ ಏನೇನೆಲ್ಲ ಮಾಡಿ ಯಶಸ್ವಿಯಾಗುತ್ತಾನೆ ಎನ್ನುವುದೇ ಚಿತ್ರದ ಕಥೆ ಎಂದು ಗುಟ್ಟು ಬಿಟ್ಟಿದ್ದಾರೆ ಕೃಷ್ಣ.

    ಕನ್ನಡ ಸಿನಿಮಾಗಳಲ್ಲಿ ಗರಡಿ ಮನೆಗಳು ಅಪರೂಪವೇನಲ್ಲ. ಆದರೆ, ಗರಡಿ ಮನೆಯ ಪೈಲ್ವಾನನ ಕಥೆಯೇ ಸಿನಿಮಾ ಆಗಿಲ್ಲ. ಹೀಗಾಗಿಯೇ ಪೈಲ್ವಾನ ಸುದೀಪ್ ಹೇಗಿರ್ತಾರೋ ನೋಡಬೇಕು ಎಂಬ ಅಭಿಮಾನಿಗಳ ತುಡಿತ ಜೋರಾಗಿದೆ.

  • ಪೈಲ್ವಾನ್ ಮಿಡ್ ನೈಟ್ ಶೋ ಇಲ್ಲ - ಪೈಲ್ವಾನ್ ಸುದೀಪ್

    pailwaana image

    ಪೈಲ್ವಾನ್ ಚಿತ್ರವನ್ನು ಅರ್ಧರಾತ್ರಿಯಲ್ಲೇ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಸಣ್ಣ ಶಾಕ್ ಕೊಟ್ಟಿದ್ದಾರೆ. ಕೆಲವು ಕಡೆ ಮಧ್ಯರಾತ್ರಿಯೇ ಶೋ ನಡೆಯಲಿದೆ ಎಂಬ ಸುದ್ದಿಗಳನ್ನು ನಿರಾಕರಿಸಿದ್ದಾರೆ. ಗುರುವಾರ ರಿಲೀಸ್ ಆಗುತ್ತಿರುವ ಪೈಲ್ವಾನ್ ಚಿತ್ರದ ಮಧ್ಯರಾತ್ರಿ ಶೋ ಇರಲ್ಲ.

    ‘12ಗಂಟೆ ನಂತರ ದಿ ವಿಲನ್ ಮತ್ತು ಹೆಬ್ಬುಲಿ ರಿಲೀಸ್ ಆಗಿದ್ದವು. ಆದರೆ ಪೈಲ್ವಾನ್  ಮಧ್ಯರಾತ್ರಿ ರಿಲೀಸ್ ಆಗಲ್ಲ. ಮಧ್ಯರಾತ್ರಿ ರಿಲೀಸ್ ಮಾಡೋದು ಸೇಫ್ ಅಲ್ಲ. ಅದರಲ್ಲೂ ಕೊನೆಯ ಕ್ಷಣದಲ್ಲಿ ಸಿನಿಮಾ ಅಪ್‌ಲೋಡ್ ಮಾಡೋದು ಕಷ್ಟ. ಕಳೆದ ಬಾರಿ ಇದರಿಂದಾಗಿಯೇ ಕೆಲವೆಡೆ ಥಿಯೇಟರ್ ಪ್ಲಾನ್ ಬ್ಯಾಲೆನ್ಸ್ ತಪ್ಪಿತ್ತು. ಹೀಗಾಗಿ ಪೈಲ್ವಾನ್ ಮಧ್ಯರಾತ್ರಿ ಶೋ ಇಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಸುದೀಪ್.

    12 ಗಂಟೆಗೆ ರಿಲೀಸ್ ಮಾಡಿ ಆಗಿ ದೊಡ್ಡ ಸಾಧನೆ ಮಾಡುವ ಆತುರವಿಲ್ಲ. ಅದು ಸುಪಿರಿಯಾರಿಟಿ ಅಥವಾ ತಾಕತ್ತಿನ ಪ್ರಶ್ನೆ ಅಲ್ಲ ಎಂದಿರುವ ಸುದೀಪ್, ಕಾಯುತ್ತಿರುವ ಅಭಿಮಾನಿಗಳನ್ನು ಕಂಪ್ಲೀಟ್ ನಿರಾಸೆಗೂ ದೂಡಿಲ್ಲ. 

    ಪೈಲ್ವಾನ್ ಮೊದಲ ಶೋ ಮಧ್ಯರಾತ್ರಿ ಅಲ್ಲದೇ ಹೋದರೂ,  ಬೆಳಗ್ಗೆ 5.30ಕ್ಕೆ ಮೊದಲ ಶೋ ಇರುತ್ತೆ. 

    ಇದೇ ಮೊದಲ ಬಾರಿ ಬೆಂಗಳೂರಿನ ಸಂತೋಷ್ ಟಾಕೀಸ್ನಲ್ಲಿ 6.30ಕ್ಕೆ ಶೋ ಇದೆ. ನಾನೂ ಕೂಡಾ ಮೊದಲ ದಿನದ ಮೊದಲ ಶೋ ನೋಡ್ತೀನಿ ಎಂದಿದ್ದಾರೆ ಸುದೀಪ್.

    ಕೃಷ್ಣ ನಿರ್ದೇಶನದ ಪೈಲ್ವಾನ್ 5 ಭಾಷೆಗಳಲ್ಲಿ ಜಗತ್ತಿನಾದ್ಯಂತ ಏಕಕಾಲಕ್ಕೆ 3 ಸಾವಿರಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ರಿಲೀಸ್ ಆಗ್ತಿದೆ. ಸ್ವಪ್ನಾ ಕೃಷ್ಣ ನಿರ್ಮಾಪಕಿ. ಸುದೀಪ್ ಜೊತೆ ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್ ನಟಿಸಿದ್ದಾರೆ. ಅರ್ಜುನ್ ಜನ್ಯಾ ಸಂಗೀತದ ಹಾಡುಗಳು ಈಗಾಗಲೇ ಅಭಿಮಾನಿಗಳ ಹೃದಯ ಕದ್ದಿವೆ.

    ಬೆಂಗಳೂರಿನಲ್ಲಿ ವೀರೇಶ್, ಮಹದೇಶ್ವರ, ಚಂದ್ರೋದಯ, ಶ್ರೀನಿವಾಸ, ಸಿದ್ದಲಿಂಗೇಶ್ವರ, ಲಕ್ಷ್ಮಿ ಸೇರಿದಂತೆ ಸಾಕಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ಬೆಳಗ್ಗೆ 5.30ಕ್ಕೇ ಶುರುವಾಗಲಿದೆ.