` puneethrajkumar, - chitraloka.com | Kannada Movie News, Reviews | Image

puneethrajkumar,

 • ಯುವರತ್ನನಿಗೆ ಸಾಹೋ ಪವರ್

  saho stunt master directs yuvaratna

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದ್‍ರಾಮ್, ವಿಜಯ್ ಕಿರಗಂದೂರು ಕಾಂಬಿನೇಷನ್‍ನ ಯುವರತ್ನ ಚಿತ್ರ, ಶೂಟಿಂಗ್ ಹಂತದಲ್ಲೇ ಅಬ್ಬಾ ಎನ್ನಿಸುವಷ್ಟು ಕುತೂಹಲ ಹುಟ್ಟಿಸುತ್ತಿದೆ. ಒಂದರ ಹಿಂದೊಂದು ವಿಶೇಷಗಳನ್ನು ಸೇರಿಸಿಕೊಳ್ತಿರೋ ಯುವರತ್ನ ಚಿತ್ರಕ್ಕೆ ಈಗ ಸಾಹೋ ಪವರ್ ಸಿಕ್ಕಿದೆ.

  ಅರ್ಥಾತ್, ಸಾಹೋ, ಧೀರನ್, ಥೆರಿ, ವಿಶ್ವಾಸಂ.. ಮೊದಲಾದ ಸೂಪರ್ ಹಿಟ್ ಚಿತ್ರಗಳಿಗೆ ಮೈನವಿರೇಳಿಸುವ ಸ್ಟಂಟ್ ಆಯೋಜಿಸಿದ್ದ ಸ್ಟಂಟ್ ಮಾಸ್ಟರ್ ದಿಲೀಪ್ ಸುಬ್ರಹ್ಮಣ್ಯನ್ ಯುವರತ್ನ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡುತ್ತಿದ್ದಾರೆ.

  ಪವರ್ ಸ್ಟಾರ್ ಪವರ್‍ಗೆ ತಕ್ಕಂತೆ ಸಾಹಸ ಸಂಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿರುವ ಸಂತೋಷ್ ಆನಂದ್‍ರಾಮ್, ಅಭಿಮಾನಿಗಳು ಇನ್ನಷ್ಟು ಥ್ರಿಲ್ಲಾಗಿ ಕಾಯುವಂತೆ ಮಾಡಿದ್ದಾರೆ.

 • ರಾಮಾ ರಾಮಾ ರೇ ಡೈರೆಕ್ಟರ್‍ಗೆ ಪುನೀತ್ ಸಿನಿಮಾ

  director satyaprakash to direct next under puneeth'r banner

  ರಾಮಾ ರಾಮಾ ರೇ ಮೂಲಕ ಸಂಚಲನ ಮೂಡಿಸಿದ್ದ, ಒಂದಲ್ಲಾ ಎರಡಲ್ಲಾ ಚಿತ್ರದ ಮೂಲಕ ಭಾವನೆಗಳನ್ನು ಬಡಿದೆಬ್ಬಿಸಿದ್ದ ನಿರ್ದೇಶಕ ಸತ್ಯಪ್ರಕಾಶ್. ಅವರಿಗೀಗ ಒಂದೊಳ್ಳೆ ಆಫರ್ ಸಿಕ್ಕಿದೆ. ಅದು ಪುನೀತ್ ಬ್ಯಾನರ್‍ನಲ್ಲಿ. ಪಿಆರ್‍ಕೆ ಪ್ರೊಡಕ್ಷನ್‍ನಲ್ಲಿ ಚಿತ್ರ ನಿರ್ದೇಶನಕ್ಕೆ ಸತ್ಯಪ್ರಕಾಶ್ ರೆಡಿಯಾಗಿದ್ದಾರೆ. ಕಥೆಯನ್ನು ಪುನೀತ್ ಇಷ್ಟಪಟ್ಟಿದ್ದು, ಚಿತ್ರಕಥೆಯಲ್ಲಿ ಬ್ಯುಸಿಯಾಗಿದ್ದಾರಂತೆ ಸತ್ಯಪ್ರಕಾಶ್. ಅದು ಫೈನಲ್ ಆಗುವವರೆಗೆ ನೋ ಟಾಕ್ ಎಂದಿದ್ದಾರೆ ಸತ್ಯಪ್ರಕಾಶ್.

