` upendra, - chitraloka.com | Kannada Movie News, Reviews | Image

upendra,

 • ರಜನಿ 2.0 ಚಿತ್ರಕ್ಕೆ ಶಿವಣ್ಣ, ಉಪ್ಪಿ ಶುಭ ಹಾರೈಕೆ

  shivarajkumar and upendra wish rajinikanth for 2.0

  sಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ 2.0 ಚಿತ್ರದ ಟ್ರೇಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ರಜನಿಕಾಂತ್, ಅಕ್ಷಯ್ ಕುಮಾರ್, ಆ್ಯಮಿ ಜಾಕ್ಸನ್ ಅಭಿನಯದ ಚಿತ್ರಕ್ಕೆ ಸ್ಟಾರ್ ಡೈರೆಕ್ಟರ್ ಶಂಕರ್ ನಿರ್ದೇಶನವಿದೆ. ಈ ಸಿನಿಮಾಗೆ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಶುಭ ಹಾರೈಸಿದ್ದು ವಿಶೇಷವಾಗಿತ್ತು.

  ನಿದೇಶಕ ಶಂಕರ್, ಉಪೇಂದ್ರ ಅವರ ಎ ಚಿತ್ರದಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಹೇಳಿಕೊಂಡರೆ, ಶಿವಣ್ಣ ರಜನಿ ಚಿತ್ರಕ್ಕೆ ಕಾಯುತ್ತಿದ್ದೇನೆ ಎಂದು ಹೇಳಿಕೊಂಡರು.

 • ರವಿಚಂದ್ರನ್-ಉಪ್ಪಿ ಕಾಂಬಿನೇಷನ್ ಚಿತ್ರದ ಟೈಟಲ್ ಮತ್ತೆ ಬದಲು

  Ravichandran- Upendra Movie Title Changed

  ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ. ಇವರಿಬ್ಬರೂ ಒಟ್ಟಿಗೇ ನಟಿಸುತ್ತಿರುವ ಮೊತ್ತ ಮೊದಲ ಚಿತ್ರದ ಟೈಟಲ್ ಸತತ 3ನೇ ಬಾರಿಗೆ ಬದಲಾಗಿದೆ.

  ಆರಂಭದಲ್ಲಿ ಈ ಚಿತ್ರಕ್ಕೆ ರವಿಚಂದ್ರ ಎಂದು ಟೈಟಲ್ ಕೊಡಲಾಗಿತ್ತು. ನಂತರ ವೇದವ್ಯಾಸ ಎಂದು ಟೈಟಲ್ ಬದಲಾವಣೆ ಮಾಡಲಾಯ್ತು. ಈಗ ಅದೇ ಚಿತ್ರಕ್ಕೆ ತ್ರಿಶೂಲಂ ಎಂದು ಟೈಟಲ್ ಇಡಲಾಗಿದೆ. ಉಪ್ಪಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಸ ಟೈಟಲ್ ಇರುವ ಪೋಸ್ಟರ್ ಕೂಡಾ ರಿಲೀಸ್ ಆಗಿದೆ.

  ಇದು ತೆಲುಗಿನ ಬಲುಪು ಚಿತ್ರದ ರೀಮೇಕ್. ರವಿತೇಜ, ಪ್ರಕಾಶ್ ರೈ ನಟಿಸಿದ್ದ ಆ ಚಿತ್ರವನ್ನು ಕನ್ನಡದಲ್ಲಿ ಮಾಡಲಾಗುತ್ತಿದೆ. ರವಿತೇಜ ರೋಲ್‍ನಲ್ಲಿ ಉಪ್ಪಿ, ರೈ ಪಾತ್ರದಲ್ಲಿ ರವಿಚಂದ್ರನ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ಶಾನ್ವಿ ಶ್ರೀವಾತ್ಸವ್ ನಾಯಕಿ. ನಿಮಿಕಾ ರತ್ನಾಕರ್ ಇನ್ನೋರ್ವ ನಾಯಕಿ. ಓಂ ಪ್ರಕಾಶ್ ರಾವ್ ನಿರ್ದೇಶನದ ಚಿತ್ರಕ್ಕೆ ಆರ್. ಶ್ರೀನಿವಾಸ್ ನಿರ್ಮಾಪಕ.

 • ರಾಕಿಂಗ್ ಸ್ಟಾರ್ ಗೆ ಸಿಕ್ತು ರಿಯಲ್ ಸ್ಟಾರ್ ಶಹಬ್ಬಾಸ್‍ಗಿರಿ

  upendra appreciates yash's dediction

  ರಿಯಲ್ ಸ್ಟಾರ್ ಉಪೇಂದ್ರ, ತಮಗೆ ಇಷ್ಟವಾಗಿದ್ದನ್ನು ಹೇಳೋಕೆ, ಹಿಂದೆ ಮುಂದೆ ನೋಡುವವರಲ್ಲ. ಈಗ ಉಪೇಂದ್ರ, ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಒಂದು ಟ್ವೀಟ್ ಮಾಡಿದ್ದಾರೆ. ಉಪೇಂದ್ರ ಅವರಿಗೆ ಬಹಳ ಇಷ್ಟವಾಗಿರೋದು ಯಶ್ ಅವರ ಡೆಡಿಕೇಷನ್.

  ಕೆಜಿಎಫ್ ಸಿನಿಮಾಗಾಗಿ 2 ವರ್ಷ ಮೀಸಲಿಟ್ಟಿರುವ ಯಶ್ ಅವರ ಈ ಡೆಡಿಕೇಷನ್ ಅಮೋಘ. ಒಂದು ಸಿನಿಮಾಗಾಗಿ ನೀವು ಮಾಡಿರುವ ಈ ಸಮರ್ಪಣಾಮನೋಭಾವದಿಂದ ಕಲಿಯುವುದು ತುಂಬಾ ಇದೆ ಎಂದು ಹೊಗಳಿದ್ದಾರೆ ಉಪೇಂರ್ಧಋ>

  ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್, ಎರಡು ಭಾಗಗಳಲ್ಲಿ ತೆರೆಗೆ ಬರುತ್ತಿದ್ದು, ಮೊದಲನೇ ಭಾಗ ಈ ವರ್ಷ ಬಿಡುಗಡೆಯಾಗಲಿದೆ. ಹೊಂಬಾಳೆ ಬ್ಯಾನರ್‍ನ ಚಿತ್ರದ ಬಗ್ಗೆ ಭಾರಿ ನಿರೀಕ್ಷೆಗಳಿವೆ.

  ಉಪ್ಪಿ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಯಶ್, ನಿಮ್ಮ ಹೊಗಳಿಕೆಗೆ ನಾನು ಅಭಾರಿ. ನೀವು ನನಗೆ ಸದಾ ಸ್ಫೂರ್ತಿ. ನಮಗೆ ಇದೇ ರೀತಿ ಪ್ರೇರಣೆ ನೀಡುತ್ತಿರಿ ಎಂದು ಧನ್ಯವಾದ ಅರ್ಪಿಸಿದ್ದಾರೆ.

 • ರಾಜಕೀಯಕ್ಕೆ ಬಂದರೆ, ನಿಜದಂತಿರುವಾ ಸುಳ್ಳಲ್ಲ.. ಸುಳ್ಳುಗಳೆಲ್ಲ ನಿಜವಲ್ಲ ಎನ್ನಲು ಸಾಧ್ಯವಿಲ್ಲ..! 

  upendra in politics

  ‘‘A ಸ್ಟಾರ್ ಈಸ್ ಬಾರ್ನ್​’’. ಉಪೇಂದ್ರ ಅವರ A ಸಿನಿಮಾ ರಿಲೀಸ್ ಆದಾಗ ಚಿತ್ರಪ್ರಭದಲ್ಲಿ ಅಂಥಾದ್ದೊಂದು ಶೀರ್ಷಿಕೆ ನೀಡಲಾಗಿತ್ತು.

  a_launch_upendra_kashinath.jpgಆ ಲೇಖನ ಬರೆದಿದ್ದವರು ಹಿರಿಯ ಪತ್ರಕರ್ತ ಉದಯ ಮರಕಿಣಿ. ಆಗ ಹಲವರು ಅದನ್ನು ಉತ್ಪ್ರೇಕ್ಷೆ ಎಂದಿದ್ದರು. ಅತಿರಂಜಿತ ಎಂದಿದ್ದರು. ಆದರೆ, ಆ ಭವಿಷ್ಯ ಸುಳ್ಳಾಗಲಿಲ್ಲ. ಉಪೇಂದ್ರ ಎಂಬ ನಟ ಸ್ಟಾರ್ ಆಗಿಯೇಬಿಟ್ಟರು. ಅಭಿಮಾನಿಗಳು ಪ್ರೀತಿಯಿಂದ ರಿಯಲ್ ಸ್ಟಾರ್ ಎಂದು ಕರೆದರು.

  ಉಪೇಂದ್ರ ಅವರಷ್ಟೇ ಅಲ್ಲ, ಅವರ ಐಡಿಯಾಗಳೂ ವಿಚಿತ್ರವೇ. ಸಿನಿಮಾದಲ್ಲೂ ಅಷ್ಟೆ.. ಚಿತ್ರರಂಗದಲ್ಲೂ ಅಷ್ಟೆ. ಒಂದು ಕಥೆಯೊಳಗೆ ಹತ್ತಾರು ಕಥೆಗಳನ್ನು ಸೇರಿಸಿ, ಗೊಂದಲ ಸೃಷ್ಟಿಸುತ್ತಲೇ ಕಥೆ ಹೇಳುವ ಶೈಲಿಯನ್ನು ಪರಿಚಯಿಸಿದ್ದೇ ಉಪೇಂದ್ರ. ಕೆಲವರು ಅದನ್ನು ನಕಲು ಮಾಡುವ ಯತ್ನ ಮಾಡಿ ನಗೆಪಾಟಲಿಗೀಡಾದರು. ಒಂದೇ ಸಿನಿಮಾದಲ್ಲಿ ಹತ್ತಾರು ಫ್ಲ್ಯಾಶ್​ಬ್ಯಾಕ್​ಗಳನ್ನು, ಫ್ಲ್ಯಾಶ್​ಬ್ಯಾಕುಗಳ ಒಳಗೆ ಫ್ಲ್ಯಾಶ್​ಬ್ಯಾಕುಗಳನ್ನು ತೋರಿಸಿ ಗೆದ್ದಿದ್ದು ಉಪೇಂದ್ರ.

  a_upendra.jpgA ಸಿನಿಮಾದಲ್ಲಂತೂ ಸಿನಿಮಾ ಶುರುವಾದ ಹತ್ತೇ ನಿಮಿಷದಲ್ಲಿ THE END ಎಂದು ಕಾಣಿಸಿದಾಗ ಪ್ರೇಕ್ಷಕ ಗೊಂದಲಕ್ಕೆ ಬಿದ್ದಿದ್ದ.  ಕಡ್ಡಾಯವಾಗಿ ಬುದ್ದಿವಂತರಿಗೆ ಮಾತ್ರ ಎಂದು ಟ್ಯಾಗ್​ಲೈನ್ ಕೊಟ್ಟು, ಬುದ್ದಿವಂತರಲ್ಲದವರನ್ನೂ ಚಿತ್ರಮಂದಿರಕ್ಕೆ ಸೆಳೆದಿದ್ದ ಉಪೇಂದ್ರ ತಂತ್ರಕ್ಕೆ ಚಿತ್ರರಂಗ ಬೆರಗಾಗಿತ್ತು.

  ಹಾಗೆ ನೋಡಿದರೆ ನಟ ಉಪೇಂದ್ರಗಿಂತ ಪ್ರೇಕ್ಷಕರಿಗೆ ನಿರ್ದೇಶಕ ಉಪೇಂದ್ರ ಅವರೇ ಇಷ್ಟ. ಗುರು ಕಾಶೀನಾಥ್​ರ ಡಬಲ್ ಮೀನಿಂಗ್​ನ ಪರಾಕಾಷ್ಠೆ ತೋರಿಸಿದ್ದು ತರ್ಲೆ ನನ್ಮಗ ಉಪೇಂದ್ರ. ಅವರ 2ನೇ ಚಿತ್ರ ಶ್, ಇಂದಿಗೂ ಕನ್ನಡದ ಬೆಸ್ಟ್ ಹಾರರ್ ಮೂವಿಗಳಲ್ಲೊಂದು.

  upendra_om1.jpgಓಂ ಚಿತ್ರ ಶಿವರಾಜ್​ ಕುಮಾರ್​ ಚಿತ್ರಜೀವನದಲ್ಲಷ್ಟೇ ಅಲ್ಲ, ಕನ್ನಡ ಚಿತ್ರರಂಗದಲ್ಲೇ ಸಾಹಸೀ ಪ್ರಯತ್ನ. A ಚಿತ್ರದಲ್ಲಿ ಕೂಡಾ ರಾಜಕೀಯದ ಎಳೆಯಿತ್ತಾದರೂ, ಪ್ರೇಮಕಥೆಯ ಮಧ್ಯೆ ಅದು ಅಷ್ಟಾಗಿ ಗಮನ ಸೆಳೆದಿರಲಿಲ್ಲ. ತಮ್ಮ ಹೆಸರನ್ನೇ ಚಿತ್ರದ ಟೈಟಲ್ ಆಗಿಸಿ, ತಾವೇ ನಿರ್ದೇಶಿಸಿ, ನಟಿಸಿ ಗೆದ್ದ ಇನ್ನೊಬ್ಬ ನಟ, ನಿರ್ದೇಶಕ ಭಾರತೀಯ ಚಿತ್ರರಂಗದಲ್ಲೇ ಇಲ್ಲ. 

  ಅಂಥಾ ಉಪ್ಪಿ ಹೊಸ ‘ರಾಜಕೀಯ’ ಸಾಹಸಕ್ಕೆ ಕೈ ಹಾಕಿದ್ದಾರೆ. ಅದು ಅವರು ಇದುವರೆಗೆ ಸಕ್ರಿಯವಾಗಿ ತೊಡಗಿಕೊಳ್ಳದೇ ಇರುವ ಕ್ಷೇತ್ರ. ಸಿನಿಮಾಗಳಲ್ಲಿ ಸುಳ್ಳನ್ನು ಸುಳ್ಳು ಎಂದೇ ಹೇಳಿ ಜನರನ್ನು ಮೆಚ್ಚಿಸಬಹುದು. ರಾಜಕೀಯದಲ್ಲಿ ಹಾಗಲ್ಲ. ಅದಕ್ಕೆ ಉಲ್ಟಾ. ಅಲ್ಲಿ ಸುಳ್ಳನ್ನು ಸತ್ಯವೆಂದೇ ಸಾಧಿಸಬೇಕು. ಸಾಧಿಸಿ ಗೆಲ್ಲಬೇಕು.

  operation_antha_launch.jpgಫಿಲ್ಟರ್ ಇಲ್ಲದೆ ಮಾತನಾಡುತ್ತೇನೆ ಎನ್ನುವ ಉಪ್ಪಿ, ರಾಜಕೀಯದಲ್ಲಿ ಅದೆಷ್ಟು ಫಿಲ್ಟರ್​ ಹಾಕಿಕೊಳ್ಳಬೇಕೋ..ಗೊತ್ತಿಲ್ಲ. ಸಿನಿಮಾದಲ್ಲಿ ಸತ್ಯವನ್ನೇ ತೋರಿಸಿದರೂ, ಚಿತ್ರದ ಪ್ರಾರಂಭದಲ್ಲಿ ‘ಈ ಚಿತ್ರದಲ್ಲಿನ ಕಥೆ, ಪಾತ್ರ, ಸನ್ನಿವೇಶ ಎಲ್ಲವೂ ಕಾಲ್ಪನಿಕ. ಯಾವುದೇ ಸತ್ಯ ಘಟನೆ, ವ್ಯಕ್ತಿಗೆ ಇದು ಹೋಲಿಕೆಯಾದಲ್ಲಿ ಅದು ಕೇವಲ ಕಾಕತಾಳೀಯ’’ ಎಂದು ತೋರಿಸಿ ಬಚಾವ್ ಆಗಬಹುದು. 

  ಆದರೆ, ಅಲ್ಲಿಯೂ ಉಪೇಂದ್ರ ವಿಶಿಷ್ಟತೆ ಮೆರೆದುಬಿಟ್ಟಿದ್ದಾರೆ. ಉಪೇಂದ್ರ ಚಿತ್ರದಲ್ಲಿಯೇ ಪ್ರಾರಂಭದಲ್ಲಿ ‘ಈ ಚಿತ್ರದಲ್ಲಿ ಬರುವ ಪ್ರತಿ ಘಟನೆ, ಸನ್ನಿವೇಶವೂ ಸತ್ಯ’’ ಎಂದು ತೋರಿಸಿ ಗೆದ್ದಿದ್ದ ನಟ ಉಪೇಂದ್ರ. ಆದರೆ ರಾಜಕೀಯ ಹಾಗಲ್ಲ. ಅದರಲ್ಲೂ ಆದರ್ಶಗಳನ್ನೇ ಮೈತುಂಬಾ ಹೊದ್ದುಕೊಂಡಿರುವವರನ್ನು ರಾಜಕಾರಣ ಅಷ್ಟು ಸುಲಭವಾಗಿ ಒಳಗೆ ಬಿಟ್ಟುಕೊಳ್ಳುವುದಿಲ್ಲ. ಎಂಥ ಬುದ್ದಿವಂತರೇ ಆಗಿದ್ದರೂ, ಅರ್ಥವಾಗುವುದಿಲ್ಲ. 

  ಕರ್ನಾಟಕದಲ್ಲಿ ರಾಜಕೀಯಕ್ಕೂ, ಸಿನಿಮಾಗೂ ಸಂಬಂಧ ಅಷ್ಟಕ್ಕಷ್ಟೆ. ಸಿನಿಮಾದಿಂದ ರಾಜಕೀಯಕ್ಕೆ ಹೋಗಿ ಅತ್ಯುನ್ನತ ಸ್ಥಾನ ಅಲಂಕರಿಸಿದವರಲ್ಲಿ ನಂಬರ್ ಒನ್ ಎಂದರೆ ಅಂಬರೀಷ್ ಮಾತ್ರ. ರಾಜ್​ಕುಮಾರ್​ಗೆ ಅಂತಹ ಸ್ಥಾನ ಸಿಗುತ್ತಿತ್ತೇನೋ..

  upendra_stars_politics.jpgಆದರೆ, ರಾಜಕೀಯದ ಸಹವಾಸವೇ ಬೇಡ ಎಂದ ರಾಜ್, ಕನ್ನಡಿಗರ ಮನಸ್ಸಿನಲ್ಲಿ, ಹೃದಯದಲ್ಲಿ ರಾಜಕುಮಾರನಾಗಿಯೇ ಉಳಿದು ಹೋದರು. ಅವರನ್ನು ಬಿಟ್ಟರೆ ಅನಂತ್​ನಾಗ್, ಉಮಾಶ್ರೀ , ರಮ್ಯಾ, ಮುಖ್ಯಮಂತ್ರಿ ಚಂದ್ರು, ಬಿ.ಸಿ.ಪಾಟೀಲ್, ತಾರಾ ಅನುರಾಧ, ಜಯಮಾಲ, ಶ್ರೀನಾಥ್ ಮುಂತಾದವರು ಸಿಗುತ್ತಾರೆ. ಆದರೆ, ಅವರೆಲ್ಲ ಕಲಾವಿದರು ಎಂಬ ಕಾರಣಕ್ಕಷ್ಟೇ ಗೆದ್ದವರಲ್ಲ. ರಾಜಕೀಯದಲ್ಲಿ ಬೆವರು ಬಸಿದ ಮೇಲೇ ಗೆಲುವು ದಕ್ಕಿದ್ದು. ಮಾಳವಿಕಾ ಅವಿನಾಶ್, ಭಾವನಾ, ಶಿಲ್ಪಾ ಗಣೇಶ್, ಸಾಯಿಕುಮಾರ್, ಪೂಜಾ ಗಾಂಧಿ, ರಕ್ಷಿತಾ ಮೊದಲಾದವರು ಈಗಲೂ ಬೆವರು ಸುರಿಸುತ್ತಲೇ ಇದ್ದಾರೆ.

  ಅದಕ್ಕೆ ಕಾರಣ, ಕನ್ನಡಿಗರ ಮನಸ್ಥಿತಿ. ಆಂಧ್ರಪ್ರದೇಶ, ತಮಿಳುನಾಡಿನ ಕಥೆಯೇ ಬೇರೆ. ಕರ್ನಾಟಕವೇ ಬೇರೆ. ಕರ್ನಾಟಕದಲ್ಲಿ ಡೈಲಾಗುಗಳು, ಸಿನಿಮಾಗಳು ಆಕರ್ಷಣೆಗಳಷ್ಟೇ ಹೊರತು, ಮತಗಳಾಗುವುದಿಲ್ಲ. ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಅಂಬರೀಷ್, ರಮ್ಯಾರಂತಹ ಸ್ಟಾರ್​ಗಳನ್ನು ಮನೆಗೆ ಕಳಿಸಿದ ಇತಿಹಾಸ ಕರ್ನಾಟಕಕ್ಕಿದೆ.

  super_upendra1_hairstyle.jpgಅಂತಹ ರಾಜಕೀಯದ ಇತಿಹಾಸದ ಪುಟ ಸೇರುವ ಸುಳಿವು ನೀಡಿದ್ದಾರೆ ಉಪೇಂದ್ರ. ಗೆಲ್ಲಲಿ ಎಂಬುದು ಹಾರೈಕೆ. ಏಕೆಂದರೆ, ಅವರಲ್ಲಿ ಕನಸುಗಳಿವೆ. ಧ್ಯೇಯೋದ್ದೇಶಗಳಿವೆ. ಐಡಿಯಾಗಳಿವೆ. ಎಲ್ಲಕ್ಕಿಂತ ಮಿಗಿಲಾಗಿ ಈಗಿನ ರಾಜಕಾರಣದಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ವಿರಳವಾಗಿರುವ ಪ್ರಾಮಾಣಿಕತೆಯಿದೆ.

 • ರಾಜಕೀಯಕ್ಕೆ ಬರ್ತಾರಾ ಉಪೇಂದ್ರ..? ಯಾವಾಗ ಬರ್ತಾರೆ..? 

  upendra still

  ನಟ ಉಪೇಂದ್ರ ಉಳಿದ ನಟರ ಹಾಗಲ್ಲ. ರಾಜಕೀಯವಾಗಿ ತಮ್ಮ ನಿಲುವುಗಳ ಬಗ್ಗೆ ಅತ್ಯಂತ ಸ್ಪಷ್ಟತೆ ಇಟ್ಟುಕೊಂಡಿರುವ ನಟ. ರಾಜಕೀಯದಲ್ಲಿ ಏನೇ ಬೆಳವಣಿಗೆಯಾಗಲಿ, ಅದು ನನಗೆ ಅರ್ಥವಾಗುವುದಿಲ್ಲ, ನನಗೆ ಗೊತ್ತಿಲ್ಲ ಎಂದು ಹೇಳಿಕೊಂಡು ಕೂರುವವರೂ ಅಲ್ಲ. ಅದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ.

  ನೋಟ್​ಬ್ಯಾನ್ ಮಾಡುವ ವರ್ಷಕ್ಕೆ ಮುಂಚೆಯೇ, ಇಂಥಾದ್ದೊಂದು ಕ್ರಮದಿಂದ ಕಪ್ಪುಹಣವನ್ನು ಮಟ್ಟ ಹಾಕಬಹುದು ಎಂಬ ಚಿಂತನೆಯನ್ನು ಬಹಿರಂಗವಾಗಿಯೇ ಹೇಳಿದ್ದವರು ಉಪೇಂದ್ರ. ತಮ್ಮ ಸಿನಿಮಾಗಳಲ್ಲಿ ರಾಜಕೀಯ ಸಂದೇಶಗಳನ್ನು ಹೇಳುವಲ್ಲಿಯೂ ಅವರು ಹಿಂದೆ ಬಿದ್ದಿಲ್ಲ. ಕೆಲವು ಉತ್ಪ್ರೇಕ್ಷೆಯೆನಿಸಿದರೂ, ಅದನ್ನು ಸಿನಿಮಾದಲ್ಲಿ ಎಷ್ಟು ಬೇಕೋ ಅಷ್ಟು ಸ್ಪಷ್ಟವಾಗಿ, ಸಿನಿಮಾ ಆದ್ದರಿಂದ ತುಸು ರಂಜನಾತ್ಮಕವಾಗಿ ಹೇಳಿಕೊಂಡೇ ಬಂದವರು ಉಪೇಂದ್ರ. ಲೋಕಪಾಲ್​ ಚಳವಳಿ ಆರಂಭವಾದಾಗ, ಅಣ್ಣಾ ಹಜಾರೆಯವರ ಜೊತೆ ಬಹಿರಂಗವಾಗಿಯೇ ಗುರುತಿಸಿಕೊಂಡಿದ್ದವರು.

  ಇತ್ತೀಚೆಗೆ, ಜಿಎಸ್​ಟಿ ಬಗ್ಗೆ, ಐಟಿ ರೇಡುಗಳ ಬಗ್ಗೆ ತಮ್ಮದೇ ನಿಲುವು ವ್ಯಕ್ತಪಡಿಸಿದ್ದ ಉಪೇಂದ್ರ, ರಾಜಕೀಯಕ್ಕೆ ಬರುತ್ತಾರೆ ಎನ್ನುವ ಸುದ್ದಿ ತುಂಬಾ ವರ್ಷಗಳಿಂದ ಇದೆ. ಆದರೆ, ಇಂಥಾದ್ದೊಂದು ಪ್ರಶ್ನೆ ಕೇಳಿ ಬಂದಾಗಲೆಲ್ಲ, ನೋಡೋಣ ಎನ್ನುತ್ತ ಅಡ್ಡಗೋಡೆಯ ಮೇಲೆ ದೀಪವಿಡುತ್ತಿದ್ದ ಉಪೇಂದ್ರ, ಈಗ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿದ್ದಾರಂತೆ. ಆದರೆ, ರಾಜಕೀಯ ಮಾರ್ಗದಲ್ಲಿ ಬರಬೇಕೋ ಅಥವಾ ಸಮಾಜಮುಖಿ ಕೆಲಸಗಳ ಮೂಲಕ ಜನರಿಗೆ ಹತ್ತಿರವಾಗಬೇಕೋ ಎಂಬ ಬಗ್ಗೆ ಅವರಿಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

  ಸದ್ಯಕ್ಕಂತೂ ಉಪೇಂದ್ರ ಎಂದಿನಂತೆ ನಿಗೂಢತೆ ಕಾಯ್ದುಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಸ್ಪಷ್ಟ ಉತ್ತರ ಸಿಕ್ಕರೂ ಸಿಗಬಹುದು. ಇಂಥ ಪ್ರಶ್ನೆಗಳ ಮಧ್ಯೆ ಉಪೇಂದ್ರ ಸ್ಪಷ್ಟವಾಗಿ ಹೇಳಿರುವ ಒಂದೇ ಒಂದು ಮಾತೆಂದರೆ, ಚಾಮರಾಜಪೇಟೆಯಿಂದ ಅವರು ಕಣಕ್ಕಿಳಿಯುತ್ತಿಲ್ಲ. ಅಂದಹಾಗೆ ರಾಜಕೀಯಕ್ಕೆ ಬಂದರೆ ಯಾವ ಪಕ್ಷದಿಂದ ಬರಬೇಕು ಎಂಬ ಬಗ್ಗೆ ಕೂಡಾ ಉಪೇಂದ್ರ ಅವರಿಗೆ ಇನ್ನೂ ಸ್ಪಷ್ಟತೆ ಇದ್ದ ಹಾಗಿಲ್ಲ.

  ಇತ್ತೀಚೆಗೆ ಕೆಲವು ತಿಂಗಳಿಂದ  ರಾಜಕೀಯ ಹಾಗೂ ಸಾಮಾಜಿಕ ವಿಷಯಗಳಲ್ಲಿ ತಮ್ಮ ಸ್ಪಷ್ಟ ನಿಲುವುಗಳನ್ನು ಟ್ವೀಟರ್ ಹಾಗೂ ಸುದ್ದಿ ವಾಹಿನಿಗಳ ಮೂಲಕ ಬಹಿರಂಗಪಡಿಸು ತ್ತಲೇ ಇರುವ ಉಪೇಂದ್ರ, ಅವುಗಳನ್ನು ರಿಯಲ್ ಮಾಡುವ ಚಿಂತನೆಯಲ್ಲಿರುವುದಂತೂ ಹೌದು. ಅದಕ್ಕಾಗಿ ಅವರು ರಾಜಕೀಯ ರಂಗ ಪ್ರವೇಶಿಸುವ ಚಿಂತನೆಯಲ್ಲಿ ಇದ್ದಾರೆ ಎನ್ನುತ್ತಾರೆ ಉಪೇಂದ್ರ ಅವರ ಒಬ್ಬ ರಾಜಕೀಯ ಚಿಂತನ ಸಹವರ್ತಿ. ಇಷ್ಟಕ್ಕೂ ಉಪೇಂದ್ರ ರಿಯಲ್ಲಾಗಿ ರಾಜಕೀಯ ಪ್ರವೇಶ ಮಾಡುತ್ತಾರಾ? ಬಹುಶಃ ಒಂದೆರಡು ತಿಂಗಳಲ್ಲಿ ಉತ್ತರ ಸಿಗಬಹುದು.

 • ರಾಜ್-ಪಾರ್ವತಮ್ಮ ಪ್ರೀತಿಗೆ ಉಪ್ಪಿ ಹೇಳಿದ್ದೇನು..?

  upendra talks about rajkumar parvathamma love story

  ಬೇರೆಯದ್ದೇ ರೀತಿಯಲ್ಲಿ ಲವ್ ಸ್ಟೋರಿ ಹೇಳಲು ಬರುತ್ತಿರುವ ಐ ಲವ್ ಯೂ ಚಿತ್ರದ ಪ್ರಚಾರದ ವೇಳೆ, ಉಪೇಂದ್ರ ರಾಜ್‍ಕುಮಾರ್ ಮತ್ತು ಪಾರ್ವತಮ್ಮನವರ ಲವ್ ಬಗ್ಗೆ ಒಂದು ಕಥೆ ಹೇಳಿದ್ದಾರೆ. ಎಲ್ಲವೂ ಪ್ರೀತಿಸಿದವರಿಗೆ ಐ ಲವ್ ಯೂ ಅನ್ನೋಕಾಗಲ್ಲ ಎಂದಿರುವ ಉಪ್ಪಿ ರಾಜ್-ಪಾರ್ವತಮ್ಮ ನಡುವಿನ ಪ್ರೀತಿಯ ಬಗ್ಗೆ ತಾವು ಕೇಳಿರುವ ಕಥೆಯೊಂದನ್ನು ಹೇಳಿದ್ದಾರೆ.

  ರಾಜ್ ಯಾವಾಗಲೂ ಶೂಟಿಂಗಿನಲ್ಲಿರುತ್ತಿದ್ದರು. ಐ ಲವ್ ಯೂ ಹೇಳೋದು ಅಷ್ಟು ಸುಲಭವಾಗಿರಲಿಲ್ಲ. ಆದರೆ, ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಆಗೆಲ್ಲ ರಾಜ್ ಅವರ ಪಂಚೆಯ ತುದಿಯನ್ನು ಬೆರಳಿಗೆ ಸುತ್ತಿಕೊಂಡು ಒಂಟಿತನ ಮರೆಯುತ್ತಿದ್ದರಂತೆ. ಅದು ಗ್ರೇಟ್ ಲವ್ ಎಂದಿದ್ದಾರೆ ಉಪ್ಪಿ.

  ಈಗ ಉಪೇಂದ್ರ-ರಚಿತಾ ರಾಮ್-ಸೋನುಗೌಡ ನಡುವಿನ ಲವ್‍ಸ್ಟೋರಿ ಗ್ರೇಟ್ ಲವ್ ಸ್ಟೋರಿನಾ..? ಆರ್.ಚಂದ್ರು ಸೃಷ್ಟಿಸಿರುವ ಪ್ರೀತಿಯ ಮಾಯಾಜಾಲ ಹೇಗಿದೆ ಅನ್ನೋದನ್ನ ಥಿಯೇಟರಿನಲ್ಲಿ ನೋಡಿ, ಖುಷಿಪಡಿ. 

   

 • ರಿಯಲ್ ಕ್ರೇಜಿ ಕಾಂಬಿನೇಷನ್‍ಗೆ ಅಣ್ಣಾವ್ರ ಸಿನಿಮಾ ಟೈಟಲ್

  ravi chandran movie title

  ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್‍ನ ಸಿನಿಮಾ ಆಗಸ್ಟ್ 20ಕ್ಕೆ ಸೆಟ್ಟೇರುತ್ತಿದೆ. ಇದು ಓಂಪ್ರಕಾಶ್ ರಾವ್ ನಿರ್ದೇಶನದ ಚಿತ್ರ. ಚಿತ್ರ ತೆಲುಗಿನ ಬಲುಪು ಚಿತ್ರದ ರೀಮೇಕ್ ಎನ್ನಲಾಗಿದ್ದು, ರವಿತೇಜ ಪಾತ್ರದಲ್ಲಿ ಉಪೇಂದ್ರ ಹಾಗೂ ಪ್ರಕಾಶ್ ರೈ ಪಾತ್ರದಲ್ಲಿ ರವಿಚಂದ್ರನ್ ನಟಿಸಲಿದ್ದಾರೆ. ಈಗ ಚಿತ್ರಕ್ಕೆ ರವಿಚಂದ್ರ ಅನ್ನೋ ಟೈಟಲ್ ಫೈನಲ್ ಮಾಡಿದ್ದಾರೆ.

  ರವಿಚಂದ್ರ, ಡಾ.ರಾಜ್ ಅಭಿನಯಿಸಿದ್ದ ಸಿನಿಮಾ. ಡಾ.ರಾಜ್, ಲಕ್ಷ್ಮಿ ನಟಿಸಿದ್ದ ಚಿತ್ರ. ರಾಜ್ ದ್ವಿಪಾತ್ರದಲ್ಲಿ ನಟಿಸಿದ್ದರು. ಸುಮಲತಾ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದು ಇದೇ ಸಿನಿಮಾದ ಮೂಲಕ. 1980ರಲ್ಲಿ ರಿಲೀಸ್ ಆಗಿದ್ದ ಆ ಚಿತ್ರಕ್ಕೆ ಎ.ವಿ.ಶೇಷಗಿರಿರಾವ್ ನಿರ್ದೇಶಕರು. ಈಗ.. 2018ರಲ್ಲಿ ಸೆಟ್ಟೇರುತ್ತಿರುವ ಈ ಚಿತ್ರಕ್ಕೆ ಓಂಪ್ರಕಾಶ್ ರಾವ್ ನಿರ್ದೇಶಕರು. ಕನಕಪುರ ಶ್ರೀನಿವಾಸ್ ನಿರ್ಮಾಣದ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ನಾಯಕಿ.

 • ರಿಯಲ್ ಪಾಲಿಟಿಕ್ಸ್​ಗೆ REAL STAR..?  ನಾಳೆ ಅಧಿಕೃತವಾಗುತ್ತಾ..?

  upendra in brahma

  ರಿಯಲ್ ಸ್ಟಾರ್ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ನಟ ಉಪೇಂದ್ರ ರಾಜಕೀಯ ಪ್ರವೇಶ ಸುದ್ದಿ ಚರ್ಚೆಯಲ್ಲಿದೆ. ಫಿಲ್ಟರ್ ಇಲ್ಲದ ಮಾತುಗಳಿಗೆ ಫೇಮಸ್ ಆಗಿರುವ ಉಪೇಂದ್ರ, ರಾಜಕೀಯ ಪ್ರವೇಶ ವಿಚಾರದಲ್ಲಿ ಮಾತ್ರ ಹಾಗಿಲ್ಲ. ನೋಡೋಣ... ಎಲ್ಲ ದೇವರ ಇಚ್ಚೆ.. ಕಾಲ ಬಂದಾಗ ಉತ್ತರ ಸಿಗುತ್ತೆ.. ಇಂಥವೇ ಉತ್ತರಗಳ ಮೂಲಕ ನುಣುಚಿಕೊಳ್ಳುವುದೇ ಹೆಚ್ಚು.

  ಈಗ ಆ ಎಲ್ಲ ನಿಗೂಢ ಉತ್ತರಗಳಿಗೂ ಸ್ಪಷ್ಟತೆ ಸಿಗಲಿದೆಯಾ..? ಏಕೆಂದರೆ, ಸುದ್ದಿ ಬ್ರೇಕ್ ಆಗುತ್ತಿದ್ದಂತೆ ಉಪೇಂದ್ರ ಸುದ್ದಿಗೋಷ್ಟಿ ಕರೆದಿದ್ದಾರೆ. ನಾಳೆ 11 ಗಂಟೆಗೆ ನಡೆಯಲಿರುವ ಸುದ್ದಿಗೋಷ್ಟಿಯಲ್ಲಿ ರಾಜಕೀಯ ಪ್ರವೇಶದ ವಿಚಾರವನ್ನು ಉಪೇಂದ್ರ ಅಧಿಕೃತವಾಗಿ ಘೋಷಿಸುತ್ತಾರಾ..? ಉತ್ತರಕ್ಕೆ ನಿರೀಕ್ಷಿಸಿ. ನಾಳೆ (ಅಕ್ಟೋಬರ್ 12,2017)  11 ಗಂಟೆ.

  Related Articles :-

  ರಾಜಕೀಯಕ್ಕೆ ಬರ್ತಾರಾ ಉಪೇಂದ್ರ..? ಯಾವಾಗ ಬರ್ತಾರೆ..? 

 • ರಿಯಲ್ ಸ್ಟಾರ್ ಉಪ್ಪಿ ಈಗ ಹೋಮ್ ಮಿನಿಸ್ಟರ್ 

  upp'is new movie home minister

  ಉಪೇಂದ್ರ ಈಗ ಸಿಕ್ಕಾಪಟ್ಟೆ ಬ್ಯುಸಿಯಾಗುತ್ತಿದ್ದಾರೆ. ಇಷ್ಟೆಲ್ಲ ಬ್ಯುಸಿಯ ನಡುವೆಯೇ ಉಪ್ಪಿ ಇನ್ನೊಂದು ಹೊಸ ಚಿತ್ರ ಸೆಟ್ಟೇರಿದೆ. ಚಿತ್ರದ ಹೆಸರು ಹೋಮ್ ಮಿನಿಸ್ಟರ್. ರಾಜರಾಜೇಶ್ವರಿ ನಗರದ ಸುಬ್ರಹ್ಮಣ್ಯ ದೇವಾಲಯದಲ್ಲಿ ಚಿತ್ರದ ಮುಹೂರ್ತ ಸಿಂಪಲ್ಲಾಗಿ ನೆರವೇರಿದೆ.

  ಚಿತ್ರದ ಹೆಸರು ಹೋಮ್ ಮಿನಿಸ್ಟರ್ ಆದರೂ, ರಾಜಕೀಯದ ಕಥೆ ಚಿತ್ರದಲ್ಲಿಲ್ಲ. ಗಂಡನಿಗೆ ಹೆಂಡತಿಯೇ ಹೋಮ್ ಮಿನಿಸ್ಟರ್ ಎಂಬಂತೆ ಚಿತ್ರದ ಕಥೆ ಇರುತ್ತೆ ಎನ್ನಲಾಗಿದೆ.

  ತೆಲುಗಿನಲ್ಲಿ ಉಪೇಂದ್ರ ಅಭಿನಯದ ನಾಗಾರ್ಜುನ ಚಿತ್ರದ ನಿರ್ಮಿಸಿದ್ದವರೇ, ಈ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ. ನಿರ್ದೇಶಕರೂ ತೆಲುಗಿನವರೇ ಅಂತೆ. 

  ಚಿತ್ರಕ್ಕೆ ರಾಗಿಣಿ ನಾಯಕಿ ಎಂಬ ಸುದ್ದಿ ಇದೆಯಾದರೂ, ಕನ್‍ಫರ್ಮ್ ಆಗಿಲ್ಲ. ಚಿತ್ರ ಕನ್ನಡದಲ್ಲಷ್ಟೇ ಅಲ್ಲ, ತೆಲುಗಿನಲ್ಲೂ ರಿಲೀಸ್ ಆಗಲಿದೆ.

 • ರಿಯಲ್ ಸ್ಟಾರ್ ಚಿತ್ರಕ್ಕೆ ಕ್ರೇಜಿ ಸ್ಟಾರ್ ಮ್ಯೂಸಿಕ್

  ravichandran's music in upendra's i love you

  ಐ ಲವ್ ಯೂ.. ರಿಲೀಸ್‍ಗೂ ಮೊದಲೇ ಕ್ರೇಜ್ ಸೃಷ್ಟಿಸುತ್ತಿರುವ ಈ ಸಿನಿಮಾದಲ್ಲಿ ವಿಶೇಷಗಳ ಮೇಲೆ ವಿಶೇಷಗಳಿವೆ. ಆರ್.ಚಂದ್ರು ನಿರ್ದೇಶನದ ಚಿತ್ರಕ್ಕೆ ಸಂಗೀತ ನೀಡಿರುವುದು ಡಾ.ಕಿರಣ್. ಆದರೆ, ಒಂದು ಹಾಡಿಗೆ ಸಂಗೀತ ನೀಡಿರುವುದು ಕ್ರೇಜಿ ಸ್ಟಾರ್ ರವಿಚಂದ್ರನ್.

  ಚಿತ್ರದ ಹಾಡನ್ನು ಕೇಳಿದ ರವಿಚಂದ್ರನ್, ಸಾಹಿತ್ಯವನ್ನು ಇಷ್ಟಪಟ್ಟಿದ್ದಷ್ಟೇ ಅಲ್ಲದೆ, ಆ ಹಾಡಿಗೆ ತಾವೇ ಸಂಗೀತ ನೀಡೋದಾಗಿ ನಿರ್ಧರಿಸಿದ್ರಂತೆ. ಹೀಗಾಗಿ, ಇದೇ ಮೊದಲ ಬಾರಿಗೆ ಉಪ್ಪಿ ಚಿತ್ರದಲ್ಲಿ ರವಿಚಂದ್ರನ್ ಸಂಗೀತ ಮೇಳೈಸಿದೆ.

  ಈಗಾಗಲೇ ದಾವಣಗೆರೆಯಲ್ಲಿ 3 ಹಾಡುಗಳನ್ನು ಬಿಡುಗಡೆ ಮಾಡಿರುವ ಆರ್.ಚಂದ್ರು, ಇನ್ನೂ 3 ಹಾಡುಗಳನ್ನು ಫೆಬ್ರವರಿ 18ಕ್ಕೆ ಮಂಡ್ಯದಲ್ಲಿ ರಿಲೀಸ್ ಮಾಡಲು ನಿರ್ಧರಿಸಿದ್ದಾರೆ.

 • ರಿಯಲ್ ಸ್ಟಾರ್ ವಸ ಸೆಂಚುರಿ ಸ್ಟಾರ್

  real star vs century star

  ಜೂನ್ 14, ಸ್ಯಾಂಡಲ್‍ವುಡ್ ಸ್ಟಾರ್‍ಗಳಿಬ್ಬರ ಮುಖಾಮುಖಿಗೆ ಸಾಕ್ಷಿಯಾಗಲಿದೆ. ಹೌದು, ಆ ದಿನ ಕನ್ನಡದ ಎರಡು ಬಹುನಿರೀಕ್ಷಿತ ಚಿತ್ರಗಳು ರಿಲೀಸ್ ಆಗುತ್ತಿವೆ. ಆಪ್ತಮಿತ್ರರಾಗಿರುವ ಉಪೇಂದ್ರ ಮತ್ತು ಶಿವರಾಜ್‍ಕುಮಾರ್, ಇಬ್ಬರ ಚಿತ್ರಗಳು ಕೂಡಾ ಒಂದೇ ದಿನ ತೆರೆಗೆ ಬರುತ್ತಿವೆ.

  ಶಿವಣ್ಣ ಅಭಿನಯದ ರುಸ್ತುಂ, ಅದೇ ದಿನ ತೆರೆಗೆ ಬರುತ್ತಿದೆ. ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶಕರಾಗಿರುವ ಚಿತ್ರದಲ್ಲಿ ವಿವೇಕ್ ಒಬೇರಾಯ್ ಕೂಡಾ ನಟಿಸಿದ್ದಾರೆ. ರಚಿತಾ ರಾಮ್, ಒಬೇರಾಯ್‍ಗೆ ಜೋಡಿಯಾದರೆ, ಶ್ರದ್ಧಾ ಶ್ರೀನಾಥ್ ಶಿವಣ್ಣನ ಜೋಡಿ. ಮಯೂರಿ, ಶಿವಣ್ಣನ ತಂಗಿ.

  ಅದೇ ದಿನ ಉಪೇಂದ್ರ ಅಭಿನಯದ ಐ ಲವ್ ಯೂ ರಿಲೀಸ್ ಆಗುತ್ತಿದೆ. ಆ ಚಿತ್ರಕ್ಕೆ ರಚಿತಾ ರಾಮ್ ಹೀರೋಯಿನ್. ಸೋನು ಗೌಡ ಕೂಡಾ ಪ್ರಧಾನ ಪಾತ್ರದಲ್ಲಿರುವ ಚಿತ್ರಕ್ಕೆ ಆರ್.ಚಂದ್ರು ನಿರ್ದೇಶಕ. 

 • ಲವ್ ಲೆಕ್ಚರರ್ ಉಪೇಂದ್ರ

  love lecturer upendra

  ಐ ಲವ್ ಯೂ ಚಿತ್ರದ ಮೂಲಕ ಉಪೇಂದ್ರ ಲೆಕ್ಚರರ್ ಆಗಿದ್ದಾರೆ. ಚಿತ್ರದಲ್ಲಿ ಡಬಲ್ ಶೇಡ್‍ನಲ್ಲಿ ಕಾಣಿಸಿಕೊಳ್ತಿರೋ ಉಪ್ಪಿ, ಕಾಲೇಜು ಹುಡುಗ ಹುಡುಗಿಯರಿಗೆ ಲವ್ ಪಾಠ ಹೇಳಲಿದ್ದಾರೆ. ಐ ಲವ್ ಯೂ ಹೇಳೋದು ಹೇಗೆ ಅನ್ನೋದನ್ನ ಕಲಿಸಿಕೊಡ್ತಾರಂತೆ ಉಪೇಂದ್ರ.

  ಎ ಚಿತ್ರದಲ್ಲಿ ಪ್ರೀತಿ ಪ್ರೇಮ ಎಲ್ಲ ಪುಸ್ತಕದ ಬದನೆಕಾಯ್ ಎಂದಿದ್ದ ಉಪೇಂದ್ರ, ಉಪೇಂದ್ರ ಚಿತ್ರದಲ್ಲಿ ದುಡ್ಡಿದ್ರೆ ಲವ್ ಎಂದಿದ್ದರು. ಪ್ರೀತ್ಸೆಯಲ್ಲಿ ಪಾಗಲ್ ಪ್ರೇಮಿಯಾಗಿದ್ದರು. ಆದರೆ, ಇಲ್ಲಿ ಉಪ್ಪಿ ಬೇರೆಯದ್ದೇ ಸ್ಟೈಲ್. ಜೀವನದಲ್ಲಿ ಪ್ರೀತಿ ಎಷ್ಟು ಮುಖ್ಯ ಅನ್ನೋದನ್ನ ಹೇಳಿಕೊಡ್ತಾರಂತೆ ಉಪ್ಪಿ. 

  ಈ ಸಿನಿಮಾ ನೋಡಿದ ಮೇಲೆ ಪ್ರೇಮಿಗಳ ಸಂಖ್ಯೆ ಜಾಸ್ತಿಯಾಗುತ್ತೆ ಅನ್ನೋ ಕಾನ್ಫಿಡೆನ್ಸ್ ಕೊಡ್ತಾರೆ ನಿರ್ದೇಶಕ ಆರ್.ಚಂದ್ರು. ರಚಿತಾ ರಾಮ್, ಸೋನು ಗೌಡ, ಬ್ರಹ್ಮಾನಂದಂ ಮೊದಲಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ಸಿನಿಮಾ ಮುಂದಿನ ತಿಂಗಳು ಕರ್ನಾಟಕ, ಆಂಧ್ರ, ತೆಲಂಗಾಣದಲ್ಲಿ 1000ಕ್ಕೂ ಹೆಚ್ಚು ಥಿಯೇಟರುಗಳಲ್ಲಿ, ಕನ್ನಡ & ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ.

 • ಲವ್ಲಿ ಬಾಯ್ ಉಪೇಂದ್ರ ಐ ಲವ್ ಯೂ

  i love you test look

  ಉಪೇಂದ್ರ, ಸಿನಿಮಾ ರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟಿದ್ದೇ ಎ ಅನ್ನೋ ವಿಚಿತ್ರ ಸಿನಿಮಾ ಮೂಲಕ. ಹೀಗಾಗಿಯೇ ಏನೋ.. ಹಲವು ಹೀರೋಗಳು ಆರಂಭದ ಚಿತ್ರಗಳಲ್ಲಿ ಕಾಣಿಸಿಕೊಳ್ಳುವಂತಹ ಚಾಕೊಲೇಟ್ ಹೀರೋ, ಲವರ್ ಬಾಯ್‍ನಂತಹ ಪಾತ್ರಗಳು ಉಪ್ಪಿಗೆ ಸಿಕ್ಕಿದ್ದು ಕಡಿಮೆಯೆಂದೇ ಹೇಳಬೇಕು. ಈಗ ಉಪ್ಪಿಗೆ ಅಂತಾದ್ದೊಂದು ಪಾತ್ರ ಕೊಟ್ಟಿದ್ದಾರೆ ಆರ್.ಚಂ

  ಆರ್.ಚಂದ್ರು ನಿರ್ದೇಶನದ ಹೊಸ ಸಿನಿಮಾ ಐ ಲವ್ ಯೂ ಚಿತ್ರದ ಟೆಸ್ಟ್ ಶೂಟ್ ಆಗಿದೆ. ರಗಡ್ ಲುಕ್‍ನಲ್ಲಿಯೇ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಉಪೇಂದ್ರ ಅವರನ್ನು 10 ವರ್ಷ ಚಿಕ್ಕವರನ್ನಾಗಿಸಿ ಚಾಕೊಲೇಟ್ ಹೀರೋ ತರ ಕಾಣುವಂತೆ ಮಾಡಿದ್ದಾರೆ ಚಂದ್ರು.

  ಇದು ಔಟ್ & ಔಟ್ ಲವ್ ಸ್ಟೋರಿಯಂತೆ. ಕನ್ನಡ ಮತ್ತು ತೆಲುಗು ಎರಡರಲ್ಲೂ ಸಿದ್ಧವಾಗುತ್ತಿರುವ ಸಿನಿಮಾ. ಚಂದ್ರುಗಾಗಲೀ, ಉಪ್ಪಿಗಾಗಲೇ ತೆಲುಗು ಚಿತ್ರರಂಗ ಹೊಸದಲ್ಲ.  ರಾಜ್‍ಪ್ರಭಾಕರ್ ಎಂಬುವರುನಿರ್ಮಿಸುತ್ತಿರುವ ಚಿತ್ರಕ್ಕೆ ಮೇ 18 ರಂದು ಮುಹೂರ್ತ ನೆರವೇರಲಿದೆ.

 • ಲೈಫೇನೇ ಟಿ20.. ಲವ್ವು 420..

  i love you song in pakka uppi's style

  ಲೈಫೇನೇ ಟಿ20.. ಲವ್ವು 420.. ಕುಚ್ ಕುಚ್ಚೇ ಸೂಪರ್ ಕಣೋ.. ಹುಡ್ಗೀರೆಲ್ಲ ಚೂಟಿ.. ಹುಡುಗರ ದಿಲ್ ಲೂಟಿ.. ಲೈಫೇ ಎ ಸಿನಿಮಾ ಕಣೋ..

  ನೋ ಡೌಟು. ಇದು ಉಪ್ಪಿ ಸ್ಟೈಲ್ ಹಾಡು. ಐ ಲವ್ ಯೂ ಚಿತ್ರದ್ದು. ಪಕ್ಕಾ ಉಪ್ಪಿ ಸ್ಟೈಲ್ ಹಾಡಿಗೆ ಮುನ್ನ ಪ್ರೀತಿ, ಪ್ರೇಮಕ್ಕೆ ರೋಮಿಯೋ ಜೂಲಿಯೆಟ್‍ಗೆ ಸಖ್ಖತ್ತಾಗಿ ಬೈದಿದ್ದಾರೆ ಉಪ್ಪಿ. ಅವರಿಂದ ಪ್ರೇಮಿಗಳಿಗೆಲ್ಲ ಬೈಸಿರೋದು ಆರ್.ಚಂದ್ರು.

  ಮಾತನಾಡಿ ಮಾಯವಾದೆ ಹಾಡಿನಲ್ಲಿ ಸಿಕ್ಕಾಪಟ್ಟೆ ಬಿಸಿ ಬಿಸಿಯಾಗಿ ಕಾಣಿಸಿಕೊಂಡಿದ್ದ ರಚಿತಾ ರಾಮ್, ಈ ಹಾಡಿನಲ್ಲಿ ಹೇಗಿದ್ದಾರೆ. ಗೊತ್ತಿಲ್ಲ. ಬಿಟ್ಟಿರೋದು ಮೇಕಿಂಗ್ ದೃಶ್ಯಗಳನ್ನಷ್ಟೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಶೀಘ್ರದಲ್ಲಿಯೇ ತೆರೆಗೆ ಬರಲಿದೆ.

 • ಶಶಾಂಕ್-ಉಪ್ಪಿ ಕಾಂಬಿನೇಷನ್ ಸಿನಿಮಾ

  first look of upendra shashank on first look

  ಉಪೇಂದ್ರರ ಸ್ಟೈಲೇ ಬೇರೆ.. ಶಶಾಂಕ್ ಸ್ಟೈಲೇ ಬೇರೆ.. ಉತ್ತರ ಧ್ರುವ.. ದಕ್ಷಿಣ ಧ್ರುವ.. ಈ ಎರಡೂ ಧ್ರುವಗಳು ಒಂದಾದರೆ ಹೇಗಿರುತ್ತೆ..? ಅಲ್ಲೊಂದು ವೈಬ್ರೇಷನ್ ಸೃಷ್ಟಿಯಾಗುತ್ತೆ. ಸದ್ಯಕ್ಕೆ ಅಂತಾದ್ದೊಂದು ವೈಬ್ರೇಷನ್ ಸೃಷ್ಟಿಸಿದೆ ಶಶಾಂಕ್-ಉಪೇಂದ್ರ ಜೋಡಿ.

  ಶಶಾಂಕ್ ನಿರ್ದೇಶನದಲ್ಲಿ ಉಪೇಂದ್ರ ಹೀರೋ ಆಗಿ ನಟಿಸುತ್ತಿದ್ದು, ಕಥೆ ಸಿದ್ಧವಾಗಿದೆ. ಫೆಬ್ರವರಿ ಮೊದಲ ವಾರ ಚಿತ್ರದ ಫಸ್ಟ್‍ಲುಕ್ ಹೊರಬರುತ್ತಿದೆ. ಉಪೇಂದ್ರ ತಮ್ಮ ಕೆರಿಯರ್‍ನಲ್ಲಿ ಇದುವರೆಗೂ ಮಾಡದೇ ಇರುವಂತಹ ಪಾತ್ರ ಸೃಷ್ಟಿಸಿದ್ದೇನೆ ಎನ್ನುತ್ತಿದ್ದಾರೆ ನಿರ್ದೇಶಕ ಶಶಾಂಕ್.

  ಐ ಲವ್ ಯೂ ಚಿತ್ರ ರಿಲೀಸ್ ಆಗುವ ಹೊತ್ತಿಗೆ, ಶಶಾಂಕ್ ಸಿನಿಮಾ ಸೆಟ್ಟೇರಿರುತ್ತೆ. ಏಪ್ರಿಲ್‍ನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗುತ್ತೆ.

 • ಶಶಾಂಕ್-ಉಪ್ಪಿ ಚಿತ್ರಕ್ಕೆ ನಿಶ್ವಿಕಾ ನಾಯ್ಡು

  nishvika naidu in upendra - shashank's film

  ನಿಶ್ವಿಕಾ ನಾಯ್ಡು, ಇತ್ತೀಚೆಗೆ ಕನ್ನಡದಲ್ಲಿ ಬ್ಯುಸಿಯಾಗುತ್ತಿರುವ ನಟಿಯರಲ್ಲಿ ಒಬ್ಬರು. ವಾಸು ನಾನ್ ಪಕ್ಕಾ ಕಮರ್ಷಿಯಲ್, ಅಮ್ಮ ಐ ಲವ್ ಯು, ಪಡ್ಡೆಹುಲಿ ಚಿತ್ರಗಳ ಮೂಲಕ ಗಮನ ಸೆಳೆದಿದ್ದ ನಿಶ್ವಿಕಾ ನಾಯ್ಡು, ಈಗ ಉಪ್ಪಿಗೆ ಜೋಡಿಯಾಗಿದ್ದಾರೆ. 

  ಅದರಲ್ಲೂ ಕನ್ನಡದ ಸ್ಟಾರ್ ನಿರ್ದೇಶಕ ಶಶಾಂಕ್ ನಿರ್ದೇಶನ ಹಾಗೂ ನಿರ್ಮಾಣದ ಹೊಸ ಚಿತ್ರಕ್ಕೆ ನಿಶ್ವಿಕಾ ಹೀರೋಯಿನ್. ಬುದ್ದಿವಂತ 2 ಮುಗಿದ ಕೂಡಲೇ ಈ ಚಿತ್ರ ಶುರುವಾಗಲಿದೆ. ಶಶಾಂಕ್ ಸದ್ಯಕ್ಕೆ ಪ್ರಿ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ.

 • ಶೋಭಾ ಸಿಟ್ಟಾದರು..ಉಪ್ಪಿ ಅಂಥಾದ್ದೇನು ಹೇಳಿದರು..?

  shoba angry on upendra

  ರಿಯಲ್ ಸ್ಟಾರ್ ಉಪೇಂದ್ರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ) ಹೆಸರಿನ ಹೊಸ ರಾಜಕೀಯ ಘೋಷಿಸಿದ್ದಾರೆ. ಪ್ರಜಾಕೀಯ ಹೆಸರಿನಲ್ಲಿ ಅಭಿಯಾನ ಆರಂಭಿಸಿದ್ದ ಉಪೇಂದ್ರ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಯಲಿದ್ದಾರೆ. ಪತ್ರಕರ್ತರಿಂದಲೇ ಪಕ್ಷದ ಅಧಿಕೃತ ಘೋಷಣೆ ಮಾಡಿಸಿರುವ ಉಪೇಂದ್ರ `ನಾವು ಈಗಾಗಲೇ ಗೆದ್ದಿದ್ದೇವೆ, ನಮ್ಮನ್ನು ಪ್ರೋತ್ಸಾಹಿಸಿ ಗೆಲ್ಲಬೇಕಾದವರು ನೀವು' ಎಂದಿದ್ದಾರೆ. ಅದು ಎಂದಿನ ಉಪ್ಪಿ ಸ್ಟೈಲ್.

  ಕಾರ್ಯಕ್ರಮಕ್ಕೆ ಉಪ್ಪಿ ಅಷ್ಟೇ ಅಲ್ಲ, ಅವರ ಕುಟುಂಬದವರು ಹಾಗೂ ಅಭಿಮಾನಿಗಳೂ ಖಾಕಿಧಾರಿಗಳಾಗಿ ಬಂದಿದ್ದರು. ಪ್ರಜಾಕೀಯ ಹೆಸರಿನ ವೆಬ್‍ಸೈಟ್‍ನ್ನೂ ಆರಂಭಿಸಿದರು. ಆದರೆ, ಇದೆಲ್ಲದರ ಮಧ್ಯೆ ಅವರು ಹೇಳಿದ್ದ ಒಂದು ಮಾತು ವಿವಾದ ಸೃಷ್ಟಿಸಿದೆ.

  ದೇಶದಲ್ಲಿ ನಗರಗಳಿಗಿಂತ ಮೊದಲು ಹಳ್ಳಿಗಳು ಸ್ಮಾರ್ಟ್ ಆಗಬೇಕು. ನರೇಂದ್ರ ಮೋದಿ ನಗರಗಳನ್ನು ಸ್ಮಾರ್ಟ್ ಮಾಡಲು ಹೊರಟಿದ್ದಾರೆ. ಆದರೆ, ದೇಶ ಅಭಿವೃದ್ಧಿಯಾಗಬೇಕೆಂದರೆ, ಹಳ್ಳಿಗಳು ಸ್ಮಾರ್ಟ್ ಆದರೆ ಮಾತ್ರ ಸಾಧ್ಯ ಎಂದಿದ್ದಾರೆ. ಇದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರನ್ನು ಕೆರಳಿಸಿದೆ.

  ಉಪೇಂದ್ರ ತಮಗೆ ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಕೇಸ್ ಹಾಕುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಶೋಭಾ.

 • ಸಿದ್ಧಗಂಗಾ ಶ್ರೀಗಳ ಅನಾರೋಗ್ಯ - ಐ ಲವ್ ಯೂ ಆಡಿಯೋ ರಿಲೀಸ್ ಮುಂದಕ್ಕೆ..

  i love you audio release postponed

  ನಿರ್ದೇಶಕ ಆರ್.ಚಂದ್ರು, ಐ ಲವ್ ಯೂ ಚಿತ್ರದ ಆಡಿಯೋ ಬಿಡುಗಡೆಯನ್ನು ಮುಂದೂಡಿದ್ದಾರೆ. ಫೆಬ್ರವರಿ 14ರಂದು ಸಿನಿಮಾ ರಿಲೀಸ್‍ಗೆ ಪ್ಲಾನ್ ಮಾಡಿರುವ ಆರ್.ಚಂದ್ರು, ಇಂದು ದಾವಣಗೆರೆಯಲ್ಲಿ ಆಡಿಯೋ ರಿಲೀಸ್ ಇಟ್ಟುಕೊಂಡಿದ್ದರು. ತೆಲುಗು ಹಾಗೂ ಕನ್ನಡ ಚಿತ್ರರಂಗದ ಸ್ಟಾರ್‍ಗಳು ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಆರ್.ಚಂದ್ರು, ಆಡಿಯೋ ಬಿಡುಗಡೆ ಮುಂದೂಡಿದ್ದಾರೆ. ಇದಕ್ಕೆ ಕಾರಣ, ಸಿದ್ಧಗಂಗಾ ಶ್ರೀಗಳ ಆನಾರೋಗ್ಯ.

  `ನಾಡಿನ ಜನರೆಲ್ಲ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಈ ವೇಳೆ ಅದ್ಧೂರಿಯಾಗಿ ಆಡಿಯೋ ಬಿಡುಗಡೆ ಮಾಡುವುದಕ್ಕೆ ಮನಸ್ಸು ಒಪ್ಪಲಿಲ್ಲ. ಹೀಗಾಗಿ ಕಾರ್ಯಕ್ರಮ ಮುಂದೂಡಿದ್ದೇವೆ. ಮುಂದಿನ ದಿನಾಂಕವನ್ನು ಶೀಘ್ರದಲ್ಲಿಯೇ ತಿಳಿಸುತ್ತೇವೆ'' ಎಂದಿದ್ದಾರೆ ಆರ್.ಚಂದ್ರು.

  ಉಪೇಂದ್ರ, ರಚಿತಾ ರಾಮ್, ಸೋನು ಗೌಡ ಪ್ರಧಾನ ಪಾತ್ರದಲ್ಲಿರುವ ಸಿನಿಮಾ, ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಿದೆ.

 • ಸುದೀಪ್, ಪುನೀತ್, ಉಪೇಂದ್ರ ಒಟ್ಟಿಗೇ ನಟಿಸ್ತಾರಾ..?

  sudeep, upendra, puneeth in chandragupta chanakya movie

  ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ... ಮೂವರೂ ಒಟ್ಟಿಗೇ.. ಒಂದೇ ಸಿನಿಮಾದಲ್ಲಿ ನಟಿಸ್ತಾರಾ..? ಹಾಗೇನಾದರೂ ಆಗಿಬಿಟ್ಟರೆ.. ಅದು ಚಿತ್ರರಂಗದ ಪಾಲಿನ ದೊಡ್ಡ ಹಬ್ಬವೇ ಆಗೋದು ಖಂಡಿತಾ. ಅದೊಂಥರಾ ಸಂಕ್ರಾಂತಿ, ದೀಪಾವಳಿ, ಯುಗಾದಿಯನ್ನು ಒಟ್ಟಿಗೇ ಆಚರಿಸಿದಂತೆ. ಆದರೆ, ಅಂಥಾದ್ದೊಂದು ಕನಸು ಕಂಡಿದ್ದಾರೆ ನಿರ್ಮಾಪಕ ಮುನಿರತ್ನ.

  ಸದ್ಯಕ್ಕೆ ಕುರುಕ್ಷೇತ್ರ ಚಿತ್ರವನ್ನು ಸಿದ್ಧ ಮಾಡುತ್ತಿರುವ ಮುನಿರತ್ನ ಅವರಿಗೆ ಚಾಣಕ್ಯ-ಚಂದ್ರಗುಪ್ತರ ಕಥೆಯನ್ನು ಸಿನಿಮಾ ಮಾಡಬೇಕು ಎಂಬ ಆಸೆ ಹುಟ್ಟಿಕೊಂಡಿದೆ. ಸುದೀಪ್, ಅಲೆಕ್ಸಾಂಡರ್ ಪಾತ್ರ ಮಾಡಬೇಕು ಅನ್ನೊದು ಮುನಿರತ್ನ ಅವರ ಆಸೆ. ಮಗಧ ಸಾಮ್ರಾಜ್ಯ ಸ್ಥಾಪನೆಯ ಆ ಕಥೆಯನ್ನು ಅದ್ದೂರಿಯಾಗಿ ತೆರೆಯ ಮೇಲೆ ತರಬೇಕು ಅನ್ನೋದು ಮುನಿರತ್ನ ಕನಸು.

  ಕುರುಕ್ಷೇತ್ರ ಚಿತ್ರ ಮಾರ್ಚ್‍ನಲ್ಲಿ ಬಿಡುಗಡೆಯಾಗಲಿದ್ದು, ನಂತರ ಚುನಾವಣೆ ಬರಲಿದೆ. ಚುನಾವಣೆ ಮುಗಿದ ಮೇಲೆ ಈ ಕಥೆಯತ್ತ ಗಮನ ಹರಿಸೋದಾಗಿ ಹೇಳಿದ್ದಾರೆ ಮುನಿರತ್ನ. ಮುನಿರತ್ನ ಕನಸು ನನಸಾಗಲಿ ಎಂದು ಅಭಿಮಾನಿಗಳೂ ಕೇಳಿಕೊಳ್ತಾರೆ ಬಿಡಿ.

 • ಸೆ.18 - ಕನ್ನಡದ ಮೂರು ವಜ್ರಗಳ ಹುಟ್ಟುಹಬ್ಬ

  3 super stars birthday today

  ಸೆಪ್ಟೆಂಬರ್ 18, ಕನ್ನಡ ಚಿತ್ರರಂಗಕ್ಕೆ ಅಪರೂಪದ ದಿನ. ಇದು ಸ್ಟಾರ್ ಡೇ. ಸಾಹಸ ಸಿಂಹ ವಿಷ್ಣುವರ್ಧನ್​ಗೆ ಇದು 67ನೇ ಹುಟ್ಟುಹಬ್ಬ. ಅವರು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಜೀವಂತ. ಆ ಮಹಾನ್ ಕಲಾವಿದನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

  ಹುಟ್ಟುಹಬ್ಬಕ್ಕಾಗಿ ರಾಜಸಿಂಹ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಅದು ವಿಷ್ಣು ಅವರ ಅಳಿಯ ಅನಿರುದ್ಧ ಅಭಿನಯದ ಚಿತ್ರ. ಆಡುಗೋಡಿಯ ನ್ಯಾಷನಲ್ ಡೈರಿ ರಿಸರ್ಚ್ ಇನ್​ಸ್ಟಿಟ್ಯೂಟ್ 402 ಸಸಿ ನೆಡುವ ಮೂಲಕ ವಿಷ್ಣು ಹುಟ್ಟುಹಬ್ಬದ ಸಡಗರದಲ್ಲಿ ತೊಡಗಿಕೊಳ್ಳುತ್ತಿದೆ. ಅಭಿಮಾನಿಗಳು ಎಂದಿನಂತೆ ಅಭಿಮಾನ್ ಸ್ಟುಡಿಯೋದಲ್ಲಿ ಜನ್ಮ ದಿನ ಆಚರಿಸುತ್ತಿದ್ದಾರೆ. ರಾಜ್ಯದ ನೂರಾರು ವಿಷ್ಣು ಅಭಿಮಾನಿ ಸಂಗಗಳು, ರಕ್ತದಾನ, ಅನ್ನದಾನ ಆಯೋಜಿಸಿವೆ. ಹಲವೆಡೆ ವಿಷ್ನು ಚಿತ್ರಗಳ ಹಾಡುಗಳ ಆರ್ಕೆಸ್ಟ್ರಾ ಮಾಡಲು ಸಿದ್ಧತೆ ನಡೆದಿದೆ.

  ಇನ್ನು, ನಟ, ನಿರ್ದೇಶಕ, ನಿರ್ಮಾಪಕರಾಗಿದ್ದ ಉಪೇಂದ್ರಗೆ, ಇದು 49 ನೇ ಹುಟ್ಟುಹಬ್ಬ. ಈ ಬಾರಿ ಅವರು ರಾಜಕಾರಣಕ್ಕೂ ಪ್ರವೇಶ ಮಾಡಿರುವುದರಿಂದ ಅದು ಇನ್ನೊಂದು ವಿಶೇಷ. ಕತ್ರಿಗುಪ್ಪೆಯ ಮನೆಯಲ್ಲಿ ಸರಳವಾಗಿ ಸಂಭ್ರಮ ನಡೆಯಲಿದೆ. ಕೇಕ್ ತರಬೇಡಿ ಎಂದು ಉಪೇಂದ್ರ ಅವರೇ ಮನವಿ ಮಾಡಿದ್ದರೂ, ಅಭಿಮಾನಿಗಳು ಕೇಕ್​ನೊಂದಿಗೇ ಬರುವ ಸಾಧ್ಯತೆಗಳಿವೆ. 

  ಉಪ್ಪಿ ಮನೆ ಮುಂದೆ ಈಗಾಗಲೇ ಬ್ಯಾನರ್​ಗಳೂ ಬಿದ್ದಿವೆ. ಅವರ ಹುಟ್ಟುಹಬ್ಬಕ್ಕಾಗಿ ಪುಸ್ತಕವೊಂದು ಬಿಡುಗಡೆಯಾಗುತ್ತಿದೆ. ಇನ್ನು ಉಪೇಂದ್ರ ಅಭಿಮಾನಿ ಸಂಘಗಳೂ ಸಮಾಜಮುಖಿ ಕೆಲಸಗಳ ಮೂಲಕ ಉಪ್ಪಿಗೆ ಶುಭಕೋರುತ್ತಿವೆ.

  ಇನ್ನು ಚಿತ್ರನಟಿ ಶೃತಿಗೆ ಇದು 42 ನೇ ಹುಟ್ಟುಹಬ್ಬ. ಕಾಯಕವೇ ಕೈಲಾಸ ಎಂದು ನಂಬಿಕೊಂಡಿರುವ ಶೃತಿ, ಈ ಬಾರಿ  ಸಾಯಿ ಪ್ರಕಾಶ್ ನಿರ್ದೇಶನದ ‘ಅಬ್ಬೆ ತುಮಕೂರು ವಿಶ್ವರಾಧ್ಯರು’ ಚಿತ್ರದ ಸೆಟ್​ನಲ್ಲಿ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಕೆಲವು ಸಮಾಜಮುಖಿ ಕೆಲಸಗಳಲ್ಲೂ ತೊಡಗಿಕೊಳ್ಳುತ್ತಿದ್ದಾರೆ.

   

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery