` upendra, - chitraloka.com | Kannada Movie News, Reviews | Image

upendra,

 • ಜಿಎಸ್ಟಿ ಎಂದರೇನು..? ಉಪೇಂದ್ರ ಹೇಳಿದರು ನೋಡಿ

  uppi's tweet

  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್‌ಟಿ ಕುರಿತು ಜನರಿಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಉದ್ಯಮಿಗಳಿಗೂ ಅರ್ಥವಾಗಿಲ್ಲ. ಚಾರ್ಟೆಡ್ ಅಕೌಂಟೆಂಟುಗಳೂ ತಲೆ ಕೆಡಿಸಿಕೊಂಡಿದ್ದಾರೆ. ಹೀಗಿರುವಾಗಲೇ ಜಿಎಸ್ಟಿ ಬಗ್ಗೆ ಉಪೇಂದ್ರ ತನ್ನ ಅನಿಸಿಕೆ ಹೇಳಿದ್ದಾರೆ.

  ‘ಡಿಮಾನಿಟೈಸೇಷನ್ ಹಾಗೂ ಜಿಎಸ್‌ಟಿ ದೇಶದಲ್ಲಿಯ ಎಲ್ಲ ಜನರಿಗೂ ಉಚಿತ ಶಿಕ್ಷಣ ಹಾಗೂ ಮುಕ್ತ ಆರೋಗ್ಯಕ್ಕೆ ಕಾರಣವಾಗಲಿದೆ’ ಎಂದು ಉಪ್ಪಿ ಟ್ವೀಟ್‌ ಮಾಡಿದ್ದಾರೆ. ಉಪೇಂದ್ರ ಚಿತ್ರರಂಗದಲ್ಲಿ ಬುದ್ದಿವಂತ ಎಂದೇ ಗುರುತಿಸಿಕೊಂಡಿರುವ ನಟ.

  ಅವರಿಗೇನು ಅರ್ಥವಾಗಿದೆಯೋ..ಏನೋ.. ಉಪ್ಪಿ ಟ್ವೀಟ್ ಅಂತೂ ಭರ್ಜರಿ ಸದ್ದು ಮಾಡ್ತಿದೆ.

 • ಜೂನ್ 14ಕ್ಕೆ ಸೆಂಚುರಿ ಸ್ಟಾರ್ V/s ರಿಯಲ್ ಸ್ಟಾರ್

  century star vs real star

  ವರಮಹಾಲಕ್ಷ್ಮಿ ಹಬ್ಬಕ್ಕೆ ದರ್ಶನ್, ಸುದೀಪ್ ಮತ್ತು ರಕ್ಷಿತ್ ಶೆಟ್ಟಿ ಚಿತ್ರಗಳು ಒಟ್ಟಿಗೇ  ರಿಲೀಸ್ ಆಗುತ್ತಿವೆ ಎಂಬ ಸುದ್ದಿ ಮೊನ್ನೆ ಮೊನ್ನೆಯಷ್ಟೇ ಹೊರಬಿದ್ದಿದೆ. ಈಗ ಅದಕ್ಕೂ ಮೊದಲೇ ಮತ್ತೊಂದು ಸ್ಯಾಂಡಲ್‍ವುಡ್ ಸ್ಟಾರ್‍ವಾರ್ ಜೂನ್‍ನಲ್ಲಿ ನಡೆಯಲಿದೆ. 

  ಜೂನ್ 14ಕ್ಕೆ ಶಿವಣ್ಣ ಮತ್ತು ಉಪೇಂದ್ರ ಇಬ್ಬರೂ ಮುಖಾಮುಖಿಯಾಗುತ್ತಿದ್ದಾರೆ. ರವಿವರ್ಮ ನಿರ್ದೇಶನದ ರುಸ್ತುಂ ಒಂದು ಕಡೆ ರಿಲೀಸ್ ಆದರೆ, ಆರ್.ಚಂದ್ರು ನಿರ್ದೇಶನದ ಐ ಲವ್ ಯೂ ಕೂಡಾ ಅದೇ ದಿನ ರಿಲೀಸ್ ಘೋಷಿಸಿಕೊಂಡಿದೆ. ವಿಶೇಷವೆಂದರೆ, ಐ ಲವ್ ಯೂನಲ್ಲಿ ರಚಿತಾ ರಾಮ್ ಹೀರೋಯಿನ್ ಆದರೆ, ರುಸ್ತುಂನಲ್ಲಿ ನಾಯಕಿ ಅಲ್ಲದಿದ್ದರೂ, ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. 

 • ಡಿಂಪಲ್ ಕ್ವೀನ್ ಹಿಂದೆ ಉಪ್ಪಿ ಅಲೆದಾಟ

  i love you film lyrical video released

  ಎ ಚಿತ್ರದಲ್ಲಿ ಚಾಂದಿನಿ ಹಿಂದೆ, ಪ್ರೀತ್ಸೆ ಚಿತ್ರದಲ್ಲಿ ಸೋನಾಲಿ ಬೇಂದ್ರೆ ಹಿಂದೆ, ಉಪೇಂದ್ರ ಚಿತ್ರದಲ್ಲಿ ರವೀನಾ ಟಂಡನ್, ದಾಮಿನಿ, ಪ್ರೇಮಾ ಹಿಂದೆ ಪ್ರೀತಿಗಾಗಿ ಅಲೆದಾಡಿದ್ದ ಉಪ್ಪಿ, ಈಗ ರಚಿತಾ ರಾಮ್ ಬೆನ್ನು ಬಿದ್ದಿದ್ದಾರೆ. ಪ್ರೀತ್ಸೆ ಪ್ರೀತ್ಸೆ ಎನ್ನುತ್ತಿದ್ದಾರೆ. ಐ ಲವ್ ಯೂ ಎನ್ನುತ್ತಿದ್ದಾರೆ. ಐ ಲವ್ ಯೂ ಚಿತ್ರದಲ್ಲಿ.

  ಐ ಲವ್ ಯೂ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆಯಾಗಿದೆ. ಒಂದಾನೊಂದು ಕಾಲದಿಂದ ಹಿಂದೆ ಬಂದೆ ಅಂದಿನಿಂದ.. ಎಂದು ಶುರುವಾಗುವ ಹಾಡು, ಪ್ರೇಕ್ಷಕರನ್ನು ಥ್ರಿಲ್ಲಾಗಿಸಿದೆ. ಆರ್. ಚಂದ್ರು ಕಥೆ, ಚಿತ್ರಕಥೆ ಬರೆದು ನಿರ್ಮಿಸಿ, ನಿರ್ದೇಶಿಸಿರುವ ಚಿತ್ರ ಐ ಲವ್ ಯೂ. ಆರ್ಯ ದಕ್ಷಿಣ್ ಸಂಗೀತ ಸಂಯೋಜನೆಯ ಹಾಡನ್ನು ಸುಚಿತ್ ಸುರೇಶ್ ಹಾಡಿದ್ದಾರೆ.

 • ಡಿಂಪಲ್ ಕ್ವೀನ್‍ಗೆ ಪ್ರಿಯಾಂಕಾ ಉಪೇಂದ್ರ ಕ್ಲಾಸ್

  priyanka upendra angry over rachita ram

  ನಟಿ ಪ್ರಿಯಾಂಕಾ ಉಪೇಂದ್ರ ಗರಂ ಆಗಿದ್ದಾರೆ. ಅದೂ ತಮ್ಮ ಪತಿ ಉಪೇಂದ್ರ ಅಭಿನಯದ ಐ ಲವ್ ಯೂ ಚಿತ್ರದ ಹೀರೋಯಿನ್ ರಚಿತಾ ರಾಮ್ ಮೇಲೆ. ಹಾಗಂತ, ರಚಿತಾ ರಾಂ & ಉಪ್ಪಿ ಬೋಲ್ಡ್ ಸೀನ್‍ಗಳ ಬಗ್ಗೆ ಕೋಪಗೊಂಡಿದ್ದಾರೆ ಎಂದುಕೊಂಡರೆ ಅದು ತಪ್ಪು. ಆ ಸೀನ್‍ಗಳ ಬಗ್ಗೆ ಪ್ರಿಯಾಂಕಾ ಅವರಿಗೆ ಯಾವ ತಕರಾರೂ ಇಲ್ಲ. ಅವರ ತಕರಾರು ಇರೋದು ರಚಿತಾ ರಾಮ್ ಮೇಲೆ.

  ರಚಿತಾ ರಾಮ್ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಆ ಹಾಡಿನ ಚಿತ್ರೀಕರಣ ವೇಳೆ ನಾವಿಬ್ಬರೇ ಇದ್ದೆವು. ಛಾಯಾಗ್ರಹಕರಿದ್ದರು ಎಂದೆಲ್ಲ ಹೇಳಿಕೊಳ್ಳೋದ್ರ ಹಿಂದಿನ ಉದ್ದೇಶವೇ ಅರ್ಥವಾಗುತ್ತಿಲ್ಲ. ಆ ಹಾಡನ್ನು ಉಪೇಂದ್ರ ನಿರ್ದೇಶನ ಮಾಡಿದ್ದಾರೆ ಎನ್ನುತ್ತಿರುವುದು ಸರಿಯಲ್ಲ. ಇದೆಲ್ಲ ಪ್ರಚಾರಕ್ಕೆ ಹೇಳುವ ವಿಚಾರವೇ ಎನ್ನುವುದು ನನ್ನ ಪ್ರಶ್ನೆ ಎಂದಿದ್ದಾರೆ ಪ್ರಿಯಾಂಕಾ.

  ಇನ್ನು ಮುಂದೆ ಇಂತಹ ಪಾತ್ರ ಮಾಡೋದಿಲ್ಲ ಎನ್ನುತ್ತಿದ್ದಾರೆ. ಅವರಿಗೆ ಇಷ್ಟ ಇಲ್ಲ ಎಂದಮೇಲೆ ಮಾಡಿದ್ದು ಏಕೆ..? ಇದರಿಂದ ಫ್ಯಾಮಿಲಿ ಆಡಿಯನ್ಸ್ ಸಿನಿಮಾ ನೋಡೋಕೆ ಬರುತ್ತಾರಾ..? ಸಿನಿಮಾ ಹೇಗಿದೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಎಲ್ಲರೂ ಅದೊಂದು ಸೀನ್ ಬಗ್ಗೆ ಮಾತನಾಡುತ್ತಿದ್ದಾರೆ. ಇದರಿಂದ ಉಪ್ಪಿ ಇಮೇಜ್ ಹಾಳಾಗಬಾರದು ಎಂದಿದ್ದಾರೆ ಪ್ರಿಯಾಂಕಾ.

  ಐ ಲವ್ ಯೂ ಚಿತ್ರಕ್ಕೆ ಆರ್.ಚಂದ್ರು ನಿರ್ದೇಶಕ. ಚಿನ್ನಿ ಪ್ರಕಾಶ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಅದೆಲ್ಲವನ್ನೂ ಬಿಟ್ಟು ಉಪೇಂದ್ರರೇ ಮಾಡಿದ್ದಾರೆ ಎಂದರೆ ಅದು ಕೆಟ್ಟ ಸಂದೇಶ ಕೊಟ್ಟಂತಾಗುತ್ತೆ. ರಚಿತಾ ರಾಮ್ ಬಗ್ಗೆ ನನ್ನ ಅಸಮಾಧಾನವೇನೂ ಇಲ್ಲ. ಆದರೆ, ಇದರಿಂದ ಪ್ರೇಕ್ಷಕರು ತಪ್ಪು ಅರ್ಥ ಮಾಡಿಕೊಳ್ತಾರೆ ಎಂದು ಕಿವಿ ಮಾತು ಹೇಳಿದ್ದಾರೆ ಪ್ರಿಯಾಂಕಾ.

 • ತಾಯಿಗೆ ತಕ್ಕ ಮಗ ನಂತರ ಶಶಾಂಕ್ ಉಪ್ಪಿ ಸಿನಿಮಾ

  shsshank all set to work with upendra

  ತಾಯಿಗೆ ತಕ್ಕ ಮಗ ಚಿತ್ರದ ಪ್ರಮೋಷನ್‍ನಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಶಶಾಂಕ್, ತಮ್ಮ ಮುಂದಿನ ಚಿತ್ರವನ್ನೂ ಪ್ರಕಟಿಸಿಬಿಟ್ಟಿದ್ದಾರೆ. ತಾಯಿಗೆ ತಕ್ಕ ಮಗ ಚಿತ್ರದ ಆಡಿಯೋ ಸಕ್ಸಸ್ ಸುದ್ದಿಗೋಷ್ಟಿಯಲ್ಲೇ ಮುಂದಿನ ಸಿನಿಮಾ ಘೋಷಿಸಿರುವ ಶಶಾಂಕ್,  ತಾಯಿಗೆ ತಕ್ಕ ಮಗ ರಿಲೀಸ್ ನಂತರ ಉಪ್ಪಿ ಸಿನಿಮಾ ಕೆಲಸಗಳು ಶುರುವಾಗಲಿವೆ ಎಂದಿದ್ದಾರೆ.

  ಚಿತ್ರದ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದವರು ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ. 2019ರ ಆರಂಭದಿಂದಲೇ ಉಪ್ಪಿ ಸಿನಿಮಾ ಕೆಲಸ ಶುರುವಾಗಲಿದೆ ಎಂದಿದ್ದಾರೆ ಶಶಾಂಕ್. ಸದ್ಯಕ್ಕೆ ತಾಯಿಗೆ ತಕ್ಕ ಮಗ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

  ನವೆಂಬರ್ 16ಕ್ಕೆ ತಾಯಿಗೆ ತಕ್ಕ ಮಗ ರಿಲೀಸ್ ಆಗುತ್ತಿದ್ದು, ಸುಮಲತಾ ಅಂಬರೀಷ್, ಅಜೇಯ್ ರಾವ್, ಅಶಿಕಾ ರಂಗನಾಥ್ ಪ್ರಧಾನ ಪಾತ್ರಗಳಲ್ಲಿದ್ದಾರೆ.

 • ದಂಡ ಹಾಕುವ ಮುನ್ನ ಉಪ್ಪಿ ಮಾತು ಕೇಳಿ

  listen to uppi before u put penalty

  ನಾವು ಬೈಕ್ ಓಡಿಸ್ತಾ ಇರ್ತೇವೆ. ಹೆಲ್ಮೆಟ್ ಹಾಕಿರಲ್ಲ. ಪೊಲೀಸರು ದಂಡ ಹಾಕ್ತಾರೆ. ಓವರ್ ಸ್ಪೀಡ್ ಡ್ರೈವಿಂಗ್ ಮಾಡ್ತಿರ್ತೀವಿ. ಪೊಲೀಸರು ದಂಡ ಹಾಕ್ತಾರೆ. ಸೀಟ್ ಬೆಲ್ಟ್ ಹಾಕಿರಲ್ಲ. ಸಿಗ್ನಲ್ ಜಂಪ್ ಮಾಡ್ತೀವಿ. ದಂಡ ಕಟ್ತೀವಿ. ಆದರೆ.. ದಂಡ ಕಟ್ಟುವ ಮುನ್ನ ನಾವು ಸರ್ಕಾರಕ್ಕೆ ಕೇಳಬೇಕಾದ ಪ್ರಶ್ನೆಗಳೂ ಇವೆ ತಾನೆ. ಅಂತಹ ಕೆಲವು ಪ್ರಶ್ನೆಗಳನ್ನು ಉಪೇಂದ್ರ ಕೇಳಿದ್ದಾರೆ.

  ಕಾನೂನು ಮೀರಿ ವಾಹನ ಚಲಾಯಿಸಿದ್ದು ನಮ್ಮ ತಪ್ಪು. ದಂಡ ಕಟ್ಟುತ್ತೇವೆ. ಅದು ನಮ್ಮ ಜವಾಬ್ದಾರಿ. ಆದರೆ, ನಾವು ಹೆಲ್ಮೆಟ್ ಹಾಕುವುದು, ಸೀಟ್ ಬೆಲ್ಟ್ ಹಾಕುವುದು ನಮ್ಮ ಸುರಕ್ಷತೆಗಾಗಿ ತಾನೇ. ನಿಮಗೆ ನಿಜವಾಗಿಯೂ ನಮ್ಮ ಸುರಕ್ಷತೆ ಬಗ್ಗೆ ಕಾಳಜಿಯಿದ್ದರೆ, ದಯವಿಟ್ಟು ರಸ್ತೆಗಳನ್ನು ಕಾಲಕಾಲಕ್ಕೆ ರಿಪೇರಿ ಮಾಡಿಸಿ. ಆನಂತರ ನಿಮ್ಮ ಅಧಿಕಾರಿಗಳನ್ನು ರಸ್ತೆಗೆ ಕಳಿಸಿ, ದಂಡ ವಸೂಲಿ ಮಾಡಲು ಹೇಳಿ.

  ಅದ್ಯಾವುದನ್ನೂ ಮಾಡದೆ ನೀವು ದಂಡ ಹಾಕಲು ಬರುತ್ತೀರಿ. ನಾನು ದಂಡ ಕಟ್ಟಬೇಕೆಂದರೆ, ದಂಡ ಕಟ್ಟುವ ತಪ್ಪು ನಾನು ಮಾಡಿದ್ದೇನೆ ಎಂದಾದರೆ, ನೀವು ನಮಗೆ ಪರಿಹಾರ ಕೊಡಬೇಕಾದ ತಪ್ಪು ಮಾಡಿದ್ದೀರಿ. 

  ಉಪೇಂದ್ರ ಹೇಳೋದರಲ್ಲಿ ತಪ್ಪೇನಿಲ್ಲ. ಪೊಲೀಸರು ದಂಡ ಹಾಕುವುದು, ನಮ್ಮ ಸುರಕ್ಷತೆಯ ಬಗ್ಗೆ ನಾವು ಜಾಗ್ರತೆ ವಹಿಸಬೇಕು ಎಂದೇ ಹೊರತು, ಶಿಕ್ಷಿಸಬೇಕು ಎಂದಲ್ಲ. ಅದು ಕಾನೂನಿನಲ್ಲಿರುವ ಭಾಷೆ. ಆದರೆ, ನಮ್ಮ ಸುರಕ್ಷತೆಗೆ ವಹಿಸಬೇಕಾದ ಕಾಳಜಿಯನ್ನೇ ವಹಿಸದೆ ದಂಡ ಕಟ್ಟಿಸಿಕೊಳ್ಳುವುದು ಯಾವ ನ್ಯಾಯ..? ನಾವೆಲ್ಲರೂ ಕೇಳಬೇಕಾದ ಪ್ರಶ್ನೆಯನ್ನ ಉಪೇಂದ್ರ ಕೇಳಿದ್ದಾರೆ.

