ಕುಮಾರಿ 21 ್, ಪ್ರಣಮ್ ದೇವರಾಜ್ ಅಭಿನಯದ ಮೊದಲ ಸಿನಿಮಾ. ಚಿತ್ರದ ಟ್ರೇಲರ್, ದೇವರಾಜ್ ಮಗನ ಸಿನಿಮಾ, ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಸುಕುಮಾರ್ ಕಥೆ.. ಹೀಗೆ ಚಿತ್ರದ ಬಗ್ಗೆ ನೂರಾರು ಕುತೂಹಲಗಳಿವೆ. ಆದರೆ, ಸಿನಿಮಾ ನೋಡೋಕೆ ಬರುವ ಪ್ರೇಕ್ಷಕರಿಗೆ ಪ್ರಣಮ್ ದೇವರಾಜ್ ಒಂದಿಷ್ಟು ಕಂಡೀಷನ್ಸ್ ಹಾಕಿದ್ದಾರೆ. ಅದು ಷರತ್ತು ಎಂದುಕೊಂಡರೆ ಷರತ್ತು. ಮನವಿ ಎಂದುಕೊಂಡರೆ ಮನವಿ. ಅದು ಪ್ರೀತಿಯ ಮನವಿ.
`ನನ್ನ ಸಿನಿಮಾ ನೋಡುವಾಗ ನನ್ನನ್ನು ದೇವರಾಜ್ ಅವರ ಮಗ ಎಂದು ನೋಡಬೇಡಿ. ಸ್ಟಾರ್ ಮಗ ಎಂದಾಗಲೀ, ಸ್ಟಾರ್ ಎಂದಾಗಲೀ ನೋಡಬೇಡಿ. ಪ್ರಜ್ವಲ್ ಅವರ ತಮ್ಮ ಎಂಬುದನ್ನೂ ನೋಡಬೇಡಿ. ಒಬ್ಬ ಹೊಸ ಹುಡುಗನ ಮೊದಲ ಸಿನಿಮಾ ಎಂದಷ್ಟೇ ನೋಡಿ'
ಇದು ಪ್ರಣಮ್ ಷರತ್ತುಬದ್ಧ ಮನವಿ. ಪ್ರಣಮ್ ದೇವರಾಜ್ ಅವರ 2ನೇ ಪುತ್ರ. ದೇವರಾಜ್, ಕನ್ನಡ ಚಿತ್ರರಂಗದ ಡೈನಮಿಕ್ ಸ್ಟಾರ್. ದಕ್ಷಿಣ ಭಾರತೀಯ ಚಿತ್ರರಂಗದ ಪ್ರಸಿದ್ಧ ಕಲಾವಿದರಲ್ಲಿ ಒಬ್ಬರು. ಅವರ ಮಗ ಎಂದಕೂಡಲೇ ಪ್ರೇಕ್ಷಕರು, ದೇವರಾಜ್‍ರೊಂದಿಗೆ ಹೋಲಿಸಿಬಿಡುತ್ತಾರೆ. ಜೊತೆಗೆ, ಅಣ್ಣ ಪ್ರಜ್ವಲ್ ಕೂಡಾ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟ. ಪ್ರಣಮ್, ದೇವರಾಜ್‍ರ ಮಗನೇ ಆದರೂ ಅವರಿಗೂ ಇದು ಪ್ರಥಮ ಪ್ರಯತ್ನ. ಅವರನ್ನು ದೇವರಾಜ್‍ಗೆ ಹೋಲಿಸಿಬಿಟ್ಟರೆ.. ದೇವರಾಜ್ ಮಟ್ಟಕ್ಕೆ ಏರೋದು ಸುಲಭವಲ್ಲ. ಅಭಿಮಾನಿಗಳು ಹಾಗೆ ನಿರೀಕ್ಷೆ ಇಟ್ಟುಕೊಂಡರೆ ಹೇಗೆ ಅನ್ನೋ ಆತಂಕ ಪ್ರಣಮ್‍ಗೆ ಇದ್ದರೂ ಇರಬಹುದು.
ಆದರೆ, ಪ್ರಣಮ್‍ಗೆ ತಂದೆ, ತಾಯಿ, ಅಣ್ಣ.. ಎಲ್ಲರೂ ತಮ್ಮ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ ಅನ್ನೋ ಖುಷಿಯಿದೆ. ಶ್ರೀಮಾನ್ ವೇಮುಲ ನಿರ್ದೇಶನದ ಚಿತ್ರದಲ್ಲಿ ನಿಧಿ ಕುಶಾಲಪ್ಪ ನಾಯಕಿ.