ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ. ಸ್ಯಾಂಡಲ್‍ವುಡ್‍ನ ಮುದ್ದು ಜೋಡಿ. ಈ ಜೋಡಿಹಕ್ಕಿಯ ಪ್ರೇಮಕಥೆಗೀಗ ಒಂದು ವರ್ಷ. ಆ ಒಂದು ವರ್ಷವನ್ನು ರಕ್ಷಿತ್ ಶೆಟ್ಟಿ, ತಮ್ಮಿಬ್ಬರ ಹಳೆಯ ಫೋಟೋ ಮತ್ತು ವಿಡಿಯೋಗಳ ಕೊಲಾಜ್ ಮಾಡಿಸಿ, ರಶ್ಮಿಕಾಗೊಂದು ಪ್ರೇಮ ಪತ್ರ ಬರೆದು ಹಂಚಿಕೊಂಡಿದ್ದಾರೆ.
ನಮ್ಮಿಬ್ಬರ ಎಂಗೇಜ್‍ಮೆಂಟ್ ಆಗಿ ಒಂದು ವರ್ಷ ಕಳೆದಿದೆ. ನನಗೆ ನಂಬಲಾಗುತ್ತಿಲ್ಲ. ನಾನು ನಿನ್ನೊಂದಿಗೆ ಇದ್ದ ಸಮಯದಲ್ಲಿ ಸಾಕಷ್ಟು ಸಂಗತಿಗಳನ್ನು ಕಲಿತಿದ್ದೇನೆ. ನಿನ್ನಿಂದ ದೂರವಿದ್ದ ಸಮಯದಲ್ಲಿ ಕಲಿಯವ ಅವಕಾಶ ಕಳೆದುಕೊಂಡಿದ್ದೇನೆ. ನನ್ನ ಜೀವನದಲ್ಲಿ ಗಳಿಸಿದ ಬಹುದೊಡ್ಡ ಆಸ್ತಿ ನೀನು. ನಿನ್ನನ್ನು ಪ್ರತಿ ದಿನವೂ ಹೆಚ್ಚೆಚ್ಚು ಪ್ರೀತಿಸುತ್ತೇನೆ, ಸ್ವೀಟ್ ಹಾರ್ಟ್ ಎಂದು ಪ್ರೇಮ ಪತ್ರ ಬರೆದಿದ್ದಾರೆ ರಕ್ಷಿತ್ ಶೆಟ್ಟಿ.
ಇದು ಪ್ರೀತಿಯಲ್ಲ.. ಬಿಕಾಸ್ ಪ್ರೀತಿ ಎಂದರೆ ಪರ್ಫೆಕ್ಟ್. ಎರಡು ಸುಂದರ ಮನಸ್ಸುಗಳು ಬೇರೆಯದ್ದನ್ನು ಹುಡುಕುತ್ತಿದ್ದಾಗ ಒಂದಾದ ಜೀವನ ಇದು. ಬದುಕಿನ ಪಾಠದ ಬಗ್ಗೆ ಒಬ್ಬರಿಗೊಬ್ಬರು ಕಲಿಸಿಕೊಂಡು ಬದುಕೋಣ. ನಾವಿಬ್ಬರೂ ಬೆಸ್ಟ್ ಟೀಚರ್ಸ್. ನಾನು ನಿಮ್ಮಿಂದ ಬಹಳಷ್ಟನ್ನು ಕಲಿತಿದ್ದೇನೆ.. ನಾನು.. ನೀವು ತುಂಬಾ ಕೋಪ ಮಾಡಿಕೊಂಡಿದ್ದೇವೆ. ಅದಕ್ಕಾಗಿ ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಐ ಲವ್ ಯೂ ಎಂದಿದ್ದಾರೆ ರಶ್ಮಿಕಾ.
ಪ್ರೀತಿಯೆಂದರೆ ಪರಸ್ಪರ ಗೌರವಿಸುವುದು ಎನ್ನುವುದು ಕೂಡಾ ಈ ಇಬ್ಬರ ಪ್ರೇಮಪತ್ರದ ಸ್ವಾರಸ್ಯ. ಇನ್ನೂ ಒಂದಷ್ಟು ವರ್ಷ ಪ್ರೀತಿ ಮಾಡಿಕೊಂಡೇ ಇರುತ್ತೇವೆ. ಇನ್ನೂ ನೂರು ವರ್ಷ ಆದರೂ ನಮ್ಮಿಬ್ಬರ ಪ್ರೀತಿ ಕಡಿಮೆ ಆಗುವುದಿಲ್ಲ. ವಿ ಲವ್ ಈಚ್ ಅದರ್ ಎಂದಿದ್ದಾರೆ ರಶ್ಮಿಕಾ.
ಇದು ಸಿಂಪಲ್ಲಾಗ್ ಒಂದ್ ವರ್ಷದ್ ಲವ್ ಸ್ಟೋರಿ ಕಥೆ.