ಸರ್ಕಾರಿ ಶಾಲೆಗಳೆಂದರೆ ಬೋರ್ಡಿಲ್ಲ, ಬೆಂಚ್ ಇಲ್ಲ, ರೂಮ್ ಇಲ್ಲ, ಟಾಯ್ಲೆಟ್ ಇಲ್ಲ, ಮೇಷ್ಟ್ರೇ ಇಲ್ಲ.. ಹೀಗೆ ತರಹೇವಾರಿ ಪ್ರಾಬ್ಲಮ್ಮುಗಳಿರುತ್ವೆ. ಹೀಗಾಗಿಯೇ ಸರ್ಕಾರಿ ಶಾಲೆಗಳಿಗೆ ಮಕ್ಕಳ ಸೇರ್ಪಡೆ ಕಡಿಮೆಯಾಗುತ್ತಲೇ ಹೋಗುತ್ತಿದೆ. ಹೀಗಿರುವಾಗಲೇ ರಾಗಿಣಿ, ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದ್ದಾರೆ.
ಸ್ನೇಹಿತರ ಜೊತೆ ಸೇರಿಕೊಂಡು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೆಲಸ ಮಾಡಲು ಮುಂದಾಗಿದ್ದಾರೆ. ಕಟ್ಟಡ ನಿರ್ಮಾಣ, ಪೀಠೋಪಕರಣ ಒದಗಿಸುವುದಕ್ಕೆ ಸ್ನೇಹಿತರ ಜೊತೆ ಸೇರಿಕೊಂಡು ಆಂದೋಲನ ಶುರು ಮಾಡುತ್ತಿದ್ದಾರೆ. ಸ್ನೇಹಿತ ಅನಿಲ್ ಶೆಟ್ಟಿ, ರಾಗಿಣಿ ಜೊತೆಗೆ ಕೈ ಜೋಡಿಸಿದ್ದಾರೆ.
ಮೊದಲು ತಮ್ಮ ಶಕ್ತ್ಯಾನುಸಾರ ಕೆಲಸ ಮಾಡುವುದು ಜೊತೆ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ನಟರು, ಸೆಲಬ್ರಿಟಿಗಳನ್ನು ಆಯಾ ಶಾಲೆಗೇ ಕರೆದುಕೊಂಡು ಹೋಗಿ, ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಪ್ರೇರೇಪಿಸುವುದು ಮತ್ತು ಕಲಾವಿದರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವಂತೆ ಮಾಡುವುದು ರಾಗಿಣಿಯವರ ಉದ್ದೇಶ.
ಹೀಗೆ ಕೆಲಸ ಮಾಡುತ್ತಲೇ ಸರ್ಕಾರಕ್ಕೆ ಶಿಕ್ಷಣ ನೀತಿ ರೂಪಿಸುವ, ಬದಲಾವಣೆ ತರುವ ಕುರಿತಂತೆ ಸಲಹೆ ನೀಡುವುದು ರಾಗಿಣಿಯವರ ಯೋಜನೆ. ರಾಗಿಣಿ ಕನಸು, ಗುರಿ ಯಶಸ್ವಿಯಾಗಲಿ.