 • ದೀಪಾವಳಿ ಉಪ್ಪಿ ಕೊಟ್ಟ ದೀಪ ಹಚ್ಚುವ ಐಡಿಯಾ

  upendra's new idea to diwali

  ದೀಪಾವಳಿಯಂದು ಹೊಸ ಬಟ್ಟೆ ಖರೀದಿ  ಈಗ ಸರ್ವೇ ಸಾಮಾನ್ಯ. ಅಷ್ಟೇ ಕಾಮನ್ ಆಗಿರುವುದು ಹೊಸ ಹೊಸ ವಸ್ತುಗಳ ಖರೀದಿ. ಏಕೆಂದರೆ, ದೀಪಾವಳಿಗೆಂದೇ ಮಾಲ್‍ಗಳು ಹೊಸ ಉಪಕರಣಗಳ ಮಾರಾಟಕ್ಕೆ ಭಾರಿ ಡಿಸ್ಕೌಂಟ್ ಆಫರ್ ಕೊಡ್ತಾರೆ. ನಾವೂ ಅಷ್ಟೆ.. ಹಳೆಯದನ್ನು ಕೊಟ್ಟು, ಹೊಸದನ್ನು ಖರೀದಿಸಿ ಮನೆಗೆ ಹೊತ್ತೊಯ್ಯುತ್ತೇವೆ.

  ಈ ಸಂಭ್ರಮಕ್ಕೆ ಉಪ್ಪಿ ಕೊಡ್ತಾ ಇರೋ ಐಡಿಯಾ ಬೇರೆ. ನಿಮಗೆ ಹೊಸ ವಸ್ತು ಬೇಕಾ ಖರೀದಿ ಮಾಡಿ. ಹಳೆಯದನ್ನು ಸುಮ್ಮನೆ 500/1000 ರೂಪಾಯಿಗೆಲ್ಲ ಮಾರಬೇಡಿ. ನಿಮ್ಮ ಮನೆಯಲ್ಲಿ ಕೆಲಸ ಮಾಡುವವರಿಗೋ, ಸುತ್ತಮುತ್ತಲಿನ ಬಡವರಿಗೋ ಕೊಡಿ. ಅವರು ಅನುಭವಿಸುವ ಖುಷಿಯೇ ಬೇರೆ. ದಾನವಾಗಿಯಾದರೂ ಕೊಡಿ.. ಅಥವಾ ವ್ಯಾಪಾರಿಗಳಿಗೆ 500/1000 ರೂ.ಗೆ ಕೊಡ್ತೀರಲ್ಲ. ಅಷ್ಟೇ ಹಣಕ್ಕಾದರೂ ಕೊಡಿ. ಒಳ್ಳೆಯದಾಗುತ್ತೆ. 

  ಇದು ಉಪೇಂದ್ರ ಅವರ ಐಡಿಯಾ. ದೀಪಾವಳಿಗೆ ಯಾರಾದರೂ ಅಭಿಮಾನಿಗಳು ಈ ಕೆಲಸ ಮಾಡಿ ದೀಪ ಹಚ್ಚಬಹುದು. 

 • ನಟ ಭಯಂಕರನಿಗೆ ಉಪೇಂದ್ರ ಹಾಡು

  upendra sings a song for natabhayankara

  ಒಳ್ಳೆಯ ಹುಡುಗ ಪ್ರಥಮ್ ಅಭಿನಯದ ಹೊಸ ಚಿತ್ರ ನಟ ಭಯಂಕರನಿಗೆ ಉಪೇಂದ್ರ ಸಾಥ್ ಸಿಕ್ಕಿದೆ. ರಿಯಲ್ ಸ್ಟಾರ್ ಉಪೇಂದ್ರ, ನಟಭಯಂಕರ ಚಿತ್ರದ ಇಂಟ್ರೊಡಕ್ಷನ್ ಹಾಡಿಗೆ ಧ್ವನಿ ನೀಡಿದ್ದಾರೆ. ಪ್ರಥಮ್ ಅವರೇ ನಿರ್ದೇಶಿಸುತ್ತಿರುವ ಈ ಚಿತ್ರದ ಹೀರೋ ಇಂಟ್ರೊಡಕ್ಷನ್ ಸಾಂಗ್‍ಗೆ ಸಾಹಿತ್ ನೀಡಿರುವುದು ಭರ್ಜರಿ ಚೇತನ್. 

  ಇದೊಂದು ಹೈ ವೋಲ್ಟೇಜ್ ಸಾಂಗ್. ಹಾಡು ಮತ್ತು ಹಾಡಿನ ಮೇಕಿಂಗ್‍ನ್ನು ಉಪೇಂದ್ರ ಕೂಡಾ ಇಷ್ಟಪಟ್ಟಿದ್ದಾರೆ. ಅವರ ಹುಟ್ಟುಹಬ್ಬದ ದಿನವೇ ಹಾಡನ್ನು ರಿಲೀಸ್ ಮಾಡುತ್ತೇವೆ ಎಂದಿದ್ದಾರೆ ಪ್ರಥಮ್.

 • ನಮ್ಮ ಉಪ್ಪಿ, ಹತ್ತಿರದವರು ಕಂಡಂತೆ - ಇದು ಪುಸ್ತಕ

  upendra

  ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬಕ್ಕೆ ಈ ವರ್ಷದ ವಿಶೇಷ ಪ್ರಜಾಕೀಯ ಅಲ್ಲ..'ಉತ್ತಮ ಪ್ರಜಾ ಪಾರ್ಟಿ'ಯೂ ಅಲ್ಲ. ಅದು ನಮ್ಮ ಉಪ್ಪಿ, ಹತ್ತಿರದವರು ಕಂಡಂತೆ ಎಂಬ ಪುಸ್ತಕ. 

  ಉಪೇಂದ್ರ ಅವರ ಈ ವರ್ಷದ ಹುಟ್ಟುಹಬ್ಬಕ್ಕೆ ಒಂದು ವಿಶೇಷವಾದ ಪುಸ್ತಕ ಕೂಡ ಬರುತ್ತಿದ್ದು, ಅದನ್ನು ಹುಟ್ಟುಹಬ್ಬಕ್ಕಾಗಿಯೇ ವಿಶೇಷವಾಗಿ ಬರೆಯಲಅಗಿದೆ. ಈ ಪುಸ್ತಕದಲ್ಲಿ ಉಪೇಂದ್ರ ಅವರ ಆಪ್ತರು, ತಾವು ಕಂಡ ಉಪ್ಪಿಯ ಬಗ್ಗೆ ಬರೆದಿದ್ದಾರೆ. ಉಪೇಂದ್ರ ತಂದೆ, ತಾಯಿ, ಅಣ್ಣನಿಂದ ಹಿಡಿದು ಅವರ ಆಪ್ತ ವಲಯದ ಹಲವು ಮಿತ್ರರು, ಈ ಪುಸ್ತಕದಲ್ಲಿ ತಾವು ಕಂಡ ಉಪ್ಪಿಯನ್ನು ಅಕ್ಷರರೂಪಕ್ಕೆ ಇಳಿಸಿದ್ದಾರೆ. 

  ಉಪ್ಪಿ ಜೀವನದ ಹಲವು ವಿಶೇಷ ಸಂಗತಿಗಳೂ ಕೂಡಾ ಪುಸ್ತಕದಲ್ಲಿವೆ. ಉಪೇಂದ್ರ ಹುಟ್ಟುಹಬ್ಬಕ್ಕೆಂದೇ ಸಿದ್ಧವಾಗಿದ್ದರೂ, ಈ ಪುಸ್ತಕ ಮಾರುಕಟ್ಟೆಯಲ್ಲಿ ಸಿಗುವುದು ಒಂದು ವಾರದ ನಂತರ. ಉಪೇಂದ್ರ ಅವರ ಬಗ್ಗೆ ಕುತೂಹಲ ಇರುವವರು, ಅಭಿಮಾನಿಗಳು ಪುಸ್ತಕಕ್ಕಾಗಿ ಎದುರು ನೋಡುತ್ತಿದ್ದಾರೆ.

 • ನಾನು ಆರಾಮ್ ಇದ್ದೇನೆ. ಡೋಂಟ್ ವರಿ : ಉಪೇಂದ್ರ

  ನಾನು ಆರಾಮ್ ಇದ್ದೇನೆ. ಡೋಂಟ್ ವರಿ : ಉಪೇಂದ್ರ

  ಉಪೇಂದ್ರ ಅಭಿನಯದ ಆರ್.ಚಂದ್ರು ನಿರ್ದೇಶನ, ನಿರ್ಮಾಣದ ಕಬ್ಜ ಚಿತ್ರದ ಚಿತ್ರೀಕರಣದ ವೇಳೆ ಉಪೇಂದ್ರ ಅವರಿಗೆ ಪೆಟ್ಟಾಗಿದೆ. ಌಕ್ಷನ್ ಸೀನ್ ಚಿತ್ರೀಕರಣದ ವೇಳೆ ಅಕಸ್ಮಾತ್ ಆಗಿ ಉಪೇಂದ್ರ ಅವರ ತಲೆಗೆ ಬಿದ್ದ ಕಬ್ಬಿಣದ ರಾಡ್ನಿಂದಾಗಿ ಪೆಟ್ಟಾಗಿತ್ತು. ವಿಷಯ ಗೊತ್ತಾಗುವುದರೊಳಗೆ ವಿಡಿಯೋ ಕೂಡಾ ವೈರಲ್ ಆದ ಕಾರಣ, ಅಭಿಮಾನಿಗಳು ಆತಂಕಗೊಂಡರು.

  ಈ ಕುರಿತು ಸ್ವತಃ ಉಪೇಂದ್ರ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಕಬ್ಜ ಚಿತ್ರೀಕರಣದಲ್ಲಿ ನಡೆದ ಒಂದು ಸಣ್ಣ ಘಟನೆ, ತೊಂದರೆ ಇಲ್ಲ ನಾನು ಆರಾಮವಾಗಿದ್ದೇನೆ. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿರುವ ಉಪ್ಪಿ, ಈಗಿನ ಫೋಟೋವನ್ನೂ ಹಾಕಿದ್ಧಾರೆ. ಉಪ್ಪಿ ಸೇಫ್. ಡೋಂಟ್ ವರಿ.

 • ನಾನು.. ನನ್ನ ರಾಜಕೀಯ ಕನಸು - ಉಪೇಂದ್ರ ಹೇಳಿಕೊಂಡ ರಾಜಕೀಯ ಕಲ್ಪನೆ ಇದು

  uppi reveals his political idea

  ಉಪೇಂದ್ರ ರಾಜಕೀಯ ಪ್ರವೇಶದ ಸ್ಪಷ್ಟ ಸುಳಿವು ನೀಡಿರುವ ಉಪೇಂದ್ರ, ಈ ಕುರಿತು ಎಲ್ಲ ಮಾಧ್ಯಮಗಳಿಗೆ ಒಂದು ಆಡಿಯೋ ಸಂದೇಶ ಕಳುಹಿಸಿಕೊಟ್ಟಿದ್ದಾರೆ. ತಾವು ಹಾಗೂ ತಾವು ಕಟ್ಟಲು ಹೊರಟಿರುವ ರಾಜಕೀಯ ಪಕ್ಷ ಹೇಗಿರಲಿದೆ ಎಂಬುದರ ಪರಿಕಲ್ಪನೆ ಬಿಚ್ಚಿಟ್ಟಿದ್ದಾರೆ. ಒಂದಿಷ್ಟು ಐಡಿಯಾಗಳನ್ನೂ ಷೇರ್ ಮಾಡಿದ್ದಾರೆ. ಅದು ಸ್ವಲ್ಪ ಇಂಟ್ರೆಸ್ಟಿಂಗ್. ಏಕೆಂದರೆ ಇದನ್ನೆಲ್ಲ ಹೇಳಿರೋದು ಸ್ವತಃ ಉಪೇಂದ್ರ.

  ಉಪೇಂದ್ರ ಹೇಳಿದ್ದು 

  ನಮ್ಮ ಕರ್ನಾಟಕದ ಬಜೆಟ್​ ಹತ್ತಿರ ಹತ್ತಿರ ಎರಡು ಲಕ್ಷ ಕೋಟಿ. ಇದೆಲ್ಲ ನಾವು ಕೊಡ್ತಿರೋ ಡೈರೆಕ್ಟ್, ಇನ್​​ಡೈರೆಕ್ಟ್ ಟ್ಯಾಕ್ಸ್​ ಅಂದ್ರೆ ತೆರಿಗೆಯಿಂದ ಬರೋದು. ನೀವು ಕೆಲಸ ಕೊಟ್ಟಿರೋದು ಸಾವಿರಾರು ಜನಕ್ಕೆ. ನಿಮ್ಮ ಮನೆ ಮುಂದೆ ಸ್ವಚ್ಚ ಮಾಡೋ ಪೌರ ಕಾರ್ಮಿಕರನಿಂದ ಹಿಡಿದು. ಕಾರ್ಪೋರೇಟರ್​, ಎಂಎಲ್​ಎ, ಮುಖ್ಯಮಂತ್ರಿ ಸರ್ಕಾರ, ಅಧಿಕಾರಿಗಳು, ಐಎಎಸ್, ಐಪಿಎಸ್​ ಅಧಿಕಾರಿಗಳು ಎಲ್ಲರಿಗೂ ಸಂಬಳ ಕೊಡೋದು ನೀವೇ. ನಿಮ್ಮ ತೆರಿಗೆ ಹಣದಿಂದಲೇ ಅವರ ಹೊಟ್ಟೆ ತುಂಬುತ್ತಿದೆ.

  ಅದರ ಅರ್ಥ ಇವರೆಲ್ಲರೂ ನಮಗೋಸ್ಕರ ಕೆಲಸ ಮಾಡೋ ಕಾರ್ಮಿಕರು. ಆದ್ರೆ ಆಗ್ತಿರೋದು ಮಾತ್ರ ಉಲ್ಟಾ.  ಪ್ರಜಾಪ್ರಭುತ್ವದಲ್ಲಿ ಈ ಸತ್ಯ ನಿಮ್ಮ ಕಣ್ಣಿಗೆ ಕಾಣದ ಹಾಗೆ ಇರೋಕೆ ನಾವೇ ಕಾರಣ. ಬಲಿಪಶುಗಳೂ ನಾವೆ. 

  ಹೇಗೆ ಅಂತೀರಾ.. ಈ ಲಕ್ಷಾಂತರ ಕೋಟಿ ಸಂಪಾದನೆ ಮಾಡೋ ನಾವು, ಅದನ್ನು ಸಮಾಜಕ್ಕೆ ಕೊಡೋಕೆ ಅಂತಾ ನಾಯಕರನ್ನು ಆಯ್ಕೆ ಮಾಡುತ್ತಿದ್ದೇವಲ್ಲ. ಅವರನ್ನು ನಾವು ಜಾತಿ, ಮತ, ದುಡ್ಡು, ಹೆಸರುಗಳಿಂದ ಅಳೆದು ಆಯ್ಕೆ ಮಾಡುತ್ತಿದ್ದೇವೆ. ಅದೇ ಆಗುತ್ತಿರುವ ತಪ್ಪು. 

  ಅಲ್ರೀ, ನಮ್ಮ ಮನೆಯಲ್ಲಿ 5 ಸಾವಿರ ಕೊಟ್ಟು ಕೆಲಸಕ್ಕೆ ಇಟ್ಟುಕೊಳ್ಳೋ ಜನಗಳದ್ದೇ ತಲೆಬುಡ ಎಲ್ಲ ಚೆಕ್ ಮಾಡ್ತೀವಿ. ಅಂಥಾದ್ರಲ್ಲಿ  ನಮ್ಮ ಲಕ್ಷಾಂತರ ಕೋಟಿ ದುಡ್ಡನ್ನು ಸಮಾಜಕ್ಕೆ ವಿನಿಯೋಗಿಸೋಕೆ ಅಂಥಾ ನಾವು ನೇಮಿಸಿಕೊಳ್ಳೋ ಜನಪ್ರತಿನಿಧಿಗಳು, ಮಂತ್ರಿಗಳನ್ನ ಕೇವಲ ಜಾತಿ, ಮತ, ದುಡ್ಡು ಅನ್ನೋ ಎಮೋಷನ್ ಬ್ಲಾಕ್​ಮೇಲ್​ಗೆ ಒಳಗಾಗಿ ಆಯ್ಕೆ ಮಾಡ್ತೀವಿ. ಅವನ ಹಿಂದೆ ದುಡ್ಡಿದ್ದರೆ ಜನ ಇರ್ತಾರೆ. ದುಡ್ಡಿದೆ, ಜನರಿದ್ದಾರೆ, ದೊಡ್ಡವನು ಎಂದು ಆಯ್ಕೆ ಮಾಡಿ ತಪ್ಪು ಮಾಡುತ್ತಿದ್ದೇವೆ.  ಏನ್​ ಮಾಡೋಣ, ನಮಗೆ ಬೇರೆ ಆಯ್ಕೆಯಾದರೂ ಎಲ್ಲಿದೆ. ಇರೋ ಮೂರು ಜನರಲ್ಲಿ ಸ್ವಲ್ಪ ಬೆಟರ್​ ಅನ್ಕೊಂಡು ಅವರನ್ನು ಆರಿಸ್ತಿದ್ದೇವೆ. ಇದು ನಮ್ಮ ವಾದ. 

  ಅದು ನಿಮಗಷ್ಟೇ ಅಲ್ಲ, ನನಗೂ ಅನ್ನಿಸಿದೆ.  ಹಾಗಾದ್ರೆ ಇದಕ್ಕೆ ಬೇರೆ ದಾರಿನೇ ಇಲ್ವಾ..? ದೊಡ್ಡವರೊಬ್ಬರು ಹೇಳಿದ್ದಾರೆ, ನೀವು ಆಶಾವಾದಿಯಾಗಿದ್ದರೆ,  ನಾನು ನೂರು ಐಡಿಯಾ  ಕೊಡ್ತೀನಿ. ನಿರಾಶಾವಾದಿಗಳಿಗೆ ನನ್ನ ಬಳಿ ಯಾವುದೇ ಐಡಿಯಾ ಇಲ್ಲ ಎಂದಿದ್ದಾರೆ. ಆ ತರದ ಆಶಾವಾದಿಗಳಿಗೆ ನನ್ನ ಹತ್ತಿರ ಒಂದು ಐಡಿಯಾ ಇದೆ.

  ಬದಲಾಗಬೇಕು ವಿಧಾನಸೌಧ

  ನಮಗೆಲ್ಲಾ ಬೇರೆ ಕೆಲಸ ಇದೆ ಅಂತಾನೇ ನಿಮ್ಮನ್ನು ಆಯ್ಕೆ ಮಾಡಿದ್ದೇವೆ. ನಿಮಗೆ ಅದಕ್ಕೋಸ್ಕರ ಸಂಬಳ ಕೊಡುತ್ತಿದ್ದೇವೆ. ನಿಮ್ಮ ಹತ್ತಿರ ಬರಲ್ಲ. ನೀವೇ ಏನೇನು ಕೆಲಸ ಮಾಡ್ತೀರೊ, ಅದೆಲ್ಲವನ್ನೂ ಜನರಿಗೆ ನೀವೇ ತಲುಪಿಸಿ. ಟಿವಿ ಚಾನೆಲ್​ಗಳಿವೆಯಲ್ಲ. ಒಂದು ಟಿವಿ ಚಾನೆಲ್ ಹೇಗೆ ಇಡೀ ಕರ್ನಾಟಕಕ್ಕೆ ಆಡಿಯೋ, ವಿಡಿಯೋ ಮೂಲಕ ಸುದ್ದಿ ಕೊಡ್ತಾರೋ, ಹಾಗೆ ಜನಪ್ರತಿನಿಧಿಗಳು ತಮ್ಮ ಕೆಲಸವನ್ನು ಜನರಿಗೆ ತಿಳಿಸಬೇಕು.

  ಸಚಿವರನ್ನು ಆಯ್ಕೆ ಮಾಡುವಾಗ ನಾವು ಪರೀಕ್ಷೆ ನಡೆಸಿ ಆಯ್ಕೆಯಾದ ಎಂಎಲ್​ಎಗಳಲ್ಲಿ ಯಾರಿಗೆ ಯಾವ ವಿಚಾರದಲ್ಲಿ ಜ್ಞಾನವಿದೆ ಎಂದು ಪರಿಶೀಲಿಸಿ, ಅವರ ಜ್ಞಾನಕ್ಕೆ ತಕ್ಕಂತೆ ಇಲಾಖೆ ಹಂಚಬೇಕು. ಅಂತಾರಾಜ್ಯ ವಿವಾದಗಳನ್ನು ಪ್ರಧಾನಿ ನೇತೃತ್ವದಲ್ಲಿ ಕುಳಿತು ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಬೇಕು.

  ದುಡ್ಡು ಪಡೆದರೆ ಕನಸು ನೆಗೆದು ಬಿದ್ದ ಹಾಗೆ..

  ಸಮಸ್ಯೆ ಎಲ್ಲಿದೆಯೋ, ಪರಿಹಾರವೂ ಅಲ್ಲಿಯೇ ಇದೆ. ನಾವು ದುಡ್ಡಿಲ್ಲದೆ ಎಲೆಕ್ಷನ್​ ಗೆಲ್ಲೋಕೆ ಆಗಲ್ಲ. ಅದಕ್ಕೇನು ಮಾಡೋದು. ದುಡ್ಡು ಬೇಕು. ಪಾರ್ಟಿ ಫಂಡ್​ ಬೇಕು. ಅದಕ್ಕೆ ಜನ ಬೇಕು. ಎಲ್ಲರ ಹತ್ತಿರ ದುಡ್ಡು ಕಲೆಕ್ಟ್​ ಮಾಡ್ತೀವಿ. ಲಕ್ಷಾಂತರ, ಕೋಟ್ಯಾಂತರ ರೂಪಾಯಿ ಪಾರ್ಟಿ ಫಂಡ್​ನಲ್ಲಿ ಇಡ್ತೀವಿ. ಆಗ ಏನಾಗುತ್ತೆ. ನಮ್ಮ ಒಂದಿಷ್ಟು ಜನ ದುಡ್ಡು ಹಾಕಿರೋರು ಬರ್ತಾರೆ. ಇಲ್ಲಿಂದಲೇ ಭ್ರಷ್ಟಾಚಾರ ಶುರು. ದುಡ್ಡು ಹಾಕಿರುವವರಿಗೆ ದುಡ್ಡು ಮಾಡೋದೇ ಮೊದಲ ಆದ್ಯತೆಯಾಗಿರುತ್ತೆ. ಅವರಿಗೆ ದುಡ್ಡು ತೆಗೆಯೋಕೆ ಜಾಗ ಕೊಡಬೇಕಾಗುತ್ತೆ. ಅಲ್ಲಿಗೆ ಕನಸು ನೆಗೆದು ಬೀಳುತ್ತೆ. ಹಾಗಾಗಿ ದುಡ್ಡೇ ಇಲ್ಲದೆ ಕೆಲಸ ಮಾಡಬೇಕು. ಹಣವನ್ನು ಕೊಡಲೂ ಬಾರದು, ಪಡೆಯಲೂ ಬಾರದು. 

  ಕೊನೆಯದಾಗಿ ಹೇಳಿದ್ದು - 

  ನನ್ನನ್ನು ನಂಬಿ. ಸತ್ಯವೇ ಗೆಲ್ಲಬೇಕು. ಪಾರ್ಟಿ ಫಂಡ್ ಅನ್ನೋ ಪದವನ್ನೇ ಕಿತ್ತುಹಾಕೋಣ. ರಾಜಕೀಯ ಬೇಡ. ಪ್ರಜಾಕೀಯ ಬೇಕು. ದುಡ್ಡು ಹಾಕದೇ ಗೆಲ್ಲಬಹುದು. ಹಾಗೆ ಗೆಲ್ಲಬೇಕು.ನಾನು ದುಡ್ಡೇ ಇಲ್ಲದ ಪಕ್ಷ ಕಟ್ಟುತ್ತೇನೆ. ಇದು ನಾನು ತೆಗೆದುಕೊಳ್ತಿರೋ ಚಾಲೆಂಜ್. ಪ್ರಚಾರವಿಲ್ಲದ ಪಾರ್ಟಿ ನಂದು.ಜಾತಿ, ಧರ್ಮ ಇಲ್ಲ. ಸತ್ಯದಿಂದ ನಿಮ್ಮನ್ನು ತಲುಪುತ್ತೇವೆ. ಗೆಲ್ಲಲೇಬೇಕೆಂಬ ಛಲ ಇಲ್ಲ. ನಾನು ಪ್ರಯತ್ನ ಮಾಡೋಕೆ ಹೊರಟಿರುವೆ ಕೈಜೋಡಿಸಿ.

  ಹೀಗೆ ಉಪೇಂದ್ರ ತಮ್ಮದೇ ಆದ ಚಿಂತನಾ ಲಹರಿಯಲ್ಲಿ ಕನಸು ಬಿಚ್ಚಿಟ್ಟಿದ್ದಾರೆ. ಕೇಳೋಕೆ ಚೆಂದ ಎನಿಸುವಂತಿವೆ.

 • ನಾನೆಲ್ಲಿ ಹಾಗೆ ಹೇಳಿದ್ದೇನೆ..? - ಪ್ರಿಯಾಂಕಾ ಉಪೇಂದ್ರಗೆ ರಚಿತಾ ರಾಮ್ ಪ್ರಶ್ನೆ

  rachita clarifies on her statement regarding bold scenes

  ಪ್ರಿಯಾಂಕಾ ಉಪೇಂದ್ರ ರಚಿತಾ ರಾಮ್ ಬಗ್ಗೆ, ಅವರ ಮಾತುಗಳ ಬಗ್ಗೆ ಸಿಟ್ಟಾಗಿರುವುದಕ್ಕೆ ರಚಿತಾ ರಾಮ್ ಹೇಳಿರೋದಿಷ್ಟು. 

  ನಾನು ಎಲ್ಲಿಯೂ ಆ ಹಾಡನ್ನು ಉಪ್ಪಿ ಸರ್ ನಿರ್ದೇಶನ ಮಾಡಿದ್ದಾರೆ ಎಂದು ಹೇಳಿಲ್ಲ. ಆ ಪಾತ್ರ ಮಾಡಬಾರದಾಗಿತ್ತು ಎಂದೂ ಹೇಳಿಲ್ಲ. ಆ ರೀತಿಯ ಹೇಳಿಕೆಗಳನ್ನು ನಾನು ಕೊಟ್ಟಿಲ್ಲ.

  ನಾನು ಹೇಳಿದ್ದು ಆ ಒಂದು ಸೀನ್ ಮಾಡುವಾಗ ಕಂಫರ್ಟ್ ತುಂಬಾ ಮುಖ್ಯ ಎಂದು. ಆ ರೀತಿಯ ಕಂಫರ್ಟ್ ಉಪ್ಪಿ ಸರ್ ಕಡೆಯಿಂದ ಚೆನ್ನಾಗಿದ್ದ ಕಾರಣಕ್ಕೆ ಸುಲಭವಾಗಿ ನಟಿಸಲು ಸಾಧ್ಯವಾಯಿತು ಎಂದಿದ್ದೇನೆ. ಅಷ್ಟೆ.

  ಇನ್ನು ಮುಂದೆ ಬೋಲ್ಡ್ ಪಾತ್ರ ಮಾಡಲ್ಲ ಎಂದಿದ್ದು ಐ ಲವ್ ಯೂ ಚಿತ್ರದ ಪಾತ್ರದ ಕುರಿತು ಅಲ್ಲ. ನನ್ನ ಫ್ಯಾನ್ಸ್‍ಗೆ ಅಂತಹ ಪಾತ್ರ ಇಷ್ಟ ಆಗಲ್ಲ. ಹಾಗಾಗಿ ಇನ್ನು ಮುಂದೆ ಅಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಳ್ಳಲ್ಲ ಎಂದು. ಅಷ್ಟೇ ಹೊರತು ಮತ್ತೇನಿಲ್ಲ.

  ಇದೇ ಶುಕ್ರವಾರ ತೆರೆ ಕಾಣುತ್ತಿರುವ ಐ ಲವ್ ಯೂ ಚಿತ್ರದಲ್ಲಿ ಉಪೇಂದ್ರ & ರಚಿತಾ ರಾಮ್ ಹಸಿಬಿಸಿ ದೃಶ್ಯಗಳು ಹವಾ ಎಬ್ಬಿಸಿವೆ. ರಚಿತಾ ರಾಮ್ ಇದೇ ಮೊದಲ ಬಾರಿಗೆ ಇಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಆರ್.ಚಂದ್ರು ನಿರ್ದೇಶನದ ಚಿತ್ರ ಟ್ರೇಲರ್‍ಗಳ ಮೂಲಕವೇ ಗಮನ ಸೆಳೆದಿದ್ದು 1000ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಹಾಗೂ 3 ರಾಜ್ಯಗಳಲ್ಲಿ ರಿಲೀಸ್ ಆಗುತ್ತಿದೆ.

 • ನಾನೇ ಉಪೇಂದ್ರ ಅಂದ್ರು ರಚಿತಾ

  rachita ram says she is female verison of upendra in i love you

  ಐ ಲವ್ ಯೂ ಚಿತ್ರದ ಟ್ರೇಲರ್, ಆ ಟ್ರೇಲರ್‍ನಲ್ಲಿರೋ ಹಾಟ್ ಹಾಟ್ ದೃಶ್ಯಗಳು, ಹಾಡಿನಲ್ಲಿ ರೊಮ್ಯಾಂಟಿಕ್ ಆಗಿ ನಟಿಸಿರೋ ರಚಿತಾ ರಾಮ್, ಜೊತೆಗೆ ಬೆಚ್ಚಿ ಬೀಳಿಸುವ ಡೈಲಾಗುಗಳು.. ಇವೆಲ್ಲವನ್ನೂ ನೋಡಿದವರಿಗೆ ರಚಿತಾ ರೋಲ್ ಎಂಥದ್ದಿರಬಹುದು ಎನ್ನುವ ಕುತೂಹಲ ಹುಟ್ಟುವುದು ಸಹಜವೇ. ಅದಕ್ಕೆಲ್ಲ ರಚಿತಾ ರಾಮ್ ಹೇಳಿರೋದು ಇಷ್ಟೆ..

  `ನಾನು ಉಪೇಂದ್ರ ಅವರ ಫಿಮೇಲ್ ವರ್ಷನ್. ನನ್ನ ಪಾತ್ರಕ್ಕೆ ಎಷ್ಟು ಮಹತ್ವ ಇದೆ ಅನ್ನೋದು ಸಿನಿಮಾ ನೋಡಿದ ಮೇಲೆ ಗೊತ್ತಾಗುತ್ತೆ. ಎಲ್ಲರೂ ಕೇವಲ ಬೋಲ್ಡ್ ದೃಶ್ಯಗಳ ಬಗ್ಗೆ ಅಷ್ಟೇ ಮಾತನಾಡುತ್ತಿದ್ದಾರೆ. ಆ ದೃಶ್ಯಗಳಲ್ಲಿ ನಟಿಸುವಾಗ ನಾನೆಷ್ಟು ಮುಜುಗರ ಅನುಭವಿಸಿದೆ ನನಗಷ್ಟೇ ಗೊತ್ತು. ಸಿನಿಮಾ ನೋಡಿದ ಮೇಲೆ ಜನ ಖಂಡಿತಾ ಕೇವಲ ನನ್ನ ಪಾತ್ರದ ಬಗ್ಗೆ ಮಾತನಾಡುತ್ತಾರೆ' ಇದು ರಚಿತಾ ರಾಮ್ ಕಾನ್ಫಿಡೆನ್ಸು.

  ಆರ್.ಚಂದ್ರು ನಿರ್ದೇಶನದ ಸಿನಿಮಾ, ಇದೇ ಶುಕ್ರವಾರ ತೆರೆಗೆ ಬರುತ್ತಿದ್ದು, 1000ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಪ್ರದರ್ಶನ ಕಾಣಲಿದೆ. ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ ಐ ಲವ್ ಯೂ.

 • ಪುಣ್ಯಾತ್ಮ ಉಪೇಂದ್ರ

  punyathma image

  ಕರ್ನಾಟಕದವರ ಪಾಲಿಗೆ ಪುಣ್ಯಾತ್ಮ ಎಂಬ ಮಾತು ಕೇಳಿದ ಕೂಡಲೇ ರಾಹುಲ್ ಗಾಂಧಿ ನೆನಪಾಗಿಬಿಡುತ್ತಾರೆ. ರಾಹುಲ್ ಗಾಂಧಿಗೆ ಅಂಥಾದ್ದೊಂದು ಬಿರುದು ನೀಡಿದ್ದವರು ಮಾಜಿ ಸಿಎಂ ಕುಮಾರಸ್ವಾಮಿ. ಆದರೆ ಚಿತ್ರಲೋಕಕ್ಕೂ  ರಾಜಕೀಯಕ್ಕೂ ಎತ್ತಣಿಂದೆಣ ಸಂಬಂಧ. ಹೀಗಾಗಿ ನಾವ್ ಹೇಳ್ತಿರೋದು ಸಿನಿಮಾ ಪುಣ್ಯಾತ್ಮನ ಬಗ್ಗೆ.

  ಕನ್ನಡದ ಸ್ಟಾರ್ ನಿರ್ದೇಶಕ ಶಶಾಂಕ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಒಂದಾಗುತ್ತಿದ್ದು, ಆ ಚಿತ್ರಕ್ಕೆ ಶಶಾಂಕ್ ಪುಣ್ಯಾತ್ಮ ಅನ್ನೋ ಟೈಟಲ್ ಕೊಟ್ಟಿದ್ದಾರೆ.

  you_tube_chitraloka1.gif

  ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿರುವ ಶಶಾಂಕ್, ಈಗ ಲೊಕೇಷನ್ ಹುಡುಕಾಟದಲ್ಲಿದ್ದಾರೆ. ಶಶಾಂಕ್ ತರಾತುರಿಯಲ್ಲಿ ಸಿನಿಮಾ ಮಾಡುವ ಜಾಯಮಾನದವರಲ್ಲ. ಪಕ್ಕಾ ಪ್ಲಾನ್ ಮಾಡುವ ಡೈರೆಕ್ಟರ್. ಹೀಗಾಗಿ ಎಲ್ಲವನ್ನೂ ಸಿದ್ಧ ಮಾಡಿಕೊಂಡು ನವೆಂಬರ್ ಹೊತ್ತಿಗೆ ಶೂಟಿಂಗ್ ಶುರು ಮಾಡಲಿದ್ದಾರೆ.

 • ಪುನೀತ್, ಸುದೀಪ್‍ಗೆ ಐ ಲವ್ ಯೂನಲ್ಲಿ ಇಷ್ಟವಾಗಿದ್ದೇನು..?

  upendra received dfferent reactions

  ಐ ಲವ್ ಯೂ ಚಿತ್ರ ಗೆದ್ದಿದೆ. ದಿನೇ ದಿನೇ ಥಿಯೇಟರುಗಳ ಸಂಖ್ಯೆ ಹೆಚ್ಚುತ್ತಿರುವುದು ಇದಕ್ಕೆ ಸಾಕ್ಷಿ. ಇದರ ಮಧ್ಯೆ ಹಾಡಿನ ಬಗ್ಗೆ ಭಾರಿ ಸುದ್ದಿಯಾಗುತ್ತಿದೆ. ಈ ಎಲ್ಲದರ ಮಧ್ಯೆ ಉಪೇಂದ್ರಗೆ ತಮ್ಮ ಪಾತ್ರದ ಬಗ್ಗೆ ಸಿಕ್ಕಿರುವ ಫೀಡ್‍ಬ್ಯಾಕ್ ಬಹಳ ಖುಷಿ ಕೊಟ್ಟಿದೆ. 40 ದಾಟಿರುವ ಹೀರೋಗೆ ನೀವು 15 ವರ್ಷ ಚಿಕ್ಕೋರಾಗಿ ಕಾಣ್ತಿದ್ದೀರಿ ಅಂದ್ರೆ ಖುಷಿಯಾಗದೇ ಇರೋದಿಲ್ವಾ..?

  ಪುನೀತ್, ಸುದೀಪ್, ನಿರ್ಮಾಪಕ ಮುನಿರತ್ನ ಅವರೆಲ್ಲರಿಗೂ ನನ್ನ ಡ್ಯಾನ್ಸ್ ಇಷ್ಟವಾಗಿದೆ. ನನ್ನ ಅತ್ತಿಗೆ ಎ ಮತ್ತು ಉಪೇಂದ್ರ ಚಿತ್ರದಲ್ಲಿರೋ ಹಾಗೆ ಯಂಗ್ ಆಗಿ ಕಾಣ್ತಿದ್ದೀಯ ಅಂದ್ರು. ನನ್ನ ಅಣ್ಣನ ಮಗ ನಿರಂಜನ್ ನನಗಿಂತ ಯಂಗ್ ಆಗಿ ಕಾಣ್ತಿದ್ದೀರಾ ಎಂದು ಹೇಳಿದ.

  ಚಿತ್ರ ನೋಡಿದ ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಫೋನ್ ಮಾಡಿ, ಸೋಷಿಯಲ್ ಮೀಡಿಯಾ ಮೂಲಕ, ಮೆಸೇಜ್ ಮಾಡುವ ಮೂಲಕ ಚಿತ್ರದ ಬಗ್ಗೆ ಒಳ್ಳೆ ರೆಸ್ಪಾನ್ಸ್ ಕೊಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಉಪೇಂದ್ರ. ಅಂದಹಾಗೆ ಸಿನಿಮಾ ಚೆನ್ನಾಗಿದೆ ಎಂದು ಹೇಳಿದವರೆಲ್ಲ ಕುಟುಂಬಸ್ಥರೇ ಎನ್ನುವುದನ್ನು ಒತ್ತಿ ಹೇಳ್ತಾರೆ ಉಪ್ಪಿ.

  ಅದೆಲ್ಲಕ್ಕಿಂತ ಉಪ್ಪಿಗೆ ಖುಷಿ ಕೊಟ್ಟಿರೋದು ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು ಫೀಡ್‍ಬ್ಯಾಕ್. ಯಾಕಂದ್ರೆ, ಚಿತ್ರದ ಕಲೆಕ್ಷನ್ನು ಭರ್ಜರಿಯಾಗಿದೆ.

 • ಪ್ರಜಾಕೀಯ ಅಲ್ಲ, ಉತ್ತಮ ಪ್ರಜಾ ಪಾರ್ಟಿ - ಇದು ಉಪ್ಪಿ ಪಕ್ಷ

  upendra's uttama praja party

  ರಿಯಲ್ ಸ್ಟಾರ್ ಉಪೇಂದ್ರ ಇತ್ತೀಚೆಗೆ ಪ್ರಜಾಕೀಯದ ಬಗ್ಗೆ ಪ್ರಸ್ತಾಪಿಸಿ ರಾಜ್ಯಾದ್ಯಂತ ಸುದ್ದಿಯಲ್ಲಿದ್ದರು. ಆದರೆ, ಅವರು ಸ್ಥಾಪಿಸಲು ಮುಂದಾಗಿರುವ ಹೊಸ ರಾಜಕೀಯ ಪಕ್ಷದ ಹೆಸರು ಪ್ರಜಾಕೀಯ ಅಲ್ಲ, ಉತ್ತಮ ಪ್ರಜಾ ಪಾರ್ಟಿ ಎಂಬ ಹೆಸರಿನಲ್ಲಿ ರಾಜಕೀಯ ಪಕ್ಷ ರಿಜಿಸ್ಟರ್ ಮಾಡಿಸುತ್ತಿದ್ದಾರೆ ಉಪೇಂದ್ರ. ಈ ಕುರಿತಂತೆ ಈಗಾಗಲೇ ತಮ್ಮ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರಂತೆ.

  ಉಪೇಂದ್ರ ಅವರ ಹೊಸ ಪಕ್ಷಕ್ಕೆ ಸೇರಬೇಕೆಂದರೆ, ಸದಸ್ಯತ್ವಕ್ಕಾಗಿ ನೀವೇ ಅರ್ಜಿ ಹಾಕಬೇಕು. ಅರ್ಜಿಯ ಮಾದರಿ ಸಿದ್ಧವಾಗಿದೆ. ಅರ್ಜಿ ಹಾಕುವವರು ತಮ್ಮ ವೈಯಕ್ತಿಕ ವಿವರ, ಎರಡು ಫೋಟೋ ಮತ್ತು ಆಧಾರ್ ಮತ್ತಿತರ ಗುರುತಿನ ಚೀಟಿಗಳ ಪ್ರತಿಗಳನ್ನೂ ಅರ್ಜಿಯ ಜೊತೆ ಲಗತ್ತಿಸಬೇಕು. 

  ಸದಸ್ಯತ್ವ ನೋಂದಣಿ ಅಭಿಯಾನದ ಜೊತೆ ಜೊತೆಗೇ ಪ್ರಚಾರಕ್ಕೂ ಕೈ ಹಾಕಲಿದ್ದಾರಂತೆ ಉಪೇಂದ್ರ. ಇವೆಲ್ಲವೂ ಸದ್ಯಕ್ಕೆ ನಡೆಯುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ.

 • ಪ್ರಜಾಕೀಯಕ್ಕಾಗಿ ಉಪ್ಪಿ ಕೈ ಬಿಟ್ಟ ಸಿನಿಮಾಗಳೆಷ್ಟು..?

  Upendra drops so many movies for politics

  ಚಿತ್ರರಂಗದಲ್ಲಿ ಉಪೇಂದ್ರ ಒಂದು ರೀತಿ ಎವರ್​ಗ್ರೀನ್. ಸಿನಿಮಾ ಹಿಟ್ ಆಗಲಿ, ಫ್ಲಾಪ್ ಆಗಲಿ. ಕೈಲಿ ಸಿನಿಮಾ ಇಲ್ಲದೆ ಕುಳಿತವರೇ ಅಲ್ಲ. ಈಗಲೂ ಅಷ್ಟೆ. ಪ್ರಜಾಕೀಯದ ಮೂಲಕ ರಾಜಕೀಯದ ಘೋಷಣೆ ಮಾಡಿದ್ದರೂ ಕೈಲಿ 3 ಸಿನಿಮಾಗಳಿವೆ.

  ಉಪೇಂದ್ರ ಮತ್ತೆ ಹುಟ್ಟಿ ಬಾ, ಉಪ್ಪಿರುಪ್ಪಿ ಮತ್ತು ಹೋಮ್ ಮಿನಿಸ್ಟರ್ ಚಿತ್ರಗಳು ಚಿತ್ರೀಕರಣ ಹಂತದಲ್ಲಿವೆ. ಆದರೆ, ಇದಾದ ನಂತರ ಬೇರೆ ಯಾವುದೇ ಚಿತ್ರಗಳನ್ನು ಒಪ್ಪಿಕೊಳ್ಳದೇ ಇರಲು ಉಪೇಂದ್ರ ನಿರ್ಧರಿಸಿದ್ದಾರಂತೆ. ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳುವ ಯೋಚನೆ ಉಪೇಂದ್ರ ಅವರಿಗೆ ಇದ್ದ ಹಾಗಿದೆ.

  ರಾಜಕೀಯಕ್ಕಾಗಿ ಉಪೇಂದ್ರ ಕೈಬಿಟ್ಟಿರುವುದು ಸಣ್ಣ ಚಿತ್ರಗಳನ್ನೇನೂ ಅಲ್ಲ. ಚಿರಂಜೀವಿ ಅಭಿನಯದ 151ನೇ ಚಿತ್ರವನ್ನು ಪ್ರಜಾಕೀಯ ಪಕ್ಷಕ್ಕಾಗಿಯೇ ಕೈಬಿಟ್ಟರಂತೆ ಉಪೇಂದ್ರ. ಅಷ್ಟೇ ಅಲ್ಲ, ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರದಲ್ಲಿ ನಟಿಸದೇ ಇರಲು ಕೂಡಾ ಇದೇ ಕಾರಣ ಎನ್ನಲಾಗುತ್ತಿದೆ. ಇವುಗಳನ್ನು ಹೊರತುಪಡಿಸಿ ಅವರೇ ನಟಿಸಿ ನಿರ್ದೇಶಿಸಬೇಕಾಗಿದ್ದ ಚಿತ್ರವನ್ನೂ ಉಪೇಂದ್ರ ಸದ್ಯಕ್ಕೆ ಮುಂದೆ ಹಾಕಿದ್ದಾರೆ. ಅಲ್ಲಿಗೆ ಉಪೇಂದ್ರ ಕಂಪ್ಲೀಟ್ ಪೊಲಿಟಿಷಿಯನ್ ಆಗುವ ಕಾಲ ಹತ್ತಿರ ಬಂದಾಗಿದೆ.

  Related Articles :-

  WELCOME WELCOME ಉಪ್ಪಿ - ಹೆತ್ತವರು, ಸಚಿವರು, ನಾಯಕರಿಂದ ಸ್ವಾಗತ ಮತ್ತು ಬುದ್ದಿಮಾತು

  ಮೋದಿ ಓಕೆ, ಆದರೆ ರಾಜ್ಯಕ್ಕೆ ಹೊಸ ಪ್ಲಾನ್ ಬೇಕು - ಖಾಕಿ ತೊಟ್ಟುಬಂದ ಉಪೇಂದ್ರ ಹೇಳಿದ ಹೊಸ ವಿಷಯ ಏನು..?

  ಉಪ್ಪಿ ಸಿಎಂ, ಪಿಎಂ ಆಗೋದೇನೂ ಬೇಡ - ಪ್ರಿಯಾಂಕಾ ಉಪೇಂದ್ರ

  ಭಾರತಕ್ಕೆ ನರೇಂದ್ರ, ಕರ್ನಾಟಕಕ್ಕೆ ಉಪೇಂದ್ರ - ಅಭಿಮಾನಿಗಳ ಪಾಲಿಗೆ ಇಂದು ಉಪ್ಪಿ ಡೇ

  ಬಿಜೆಪಿ ಅಲ್ಲ, ಕಾಂಗ್ರೆಸ್ ಅಲ್ಲ, ಜೆಡಿಎಸ್ ಅಲ್ಲ - ಉಪೇಂದ್ರ ಕಟ್ಟುತ್ತಿರುವುದು ಹೊಸ ಪಕ್ಷ

  ನಾನು.. ನನ್ನ ರಾಜಕೀಯ ಕನಸು - ಉಪೇಂದ್ರ ಹೇಳಿಕೊಂಡ ರಾಜಕೀಯ ಕಲ್ಪನೆ ಇದು

 • ಪ್ರಜಾಕೀಯಕ್ಕೆ ಶುಭ ಹಾರೈಸಿದ್ದ ಕಿಚ್ಚ

  sudeep upendra at mukunda murari pressmeet

  ಕಿಚ್ಚ ಸುದೀಪ್ ತಾವು ರಾಜಕೀಯಕ್ಕೆ ಬರಲ್ಲ. ಸೇವೆ ಮಾಡೋಕೆ ರಾಜಕೀಯಕ್ಕೆ ಬರಲೇಬೇಕೆಂದೇನೂ ಇಲ್ಲ. ನನ್ನ ಕೈಲಾದ ನೆರವು, ಸಹಾಯವನ್ನು ರಾಜಕೀಯದಲ್ಲಿ ಇಲ್ಲದೆಯೂ ಮಾಡಬಹುದು. ರಾಜಕೀಯ ನನ್ನ ಕ್ಷೇತ್ರವಲ್ಲ ಅನ್ನೋ ಮಾತನ್ನು ಹಲವು ಬಾರಿ ಹೇಳಿದ್ದಾರೆ. ಇತ್ತೀಚೆಗಂತೂ ಸುದೀಪ್ ರಾಜಕೀಯ ಪ್ರವೇಶ ದೊಡ್ಡ ಸುದ್ದಿಯಾದಾಗ ಸ್ಪಷ್ಟವಾಗಿಯೇ ನಿರಾಕರಿಸಿದ್ದರು.

  ಹೀಗಿರುವ ಸುದೀಪ್, ತಮ್ಮ ಮಿತ್ರರ ರಾಜಕೀಯಕ್ಕೆ ಏನಂತಾರೆ..? ಈ ಪ್ರಶ್ನೆ ಕಾಡುತ್ತಲೇ ಇತ್ತು. ಆದರೆ, ಉತ್ತರ ಸಿಕ್ಕಿರಲಿಲ್ಲ. ಅದರಲ್ಲೂ ಉಪೇಂದ್ರ ಪ್ರಜಾಕೀಯ ಘೋಷಿಸಿದ ನಂತರ ಇದೇ ಮೊದಲ ಬಾರಿಗೆ ಪತ್ರಕರ್ತರಿಗೆ ಎದುರಾಗಿದ್ದ ಸುದೀಪ್, ಪ್ರಜಾಕೀಯದ ಬಗ್ಗೆಯೂ ಮಾತನಾಡಿದ್ದಾರೆ.

  ಉಪೇಂದ್ರ ಅವರ ಆಲೋಚನೆಗಳು ಬೆರಗು ಮೂಡಿಸುತ್ತಿವೆ. ಅವರ ಪ್ರಜಾಕೀಯದ ಕಲ್ಪನೆ ಇಷ್ಟವಾಯ್ತು. ಅವರಿಗೆ ಯಶಸ್ಸು ಸಿಗಲಿ ಎಂದಿದ್ದಾರೆ. ಅಷ್ಟೇ ಅಲ್ಲ, ನನಗೆ ರಾಜಕೀಯ ಆಗಿಬರಲ್ಲ. ಇರುವಷ್ಟು ದಿನ ಸಾಮಾನ್ಯ ಮನುಷ್ಯನಾಗಿಯೇ ಇರಲು ಬಯಸುತ್ತೇನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. 

   

 • ಪ್ರತಿ ಚುನಾವಣೆಯ 6 ತಿಂಗಳ ಮುಂಚೆ ಬರ್ತಾರೆ ಉಪೇಂದ್ರ

  upendra different politics

  ಸೋಲಿನ ಭಯವಿಲ್ಲದೆ ಸಾಯುವವರೆಗೂ ಪ್ರಯತ್ನ ಮಾಡುತ್ತಲೇ ಇರುತ್ತೇನೆ. ಇದು ಉಪೇಂದ್ರ ತಮ್ಮ ಪ್ರಜಾಕೀಯದ ಬಗ್ಗೆ ಹೇಳಿರುವ ಮಾತು. ಗೆಲ್ಲುತ್ತೇನೆ ಎಂಬ ನಂಬಿಕೆ ಇದೆ. ಗೆದ್ದರೆ ಸಂತೋಷ. ಅಕಸ್ಮಾತ್ ಸೋತರೂ ಪ್ರಯತ್ನ ಬಿಡಲ್ಲ. ಸಾಯುವವರೆಗೂ ಪ್ರಯತ್ನ ಮಾಡ್ತಾನೆ ಇರ್ತೀನಿ ಅಂತಾರೆ ಉಪೇಂದ್ರ.

  ಅಂದಹಾಗೆ ಉಪೇಂದ್ರ ಪ್ರತಿ ಚುನಾವಣೆಯ 6 ತಿಂಗಳು ಮುಂಚೆ ಬರುತ್ತಾರಂತೆ. ಅಧಿಕಾರ ಇರಲಿ, ಇಲ್ಲದೇ ಇರಲಿ.. ರಾಜಕೀಯವನ್ನೇ ವೃತ್ತಿಯಾಗಿಸಿಕೊಂಡಿರುವವರಿಗೆ ಇದು ಅಚ್ಚರಿಯಾಗಿ ಕಾಣಿಸಬಹುದು. ಆದರೆ, ರಾಜಕೀಯವನ್ನೇ ವೃತ್ತಿಯಾಗಿಸಿಕೊಂಡು ಅದೊಂದನ್ನೇ ಮಾಡಲು ಹೊರಟರೆ, ಖರ್ಚಿಗಾಗಿ ಬೇರೆಯವರನ್ನು ಅವಲಂಬಿಸಬೇಕು ಅಥವಾ ಕೂಡಿಟ್ಟದ್ದನ್ನೆಲ್ಲ ಖರ್ಚು ಮಾಡಬೇಕು. ಎರಡೂ ಅಪಾಯಕಾರಿ ಎನ್ನುವುದು ಉಪೇಂದ್ರ ವಾದ. ಹೀಗಾಗಿ ಪ್ರತಿ ಚುನಾವಣೆಯ 6 ತಿಂಗಳು ಮೊದಲು ಉಪೇಂದ್ರ ಪ್ರತ್ಯಕ್ಷವಾಗ್ತಾರೆ. ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇರುತ್ತೆ. 

  ಹಾಗಂತ ಉಪೇಂದ್ರ ಎಲೆಕ್ಷನ್ ವೇಳೆಯಲ್ಲಷ್ಟೇ ಪ್ರತ್ಯಕ್ಷರಾಗುತ್ತಾರೆ ಎಂದುಕೊಳ್ಳಬೇಡಿ. ಹೋರಾಟಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ರಾಜಕೀಯ ಎಂದರೆ, ಇಷ್ಟು ದಿನ ಬೇರೆಯೇ ತೆರನಾದವರನ್ನು ನೋಡಿದವರಿಗೆ ಇದು ಅವಕಾಶವಾದ ಎನ್ನಿಸಬಹುದು. ಆದರೆ, ಉಪೇಂದ್ರ ತಮ್ಮ ನಿಲುವಿನ ಬಗ್ಗೆ ಸ್ಪಷ್ಟತೆ ಹೊಂದಿರುವುದಂತೂ ನಿಜ.

 • ಪ್ರೀತಿಪ್ರೇಮ ಪುಸ್ತಕದ್ ಬದ್ನೇಕಾಯ್ ಎಂದಿದ್ದ ಜಾಗದಲ್ಲೇ ಐ ಲವ್ ಯೂ

  same place opposite scene in i love you shooting

  ನೀನ್ ಕೊಟ್ರೆ ನಾನ್ ಕೊಡ್ತೀನಿ. ನಾನ್ ಕೊಡ್ಲಿಲ್ಲ ಅಂದ್ರೆ ನೀನ್ ಕೊಡಲ್ಲ. ಇಷ್ಟು ವಿಶಾಲವಾದ ಪ್ರಪಂಚದಲ್ಲಿ ನೀನು ಪ್ರೀತಿ ಅನ್ನೋ ಪುಟ್ಟ ಸರ್ಕಲ್‍ನಲ್ಲಿ ನಿಂತಿದ್ದೀಯ. ಜೀವನದ ಪ್ರಾಬ್ಲಂ ಅನ್ನೋದು ಜೀಪ್ ರೂಪದಲ್ಲಿ ಬಂದ್ರೆ, ನೀನು ಸರ್ಕಲ್‍ನಿಂದ ಹೊರಗೆ ಬರ್ತೀಯಾ.. ಪ್ರೀತಿ ಪ್ರೇಮ ಎಲ್ಲ ಪುಸ್ತಕದ ಬದ್ನೇಕಾಯ್. ಹೀಗೆ ಡೈಲಾಗ್ ಹೊಡೆದಿದ್ದ ಉಪೇಂದ್ರರ ಎ ಚಿತ್ರ ನೆನಪಿದ್ಯಾ..?

  ಐ ಲವ್ ಯೂ ಎಂದು ಬೆನ್ನು ಬೀಳುವ ಚಾಂದಿನಿಗೆ, ಉಪೇಂದ್ರ ಜೀವನ ಪಾಠ ಮಾಡೋ ಎ ಚಿತ್ರದ ಆ ಸೀನ್ ಸೂಪರ್ ಹಿಟ್ ಆಗಿತ್ತು. ಈಗ.. ಅದೇ ಜಾಗದಲ್ಲಿ.. ಅದೇ ನಂದಿಬೆಟ್ಟದಲ್ಲಿ ಅದೇ ಉಪೇಂದ್ರ, ರಚಿತಾ ರಾಮ್‍ಗೆ ಐ ಲವ್ ಯೂ ಎಂದಿದ್ದಾರೆ. ಇದು ಐ ಲವ್ ಯೂ ಚಿತ್ರಕ್ಕಾಗಿ.

  ಆರ್. ಚಂದ್ರು ನಿದೇಶನದ ಐ ಲವ್ ಯೂ ಚಿತ್ರದಲ್ಲಿ ಎ ಚಿತ್ರದ ಸೀನ್ ನೆನಪಿಸುವಂತೆ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಇತಿಹಾಸವನ್ನು ನೆನಪಿಸಿಕೊಳ್ಳುವುದು ಯಾರಿಗಾದರೂ ಖುಷಿ ಕೊಡುತ್ತೆ. ಇದು ಎ ಚಿತ್ರದಂತೆ ತಲೆಗೆ ಹುಳ ಬಿಡಲ್ಲ. ನೋಡುಗನ ಹೃದಯ ತಟ್ಟುವ ಸಿನಿಮಾ ಎಂದಿದ್ದಾರೆ ಉಪೇಂದ್ರ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery