ಉಪೇಂದ್ರ ರಾಜಕೀಯ ಪ್ರವೇಶದ ಸುದ್ದಿ ಸಂಚಲನವನ್ನೇ ಸೃಷ್ಟಿಸಿದೆ. ಉಪೇಂದ್ರ ಈಗಾಗಲೇ ಇರುವ ಪಕ್ಷಗಳಲ್ಲೇ ಯಾವುದಾದರೂ ಒಂದು ಪಕ್ಷವನ್ನು ಆಯ್ಕೆ ಮಾಡಿಕೊಳ್ತಾರೋ..? ಹೊಸ ಪಕ್ಷ ಕಟ್ತಾರೋ..? ರಾಜಕೀಯ ಪಕ್ಷಗಳನ್ನೆಲ್ಲ ಬಿಟ್ಟು, ಸಮಾಜಮುಖಿ ಜನಜಾಗೃತಿಯಲ್ಲಿ ತೊಡಗಿಕೊಳ್ತಾರೋ..? ಯಾವುದೂ ಸ್ಪಷ್ಟವಿಲ್ಲ. ಆದರೆ, ಉಪೇಂದ್ರ ರಾಜಕೀಯ ಪ್ರವೇಶದ ಸುದ್ದಿಗೆ ರಾಜಕೀಯ ಮತ್ತು ಚಿತ್ರರಂಗದ ಕೆಲವು ಸೆಲಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಸುರೇಶ್ ಕುಮಾರ್, ಬಿಜೆಪಿ ಮುಖಂಡ
ಉಪೇಂದ್ರ ಅವರ ಬಳಿ ಒಳ್ಳೊಳ್ಳೆಯ ಆಲೋಚನೆಗಳಿವೆ. ಚಿಂತನೆಗಳಿವೆ. ಅಂತಹ ಹೊಸ ಆಲೋಚನೆಗಳಿರುವವರು ರಾಜಕೀಯಕ್ಕೆ ಬರಲಿ. ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿಲ್ಲ.
ಟಿ.ಎನ್. ಸೀತಾರಾಮ್, ನಿರ್ದೇಶಕ, ಮಾಜಿ ರಾಜಕಾರಣಿ
ನಟ ಉಪೇಂದ್ರಗೆ ಆಲ್ ದಿ ಬೆಸ್ಟ್. ಹೊಸಪಕ್ಷ ಕಟ್ಟಿ ರಾಜಕೀಯಕ್ಕೆ ಬರುವುದಾದರೆ ಒಳ್ಳೆಯದೇ. ಆದರೆ ಇದು ಸವಾಲಿನ ಕೆಲಸ, ಅಗ್ನಿಪರೀಕ್ಷೆ. ಈ ಎಲ್ಲಾ ಅಗ್ನಿ ಪರೀಕ್ಷೆಯನ್ನು ಮೆಟ್ಟಿ ನಿಲ್ಲಬೇಕು. ಉಪೇಂದ್ರ ರಾಜಕೀಯಕ್ಕೆ ಬರಲು ಇದು ಸೂಕ್ತ ಕಾಲ. ರಾಜಕೀಯಕ್ಕೆ ಬಂದು ಪ್ರಾಮಾಣಿಕ ಸೇವೆ ಸಲ್ಲಿಸಲಿ. ರಾಜಕೀಯಕ್ಕೆ ಬರುವುದಾರೆ ಉಪೇಂದ್ರಗೆ ಶುಭ ಕೋರುವೆ.
ಚಕ್ರವರ್ತಿ ಸೂಲಿಬೆಲೆ, ಚಿಂತಕ
ಅವರ ಚಿತ್ರಗಳಲ್ಲಿ ದೇಶದ ಕುರಿತು ಹಲವು ಚಿಂತನೆಗಳನ್ನು ಹೊರಹಾಕಿದ್ಧಾರೆ. ಅವುಗಳನ್ನು ನಾನು ನೋಡಿದ್ದೇನೆ.. ಆದರ್ಶದ ಚಿಂತನೆಗಳಿವೆ. ಪ್ರಸ್ತುತ ರಾಜಕೀಯದಲ್ಲಿ ಸಮರ್ಥ ನಾಯಕತ್ವ ಇಲ್ಲ. ಅಂಥಾದ್ದೊಂದು ಸಾಮರ್ಥ್ಯ ಬೆಳೆಸಿಕೊಂಡು ಉಪೇಂದ್ರ ರಾಜಕೀಯಕ್ಕೆ ಬರುವುದಾದರೆ ನನ್ನ ಸ್ವಾಗತವಿದೆ. ಅವ ನಿರ್ಧಾರವನ್ನು ಎದುರು ನೋಡುತ್ತಿದ್ದೇನೆ.
ಮಾಳವಿಕಾ ಅವಿನಾಶ್ - ನಟಿ, ಬಿಜೆಪಿ ಸದಸ್ಯೆ
ಉಪೇಂದ್ರ ರಾಜಕೀಯಕ್ಕೆ ಬರುವುದಾದರೆ ಸ್ವಾಗತಿಸುತ್ತೇನೆ. ಅವರಿಗೆ ಜನಪರ ಕಾಳಜಿಯಿದೆ. ಸಿನಿಮಾಗಳಲ್ಲಿ ಅದು ವ್ಯಕ್ತವೂ ಆಗಿದೆ. ಆದರೆ, ರಾಜಕೀಯ ಪಕ್ಷಕ್ಕೆ ಬರುವುದಾದರೆ ಪಕ್ಷದ ಕೆಲವು ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಬರಬೇಕು. ಇಲ್ಲದೇ ಇದ್ದರೆ ಕಷ್ಟ.
ಬಿ.ಸಿ. ಪಾಟೀಲ್, ನಟ, ಕಾಂಗ್ರೆಸ್ ಮುಖಂಡ
ಉಪೇಂದ್ರ ರಾಜಕೀಯಕ್ಕೆ ಬರುವುದಾದರೆ ಸ್ವಾಗತ. ಅವರಿಗೆ ಒಳ್ಳೆಯ ಚಿಂತನೆಗಳಿವೆ. ಅಂತಹವರು ರಾಜಕೀಯಕ್ಕೆ ಬರಬೇಕು.
ಇದೆಲ್ಲದರ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರಿಗೆ ಬರುತ್ತಿದ್ದು, ಆ ಸಭೆಯಲ್ಲಿ ಭಾಗವಹಿಸಲು ಉಪೇಂದ್ರ ಅವರಿಗೆ ಆಹ್ವಾನ ನೀಡುವ ಬಗ್ಗೆ ಬಿಜೆಪಿಯಲ್ಲಿ ಚಿಂತನೆ ನಡೆಯುತ್ತಿದೆಯಂತೆ.
Related Articles :-
ರಿಯಲ್ ಪಾಲಿಟಿಕ್ಸ್ಗೆ REAL STAR..? ನಾಳೆ ಅಧಿಕೃತವಾಗುತ್ತಾ..?
ರಾಜಕೀಯಕ್ಕೆ ಬರ್ತಾರಾ ಉಪೇಂದ್ರ..? ಯಾವಾಗ ಬರ್ತಾರೆ..?