` ragini dwivedi, - chitraloka.com | Kannada Movie News, Reviews | Image

ragini dwivedi,

 • ಐವರು ಹೀರೋಯಿನ್ಸ್.. ಐದು ಅವತಾರ..

  five heroines.. panchavatara

  ಎಂಎಂಸಿಹೆಚ್ ಗಮನ ಸೆಳೆಯೋಕೆ ಮೊದಲ ಕಾರಣವೇ ಅದು. ಚಿತ್ರದಲ್ಲಿ ಐವರು ಹೀರೋಯಿನ್ಸ್ ಅನ್ನೋದು. ಮುಸ್ಸಂಜೆ ಮಹೇಶ್ ಐವರು ಹೀರೋಯಿನ್‍ಗಳನ್ನಿಟ್ಟುಕೊಂಡು ಎಂತಹ ಕಥೆ ಮಾಡಿರಬಹುದು ಅನ್ನೋ ಕುತೂಹಲಿಗಳಿಗೆ ಇಲ್ಲಿ ಸಣ್ಣದೊಂದು ಇಂಟ್ರೊಡಕ್ಷನ್ ಇದೆ. 

  ಮೇಘನಾ ರಾಜ್ : ಕಾಲೇಜು ಹುಡುಗಿ. ಒಳ್ಳೆಯ ಹುಡುಗಿ. ತನಗೆ ಕೇಡಾದರೂ ಪರವಾಗಿಲ್ಲ..ಬೇರೆಯವರಿಗೆ ತೊಂದರೆ ಆಗಬಾರದು ಎಂದು ಬಯಸುವ ಹೆಣ್ಣು ಮಗಳು. ಪ್ರಬುದ್ಧತೆಯ ಜೊತೆಗೆ ರೆಬಲ್ ಅಂಶಗಳೂ ಇವೆ.

  ಸಂಯುಕ್ತ ಹೊರನಾಡು : ಲೋಕಜ್ಞಾನ ಕಡಿಮೆ. ಮಾತು ಜಾಸ್ತಿ. ಸೌಮ್ಯ ಸ್ವಭಾವ. ಇಡೀ ಗುಂಪಿನಲ್ಲಿ ಸಿಕ್ಕಾಪಟ್ಟೆ ಸೈಲೆಂಟ್ ಆಗಿರುವ ಹುಡುಗಿ ಆಮೇಲೆ ವಯೊಲೆಂಟ್ ಆಗ್ತಾಳೆ. ಯಾಕೆ..? ಸಿನಿಮಾ ನೋಡಿ.

  ದೀಪ್ತಿ : ರೌಡಿ ಛಾಯಾ. ಹುಡುಗರನ್ನೇ ಚುಡಾಯಿಸುವ ಎದೆಗಾರಿಕೆಯ ಹುಡುಗಿ. ಕಿಕ್‍ಬಾಕ್ಸಿಂಗ್ ಕೂಡಾ ಗೊತ್ತಿರುವ ಸಂಯುಕ್ತಾರದ್ದು ಡೋಂಟ್‍ಕೇರ್ ಪಾತ್ರ.

  ನಕ್ಷತ್ರ : ಟಾಮ್‍ಬಾಯ್ ಕ್ಯಾರೆಕ್ಟರ್. ಪಾತ್ರಕ್ಕಾಗಿ ಕಲರಿಯಪಯಟ್ಟು ಕಲಿತಿದ್ದಾರಂತೆ. 

  ರಾಗಿಣಿ ದ್ವಿವೇದಿ : ಈ ನಾಲ್ವರ ಗುಣವನ್ನೂ ಹೊಂದಿರುವ ಪೊಲೀಸ್ ಅಧಿಕಾರಿಯ ಪಾತ್ರ. ಫುಲ್ ಆಕ್ಷನ್ ಇರುವ ಝಾನ್ಸಿರಾಣಿಯ ಪಾತ್ರ ರಾಗಿಣಿಯದ್ದು.

  ಈ ಐವರನ್ನೂ ಒಟ್ಟುಗೂಡಿಸಿ, ಪ್ರತಿ ಪಾತ್ರವನ್ನು ಸುಂದರವಾಗಿ ಚಿತ್ರಿಸಿರುವ ಮಹೇಶ್ ಹಾಗೂ ನಿರ್ಮಾಪಕ ಪುರುಷೋತ್ತಮ್ ಪ್ರಕಾರ, ಚಿತ್ರದ ಹೀರೋ ಕಥೆ. 

 • ಕೂದಲು, ಉಗುರು ಸೀಳಿದರೆ ಸಂಜನಾ, ಗಲ್ರಾನಿ ಫಿಕ್ಸ್..!

  ragini dwivedi, sanjana galrani image

  ಯಾವುದೇ ನಟಿಯರ ಆಕರ್ಷಣೆಯಲ್ಲಿ ಅವರ ಕೂದಲುಗಳೇ ಪ್ರಮುಖ. ಇನ್ನು ಉಗುರುಗಳನ್ನು ಯಾವುದೇ ನಟಿ ಇರಲಿ, ಶೇಪ್ ಮಾಡಿಕೊಂಡು ಚೆಂದಗೆ ಕಾಣಲು ಬಯಸುತ್ತಾರೆ. ಆದರೆ, ಆ ಕೂದಲು, ಉಗುರುಗಳೇ ಈಗ ಸಂಜನಾ ಮತ್ತು ರಾಗಿಣಿಗೆ ಕಂಟಕವಾಗಬಹುದು.

  you_tube_chitraloka1.gif

  ಅದನ್ನು ಹೇರ್ ಪಾಲಿಕ್ ಅಥವಾ ಹೇರ್ ಪಾಲಿಕಲ್  ಪರೀಕ್ಷೆ ಎನ್ನುತ್ತಾರೆ. ಈ ಪರೀಕ್ಷೆಯಲ್ಲಿ ಆರೋಪಿಗಳ ಕೂದಲು ಮತ್ತು ಉಗುರುಗಳ ಪರೀಕ್ಷೆ ಮಾಡ್ತಾರೆ. ತಲೆಯ ಹಿಂಭಾಗದಲ್ಲಿ ಸ್ವಲ್ಪ ಕೂದಲನ್ನು ಶೇವ್ ಮಾಡಿ ತೆಗೆದುಕೊಂಡರೆ, ಉಗುರುಗಳಲ್ಲಿ ಸ್ವಲ್ಪ ಭಾಗವನ್ನು ಕಟ್ ಮಾಡಿ ಎತ್ತಿಟ್ಟುಕೊಳ್ತಾರೆ. ಕಾರಣ ಇಷ್ಟೆ, ದೇಹಕ್ಕೆ ತೆಗೆದುಕೊಂಡ ಡ್ರಗ್ಸ್ ನಶೆ ಇಳಿದಿದ್ದರೂ, ಅವುಗಳ ಒಂದಂಶವಾದರೂ ದೇಹದಲ್ಲಿದ್ದೇ ಇರುತ್ತದೆ. ಅದರಲ್ಲೂ ರೆಗ್ಯುಲರ್ ಆಗಿ ತೆಗೆದುಕೊಳ್ಳುವವರ ದೇಹದಲ್ಲಿ ಡ್ರಗ್ಸ್‍ನ ಅಂಶ ಕನಿಷ್ಠ ಮೂರ್ನಾಲ್ಕು ತಿಂಗಳಾದರೂ ಇರುತ್ತದೆ. ಡ್ರಗ್ಸ್ ದಾಸರೇ ಆಗಿದ್ದರೆ, ರಕ್ತ ಅಥವಾ ಯೂರಿನ್ ಪರೀಕ್ಷೆಯಲ್ಲೇ ಗೊತ್ತಾಗಿಬಿಡುತ್ತದೆ. ಕೊಮ್ಯಾಟೋಗ್ರಫಿ, ಸ್ಪೆಕ್ಟ್ರೋಸ್ಕೋಪಿಕ್ ಪರೀಕ್ಷೆಗಳಲ್ಲಿ ಇವುಗಳನ್ನು ಪತ್ತೆ ಹಚ್ಚಲಾಗುತ್ತದೆ. ಈಗ ರಾಗಿಣಿ ಮತ್ತು ಸಂಜನಾ ಎದುರಿಸಬೇಕಿರುವುದೇ ಇದೇ ಪರೀಕ್ಷೆ.

