ನಿಖಿಲ್ ಕುಮಾರಸ್ವಾಮಿ, ಎಲೆಕ್ಷನ್ ಮುಗಿದ ಮೇಲೆ ರಾಜಕೀಯದಲ್ಲಿದ್ದರೂ, ಸಿನಿಮಾದತ್ತ ಮುಖ ಮಾಡಿದ್ದಾರೆ. ಅವರೀಗ ಸದ್ಯಕ್ಕೆ 3 ಚಿತ್ರ ಮುಗಿಸಿದ್ದಾರೆ. ಜಾಗ್ವಾರ್, ಸೀತಾರಾಮ ಕಲ್ಯಾಣ ರಿಲೀಸ್ ಆಗಿವೆ. ಕುರುಕ್ಷೇತ್ರ ರಿಲೀಸ್ ಆಗಬೇಕಿದೆ. ಹೀಗಿರುವಾಗಲೇ ಅವರು 3ನೇ ಚಿತ್ರಕ್ಕೆ ಬುಕ್ ಆಗಿದ್ದಾರೆ. ಅದೂ ಅಂತಿಂತಾ ಸಂಸ್ಥೆಯಲ್ಲ. ಇಂಟರ್‍ನ್ಯಾಷನಲ್ ಖ್ಯಾತಿವೆತ್ತ ಸಂಸ್ಥೆ.
ಲೈಕಾ ಪ್ರೊಡಕ್ಷನ್ಸ್ ದೇಶದ ಪ್ರಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲೊಂದು. ಕತ್ತಿ, 2.0, ಇಂಡಿಯನ್ 2, ದರ್ಬಾರ್, ಖೈದಿ ನಂ.150.. ಹೀಗೆ ಈ ಸಂಸ್ಥೆಯ ನಿರ್ಮಾಣದ ಹೆಸರುಗಳ ದೊಡ್ಡ ಪಟ್ಟಿಯೇ ಇದೆ. ರಜನಿಕಾಂತ್, ಕಮಲ್‍ಹಾಸನ್, ಅಕ್ಷಯ್ ಕುಮಾರ್, ಚಿರಂಜೀವಿ, ಧನುಷ್, ನಯನತಾರಾ.. ಹೀಗೆ ದೊಡ್ಡ ದೊಡ್ಡ ಸ್ಟಾರ್‍ಗಳ ಚಿತ್ರಗಳನ್ನೇ ನಿರ್ಮಿಸಿರುವ ಸಂಸ್ಥೆ, ನಿಖಿಲ್‍ಗಾಗಿ ಸಿನಿಮಾ ಮಾಡಲು ಮುಂದಾಗಿದೆ.
ನಿಖಿಲ್ ಇನ್ನೂ ಕಥೆ ಕೇಳುತ್ತಿದ್ದು, ಫೈನಲ್ ಆಗಿಲ್ಲ ಎನ್ನುತ್ತಿವೆ ಮೂಲಗಳು. ಹಾಗೇನಾದರೂ ನಿಖಿಲ್ ಒಪ್ಪಿಕೊಂಡರೆ, ಲೈಕಾ ಸಂಸ್ಥೆ ಆ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಂತಾಗುತ್ತದೆ.