` geetha shivarajkumar - chitraloka.com | Kannada Movie News, Reviews | Image

geetha shivarajkumar

  • Case Against ShivaRajkumar Quashed

    shivarajkumar

    A court in Shivamogga has quashed the case against actor Shivarajkumar in an election issue. Shivanna's wife Geetha Shivarajkumar had contested in the election for the Lok Sabha in 2014.

    According to a complaint the two had continued to canvass even after the deadline 48 hours before the voting. After three years the court finally closed the case saying there is no evidence to the allegation. Geetha Shivarajkumar had contested against BS Yeddyurappa in the Shivamogga constituency on a JDS ticket. 

     

  • I Have Fulfilled My wife's Wishes says Shivarajakumar

    shivarajkumar belli hejje image

    Actor Shivarajakumar said he has fulfilled his wife's wishes by letting her contest for the elections. Shivarajakumar was talking during the 'Belli Hejje' programme organised by the Karnataka Chalanachitra Academy at Ravindra Kalakshetra in Bangalore.

    When a fan of Shivarajakumar asked whether it was necessary for Geetha Shivarajkumar to contest and lose in the elections, Shivarajkumar said though he doesn't like politics, he has fulfilled his wife's wishes. 'My father didn't want politics. I also doesn't like politics. But as an husband I have fulfilled my wife's wishes and that is enough for me' said Shivarajakumar.

    When one among the audience told that Shivarajakumar must get a Padmashri award for his contribution to the Kannada film industry, 'I don't want any awards. The claps of the audience is a big reward for me' said Shivarajakumar.

    When asked about his opinion about the implementation of the Kalasa-Banduri project, 'It's not enough if the film industry join hands in the protest. Everybody must come and fight for the issue irrespective of caste and creed. Mainly the politicians must join hands for the fight irrespective of their parties' said Shivarajakumar.

  • Shivaraj Kumar's 50th Birthday Celebrations

    shivarajkumar family image

    Kannada Super Star Shivaraj Kumar's birthday celebrations started just after the stroke of twelve in midnight on Thursday morning (July 12), when thousands of  the actor's fans who had come all over the state started their frenzied slogan shouting hailing the actor.  A big cake was brought in by the fans of Shivaraj Kumar from Kethamaranahalli, a suburb of  Bengaluru and placed before the actor.  The actor cut the birthday cake and shared a few slices with his family members also.


    Vinay Raghjavendra Raj Kumar, son of the actor's younger brother Raghavendra Raj Kumar was also present during the occasion.

    Shivaraj Kumar wanted to keep his 50th birthday affair as low key, but his fans had other ideas.  They have planned various activities like Blood Donation programmes, helping out Aids inflicted kids and other programmes.


    Meanwhile,  Shivaraj Kumar had also organised a Homa in his house. From the morning  many personalities from film fraternity were seen in his house to wish the actor on his birthday.  D.Rajendra Babu, S.V.Rajendra Singh Babu, M.S.Ramesh, Yogish Hunasur, Producer Raveendra,  Vajreshwari Kumar and many other producers and directors wished him on his birthday.

    Actor Ravishankar was present in Shivaraj Kumar's house.

  • Shivarajakumar And Geetha Dance For Kick

    geetha shivarajkumar image

    Dance reality programme ‘Kick’ is all set to be launched on the 16th of July. One of the highlights of the launching episode is Shivarajakumar along with his wife Geetha Shivarajakumar has danced for the tune of a very famous song.

    Yes, the ‘Hatrick Hero’ along with his wife has danced to the tunes for ‘Nee Bandu Nintaga’ from the film ‘Kasturi Nivasa’. This is the first time that Shivarajakumar and Geetha Shivarajakumar has danced in the public.Shivarajakumar said his wife was quite

    Shivarajakumar said his wife was quite embrassed for dancing in the public. ‘Geetha even told me to call Akul and delete the dancing portion. However, I told Geetha to let it go and enjoy the show’ said Shivarajakumar

  • Shivarajakumar Honoured in London

    shivarajkumar honored image

    Actor Shivarajakumar was honoured with the prestigious 'Visionnaire' award in front of the Basavanna statute in London. Shivarajakumar's latest film 'Shivalinga' got released in London on the 19th of March and Shivarajakumar had gone there with his wife Geetha Shivarajakumar, daughter, son-in-law and others. Meanwhile, the Kannada Sangha decided to honour the Century Star during his visit.

    chitraloka_group1.gif

    Likewise, the actor was felicitated by the Basaveshwara Foundation chairman Neeraj Patil in front of the Basaveshwara statute in London

  • ಅಭಿಮಾನಿಗಳಿಂದ ಶಿವರಾಜ್ ಕುಮಾರ್ ಗೀತ ಶಿವರಾಜ್ ಕುಮಾರ್ ಮದುವೆ ವಾರ್ಷಿಕೋತ್ಸವ ಆಚರಣೆ.

    ಅಭಿಮಾನಿಗಳಿಂದ ಶಿವರಾಜ್ ಕುಮಾರ್ ಗೀತ ಶಿವರಾಜ್ ಕುಮಾರ್ ಮದುವೆ ವಾರ್ಷಿಕೋತ್ಸವ ಆಚರಣೆ.

    36ನೇ ವರ್ಷದ ಮದುವೆ ವಾರ್ಷಿಕೋತ್ಸವ ಸೆಲೆಬ್ರೇಷನ್.

    ಶಿವರಾಜ್ ಕುಮಾರ್ - ಗೀತಾ ಶಿವರಾಜ್ ಕುಮಾರ್  ದಂಪತಿಗಳಿಗೆ ಸಿಹಿ ಹಂಚಿ ಇಬ್ಬರಿಂದ ಹಾರ ಬದಲಾಯಿಸಿ ವೆಡಿಂಗ್ ಆ್ಯನಿವರ್ಸರಿಯನ್ನ ಅಭಿಮಾನ ಪೂರ್ವಕವಾಗಿ ಆಚರಿಸಿದ್ದಾರೆ..

  • ಆರ್.ಚಂದ್ರು ತೋಟ ನೋಡಿ ಥ್ರಿಲ್ ಆದ ಶಿವಣ್ಣ ದಂಪತಿ

    shivanna visits r chandru's farm house

    ನಿರ್ದೇಶಕ ಆರ್.ಚಂದ್ರು, ಫುಲ್ ಟೈಂ ನಿರ್ದೇಶಕರಾದರೂ, ಹವ್ಯಾಸಿ ಕೃಷಿಕ. ಸಿನಿಮಾದಿಂದ ಬಂದ ಲಾಭವನ್ನು ಕೃಷಿಗೆ ಸುರಿದಿದ್ದಾರೆ ಚಂದ್ರು. ಚಿಕ್ಕಬಳ್ಳಾಪುರದ ಕೇಶಾವರದಲ್ಲಿ ಚೆಂದದ ತೋಟ ಮಾಡಿದ್ದಾರೆ.

    ಬಿಡುವಿದ್ದಾಗಲೆಲ್ಲ ಜಮೀನಿಗೆ ಹೋಗಿ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಚಂದ್ರು ತೋಟಕ್ಕೆ ಇತ್ತೀಚೆಗೆ ಶಿವಣ್ಣ ಮತ್ತು ಗೀತಾ ಭೇಟಿ ಕೊಟ್ಟಿದ್ದರು. ಸ್ವರ್ಗ.. ಸ್ವರ್ಗ.. ಶಿವಣ್ಣನ ಬಾಯಲ್ಲಿ ಬಂದ ಉದ್ಘಾರ ಇದೇ.

    ಏಕೆಂದರೆ ಚಂದ್ರು ರೆಡಿಮೇಡ್ ತೋಟ ಖರೀದಿಸದೆ ತಾವೇ ತೋಟ ಮಾಡುತ್ತಿದ್ದಾರೆ. ಗುಡಿಸಲು ಕಟ್ಟಿದ್ದಾರೆ. ಲಾಕ್ ಡೌನ್ ತೆರವಾದ ನಂತರ ಚಿಕ್ಕಬಳ್ಳಾಪುರದ ದೇವಸ್ಥಾನಗಳಿಗೆ ಹೋಗಿದ್ದ ಶಿವಣ್ಣ ದಂಪತಿ, ಚಂದ್ರು ತೋಟಕ್ಕೂ ಹೋಗಿದ್ದಾರೆ. ಚಂದ್ರು ತಮ್ಮ 20 ಎಕರೆ ಜಮೀನಿನಲ್ಲಿ ದ್ರಾಕ್ಷಿ, ಕ್ಯಾಪ್ಸಿಕಮ್, ರೇಷ್ಮೆ, ಮೆಣಸಿನ ಕಾಯಿ ಬೆಳೆಯುತ್ತಿದ್ದಾರೆ.

  • ಇಂದು ಶಿವ 143 ನೋಡೋಕೆ ಬರ್ತಾರೆ ಶಿವಣ್ಣ ದಂಪತಿ

    ಇಂದು ಶಿವ 143 ನೋಡೋಕೆ ಬರ್ತಾರೆ ಶಿವಣ್ಣ ದಂಪತಿ

    ಶಿವ 143 ರಿಲೀಸ್ ಆಗಿದೆ. ಧಿರೇನ್ ರಾಮಕುಮಾರ್ ಅಭಿನಯದ ಮೊದಲ ಸಿನಿಮಾ ಇದು. ಮಾಸ್.ಆ್ಯಕ್ಷನ್.ರೊಮ್ಯಾನ್ಸ್.ಲವ್... ಎಲ್ಲವೂ ಇರುವ ಚಿತ್ರ ಹೊಸ ಮಾಸ್ ಹೀರೋಗೆ ಜನ್ಮ ಕೊಟ್ಟಿದೆ. ಧಿರೇನ್ ಮತ್ತು ಮಾನ್ವಿತಾ ಕಾಮತ್ ಇಬ್ಬರೂ ಶಿವ-ಮಧು ಪಾತ್ರವನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ರಾಜ್ ಕುಟುಂಬದ ಕುಡಿಯಾಗಿ ಅಂತಾದ್ದೊಂದು ಪಾತ್ರ ಒಪ್ಪಿಕೊಂಡ ಧಿರೇನ್ ಮತ್ತು ಅಂತಹ ನಾಯಕಿಯ ಪಾತ್ರಕ್ಕೆ ಓಕೆ ಎಂದು ನಟಿಸಿದ ಮಾನ್ವಿತಾ ಕಾಮತ್ ಇಬ್ಬರ ಧೈರ್ಯವನ್ನೂ ಮೆಚ್ಚಿಕೊಳ್ಳಲೇಬೇಕು.

    ಚಿತ್ರರಂಗದಲ್ಲಿ ಹಿರಿ ಕಿರಿಯರೆನ್ನದೆ ಎಲ್ಲರಿಗೂ ಶುಭ ಕೋರುವ ಪ್ರತಿಯೊಬ್ಬರ ಚಿತ್ರದ ಗೆಲುವನ್ನೂ ಸಂಭ್ರಮಿಸುವ ಶಿವಣ್ಣ ಸೋದರಳಿಯನ ಚಿತ್ರ ನೋಡೋಕೆ ಇವತ್ತು ಚಿತ್ರಮಂದಿರಕ್ಕೇ ಬರುತ್ತಿದ್ದಾರೆ. ದಂಪತಿ ಸಮೇತ.

    ಮೆಜೆಸ್ಟಿಕ್‍ನ ಸಂತೋಷ್ ಚಿತ್ರಮಂದಿರಕ್ಕೆ ಇಂದು ಶಿವಣ್ಣ ಹಾಗೂ ಗೀತಾ ಶಿವರಾಜಕುಮಾರ್ ಬಂದು ಶಿವ 143 ವೀಕ್ಷಿಸಲಿದ್ದಾರೆ. ಅಭಿಮಾನಿಗಳ ಜೊತೆ. ಸಮಯ ಸಂಜೆ 7 ಗಂಟೆಗೆ.

    ಜಯಣ್ಣ-ಭೋಗೇಂದ್ರ-ಡಾ.ಸೂರಿ ನಿರ್ಮಾಣದ ಚಿತ್ರಕ್ಕೆ ಅನಿಲ್ ಕುಮಾರ್ ನಿರ್ದೇಶನವಿದೆ. ಚಿತ್ರಕ್ಕೆ ಬಿಡುಗಡೆಗೂ ಮುನ್ನ ಕನ್ನಡ ಚಿತ್ರರಂಗದ ಸ್ಟಾರ್ ನಟರು ಶುಭ ಕೋರಿದ್ದರು. ರಾಜ್ ಫ್ಯಾಮಿಲಿಯವರಷ್ಟೇ ಅಲ್ಲದೆ ಕಿಚ್ಚ ಸುದೀಪ್ ಸೇರಿದಂತೆ ಚಿತ್ರರಂಗದ ಹಿರಿಯರೆಲ್ಲ ಧಿರೇನ್‍ಗೆ ಸ್ವಾಗತ ಕೋರಿದ್ದರು. ಈಗ ಪ್ರೇಕ್ಷಕರೂ ಉಘೇ ಎಂದಿದ್ದಾರೆ. 

  • ಗಾನವಿ, ಆದಿತಿ, ಶ್ವೇತಾ ಚೆಂಗಪ್ಪ ಬಗ್ಗೆ ಗೀತಾ ಶಿವ ರಾಜ್ ಕುಮಾರ್ ಮಾತು

    ಗಾನವಿ, ಆದಿತಿ, ಶ್ವೇತಾ ಚೆಂಗಪ್ಪ ಬಗ್ಗೆ ಗೀತಾ ಶಿವ ರಾಜ್ ಕುಮಾರ್ ಮಾತು

    ಶಿವ ರಾಜ್ ಕುಮಾರ್ ಅವರ 125ನೇ ಸಿನಿಮಾ ನಮ್ಮ ಕೈಗೆ ಬಂದಿದ್ದೇ ಒಂದು ರೋಚಕ ಕತೆ. ಮೊದಲು ಯಾರೋ ಒಬ್ಬರು ಬಂದರು. ಮುಹೂರ್ತವೂ ಆಯಿತು. ಆದರೆ ಟೇಕಾಫ್ ಆಗಲಿಲ್ಲ. ಮತ್ತೊಬ್ಬರು ಬಂದರು. ಅವರೂ ಅಷ್ಟೆ. ಕೊನೆಗೆ ನಾವೇ ಸಿನಿಮಾ ಮಾಡುತ್ತೇವೆ ಎಂದಾಗ ಅವರು ಬೇಡ ಎನ್ನಲಿಲ್ಲ. ಅದೃಷ್ಟ ಚೆನ್ನಾಗಿತ್ತು ಎಂದವರು ಗೀತಾ. ಫಸ್ಟ್ ಡೇ ಫಸ್ಟ್ ಶೋ ನೋಡಿ ಮಾತನಾಡುತ್ತಿದ್ದ ಗೀತಾಗೆ ಅಭಿಮಾನಿಗಳು ಮಡಿಲಕ್ಕಿ ತುಂಬಿದ್ದು ವಿಶೇಷವಾಗಿತ್ತು. ಇದೇ ವೇಳೆ ಮಾತನಾಡಿದ ಗೀತಾ

    ಶಿವರಾಜ್ಕುಮಾರ್ ಜೊತೆ ಅದಿತಿ ಸಾಗರ್ ಮತ್ತು ಗಾನವಿ ಇಬ್ಬರಿಗೂ ತುಂಬಾನೇ ಒಳ್ಳೆಯ ಹೆಸರು ಬಂದಿದೆ. ಆ ಇಬ್ಬರು ಹೆಣ್ಣು ಮಕ್ಕಳಿಗೆ ಹೆಸರು ಬಂದಿರುವುದು ತುಂಬಾನೇ ಇಷ್ಟವಾಯಿತು. ಸಿನಿಮಾದಲ್ಲಿ ಶ್ರಮಪಟ್ಟು ಕೆಲಸ ಮಾಡಿದ್ದಾರೆ. ಶಿವರಾಜ್ಕುಮಾರ್ ಸರಿಸಮಾನಗಿ ನಟಿಸುವುದು ಸ್ವಲ್ಪ ಕಷ್ಟನೇ ಆದರೂ ಅವರು ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. ನಾನು ಯಾವತ್ತೂ ಸಿನಿಮಾ ರಿಲೀಸ್ಗೆ ಹೆದರಿಕೊಂಡಿರಲಿಲ್ಲ.  ಒಳ್ಳೆಯದಾಗುತ್ತದೆ ಎಂದು ನನಗೆ ಗೊತ್ತಿತ್ತು  ಎಂದಿದ್ದಾರೆ ಗೀತಾ.

    ಶಿವಣ್ಣ ಜೊತೆ ಗಾನವಿ ಲಕ್ಷ್ಮಣ್ ಪತ್ನಿಯಾಗಿ ನಟಿಸಿದ್ದಾರೆ. ಆದಿತಿ ಸಾಗರ್ ಶಿವಣ್ಣ ಮಗಳಾಗಿ ನಟಿಸಿದ್ದಾರೆ. ಹರ್ಷ ಕ್ರೌರ್ಯವನ್ನು ವೈಭವೀಕರಿಸಿದ್ದರೂ, ಚಿತ್ರದ ಮೆಸೇಜ್ ಅದ್ಭುತವಾಗಿದ್ದು ಕ್ರೌರ್ಯ ಓಕೆ ಎನ್ನುವಂತೆ ಪ್ರೇಕ್ಷಕರು ಮೆಚ್ಚುಗೆ ತೋರಿಸಿದ್ದಾರೆ.

  • ಗೀತಾ ಶಿವ ರಾಜ್ ಕುಮಾರ್ ಕಾಂಗ್ರೆಸ್ ಸೇರ್ತಾರಾ..?

    ಗೀತಾ ಶಿವ ರಾಜ್ ಕುಮಾರ್ ಕಾಂಗ್ರೆಸ್ ಸೇರ್ತಾರಾ..?

    ಡಾ.ರಾಜ್ ಕುಮಾರ್ ಕುಟುಂಬದ ದೊಡ್ಡ ಸೊಸೆ ಗೀತಾ ಶಿವ ರಾಜ್ ಕುಮಾರ್ ಅವರಿಗೆ ರಾಜಕೀಯ ಹೊಸದಲ್ಲ. ಅವರು ರಾಜ್ಯದ ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪನವರ ಮಗಳು. ತಮ್ಮಂದಿರಾದ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಇಬ್ಬರೂ ರಾಜಕೀಯದಲ್ಲಿದ್ದಾರೆ. ಈ ಹಿಂದೆ ಗೀತಾ ಶಿವರಾಜ್ ಕುಮಾರ್, ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ವಿರುದ್ಧ ಜೆಡಿಎಸ್ನಿಂದ ಸ್ಪರ್ಧಿಸಿ ಸೋತಿದ್ದರು. ಅದಾದ ನಂತರ ತೆರೆಮರೆಯಲ್ಲಿದ್ದ ಗೀತಾ, ಮಧು ಬಂಗಾರಪ್ಪ ಪರ ಪ್ರಚಾರವನ್ನೂ ಮಾಡಿದ್ದರು. ಈಗ ಕಾಂಗ್ರೆಸ್ಗೆ ಬರುತ್ತಾರೆ ಎಂಬ ಸುದ್ದಿಯಿದೆ.

    ಜೆಡಿಎಸ್ನಲ್ಲಿದ್ದ ಮಧು ಬಂಗಾರಪ್ಪ ಈಗ ಕಾಂಗ್ರೆಸ್ ಕದ ತಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಧು ಬಂಗಾರಪ್ಪ ಅವರನ್ನು ಅಪ್ಪಿಕೊಂಡಿದ್ಧಾರೆ. ಈ ವೇಳೆ ಸ್ವತಃ ಮಧು ಬಂಗಾರಪ್ಪ, ಗೀತಾ ಶಿವರಾಜ್ ಕುಮಾರ್ ಕೂಡಾ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾಹಿತಿ ನೀಡಿದ್ದಾರೆ. ಆದರೆ, ಅದಕ್ಕೆ ಇನ್ನೂ ಟೈಂ ಇದೆ ಎಂದಿದ್ದಾರೆ ಡಿಕೆ ಶಿವಕುಮಾರ್.

    ಪತ್ನಿಯ ಪರ ಆಗ ಪ್ರಚಾರವನ್ನೂ ಮಾಡಿದ್ದ ಶಿವರಾಜ್ ಕುಮಾರ್, ನನಗೆ ರಾಜಕೀಯ ಅರ್ಥವಾಗಲ್ಲ. ಆದರೆ ನನ್ನ ಪತ್ನಿ ಹಾಗಲ್ಲ. ಆಕೆಗೆ ಇಷ್ಟವಿದೆ. ಆಕೆಯನ್ನು ಬೆಂಬಲಿಸುತ್ತೇನೆ ಎಂದಿದ್ದರು.

    ಡಾ.ರಾಜ್ ಅವರನ್ನು ಇಂದಿರಾ ಗಾಂಧಿ ವಿರುದ್ಧ ನಿಲ್ಲಿಸಲು ನಡೆದಿದ್ದ ಯತ್ನ ಕನ್ನಡಿಗರಿಗೆ ನೆನಪಿದೆ. ಅಂದಹಾಗೆ ಎಲ್ಲರಿಗೂ ಗೊತ್ತಿರೋ ಹಾಗೆ ಡಾ.ರಾಜ್ ಸ್ವತಃ ರಾಜಕೀಯದಿಂದ ದೂರ ಹೋಗಿರಲಿಲ್ಲ. ರಾಜಕಾರಣಿಗಳು ಆಗ ರಾಜ್ ಅವರಿಗೆ ಸುಳ್ಳು ಭರವಸೆ ಕೊಟ್ಟಿದ್ದರು. ಅದನ್ನು ಮುಗ್ಧರಾಗಿ ನಂಬಿ ಬಂದಿದ್ದ ರಾಜ್ ಅವರಿಗೆ ಸತ್ಯದರ್ಶನ ಮಾಡಿಸಿದ್ದವರು ಅವರ ಗೆಳೆಯ ತಿಪಟೂರು ರಾಮಸ್ವಾಮಿ ಚಿತ್ರಲೋಕದಲ್ಲ ಸವಿವರವಾಗಿ ಹೇಳಿದ್ದಾರೆ.

    ರಾಜ್ ರಾಜಕೀಯ ಪ್ರವೇಶಕ್ಕೆ ಒಪ್ಪಿಕೊಂಡಿದ್ದೇಕೆ? | ರಾಜ್ ಹಾಕಿದ ಕಂಡಿಷನ್ಸ್ ಏನು? | Tiptur Ramaswamy Ep 15. ಲಿಂಕ್ ಇಲ್ಲಿದೆ.

    https://www.youtube.com/watch?v=lHvWZC3wm68

    ಈಗ ಅವರ ಸೊಸೆ ರಾಜಕೀಯಕ್ಕೆ, ಅದರಲ್ಲೂ ಕಾಂಗ್ರೆಸ್ ಮೂಲಕ ಮತ್ತೆ ಬರುತ್ತಿದ್ದಾರೆ.

  • ಗೀತಾ ಶಿವರಾಜ್ ಕುಮಾರ್ ಅವರಿಗಾಗಿ ಬಲೆಯನ್ನೇ ಬೀಸಬೇಕಾಯ್ತು : ಡಿಕೆ ಶಿವಕುಮಾರ್

    ಗೀತಾ ಶಿವರಾಜ್ ಕುಮಾರ್ ಅವರಿಗಾಗಿ ಬಲೆಯನ್ನೇ ಬೀಸಬೇಕಾಯ್ತು : ಡಿಕೆ ಶಿವಕುಮಾರ್

    ಶಿವಣ್ಣ ಅವರೂ ಕೂಡಾ ಕಾಂಗ್ರೆಸ್ ಪರ ಪ್ರಚಾರ ಮಾಡಲಿದ್ದಾರೆ. ಸೊರಬದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪ ಅವರೇ ಈ ಮಾತು ಹೇಳಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಮಧು ಬಂಗಾರಪ್ಪ ಈ ಮಾತು ಹೇಳಿರುವುದು ವಿಶೇಷ.

    ನಾನು ನನ್ನ ಪತ್ನಿಯ ನಿರ್ಧಾರಕ್ಕೆ ಬೆಂಬಲವಾಗಿರುತ್ತೇನೆ ಎಂದಿದ್ದಾರೆ ಶಿವಣ್ಣ. ಶಿವಣ್ಣ ಕೂಡಾ ಪ್ರಚಾರಕ್ಕೆ ಹೋಗುತ್ತಿದ್ದು, ಗೀತಾ ಜೊತೆಯಲ್ಲೇ ಪ್ರಚಾರ ಮಾಡಲಿದ್ದಾರೆ. ಗೀತಾ ಅವರು ಕಾಂಗ್ರೆಸ್ಸಿಗೆ ಸೇರಿರುವುದರಿಂದ, ಕಾಂಗ್ರೆಸ್ ಪರವೇ ಪ್ರಚಾರ ಮಾಡಬೇಕಾಗಿ ಬರಬಹುದು.

    ಕಳೆದ ಕೆಲವು ವರ್ಷಗಳಿಂದ ಗೀತಾ ಅವರು ಶಕ್ತಿಧಾಮಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯಕ್ಕೆ ಸೇರುವುದರಿಂದ ಅವರ ಇನ್ನಷ್ಟು ಒಳ್ಳೆಯ ಕೆಲಸಗಳಿಗೆ, ಯೋಜನೆಗಳಿಗೆ ಶಕ್ತಿ ಬರಲಿದೆ ಎಂದಿದ್ದಾರೆ ಶಿವಣ್ಣ.

    ಗೀತಾ ಅವರನ್ನು ಕಾಂಗ್ರೆಸ್ಸಿಗೆ ಬರಮಾಡಿಕೊಂಡ ಡಿ.ಕೆ.ಶಿವರಾಜ್ ಕುಮಾರ್, ಮಧು ಬಂಗಾರಪ್ಪ ಅವರಿಗಾಗಿ ಗಾಳ ಹಾಕಿದೆ. ಆದರೆ ಗೀತಾ ಅವರನ್ನು ಕಾಂಗ್ರೆಸ್ಸಿಗೆ ಕರೆತರಲು ಬಲೆಯನ್ನೇ ಹಾಕಬೇಕಾಯಿತು. ಅವರು ನನ್ನ ಬಲೆಗೂ ಬೀಳಲಿಲ್ಲ. ಆದರೆ ರಾಹುಲ್ ಗಾಂಧಿ ಅವರು ಘೋಷಿಸಿರುವ ಕಾರ್ಯಕ್ರಮಗಳಿಗೆ ಬಿದ್ದರು ಎಂದಿದ್ದಾರೆ ಡಿಕೆ ಶಿವಕುಮಾರ್.

    ಮೋದಿಯವರು ಕಾಂಗ್ರೆಸ್ ಘೋಷಣೆಗಳಿಗೆ ಗೀತಾ ಉತ್ತರ ನೀಡಿದ್ದಾರೆ. ಡಾ.ರಾಜ್ ಕುಮಾರ್ ಸೊಸೆ, ಶಿವ ರಾಜ್ ಕುಮಾರ್ ಪತ್ನಿ ಹಾಗೂ ನನ್ನ ಗುರುಗಳಾದ ಎಸ್. ಬಂಗಾರಪ್ಪ ಅವರ ಮಗಳು ಗೀತಾ, ಕಾಂಗ್ರೆಸ್ ಸೇರುವ ಮೂಲಕ ಮೋದಿಯ ಟೀಕೆಗಳಿಗೆ ಉತ್ತರ ಕೊಟ್ಟಿದ್ದಾರೆ ಎನ್ನುವುದು ಡಿಕೆ ಶಿವಕುಮಾರ್ ವಿವರಣೆ.

  • ಗೀತಾ ಶಿವರಾಜ್ ಕುಮಾರ್ ಇಂದು ಕಾಂಗ್ರೆಸ್ ಸೇರ್ಪಡೆ

    ಗೀತಾ ಶಿವರಾಜ್ ಕುಮಾರ್ ಇಂದು ಕಾಂಗ್ರೆಸ್ ಸೇರ್ಪಡೆ

    ಡಾ.ರಾಜ್ ಕುಟುಂಬದಲ್ಲಿ ಮತ್ತೆ ರಾಜಕೀಯದ ಕಹಳೆ ಮೊಳಗುತ್ತಿದೆ. ಡಾ.ರಾಜ್ ಕುಟುಂಬ ಮತ್ತು  ರಾಜಕೀಯದ ನಂಟು ಹೊಸದೇನೂ ಅಲ್ಲ. ಆದರೆ ಅದು ರಾಜ್ ಕುಟುಂಬಕ್ಕೆ ಹತ್ತಿರವಾದವರ ನೆಂಟಸ್ತಿಕೆಯಲ್ಲಿ ಮಾತ್ರವೇ ಇತ್ತು. ಸ್ವತಃ ರಾಜ್ ಕುಮಾರ್ ಅವರಾಗಲೀ, ರಾಘವೇಂದ್ರ, ಪುನೀತ್ ಸೇರಿದಂತೆ ಯಾರೊಬ್ಬರೂ ರಾಜಕೀಯಕ್ಕೆ ಹೋಗಿರಲಿಲ್ಲ. ಆದರೆ ಗೀತಾ ಶಿವರಾಜ್ ಕುಮಾರ್ ಹಾಗಲ್ಲ.

    2014ರ ಲೋಕಸಭೆ ಚುನಾವಣೆಯಲ್ಲಿ ಗೀತಾ ಜೆಡಿಎಸ್`ನಿಂದ ಸ್ಪರ್ಧೆ ಮಾಡಿದ್ದರು. ದಿ.ಬಂಗಾರಪ್ಪನವರ ಪುತ್ರಿಯಾದ ಗೀತಾ ಅವರಿಗೆ 2.40,636 ಸಿಕ್ಕಿದ್ದವು. ಆದರೆ ಯಡಿಯೂರಪ್ಪ 6 ಲಕ್ಷಕ್ಕೂ ಹೆಚ್ಚು ಮತ ಪಡೆದು ಗೆದ್ದಿದ್ದರು. ಆಗ ಮಾತ್ರ ಶಿವಣ್ಣ, ಪತ್ನಿ ಗೀತಾ ಪರವಾಗಿ ಕ್ಯಾಂಪೇನ್ ಮಾಡಿದ್ದರು. ಅದನ್ನು ಬಿಟ್ಟರೆ ಶಿವಣ್ಣ ಕೂಡಾ ರಾಜಕೀಯದಿಂದ ದೂರ.

    ನನ್ನ ಪತ್ನಿಗೆ ತಂದೆಯಂತೆ ರಾಜಕಾರಣಿಯಾಗುವ ಆಸೆಯಿದೆ. ಯಾಕೆ ತಡೆಯಬೇಕು? ಒಬ್ಬ ಪತಿಯಾಗಿ ಆಕೆಯ ಬೆಂಬಲಕ್ಕೆ ನಿಂತಿದ್ದೇನೆ. ಆದರೆ ರಾಜಕೀಯ ವೈಯಕ್ತಿಕವಾಗಿ ನನಗೆ ಆಗಿಬರೋದಿಲ್ಲ. ಮುಂದೆ ಗೀತಾ ರಾಜಕೀಯಕ್ಕೆ ಹೋಗುತ್ತೇನೆ ಎಂದರೆ ಖಂಡಿತಾ ಬೆಂಬಲ ಕೊಡುತ್ತೇನೆ. ಆದರೆ ಪ್ರಚಾರಕ್ಕೆ ಕಷ್ಟ ಎಂದಿದ್ದರು ಶಿವಣ್ಣ.

    ರಾಜ್ ಕುಟುಂಬದವರೊಬ್ಬರು ರಾಜಕೀಯದಲ್ಲಿ ಪ್ರಚಾರ ಮಾಡುವುದನ್ನೂ ಅರಗಿಸಿಕೊಳ್ಳದ ಅಭಿಮಾನಿಗಳಿಗೆ ಒಬ್ಬ ಪತಿಯಾಗಿ ಶಿವಣ್ಣನ ನಡವಳಿಕೆಯೂ ಇಷ್ಟವಾಗಿತ್ತು. ಇದೀಗ ಗೀತಾ ಅವರ ಕೆಪಿಸಿಸಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಲಿದ್ದಾರೆ. ಗೀತಾ ಅವರ ತಂದೆ ಬಂಗಾರಪ್ಪ ರಾಜ್ಯದ ಸಿಎಂ ಆಗಿದ್ದವರು. ಗೀತಾ ಅವರ ತಮ್ಮಂದಿರಲ್ಲಿ ಮಧು ಬಂಗಾರಪ್ಪ ಈಗ ಕಾಂಗ್ರೆಸ್ಸಿನಲ್ಲಿದ್ದರೆ, ಕುಮಾರ್ ಬಂಗಾರಪ್ಪ ಬಿಜೆಪಿಯಲ್ಲಿದ್ದಾರೆ. ಗೀತಾ ಅವರು ಮಧು ಬಂಗಾರಪ್ಪ ಪರ ಈಗಾಗಲೇ ಪ್ರಚಾರವನ್ನೂ ನಡೆಸಿದ್ದಾರೆ.

  • ಚುನಾವಣೆಯಿಂದ ದೂರ ಸರಿದ ಗೀತಾ ಶಿವರಾಜ್ ಕುಮಾರ್

    geetha shivarajkumar quits election politics

    ಕಳೆದ ಬಾರಿ ಶಿವಮೊಗ್ಗ ಜಿಲ್ಲೆಯಲ್ಲಿ ಗೀತಾ ಶಿವರಾಜ್ ಕುಮಾರ್ ಸಾಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಜೆಡಿಎಸ್ ಟಿಕೆಟ್‍ನಲ್ಲಿ ಕಣಕ್ಕಿಳಿದಿದ್ದ ಗೀತಾ ಅವರ ಪರ ಚಿತ್ರರಂಗದ ಹಲವು ನಾಯಕರು ಪ್ರಚಾರವನ್ನೂ ನಡೆಸಿದ್ದರು. ಆದರೆ, ರಾಜಕೀಯವೇ ಬೇರೆ. ಸಿನಿಮಾ ಕ್ಷೇತ್ರವೇ ಬೇರೆ. ದೊಡ್ಮನೆಯ ಸೊಸೆಯಾಗಿ ಕಣಕ್ಕಿಳಿದಿದ್ದ ಗೀತಾಗೆ ಗೆಲುವು ಸಿಕ್ಕಿರಲಿಲ್ಲ. ಈ ಬಾರಿಯ ಪರಿಸ್ಥಿತಿಯೇ ಬೇರೆ. ಆದರೆ, ಗೀತಾ ಶಿವರಾಜ್ ಕುಮಾರ್ ಚುನಾವಣೆಯಲ್ಲಿ ಸ್ಪರ್ಧಿಸದೇ ಇರಲು ನಿರ್ಧರಿಸಿದ್ದಾರೆ.

    ಹಾಗೆ ನೋಡಿದರೆ, ದೇವೇಗೌಡ ಹಾಗೂ ಕುಮಾರಸ್ವಾಮಿಯವರ ಜೊತೆ ಶಿವರಾಜ್ ಕುಮಾರ್ ಉತ್ತಮ ಸ್ನೇಹವಿಟ್ಟುಕೊಂಡಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರ ತಮ್ಮ ಮಧು ಬಂಗಾರಪ್ಪ, ಈಗಲೂ ಜೆಡಿಎಸ್‍ನಲ್ಲಿ ಪ್ರಭಾವಿ ಶಾಸಕ, ಅಲ್ಲದೆ ಕುಮಾರಸ್ವಾಮಿಯವರ ಆಪ್ತ ಕೂಡಾ. ಹಾಗೆಂದು ಈ ಸ್ನೇಹ ಜೆಡಿಎಸ್ ನಾಯಕರಿಗಷ್ಟೇ ಸೀಮಿತವಾಗಿಲ್ಲ. ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಸೇರಿದಂತೆ ಎಲ್ಲ ಪಕ್ಷದ ನಾಯಕರ ಜೊತೆಯಲ್ಲೂ ಸ್ನೇಹವಿಟ್ಟುಕೊಂಡಿದೆ ರಾಜ್ ಕುಟುಂಬ. ಪಾರ್ವತಮ್ಮ ರಾಜ್‍ಕುಮಾರ್ ನಿಧನರಾದಾಗ ಖುದ್ದು ರಾಹುಲ್ ಗಾಂಧಿಯವರೇ ಸಾಂತ್ವನ ಹೇಳಲು ಬಂದಿದ್ದರು. ಅದು ದೊಡ್ಡ ಸುದ್ದಿಯಾಗಿತ್ತು.

    ಅವುಗಳನ್ನೆಲ್ಲ ಪಕ್ಕಕ್ಕಿಟ್ಟು ಚುನಾವಣೆಯಿಂದ ದೂರ ಉಳಿಯಲು ಗೀತಾ ಶಿವರಾಜ್ ಕುಮಾರ್ ನಿರ್ಧರಿಸಿದ್ದಾರೆ. ಒಂದೇ ಚುನಾವಣೆಗೆ ಗೀತಾ ಅವರಿಗೆ ರಾಜಕೀಯ ಸಾಕು ಸಾಕು ಎನ್ನುವಂತಾಗಿ ಹೋಯ್ತೇನೋ.

  • ತಿಮ್ಮಪ್ಪನಿಗೆ ಮುಡಿ ಕೊಟ್ಟ ಗೀತಾ ಶಿವರಾಜ್ ಕುಮಾರ್

    geetha shivarajkuamar in tirupathi

    ಡಾ.ರಾಜ್ ಕುಟುಂಬದವರು ಅಪ್ಪಟ ದೈವಭಕ್ತರು. ಅದರಲ್ಲೂ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಾಗ್ಗೆ ಹೋಗುತ್ತಲೇ ಇರುತ್ತಾರೆ. ಆದರೆ, ಈ ಬಾರಿ ಗೀತಾ ಶಿವರಾಜ್ ಕುಮಾರ್ ಯಾವುದೊ ಹರಕೆ ತೀರಿಸಿದ್ದಾರೆ. ತಿಮ್ಮಪ್ಪನಿಗೆ ಮುಡಿ ಕೊಟ್ಟಿದ್ದಾರೆ.

    ಪತ್ನಿ ಸಮೇತರಾಗಿ  ಶಿವರಾಜ್ ಕುಮಾರ್ ಕೂಡಾ ತಿರುಪತಿಯಲ್ಲಿದ್ದರು. ಜೀವದ ಗೆಳೆಯ ಗುರುದತ್, ನಟ ರಘುರಾಮ್ ಕೂಡಾ ಜೊತೆಯಲ್ಲಿದ್ದರು. ಆದರೆ, ಗೀತಾ ಯಾವ ಹರಕೆ ಹೊತ್ತುಕೊಂಡಿದ್ದರು ಎನ್ನುವುದು ಗೊತ್ತಾಗಿಲ್ಲ. ಅದು ನಮ್ಮ ಮನಸ್ಸಿನ, ಕುಟುಂಬದ ವೈಯಕ್ತಿಕ ವಿಷಯ. ಸುದ್ದಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದೆ ಕುಟುಂಬ. ಏನೇ ಇರಲಿ, ತಿಮ್ಮಪ್ಪನ ಆಶೀರ್ವಾದ ಕುಟುಂಬದ ಮೇಲೆ ಸದಾ ಇರಲಿ.

  • ನುಡಿದಂತೆ ನಡೆದ ಗೀತಾ ಶಿವ ರಾಜ್ ಕುಮಾರ್

    ನುಡಿದಂತೆ ನಡೆದ ಗೀತಾ ಶಿವ ರಾಜ್ ಕುಮಾರ್

    ವರ್ಷದ ಆರಂಭದಲ್ಲಿ ಗೀತಾ ಶಿವ ರಾಜ್ ಕುಮಾರ್ ಮೊದಲ ಬಾರಿ ನಿರ್ಮಾಣ ಮಾಡಿದ್ದ ವೇದ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಹೊಸಪೇಟೆಗೆ ಬಂದಿದ್ದರು. ಆ ವೇಳೆ ಗೀತಾ ಶಿವ ರಾಜ್ ಕುಮಾರ್ ಹಾಗೂ ಶಿವಣ್ಣ ದಂಪತಿ ಅಲ್ಲಿನ ಒಂದು ಶಾಲೆಗೆ ನೆರವು ನೀಡುವ ಭರವಸೆ ನೀಡಿದ್ದರು. ಶಾಲೆಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡುತ್ತೇವೆ. ಸಿನಿಮಾದ ಪ್ರಚಾರ, ಇನ್ನಿತರೆ ಕೆಲಸಗಳೆಲ್ಲ ಮುಗಿಯಲಿ, ಶಾಲೆಯನ್ನು ದತ್ತು ತೆಗೆದುಕೊಳ್ಳುತ್ತೇವೆ ಎಂದಿದ್ದರು. ಮಾತು ತಪ್ಪಿಲ್ಲ. ಗೀತಾ ಶಿವ ರಾಜ್ ಕುಮಾರ್ ಹೊಸಪೇಟೆಯ   ಇಂಗಳಗಿ ಗ್ರಾಮದ ಅನ್ನಪೂರ್ಣೇಶ್ವರಿ ವಿದ್ಯಾಪೀಠದ ಶ್ರೀ ಅನ್ನಪೂರ್ಣೇಶ್ವರಿ ಬಡ ಮಕ್ಕಳ ಉಚಿತ ಊಟ ಮತ್ತು ವಸತಿ ಸಹಿತ ಪ್ರೌಢ ಶಾಲೆಯನ್ನು ನಿರ್ಮಾಪಕಿ ಗೀತಾ ಶಿವರಾಜ್ಕುಮಾರ್ ಅವರು ದತ್ತು ಪಡೆದಿದ್ದಾರೆ.

    ಗೀತಾ ಶಿವ ರಾಜ್ ಕುಮಾರ್ ನೂರಾರು ಅಬಲ ಮಹಿಳೆಯರಿಗೆ ಆಶ್ರಯ ನೀಡಿ, ಆ ಮಹಿಳೆಯರಿಗೆ ಹೊಸ ಜೀವನ ಕಲ್ಪಿಸುತ್ತಿರುವ ಶಕ್ತಿಧಾಮ ಸಂಸ್ಥೆಯ ಅಧ್ಯಕ್ಷರೂ ಹೌದು. ಆ ಶಕ್ತಿಧಾಮ ಸಂಸ್ಥೆಯ ಮೂಲಕವೇ ಈ ಶಾಲೆಯನ್ನೂ ದತ್ತು ಪಡೆಯಲಾಗಿದೆ. ವಿಧಾನಸಭೆ ಚುನಾವಣೆ ಪ್ರಚಾರ ಮುಗಿಯುತ್ತಿದ್ದಂತೆಯೇ ಈ ದತ್ತು ಸ್ವೀಕಾರವೂ ನಡೆದಿದೆ.

    ಟ ಶಿವರಾಜ್ಕುಮಾರ್ ಅವರೊಂದಿಗೆ ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡಲಿದ್ದು, ಮೈಸೂರಿನ ಶಕ್ತಿಧಾಮಕ್ಕೆ ದಿಗಂಬರ ರಾಜಾ ಭಾರತಿ ಸ್ವಾಮೀಜಿ ಮತ್ತಿತರ ಪ್ರಮುಖರನ್ನು ಆಹ್ವಾನಿಸಿ, ವಿದ್ಯಾಪೀಠದ ಸಮಗ್ರ ಅಭಿವೃದ್ಧಿಗೆ ಅಗತ್ಯ ರೂಪರೇಷ ಸಿದ್ಧಗೊಳಿಸಲಾಗುವುದು. ಆ ಮೂಲಕ ಇದನ್ನು ಉತ್ತರ ಕನಾಟಕದ ಭಕ್ತಿಧಾಮವನ್ನಾಗಿಸಲು ನೆರವಾಗುವುದಾಗಿ ಗೀತಾ ಭರವಸೆ ನೀಡಿದರು. ಶಕ್ತಿಧಾಮದ ನಿರ್ದೇಶಕಿ ಮಂಜುಳಾ, ನಿರ್ಮಾಪಕ ಕೆ ಪಿ ಶ್ರೀಕಾಂತ, ಪತ್ರಕರ್ತ ಸತೀಶ ಬಿಲ್ಲಾಡಿ, ಸ್ಥಳೀಯರಾದ ಜೆ ಎನ್ ಪರಶುರಾಮ, ಮಂಜನಾಥ ತಾಳೂರು, ಜ್ಞಾನೇಶ, ಜಿ ಭರಮನಗೌಡ, ಹೆಗ್ಡಾಳ ಜಂಬಯ್ಯ ಮತ್ತಿತರರು ಇದ್ದರು.

  • ಸಿಎಂ ಕುಮಾರಸ್ವಾಮಿ ಜೊತೆ ಶಿವಣ್ಣ ದಂಪತಿ ಭೇಟಿ

    shivarajkumar greets cm kumaraswamy

    ಶಿವರಾಜ್‍ಕುಮಾರ್ ಮತ್ತು ಗೀತಾ ದಂಪತಿ, ಸಿಎಂ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ, ತಮ್ಮ ಭೇಟಿಗೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕುಮಾರಸ್ವಾಮಿ, ರಾಜಕೀಯದ ಹೊರತಾಗಿಯೂ ನಮ್ಮ ಕುಟುಂಬದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಭೇಟಿ ಮಾಡಿದೆವು ಎಂದು ತಿಳಿಸಿದ್ದಾರೆ ಶಿವರಾಜ್‍ಕುಮಾರ್.

    ಕುಮಾರಸ್ವಾಮಿಯವರಿಂದ ರಾಜ್ಯಕ್ಕೆ ಒಳ್ಳೆಯದಾಗಲಿದೆ ಎಂಬ ನಿರೀಕ್ಷೆ ನಮಗಿದೆ. ಕುಮಾರಸ್ವಾಮಿ ಒಳ್ಳೆಯ ಆಡಳಿತ ನೀಡಲಿದ್ದಾರೆ ಎಂದು ಶಿವರಾಜ್ ಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ.

  • ಸುದೀಪ್`ಗೆ ಗೀತಾ ಶಿವರಾಜಕುಮಾರ್ ಕೊಟ್ಟ ಅಚ್ಚರಿ

    ಸುದೀಪ್`ಗೆ ಗೀತಾ ಶಿವರಾಜಕುಮಾರ್ ಕೊಟ್ಟ ಅಚ್ಚರಿ

    ಸುದೀಪ್ ಅವರ ಬಗ್ಗೆ ಎಲ್ಲ ವೇದಿಕೆಗಳಲ್ಲೂ ಮುಕ್ತವಾಗಿ ಹೊಗಳುವ ಶಿವಣ್ಣ, ಸುದೀಪ್ ನಮ್ಮ ಕುಟುಂಬದ ಸದಸ್ಯ ಎನ್ನುತ್ತಾರೆ. ಗೀತಾ ಅವರನ್ನು ಗೀತಕ್ಕ ಎಂದೇ ಕರೆಯುವ ಸುದೀಪ್ ಅವರಿಗೆ ಗೀತಕ್ಕ ಈ ಹುಟ್ಟುಹಬ್ಬಕ್ಕೆ ಒಂದು ವಿಶೇಷ ಗಿಫ್ಟ್ ಕೊಟ್ಟಿದ್ದಾರೆ.

    ಸುದೀಪ್ ಅವರ ಮನೆಗೆ ಶಿವಣ್ಣ ಮತ್ತು ಗೀತಾ ಶಿವರಾಜಕುಮಾರ್ ಹೋಗಿ ವಿಶೇಷ ಕೇಕ್ ತಯಾರಿಸಿ ಹ್ಯಾಪಿ ಬರ್ತ್‍ಡೇ ಎಂದು ಹೇಳಿ ಶುಭ ಕೋರಿದ್ದಾರೆ. ಸುದೀಪ್ ಹುಟ್ಟುಹಬ್ಬವನ್ನು ಅವರ ಕುಟುಂಬದ ಜೊತೆ ಶಿವಣ್ಣ ಕುಟುಂಬವೂ ಸೆಲಬ್ರೇಟ್ ಮಾಡಿದೆ.

    ಅಂದಹಾಗೆ ಕೇಕ್ ತಯಾರಿಸೋದ್ರಲ್ಲಿ ಗೀತಾ ಅವರು ಎಕ್ಸ್‍ಪರ್ಟ್. ಶಕ್ತಿಧಾಮದ ಮಕ್ಕಳಿಗೂ ಕೇಕ್ ತಯಾರಿಸೋ ಟ್ರೈನಿಂಗ್ ಕೊಡುತ್ತಿರೋ ಗೀತಾ ಸುದೀಪ್ ಅವರಿಗಾಗಿ ವಿಶೇಷ ಕೇಕ್ ಕಾಣಿಕೆ ಕೊಟ್ಟು ಹಾರೈಸಿದ್ದಾರೆ.