` upendra, - chitraloka.com | Kannada Movie News, Reviews | Image

upendra,

 • Uppi's Naagarjuna Shooting starts on May 2

  nagarjuna

  The shooting of Upendra's new film Naagarjuna will start on May 2. The film pairs Uppi and Meghana Raj. The film is directed by Gurudutt of Psycho and Khaidi fame. The film was officially launched earlier this month in Mysuru.

  The shooting will start after the May 1 holiday. By the looks of the title it was considered an action thriller. But film sources said that it would be a family drama and Uppi is acting in this genre after a long time since Kutumba and Gowramma.

   

 • Uppi's Nephew Niranjan's Next Is 'Nam Hudugru Kathe’

  uppi's nephew niranjan's next is nam hudugru kathe

  After an impressive debut in '2nd Half’ starring alongside his beautiful aunt Priyanka Upendra, Real Star Upendra's nephew Niranjan Sudhindra returns with his second venture, which is titled as 'Nam Hudugru Kathe’.

  The muhurat of the film is scheduled on November 9 at Kanteerava studio. His real star uncle will set the camera rolling along with scores of film personalities to grace the event.

  A tale revolving around youths is being directed by H B Siddu in which Niranjan is paired opposite newcomer Riya Ranvik. Nam Hudugru Kathe's music is composed by Abhiman Rai with Surya S Kiran behind the camera. Senior artists - B Jayashree, Sharath Lohitashwa, Shankar Ashwath and others are cast in supporting roles for this boy's tale.

 • Uppi2 Final Trimming - Exclusive

  uppi 2 image

  The final trimming of Upendra's latest film Uppi2 is in full swing. The shooting of the film except for one song is complete. Therefore the final trimming that is under way now is very crucial and will decide the length of the film. However it is not turning out to be an easy process.

  Sources said that the trimming process involves long discussions and meetings and is taking longer than usual as it is a very ambitious film for Upendra. After the final trimming the film is expected to be about 135-140 minutes long. With one more song to be added, sources in the film team say that the final length of the film will be somewhere around 2 hours 30 minutes long. The location for shooting the final song has not yet been decided. 

 • Vijayalakshmi Urs Turns Producer With Production No 1

  vijaylakshmi urs turns prodcer

  Vijayalakshmi Urs who was the chief of Kanteerava Studio has turned producer with a new film which is all set to be launched on the 12th of December. Chief Minister Siddaramaiah will be launching the film.

  The new untitled film which stars Upendra and Rachita Ram is being directed by Madesh. Vijayalakshmi Urs herself has written the story of the film. Rajesh Katta is the cameraman, while Sadhu Kokila has been roped in as the music director of the film.

  KFCC president Sa Ra Govindu, KFPA president Muniratna, KCA chairman S V Rajendra Singh Babu, MLC Dr Jayamala and others are expected to be present during the occasion.

 • WELCOME WELCOME ಉಪ್ಪಿ - ಹೆತ್ತವರು, ಸಚಿವರು, ನಾಯಕರಿಂದ ಸ್ವಾಗತ ಮತ್ತು ಬುದ್ದಿಮಾತು

  uppi in politics

  ನಿನ್ನೆ ಉಪೇಂದ್ರ ರಾಜಕೀಯಕ್ಕೆ ಬರುತ್ತಾರೆ ಎಂಬ ಬಗ್ಗೆ ಯಾರಿಗೂ ಒಂದು ಸ್ಪಷ್ಟ ಚಿತ್ರಣ ಸಿಕ್ಕಿರಲಿಲ್ಲ. ಅಂಥಾದ್ದೊಂದು ಸ್ಪಷ್ಟ ರೂಪ ಸಿಕ್ಕ ಮೇಲೆ ಹಲವು ರಾಜಕಾರಣಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ತಂದೆ, ತಾಯಿ ಸೇರಿದಂತೆ ಹಲವರು ಸ್ವಾಗತಿಸಿದ್ದಾರೆ. ಇನ್ನೂ ಕೆಲವರು ನೋಡೋಣ.. ಏನ್ ಮಾಡ್ತೀರಿ ಅಂತಾ ಕಾಲೆಳೆದಿದ್ದಾರೆ. ವಿಷ್ ಮಾಡಲ್ಲ ಎಂದವರೂ ಇದ್ದಾರೆ. ಯಾರು ಯಾರು ಏನೇನು ಹೇಳಿದ್ದಾರೆ ಅನ್ನೋದನ್ನು ಬದಿಗಿಟ್ಟು ನೋಡೋದಾದ್ರೆ, ರಾಜ್ಯದಲ್ಲಿ ವಿದ್ಯಾರ್ಥಿಗಳು ಉಪೇಂದ್ರ ಅವರಿಗೆ ಶುಭ ಕೋರಿದ್ದಾರೆ. ಯುವಕ ಯುವತಿಯರು ಉಪ್ಪಿ ಐಡಿಯಾಗಳಿಗೆ ಥ್ರಿಲ್ ಆಗಿದ್ದಾರೆ. ಕೆಲವರು ಇದು ಭ್ರಮೆ. ವಾಸ್ತವಕ್ಕೆ ದೂರ ಎಂದಿದ್ದಾರೆ. ಒಟ್ಟಾರೆ ಅಭಿಪ್ರಾಯಗಳಲ್ಲಿ ನಾಯಕರ ಮಾತುಗಳು ಇಲ್ಲಿವೆ ನೋಡಿ. 

  ಅವನಿಗೆ ಚಿಕ್ಕಂದಿನಿಂದ ರಾಜಕೀಯದ ಆಸೆ ಇತ್ತು. ಅವನು ಒಳ್ಳೆಯದನ್ನೇ ಮಾಡ್ತಾನೆ. ಸಂತೋಷವಾಗಿದೆ. ನಮ್ಮ ಜೊತೆ ಏನೂ ಚರ್ಚೆ ಮಾಡಿರಲಿಲ್ಲ.

  ಅನುಸೂಯಮ್ಮ, ಉಪೇಂದ್ರ ತಾಯಿ

  ನನ್ನ ಮಗನ ಮೇಲೆ ನಂಬಿಕೆ ಇದೆ. ಏನೇ ಮಾಡಿದರೂ ಯೋಚಿಸಿಯೇ ಮಾಡುತ್ತಾನೆ. ಎಲ್ಲವನ್ನೂ ವಿನಾಯಕ ನಡೆಸಿಕೊಡುತ್ತಾನೆ

  ಮಂಜುನಾಥ್, ಉಪೇಂದ್ರ ತಂದೆ

  ಇಷ್ಟು ದಿನ ಉಪೇಂದ್ರ ಬಣ್ಣ ಹಚ್ಚಿಕೊಂಡು ಸಿನಿಮಾ ಮಾಡ್ತಾ ಇದ್ರು. ಈಗ ಬಣ್ಣ ಹಚ್ಚದೇ ರಾಜಕೀಯ ಮಾಡಲಿ. ಜಾತ್ಯತೀತ ತತ್ವದಡಿ ಉಪೇಂದ್ರ ರಾಜಕೀಯ ಮಾಡಲಿ. ಅವರಿಗೆ ಸ್ವಾಗತ.

  ಡಿ.ಕೆ. ಶಿವಕುಮಾರ್, ಸಚಿವ

  ಉಪೇಂದ್ರ ಹೊಸ ಪಕ್ಷ ಸ್ಥಾಪಿಸಲು ಸ್ವತಂತ್ರರಿದ್ದಾರೆ. ಉಪೇಂದ್ರ ಹೊಸ ಪಕ್ಷ ಸ್ಥಾಪನೆ ಮಾಡುವುದಕ್ಕಿಂತ ತಮ್ಮ ಐಡಿಯಾಲಜಿಗೆ ಒಪ್ಪುವಂತಹ ಪಕ್ಷಕ್ಕೆ ಸೇರ್ಪಡೆಯಾಗಲಿ.  ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಬರುವುದಾದರೆ ಬರಲಿ

  ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ವಿಪಕ್ಷ ನಾಯಕ 

  ನಾನು ಅವರಿಗೆ ಶುಭಾಶಯ ಕೋರುವುದಿಲ್ಲ. ಹೊಸ ಪಕ್ಷ ಕಟ್ಟುವುದು ಪ್ರಜಾಪ್ರಭುತ್ವದಲ್ಲಿ ಎಲ್ಲರ ಹಕ್ಕು. ಅದನ್ನು ತಡೆಯುವಂತಿಲ್ಲ. ಕರ್ನಾಟದಲ್ಲಿ ಹೊಸ ಪಕ್ಷ ಕಟ್ಟಿ ಯಶಸ್ವಿಯಾದ ನಟರಿಲ್ಲ

  ಪ್ರಮೋದ್ ಮಧ್ವರಾಜ್, ಸಚಿವ 

  ಉಪೇಂದ್ರ ಅವರ ಆಲೋಚನೆ ಯೋಜನೆ ಚೆನ್ನಾಗಿದೆ . ಅದರಲ್ಲಿ ಅವರು ಎಷ್ಟರ ಮಟ್ಟಿಗೆ ಯಶಸ್ಸು ಗಳಿಸುತ್ತಾರೆ ಎಂಬುದು ಪ್ರಶ್ನೆ. ವೈಯಕ್ತಿಕವಾಗಿ ಶುಭ ಹಾರೈಸುತ್ತೇನೆ. 

  ಸುರೇಶ್ ಕುಮಾರ್, ಬಿಜೆಪಿ ಶಾಸಕ 

  ನಟ ಉಪೇಂದ್ರ ಅವರಲ್ಲಿ ವಿಭಿನ್ನ ಆಲೋಚನೆಗಳಿವೆ. ಉಪೇಂದ್ರರ ಪ್ರಶ್ನೆಗಳಿಗೆ ರಾಜ್ಯದ ಜನ ತಲೆಬಾಗಬೇಕು. ನಾನೂ ಕೂಡಾ ತಲೆಬಾಗುತ್ತೇನೆ. ಉಪೇಂದ್ರ ಅವರೇ ಬೇರೆ ಪಕ್ಷಗಳಿಗೆ ಹೋಗಬೇಡಿ. ನೀವೇ ಹೊಸ ಪಕ್ಷವನ್ನು ಕಟ್ಟಿ. ನನ್ನ ಬೆಂಬಲ ಇದೆ.

  ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ

  ಉಪೇಂದ್ರ ಆಲೋಚನೆ ಚೆನ್ನಾಗಿದೆ. ಅವರಿಗೆ ಶ್ರೀರಾಮ ಸೇನೆ ಬೆಂಬಲ ನಿಡಲಿದೆ 

  ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಮುಖಂಡ

  ಅವರು ಜನರಿಗೇನು ಸೇವೆ ಕೊಟ್ಟಿದ್ದಾರೆ. ಜನ ಸಾಮಾನ್ಯರಿಗೆ ಏನು ಕೊಟ್ಟರು ಅನ್ನೋದು ಮುಖ್ಯ. ರಾಜ್​ಕುಮಾರ್ ರಾಜಕಾರಣವೇ ಬೇಡ ಎಂದು ದೂರ ಹೋಗಿದ್ದರು. ಇವರೇನು ಮಾಡ್ತಾರೆ ನೋಡೋಣ. 

  ಶಿವಳ್ಳಿ, ಶಾಸಕ

  ಯಾವ ಹುತ್ತದಲ್ಲಿ ಯಾವ ಹಾವಿದೆಯೋ ಗೊತ್ತಿಲ್ಲ. ಚುನಾವಣೆ ಹತ್ತಿರ ಬಂದಾಗ  ಹಲವರು ಹೊರಬರುತ್ತಾರೆ. ಅವರಿಂದ ನಮ್ಮ ಪಕ್ಷಕ್ಕೆ ಲಾಭವೂ ಇಲ್ಲ. ನಷ್ಟವೂ ಇಲ್ಲ. ಅವರ ಬಳಿ ತುಂಬಾ ದುಡ್ಡಿರಬೇಕು. ಅದಕ್ಕೇ ಬಂದಿದ್ದಾರೆ. 

  ವಿನಯ್ ಕುಲಕರ್ಣಿ, ಶಾಸಕ

 • Will Kajal Aggarwal Come To Kannada With 'Kabza'?

  wll kajal aggareal come to kannada with kabza

  Upendra starrer 'Kabza' being directed and produced by R Chandru has been officially launched on Monday. Though the film has been launched, the heroine of the film is yet to be selected and there is a news that Kajal Agarwal might be roped in as the heroine of the film.

  Kajal Agarwal being roped in as the heroine has been doing the rounds for quite sometime. However, Chandru says that if Kajal gives her dates by December, she will be the heroine, otherwise he has to look for another option.

  'We are already in talks with Kajal Agarwal for the heroine's role. Though she has liked the story and we are okay with her remuneration, there is a confusion regarding her dates. Kajal is busy and is likely to give dates by April next year. However, we are starting the shooting by December and we want her dates by that time. If we get the dates by that time, Kajal will be the heroine of the film. Otherwise, we have to look for another option' says R Chandru.

 • Will Upendra Return To Films?

  upendra image

  The crisis in the Karnataka Prajnavantara Janata Paksha that came out in the open on Monday is a big crisis in the new party. It is also a shock for both Upendra and his fans who had high hopes on his political career. Has Upendra made a mistake by embracing an already existing party rather than register a new one? That is what looks like the problem now. Uppi has announced that he will announce his next move on Tuesday. Hardcore fans hope that he return to films but sources say that he has moved too far into politics and away from films to turn back. There is no way Uppi will return to films. At best he may help in the release of films he has already completed and agreed to. But returning as an actor or director for a career is ruled out.

  So what next for Upendra. He has said that he did not want to create problems by asking for the take over of KPJP. So he allowed the original founder and his followers to be in control. That has come to haunt him. Sources say there is serious discussion about registering a new party with the name Prajakeeya. That has been the slogan word for Uppi since his jump into politics. But does he have enough time to launch another party before the Assembly elections that can be announced anytime this month. Upendra may be forced to get his candidates on different symbols across the state. 

  There is also intense speculation that he will join the BJP. Even when Upendra had called the first press conference in Ruppis Resort to announce his political plans, there was speculation that he is joining the BJP. But it turned out to be false. Similarly it may turn out to be a false development. There is no hint either from Uppi or his close associates about this. Even the BJP is silent on this and no party leader has even spoken about it. 

  In all likelihood Upendra is likely to announce a new political formulation on Tuesday. We will have to wait for that. But for all practical purposes returning to films is ruled out. 

 • ಅದ್ಧೂರಿ ಹುಟ್ಟುಹಬ್ಬ ಬೇಡ ಎಂದ ಉಪೇಂದ್ರ

  upendra tweets on his bday

  ಇತ್ತೀಚೆಗಷ್ಟೇ ಕಿಚ್ಚ ಸುದೀಪ್‌ ತಮ್ಮ ಹುಟ್ಟುಹಬ್ಬದ ಅದ್ಧೂರಿ ಆಚರಣೆಗೆ ಬ್ರೇಕ್‌ ಹಾಕಿದ್ದು ನಿಮಗೆಲ್ಲ ಗೊತ್ತೇ ಇದೆ. ಅದರ ಫಲಿತಾಂಶವೂ ಕಣ್ಣ ಮುಂದಿದೆ. ಸುದೀಪ್ ಕರೆಗೆ ಓಗೊಟ್ಟ ನೂರಾರು ಅಭಿಮಾನಿಗಳು ಆ ದಿನ ಅನ್ನಸಂತರ್ಪಣೆ, ರಕ್ತದಾನ, ಅನಾಥ ಮಕ್ಕಳಿಗೆ ಅನುದಾನ ನೀಡುವ ಒಳ್ಳೆಯ ಕೆಲಸಗಳಲ್ಲಿ ತೊಡಗಿಕೊಂಡರು. ಸುದೀಪ್​ ಹುಟ್ಟುಹಬ್ಬವನ್ನು ಸಾರ್ಥಕತೆಯಿಂದ ಆಚರಿಸಿದರು.

  ಅದೇ ಹಾದಿಯನ್ನು ತುಳಿಯುತ್ತಿದ್ದಾರೆ ಉಪೇಂದ್ರ. ಇದೇ ತಿಂಗಳ 18ಕ್ಕೆ ಉಪೇಂದ್ರ ಹುಟ್ಟುಹಬ್ಬವಿದೆ. ಆ ದಿನ ಹೂ-ಮಾಲೆ, ಕೇಕ್‌, ಬ್ಯಾನರ್‌ ಹಾಗೂ ಫ್ಲೆಕ್ಸ್‌ಗಳಿಗೆ ಹಣ ಖರ್ಚು ಮಾಡಬೇಡಿ ಎಂದು ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ ಉಪೇಂದ್ರ. ಅದರ ಬದಲು ನೇರವಾಗಿ ನನ್ನನ್ನು ಭೇಟಿ  ಮಾಡಿ ವಿಶ್ ಮಾಡಿದರೆ ಸಾಕು ಎನ್ನುವುದು ಉಪೇಂದ್ರ ಮಾತು. 

 • ಅಬ್ಬಾ.. ಬುಲ್‍ಬುಲ್ ಸಖತ್ ಹಾಟ್ ಮಗಾ..

  rachita ram looks glamorous

  ಅಯೋಗ್ಯ ಚಿತ್ರದಲ್ಲಿ ಅಪ್ಪಟ ಮಂಡ್ಯ ಹುಡುಗಿಯಾಗಿ ಕಂಗೊಳಿಸಿದ್ದ ಗುಳಿಕೆನ್ನೆ ಚೆಲುವೆ ರಚಿತಾ ರಾಮ್, ಆರ್.ಚಂದ್ರು ನಿರ್ದೇಶನದ ಐ ಲವ್ ಯೂ ಚಿತ್ರದಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ನನ್ನೇ ಪ್ರೀತಿಸು ಎಂಬ ಹಾಡಿನಲ್ಲಿ ರಚಿತಾ ರಾಮ್ ಅವರ ಹಾಟ್ ಲುಕ್ ಅಬ್ಬಾ ಎನ್ನುವಂತಿದೆ. 

  ರಚಿತಾ ರಾಮ್ ಅವರ ಸೌಂದರ್ಯ ಹಾಗೂ ಅವರ ಗುಳಿಕೆನ್ನೆಯ ಮೇಲೆ ಹಾಡು ಬರೆಯಲಾಗಿದೆಯಂತೆ. ಡಿಂಪಲ್ ಕ್ವೀನ್ ಡಿಂಪಲ್ ಮೇಲೆ ಬರೆದಿರುವ ಹಾಡಿನಲ್ಲೇ ಬುಲ್‍ಬುಲ್ ಇಷ್ಟು ಹಾಟ್ ಆಗಿ ನಟಿಸಿರೋದು.

  ಆ ಕಾಸ್ಟ್ಯೂಮ್‍ನಲ್ಲಿ ರಚಿತಾ ರಾಮ್ ಗ್ಲಾಮರಸ್ ಆಗಿ ಕಾಣುತ್ತಾರೆ. ಅವರೊಬ್ಬ ಪಕ್ಕಾ ಪ್ರೊಫೆಷನಲ್. ರಚಿತಾ ಅವರ ಕಂಫರ್ಟ್‍ನೆಸ್‍ಗಾಗಿ ಸೆಟ್‍ನಲ್ಲಿ ನಿರ್ದೇಶಕರು, ಕ್ಯಾಮೆರಾಮನ್ ಮಾತ್ರ ಇದ್ದೆವು ಎಂದಿದ್ದಾರೆ ಚಂದ್ರು. ಉಪೇಂದ್ರ ನಾಯಕರಾಗಿರುವ ಐ ಲವ್ ಯೂ ಚಿತ್ರ, ಶುರುವಾದಾಗಿನಿಂದಲೂ ದಿನೇ ದಿನೇ ನಿರೀಕ್ಷೆ ಹೆಚ್ಚಿಸುತ್ತಿದೆ.

 • ಅಭಿಮಾನಿಗಳೇ ಇವನಿಂದ ಮೋಸ ಹೋಗಬೇಡಿ - ಉಪ್ಪಿ ಎಚ್ಚರಿಕೆ

  upendra warns aganist frauds

  ಉಪೇಂದ್ರ ರಾಜಕೀಯಕ್ಕೆ ಬರುತ್ತಾರೆ, ಪ್ರಜಾಕೀಯ ಎಂಬ ಹೊಸ ಪಕ್ಷ ಕಟ್ಟುತ್ತಿದ್ದಾರೆ ಎಂದು ಸುದ್ದಿಯಾದ ತಕ್ಷಣವೇ ಇಂಥಾದ್ದೊಂದು ನಿರೀಕ್ಷೆ ಎಲ್ಲರಿಗೂ ಇತ್ತು. ಕೆಲವರು ಹಾಗೆ. ದುಡ್ಡು ದುಡಿಯಲು ಸುಲಭೋಪಾಯ ಕಂಡುಕೊಂಡು ಬಿಡುತ್ತಾರೆ. ಈಗ ಉಪೇಂದ್ರ ಅವರ ಪ್ರಜಾಕೀಯ ಪಕ್ಷಕ್ಕೂ ಇದೇ ಸವಾಲು ಎದುರಾಗಿದೆ. ಆದರೆ, ಆ ಸವಾಲನ್ನು ಸ್ವತಃ ಉಪೇಂದ್ರ ಬಹಿರಂಗಪಡಿಸಿದ್ದಾರೆ.

  ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಅವರ ಹೆಸರಿನಲ್ಲಿ ಹಣ ವಸೂಲು ಮಾಡುತ್ತಿರುವವನ ಫೋಟೋ ಹಾಕಿ, ಇವನೊಬ್ಬ 420. ಇವನ ಮಾತನ್ನು ನಂಬಬೇಡಿ ಎಂದಿದ್ದಾರೆ. ಇವನ ಹೆಸರೇನೋ ಗೊತ್ತಿಲ್ಲ. ಆದರೆ ಈ ಹಿಂದೆ ಉಪೇಂದ್ರ ಅಭಿಮಾನಿ ಸಂಘದಲ್ಲಿದ್ದನಂತೆ. ಆಗಲೂ ಇದೇ ರೀತಿ ಉಪೇಂದ್ರ ಹೆಸರಲ್ಲಿ ಇದೇ ರೀತಿ ಹಣ ವಸೂಲಿಗೆ ಯತ್ನಿಸಿದಾಗ, ಉಪೇಂದ್ರರೇ ಅತನನ್ನು ದೂರವಿಟ್ಟಿದ್ದರಂತೆ. ಈಗ ಉಪೇಂದ್ರ ಪ್ರಜಾಕೀಯದ ಹೆಸರು ಹೇಳಿದ್ದೇ ಮತ್ತೆ ಚಿಗಿತುಕೊಂಡಿರುವ ಈತ, ಉಪೇಂದ್ರ ಅವರ ಪ್ರಜಾಕೀಯದ ಹೆಸರಲ್ಲಿ ದುಡ್ಡು ಮಾಡಲು ಹೊರಟಿದ್ದಾನೆ.

  ಈತನ ಫೋಟೋ ಪ್ರಕಟಿಸಿರುವ ಉಪೇಂದ್ರ, ತಾನು ರಾಜಕೀಯಕ್ಕಾಗಿ ಯಾರ ಬಳಿಯೂ ಹಣ ಕೇಳುವುದಿಲ್ಲ. ಹಣವೇ ಇಲ್ಲದೆ ರಾಜಕೀಯ ಮಾಡುವ ಕನಸಿನೊಂದಿಗೆ ಬಂದಿದ್ದೇನೆ. ಇಂತಹವರನ್ನು ಹತ್ತಿರ ಸೇರಿಸಬೇಡಿ ಎಂದಿದ್ದಾರೆ.

 • ಆಲ್ ದಿ ಬೆಸ್ಟ್ ಉಪ್ಪಿ - ಶಿವಣ್ಣ ಶುಭಾಶಯ

  shivarajkumar wishes upendra

  ಉಪ್ಪಿ ತುಂಬಾ ಬುದ್ಧಿವಂತರು. ಅಂಥವರು ರಾಜಕೀಯಕ್ಕೆ ಬರಬೇಕು. ಅವರಲ್ಲಿ ಒಳ್ಳೊಳ್ಳೆಯ ಆಲೋಚನೆಗಳಿವೆ. ಆಲ್ ದಿ ಬೆಸ್ಟ್ ಉಪ್ಪಿ. ಇದು ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಶಿವರಾಜ್ ಕುಮಾರ್ ಶುಭಹಾರೈಕೆ.

  ನಮಗೆ ಎಂಥಹ ಜನಪ್ರತಿನಿಧಿಗಳು ಬೇಕು ಅನ್ನೋದನ್ನ ಜನರೂ ಅರ್ಥ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಜನರ ಪಾತ್ರವೇ ದೊಡ್ಡದು ಎಂದು ಅಭಿಪ್ರಾಯಟ್ಟಿದ್ದಾರೆ ಶಿವರಾಜ್ ಕುಮಾರ್.

  Related Articles :-

  ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಯಶ್ ಶುಭ ಹಾರೈಕೆ

 • ಇತಿಹಾಸ ಸೃಷ್ಟಿಸಿದ್ದ ಓಂಗೆ 25 ವರ್ಷ

  Shivarajkumar In Om Movie

  ಓಂ. 1995ರಲ್ಲಿ ರಿಲೀಸ್ ಆದ ಸಿನಿಮಾ. ಕನ್ನಡದಲ್ಲಿ ರೌಡಿಸಂ ಚಿತ್ರಗಳಿಗೆ ಓಂಕಾರ ಹಾಕಿದ ಸಿನಿಮಾ. ಶಿವರಾಜ್ ಕುಮಾರ್ ಇಮೇಜ್ ಬದಲಿಸಿದ ಸಿನಿಮಾ. ಉಪೇಂದ್ರ ನಿರ್ದೇಶನದ ಸಿನಿಮಾ ಕೇವಲ ಕನ್ನಡದಲ್ಲಷ್ಟೇ ಅಲ್ಲ, ದಕ್ಷಿಣ ಭಾರತ ಚಿತ್ರರಂಗದಲ್ಲೇ ದಾಖಲೆ ಸೃಷ್ಟಿಸಿದ ಚಿತ್ರ. ಆ ಚಿತ್ರ ರಿಲೀಸ್ ಆಗಿ 25 ವರ್ಷಗಳಾಗಿವೆ. ಅಂದಹಾಗೆ ಅತೀ ಹೆಚ್ಚು ಬಾರಿ ರೀ-ರಿಲೀಸ್ ಆದ ಚಿತ್ರವೂ ಓಂ. ಅಷ್ಟೇ ಏಕೆ, ಪ್ರತಿ ಬಾರಿ ರಿಲೀಸ್ ಆದಾಗಲೂ ಬಾಕ್ಸಾಫೀಸ್‍ನಲ್ಲಿ ಯಶಸ್ಸು ಕಂಡ ಸಿನಿಮಾ ಓಂ.

   

  ಶಿವರಾಜ್ ಕುಮಾರ್, ಪ್ರೇಮಾ, ಶ್ರೀಶಾಂತಿ ಪ್ರಧಾನ ಪಾತ್ರದಲ್ಲಿ ಚಿತ್ರದಲ್ಲಿ ರಿಯಲ್ ರೌಡಿಗಳೂ ಕಾಣಿಸಿಕೊಂಡಿದ್ದರು. ಹೀಗೆ ಹಲವಾರು ಸಂಚಲನ ಸೃಷ್ಟಿಸಿದ್ದ ಚಿತ್ರದ ರಜತ ಮಹೋತ್ಸವನ್ನು ಚಿತ್ರತಂಡ ವಿಶೇಷವಾಗಿಯೇ ಆಚರಿಸುತ್ತಿದೆ.

  OM 550 Releases In 20 Years - Exclusive

  ಶಿವರಾಜ್ ಕುಮಾರ್ ಅಭಿಮಾನಿಗಳು ಮೇ 18ರಂದು ಟ್ವಿಟರ್‍ನಲ್ಲಿ ಕಾಮನ್ ಡಿಪಿ ಸೃಷ್ಟಿಸುತ್ತಿದ್ದಾರೆ. ಅಭಿಮಾನಿಗಳ ಜೊತೆ ಕೈ ಜೋಡಿಸಿರುವುದು ನಿರ್ದೇಶಕರಾದ ಸಂತೋಷ್ ಆನಂದ ರಾಮ್, ಸಿಂಪಲ್ ಸುನಿ, ಬಹದ್ದೂರ್ ಚೇತನ್, ಪವನ್ ಒಡೆಯರ್, ರಿಷಬ್ ಶೆಟ್ಟಿ, ಯೋಗಿ ಜಿ.ರಾವ್. ಇದೆಲ್ಲದರ ಜೊತೆ ಇನ್ನೂ ಹಲವು ಅಚ್ಚರಿಗಳಿವೆ.

  Om To Re-Release in New Technology - Exclusive

  OM 550 Releases In 20 Years - Exclusive

 • ಉಪೇಂದ್ರ ತಾಳಿ ಕಟ್ಟೋಕೆ ಅಡ್ಡಿಯಾದವರು ಚಿಂದಿ ಚಿಂದಿ

  buddivantha 2 specalty

  ಉಪೇಂದ್ರ ಇನ್ನೇನು ಆ ಶೃಂಗಾರದ ಹೊಂಗೆಮರದ ಚೆಲುವೆಗೆ ತಾಳಿ ಕಟ್ಟಬೇಕು... ಎಂಟ್ರಿಯಾಗೇಬಿಟ್ಟರು 40 ರೌಡಿಗಳು. ಮದುಮಗನ ಗೆಟಪ್ಪಿನಲ್ಲಿದ್ದ ಉಪ್ಪಿ ಮತ್ತೆ ರೌದ್ರಾವತಾರ ತಾಳಿಬಿಟ್ಟರು. ತಗೋ.. ತಗೋ.. ಎನ್ನುತ್ತಾ ರೌಡಿಗಳನ್ನು ಚಿಂದಿ ಉಡಾಯಿಸಿಬಿಟ್ಟರು.

  ಇದೆಲ್ಲ ನಡೆದಿದ್ದು ಚಿಕ್ಕಬಳ್ಳಾಪುರದ ರಂಗಸ್ಥಳದ ಶ್ರೀರಂಗನಾಥ ದೇವಸ್ಥಾನದಲ್ಲಿ. ಬುದ್ದಿವಂತ 2 ಚಿತ್ರಕ್ಕಾಗಿ.

  ಟಿ.ಆರ್.ಚಂದ್ರಶೇಖರ್ ನಿರ್ಮಾಣದ ಬುದ್ದಿವಂತ 2 ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣ ಈಗ ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿದೆ. ಜಯರಾಂ ನಿರ್ದೇಶಕರಾಗಿರುವ ಚಿತ್ರವಿದು. ಚಿತ್ರದಲ್ಲಿ ಮೇಘನಾ ರಾಜ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.

 • ಉಪೇಂದ್ರ ಬೆತ್ತಲೆ ಜಗತ್ತಿನ ಸೀಕ್ರೆಟ್

  upendra feels happy about i love you

  ರಿಯಲ್ ಸ್ಟಾರ್ ಉಪೇಂದ್ರ ಮತ್ತೊಮ್ಮೆ ಲುಕ್‍ನಿಂದಲೇ ಸದ್ದು ಮಾಡಿದ್ದಾರೆ. ಐ ಲವ್ ಯು ಚಿತ್ರದ ಪೋಸ್ಟರ್‍ನಲ್ಲಿ ಹುಟ್ಟುಡುಗೆಯಲ್ಲಿ ಕಾಣಿಸಿಕೊಂಡಿರುವ ಉಪೇಂದ್ರ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಏನಿದರ ರಹಸ್ಯ ಅಂದ್ರೆ ಉಪೇಂದ್ರ ಹೇಳೋದು ``ನಾನಿಲ್ಲಿ ನಿರ್ದೇಶಕರ ಕೈಗೂಸು. ಇಡೀ ಸಿನಿಮಾ ಏನು ಅನ್ನೋದನ್ನ ಒಂದೇ ಲುಕ್‍ನಲ್ಲಿ ಹೇಳುವ ಪ್ರಯತ್ನ ಇಲ್ಲಿ ಆಗಿದೆ. ನನ್ನ ಪ್ರಕಾರ ಇದೊಂದು ಅತ್ಯುತ್ತಮ ಫಸ್ಟ್‍ಲುಕ್. ಇದು ಕನ್ನಡದ ಗೀತಾಂಜಲಿಯಾಗಲಿದೆ ಎಂದಿದ್ದಾರೆ ಉಪ್ಪಿ.

  ಚಿತ್ರದ ಕಥೆಯೇ ವಿಶೇಷವಾಗಿದೆ. ಹೀಗಾಗಿಯೇ ಉಪೇಂದ್ರ ಅವರನ್ನು ಈ ರೀತಿ ತೋರಿಸಲಾಗಿದೆ. ಅವರ ಪಾತ್ರವನ್ನು ಫಸ್ಟ್‍ಲುಕ್‍ನಲ್ಲೆ ವಿಭಿನ್ನವಾಗಿ ತೋರಿಸಬೇಕು ಎಂದುಕೊಂಡಿದ್ದೆ. ಅದಕ್ಕೆ ತಕ್ಕಂತೆ ಈ ಐಡಿಯಾ ಮಾಡಿದ್ದೇನೆ ಎಂದಿದ್ದಾರೆ ನಿರ್ದೇಶಕ ಆರ್.ಚಂದ್ರು.

 • ಉಪೇಂದ್ರ ಮಗಳು `ದೇವಕಿ'ಯಾಗಿ ಬಂದಳು

  aishwarya upendra is now devaki

  ಉಪೇಂದ್ರ ಅವರ ಮಗಳು ಐಶ್ವರ್ಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೌರಾ ಬ್ರಿಡ್ಜ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ನೆನಪಿದೆಯಷ್ಟೆ. ಈಗ ಹೌರಾ ಬ್ರಿಡ್ಜ್ ಚಿತ್ರದ ಹೆಸರು ಬದಲಾಗಿದೆ. ಆ ಚಿತ್ರದ ಹೆಸರೀಗ ದೇವಕಿ. ದೇವಕಿಯಾಗಿ ಕಾಣಿಸಿಕೊಂಡಿರೋದು ಉಪೇಂದ್ರ-ಪ್ರಿಯಾಂಕಾ ದಂಪತಿಯ ಮಗಳು ಐಶ್ವರ್ಯಾ.

  ಚಿತ್ರದ ಟೈಟಲ್ ಲಾಂಚ್ ಮಾಡಿದ್ದು ಬಟರ್‍ಫ್ಲೈ ಪಾರೂಲ್ ಯಾದವ್. ಅವರಿಗೆ ಪ್ರಿಯಾಂಕಾ ಇನ್ನೂ ಆ ಬ್ಯೂಟಿಯನ್ನು ಹೇಗೆ ಮೇಂಟೇನ್ ಮಾಡ್ತಿದ್ದಾರೆ ಅನ್ನೋದೇ ಅಚ್ಚರಿ. ಅದಕ್ಕೊಂದು ಮೆಚ್ಚುಗೆ ನೀಡಿದ ಪಾರೂಲ್, ಉಪ್ಪಿ-ಪ್ರಿಯಾಂಕಾ ಮಗಳಿಗೆ ಶುಭ ಹಾರೈಸಿದರು.

  ಚಿತ್ರದ ಕಥೆಗೆ ದೇವಕಿ ಅನ್ನೋ ಟೈಟಲ್ ಸೂಕ್ತವಾಗಿ ಹೊಂದುತ್ತೆ ಎಂಬ ಕಾರಣಕ್ಕೆ ದೇವಕಿ ಅನ್ನೋ ಟೈಟಲ್ ಇಟ್ಟೆವು ಎಂದವರು ನಿರ್ದೇಶಕ ಲೋಹಿತ್. ಮೂವರು ಸಾಫ್ಟ್‍ವೇರ್ ಇಂಜಿನಿಯರುಗಳು ನಿರ್ಮಿಸಿರುವ ದೇವಕಿ, ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ.

 • ಉಪೇಂದ್ರ ಮತ್ತೆ ಬರ್ತಾನೆ - Exclusive

  upendra movie to re release

  ಉಪೇಂದ್ರ, 1999ರಲ್ಲಿ ರಿಲೀಸ್ ಆಗಿದ್ದ ಸಿನಿಮಾ. ಪ್ರೇಮಾ, ರವಿನಾ ಟಂಡನ್, ದಾಮಿನಿ ಉಪೇಂದ್ರ ಚಿತ್ರಕ್ಕೆ ನಾಯಕಿಯರಾಗಿದ್ದರು. ಉಪೇಂದ್ರ ಹೀರೋ ಆಗಿ ನಟಿಸಿದ್ದ 2ನೇ ಸಿನಿಮಾ ಉಪೇಂದ್ರ. ಚಿತ್ರದ ಹೀರೋ ಹೆಸರೇ ನಾನು. ವಿಭಿನ್ನ ಪೋಸ್ಟರ್, ವಿಚಿತ್ರ ಕಥೆ, ಚಿತ್ರ ವಿಚಿತ್ರ ನಿರೂಪಣೆ, ಅರ್ಥಗರ್ಭಿತ ಅರ್ಥವಾಗದ ಸಂದೇಶ.. ಹೀಗೆ ಎಲ್ಲವೂ ಉಪ್ಪಿ ಸ್ಟೈಲ್‍ನಲ್ಲಿಯೇ ಇದ್ದ ಸಿನಿಮಾ ಡಬಲ್ ಶತದಿನೋತ್ಸವ ಆಚರಿಸಿತ್ತು. ತೆಲುಗಿನಲ್ಲೂ ಭರ್ಜರಿ ಸಕ್ಸಸ್ ಕಂಡಿದ್ದ ಸಿ ನಿಮಾ, ಆಂಧ್ರದಲ್ಲಿ ಶತದಿನೋತ್ಸವ ಕಂಡಿತ್ತು. 

  ಈ ಸಿನಿಮಾ 20 ವರ್ಷಗಳ ನಂತರ ಮತ್ತೆ ರಿಲೀಸ್ ಆಗುತ್ತಿದೆ. ಹಾಗೆಂದು ಅದೇ ವರ್ಷನ್‍ನಲ್ಲಿ ಅಲ್ಲ, ಸಿನಿಮಾದ ಟೆಕ್ನಾಲಜಿಯನ್ನು ಅಪ್‍ಡೇಟ್ ಮಾಡಿಸಿ ರಿಲೀಸ್ ಮಾಡೋಕೆ ರೆಡಿಯಾಗಿದ್ದಾರೆ ನಿರ್ಮಾಪಕ ಶಿಲ್ಪ ಶ್ರೀನಿವಾಸ್. ಶೀಘ್ರದಲ್ಲೇ ರಿಲೀಸ್ ದಿನಾಂಕ ಘೋಷಿಸಲಿದ್ದಾರೆ ಶಿಲ್ಪ ಶ್ರೀನಿವಾಸ್.

 • ಉಪೇಂದ್ರ ರಾಜಕೀಯ ಪ್ರವೇಶ - ಯಾರು ಏನೇನು ಹೇಳಿದ್ರು..?

  celebrities react

  ಉಪೇಂದ್ರ ರಾಜಕೀಯ ಪ್ರವೇಶದ ಸುದ್ದಿ ಸಂಚಲನವನ್ನೇ ಸೃಷ್ಟಿಸಿದೆ. ಉಪೇಂದ್ರ ಈಗಾಗಲೇ ಇರುವ ಪಕ್ಷಗಳಲ್ಲೇ ಯಾವುದಾದರೂ ಒಂದು ಪಕ್ಷವನ್ನು ಆಯ್ಕೆ ಮಾಡಿಕೊಳ್ತಾರೋ..? ಹೊಸ ಪಕ್ಷ ಕಟ್ತಾರೋ..? ರಾಜಕೀಯ ಪಕ್ಷಗಳನ್ನೆಲ್ಲ ಬಿಟ್ಟು, ಸಮಾಜಮುಖಿ ಜನಜಾಗೃತಿಯಲ್ಲಿ ತೊಡಗಿಕೊಳ್ತಾರೋ..? ಯಾವುದೂ ಸ್ಪಷ್ಟವಿಲ್ಲ. ಆದರೆ, ಉಪೇಂದ್ರ ರಾಜಕೀಯ ಪ್ರವೇಶದ ಸುದ್ದಿಗೆ ರಾಜಕೀಯ ಮತ್ತು ಚಿತ್ರರಂಗದ ಕೆಲವು ಸೆಲಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ.

  ಸುರೇಶ್ ಕುಮಾರ್, ಬಿಜೆಪಿ ಮುಖಂಡ

  ಉಪೇಂದ್ರ ಅವರ ಬಳಿ ಒಳ್ಳೊಳ್ಳೆಯ ಆಲೋಚನೆಗಳಿವೆ. ಚಿಂತನೆಗಳಿವೆ. ಅಂತಹ ಹೊಸ ಆಲೋಚನೆಗಳಿರುವವರು ರಾಜಕೀಯಕ್ಕೆ ಬರಲಿ. ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿಲ್ಲ.

  ಟಿ.ಎನ್. ಸೀತಾರಾಮ್, ನಿರ್ದೇಶಕ, ಮಾಜಿ ರಾಜಕಾರಣಿ 

  ನಟ ಉಪೇಂದ್ರಗೆ ಆಲ್​ ದಿ ಬೆಸ್ಟ್​. ಹೊಸಪಕ್ಷ ಕಟ್ಟಿ ರಾಜಕೀಯಕ್ಕೆ ಬರುವುದಾದರೆ ಒಳ್ಳೆಯದೇ. ಆದರೆ ಇದು ಸವಾಲಿನ ಕೆಲಸ, ಅಗ್ನಿಪರೀಕ್ಷೆ. ಈ ಎಲ್ಲಾ ಅಗ್ನಿ ಪರೀಕ್ಷೆಯನ್ನು ಮೆಟ್ಟಿ ನಿಲ್ಲಬೇಕು. ಉಪೇಂದ್ರ ರಾಜಕೀಯಕ್ಕೆ ಬರಲು ಇದು ಸೂಕ್ತ ಕಾಲ. ರಾಜಕೀಯಕ್ಕೆ ಬಂದು ಪ್ರಾಮಾಣಿಕ ಸೇವೆ ಸಲ್ಲಿಸಲಿ. ರಾಜಕೀಯಕ್ಕೆ ಬರುವುದಾರೆ ಉಪೇಂದ್ರಗೆ ಶುಭ ಕೋರುವೆ.

  ಚಕ್ರವರ್ತಿ ಸೂಲಿಬೆಲೆ, ಚಿಂತಕ

  ಅವರ ಚಿತ್ರಗಳಲ್ಲಿ ದೇಶದ ಕುರಿತು ಹಲವು ಚಿಂತನೆಗಳನ್ನು ಹೊರಹಾಕಿದ್ಧಾರೆ. ಅವುಗಳನ್ನು ನಾನು ನೋಡಿದ್ದೇನೆ.. ಆದರ್ಶದ ಚಿಂತನೆಗಳಿವೆ. ಪ್ರಸ್ತುತ ರಾಜಕೀಯದಲ್ಲಿ ಸಮರ್ಥ ನಾಯಕತ್ವ ಇಲ್ಲ. ಅಂಥಾದ್ದೊಂದು ಸಾಮರ್ಥ್ಯ ಬೆಳೆಸಿಕೊಂಡು ಉಪೇಂದ್ರ ರಾಜಕೀಯಕ್ಕೆ ಬರುವುದಾದರೆ ನನ್ನ ಸ್ವಾಗತವಿದೆ. ಅವ ನಿರ್ಧಾರವನ್ನು ಎದುರು ನೋಡುತ್ತಿದ್ದೇನೆ.

  ಮಾಳವಿಕಾ ಅವಿನಾಶ್ - ನಟಿ, ಬಿಜೆಪಿ ಸದಸ್ಯೆ

  ಉಪೇಂದ್ರ ರಾಜಕೀಯಕ್ಕೆ ಬರುವುದಾದರೆ ಸ್ವಾಗತಿಸುತ್ತೇನೆ. ಅವರಿಗೆ ಜನಪರ ಕಾಳಜಿಯಿದೆ. ಸಿನಿಮಾಗಳಲ್ಲಿ ಅದು ವ್ಯಕ್ತವೂ ಆಗಿದೆ. ಆದರೆ, ರಾಜಕೀಯ ಪಕ್ಷಕ್ಕೆ ಬರುವುದಾದರೆ ಪಕ್ಷದ ಕೆಲವು ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಬರಬೇಕು. ಇಲ್ಲದೇ ಇದ್ದರೆ ಕಷ್ಟ.

  ಬಿ.ಸಿ. ಪಾಟೀಲ್, ನಟ, ಕಾಂಗ್ರೆಸ್ ಮುಖಂಡ

  ಉಪೇಂದ್ರ ರಾಜಕೀಯಕ್ಕೆ ಬರುವುದಾದರೆ ಸ್ವಾಗತ. ಅವರಿಗೆ ಒಳ್ಳೆಯ ಚಿಂತನೆಗಳಿವೆ. ಅಂತಹವರು ರಾಜಕೀಯಕ್ಕೆ ಬರಬೇಕು.

  ಇದೆಲ್ಲದರ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ ಬೆಂಗಳೂರಿಗೆ ಬರುತ್ತಿದ್ದು, ಆ ಸಭೆಯಲ್ಲಿ ಭಾಗವಹಿಸಲು ಉಪೇಂದ್ರ ಅವರಿಗೆ ಆಹ್ವಾನ ನೀಡುವ ಬಗ್ಗೆ ಬಿಜೆಪಿಯಲ್ಲಿ ಚಿಂತನೆ ನಡೆಯುತ್ತಿದೆಯಂತೆ.

  Related Articles :-

  ರಿಯಲ್ ಪಾಲಿಟಿಕ್ಸ್​ಗೆ REAL STAR..?  ನಾಳೆ ಅಧಿಕೃತವಾಗುತ್ತಾ..?

  ರಾಜಕೀಯಕ್ಕೆ ಬರ್ತಾರಾ ಉಪೇಂದ್ರ..? ಯಾವಾಗ ಬರ್ತಾರೆ..? 

 • ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಯಶ್ ಶುಭ ಹಾರೈಕೆ

  upendra, yash

  ಉಪೇಂದ್ರ ರಾಜಕೀಯ ಪ್ರವೇಶಕ್ಕೆ ರಾಕಿಂಗ್ ಸ್ಟಾರ್ ಯಶ್ ಶುಭ ಕೋರಿದ್ದಾರೆ. ನನ್ನ ಪ್ರಕಾರ ಉಪೇಂದ್ರ ತುಂಬಾ ಲೇಟ್ ಮಾಡಿದ್ರು. ಇನ್ನೂ ಬೇಗ ಬರಬೇಕಿತ್ತು.

  ಅವರ ಕನಸುಗಳ ಬಗ್ಗೆ ನಮಗೆಲ್ಲ ಚೆನ್ನಾಗಿ ಗೊತ್ತು. ಅವರಿಂದ ಸ್ಫೂರ್ತಿ ಪಡೆದು ಚಿತ್ರರಂಗಕ್ಕೆ ಬಂದವನು ನಾನು. ಜೊತೆಯಲ್ಲಿರುವವರನ್ನು `ಗೋ' ಎನ್ನುವವರು ಲೀಡರ್ ಆಗಲ್ಲ. `ಲೆಟ್ ಅಸ್ ಗೋ' ಎಂದು ಜೊತೆಯಲ್ಲಿ ಕರೆದುಕೊಂಡು ಹೋಗುವವರು ಲೀಡರ್ ಆಗ್ತಾರೆ.

  ಅವರಲ್ಲಿ ಲೀಡರ್ ಶಿಪ್ ಕ್ವಾಲಿಟಿ ಇದೆ. ಅವರ ಕನಸುಗಳು ನನಸಾಗಲಿ. ಅವರ ಜೊತೆ ಕೈಜೋಡಿಸೋಣ. ಅವರು ಹೋಗುತ್ತಿರುವ ಸರಿಯಾಗಿಯೇ ಇದೆ. ಪ್ರಜಾಕೀಯ ಎಂಬ ಹೊಸ ಹೆಸರನ್ನು ಕೊಟ್ಟಿದ್ದಾರೆ. ಅವರು ಒಳ್ಳೆಯದನ್ನೇ ಮಾಡುತ್ತಾರೆ. ಆ ನಂಬಿಕೆ ನನಗಿದೆ. ಅವರಿಗೆ ನನ್ನ ಬೆಂಬಲವಿದೆ ಎಂದಿದ್ದಾರೆ ಯಶ್.

 • ಉಪೇಂದ್ರ ವಿರುದ್ಧ ಬಿತ್ತು 2ನೇ ಕೇಸು

  2nd complaint aganist upendra

  ರಿಯಲ್ ಸ್ಟಾರ್ ಉಪೇಂದ್ರ ಕೆಪಿಜೆಪಿ ಘೋಷಣೆ ಮಾಡಿದ್ದೇ ಮಾಡಿದ್ದು, ಒಂದರ ಹಿಂದೊಂದರಂತೆ ಎರಡು ಕೇಸುಗಳು ಬಿದ್ದಿವೆ. ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಅಧ್ಯಕ್ಷ ಉಪೇಂದ್ರ ವಿರುದ್ಧ ಮೊದಲ ಬೆಂಗಳೂರು ನಗರ ಜೆಡಿಯು ನಗರ ಪ್ರಧಾನ ಕಾರ್ಯದರ್ಶಿ ಎನ್. ನಾಗೇಶ್ ಎಂಬುವವರು ದೂರು ನೀಡಿದ್ದ ಬೆನ್ನಲ್ಲೇ, ಹೈಕೋರ್ಟ್ ವಕೀಲ ಎನ್.ಎಚ್.ಅಮೃತೇಶ್ ಉಪೇಂದ್ರ ವಿರುದ್ಧ ಇನ್ನೊಂದು ದೂರು ದಾಖಲಿಸಿದ್ದಾರೆ.

  ಉಪೇಂದ್ರ ಗಾಂಧಿ ಭವನದಲ್ಲಿ ತಮ್ಮ ರಾಜಕೀಯ ಪಕ್ಷ ಘೋಷಿಸುವ ಸುದ್ದಿಗೋಷ್ಟಿ ನಡೆಸಿದ್ದೇ ತಪ್ಪು ಎನ್ನುವುದು ಅಮೃತೇಶ್ ಅವರ ದೂರು. ಏಕೆಂದರೆ, ಗಾಂಧಿ ಭವನದಲ್ಲಿ ಗಾಂಧಿ ವಿಚಾರಧಾರೆ, ಚರ್ಚೆ, ಮತ್ತಿತರ ಚಟುವಟಿಕೆಗಳಷ್ಟೇ ನಡೆಯಬೇಕು. ಅದನ್ನು ಹೊರತುಪಡಿಸಿ ಯಾವುದೇ ರಾಜಕೀಯ ಪಕ್ಷಗಳ ನಾಯಕರಿಗೆ ಅದು ವೇದಿಕೆ ನೀಡುವುದಿಲ್ಲ. ಇದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಟ್ರಸ್ಟ್ ತನಗೆ ತಾನೇ ವಿಧಿಸಿಕೊಂಡಿರುವ ನಿರ್ಬಂಧ. ಹೀಗಿರುವಾಗ ಹೊಸ ರಾಜಕೀಯ ಪಕ್ಷದ ಘೋಷಣೆಗೆ ಗಾಂಧಿ ಭವನದಲ್ಲಿ ಅವಕಾಶ ನೀಡಿದ್ದು ತಪ್ಪು ಎನ್ನವುದು ಅಮೃತೇಶ್ ವಾದ.

  ಇನ್ನು ಎನ್. ನಾಗೇಶ್ ಅವರು ಸಲ್ಲಿಸಿದ್ದ ದೂರಿನಲ್ಲಿದ್ದ ಮತದಾರರಿಗೆ ಹಣ ತೆಗೆದುಕೊಳ್ಳಿ, ವೋಟು ನನಗೆ ಹಾಕಿ ಎಂಬ ಹೇಳಿಕೆಯ ವಿರುದ್ಧವೂ ಅಮೃತೇಶ್ ದೂರು ನೀಡಿದ್ದಾರೆ. ಒಟ್ಟಿನಲ್ಲಿ ರಾಜಕೀಯ ಪ್ರವೇಶ ಘೋಷಣೆಯಾದ ನಂತರ, ಕೆಲವೇ ದಿನಗಳಲ್ಲಿ ಉಪೇಂದ್ರ ಮೇಲೆ ಕೇಸ್ ಮೇಲೆ ಕೇಸ್ ಬೀಳುತ್ತಿವೆ.

  Related Articles :-

  ಉಪೇಂದ್ರ ವಿರುದ್ಧ ಬಿತ್ತು ಮೊದಲ ಕೇಸು

  ಶೋಭಾ ಸಿಟ್ಟಾದರು..ಉಪ್ಪಿ ಅಂಥಾದ್ದೇನು ಹೇಳಿದರು..?

 • ಉಪೇಂದ್ರ ವಿರುದ್ಧ ಬಿತ್ತು ಮೊದಲ ಕೇಸು

  upendra to face first case in politics

  ರಿಯಲ್ ಸ್ಟಾರ್, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಅಧ್ಯಕ್ಷ ಉಪೇಂದ್ರ ವಿರುದ್ಧ ಮೊದಲ ದೂರು ದಾಖಲಾಗಿದೆ. ದೂರು ನೀಡಿರುವುದು ಉಪೇಂದ್ರ ವಿರುದ್ಧ ದೂರು ನೀಡುತ್ತೇನೆ ಎಂದಿದ್ದ ಶೋಭಾ ಕರಂದ್ಲಾಜೆ ಅಲ್ಲ. ಬೆಂಗಳೂರು ನಗರ ಜೆಡಿಯು ನಗರ ಪ್ರಧಾನ ಕಾರ್ಯದರ್ಶಿ ಎನ್. ನಾಗೇಶ್ ಎಂಬುವವರು.

  ಉಪೇಂದ್ರ ಕೆಪಿಜೆಪಿ ಕುರಿತ ಸುದ್ದಿಗೋಷ್ಟಿಯಲ್ಲಿ ಮಾತನಾಡುವಾಗ ಬೇರೆಯವರು ನಿಮಗೆ ಹಣ ಕೊಟ್ಟರೆ ತೆಗೆದುಕೊಳ್ಳಿ, ಆದರೆ, ವೋಟನ್ನು ನಮಗೇ ಹಾಕಿ ಎಂದಿದ್ದರು. ಇದು ಮತದಾರರನ್ನು ಲಂಚ ತೆಗೆದುಕೊಳ್ಳಲು ಪ್ರೋತ್ಸಾಹ ನೀಡಿದಂತೆ ಎನ್ನುವುದು ನಾಗೇಶ್ ಅವರ ದೂರು. ಉಪೇಂದ್ರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಾಗೇಶ್, ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

  ಈ ಹಿಂದೆ ಅರವಿಂದ ಕೇಜ್ರಿವಾಲ್ ಇಂಥದ್ದೇ ಹೇಳಿಕೆ ನೀಡಿ, ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಉಪೇಂದ್ರ ಅವರಿಗೆ ಇಂತಹವುಗಳ ಬಗ್ಗೆ ಮಾಹಿತಿಯೂ ಇರಬೇಕು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery