` aa dinagalu chethan - chitraloka.com | Kannada Movie News, Reviews | Image

aa dinagalu chethan

  • ಜೂಜಿನ ಜಾಹೀರಾತು : ಚೇತನ್ ಪರೋಕ್ಷ ಟೀಕೆಗೆ ಕಿಚ್ಚನ ಡೈರೆಕ್ಟ್ ಆನ್ಸರ್

    sudeep's direct answer to chethan

    ಕೆಲವು ನಟರು ಪಾನ್ ಮಸಾಲಾ, ಜೂಜಿನ ಜಾಹೀರಾತುಗಳಲ್ಲಿ ನಟಿಸುತ್ತಾರೆ. ಕೇವಲ ಹಣಕ್ಕಾಗಿ ಮದ್ಯ, ಪಾನ್ ಮಸಾಲಾ, ಗುಟ್ಕಾ, ತಂಬಾಕು, ಜೂಜುಗಳ ಜಾಹೀರಾತುಗಳಲ್ಲಿ ನಟಿಸುತ್ತಾರೆ. ಅವರ ವಿರುದ್ಧ ಬೆರಳು ತೋರಿಸದೇ ಇರೋದು ಮೋಸ ಅಲ್ವಾ..? ಇಂಥಾದ್ದೊಂದು ಪ್ರಶ್ನೆಯನ್ನು ಆ ದಿನಗಳು ಖ್ಯಾತಿಯ ಚೇತನ್ ಎತ್ತಿದ್ದರು. ಚೇತನ್ ಯಾವಾಗಲೂ ಹಾಗೇ.. ಒಂದು ವಿಷಯ ಬೆಂಕಿಯಂತೆ ಧಗಧಗಿಸುತ್ತಿರುವಾಗ, ಚೇತನ್ ಇನ್ನೆಲ್ಲೋ ಹೊತ್ತಿರುವ ಕಿಡಿಯನ್ನು ಹೊತ್ತುತಂದು ಉಫ್ ಉಫ್ ಎಂದು ಬೆಳಗಿಸುವ ಪ್ರಯತ್ನ ಮಾಡುತ್ತಾರೆ.

    you_tube_chitraloka1.gif

    ಸದ್ಯಕ್ಕೆ ಕನ್ನಡದಲ್ಲಿ ಮದ್ಯ, ಪಾನ್, ಗುಟ್ಕಾ ಜಾಹೀರಾತುಗಳಲ್ಲಿ ನಟಿಸುತ್ತಿರುವ ನಟರಿಲ್ಲ. ಆದರೆ ರಮ್ಮಿ ಜಾಹೀರಾತಿನಲ್ಲಿ ಕಿಚ್ಚ ಸುದೀಪ್ ಇದ್ದಾರೆ. ಚೇತನ್ ಅವರ ಈ ಪರೋಕ್ಷ ಟೀಕೆಗೆ ಸ್ವತಃ ಸುದೀಪ್ ಉತ್ತರ ಕೊಟ್ಟಿದ್ದಾರೆ.

    ಅವರು ಬಹುಶಃ ಮೋದಿಯನ್ನೋ, ರಾಷ್ಟ್ರಪತಿಗಳನ್ನೋ ಕೇಳೋಕೆ ಹೋಗಿರಬೇಕು. ಏಕೆಂದರೆ ಅವರು ಸದಾ ಅವರನ್ನೇ ಪ್ರಶ್ನೆ ಕೇಳುತ್ತಿರುತ್ತಾರೆ. ಅಲ್ಲದೆ ಇವುಗಳಿಗೆ ಅನುಮತಿ ಕೊಟ್ಟಿರುವುದೂ ಅವರೇ. ಮೋಸ್ಟ್ ಲೀ ಅವರು ಮೋದಿ ಅಥವಾ ರಾಷ್ಟ್ರಪತಿಗಳ ಬಗ್ಗೆಯೇ ಮಾತನಾಡಿರಬೇಕು ಎಂದಿದ್ದಾರೆ. ಏನು ಕೇಳಬೇಕು ಎಂದುಕೊಂಡಿದ್ದೀರೋ.. ನೇರವಾಗಿ ಕೇಳಲಿ. ಅವರಿಗೆ ಬೇರೇನೋ ಸಮಸ್ಯೆ ಇರಬೇಕು ಎಂದಿದ್ದಾರೆ ಕಿಚ್ಚ.

  • `ಆ ದಿನಗಳು' ಜೋಡಿ 15 ವರ್ಷಗಳ ನಂತರ ಪುನರ್ ಮಿಲನ

    `ಆ ದಿನಗಳು' ಜೋಡಿ 15 ವರ್ಷಗಳ ನಂತರ ಪುನರ್ ಮಿಲನ

    ಇವತ್ತಿಗೂ ಚೇತನ್ ಅವರನ್ನು ಕನ್ನಡಿಗರು ಗುರುತಿಸೋದು ಆ ದಿನಗಳು ಚೇತನ್ ಎಂದೇ. ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ.. ಆ ದಿನಗಳು.. ಹಾಡುಗಳು ಇವತ್ತಿಗೂ  ಜನಪ್ರಿಯ. ಚೇತನ್ ಅವರೊಂದಿಗೆ ನಟಿಸಿದ್ದ ಅರ್ಚನಾ ಶಾಸ್ತ್ರಿ ಕೂಡಾ ಅಷ್ಟೇ ಜನಪ್ರಿಯ. ಆದರೆ, ಆ ಸಿನಿಮಾ ಹಿಟ್ ಆದರೂ ಜೋಡಿ ರಿಪೀಟ್ ಆಗಿರಲಿಲ್ಲ. ಈಗ.. 15 ವರ್ಷಗಳ ಬಳಿಕ ಚೇತನ್-ಅರ್ಚನಾ ಜೋಡಿ ಒಂದಾಗುತ್ತಿದೆ.

    ಡೇರ್ ಟು ಸ್ಲೀಪ್ ಅನ್ನೋದು ಚೇತನ್ ಮತ್ತು ಅರ್ಚನಾ ಒಟ್ಟಿಗೇ ನಟಿಸುತ್ತಿರುವ ಹೊಸ ಚಿತ್ರದ ಹೆಸರು. ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಸಿದ್ಧವಾಗುತ್ತಿರೋ ಈ ಚಿತ್ರದಲ್ಲಿ ಚೇತನ್ ಅವರದ್ದು ಸಖತ್ ಸೋಮಾರಿಯ ಪಾತ್ರವಂತೆ. ವೆಬ್ ಸಿರೀಸ್ ಚಿತ್ರಗಳ ಮೂಲಕ ಗಮನ ಸೆಳೆದಿರೋ ಅಭಿರಾಮ್ ಈ ಚಿತ್ರಕ್ಕೆ ನಿರ್ದೇಶಕ.

  • Arjun to Direct his Daughter Aishwarya!

    arjun sarja, aishwarya image

    For a long time there was news that actor-director Arjun Sarja might direct his daughter Aishwarya in Kannada film. Now the news is all set to come to a reality with the film being launched soon.

    This time Arjun has written a romantic story and will be producing it apart from directing it. While his daughter Aishwarya will be making her debut through this film in Kannada, Chethan of 'Aa Dingagalu' fame will be playing the hero in this film.

    More details about the film are yet awaited.

  • Athiratha Review; Chitraloka Rating 3/5

    athiratha movie image

    Mahesh Babu is back and this time he has chosen an action film. Athiratha has a very contemporary and relevant subject. It is about the problem of fake marks cards and question papers. Babu has handled it like a pro and given a film that should get full marks at the box office.

    Chetan plays the lead role and his character is that of a reporter. The reporter is waiting for a big ticket chance. But he has to confront a dangerous and mindblowing crime involving a gang. Using fake marks cards and certificates and using it for other illegal activities, a gang has amassed a large amount of money. Chetan unravels it. But he is caught in the whirlpool and has to save himself first. How he manages to expose the crime and at the same time save himself forms the rest of the story. 

    Athiratha is an action fuelled ride that takes the audience on a thrilling ride from the word go. Most of the first half is a romance story between Chetan and Latha Hegde. But once the issue of the gang and the fake degree certificates enter, it is an action packed thriller and suspense ride. 

    Chetan and Latha Hegde have done a good job. Kabir Duhan Singh plays the main villain in the film. He makes an impressive peformance. There is also good supporting cast in the form of Avinash, Achyuth and Sadhu Kokila. 

    The second half of the film is especially good with a number of twists and turns in the plot. Sadhu Kokila's son has made his debut as a composer in this film and there are two good melodies he has given. The various twists and turns in the story in the second half is a bit confusing for some but it reveals a very good command over the mystery element by the director. 

    Athiratha is a welcome break from the routine commercial films. It has a good story to boast of and makes you think for a change. Don't miss to watch this thriller. 

     

  • Chethan To Act In Mahesh Babu's New Film

    chethan image

    Recently, there was news that actor Chethan of 'Aa Dinagalu' fame will be acting in a film which is the remake of Marathi hit 'Duniyadari'. Now the actor has given a nod to act in one more film and this time, the film will be directed by Mahesh Babu of 'Arasu' fame.

    Mahesh Babu is looking forward for the release of his latest film 'Crazy Boy' this month. Meanwhile, he is all set to direct a new film for Chethan and Chethan has also given his dates to act in the film. Chethan will be playing the role of a TV journalist in this untitled film.

    As of now, the film has just been announced and more details about the film are awaited.

  • I Am Not Anti-Hindu Says Chethan

    athiratha hero chethan

    'Aa Dinagalu' Chethan's new film 'Atiratha' was released across Karnataka and a few Hindu Organisations have decided to ban the film because of actor Chethan's anti-Hindu remarks.

    Chethan has been actively participating in few public rallies and has been debating about issues concerning the society. Many Hindu organisations have termed this as anti-Hindu and has staged protest to stop the screening of the film because of Chethan's anti-Hindu remarks.

    Chethan had organised a press meet regarding this and has said that he is not anti-Hindu, but I am against the violence by any religion. I have been talking about this in various platforms these days, If any organisation has any problem with my approach, then I am ready to talk with them. But it is not proper on their part to stop the screening of the film' says Chethan.

  • Kabir Duhan Singh Returns With Athiratha

    chethan, kabir in athiratha

    Kabir Duhan Singh who made his Sandalwood debut in Sudeep's Hebbuli is turning up for his second Kannada film this week. Mahesh Babu directed Athiratha is his second Kannada film and releasing this Friday. Kabir played the role of the main villain in Hebbuli directed by Krishna and won praise for his performance.

    It did not take long after Hebbuli for Sandalwood film makers to notice him. Kabir has made a mark for himself in Telugu films starting from Jil and Kick 2. Some of his other films include Sardar Gabbar Singh and Dictator in Telugu. He also entered Tamil in films like Vedalam and Rekka. His Kannada career has taken off in a big way due to the big success of Hebbuli.

  • Ranam review: Chitraloka Rating 3.5/5

    Ranam Movie review

    For decades, Indian farmers have been facing multiple challenges due to various factors which directly affects their livelihood. Same is the reason for increase in numbers of suicide cases involving farmers in the recent past. Recent agitations over three farm laws continues across the nation as many debate over the pros and cons of the Bills.  Ranam, which stars Chiranjeevi Sarja, Chetan and others in the lead has farmers in the limelight for a real cause.

    Director V Samudra, who makes his debut in Kannada has picked up a critical subject revolving around farmers showing how the hard-working community is always taken for a ride in the system. With a positive outlay in the screenplay, the film speaks for the farmers within the cinematic boundary.

    Irrigation which is the backbone of agriculture is the core issue in Ranam with Chetan spearheading as a young activist in bringing about a positive change. Despite basing it on the serious issue, the film has enough entertaining elements to watch out for too.

    A tailormade script for Chetan, he plays an activist with a single agenda, which is to fight for the farmer’s cause in his own unique ways. A real-life activist, Chetan does it with ease, and so is Chiranjeevi Sarja who had mastered playing a cop on the screen.

    Loaded with one-liners about farmers, Chetan plays his character to perfection. Watching Yuva Samrat Chiranjeevi in one of his last roles is a heart wrenching scenario for his diehard fans. That apart, Devaraj and Varalakshmi Sarath kumar plays an apt guest role which leaves a mark in the end. Furthermore, a bunch of college students and female leads – Preethi Sharma and Neethu Gowda add entertaining value to a serious script.

    A sensible subject with decent entertainment makes Ranam a winner. 

  • Sandalwood Personalities Welcome SC Judgement

    sandalwood film personalities welcome supreme court jedgement

    Kannada film personalities have responded to the historic judgement of the Supreme Court of India decriminalizing Section 377 of the Indian Penal Code. Senior director and writer Nagatihalli Chandrashekar said, "There is no freedom to select gender,caste,religion, country,or language to anyone before their birth. I’m so happy, that our #Supreme Court realised this hard reality at least now! I have strong faith in our judicial system. It’s the only #HOPE! Let’s treat everyone equally." 

    Nagatihalli also had a message in Kannada. He said, "ಯಾವ ಜೀವಿಗೂ ಹುಟ್ಟಿಗೆ ಮುಂಚೆ ತನ್ನ ಲಿಂಗ, ಜಾತಿ,ಧರ್ಮ, ದೇಶ,ಭಾಪೆಗಳ ಆಯ್ಕೆಗೆ ಸ್ವಾತಂತ್ಯ್ರವಿಲ್ಲ. ಈ ಸತ್ಯ ಸುಪ್ರೀಂಗೆ ತಡವಾಗಿಯಾದರೂ ತಿಳಿಯಿತಲ್ಲ.. ನಮ್ಮ ನ್ಯಾಯಾಂಗ ವ್ವವಸ್ಥೆಯಲ್ಲಿ ನಂಬಿಕೆ ಬಂತು. ಎಲ್ಲ ಮನುಷ್ಯರನ್ನೂ ಕೇವಲ ಮನುಷ್ಯರಂತೆ ಕಾಣೋಣ." 

    Actor Aa Dinagalu Chetan (Chetan Kumar) on his online message said, "Not just verdict but wording evokes tears of joy. 'Majoritarian views & popular morality cannot dictate Constitutional rights'. Thoughtful, conscientious, a much-needed jolt to the system #Judiciary that makes us proud to be LGBTQIA+/straight & Indian!" 

    Director KM Chaitanya retweeted a newspaper report about the Supreme Court judgement and quoted, "Homosexuality is not an offence in India, five Supreme Court judges declared today in a spectacular verdict for the gay rights movement in the country." Actress Vishaka Singh, who has acted in films like Housefull and Antaraatma tweeted, "Thank you #SupremeCourtIndia ! My friends can be slightly less fearful now. #LiveAndLetLive."

  • ಅಡ್ವಾನ್ಸ್ ವಾಪಸ್ ಕೊಡದ ಚೇತನ್ ವಿರುದ್ಧ ಸರ್ಜಾ ದೂರು

    arjun sarja wants 9 lakhs from chethan

    ಪ್ರೇಮ ಬರಹ ಚಿತ್ರಕ್ಕೆ ಕೊಟ್ಟಿದ್ದ 9 ಲಕ್ಷ ರೂ. ಅಡ್ವಾನ್ಸ್ ಹಣವನ್ನು ಇನ್ನೂ ವಾಪಸ್ ಕೊಟ್ಟಿಲ್ಲ ಎಂದು ಅರ್ಜುನ್ ಸರ್ಜಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದಾರೆ. ಅಡ್ವಾನ್ಸ್ ಹಣ ವಾಪಸ್ ಕೊಡುವಂತೆ ಹಲವು ಬಾರಿ ಫೋನ್ ಮಾಡಿ ಕೇಳಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಸರ್ಜಾ ಅವರ ಬ್ಯಾನರ್‍ನ ಮ್ಯಾನೇಜರ್, ಚೇಂಬರ್‍ಗೆ ದೂರು ಕೊಟ್ಟಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೇತನ್, ತಾವೀಗ ಬೀದರ್‍ನಲ್ಲಿದ್ದು, 2 ದಿನಗಳ ನಂತರ ಬೆಂಗಳೂರಿಗೆ ಬರುತ್ತಿದ್ದೇನೆ. ನಂತರ ವಿವರಣೆ ನೀಡುತ್ತೇನೆ  ಎಂದು ತಿಳಿಸಿದ್ದಾರೆ.

    ಮೀಟೂ ಪ್ರಕರಣದಲ್ಲಿ ಶೃತಿ ಹರಿಹರನ್ ಬೆನ್ನಿಗೆ ನಿಂತಿದ್ದ ನಟ ಚೇತನ್, ಸರ್ಜಾ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದ್ದರು. ಪ್ರೇಮ ಬರಹ ಚಿತ್ರದಿಂದ ಕೈಬಿಟ್ಟಿದ್ದಕ್ಕೆ ಚೇತನ್ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿದ್ದವು. ಈಗ, ವಿವಾದ ಫಿಲಂ ಚೇಂಬರ್ ಮೆಟ್ಟಿಲೇರಿದೆ.

  • ಅತಿರಥಕ್ಕೆ ಚೇತನ್ ಮಾತಿನ ಸಂಕಟ

    athiratha movie image

    ಅತಿರಥ, ಇದೇ ವಾರ ಬಿಡುಗಡೆಯಾಗಿರುವ ಚಿತ್ರ. ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿರುವ ಚಿತ್ರಕ್ಕೆ ಈಗ ಸಂಕಟ ತಂದಿರುವುದು ಚಿತ್ರದ ನಾಯಕ ಚೇತನ್ ಹೇಳಿರುವ ಮಾತು. ಇತ್ತೀಚೆಗೆ ನಟ ಚೇತನ್, ಹಲವು ವೇದಿಕೆಗಳಲ್ಲಿ ಹಿಂದೂ ಸಂಘಟನೆಗಳ ವಿರುದ್ಧ ಮಾತನಾಡಿದ್ದರು. ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರದಲ್ಲಿ ಚೇತನ್ ಹಿಂದೂ ಸಂಘಟನೆಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದು ಈಗ ಚಿತ್ರಕ್ಕೆ ಅಡ್ಡಿಯಾಗುತ್ತಿದೆ. ಚಾಮರಾಜ ನಗರದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ನಡೆಸಿದ್ದಾರೆ. ಪ್ರದರ್ಶನಕ್ಕೂ ಅಡ್ಡಿ ಪಡಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಚೇತನ್, ನಾನು ಹಿಂಸೆಯ ವಿರೋಧಿಯೇ ಹೊರತು, ಹಿಂದೂ ವಿರೋಧಿ ಅಲ್ಲ. ಅಭಿಪ್ರಾಯ ಭೇದವಿದ್ದರೆ, ಬನ್ನಿ, ಮಾತನಾಡಿ ಬಗೆಹರಿಸಿಕೊಳ್ಳೋಣ. ದಯವಿಟ್ಟು ಚಿತ್ರಕ್ಕೆ ಅಡ್ಡಿ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.

    ಚಿತ್ರದ ನಿರ್ದೇಶಕ ಮಹೇಶ್ ಬಾಬು ಕೂಡಾ ಚಿತ್ರಕ್ಕೆ ತೊಂದರೆ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ. ನನಗೆ ಗೊತ್ತಿರುವ ಹಾಗೆ, ಚೇತನ್ ಹಿಂದೂ ವಿರೋಧಿಯಲ್ಲ. ಇಷ್ಟಕ್ಕೂ ಚಿತ್ರದಲ್ಲಿ ಚೇತನ್ ಒಬ್ಬ ನಟರಷ್ಟೆ. ಇಡೀ ಸಿನಿಮಾ ನಿರ್ದೇಶಕರ ಕೂಸು. ಇದರಿಂದ ಹಲವರಿಗೆ ತೊಂದರೆಯಾಗುತ್ತದೆ. ದಯವಿಟ್ಟು ಮಾತನಾಡಿ ವಿಚಾರ ಬಗೆಹರಿಸಿಕೊಳ್ಳೋಣ ಎಂದಿದ್ದಾರೆ.

    ಆದರೆ, ಈಗಾಗಲೇ ಚಾಮರಾಜ ನಗರದಲ್ಲಿ ಪ್ಯಾರಡೈಸ್ ಚಿತ್ರಮಂದಿರದಿಂದ ಚಿತ್ರವನ್ನು ತೆಗೆಯಲಾಗಿದೆ. ಚೇತನ್ ಅವರ ಹೋರಾಟದ ಮಾತು ಚಿತ್ರವನ್ನು ಕಾಡುತ್ತಿದೆ.

    Related Articles :-

    I Am Not Anti-Hindu Says Chethan

  • ಅಹಿಂಸಾ ಚೇತನ್ ವಾಗ್ದಾಳಿ ಟಾರ್ಗೆಟ್ ಈಗ ಸುಮಲತಾ ಅಂಬರೀಷ್..!

    ಅಹಿಂಸಾ ಚೇತನ್ ವಾಗ್ದಾಳಿ ಟಾರ್ಗೆಟ್ ಈಗ ಸುಮಲತಾ ಅಂಬರೀಷ್..!

    ಅಹಿಂಸಾ ಚೇತನ್ ಸದಾ ಸುದ್ದಿಯಲ್ಲಿರುತ್ತಾರೆ. ಯಾರಾದರೊಬ್ಬರನ್ನು ಟೀಕಿಸುತ್ತಲೇ ಸುದ್ದಿಯಲ್ಲಿರುವ ನಟ ಚೇತನ್ ಇತ್ತೀಚೆಗೆ ಹಿಂದೂ ಧರ್ಮವನ್ನು ಸುಳ್ಳುಗಳ ಮೇಲೆ ಕಟ್ಟಿದ ಧರ್ಮ ಎಂದು ಜೈಲಿಗೂ ಹೋಗಿ ಬಂದಿದ್ದರು. ಆನಿವಾಸಿ ಭಾರತೀಯರಾಗಿರುವ, ಭಾರತೀಯ ಪೌರರಲ್ಲದ ಚೇತನ್, ಈ ಕಾರಣಕ್ಕಾಗಿಯೇ ಕಾನೂನು ಸಮರ ಎದುರಿಸುತ್ತಿದ್ದಾರೆ. ಭಾರತೀಯ ಪೌರತ್ವ ಹೊಂದಿಲ್ಲದವರು ಎಲ್ಲ ವಿಷಯಗಳ ಬಗ್ಗೆಯೂ ಮಾತನಾಡುವ ಹಾಗಿಲ್ಲ. ಕೆಲವು ನಿರ್ಬಂಧಗಳಿರುತ್ತವೆ. ಹೀಗಾಗಿಯೇ ಹಿಂದೊಮ್ಮೆ ಜೈಲು ಪಾಲಾಗಿದ್ದ ಚೇತನ್, ಇತ್ತೀಚೆಗೆ ಮತ್ತೊಮ್ಮೆ ಜೈಲಿಗೆ ಹೋಗಿ ಬಂದಿದ್ದರು. ಆದರೆ ಚೇತನ್ ಅವುಗಳ ಜೊತೆ ಹೋರಾಡುತ್ತಲೇ ತಮಗೆ ಅನ್ನಿಸಿದ್ದನ್ನು ಹೇಳುತ್ತಲೇ ಇದ್ದಾರೆ. ಈ ಬಾರಿ ಅವರು ಸುಮಲತಾ ಅಂಬರೀಷ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ.

    ಅಂಬರೀಶ್ ಸ್ಮಾರಕದ ಬಗ್ಗೆ ಹಾಗೂ ಅದಕ್ಕೆ ಖರ್ಚಾಗಿರುವ ಸರ್ಕಾರಿ ಹಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಚೇತನ್ ಅಹಿಂಸ, ಅನಗತ್ಯವಾಗಿದ್ದ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಸುಮಲತಾರವರು ಅಂದಾಜು ಎರಡು ಎಕರೆ ಜಾಗ ಮತ್ತು 12 ಕೋಟಿ ರೂಪಾಯಿ ಹಣವನ್ನು ಸರ್ಕಾರದಿಂದ ‘ಕೈ ಚಾಚಿ’ ಪಡೆದಿರುವುದು ವಿಪರ್ಯಾಸವಾಗಿದೆ. ತೆರಿಗೆದಾರರ ಹಣವನ್ನು ಹೀಗೆ ದುರುಪಯೋಗಪಡಿಸಿಕೊಳ್ಳುವ ಬದಲು ಸುಮಲತಾರವರು ತಮ್ಮ ಸ್ವಂತದ 23.4 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸಾಧ್ಯವಾಗಲಿಲ್ಲವೇ? ಎಲ್ಲಾ ಉಳ್ಳವರಿಗೆ ಮತ್ತೆ ಸವಲತ್ತು ಒದಗಿಸುವುದು ನ್ಯಾಯವೇ? ಎಂದು ಪ್ರಶ್ನೆ ಮಾಡಿದ್ದಾರೆ.

    ಅಂಬರೀಶ್ ಅವರ ಸ್ಮಾರಕವನ್ನು ಸರ್ಕಾರವು ಕಂಠೀರವ ಸ್ಟುಡಿಯೋನಲ್ಲಿ ನಿರ್ಮಾಣ ಮಾಡಿದೆ. ಒಂದು ಎಕರೆ 34 ಗುಂಟೆ ಪ್ರದೇಶದಲ್ಲಿ ಭವ್ಯವಾಗಿ ಸ್ಮಾರಕ ನಿರ್ಮಾಣವಾಗಿದ್ದು ಇದಕ್ಕೆ ಸುಮಾರು 12 ಕೋಟಿಗೂ ಹೆಚ್ಚಿನ ಮೊತ್ತ ಖರ್ಚಾಗಿದೆ. ಅಂಬರೀಷ್ ಯಾರ ಬಳಿಯೂ ಕೈಚಾಚಿಲ್ಲ ಎಂದಿದ್ದ ಸುಮಲತಾ ಅವರ ಹೇಳಿಕೆಯನ್ನೇ ಇಟ್ಟುಕೊಂಡು ಚೇತನ್ ಅಹಿಂಸಾ ಸುಮಲತಾ ಅವರನ್ನು ಟೀಕೆ ಮಾಡಿದ್ದಾರೆ.

  • ಆ ದಿನಗಳು ಚೇತನ್ ಮದುವೆ ಸಿಂಪ್ಲೀ ಸೂಪರ್ಬ್

    aa dinagalu chethan maarige simplicity

    ಆ ದಿನಗಳು, ಮೈನಾ ಚಿತ್ರಗಳ ಖ್ಯಾತಿಯ ನಟ, ಚಳವಳಿಕಾರ ಚೇತನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೆಳತಿ ಮೇಘಾ ವರನ್ನು ರಿಜಿಸ್ಟರ್ ಮ್ಯಾರೇಜ್ ಬ್ಯೂರೋನಲ್ಲಿ ಮದುವೆಯಾಗಿದ್ದರೆ. ಮದುವೆಯನ್ನು ಸರಳವಾಗಿ ಆಚರಿಸಿಕೊಂಡ ಚೇತನ್ ಮತ್ತು ಮೇಘಾ, ಬೆಂಗಳೂರಿನಲ್ಲಿ ಅದ್ಧೂರಿ ರಿಸೆಪ್ಷನ್ ಇಟ್ಟುಕೊಂಡಿದ್ದರು.

    ಸಂವಿಧಾನ ಪ್ರತಿಜ್ಞಾ ವಿಧಿ ಓದುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೇತನ್-ಮೇಘಾಗೆ ಪುನೀತ್, ಅಶ್ವಿನಿ ದಂಪತಿ ಶುಭ ಹಾರೈಸಿದ್ರು. ಚೇತನ್ ಅವರ ತಂದೆ ಡಾ.ಅಮರ್ ಮತ್ತು ತಾಯಿ ಡಾ.ಮಂಗಳ ಮಗನ ಹೊಸ ಜೀವನದ ಸಂಭ್ರಮೋತ್ಸವದಲ್ಲಿ ಪಾಲ್ಗೊಂಡಿದ್ದರು.

  • ಆ ದಿನಗಳು ಚೇತನ್.. ಏನದು 9 ಲಕ್ಷದ ಕಥೆ..?

    is there any link behind arjun sarja and  sruthi hariharan me too story

    ನಟಿ ಶೃತಿ ಹರಿಹರನ್, ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರ ಹಿಂದೆ ಪಿತೂರಿ ಇದೆಯಾ..? ಅಂಥಾದ್ದೊಂದು ಆರೋಪ ಮಾಡಿರುವುದು ಅರ್ಜುನ್ ಸರ್ಜಾ ಅವರ ಆಪ್ತರೂ ಆಗಿರುವ ಉದ್ಯಮಿ ಪ್ರಶಾಂತ್ ಸಂಬರಗಿ ಹಾಗೂ ನಿರ್ಮಾಪಕ ಮುನಿರತ್ನ. ಅದು ಪ್ರೇಮ ಬರಹ ಚಿತ್ರದ ವೇಳೆಯಲ್ಲಾದ ಘಟನೆ.

    ಅರ್ಜುನ್ ಸರ್ಜಾ ತಮ್ಮ ಪುತ್ರಿ ಐಶ್ವರ್ಯಾರನ್ನು ಪ್ರೇಮ ಬರಹ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಆ ಚಿತ್ರಕ್ಕೆ ಮೊದಲು ನಾಯಕರಾಗಿ ಆಯ್ಕೆಯಾಗಿದ್ದವರು ಆ ದಿನಗಳು ಚೇತನ್. ಆಗ ಚೇತನ್‍ಗೆ ಅರ್ಜುನ್ ಸರ್ಜಾ 10 ಲಕ್ಷ ಅಡ್ವಾನ್ಸ್ ಕೂಡಾ ಕೊಟ್ಟಿದ್ದರು. ನಂತರ ಬೇರೆ ಬೇರೆ ಕಾರಣಗಳಿಂದಾಗಿ ಚೇತನ್‍ರನ್ನು ಚಿತ್ರದಿಂದ ಕೈಬಿಟ್ಟಿದ್ದರು. ಹಾಗೆ ಅವಕಾಶ ಕೈ ತಪ್ಪಿದ್ದಕ್ಕೆ ನಿಮಗೆ ತಕ್ಕ ಪಾಠ ಕಲಿಸುವೆ ಎಂದು ಮೆಸೇಜ್ ಮಾಡಿದ್ದರು ಚೇತನ್. ಈಗ ಶೃತಿ ಆರೋಪದ ಹಿಂದೆ ಕೆಲಸ ಮಾಡುತ್ತಿರುವುದು ಪ್ರೇಮ ಬರಹ ಚಿತ್ರದಿಂದ ಕೈ ಬಿಟ್ಟಿದ್ದು ಎಂದಿದ್ದಾರೆ ಪ್ರಶಾಂತ್ ಸಂಬರಗಿ ಹಾಗೂ ಮುನಿರತ್ನ.

    ಈ ಬಗ್ಗೆ ಚೇತನ್ ಹೇಳೋದೇ ಬೇರೆ. ಅರ್ಜುನ್ ಸರ್ಜಾ ಅಡ್ವಾನ್ಸ್ ಕೊಟ್ಟಿದ್ದರು ಅನ್ನೋದನ್ನು ಅವರು ಒಪ್ಪಿದ್ದಾರೆ. 10 ಲಕ್ಷ ಅಲ್ಲ,  9 ಲಕ್ಷ ರೂಪಾಯಿ ಅಡ್ವಾನ್ಸ್ ಕೊಟ್ಟಿದ್ದರು. ಅವರು ವಾಪಸ್ ಕೇಳಿಲ್ಲ. ನೋಟಿಸ್ ಕೂಡಾ ಕೊಟ್ಟಿಲ್ಲ. ಶೋಷಣೆಗೊಳಗಾಗುತ್ತಿರುವವರ ಪರ ನಾನಿದ್ದೇನೆ ಎಂದಿದ್ದಾರೆ ಚೇತನ್.

    ಸಿನಿಮಾದಿಂದ ಹೊರಬಂದ ಮೇಲೆ, ಅಡ್ವಾನ್ಸ್ ಪಡೆದುಕೊಂಡಿದ್ದ ಹಣವನ್ನು ಕೇಳದೇ ಹೋದರೆ ಕೊಡಬಾರದಾ..? ಏನೋ.. ಪ್ರಶ್ನೆಗಳು ಹಾಗೇ ಉಳಿದುಕೊಂಡಿವೆ.

  • ಚೇತನ್‍ಗೆ ಪ್ರಚಾರದ ಹುಚ್ಚು - ಫೈರ್‍ನಿಂದ ಪ್ರಿಯಾಂಕಾ ಉಪೇಂದ್ರ ನಿರ್ಗಮನ

    chethan is crazy for publicity 0 priyanka upendra

    ಮೀಟೂ ಅಭಿಯಾನ ಹಲವು ಸ್ಟಾರ್‍ಗಳನ್ನು ಮಾಧ್ಯಮಗಳ ಕಟಕಟೆಯಲ್ಲಿ ನಿಲ್ಲಿಸಿದ್ದರೆ, ಮೀಟೂ ಅಭಿಯಾನಕ್ಕೆ ಆಸರೆ ಎನಿಸಿದ್ದ ಫೈರ್ ಸಂಸ್ಥೆಯೇ ಬಿರುಕುಬಿಟ್ಟಿದೆ. ಫೈರ್ ಸಂಸ್ಥೆಯಿಂದ ಪ್ರಿಯಾಂಕ ಉಪೇಂದ್ರ ನಿರ್ಗಮಿಸಿದ್ದಾರೆ. ಅರ್ಜುನ್ ಸರ್ಜಾ ವಿರುದ್ಧ ಆರೋಪಿಸಿದ್ದ ಶೃತಿ ಹರಿಹರನ್ ಜೊತೆಗೆ ನಿಂತಿದ್ದದ್ದು, ಇದೇ ಫೈರ್ ಸಂಸ್ಥೆ. ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಪ್ರಿಯಾಂಕಾ ಉಪೇಂದ್ರ. ಈಗ ತಾವೇ ಸ್ಥಾಪಿಸಿದ್ದ ಸಂಸ್ಥೆಯಿಂದ ಹೊರನಡೆದಿದ್ದಾರೆ ಪ್ರಿಯಾಂಕಾ ಉಪೇಂದ್ರ. ಅವರ ನಿರ್ಗಮನಕ್ಕೆ ಕಾರಣ, ದಾರಿ ತಪ್ಪುತ್ತಿರುವ ಮೀಟೂ ಅಭಿಯಾನ ಮತ್ತು ಸಂಸ್ಥೆಯ ಸದಸ್ಯನಾಗಿರುವ ನಟ ಚೇತನ್‍ರ ಆತುರ, ಅತಿರೇಕದ ವರ್ತನೆ.

    ಹೆಣ್ಣು ಮಕ್ಕಳ ನೋವಿಗೆ ದನಿಯಾಗುತ್ತಿದ್ದ ಫೈರ್‍ನಲ್ಲಿ ಪ್ರಿಯಾಂಕ 2 ವರ್ಷಗಳಿಂದ ಅಧ್ಯಕ್ಷೆಯಾಗಿದ್ದರು. ಈಗ..

    ಪ್ರಿಯಾಂಕಾ ಉಪೇಂದ್ರ, ನಟ ಚೇತನ್ ಸಂಸ್ಥೆಯ ದಾರಿ ತಪ್ಪಿಸುತ್ತಿದ್ದಾರೆ. ಅವರಿಗೆ ಸಮಸ್ಯೆ ಬಗೆಹರಿಯುವುದಕ್ಕಿಂತ, ಮಾಧ್ಯಮಗಳು, ಸೋಷಿಯಲ್ ಮೀಡಿಯಾಗಳ ಎದುರು ಹೋಗಿ ಪ್ರಚಾರ ಗಿಟ್ಟಿಸುವುದೇ ಮುಖ್ಯವಾಗಿದೆ ಎಂದಿದ್ದಾರೆ. ಪ್ರಿಯಾಂಕಾ ಅಷ್ಟೇ ಅಲ್ಲ, ಸಂಸ್ಥೆಯಿಂದ ವೀಣಾ ಸುಂದರ್ ಕೂಡಾ ಹೊರಬಂದಿದ್ದಾರೆ.

    ಚಿತ್ರರಂಗ ಒಂದು ಮನೆಯಿದ್ದಂತೆ. ಮನೆಯಲ್ಲಿ ಏನಾದರೂ ಗಲಾಟೆ ಆದಾಗ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತೇವೋ.. ಅಥವಾ ಹಿರಿಯರ ಜೊತೆ ಕುಳಿತು ಬಗೆಹರಿಸಿಕೊಳ್ಳುತ್ತೇವೋ.. ಚಿತ್ರರಂಗ ಒಂದು ಫ್ಯಾಮಿಲಿ ಅನ್ನೋದನ್ನ ಮೀಟೂ ಅಥವಾ ಫೈರ್ ಸಂಸ್ಥೆಯನ್ನು ದಾರಿ ತಪ್ಪಿಸುತ್ತಿರುವವರೇ ಹೇಳಬೇಕು ಎಂದಿದ್ದಾರೆ ಪ್ರಿಯಾಂಕಾ ಉಪೇಂದ್ರ.

    ಚಿತ್ರರಂಗದಲ್ಲಿ ತೊಂದರೆಗೊಳಗಾದ ಹೆಣ್ಣು ಮಕ್ಕಳಿಗೆ ಧೈರ್ಯ ಹೇಳುವುದು, ಕಾನೂನು ನೆರವು ನೀಡುವುದು ಹಾಗೂ ಸಮಸ್ಯೆ ಬಗೆಹರಿಸುವುದು ನಮ್ಮ ಉದ್ದೇಶವಾಗಿತ್ತು. ಹಿರಿಯರನ್ನು ಒಳಗೊಂಡೇ ಫೈರ್ ಸಂಸ್ಥೆ ರೂಪಿಸಿದ್ದೆವು. ಅಲ್ಲಿಯೂ ಸಮಸ್ಯೆ ಬಗೆಹರಿಯದೇ ಹೋದಾಗ ಕಾನೂನಿನ ಮೊರೆ ಹೋಗುವುದು ನಮ್ಮ ಉದ್ದೇಶವಾಗಿತ್ತು. ಆದರೆ, ಸಂಸ್ಥೆಗೆ ಸೇರಿದ ಚೇತನ್‍ಗೆ ಬೇರೆಯದೇ ಉದ್ದೇಶಗಳಿದ್ದವು. ಪ್ರತಿಯೊಂದನ್ನೂ ಸುದ್ದಿ ಮಾಡುವ, ದೊಡ್ಡದಾಗಿ ಮಾತನಾಡುವ, ಎಲ್ಲದಕ್ಕೂ ಮೀಡಿಯಾಗಳ ಮುಂದೆ ಹೋಗುವ ಹುಚ್ಚು. ಸೂಕ್ಷ್ಮ ವಿಚಾರಗಳನ್ನು ಬೀದಿಯಲ್ಲಿ ಮಾತನಾಡಬಾರದು ಎಂಬ ಸೂಕ್ಷ್ಮತೆಯೇ ಅವರಿಗೆ ಇಲ್ಲ ಎಂದಿದ್ದಾರೆ ಪ್ರಿಯಾಂಕಾ ಉಪೇಂದ್ರ.

    ಪ್ರತಿಯೊಂದನ್ನೂ ದೊಡ್ಡ ದನಿಯಲ್ಲೇ ಮಾತನಾಡುವ ಚೇತನ್, ಅಂಬರೀಶ್ ಅವರ ಎದುರೂ ಕೂಗಾಡಿದ್ದರಂತೆ. ಆಗ ಪ್ರಿಯಾಂಕಾ ಉಪೇಂದ್ರ ಬುದ್ದಿ ಹೇಳಿದ್ದರಂತೆ. ಅಷ್ಟೇ ಅಲ್ಲ, ವಾಣಿಜ್ಯ ಮಂಡಳಿಗೆ ಕೊಡುವ ದೂರುಗಳನ್ನು ನಮಗೇ ಕೊಡಿ ಎನ್ನುತ್ತಿದ್ದಾರೆ ಚೇತನ್. ಏನು ಅದರ ಅರ್ಥ..? ನಿಮಗಿಂತ ನಾವೇ ದೊಡ್ಡವರು ಎಂದು ಹೇಳಿದಂತೆ ಅಲ್ಲವಾ ಅದು..? ಇದು ಪ್ರಿಯಾಂಕಾ ಉಪೇಂದ್ರ ಪ್ರಶ್ನೆ.

    ಈಗಿನ ಶೃತಿ ಹರಿಹರನ್ ವಿವಾದವನ್ನು ಪ್ರಸ್ತಾಪಿಸಿರುವ ಪ್ರಿಯಾಂಕಾ, ಗಲಾಟೆಯಾಯಿತು. ಸುದ್ದಿಯಾಯಿತು. ವಿವಾದವಾಯಿತು. ಏನೂ ಆಗದೇ ಹೋದಾಗ.. ನೊಂದವರ ಧ್ವನಿಯನ್ನೇ ಅನುಮಾನದಿಂದ ನೋಡುವಂತಾಗುತ್ತೆ. ಅಷ್ಟೇ ಎಂದಿದ್ದಾರೆ.

  • ಜರ್ನಲಿಸ್ಟ್ ಆದರು ಆ ದಿನಗಳ ಚೇತನ್

    athiratha movie image

    ಚೇತನ್. ಆ ದಿನಗಳು ಮೂಲಕ ಬೆಳಕಿಗೆ ಬಂದ ಚೇತನ್, ನಂತರ ಮಿಂಚಿದ್ದು ಮೈನಾ ಚಿತ್ರದಲ್ಲಿಯೇ. ಸಿನಿಮಾಗಳಿಗಿಂತ ಹೆಚ್ಚಾಗಿ ಸಾಮಾಜಿಕ ಕಾರ್ಯಗಳಲ್ಲಿಯೇ ತೊಡಗಿಕೊಳ್ಳುವ ಚೇತನ್, ಈಗ ಪತ್ರಕರ್ತರಾಗಿದ್ದಾರೆ.

    ರಿಯಲ್ ಆಗಿ ಅಲ್ಲ, ರೀಲ್ ಲೈಫ್‍ನಲ್ಲಿ. ಅತಿರಥ ಚಿತ್ರದಲ್ಲಿ ಚೇತನ್ ಅವರದ್ದು ಪತ್ರಕರ್ತನ ಪಾತ್ರ. ಶಿಕ್ಷಣ ಕ್ಷೇತ್ರದ ಹುಳುಕುಗಳನ್ನು ಹೊರತೆಗೆಯುವ ಆ್ಯಂಗ್ರಿಯಂಗ್ ಮ್ಯಾನ್ ಪಾತ್ರ ಚೇತನ್ ಅವರದ್ದು. `ಮೀಡಿಯಾ ಅಂದ್ರೆ ಬರೀ ಕಾಂಟ್ರವರ್ಸಿ, ಟಿಆರ್‍ಪಿ, ಪಬ್ಲಿಸಿಟಿ ಅಲ್ಲ, ಇಟ್ಸ್ ಎ ಸೋರ್ಸ್ ಆಫ್ ರೆಸ್ಪಾನ್ಸಿಬಿಲಿಟಿ' ಅನ್ನೋ ಸಂದೇಶ ಹೇಳಲಿದ್ದಾರೆ ಚೇತನ್.

    ಇವೆಲ್ಲದರ ಜೊತೆ ಚಿತ್ರದಲ್ಲಿ ಥ್ರಿಲ್ಲರ್ ಹಾಗೂ ಆ್ಯಕ್ಷನ್ ದೃಶ್ಯಗಳಿವೆಯಂತೆ. ಲತಾ ಹೆಗಡೆ ಎಂಬ ಬಳುಕುವ ಬಳ್ಳಿ ಚಿತ್ರಕ್ಕೆ ನಾಯಕಿ. 

    ಆಕಾಶ್, ಅರಸು ಖ್ಯಾತಿಯ ಮಹೇಶ್ ಬಾಬು ನಿರ್ದೇಶನದ ಚಿತ್ರ ಅತಿರಥ. ಹೀಗಾಗಿಯೇ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

  • ನಟ ಚೇತನ್ ಅಹಿಂಸಾ ಅರೆಸ್ಟ್. ನ್ಯಾಯಾಂಗ ಬಂಧನ : ಪ್ರಕರಣದ ಕಂಪ್ಲೀಟ್ ವಿವರ

    ನಟ ಚೇತನ್ ಅಹಿಂಸಾ ಅರೆಸ್ಟ್. ನ್ಯಾಯಾಂಗ ಬಂಧನ : ಪ್ರಕರಣದ ಕಂಪ್ಲೀಟ್ ವಿವರ

    ಆ ದಿನಗಳು ಖ್ಯಾತಿಯ ನಟ ಚೇತನ್, ಸಿನಿಮಾ ರಂಗಕ್ಕಿಂತ ಹೆಚ್ಚಾಗಿ ಹೋರಾಟಗಳಲ್ಲೇ ಗುರುತಿಸಿಕೊಂಡವರು. ಈಗ ಚೇತನ್ ಅವರ ಬಂಧನವಾಗಿದೆ. ಚೇತನ್ ಅವರನ್ನು ಮ್ಯಾಜಿಸ್ಟ್ರೇಟ್ ಎದುರು ಹಾಜರು ಪಡಿಸಿದ ಪೊಲೀಸರು ಚೇತನ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಚೇತನ್ ಅವರಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

    ಏನಿದು ಪ್ರಕರಣ?

    ಸದ್ಯಕ್ಕೆ ಇಡೀ ಕರ್ನಾಟಕವನ್ನು ಕಾಡುತ್ತಿರುವುದು ಹಿಜಾಬ್ ವಿವಾದ ಪ್ರಕರಣ. ಇದು ಹೈಕೋರ್ಟ್ ತ್ರಿಸದಸ್ಯ ಪೀಠದಲಿಲದೆ. ಈ ತ್ರಿಸದಸ್ಯ ಪೀಠದಲ್ಲಿರುವ ನ್ಯಾ.ಕೃಷ್ಣ ದೀಕ್ಷಿತ್ ಅವರ ಹಿಂದಿನ ಪ್ರಕರಣವೊಂದನ್ನು ಉಲ್ಲೇಖಿಸಿ ಚೇತನ್ ಟ್ವೀಟ್ ಮಾಡಿದ್ದರು. ತಾವು ಆಗ ಮಾಡಿದ್ದ ಟ್ವೀಟ್‍ನ್ನು ಮತ್ತೆ ತೆಗೆದುಕೊಂಡು ಇಂತಹವರಿಂದ ಹಿಜಾಬ್ ಪ್ರಕರಣಕ್ಕೆ ನ್ಯಾಯ ಸಿಗುತ್ತಾ ಎಂದು ಪ್ರಶ್ನಿಸಿದ್ದರು. ಪ್ರಕರಣದ ಬಗ್ಗೆ ಸುಮೊಟೊ ಕೇಸ್ ದಾಖಲಿಸಿದ ಪೊಲೀಸರು ಚೇತನ್ ಅವರನ್ನು ಬಂಧಿಸಿದ್ದಾರೆ. ಚೇತನ್ ಅವರ ಟ್ವೀಟ್ ಮುಸ್ಲಿಮರನ್ನು ಪ್ರಚೋದಿಸುವಂತಿದೆ ಎನ್ನವುದು ಪೊಲೀಸ್ ಎಫ್‍ಐಆರ್‍ನಲ್ಲಿದೆ. ಶಾಂತಿಭಂಗಕ್ಕೆ ಪ್ರಚೋದನೆ ಹಾಗೂ ನ್ಯಾಯಮೂರ್ತಿಗಳಿಗೆ ಅವಮಾನ ಪ್ರಕರಣಗಳಲ್ಲಿ ಚೇತನ್ ಅವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

    ಚೇತನ್ ಅವರನ್ನು ಅರೆಸ್ಟ್ ಮಾಡುವ ಬಗ್ಗೆ ನೋಟಿಸ್ ನೀಡಿಲ್ಲ. ವಿಚಾರಣೆ ಮಾಡಿಲ್ಲ. ಇದು ಅಕ್ರಮ ಎಂದು ಚೇತನ್ ಬೆಂಬಲಿಗರು ಶೇಷಾದ್ರಿಪುರಂ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಚೇತನ್ ಅವರ ಪತ್ನಿ ಮೇಘಾ ಚೇತನ್ ಅವರನ್ನು ಪೊಲೀಸರೇ ಕಿಡ್ನಾಪ್ ಮಾಡಿದ್ದಾರೆ ಎಂದು ಫೇಸ್‍ಬುಕ್ ಲೈವ್‍ಗೆ ಬಂದು ಹೇಳಿದರು. ನಂತರ ದೂರನ್ನೂ ಕೊಟ್ಟರು.

    ಚೇತನ್ ಅವರಿಗೆ ಜಾಮೀನು ನೀಡುವಂತೆ ವಕೀಲ ಕೆ.ಬಾಲನ್ ಇಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. ಚೇತನ್ ಅವರ ಹೋರಾಟಕ್ಕೆ ನನ್ನ ಬೆಂಬಲ ಇದೆ. ಅವರು ಆತ್ಮವಿಶ್ವಾಸದಿಂದಲೇ ಇದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ ಎಂದಿದ್ದಾರೆ ಮೇಘಾ

  • ನಟ ಚೇತನ್`ಗೆ ಜಾಮೀನು : ಆದರೂ ಬಿಡುಗಡೆಯಾಗಲಿಲ್ಲ ಏಕೆ..?

    ನಟ ಚೇತನ್`ಗೆ ಜಾಮೀನು : ಆದರೂ ಬಿಡುಗಡೆಯಾಗಲಿಲ್ಲ ಏಕೆ..?

    ನಟ ಚೇತನ್ ಅಹಿಂಸಾ ಅವರನ್ನು, ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಹಾಗೂ ಮುಸ್ಲಿಮರನ್ನು ಪ್ರಚೋದಿಸುವ ರೀತಿ ಪೋಸ್ಟ್ ಹಾಕಿದ್ದಾರೆ ಎಂಬ ಆರೋಪದಲ್ಲಿ ಬಂಧಿಸಲಾಗಿತ್ತು. ಚೇತನ್ ಅವರ ಪತ್ನಿ ಮೇಘಾ ತಮ್ಮ ಪತಿಯನ್ನು ಪೊಲೀಸರೇ ಕಿಡ್ನಾಪ್ ಮಾಡಿದ್ದಾರೆ ಎಂದು ದೂರು ಕೊಟ್ಟರಾದರೂ, ಅತ್ತ ಪೊಲೀಸರು ಮ್ಯಾಜಿಸ್ಟ್ರೇಟ್ ಎದುರು ಚೇತನ್ ಅವರನ್ನು ಹಾಜರುಪಡಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈಗ ಚೇತನ್ ಅವರಿಗೆ ಜಾಮೀನು ಸಿಕ್ಕಿದೆ.

    ಚೇತನ್ ಅವರ ಮೇಲೆ ಐಪಿಸಿ 505(2) ಅಂದರೆ ಜಾತಿ, ಧರ್ಮ, ಎರಡು ಗುಂಪಿನ ನಡುವೆ ದ್ವೇಷ ಮೂಡಿಸುವಂತಹ ಹೇಳಿಕೆ ನೀಡಿದ್ದ ಆರೋಪ ಹಾಗೂ ಐಪಿಸಿ 504 ಅಂದ್ರೆ ಅಪರಾಧ ಎಸಗಲು ಪ್ರಚೋದನೆ ನೀಡಿದ ಆರೋಪ. ಈ ಎರಡೂ ಕೇಸ್‍ಗಳಲ್ಲಿ ಜಾಮೀನು ಸಿಕ್ಕಿದೆ. ಜಾಮೀನು ಸಿಕ್ಕಿದ್ದು ಶುಕ್ರವಾರ ಸಂಜೆ. ಈ ಶನಿವಾರ ತಿಂಗಳ 4ನೇ ಶನಿವಾರ. ಹಾಗೂ ನಾಳೆ ಭಾನುವಾರ. ಎರಡೂ ದಿನ ರಜೆ. ಒಂದು ಲಕ್ಷದ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಮತ್ತು ತನಿಖೆಗೆ ಸಹಕರಿಸುವಂತೆ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ. ಹೀಗಾಗಿ ಜಾಮೀನಿನ ಷರತ್ತುಗಳಾದ ಬಾಂಡ್ ಒದಗಿಸಲು ಸಾಧ್ಯವಾಗಿಲ್ಲ. ಚೇತನ್ ಅವರು ಸೋಮವಾರ ರಿಲೀಸ್ ಆಗುವ ಸಾಧ್ಯತೆಗಳಿವೆ.

  • ನಟ ಚೇತನ್`ಗೆ ಫಿಲ್ಮ್ ಚೇಂಬರ್ ವಾರ್ನಿಂಗ್

    ನಟ ಚೇತನ್`ಗೆ ಫಿಲ್ಮ್ ಚೇಂಬರ್ ವಾರ್ನಿಂಗ್

    ಸದಾ ಸುದ್ದಿಯಲ್ಲಿರುವ ನಟ ಚೇತನ್, ಈ ಬಾರಿ ಅಂಬರೀಷ್ ಸ್ಮಾರಕ, ರಸ್ತೆ ವಿಚಾರದಲ್ಲಿ ಸುಮಲತಾ ಅವರನ್ನು ಟೀಕಿಸಿ ಸುದ್ದಿಯಾಗಿದ್ದಾರೆ. ಈ ಕುರಿತು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಟೀಕೆ ಮಾಡಿದ್ದಾರೆ. ಆದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧಿಕೃತವಾಗಿ ಈ ಕುರಿತು ಎಚ್ಚರಿಕೆ ನೀಡಿದೆ.

    ಇದೇ 27 ಕ್ಕೆ ಅಂಬರೀಶ್ ಸ್ಮಾರಕ ಉದ್ಘಾಟನೆ ಮಾಡಿದ್ವಿ ಜೊತೆಗೆ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಅವರ ಹೆಸರಿಟ್ಟಿದ್ದೀವಿ, ಆದರೆ ಈ ವಿಚಾರವಾಗಿ ನಟ ಚೇತನ್ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಅಂಬರೀಶ್ ಸ್ಮಾರಕ ನಿರ್ಮಾಣ ಅಥವಾ ರೇಸ್ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡಬೇಕು ಎಂಬುದು ಸುಮಲತಾ ಅವರ ಒತ್ತಾಯ ಆಗಿರಲಿಲ್ಲ ಇಡೀಯ ಚಿತ್ರರಂಗದ ಒತ್ತಾಯ ಆಗಿತ್ತು. ಅಂಬರೀಶ್ ಅವರು ಸಾಕಷ್ಟು ಸೇವೆ ಸಲ್ಲಿಸಿದ್ದಾರೆ, ಚೇತನ್ ಅಹಿಂಸ ಅವರು ಪದೇ ಪದೇ ಚಿತ್ರರಂಗದ ಒಕ್ಕೂರಲ ಅಭಿಪ್ರಾಯದ ವಿರುದ್ಧ ಸಾರ್ವಜನಿಕ ಆಕ್ಷೇಪ ವ್ಯಕ್ತಪಡಿಸಿ ಮುಜುಗರ ಉಂಟು ಮಾಡುತ್ತಿದ್ದಾರೆ. ಕುಟುಂಬದಲ್ಲಿ ಇದ್ದುಕೊಂಡುಡು ಈ ರೀತಿ ಮಾತನಾಡುವುದು ತಪ್ಪು, ಇಡೀ ಚಿತ್ರರಂಗದ ಅಷ್ಟು ಆಯಾಮಗಳು ಸೇರಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ ಹಾಗಾಗಿ ಸ್ಮಾರಕ ನಿರ್ಮಾಣ ಆಗಿದೆ. ಆದರೆ ಈ ಬಗ್ಗೆ ಚೇತನ್ ಆಕ್ಷೇಪ ವ್ಯಕ್ತಪಡಿಸಿರುವುದು ಅಕ್ಷಮ್ಯ ಅಪರಾಧ. ಈ ರೀತಿಯ ಹೇಳಿಕೆಗಳನ್ನು ಕೋಡುವುದರಿಂದ ಅವರಿಗೆ ತಿಳಿ ಹೇಳುವ ಕೆಲಸ ಮಾಡುತ್ತೀವಿ, ನಾವು ಅವರನ್ನು ಸಂಪರ್ಕಿಸುವ ಯತ್ನ ಮಾಡಿದೆವು ಆದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ, ಇದೇ ರೀತಿಯ ವರ್ತನೆ ಮುಂದುವರೆದರೆ ಚಿತ್ರರಂಗದಿಂದ ಅಸಹಕಾರ ಕ್ರಮವನ್ನು ಕೈಗೊಳ್ಳುತ್ತೇವೆ  ಎಂದು ಎಚ್ಚರಿಕೆ ನೀಡಿದ್ದಾರೆ ಭಾ.ಮಾ.ಹರೀಶ್.

    ಚೇತನ್ ವಿರುದ್ಧ ಮುಂದಿನ ದಿನಗಳಲ್ಲಿ ಕ್ರಮ ಕೈಗೋಳ್ಳೊದು ಖಂಡಿತ. ಅಸಹಾಕಾರ ನೀಡುವ ತೀರ್ಮಾನಕ್ಕೆ ಮುಂದಾಗಲಿದ್ದೀವಿ. ಚಿತ್ರರಂಗದ ಯಾವುದೇ ಅಂಗ ಸಂಸ್ಥೆಗಳು ಅವರ ಸಿನಿಮಾಕ್ಕೆ ಕೆಲಸ ಮಾಡುವುದಿಲ್ಲ ಆದರೆ ಇದು ಈಗಲೇ ಅಲ್ಲ. ಇನ್ನೊಂದು ಸುತ್ತಿನ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದಾರೆ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್. ಅಂದಹಾಗೆ ನಟ ಚೇತನ್ ಸದ್ಯಕ್ಕೆ ಯಾವ ಚಿತ್ರಗಳಲ್ಲೂ ನಟಿಸುತ್ತಿಲ್ಲ.

  • ಪ್ರಿಯಾಂಕಾ ಉಪೇಂದ್ರ V/s  ಚೇತನ್ ಮೀಟೂ ಫೈರ್

    chethan speaks negative against priyanka upendra

    ಮೀಟೂ ವಿವಾದ, ಪ್ರಿಯಾಂಕ ಉಪೇಂದ್ರ ಮತ್ತು ಚೇತನ್ ಮಧ್ಯೆ ವಾರ್ ಸೃಷ್ಟಿಸಿದೆ. ಫೈರ್ ಸಂಸ್ಥೆಯಿಂದ ಹೊರಬಂದ ಪ್ರಿಯಾಂಕಾ ಉಪೇಂದ್ರ, ತಮ್ಮ ಕನಸಿನ ಫೈರ್ ಸಂಸ್ಥೆ ಹಾದಿ ತಪ್ಪುತ್ತಿದೆ. ನಟ ಚೇತನ್, ಪ್ರಚಾರದ ಹುಚ್ಚಿಗೆ ಬಿದ್ದು, ಸಂಸ್ಥೆಯ ಧ್ಯೇಯೋದ್ದೇಶವನ್ನೇ ಹಾಳು ಮಾಡುತ್ತಿದ್ದಾರೆ. ಅವರಿಗೆ ನ್ಯಾಯ ಸಿಗುವುದಕ್ಕಿಂತ ಹೆಚ್ಚಾಗಿ ಪಬ್ಲಿಸಿಟಿಯೇ ಮುಖ್ಯವಾಗಿದೆ ಎಂದು ದೂರಿದ್ದರು. ಈಗ ಪ್ರಿಯಾಂಕಾ ಉಪೇಂದ್ರ ಅವರ ಬಗ್ಗೆ ನಟ ಚೇತನ್ ದೂರಿದ್ದಾರೆ.

    ಪ್ರಿಯಾಂಕಾ ಉಪೇಂದ್ರ ಅವರಿಗೆ ಧೈರ್ಯವೂ ಇರಲಿಲ್ಲ. ಕಾರ್ಯಕ್ರಮ ದಕ್ಷತೆ, ಸಾಮಥ್ರ್ಯ, ಎಲ್ಲರನ್ನೂ ಒಳಗೊಳ್ಳುವ ಸಾಮಥ್ರ್ಯ ಇರಲಿಲ್ಲ ಎಂದಿದ್ದಾರೆ ಚೇತನ್.

    ಚೇತನ್ ಮಾತಿಗೆ ಬೇಸರ ವ್ಯಕ್ತಪಡಿಸಿರುವ ಪ್ರಿಯಾಂಕಾ, ಧೈರ್ಯ ಎಂದರೆ ಕೂಗಾಡುವುದಲ್ಲ. ನನ್ನ ಕಾರ್ಯವೈಖರಿಯ ಶೈಲಿಯೇ ಬೇರೆ. ಫೈರ್ ಸಂಸ್ಥೆ ಕಟ್ಟಲು ನಾನು ದುಡಿದಿದ್ದೇನೆ. ಹಲವು ಮಂತ್ರಿ, ಅಧಿಕಾರಿಗಳನ್ನು ಭೇಟಿಯಾಗಿದ್ದೇನೆ. ವಕೀಲರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಬಗ್ಗೆ ಸ್ಪಷ್ಟ ಅರಿವಿಟ್ಟುಕೊಂಡಿದ್ದೇನೆ ಎಂದಿದ್ದಾರೆ ಪ್ರಿಯಾಂಕಾ ಉಪೇಂದ್ರ.