  ಕವಲುದಾರಿ ಸಕ್ಸಸ್ ಜೋಶ್‍ನಲ್ಲಿರುವ ಪುನೀತ್ ಬ್ಯಾನರ್‍ನಲ್ಲಿ ಈಗಾಗಲೇ ಮಾಯಾಬಜಾರ್, ಲಾ ಚಿತ್ರಗಳ ಶೂಟಿಂಗ್ ಮುಗಿದಿದೆ. ಪನ್ನಗಾಭರಣ, ಡ್ಯಾನಿಶ್ ಸೇಟ್ ಕಾಂಬಿನೇಷನ್ನಿನ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಒಂದರ ಹಿಂದೊಂದು ಬ್ರಿಡ್ಜ್ ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಪುನೀತ್, ಯವ ನಿರ್ದೇಶಕರಿಗೆ ಪ್ರೋತ್ಸಾಹ ನೀಡುತ್ತಿರುವುದು ವಿಶೇಷ.

 • ರಿಷಿ ಚಿತ್ರಕ್ಕೆ ಅಪ್ಪು ಹಾಡು

  puneeth sings a song for rishi's movie

  ತಮ್ಮದೇ ಬ್ಯಾನರಿನಲ್ಲಿ ಕವಲುದಾರಿ ಚಿತ್ರ ನಿರ್ಮಿಸಿ ಗೆದ್ದಿದ್ದರು ಪುನೀತ್ ರಾಜ್‍ಕುಮಾರ್. ಆ ಚಿತ್ರದಲ್ಲಿ ಹೀರೋ ಆಗಿದ್ದ ರಿಷಿ, ಈಗ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಿಷಿ ನಟಿಸುತ್ತಿರುವ ಹೊಸ ಚಿತ್ರದಲ್ಲಿ ಹಾಡುವ ಮೂಲಕ ಪುನೀತ್ ರಿಷಿಗೆ ಗುಡ್ ಲಕ್ ಹೇಳಿದ್ದಾರೆ.

  ಅನೂಪ್ ರಾಮಸ್ವಾಮಿ ಕಶ್ಯಪ್ ಎಂಬುವರು ನಿರ್ದೇಶಿಸುತ್ತಿರುವ ಚಿತ್ರಕ್ಕೆ ದೇವರಾಜ್, ಪ್ರಶಾಂತ್ ರೆಡ್ಡಿ, ಜನಾರ್ದನ್ ಚಿಕ್ಕಣ್ಣ ನಿರ್ಮಾಪಕರು.

  ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದಲ್ಲಿ ರಿಷಿಗೆ ಧನ್ಯಾ ನಾಯಕಿಯಾಗಿ ನಟಿಸುತ್ತಿದ್ದು, ದತ್ತಣ್ಣ, ರಂಗಾಯಣ ರಘು ಮೊದಲಾದವರು ನಟಿಸಿದ್ದಾರೆ.

 • ಲಕ್ಕಿಮ್ಯಾನ್ ಡ್ಯಾನ್ಸ್ : ಅಪ್ಪು ಪ್ರಭುದೇವ ಫೀಲಿಂಗ್ಸ್ ಏನು?

  ಲಕ್ಕಿಮ್ಯಾನ್ ಡ್ಯಾನ್ಸ್ : ಅಪ್ಪು ಪ್ರಭುದೇವ ಫೀಲಿಂಗ್ಸ್ ಏನು?

  ಪ್ರಭುದೇವ ಅವರನ್ನು ಬಹಳಷ್ಟು ಸಾರಿ ಭೇಟಿ ಮಾಡಿದ್ದೇನೆ. ನಾನು ಅವರ ಫ್ಯಾನ್. ಅವರ ಜೊತೆ ಲಕ್ಕಿಮ್ಯಾನ್ ಚಿತ್ರದಲ್ಲಿ ಡ್ಯಾನ್ಸ್ ಮಾಡಿದ್ದು ಮರೆಯಲಾಗದ ಅನುಭವ. ನೆಚ್ಚಿನ ಡ್ಯಾನ್ಸರ್ ಜೊತೆ ಡ್ಯಾನ್ಸ್ ಮಾಡುವ ಅವಕಾಶ ಸಿಕ್ಕಾಗ ಒಬ್ಬ ಅಭಿಮಾನಿಯ ಖುಷಿ ಹೇಗಿರುತ್ತೋ.. ನನಗೂ ಹಾಗೆಯೇ ಆಗಿದೆ. ಇದು ಪ್ರಭುದೇವ ಜೊತೆ ಲಕ್ಕಿಮ್ಯಾನ್ ಚಿತ್ರದಲ್ಲಿ ಹೆಜ್ಜೆ ಹಾಕಿದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮಾತಾದರೆ, ಅತ್ತ ಪ್ರಭುದೇವ ಕೂಡಾ ಇದಕ್ಕೆ ಹೊರತಾಗಿಲ್ಲ.

  ನಿಮ್ಮೊಂದಿಗೆ ಡ್ಯಾನ್ಸ್ ಮಾಡಿದ್ದು ಬಹಳ ಖುಷಿಕೊಟ್ಟ ವಿಚಾರ. ನೀವೊಬ್ಬ ಸಿಹಿಯಾದ ಮನಸ್ಸುಳ್ಳ ಅದ್ಭುತ ವ್ಯಕ್ತಿ ಎಂದು ಹೇಳಿದ್ದಾರೆ ಪ್ರಭುದೇವ.

  ಲಕ್ಕಿಮ್ಯಾನ್, ತಮಿಳಿನ ಓ ಮೈ ಕಡವುಳೆ ಚಿತ್ರದ ರೀಮೇಕ್. ಕನ್ನಡದಲ್ಲಿ ಈ ಚಿತ್ರವನ್ನು ಚಿತ್ರ, ಮನಸೆಲ್ಲ ನೀನೆ ಚಿತ್ರಗಳಲ್ಲಿ ನಟಿಸಿದ್ದ ಹೀರೋ ನಾಗೇಂದ್ರ ಪ್ರಸಾದ್ ಡೈರೆಕ್ಟ್ ಮಾಡುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ ಪ್ರಧಾನ ಪಾತ್ರಗಳಲ್ಲಿದ್ದಾರೆ.

 • ವ್ಹಾರೆವ್ಹಾ.. Gentleman

  gentlaman trailer released

  ಡೈನಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್ ಅಭಿನಯದ ಜೆಂಟಲ್ಮನ್ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ರಿಲೀಸ್ ಮಾಡಿದ್ದು ಪುನೀತ್ ಮತ್ತು ಧ್ರುವ ಸರ್ಜಾ ಎನ್ನುವುದೇ ವಿಶೇಷ. ಇನ್ನೂ ವಿಶೇಷವೆಂದರೆ ಪ್ರಜ್ವಲ್ ಹೇಳಿದ ಮಾತು. ‘ನನಗೆ ಸಿನಿಮಾ ರಂಗಕ್ಕೆ ಬರಲು ಸ್ಪೂರ್ತಿಯೇ ಪುನೀತ್ ಮತ್ತು ವಯಸ್ಸಿನಲ್ಲಿ ಚಿಕ್ಕವನಾದರೂ ಧ್ರುವ ನನಗೆ ಸದಾ ಪ್ರೇರಣೆ ’ ಎಂದರು ಪ್ರಜ್ವಲ್.

  ಜಡೇಶ್ ಕುಮಾರ್ ನಿರ್ದೇಶನದ ಜೆಂಟಲ್ಮ್ಯಾನ್ ಟ್ರೇಲರ್ ಟೆಕ್ನಿಕಲ್ ಸಖತ್ತಾಗಿದೆ. ಕ್ಯಾಮೆರಾ, ಮ್ಯೂಸಿಕ್, ಡೈಲಾಗ್ ಎಲ್ಲವೂ ಅದ್ಭುತ ಕ್ವಾಲಿಟಿಯಲ್ಲಿದೆ ಎಂದು ಮೆಚ್ಚಿಕೊಂಡರು ಪುನೀತ್. ಅಫ್ಕೋರ್ಸ್.. ಚಿತ್ರದ ಟ್ರೇಲರ್ ನೋಡಿದವರಿಗೆ ಸಿನಿಮಾ ನೋಡಲೇಬೇಕು ಎಂದು ಕುತೂಹಲ ಹುಟ್ಟಿಸುವಂತಿದೆ ಟ್ರೇಲರ್. ಹೆಣ್ಣು ಮಕ್ಕಳ ಕಿಡ್ನಾಪ್ ಕಥೆ, ಒಂದು ಕ್ಯೂಟ್ ಲವ್ ಸ್ಟೋರಿ ಮತ್ತು ಇವೆಲ್ಲದರ ಮಧ್ಯೆ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ನಲ್ಲಿ ಒದ್ದಾಡುವ ಯುವಕನ ಹೋರಾಟ.

  ಗುರುದೇಶ ಪಾಂಡೆ ನಿರ್ಮಾಣದ ಜೆಂಟಲ್ಮ್ಯಾನ್ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ಹೀರೋಯಿನ್.  ಸಿನಿಮಾ ಇದೇ ತಿಂಗಳು ರಿಲೀಸ್ ಆಗುವ ಸಾಧ್ಯತೆ ಇದೆ.

 • ಸೂರಿ ಚಿತ್ರಕ್ಕೆ ಅಪ್ಪು ಸಪೋರ್ಟ್

  puneeth supports duniya soori's movie

  ದುನಿಯಾ ಸೂರಿ ನಿರ್ದೇಶನದ ಹೊಸ ಚಿತ್ರಕ್ಕೆ ಪುನೀತ್ ರಾಜ್ಕುಮಾರ್ ಸಪೋರ್ಟ್ ಸಿಕ್ಕಿದೆ. ಪುನೀತ್ ಅವರಿಗೆ ಸದ್ಯಕ್ಕೆ ಅತೀ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತಿ ಇರುವುದು ದುನಿಯಾ ಸೂರಿಗೆ. ಜಾಕಿ, ಅಣ್ಣಾಬಾಂಡ್, ದೊಡ್ಮನೆ ಹುಡ್ಗ ಚಿತ್ರಗಳಂತ ಹಿಟ್ ಕೊಟ್ಟಿರುವ ಸೂರಿ, ಈಗ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ಮಾಡಿದ್ದಾರೆ. ಡಾಲಿ ಧನಂಜಯ್ ಹೀರೋ ಆಗಿರುವ ಚಿತ್ರವಿದು.

  ಟಗರು ಚಿತ್ರದ ಬಳಿಕ ಚರಣ್ ರಾಜ್ ಸಂಗೀತ ನೀಡಿರುವ ಮತ್ತೊಂದು ಬಿಗ್ ಸಿನಿಮಾ ಪಾಪ್ ಕಾರ್ನ್ ಮಂಕಿ ಟೈಗರ್. ಈ ಚಿತ್ರದ ಆಡಿಯೋ ರೈಟ್ಸ್ನ್ನು ಪುನೀತ್ ಅವರ ಪಿಆರ್ಕೆ ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಸುಧೀರ್ ಕೆ.ಎಂ. ನಿರ್ಮಾಣದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಡಾಲಿ ಧನಂಜಯ್ ಜೊತೆಗೆ ನಿರ್ಮಾಪಕ ನವೀನ್, ಕಾಕ್ರೋಚ್ ಖ್ಯಾತಿಯ ಸುಧಿ, ಅಮೃತಾ ಅಯ್ಯರ್ ಮೊದಲಾದವರು ನಟಿಸಿದ್ದಾರೆ.

 • ಹುಬ್ಬಳ್ಳಿಯಲ್ಲಿಂದು ನಟಸಾರ್ವಭೌಮ ಬರೋದು ಗ್ಯಾರಂಟಿ

  puneeth at natasarvabhouma audio launch in hubbali

  ಐಟಿ ದಾಳಿ ಹಿನ್ನೆಲೆಯಲ್ಲಿ ಪುನೀತ್ ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್, ಹುಬ್ಬಳ್ಳಿಗೆ ಬರುತ್ತಾರೋ ಇಲ್ಲವೋ.. ನಟಸಾರ್ವಭೌಮ ಆಡಿಯೋ ರಿಲೀಸ್ ಆಗುತ್ತೋ.. ಇಲ್ಲವೋ ಎಂಬ ಎಲ್ಲ ಗೊಂದಲಗಳಿಗೆ ಈಗ ತೆರೆ ಬಿದ್ದಿದೆ. ಪುನೀತ್ ರಾಜ್‍ಕುಮಾರ್ ಮನೆಯಲ್ಲಿ ಗುರುವಾರ ಬೆಳಗ್ಗೆ ಶುರುವಾದ ಐಟಿ ತನಿಖೆ, ಶುಕ್ರವಾರ ರಾತ್ರಿ ಮುಗಿದಿದೆ. ಎಲ್ಲ ತನಿಖೆ, ವಿಚಾರಣೆ ಮುಗಿದ ಮೇಲೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪುನೀತ್ ರಾಜ್‍ಕುಮಾರ್, ತನಿಖೆಗೆ ಎಲ್ಲ ಸಹಕಾರ ನೀಡಿದ್ದೇವೆ. ಅವರ ಕರ್ತವ್ಯ ಅವರು ಮಾಡಿದ್ದಾರೆ ಎಂದಿದ್ದಾರೆ.

  ಇಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ನಟಸಾರ್ವಭೌಮ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಹೋಗುವುದಾಗಿಯೂ ಹೇಳಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಪುನೀತ್ ಜೊತೆ ಯುವರಾಜ್ ಕುಮಾರ್ ಕೂಡಾ ಸ್ಟೆಪ್ ಹಾಕಲಿದ್ದಾರೆ. ಪವನ್ ಒಡೆಯರ್ ಈಗಾಗಲೇ ತಮ್ಮ ದೊಡ್ಡ ತಂಡದ ಜೊತೆ ಹುಬ್ಬಳ್ಳಿ ತಲುಪಿದ್ದಾರೆ. ರಾಕ್‍ಲೈನ್ ವೆಂಕಟೇಶ್ ಮನೆಯಲ್ಲಿ ಐಟಿ ವಿಚಾರಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಅವರು ಬರುವ ಸಾಧ್ಯತೆ ಇನ್ನೂ ಅನುಮಾನ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery