` kavya shetty - chitraloka.com | Kannada Movie News, Reviews | Image

kavya shetty

 • Silicon City To Release On June 16th

  silicon city movie image

  Srinagara Kitty's new film 'Silicon City' which is being directed by Murali Gurappa is all set to release on the 16th of June.

  'Silicon City' was launched in October. The film is the remake of Tamil film 'Metro'. The film tells the story of illegal activities in Bangalore. Apart from Kitty, Suraj Gowda, Kavya Shetty, Ashok, Tulasi Shivamani, Chikkanna and others play prominent roles in the film.

  The film is produced by Ravi and Manjula Somashekhar and Srinagar Kitty is also one of the producers of the film.

  Related Articles :-

  Silicon City Complete; To Release By This Month End

  Srinagara Kitty's New Film Is Silicon City

   

 • Smile Please Launched - Shooting from 16th

  smile please image

  The shooting for Gurunandan starrer 'Smile Please' which is being produced by K Manju has been started and the regular shooting for the film will commence from the 16th of this month.

  'Smile Please' is being written and directed by Raghu Samarth and the film conveys the message of 'Be Happy No BP'. Kavya Shetty and Neha Patil play female leads to Gurunandan. Rangayana Raghu, Sudha Belawadi, Srinivasaaprabhu and others play prominent roles in the film.

  The film is being shot in Bangalore, Sakleshpur, Ladakh and other places. Anup Seelin is composing the music, while Jagadish Wali is the cameraman.

 • Smile Please Talkie Finished

  smile please image

  The talkie portion for Gurunandan starrer 'Smile Please' which is being produced by K Manju has been finished in a matter of one month and now the team is getting ready to shoot the songs.

  'Smile Please' is being written and directed by Raghu Samarth and the film conveys the message of 'Be Happy No BP'. Kavya Shetty and Neha Patil play female leads to Gurunandan. Rangayana Raghu, Sudha Belawadi, Srinivasaaprabhu and others play prominent roles in the film.

  Anup Seelin is composing the music, while Jagadish Wali is the cameraman.

 • Yash Releases The Songs Of Smile Please

  smile please audio launch image

  Actor Yash on Monday released the songs of 'Smile Please' composed by Anup Seelin at the Chamundeshwari Studios in Bangalore. Producer K Manju, director Raghu Samarth and others were present at the occasion.

  smileplease_audiorel.jpg'Smile Please' is being written and directed by Raghu Samarth and the film conveys the message of 'Be Happy No BP'. Kavya Shetty and Neha Patil play female leads to Gurunandan. Rangayana Raghu, Sudha Belawadi, Srinivasaaprabhu and others play prominent roles in the film.

 • ಆನ್‍ಲೈನ್ ವೀಕ್ಷಕರ ಮನ ಮೆಚ್ಚಿದ 30 ಸೆಕೆಂಡ್

  3 gante is an online hit

  3 ದಿನ, 30 ಗಂಟೆ, 30 ಸೆಕೆಂಡು ಚಿತ್ರದ ಬಿಡುಗಡೆ ಹತ್ತಿರವಾಗುತ್ತಿದೆ. ಚಿತ್ರದ ಕಥೆ, ಟ್ರೇಲರ್ ಆನ್‍ಲೈನ್‍ನಲ್ಲಿ ಮೋಡಿ ಮಾಡಿಬಿಟ್ಟಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಮೂರೇ ದಿನದಲ್ಲಿ ಟ್ರೇಲರ್ ಮೆಚ್ಚಿದವರು 5 ಲಕ್ಷಕ್ಕೂ ಹೆಚ್ಚು ಜನ.

  ಚಿತ್ರದ ಟೈಟಲ್ ಟ್ರ್ಯಾಕ್ ಅಂತೂ ಸೂಪರ್ ಹಿಟ್ ಆಗಿದೆ. ಚಿತ್ರದ ಟೈಟಲ್ ಟ್ರ್ಯಾಕ್‍ನ್ನು ಈಗಾಗಲೇ ಒಂದು ಮಿಲಿಯನ್‍ಗೂ ಹೆಚ್ಚು ಮಂದಿ ನೋಡಿ ಮೆಚ್ಚಿದ್ದಾರೆ. ಅರುಣ್ ಗೌಡ, ಕಾವ್ಯಾ ಶೆಟ್ಟಿ ಅಭಿನಯದ ಚಿತ್ರ ಬಿಡುಗಡೆ ಸಮೀಪಿಸುತ್ತಿದ್ದಂತೆ ಕಾಲೇಜು ಕುಮಾರ ಕುಮಾರಿಯರ ಟ್ರೆಂಡ್ ಆಗಿಬಿಟ್ಟಿದೆ.

  ಯವ ಸಮೂಹವನ್ನೇ ದೃಷ್ಟಿಯಲ್ಲಿಟ್ಟುಕೊಂಡು ನಿರೂಪಿಸಿರುವ ಟ್ರೇಲರ್‍ನಲ್ಲಿ ಯುವಕ, ಯುವತಿಯರ ಕಿವಿಗೆ ರಸಗವಳ ಕೊಟ್ಟಿದ್ದಾರೆ ನಿರ್ದೇಶಕರು. ಕುತೂಹಲವನ್ನೂ ಮೂಡಿಸಿಬಿಟ್ಟಿದ್ದಾರೆ.

  ಚಿತ್ರದಲ್ಲಿ ಬಳಸಿಕೊಳ್ಳಲು ಸಾಧ್ಯವಾಗದ ಕೆಲವು ಡಿಲೀಟೆಡ್ ಸೀನ್‍ಗಳನ್ನೂ ಯೂಟ್ಯೂಬ್‍ಗೆ ಬಿಡುವ ಮೂಲಕ ಕುತೂಹಲವನ್ನು ಹೆಚ್ಚಿಸುತ್ತಲೇ ಇದೆ 3 ಗಂಟೆ, 30 ದಿನ 30 ಸೆಕೆಂಡು.

 • ಓಲ್ಡ್ ಈಸ್ ಗೋಲ್ಡ್ ತಾರೆಯರೆಲ್ಲ 30 ಸೆಕೆಂಡ್‍ನಲ್ಲಿ..

  30 seconds special stars

  30 ಗಂಟೆ 30 ದಿನ 30 ಸೆಕೆಂಡು.. ಕೇವಲ ಟೈಟಲ್‍ನಿಂದಷ್ಟೇ ಅಲ್ಲ, ವಿಭಿನ್ನ ಕಥಾ ಹಂದರವೂ ಕುತೂಹಲ ಕೆರಳಿಸುತ್ತಿದೆ. ಸ್ಪೆಷಲ್‍ಗಳ ಮೂಟೆಯನ್ನೇ ಹೊತ್ತು ತರುತ್ತಿರುವ ಚಿತ್ರದಲ್ಲಿ 80, 90ರ ದಶಕದ ಹಲವು ತಾರೆಯರು ಒಟ್ಟಿಗೇ ಸೇರಿರುವುದು ಇನ್ನೊಂದು ವಿಶೇಷ.

  ನಾಯಕ ಅರೂ ಗೌಡ, ನಾಯಕಿ ಕಾವ್ಯಾ ಶೆಟ್ಟಿ. ಇಬ್ಬರ ಚಾಲೆಂಜ್‍ನಿಂದ ಶುರುವಾಗುವ ಕಥೆಯಲ್ಲಿ ಎಡಕಲ್ಲು ಗುಡ್ಡದ ಚಂದ್ರಶೇಖರ್, ನಾಯಕಿಯ ತಂದೆಯ ಪಾತ್ರದಲ್ಲಿದ್ದಾರೆ. ಮಗಳ ಮೇಲಿನ ಮಮಕಾರದಿಂದ ಎಲ್ಲ ಅಪಾಯಗಳನ್ನೂ ಮೈಮೇಲೆ ಎಳೆದುಕೊಳ್ಳುವ ಅಪ್ಪನ ಪಾತ್ರ ಚಂದ್ರಶೇಖರ್ ಅವರದ್ದು.

  ಮುಕ್ತಮುಕ್ತ ಖ್ಯಾತಿಯ ಜಯಲಕ್ಷ್ಮಿ ಅವರದ್ದು ತ್ಯಾಗಮಯಿ ಪಾತ್ರದಲ್ಲಿದ್ದರೆ, ನಟಿ ಯಮುನಾ ನಾಯಕನ ತಾಯಿಯ ಪಾತ್ರದಲ್ಲಿದ್ದಾರೆ. ಮಗನ ಒಳಿತಿಗಾಗಿ ಸದಾ ಪರಿತಪಿಸುವ ಹೆಂಗರುಳಿನ ಪಾತ್ರ ಯಮುನಾ ಅವರದ್ದು. ಇನ್ನು ಸುಂದರ್ ಅವರದ್ದು ನಾಯಕನ ತಂದೆಯ ಪಾತ್ರ. 

  ಇನ್ನು ಇಡೀ ಚಿತ್ರದಲ್ಲಿನ ಅತಿ ದೊಡ್ಡ ಅಟ್ರ್ಯಾಕ್ಷನ್ ದೇವರಾಜ್-ಸುಧಾರಾಣಿ. ದೇವರಾಜ್ ಕಣ್ಣು ಕಾಣಿಸದ, ಕಿವಿ ಕೇಳಿಸದ, ಮಾತೂ ಬಾರದ ನಿವೃತ್ತ ಮಿಲಿಟರಿ ಆಫೀಸರ್ ಪಾತ್ರದಲ್ಲಿದ್ದರೆ, ಸುಧಾರಾಣಿ ದೇವರಾಜ್‍ಗೆ ಜೋಡಿಯಾಗಿದ್ದಾರೆ. ಆಕೆ ದೇವರಾಜ್‍ಗೆ ಟೀಚರ್ ಕೂಡಾ ಹೌದು.

  30 ಸೆಕೆಂಡ್‍ನ ವಿಶೇಷಗಳು ಇನ್ನೂ ಹಲವಾರಿವೆ. ವಿಶೇಷಗಳನ್ನೆಲ್ಲ ಜನವರಿ 19ರ ಥಿಯೇಟರುಗಳಲ್ಲಿ ಕಣ್ತುಂಬಿಕೊಳ್ಳಬಹುದು.

 • ನಿಗೂಢ ಸಂಹಾರ.. ವಿಭಿನ್ನತೆಯ ಸಂಚಾರ

  samhara is a suspense thriller

  ಚಿರಂಜೀವಿ ಸರ್ಜಾ ಹಾಗೂ ಹರಿಪ್ರಿಯಾ ಅಭಿನಯದ ಸಂಹಾರದ ಕಥೆ ಏನು..? ಅದು ನಿಗೂಢ. ಗುರುದೇಶಪಾಂಡೆ ಚಿತ್ರದ ಕಥೆಯ ಎಳೆಯನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಆದರೆ, ಚಿರಂಜೀವಿ ಸರ್ಜಾ ಈ ಚಿತ್ರದಲ್ಲಿ ಕಣ್ಣು ಕಾಣದ ಕುರುಡ. ಅಂಧ. ಹಾಗೆಯೇ ಅಡುಗೆ ಭಟ್ಟ. ಇದು ಹೇಗೆ ಸಾಧ್ಯ ಎನ್ನುವವರಿಗೆ ಚಿತ್ರದಲ್ಲಿಯೇ ಉತ್ತರ ಸಿಗುತ್ತೆ.

  ನಾಯಕಿಯಾಗಿರೋದು ಹರಿಪ್ರಿಯಾ. ಅವರು ಇಲ್ಲಿ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೆಗೆಟಿವ್ ರೋಲ್ ಇರಬಹುದಾ ಅಥವಾ ಫ್ಯಾಮಿಲಿ ಓರಿಯೆಂಟೆಡ್ ಪಾತ್ರವಾ..? ಅದು ಸೀಕ್ರೆಟ್.

  ಇನ್ನು ಕಾವ್ಯಾಶೆಟ್ಟಿ, ಈ ಚಿತ್ರದಲ್ಲಿ ಜರ್ನಲಿಸ್ಟ್ ಪಾತ್ರ. ಹಿಂದಿನ ಚಿತ್ರದಲ್ಲಿ ಟಿವಿ ಚಾನೆಲ್ ಮಾಲಕಿಯಾಗಿದ್ದ ಕಾವ್ಯಾಶೆಟ್ಟಿ, ಈ ಚಿತ್ರದಲ್ಲಿ ರಿಪೋರ್ಟರ್. 

  ನಟ ಚಿಕ್ಕಣ್ಣ ಅವರದ್ದು ರಾಜಾಹುಲಿ ಸ್ಟೈಲ್‍ನ ಇನ್ಸ್‍ಪೆಕ್ಟರ್ ಪಾತ್ರ. ಅದು ಸೇಡಿನ ಕಥೆಯಾ..? ಗೊತ್ತಿಲ್ಲ. ಸಸ್ಪೆನ್ಸ್ ಕಾಯ್ದಿಟ್ಟಿರುವ ಗುರುದೇಶಪಾಂಡೆ, ಸಂಪೂರ್ಣ ಕುತೂಹಲ ತಣಿಸುವುದು ಈ ವಾರದ ಕೊನೆಯಲ್ಲಿ. 

   

   

 • ಪಾಕ್‍ನ ಸಾವಿರಾರು ಸೈನಿಕರನ್ನು ಕ್ಷಣದಲ್ಲಿ ಸಮಾಧಿ ಮಾಡಿದ್ದ ಸೈನಿಕ..!

  great warrior story

  ನಮಗೆ ಕಾರ್ಗಿಲ್ ಕಥೆ ಗೊತ್ತು. ಪಾಕ್ ಸೈನಿಕರನ್ನು ನಮ್ಮ ಸೈನಿಕರು ಹೇಗೆ ಸದೆಬಡಿದರು, ಪ್ರಾಣಾರ್ಪಣೆ ಮಾಡಿದವರೆಷ್ಟು ಜನ.? ಪಾಕಿಸ್ತಾನದ ಕುತಂತ್ರ ಹೇಗಿತ್ತು..? ಹೀಗೆ ನಮಗೆ ಇಂಥ ಹಲವಾರು ಕಥೆಗಳು ಗೊತ್ತು. ಆಧರೆ, ಈ ಕಥೆ ನಿಮಗೆ ಗೊತ್ತಿರುವ ಸಾಧ್ಯತೆ ಕಡಿಮೆ. ಹಾಗೆ ನೋಡಿದರೆ, ಈ ಯೋಧನ ಪರಾಕ್ರಮ, ಸಮಯಸ್ಫೂರ್ತಿಯ ಗೆಲುವು ಕಾರ್ಗಿಲ್ ಯುದ್ಧಕ್ಕೆ ಕಾರಣವಾಯಿತು ಎಂಬ ವಾದವೂ ಇದೆ.

  ಈ ಘಟನೆ ನಡೆದಿದ್ದು ಕಾರ್ಗಿಲ್ ಯುದ್ಧ ಆರಂಭಕ್ಕೂ ಮುನ್ನ. ನೀಲಂ ಕಣಿವೆಯಲ್ಲಿ ಇಂಡಿಯನ್ ಆರ್ಮಿ ಫಾರ್ವರ್ಡ್ ಲಾಜಿಸ್ಟಿಕ್ ಬೇಸ್‍ನಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಪಾಕಿಸ್ತಾನದ ಸಾವಿರಾರು ಯೋಧರು, 40 ಟ್ಯಾಂಕರ್ ಆಕ್ರಮಣಕ್ಕೆ ಸಿದ್ಧರಾಗಿದ್ದರು. ಆದರೆ, ಭಾರತದ ಬಳಿ ಇದ್ದದ್ದು ಕೇವಲ ನೂರು ಸೈನಿಕರು. ಸ್ವಲ್ಪ ಏಮಾರಿದರೆ ಟಿತ್‍ಪಾಲ್ ಪ್ರಾಂತ್ಯ ಕೈತಪ್ಪುವ ಭೀತಿಯಿತ್ತು. 

  ಆದರೆ ಅಲ್ಲೊಬ್ಬ ಸೈನಿಕನಿದ್ದ. ಆತ ಎಂತಹ ಪರಾಕ್ರಮ & ಬುದ್ದಿವಂತಿಕೆ ಮೆರೆದನೆಂದರೆ, ಪಾಕ್ ಸೈನಿಕರು ಗೊತ್ತೇ ಆಗದಂತೆ ಸಮಾಧಿಯಾಗಿಬಿಟ್ಟರು. ಆಗ ಅಲ್ಲಿದ್ದ ಯೋಧ ಕ್ಯಾ.ಸುಂದರಂ, ತಕ್ಷಣ ಶೌರ್ಯ ಮತ್ತು ತಲೆ ಎರಡನ್ನೂ ಉಪಯೋಗಿಸಿದರು.ಅಲ್ಲಿದ್ದ 30 ಡಿಗ್ರಿ ಆ್ಯಂಗಲ್‍ನಲ್ಲಿದ್ದ ಮಾಸ್ ರಾಕ್ ಬಂಡೆಯೊಂದರ ಬಿರುಕನ್ನು ಗುರುತಿಸಿದ್ದರು. ಅದು ಬಿರುಕುಬಿಟ್ಟಿತ್ತು. ತಡಮಾಡದೆ, ತಮ್ಮ ಸೈನಿಕರಿಂದ ಕವರ್ ಫೈರಿಂಗ್ ತೆಗೆದುಕೊಂಡು ಮುಂದುವರಿದರು. ಆ ಬಿರುಕಿಗೇ ಗ್ರೈನೇಡ್ ಫಿಕ್ಸ್ ಮಾಡಿ ನೆಗೆದುಬಿಟ್ಟರು. 

  ನಂತರ ಸೃಷ್ಟಿಯಾಗಿದ್ದು ಹಿಮಪಾತ. ಹಿಮಪಾತ ಬಿದ್ದಿದ್ದು ದಾಳಿಗೆ ಸಿದ್ಧರಾಗಿದ್ದ ಪಾಕ್ ಸೈನಿಕರ ಮೇಲೆ. ನೋಡ ನೋಡುತ್ತಲೇ ಸಮಾಧಿಯಾಗಿ ಹೋದರು. ಇಂದಿಗೂ ಅದನ್ನು ಪಾಕಿಸ್ತಾನ ನೈಸರ್ಗಿಕ ಹಿಮಪಾತ ಎಂದು ಹೇಳಿಕೊಂಡೇ ಬರುತ್ತಿದೆ.

  ಆದರೆ, ಅಂದು ಶಿಖರದ ಮೇಲೆ ಹೋಗಿ, ಬಿರುಕಿಗೆ ಗ್ರೈನೇಡ್ ಇಟ್ಟು ಬಂದ ಕ್ಯಾ. ಸುಂದರಂ ಇಂದಿಗೂ ಇದ್ದಾರೆ. ಅಂದಿನ ಆ ಪರಾಕ್ರಮ ಅವರ ಬದುಕನ್ನೇ ಕಿತ್ತುಕೊಂಡಿದೆ. ಅವರಿಗೆ ಕಣ್ಣು ಕಾಣಲ್ಲ. ಕಿವಿ ಕೇಳಲ್ಲ. ಮಾತನಾಡೋಕೆ ಆಗಲ್ಲ. 

  ಬೇರೆಯವರಾಗಿದ್ದರೆ ಹುಚ್ಚರಾಗುತ್ತಿದ್ದರೇನೋ.. ಆದರೆ, ಒಬ್ಬ ಹೆಣ್ಣು ಮಗಳ ಪ್ರೀತಿ ಸುಂದರಂ ಬದುಕನ್ನು ಸಹನೀಯವಾಗಿಸಿದೆ. ಸುಂದರವಾಗಿಸಿದೆ. ಅಂದಹಾಗೆ, ತೆರೆಗೆ ಬರಲು ಸಿದ್ಧವಾಗಿರುವ 3 ಗಂಟೆ 30 ದಿನ, 30 ಸೆಕೆಂಡು ಸಿನಿಮಾದಲ್ಲಿರೋದು ಇದೇ ಕ್ಯಾ.ಸುಂದರಂ ಕಥೆ. ಆ ಪಾತ್ರದಲ್ಲಿ ನಟಿಸುತ್ತಿರುವುದು ಡೈನಮಿಕ್ ಸ್ಟಾರ್ ದೇವರಾಜ್. ಅವರ ಸಾಹಸ ಹಾಗೂ ಬದುಕಿನ ಸ್ಫೂರ್ತಿಯ ಕಥೆಯನ್ನು ಮಿಸ್ ಮಾಡದೇ ನೋಡಿ. ಅದು ಒಬ್ಬ ಯೋಧನ ಸಾಹಸ & ಪ್ರೀತಿಯ ಕಥೆ.

 • ಪ್ರೀತೀನಾ.. ಐಶ್ವರ್ಯಾನಾ..? ಸೆಕೆಂಡ್‍ಗಳಲ್ಲಿ ತಿಳ್ಕೊಳ್ಳಿ..!

  3 gante 30 minutes 30 seconds movie image

  ತರ್ಕ, ಮನಸಿನ ಭಾಷೆ. ಭಾವನೆ, ಹೃದಯದ ಭಾಷೆ. ತರ್ಕಬದ್ಧವಾಗಿ ಆಲೋಚನೆ ಮಾಡುವವರು ಜೀವನದಲ್ಲಿ ಹಣ, ಐಶ್ವರ್ಯ, ಸಂಪತ್ತು ಎಲ್ಲವನ್ನೂ ಪಡೀತಾರೆ. ಭಾವನೆಗಳಿಗೆ ಬದ್ಧವಾಗಿರುವವರು ಸದಾ ನೆಮ್ಮದಿಯಾಗಿ, ಸುಖಿಗಳಾಗಿರುತ್ತಾರೆ.

  ಈ ಎರಡೂ ಒಬ್ಬರಿಗೇ ಸಿಕ್ಕುವುದು ಅಪರೂಪ. ಎರಡರಲ್ಲಿ ಒಂದನ್ನಷ್ಟೇ ಆಯ್ಕೆ ಮಾಡಿಕೊಳ್ಳೋಕೆ ಸಾಧ್ಯ. ಇಂಥಾದ್ದೊಂದು ಸೂಕ್ಷ್ಮ ವಿಷಯವನ್ನಿಟ್ಟುಕೊಂಡು ಬರುತ್ತಿರುವ ಸಿನಿಮಾ 3 ಗಂಟೆ, 30 ದಿನ , 30 ಸೆಕೆಂಡ್.

  ಚಿತ್ರದ ಹೆಸರು ವಿಭಿನ್ನವಾಗಿದೆ. ಕಥೆಯೂ ವಿಭಿನ್ನವಾಗಿದೆ ಅನ್ನೋದು ಚಿತ್ರದ ನಿರ್ದೇಶಕ ಮಧುಸೂದನ್. ಚಿತ್ರದ ಟ್ಯಾಗ್‍ಲೈನ್ ಏನ್ ಗೊತ್ತಾ..? ಇದು ಪ್ರೀತಿಯ ಪೋಸ್ಟ್‍ಮಾರ್ಟಮ್. ಚಿತ್ರಕ್ಕೆ ಬಂಡವಾಳ ಹೂಡಿರುವ ಚಂದ್ರಶೇಖರ್ ಆರ್. ಪದ್ಮಶಾಲಿಯವರಷ್ಟೇ ಅಲ್ಲ, ಇಡೀ ಚಿತ್ರತಂಡದಲ್ಲಿರುವ ಬಹುತೇಕರು ಪರಸ್ಪರ ಗೆಳೆಯರು. 

  ಪ್ರೇಕ್ಷಕರ ಹೃದಯ ಕದಿಯಲು 30 ಸೆಕೆಂಡ್ ಸಾಕು ಎಂಬ ವಿಶ್ವಾಸದಲ್ಲಿದೆ ಚಿತ್ರ ತಂಡ. ಸೆಕೆಂಡ್ ಲೆಕ್ಕ ಅಲ್ವಾ..? ನೋಡೇ ನೋಡ್ತಿವಿ ಬಿಡಿ.

 • ಮಲ್ಟಿಪ್ಲೆಕ್ಸ್‍ಗಳಲ್ಲಿ ವಂಡರ್‍ಫುಲ್ 3 ಗಂಟೆ 30 ದಿನ 30 ಸೆಕೆಂಡು

  3 gante successful in multiplexes

  3 ಗಂಟೆ 30 ದಿನ 30 ಸೆಕೆಂಡು.. ತನ್ನ ವಿಭಿನ್ನ ಟೈಟಲ್‍ನಿಂದಲೇ ಗಮನ ಸೆಳೆದಿದ್ದ ಚಿತ್ರ. ಇದೇ ಶುಕ್ರವಾರ ಬಿಡುಗಡೆಯಾಗಿರುವ ಚಿತ್ರಕ್ಕೆ ವಿಮರ್ಶಕರ ವಲಯದಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಯುವ ಜನಾಂಗಕ್ಕೆ ಬೇಕಿರುವ ಒಂದು ಅತ್ಯುತ್ತಮ ಸಂದೇಶವನ್ನು ಮನರಂಜನೆಯ ಮೂಲಕವೇ ಹೇಳಿರುವ ಪ್ರಯತ್ನಕ್ಕೆ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.

  ಅದರಲ್ಲಿಯೂ ಸಿಂಗಲ್ ಸ್ಕ್ರೀನ್‍ಗಳಿಗಿಂಂತ ಅತ್ಯುತ್ತಮ ಸ್ವಾಗತ ಸಿಕ್ಕಿರುವುದು ಮಲ್ಟಿಪ್ಲೆಕ್ಸ್‍ಗಳಲ್ಲಿ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು ಸೇರಿದಂತೆ ರಾಜ್ಯದ ದೊಡ್ಡ ದೊಡ್ಡ ನಗರಗಳಲ್ಲಿನ ಮಲ್ಟಿಪ್ಲೆಕ್ಸ್ ಥಿಯೇಟರುಗಳಲ್ಲಿ ಪ್ರದರ್ಶನಗಳ ಸಂಖ್ಯೆ ಈಗ ಇನ್ನಷ್ಟು ಹೆಚ್ಚಿರುವುದು ವಿಶೇಷ. 

  ಬಿಡುಗಡೆಯಾದ ದಿನದ ನಂತರ ಪ್ರದರ್ಶನಗಳ ಸಂಖ್ಯೆ ಹೆಚ್ಚುವುದು ಸಣ್ಣ ಮಾತೇನಲ್ಲ. ಹೀಗಾಗಿಯೇ ಚಿತ್ರದ ನಿರ್ದೇಶಕ ಮಧುಸೂದನ್ ಗೌಡ ಮತ್ತು ನಿರ್ಮಾಪಕ ಚಂದ್ರಶೇಖರ್ ಪದ್ಮಶಾಲಿ ಇಬ್ಬರೂ ಖುಷಿಯಾಗಿದ್ದಾರೆ. ಕ್ಲಾಸ್ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡೇ ಮಾಡಿದ್ದ ಸಿನಿಮಾ, ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

   

 • ರಾಮ ಯೋಗಿ.. ಕಾವ್ಯಾ ಶೆಟ್ಟಿ ರಾವಣ..!!

  ರಾಮ ಯೋಗಿ.. ಕಾವ್ಯಾ ಶೆಟ್ಟಿ ರಾವಣ..!!

  ;ರಾವಣ ಎಂದರೆ ದುಷ್ಟ, ಪರಸ್ತ್ರೀ ಮೇಲೆ ಕಣ್ಣು ಹಾಕಿದ ಕಾಮುಕ, ಹತ್ತು ತಲೆಯ ರಾಕ್ಷಸ. ಇದು ನಮ್ಮ ಕಣ್ಣ ಮುಂದೆ ಸಹಜವಾಗಿ ಬರುವ ಕಲ್ಪನೆ. ಈಗ ಒಂದು ಕಲ್ಪನೆ ಮಾಡಿಕೊಳ್ಳಿ, ರಾಮನಂತಾ ರಾಮನ ಎದುರು ಒಬ್ಬ ಚೆಂದದ ಹುಡುಗಿ ರಾವಣನ ಅವತಾರದಲ್ಲಿ ನಿಂತಿದ್ದಾಳೆ..ಅರೆರೆರೆರೆರೆ.. ರಾವಣನಾಗಿ ಹುಡುಗಿನಾ.. ಇಂಪಾಸಿಬಲ್ ಎನ್ನಬೇಡಿ. ಆ ಇಂಪಾಸಿಬಲ್, ಪಾಸಿಬಲ್ ಆಗಿಬಿಟ್ಟಿದೆ.

  ಇದು ಲಂಕೆ ಚಿತ್ರದ ಕಥೆ. ಇಲ್ಲಿ ರಾಮನಾಗಿ ಯೋಗಿ ನಟಿಸಿದ್ದಾರೆ. ರಾವಣನ ಪಾತ್ರದಲ್ಲಿ ನಟಿಸಿರುವುದು ಕಾವ್ಯಾ ಶೆಟ್ಟಿ. ರಾಮ್ ಪ್ರಸಾದ್ ನಿರ್ದೇಶನದ ಚಿತ್ರದಲ್ಲಿ ಮಂಡ್ಯದಲ್ಲಿ ನಡೆದ ಘಟನೆಯೊಂದನ್ನಿಟ್ಟುಕೊಂಡು ಚಿತ್ರ ಮಾಡಿದ್ದಾರಂತೆ.

  ಐಡಿಯಾ ಏನೋ ಕೇಳೋಕೆ ಥ್ರಿಲ್ಲಾಗಿದೆ. ವೇಯ್ಟ್.. ಅದೇ ಥ್ರಿಲ್ ಸಿನಿಮಾದಲ್ಲೂ ಸಿಗುತ್ತಾ.. ನೋಡೋಣ.

 • ಲಾಯರ್ ಮತ್ತು ನ್ಯೂಸ್ ಆ್ಯಂಕರ್ ಮಧ್ಯೆ ಚಾಲೆಂಜ್..!

  lawyer vs new anchor

  ಅವನು ಲಾಯರ್.. ಯಂಡಮೂರಿ ವೀರೇಂದ್ರನಾಥ್ ಅವರ ಕಾದಂಬರಿಯೊಂದರಲ್ಲಿನ ಪಾತ್ರದಂತೆ ಎಂಕೆಲಾ. ಅಂದರೆ, ಮರದ ಕೆಳಗಿನ ಲಾಯರು. ಇವಳು ನ್ಯೂಸ್ ಆ್ಯಂಕರ್.. ಹಾಗಂತ ಇಬ್ಬರ ಮಧ್ಯೆ ಪ್ರೀತಿಯಾಗುತ್ತಾ..? ಇಲ್ಲ. ಬದಲಿಗೆ ಜಗಳವಾಗುತ್ತೆ. 

  ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದನ್ನೇ ಕೆಲಸ ಮಾಡಿಕೊಂಡಿರುವ ವಕೀಲ, ಕೇಸ್ ಗೆಲ್ಲೋಕೆ ಬುದ್ದಿಮತ್ತೆ, ಚಾಕಚಕ್ಯತೆಯ ತಂತ್ರ ರೂಪಿಸೋ ತಂತ್ರಗಾರ. ಅವನಿಗೆ ಸವಾಲು ಹಾಕುವ ನಾಯಕಿ, ಕಿರಿಯಳಾದರೂ ಪ್ರಬುದ್ಧೆ. ಶಿಸ್ತು, ಗಾಂಭೀರ್ಯಕ್ಕೆ ಇನ್ನೊಂದು ಹೆಸರು.

  ಅವರಿಬ್ಬರ ಮಧ್ಯೆ ಒಂದು ಚಾಲೆಂಜ್ ಬೀಳುತ್ತೆ. ಗೆಲ್ಲಲೇಬೇಕು ಎಂದು ಇಬ್ಬರೂ ಹೊರಡುತ್ತಾರೆ. ಆ ಚಾಲೆಂಜ್ ಗೆಲ್ಲುವ ಹಾದಿಯಲ್ಲಿ ಅವರಿಬ್ಬರೂ ಬದಲಾಗುತ್ತಾರೆ. ಏಕೆ..? ಹೇಗೆ..? 

  ಎಲ್ಲವನ್ನೂ ನಾವೇ ಹೇಳಿಬಿಟ್ಟರೆ.. ಜನವರಿ 19ಕ್ಕೆ 3 ಗಂಟೆ, 30 ದಿನ 30 ಸೆಕೆಂಡ್ ನೋಡಿ. ಜನವರಿ 19ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾದಲ್ಲಿ ಖುಷಿ, ಸಂಭ್ರಮ, ಪ್ರೇಮ, ತಲ್ಲಣ.. ಎಲ್ಲವೂ ಇದೆ. 

  ಮಧುಸೂದನ್ ನಿರ್ದೇಶನದ ಚಿತ್ರದಲ್ಲಿ ಅರುಣ್ ಗೌಡ, ಕಾವ್ಯಾಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ. ದೇವರಾಜ್, ಸುಧಾರಾಣಿ ನಾಯಕ,ನಾಯಕಿಯರಷ್ಠೇ ಪ್ರಮುಖ ರೋಲ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ.

 • ಲಾಯರ್.. ಲವ್ವರ್.. 30 ಸೆಕೆಂಡ್.. ಥ್ರಿಲ್ಲರ್..!

  30 seconds thriller

  ಟೈಟಲ್‍ನಿಂದಾಗಿಯೇ ಕನ್ನಡ ಚಿತ್ರರಸಿಕರಲ್ಲಿ ನಿರೀಕ್ಷೆ ಮೂಡಿಸಿರುವ ಚಿತ್ರ 3 ಗಂಟೆ 30 ದಿನ 30 ಸೆಕೆಂಡು. 3 ಗಂಟೆ 30 ದಿನ 30 ಸೆಕೆಂಡುಗಳಲ್ಲಿಯೇ ನಡೆಯುವ ಕಥೆಯೇ ಈ ಸಿನಿಮಾ. ಚಿತ್ರದಲ್ಲಿ ಯೋಧನ ಕಥೆ, ಪ್ರೀತಿಯ ಕಥೆ, ರಿಯಾಲಿಟಿ ಶೋ.. ಎಲ್ಲವೂ ಇದೆ.

  ಚಿತ್ರದ ಹೀರೋ ಆರೂ ಗೌಡ. ಲಾಯರ್ ಪಾತ್ರದಲ್ಲಿ ನಟಿಸಿರುವ ಆರೂಗೌಡ, ಚಿತ್ರದಲ್ಲಿ ಲವ್ವರ್ ಬಾಯ್ ಕೂಡಾ ಹೌದು. ಕೋರ್ಟ್‍ಗೆ ಹೋಗದೆ, ಕೋರ್ಟ್‍ನ ಹೊರಗೇ ಡೀಲ್ ಮಾಡಿಸುವ ಡೀಲ್ ಮಾಸ್ಟರ್ ಪಾತ್ರ ಮಾಡುತ್ತಿರುವ ಆರೂಗೌಡ, ಅದರಿಂದಾಗಿಯೇ ಒಂದು ವಿಚಿತ್ರ ಸಮಸ್ಯೆಗೆ ಸಿಕ್ಕಬಿಡ್ತಾನೆ. ಅದರಿಂದ ಹೊರಬರಲು ಆತ ನಡೆಸುವ ಸಾಹಸವೇ ಚಿತ್ರದ ಕಥೆ.

  ದೇವರಾಜ್, ಸುಧಾರಾಣಿಯಂತಹವರ ಜೊತೆ ನಟಿಸುವ ಸಲುವಾಗಿ ಭಾರಿ ತಯಾರಿ ಮಾಡಿಕೊಂಡೆ ಎಂದು ಹೆಳಿಕೊಳ್ಳುವ ಆರೂಗೌಡ ಅವರಿಗೆ ಚಿತ್ರ ವಿಭಿನ್ನ ಅನುಭವ ನೀಡಿದೆ. ಜಿ.ಕೆ. ಮಧೂಸೂದನ್ ಕಥೆ ಹೇಳುವ ಶೈಲಿಯೇ ಡಿಫರೆಂಟ್ ಎನ್ನವ ಆರೂಗೌಡ, ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

   

   

 • ಹೀರೋಯಿನ್ ಕಾವ್ಯಾಶೆಟ್ಟಿ, ಜರ್ನಲಿಸ್ಟ್ ಬನ್‍ಗಯಾ

  3 gante 30 dina 30 seconds movie image

  ಕಾವ್ಯಾಶೆಟ್ಟಿ. ಇಷ್ಟಕಾಮ್ಯ, ಸ್ಮೈಲ್ ಪ್ಲೀಸ್, ಸಿಲಿಕಾನ್ ಸಿಟಿ ಚಿತ್ರಗಳಲ್ಲಿ ನಟಿಸಿದ್ದ ಸುಂದರಿ. ಇಗ ಅವರ ಎರಡು ಚಿತ್ರಗಳು ರಿಲೀಸ್‍ಗೆ ರೆಡಿಯಾಗಿವೆ. ಎರಡೂ ಚಿತ್ರಗಳಲ್ಲಿ ಕಾವ್ಯಾಶೆಟ್ಟಿ ಅವರದ್ದು ಪತ್ರಕರ್ತೆಯ ಪಾತ್ರ ಎನ್ನುವುದು ವಿಶೇಷ.

  ಜನವರಿ 19ಕ್ಕೆ 3 ಗಂಟೆ, 30 ದಿನ, 30 ಸೆಕೆಂಡ್ ರಿಲೀಸ್ ಆಗುತ್ತಿದೆ. ಆ ಚಿತ್ರದಲ್ಲಿ ಕಾವ್ಯಾಶೆಟ್ಟಿಯವರದ್ದು ಟಿವಿ ಚಾನಲ್ ಮಾಲಕಿಯ ಪಾತ್ರ. 30 ಸೆಕೆಂಡ್ ಚಿತ್ರದ ನಿರ್ದೇಶಕ ಮಧುಸೂದನ್ ಅವರಿಗೆ ಸಿನಿಮಾ ಹೊಸದೇ ಹೊರತು, ನಿರ್ದೇಶನ ಹೊಸದಲ್ಲ. ಹೀಗಾಗಿ ಪ್ರತಿಯೊಂದನ್ನೂ ಪ್ಲಾನ್ ಮಾಡಿಕೊಂಡೇ ಮಾಡಿದ್ದರು ಎಂದು ಅನುಭವ ಹಂಚಿಕೊಂಡಿದ್ದಾರೆ ನಟಿ ಕಾವ್ಯಾಶೆಟ್ಟಿ.

  ಆ್ಯಂಕರ್ ಆಗಿದ್ದರೂ, ಸಿನಿಮಾದಲ್ಲಿ ಕಾವ್ಯಾ ಶೆಟ್ಟಿ ತುಂಬಾ ಹೊತ್ತು ಪತ್ರಕರ್ತೆಯಾಗಿಯೇ ಇರೋದಿಲ್ಲ. ಪ್ರೀತಿ, ಪ್ರೇಮದಲ್ಲಿ ಮುಳುಗ್ತಾರೆ. ಚಾಲೆಂಜ್‍ಗಳನ್ನು ಹಾಕುತ್ತಾ, ಗೆಲ್ಲುತ್ತಾ, ಸೋಲುತ್ತಾ ಹೋಗುವ ವಿಭಿನ್ನ ಪಾತ್ರ ಅದು. ಸಿನಿಮಾ ಅಂತೂ ಬಿಡುಗಡೆಗೆ ಮೊದಲೇ ವಿಚಿತ್ರ ಕುತೂಹಲ ಸೃಷ್ಟಿಸಿದೆ. ಉತ್ತರ ಸಿಗೋದು ಮುಂದಿನ ವಾರ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery