` chaitra hallikere - chitraloka.com | Kannada Movie News, Reviews | Image

chaitra hallikere

 • Bigg Boss Aiyappa Had Failed In Movie Industry - Exclusive

  love lovike imag

  Bigg Boss contestant Aiyappa, the brother of actress Prema had made a failed attempt to enter the silver screen. This was 15 years ago. The movie was Love Lavike directed by Kumar of Mari Kannu Horimyage fame and produced by A Keshava and Narasimha.

  Aiyappa was a budding cricketer then and had represented the state in the Under 18 team. Prema was at the peak of her career in Sandalwood and there was a great buzz about the introduction of a star sibling to the film industry. The announcement of the film and Aiyappa's debut happened with much fanfare.

  On the muhuratha day also Aiyappa was the center of attraction. He was renamed as Akash and was introduced to the movie industry. Chaitra Hallikere and Shilpa were the heroines and BC Gowrishankar (actress Rakshitha father) was the cinematographer.

  But there was a big surprise at the end of the day. Aiyappa was dropped from the film after just one day of shooting. 

  love_lavike_2.jpg

  Naveen Mayur was brought in his place and the film was completed. Chaitra and Shilpa were the heroines of the film and they were not changed. Even to this day the film makers have not revealed why Aiyappa was replaced after one day of shooting till chitraloka contacted the director.

  chitraloka when spoke to director Kumar he said Gowrishankar had argued with the me and producers saying Aiyappa does not know anything about acting and should be replaced. I suggested for a break to give training to hero but all denied. From the second day itself Naveen Mayur was selected for Aiyappa role. Till now the movie has not been released and now the producers are planning for the release soon.

 • ಗಂಡ, ಮಾವನೇ ಖುಷಿ ಚೈತ್ರಾ ಜೀವನದ ಖುಷಿ ಕಿತ್ತುಕೊಂಡರಾ..?

  ಗಂಡ, ಮಾವನೇ ಖುಷಿ ಚೈತ್ರಾ ಜೀವನದ ಖುಷಿ ಕಿತ್ತುಕೊಂಡರಾ..?

  ಖುಷಿ, ಶಿಷ್ಯ, ಗುನ್ನಾ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದ ಹುಡುಗಿ ಚೈತ್ರಾ ಹಳ್ಳಿಕೇರಿ. ಚಿತ್ರರಂಗದಲ್ಲಿ ಬೇರೂರುತ್ತಿರುವಾಗಲೇ ಉದ್ಯಮಿ ಬಾಲಾಜಿ ಪೋತರಾಜ್ ಅವರೊಂದಿಗೆ ಮದುವೆಯಾಗಿ ಚಿತ್ರರಂಗ ಬಿಟ್ಟಿದ್ದರು. ನಂತರ ಕಿರುತೆರೆಯ ಧಾರಾವಾಹಿ, ರಿಯಾಲಿಟಿ ಶೋಗಳ ಪ್ರೊಡ್ಯೂಸರ್ ಆಗಿದ್ದರು. ಎರಡು ಮಕ್ಕಳ ತಾಯಿಯೂ ಆಗಿರುವ ಚೈತ್ರಾ ಹಳ್ಳಿಕೇರಿ ಈಗ ಪತಿ ಮತ್ತು ಮಾವನ ವಿರುದ್ಧವೇ ವಂಚನೆಯ ಕೇಸು ದಾಖಲಿಸಿದ್ದಾರೆ.

  ಆರೋಪ ಏನು..?

  ಚೈತ್ರಾ ಅವರ ಹೆಸರಿನಲ್ಲಿ ಒಂದು ಬ್ಯಾಂಕ್ ಅಕೌಂಟ್ ಇದ್ದು, ಆ ಬ್ಯಾಂಕ್‍ನ ಡೆಬಿಟ್ ಕಾರ್ಡ್ ಚೈತ್ರಾ ಅವರ ಬಳಿಯೇ ಇದೆ. ಆದರೆ ಅವರ ಬ್ಯಾಂಕ್ ಖಾತೆಯಲ್ಲಿ ಅವರಿಗೇ ಗೊತ್ತಿಲ್ಲದೆ ಅವರದ್ದೇ ಒಡವೆ ಅಡವಿಟ್ಟು, ಚೈತ್ರಾ ಅವರ ಗಂಡ ಮತ್ತು ಮಾವ 14 ಲಕ್ಷ ಲೋನ್ ಪಡೆದಿದ್ದಾರೆ. ಅಕೌಂಟ್‍ನ ಕೆವೈಸಿಯಲ್ಲಿ ಚೈತ್ರಾ ಅವರ ನಂಬರ್ ಚೇಂಜ್ ಮಾಡಿಸಿದ್ದಾರೆ. ಹೀಗಾಗಿ ತಮ್ಮದೇ ಅಕೌಂಟ್‍ನಲ್ಲಿ ಇಷ್ಟೆಲ್ಲ ವ್ಯವಹಾರ ಆಗುತ್ತಿದ್ದರೂ ತಮಗೆ ಗೊತ್ತಾಗಲಿಲ್ಲ. ಇದರ ಹಿಂದೆ ಗಂಡ, ಮಾವ ಅಷ್ಟೇ ಅಲ್ಲ, ಬ್ಯಾಂಕ್‍ನವರ ಕೈವಾಡವೂ ಇದೆ ಎನ್ನುವುದು ಚೈತ್ರಾ ಆರೋಪ.

  ವಿವಾದ ಇಷ್ಟೇ ಅಲ್ಲ..!

  ಚೈತ್ರಾ ಅವರ ದಾಂಪತ್ಯದಲ್ಲಿ ಈ ಹಿಂದೆಯೂ ಬಿರುಗಾಳಿ ಎದ್ದಿತ್ತು. ಚೈತ್ರಾ ಅವರ ಪತಿ ಬಾಲಾಜಿ ಚೈತ್ರಾ ಅವರ ಮೇಲೆ ಹಲ್ಲೆ ಮಾಡಿದ್ದರು. ಕೇಸೂ ಆಗಿತ್ತು. ಅದಾದ ಮೇಲೆ ಇನ್ಮೇಲೆ ನಿನ್ನ ಮೇಲೆ ಕೈ ಮಾಡೋದಿಲ್ಲ. ಹೊಡೆಯೋದಿಲ್ಲ ಎಂದು ಪ್ರಾಮಿಸ್ ಮಾಡಿದ್ದರು. ನಮಗೆ ಇಬ್ಬರು ಮಕ್ಕಳಿದ್ದಾರೆ. ಹೀಗಾಗಿ ನಾನೂ ಕಾಂಪ್ರಮೈಸ್ ಆದೆ. ಅದಾದ ಮೇಲೂ ನನಗೆ ಹೊಡೆದಿದ್ದಾರೆ. ಸಹಿಸಿಕೊಂಡಿದ್ದೆ. ಕಂಪೆನಿಯ ಡೈರೆಕ್ಟರ್ಸ್ ಸ್ಥಾನದಲ್ಲಿ ನನ್ನನ್ನು ತೆಗೆದು ಕೆಲಸದವರನ್ನು ಸೇರಿಸಿದ್ದಾರೆ. ಇದೆಲ್ಲವೂ ನನಗೆ ಇತ್ತೀಚೆಗೆ ಗೊತ್ತಾಗಿದೆ ಎಂದಿದ್ದಾರೆ ಚೈತ್ರಾ.

  ಚೈತ್ರಾ ಅವರದ್ದು ಅರೇಂಜ್ಡ್ ಮ್ಯಾರೇಜ್ ಏನಲ್ಲ. ಚೈತ್ರಾ ಮತ್ತು ಬಾಲಾಜಿ ಇಬ್ಬರೂ ಪರಸ್ಪರ ಪ್ರೀತಿಸಿಯೇ ಮದುವೆಯಾಗಿದ್ದವರು.

 • ಚೈತ್ರಾ ಹಳ್ಳಿಕೇರಿ ಕೇಸಿನಲ್ಲಿ 25 ಕೋಟಿ ಮಿಸ್ಟರಿ ಏನು?

  ಚೈತ್ರಾ ಹಳ್ಳಿಕೇರಿ ಕೇಸಿನಲ್ಲಿ 25 ಕೋಟಿ ಮಿಸ್ಟರಿ ಏನು?

  ನಟಿ ಚೈತ್ರಾ ಹಳ್ಳಿಕೇರಿ ಇತ್ತೀಚೆಗೆ ತಮ್ಮ ಪತಿ ಮತ್ತು ಮಾವನ ವಿರುದ್ಧ ವಂಚನೆಯ ದೂರು ಕೊಟ್ಟಿದ್ದರು. ತಮ್ಮ ಪತಿ ಬಾಲಾಜಿ ತಮ್ಮ ಒಡವೆಗಳನ್ನು ತಮಗೇ ಗೊತ್ತಿಲ್ಲದೆ ಅಡವಿಟ್ಟು ಮೋಸ ಮಾಡಿದ್ದಾರೆ ಎಂದು ದೂರಿದ್ದರು. ತಮ್ಮ ಅಕೌಂಟಿನ ಕೆವೈಸಿಯಲ್ಲಿ ತಮ್ಮ ಮೊಬೈಲ್ ನಂಬರ್ ಚೇಂಜ್ ಮಾಡಿಸಿ ತಮಗೆ ಮೋಸ ಮಾಡಿದ್ದಾರೆ ಎಂದಿದ್ದರು. ಇದಕ್ಕೆಲ್ಲ ಈಗ ಅವರ ಪತಿ ಉದ್ಯಮಿ ಬಾಲಾಜಿ ಪೋತರಾಜ್ ಉತ್ತರ ಕೊಟ್ಟಿದ್ದಾರೆ.

  ತಮ್ಮ ಪತ್ನಿ ಮಾಡಿರುವ ಎಲ್ಲ ಆರೋಪಗಳೂ ಸುಳ್ಳು. ಅವರ ಯಾವುದೇ ಆರೋಪಗಳಲ್ಲಿ ಹುರುಳಿಲ್ಲ. ನಾವಿಬ್ಬರೂ 4 ವರ್ಷಗಳಿಂದ ದೂರ ಇದ್ದೇವೆ ಎಂದಿದ್ದಾರೆ ಬಾಲಾಜಿ.

  ಚೈತ್ರಾ ಅವರಿಗೆ 5 ಕೋಟಿ ಮೌಲ್ಯದ ಮನೆ, 50 ಲಕ್ಷದ ಕಾರು ಕೊಟ್ಟಿದ್ದೇನೆ. ಕೈತುಂಬಾ ದುಡ್ಡು ಕೊಟ್ಟಿದ್ದೇನೆ. ಆದರೆ ಅವರು 25 ಕೋಟಿ ಕೇಳುತ್ತಿದ್ದಾರೆ. ಅಷ್ಟೆಲ್ಲ ಕೊಡೋಕೆ ಆಗಲ್ಲ ಎಂದಿದ್ದಾರೆ ಬಾಲಾಜಿ ಪೋತರಾಜ್.

  ಮದುವೆಯಾದ ಕೆಲವು ವರ್ಷಗಳ ನಂತರ ಚೈತ್ರಾ ಬದಲಾದರು. ಮಿಸೆಸ್ ಇಂಡಿಯಾ ಸ್ಪರ್ಧೆಗೆ ಹೋಗುತ್ತೇನೆ. ಫ್ಯಾಷನ್ ಶೋ ಮಾಡುತ್ತೇನೆ ಎಂದರು. ನಾನು ಬಿಸಿನೆಸ್ ಮ್ಯಾನ್. ಅದೆಲ್ಲ ನಮಗೆ ಸರಿ ಬರೋಲ್ಲ. ಬೇಡ ಎಂದಿದ್ದೆ. ಅವರು ಒಪ್ಪಲಿಲ್ಲ. ಆಗ ಡಿವೋರ್ಸ್‍ಗೆ ನಿರ್ಧಾರ ಮಾಡಿದೆ ಎಂದಿರುವ ಬಾಲಾಜಿ, ಚೈತ್ರಾ ಅವರ ಬೆನ್ನ ಹಿಂದೆ ಇನ್ಯಾರೋ ಇದ್ದಾರೆ ಎಂದು ಅನುಮಾನಿಸಿದ್ದಾರೆ.

  ಆದರೆ ಮಕ್ಕಳ ವಿಚಾರದಲ್ಲಿ ಮಾತ್ರ ಇಬ್ಬರದ್ದೂ ಒಂದೇ ಮಾತು. ಚೈತ್ರಾ ಅವರ ಬಗ್ಗೆ ಬಾಲಾಜಿ ಅವರಾಗಲೀ, ಬಾಲಾಜಿ ಅವರ ಬಗ್ಗೆ ಚೈತ್ರಾ ಅವರಾಗಲೀ ತಪ್ಪು ಮಾತನಾಡಿಲ್ಲ. ಸದ್ಯಕ್ಕೆ ಮಕ್ಕಳಿಬ್ಬರೂ ಚೈತ್ರಾ ಬಳಿಯೇ ಇದ್ದಾರೆ.

 • ನಟಿ ಚೈತ್ರಾ ಹಳ್ಳಿಕೇರಿ ಕುಟುಂಬದಲ್ಲಿ ಹೊಡೆದಾಟ..ಬಡಿದಾಟ

  actress chaitra hallikere image clicked by kmveeresh

  ಚೈತ್ರಾ ಹಳ್ಳಿಕೇರಿ. ಖುಷಿ, ಶಿಷ್ಯ, ಗುನ್ನ ಮೊದಲಾದ ಚಿತ್ರಗಳ ನಾಯಕಿ. ಅರ್ಥ ಮಾಡ್ಕೊಳೋ.. ನನ್ ಅರ್ಥ ಮಾಡ್ಕೊಳೋ.. ಕಳ್ಳ ಚಂದಮಾಮ.. ಮೊದಲಾದ ಹಾಡುಗಳನ್ನು ನೆನಪಿಸಿಕೊಂಡರೆ ಈ ಚೈತ್ರಾ ಹಳ್ಳಿಕೇರಿ ನೆನಪಿಗೆ ಬರ್ತಾರೆ. ಇವರು 12 ವರ್ಷಗಳ ಹಿಂದೆ ಪೋತರಾಜ್ ಎಂಬ ಉದ್ಯಮಿಯನ್ನು ಮದುವೆಯಾಗಿದ್ದರು. ಈಗ ಅವರ ಕುಟುಂಬದಲ್ಲಿ ಬಿರುಗಾಳಿ ಬೀಸಿದೆ.

  chaitra_hallikere_parents_1.jpgಮದುವೆ ನಂತರ ನಟನೆ ಬಿಡಬೇಕು ಎಂದಿದ್ದರು. ನಾನು ಬಿಟ್ಟಿದ್ದೆ. ಆದರೆ, ನನ್ನ ಖರ್ಚಿಗೂ ಹಣ ಕೊಡ್ತಾ ಇರಲಿಲ್ಲ. ಹಿಂಸೆ ಕೊಡುತ್ತಿದ್ದರು. ನಾನು ಮನೆಯವರಿಂದ ಹಣ ಪಡೆದು ಧಾರಾವಾಹಿ ನಿರ್ಮಿಸಿದೆ. ಅದರಿಂದ ಬಂದ ಹಣವನ್ನೂ ಪೋತರಾಜ್ ಕಿತ್ತುಕೊಂಡರು. ಮೊನ್ನೆಯಂತೂ ನನ್ನನ್ನು ಹಿಡಿದುಕೊಂಡು ಕಾರ್‍ಗೆ ಗುದ್ದಿದ್ದಾರೆ. ಮೂಗು, ಬಾಯಿಯಿಂದ ರಕ್ತ ಬಂದಿದೆ ಎಂದು ದೂರು ಕೊಟ್ಟಿದ್ದಾರೆ ಚೈತ್ರಾ ಹಳ್ಳಿಕೇರಿ.

  ಘಟನೆ ನಡೆದಿರುವುದು ಮಾರ್ಚ್ 14ರಂದು. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.