` ragini dwivedi, - chitraloka.com | Kannada Movie News, Reviews | Image

ragini dwivedi,

 • ಅಕ್ಕಮಹಾದೇವಿ ವಚನಗಳನ್ನು ತಲೆ ಮೇಲೆ ಹೊತ್ತ ರಾಗಿಣಿ

  ragini dwivedi image

  ಅಕ್ಕಮಹಾದೇವಿ, ಕನ್ನಡದ ವಚನ ಇತಿಹಾಸದಲ್ಲಿ ಅತಿದೊಡ್ಡ ಹೆಸರು. ಚೆನ್ನಮಲ್ಲಿಕಾರ್ಜುನ ಅಂಕಿತ ನಾಮದಲ್ಲಿ ನೂರಾರು ವಚನಗಳನ್ನು ಬರೆದಿರುವ ಅಕ್ಕನ ವಚನಗಳಿಗೆ ಹರಿಹರದಲ್ಲಿ ನಡೆದ ಬೆಳ್ಳಿ ಬೆಡಗು ಹರ ಜಾತ್ರೆಯಲ್ಲಿ ವಿಶೇಷ ಗೌರವ ಸಲ್ಲಿಸಲಾಗಿದೆ. ಅಕ್ಕಮಹಾದೇವಿ ವಚನಗಳನ್ನು ನೂರಾರು ಮಹಿಳೆಯರು ಹೊತ್ತು ಮೆರವಣಿಗೆ ಮಾಡಿದ್ದಾರೆ.

  ಮಹಿಳೆಯರು, ಸ್ವಾಮೀಜಿಗಳ ಜೊತೆಯಲ್ಲಿಯೇ ಮೆರವಣಿಗೆಯಲ್ಲಿ ಗಮನ ಸೆಳೆದವರು ರಾಗಿಣಿ ದ್ವಿವೇದಿ. ಮೂಲತಃ ಪಂಜಾಬಿ ಹುಡುಗಿಯಾದ ರಾಗಿಣಿ, ಕನ್ನಡವನ್ನು ಕಲಿತು, ಕನ್ನಡಿಗರೇ ಆಗಿಬಿಟ್ಟಿದ್ದಾರೆ. ಹರಿಹರದ ಜಾತ್ರೆಯಲ್ಲಿ ಭಾಗಿಯಾಗಿರುವ ರಾಗಿಣಿ, ವಚನಚಂದ್ರಿಕೆಗಳನ್ನು ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. 

 • ಅಕ್ಕಾ ಎನ್ನಿಸಿಕೊಂಡಿದ್ದ ರಾಗಿಣಿಯೇ ಶರಣ್​ಗೆ ಜೋಡಿ

  ragini paired opposite sharan

  ವಿಕ್ಟರಿ ಚಿತ್ರದ ಅಕ್ಕಾ ನಿನ್ ಮಗ್ಳು ನಂಗೆ ಚಿಕ್ಕೋಳಾಗಲ್ವಾ ಹಾಡು ಕೇಳಿ, ಮೈ ಬಿಸಿಯೇರಿ ಕುಣಿದಿದ್ದ ಅಭಿಮಾನಿಗಳಿಗೆ ಈಗೊಂದು ಖುಷಿ ಖುಷಿ ಸುದ್ದಿ. ಏನೆಂದರೆ, ಆ ಹಾಡಿನಲ್ಲಿ ಶರಣ್ ಜೊತೆ ಕುಣಿದಿದ್ದ ರಾಗಿಣಿ, ಶರಣ್ ಮುಂದಿನ ಚಿತ್ರಕ್ಕೆ ನಾಯಕಿ.

  ಮುಕುಂದ ಮುರಾರಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಯೋಗಾನಂದ್ ಮುದ್ದಾನ್, ಶರಣ್​ರ ಹೊಸ ಚಿತ್ರದ ಡೈರೆಕ್ಟರ್. ಶರಣ್ ಜೊತೆ ನಟಿಸಲಿರುವ ಚಿತ್ರಕ್ಕೆ ಈಗಾಗಲೇ ರಾಗಿಣಿ ಹೊಸ ಹೇರ್​ಸ್ಟೈಲ್ ಮಾಡಿಸಿಕೊಂಡಿದ್ದಾರಂತೆ. 

  ಅಕ್ಕಾ ನಿನ್ ಮಗ್ಳು ಹಾಡಿನಲ್ಲಿ ದುಂಡ ದುಂಡಗೆ ಇದ್ದ ರಾಗಿಣಿ, ಈಗ ಫುಲ್ ಸ್ಲಿಮ್ ಆಗಿದ್ದಾರೆ. ಶರಣ್ ಚಿತ್ರ ಎಂದ ಮೇಲೆ ಕಾಮಿಡಿಯ ಹೂರಣ, ಒಬ್ಬಟ್ಟು ಇರಲೇಬೇಕು. ಕಾಮಿಡಿಯ ಒಬ್ಬಟ್ಟಿನ ಚಿತ್ರದಲ್ಲಿ ತುಪ್ಪದ ಹುಡುಗಿ ಹೇಗಿರುತ್ತಾರೆ ಅನ್ನೋ ಕುತೂಹಲ ಪ್ರೇಕ್ಷಕರದ್ದು.

 • ಅಕ್ಟೋಬರ್ 10ಕ್ಕೆ ಅಧ್ಯಕ್ಷ ಇನ್ ಅಮೆರಿಕ ಇನ್ ಅಮೆರಿಕ..

  adhyaksha in america to release in usa on oct 10th

  ರಾಜ್ಯಾದ್ಯಂತ ನಗೆಯ ಬುಗ್ಗೆ ಉಕ್ಕಿಸಿರುವ ಅಧ್ಯಕ್ಷ ಇನ್ ಅಮೆರಿಕ, ಅಮೆರಿಕಕ್ಕೇ ಹೊರಟು ನಿಂತಿದೆ. ಹೇಳಿ ಕೇಳಿ ಇದು ಅಮೆರಿಕದಲ್ಲೇ ಹೆಚ್ಚು ಶೂಟಿಂಗ್ ಮಾಡಿರುವ ಸಿನಿಮಾ. ಶರಣ್, ರಾಗಿಣಿ ಜೋಡಿಯಂತೂ ಮೋಡಿಯನ್ನೇ ಮಾಡಿದೆ. ಚಿತ್ರ ಅಕ್ಷರಶಃ ಮ್ಯಾಜಿಕ್ ಸೃಷ್ಟಿಸಿದೆ. ನಿರ್ದೇಶಕ ಯೋಗಾನಂದ್ ಮುದ್ದಾನ್ ಮೊದಲ ಬಾಲಿನಲ್ಲೇ ಸಿಕ್ಸರ್ ಹೊಡೆದಿದ್ದಾರೆ.

  ಈಗ ಅಧ್ಯಕ್ಷ ಇನ್ ಅಮೆರಿಕ ಅಮೆರಿಕಕ್ಕೆ ಹೊರಟು ನಿಂತಿದೆ. ಅಕ್ಟೋಬರ್ 10ರಂದು ಸಿನಿಮಾ ಅಮೆರಿಕದಲ್ಲಿ ರಿಲೀಸ್ ಆಗಲಿದೆ. 25ಕ್ಕೂ ಹೆಚ್ಚು ಸೆಂಟರುಗಳಲ್ಲಿ ರಿಲೀಸ್ ಆಗುತ್ತಿದೆ ಅಧ್ಯಕ್ಷ ಇನ್ ಅಮೆರಿಕ. ಶರಣ್ ಚಿತ್ರಗಳಿಗೆ ಅಮೆರಿಕದಲ್ಲಿ ಬಹುದೊಡ್ಡ ಮಾರ್ಕೆಟ್ ಇದೆ.

 • ಅಧ್ಯಕ್ಷ ಅಮೆರಿಕಕ್ಕೆ ಹೋಗೋಕೆ ಏನೇನೆಲ್ಲ ಸರ್ಕಸ್ ಆಯ್ತು ಗೊತ್ತಾ..?

  adhyakasha's struggle to reach america

  ಅಧ್ಯಕ್ಷ ಇನ್ ಅಮೆರಿಕ ರಿಲೀಸ್ ಆಗುತ್ತಿದೆ. ಶರಣ್ ಜೊತೆ ಇದೇ ಮೊದಲ ಬಾರಿ ರಾಗಿಣಿ ದ್ವಿವೇದಿ ನಾಯಕಿಯಾಗಿದ್ದಾರೆ. ಹರಿಕೃಷ್ಣ ಇದೇ ಮೊದಲ ಬಾರಿಗೆ ಶರಣ್ ಚಿತ್ರಕ್ಕೆ ಮ್ಯೂಸಿಕ್ ಕೊಟ್ಟಿದ್ದಾರೆ. ಯೋಗಾನಂದ್ ಮುದ್ದಾನ್‍ಗೆ ಇದು ಮೊದಲ ನಿರ್ದೇಶನದ ಚಿತ್ರ. ಹಾಡುಗಳು ವೈರಲ್ಲಾಗಿ, ಸಿನಿಮಾದ ಮೇಲೆ ಭರ್ಜರಿ ನಿರೀಕ್ಷೆ ಇರುವಾಗ ಅಮೆರಿಕದ ಕಥೆ ಹೇಳಿಕೊಂಡಿದ್ದಾರೆ ಶರಣ್.

  ಶರಣ್ ಅವರಿಗೂ ಅಮೆರಿಕ ಹೊಸದು. ಪ್ರಥಮ ಅನುಭವ. ಬಹುಪಾಲು ಅಮೆರಿಕದಲ್ಲೇ ಶೂಟಿಂಗ್ ಆಗಬೇಕಿತ್ತು. ದೊಡ್ಡ ತಂಡವೇ ಹೋಗಬೇಕು. ಹೀಗಾಗಿ ವೀಸಾ ಪಡೆಯಲು ಎಲ್ಲರಿಗೂ ಸೆಷನ್ ಮಾಡಿಸಿದ್ರಂತೆ. ಅದರಲ್ಲಿನ ವಿಶೇಷಗಳೇನು ಗೊತ್ತಾ..?

  ಅಮೆರಿಕದಲ್ಲಿ ಮೊದಲೇ ಶೂಟಂಗುಗಳು ಜಾಸ್ತಿ. ಅದೇ ಗನ್ ಶೂಟಿಂಗ್. ಹೀಗಾಗಿ ವೀಸಾ ಪಡೆಯುವಾಗ ಏಕೆ ಎಂದು ಕೇಳಿದರೆ ಶೂಟಿಂಗ್ ಎನ್ನಬಾರದು, ಫಿಲ್ಮಿಂಗ್ ಎನ್ನಬೇಕು ಎನ್ನುವುದನ್ನು ಪ್ರಾಕ್ಟೀಸ್ ಮಾಡಿಸಲಾಯ್ತಂತೆ. ಆದರೆ, ಶರಣ್ ಅನುಭವವೇ ಬೇರೆ. ಪ್ರಶ್ನೆಗಳಿಗೆಲ್ಲ ರೆಡಿಯಾಗಿ ಹೋಗಿ ಕುಳಿತರೆ ಶರಣ್‍ಗೆ ಒಂದೇ ಒಂದು ಪ್ರಶ್ನೆ ಕೇಳದೆ, ವೀಸಾ ಕೊಟ್ಟು ಕಳಿಸಿದ್ರಂತೆ.

  ಇನ್ನು ಅಮೆರಿಕದಲ್ಲೋ.. ಇವರು ಶೂಟಿಂಗ್ ಮಾಡ್ತಿದ್ದ ಜಾಗದಲ್ಲಿ ರಾತ್ರಿ 10 ಗಂಟೆಯಾದರೂ ಸೂರ್ಯನಿರುತ್ತಿದ್ದ. ಬಿಸಿಲಿರುತ್ತಿತ್ತು. ರಾತ್ರಿಯಾಗದೆ, ಕತ್ತಲಾಗದೆ ನಿದ್ರೆ ಬರಲ್ಲ. ಅಡ್ಜಸ್ಟ್ ಆಗೋದು ಬಹಳ ಕಷ್ಟವಾಯ್ತು ಎಂಬ ವಿಭಿನ್ನ ಅನುಭವ ಹೇಳಿಕೊಂಡಿದ್ದಾರೆ ಶರಣ್.

 • ಅಧ್ಯಕ್ಷ ಇನ್ ಅಮೆರಿಕ 50 ದಿನ

  adhyaksha in america completes 50 days

  ಅಧ್ಯಕ್ಷ ಇನ್ ಅಮೆರಿಕ, ಸೈಲೆಂಟ್ ಆಗಿ ಸಕ್ಸಸ್ ಕಂಡ ಸಿನಿಮಾ. ಶರಣ್, ರಾಗಿಣಿ ದ್ವಿವೇದಿ ಮೊದಲ ಬಾರಿಗೆ ಜೋಡಿಯಾಗಿ ನಟಿಸಿದ್ದ ಚಿತ್ರ ಯಶಸ್ವಿಯಾಗಿ ಅರ್ಧ ಶತಕ ಬಾರಿಸಿದೆ. ಈ ದಿನ ರಿಲೀಸ್ ಆಗುತ್ತಿರುವ ಎಲ್ಲ ಕನ್ನಡ ಚಿತ್ರಗಳಿಗೂ ಶುಭ ಹಾರೈಸಿರುವ ಶರಣ್, ಇದೇ ವೇಳೆ ತಮ್ಮ ಚಿತ್ರದ ೫೦ನೇ ದಿನದ ಸಂಭ್ರಮವನ್ನೂ ಹಂಚಿಕೊAಡಿದ್ದಾರೆ.

  ಯೋಗಾನAದ್ ಮುದ್ದಾನ್ ನಿರ್ದೇಶನದ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದರು. ಉಲ್ಲಾಸ್ ಆಗಿ ಶರಣ್, ಲಯಾ ಆಗಿ ರಾಗಿಣಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದರು. ಚಿತ್ರ ಯಶಸ್ವಿಯಾಗಿ ೫೦ ದಿನ ಪೂರೈಸಿದೆ.

 • ಅಧ್ಯಕ್ಷ ಇನ್ ಅಮೆರಿಕಾ.. ಆಗಸ್ಟ್ ನಲ್ಲಿ ಇನ್ ಥಿಯೇಟರ್ಸ್

  adhyaksha in america to release in august

  ಶರಣ್, ರಾಗಿಣಿ ದ್ವಿವೇದಿ ಇದೇ ಮೊದಲ ಬಾರಿಗೆ ನಾಯಕ,ನಾಯಕಿಯಾಗಿ ಜೋಡಿಯಾಗಿರುವ ಸಿನಿಮಾ ಅಧ್ಯಕ್ಷ ಇನ್ ಅಮೆರಿಕ. ಈ ಹಿಂದೆ ಶರಣ್ ಚಿತ್ರಗಳಲ್ಲಿ ಸ್ಪೆಷಲ್ ಸಾಂಗ್ಸ್‍ಗೆ ಹೆಜ್ಜೆ ಹಾಕಿದ್ದ ರಾಗಿಣಿ, ಈ ಚಿತ್ರದಲ್ಲಿ ಹೀರೋಯಿನ್. 

  ಶರಣ್ ಜೊತೆ ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ, ಕೆಆರ್‍ಪೇಟೆ ಶಿವರಾಜು ಕಾಮಿಡಿಯ ಕಿಕ್ಕೇರಿಸುತ್ತಾರೆ.

  ಇದು ಮಲಯಾಳಂನ ಟು ಕಂಟ್ರೀಸ್ ಚಿತ್ರದ ರೀಮೇಕ್. ಯೋಗಾನಂದ್ ಮುದ್ದಾನ್ ನಿರ್ದೇಶನದ ಚಿತ್ರಕ್ಕೆ ವಿಶ್ವಪ್ರಸಾದ್ ಮತ್ತು ವಿವೇಕ್ ಕುಚ್ಚಿಬೊಟ್ಟಾ ನಿರ್ಮಾಪಕರು. ಶೈಲೇಂದ್ರ ಬಾಬು ಚಿತ್ರದ ವಿತರಣೆ ಜವಾಬ್ದಾರಿ ಹೊತ್ತುಕೊಂಡಿದ್ದು, ಸಿನಿಮಾ ಆಗಸ್ಟ್ ಕೊನೆ ವಾರದಲ್ಲಿ ರಿಲೀಸ್ ಆಗಲಿದೆ.

 • ಅಧ್ಯಕ್ಷ ಇನ್ ಡಬಲ್ ಸಕ್ಸಸ್ ಪಾರ್ಟಿ

  adhyaksha in america double party

  ಅಧ್ಯಕ್ಷ ಇನ್ ಅಮೆರಿಕ ಟೀಂ ಈಗ ಡಬಲ್ ಖುಷಿಯಲ್ಲಿದೆ. ರಿಲೀಸ್ ಆದ ನಂತರ ಇಡೀ ತಂಡ ಮತ್ತೊಮ್ಮೆ ಸೇರಿ ಸಕ್ಸಸ್ ಪಾರ್ಟಿ ಮಾಡಿದೆ. ಕಾರಣ ಸಿಂಪಲ್, ಅಧ್ಯಕ್ಷ ಇನ್ ಅಮೆರಿಕ ಚಿತ್ರಕ್ಕೆ ಸತತ 2ನೇ ವಾರವೂ ಸಿಗುತ್ತಿರುವ ಹೌಸ್‍ಫುಲ್ ಪ್ರತಿಕ್ರಿಯೆ ಮತ್ತು ವಿದೇಶದಲ್ಲಿ ಸಿಕ್ಕಿರುವ ಭರಪೂರ ರೆಸ್ಪಾನ್ಸ್.

  ಪೀಪಲ್ಸ್ ಫ್ಯಾಕ್ಟರಿ ಬ್ಯಾನರ್‍ನಲ್ಲಿ ಇದು ಮೊದಲ ಸಿನಿಮಾ. ಮೊದಲ ಚಿತ್ರವೇ ಸಕ್ಸಸ್ ಆಗಿರೋದು ಇನ್ನಷ್ಟು ಚಿತ್ರಗಳನ್ನು ನಿರ್ಮಿಸೋಕೆ ಸ್ಫೂರ್ತಿ ಕೊಟ್ಟಿದೆ ಎನ್ನುತ್ತಿದ್ದಾರೆ ನಿರ್ಮಾಪಕ ವಿಶ್ವಪ್ರಸಾದ್.

  ನಿರ್ದೇಶಕ ಯೋಗಾನಂದ್ ಮುದ್ದಾನ್ ಅವರಿಗೆ ಅಮೆರಿಕದಿಂದ ಮುಂದಿನ ಸಿನಿಮಾಗೆ ಕ್ರೌಡ್ ಫಂಡಿಂಗ್ ಮಾಡಲು ಮುಂದೆ ಬಂದಿದ್ದಾರಂತೆ. ಶರಣ್, ರಾಗಿಣಿ ಮೊದಲ ಬಾರಿಗೆ ಜೋಡಿಯಾಗಿ ನಟಿಸಿದ್ದ ಚಿತ್ರ ಮಾರ್ಕೆಟ್ಟಿನಲ್ಲಿ ಸಖತ್ ಸದ್ದು ಮಾಡ್ತಿದೆ.

 • ಅಧ್ಯಕ್ಷನ ಅಮೆರಿಕ ಕಥೆಯಲ್ಲಿ ಟಾಮ್ & ಜೆರ್ರಿ ಸ್ಟೈಲ್

  tom n jerry sryle in adhyaksha in merica

  ಅಧ್ಯಕ್ಷ ಇನ್ ಅಮೆರಿಕ ಚಿತ್ರ ರಿಲೀಸ್ ಆಗಿದೆ. ಶರಣ್ ಮತ್ತು ರಾಗಿಣಿ ಗಂಡ ಹೆಂಡತಿಯಾಗಿ ನಟಿಸಿರೋ ಸಿನಿಮಾವಿದು. ಚಿತ್ರದ 4ನೇ ಸೀನ್‍ನಲ್ಲಿಯೇ ರಾಗಿಣಿಗೆ, ಶರಣ್ ತಾಳಿ ಕಟ್ಟುತ್ತಾರೆ. ರಾಗಿಣಿ ಎನ್‍ಆರ್‍ಐ, ಪಾಪ ಶರಣ್ ಹಳ್ಳಿ ಹುಡುಗ. ಮದುವೆಯಾಗಿ ಶರಣ್‍ನನ್ನು ಕರೆದುಕೊಂಡು ಅಮೆರಿಕಾಗೆ ಹೋಗುವ ನಾಯಕಿ, ಅಲ್ಲಿ ನಾಯಕನನ್ನು ಅಬ್ಬೇಪಾರಿ ಮಾಡಿಬಿಡ್ತಾಳೆ. ಮುಂದಿನದ್ದು..

  ಕಥೆಯಲ್ಲಿ ಭರ್ಜರಿ ಕಾಮಿಡಿ, ಭಯಂಕರ ಟ್ವಿಸ್ಟು, ಬೊಂಬಾಟ್ ರೊಮ್ಯಾನ್ಸು ಎಲ್ಲವೂ ಇದೆ. ಇಡೀ ಚಿತ್ರದಲ್ಲಿ ಹೀರೋ ಹೀರೋಯಿನ್ ನಡುವೆ ಟಾಮ್ & ಜೆರ್ರಿ ಆಟ ನಡೆಯುತ್ತೆ. ಅರ್ಥಾತ್.. ಭರಪೂರ ಎಂಟರ್‍ಟೈನ್‍ಮೆಂಟ್ ಗ್ಯಾರಂಟಿ.

  ಯೋಗಾನಂದ್ ಮುದ್ದಾನ್ ಮಲಯಾಳಂನ ಟು ಕಂಟ್ರೀಸ್ ಸಿನಿಮಾವನ್ನು ಕನ್ನಡೀಕರಣಗೊಳಿಸಿದ್ದಾರೆ. ಶರಣ್-ರಾಗಿಣಿ ಜೊತೆ ಸಾಧು ಕೋಕಿಲ, ಕೆಆರ್ ಪೇಟೆ ಶಿವರಾಜು, ತಬಲಾ ನಾಣಿ, ರಂಗಾಯಣ ರಘು ಸೇರಿದಂತೆ ಕಾಮಿಡಿ ದಿಗ್ಗಜರ ದಂಡೇ ಇದೆ. 

 • ಅಧ್ಯಕ್ಷನ ಜೊತೆ ಜೊತೆಯಲಿ ರಾಗಿಣಿ 25 ದಾಖಲೆ

  ragini dwivedi reaches 25th film with adhyaksha in america

  ತುಪ್ಪದ ಹುಡುಗಿ ಎಂದೇ ಖ್ಯಾತರಾಗಿರುವ ರಾಗಿಣಿ ದ್ವಿವೇದಿ ಕನ್ನಡದಲ್ಲಿ ದಾಖಲೆಯನ್ನೇ ಬರೆದಿದ್ದಾರೆ. ವೀರ ಮದಕರಿ ಮೂಲಕ ಬೆಳ್ಳಿತೆರೆಗೆ ಪರಿಚಿತರಾದ ಪಂಜಾಬಿ ಚೆಲುವೆ, ಅದಾದ ಮೇಲೆ ಕನ್ನಡದ ಬಹುತೇಕ ಸ್ಟಾರ್‍ಗಳ ಜೊತೆ ನಟಿಸಿದ್ದಾರೆ. ಸುದೀಪ್, ಶಿವರಾಜ್ ಕುಮಾರ್, ಉಪೇಂದ್ರ, ರವಿಚಂದ್ರನ್ ಸೇರಿದಂತೆ ಹಲವು ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಅವರೀಗ ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಮೂಲಕ ದಾಖಲೆಯನ್ನೂ ಬರೆದಿದ್ದಾರೆ. ಇದು ಅವರ 25ನೇ ಸಿನಿಮಾ.

  ಅದು ನನಗೂ ಗೊತ್ತಿರಲಿಲ್ಲ. ಶರಣ್ ಅವರು ಇದನ್ನು ಹೇಳಿದಾಗ ಅಚ್ಚರಿಯಾಯ್ತು. 10 ವರ್ಷಗಳ ವೃತ್ತಿ ಜೀವನದಲ್ಲಿ ಸೋಲು, ಗೆಲುವು, ಏಳುಬೀಳು ಎಲ್ಲವನ್ನೂ ಕಂಡಿದ್ದೇನೆ. ಚಿತ್ರರಂಗದಲ್ಲಿ ಒಳ್ಳೆಯದು, ಕೆಟ್ಟದ್ದು ಎಲ್ಲವನ್ನೂ ನೋಡಿದ್ದೇನೆ ಎನ್ನುವ ರಾಗಿಣಿ, ಇದೇ ಮೊದಲ ಬಾರಿ ಕಾಮಿಡಿ ರೋಲ್ ಮಾಡಿದ್ದಾರೆ.

  ಶರಣ್ ಜೊತೆ ನಟನೆ ಹೊಸದಲ್ಲ. ನಾಯಕಿಯಾಗಿ ಇದು ಪ್ರಥಮ ಚಿತ್ರ. ಚಿತ್ರದಲ್ಲಿ ನನ್ನದು ನಂದಿನಿ ಅನ್ನೋ ಎನ್‍ಆರ್‍ಐ ಪಾತ್ರ ಎಂದು ಪಾತ್ರದ ಬಗ್ಗೆಯೂ ಹೇಳಿಕೊಂಡಿದ್ದಾರೆ ರಾಗಿಣಿ.

   

 • ಅಧ್ಯಕ್ಷನ ದರ್ಶನ ಮಾಡಿದ್ರೆ ಕಚಗುಳಿ ಗ್ಯಾರಂಟಿ

  adhyakasha in america is fun filled laughter ride

  ಅಧ್ಯಕ್ಷ ಇನ್ ಅಮೆರಿಕ ರಿಲೀಸ್ ಆಗುತ್ತಿದೆ. ಅಧ್ಯಕ್ಷ ಚಿತ್ರದ ಕಾಮಿಡಿಯನ್ನು ನೆನಪಿಸಿಕೊಂಡು ಈಗಲೂ ನಗುವ ಪ್ರೇಕ್ಷಕರಿಗೆ ಅಧ್ಯಕ್ಷ ಇನ್ ಅಮೆರಿಕ ಚಿತ್ರದಲ್ಲಿ ಡಬ್ಕು ಡಬಲ್ ಕಾಮಿಡಿ ಕಚಗುಳಿ ಇದೆಯಂತೆ. ಇದು ಶರಣ್ ಕೊಟ್ಟಿರೋ ಪ್ರಾಮಿಸ್.

  `ಚಿತ್ರದಲ್ಲಿ ನನ್ನ ಮತ್ತು ರಾಗಿಣಿ ನಡುವಿನ ದೃಶ್ಯಗಳು ಸಿಕ್ಕಾಪಟ್ಟೆ ಕಾಮಿಡಿಯಾಗಿವೆ. ಒಂದೊಂದು ದೃಶ್ಯವೂ ನಗಿಸುತ್ತದೆ. ಪ್ರೇಕ್ಷಕರಿಗೆ ಮನರಂಜನೆಯ ಫುಲ್ ಗ್ಯಾರಂಟಿ ಕೊಡ್ತೇನೆ' ಎಂದಿದ್ದಾರೆ ಶರಣ್.

  ಶರಣ್ ಇದ್ದ ಮೇಲೆ ಕಾಮಿಡಿಗೆ ಬರವಿಲ್ಲ. ರಾಗಿಣಿಗೆ ಇದೇ ಪ್ರಥಮ ಅನುಭವ. ಯೋಗಾನಂದ್ ಮದ್ದಾನ್ ಅವರಿಗೆ ನಿರ್ದೇಶಕರಾಗಿ ಇದು ಮೊದಲ ಚಿತ್ರ. ಅದೇನೇ ಇದ್ದರೂ ಕಾಮಿಡಿಗಂತೂ ಮಿತಿಯಿರಲ್ಲ.