  ಸ್ಸೋ.. ಕೂದಲು ಸೀಳಿದಾಗ ಸಿಕ್ಕಿ ಬೀಳೋ ಸಾಕ್ಷ್ಯವೇ ರಾಗಿಣಿ ಮತ್ತು ಸಂಜನಾ ಇಬ್ಬರಿಗೂ ಕಂಟಕವಾಗಬಹುದು. ಸದ್ಯಕ್ಕೆ ಇಬ್ಬರನ್ನೂ ಮತ್ತೆ 6 ದಿನಗಳ ಕಸ್ಟಡಿಗೆ ಒಪ್ಪಿಸಲಾಗಿದೆ. 

   

 • ಕೊರೊನಾ ವಾರಿಯರ್ ಆದ ರಾಗಿಣಿ ದ್ವಿವೇದಿ

  ಕೊರೊನಾ ವಾರಿಯರ್ ಆದ ರಾಗಿಣಿ ದ್ವಿವೇದಿ

  ರಾಗಿಣಿ ದ್ವಿವೇದಿ ಈಗ ಕೊರೊನಾ ವಾರಿಯರ್ ಆಗಿದ್ದಾರೆ. ಕೊರೊನಾ 2ನೇ ಅಲೆ ತೀವ್ರವಾಗಿ ಭಾದಿಸುತ್ತಿರುವ ಸಂದರ್ಭದಲ್ಲಿ ಚಿತಾಗಾರ, ಸ್ಮಶಾನಗಳಲ್ಲಿ ಕೆಲಸ ಮಾಡುವವರ ನೆರವಿಗೆ ಧಾವಿಸಿದ್ದಾರೆ. ತಮ್ಮದೇ ಚಾರಿಟಬಲ್ ಟ್ರಸ್ಟ್ ಮೂಲಕ ನೆರವಾಗುತ್ತಿದ್ದಾರೆ. ಸ್ಮಶಾನದಲ್ಲಿಯೇ ವಾಸಿಸುವ ಕೆಲವರ ಮಾಹಿತಿ ತಿಳಿದು ನನಗೆ ಗಾಬರಿಯೂ ಆಯಿತು. ಕೆಲವರು ಸ್ಮಶಾನ ಬಿಟ್ಟು ಹೊರಗೆ ಕಾಲನ್ನೂ ಇಟ್ಟಿಲ್ಲ. ಹೊರಗಿನ ಜಗತ್ತಿನ ಪರಿಚಯವೇ ಇಲ್ಲದೆ ಬದುಕುತ್ತಿದ್ದಾರೆ ಎಂದು ತಿಳಿದಿದ್ದೇ ಈಗ ಎಂದಿರುವ ರಾಗಿಣಿಗೆ ಹಾಗೆ ನೆರವಿಗೆ ಹೋದಾಗ ಕೇಳಿಬರುತ್ತಿರುವ ಬೇಡಿಕೆ ಆಕ್ಸಿಜನ್‍ನದ್ದು.

  ನನ್ನ ಸಂಪರ್ಕದಲ್ಲಿರುವವರ ನೆರವಿನಿಂದ ಆಕ್ಸಿಜನ್, ಬೆಡ್ ಒದಿಗಿಸಲು ಪ್ರಯತ್ನಿಸುತ್ತಿದ್ದೇನೆ. ಹೋಮ್ ಐಸೋಲೇಷನ್ ಕಿಟ್ ನೀಡುತ್ತಿದ್ದೇವೆ ಎಂದಿದ್ದಾರೆ ರಾಗಿಣಿ.

 • ಕೋಳಿ ಕೂಗ್ಬೇಕಾ.. ಇರಿ.. ಅಧ್ಯಕ್ಷರು ಪರ್ಮಿಷನ್ ಕೊಡ್ಬೇಕು

  adhyaksha in america first song released

  ಕೋಳಿ ಕೂಗಂಗಿಲ್ಲ.. ನಿದ್ದೆ ಮಾಡಂಗಿಲ್ಲ.. ಬೋರು ಹಾಕಂಗಿಲ್ಲ.. ನಾಟಿ ಮಾಡಂಗಿಲ್ಲ.. ಮತ್ತೆ ಬಂದ ಅಧ್ಯಕ್ಷ.. ಇದು ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಹಾಡು. ಭರ್ಜರಿ ಚೇತನ್ ಸಾಹಿತ್ಯಕ್ಕೆ ಹರಿಕೃಷ್ಣ ಮ್ಯೂಸಿಕ್ಕು ಕೊಟ್ಟಿದ್ದಾರೆ. ಶರಣ್ ಚಿತ್ರಕ್ಕೆ ಕಿಕ್ಕೇರಿಸುವ ಹಾಡು ಹಾಡುವ ವಿಜಯ್ ಪ್ರಕಾಶ್ ಮತ್ತೊಮ್ಮೆ ಕಿಕ್ಕು ಏರಿಸಿದ್ದಾರೆ. ಅಂದಹಾಗೆ ಇದು ಶರಣ್ ಮತ್ತು ಹರಿಕೃಷ್ಣ ಮೊದಲ ಬಾರಿಗೆ ಜೊತೆಯಾಗಿರುವ ಸಿನಿಮಾ.ನ

  ಶರಣ್‍ಗೆ ಇದೇ ಮೊದಲ ಬಾರಿಗೆ ತುಪ್ಪದ ಚೆಲುವೆ ರಾಗಿಣಿ ಜೊತೆಯಾಗಿದ್ದಾರೆ. ಇಡೀ ಚಿತ್ರ ಗಂಡ ಹೆಂಡತಿಯ ಟಾಮ್ & ಜೆರ್ರಿ ಗೇಮ್ ಎನ್ನುವ ನಿರ್ದೇಶಕ ಯೋಗಾನಂದ್ ಮುದ್ದಾನ್, ನಿರ್ಮಾಪಕ ವಿಶ್ವಪ್ರಸಾದ್.

 • ಜೋಗಿ ಪ್ರೇಮ್ ಗಾಂಧಿಗಿರಿ ಶುರು

  prem starts gandhigiri

  ದಿ ವಿಲನ್ ಚಿತ್ರವನ್ನು ಅದ್ಧೂರಿಯಾಗಿ ತೆರೆಗೆ ತಂದ ನಿರ್ದೇಶಕ ಪ್ರೇಮ್, ಈಗ ಗಾಂಧಿಗಿರಿಗಿಳಿದಿದ್ದಾರೆ. ಗಾಂಧಿಗಿರಿ, ಸ್ವತಃ ಪ್ರೇಮ್ ಅಭಿನಯಿಸುತ್ತಿರುವ ಸಿನಿಮಾ. ಈ ಚಿತ್ರದಲ್ಲಿ ಪ್ರೇಮ್‍ರ ಪ್ರೀತಿಯ ಜೋಗಿಯ ಅಮ್ಮ ಅರುಂಧತಿ ನಾಗ್, ಪ್ರೇಮ್‍ಗೆ ತಾಯಿಯಾಗಿದ್ದಾರೆ. ರಾಗಿಣಿ ಚಿತ್ರದ ನಾಯಕಿ. ರಘು ಹಾಸನ್ ನಿರ್ದೇಶನದ ಸಿನಿಮಾದಲ್ಲಿ ಸಂಪೂರ್ಣ ಮುಳುಗಿದ್ದಾರೆ ಪ್ರೇಮ್.

  ಈ ನಡುವೆ ದಿ ವಿಲನ್ ಚಿತ್ರವನ್ನು ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೆಯುತ್ತಿದೆ. ಆ ಕೆಲಸದಲ್ಲೂ ಪ್ರೇಮ್ ತೊಡಗಿಸಿಕೊಂಡಿದ್ದಾರೆ.

 • ಟೆರರಿಸ್ಟ್ ಆಡಿಯೋಗೆ ಅನನ್ಯ ಸ್ಪರ್ಶ

  the terrorist sng

  ದಿ ಟೆರರಿಸ್ಟ್. ರಾಗಿಣಿ ದ್ವಿವೇದಿ ಅಭಿನಯದ ಸಿನಿಮಾ. ಪಿ.ಸಿ.ಶೇಖರ್ ನಿರ್ಮಾಣ ಮತ್ತು ನಿರ್ದೇಶನದ ದಿ ಟೆರರಿಸ್ಟ್ ಚಿತ್ರದ ಟ್ರೈಲರ್ ಕುತೂಹಲ ಹುಟ್ಟಿಸಿದೆ. ಇದರ ಜೊತೆಯಲ್ಲೇ ಈಗ ಚಿತ್ರದ ಲಿರಿಕಲ್ ಆಡಿಯೋ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ಸಿನಿಮಾದ ಸುರಿಯೋ ಕಣ್ಣೀರ ಒಮ್ಮೆ ನೋಡಿ ಹೋಗೋ.. ಹಾಡಿನ ಲಿರಿಕಲ್ ವಿಡಿಯೋ ಸೆ.21ಕ್ಕೆ ಬಿಡುಗಡೆಯಾಗುತ್ತಿದೆ. ಆ ಲಿರಿಕಲ್ ವಿಡಿಯೋಗೆ ಅನನ್ಯ ಸ್ಪರ್ಶ ನೀಡಿದ್ದಾರೆ ನಿರ್ದೇಶಕ ಪಿ.ಸಿ.ಶೇಖರ್.

  ಲಿರಿಕಲ್ ವಿಡಿಯೋ ಸಾಂಗ್‍ನಲ್ಲಿ ಗಾಯಕಿ ಅನನ್ಯ ಭಟ್ ಅವರನ್ನೇ ತೋರಿಸಲಿದ್ದಾರಂತೆ. ಬಾಲಿವುಡ್‍ನಲ್ಲಷ್ಟೇ ಈ ರೀತಿ ಗಾಯಕಿಯ ಮೇಲೆ ಹಾಡು ಸೃಷ್ಟಿಸುವ ಟ್ರೆಂಡ್ ಇತ್ತು. ಈ ಮೂಲಕ ಇದು ಕನ್ನಡಕ್ಕೂ ಕಾಲಿಡುತ್ತಿದೆ. 

  ಗಾಯಕಿ ಅನನ್ಯ ಭಟ್ ಅವರೊಂದಿಗೆ ಸಂಗೀತ ನಿರ್ದೇಶಕ ಪ್ರದೀಪ್ ವರ್ಮಾ, ಹಾಡಿಗೆ ಸಾಹಿತ್ಯ ಬರೆದ ಮಹೇಶ್ ರಾಜ್ ಅವರನ್ನೂ ಹಾಡಿನಲ್ಲಿ ತೋರಿಸಲಾಗುತ್ತಿದೆ. ತೆರೆಯ ಹಿಂದೆ ಕೆಲಸ ಮಾಡಿದ ತಂತ್ರಜ್ಞರನ್ನೂ ಗುರುತಿಸಬೇಕು ಎನ್ನುವ ಪಿ.ಸಿ.ಶೇಖರ್, ಈ ಹಾಡಿನಲ್ಲಿ ಆ ಪ್ರಯೋಗಕ್ಕೆ ಕೈ ಹಾಕಿದ್ದಾರೆ.

 • ಟೆರರಿಸ್ಟ್ ಸಿನಿಮಾದ ಟಾರ್ಗೆಟ್ ಮುಸ್ಲಿಮರಾ..?

  what is the terrorist's inside story

  ದಿ ಟೆರರಿಸ್ಟ್. ರಾಗಿಣಿ ದ್ವಿವೇದಿ ನಾಯಕಿಯಾಗಿರುವ ಸಿನಿಮಾ, ಭಯೋತ್ಪಾದನೆಯ ಕಥೆ ಹೊಂದಿದೆ. ರಾಗಿಣಿ, ಈ ಚಿತ್ರದಲ್ಲಿ ರೇಷ್ಮಾ ಅನ್ನೋ ಮುಸ್ಲಿಂ ಯುವತಿಯ ಪಾತ್ರ ಮಾಡುತ್ತಿದ್ದಾರೆ. ಜೊತೆಗೆ ಸಿನಿಮಾದಲ್ಲಿರೋದು 2008ರ ಬೆಂಗಳೂರು ಸರಣಿ ಸ್ಫೋಟದ ಹಿನ್ನೆಲೆಯ ಕಥೆ.  ಆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಉಗ್ರರು ಮುಸ್ಲಿಮರು. ಹಾಗಾದರೆ ಇದು ಮುಸ್ಲಿಮರನ್ನೇ ಟಾರ್ಗೆಟ್ ಮಾಡಿರುವ ಚಿತ್ರವಾ..? ಅಥವಾ ಮುಸ್ಲಿಮರು ಎಂದು ಹಣೆಪಟ್ಟಿ ಹೊತ್ತವರನ್ನು ಮುಕ್ತಿಗೊಳಿಸುವ ಚಿತ್ರವಾ..?

  ಎರಡೂ ಅಲ್ಲ ಅಂತಾರೆ ನಿರ್ದೇಶಕ ಪಿ.ಸಿ.ಶೇಖರ್. ಟೆರರಿಸಂ ಅನ್ನೋದು ಜಗತ್ತಿನ ಸಮಸ್ಯೆ. ಹೆಚ್ಚಾಗಿ ಯಾವುದೇ ಸ್ಫೋಟ, ದಾಳಿ ನಡೆದರೆ.. ಅಲ್ಲಿ ಮುಸ್ಲಿಮರೇ ಹೆಚ್ಚಾಗಿ ಕಾಣಸಿಗ್ತಾರೆ. ಇದರಿಂದ ನಿಜಕ್ಕೂ ತೊಂದರೆ ಅನುಭವಿಸೋದು ಅಮಾಯಕ ಮುಸ್ಲಿಮರು. ನೂರರಲ್ಲಿ ಒಬ್ಬ ತಪ್ಪು ಮಾಡಿದರೂ ಇಡೀ ಸಮುದಾಯಕ್ಕೆ ಆ ಕಳಂಕ ಅಂಟಿಕೊಳ್ಳುತ್ತೆ. ಇದರ ನಡುವೆ ಸಂಬಂಧಗಳೇ ಮಾಯವಾಗಿ ಹೋಗುತ್ತವೆ. ಟೆರರಿಸ್ಟ್ ಸಿನಿಮಾದಲ್ಲಿರೋದು ಆ ಕಥೆ. ಎರಡು ದೇಶಗಳಿಗಿಂತ ಮನೆಯಲ್ಲಿ ಸಂಬಂಧ ಕಟ್ಟುವುದು ಎಷ್ಟು ಮುಖ್ಯ ಎಂದು ಕಥೆ ಹೇಳುತ್ತೇನೆ ಎನ್ನುತ್ತಾರೆ ಪಿ.ಸಿ.ಶೇಖರ್. ದಿ ಟೆರರಿಸ್ಟ್ ಸಿನಿಮಾ ನಾಳೆಯೇ ತೆರೆ ಕಾಣುತ್ತಿದೆ.

 • ಡ್ರಗ್ಸ್ ಕೇಸ್ : ರಾಗಿಣಿ ದ್ವಿವೇದಿಗೆ ನೋಟಿಸ್..!

  ragini dwivedi gets notice from ccb over drug issue

  ಡ್ರಗ್ಸ್ ಮತ್ತು ಸ್ಯಾಂಡಲ್‍ವುಡ್ ಲಿಂಕ್ ಕೇಸ್‍ನಲ್ಲಿ ನಟಿ ರಾಗಿಣಿ ದ್ವಿವೇದಿಗೆ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ರಾಗಿಣಿ ಅವರ ಗೆಳೆಯ ರವಿಶಂಕರ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಈತ ಒಬ್ಬ ಡ್ರಗ್ಸ್ ಪೆಡ್ಲರ್ ಎನ್ನಲಾಗಿದ್ದು, ಈತ ರಾಗಿಣಿ ಅವರೊಂದಿಗೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ.

  ಅಂದಹಾಗೆ ರಾಗಿಣಿ ಹೆಸರು ಇಂದ್ರಜಿತ್ ಲಂಕೇಶ್ ನೀಡಿದ್ದ ಲಿಸ್ಟ್‍ನಲ್ಲಿ ಇರಲಿಲ್ಲ. ಇದು ಸಿಸಿಬಿಯವರೇ ಪತ್ತೆ ಮಾಡಿರುವ ಹೆಸರು. ನೋಟಿಸ್ ನೀಡಲು ರಾಗಿಣಿ ಮನೆಗೆ ಹೋಗಿದ್ದ ಪೊಲೀಸರಿಗೆ ರಾಗಿಣಿ ಸಿಕ್ಕಿಲ್ಲ. ತಮ್ಮ ಎರಡೂ ಮನೆಗಳಲ್ಲಿ ಇರಲಿಲ್ಲ. ರಾಗಿಣಿ ಅವರಿಗೆ ಬೆಂಗಳೂರಿನ ಹೆಚ್‍ಎಸ್‍ಆರ್ ಲೇಔಟ್ ಮತ್ತು ಜ್ಯುಷಿಯಲ್ ಲೇಔಟ್, ಎರಡೂ ಕಡೆ ಫ್ಲಾಟ್ ಇವೆ. ಎರಡೂ ಕಡೆ ಇಲ್ಲದ ಕಾರಣ, ಅವರ ಮನೆಗೆ ನೋಟಿಸ್ ಅಂಟಿಸಿ, ವಾಟ್ಸಪ್‍ನಲ್ಲಿ ನೋಟಿಸ್ ಕೊಟ್ಟಿದ್ದಾರೆ.

  ತಮ್ಮ ವಕೀಲರ ಸಂಪರ್ಕದಲ್ಲಿರೋ ರಾಗಿಣಿ ದ್ವಿವೇದಿ, ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

   

 • ತುಪ್ಪದ ಗೊಂಬೆಗೆ ಕರಡಿಯ ಕಾಣಿಕೆ

  ragini gets teddy bear gift

  ತುಪ್ಪದ ಗೊಂಬೆ ರಾಗಿಣಿಗೆ ಕರಡಿಮರಿಯ ಕಾಣಿಕೆ ಸಿಕ್ಕಿದೆ. ಕನ್‍ಫ್ಯೂಸ್ ಆಗಬೇಡಿ, ಟೆಡ್ಡಿಬೇರ್ ಕಾಣಿಕೆ ಸಿಕ್ಕಿದೆ. ಆ ಟೆಡ್ಡಿಬೇರ್ ರಾಗಿಣಿಗೆ ಅದೆಷ್ಟು ಇಷ್ಟವಾಗಿದೆಯೆಂದರೆ, ಅದನ್ನೇ ಅಪ್ಪಿಕೊಂಡು ಮಲಗುವಷ್ಟು. 

  ಆ ಟೆಡ್ಡಿಬೇರ್ ಸಣ್ಣದೇನಲ್ಲ. ಐದಡಿ ಉದ್ದದ ಟೆಡ್ಡಿಬೇರ್. ರಾಗಿಣಿ ಹೈಟಿಗಿಂತ ಕಡಿಮೆ. ರಾಗಿಣಿಗಿಂತ ಸ್ವಲ್ಪ ದಪ್ಪ. ಹುಡುಗಿಯರಿಗೆ ಟೆಡ್ಡಿಬೇರ್ ಅಂದ್ರೆ ಅದೇನು ಇಷ್ಟವೋ ಏನೋ.. ಅಪ್ಪಿ ಮುದ್ದಾಡ್ತಾರೆ. 

  ಆದರೆ, ರಾಗಿಣಿಗೆ ಇದು ಸ್ಪೆಷಲ್ ಯಾಕೆ ಗೊತ್ತಾ..? ಈ ಟೆಡ್ಡಿಬೇರ್‍ನ್ನು ರಾಗಿಣಿಗೆ ಕಳಿಸಿರೋದು ಅವರ ತಮ್ಮ ರುದ್ರಾಕ್ಷ್ ದ್ವಿವೇದಿ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಾಗಿಣಿಗೆ ಶುಭಾಶಯಗಳು. 

 • ದಸರಾಗೆ ಅಮೆರಿಕ ಅಧ್ಯಕ್ಷನ ಪಯಣ

  adhyakashya in america to release for dasara

  2014ರಲ್ಲಿ ತೆರೆ ಕಂಡಿದ್ದ ಅಧ್ಯಕ್ಷನಿಗೂ, ಈ ಅಮೆರಿಕದಲ್ಲಿರೋ ಅಧ್ಯಕ್ಷನಿಗೂ ಸಂಬಂಧವಿಲ್ಲ. ಈ ಅಧ್ಯಕ್ಷ ಇನ್ ಅಮೆರಿಕ ಬರ್ತಾ ಇರೋದು ದಸರಾಗೆ. ಅಕ್ಟೋಬರ್ 4ಕ್ಕೆ ಪ್ರತ್ಯಕ್ಷವಾಗೋ ಅಧ್ಯಕ್ಷ ನಗೆಯ ಹಬ್ಬದೂಟವನ್ನೇ ಬಡಿಸಲಿದ್ದಾನೆ.

  ಶರಣ್ ಜೊತೆಗೆ ತುಪ್ಪದ ಹುಡುಗಿ ರಾಗಿಣಿ ಇದ್ದಾರೆ. ದಿಶಾಪಾಂಡೆ, ಶಿವರಾಜ್ ಕೆ.ಆರ್.ಪೇಟೆ, ಸಾಧುಕೋಕಿಲ, ತಬಲಾನಾಣಿ.. ಹೀಗೆ ಕಾಮಿಡಿ ಕಿಲಾಡಿಗಳ ದಂಡೇ ಚಿತ್ರದಲ್ಲಿದೆ. ಹರಿಕೃಷ್ಣ ಇದೇ ಮೊದಲ ಬಾರಿಗೆ ಶರಣ್ ಚಿತ್ರಕ್ಕೆ ಮ್ಯೂಸಿಕ್ ಕೊಟ್ಟಿದ್ದಾರೆ. ವಿಶ್ವಪ್ರಸಾದ್, ವಿವೇಕ್ ಕುಚಿಬೊಟ್ಲ ಚಿತ್ರದ ನಿರ್ಮಾಪಕರು.

   

 • ದಸರಾದಲ್ಲಿ ಅಮೆರಿಕ ಅಧ್ಯಕ್ಷನದ್ದೇ ಜಂಬೂ ಸವಾರಿ

  adhyaksha's jamboo savari in dasara

  ಅಮೆರಿಕ ಅಧ್ಯಕ್ಷರು ದಸರಾಗೆ ಬರುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಅಂದ್ಕೊಬೇಡಿ. ಈ ಅಧ್ಯಕ್ಷರು ಇಲ್ಲಿಯವರೇ.. ಅಮೆರಿಕಕ್ಕೆ ಹೋಗಿ, ಈಗ ಬರುತ್ತಿದ್ದಾರೆ. ಶರಣ್ ಅಭಿನಯದ ಅಧ್ಯಕ್ಷ ಇನ್ ಅಮೆರಿಕ ರಿಲೀಸ್ ಆಗುತ್ತಿರುವುದು ಅಕ್ಟೋಬರ್ 2ಕ್ಕೆ.

  ಶರಣ್ ಜೊತೆ ಇದೇ ಮೊದಲ ಬಾರಿಗೆ ರಾಗಿಣಿ ದ್ವಿವೇದಿ ನಾಯಕಿಯಾಗಿದ್ದರೆ, ಯೋಗಾನಂದ್ ಮದ್ದಾನ್ ನಿರ್ದೇಶನ ಮಾಡಿದ್ದಾರೆ.

  ಯೋಗಾನಂದ್ ಮೂಲತಃ ರಂಗಭೂಮಿಯವರು. ನಾಟಕಗಳನ್ನು ಸ್ಟೇಜ್ ಮೇಲೆ ಆಡಿಸುವುದು ಅಚ್ಚುಮೆಚ್ಚು. ಅಲ್ಲಿಂದ ಟಿವಿ ಲೋಕಕ್ಕೆ ಎಂಟ್ರಿ ಕೊಟ್ಟರೂ, ಅಲ್ಲಿನ ಟಿಆರ್‍ಪಿಗಾಗಿ ಹೋರಾಟ ಉತ್ಸಾಹವನ್ನು ಕುಗ್ಗಿಸಿತ್ತು. ಅದೇ ಸಮಯದಲ್ಲಿ ಬಿರುಗಾಳಿ ಚಿತ್ರಕ್ಕೆ ಕೊರಿಯೋಗ್ರಫಿ ಡೈರೆಕ್ಟರ್ ಆಗುವ ಅವಕಾಶ ಬಂತು. ಅಲ್ಲಿಂದ ಯೋಗಾನಂದ್ ಹಣೆಬರಹ ಬದಲಾಯ್ತು.

  ನಿರ್ದೇಶಕ ಹರ್ಷ ಅವರಿಗೆ ಯೋಗಾನಂದ್ ಅವರ ಸಾಹಿತ್ಯ, ಬರವಣಿಗೆ ಇಷ್ಟವಾಯ್ತು. ಅಲ್ಲಿಂದ ಮುಂದೆ ಅವರ ಜೊತೆಯಲ್ಲೇ ಅಸಿಸ್ಟೆಂಟ್ ಡೈರೆಕ್ಟರ್ ಆದ ಯೋಗಾನಂದ್, ಸಂಭಾಷಣೆಕಾರರಾಗಿಯೇ ಗುರುತಿಸಿಕೊಂಡರು. ಇದರ ನಡುವೆಯೇ ನಿರ್ದೇಶಕರಾಗಲು ಸಿದ್ಧರಾಗುತ್ತಿದ್ದರು. ರ್ಯಾಂಬೋ ಚಿತ್ರಕ್ಕೆ ಡೈಲಾಗ್ ಬರೆಯುವ ಆಫರ್ ಬಂದರೂ ಮಾಡೋಕೆ ಆಗಿರಲಿಲ್ಲ. ಮತ್ತೊಮ್ಮೆ ನಿರ್ದೇಶನಕ್ಕೇ ಅವಕಾಶ ಬಂದಾಗ ನಾನು ಧರ್ಮಸ್ಥಳದಲ್ಲಿದ್ದೆ. ಇದು ಮಂಜುನಾಥನ ಆಶೀರ್ವಾದವೇ ಇರಬೇಕು ಎಂದು ಒಪ್ಪಿಕೊಂಡೆ ಎನ್ನುತ್ತಾರೆ ಯೋಗಾನಂದ್.

 • ದಿ ಟೆರರಿಸ್ಟ್ ಕಥೆಯ ಹಿಂದೆ ಮಿಲಿಟರಿ ಆಫೀಸರ್ಸ್

  the terrorist gets inputs from military officers

  ದಿ ಟೆರರಿಸ್ಟ್. ಪಿ.ಸಿ.ಶೇಖರ್ ನಿರ್ದೇಶನದ ಸಿನಿಮಾ. ರಾಗಿಣಿ ದ್ವಿವೇದಿ ಹೀರೋ ಕಮ್ ಹೀರೋಯಿನ್ ಆಗಿ ನಟಿಸಿರುವ ಚಿತ್ರ. ಅಕ್ಟೋಬರ್ 18ಕ್ಕೆ ರಿಲೀಸ್ ಆಗುತ್ತಿರುವ ಈ ಚಿತ್ರದಲ್ಲಿರೋದು ಮುಂಬೈ ತಾಜ್ ಹೋಟೆಲ್ ಸ್ಫೋಟ ಹಾಗೂ ಬೆಂಗಳೂರು ಸರಣಿ ಸ್ಫೋಟದ ಹಿಂದಿನ ಕಥೆಗಳು.

  ರಿಯಲ್ ಕಥೆಯೊಂದನ್ನಿಟ್ಟುಕೊಂಡು ಜಾಲಾಡಲು ಹೊರಟಾಗ, ಒಂದಿಷ್ಟು ರೋಚಕ ಅಂಶಗಳು ಸಿಕ್ಕವು. ಅವುಗಳನ್ನೇ ಇಟ್ಟುಕೊಂಡು ಏಕೆ ಸಿನಿಮಾ ಮಾಡಬಾರದು ಎಂದುಕೊಂಡು ಕಥೆ ಸಿದ್ಧಪಡಿಸಿದೆವು. ನಂತರ ಮಿಲಿಟರಿ ಅಧಿಕಾರಿಗಳಿಂದಲೂ ಸಲಹೆ, ಸೂಚನೆ ಪಡೆದವು. ಮಿಲಿಟರಿ ಅಧಿಕಾರಿಗಳು ಹೇಳಿದ ಅಂಶಗಳು ಚಿತ್ರದ ಕಥೆ ಮತ್ತು ಚಿತ್ರಕಥೆಗೆ ಬಹಳಷ್ಟು ಸಹಕಾರಿಯಾದವು ಎಂದಿದ್ದಾರೆ ಪಿ.ಸಿ.ಶೇಖರ್.

  ಆರ್ಮಿ ಆಫೀಸರುಗಳನ್ನಷ್ಟೇ ಅಲ್ಲ, ಹಲವು ಮುಸ್ಲಿಂ ಕುಟುಂಬಗಳನ್ನೂ ಭೇಟಿ ಮಾಡಿ, ಮುಸ್ಲಿಮರ ರೀತಿ ರಿವಾಜು, ನಮಾಜುಗಳನ್ನೆಲ್ಲ  ಅಧ್ಯಯನ ಮಾಡಿದ್ದಾರೆ. ಯಾರ ಮನಸ್ಸಿಗೂ ನೋವಾಗದಂತ ರೀತಿಯಲ್ಲಿ ಸಿನಿಮಾ ಮಾಡಿದ್ದೇವೆ ಅನ್ನೋದು ಪಿ.ಸಿ.ಶೇಖರ್ ಮಾತು.

 • ದಿ ವಿಲನ್‍ಗೆ ಟೆರರಿಸ್ಟ್ ಎದುರಾಳಿಯಾಗೋಕೆ ಇದೇ ಕಾರಣ

  why is the villain and the terrorist releasing on same day

  ದಿ ವಿಲನ್. ಶಿವಣ್ಣ ಮತ್ತು ಸುದೀಪ್ ಅಭಿನಯದ ಸಿನಿಮಾ. ಈ ಸಿನಿಮಾದ ಹವಾ ಹೇಗಿತ್ತೆಂದರೆ, ಹಿಂದಿನ ವಾರವೇ ಯಾವುದೇ ಹೊಸ ಸಿನಿಮಾ ಥಿಯೇಟರ್‍ಗೆ ಬರಲಿಲ್ಲ. ಆದರೆ, ದಿ ವಿಲನ್ ರಿಲೀಸ್ ದಿನವೇ ದಿ ಟೆರರಿಸ್ಟ್ ಸಿನಿಮಾ ಬರುತ್ತಿದೆ. ರಾಗಿಣಿ ದ್ವಿವೇದಿ ಪ್ರಧಾನ ಪಾತ್ರದಲ್ಲಿರುವ ಚಿತ್ರಕ್ಕೆ ಪಿ.ಸಿ.ಶೇಖರ್ ನಿರ್ದೇಶಕ. ಅಲಂಕಾರ್ ಸಂತಾನ ನಿರ್ಮಾಪಕ.

  ಇಬ್ಬರು ಸೂಪರ್‍ಸ್ಟಾರ್‍ಗಳು, ಸ್ಟಾರ್ ಡೈರೆಕ್ಟರ್, ಸ್ಟಾರ್ ಪ್ರೊಡ್ಯೂಸರ್ ಕಾಂಬಿನೇಷನ್‍ನ ಸಿನಿಮಾದ ಎದುರು ಬರೋಕೆ ಏನು ಕಾರಣ ಎಂದರೆ, ನಿರ್ಮಾಪಕ ಅಲಂಕಾರ್ ಉತ್ತರ ಇಷ್ಟೆ. ನಾವು ಮೊದಲೇ ಅಕ್ಟೋಬರ್ 18ಕ್ಕೆ ರಿಲೀಸ್‍ಗೆ ಪ್ಲಾನ್ ಮಾಡಿಕೊಂಡಿದ್ವಿ. ಯೋಜನೆ ಪ್ರಕಾರವೇ ಎಲ್ಲವೂ ನಡೆಯುತ್ತಿದ್ದಾಗ.. ಅದೇ ದಿನ ವಿಲನ್ ರಿಲೀಸ್ ಅಂತಾ ಗೊತ್ತಾಯ್ತು. ಹಾಗಂತ ನಾವು ನಮ್ಮ ಪ್ಲಾನ್ ಬದಲಿಸಿಕೊಳ್ಳಲಿಲ್ಲ. ನನಗೆ ಕಥೆ ಮೇಲೆ ಕಾನ್ಫಿಡೆನ್ಸ್ ಇದೆ ಅಂತಾರೆ ಅಲಂಕಾರ್.

  ಚಿತ್ರದ ಕಂಟೆಂಟ್ ಚೆನ್ನಾಗಿದ್ದರೆ, ಕನ್ನಡ ಪ್ರೇಕ್ಷಕರು ಯಾವತ್ತೂ ಒಳ್ಳೆಯ ಸಿನಿಮಾವನ್ನು ಕೈಬಿಡೋದಿಲ್ಲ. ಅದೊಂದೇ ನಂಬಿಕೆ ಮೇಲೆ ಚಿತ್ರವನ್ನು ತೆರೆಗೆ ತರುತ್ತಿದ್ದೇನೆ. ವಿತರಕ ಜಯಣ್ಣ ಕೂಡಾ ಚಿತ್ರಕ್ಕೆ ಸಪೋರ್ಟ್ ಕೊಟ್ಟಿದ್ದಾರೆ ಎಂದು ಖುಷಿಯಾಗಿ ಹೇಳಿಕೊಳ್ತಾರೆ ಅಲಂಕಾರ್.

  140 ಥಿಯೇಟರುಗಳಲ್ಲಿ ದಿ ಟೆರರಿಸ್ಟ್ ಸಿನಿಮಾ ರಿಲೀಸ್ ಆಗುತ್ತಿದೆ. ದಸರಾ ಹಬ್ಬದ ಸಂಭ್ರಮದ ನಡುವೆಯೇ ದಿ ವಿಲ

 • ದೊಡ್ಡಣ್ಣಗೆ ರಾಗಿಣಿ ಜೋಡಿ..!

  ragini paired with doddanna

  ರಾಗಿಣಿ ದ್ವಿವೇದಿ ಚಂದನವನದ ತುಪ್ಪದ ಗೊಂಬೆ. ದೊಡ್ಡಣ್ಣ ಕನ್ನಡ ಚಿತ್ರರಂಗದ ಸೀನಿಯರ್ ಕಲಾವಿದ. ಇವರಿಬ್ಬರೂ ಜೋಡಿನಾ..? ಏನು.. ಚೀನೀ ಕಮ್‍ನಂತಾ ಸ್ಟೋರಿನಾ..? ಇಂಥಾ ಪ್ರಶ್ನೆಗಳನ್ನೆಲ್ಲ ಕೇಳಬೇಡಿ. ಇವರಿಬ್ಬರೂ ಜೋಡಿಯಾಗಿರೋದು ಸಿನಿಮಾದಲ್ಲಿ ಅಲ್ಲ, ಕಿರುತೆರೆಯಲ್ಲಿ.

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಭರ್ಜರಿ ಕಾಮಿಡಿ ಎಂಬ ರಿಯಾಲಿಟಿ ಶೋ ಶುರುವಾಗುತ್ತಿದೆ. ಆ ರಿಯಾಲಿಟಿ ಶೋಗೆ ದೊಡ್ಡಣ್ಣ ಹಾಗೂ ರಾಗಿಣಿ ತೀರ್ಪುಗಾರರು. ಜೊತೆಯಲ್ಲಿ ಸ್ಪೆಷಲ್ ಡೈರೆಕ್ಟರ್ ಗುರುಪ್ರಸಾದ್ ಕೂಡಾ ಇರುತ್ತಾರೆ. 

  ಇತ್ತೀಚೆಗೆ ಕಾಮಿಡಿ ಶೋವೊಂದರ ಮೂಲಕ ಕಿರುತೆರೆಗೆ ಬರುತ್ತಿದ್ದೇನೆ ಎಂಬ ಸುಳಿವು ಕೊಟ್ಟಿದ್ದರು ರಾಗಿಣಿ. ರಾಗಿಣಿಗೆ ಇದು ಫಸ್ಟ್ ಅನುಭವ. ದೊಡ್ಡಣ್ಣನವರಿಗೂ ಕಿರುತೆರೆಯಲ್ಲಿ ಇದು ಪ್ರಥಮ ಅನುಭವ.

 • ನಗಿಸೋದು ಶರಣ್ ಒಬ್ಬರೇ ಅಲ್ಲ.. ಮರಿ ಅಧ್ಯಕ್ಷರ ದಂಡೇ ಇದೆ..!

  adhyakasha in america movie speciality

  ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಮೂಲ ಶಕ್ತಿಯೇ ಕಾಮಿಡಿ. ಇಡೀ ಚಿತ್ರ ನಡೆಯುವುದೇ ಹಾಸ್ಯದ ಮೇಲೆ. ಮಲಯಾಳಂನ ಟು ಕಂಟ್ರೀಸ್ ಚಿತ್ರದ ರೀಮೇಕ್ ಇದು. ಅಧ್ಯಕ್ಷರಾಗಿರೋದು ಶರಣ್. ಅವರಿಗೆ ಜೋಡಿಯಾಗಿರೋದು ರಾಗಿಣಿ ದ್ವಿವೇದಿ. ಹಾಗಂತ ಯೋಗಾನಂದ್ ಮುದ್ದಾನ್ ಶರಣ್-ರಾಗಿಣಿ ಜೋಡಿಗಷ್ಟೇ ಸೀಮಿತವಾಗಿಲ್ಲ. ಇಡೀ ಚಿತ್ರದಲ್ಲಿ ಮರಿ ಅಧ್ಯಕ್ಷರ ದಂಡೇ ಇದೆ.

  ಸ್ವತಃ ಯೋಗಾನಂದ್ ಮುದ್ದಾನ್ ಕಾಮಿಡಿ ಚಿತ್ರಗಳಿಗೆ ಸಂಭಾಷಣೆ ಬರೆಯುವುದಕ್ಕೆ ಹೆಸರುವಾಸಿಯಾಗಿದ್ದವರು. ಇವರ ಜೊತೆಗೆ ಸಾಧುಕೋಕಿಲ, ರಂಗಾಯಣ ರಘು, ಶಿವರಾಜ್ ಕೆ.ಆರ್.ಪೇಟೆ, ತಬಲಾ ನಾಣಿ ಕೂಡಾ ಇದ್ದಾರೆ. ಒಬ್ಬೊಬ್ಬರೂ ನಕ್ಕು ನಗಿಸೋಕೇ ಫೇಮಸ್.

  ಇಷ್ಟೆಲ್ಲಾ ಆಗಿಯೂ ಚಿತ್ರದಲ್ಲಿರೋದು ಡೈಲಾಗ್ ಕಾಮಿಡಿಗಿಂತ ಸಿಚುಯೇಷನ್ ಕಾಮಿಡಿ. ಸೀನ್ ನೋಡ್ತಾ ನೋಡ್ತಾನೇ ನಗ್ತಾ ಇರ್ತೀರಿ ಅನ್ನೋದು ಶರಣ್ ಕಾನ್ಫಿಡೆನ್ಸಿನ ಮಾತು. ಜಸ್ಟ್ ಎಂಜಾಯ್ ದಿಸ್ ವೀಕ್.

 • ನಂಗೆ ಬಾಯ್ ಫ್ರೆಂಡ್ ಇಲ್ಲ - ಆ ಜಗಳ ನಂಗೆ ಗೊತ್ತಿಲ್ಲ - ರಾಗಿಣಿ ದ್ವಿವೇದಿ

  i have no boyfriend says raginiq

  ಇತ್ತೀಚೆಗೆ ಕೆಲವು ಮೀಡಿಯಾಗಳಲ್ಲಿ ಒಂದು ಸುದ್ದಿ ಬ್ರೇಕ್ ಆಗಿತ್ತು. ನಟಿ ರಾಗಿಣಿಗಾಗಿ ಅವರ ಇಬ್ಬರು ಬಾಯ್‍ಫ್ರೆಂಡ್ಸ್ ರೆಸ್ಟೋರೆಂಟ್‍ನಲ್ಲಿ ಹೊಡೆದಾಡಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಅದಕ್ಕೆ ತಕ್ಕಂತೆ ಘಟನೆ ನಡೆದಾಗ ಅದೇ ರೆಸ್ಟೋರೆಂಟ್‍ನಲ್ಲಿ ರಾಗಿಣಿ ಇದ್ದರು. ಅದಕ್ಕೆಲ್ಲ ಕಳಶವಿಟ್ಟಂತೆ ಅವರಿಬ್ಬರೂ ರಾಗಿಣಿಗೆ ಪರಿಚಿತರು. ಹೀಗಾಗಿ, ರಾಗಿಣಿಗಾಗಿಯೇ ಅವರ ಇಬ್ಬರು ಬಾಯ್‍ಫ್ರೆಂಡ್‍ಗಳು ಹೊಡೆದಾಡಿಕೊಂಡಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಇವುಗಳಿಗೆಲ್ಲ ಸ್ವತಃ ರಾಗಿಣಿ ಉತ್ತರ ಕೊಟ್ಟಿದ್ದಾರೆ.

  ನನಗೆ ಆ ಗಲಾಟೆ ಏನು ಎಂಬುದು ಗೊತ್ತಿಲ್ಲ. ನಾನು ರೆಸ್ಟೋರೆಂಟ್‍ಗೆ ಹೋಗಿದ್ದು ನಿಜ. ಆದರೆ, ನಾನು ನನ್ನ ಮುಂಬೈ ಫ್ರೆಂಡ್ಸ್ ಜೊತೆಗೆ ಹೋಗಿದ್ದೆ. ಅವರಿಬ್ಬರ ಜೊತೆ ಅಲ್ಲ. ಅವರಿಬ್ಬರೂ ನನಗೆ ಪರಿಚಿತರು. ಆದರೆ, ಭಾಯ್‍ಫ್ರೆಂಡ್ ಅಲ್ಲ. ನನಗೆ ಯಾವ ಬಾಯ್‍ಫ್ರೆಂಡೂ ಇಲ್ಲ. ನನಗಾಗಿ ಯಾರೂ ಜಗಳವನ್ನೂ ಮಾಡಿಕೊಂಡಿಲ್ಲ. ನಾನು ಗಾಂಧಿಗಿರಿ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿ ಇದ್ದೇನೆ. ಸುಮ್ಮನೆ ನನ್ನ ಹೆಸರು ಎಳೆದು ತರಬೇಡಿ ಎಂದಿದ್ದಾರೆ ರಾಗಿಣಿ.

 • ಪ್ರಕಾಶ್ ಡೈರೆಕ್ಷನ್ ರಾಗಿಣಿ ಆ್ಯಕ್ಷನ್

  ragini dwivedi roped in as heroine for prakash belavadi's next

  ರಂಗಭೂಮಿ ಸ್ಟಾರ್ ಪ್ರಕಾಶ್ ಬೆಳವಾಡಿ, ನಟಿಸಿದ್ದು ಕೆಲವೇ ಚಿತ್ರಗಳಾದರೂ ಅದ್ಭುತ ಅಭಿನಯದ ಮೂಲಕ ಚಿತ್ರರಸಿಕರ ಹೃದಯದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಅವರೀಗ ನಿರ್ದೇಶನಕ್ಕೂ ಕೈ ಹಾಕಿದ್ದಾರೆ. ಅಂದಹಾಗೆ ನಿರ್ದೇಶನ ಅವರಿಗೇನು ಹೊಸದಲ್ಲ, ೨೦೦೩ರಲ್ಲಿ ಸ್ಟಂಬಲ್ ಎಂಬ ಸಿನಿಮಾ ನಿರ್ದೇಶಿಸಿದ್ದರು. ಅದೂ ಆ ಚಿತ್ರದಲ್ಲಿ ಅನಂತ್ ನಾಗ್, ಸುಹಾಸಿನಿ ನಟಿಸಿದ್ದರು. ಈಗ ಮತ್ತೊಮ್ಮೆ ನಿರ್ದೇಶನದ ಸಾಹಸಕ್ಕೆ ಕೈ ಹಾಕಿದ್ದಾರೆ.

  ವಿಶೇಷವೆಂದರೆ ಈ ಚಿತ್ರಕ್ಕೆ ರಾಗಿಣಿ ದ್ವಿವೇದಿ ನಾಯಕಿ. ಬಹುತೇಕ ಅಮೆರಿಕದಲ್ಲೇ ಶೂಟಿಂಗ್ ನಡೆಯಲಿದೆ. ನಾನು ಹೇಗಿದ್ದೇನೋ.. ಅಂಥದ್ದೇ ಪಾತ್ರ ಚಿತ್ರದಲ್ಲಿದೆ. ಪ್ರಕಾಶ್ ಅವರಂತೆ ನನಗೆ ರಂಗಭೂಮಿ ಅನುಭವ ಇಲ್ಲ. ಎಕ್ಸೆöÊಟ್ ಆಗಿದ್ದೇನೆ ಎಂದಿದ್ದಾರೆ ರಾಗಿಣಿ. ಬಹುತೇಕ ಜನವರಿ ತಿಂಗಳಲ್ಲಿ ಅಮೆರಿಕದಲ್ಲಿಯೇ ಸಿನಿಮಾ ಶೂಟಿಂಗ್ ಶುರುವಾಗಲಿದೆ.

 • ಪ್ರಜ್ವಲ್ ದೇವರಾಜ್ ಪತ್ನಿ, ಅಪ್ಪು ಚಿತ್ರಕ್ಕೆ ನಾಯಕಿ

  puneeth rajkumar to produce movie for ragini chandran

  ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ವೃತ್ತಿಪರ ಮಾಡೆಲ್. ಅವರೀಗ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆ. ಅದೂ ಪುನೀತ್ ರಾಜ್‍ಕುಮಾರ್ ನಿರ್ಮಾಣದ ಸಿನಿಮಾ ಮೂಲಕ. ರಘು ಸಮರ್ಥ ನಿರ್ದೇಶನದ ಚಿತ್ರದಲ್ಲಿ ರಾಗಿಣಿ ಚಂದ್ರನ್ ನಟಿಸಲಿದ್ದಾರೆ ಎಂಬ ಸುದ್ದಿಯನ್ನು ಈಗ ಪುನೀತ್ ಸ್ಪಷ್ಟಪಡಿಸಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾ.

  `ಸಿನಿಮಾದ ಕಥೆ ಇಷ್ಟವಾಯ್ತು. ಒಂದೊಳ್ಳೆ ಫ್ರೆಶ್ ಥಾಟ್ ಚಿತ್ರದಲ್ಲಿದೆ. ಹೀಗಾಗಿ ನಿರ್ಮಾಣಕ್ಕೆ ಒಪ್ಪಿಕೊಂಡೆ' ಎಂದಿದ್ದಾರೆ ಪುನೀತ್. ಅವಿನಾಶ್, ಪ್ರಕಾಶ್ ಬೆಳವಾಡಿ ಹಾಗೂ ಅಚ್ಯುತ್ ಕುಮಾರ್ ಚಿತ್ರದ ಪ್ರಧಾನ ಪಾತ್ರಗಳಲ್ಲಿದ್ದಾರೆ.

  ಪುನೀತ್ ನಿರ್ಮಾಣದಲ್ಲಿ 3 ಚಿತ್ರಗಳು ಶುರುವಾಗಿವೆ. ಕವಲುದಾರಿ, ಮಾಯಾಬಜಾರ್ ಹಾಗೂ ಪನ್ನಗಾಭರಣ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾ. ಇದೂ ಶುರುವಾದರೆ 4ನೇ ಸಿನಿಮಾ ಆಗಲಿದೆ. 

 • ಪ್ರೇಕ್ಷಕ ನಕ್ಕುಬಿಟ್ಟ.. ಅಧ್ಯಕ್ಷ ಮತ್ತೆ ಗೆದ್ದುಬಿಟ್ಟ..!

  adhyaksha in america producer feels happy

  ಅಧ್ಯಕ್ಷ ಇನ್ ಅಮೆರಿಕ ಗೆದ್ದಿದ್ದಾರೆ. ಸತತ 2 ಗಂಟೆಯ ನಿರಂತರ ಕಾಮಿಡಿಗೆ ಪ್ರೇಕ್ಷಕರು ನಕ್ಕಿದ್ದಾರೆ. ಶರಣ್-ರಾಗಿಣಿ ಜೋಡಿ ಮೋಡಿ ಮಾಡಿದ್ದರೆ, ನಿರ್ದೇಶಕ ಯೋಗಾನಂದ್ ಚೊಚ್ಚಲ ಪ್ರಯತ್ನದಲ್ಲೇ ಬೌಂಡರಿ ಬಾರಿಸಿದ್ದಾರೆ. ನಿರ್ಮಾಪಕ ವಿಶ್ವಪ್ರಸಾದ್ ಅವರ ಖುಷಿಯೇ ಬೇರೆ. ಖಜಾನೆ ತುಂಬಿದೆ. ಯೆಸ್, ಅಧ್ಯಕ್ಷ ಗೆದ್ದಿದ್ದಾನೆ.

  ಇದು ಮಲಯಾಳಂನ 2 ಕಂಟ್ರಿಸ್ ಚಿತ್ರದ ರೀಮೇಕ್. ಮಲಯಾಳಂನ ಸಿನಿಮಾ ತೆಲುಗಿಗೂ ರೀಮೇಕ್ ಆಗಿತ್ತು.  ಈಗ ಕನ್ನಡದಲ್ಲಿ ನಾನೇ ಸಿನಿಮಾ ಮಾಡಿ ಗೆದ್ದಿರೋದು ಖುಷಿ ಕೊಟ್ಟಿದೆ ಎಂದಿದ್ದಾರೆ ನಿರ್ಮಾಪಕ ವಿಶ್ವಪ್ರಸಾದ್.

  ಪ್ರೇಕ್ಷಕರ ನಗು ಚಪ್ಪಾಳೆ ಸಹಜವಾಗಿಯೇ ಶರಣ್, ರಾಗಿಣಿ, ಯೋಗಾನಂದ್ ಮುದ್ದಾನ್ ಅವರಿಗೆ ಖುಷಿ ಕೊಡುತ್ತೆ. ನಿರ್ಮಾಪಕರು ಕೂಡಾ ನಕ್ಕುಬಿಟ್ಟರೆ.. ಅದಕ್ಕಿಂತ ಖುಷಿ ಇನ್ನೇನಿದೆ.

 • ಬಿಂಗೋ : ರಾಗಿಣಿ ಬೊಂಬಾಟ್ ಲುಕ್

  ಬಿಂಗೋ : ರಾಗಿಣಿ ಬೊಂಬಾಟ್ ಲುಕ್

  ಬಿಂಗೊ ಸಿನಿಮಾಗೆ ಮೂರನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ. ನಗರದ ಹೊರವಲಯದಲ್ಲಿ ಇರುವ ದೇವರಾಜ್ ಎಸ್ಟೇಟ್ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ರಾಗಿಣಿ ದ್ವಿವೇದಿ, ಆರ್.ಕೆ. ಚಂದನ್ ಜೊತೆ ಹಲವು ಕಲಾವಿದರು ಭಾಗಿಯಾಗಿದ್ದಾರೆ. ಶಂಭೋ ಶಿವ ಶಂಕರ ಚಿತ್ರ ನಿರ್ದೇಶಿಸಿದ್ದ ಶಂಕರ್ ಕೋನಮಾನಹಳ್ಳಿ ಇದೀಗ ಮತ್ತೊಂದು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಆರ್.ಕೆ. ಚಂದನ್ ಹೀರೋ ಆದರೆ, ರಾಗಿಣಿ ದ್ವಿವೇದಿ ಹೀರೋಯಿನ್.

  ಆರ್.ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಕ್ಷಾ ಮತ್ತೊಬ್ಬ ನಾಯಕಿ. ಮಜಾಟಾಕೀಸ್ ಪವನ್, ರಾಜೇಶ್ ನಟರಂಗ, ಆಶಾ ಸುಜಯ್, ಮುರಳಿ ಪೂರ್ವಿಕ್.. ಹೀಗೆ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

  ಈ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎರಡು ಶೇಡ್ ಗಳಲ್ಲಿ ಅವರ ಪಾತ್ರವಿರುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಹಿತನ್ ಹಾಸನ್ ಸಂಗೀತ ನಿರ್ದೇಶನವಿರುವ  “ಬಿಂಗೋ” ಚಿತ್ರಕ್ಕೆ  ನಟರಾಜ್ ಮುದ್ದಾಲ್ ಅವರ ಛಾಯಾಗ್ರಹಣವಿದೆ.