ಮನೆಯಲ್ಲಿ ಎಲ್ಲರಿಂದ ಅಪ್ಪು ಎಂದೇ ಕರೆಸಿಕೊಳ್ಳುತ್ತಿದ್ದ ಪುನೀತ್ ರಾಜ್‍ಕುಮಾರ್‍ರನ್ನು ಅಭಿಮಾನಿಗಳು ಹಾಗೆಯೇ ಕರೀತಾರೆ. ಪುನೀತ್‍ಗಿರುವ ಬಿರುದು ಪವರ್ ಸ್ಟಾರ್. ಪುನೀತ್ ಆ್ಯಕ್ಷನ್ ಮತ್ತು ಡೈಲಾಗ್‍ನಲ್ಲಿ ಅಂಥಾದ್ದೊಂದು ಪವರ್ ಇರುತ್ತೆ ಅನ್ನೋದು ಬೇರೆ ಮಾತು. ಆದರೆ, ಅವರನ್ನು ಮೊತ್ತ ಮೊದಲ ಬಾರಿಗೆ ಪವರ್ ಸ್ಟಾರ್ ಎಂದು ಕರೆದಿದ್ದು ಯಾರು ಗೊತ್ತಾ..? ಅದು ಶಿವರಾಜ್ ಕುಮಾರ್.
ಅದನ್ನು ಸ್ವತಃ ಶಿವರಾಜ್ ಕುಮಾರ್, ಅಂಜನೀಪುತ್ರ ಆಡಿಯೋ ಬಿಡುಗಡೆ ವೇಳೆ ಬಹಿರಂಗಪಡಿಸಿದ್ದಾರೆ. ಅಪ್ಪು ತುಂಬಾ ಆ್ಯಕ್ಟಿವ್ ಇರುತ್ತಿದ್ದ. 6ನೇ ವಯಸ್ಸಿಗೇ ರಾಷ್ಟ್ರ ಪ್ರಶಸ್ತಿ ಪಡೆದ ಪ್ರತಿಭೆ ಅವನದ್ದು. ಸದಾ ಪುಟಿಯುತ್ತಿದ್ದ ಅವನ ಉತ್ಸಾಹ, ಟ್ಯಾಲೆಂಟ್, ಎನರ್ಜಿ ನೋಡಿ ಅವನಿಗೆ ಪವರ್ ಸ್ಟಾರ್ ಎಂದು ಹೆಸರಿಟ್ಟರೆ ಚೆನ್ನಾಗಿರುತ್ತೆ ಎಂದಿದ್ದೆ ಎಂಬ ವಿಷಯ ಹೇಳಿಕೊಂಡಿದ್ದಾರೆ ಶಿವಣ್ಣ.
ಪವರ್ ಸ್ಟಾರ್.. ಪವರ್ ಸ್ಟಾರ್ ಎಂದು ಕೂಗುತ್ತಿದ್ದ ಅಭಿಮಾನಿಗಳ ಎದುರು ನಿಂತ ಶಿವಣ್ಣ, ನೀವೆಲ್ಲ ಇವತ್ತು ಪವರ್ ಸ್ಟಾರ್ ಎಂದು ಕೂಗುತ್ತಿದ್ದೀರಿ. ಈ ಪವರ್ ಸ್ಟಾರ್‍ಗೆ ಪವರ್ ಕೊಟ್ಟಿದ್ದು ಈ ಟವರ್ ಎಂದು ಹೇಳಿದಾಗ ಅಭಿಮಾನಿಗಳ ಕರತಾಡನ ಮುಗಿಲುಮುಟ್ಟಿತ್ತು.