 • ಅಭಿಮಾನಿಗಳ ಎದುರು ಕಣ್ಣೀರಿಟ್ಟ ರಾಗಿಣಿ

  ಅಭಿಮಾನಿಗಳ ಎದುರು ಕಣ್ಣೀರಿಟ್ಟ ರಾಗಿಣಿ

  ಇತ್ತೀಚೆಗಷ್ಟೇ ಡ್ರಗ್ಸ್ ಕೇಸಿನಲ್ಲಿ ಜಾಮೀನು ಪಡೆದು ಹೊರಬಂದ ರಾಗಿಣಿ, ಹೊರಗೆ ಕಾನ್ಫಿಡೆಂಟ್ ಆಗಿಯೇ ತೋರುತ್ತಿದ್ದರೂ, ಒಳಗಿನ ದುಃಖ ಬೇರೆಯೇ ಇದೆ. ಅದು ಅಭಿಮಾನಿಗಳ ಜೊತೆ ನಡೆದ ಲೈವ್ ಚಾಟ್ನಲ್ಲಿ ಎಲ್ಲರಿಗೂ ಗೊತ್ತಾಗಿದೆ. ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆ ಮಾತನಾಡುವಾಗ ರಾಗಿಣಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

  ನಾನು ಜೀವನದಲ್ಲಿ ಸಾಕಷ್ಟು ಶ್ರಮ ಪಟ್ಟಿದ್ದೇನೆ, ಸಾಕಷ್ಟು ಏಳು ಬೀಳು ನೋಡಿದ್ದೆನೆ. ಆದರೆ, ಈ ವೇಳೆ ನನ್ನ ಬಗ್ಗೆ ಸಾಕಷ್ಟು ಚೀಪ್ ಕಮೆಂಟುಗಳು ಬಂದವು. ಅವರ ಹೆಸರನ್ನು ನಾನು ಹೇಳೋದಿಲ್ಲ. ಹೆಣ್ಣು ಮಕ್ಕಳಿಗೆ ಹೀಗೆ ಹೆಸರಿಟ್ಟರೆ ನಿಮಗೇನು ಖುಷಿ ಸಿಗುತ್ತೋ ಗೊತ್ತಿಲ್ಲ. ನನ್ನ ಮತ್ತು ನನ್ನ ಫ್ಯಾಮಿಲಿ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ರೆ ಏನು ಸಿಗತ್ತೆ..? ನಿಮ್ಮ ಬಳಿ ಮಾತನಾಡೋಕೆ ಇಷ್ಟ ಇದೆ. ಆದರೂ ನರ್ವಸ್ ಆಗಿದ್ದೇನೆ ಎಂದು ಕಣ್ಣೀರಿಟ್ಟಿದ್ದಾರೆ ರಾಗಿಣಿ.

  ಮಕ್ಕಳಿಗೆ ತಂದೆ ತಾಯಿ ಸಪೋರ್ಟ್ ಬೇಕೆ ಬೇಕು. ಈ ಎಲ್ಲಾ ಘಟನೆಗಳಿಂದ ಹೊರ ಬರಲು ಪ್ರಯತ್ನ ಮಾಡುತ್ತಿದ್ದೇನೆ. ಅದಕ್ಕೆ ತುಂಬಾ ಸಮಯಬೇಕು. ಸದ್ಯಕ್ಕೆ ನಾನಿಷ್ಟು ಪಾಸಿಟಿವ್ ಆಗಿ ಇರೋಕೆ ಕಾರಣ, ನನ್ನ ಫ್ಯಾಮಿಲಿ ಎಂದಿದ್ದಾರೆ ರಾಗಿಣಿ.

 • ಅಮೆರಿಕ ಅಧ್ಯಕ್ಷನಿಗೂ ಅವನೇ ವಿಲನ್..!

  piracy haunts adhyaksha in america too

  ಕನ್ನಡಕ್ಕೆ ಪೈರಸಿ ಭೂತಕ್ಕಿಂತಲೂ ದೊಡ್ಡದಾಗಿಯೇ ಕಾಡೋಕೆ ಶುರುವಾಗಿದೆ. ಮಾರುಕಟ್ಟೆ ದೊಡ್ಡದಾಗುತ್ತಿರುವುದೇ ಇದಕ್ಕೆಲ್ಲ ಕಾರಣವೇನೋ.. ಇತ್ತೀಚೆಗೆ ಕನ್ನಡದಲ್ಲಿ ಬಂದ ಬಹುತೇಕ ಎಲ್ಲ ಸ್ಟಾರ್ ಚಿತ್ರಗಳಿಗೂ ಪೈರಸಿ ಭಯಾನಕವಾಗಿ ಕಾಡಿದೆ. ದಿ ವಿಲನ್, ಕುರುಕ್ಷೇತ್ರ, ಯಜಮಾನ, ಪೈಲ್ವಾನ್, ನಟಸಾರ್ವಭೌಮ.. ಹಿಗೆ ಪ್ರತಿಯೊಬ್ಬರನ್ನೂ ಕಾಡಿದೆ ಪೈರಸಿ. ಈಗ ಅಧ್ಯಕ್ಷನನ್ನು ಕಾಡೋಕೆ ಶುರುವಾಗಿದೆ.

  ಟಾಕೀಸ್ ಬಾಕ್ಸಾಫೀಸಿನಲ್ಲಿ ಮ್ಯಾಜಿಕ್ ಮಾಡುತ್ತಿರುವ ಅಧ್ಯಕ್ಷ ಇನ್ ಅಮೆರಿಕ, ಮೊಬೈಲಿಗೂ ಹೋಗಿಬಿಟ್ಟಿದ್ದಾನೆ. ಪೈರಸಿ ಕ್ರಿಮಿನಲ್‍ಗಳು ಶರಣ್, ರಾಗಿಣಿ ಜೋಡಿಯ ಸಿನಿಮಾವನ್ನು ಪೈರಸಿ ಮಾಡಿ ಬಿಟ್ಟಿದ್ದಾರೆ. ಇದನ್ನು ತಡೆಯುವ ಸಲುವಾಗಿಯೇ ನಿರ್ಮಾಪಕ ವಿಶ್ವಪ್ರಸಾದ್, ಹೈದರಾಬಾದ್‍ನಲ್ಲಿ ಒಂದು ಟೀಂ ಇಟ್ಟಿದ್ದಾರೆ. ಆ ಟೀಂನವರು ಪ್ರತಿದಿನ ಪೈರಸಿ ಲಿಂಕ್‍ಗಳನ್ನು ಡಿಲೀಟ್ ಮಾಡುತ್ತಲೇ ಇದ್ದಾರೆ. ಆದರೆ ಥಿಯೇಟರಿನಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿರುವುದು ಅವರ ಪಾಲಿನ ಗುಡ್ ನ್ಯೂಸ್. ಏಕೆಂದರೆ, ಇದು ನಗಿಸುವ ಸಿನಿಮಾ.. ಥಿಯೇಟರಿನಲ್ಲಿ ಕೂತು ಹೊಟ್ಟೆ ಬಿರಿಯುವಂತೆ ನಗದೇ ಹೋದರೆ ಸಮಾಧಾನವಾದರೂ ಎಲ್ಲಿದ್ದೀತು..?

 • ಅಮೆರಿಕಕ್ಕೆ ಅಧ್ಯಕ್ಷ ಸೇಲ್

  old song gets new look for adhyaksha in america

  ಅಮ್ಮಾ ನಾ ಸೇಲ್ ಆದೆ.. ಅಮೆರಿಕ ಪಾಲಾದೆ.. ಇದು ಕಾಶೀನಾಥ್ ಅವರ ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಚಿತ್ರದ ಸೂಪರ್ ಹಿಟ್ ಹಾಡು. ಆ ಹಾಡನ್ನು ಅಧ್ಯಕ್ಷ ಇನ್ ಅಮೆರಿಕ ಚಿತ್ರದಲ್ಲಿ ಮತ್ತೆ ಬಳಸಿಕೊಳ್ಳಲಾಗಿದೆ.

  `ನಮ್ಮ ಚಿತ್ರದ ಸನ್ನಿವೇಶಕ್ಕೆ ಆ ಹಾಡು ಸೂಕ್ತವಾಗುತ್ತಿತ್ತು. ಹಾಗಂತ ನಾವು ಇಡೀ ಹಾಡನ್ನು ಪುನರ್‍ಬಳಕೆ ಮಾಡಿಲ್ಲ. ಹಾಡಿನ ಆರಂಭದ ಸಾಲನ್ನಷ್ಟೇ ಎತ್ತಿಕೊಂಡಿದ್ದೇವೆ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ' ಎಂದಿದ್ದಾರೆ ನಿರ್ದೇಶಕ ಯೋಗಾನಂದ್ ಮದ್ದಾನ್.

  ಶರಣ್, ರಾಗಿಣಿ ಕಾಂಬಿನೇಷನ್ನಿನಲ್ಲಿ ಬರುತ್ತಿರುವ ಅಧ್ಯಕ್ಷ ಇನ್ ಅಮೆರಿಕ ಭರ್ಜರಿ ಹವಾ ಎಬ್ಬಿಸಿದೆ. 

 • ಅಮೆರಿಕಕ್ಕೆ ಹಾರಿಬಿಟ್ರು ರಾಗಿಣಿ, ಶರಣ್

  sharan and ragini flies to america

  ಕಾಮಿಡಿ ಕಿಂಗ್ ಆಗಿರುವ ಶರಣ್, ತುಪ್ಪದ ಹುಡುಗಿ ರಾಗಿಣಿ ಜೊತೆ ಅಮೆರಿಕಕ್ಕೆ ಹಾರಿಬಿಟ್ಟಿದ್ದಾರೆ. ಜೋಡಿಯಾಗಿ. ಚಿತ್ರವೊಂದರ ಶೂಟಿಂಗ್‍ಗೆ ಜೊತೆ ಜೊತೆಯಾಗಿ ತೆರಳಿದ್ದಾರೆ ರಾಗಿಣಿ ಮತ್ತು ಶರಣ್.

  ಶರಣ್ ಮತ್ತು ರಾಗಿಣಿ ಹೊಸ ಚಿತ್ರವೊಂದರಲ್ಲಿ ಜೊತೆಯಾಗಿ ನಟಿಸುತ್ತಿದ್ದು, ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಮಲಯಾಳಂನ ಟೂ ಕಂಟ್ರಿಸ್ ಚಿತ್ರದ ರೀಮೇಕ್ ಆಗಿರುವ ಚಿತ್ರ ಅದು. ಬಹುಭಾಗದ ಚಿತ್ರೀಕರಣ ಅಮೆರಿಕದಲ್ಲೇ ನಡೆಯಲಿದೆ.

  ಈ ಹಿಂದೆ ವಿಕ್ಟರಿ ಚಿತ್ರದಲ್ಲಿ ಅಕ್ಕ ನಿನ್ ಮಗ್ಳು ನಂಗೆ ಚಿಕ್ಕೋಳಗಲ್ವಾ ಎಂಬ ಹಾಡಿನಲ್ಲಿ ಶರಣ್ ಜೊತೆ ಹೆಜ್ಜೆ ಹಾಕಿದ್ದ ರಾಗಿಣಿ, ಈಗ ಶರಣ್‍ಗೇ ನಾಯಕಿಯಾಗಿರೋದು ಇಂಟ್ರೆಸ್ಟಿಂಗ್. ಈ ಚಿತ್ರದ ಚಿತ್ರೀಕರಣ ಅಮೆರಿಕದಲ್ಲೇ ಸುಮಾರು 1 ತಿಂಗಳು ನಡೆಯಲಿದೆ.

 • ಅಮೆರಿಕದಿಂದ ರಷ್ಯಾಕ್ಕೆ ಶರಣ್

  adhyaksha in america shooting in russia

  ಕಾಮಿಡಿ ಕಿಂಗ್ ಶರಣ್, ಅಮೆರಿಕದಿಂದ ವಾಪಸ್ ಆಗಿದ್ದಾರೆ. ರಾಗಿಣಿ ದ್ವಿವೇದಿ ನಾಯಕಿಯಾಗಿರುವ ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಚಿತ್ರೀಕರಣ ಅಮೆರಿಕದಲ್ಲಿಯೇ ನಡೆಯುತ್ತಿತ್ತು. ಒಂದು ತಿಂಗಳ ಶೂಟಿಂಗ್ ಮುಗಿಸಿರುವ ಶರಣ್, ಈಗ ರಷ್ಯಾಕ್ಕೆ ಹೋಗಿದ್ದಾರೆ. ರಜಾ ಸಮಯ, ವಿಶ್ರಾಂತಿ ಎಂದುಕೊಳ್ಳಬೇಡಿ. ಅಲ್ಲಿ ಇನ್ನೊಂದು ಸಿನಿಮಾ ಇದೆ.

  ಸಂತು ನಿರ್ದೇಶನದ ವಿಕ್ಟರಿ 2 ಸಿನಿಮಾದ ಚಿತ್ರೀಕರಣ ರಷ್ಯಾದಲ್ಲಿ ಫಿಕ್ಸ್ ಆಗಿದೆ. ಆ ಚಿತ್ರದ ಶೂಟಿಂಗ್ ರಷ್ಯಾದಲ್ಲಿ ನಡೆಯುತ್ತಿದೆ. ರ್ಯಾಂಬೋ 2 ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಶರಣ್, ಅಧ್ಯಕ್ಷ ಇನ್ ಅಮೆರಿಕ ಹಾಗೂ ವಿಕ್ಟರಿ 2 ಚಿತ್ರಗಳಲ್ಲೂ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

 • ಅರೆರೇ.. ರಾಗಿಣಿ ಮದ್ವೇನಾ..?

  is ragini getting married

  ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಕೈಯ್ಯಲ್ಲಿ ಮೆಹಂದಿ. ಗೋರಂಟಿಯ ರಂಗಿನಲ್ಲಿ ಮಿರಮಿರನೆ ಮಿಂಚುತ್ತಿರುವ ರಾಗಿಣಿ. ಬ್ಯಾಕ್ ಗ್ರೌಂಡ್‍ನಲ್ಲಿ ಮದುವೆ ಸಂಭ್ರಮದ ಖುಷಿ. ಅರೆರೆ.. ರಾಗಿಣಿ ದ್ವಿವೇದಿ ಮದುವೆಯಾಗುತ್ತಿದ್ದಾರಾ..? ಹುಡುಗ ಯಾರು..? ಏನ್ ಮಾಡ್ತಿದ್ದಾರೆ..? ಸಿನಿಮಾದವ್ರೇನಾ..? ಲವ್ ಮ್ಯಾರೇಜಾ..? ಅರೇಂಜ್ಡ್ ಮ್ಯಾರೇಜಾ..? ಹೀಗೆ ಹತ್ತಾರು ಪ್ರಶ್ನೆಗಳು ಮೂಡಿ ಬರೋದು ಸಹಜ.

  ಇವುಗಳಿಗೆಲ್ಲ ಉತ್ತರ ಇಷ್ಟೆ.. ರಾಗಿಣಿ ಮದುವೆ ಸಂಭ್ರಮದಲ್ಲಿರೋದು ಸತ್ಯ. ಮೆಹಂದಿಯಲ್ಲಿರೋದು ಕೂಡಾ ಅಷ್ಟೇ ಸತ್ಯ. ಆದರೆ, ಮದುವೆ ಅವರದ್ದಲ್ಲ. ಅವರ ಪ್ರೀತಿಯ ತಮ್ಮನದ್ದು. ರಾಗಿಣಿ ತಮ್ಮ ರುದ್ರಾಕ್ಷ್ ಮದುವೆ ಜಲಂಧರ್‍ನಲ್ಲಿ ನಡೆಯುತ್ತಿದ್ದು, ಪಂಜಾಬಿ ಸಂಪ್ರದಾಯದಂತೆ ಮೆಹಂದಿಯಲ್ಲಿ ಮಿನುಗುತ್ತಿದ್ದಾರೆ ರಾಗಿಣಿ.

 • ಉಪ್ಪು ಹುಳಿ ಖಾರದಲ್ಲಿ ರಾಗಿಣಿ ಬುಸ್ ಬುಸ್..!

  ragini is nagini in uppu huli khara

  ಉಪ್ಪು ಹುಳಿ ಖಾರ ಚಿತ್ರದ ತುಂಬಾ ರುಚಿಕಟ್ಟಾದ ಅಡುಗೆಯಿದೆ. ಆ ಅಡುಗೆಗೆ ತುಪ್ಪ ಹಾಕಿದ್ದಾರೆ ಇಮ್ರಾನ್ ಸರ್ದಾರಿಯ. ತುಪ್ಪ ಎಂದರೆ, ತುಪ್ಪದ ಹುಡುಗಿ ಎಂದು ಬೇರೆ ಹೇಳಬೇಕಿಲ್ಲ. 

  ಆದರೆ, ಚಿತ್ರದಲ್ಲಿ ತುಪ್ಪದ ಹುಡುಗಿ ಕಾಣಿಸಿಕೊಂಡಿರೋದು ನಾಗಿಣಿ ಅವತಾಋದಲ್ಲಿ. ಇಚ್ಚಾಧಾರಿ ಸ್ವರೂಪಿ ನಾಗಿಣಿಯಾಗಿ ರಾಗಿಣಿ ನಟಿಸಿದ್ದಾರೆ. ನರ್ತಿಸಿದ್ದಾರೆ. ಅದು ಚಿತ್ರದ ವಿಶೇಷ ಹಾಡು.

  ಅಂದಹಾಗೆ ಚಿತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಕಲಾವಿದರ ಕಾಸ್ಟ್ಯೂಮ್ ಮತ್ತು ಸ್ಟೈಲ್. ಆ ಕಲೆಯ ಹಿಂದಿರೋದು ಸಾನಿಯಾ. ಅವರು ಇಮ್ರಾನ್ ಸರ್ದಾರಿಯಾ ಅವರ ಪತ್ನಿ. ಚಿತ್ರದ ಕ್ಯಾರೆಕ್ಟರ್‍ಗಳನ್ನು ವಿವರಿಸಿ, ಅದಕ್ಕೆ ತಕ್ಕಂತೆ ಡ್ರೆಸ್ ಆಯ್ಕೆ ಮಾಡುವಂತೆ ಹೇಳಿದ್ದೆ. ಅವರು ಅದ್ಭುತವಾಗಿ ಮಾಡಿದ್ದಾರೆ ಎಂದಿದ್ದಾರೆ ಇಮ್ರಾನ್.

 • ಎಂಎಂಸಿಹೆಚ್ ಡೈಲಾಗ್ಸ್.. ಥಂಡಾ ಥಂಡಾ ಹಾಟ್ ಹಾಟ್

  mmch dialogues creates curiosity

  ತಾನು ಮದುವೆ ಆಗೋ ಹುಡುಗಿ ಶೀಲವಂತೆ ಆಗಿರ್ಲಿ ಅಂತಾನೇ ಎಲ್ಲರೂ ಬಯಸೋದು. ಯಾಕ್ ಗೊತ್ತಾ..? ತಾನು ಶೀಲ ಕಳ್ಕೊಂಡಿರೋರೋದು ಯಾವ ಸ್ಟೆತಾಸ್ಕೋಪ್‍ಗೂ ಗೊತ್ತಾಗಲ್ಲ ಅಂತಾ...

  ಒಂಭತ್ತು ತಿಂಗಳಿಗೆ ಒಬ್ಬ ಮನುಷ್ಯ ಹುಟ್ತಾನೆ. ಆದರೆ, ಮನುಷ್ಯತ್ವ ಇರೋವ್ರು ಹುಟ್ಟಲ್ಲ...

  ಈ 65 ದಾಟಿರೋವ್ರನ್ನ, ಯೌವ್ವನದಲ್ಲಿರೋವ್ರನ್ನ ಕೇಳಿ, ನೀವು ಮೊದ್ಲು ಯಾವ ದೇವಸ್ಥಾನಕ್ಕೆ ಹೋಗಿದ್ರಿ ಅಂತಾ..ನೆನಪೇ ಇರಲ್ಲ. ಆದರೆ ಸೆಕ್ಸ್ ಸಿನಿಮಾ ನೆನಪಿರುತ್ತೆ. ಅದಕ್ಕೇ ಅದನ್ನ ದೇವ್ರ ಸಿನಿಮಾ ಅನ್ನೋದು...

  ಅಪ್ಪ ಅಮ್ಮನ್ ವೆಡ್ಡಿಂಗ್ ಆನಿವರ್ಸರಿ ಕೇಳ್ನೋಡಿ.. ನೆನಪಿರಲ್ಲ.. ಆದರೆ, ಮೊದಲನೇ ಸರಿ ಯಾವಳ್ ಜೊತೆ ಅಂತಾ ಕೇಳ್ನೋಡಿ..

  ಅತ್ತೆ ಸೊಸೆಯರು ದಿನ ಕಚ್ಚಾಡೋ ಮನೆ ಮುಂದೆ ನಾಯಿಗಳಿವೆ ಎಚ್ಚರಿಕೆ ಅನ್ನೋ ಬೋರ್ಡ್ ಇರಬೇಕು..

  ಒಂದಾ.. ಎರಡಾ.. ಎಂಎಂಸಿಹೆಚ್ ಡೈಲಾಗ್‍ಗಳು ಇರೋದೇ ಹಾಗೆ.. ಡಬ್ಬಲ್ ಮೀನಿಂಗ್, ಸಿಂಗಲ್ ಮೀನಿಂಗ್ ಇಲ್ಲ. ಎಲ್ಲ ಸ್ಟ್ರೈಟ್ ಫಾರ್ವರ್ಡ್. ಇಂಥಾ ಡೈಲಾಗ್‍ಗಳೇ ಎಂಎಂಸಿಹೆಚ್ ಬಗ್ಗೆ ಕ್ರೇಜ್ ಹೆಚ್ಚಿಸಿದೆ. ಇಷ್ಟೆಲ್ಲ ಆಗಿ ಈ ಎಲ್ಲ ಡೈಲಾಗ್ ಹೇಳಿರೋದು ಹುಡುಗೀರೇ ಅನ್ನೋದು ವಿಶೇಷ. ಮೇಘನಾರಾಜ್, ಸಂಯುಕ್ತ ಹೊರನಾಡು, ನಕ್ಷತ್ರ, ದೀಪ್ತಿ, ರಾಗಿಣಿ ದ್ವಿವೇದಿ.. ಹೀರೋ ಯಾರು ಅಂತಾ ಕೇಳಿದ್ರೆ, ಕಥೆ ಅಂತಾರೆ ಮುಸ್ಸಂಜೆ ಮಹೇಶ್.

  ಹಾಗಂತ ಇದು ಹುಡುಗರನ್ನ ಟಾರ್ಗೆಟ್ ಮಾಡಿರೋ ಸಿನಿಮಾ ಅಲ್ವಂತೆ. ಆದರೆ, ಟ್ಯಾಗ್‍ಲೈನ್ ಇರೋದೇ ಹುಡುಗಿಯರಿದ್ದಾರೆ ಎಚ್ಚರಿಕೆ ಅಂತಾ. ಕುತೂಹಲ ತಣಿಯೋಕೆ ತುಂಬಾ ಕಾಯಬೇಕಿಲ್ಲ. ಇನ್ನೊಂದ್ ದಿನ. ಅಷ್ಟೆ..

 • ಎರಡೂ ಕೈ ಸೇರಿದರಷ್ಟೇ ಚಪ್ಪಾಳೆ - ರಾಗಿಣಿ ದ್ವಿವೇದಿ

  ragini talks on casting couch issue

  ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆಯಾ..? ಅಂದರೆ ಅವಕಾಶಗಳಿಗಾಗಿ ಹಾಸಿಗೆ ಹಂಚಿಕೊಳ್ಳುವ ಕೆಟ್ಟ ಸಂಸ್ಕøತಿ. ಇಂಥಾದ್ದೊಂದು ಇತ್ತೀಚೆಗೆ ಹಲವು ನಟನಟಿಯರಿಗೆ ಎದುರಾಗುತ್ತಿದೆ. ಈ ಬಗ್ಗೆ ಈಗ ರಾಗಿಣಿ ದ್ವಿವೇದಿ ಕೂಡಾ ಮಾತನಾಡಿದ್ದಾರೆ. 

  ಇದೊಂದು ಕೆಟ್ಟ ಸಂಸ್ಕøತಿ. ಆದರೆ, ಎರಡೂ ಕೈ ಸೇರಿದರೆ ತಾನೇ ಚಪ್ಪಾಳೆಯಾಗೋದು. ಅಂತಹ ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸಬೇಕು ಅನ್ನೋದ್ರ ಮೇಲೆ ಅದು ನಿಂತಿದೆ. ಕಾಸ್ಟಿಂಗ್ ಕೌಚ್ ಅನ್ನೊದು ಇಬ್ಬರಿಗೂ ಸಂಬಂಧಿಸಿದ್ದು ಎಂದಿದ್ದಾರೆ ರಾಗಿಣಿ.

  ನನಗಂತೂ ನನ್ನ ಕೆರಿಯರ್‍ನಲ್ಲಿ ಅಂತಹ ಅನುಭವ ಆಗಿಲ್ಲ. ನನ್ನ ಕೆರಿಯರ್, ನನ್ನದೇ ಆದ ಸಿದ್ಧಾಂತಗಳ ಪ್ರಕಾರ ನಡೆಯುತ್ತಿದೆ. ಈಗ ನಡೆಯುತ್ತಿರುವ ಚರ್ಚೆ ಸ್ವಾಗತಾರ್ಹ ಎಂದಿದ್ದಾರೆ ರಾಗಿಣಿ.

 • ಎಲ್ಲ ಸಿನಿಮಾ ಎಂಡ್ ಆಗುವ ದೃಶ್ಯದಿಂದಲೇ ಅಧ್ಯಕ್ಷನ ಸ್ಟೋರಿ ಆರಂಭ..!

  adhyaksha in america has different story

  ಬಹುತೇಕ ಸಿನಿಮಾಗಳ ಕ್ಲೈಮಾಕ್ಸ್ ಏನಿರುತ್ತೆ ಹೇಳಿ.. ಆ್ಯಕ್ಷನ್ ಸಿನಿಮಾ ಬಿಟ್ಹಾಕಿ.. ಬೇರೆ ಸಿನಿಮಾಗಳ ವಿಚಾರಕ್ಕೆ ಬಂದರೆ ಹೀರೋ-ಹೀರೋಯಿನ್ ಮದುವೆಯ ದೃಶ್ಯ. ನಾಯಕ, ನಾಯಕಿಗೆ ತಾಳಿ ಕಟ್ಟಿದರೆ ಸಿನಿಮಾ ಶುಭಂ. ಆದರೆ, ಅಧ್ಯಕ್ಷ ಇನ್ ಅಮೆರಿಕ ಸಿನಿಮಾ ಶುರುವಾಗುವುದೇ ಮದುವೆಯಿಂದ.

  ಶರಣ್ ಕಾಮಿಡಿಗೆ ಕಿಂಗ್. ಆದರೆ ರಾಗಿಣಿಗೆ ಇದು ಮೊದಲ ಕಾಮಿಡಿ ಸಿನಿಮಾ. ಚಿತ್ರದ ಬಹುತೇಕ ಶೂಟಿಂಗ್ ಅಮೆರಿಕದಲ್ಲಿಯೇ ಆಗಿದೆ. ಗಂಡ-ಹೆಂಡತಿ ಸಂಬಂಧದ ಕಥೆಯನ್ನು ಕಾಮಿಡಿಯಾಗಿ ಹೇಳಿದ್ದಾರೆ ನಿರ್ದೇಶಕ ಯೋಗಾನಂದ್. ಚಿತ್ರಕ್ಕೆ ವಿಶ್ವಪ್ರಸಾದ್, ವಿವೇಕ್ ನಿರ್ಮಾಪಕರು.