` nikhil gowda - chitraloka.com | Kannada Movie News, Reviews | Image

nikhil gowda

  • ನಿಖಿಲ್ ರೈಡರ್`ಗೆ ದಿವ್ಯ ಸ್ಪಂದನ ಶುಭ ಹಾರೈಕೆ

    ನಿಖಿಲ್ ರೈಡರ್`ಗೆ ದಿವ್ಯ ಸ್ಪಂದನ ಶುಭ ಹಾರೈಕೆ

    ರೈಡರ್ ನಾಳೆ ರಿಲೀಸ್ ಆಗುತ್ತಿದೆ. ನಿಖಿಲ್ ಕುಮಾರಸ್ವಾಮಿ ಸುದೀರ್ಘ ಗ್ಯಾಪ್ ನಂತರ ತೆರೆಗೆ ಬರುತ್ತಿರೋ ಚಿತ್ರವಿದು. ಲಹರಿಯವರು ಬಹಳ ಕಾಲದ ನಂತರ ನಿರ್ಮಾಣಕ್ಕೆ ಕೈ ಹಾಕಿರೋ ಚಿತ್ರವೂ ರೈಡರ್. ಈಗಾಗಲೇ ಚಿತ್ರದ ಬಗ್ಗೆ ಪಾಸಿಟಿವ್ ಟಾಕ್ ಶುರುವಾಗಿದ್ದು, ಈಗ ನಟಿ ಹಾಗೂ ರಾಜಕಾರಣಿ ರಮ್ಯಾ ಅರ್ಥಾತ್ ದಿವ್ಯಸ್ಪಂದನ ಕೂಡಾ ನಿಖಿಲ್ ರೈಡರ್‍ಗೆ ಶುಭ ಕೋರಿದ್ದಾರೆ.

    ಈ ತಿಂಗಳು ಒಳ್ಳೊಳ್ಳೆ ಕನ್ನಡ ಚಿತ್ರಗಳು ರಿಲೀಸ್ ಆಗುತ್ತಿವೆ. ಆಯ್ಕೆಗೆ ಸೀಮಿತರಾಗಬೇಡಿ. ಎಲ್ಲ ಚಿತ್ರಗಳನ್ನೂ ನೋಡಿ. ಬೆಸ್ಟ್ ವಿಷಸ್ ಟು ನಿಖಿಲ್ ಕುಮಾರ್ ಎಂದಿದ್ದಾರೆ ರಮ್ಯಾ. ಬಡವ ರಾಸ್ಕಲ್ ಚಿತ್ರಕ್ಕೂ ರಮ್ಯಾ ಶುಭ ಕೋರಿದ್ದಾರೆ. ಆದರೆ ನಿಖಿಲ್ ಅವರಿಗೆ ಶುಭ ಕೋರಿರುವುದಕ್ಕೆ ವಿಶೇಷ ಅರ್ಥವನ್ನು ಅವರ ರಾಜಕಾರಣದಲ್ಲಿ ಹುಡುಕಬೇಕು.. ಹಾಗಾಗಿಯೇ ಈ ಹಾರೈಕೆಗೆ ವಿಶೇಷ ಅರ್ಥ.

    ನಿಖಿಲ್ ಅವರ ಎದುರು ರೈಡರ್‍ನಲ್ಲಿ ಕಾಶ್ಮೀರ ಪರದೇಸಿ ನಾಯಕಿಯಾಗಿ ನಟಿಸಿದ್ದು ವಿಜಯ್ ಕುಮಾರ್ ಕೊಂಡ ನಿರ್ದೇಶಕ.

  • ನಿಖಿಲ್ ಹೊಸ ಚಿತ್ರಕ್ಕೆ ತೆಲುಗು ಡೈರೆಕ್ಟರ್

    telugu movie director vijay kumar konda directs nikhil kumaraswamy

    ನಿಖಿಲ್ ಕುಮಾರಸ್ವಾಮಿ ಹೊಸ ಚಿತ್ರಕ್ಕೆ ವೇದಿಕೆ ರೆಡಿಯಾಗಿದೆ. ಸದ್ಯ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಬ್ಯುಸಿಯಿರುವ ನಿಖಿಲ್, 3ನೇ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ನಿಖಿಲ್‍ರ ಹೊಸ ಚಿತ್ರದ ನಿರ್ದೇಶಕ ವಿಜಯ್ ಕುಮಾರ್ ಕೊಂಡ. 

    ಗುಂಡೆ ಜಾರಿ ಗಲ್ಲಂತೈಂದಿ, ಒಕ ಲೀಲಾ ಕೋಸಮ್ ಚಿತ್ರಗಳನ್ನು ನಿರ್ದೇಶಿಸಿದ್ದ ವಿಜಯ್ ಕುಮಾರ್ ಕೊಂಡ, ಕುಮಾರಸ್ವಾಮಿಯವರ ಹುಟ್ಟುಹಬ್ಬದ ದಿನ ಡಿಸೆಂಬರ್ 16ರಂದು ಹೊಸ ಚಿತ್ರದ ಘೋಷಣೆ ಮಾಡಲಿದ್ದಾರೆ.

    3ನೇ ಚಿತ್ರ ಕೂಡಾ ಚೆನ್ನಾಂಬಿಕಾ ಪ್ರೊಡಕ್ಷನ್ಸ್‍ನಲ್ಲೇ ತಯಾರಾಗಲಿದ್ದು, ಪಕ್ಕಾ ಫ್ಯಾಮಿಲಿ ಎಂಟರ್‍ಟೈನರ್ ಆಗಿರಲಿದೆಯಂತೆ. ನಾಯಕಿಯ ಪಾತ್ರಕ್ಕೆ ಈಗ ತೆಲುಗಿನಲ್ಲಿ ಬ್ಯುಸಿಯಾಗಿರುವ ವಜ್ರಕಾಯ ಬೆಡಗಿ ನಭಾ ನಟೇಶ್ ಅವರನ್ನು ಸಂಪರ್ಕಿಸಲಾಗಿದೆ. ಇನ್ನೂ ಫೈನಲ್ ಆಗಿಲ್ಲ. 

  • ಫೆಬ್ರವರಿ 18ಕ್ಕೆ ತಾಜ್ ವೆಸ್ಟ್ ಎಂಡ್‍ನಲ್ಲಿ ನಿಶ್ಚಿತಾರ್ಥ

    nikhil revathi's engagemt in february at taj west end

    ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಮದುವೆಯಾಗುತ್ತಿದ್ದಾರೆ. ಲೇಔಟ್ ಮಂಜುನಾಥ್ ಅವರ ಮೊಮ್ಮಗಳು ರೇವತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ಫೆಬ್ರವರಿ 10ರಂದು ನಡೆಯಲಿದ್ದು, ತಾಜ್ ವೆಸ್ಟ್ ಎಂಡ್ ಹೋಟೆಲ್ ನಿಶ್ಚಿತಾರ್ಥಕ್ಕೆ ಬುಕ್ ಆಗಿದೆ.

    5 ಸಾವಿರಕ್ಕೂ ಹೆಚ್ಚು ಜನ ನಿಶ್ಚಿತಾರ್ಥದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಮದುವೆ ರಾಮನಗರದಲ್ಲಿ ಅದ್ಧೂರಿಯಾಗಿ ನೆರವೇರಲಿದೆ ಎಂದು ಕುಮಾರಸ್ವಾಮಿಯೇ ತಿಳಿಸಿದ್ದಾರೆ.

  • ಮಗ ನಿಖಿಲ್ ಸಿನಿಮಾ ಹೊಗಳಿದ ಹೆಚ್‍ಡಿಕೆ

    ಮಗ ನಿಖಿಲ್ ಸಿನಿಮಾ ಹೊಗಳಿದ ಹೆಚ್‍ಡಿಕೆ

    ರೈಡರ್ ಚಿತ್ರದಲ್ಲಿ ನಿಖಿಲ್ ಹೀರೋ. ಪ್ರೇಕ್ಷಕರು ನೋಡಿ ಮೆಚ್ಚಿಕೊಂಡಿದ್ದಾರೆ. ಆ ಚಿತ್ರಕ್ಕೆ ಈಗ ಅಪ್ಪ ಹೆಚ್.ಡಿ. ಕುಮಾರಸ್ವಾಮಿ ಮೆಚ್ಚುಗೆಯೂ ಸಿಕ್ಕಿದೆ. ಕುಮಾರಸ್ವಾಮಿ ರಾಜಕೀಯಕ್ಕೆ ಬರೋ ಮೊದಲು ಚಿತ್ರ ವಿತರಕ ಮತ್ತು ನಿರ್ಮಾಪಕರಾಗಿದ್ದವರು. ಚಿತ್ರಗಳ ಕ್ವಾಲಿಟಿಯನ್ನು ಕರಾರುವಾಕ್ ಆಗಿ ಅಳೆಯೋದ್ರಲ್ಲಿ ಕುಮಾರಸ್ವಾಮಿ ದಿ ಬೆಸ್ಟ್ ಎನಿಸಿಕೊಂಡಿದ್ದವರು. ಅವರೀಗ ರೈಡರ್ ಚಿತ್ರವನ್ನು ನೋಡಿ ಮೆಚ್ಚಿದ್ದಾರೆ.

    ಮೊದಲ ಚಿತ್ರಕ್ಕಿಂತ ಈಗ ಇನ್ನೂ ಚೆನ್ನಾಗಿ ನಟಿಸಿದ್ದಾನೆ. ನಿಖಿಲ್‍ಗೆ ರಾಜಕೀಯಕ್ಕಿಂತ ಚಿತ್ರರಂಗದಲ್ಲೇ ಒಳ್ಳೆಯ ಭವಿಷ್ಯ ಇದೆ. ಅವನಲ್ಲೊಬ್ಬ ಒಳ್ಳೆಯ ಕಲಾವಿದನಿದ್ದಾನೆ. ಚಿತ್ರರಂಗಕ್ಕೂ ಒಳ್ಳೊಳ್ಳೆಯ ಕಲಾವಿದರ ಅಗತ್ಯ ಇದೆ. ಚಿತ್ರರಂಗಕ್ಕೀಗ ಪುನೀತ್ ಅವರಂತಹ ನಟ ಬೇಕು. ನಿಖಿಲ್ ಅವರ ರೈಡರ್ ಚಿತ್ರ ನೋಡಿದೆ. ಚೆನ್ನಾಗಿದೆ. ಕ್ರೌರ್ಯ ಹಿಂಸೆ ಇಲ್ಲದ ಕೊನೆಯವರೆಗೂ ಕುತೂಹಲ ಉಳಿಸಿಕೊಳ್ಳೋ ಸಿನಿಮಾ ರೈಡರ್ ಎಂದಿದ್ದಾರೆ ಹೆಚ್‍ಡಿಕೆ.

  • ಮಗನ ಅಭಿನಯ ಮೆಚ್ಚಿಕೊಂಡ ಮುಖ್ಯಮಂತ್ರಿ

    hd kumaraswamy appreciates nikhil in kurukshetra

    ರಾಜ್ಯದಲ್ಲೀಗ ಸರ್ಕಾರ ಉಳಿಯುತ್ತಾ.. ಉರುಳುತ್ತಾ ಅನ್ನೊದೇ ದೊಡ್ಡ ಚರ್ಚೆ. ಆದರೆ, ಸಿಎಂ ಆಗಿರುವ ಕುಮಾರಸ್ವಾಮಿ ಮಾತ್ರ ಕೂಲಾಗೇ ಇದ್ದಾರೆ. ಇಬ್ಬರು ಪಕ್ಷೇತರ ಶಾಸಕರು ಬೆಂಬಲ ವಾಪಸ್ ತೆಗೆದುಕೊಂಡು, ಇನ್ನೂ ಕೆಲವು ಶಾಸಕರು ಸಿಡಿದೆದ್ದಿದ್ದಾರೆ ಎಂಬ ಸೂಚನೆಯಿದ್ದರೂ.. ಅವರು ಮಾತ್ರ ಕೂಲ್ ಕೂಲ್. ಅವರು ನೆಮ್ಮದಿಯಾಗಿ.. ನಿರಾಳವಾಗಿ  ಮುನಿರತ್ನ ಅವರ ಮನೆಗೆ ಹೋಗಿ.. ಕುರುಕ್ಷೇತ್ರ ಚಿತ್ರದ ಒಂದು ಹಾಡು ನೋಡಿದ್ದಾರೆ. ಅಭಿಮನ್ಯು ಆಗಿ ನಟಿಸಿರುವ ಮಗನ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ.

    ಕುರುಕ್ಷೇತ್ರ ಚಿತ್ರ ಈಗಾಗಲೇ ಒಂದೂವರೆ ವರ್ಷ ತಡವಾಗಿದೆ. ಈ ಕುರಿತು ಮಾತನಾಡಿರುವ ಮುನಿರತ್ನ, ಚಿತ್ರದ 2ಡಿ ಪ್ರಿಂಟ್ ರೆಡಿಯಾಗಿದೆ. 3ಡಿ ಪ್ರಿಂಟ್ ರೆಡಿಯಾಗುತ್ತಿದೆ. ಎರಡೂ ವರ್ಷನ್ ರೆಡಿಯಾದ ಮೇಲೆ ರಿಲೀಸ್ ಎಂದಿದ್ದಾರೆ.

  • ಮೈಸೂರಿನಲ್ಲಿ ಜ.19ಕ್ಕೆ ಸೀತಾರಾಮ ಕಲ್ಯಾಣ ವೈಭವ

    seetharama kalyana pre release event in mysore

    ಸೀತಾರಾಮ ಕಲ್ಯಾಣ ಚಿತ್ರದ ಬಿಡುಗಡೆಗೂ ಮುನ್ನ ಭರ್ಜರಿ ಕಾರ್ಯಕ್ರಮ ಇಟ್ಟುಕೊಂಡಿರುವ ಚಿತ್ರತಂಡ, ಜನವರಿ 19ರಂದು ಮೈಸೂರಿನಲ್ಲಿ ಅದ್ಧೂರಿ ಕಾರ್ಯಕ್ರಮ ಇಟ್ಟುಕೊಂಡಿದೆ. ನಿಖಿಲ್ ಕುಮಾರಸ್ವಾಮಿ ಮತ್ತು ರಚಿತಾ ರಾಮ್ ನಟಿಸಿರುವ ಚಿತ್ರಕ್ಕೆ ಎ. ಹರ್ಷ ನಿರ್ದೇಶನವಿದೆ.

    ಮೊದಲಿನ ಪ್ಲಾನ್ ಪ್ರಕಾರ ಈ ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿತ್ತು. ಜನವರಿ 15ಕ್ಕೆ ಮಾಂಗಲ್ಯಂ ತಂತು ನಾನೇನ ಹಾಡು ರಿಲೀಸ್ ಆಗುತ್ತಿದ್ದು, ಜನವರಿ 25ಕ್ಕೆ ಸಿನಿಮಾ ತೆರೆಗೆ ಬರಲಿದೆ.

  • ರಾಜಾರಾಣಿ ಹಾಡು ಬಂತು ನೋಡಿದ್ರಾ..

    ninna raja video song from seetharama kalyana

    ಬಾಕ್ಸಾಫೀಸ್‍ನಲ್ಲಿ ಮೋಹದ ಅಲೆ ಎಬ್ಬಿಸುತ್ತಿರುವ ಸೀತಾರಾಮ ಕಲ್ಯಾಣ ಚಿತ್ರ ತಂಡ, ಅದೇ ಖುಷಿಯಲ್ಲಿ ಸೂಪರ್ ಹಿಟ್ ಹಾಡು ನಿನ್ನ ರಾಜ ನಾನು.. ನನ್ನ ರಾಣಿ ನೀನು ಹಾಡಿನ ವಿಡಿಯೋ ಹೊರಬಿಟ್ಟಿದೆ.

    ಲಹರಿ ವಿಡಿಯೋದಿಂದ ಹೊರಬಂದಿರುವ ಚಿತ್ರ ಹಾಡಿನಲ್ಲಿ ರಚಿತಾ ರಾಮ್ ಮುಗ್ಧ ಹುಡುಗಿಯಾಗಿ, ಪೆದ್ದು ಪೆದ್ದಾಗಿ ನಟಿಸಿ ಇಷ್ಟವಾದರೆ, ರಚಿತಾರ ಬೆನ್ನ ಹಿಂದೆ ಕನಸು ಕಾಣುವ ಹುಡುಗನಾಗಿ ಕುಣಿಯುವ ನಿಖಿಲ್ ಅವರ ಡ್ಯಾನ್ಸ್ ಗಮನ ಸೆಳೆಯುತ್ತದೆ.

    ನಿರ್ದೇಶಕ ಹರ್ಷ.. ತಾವು ಅದ್ಭುತ ಕೊರಿಯೋಗ್ರಫರ್ ಎಂಬುದನ್ನು ಮತ್ತೊಮ್ಮೆ ಪ್ರೂವ್ ಮಾಡುತ್ತಾರೆ. ಪ್ರೀತಿಯ ಅಲೆಯಲ್ಲಿ ಮಿಂದೇಳುವವರಿಗೆ ಈ ಹಾಡು ರಿಲ್ಯಾಕ್ಸ್ ಕೊಡುತ್ತದೆ ಅನ್ನೋದ್ರಲ್ಲಿ ಅನುಮಾನವಿಲ್ಲ.

  • ರೈಡರ್ : ಡಿಸೆಂಬರ್ 24ಕ್ಕೆ ರಿಲೀಸ್

    ರೈಡರ್ : ಡಿಸೆಂಬರ್ 24ಕ್ಕೆ ರಿಲೀಸ್

    ನಿಖಿಲ್ ಕುಮಾರಸ್ವಾಮಿ ಅಭಿನಯದ ಬಹುನಿರೀಕ್ಷಿತ ಚಿತ್ರ ರೈಡರ್ ಡಿಸೆಂಬರಿನಲ್ಲಿ ರಿಲೀಸ್ ಆಗುತ್ತಿದೆ. ಡಿಸೆಂಬರ್ ಕೊನೆಯ ವಾರ 24ನೇ ತಾರೀಕು ರಿಲೀಸ್ ಎಂದು ಚಿತ್ರತಂಡ ಘೋಷಿಸಿದೆ. ಅಲ್ಲಿಗೆ ಡಿಸೆಂಬರ್ ಕೂಡಾ ಸ್ಟಾರ್ ಚಿತ್ರಗಳಿಂದ ತುಂಬಿ ತುಳುಕುವುದು ಖಾಯಂ.

    ನಿಖಿಲ್ ಎದುರು ಕಾಶ್ಮೀರ ಪರದೇಸಿ ನಾಯಕಿಯಾಗಿ ನಟಿಸಿದ್ದು, ವಿಜಯ್‌ ಕುಮಾರ್‌ ಕೊಂಡ ನಿರ್ದೇಶಕರಾಗಿದ್ದಾರೆ. ಚಿತ್ರದ ಹಾಡು ಮತ್ತು ಟೀಸರ್‌ ಈಗಾಗಲೇ ಭರ್ಜರಿ ಸದ್ದು ಮಾಡುತ್ತಿವೆ.

     ನಿಖಿಲ್‌ ಕುಮಾರ್‌ ಆಪ್ತ ಸುನೀಲ್‌ ಗೌಡ ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದು, ಲಹರಿ ಫಿಲಮ್ಸ್‌ ನಿರ್ಮಾಣದಲ್ಲಿ ಕೈಜೋಡಿಸಿದೆ. ಚಿತ್ರದಲ್ಲಿ ನಿಖಿಲ್ ಬ್ಯಾಸ್ಕೆಟ್ ಬಾಲ್ ಆಟಗಾರನಾಗಿ ನಟಿಸಿದ್ದಾರೆ.

  • ರೈಡರ್ 100% ಮೇಕ್ ಇನ್ ಇಂಡಿಯಾ : ನಿರ್ಮಾಪಕ ಸುನಿಲ್ ಗೌಡ

    ರೈಡರ್ 100% ಮೇಕ್ ಇನ್ ಇಂಡಿಯಾ : ನಿರ್ಮಾಪಕ ಸುನಿಲ್ ಗೌಡ

    ಈಗ ರಿಲೀಸ್ ಆಗಿರೋ ರೈಡರ್ ಸಿನಿಮಾ ಬಹಳಷ್ಟು ನಿರೀಕ್ಷೆ ಹುಟ್ಟಿಸಿರೋ ಸಿನಿಮಾ. ಇದೊಂದು ಕಂಪ್ಲೀಟ್ ಫ್ಯಾಮಿಲಿ ಎಂಟರ್‍ಟೈನರ್ ಎನ್ನುತ್ತಿರೋ ಚಿತ್ರತಂಡ, ಚಿತ್ರ ಖಂಡಿತಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಅನ್ನೋ ನಿರೀಕ್ಷೆಯಲ್ಲಿದೆ. ನಿರ್ಮಾಪಕರಲ್ಲೊಬ್ಬರಾದ ಸುನಿಲ್ ಗೌಡ ಇದಕ್ಕೆ ಇನ್ನೂ ಒಂದು ವಿಶೇಷಣ ಸೇರಿಸಿದ್ದಾರೆ. ಇದು 100% ಮೇಕ್ ಇನ್ ಇಂಡಿಯಾ ಸಿನಿಮಾವಂತೆ..

    ರೈಡರ್ ಚಿತ್ರ ಬಹುತೇಕ ಶೂಟಿಂಗ್ ಆಗಿರೋದು ಮೈಸೂರಿನಲ್ಲಿ. ಯಲ್ಲಾಪುರ, ದೇವನಹಳ್ಳಿ ಹಾಗೂ ಬೆಂಗಳೂರಿನಲ್ಲಿ. ಉಳಿದಂತೆ ಲೇಹ್ ಮತ್ತು ಲಡಾಖ್‍ನಲ್ಲಿ ಶೂಟಿಂಗ್ ಆಗಿದೆ. ವಿಷ್ಯುಯಲ್ ಟ್ರೀಟ್ ಅದ್ಭುತವಾಗಿದೆ. ಹೀಗಾಗಿ ಇದು 100% ಮೇಕ್ ಇನ್ ಇಂಡಿಯಾ ಸಿನಿಮಾ ಎನ್ನುತ್ತಾರೆ ನಿರ್ಮಾಪಕ ಸುನಿಲ್ ಗೌಡ.

    ನಿಖಿಲ್ ಕುಮಾರಸ್ವಾಮಿ, ಕಾಶ್ಮೀರ ಪರದೇಸಿ, ಸ್ಪಂದನಾ ಹುಲಿವಾನ ನಟಿಸಿರೋ ಚಿತ್ರದಲ್ಲಿರೋದು ಟ್ರಯಾಂಗಲ್ ಲವ್ ಸ್ಟೋರಿನಾ? ಅರ್ಜುನ್ ಜನ್ಯಾ ಹಾಡುಗಳಲ್ಲಿ ಮೆಲೋಡಿ ಮತ್ತು ಟಪ್ಪಾಂಗುಚ್ಚಿ ಎರಡೂ ಮಿಕ್ಸ್ ಆಗಿದೆ. ಹೊಟ್ಟೆ ಹುಣ್ಣಾಗಿಸುವಂತೆ ನಗಿಸೋ ತರಲೆ ತಮಾಷೆಗಳಿವೆ. ಮೈನವಿರೇಳಿಸೋ ಆ್ಯಕ್ಷನ್ ಇದೆ. ಎದೆ ಭಾರವಾಗಿಸೋ ಸೆಂಟಿಮೆಂಟ್ ಇದೆ. ಅವೆಲ್ಲವನ್ನೂ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಚೆನ್ನಾಗಿ ಬ್ಲೆಂಡ್ ಮಾಡಿ ಕಥೆ ಹೇಳಿದ್ದಾರೆ. ಹೀಗಾಗಿ ಸಿನಿಮಾ ಖಂಡಿತಾ ಗೆಲ್ಲಲಿದೆ ಅನ್ನೋದು ನಿರ್ಮಾಪಕರ ಕಾನ್ಫಿಡೆನ್ಸ್.

  • ರೈಡರ್`ನಲ್ಲಿ ಹೀರೋಯಿನ್ ಪಾತ್ರಕ್ಕೆ ಎಷ್ಟು ಮಹತ್ವ ಇದೆ?

    ರೈಡರ್`ನಲ್ಲಿ ಹೀರೋಯಿನ್ ಪಾತ್ರಕ್ಕೆ ಎಷ್ಟು ಮಹತ್ವ ಇದೆ?

    ನನ್ನದು ಸೌಮ್ಯ ಅನ್ನೋ ಹೆಸರಿನ ಪಾತ್ರ. ಅಮೆರಿಕದಿಂದ ಒಂದು ಕೆಲಸದ ಮೇಲೆ ಇಂಡಿಯಾಕ್ಕೆ ಬಂದಿರ್ತೀನಿ. ಏನೇ ಪ್ರಾಬ್ಲಂ ಬರಲಿ, ಹಿಡಿದ ಗುರಿ ಬಿಡದ ಆಟಿಟ್ಯೂಡ್ ಇರೋ ಹುಡುಗಿಯ ಪಾತ್ರ ಅದು. ಹೆಸರು ಮಾತ್ರವೇ ಸೌಮ್ಯ.

    ಹೀಗೆ ಹೇಳೋ ಕಾಶ್ಮೀರ ಪರದೇಸಿಗೆ ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಇಬ್ಬರ ಪಾತ್ರಕ್ಕೂ ತೂಕವಿದೆ. ಪರ್ಫಾಮೆನ್ಸ್‍ಗೆ ಅವಕಾಶ ಇದೆ. ಅದರಲ್ಲಿ ಮಳೆಯಲ್ಲಿ ನೆನೆಯುವ ದೃಶ್ಯ ನನಗೆ ಫೇವರಿಟ್ ಎನ್ನುತ್ತಾರೆ ಕಾಶ್ಮೀರ ಪರದೇಸಿ.

    ವಿಜಯ್ ಕುಮಾರ್ ಕೊಂಡ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ಸಹಕಾರ ಮರೆಯೋಕಾಗಲ್ಲ. ಚಿತ್ರದ ಮೇಲೆ ಒಳ್ಳೆಯ ನಿರೀಕ್ಷೆಗಳಂತೂ ಇವೆ ಎನ್ನುವ ಕಾಶ್ಮೀರ ಪರದೇಸಿಗೆ ಬೆಂಗಳೂರು ವಾತಾವರಣ ಇಷ್ಟ. ಟ್ರಾಫಿಕ್ ಅಂದ್ರೆ ಸಿಕ್ಕಾಪಟ್ಟೆ ಕೋಪ.

  • ಲಕ್ಷಾಂತರ ಜನರ ಎದುರು ಸೀತಾ ರಾಮ ಕಲ್ಯಾಣ

    seetharama kalyana teaser today

    ಸೀತಾರಾಮ ಕಲ್ಯಾಣ. ನಿಖಿಲ್ ಕುಮಾರಸ್ವಾಮಿ ಹಾಗೂ ರಚಿತಾ ರಾಮ್ ಅಭಿನಯದ ಹರ್ಷ ನಿರ್ದೇಶನದ ಸಿನಿಮಾ. ಹರ್ಷ ಚಿತ್ರಗಳು ಸತತವಾಗಿ ಗೆದ್ದಿರೋ ಕಾರಣ, ಈ ಚಿತ್ರದ ಮೇಲೂ ಕುತೂಹಲ ಸಹಜ. ಜೊತೆಗೆ ಕುಮಾರಸ್ವಾಮಿ ಸಿಎಂ ಆದ ಮೇಲೆ ರಿಲೀಸ್ ಆಗುತ್ತಿರುವ ನಿಖಿಲ್ ಅಭಿಯನದ ಮೊದಲ ಸಿನಿಮಾ. ಇವತ್ತು, ಸೀತಾ ರಾಮ ಕಲ್ಯಾಣದ ಟೀಸರ್ ರಿಲೀಸ್ ಆಗುತ್ತಿದೆ.

    ರಾಮನಗರದಲ್ಲಿಯೇ ಟೀಸರ್ ರಿಲೀಸ್ ಮಾಡೋಕೆ ರಾಜಕೀಯ ಕಾರಣವೂ ಇದೆ. ರಾಮನಗರ ಕುಮಾರಸ್ವಾಮಿಯವರ ರಾಜಕೀಯ ತವರು. ರಾಮನಗರದ ಜ್ಯೂ.ಕಾಲೇಜು ಮೈದಾನದಲ್ಲಿ ಸಂಜೆ 7 ಗಂಟೆಗೆ ಟೀಸರ್ ಬಿಡುಗಡೆಯಾಗುತ್ತಿದೆ. ಟೀಸರ್ ರಿಲೀಸ್ ಮಾಡುತ್ತಿರುವುದು ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ. 

    ಅದೂ ಲಕ್ಷಾಂತರ ಜನರ ಸಮ್ಮುಖದಲ್ಲಿ ಟೀಸರ್ ಬಿಡುಗಡೆಯಾಗುತ್ತಿದೆ. ಇಡೀ ಚಿತ್ರತಂಡ ಹಾಜರ್ ಇರುತ್ತದೆ. ಜೊತೆಗೆ ಭರಪೂರ ಮನರಂಜನೆಯೂ ಇರುತ್ತೆ.

  • ಲಹರಿ ನಿಖಿಲ್ ಚಿತ್ರಕ್ಕೆ ಕಾಶ್ಮೀರ ಪರದೇಶಿ

    kashmira paradeshi is nikhil's heroine for lahari production's next

    ಲಹರಿ ಸಂಸ್ಥೆ ಸುದೀರ್ಘ ಗ್ಯಾಪ್ ನಂತರ ಚಿತ್ರ ನಿರ್ಮಾಣಕ್ಕೆ ಧುಮುಕಿದೆ. ಲಹರಿ ಸಂಸ್ಥೆಯ ಹೊಸ ಚಿತ್ರಕ್ಕೆ ನಿಖಿಲ್ ಕುಮಾರಸ್ವಾಮಿ ನಾಯಕರಾಗಿದ್ದು, ಈಗ ಚಿತ್ರಕ್ಕೆ ನಾಯಕಿಯ ಆಯ್ಕೆಯೂ ಮುಗಿದಿದೆ. ಚಿತ್ರಕ್ಕೆ ನಾಯಕಿಯಾಗಿ ಕಾಶ್ಮೀರ ಪರದೇಶಿ ಆಯ್ಕೆಯಾಗಿದ್ದಾರೆ.

    ಮುಂಬೈ ಮೂಲದ ಕಾಶ್ಮೀರ ಪರದೇಶಿ, ಮಾಡೆಲಿಂಗ್, ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಹುಡುಗಿ. ಈಗಾಗಲೇ ಹಿಂದಿಯಲ್ಲಿ ಅಕ್ಷಯ್ ಕುಮಾರ್ ಜೊತೆ ಮಿಷನ್ ಮಂಗಲ್ ಚಿತ್ರದಲ್ಲಿ, ತೆಲುಗಿನಲ್ಲಿ ನಾಗಶೌರ್ಯ ಜೊತೆ ನರ್ತನ್ ಶಾಲಾ ಚಿತ್ರದಲ್ಲಿ ನಟಿಸಿದ್ದಾರೆ. ವಿಜಯ್ ಕುಮಾರ್ ಕೊಂಡ ನಿರ್ದೇಶನದ ಚಿತ್ರಕ್ಕೆ ಈಗಾಗಲೇ ಸಂಪದ ಎಂಬ ಕಲಾವಿದೆ ಆಯ್ಕೆಯಾಗಿದ್ದಾರೆ. ಕಾಶ್ಮೀರ ಮೊದಲನೇ ನಾಯಕಿಯಾದರೆ, ಸಂಪದಾ 2ನೇ ನಾಯಕಿ.

  • ಶುರುವಾಗೇಬಿಡ್ತು ಸೀತಾರಾಮ ಕಲ್ಯಾಣ

    anitha kumaraswamy, nikhil, hd kumaraswamya image

    ಭಜರಂಗಿ, ವಜ್ರಕಾಯ, ಮಾರುತಿ 800 ಹೀಗೆ ಸತತ ಹಿಟ್ ನೀಡಿರುವ ಹರ್ಷ, ಈಗ ಅಂಜನೀಪುತ್ರದ ಬಿಡುಗಡೆಯ ಖುಷಿಯಲ್ಲಿದ್ದಾರೆ. ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನೀಪುತ್ರ ಡಿಸೆಂಬರ್‍ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. 

    ಈ ಮಧ್ಯೆಯೇ ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರ ಶುರುವಾಗಿದೆ. ಬಸವನಗುಡಿಯ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಚಿತ್ರಕ್ಕೆ ಆರಂಭ ಫಲಕ ತೋರಿದರೆ, ನಿರ್ಮಾಪಕ ಮುನಿರತ್ನ ಕ್ಯಾಮೆರಾಕ್ಕೆ ಚಾಲನೆ ನೀಡಿದರು.

    ಚಿನ್ನಾಂಬಿಕ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವನ್ನು ಕುಮಾರಸ್ವಾಮಿ ಅರ್ಪಿಸುತ್ತಿದ್ದರೆ, ನಿರ್ಮಾಪಕಿಯಾಗಿರುವುದು ಅನಿತಾ ಕುಮಾರಸ್ವಾಮಿ. ಚಿತ್ರಕ್ಕೆ ನಿಖಿಲ್ ನಾಯಕರಾದರೆ, ಶರತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕಿದೆ.

    ರವಿ ಬಸ್ರೂರು ಸಂಗೀತ ನಿರ್ದೇಶಿಸುತ್ತಿದ್ದು, ಸ್ವಾಮಿ ಛಾಯಾಗ್ರಹಣವಿದೆ. ರಾಮ್ ಲಕ್ಷ್ಮಣ್ ಸಾಹಸ ನಿರ್ದೇಶನದ ಚಿತ್ರಕ್ಕೆ ಮೋಹನ್ ಬಿ. ಕೆರೆ ಕಲಾ ನಿರ್ದೇಶನವಿದೆ. ನಿರ್ಮಾಣ ಮೇಲ್ವಿಚಾರಣೆಯ ಹೊಣೆ ಸುನಿಲ್ ಗೌಡ ಅವರದ್ದು.

    ಡಿಸೆಂಬರ್ 10ರಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದ್ದು, ಬೆಂಗಳೂರು, ಹಾಸನ, ಮಂಡ್ಯ, ಸಕಲೇಶಪುರ ಸೇರಿದಂತೆ ಕರ್ನಾಟಕದಲ್ಲಿಯೇ ಶೂಟಿಂಗ್ ನಡೆಯಲಿದೆ. ಬೆಂಗಳೂರಿನ 7 ಕಡೆ ಚಿತ್ರಕ್ಕಾಗಿ ವಿಶೇಷ ಸೆಟ್ ಹಾಕಿಸುತ್ತಿದ್ದಾರೆ ಹರ್ಷ. 

  • ಸೀತಾ ರಾಮ ಕಲ್ಯಾಣಕ್ಕೂ ಕಳ್ಳರ ಕಾಟ

    piracy haunts seetharama kalyana too

    ಮೊನ್ನೆಯಷ್ಟೇ ಬಜಾರ್ ಚಿತ್ರತಂಡ ಪೈರಸಿ ಚೋರರ ವಿರುದ್ಧ ಕಂಪ್ಲೇಂಟ್ ಕೊಟ್ಟಿತ್ತು. ಈಗ ಸೀತಾರಾಮ ಕಲ್ಯಾಣದ ಸರದಿ. ನಿಖಿಲ್ ಕುಮಾರಸ್ವಾಮಿ, ರಚಿತಾ ರಾಮ್ ಅಭಿನಯದ, ಹರ್ಷ ನಿರ್ದೇಶನದ ಸಿನಿಮಾ, ಥಿಯೇಟರುಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವಾಗಲೇ ಪೈರಸಿ ಚೋರರ ಕಾಟವೂ ಶುರುವಾಗಿದೆ. ಹೀಗಾಗಿಯೇ ನಿರ್ಮಾಪಕಿ ಅನಿತಾ ಕುಮಾರಸ್ವಾಮಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ಚಿತ್ರದ ಪೈರಸಿ ವಿರುದ್ಧ ದೂರು ದಾಖಲಿಸಿದ್ದಾರೆ.

    ಟಿ.ಎನ್. ಶಶಿಧರ್ ಮತ್ತು ಕನ್ನಡ ನ್ಯೂ ಮೂವೀಸ್ ಎಂಬ ಆನ್‍ಲೈನ್ ಚಾನೆಲ್ ವಿರುದ್ಧ ಕಾಪಿರೈಟ್ ಕಾಯಿದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿಯಲ್ಲಿ ಕೇಸ್ ದಾಖಲಾಗಿದೆ. ವಿಚಾರಣೆ ಶುರುವಾಗಿದೆ.

  • ಸೀತಾರಾಮ ಕಲ್ಯಾಣ ಟ್ರೇಲರ್ ಜಬರ್ದಸ್ತ್ ಹಿಟ್

    seetharama kalyana trailer is super hit

    ನಿಖಿಲ್ ಕುಮಾರಸ್ವಾಮಿ-ರಚಿತಾ ರಾಮ್-ಎ.ಹರ್ಷ ಕಾಂಬಿನೇಷನ್ನಿನ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಸಿಎಂ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿಯವರಿಂದ ಬಿಡುಗಡೆಯಾದ ಟ್ರೇಲರ್, ಆನ್ ಲೈನ್‍ನಲ್ಲಿ ಧೂಳೆಬ್ಬಿಸುತ್ತಿದೆ. ಹೆಚ್ಚೂ ಕಮ್ಮಿ 50 ಲಕ್ಷ ಮಂದಿ ಟ್ರೇಲರ್ ನೋಡಿ ಥ್ರಿಲ್ಲಾಗಿದ್ದಾರೆ.

    ಟ್ರೇಲರ್‍ನಲ್ಲಿ ಮೈನವಿರೇಳಿಸುವ ಸ್ಟಂಟ್ಸ್, ಥ್ರಿಲ್ಲಾಗಿಸುವ ಡೈಲಾಗ್ಸ್, ಯುವ ಪ್ರೇಮಿಗಳ ತುಂಟಾಟ.. ಹೀಗೆ ಎಲ್ಲವನ್ನೂ ಹದವಾಗಿ ಬೆರೆಸಿದ್ದಾರೆ ಹರ್ಷ. ಗಣರಾಜ್ಯೋತ್ಸವಕ್ಕೆ 400ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ ಸೀತಾರಾಮ ಕಲ್ಯಾಣ.

  • ಸೀತಾರಾಮ ಕಲ್ಯಾಣದ ಸ್ಪೆಷಲ್ ಒಂದಾ.. ಎರಡಾ.. ಅಬ್ಬಬ್ಬಾ..!

    seetharama kalyana has many specializations

    ರಾಜ್ಯಾದ್ಯಂತ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡಿರುವ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ವಿಶೇಷತೆಗಳ ಮೇಲೆ ವಿಶೇಷತೆಗಳಿವೆ. ಅವುಗಳೇನೂ ಒಂದೆರಡಲ್ಲ. ನಿಖಿಲ್ ಕುಮಾರಸ್ವಾಮಿ ಅಭಿನಯದ 2ನೇ ಚಿತ್ರವಿದು. ಜಾಗ್ವಾರ್ ನಂತರ ತೆರೆ ಕಾಣುತ್ತಿರುವ ಸಿನಿಮಾ.

    ಚಿತ್ರಕ್ಕೆ ಲಕ್ಕಿ ಹೀರೋಯಿನ್ ಎಂದೇ ಹೆಸರಾಗಿರೋ ರಚಿತಾ ರಾಮ್ ನಾಯಕಿ. 

    ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಫೈಟ್ ಮಾಸ್ಟರ್‍ಗಳಾದ ರಾಮ್ ಲಕ್ಷ್ಮಣ್ ಸಾಹಸ ನಿರ್ದೇಶನ ಮಾಡಿದ್ದಾರೆ.

    ಶರತ್ ಕುಮಾರ್, ರವಿಶಂಕರ್, ಮಧು, ಭಾಗ್ಯಶ್ರೀ, ಸಂಜಯ್ ಕಪೂರ್, ಆದಿತ್ಯಾ ಮೆನನ್, ಗಿರಿಜಾ ಲೋಕೇಶ್, ಚಿಕ್ಕಣ್ಣ.. ಹೀಗೆ ಕಲಾವಿದರ ದಂಡೇ ಚಿತ್ರದಲ್ಲಿದೆ.

    ಚಿತ್ರದಲ್ಲಿ ನಟಿಸಿರುವ ಒಟ್ಟು ಕಲಾವಿದರ ಸಂಖ್ಯೆ 200ಕ್ಕೂ ಹೆಚ್ಚು.

    ಚಿತ್ರಕ್ಕೆ ಸಂಗೀತ ನೀಡಿರುವುದು ಅನೂಪ್ ರುಬೆನ್ಸ್. ತಮಿಳು, ತೆಲುಗು, ಹಿಂದಿ ಚಿತ್ರಗಳಿಗೆ ಸಂಗೀತ ನೀಡಿರುವ ರುಬೆನ್ಸ್‍ಗೆ ಇದು ಮೊದಲ ಕನ್ನಡ ಸಿನಿಮಾ.

    ಎ. ಹರ್ಷ ನಿರ್ದೇಶನದ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್.