` ragini dwivedi, - chitraloka.com | Kannada Movie News, Reviews | Image

ragini dwivedi,

  • ಬೆಂಗಳೂರು ಸರಣಿ ಸ್ಫೋಟದ ಸುತ್ತ ಟೆರರಿಸ್ಟ್..

    the terrorist has drawn its inspiration from bangalore bomb blast

    2009ರಲ್ಲಿ ಬೆಂಗಳೂರಿನಲ್ಲಿ ಮೊತ್ತ ಮೊದಲ ಬಾರಿಗೆ ಸರಣಿ ಸ್ಫೋಟ ಸಂಭವಿಸಿದ್ದವು. 2009-09 ಒಂದು ರೀತಿಯಲ್ಲಿ ಭಾರತಕ್ಕೆ ಭಯೋತ್ಪಾದನೆಯ ವರ್ಷ ಎಂದೇ ಹೇಳಬೇಕು. ಆ ವರ್ಷ, ಅಲಹಾಬಾದ್, ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಮುಂಬೈ, ದೆಹಲಿ, ಹೈದರಾಬಾದ್.. ಹೀಗೆ ಹಲವೆಡೆ ಸರಣಿ ಸ್ಫೋಟ ಸಂಭವಿಸಿದ್ದವು. 

    ಆಗ ಬೆಂಗಳೂರಿನಲ್ಲೂ ಗೋಪಾಲನ್ ಮಾಲ್, ಮಡಿವಾಳ, ನಾಯಂಡಹಳ್ಳಿ, ಪಂತರಪಾಳ್ಯ, ಅಡುಗೋಡಿ, ಕೋರಮಂಗಲದ ಈಗಲ್ ಸ್ಟ್ರೀಟ್, ಮಲ್ಯ ಆಸ್ಪತ್ರೆ, ಲಾಂಗ್‍ಫೋರ್ಡ್ ರಸ್ತೆ, ಸೇಂಟ್‍ಜಾನ್ ಆಸ್ಪತ್ರೆ ಬಸ್ ನಿಲ್ದಾಣ.. ಹೀಗೆ ಹಲವೆಡೆ ಬಾಂಬ್ ಸ್ಫೋಟಿಸಿದ್ದವು. ಇಬ್ಬರು ಮೃತಪಟ್ಟಿದ್ದರು. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆ ಪ್ರಕರಣದ ಸುತ್ತಲೇ ಹೆಣೆದಿರುವ ಕಥೆ ದಿ ಟೆರರಿಸ್ಟ್.

    ಸಿನಿಮಾದಲ್ಲಿ ರಾಗಿಣಿಯದ್ದು ರೇಷ್ಮಾ ಎನ್ನುವ ಮುಸ್ಲಿಂ ಹುಡುಗಿಯ ಪಾತ್ರ. ಇತ್ತೀಚೆಗೆ ಕನ್ನಡದಲ್ಲಿ ವಿಭಿನ್ನ ಪ್ರಯತ್ನಗಳಿಗೆ ಸಿಗುತ್ತಿರುವ ಪ್ರೋತ್ಸಾಹವೇ ಈ ಚಿತ್ರ ನಿರ್ದೇಶಿಸಲು ಪ್ರೇರಣೆ ನೀಡಿತು ಎಂದು ಹೇಳಿಕೊಂಡಿದ್ದಾರೆ ನಿರ್ದೇಶಕ ಪಿ.ಸಿ.ಶೇಖರ್.

    ಮುಗ್ದ ಯುವತಿಯೊಬ್ಬಳು, ಸೇಡು ತೀರಿಸಿಕೊಳ್ಳುವ ಹುಡುಗಿಯಾಗಿ ಬದಲಾಗುತ್ತಾಳೆ. ಬಾಂಬ್ ಸ್ಫೋಟದ ತನಿಖೆ, ತಿರುವುಗಳನ್ನು ಭಾವನೆಗಳ ಮೂಲಕವೇ ಕಟ್ಟಿಕೊಡಲಾಗಿದೆ ಎಂದಿದ್ದಾರೆ ಶೇಖರ್. ಸಿನಿಮಾ ಅಕ್ಟೋಬರ್ 18ರಂದು ರಿಲೀಸ್ ಆಗುತ್ತಿದೆ.

  • ಭಯೋತ್ಪಾದಕಿಯಾಗಿ ಝುಂ ಝುಂ ರಾಗಿ 

    ragini's terrorist first look

    ಝುಂ ಝುಂ ಮಾಯಾ ಎನ್ನುತ್ತಾ ಬೆಳ್ಳಿತೆರೆಗೆ ಕಾಲಿಟ್ಟ ರಾಗಿಣಿ, ಈಗ ಭಯೋತ್ಪಾದಕಿಯಾಗಿದ್ದಾರೆ. ರಾಗಿಣಿ ಅಭಿನಯದ ಟೆರರಿಸ್ಟ್ ಸಿನಿಮಾ, ಈಗ ರಿಲೀಸ್‍ಗೆ ರೆಡಿ. ತಲೆ ತುಂಬಾ ಸ್ಕಾರ್ಫ್ ಸುತ್ತಿಕೊಂಡಿರುವ ರಾಗಿಣಿ ಪಾತ್ರದ ಹೆಸರು ರೇಷ್ಮಾ. ಮುಸ್ಲಿಂ ಕುಟುಂಬವೊಂದರ ಹಿರಿಯ ಮಗಳಾಗಿ ನಟಿಸಿದ್ದಾರೆ.

    ಒಂದು ಬಾಂಬ್ ಬ್ಲಾಸ್ಟ್ ಹಾಗೂ ಅದರ ಸುತ್ತ ನಡೆಯುವ ಘಟನಾವಳಿಗಳೇ ಚಿತ್ರದ ಕಥಾವಸ್ತು. 

    ಚಿತ್ರದಲ್ಲಿ ರಾಗಿಣಿಗೆ ಮಾತುಗಳೇ ಕಡಿಮೆಯಂತೆ. ಪಿ.ಸಿ.ಶೇಖರ್ ನಿರ್ದೇಶನದ ಚಿತ್ರದ ಬಗ್ಗೆ ರಾಗಿಣಿ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದಲ್ಲೊಂದು ಮೆಸೇಜ್ ಇದೆ. ಶಾಂತಿಯೇ ಪ್ರದಾನ ಎಂಬುದು ಚಿತ್ರದ ಕಥೆಯ ತಿರುಳು.

  • ಮಂಜುನಾಥನ ಸನ್ನಿಧಿಯಲ್ಲಿ ಅಮೆರಿಕದ ಅಧ್ಯಕ್ಷ ಸಿಕ್ಕಿಬಿಟ್ಟ..!

    adhyaksha in america

    ಅಧ್ಯಕ್ಷ ಇನ್ ಅಮೆರಿಕ. ಬಿಡುಗಡೆಗೆ ರೆಡಿಯಾಗಿರುವ ಈ ಸಿನಿಮಾ ನಿರ್ದೇಶಕ ಯೋಗಾನಂದ್. ಚಿತ್ರರಂಗಕ್ಕೆ ಹೊಸಬರೇನಲ್ಲ. ಸ್ಟೈಲಿಷ್ ನಿರ್ದೇಶಕ ಹರ್ಷ ಜೊತೆ ಎಲ್ಲ ಚಿತ್ರಗಳಿಗೂ ಕೆಲಸ ಮಾಡಿರುವ ಯೋಗಾನಂದ್‍ಗೆ ಈ ಚಿತ್ರದ ಆಫರ್ ಸಿಕ್ಕಿದ್ದು ಧರ್ಮಸ್ಥಳದಲ್ಲಂತೆ. ಮಂಜುನಾಥನ ಸನ್ನಿಧಿಯಲ್ಲಿ ದರ್ಶನಕ್ಕೆ ನಿಂತಿದ್ದಾಗ ಫೋನ್ ಬಂತು. ಈ ಚಿತ್ರವನ್ನು ನೀವೇ ನಿರ್ದೇಶಿಸಬೇಕು ಎಂಬ ಆಫರ್ ಇತ್ತು. ಮಂಜುನಾಥ ಕಣ್ತೆರೆದಿದ್ದ ಎನ್ನುತ್ತಾರೆ ಯೋಗಾನಂದ್.

    ಶರಣ್ ಅಧ್ಯಕ್ಷನಾಗಿದ್ದರೆ, ಜೋಡಿಯಾಗಿರುವುದು ರಾಗಿಣಿ ದ್ವಿವೇದಿ. ಈ ಹಿಂದೆ ಶರಣ್‍ರ ಎರಡು ಚಿತ್ರಗಳಲ್ಲಿ ಸ್ಪೆಷಲ್ ಸಾಂಗುಗಳಿಗೆ ಕುಣಿದು ಕುಪ್ಪಳಿಸಿದ್ದ ರಾಗಿಣಿ, ಈ ಚಿತ್ರದಲ್ಲಿ ಶರಣ್‍ಗೇ ಹೀರೋಯಿನ್. 

    ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿದ್ದಾರಂತೆ ರಾಗಿಣಿ. ಶರಣ್ ಮತ್ತು ರಾಗಿಣಿ ಡ್ಯಾನ್ಸ್ ಕೂಡಾ ಬೊಂಬಾಟ್ ಆಗಿವೆಯಂತೆ. ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ನಗೋಕೆ ನೀವು ರೆಡಿಯಾಗಿ.

  • ಮನೆ ಸೇಲ್ ಆಗಲಿಲ್ಲ.. ಕಾರುಗಳ ಮಾರಾಟಕ್ಕೆ ಮುಂದಾದ ರಾಗಿಣಿ ಅಪ್ಪ ಅಮ್ಮ

    Ragini Family Ready To Sell Cars

    ಡ್ರಗ್ಸ್ ಕೇಸ್‍ನಲ್ಲಿ ಜೈಲಲ್ಲಿರೋ ನಟಿ ರಾಗಿಣಿ ಕುಟುಂಬ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಹಾಗಿದೆ. ಕಾನೂನು ಹೋರಾಟಕ್ಕೂ ಹಣವಿಲ್ಲದೆ ಪರದಾಡುತ್ತಿರೋ ರಾಗಿಣಿ ಪೋಷಕರು, ಆರಂಭದಲ್ಲಿಯೇ ಫ್ಲಾಟ್ ಮಾರಾಟಕ್ಕೆ ಮುಂದಾಗಿದ್ದರು. ಆದರೆ ಯಲಹಂಕದಲ್ಲಿರೋ ಫ್ಲಾಟ್ ಖರೀದಿಸಲು ಯಾರೂ ಬರಲಿಲ್ಲ. ಹೀಗಾಗಿ ಈಗ ತಮ್ಮ ಕಾರುಗಳ ಮಾರಾಟಕ್ಕೆ ಮುಂದಾಗಿದ್ದಾರೆ.

    ರಾಗಿಣಿ ಬಳಿ ಒಂದು ಇನ್ನೋವಾ ಮತ್ತು ಇನ್ನೊಂದು ಎಸ್‍ಎಕ್ಸ್4 ಕಾರುಗಳಿವೆ. ಇನ್ನೋವಾಗೆ 9 ಲಕ್ಷ ಹಾಗೂ ಇನ್ನೊಂದು ಕಾರಿಗೆ 3 ಲಕ್ಷ ರೂ. ಫಿಕ್ಸ್ ಮಾಡಿ ಕಾರುಗಳ ಮಾರಾಟಕ್ಕೆ ಮುಂದಾಗಿದ್ದಾರೆ ರಾಗಿಣಿ ಹೆತ್ತವರು.

  • ಮಲ್ಲು ಚಿತ್ರಕ್ಕೆ ರಾಗಿಣಿ ದ್ವಿವೇದಿ

    ಮಲ್ಲು ಚಿತ್ರಕ್ಕೆ ರಾಗಿಣಿ ದ್ವಿವೇದಿ

    ರಾಗಿಣಿ ದ್ವಿವೇದಿ ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರೆ. ಚಿತ್ರದ ಟೈಟಲ್ ಶೀಲಾ. ಈ ಚಿತ್ರ ಎರಡು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಮಲಯಾಳಂ ಮತ್ತು ಕನ್ನಡ ಎರಡರಲ್ಲೂ ರಾಗಿಣಿಯೇ ನಾಯಕಿ. ರಾಗಿಣಿಗೆ ಮಲಯಾಳಂ ಚಿತ್ರರಂಗ ಹೊಸದಲ್ಲ. ಈ ಹಿಂದೆ ಕೆಲ ಚಿತ್ರಗಳಲ್ಲಿ ನಟಿಸಿರೋ ರಾಗಿಣಿ, ಈ ಬಾರಿ ಶೀಲಾ ಚಿತ್ರಕ್ಕೆ ಓಕೆ ಎಂದಿದ್ದಾರೆ.

    ಶೀಲಾ ಪಾತ್ರವನ್ನೇ ನಾನು ಮಾಡುತ್ತಿರೋದು. ಆಕೆ ಒಬ್ಬ ವಿಧವೆ. ಬೋಲ್ಡ್. ಒರಟುತನ ಎಲ್ಲವೂ ಇರೋ ಪಾತ್ರವದು. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇದೆ ಎಂದಿದ್ದಾರೆ ರಾಗಿಣಿ.

    ಮಲಯಾಳಂನ ಖ್ಯಾತ ನಿರ್ದೇಶಕ ಬಾಲು ನಾರಾಯಣ್ ಶೀಲಾ ಚಿತ್ರದ ಡೈರೆಕ್ಟರ್. ಕೇರಳದ ಸುಮಾರು 200 ವರ್ಷ ಹಳೆಯ ಕಾಫಿ ಎಸ್ಟೇಟ್‍ನಲ್ಲಿ ಚಿತ್ರೀಕರಣ ಶುರುವಾಗಿದೆ.

  • ಮೈಂಡ್ ಗೇಮ್ ಚಿತ್ರಕ್ಕೆ ರಾಗಿಣಿ ಹೀರೋಯಿನ್

    ಮೈಂಡ್ ಗೇಮ್ ಚಿತ್ರಕ್ಕೆ ರಾಗಿಣಿ ಹೀರೋಯಿನ್

    ರಾಗಿಣಿ ದ್ವಿವೇದಿ ಮತ್ತೊಂದು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಡಿ. 16 ರಂದು ರಿಲೀಸ್ಆಗುತ್ತಿರೋ ಟಶಂಭೋ ಶಿವ ಶಂಕರಟ ಚಿತ್ರದ ನಿರ್ದೇಶಕರ ಹೊಸ ಚಿತ್ರವಿದು. ಟೈಟಲ್ ಬಿಂಗೋ. ಶಂಕರ್ ಕೋನಮಾನಹಳ್ಳಿ ನಿರ್ದೇಶನದ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರೋದು ರಾಗಿಣಿ. ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಂತೆ.

    ಬಿಂಗೊ ಎಂದರೆ ಹಲವು ಅರ್ಥಗಳಿವೆ. ನಾವು ಅರ್ಥವನ್ನೇನೂ ಹೇಳುವುದಿಲ್ಲ. ಅದನ್ನ ಪ್ರೇಕ್ಷಕರ ನಿರ್ಧಾರಕ್ಕೇ ಬಿಡುತ್ತೇವೆ. ಇದು ಮೈಂಡ್ ಗೇಮ್ ಚಿತ್ರ ಎಂದಿದ್ದಾರೆ ನಿರ್ದೇಶಕ ಶಂಕರ್ ಕೋನಮಾನಹಳ್ಳಿ.

    ಟಿವಿ ಧಾರಾವಾಹಿಗಳಿಂದ ಖ್ಯಾತರಾಗಿರುವ ಆರ್. ಕೆ. ಚಂದನ್  ಚಿತ್ರದ ಹೀರೋ. ಚಂದನ್ ಅವರಿಗೆ ಇದು ಪ್ರಥಮ ಸಿನಿಮಾ. ರಕ್ಷಾ ನಿಂಬರ್ಗಿ, ರಾಜೇಶ್ ನಟರಂಗ, ಮಜಾ ಟಾಕೀಸ್ ಪವನ್, ಮುರಳಿ ಪೂರ್ವಿಕ್, ಅಪೂರ್ವ, ಆಶಾ ಸುಜಯ್, ಶ್ರವಣ್, ವಿದ್ಯಾ, ಕುಮಾರ್ ಮುಂತಾದವರು ತಾರಾಗಣದಲ್ಲಿದ್ದಾರೆ.  ಪುನೀತ್ ಹಾಗೂ ಆರ್. ಪರಾಂಕುಶ್ ನಿರ್ಮಾಪಕರು. ಸಂಗೀತ ನಿರ್ದೇಶನ ಹಿತನ್ ಹಾಸನ್ ಅವರದ್ದು.

  • ರಾಗಿಣಿ `ದಿ ಟೆರರಿಸ್ಟ್' ಪ್ರಾಬ್ಲಂ..!

    ragini will be terror next

    ನಟಿ ರಾಗಿಣಿ ದ್ವಿವೇದಿ ಟೆರರಿಸ್ಟ್ ಆಗುತ್ತಿದ್ದಾರೆ. ಕನ್‍ಫ್ಯೂಸ್ ಏನೂ ಆಗಬೇಡಿ. ಇದು ಅವರ ಅಭಿನಯದ ಹೊಸ ಚಿತ್ರದ ಟೈಟಲ್. ಪಿ.ಸಿ. ಶೇಖರ್ ನಿರ್ದೇಶನದ, ರಾಗಿಣಿ ನಟಿಸಲಿರುವ ಚಿತ್ರಕ್ಕೆ ಶೇಖರ್ ದಿ ಟೆರರಿಸ್ಟ್ ಅನ್ನೋ ಟೈಟಲ್ ಇಟ್ಟಿದ್ದಾರೆ.

    ಚಿತ್ರದ ಟೈಟಲ್ ಲಾಂಚ್ ಮಾಡೋಕೆ ಸಾಧ್ಯವಾಗುತ್ತಿಲ್ಲ. ಏಕೆಂದರೆ, ಈ ಪದವನ್ನೇ ಫೇಸ್‍ಬುಕ್ ಹಾಗೂ ಟ್ವಿಟರ್‍ನಲ್ಲಿ ಬ್ಲಾಕ್ ಮಾಡಲಾಗಿದೆ. ಅದನ್ನು ಟೈಟಲ್ ರೀತಿ ತೋರಿಸಿದರೆ, ಎಫ್‍ಬಿ ಮತ್ತು ಟ್ವಿಟರ್ ತಿರಸ್ಕರಿಸುತ್ತಿವೆ ಎಂದಿದ್ದಾರೆ ಶೇಖರ್. ಇಷ್ಟಿದ್ದರೂ, ಚಿತ್ರಕ್ಕೆ ಇದೇ ಶೀರ್ಷಿಕೆ ಬೇಕಿತ್ತು ಎಂದಿದ್ದಾರೆ ಶೇಖರ್.

    ಚಿತ್ರದ ಟೈಟಲ್ ಉಮೇಶ್ ಬಣಕಾರ್ ಅವರ ಬಳಿ ಇತ್ತಂತೆ. ಅವರಿಂದ ಎನ್‍ಓಸಿ ಪಡೆದು ಈ ಚಿತ್ರದ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇನೆ ಎಂದಿದ್ಧಾರೆ ಶೇಖರ್.

     

  • ರಾಗಿಣಿ ಅರೆಸ್ಟ್ : ಬಿಜೆಪಿಗೇ ಬಿಸಿ ಬಿಸಿ ತುಪ್ಪ..!

     Ragini's Arrest Puts Fire Amongst BJP Leaders Heart

    ನಟಿ ರಾಗಿಣಿ ಡ್ರಗ್ಸ್ ಕೇಸ್‍ನಲ್ಲಿ ಅರೆಸ್ಟ್ ಆಗಿದ್ದಾರೆ. ಸಿಸಿಬಿ ಪೊಲೀಸರ ಎದುರು ಡ್ರಗ್ಸ್ ಆರೋಪ ಒಪ್ಪಿಕೊಂಡಿಲ್ಲವಾದರೂ, ಸಾಂದರ್ಭಿಕ ಸಾಕ್ಷ್ಯಗಳನ್ನಾಧರಿಸಿ ಕಸ್ಟಡಿಗೆ ಪಡೆದಿದೆ ಸಿಸಿಬಿ. ವಿಶೇಷ ಅಂದ್ರೆ ರಾಗಿಣಿ ಬಂಧನ ಬಿಜೆಪಿಗೇ ಬಿಸಿ ಬಿಸಿ ತುಪ್ಪವಾಗಿರೋದು. ಕಾರಣ ಇಷ್ಟೆ.. ರಾಗಿಣಿ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದರು.

    2019ರಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದ ರಾಗಿಣಿ, ಸ್ಟಾರ್ ಪ್ರಚಾರಕಿಯಾಗಿದ್ದರು. ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಬಿಎಸ್‍ವೈ ಪುತ್ರ ವಿಜಯೇಂದ್ರ ಸೇರಿದಂತೆ ಹಲವು ನಾಯಕರ  ಜೊತೆಯಲ್ಲಿ ಪ್ರಚಾರ ಮಾಡಿದ್ದ ರಾಗಿಣಿ, ಈಗ ಬಿಜೆಪಿಗೆ ಬಿಸಿ ಬಿಸಿ ತುಪ್ಪವಾಗಿಬಿಟ್ಟಿದ್ದಾರೆ.

    ಇನ್ನು ಈ ಪ್ರಕರಣದಲ್ಲಿ ಬಂಧಿತನಾಗಿರೋ ಕಾರ್ತಿಕ್ ಗೌಡ ಕೂಡಾ ಬಿಜೆಪಿ ಮುಖಂಡ ಎನ್ನಲಾಗಿದೆ. ಅಷ್ಟೇ ಅಲ್ಲ, ನಟಿ ಸಂಜನಾ ಕೂಡಾ ಈಗ ಸಚಿವರಾಗಿರೋ ಡಾ.ಸುಧಾಕರ್ ಪರ ಪ್ರಚಾರ ಮಾಡಿದ್ದವರೇ. ಒಟ್ಟಿನಲ್ಲಿ ಡ್ರಗ್ಸ್ ಕೇಸ್, ಬಿಜೆಪಿ ನಾಯಕರಿಗೆ ಇರಿಸು ಮುರಿಸು ತರುತ್ತಿದೆ. 

  • ರಾಗಿಣಿ ಟೆರರಿಸ್ಟ್ ಅಲ್ಲವಂತೆ..!

    ragini is not a terrorist in the terrorist

    ರಾಗಿಣಿ ದ್ವಿವೇದಿ. ಮಾಸ್ ಹುಡುಗಿ. ಗ್ಲಾಮರ್ ಬೆಡಗಿ. ಒಳ್ಳೆಯ ನಟಿ. ಆದರೆ, ಇದುವರೆಗೆ ನಟಿಸಿದ್ದೆಲ್ಲ ಪಕ್ಕಾ ಕಮರ್ಷಿಯಲ್ ಚಿತ್ರಗಳಲ್ಲಿ. ಇದೇ ಮೊದಲ ಬಾರಿಗೆ ಕಮರ್ಷಿಯಲ್ ಹಾಗೂ ಆರ್ಟ್ ಸಿನಿಮಾದ ಹಾಗಿರುವ ಬ್ರಿಡ್ಜ್ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಟೆರರಿಸ್ಟ್ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಚಿತ್ರದ ಪ್ರಧಾನ ಆಕರ್ಷಣೆ ರಾಗಿಣಿ.

    ಸಿನಿಮಾದಲ್ಲಿ ರಾಗಿಣಿಯದ್ದು ರೇಷ್ಮಾ ಅನ್ನೋ ಮುಸ್ಲಿಂ ಹುಡುಗಿಯ ಪಾತ್ರ. ಹಾಗಂತ ಆಕೆ ಟೆರರಿಸ್ಟ್ ಅಲ್ಲ. ಭಯೋತ್ಪಾದನೆ ಸಬ್ಜೆಕ್ಟ್ ಇದ್ದರೂ, ಅದು ಯಾವುದೇ ಧರ್ಮಕ್ಕೆ ಕನೆಕ್ಟ್ ಆಗುವುದಿಲ್ಲ. ರೇಷ್ಮಾ ಎನ್ನುವವಳು ಚಿತ್ರದಲ್ಲಿ ಮುಗ್ಧ ಹುಡುಗಿ. 

    ಇಲ್ಲಿ ರೇಷ್ಮಾ ಅಮಾಯಕಿಯಾ..? ವ್ಯವಸ್ಥೆ ವಿರುದ್ಧ ಸಿಡಿದೇಳುತ್ತಾಳಾ..? ಈ ಎಲ್ಲದಕ್ಕೂ ಉತ್ತರ ಬೇಕೆಂದರೆ ನೀವು ಸಿನಿಮಾವನ್ನೇ ನೋಡಬೇಕು ಅಂತಾರೆ ರಾಗಿಣಿ.

    ಪಿ.ಸಿ.ಶೇಖರ್ ನಿರ್ದೇಶನದ ಸಿನಿಮಾ ಇದೇ 18ನೇ ತಾರೀಕು ತೆರೆ ಕಾಣುತ್ತಿದೆ.

  • ರಾಗಿಣಿ ತಂಗಿ ಟೆರರಿಸ್ಟ್ ಕಥೆ..!

    ragini gets new sister in the villain

    ರಾಗಿಣಿ ದ್ವಿವೇದಿ ಅಭಿನಯದ, ಪಿ.ಸಿ.ಶೇಖರ್ ನಿರ್ದೇಶನದ ಸಿನಿಮಾ ಟೆರರಿಸ್ಟ್. ಮುಂದಿನ ವಾರ ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ರಾಗಿಣಿಯವರದ್ದು, ಮುಸ್ಲಿಂ ಹುಡುಗಿ ರೇಷ್ಮಾ ಎಂಬ ಹೆಸರಿನ ಪಾತ್ರ. ಭಯೋತ್ಪಾದನೆಯ ಹಿನ್ನೆಲೆ ಹೊಂದಿರುವ ಚಿತ್ರದಲ್ಲಿ ರಾಗಿಣಿಗೊಬ್ಬ ತಂಗಿಯಿದ್ದಾರೆ. ಮೀನಾಕ್ಷಿ. 

    ಮೀನಾಕ್ಷಿ ಎಂದರೆ ಯಾರು ಎಂಬ ಪ್ರಶ್ನೆ ಮೂಡೋದು ಸಹಜ. ಮೀನಾಕ್ಷಿ ಮದುವೆ ಧಾರಾವಾಹಿ ನೆನಪಿಸಿಕೊಂಡರೆ, ಮೀನಾಕ್ಷಿ ಥಟ್ಟಂತ ನೆನಪಾಗ್ತಾರೆ. ಇದು ಅವರಿಗೆ ಮೊದಲ ಸಿನಿಮಾ. 

    ರಾಗಿಣಿ ಜೊತೆ ನಟಿಸಬೇಕು ಎಂದಾಗ ಮೊದ ಮೊದಲು ಆತಂಕವಾಗಿದ್ದು ನಿಜ. ಆದರೆ, ಈಗ ಅವರು ನನಗೆ ಸೋದರಿಯೇ ಆಗಿಬಿಟ್ಟಿದ್ದಾರೆ. ಚಿತ್ರದಲ್ಲಿ ನನ್ನದು ಪಟಪಟಾಂತ ಮಾತನಾಡುವ ಹುಡುಗಿಯ ಪಾತ್ರ. ನನಗೆ ಹಲವಾರು ಮುಸ್ಲಿಂ ಗೆಳತಿಯರಿದ್ದಾರೆ. ಹೀಗಾಗಿ ಚಿತ್ರದಲ್ಲಿ ನಟಿಸುವುದು ಕಷ್ಟವೇನೂ ಆಗಲಿಲ್ಲ ಎಂದು ಹೇಳಿಕೊಂಡಿದ್ದಾರೆ ಮೀನಾಕ್ಷಿ.

  • ರಾಗಿಣಿ ದ್ವಿವೇದಿ ಈಗ ಪೊಲೀಸ್ ಆಫೀಸರ್..!

    ರಾಗಿಣಿ ದ್ವಿವೇದಿ ಈಗ ಪೊಲೀಸ್ ಆಫೀಸರ್..!

    ನಟಿ ರಾಗಿಣಿ ದ್ವಿವೇದಿ ಈಗ ಪೊಲೀಸ್ ಆಫೀಸರ್ ಆಗಿದ್ದಾರೆ. ಅವರಿಗೆ ಪೊಲೀಸ್ ಆಗುವುದು ಹೊಸದೇನಲ್ಲ. ಈ ಹಿಂದೆ ತಮ್ಮದೇ ಹೆಸರಿನ ಚಿತ್ರದಲ್ಲಿ ಐಪಿಎಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದವರು ರಾಗಿಣಿ. ಈಗ ಮತ್ತೊಮ್ಮೆ ಜಾನಿ ವಾಕರ್ ಅನ್ನೋ ಸಿನಿಮಾದಲ್ಲಿ ಇನ್ವೆಸ್ಟಿಗೇಷನ್ ಆಫೀಸರ್ ಆಗುತ್ತಿದ್ದಾರೆ ರಾಗಿಣಿ.

    ಡ್ರಗ್ಸ್ ದಂಧೆ ಆರೋಪದಲ್ಲಿ ಜೈಲು ವಾಸ ಮುಗಿಸಿ ಬಂದ ಮೇಲೆ ರಾಗಿಣಿ ನಟಿಸುತ್ತಿರುವ 2ನೇ ಸಿನಿಮಾ ಜಾನಿ ವಾಕರ್. ಈ ಮೊದಲು ಕರ್ವ 3ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದ ರಾಗಿಣಿ, ಈಗ ವೇದಿಕ್ ವೀರ್ ಅವರಿಗೆ ಓಕೆ ಎಂದಿದ್ದಾರೆ. ಜಾನಿ ವಾಕರ್ ನಿರ್ದೇಶಕ ವೇದಿಕ್ ವೀರ್, ಈ ಹಿಂದೆ ಮಫ್ತಿ ಚಿತ್ರದಲ್ಲಿ ಕೆಲಸ ಮಾಡಿದ್ದವರು. ಜಾನಿ ವಾಕರ್ ಮೂಲಕ ಡೈರೆಕ್ಟರ್ ಆಗುತ್ತಿದ್ಧಾರೆ.

    ನನಗೆ ಇದು ಹೊಸ ಪಾತ್ರ. ಇದರಲ್ಲಿ ನಾನು ಇಂಡಿಯನ್ ಮತ್ತು ವೆಸ್ಟರ್ನ್ ಎರಡೂ ಸ್ಟೈಲ್ ಡ್ರೆಸ್ನಲ್ಲಿದ್ದೇನೆ. ನನ್ನ ಬಾಡಿ ಲಾಂಗ್ವೇಜ್ ಹೊಸದು. ನನ್ನ ಪಾತ್ರವೂ ಡೆವಲಪ್ ಆಗುತ್ತಾ ಆಗುತ್ತಾ.. ಕಥೆ ಓಪನ್ ಆಗುತ್ತದೆ. ಇಂತಹ ಸವಾಲಿನ ಪಾತ್ರಗಳಿಗೆ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ ರಾಗಿಣಿ.

  • ರಾಗಿಣಿ ನಿವಾಸದಲ್ಲಿ ಸಿಸಿಬಿ ರೈಡ್

    ccb raids ragini's house

    ಡ್ರಗ್ಸ್ ಕೇಸ್‍ಗೆ ಸಂಬಂಧಪಟ್ಟಂತೆ ನಟಿ ರಾಗಿಣಿ ನಿವಾಸದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಬೆಳಗ್ಗೆ 6.30ರ ಸುಮಾರಿಗೆ ಸಿಸಿಬಿ ಅಧಿಕಾರಿಗಳ ತಂಡ ಯಲಹಂಕದಲ್ಲಿರೋ ರಾಗಿಣಿ ನಿವಾಸದ ಮೇಲೆ ರೈಡ್ ಮಾಡಿದೆ. ಅರೆಸ್ಟ್ ಆಗಿರುವ ರಾಗಿಣಿ ಆಪ್ತ ರವಿಶಂಕರ್ ನೀಡಿರುವ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ ಎನ್ನಲಾಗಿದೆ.

    ಮೊನ್ನೆ ರಾತ್ರಿ ರಾಗಿಣಿ ಆಪ್ತ ರವಿಶಂಕರ್‍ನನ್ನು ಅರೆಸ್ಟ್ ಮಾಡಲಾಗಿತ್ತು. ಆತ ಡ್ರಗ್ಸ್ ಪೆಡ್ಲರ್ ಎನ್ನಲಾಗಿದ್ದು, ಆತ ನೀಡುತ್ತಿರು ಮಾಹಿತಿ ಸ್ವತಃ ಪೊಲೀಸರನ್ನೂ ಬೆಚ್ಚಿ ಬೀಳಿಸಿದೆ. ಮತ್ತೊಂದೆಡೆ ನಟಿ ಸಂಜನಾ ಗಲ್ರಾನಿ ಅವರ ಆಪ್ತ ರಾಹುಲ್ ಮತ್ತು ಶರ್ಮಿಳಾ ಮಾಂಡ್ರೆ ಅವರ ಆಪ್ತ ಗೆಳೆಯ ಕಾರ್ತಿಕ್ ರಾಜ್‍ನನ್ನು ವಶಕ್ಕೆ ಪಡೆಯಲಾಗಿದೆ. ರಾಗಿಣಿ ಆಪ್ತ ರವಿಶಂಕರ್‍ನನ್ನು ಮಾತ್ರವೇ ಅರೆಸ್ಟ್ ಮಾಡಲಾಗಿದೆ.

    ರಾಗಿಣಿಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗದೇ ಇದ್ದರೆ ಅರೆಸ್ಟ್ ಮಾಡುವ ಸಾಧ್ಯತೆಗಳೂ ಇವೆ.

  • ರಾಗಿಣಿ ಮನೆ ಮಾರಾಟಕ್ಕಿದೆ..!

    actress ragini's house on sale

    ಡ್ರಗ್ಸ್ ಕೇಸಿನಲ್ಲಿ ಜೈಲು ಸೇರಿರೋ ರಾಗಿಣಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರಾ..? ರಾಗಿಣಿ ತಂದೆ ತಾಯಿ ಮಾತು ಕೇಳಿದರೆ ಹೌದು ಎನ್ನಿಸೋದು ಸಹಜ. ರಾಗಿಣಿ ಸಿಂಹದಂತೆ. ಇದನ್ನು ಗೆದ್ದು ಬರುತ್ತಾಳೆ ಎಂದು ರಾಗಿಣಿಯವರ ತಾಯಿ ಹೇಳಿದ್ದರೆ, ರಾಗಿಣಿಯವರ ತಂದೆ ರಾಗಿಣಿ ಇದ್ದ ಯಲಹಂಕದ ಮನೆಯನ್ನು ಮಾರಾಟಕ್ಕಿಟ್ಟಿದ್ದಾರೆ.

    ಇದು ರಾಗಿಣಿ ಇಷ್ಟಪಟ್ಟು ಖರೀದಿಸಿದ್ದ ಮನೆ. ಸುಮಾರು 2 ಕೋಟಿ ಬೆಲೆ ಬಾಳುವ ಈ ಮನೆಯ ಮೇಲೆ ಇನ್ನೂ 1 ಕೋಟಿ ಸಾಲ ಇದೆ. ಆದರೆ ಅತ್ತ ಕೋರ್ಟು ಕಚೇರಿ ಅಲೆದಾಡುತ್ತಿರುವ ರಾಗಿಣಿ ಕುಟುಂಬ ಮನೆಯನ್ನು ಮಾರಾಟ ಮಾಡಿ ಮಗಳನ್ನು ರಕ್ಷಿಸಿಕೊಳ್ಳಲು ಹೊರಟಿದೆ.

  • ರಾಗಿಣಿ ರಿಲೀಸ್ : ಜಾಮೀನು ನೀಡಿದ್ದು ಯಾರು ಗೊತ್ತಾ..?

    ರಾಗಿಣಿ ರಿಲೀಸ್ : ಜಾಮೀನು ನೀಡಿದ್ದು ಯಾರು ಗೊತ್ತಾ..?

    ಡ್ರಗ್ಸ್ ದಂಧೆ ಕೇಸ್‍ನಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ದ್ವಿವೇದಿ ಕೊನೆಗೂ ಜೈಲಿಂದ ಬಿಡುಗಡೆಯಾಗಿದ್ದಾರೆ. ಸುಪ್ರೀಂಕೋರ್ಟ್ ಜಾಮೀನು ನೀಡಿದ 3 ದಿನಗಳ ನಂತರ ರಾಗಿಣಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. 144 ದಿನಗಳ ನಂತರ.

    2020ರ ಸೆಪ್ಟೆಂಬರ್ 4ರಂದು ಅರೆಸ್ಟ್ ಆಗಿದ್ದ ರಾಗಿಣಿಗೆ ಶುಕ್ರವಾರ ಸುಪ್ರೀಂಕೋರ್ಟ್‍ನಲ್ಲಿ ಜಾಮೀನು ಸಿಕ್ಕಿತ್ತು. ಆದರೆ, ಶ್ಯೂರಿಟಿ ಷರತ್ತುಗಳನ್ನು ಪೂರೈಸಲು ವಿಳಂಬವಾದ ಹಿನ್ನೆಲೆಯಲ್ಲಿ ರಾಗಿಣಿ ಬಿಡುಗಡೆ ಆಗಿರಲಿಲ್ಲ.

    ರಾಗಿಣಿ ತಂದೆ ರಾಕೇಶ್ ದ್ವಿವೇದಿ, ತಾಯಿ ರೋಹಿಣಿ ದ್ವಿವೇದಿ, ತಮ್ಮ ರುದ್ರಾಕ್ಷ್ ರಾಗಿಣಿಯನ್ನು ಮನೆಗೆ ಕರೆದುಕೊಂಡು ಬಂದರು. ಜೈಲಿನ ಸಮೀಪವೇ ಇದ್ದ ಮುನೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರಾಗಿಣಿ ಮನೆಗೆ ತೆರಳಿದರು. ಮನೆಯ ಬಳಿ ರಾಗಿಣಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

    ಅಂದಹಾಗೆ ರಾಗಿಣಿಗೆ ಜಾಮೀನು ನೀಡಿದ್ದು ಅವರದ್ದೇ ಚಿತ್ರದ ನಿರ್ಮಾಪಕರು. ಓ ಪ್ರೀತಿಯೇ ಎಂಬ ಸಿನಿಮಾ ನಿರ್ಮಿಸಿರುವ ಚಿನ್ನಸ್ವಾಮಿ ಹಾಗೂ ಕೃಷ್ಣ ರಾಗಿಣಿಗೆ ಜಾಮೀನು ಕೊಟ್ಟರು. ಚಿನ್ನಸ್ವಾಮಿ ಸೂಪರ್ ಡಿಸ್ಕೌಂಟ್ ಎಂಬ ಕಂಪೆನಿಯ ಮಾಲೀಕರು ಕೂಡಾ ಹೌದು. ಆ ಕಂಪೆನಿಗೆ ರಾಗಿಣಿ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಕನಕಪುರ ನಗರಸಭೆಯ ಮಾಜಿ ಸದಸ್ಯರಾದ ಚಿನ್ನಸ್ವಾಮಿ, ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷರೂ ಹೌದು.

    ಆರೋಗ್ಯದ ಸಮಸ್ಯೆ ಇದೆ. ಎಲ್ಲವೂ ಸರಿ ಹೋದ ಬಳಿಕ ಮಾಧ್ಯಮದವರ ಎದುರು ಬರಲಿದ್ದೇನೆ. ಹೇಳೋದಕ್ಕೆ ತುಂಬಾ ವಿಷಯಗಳಿವೆ ಎಂದಿದ್ದಾರೆ ರಾಗಿಣಿ.

     

     

  • ರಾಗಿಣಿ ಸಿನಿಮಾಗೆ ರೀ-ಎಂಟ್ರಿ

    ರಾಗಿಣಿ ಸಿನಿಮಾಗೆ ರೀ-ಎಂಟ್ರಿ

    ಡ್ರಗ್ಸ್ ಕೇಸ್‍ನಲ್ಲಿ ಜೈಲು ವಾಸ ಮುಗಿಸಿ ಬಂದ ನಟಿ ರಾಗಿಣಿ ದ್ವಿವೇದಿ, ಈಗ ಹೊಸ ಜೀವನಕ್ಕೆ ಹೆಜ್ಜೆಯಿಟ್ಟಿದ್ದಾರೆ. 2020ರ ವರ್ಷವನ್ನು ಮರೆಯೋಕೆ ಯತ್ನಿಸುತ್ತಿರೋ ರಾಗಿಣಿ ಮತ್ತೊಮ್ಮೆ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. 2021ರಲ್ಲಿ ರಾಗಿಣಿ ಕರ್ವ 3 ಚಿತ್ರಕ್ಕೆ ಓಕೆ ಹೇಳಿದ್ದಾರೆ.

    ವಿಶಾಲ್ ಶೇಖರ್ ನಿರ್ದೇಶನದ `ಕರ್ವ-3' ಸೀಕ್ವೆಲ್‍ನಲ್ಲಿ ತಿಲಕ್ ಶೇಖರ್ ಹಾಗೂ ಮೇಘನಾ ಗಾಂವ್ಕರ್ ನಟಿಸುತ್ತಿದ್ದಾರೆ. ಈಗ ಇನ್ನೊಂದು ಪ್ರಧಾನ ಪಾತ್ರಕ್ಕೆ ರಾಗಿಣಿ ಓಕೆ ಹೇಳಿದ್ದಾರೆ. ಕೃಷ್ಣ ಚೈತನ್ಯ ನಿರ್ಮಾಣದ ಚಿತ್ರಕ್ಕೆ ರಾಗಿಣಿ ಓಕೆ ಹೇಳಿದ್ದಾರೆ. ನಿರ್ಮಾಪಕ ಕೆ.ಮಂಜು ಅವರ ಜೊತೆ ರಾಗಿಣಿ ಅವರನ್ನು ಭೇಟಿ ಮಾಡಿದ ಕೃಷ್ಣ ಚೈತನ್ಯ ಅವರಿಗೆ, ರಾಗಿಣಿ ಓಕೆ ಹೇಳಿದ್ದಾರೆ.

    ಖಂಡಿತಾ ಈ ಸಿನಿಮಾ ನನಗೆ ರಿಲೀಫ್ ನೀಡಿದೆ. ಖಂಡಿತಾ ಈ ವರ್ಷ ಹೊಸ ಹೊಸ ಚಿತ್ರಗಳನ್ನು ಒಪ್ಪಿಕೊಳ್ತೇನೆ. ಒಳ್ಳೊಳ್ಳೆ ಸಿನಿಮಾ ಮಾಡ್ತೇನೆ, ಕರ್ವ ಇದರಲ್ಲಿ ಮೊದಲನೆಯದು ಎಂದಿದ್ದಾರೆ ರಾಗಿಣಿ.

  • ರಾಗಿಣಿ ಸ್ಥಾನಕ್ಕೆ ಕಿರಿಕ್ ಸಂಯುಕ್ತಾ..!

    ರಾಗಿಣಿ ಸ್ಥಾನಕ್ಕೆ ಕಿರಿಕ್ ಸಂಯುಕ್ತಾ..!

    ರಾಣ. ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ನಟಿಸುತ್ತಿರೋ ಹೊಸ ಸಿನಿಮಾ. ಈ ಸಿನಿಮಾದ ಒಂದು ಸ್ಪೆಷಲ್ ಹಾಡಿಗೆ ರಾಗಿಣಿ ದ್ವಿವೇದಿ ಹೆಜ್ಜೆ ಹಾಕಬೇಕಿತ್ತು. ಆದರೆ, ಈ ಹಾಡಿಗೆ ಈಗ ಸಂಯುಕ್ತಾ ಹೆಗ್ಡೆ ಎಂಟ್ರಿ ಕೊಟ್ಟಿದ್ದಾರೆ. ರಾಗಿಣಿ ದ್ವಿವೇದಿ ಜಾಗಕ್ಕೆ ಸಂಯುಕ್ತಾ ಏಕೆ? ಏನಾದರೂ ಮನಸ್ತಾಪವೇ ಎಂಬ ಪ್ರಶ್ನೆ ಉದ್ಭವಿಸೋದು ಸಹಜ.

    ನೋ.. ನೋ.. ಹಾಗೇನಿಲ್ಲ. ಕಂಠೀರವದಲ್ಲಿ ಸೆಟ್ ರೆಡಿ ಇತ್ತು. ಇಷ್ಟು ಹೊತ್ತಿಗೆ ಹಾಡೂ ಮುಗಿದಿರಬೇಕಿತ್ತು. ಆದರೆ ಮಳೆಯಿಂದಾಗಿ ಲೇಟ್ ಆಯ್ತು. ಅತ್ತ ರಾಗಿಣಿ ಬೇರೆ ಪ್ರಾಜೆಕ್ಟ್‍ನಲ್ಲಿ ಬ್ಯುಸಿಯಾದರು. ಅನಿವಾರ್ಯವಾಗಿ ಸಂಯುಕ್ತಾ ಅವರನ್ನು ಆಯ್ಕೆ ಮಾಡಿಕೊಂಡೆವು ಎನ್ನುತ್ತಾರೆ ನಿರ್ದೇಶಕ ನಂದ ಕಿಶೋರ್.

    ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ರಾಣ ಚಿತ್ರದಲ್ಲಿ ಶ್ರೇಯಸ್ ಹೀರೋ. ರೀಷ್ಮಾ ನಾಣಯ್ಯ ಹೀರೋಯಿನ್. 

  • ರಾಗಿಣಿ ಸ್ಲಿಮ್ ಸೀಕ್ರೆಟ್

    ragini reveals her slimming secret

    ರಾಗಿಣಿ ದ್ವಿವೇದಿ. ಕನ್ನಡ ಚಿತ್ರರಂಗದ ಗ್ಲ್ಯಾಮರ್ ಕ್ವೀನ್. ತುಪ್ಪದ ಹುಡುಗಿ ಎಂದೇ ಫೇಮಸ್ ಆಗಿರುವ ರಾಗಿಣಿ, ಇತ್ತೀಚೆಗೆ ತುಸು ದಪ್ಪಗಾಗಿದ್ದರು. ಆದರೆ.. ಈಗೇನಾದರೂ ರಾಗಿಣಿಯನ್ನು ನೋಡಿಬಿಟ್ಟರೆ.. ಇವರು ಅವರೇನಾ ಎಂದು ಅನ್ನಿಸಿಬಿಡುತ್ತೆ. ರಾಗಿಣಿ ಅಭಿನಯದ ಮೊದಲ ಸಿನಿಮಾ ವೀರಮದಕರಿ ಚಿತ್ರದಲ್ಲಿರುಷ್ಟೇ ಸ್ಲಿಮ್ ಆಗಿದ್ದಾರೆ ರಾಗಿಣಿ. 

    ಏನಿದು.. ರಾಗಿಣಿ ಸ್ಲಿಮ್ ಸೀಕ್ರೆಟ್..? ಆಪರೇಷನ್ ಮಾಡಿಸಿಕೊಂಡ್ರಾ ಅಂದ್ರೆ, ರಾಗಿಣಿ ಅವರದ್ದು ಒಂದೇ ಉತ್ತರ.. ನೋ ಚಾನ್ಸ್. ಅಂತಹವುಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಲಿಲ್ಲ ಅಂತಾರೆ ರಾಗಿಣಿ. ಹಾಗಾದರೆ, ಹೇಗಾಯ್ತು ಇದೆಲ್ಲ ಅಂದಾಗ ರಾಗಿಣಿ ತಮ್ಮ ಸ್ಲಿಮ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

    ನಾನು ದಪ್ಪಗಾಗಿದ್ದುದು ನಿಜ. ಆದರೆ, ಅದನ್ನೂ ಅಭಿಮಾನಿಗಳು ಇಷ್ಟಪಟ್ಟಿದ್ದರು. ಆದರೆ, ನನಗೇ ಏನೋ ಸಮಸ್ಯೆ ಅನ್ನಿಸೋಕೆ ಶುರುವಾಗಿತ್ತು. ಮೊದಲಿನಿಂದ ನಾನು ಅಥ್ಲೆಟ್‍ನಂತಿದ್ದವಳು. ಫಿಟ್‍ನೆಸ್ ಸಮಸ್ಯೆ ಅನ್ನಿಸೋಕೆ ಶುರುವಾದ ತಕ್ಷಣ ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಮುಂದಕ್ಕೆ ಹಾಕಿದೆ. ಒಬ್ಬ ನಟಿಯಾಗಿ ನಾನು ರಿಸ್ಕ್ ತೆಗೆದುಕೊಂಡಿದ್ದೆ. ಮೊದಲು ಹೋಗಿದ್ದು ಧರ್ಮಸ್ಥಳಕ್ಕೆ. ಅಲ್ಲಿನ ಪ್ರಾಕೃತಿಕ ಕೇಂದ್ರದಲ್ಲಿ 20 ದಿನ ಇದ್ದೆ. ನಂತರ ಮನೆಗೆ ಬಂದವಳು ಒಬ್ಬ ಟ್ರೈನರ್‍ನನ್ನು ನೇಮಿಸಿಕೊಂಡೆ. ಅವರು ನನಗೆ, ನನ್ನ ದೇಹಕ್ಕೆ ಹೊಂದಿಕೆಯಾಗುವ ವ್ಯಾಯಾಮ ಹೇಳಿಕೊಟ್ಟರು. 6 ತಿಂಗಳು ಹೊರಗೆ ಬರಲಿಲ್ಲ. ಊಟ ಮಾಡುವುದು ಮತ್ತು ಎಕ್ಸರ್‍ಸೈಜ್ ಮಾಡುವುದು.. ಈ ಎರಡನ್ನು ಬಿಟ್ಟು 6 ತಿಂಗಳು ಮತ್ತೇನನ್ನೂ ಮಾಡಲಿಲ್ಲ. ಈಗ ಹೀಗಾಗಿದ್ದೇನೆ... ಅಷ್ಟೆ ಎಂದಿದ್ದಾರೆ ರಾಗಿಣಿ.

  • ರಾಗಿಣಿ ಹುಚ್ಚ ವೆಂಕಟ್​ನ ಫ್ಯಾನ್ ಆದಾಗ ಐಟಂ ಸಾಂಗ್ ಬ್ಯಾನ್ ಆಗ್ಬೇಕ್..

    when ragini became huccha venkat fan

    ಐಟಂ ಸಾಂಗು ಆಗ್ಬೇಕು ಬ್ಯಾನು..ಯಾಕಂದ್ರೆ ನಾನು ವೆಂಕಟ್​ನ ಫ್ಯಾನು.. ಇಂಥಾದ್ದೊಂದು ಐಟಂ ಸಾಂಗು ಚಿತ್ರರಸಿಕರ ಕಣ್ಣು, ಕಿವಿಗೆ ಅಪ್ಪಳಿಸೋಕೆ ರೆಡಿಯಾಗಿದೆ. ಚಿತ್ರ ಟೈಗರ್. ಈ ಐಟಂ ಸಾಂಗಿಗೆ ಹಾಡಿ ಕುಣಿದು ಕಿಚ್ಚು ಹಚ್ಚಿರುವುದು ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ.

    ಟೈಗರ್, ನಂದಕಿಶೋರ್ ನಿರ್ದೇಶನದ ಚಿತ್ರ. ಈ ಹಾಡು ಬರೆದಿರುವುದು ನಾಗೇಂದ್ರ ಪ್ರಸಾದ್. ಹಾಡಿರುವುದು ಮಂಜುಳಾ ಗುರುರಾಜ್. ಇಲ್ಲಿ ಸ್ವಾರಸ್ಯ ಇರುವುದು ಹಾಡಿನಲ್ಲಿ ಬಂದಿರುವು ಹುಚ್ಚ ವೆಂಕಟ್ ಹೆಸರು.

    ಕನ್ನಡ ಪ್ರೇಕ್ಷಕರಿಗೆ ಈಗಾಗಲೇ ಗೊತ್ತಿರುವಂತೆ ಹುಚ್ಚ ವೆಂಕಟ್​ನ ಫೇಮಸ್ ಡೈಲಾಗುಗಳಲ್ಲಿ ಒಂದು ‘‘ಕನ್ನಡ ಚಿತ್ರಗಳಲ್ಲಿ ಐಟಂ ಸಾಂಗ್ ಬ್ಯಾನ್ ಆಗ್ಬೇಕ್..’’ ಅನ್ನೋದು. ಹುಚ್ಚ ವೆಂಕಟ್​ಗೂ, ರಾಗಿಣಿಗೂ ಸಣ್ಣದೊಂದು ಜಗಳದ ಇತಿಹಾಸವೂ ಇದೆ. ಖಾಸಗಿ ಚಾನೆಲ್​ನ ರಿಯಾಲಿಟಿ ಶೋವೊಂದರಲ್ಲಿ ಹುಚ್ಚ ವೆಂಕಟ್ ಸ್ಪರ್ಧಿಯಾಗಿದ್ದರೆ, ರಾಗಿಣಿ ಜಡ್ಜ್ ಆಗಿದ್ದರು. ಆಗ ತಮ್ಮ ಡ್ಯಾನ್ಸ್​ಗೆ ರಾಗಿಣಿ ಬೇಕೆಂದೇ ಕಡಿಮೆ ಮಾರ್ಕ್ಸ್ ಕೊಟ್ಟಿದ್ದಾರೆ ಎಂದು ವೆಂಕಟ್ ರಂಪ ಮಾಡಿದ್ದರು.

    ಈಗ ಐಟಂ ಸಾಂಗ್ ಬ್ಯಾನ್ ಆಗ್ಬೇಕು ಅನ್ನೋ ವೆಂಕಟ್ ಡೈಲಾಗೇ ಐಟಂ ಸಾಂಗ್​ನ ಹಾಡಾಗಿದೆ. ಹುಚ್ಚ ವೆಂಕಟ್ ಇನ್ಯಾವುದನ್ನು ಬ್ಯಾನ್ ಆಗ್ಬೇಕ್ ಅಂತಾರೋ..

  • ರಾಗಿಣಿ ಹುಟ್ಟುಹಬ್ಬ ಸ್ಪೆಷಲ್ ಸೆಲಬ್ರೇಷನ್

    ರಾಗಿಣಿ ಹುಟ್ಟುಹಬ್ಬ ಸ್ಪೆಷಲ್ ಸೆಲಬ್ರೇಷನ್

    ತುಪ್ಪದ ಹುಡುಗಿ ಎಂದೇ ಫೇಮಸ್ ಆಗಿರೋ ರಾಗಿಣಿ ದ್ವಿವೇದಿ 32 ತುಂಬಿ 33ಕ್ಕೆ ಕಾಲಿಟ್ಟಿದ್ದಾರೆ. ಈ ಹುಟ್ಟುಹಬ್ಬವನ್ನು ಅವರು ವಿಶೇಷವಾಗಿ ಆಚರಿಸಿಕೊಂಡಿದ್ದು ತಮ್ಮ ಟ್ರಸ್ಟ್‍ನಲ್ಲಿ. ವೃದ್ಧರು ಮತ್ತು ಮಂಗಳಮುಖಿಯರಿಗೆ ಸಹಾಯ ಮಾಡುವ ಮೂಲಕ.

    ಸಾರಿ ಕರ್ಮ ರಿಟನ್ರ್ಸ್ ಚಿತ್ರದಲ್ಲಿ ನಟಿಸುತ್ತಿರೋ ರಾಗಿಣಿ, ನಿರ್ಮಾಪಕ ಕೆ.ಮಂಜು ಅವರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಇಡೀ ಚಿತ್ರತಂಡ ರಾಗಿಣಿ ಅವರಿಗೆ ಶುಭಾಶಯ ಕೋರಿದ್ದು ವಿಶೇಷವಾಗಿತ್ತು.

  • ರಾಗಿಣಿಗಾಗಿ ಅಮೆರಿಕಕ್ಕೆ ಸೇಲ್ ಆದ ಅಧ್ಯಕ್ಷ

    adhyaksha in america song

    ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಹಾಡೊಂದು ಹೊರಬಿದ್ದಿದೆ. ಅಮ್ಮ ನಾ ಸೇಲಾದೆ.. ಅಮೆರಿಕ ಪಾಲಾದೆ ಅನ್ನೋ.. ಹಾಡು. ಇದು ಕಾಶೀನಾಥ್ ಅವರ ಚಿತ್ರದ ಹಿಟ್ ಸಾಂಗ್‍ನ ತುಣುಕು. ಆದರೆ, ಅಧ್ಯಕ್ಷ ಇನ್ ಅಮೆರಿಕದಲ್ಲಿ ಅದೊಂದು ಸಾಲನ್ನಷ್ಟೇ ಎತ್ತಿಕೊಂಡು ಹೊಸ ಹಾಡನ್ನೇ ಸೃಷ್ಟಿಸಲಾಗಿದೆ. ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಹೊಸದೇ ಹಾಡು ಸೃಷ್ಟಿಯಾಗಿದ್ದು, ಹಾಡು ಶಿಳ್ಳೆ ಹೊಡೆಯುವಂತಿದೆ.

    ರಾಗಿಣಿಯ ಚೆಲುವಿಗೆ ಮಾರು ಹೋಗಿ ಅವರ ಹಿಂದೆ ಬೀಳೋ ತುಂಟನಾಗಿ ಹುಚ್ಚೆದ್ದು ಕುಣಿದಿದ್ದಾರೆ ಶರಣ್. ಶರಣ್ ಚಿತ್ರಕ್ಕೆ ವಿ. ಹರಿಕೃಷ್ಣ ಇದೇ ಮೊದಲ ಬಾರಿಗೆ ಸಂಗೀತ ಕೊಟ್ಟಿದ್ದಾರೆ. ಯೋಗಾನಂದ್ ಮದ್ದಾನ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ ಇದು. ವಿಶ್ವಪ್ರಸಾದ್ ಚಿತ್ರದ ನಿರ್ಮಾಪಕ. ಬಹುತೇಕ ಅಮೆರಿಕದಲ್ಲಿಯೇ ಚಿತ್ರೀಕರಣವಾಗಿರುವ ಸಿನಿಮಾದ ಹಾಡು, ಟ್ರೆಂಡ್ ಆಗಿದೆ.