ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯದಿಂದ ಹಿಂದೆ ಸರಿದು, ಸದ್ಯಕ್ಕೆ ಸಿನಿಮಾಗೇ ಸೀಮಿತವಾಗಿದ್ದಾರೆ. ಚುನಾವಣೆಯಿಂದ ಹಿಂದೆ ಸರಿದಿರುವ ಉಪೇಂದ್ರ ಸಿನಿಮಾಗೇ ಸಮಯ ಮೀಸಲಿಡುತ್ತಿದ್ದಾರೆ. ಉಪೇಂದ್ರ ಈಗ ಐ ಲವ್ ಯೂ ಸಿನಿಮಾಗೆ ಓಕೆ ಅಂದಿದ್ದಾರೆ.
ಇದು ಆರ್.ಚಂದ್ರು ನಿರ್ದೇಶನದ ಸಿನಿಮಾ. ಈ ಹಿಂದೆ ಉಪೇಂದ್ರ ಅವರಿಗಾಗಿ ಬ್ರಹ್ಮ ಚಿತ್ರ ನಿರ್ದೇಶಿಸಿದ್ದ ಚಂದ್ರು, ಮತ್ತೊಮ್ಮೆ ಉಪ್ಪಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ವಿಶೇಷ.
ಚಿತ್ರದ ಟೈಟಲ್‍ನಲ್ಲಿ ಉಪ್ಪಿಯ ನೆರಳೂ ಇದೆ. ಐ ಲವ್ ಯೂ ಚಿತ್ರಕ್ಕೆ ನನ್ನೇ ಪ್ರೀತ್ಸೆ ಅನ್ನೋದು ಟ್ಯಾಗ್‍ಲೈನ್. ಪ್ರೀತ್ಸೆ, ಉಪ್ಪಿ ಅಭಿನಯದ ಬ್ಲಾಕ್‍ಬಸ್ಟರ್ ಸಿನಿಮಾ ಅನ್ನೋದು ನೆನಪಿಸುವ ಅಗತ್ಯವೇ ಇಲ್ಲ.
ಚಿತ್ರ ಮೇ 18ರಂದು ಸೆಟ್ಟೇರುತ್ತಿದೆ. ಆ ದಿನ ಚಿತ್ರದ ಎಲ್ಲ ತಂತ್ರಜ್ಞರು, ಕಲಾವಿದರ ವಿವರ ನೀಡೋದಾಗಿ ಚಿತ್ರತಂಡ ತಿಳಿಸಿದೆ. ಈಗಾಗಲೇ ಉಪ್ಪಿ ರುಪ್ಪಿ, ಹೋಮ್ ಮಿನಿಸ್ಟರ್ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ಉಪೇಂದ್ರ ಈಗ 3ನೇ ಸಿನಿಮಾ ಒಪ್ಪಿಕೊಂಡಿರುವುದೇ ವಿಶೇಷ.