` deepika padukone - chitraloka.com | Kannada Movie News, Reviews | Image

deepika padukone

 • Open Letter to Huchcha Venkat by Prashanth Sambargi

  huchcha venkat image

  All the trouble in the world seems to have gathered around Huchcha Venkat. Is it his own doing? Was it avoidable? Is his eccentric behaviour a boon or bane to him? Whatever the case may be, is it possible to become a star with just such behaviour. In this open letter by a public relations expert, some of these aspects are explored. The views expressed in the letter are of the PR expert Prashanth Sambargi and necessarily not that of Chitraloka.com - Editor

  Dear Huchcha Venkat ,

  Venkat, you really need a PR Guru, a cool PR maverick to handle an eccentric maverick like you.

  You have not enchased your fame, to long term fame and brand called “Huchcha Venkat”.

  Your over expose on TV, no control on your boneless tongue, speaking on mutiple TV channels without preparation and content,   this will bring doom to you. My Advice to you go underground, not reachable, incognito. Later Rise like a brand later with a media plan and PR Guru in backdrop to take on your adversaries.

  Being in marketing and brand strategic consultation business  for the last 15 years, I liked only two of your classic moves, proposing to actor Ramya on news paper and your sudden  outburst on TV after your film flopped. But all your other moves were just crap and unwarranted,  they just diluted your infamous image to nonsense guy image. You Just lost a chance to establish a celebrity cult figure

  Your need a class PR guru,  a brain to seed information in the media, who has thorough knowledge and has the real  Exposure in the entertainment domain and the communications business, with Artiste Management agency. 

  Venkat , Your shelf life is between three and six months only, and you need to establish your brand within a very short span of time,” but you failed.

  Let me give a case study of my initial work post Aishwarya Kannada film with Bollywood actress Deepaika Padukone,   despite negative reviews of her movies and she was in the midst of a series of flops at that time, but in the eyes of her PR representatives (and the media that bought the line), she was the future No. 1, Padukone, the reigning queen of the box office.

  Different subjects require different approaches Venkat, go find a good PR consultant.  Actor Sudeep has many PR Consultants for your kind information.

  Wishing you good luck, and with Warm regards,

  Prashanth Sambargi

   

 • ಇಡ್ಲಿವಡೆಗಾಗಿ ಮಲ್ಲೇಶ್ವರಂಗೆ ಬಂದಿದ್ದರಂತೆ ದೀಪಿಕಾ ಪಡುಕೋಣೆ

  deepika padukone

  ದೀಪಿಕಾ ಪಡುಕೋಣೆಯ ಚಿತ್ರಯಾತ್ರೆ ಶುರುವಾಗಿದ್ದು ಕನ್ನಡದಿಂದಲೇ ಆದರೂ, ಈಗ ಕನ್ನಡ ಚಿತ್ರಗಳ ಕೈಗೆ ಎಟುಕದಷ್ಟು ಎತ್ತರಕ್ಕೆ ಬೆಳೆದಿದ್ದಾರೆ ದೀಪಿಕಾ ಪಡುಕೋಣೆ. ಬಾಲಿವುಡ್​ನ ಸ್ಟಾರ್​ ನಟಿಯಾಗಿರುವ ದೀಪಿಕಾ, ಮೂಲತಃ ಬೆಂಗಳೂರಿನವರೇ. 

  ದೀಪಿಕಾ ಪಡುಕೋಣೆ ಅವರ ಒಂದು ಫೋಟೋ ವೈರಲ್ ಆಗಿದೆ. ಅದು ಬೆಂಗಳೂರಿನ ಮಲೇಶ್ವರಂ ನಲ್ಲಿರೋ ವೀಣಾ ಸ್ಟೋರ್  ಮಾಲೀಕರ ಜೊತೆ ದೀಪಿಕಾ ಪಡುಕೋಣೆ ಇದ್ದ ಫೋಟೋ. ಏನು ವಿಷಯ ಎಂದು ಕೆದಕಿದಾಗ ಗೊತ್ತಾಗಿದ್ದು, ದೀಪಿಕಾ ಬೆಳ್ಳಂಬೆಳಗ್ಗೆ ಆರೂಮೂವತ್ತಕ್ಕೆಲ್ಲ ಇವರ ಹೋಟೆಲ್​ಗೆ ಬಂದು ಇಡ್ಲಿ ವಡೆ ತಿಂದು ಹೋಗಿದ್ದಾರೆ. 

  ಅದೇ ಖುಷಿಯಲ್ಲಿ ಮಾಲೀಕ ಪ್ರದೀಪ್ ಜೊತೆ ಒಂದು ಸೆಲ್ಫಿಗೆ ಫೋಸ್ ಕೊಟ್ಟು ಹೋಗಿದ್ದಾರೆ. ಬೆಂಗಳೂರಿನಲ್ಲಿದ್ದಾಗ ಆಗಾಗ್ಗೆ ಇಲ್ಲಿಗೆ ಬರುತ್ತಿರುತ್ತಾರೆ ಎಂದು ಹೇಳಿದ್ದಾರೆ ಪ್ರದೀಪ್.

 • ಕರ್ನಾಟಕ ಮತ ಜಾಗೃತಿಗೆ ದೀಪಿಕಾ.. ಅವರ ವೋಟ್ ಎಲ್ಲಿ..?

  will deepika padukone be karnataka's brand ambadassor

  ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ಮತದಾರರನ್ನು ಹೇಗೆ ಬುಟ್ಟಿಗೆ ಹಾಕಿಕೊಳ್ಳೋದು ಎಂಬ ತಂತ್ರಗಾರಿಕೆಯಲ್ಲಿ ತೊಡಗಿರುತ್ತಾರೆ. ಆದರೆ, ಚುನಾವಣಾ ಆಯೋಗ ಹೇಗಾದರೂ ಮಾಡಿ ಮತದಾರರನ್ನು ಮತಗಟ್ಟೆಗೆ ಕರೆತರಬೇಕು ಅನ್ನೋ ಪ್ರಯತ್ನದಲ್ಲಿರುತ್ತೆ. ಅದಕ್ಕಾಗಿ ಮತ ಜಾಗೃತಿಗಾಗಿ ಸಿನಿಮಾ, ಕ್ರೀಡಾ ಕ್ಷೇತ್ರದ ಖ್ಯಾತ ನಾಮರನ್ನು ರಾಯಭಾರಿಗಳನ್ನಾಗಿ ಮಾಡಿಕೊಳ್ಳುತ್ತೆ. 

  ಈ ಬಾರಿ ಕರ್ನಾಟಕ ಚುನಾವಣೆಗೆ ರಾಯಭಾರಿಯಾಗಿ ದೀಪಿಕಾ ಪಡುಕೋಣೆ ಅವರನ್ನು ಆಯೋಗ ಸಂಪರ್ಕಿಸಿದೆ ಅನ್ನೋ ಸುದ್ದಿ ಇದೆ. ಆದರೆ, ದೀಪಿಕಾ ಪಡುಕೋಣೆ ಅವರು ಕರ್ನಾಟಕದವರೇ ಆದರೂ, ಇಲ್ಲಿ ಮತ ಹಾಕಿದ ನೆನಪು ಯಾರಿಗೂ ಇಲ್ಲ. ಮುಂಬೈನಲ್ಲಿಯೇ ನೆಲೆಸಿ, ಮಹಾರಾಷ್ಟ್ರದವರೇ ಆಗಿರುವ ದೀಪಿಕಾ, ಕರ್ನಾಟಕ ಚುನಾವಣೆಗೆ ಮತ ಜಾಗೃತಿ ರಾಯಭಾರಿಯಾಗಬೇಕೆ ಎಂಬ ಪ್ರಶ್ನೆ ಉದ್ಭವವಾದರೂ ಆಶ್ಚರ್ಯವಿಲ್ಲ. ಕರ್ನಾಟಕದಲ್ಲಿ ವೋಟರ್ ಐಡಿಯೇ ಇಲ್ಲದಿದ್ದರೂ, ಆಯೋಗದ ಆಫರ್‍ಗೆ ದೀಪಿಕಾ ಓಕೆ ಎಂದಿದ್ದಾರೆ ಎನ್ನುತ್ತಿವೆ ಸುದ್ದಿ ಮೂಲಗಳು.

  ಇನ್ನು ರಾಹುಲ್ ದ್ರಾವಿಡ್ ಅವರನ್ನು ಆಯೋಗ ಸಂಪರ್ಕಿಸಿದೆಯಾದರೂ, ದ್ರಾವಿಡ್, ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಈ ಜವಾಬ್ದಾರಿ ಹೊರಲು ಸಾಧ್ಯವಿಲ್ಲ ಎಂದುಬಿಟ್ಟಿದ್ದಾರೆ. ಇನ್ನು ಸುದೀಪ್, ಯಶ್, ಯೋಗರಾಜ್ ಭಟ್, ರಶ್ಮಿಕಾ ಮಂದಣ್ಣ, ಶ್ರುತಿ ಹರಿಹರನ್ ಸಿನಿಮಾ ಕ್ಷೇತ್ರದಿಂದ ಹಾಗೂ ಕ್ರೀಡಾ ಕ್ಷೇತ್ರದಿಂದ ಜಾವಗಲ್ ಶ್ರೀನಾಥ್ ರಾಯಭಾರಿಗಳಾಗಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

 • ಪಡುಕೋಣೆ ಫ್ಯಾಮಿಲಿ ಕಂಪ್ಲೀಟ್ ಕೊರೊನಾ ಪಾಸಿಟಿವ್

  ಪಡುಕೋಣೆ ಫ್ಯಾಮಿಲಿ ಕಂಪ್ಲೀಟ್ ಕೊರೊನಾ ಪಾಸಿಟಿವ್

  ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಇಡೀ ಕುಟುಂಬ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದೆ. ದೀಪಿಕಾ ಪಡುಕೋಣೆ ಅವರ ತಂದೆ, ದೇಶದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ, ತಾಯಿ ಉಜಾಲಾ, ದೀಪಿಕಾ ಅವರ ಪತಿ ರಣ್‍ವೀರ್ ಸಿಂಗ್, ತಂಗಿ ಅನಿಶಾ ಪಡುಕೋಣೆ ಎಲ್ಲರಿಗೂ ಪಾಸಿಟಿವ್ ಆಗಿದೆ.

  ಸದ್ಯಕ್ಕೆ ಆಸ್ಪತ್ರೆಯಲ್ಲಿರೋದು ಪ್ರಕಾಶ್ ಪಡುಕೋಣೆ ಮಾತ್ರ. ಅವರೂ ಕೂಡಾ ಮೂರ್ನಾಲ್ಕು ದಿನಗಳಲ್ಲಿ ಡಿಸ್‍ಚಾರ್ಜ ಆಗಲಿದ್ದಾರೆ. ಉಳಿದಂತೆ ಎಲ್ಲರೂ ಮನೆಯಲ್ಲೇ ಇದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ತಿಂಗಳು ಮುಂಬೈನಲ್ಲಿ ಕೊರೊನಾ ಅಟ್ಟಹಾಸ ಮಿತಿ ಮೀರಿದ್ದಾಗ ದೀಪಿಕಾ ಪಡುಕೋಣೆ ತಮ್ಮ ಪತಿಯೊಂದಿಗೆ ಬೆಂಗಳೂರಿಗೆ ಬಂದಿಳಿದಿದ್ದರು.

 • ಪದ್ಮಾವತಿಗೆ ಕರ್ನಾಟಕದಲ್ಲಿ ನಿಷೇಧ ಇಲ್ಲ

  deepika padukone in padmavathi

  ಪದ್ಮಾವತಿ, ರಜಪೂತ ರಾಣಿಯ ಕುರಿತಾದ ಈ ಸಿನಿಮಾ ವಿರುದ್ಧ ರಜಪೂತ ಸಮುದಾಯ ರೊಚ್ಚಿಗೆದ್ದು ನಿಂತಿದೆ. ಚಿತ್ರದಲ್ಲಿ ಪದ್ಮಾವತಿ ಪಾತ್ರವನ್ನು ಅಶ್ಲೀಲವಾಗಿ ತೋರಿಸಲಾಗಿದೆ ಎನ್ನುವುದು ರಜಪೂತರ ದೂರು. ಇದೇ ವಿಷಯ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರತಿಧ್ವನಿಸಿದೆ. ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್, ವಿಧಾನಪರಿಷತ್‍ನಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ.

  ಪದ್ಮಾವತಿ ರಜಪೂತ ವಂಶದ ರಾಣಿ. ವೀರ ಪರಂಪರ ಪ್ರತಿನಿಧಿಸುವ ಪದ್ಮಾವತಿ, ರಾಷ್ಟ್ರಭಕ್ತಿಯ ಸಂಕೇತ. ಆದರೆ, ಚಿತ್ರದಲ್ಲಿ ಆಕೆಯನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ. ಕೀಳುಮಟ್ಟದಲ್ಲಿ ಚಿತ್ರಿಸಿ ಕೋಟ್ಯಂತರ ಜನರ ಭಾವನೆಗೆ ಘಾಸಿ ಮಾಡಲಾಗಿದೆ ಎಂದರು ಲೆಹರ್ ಸಿಂಗ್. ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ನೀಡದಂತೆ ಸರ್ಕಾರಕ್ಕೆ ಮನವಿ ಮಾಡಿದರು.

  ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಚಿತ್ರವನ್ನು ನಿಷೇಧಿಸುವ ಅಧಿಕಾರ ನಮಗಿಲ್ಲ. ಸೆನ್ಸಾರ್ ಮಂಡಳಿ ತೀರ್ಮಾನವೇ ಅಂತಿಮ. ಕಾನೂನು ಸುವ್ಯವಸ್ಥೆಗೆ ಭಂಗವಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

  Related Articles :-

  ಪದ್ಮಾವತಿ ವಿರುದ್ಧ ಬೆಂಗಳೂರಿನಲ್ಲೂ ಕಿಚ್ಚು

 • ಮಾಲ್ ಇದ್ಯಾ ಅನ್ನೋ ಮೆಸೇಜ್ ದೀಪಿಕಾ ಪಡುಕೋಣೆಗೆ ಕೊಟ್ಟ ಶಾಕ್

  Deepika Padukone's Drug Chat Goes Viral

  2017ರಲ್ಲಿ ಕರಿಷ್ಮಾ ಎಂಬುವವರ ಜೊತೆ ದೀಪಿಕಾ ಪಡುಕೋಣೆ ಚಾಟ್ ಮಾಡಿದ್ದಾರೆ. ಟ್ಯಾಲೆಂಟ್ ಮ್ಯಾನೇಜ್‍ಮೆಂಟ್ ಮ್ಯಾನೇಜರ್ ಅಗಿರುವ ಕರಿಷ್ಮಾ ಎಂಬುವವರ ಜೊತೆ ದೀಪಿಕಾ ಗಾಂಜಾ ಚಾಟ್ ಮಾಡಿದ್ದಾರೆ. ಆ ಚಾಟ್ ಹೀಗಿದೆ..

  ದೀಪಿಕಾ : ಮಾಲ್ ಇದ್ಯಾ..?

  ಕರಿಷ್ಮಾ : ಇದೆ. ಆದರೆ ಮನೆಯಲ್ಲಿದೆ. ನಾನು ಬಾಂದ್ರಾದಲ್ಲಿದ್ದೇನೆ.

  ಕರಿಷ್ಮಾ : ನಿಮಗೆ ಬೇಕೆಂದರೆ ಅಮಿತ್‍ಗೆ ಹೇಳುತ್ತೇನೆ.

  ದೀಪಿಕಾ : ಯೆಸ್.. ಪ್ಲೀಸ್..

  ದೀಪಿಕಾ : ಹಶ್ ಹೌದಲ್ವಾ..? ಗಾಂಜಾ ಬೇಡ..

  ಈ ಚಾಟ್ ಇನ್ನೊಂದಿಷ್ಟು ಹೀಗೆಯೇ ಮುಂದುವರಿಯುತ್ತೆ. ಈಗ ಕರಿಷ್ಮಾರನ್ನು ಎನ್‍ಸಿಬಿ ವಿಚಾರಣೆ ನಡೆಸುತ್ತಿದೆ. ಹೀಗಾಗಿ ಶೀಘ್ರದಲ್ಲೇ ದೀಪಿಕಾ ಪಡುಕೋಣೆಗೂ ನೋಟಿಸ್ ಹೋಗಬಹುದು ಎನ್ನಲಾಗುತ್ತಿದೆ.