ಪಂದ್ಯ ಪುರುಷೋತ್ತಮ ಅನ್ನೋ ಪದ, ಹಳಬರಿಗೆ ಚೆನ್ನಾಗಿ ಗೊತ್ತಿರುತ್ತೆ. ಈಗ ಬಿಡಿ, ಪತ್ರಿಕೆಗಳಲ್ಲಿ ಪಂದ್ಯ ಶ್ರೇಷ್ಟ ಎಂದು, ಟಿವಿಗಳಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಎಂದೂ ಬರೆದುಬಿಡ್ತಾರೆ. ಆದರೆ, ಒಂದ್ ಹತ್ತು ವರ್ಷ ಹಿಂದಕ್ಕೆ ಹೋದರೆ, ಕ್ರಿಕೆಟ್ ಸುದ್ದಿಗಳಲ್ಲಿ ಪಂದ್ಯ ಪುರುಷೋತ್ತಮ ಎಂದೇ ಬಳಸಲಾಗುತ್ತಿತ್ತು. ಇರಲಿ ಬಿಡಿ, ನಾವು ಹೇಳೋಕೆ ಹೊರಟಿರೋ ವಿಷಯ ಅದಲ್ಲ. ಸುದೀಪ್ ಪಂದ್ಯ ಪುರುಷೋತ್ತಮ ಪುರಸ್ಕಾರ ಪಡೆದಿದ್ದರ ಬಗ್ಗೆ.
ಸಿಸಿಎಲ್ ಶುರುವಾಗೋಕೆ ದಿನಗಣನೆ ಶುರುವಾಗಿದೆ. ಕಿಚ್ಚನ ಟೀಂ ಅಲ್ಲಿದ್ದೇ ಇರುತ್ತೆ. ಏಕಾಏಕಿ ಟೂರ್ನಮೆಂಟ್‍ಗೆ ಹೋದರೆ, ಸೋಲು ಗ್ಯಾರಂಟಿ. ಹೀಗಾಗಿ ಪ್ರತಿಯೊಂದಕ್ಕೂ ಸಿದ್ಧತೆ ಮಾಡಿಕೊಳ್ಳೋ ಸುದೀಪ್, ಕ್ರಿಕೆಟ್ ಟೂರ್ನಿಯನ್ನೂ ಸೀರಿಯಸ್ಸಾಗಿ ತಗೋತಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಒಂದು ಪ್ರಾಕ್ಟೀಸ್ ಮ್ಯಾಚ್ ಆಡಿದೆ ಕಿಚ್ಚ ಟೀಂ.
ಪ್ರಾಕ್ಟೀಸ್ ಮ್ಯಾಚ್‍ನಲ್ಲಿ ಕಿಚ್ಚನ ಹುಡುಗರು ಗೆದ್ದಿರುವುದಷ್ಟೇ ಅಲ್ಲ, ಸುದೀಪ್ ಪಂದ್ಯ ಪುರುಷೋತ್ತಮರಾಗಿ ಹೊರಹೊಮ್ಮಿದ್ದಾರೆ. ಅಂದಹಾಗೆ ಸಿಸಿಎಲ್ ಡಿ.9ರಿಂದ ಶುರುವಾಗಲಿದೆ.