` upendra, - chitraloka.com | Kannada Movie News, Reviews | Image

upendra,

 • ಲವ್ ಲೆಕ್ಚರರ್ ಉಪೇಂದ್ರ

  love lecturer upendra

  ಐ ಲವ್ ಯೂ ಚಿತ್ರದ ಮೂಲಕ ಉಪೇಂದ್ರ ಲೆಕ್ಚರರ್ ಆಗಿದ್ದಾರೆ. ಚಿತ್ರದಲ್ಲಿ ಡಬಲ್ ಶೇಡ್‍ನಲ್ಲಿ ಕಾಣಿಸಿಕೊಳ್ತಿರೋ ಉಪ್ಪಿ, ಕಾಲೇಜು ಹುಡುಗ ಹುಡುಗಿಯರಿಗೆ ಲವ್ ಪಾಠ ಹೇಳಲಿದ್ದಾರೆ. ಐ ಲವ್ ಯೂ ಹೇಳೋದು ಹೇಗೆ ಅನ್ನೋದನ್ನ ಕಲಿಸಿಕೊಡ್ತಾರಂತೆ ಉಪೇಂದ್ರ.

  ಎ ಚಿತ್ರದಲ್ಲಿ ಪ್ರೀತಿ ಪ್ರೇಮ ಎಲ್ಲ ಪುಸ್ತಕದ ಬದನೆಕಾಯ್ ಎಂದಿದ್ದ ಉಪೇಂದ್ರ, ಉಪೇಂದ್ರ ಚಿತ್ರದಲ್ಲಿ ದುಡ್ಡಿದ್ರೆ ಲವ್ ಎಂದಿದ್ದರು. ಪ್ರೀತ್ಸೆಯಲ್ಲಿ ಪಾಗಲ್ ಪ್ರೇಮಿಯಾಗಿದ್ದರು. ಆದರೆ, ಇಲ್ಲಿ ಉಪ್ಪಿ ಬೇರೆಯದ್ದೇ ಸ್ಟೈಲ್. ಜೀವನದಲ್ಲಿ ಪ್ರೀತಿ ಎಷ್ಟು ಮುಖ್ಯ ಅನ್ನೋದನ್ನ ಹೇಳಿಕೊಡ್ತಾರಂತೆ ಉಪ್ಪಿ. 

  ಈ ಸಿನಿಮಾ ನೋಡಿದ ಮೇಲೆ ಪ್ರೇಮಿಗಳ ಸಂಖ್ಯೆ ಜಾಸ್ತಿಯಾಗುತ್ತೆ ಅನ್ನೋ ಕಾನ್ಫಿಡೆನ್ಸ್ ಕೊಡ್ತಾರೆ ನಿರ್ದೇಶಕ ಆರ್.ಚಂದ್ರು. ರಚಿತಾ ರಾಮ್, ಸೋನು ಗೌಡ, ಬ್ರಹ್ಮಾನಂದಂ ಮೊದಲಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ಸಿನಿಮಾ ಮುಂದಿನ ತಿಂಗಳು ಕರ್ನಾಟಕ, ಆಂಧ್ರ, ತೆಲಂಗಾಣದಲ್ಲಿ 1000ಕ್ಕೂ ಹೆಚ್ಚು ಥಿಯೇಟರುಗಳಲ್ಲಿ, ಕನ್ನಡ & ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ.

 • ಲವ್ಲಿ ಬಾಯ್ ಉಪೇಂದ್ರ ಐ ಲವ್ ಯೂ

  i love you test look

  ಉಪೇಂದ್ರ, ಸಿನಿಮಾ ರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟಿದ್ದೇ ಎ ಅನ್ನೋ ವಿಚಿತ್ರ ಸಿನಿಮಾ ಮೂಲಕ. ಹೀಗಾಗಿಯೇ ಏನೋ.. ಹಲವು ಹೀರೋಗಳು ಆರಂಭದ ಚಿತ್ರಗಳಲ್ಲಿ ಕಾಣಿಸಿಕೊಳ್ಳುವಂತಹ ಚಾಕೊಲೇಟ್ ಹೀರೋ, ಲವರ್ ಬಾಯ್‍ನಂತಹ ಪಾತ್ರಗಳು ಉಪ್ಪಿಗೆ ಸಿಕ್ಕಿದ್ದು ಕಡಿಮೆಯೆಂದೇ ಹೇಳಬೇಕು. ಈಗ ಉಪ್ಪಿಗೆ ಅಂತಾದ್ದೊಂದು ಪಾತ್ರ ಕೊಟ್ಟಿದ್ದಾರೆ ಆರ್.ಚಂ

  ಆರ್.ಚಂದ್ರು ನಿರ್ದೇಶನದ ಹೊಸ ಸಿನಿಮಾ ಐ ಲವ್ ಯೂ ಚಿತ್ರದ ಟೆಸ್ಟ್ ಶೂಟ್ ಆಗಿದೆ. ರಗಡ್ ಲುಕ್‍ನಲ್ಲಿಯೇ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಉಪೇಂದ್ರ ಅವರನ್ನು 10 ವರ್ಷ ಚಿಕ್ಕವರನ್ನಾಗಿಸಿ ಚಾಕೊಲೇಟ್ ಹೀರೋ ತರ ಕಾಣುವಂತೆ ಮಾಡಿದ್ದಾರೆ ಚಂದ್ರು.

  ಇದು ಔಟ್ & ಔಟ್ ಲವ್ ಸ್ಟೋರಿಯಂತೆ. ಕನ್ನಡ ಮತ್ತು ತೆಲುಗು ಎರಡರಲ್ಲೂ ಸಿದ್ಧವಾಗುತ್ತಿರುವ ಸಿನಿಮಾ. ಚಂದ್ರುಗಾಗಲೀ, ಉಪ್ಪಿಗಾಗಲೇ ತೆಲುಗು ಚಿತ್ರರಂಗ ಹೊಸದಲ್ಲ.  ರಾಜ್‍ಪ್ರಭಾಕರ್ ಎಂಬುವರುನಿರ್ಮಿಸುತ್ತಿರುವ ಚಿತ್ರಕ್ಕೆ ಮೇ 18 ರಂದು ಮುಹೂರ್ತ ನೆರವೇರಲಿದೆ.

 • ಲೈಫೇನೇ ಟಿ20.. ಲವ್ವು 420..

  i love you song in pakka uppi's style

  ಲೈಫೇನೇ ಟಿ20.. ಲವ್ವು 420.. ಕುಚ್ ಕುಚ್ಚೇ ಸೂಪರ್ ಕಣೋ.. ಹುಡ್ಗೀರೆಲ್ಲ ಚೂಟಿ.. ಹುಡುಗರ ದಿಲ್ ಲೂಟಿ.. ಲೈಫೇ ಎ ಸಿನಿಮಾ ಕಣೋ..

  ನೋ ಡೌಟು. ಇದು ಉಪ್ಪಿ ಸ್ಟೈಲ್ ಹಾಡು. ಐ ಲವ್ ಯೂ ಚಿತ್ರದ್ದು. ಪಕ್ಕಾ ಉಪ್ಪಿ ಸ್ಟೈಲ್ ಹಾಡಿಗೆ ಮುನ್ನ ಪ್ರೀತಿ, ಪ್ರೇಮಕ್ಕೆ ರೋಮಿಯೋ ಜೂಲಿಯೆಟ್‍ಗೆ ಸಖ್ಖತ್ತಾಗಿ ಬೈದಿದ್ದಾರೆ ಉಪ್ಪಿ. ಅವರಿಂದ ಪ್ರೇಮಿಗಳಿಗೆಲ್ಲ ಬೈಸಿರೋದು ಆರ್.ಚಂದ್ರು.

  ಮಾತನಾಡಿ ಮಾಯವಾದೆ ಹಾಡಿನಲ್ಲಿ ಸಿಕ್ಕಾಪಟ್ಟೆ ಬಿಸಿ ಬಿಸಿಯಾಗಿ ಕಾಣಿಸಿಕೊಂಡಿದ್ದ ರಚಿತಾ ರಾಮ್, ಈ ಹಾಡಿನಲ್ಲಿ ಹೇಗಿದ್ದಾರೆ. ಗೊತ್ತಿಲ್ಲ. ಬಿಟ್ಟಿರೋದು ಮೇಕಿಂಗ್ ದೃಶ್ಯಗಳನ್ನಷ್ಟೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಶೀಘ್ರದಲ್ಲಿಯೇ ತೆರೆಗೆ ಬರಲಿದೆ.

 • ಶಶಾಂಕ್-ಉಪ್ಪಿ ಕಾಂಬಿನೇಷನ್ ಸಿನಿಮಾ

  first look of upendra shashank on first look

  ಉಪೇಂದ್ರರ ಸ್ಟೈಲೇ ಬೇರೆ.. ಶಶಾಂಕ್ ಸ್ಟೈಲೇ ಬೇರೆ.. ಉತ್ತರ ಧ್ರುವ.. ದಕ್ಷಿಣ ಧ್ರುವ.. ಈ ಎರಡೂ ಧ್ರುವಗಳು ಒಂದಾದರೆ ಹೇಗಿರುತ್ತೆ..? ಅಲ್ಲೊಂದು ವೈಬ್ರೇಷನ್ ಸೃಷ್ಟಿಯಾಗುತ್ತೆ. ಸದ್ಯಕ್ಕೆ ಅಂತಾದ್ದೊಂದು ವೈಬ್ರೇಷನ್ ಸೃಷ್ಟಿಸಿದೆ ಶಶಾಂಕ್-ಉಪೇಂದ್ರ ಜೋಡಿ.

  ಶಶಾಂಕ್ ನಿರ್ದೇಶನದಲ್ಲಿ ಉಪೇಂದ್ರ ಹೀರೋ ಆಗಿ ನಟಿಸುತ್ತಿದ್ದು, ಕಥೆ ಸಿದ್ಧವಾಗಿದೆ. ಫೆಬ್ರವರಿ ಮೊದಲ ವಾರ ಚಿತ್ರದ ಫಸ್ಟ್‍ಲುಕ್ ಹೊರಬರುತ್ತಿದೆ. ಉಪೇಂದ್ರ ತಮ್ಮ ಕೆರಿಯರ್‍ನಲ್ಲಿ ಇದುವರೆಗೂ ಮಾಡದೇ ಇರುವಂತಹ ಪಾತ್ರ ಸೃಷ್ಟಿಸಿದ್ದೇನೆ ಎನ್ನುತ್ತಿದ್ದಾರೆ ನಿರ್ದೇಶಕ ಶಶಾಂಕ್.

  ಐ ಲವ್ ಯೂ ಚಿತ್ರ ರಿಲೀಸ್ ಆಗುವ ಹೊತ್ತಿಗೆ, ಶಶಾಂಕ್ ಸಿನಿಮಾ ಸೆಟ್ಟೇರಿರುತ್ತೆ. ಏಪ್ರಿಲ್‍ನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗುತ್ತೆ.

 • ಶಶಾಂಕ್-ಉಪ್ಪಿ ಚಿತ್ರಕ್ಕೆ ನಿಶ್ವಿಕಾ ನಾಯ್ಡು

  nishvika naidu in upendra - shashank's film

  ನಿಶ್ವಿಕಾ ನಾಯ್ಡು, ಇತ್ತೀಚೆಗೆ ಕನ್ನಡದಲ್ಲಿ ಬ್ಯುಸಿಯಾಗುತ್ತಿರುವ ನಟಿಯರಲ್ಲಿ ಒಬ್ಬರು. ವಾಸು ನಾನ್ ಪಕ್ಕಾ ಕಮರ್ಷಿಯಲ್, ಅಮ್ಮ ಐ ಲವ್ ಯು, ಪಡ್ಡೆಹುಲಿ ಚಿತ್ರಗಳ ಮೂಲಕ ಗಮನ ಸೆಳೆದಿದ್ದ ನಿಶ್ವಿಕಾ ನಾಯ್ಡು, ಈಗ ಉಪ್ಪಿಗೆ ಜೋಡಿಯಾಗಿದ್ದಾರೆ. 

  ಅದರಲ್ಲೂ ಕನ್ನಡದ ಸ್ಟಾರ್ ನಿರ್ದೇಶಕ ಶಶಾಂಕ್ ನಿರ್ದೇಶನ ಹಾಗೂ ನಿರ್ಮಾಣದ ಹೊಸ ಚಿತ್ರಕ್ಕೆ ನಿಶ್ವಿಕಾ ಹೀರೋಯಿನ್. ಬುದ್ದಿವಂತ 2 ಮುಗಿದ ಕೂಡಲೇ ಈ ಚಿತ್ರ ಶುರುವಾಗಲಿದೆ. ಶಶಾಂಕ್ ಸದ್ಯಕ್ಕೆ ಪ್ರಿ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ.

 • ಶೋಭಾ ಸಿಟ್ಟಾದರು..ಉಪ್ಪಿ ಅಂಥಾದ್ದೇನು ಹೇಳಿದರು..?

  shoba angry on upendra

  ರಿಯಲ್ ಸ್ಟಾರ್ ಉಪೇಂದ್ರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ) ಹೆಸರಿನ ಹೊಸ ರಾಜಕೀಯ ಘೋಷಿಸಿದ್ದಾರೆ. ಪ್ರಜಾಕೀಯ ಹೆಸರಿನಲ್ಲಿ ಅಭಿಯಾನ ಆರಂಭಿಸಿದ್ದ ಉಪೇಂದ್ರ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಯಲಿದ್ದಾರೆ. ಪತ್ರಕರ್ತರಿಂದಲೇ ಪಕ್ಷದ ಅಧಿಕೃತ ಘೋಷಣೆ ಮಾಡಿಸಿರುವ ಉಪೇಂದ್ರ `ನಾವು ಈಗಾಗಲೇ ಗೆದ್ದಿದ್ದೇವೆ, ನಮ್ಮನ್ನು ಪ್ರೋತ್ಸಾಹಿಸಿ ಗೆಲ್ಲಬೇಕಾದವರು ನೀವು' ಎಂದಿದ್ದಾರೆ. ಅದು ಎಂದಿನ ಉಪ್ಪಿ ಸ್ಟೈಲ್.

  ಕಾರ್ಯಕ್ರಮಕ್ಕೆ ಉಪ್ಪಿ ಅಷ್ಟೇ ಅಲ್ಲ, ಅವರ ಕುಟುಂಬದವರು ಹಾಗೂ ಅಭಿಮಾನಿಗಳೂ ಖಾಕಿಧಾರಿಗಳಾಗಿ ಬಂದಿದ್ದರು. ಪ್ರಜಾಕೀಯ ಹೆಸರಿನ ವೆಬ್‍ಸೈಟ್‍ನ್ನೂ ಆರಂಭಿಸಿದರು. ಆದರೆ, ಇದೆಲ್ಲದರ ಮಧ್ಯೆ ಅವರು ಹೇಳಿದ್ದ ಒಂದು ಮಾತು ವಿವಾದ ಸೃಷ್ಟಿಸಿದೆ.

  ದೇಶದಲ್ಲಿ ನಗರಗಳಿಗಿಂತ ಮೊದಲು ಹಳ್ಳಿಗಳು ಸ್ಮಾರ್ಟ್ ಆಗಬೇಕು. ನರೇಂದ್ರ ಮೋದಿ ನಗರಗಳನ್ನು ಸ್ಮಾರ್ಟ್ ಮಾಡಲು ಹೊರಟಿದ್ದಾರೆ. ಆದರೆ, ದೇಶ ಅಭಿವೃದ್ಧಿಯಾಗಬೇಕೆಂದರೆ, ಹಳ್ಳಿಗಳು ಸ್ಮಾರ್ಟ್ ಆದರೆ ಮಾತ್ರ ಸಾಧ್ಯ ಎಂದಿದ್ದಾರೆ. ಇದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರನ್ನು ಕೆರಳಿಸಿದೆ.

  ಉಪೇಂದ್ರ ತಮಗೆ ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಕೇಸ್ ಹಾಕುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಶೋಭಾ.

 • ಸಿದ್ಧಗಂಗಾ ಶ್ರೀಗಳ ಅನಾರೋಗ್ಯ - ಐ ಲವ್ ಯೂ ಆಡಿಯೋ ರಿಲೀಸ್ ಮುಂದಕ್ಕೆ..

  i love you audio release postponed

  ನಿರ್ದೇಶಕ ಆರ್.ಚಂದ್ರು, ಐ ಲವ್ ಯೂ ಚಿತ್ರದ ಆಡಿಯೋ ಬಿಡುಗಡೆಯನ್ನು ಮುಂದೂಡಿದ್ದಾರೆ. ಫೆಬ್ರವರಿ 14ರಂದು ಸಿನಿಮಾ ರಿಲೀಸ್‍ಗೆ ಪ್ಲಾನ್ ಮಾಡಿರುವ ಆರ್.ಚಂದ್ರು, ಇಂದು ದಾವಣಗೆರೆಯಲ್ಲಿ ಆಡಿಯೋ ರಿಲೀಸ್ ಇಟ್ಟುಕೊಂಡಿದ್ದರು. ತೆಲುಗು ಹಾಗೂ ಕನ್ನಡ ಚಿತ್ರರಂಗದ ಸ್ಟಾರ್‍ಗಳು ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಆರ್.ಚಂದ್ರು, ಆಡಿಯೋ ಬಿಡುಗಡೆ ಮುಂದೂಡಿದ್ದಾರೆ. ಇದಕ್ಕೆ ಕಾರಣ, ಸಿದ್ಧಗಂಗಾ ಶ್ರೀಗಳ ಆನಾರೋಗ್ಯ.

  `ನಾಡಿನ ಜನರೆಲ್ಲ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಈ ವೇಳೆ ಅದ್ಧೂರಿಯಾಗಿ ಆಡಿಯೋ ಬಿಡುಗಡೆ ಮಾಡುವುದಕ್ಕೆ ಮನಸ್ಸು ಒಪ್ಪಲಿಲ್ಲ. ಹೀಗಾಗಿ ಕಾರ್ಯಕ್ರಮ ಮುಂದೂಡಿದ್ದೇವೆ. ಮುಂದಿನ ದಿನಾಂಕವನ್ನು ಶೀಘ್ರದಲ್ಲಿಯೇ ತಿಳಿಸುತ್ತೇವೆ'' ಎಂದಿದ್ದಾರೆ ಆರ್.ಚಂದ್ರು.

  ಉಪೇಂದ್ರ, ರಚಿತಾ ರಾಮ್, ಸೋನು ಗೌಡ ಪ್ರಧಾನ ಪಾತ್ರದಲ್ಲಿರುವ ಸಿನಿಮಾ, ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಿದೆ.

 • ಸುದೀಪ್, ಪುನೀತ್, ಉಪೇಂದ್ರ ಒಟ್ಟಿಗೇ ನಟಿಸ್ತಾರಾ..?

  sudeep, upendra, puneeth in chandragupta chanakya movie

  ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ... ಮೂವರೂ ಒಟ್ಟಿಗೇ.. ಒಂದೇ ಸಿನಿಮಾದಲ್ಲಿ ನಟಿಸ್ತಾರಾ..? ಹಾಗೇನಾದರೂ ಆಗಿಬಿಟ್ಟರೆ.. ಅದು ಚಿತ್ರರಂಗದ ಪಾಲಿನ ದೊಡ್ಡ ಹಬ್ಬವೇ ಆಗೋದು ಖಂಡಿತಾ. ಅದೊಂಥರಾ ಸಂಕ್ರಾಂತಿ, ದೀಪಾವಳಿ, ಯುಗಾದಿಯನ್ನು ಒಟ್ಟಿಗೇ ಆಚರಿಸಿದಂತೆ. ಆದರೆ, ಅಂಥಾದ್ದೊಂದು ಕನಸು ಕಂಡಿದ್ದಾರೆ ನಿರ್ಮಾಪಕ ಮುನಿರತ್ನ.

  ಸದ್ಯಕ್ಕೆ ಕುರುಕ್ಷೇತ್ರ ಚಿತ್ರವನ್ನು ಸಿದ್ಧ ಮಾಡುತ್ತಿರುವ ಮುನಿರತ್ನ ಅವರಿಗೆ ಚಾಣಕ್ಯ-ಚಂದ್ರಗುಪ್ತರ ಕಥೆಯನ್ನು ಸಿನಿಮಾ ಮಾಡಬೇಕು ಎಂಬ ಆಸೆ ಹುಟ್ಟಿಕೊಂಡಿದೆ. ಸುದೀಪ್, ಅಲೆಕ್ಸಾಂಡರ್ ಪಾತ್ರ ಮಾಡಬೇಕು ಅನ್ನೊದು ಮುನಿರತ್ನ ಅವರ ಆಸೆ. ಮಗಧ ಸಾಮ್ರಾಜ್ಯ ಸ್ಥಾಪನೆಯ ಆ ಕಥೆಯನ್ನು ಅದ್ದೂರಿಯಾಗಿ ತೆರೆಯ ಮೇಲೆ ತರಬೇಕು ಅನ್ನೋದು ಮುನಿರತ್ನ ಕನಸು.

  ಕುರುಕ್ಷೇತ್ರ ಚಿತ್ರ ಮಾರ್ಚ್‍ನಲ್ಲಿ ಬಿಡುಗಡೆಯಾಗಲಿದ್ದು, ನಂತರ ಚುನಾವಣೆ ಬರಲಿದೆ. ಚುನಾವಣೆ ಮುಗಿದ ಮೇಲೆ ಈ ಕಥೆಯತ್ತ ಗಮನ ಹರಿಸೋದಾಗಿ ಹೇಳಿದ್ದಾರೆ ಮುನಿರತ್ನ. ಮುನಿರತ್ನ ಕನಸು ನನಸಾಗಲಿ ಎಂದು ಅಭಿಮಾನಿಗಳೂ ಕೇಳಿಕೊಳ್ತಾರೆ ಬಿಡಿ.

 • ಸೆ.18 - ಕನ್ನಡದ ಮೂರು ವಜ್ರಗಳ ಹುಟ್ಟುಹಬ್ಬ

  3 super stars birthday today

  ಸೆಪ್ಟೆಂಬರ್ 18, ಕನ್ನಡ ಚಿತ್ರರಂಗಕ್ಕೆ ಅಪರೂಪದ ದಿನ. ಇದು ಸ್ಟಾರ್ ಡೇ. ಸಾಹಸ ಸಿಂಹ ವಿಷ್ಣುವರ್ಧನ್​ಗೆ ಇದು 67ನೇ ಹುಟ್ಟುಹಬ್ಬ. ಅವರು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಜೀವಂತ. ಆ ಮಹಾನ್ ಕಲಾವಿದನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

  ಹುಟ್ಟುಹಬ್ಬಕ್ಕಾಗಿ ರಾಜಸಿಂಹ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಅದು ವಿಷ್ಣು ಅವರ ಅಳಿಯ ಅನಿರುದ್ಧ ಅಭಿನಯದ ಚಿತ್ರ. ಆಡುಗೋಡಿಯ ನ್ಯಾಷನಲ್ ಡೈರಿ ರಿಸರ್ಚ್ ಇನ್​ಸ್ಟಿಟ್ಯೂಟ್ 402 ಸಸಿ ನೆಡುವ ಮೂಲಕ ವಿಷ್ಣು ಹುಟ್ಟುಹಬ್ಬದ ಸಡಗರದಲ್ಲಿ ತೊಡಗಿಕೊಳ್ಳುತ್ತಿದೆ. ಅಭಿಮಾನಿಗಳು ಎಂದಿನಂತೆ ಅಭಿಮಾನ್ ಸ್ಟುಡಿಯೋದಲ್ಲಿ ಜನ್ಮ ದಿನ ಆಚರಿಸುತ್ತಿದ್ದಾರೆ. ರಾಜ್ಯದ ನೂರಾರು ವಿಷ್ಣು ಅಭಿಮಾನಿ ಸಂಗಗಳು, ರಕ್ತದಾನ, ಅನ್ನದಾನ ಆಯೋಜಿಸಿವೆ. ಹಲವೆಡೆ ವಿಷ್ನು ಚಿತ್ರಗಳ ಹಾಡುಗಳ ಆರ್ಕೆಸ್ಟ್ರಾ ಮಾಡಲು ಸಿದ್ಧತೆ ನಡೆದಿದೆ.

  ಇನ್ನು, ನಟ, ನಿರ್ದೇಶಕ, ನಿರ್ಮಾಪಕರಾಗಿದ್ದ ಉಪೇಂದ್ರಗೆ, ಇದು 49 ನೇ ಹುಟ್ಟುಹಬ್ಬ. ಈ ಬಾರಿ ಅವರು ರಾಜಕಾರಣಕ್ಕೂ ಪ್ರವೇಶ ಮಾಡಿರುವುದರಿಂದ ಅದು ಇನ್ನೊಂದು ವಿಶೇಷ. ಕತ್ರಿಗುಪ್ಪೆಯ ಮನೆಯಲ್ಲಿ ಸರಳವಾಗಿ ಸಂಭ್ರಮ ನಡೆಯಲಿದೆ. ಕೇಕ್ ತರಬೇಡಿ ಎಂದು ಉಪೇಂದ್ರ ಅವರೇ ಮನವಿ ಮಾಡಿದ್ದರೂ, ಅಭಿಮಾನಿಗಳು ಕೇಕ್​ನೊಂದಿಗೇ ಬರುವ ಸಾಧ್ಯತೆಗಳಿವೆ. 

  ಉಪ್ಪಿ ಮನೆ ಮುಂದೆ ಈಗಾಗಲೇ ಬ್ಯಾನರ್​ಗಳೂ ಬಿದ್ದಿವೆ. ಅವರ ಹುಟ್ಟುಹಬ್ಬಕ್ಕಾಗಿ ಪುಸ್ತಕವೊಂದು ಬಿಡುಗಡೆಯಾಗುತ್ತಿದೆ. ಇನ್ನು ಉಪೇಂದ್ರ ಅಭಿಮಾನಿ ಸಂಘಗಳೂ ಸಮಾಜಮುಖಿ ಕೆಲಸಗಳ ಮೂಲಕ ಉಪ್ಪಿಗೆ ಶುಭಕೋರುತ್ತಿವೆ.

  ಇನ್ನು ಚಿತ್ರನಟಿ ಶೃತಿಗೆ ಇದು 42 ನೇ ಹುಟ್ಟುಹಬ್ಬ. ಕಾಯಕವೇ ಕೈಲಾಸ ಎಂದು ನಂಬಿಕೊಂಡಿರುವ ಶೃತಿ, ಈ ಬಾರಿ  ಸಾಯಿ ಪ್ರಕಾಶ್ ನಿರ್ದೇಶನದ ‘ಅಬ್ಬೆ ತುಮಕೂರು ವಿಶ್ವರಾಧ್ಯರು’ ಚಿತ್ರದ ಸೆಟ್​ನಲ್ಲಿ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಕೆಲವು ಸಮಾಜಮುಖಿ ಕೆಲಸಗಳಲ್ಲೂ ತೊಡಗಿಕೊಳ್ಳುತ್ತಿದ್ದಾರೆ.

   

 • ಸ್ಸಾರಿ ಪಪ್ಪಾ.. ಇನ್ಮುಂದೆ ತಪ್ಪು ಮಾಡಲ್ಲ - ಕಣ್ಣೀರಿಟ್ಟ ರಚಿತಾ ರಾಮ್

  rachita ram cries over her role in i love you

  ಡಿಂಪಲ್ ಕ್ವೀನ್ ರಚಿತಾ ರಾಮ್ ಕಣ್ಣೀರಿಟ್ಟಿದ್ದಾರೆ. ಅದೂ ಮಾಧ್ಯಮವೊಂದರ ಸಂದರ್ಶನದಲ್ಲಿ. ಸದಾ ನಗುವಿಗೆ ಹೆಸರಾದ ಡಿಂಪಲ್ ಕ್ವೀನ್ ಅಪ್ಪನ ಕ್ಷಮೆ ಕೇಳಿ ಕಣ್ಣೀರಿಟ್ಟಿದ್ದಾರೆ. ಅವರ ಕಣ್ಣೀರಿಗೆ ಕಾರಣ ಐ ಲವ್ ಯೂ ಸಿನಿಮಾ ಹಾಗೂ ಆ ಬೋಲ್ಡ್ ದೃಶ್ಯಗಳು.

  ರಚಿತಾ ಅವರ ತಾಯಿ, ಅಕ್ಕ ಸಿನಿಮಾ ನೋಡಿ ಮೆಚ್ಚಿಕೊಂಡರೂ ರಚಿತಾ ಅವರ ತಂದೆ ಸಿನಿಮಾ ನೋಡಿಲ್ಲವಂತೆ. ಅದಕ್ಕೆ ಕಾರಣ ಇಷ್ಟೆ, ರಚಿತಾ ರಾಮ್‍ನನ್ನು ಹೀರೋಯಿನ್ ಆಗಿ ಹಾಗೆ ನೋಡಬಹುದೇನೋ.. ಆದರೆ, ಒಬ್ಬ ತಂದೆಯಾಗಿ ಹಾಗೆ ನೋಡಲು ಸಾಧ್ಯವಿಲ್ಲ ಎಂದಿದ್ದಾರಂತೆ ರಚಿತಾ ಅವರ ತಂದೆ. ಇನ್ನು ಮುಂದೆ ಹಾಗೆ ಮಾಡಲ್ಲ ಎಂದಿರುವ ರಚಿತಾ ರಾಮ್‍ಗೆ, ಅಪ್ಪ ಒಂದು ಮಾತು ಹೇಳಿದ್ರಂತೆ.

  ನೀನು ಸಿನಿಮಾ ಇಂಡಸ್ಟ್ರಿಗೆ ರಚಿತಾ ರಾಮ್ ಇರಬಹುದು. ನನಗೆ ಪುಟ್ಟ ಮಗು ಎಂದರಂತೆ. ಅದನ್ನು ನೆನಪಿಸಿಕೊಂಡು ಕಣ್ಣೀರಿಟ್ಟು ಕ್ಷಮೆ ಕೇಳಿದ್ದಾರೆ ರಚಿತಾ ರಾಮ್.

  ಇದೆಲ್ಲದರ ನಡುವೆಯೂ ಐ ಲವ್ ಯೂ ಸಿನಿಮಾ ಬಾಕ್ಸಾಫೀಸ್‍ನಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ಸೂಪರ್ ಹಿಟ್ ಸಾಲಿಗೆ ಸೇರಿದೆ.

 • ಹಳೇ ಉಪ್ಪಿ.. ಕಮಿಂಗ್ ಬ್ಯಾಕ್..!

  old philosopher uppi is back

  ಈ ಪ್ರೀತಿ ಪ್ರೇಮ ಎಲ್ಲ ಪುಸ್ತಕದ್ ಬದ್ನೇಕಾಯಿ. ಈ ಜಗತ್ತು ಅನ್ನೋ ದೊಡ್ಡ ಪ್ರಪಂಚದಲ್ಲಿ ಪ್ರೀತಿ ಅನ್ನೋದು ಪುಟ್ಟ ಸರ್ಕಲ್ಲು. ಪ್ರೀತಿ ಅನ್ನೋದು ಕೊಟ್ಟು ತಗೊಳ್ಳೋ ವ್ಯವಹಾರ ಅಷ್ಟೆ.. ಹೀಗೆ  ಎ, ಉಪೇಂದ್ರ  ಚಿತ್ರದಲ್ಲಿ ಉಪೇಂದ್ರನ ಡೈಲಾಗುಗಳು ಬೆಂಕಿಯಂತಿದ್ದವರು. ಅರಗಿಸಿಕೊಳ್ಳಲು ಕಷ್ಟವಾಗಿದ್ದ ಡೈಲಾಗುಗಳೇ ಉಪ್ಪಿಯನ್ನು ಸ್ಟಾರ್ ಮಾಡಿದ್ದವು. ಈಗ ಆ ಹಳೇ ಉಪ್ಪಿ ಮತ್ತೆ ಬಂದಿದ್ದಾರೆ. ಐ ಲವ್ ಯೂ ಮೂಲಕ.

  ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳ ಜೊತೆಯಲ್ಲೇ ಎಂಟ್ರಿ ಕೊಟ್ಟಿದ್ದಾರೆ. ಇದು ಉಪ್ಪಿ ಅಭಿನಯದ ಐ ಲವ್ ಯೂ ಟೀಸರ್‍ನ ಹೈಲೈಟ್ಸ್. ಐ ಲವ್ ಯೂ ಅಂದ್ರೆ ಏನು..? ಐ ಲವ್ ಯೂ ಅನ್ನೋ ಡೈಲಾಗ್‍ನ್ನೇ ಏಕೆ ಹೇಳ್ತಾರೆ..? ಅದರ ಬಗ್ಗೆ ಉಪ್ಪಿ ಬೇರೆಯದ್ದೇ ಸ್ಟೈಲ್‍ನಲ್ಲಿ ಹೇಳಿದ್ದಾರೆ. ಇದು ಪಸ್ಟ್ ಲುಕ್ ಮಾತ್ರ. ಟೀಸರ್ ಬರೋದು ಬಾಕಿ ಇದೆ.

  ಆರ್.ಚಂದ್ರು ನಿರ್ದೇಶನದ ಸಿನಿಮಾ ಈ ಕಾರಣಕ್ಕೇ ಸದ್ದು ಮಾಡ್ತಿದೆ. ಉಪ್ಪಿ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಸೋನು ಗೌಡ ಇದ್ದಾರೆ. ಹಾಸಿಗೆಯಲ್ಲಿ ಬರಿಮೈಯ್ಯಲ್ಲಿ ಕುಳಿತುಕೊಂಡು ಬಾಯಲ್ಲಿ ರೋಸ್ ಕಚ್ಚಿಕೊಂಡಿರುವ ಉಪೇಂದ್ರ ಅವರ ಲುಕ್ಕು, ಮತ್ತೆ ಎ, ಉಪೇಂದ್ರ ಚಿತ್ರಗಳನ್ನೇ ನೆನಪಿಸುವ ಹಾಗಿದೆ. 

 • ಹೆಲ್ತ್ ಇನ್ಷೂರೆನ್ಸ್.. ಉಪ್ಪಿ ಐಡಿಯಾ ನಿಜಕ್ಕೂ ಸೂಪರ್..!

  upendra's new health idea

  ನಿಮ್ಮ ಬಳಿ ಹೆಲ್ತ್ ಇನ್ಷೂರೆನ್ಸ್ ಇರುತ್ತೆ. ಆದರೆ, ಆಸ್ಪತ್ರೆಯಲ್ಲಿ ಅದು ಈ ಕಾಯಿಲೆಗೆ ಅಪ್ಲೈ ಆಗಲ್ಲ. ಫುಲ್ ದುಡ್ಡು ಕಟ್ಟಿ ಅಂತಾರೆ. ವೆಹಿಕಲ್ ಇನ್ಷೂರೆನ್ಸ್ ಕೂಡಾ ಅಷ್ಟೆ. ನೀವು ಹಣ ಕಟ್ಟಿರುತ್ತೀರಿ. ಆದರೆ, ಅದು ನಿಮ್ಮ ಗಾಡಿಯಲ್ಲಿ ಯಾವ ಸಮಸ್ಯೆ ಇರುತ್ತೋ.. ಆ ಸಮಸ್ಯೆಗೆ ಮಾತ್ರ ಅಪ್ಲೈ ಆಗಲ್ಲ. ಫುಲ್ ದುಡ್ಡು ಕಟ್ಟಿ ರಿಪೇರಿ ಮಾಡಿಸಬೇಕು. ಲೈಫ್ ಇನ್ಷೂರೆನ್ಸ್ ಇರುತ್ತೆ. ಅಕಾಲ ಸಾವಿಗೀಡಾದಾಗಲೂ ನಮಗೆ ಗೊತ್ತೇ ಇಲ್ಲದ ರೂಲ್ಸ್ ಹೇಳಿ ಯಾಮಾರಿಸುವವರಿಗೇನೂ ಕಡಿಮೆಯಿಲ್ಲ. ಇಂಥಾ ಸಮಸ್ಯೆಗಳಿಗೆಲ್ಲ ಉಪೇಂದ್ರ ಒಂದು ಪರಿಹಾರವನ್ನು ಮುಂದಿಟ್ಟಿದ್ದಾರೆ.

  ಒಂದು ದೇಹ, ಒಂದೇ ಜೀವ. ಜೀವನಕ್ಕೆ ಒಂದೇ ಇನ್ಷೂರೆನ್ಸ್. ಇದು ಉಪೇಂದ್ರ ಅವರ ತಲೆಯಲ್ಲಿ ಮೊಳೆತಿರುವ ಐಡಿಯಾ. ಅವರ ಐಡಿಯಾಗಳನ್ನ ಒಂದ್ಸಲ ನೋಡಿ.

  ಒಂದೇ ದೇಶ..ಒಂದೇ ಟ್ಯಾಕ್ಸ್ - ಜಿಎಸ್‍ಟಿ

  ಒಂದು ದೇಹ, ಒಂದೇ ಇನ್ಷೂರೆನ್ಸ್

  ಗಾಡಿಗಳು ಆಕ್ಸಿಡೆಂಟ್ ಆಗಬಹುದು, ಆಗದೇ ಇರಬಹುದು. 

  ಗಾಡಿಗಳು ಕಳವಾಗಬಹುದು, ಆಗದೇ ಇರಬಹುದು

  ಆದರೂ ಪ್ರತಿ ಗಾಡಿಗೂ ಇನ್ಷೂರೆನ್ಸ್ ಕಡ್ಡಾಯ. 

  ಆದರೆ, 

  ಪ್ರತಿ ದೇಹಕ್ಕೂ ರೋಗ ತಪ್ಪಿದ್ದಲ್ಲ. ಹಾಗಾದರೆ, ಅಂದ ಮೇಲೆ ಹೆಲ್ತ್ ಇನ್ಷೂರೆನ್ಸ್ ಕಡ್ಡಾಯ ಯಾಕಿಲ್ಲ..? ಈಗಿರುವ ಸುಮಾರು ಇನ್ಷೂರೆನ್ಸ್‍ಗಳು ಕೆಲವು ಕಾಯಿಲೆಗಳನ್ನು ಮಾತ್ರ ಕವರ್ ಮಾಡುತ್ವೆ. ಇನ್ಷೂರೆನ್ಸ್ ಕವರ್ ಆಗುವ ಕಾಯಿಲೆಗಳಷ್ಟೇ ನಮಗೆ ಬರಲ್ಲ. ಹೆಲ್ತ್‍ಗೂ ಒಂದು, ಲೈಫ್‍ಗೂ ಒಂದು, ಆಕ್ಸಿಡೆಂಟ್‍ಗೂ ಒಂದು ಅನ್ನೋ ಬದಲು ಒಂದೇ ಇನ್ಷೂರೆನ್ಸ್. ಒಂದು ದೇಹಕ್ಕೆ ಒಂದೇ ಇನ್ಷೂರೆನ್ಸ್. 

  ಐಡಿಯಾ ಏನೋ ಸೂಪರ್ ಆಗಿದೆ. ನೀವು ಹೆಲ್ತ್ ಇನ್ಷೂರೆನ್ಸ್ ಮಾಡಿಸಿದ್ದರೆ, ಯಾವುದೇ ಕಾಯಿಲೆ ಇರಲಿ, ಅದನ್ನು ಇನ್ಷೂರೆನ್ಸ್ ಕವರ್ ಮಾಡುತ್ತೆ ಅನ್ನೋದಾದರೆ, ಪ್ರತಿಯೊಬ್ಬರೂ ಇನ್ಷೂರೆನ್ಸ್ ಮಾಡಿಸ್ತಾರೆ. ಆದರೆ, ಇನ್ಷೂರೆನ್ಸ್ ಕೊಡುವಾಗಲೇ ನೂರಾರು ಕಂಡೀಷನ್ಸ್ ಹಾಕಿದರೆ ಹೇಗೆ..? ಇನ್ಷೂರೆನ್ಸ್‍ನಲ್ಲಿ ಹೇಳಿದ ಕಾಯಿಲೆಗಳಷ್ಟೇ ನಮಗೆ ಬರ್ತವಾ..? ಹಾಗೇನೂ ಇರಲ್ಲವಲ್ಲಾ..? ಉಪೇಂದ್ರ ಅವರ ಈ ಐಡಿಯಾ ಜಾರಿಯಾದರೆ ಹೇಗಿರುತ್ತೆ. ಐಡಿಯಾ ಉಪೇಂದ್ರ ಅವರದ್ದು. ಅಭಿಪ್ರಾಯ ಮೂಡಿಸುವವರು ನೀವೇ. ಪ್ರಜೆಗಳು.

 • ಹೋಮ್ ಮಿನಿಸ್ಟರ್' ಉಪ್ಪಿಗೆ `ಶಿವಲಿಂಗ'ನ ವೇದಿಕಾ ಜೋಡಿ

  uoendra in himeminister

  ಉಪೇಂದ್ರ ಅವರ ಹೊಸ ಚಿತ್ರ ಹೋಮ್ ಮಿನಿಸ್ಟರ್‍ಗೆ ನಾಯಕಿಯಾಗಿ ವೇದಿಕಾ ಆಯ್ಕೆಯಾಗಿದ್ದಾರೆ. ಸಂಗಮ, ಶಿವಲಿಂಗ ನಂತರ ವೇದಿಕಾ ನಟಿಸುತ್ತಿರುವ ಇನ್ನೊಂದು ಚಿತ್ರ ಹೋಮ್ ಮಿನಿಸ್ಟರ್. 

  ಚಿತ್ರದ ನಿರ್ದೇಶಕ ಯಾರು ಎಂಬುದು ಕೂಡಾ ಸಸ್ಪೆನ್ಸ್ ಆಗಿಯೇ ಇತ್ತು. ಚಿತ್ರದ ಡೈರೆಕ್ಟರ್ ಶ್ರೀಹರಿ. ಶ್ರೀಹರಿ, ಕನ್ನಡಕ್ಕೆ ಹೊಸಬರಾದರೂ, ತೆಲುಗಿನಲ್ಲಿ ಸ್ಟಾರ್ ಕಥೆಗಾರ. ಮಹೇಶ್ ಬಾಬು ನಟಿಸುತ್ತಿರುವ `ಭರತ್ ಆನೆ ನೇನು' ಚಿತ್ರದ ಕಥೆ ಇವರದ್ದೇ. ಮಹೇಶ್ ಬಾಬು ಅವರ ಮುಂದಿನ ಚಿತ್ರದ ಡೈರೆಕ್ಟರ್ ಆಗಿ ಫಿಕ್ಸ್ ಆಗಿರುವ ಶ್ರೀಹರಿ, ಕನ್ನಡದಲ್ಲಿ ನಿರ್ದೇಶಕರಾಗಿ ಪ್ರಥಮ ಪ್ರಯೋಗಕ್ಕಿಳಿದಿದ್ಧಾರೆ.

  ಚಿತ್ರದ ಸಂಗೀತ ನಿರ್ದೇಶಕ ಮಹಮದ್ ಗಿಬ್ರಾನ್. ಕಮಲ್ ಹಾಸನ್ ಅವರ ವಿಶ್ವರೂಪಂ-2 ಚಿತ್ರಕ್ಕೆ ಸಂಗಿತ ನೀಡಿರುವ ನಿರ್ದೇಶಕ. ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ.

  Related Articles :-

  ರಿಯಲ್ ಸ್ಟಾರ್ ಉಪ್ಪಿ ಈಗ ಹೋಮ್ ಮಿನಿಸ್ಟರ್ 

 • ಹೌರಾ..ಹೌರಾ.. ಪ್ರಿಯಾಂಕಾ ಉಪೇಂದ್ರ ಮಗಳು ಚಿತ್ರರಂಗಕ್ಕೆ.!

  upendra's daughter

  ಇತ್ತೀಚೆಗಷ್ಟೇ ಉಪೇಂದ್ರ ಅವರ ಅಣ್ಣನ ಮಗ, ಪ್ರಿಯಾಂಕಾ ಉಪೇಂದ್ರ ಅವರ ಜೊತೆ ಸಿನಿಮಾದಲ್ಲಿ ನಟಿಸುತ್ತಿರುವುದು ಸುದ್ದಿಯಾಗಿತ್ತು. ಈಗ ಉಪೇಂದ್ರ ದಂಪತಿಯ ಪುಟ್ಟ ಮಗಳ ಸರದಿ. ಉಪೇಂದ್ರ ಅವರ ಮಗಳು ಐಶ್ವರ್ಯಾ ಸಿನಿಮಾದಲ್ಲಿ ಬಣ್ಣ ಹಚ್ಚಲು ಸಿದ್ಧವಾಗಿದ್ದಾಳೆ. ಅದೂ, ತಾಯಿ ಪ್ರಿಯಾಂಕಾ ಅವರ ಜೊತೆಯಲ್ಲೇ.

  ಪ್ರಿಯಾಂಕಾ ಉಪೇಂದ್ರ, ಹೌರಾ ಬ್ರಿಡ್ಜ್ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ನಿರ್ದೇಶಕ ಲೋಹಿತ್. ಮಮ್ಮಿ ಚಿತ್ರದ ಭರ್ಜರಿ ಸುದ್ದಿ ಮಾಡಿದ್ದ ಲೋಹಿತ್, ಈಗ ಹೌರಾ ಬ್ರಿಡ್ಜ್ ಹೆಸರಿನಲ್ಲಿ ಸಿನಿಮಾ ಮಾಡಲು ಸಿದ್ಧರಾಗಿದ್ದಾರೆ.

  ಹಾಗೆ ನೋಡಿದ್ರೆ, ಐಶ್ವರ್ಯಾ, ಮಮ್ಮಿ ಚಿತ್ರದಲ್ಲೇ ಬಣ್ಣ ಹಚ್ಚಬೇಕಿತ್ತು. ಆದರೆ, ಇನ್ನೂ ಚಿಕ್ಕ ಹುಡುಗಿ ಎಂಬ ಕಾರಣಕ್ಕೆ ಪ್ರಿಯಾಂಕಾ ಅವರೇ ಬೇಡ ಎಂದಿದ್ದರಂತೆ. ಈಗ ಮತ್ತೊಮ್ಮೆ ಹೌರಾ ಬ್ರಿಡ್ಜ್ ಚಿತ್ರ ಶುರು ಮಾಡಿದಾಗ, ಇನ್ನೊಮ್ಮೆ ನಿರ್ದೇಶಕರು ಐಶ್ವರ್ಯಾಗೆ ಒಂದು ರೋಲ್ ನೀಡುವ ಪ್ರಸ್ತಾಪ ಮುಂದಿಟ್ಟರಂತೆ. ಈ ಬಾರಿ ಇಲ್ಲ ಎನ್ನಲು ಸಾಧ್ಯವಾಗಿಲ್ಲ. 

  ಅಲ್ಲದೆ, ಚಿತ್ರದ ಬಹುಪಾಲು ಚಿತ್ರೀಕರಣ ನಡೆಯುವುದು ಕೊಲ್ಕೊತ್ತಾದಲ್ಲಿ. ಅದು ಪ್ರಿಯಾಂಕಾ ಅವರ ತವರು ಮನೆಯೂ ಹೌದು. ಅಲ್ಲಿ ಮಗಳನ್ನು ನೋಡಿಕೊಳ್ಳಲು ತಾಯಿಯ ನೆರವೂ ಸಿಗುತ್ತೆ. ಹೀಗಾಗಿ ಒಪ್ಪಿಕೊಂಡೆ ಎಂದಿದ್ದಾರೆ ಪ್ರಿಯಾಂಕಾ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery