ಬೆಂಗಳೂರು ಮೆಟ್ರೋದ ನಾಮ ಫಲಕಗಳಲ್ಲಿ ಹಿಂದಿ ಭಾಷೆ ಬಳಕೆ ವಿರೋಧಿಸಿ ನಡೆಯುತ್ತಿರುವ ಅಭಿಯಾನಕ್ಕೆ ಬಲ ಕೂಡಿಕೊಳ್ಳುತ್ತಲೇ ಇದೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ಹೋರಾಟದ ಎಚ್ಚರಿಕೆ ನೀಡಿರುವ ಜೊತೆಯಲ್ಲೇ ಚಿತ್ರರಂಗದ ಸ್ಟಾರ್ ನಟರೂ, ಕಲಾವಿದರು, ತಂತ್ರಜ್ಞರು ಹೋರಾಟದ ಮಾತು ಹೇಳಿದ್ದಾರೆ.
ನಟ ಜಗ್ಗೇಶ್, ನಿರ್ದೇಶಕ ಬಿ.ಸುರೇಶ್, ಸಾಹಿತಿ ಕವಿರಾಜ್ ಸೇರಿದಂತೆ ಅನೇಕರು 'ಹಿಂದಿ ರಾಷ್ಟ್ರಭಾಷೆ ಅಲ್ಲ, ಅದು ಒಂದು ಅಧಿಕೃತ ಭಾಷೆ' ಅಷ್ಟೆ ಅಂತ ಹಿಂದಿ ಹೇರಿಕೆಯ ವಿರುದ್ಧ ಗುಡುಗಿದ್ದಾರೆ.
ಈಗಲೂ ಬದಲಿಸಬಹುದು - ಜಗ್ಗೇಶ್, ನಟ
''ಉತ್ತರ ಭಾರತದಲ್ಲೇ ಬಹುತೇಕ ರಾಜ್ಯದ ಜನರಿಗೆ ಹಿಂದಿ ಬರುವುದಿಲ್ಲ. ಕಾಶ್ಮೀರ, ರಾಜಸ್ಥಾನ, ಪಂಜಾಬ್, ದಕ್ಷಿಣದಲ್ಲಿ ತಮಿಳು ನಾಡು, ಕೇರಳ, ಕರ್ನಾಟಕ.. ಹೀಗಿರಬೇಕಾದರೆ ಹಿಂದಿ ಹೇಗೆ ರಾಷ್ಟ್ರ ಭಾಷೆ.? ಮನಸ್ಸಿದ್ದರೆ ಈಗಲೂ ಬದಲಿಸಬಹುದು. ಯತ್ನಿಸಿ''
ನಾನು ಹಿಂದಿ ಹೇರಿಕೆಯ ವಿರೋಧಿ - ಬಿ. ಸುರೇಶ್, ನಿರ್ದೇಶಕ
''ಮೆಟ್ರೋ ಸ್ಥಳೀಯ, ರಾಜ್ಯ ಸ್ವಾಮ್ಯದ ಅಂಗ. ಇದು ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನಿಂದ ದೆಹಲಿ ಅಥವಾ ಲಕ್ನೋಗೆ ಪ್ರಯಾಣಿಸುವ ರೈಲುಗಳಲ್ಲಿ ಹಿಂದಿಯಲ್ಲಿ ಸೈನ್ ಬೋರ್ಡ್ ಇದ್ದರೆ ತೊಂದರೆ ಇಲ್ಲ. ಆದರೆ ಬೆಂಗಳೂರಿನಲ್ಲಿ ಮಾತ್ರ ಕಾರ್ಯನಿರ್ವಹಿಸುವ ಮೆಟ್ರೋ ಹಿಂದಿ ಫಲಕಗಳನ್ನು ಹೊಂದುವುದು ಸರಿಯಲ್ಲ.''
ಕನ್ನಡ ಕಿತ್ತು ಹಾಕುವ ಹುನ್ನಾರ - ಕವಿರಾಜ್, ಸಾಹಿತಿ
''ಕನ್ನಡದ ಜೊತೆ ಹಿಂದಿ ಇದ್ರೆ ಏನು ಸಮಸ್ಯೆ ? ಅಂತ ಕೆಲವರು ಕೇಳಬಹುದು. ಕನ್ನಡದ ಜೊತೆ ಹಿಂದಿ ಇರೋದೇ ಸಮಸ್ಯೆ..ಇಂತಹ ಕ್ರಮಗಳಿಂದ ಇಲ್ಲಿ ವಾಸಿಸುವ ಹಿಂದಿ ಭಾಷಿಕರಿಗೆ ಕನ್ನಡ ಕಲಿಯಬೇಕಾದ ಅವಶ್ಯಕತೆ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಹಿಂದಿ, ಇಂಗ್ಲೀಷ್ ಇದೆಯಲ್ಲಾ ಕನ್ನಡ ಯಾಕೆ? ಅಂತ ಕಿತ್ತು ಹಾಕೋ ಹುನ್ನಾರದ ಮೊದಲ ಹೆಜ್ಜೆ ಇದು.
Related Articles :-
ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಸಾ.ರಾ. ಗೋವಿಂದು ಹೋರಾಟದ ಎಚ್ಚರಿಕೆ