` sudeep - chitraloka.com | Kannada Movie News, Reviews | Image

sudeep

  • ಸೆಪ್ಟೆಂಬರ್‍ನಲ್ಲಿ ವಿಲನ್, ಕೆಜಿಎಫ್ ಮುಖಾಮುಖಿ..?

    will the villain and kgf release together?

    ಶಿವರಾಜ್‍ಕುಮಾರ್, ಸುದೀಪ್, ಜೋಗಿ ಪ್ರೇಮ್ ಹಾಗೂ ನಿರ್ಮಾಪಕ ಸಿ.ಆರ್.ಮನೋಹರ್ ಕಾಂಬಿನೇಷನ್ ಸಿನಿಮಾ ದಿ ವಿಲನ್. ಶೂಟಿಂಗ್ ಮುಗಿಸಿ ಸೆನ್ಸಾರ್ ಮೆಟ್ಟಿಲೇರಿದೆ.

    ಯಶ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಕಾಂಬಿನೇಷನ್‍ನ ಕೆಜಿಎಫ್ ಚಿತ್ರ ಕೂಡಾ ಶೂಟಿಂಗ್ ಮುಗಿಸಿ, ಎಡಿಟಿಂಗ್ ಫೈನಲ್ ಸ್ಟೇಜ್‍ನಲ್ಲಿದೆ.

    ಎರಡೂ ಕನ್ನಡದ ಬಹುನಿರೀಕ್ಷಿತ ಚಿತ್ರಗಳು. ಈ ಎರಡೂ ಚಿತ್ರಗಳು ಸೆಪ್ಟೆಂಬರ್‍ನಲ್ಲಿಯೇ ಮುಖಾಮುಖಿಯಾಗುವ ಸಾಧ್ಯತೆ ಇದೆ. ವಿಲನ್ ಚಿತ್ರದ ಆಡಿಯೋ ರಿಲೀಸ್‍ಗೆ ಭರ್ಜರಿ ವೇದಿಕೆ ಸಿದ್ಧವಾಗಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲೇ ತೆರೆಗೆ ಬಂದರೆ ಅಚ್ಚರಿಯಿಲ್ಲ. ಕೆಜಿಎಫ್ ಸೆಪ್ಟೆಂಬರ್ ಕೊನೆಯಲ್ಲಿ ರಿಲೀಸ್ ಆಗುವ ಸಾಧ್ಯತೆಯೂ ಇಲ್ಲದಿಲ್ಲ. ಒಟ್ಟಿನಲ್ಲಿ ಸೆಪ್ಟೆಂಬರ್ ನಂತರ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಚಿತ್ರಗಳದ್ದೇ ಹಬ್ಬ.

  • ಸೈರಾಗೆ ಸುದೀಪ್ ಸೈ ಎಂದಿದ್ದಕ್ಕೆ ಕಾರಣ ಆ ನಿರ್ದೇಶಕ..!

    sudeep agress for saira

    ಸುದೀಪ್, ತೆಲುಗಿನ ಉಯ್ಯಾಲವಾಡ ನರಸಿಂಹ ರೆಡ್ಡಿ ಅವರ ಜೀವನಾಧಾರಿತ ಚಿತ್ರ ಸೈರಾದಲ್ಲಿ ನಟಿಸುತ್ತಾರಾ..? ಮೆಗಾಸ್ಟಾರ್ ಚಿರಂಜೀವಿ ಅಭಿನಯದ 151ನೇ ಸಿನಿಮಾ ಆಗಿರುವ ಈ ಚಿತ್ರವನ್ನು ಸುದೀಪ್ ಕೈಬಿಟ್ಟರಂತೆ ಎಂಬ ಸುದ್ದಿಗಳೇ ಹರಿದಾಡುತ್ತಿದ್ದವು. ಈಗ ಅದಕ್ಕೆ ವ್ಯತಿರಿಕ್ತ ಎನ್ನುವಂತೆ ಸುದೀಪ್ ಸೈರಾ ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ. ಇಷ್ಟಕ್ಕೂ ಸುದೀಪ್ ಅವರನ್ನು ಸೈರಾ ಚಿತ್ರಕ್ಕೆ ಒಪ್ಪಿಸಿರುವುದು ನಿರ್ದೇಶಕ ಸುರೀಂದರ್ ರೆಡ್ಡಿ.

    ಉಯ್ಯಾಲವಾಡ ನರಸಿಂಹ ರೆಡ್ಡಿ, ತೆಲುಗು ನೆಲದ ಸ್ವಾತಂತ್ರ್ಯ ಹೋರಾಟಗಾರನಲ್ಲ. ಆತ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ. ಹಲವು ವರ್ಷಗಳ ಹಿಂದೆ, ಕೇಂದ್ರ ಸರ್ಕಾರವೇ ಘೋಷಣೆ ಮಾಡಿದೆ. ಹೀಗಾಗಿ ಇದು ನ್ಯಾಷನಲ್ ಲೀಡರ್ ಸಿನಿಮಾ. ಹೀಗಾಗಿಯೇ ಬೇರೆ ಬೇರೆ ಭಾಷೆಗಳಿಂದ ಅತ್ಯುತ್ತಮ ನಟರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಹಿಂದಿಯಿಂದ ಅಮಿತಾಭ್ ಬರುತ್ತಿದ್ದಾರೆ. ಕನ್ನಡದಿಂದ  ನೀವು ಬರಲೇಬೇಕು. ಈ ಚಿತ್ರ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಬೇಕು. ಪ್ರತಿಯೊಬ್ಬರಿಗೂ ಉಯ್ಯಾಲವಾಡ ನರಸಿಂಹ ರೆಡ್ಡಿಯ ಹೋರಾಟದ ಪರಿಚಯವಾಗಬೇಕು. ಹೀಗಾಗಿ ನೀವು ಒಪ್ಪಿಕೊಳ್ಳಲೇಬೇಕು ಎಂದು ಹಠ ಹಿಡಿದಿದ್ದಾರೆ ನಿರ್ದೇಶಕ ಸುರೀಂದರ್ ರೆಡ್ಡಿ.

    ನಿರ್ದೇಶಕರ ಒತ್ತಾಯಕ್ಕೆ ಮಣಿದ ಸುದೀಪ್, ಕೊನೆಗೂ ಸೈರಾಗೆ ಓಕೆ ಎಂದಿದ್ದಾರೆ. ಸದ್ಯಕ್ಕೆ ಸುದೀಪ್ ಎಷ್ಟೊಂದು ಬ್ಯುಸಿಯೆಂದರೆ, ಸದ್ಯಕ್ಕೆ ದಿ ವಿಲನ್ ಬಿಡುವಿಲ್ಲದಂತೆ ಶೂಟ್ ಆಗುತ್ತಿದೆ. ಜನವರಿ ಆರಂಭದಲ್ಲಿ ಪೈಲ್ವಾನ್ ಚಿತ್ರ ಶುರುವಾಗಬೇಕು. ಅದರ ಮಧ್ಯೆ ಕೋಟಿಗೊಬ್ಬ 3 ಶೂಟಿಂಗ್ ಕೂಡಾ ನಡೆಯಬೇಕು. ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರಕ್ಕೂ ಟೈಂ ಹೊಂದಿಸಿಕೊಳ್ಳಬೇಕು. ಹಾಲಿವುಡ್‍ನ ರೈಸನ್ ಚಿತ್ರ ಕೂಡಾ ಕ್ಯೂನಲ್ಲಿರುತ್ತೆ. 

    ಇವೆಲ್ಲದರ ಮಧ್ಯೆ ಸೈರಾಗೆ ಡೇಟ್ಸ್ ಹೊಂದಿಸಿಕೊಳ್ಳಬೇಕಿದೆ ಕಿಚ್ಚ ಸುದೀಪ್.

    ಅಂದಹಾಗೆ, ನಮ್ಮಲ್ಲಿ ಸಂಗೊಳ್ಳಿ ರಾಯಣ್ಣ ಹೇಗೋ, ಹಾಗೆಯೇ ಆಂಧ್ರಪ್ರದೇಶದಲ್ಲಿ ಉಯ್ಯಾಲವಾಡ ನರಸಿಂಹ ರೆಡ್ಡಿ. ಆತನ ಹೋರಾಟದ ಬಗ್ಗೆ ದಂತಕತೆಗಳೇ ಇವೆ. ಆತನನ್ನು ತೆಲುಗರು ಸೈರಾ ಎಂದೇ ಕರೆಯುತ್ತಾರೆ. ಆ ಪಾತ್ರ ನಿರ್ವಹಿಸುತ್ತಿರುವುದು  ಚಿರಂಜೀವಿ. ಸುದೀಪ್ ಪಾತ್ರ ಏನು ಎಂಬ ಕುತೂಹಲ ಇನ್ನೂ ಚಾಲ್ತಿಯಲ್ಲಿದೆ. 

  • ಸ್ಟಾರ್ ನಟ, ನಿರ್ದೇಶಕರು ಕೇಳಿದ್ದು.. ಕಿಚ್ಚ ಹೇಳಿದ್ದು..

    stars asks, sudeep reacts, ask pailwan

    ಸುದೀಪ್ ತಮ್ಮ ಪೈಲ್ವಾನ್ ಬಿಡುಗಡೆಗೆ ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಹೀಗಿರುವಾಗಲೇ ಸುದೀಪ್ ಅವರಿಗೆ ಪ್ರಶ್ನೆ ಕೇಳಲು ಕಾತುರಗೊಂಡಿದ್ದವರಿಗೆ ಸೋಷಿಯಲ್ ಮೀಡಿಯಾದ ಮೂಲಕವೇ ಸಿಕ್ಕಿದ್ದಾರೆ. ಸ್ಟಾರ್ ನಟರು, ನಿರ್ದೇಶಕರು ಸುದೀಪ್ ಅವರಿಗೆ ಕೇಳಿದ ಪ್ರಶ್ನೆ ಮತ್ತು ಆ ಎಲ್ಲ ಪ್ರಶ್ನೆಗಳಿಗೆ ಸುದೀಪ್ ನೀಡಿರುವ ಉತ್ತರ ಇಲ್ಲಿದೆ.

    ರಕ್ಷಿತ್ ಶೆಟ್ಟಿ : ನಿಮ್ಮ ವರ್ಕೌಟ್ ಮತ್ತು ಡಯಟ್ ಪ್ಲಾನ್ ಹಂಚಿಕೊಳ್ಳಬಹುದಾ..?

    ಸುದೀಪ್ ; ಹಾಯ್ ರಕ್ಷಿತ್, ಬರೀ ಕಥೆ ಬರೆಯೋದ್ರಲ್ಲಿ, ಅವನೇ ಶ್ರೀಮನ್ನಾರಾಯಣ ಸಂಭಾಷಣೆ ಇಂಪ್ರೂವ್ ಮಾಡೋದು, 777 ಚಾರ್ಲಿ ಆ್ಯಕ್ಟಿಂಗ್ ಮಾಡ್ಕೊಂಡ್ ಇದ್ರೆ ಹೇಗೆ..? ಮೊದಲು ಜಿಮ್‍ಗೆ ಹೋಗಬೇಕು, ಉಳಿದದ್ದು ನಂತರ ಹೇಳ್ತೇನೆ

    ಸಿಂಪಲ್ ಸುನಿ : ನಿಮಗೆ ಕಿಚ್ಚ ಸುದೀಪ್ ಎಂದು ಕರೆದರೋ ಇಷ್ಟಾನೋ.. ಪೈಲ್ವಾನ್ ಸುದೀಪ್ ಎಂದು ಕರೆದರೆ ಇಷ್ಟಾನೋ..?

    ಸುದೀಪ್ : ನಿಮ್ಮ ಕನ್ನಡದ ಟ್ವೀಟ್‍ಗಳು ನನಗಿಷ್ಟ. ಪ್ರೀತಿಯಿಂದ ಹೇಗೆ ಕರೆದರೂ ಇಷ್ಟವಾಗುತ್ತೆ.

    ರಿಷಬ್ ಶೆಟ್ಟಿ : ಪೈಲ್ವಾನ್ ಕಥೆ ಕೇಳಿದಾಗ ಯಾವ ವಿಷಯ ಎಕ್ಸೈಟಿಂಗ್ ಎನಿಸಿತು. ಒನ್‍ಲೈನ್‍ನಲ್ಲಿ ಹೇಳ್ತಿರಾ..?

    ಸುದೀಪ್ : ಅದನ್ನು ನಾನು ನಿಮ್ಮ ಬಳಿಯೇ ಕಲಿಯಬೇಕು. ದೊಡ್ಡ ದೊಡ್ಡ ವಿಷಯವನ್ನು ಚಿಕ್ಕದಾಗಿ ಹೇಳ್ತೀರಿ. ಚಿಕ್ಕದಾಗಿ ಹೇಳೋದು ಹೇಗೆ ಅನ್ನೋದನ್ನ ನಿಮ್ಮ ಬಳಿಯೇ ಕಲಿಯಬೇಕು.

    ಕಾರ್ತಿಕ್ ಗೌಡ : ಕುಸ್ತಿ ಇಷ್ಟವೋ..? ಬಾಕ್ಸಿಂಗ್ ಇಷ್ಟವೋ..?

    ಸುದೀಪ್ : ಯಾಕೆ ನೆನಪಿಸಿ ನೆನಪಿಸಿ ಗಾಯದ ಮೇಲೆ ಬರೆ ಎಳೆಯುತ್ತೀರಿ. ಶೂಟಿಂಗ್ ಶುರುವಾಗುವ ಮುನ್ನ ಎರಡರ ಮೇಲೂ ಆಸಕ್ತಿ ಇತ್ತು. ಆದರೆ, ಶೂಟಿಂಗ್ ಶುರುವಾದ ಮೇಲೆ ಮುಗಿದರೆ ಸಾಕಪ್ಪಾ ಎನ್ನುವಂತಾಗಿ ಹೋಯ್ತು.

    ಸ್ವಪ್ನಾ ಕೃಷ್ಣ : ನಿಮ್ಮ ಪ್ರಕಾರ ಪೈಲ್ವಾನ್ ಯಾರು..?

    ಸುದೀಪ್ : ಪ್ರಾಜೆಕ್ಟ್ ಶುರುವಾದಾಗ ನಾನೇ ಪೈಲ್ವಾನ್ ಆಗಿದ್ದೆ. ಚಿತ್ರೀಕರಣ ಶುರುವಾದ ಮೇಲೆ ನಿರ್ಮಾಪಕರು ಪೈಲ್ವಾನ್ ಎನಿಸಿತು. ನಂತರ ಅರ್ಜುನ್ ಜನ್ಯಾ ಮತ್ತು ವಿತರಕರು ಪೈಲ್ವಾನ್ ರೀತಿ ಕಾಣಿಸಿದ್ರು. ಈಗ ಪ್ರೇಕ್ಷಕರು ಪೈಲ್ವಾನ್ ಎನಿಸುತ್ತಿದೆ.

    ಅಭಿಮಾನಿ : ಕ್ರಿಕೆಟ್ ಆಟಗಾರರ ಬಯೋಪಿಕ್ ಮಾಡುವ ಅವಕಾಶ ಬಂದರೆ ಯಾವ ಆಟಗಾರನ ಪಾತ್ರದಲ್ಲಿ ನಟಿಸಲು ಇಷ್ಟಪಡುತ್ತೀರಿ..?

    ಸುದೀಪ್ : ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ.

    ಪ್ರಿಯಾ ಸುದೀಪ್ : ಹಲೋ ಬ್ಯುಸಿ ಹಸ್ಬೆಂಡ್.. ಮನೆಗೆ ಯಾವಾಗ ಬರುತ್ತೀರಿ..?

    ಸುದೀಪ್ : ಶೀಘ್ರದಲ್ಲೇ ಬರುತ್ತೇನೆ. ಸದ್ಯಕ್ಕೆ ದಬಾಂಗ್-3ಗಾಗಿ ಸಲ್ಮಾನ್ ಖಾನ್ ವಶದಲ್ಲಿದ್ದೇನೆ. ಅವರು ಕಳಿಸಿದ ಕೂಡಲೇ ಬರುತ್ತೇನೆ.

  • ಸ್ಯಾಂಡಲ್‍ವುಡ್ ಟ್ವಿಟರಾಧಿಪತಿಗೆ ಆಗ ಟ್ವಿಟರ್ ಎಂದರೇನೆಂದೇ ಗೊತ್ತಿರಲಿಲ್ಲ..!

    sudeep shares his twitter story

    ಸಾಮಾಜಿಕ ಜಾಲತಾಣ ಟ್ವಿಟರ್‍ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಹೊಂದಿರುವ ಮೊದಲ ಸ್ಯಾಂಡಲ್‍ವುಡ್ ಸ್ಟಾರ್ ಕಿಚ್ಚ ಸುದೀಪ್. ಟ್ವಿಟರ್‍ನಲ್ಲಿ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುವ ಸುದೀಪ್, ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಡುತ್ತಾರೆ. ನೇರವಾಗಿ ಸಂಭಾಷಣೆ ನಡೆಸುತ್ತಾರೆ. ಆದರೆ, ಒಂದಾನೊಂದು ಕಾಲದಲ್ಲಿ ಸುದೀಪ್‍ಗೆ ಟ್ವಿಟ್ಟರ್ ಎಂದರೆ ಏನೆಂದೇ ಗೊತ್ತಿರಲಿಲ್ಲ ಎಂದರೆ ಅಚ್ಚರಿಯಾದೀತು.

    ಕೆಲವು ವರ್ಷಗಳ ಹಿಂದೆ ಸುದೀಪ್‍ರನ್ನು ಕಾರ್‍ನಲ್ಲಿ ಡ್ರಾಪ್ ಮಾಡಿದ ಗೆಳೆಯ ರಿತೇಶ್ ದೇಶ್‍ಮುಖ್, ಸುದೀಪ್‍ಗೆ ನಿಮ್ಮ ಟ್ವಿಟರ್ ಅಕೌಂಟ್ ಏನು ಎಂದು ಕೇಳಿದರಂತೆ. ಕಕ್ಕಾಬಿಕ್ಕಿಯಾದ ಸುದೀಪ್ ಮೊದಲು ನನ್ನದು ಟ್ವಿಟರ್ ಅಕೌಂಟ್ ಇಲ್ಲ ಎಂದಿದ್ದಾರೆ. ಕೆಲವು ನಿಮಿಷಗಳ ನಂತರ ಯಾವುದೇ ಮುಜುಗರವಿಲ್ಲದೆ ಗೆಳೆಯನ ಬಳಿ ಟ್ವಿಟರ್ ಎಂದರೆ ಏನು ಎಂದು ಕೇಳಿದ್ದಾರೆ. ಆಗ ರಿತೇಶ್ ದೇಶ್‍ಮುಖ್ ಸುದೀಪ್‍ಗೆ ಟ್ವಿಟರ್ ಅಕೌಂಟ್ ಓಪನ್ ಮಾಡುವುದರಿಂದ ಹಿಡಿದು, ಅದರಲ್ಲಿ ಏನೇನೆಲ್ಲ ಮಾಡಬಹುದು ಎಂಬುದನ್ನು ವಿವರಿಸಿದರಂತೆ. ಅದು ಅರ್ಥವಾದ ನಂತರ ಸುದೀಪ್ ಮಾಡಿದ ಕೆಲಸ ಟ್ವಿಟರ್‍ನಲ್ಲಿ ಅಕೌಂಟ್ ತೆರೆದಿದ್ದು. ಅದೀಗ ಒಂದು ಮಿಲಿಯನ್ ಫಾಲೋವರ್ಸ್ ಸಂಪಾದಿಸಿಕೊಟ್ಟಿದೆ.

    ಅಭಿಮಾನಿಗಳ ಜೊತೆ ಮಾತನಾಡುವಾಗ ಖುಷಿಯಾಗುವ ಕಿಚ್ಚ ಸುದೀಪ್‍ಗೆ ಕೆಲವೊಮ್ಮೆ ಬೇಸರವಾಗಿದ್ದೂ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರ ವರ್ತನೆಗಳಿಂದಾಗಿ, ಟ್ವಿಟರ್ ಸಹವಾಸವೇ ಬೇಡ ಎಂದು ನಿರ್ಧರಿಸಿದ್ದೂ ಇದೆ. ಆದರೆ, ಈಗ ಅವುಗಳನ್ನೆಲ್ಲ ಮ್ಯಾನೇಜ್ ಮಾಡುವುದು ಹೇಗೆ ಎಂಬ ಕಲೆಯೂ ಕರಗತವಾಗಿದೆ. ವಯಸ್ಸು ಹೆಚ್ಚುತ್ತಾ ಹೋದಂತೆ ಮಾಗುವ ಮನಸ್ಸು, ಎಲ್ಲವನ್ನೂ ಕಲಿಸಿಬಿಡುತ್ತೆ.

    ಹಾಗೆ ನೋಡಿದರೆ, ಸುದೀಪ್ ಅಭಿಮಾನಿಗಳ ಸಂಖ್ಯೆ ಮಿಲಿಯನ್ ಅಲ್ಲ. ಅದಕ್ಕಿಂತಲೂ ಹೆಚ್ಚಿದೆ. ಆದರೆ, ಇದು ಟ್ವಿಟರ್‍ನಲ್ಲಿನ ಫಾಲೋವರ್ಸ್ ಸಂಖ್ಯೆ ಮಾತ್ರ. ಅಲ್ಲಿ ಲೆಕ್ಕ ಸಿಕ್ಕೋ ಕಾರಣಕ್ಕೆ ಮಿಲಿಯನೇರ್ ಸುದೀಪ್ ಎನ್ನಬಹುದೇ ಹೊರತು, ಸುದೀಪ್ ಕೋಟಿಗೊಬ್ಬರೇ.. ಅಂದಹಾಗೆ ಸುದೀಪ್ ಟ್ವಿಟರ್‍ನಲ್ಲಿ 1 ಮಿಲಿಯನ್ ಫಾಲೋವರ್ಸ್ ದಾಟಿದಾಗ ಟ್ವಿಟರ್‍ನಲ್ಲಿಯೇ ಅಭಿನಂದಿಸಿದವರಲ್ಲಿ ರಿತೇಶ್ ದೇಶ್‍ಮುಖ್ ಪ್ರಮುಖರು.

    Related Articles :-

    ಟ್ವಿಟರ್‍ನಲ್ಲಿ ನಂ. 1 ಆದ ಸುದೀಪ್ - ಸಿನಿಮಾ, ಗೆಳೆಯರ ಟ್ವೀಟ್ ಸಂಭ್ರಮ

    Sudeep Twitter Story

    Sudeep - The First Millionaire From Sandalwood

  • ಹಾಲಿವುಡ್ ಕಮ್ಯಾಂಡೋ ಕಿಚ್ಚ

    kichcha is now hollywood commando

    ರೈಸನ್. ಇದು ಸುದೀಪ್ ನಟಿಸುತ್ತಿರುವ ಹಾಲಿವುಡ್ ಚಿತ್ರದ ಹೆಸರು. ಚಿತ್ರದ ಫೋಟೋಶೂಟ್ ಕಳೆದ ತಿಂಗಳು ಬೆಂಗಳೂರಿನಲ್ಲೇ ನಡೆದಿತ್ತು. ಈಗ ಚಿತ್ರದಲ್ಲಿನ ಸುದೀಪ್ ಕುರಿತ ಲುಕ್ ಹೊರಬಿದ್ದಿದೆ. ಚಿತ್ರದಲ್ಲಿ ಸುದೀಪ್ ಕಮ್ಯಾಂಡೋ ಗೆಟಪ್‍ನಲ್ಲಿ ಮಿನುಗುತ್ತಿದ್ದಾರೆ.

    ಚಿತ್ರದ 2ನೇ ಲುಕ್ ರಿಲೀಸ್ ಮಾಡಿರುವ ರೈಸನ್ ಚಿತ್ರತಂಡ, ಚಿತ್ರದ ಕಥೆಯ ಗುಟ್ಟು ಬಿಟ್ಟುಕೊಟ್ಟಿಲ್ಲ. ದಿ ವಿಲನ್ ಚಿತ್ರದ ಶೂಟಿಂಗ್ ಮುಗಿಸಿಕೊಂಡ ನಂತರ ಸುದೀಪ್, ರೈಸನ್ ಶೂಟಿಂಗ್‍ನಲ್ಲಿ ಬ್ಯುಸಿಯಾಗುವ ಎಲ್ಲ ನಿರೀಕ್ಷೆಗಳೂ ಇವೆ. ನಾಗೇಂದ್ರ ಜಯರಾಮ್ ನಿರ್ಮಾಣದ ಚಿತ್ರಕ್ಕೆ, ಎಡ್ಡಿ ಆರ್ಯ ನಿರ್ದೇಶನವಿದೆ.

  • ಹಾಲಿವುಡ್ಗೆ ಹಾರುತ್ತಿರುವ ಕಿಚ್ಚ ಸುದೀಪ್ಗೆ ಜಗ್ಗೇಶ್ ಚಪ್ಪಾಳೆ

    jaggesh greets sudeep

    ನಟ ಸುದೀಪ್ ಹಾಲಿವುಡ್ಗೆ ಹೋಗುತ್ತಿರುವುದು ಖಚಿತವಾಗುತ್ತಿದ್ದಂತೆಯೇ ಶುಭ ಹಾರೈಕೆಗಳ ಸುರಿಮಳೆಯಾಗುತ್ತಿದೆ. ಅಭಿಮಾನಿಗಳಂತೂ ಥ್ರಿಲ್ ಆಗಿದ್ದಾರೆ. ಆಸ್ಟ್ರೇಲಿಯ ಮೂಲದ ಡೈರೆಕ್ಟರ್ ಎಡ್ಡಿ ಆರ್ಯ ಸುದೀಪ್ ಅಭಿನಯದ ಹಾಲಿವುಡ್ ಚಿತ್ರದ ನಿರ್ದೇಶಕ.

    ಈಗಾಗಲೇ ದಿ ನೇವಿಗೇಟರ್, ದಿ ಸಿಸ್ಟಂ ಚಿತ್ರ ನಿರ್ದೇಶಿಸಿರುವ ಎಡ್ಡಿ ಆರ್ಯ ಪಾಲಿಗೆ ಇದು 3ನೇ ಚಿತ್ರ. ಸುದ್ದಿ ಖಚಿತವಾಗುತ್ತಿದ್ದಂತೆಯೇ ನಟ ಜಗ್ಗೇಶ್ ಸುದೀಪ್ಗೆ ಶುಭ ಹಾರೈಸಿದ್ದಾರೆ. ತಮ್ಮ ಟ್ವಿಟರ್ನಲ್ಲಿ

    ಕಿಚ್ಚ ಸುದೀಪ್ ಅವರನ್ನು ಅಪ್ಪಿಕೊಂಡ ಫೋಟೋ ಹಾಕಿರುವ ಜಗ್ಗೇಶ್ ''ಸಹೋದರನ ಆಲಿಂಗನದಲ್ಲಿ ನೂರ್ಕಾಲ.. ಕನ್ನಡದ ಬಾವುಟ ಹಾರಿಸಿ ಬಾಳು'', ಕನ್ನಡ ಆಸ್ತಿ ಇಂದು ಹಾಲಿವುಡ್ ಗೆ ಪಾದಾರ್ಪಣೆ.. ಚಪ್ಪಾಳೆ ಕನ್ನಡಿಗನಿಗೆ'' ಎಂದು ಶುಭ ಕೋರಿದ್ದಾರೆ. ಹಾಲಿವುಡ್ನ Risin ಚಿತ್ರದ ಜೊತೆ ಜೊತೆಗೇ ಸೂರಪ್ಪ ಬಾಬು ನಿರ್ಮಾಣದಲ್ಲಿ ಕೋಟಿಗೊಬ್ಬ 3 ಹಾಗೂ ಹೆಬ್ಬುಲಿ ಕೃಷ್ಣ ನಿರ್ದೇಶನದ ಚಿತ್ರಗಳಲ್ಲೂಸುದೀಪ್ ತೊಡಗಿಸಿಕೊಳ್ಳಲಿದ್ದಾರೆ. ಈಗಾಗಲೇ ದಿ ವಿಲನ್ನಲ್ಲಿ ಬ್ಯುಸಿಯಾಗಿರುವ ಸುದೀಪ್, ಆ ಚಿತ್ರ ಮುಗಿಯುತ್ತಿದ್ದಂತೆಯೇ ಈ ಮೂರೂ ಚಿತ್ರಗಳಲ್ಲಿ ಬ್ಯುಸಿಯಾಗಲಿದ್ದಾರೆ.

    Related Articles :-

    Director Confirms Sudeep's Hollywood Film

    Sudeep In Eddie Arya's Risen

  • ಹೀಗೆಲ್ಲ ಮಾಡ್ತಿದ್ರೆ, ಸೋಷಿಯಲ್ ಮೀಡಿಯಾ ಬಿಡ್ತೇನೆ - ಅಭಿಮಾನಿಗೆ ಕಿಚ್ಚ ಎಚ್ಚರಿಕೆ

    i will quit this forum says sudeep

    ಕಿಚ್ಚ ಸುದೀಪ್ ಅಭಿಮಾನಿ ಬಳಗ ದೊಡ್ಡದು. ಆ ಅಭಿಮಾನಿಗಳ ಸಾಗರದಲ್ಲಿ ಹುಚ್ಚು ಅಭಿಮಾನಿಗಳೂ ಇದ್ದಾರೆ. ಅಂತಹುದೇ ಒಬ್ಬ ಹುಚ್ಚು ಅಭಿಮಾನಿಯ ಅತಿರೇಕದ ವರ್ತನೆ ಸುದೀಪ್ ಅವರ ಮನ ನೋಯಿಸಿದೆ. ಆಗಿದ್ದಿಷ್ಟು. ಅಭಿಮಾನಿಯೊಬ್ಬ ತನ್ನ ಕೈ ಮೇಲೆ ಗಾಯ ಮಾಡಿಕೊಂಡು, ಚಾಕುವಿನಿಂದ ಕಿಚ್ಚ ಸುದೀಪ್ ಎಂದು ಬರೆದುಕೊಂಡಿದ್ದಾನೆ. ರಕ್ತ ಸೋರಿದೆ. ಹೆಪ್ಪುಗಟ್ಟಿದೆ. ಅದನ್ನೇ ಫೋಟೋ ತೆಗೆದು ಸುದೀಪ್ ಅವರಿಗೇ ಕಳುಹಿಸಿಬಿಟ್ಟಿದ್ದಾನೆ. ಸುದೀಪ್ ರೊಚ್ಚಿಗೆದ್ದಿದ್ದಾರೆ.

    ನಿಮ್ಮ ಅಭಿಮಾನ, ಪ್ರೀತಿಯನ್ನ ನಮ್ಮ ಸಿನಿಮಾ ನೋಡುವುದರ ಮೂಲಕ ತೋರಿಸಿ, ಸಾಕು. ಆದರೆ, ಈ ರೀತಿ ಮಾತ್ರ ಮಾಡಬೇಡಿ. ನಾನು ಸೋಷಿಯಲ್ ಮೀಡಿಯಾದಲ್ಲಿದ್ದೇನೆ ಎಂಬ ಕಾರಣಕ್ಕೇ ನೀವು ಹೀಗೆ ಮಾಡುತ್ತಿದ್ದೀರಿ ಎಂದಾದರೆ ಸೋಷಿಯಲ್ ಮೀಡಿಯಾ ಬಿಡುತ್ತೇನೆ. ದಯವಿಟ್ಟು ಇಂತಹ ಹುಚ್ಚು ಕೆಲಸ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ ಸುದೀಪ್.

  • ಹುಟ್ಟುಹಬ್ಬ ಆಚರಣೆ ಇಲ್ಲ - ಶಿವಣ್ಣ ನಂತರ ಈಗ ಸುದೀಪ್ ಸರದಿ

    sudeep tweets on birthday

    ನಾಳೆ ಅಂದರೆ ಜುಲೈ 12ಕ್ಕೆ ಶಿವರಾಜ್ ಕುಮಾರ್ ಹುಟ್ಟುಹಬ್ಬ. ಸಂಭ್ರಮಾಚರಣೆ ಬಿಟ್ಟು ಶಿವರಾಜ್ ಕುಮಾರ್, ಪೊಲೀಸ್ ನಿಧಿಗೆ 1 ಲಕ್ಷ ದೇಣಿಗೆ ಕೊಟ್ಟು ಮಾದರಿಯಾಗಿರುವಾಗಲೇ, ಅಭಿಮಾನಿಗಳಿಗೆ ಅದೇ ರೀತಿಯ ಶಾಕ್ ಕೊಟ್ಟಿದ್ದಾರೆ ಚಿತ್ರನಟ ಸುದೀಪ್. ತಮ್ಮ ಟ್ವಿಟರ್ ಮೂಲಕವೇ ಅಭಿಮಾನಿಗಳಿಗೆ ಒಂದು ಪ್ರೀತಿಯ ಸಂದೇಶ ಕಳುಹಿಸಿದ್ದಾರೆ. ಅವರು ಕಳಿಸಿರುವ ಸಂದೇಶದ ಸಾರಾಂಶ ಇಷ್ಟು.

    ಪ್ರೀತಿಯ ಗೆಳೆಯರೇ,

    ಇಷ್ಟು ವರ್ಷ ಅಭಿಮಾನಿಗಳು ನನ್ನ ಹುಟ್ಟುಹಬ್ಬ ಆಚರಿಸಿದ್ದೀರಿ. ದುಡ್ಡು ಖರ್ಚು ಮಾಡಿ ದೂರದೂರದ ಊರುಗಳಿಂದ ನನ್ನ ಬಳಿಗೆ ಬಂದು ಹಾರೈಸಿದ್ದೀರಿ. ರಸ್ತೆಗಳನ್ನು, ನನ್ನ ಮನೆಯ ಸುತ್ತ ಮುತ್ತ ಪೋಸ್ಟರ್ ಅಂಟಿಸಿ, ಹೂವು ಚೆಲ್ಲಿ ಸಂಭ್ರಮಿಸಿದ್ದೀರಿ. ನನ್ನ ಸಂಭ್ರಮವನ್ನೂ ಹೆಚ್ಚಿಸಿದ್ದೀರಿ. ನಿಮ್ಮ ಹಣವನ್ನೇ  ಖರ್ಚು ಮಾಡಿ, ನನ್ನ ಹುಟ್ಟುಹಬ್ಬ ಆಚರಿಸಿದನಿಮ್ಮ ಈ ನಿಷ್ಕಲ್ಮಶ ಪ್ರೀತಿಗೆ ನಾನು ಅಭಾರಿ. ನಿಮ್ಮ ಅಭಿಮಾನವನ್ನು ಕೊನೆ ಉಸಿರಿರುವರೆಗೆ ಮರೆಯುವುದಿಲ್ಲ. ಇನ್ಮುಂದೆ ಹಾರ, ತುರಾಯಿ, ಫಂಕ್ಷನ್ ಅಂತಾ ಹಣವನ್ನು  ಪೋಲು ಮಾಡಬೇಡಿ. ಆ ಹಣವನ್ನು ಬಡ ಬಗ್ಗರ ಒಳಿತಿಗೆ ಖರ್ಚು ಮಾಡಿ. ಒಂದೊತ್ತಿನ ಊಟಕ್ಕೂ ಪರದಾಡುವ ಜನಕ್ಕೆ ಊಟ ಹಾಕಿ. ಇದರಿಂದ ನನಗೆ ಸಂತೋಷವಾಗುತ್ತೆ. ಹುಟ್ಟುಹಬ್ಬವೂ ಸಾರ್ಥಕವಾಗುತ್ತೆ. ಇನ್ನು ಮುಂದೆ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ಸಾಧ್ಯವಾದರೆ ನಾನು ಅಂದು ಮನೆಯಿಂದ ದೂರವಿರುತ್ತೇನೆ. ಅಭಿಮಾನಿಗಳು ನನ್ನನ್ನು ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ

    ನಿಮ್ಮ ಪ್ರೀತಿಯ

    ಕಿಚ್ಚ

    ಚಿತ್ರರಂಗದ ಇಬ್ಬರು ದೊಡ್ಡ ಸ್ಟಾರ್ಗಳು ಹುಟ್ಟುಹಬ್ಬದ ಸಂಭ್ರಮಾಚರಣೆಯಿಂದ ದೂರವುಳಿದು, ಅದನ್ನು ಸಮಾಜಕ್ಕಾಗಿ ವ್ಯಯಿಸುವ ನಿರ್ಧಾರ ಮಾಡಿದ್ದಾರೆ. ಹ್ಯಾಟ್ಸಾಫ್ ಎನ್ನೋಣವೇ..

    Sudeep's letter to his fans

    Actor-director Sudeep has decided not to celebrate his birthday from this year onwards and has requested his fans not to celebrate his birthday. Instead, he has requested them to use the money for the needy. Sudeep has also written a letter to all his fans in this regard.

    Hello friend's ,,,

    All these years I have felt blessed and loved when each one would turn up for my birthday and celebrating it as if it was your own... Thank U all for this unconditional love tat u all have showered for more than two decades now... I have Nuthn to offer u all apart from my love n work ,,, Wch I Wil do til my last breath..

    Over th years I saw many n many spending their hard earned money over cakes, garlands n many more materialistic things .. There has been many who have travelled miles n miles to his come n wish me,,which again collectively is a large amount of money.. I have seen money being spent on decorating th roads,areas,my house,,it's surroundings etc. 

    I request u all to use tat money to donate to those in need... Use this money to buy food to those, to whom a single meal a day is a dream.. Trust me ,,the money tats being spent on decorations n cakes etc,,can actually save someone's house ,,or someone's life. 

    This to me is th best gift u all can give me ,, 

    This wil be th best way to celebrate,, 

    N This is that little we all can do for our people in need... 

    I shall not be celebrating my birthday anymore as I choose to be away from home,, probably doin th same what I'm requesting u all to do.. N I am hoping that my words Wil be respected... 

    Let's make th best of what time has gifted us and let's make a few smile tat day.. Look around and u Will see a lot who needs ur ill support and help... Lend them tat hand.. 

    Someday u Wil see Light shining on u too,,when u least expect to see a smallest ray...

    MCH LOVE ,

    Kichcha.

     

     

  • ಹುರಿಗಟ್ಟಿದ ದೇಹದ ಹೆಬ್ಬುಲಿ ನೋಡಿದಿರಾ..?

    krishna dop shares sudeep's photo

    ಕಿಚ್ಚ ಸುದೀಪ್ ಆ್ಯಕ್ಷನ್ ಹೀರೋ ಹೌದಾದರೂ, ಈ ರೀತಿಯಲ್ಲಿ ನೋಡಿದವರು ಯಾರೂ ಇಲ್ಲ. ವರ್ಕೌಟ್, ಜಿಮ್ ಕಸರತ್ತು ಮಾಡುತ್ತಿದ್ದೇನೆ ಎಂದು ಸುದೀಪ್ ಹೇಳಿಕೊಂಡಿದ್ದರಾದರೂ, ಸುದೀಪ್ ಅವರ ದೇಹ ಈ ಪರಿ ಹುರಿಗಟ್ಟಿದೆ ಎಂದು ಯಾರೂ ಅಂದುಕೊಂಡಿರಲಿಲ್ಲ.

    ಈ ಫೋಟೋದಲ್ಲಿರೋದು ಕಿಚ್ಚ ಸುದೀಪ್. ಪೈಲ್ವಾನ್ ದೇಹವನ್ನೇ ರೂಪಿಸಿಕೊಂಡಿರೋ ಸುದೀಪ್, ಅಭಿಮಾನಿಗಳಿಗೆ ಹಿತವಾದ ಶಾಕ್ ಕೊಟ್ಟಿದ್ದಾರೆ. ಬಹುಶಃ ನಿರ್ದೇಶಕ ಕೃಷ್ಣ ಹೇಳದೇ ಹೋಗಿದ್ದರೆ, ಇದು ಸುದೀಪ್ ಎಂದು ನಂಬೋಕೆ ಕಷ್ಟವಾಗುತ್ತಿತ್ತು ಎನ್ನುವುದಂತೂ ಹೌದು.

  • ಹೆಬ್ಬುಲಿ ನೋಡಿದವರಿಗೆ ಕಿಚ್ಚನ ಅಚ್ಚರಿ..!

    sudeep image

    ಕಿಚ್ಚ ಸುದೀಪ್ ಅವರ ಹೆಬ್ಬುಲಿ ಸಿನಿಮಾ ಟಿವಿಯಲ್ಲಿ ಪ್ರಸಾರವಾಯ್ತು. ಥಿಯೇಟರ್‍ನಲ್ಲಿ ಕರ್ನಾಟಕಕ್ಕೆಲ್ಲ ಕೇಳುವಂತೆ ಗರ್ಜಿಸಿದ್ದ ಹೆಬ್ಬುಲಿ ಸಿನಿಮಾ ಪ್ರಸಾರವನ್ನು ಝೀ ಕನ್ನಡದವರು ಹಬ್ಬದಂತೆ ಸಂಭ್ರಮಿಸಿದರು. ಆ ಸಂಭ್ರಮದ ದೊಡ್ಡ ಕಿಚ್ಚು ಕಿಚ್ಚ ಸುದೀಪ್. ಏಕೆಂದರೆ, ಇಡೀ ಚಿತ್ರವನ್ನು ಪ್ರೇಕ್ಷಕರ ಜೊತೆಯಲ್ಲೇ ನೋಡಿದ ಕಿಚ್ಚ, ಚಿತ್ರದ ತೆರೆಯ ಹಿಂದಿನ ಕಥೆಗಳನ್ನು ಹೇಳುತ್ತಾ ಹೋದರು. ಪ್ರೇಕ್ಷಕರಿಗೆ ಪ್ರತಿ ಬ್ರೇಕ್‍ನಲ್ಲೂ ಅಚ್ಚರಿ.

    ಸಿನಿಮಾವೊಂದು ಬೆಳ್ಳಿತೆರೆಯಿಂದ ಕಿರುತೆರೆಗೆ ಬಂದಾಗ, ಆ ಚಿತ್ರದ ನಟರು, ನಿರ್ದೇಶಕರು ಸಿನಿಮಾದ ತೆರೆಯ ಹಿಂದಿನ ಕಥೆ ಹೇಳುವುದು ಹಿಂದಿಯಲ್ಲಿ ಮಾಮೂಲಿ. ಇಂಗ್ಲಿಷ್ ಚಿತ್ರಗಳಲ್ಲೂ ಇಂಥಾ ಸಂಪ್ರದಾಯವಿದೆ. ಹಿಂದಿಯಲ್ಲಿ ಇಂಥಾದ್ದೊಂದು ಪ್ರಯೋಗ ಆರಂಭವಾಗಿದ್ದು ಬಹುಶಃ ತಾರೆ ಜಮೀನ್ ಪರ್ ಚಿತ್ರದ ಮೂಲಕ. ಅಂಥಾದ್ದೊಂದು ಹೊಸತನಕ್ಕೆ ನಾಂದಿ ಹಾಡಿದ್ದಾರೆ ಕಿಚ್ಚ ಸುದೀಪ್.

  • ಹೇ.. ಜಲೀಲ.. ಹಾಡಿನ ಹಿಂದಿನ ಕಥೆ..!

    hey jallela kanwarlaala

    ಹೇ.. ಜಲೀಲ.. ಕನ್ವರ್‍ಲಾಲ.. ಹಾಡು ಸೂಪರ್ ಹಿಟ್ಟಾಗಿದೆ. ಸಂಗೀತ ನೀಡಿದ ಅರ್ಜುನ್ ಜನ್ಯ, ಸಾಹಿತ್ಯ ಒದಗಿಸಿದ ಜೋಗಿ ಪ್ರೇಮ್ ಹಾಗೂ ಹಾಡಿದ ವಿಜಯ್ ಪ್ರಕಾಶ್.. ಮೂವರೂ ಹಾಡಿನ ಸಕ್ಸಸ್‍ನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಹಾಡಿನ ಯಶಸ್ಸಿನ ಜೊತೆಯಲ್ಲೇ ಹಾಡಿಗೂ ಒಂದು ಕಥೆಯಿದೆ.

    ಸಿನಿಮಾಗೆ ಈ ರೀತಿಯ ಹಾಡು ಬೇಕು ಎಂದಾಗ ಅದು ಮಂಡ್ಯ ಸ್ಟೈಲ್‍ನಲ್ಲೇ ಇದ್ದರೆ ಚೆನ್ನ ಎಂಬ ಅಭಿಪ್ರಾಯ ಮೂಡಿಬಂತು. ಅದನ್ನು ಪ್ರೇಮ್ ಅವರಿಂದಲೇ ಬರೆಸಿದರೆ ಚೆಂದ ಎಂದು ಅಭಿಪ್ರಾಯಪಟ್ಟವರು ಸುದೀಪ್. ಪ್ರೇಮ್‍ಗೆ ಹಾಡು ಬರೆಯುವಂತೆ ಹೇಳಿದ್ದೂ ಅವರೇ. 

    ಜೋಗಿ ಪ್ರೇಮ್ ಅಂಬರೀಷ್‍ರ ದೊಡ್ಡ ಅಭಿಮಾನಿ. ಮಂಡ್ಯದವರೂ ಹೌದು. ಮಂಡ್ಯ ಶೈಲಿಯ ಕನ್ನಡದ ಮೇಲೆ ಅದ್ಬುತ ಹಿಡಿತವೂ ಇದೆ. ಜೊತೆಗೆ ಅಂಬರೀಷ್‍ರನ್ನು ಹತ್ತಿರದಿಂದ ಕಂಡವರು. ಇದೆಲ್ಲವನ್ನೂ ಪ್ರೇಮ್ ಹಾಡಿನಲ್ಲಿ ತುಂಬಿಕೊಟ್ಟಿದ್ದಾರೆ ಎಂದು ಖುಷಿಯಾಗುತ್ತಾರೆ ನಿರ್ಮಾಪಕ ಜಾಕ್ ಮಂಜು.

    ಈ ಹಾಡಿನ ಶೂಟಿಂಗ್‍ನ್ನು ಎರಡು ಬಾರಿ ಮುಂದೂಡಲಾಗಿತ್ತಂತೆ. ಎರಡೂ ಬಾರಿ ಅಂಬಿ ಆರೋಗ್ಯ ಕೈ ಕೊಟ್ಟಿತ್ತು. ಆದರೆ ಅಂಬರೀಷ್ ಸಿನಿಮಾವನ್ನು ಅದೆಷ್ಟು ಇಷ್ಟಪಟ್ಟಿದ್ದರು ಎಂದರೆ ಈ ಹಾಡಿಗೆ ತಮ್ಮ ಮಗ ಅಮರ್ ಜೊತೆ ರಿಹರ್ಸಲ್ ಮಾಡಿದ್ದರಂತೆ. 3ನೇ ಬಾರಿ ಶೂಟಿಂಗ್ ಪ್ಲಾನ್ ಆಗಿ ಶೂಟಿಂಗ್ ಶುರುವಾದಾಗ, ಅಂಬರೀಷ್ ಕಂಪ್ಲೀಟ್ ಆಗಿ ಸಿದ್ಧರಾಗಿಬಿಟ್ಟಿದ್ದರಂತೆ. 

    ಇಷ್ಟೆಲ್ಲ ಆಗಿ ಹಾಡು ಈಗ ಅಭಿಮಾನಿಗಳ ಎದೆಯಲ್ಲಿ ಪ್ರತಿಷ್ಠಾಪನೆಯಾಗಿಬಿಟ್ಟಿದೆ. ಅಂಬರೀಷ್ ಅವರ ಇಡೀ ವ್ಯಕ್ತಿತ್ವವೇ ಈ ಹಾಡಿನಲ್ಲಿದೆ. 

  • ಹೊಸ ಚರಿತ್ರೆ ಸೃಷ್ಟಿಸಲಿ ಯುವರತ್ನ - ಬಾದ್‍ಷಾ ಹಾರೈಕೆ

    sudeep wishes yuvaratna puneeth

    ಯುವರತ್ನ.. ಪವರ್ ಆಫ್ ಯೂತ್.. ಇದು ಅಪ್ಪು-ಸಂತೋಷ್-ಹೊಂಬಾಳೆ ಕಾಂಬಿನೇಷನ್‍ನ ಸಿನಿಮಾ. ರಾಜಕುಮಾರ ಚಿತ್ರದಲ್ಲಿ ಹೊಸ ದಾಖಲೆ ಬರೆದಿದ್ದ ಜೋಡಿಗಳು ಮತ್ತೆ ಒಂದಾಗಿವೆ. ಈ ಜೋಡಿ.. ಮತ್ತೊಂದು ಹೊಸ ಇತಿಹಸ ಸೃಷ್ಟಿಸಲಿ. ಬಾಕ್ಸಾಫೀಸ್‍ನಲ್ಲಿ ದಾಖಲೆ ಬರೆಯಲಿ ಎಂದು ಶುಭ ಹಾರೈಸಿದ್ದಾರೆ ಕಿಚ್ಚ ಬಾದ್‍ಷಾ ಸುದೀಪ್ ಹಾರೈಕೆ. 

    ಪುನೀತ್ ರಾಜ್‍ಕುಮಾರ್ ಸಿನಿಮಾಗಳು ಸೈಲೆಂಟ್ ಆಗಿಯೇ ಕ್ರೇಜ್ ಸೃಷ್ಟಿಸುತ್ತವೆ. ಅಬ್ಬರವಿಲ್ಲದೆ ಬಂದು, ಬಾಕ್ಸಾಫೀಸ್‍ನಲ್ಲಿ ಅಬ್ಬರಿಸುತ್ತವೆ. ಈಗ ಯುವರತ್ನ ಅನ್ನೋ ಸಿನಿಮಾ.. ಶೂಟಿಂಗ್ ಶುರುವಾಗುವ ಮೊದಲೇ ಕ್ರೇಜ್ ಸೃಷ್ಟಿಸಿದೆ. ಕಾರಣ ಸಿಂಪಲ್.. ಅದು ರಾಜಕುಮಾರ ಜೋಡಿಯ ಪುನರ್‍ಮಿಲನದ ಸಿನಿಮಾ. 

    ಈಗ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಹೊರಬಿಟ್ಟಿರುವುದು ಯುವರತ್ನ ಚಿತ್ರದ ಟೈಟಲ್‍ನ ಮುದ್ದಾದ ಫಾಂಟ್‍ಗಳನ್ನು. ಉಳಿದಂತೆ.. ಚಿತ್ರತಂಡದ ತಂತ್ರಜ್ಞರು, ಕಲಾವಿದರ ಆಯ್ಕೆ ಇನ್ನೂ ನಡೆಯುತ್ತಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಸದ್ಯಕ್ಕೆ ಕೆಜಿಎಫ್ ಚಿತ್ರದ ರಿಲೀಸ್‍ನಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ.

  • ಹೊಸ ಚಿತ್ರದಲ್ಲಿ ಸುದೀಪ್ ಬೇಟೆಗಾರನಲ್ಲ.. ಆಟಗಾರ

    sudeep image

    ಕಿಚ್ಚ ಸುದೀಪ್ ನಟಿಸಿದ್ದ ಹೆಬ್ಬುಲಿ ಚಿತ್ರದಲ್ಲಿ ವಿಲನ್‍ಗಳನ್ನು ಬೇಟೆಯಾಡುವ ಬೇಟೆಗಾರನ ಪಾತ್ರದಲ್ಲಿ ಮಿಂಚಿದ್ದರು ಕಿಚ್ಚ ಸುದೀಪ್. ಆದರೆ, ಹೊಸ ಚಿತ್ರದಲ್ಲಿ ಸುದೀಪ್ ಬೇಟೆಗಾರನಲ್ಲ..ಆಟಗಾರ.

    ಹೆಬ್ಬುಲಿ ನಂತರ ಕೃಷ್ಣ ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲಿ ಸುದೀಪ್ ಕ್ರೀಡಾಪಟುವಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಒಂದು ಮೂಲದ ಪ್ರಕಾರ ಸುದೀಪ್ ಅವರದ್ದು ಪೈಲ್ವಾನನ ಪಾತ್ರ. ಇನ್ನೊಂದು ಮೂಲದ ಪ್ರಕಾರ ಬಾಕ್ಸರ್ ಪಾತ್ರ. ಎರಡರ ನಡುವೆ ಹೋಲಿಕೆ ಇದೆಯಾದರೂ, ಹಳ್ಳಿ ಆಟದ ಕಥೆ ಎನ್ನಲಾಗುತ್ತಿದೆ. ಹೀಗಾಗಿ ಪೈಲ್ವಾನನಂತೆ ಕಾಣಿಸಿಕೊಂಡರೂ ಅಚ್ಚರಿಯಿಲ್ಲ. ಒಟ್ಟಿನಲ್ಲಿ ಅದು ಕ್ರೀಡಾಪಟುವಿನ ಕಥೆಯ ಚಿತ್ರ.

    ಕನ್ನಡದಲ್ಲಿ ಕ್ರೀಡೆಯನ್ನೇ ಕಥೆಯನ್ನಾಗಿಸಿಕೊಂಡ ಚಿತ್ರಗಳು ಬಂದೇ ಇಲ್ಲ ಎನ್ನಬೇಕು. ಹೀಗಾಗಿ ಹೊಸ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕುತ್ತಿರುವ ಸುದೀಪ್, ಚಿತ್ರಕ್ಕಾಗಿ ಬಾಡಿಬಿಲ್ಡಿಂಗ್‍ನ್ನೂ ಮಾಡುತ್ತಿದ್ದಾರಂತೆ. ಜಿಮ್ ಎಂದರೇನೇ ಮಾರು ದೂರ ಓಡುತ್ತಿದ್ದ ಸುದೀಪ್ ಅವರನ್ನು ಕೃಷ್ಣ, ಈ ಚಿತ್ರದಿಂದ ಜಿಮ್‍ಗೆ ಕಟ್ಟಿಹಾಕಿದ್ದಾರೆ. 

    ಚಿತ್ರದ ಫೋಟೋಶೂಟ್ ಮುಗಿದಿದ್ದು, ಸುದೀಪ್ ಹುಟ್ಟುಹಬ್ಬದ ದಿನ ಅಥವಾ ಒಂದು ದಿನ ಮೊದಲು ಚಿತ್ರದ ಫಸ್ಟ್‍ಲುಕ್ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ.

    Related Articles :-

    Sudeep Plays A Boxer in His Next Film

    Krishna To Produce Sudeep's New Film