` pavan wadeyar, - chitraloka.com | Kannada Movie News, Reviews | Image

pavan wadeyar,

 • ಇಶಾನ್‍ಗೆ ಪವನ್ ಒಡೆಯರ್ ಡೈರೆಕ್ಷನ್

  pavan wadeyar to direct ishaan

  ನಿರ್ಮಾಪಕ ಸಿ.ಆರ್.ಮನೋಹರ್ ಫ್ಯಾಮಿಲಿ ಹುಡುಗ ಇಶಾನ್, ರೋಗ್ ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ನಟ. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಬಂದಿದ್ದ ರೋಗ್ ಚಿತ್ರ, ಕನ್ನಡ ಮತ್ತು ತೆಲುಗಿನಲ್ಲಿ ಸದ್ದು ಮಾಡಿದ್ದ ಸಿನಿಮಾ. ರೋಗ್ ಚಿತ್ರದಲ್ಲಿ ನಟನೆ, ಆ್ಯಕ್ಷನ್‍ಗಳಿಂದ ಗಮನ ಸೆಳೆದಿದ್ದ ಇಶಾನ್, ಇನ್ನೊಂದು ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ.

  ಇಶಾನ್‍ಗಾಗಿ ಹೊಸ ಸಿನಿಮಾ ನಿರ್ದೇಶಿಸುತ್ತಿರುವುದು ಪವನ್ ಒಡೆಯರ್. ಇತ್ತೀಚೆಗಷ್ಟೆ ನಟಸಾರ್ವಭೌಮ ಸಕ್ಸಸ್ ಆದ ಜೋಶ್‍ನಲ್ಲಿರುವ ಪವನ್ ಒಡೆಯರ್, ಇಶಾನ್‍ಗೆ ಹೊಂದುವ ಕಥೆ ಸಿದ್ಧ ಮಾಡುತ್ತಿದ್ದಾರೆ. ಇಶಾನ್ ಅಣ್ಣ ಸಿ.ಆರ್.ಮನೋಹರ್ ಅವರೇ ಸಿನಿಮಾ ನಿರ್ಮಾಪಕ. ಅದ್ಧೂರಿ ಸಿನಿಮಾ ಅನ್ನೋದು ಗ್ಯಾರಂಟಿ. 

 • ಓಪನ್ ದ ಬಾಟಲ್.. ಕಿಕ್ಕು ಹೆಚ್ಚಿಸಿದ ನಟಸಾರ್ವಭೌಮ

  powerstar kicks up new year party with open the bottle

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಪವನ್ ಒಡೆಯರ್, ಯೋಗರಾಜ್ ಭಟ್, ವಿಜಯ್ ಪ್ರಕಾಶ್, ಡಿ.ಇಮ್ಮಾನ್.. ಇವ್ರೆಲ್ಲ ಸೇರ್ಕೊಂಡು ಹೊಸ ವರ್ಷದ ಕಿಕ್ಕೇರಿಸಿಬಿಟ್ಟಿದ್ದಾರೆ. ನಟಸಾರ್ವಭೌಮ ಚಿತ್ರದ ಓಪನ್ ದ ಬಾಟಲ್ ಹಾಡಿನ ಲಿರಿಕಲ್ ವಿಡಿಯೋ ಹೊರ ಬಿಟ್ಟಿದೆ ರಾಕ್‍ಲೈನ್ ಪ್ರೊಡಕ್ಷನ್ಸ್. ಹಾಡು ಕಿಕ್ಕೇರಿಸುವಂತಿದೆ.

  ಏಳೂವರೆ ತುಟಿ ಒಣಗತೈತೆ ಏನ್ ಮಾಡಣ.. ಹಾಳು ಎಣ್ಣಿ ಚಟ ಬಿಡಬೇಕು.. ಕಮ್ಮಿ ಕುಡ್ಯಣ.. ಎಣ್ಣೆ ಬಿಡೋದಕ್ಕೆ ಇಟ್ಟಿರೋ ಪಾರ್ಟಿ ಇದು.. ಫ್ರೆಂಡ್ಸೆಲ್ಲ ಕೈ ಹಾಕ್ರಿ.. ಜೋಡಿಸ್ರೋ ಟೇಬಲ್.. ಓಪನ್ ದ ಬಾಟಲ್.. ಎಂದು ಶುರುವಾಗುವ ಹಾಡಿನಲ್ಲಿ ಮೈಮರೆತು ಕುಣಿಯೋಕೆ ಬೇಕಾದ ಎಲ್ಲ ಸರಕುಗಳೂ ಇವೆ.

  ಹಾಡು ಕೇಳೋಕಷ್ಟೇ ಅಲ್ಲ, ನೋಡೋಕೂ ಮಜವಾಗಿದೆ. ಪುನೀತ್ ಚಿಂದಿಯಾಗಿ ಕುಣಿದಿದ್ದಾರೆ. ಅವರು ಇದುವರೆಗೂ ಅಂತಹ ಸ್ಟೆಪ್ಪುಗಳನ್ನು ಹಾಕಿಯೇ ಇಲ್ಲ. ವಿಡಿಯೋನೂ ಬಿಡ್ತೇವೆ ನೋಡ್ತಾ ಇರಿ ಎಂದು ಆಸೆಯ ಕಿಕ್ಕು ಕೊಟ್ಟಿದ್ದಾರೆ ಪವನ್ ಒಡೆಯರ್.

 • ಗೂಗ್ಲಿ ಟೈಟಲ್ ಬಿಚ್ಚಿಟ್ಟ ಪವನ್ ಒಡೆಯರ್..!

  pavan wadeyar reveals googly title secret

  ಗೂಗ್ಲಿ, ರಾಕಿಂಗ್ ಸ್ಟಾರ್ ಯಶ್, ಕೃತಿ ಕರಬಂಧ ಅವರ ಸೂಪರ್ ಹಿಟ್ ಸಿನಿಮಾ. ನಿರ್ದೇಶಕ ಪವನ್ ಒಡೆಯರ್. ನಿರ್ಮಾಪಕ ಜಯಣ್ಣ. ಆದರೆ, ಇಂತಹ ಹಿಟ್ ಸಿನಿಮಾದ ಟೈಟಲ್ ಬಗ್ಗೆ ಒಂದು ಇಂಟ್ರೆಸ್ಟಿಂಗ್ ಕಥೆ ಬಿಚ್ಚಿಟ್ಟಿದ್ದಾರೆ ಪವನ್ ಒಡೆಯರ್.

  ಗೂಗ್ಲಿ ಟೈಟಲ್ ನನಗೆ ಇಷ್ಟವಾಗಿತ್ತು. ಆದರೆ, ನಿರ್ಮಾಪಕ ಜಯಣ್ಣ ಅವರಿಗೆ ಇಷ್ಟ ಇರಲಿಲ್ಲ. ನನಗೆ ಅವರನ್ನು ಹೇಗಾದರೂ ಮಾಡಿ ಒಪ್ಪಿಸಲೇಬೇಕು ಅನ್ನೋ ಹಠವಿತ್ತು. ಆಗ ಚಿತ್ರದ ಟೈಟಲ್ ಮೇಲೆ ಒಂದು ಪುಟ್ಟ ವಿಡಿಯೋ ಮಾಡಿದೆ. ಆ ವಿಡಿಯೋ ನೋಡಿದ ಮೇಲೆ ಜಯಣ್ಣ ಒಪ್ಪಿಕೊಂಡರು ಎಂದಿದ್ದಾರೆ ಪವನ್. ಅಷ್ಟೇ ಅಲ್ಲ, ಆ ವಿಡಿಯೋವನ್ನೂ ಕೂಡಾ ಹೊರಗೆ ಬಿಟ್ಟಿದ್ದಾರೆ.

  ಅಷ್ಟೇ ಅಲ್ಲ, ಡ್ರಾಮಾ ಚಿತ್ರದಲ್ಲಿ ಬ್ಯುಸಿಯಿದ್ದ ಯಶ್ ಅವರಿಗೆ ಕಥೆ ಹೇಳಿದ್ದರಂತೆ ಪವನ್. ನಂತರ ಯಶ್ ಅವರೇ ಜಯಣ್ಣ ಅವರನ್ನು ಪರಿಚಯ ಮಾಡಿಸಿದ್ರಂತೆ. ಹೀಗೆ ಗೂಗ್ಲಿಯ ಚೆಂದದ ಕಥೆ ಬಿಚ್ಚಿಟ್ಟಿದ್ದಾರೆ ಪವನ್ ಒಡೆಯರ್.

 • ಚಿಕ್ಕಪ್ಪ-ದೊಡ್ಡಪ್ಪ ಇಬ್ಬರನ್ನೂ ಮೀರಿಸುವ ಯುವರಾಜನ ಡ್ಯಾನ್ಸ್

  yuva rajkumar to love perform at natasarvabhouma's audio launch

  ಸ್ಯಾಂಡಲ್‍ವುಡ್‍ನ ನಂ.1 ಡ್ಯಾನ್ಸರ್ ಯಾರು ಎಂದರೆ ಅನುಮಾನವೇ ಇಲ್ಲದಂತೆ ಕಣ್ಣ ಮುಂದೆ ಬರೋದು ಪುನೀತ್ ರಾಜ್‍ಕುಮಾರ್. ಅವರ ಪ್ರತಿ ಚಿತ್ರದಲ್ಲೂ ಒಂದಲ್ಲ ಒಂದು ವಿಶೇಷ ಸ್ಟೆಪ್ ಇದ್ದೇ ಇರುತ್ತೆ. ಈಗ ಅವರನ್ನೂ ಮೀರಿಸುವ ಸುಳಿವು ಕೊಡುತ್ತಾ ಬಂದಿದೆ ಯುವ ಕುಡಿ. ಇನ್ನು ಶಿವಣ್ಣನ ಡ್ಯಾನ್ಸ್ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವೇ ಇಲ್ಲ. 

  ರಾಘವೇಂದ್ರ ರಾಜ್‍ಕುಮಾರ್ ಅವರ 2ನೇ ಪುತ್ರ ಯುವ ರಾಜ್ ಕುಮಾರ್ ಅವರ ಡ್ಯಾನ್ಸ್, ಚಿಕ್ಕಪ್ಪ, ದೊಡ್ಡಪ್ಪ ಇಬ್ಬರನ್ನೂ ಮೀರಿಸುವಂತಿದೆ. ನಟಸಾರ್ವಭೌಮ ಚಿತ್ರದ ಪುನೀತ್ ಡ್ಯಾನ್ಸ್‍ಗೆ ಯುವರಾಜ್ ಕುಮಾರ್ ಸ್ಟೆಪ್ ಹಾಕಿದ್ದು, ಹುಬ್ಬೇರಿಸುವಂತಿದೆ. ಜನವರಿ 5ರಂದು ಹುಬ್ಬಳ್ಳಿಯಲ್ಲಿ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮವಿದ್ದು, ಆ ದಿನ ಯುವರಾಜ್ ಕುಮಾರ್ ಸ್ಟೇಜ್ ಮೇಲೆ ಶೋ ಕೊಡಲಿದ್ದಾರಂತೆ. 

  ಈಗಾಗಲೇ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಯುವರಾಜ್ ಕುಮಾರ್, ಸಮಾಜಸೇವೆ ಕಾರ್ಯಗಳಲ್ಲಿಯೇ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಬಹಿರಂಗವಾಗಿ ಹೆಚ್ಚು ಕಾಣಿಸಿಕೊಳ್ಳದ ಯುವರಾಜ್, ಚಿಕ್ಕಪ್ಪನ ಬಹು ನಿರೀಕ್ಷೆಯ ಚಿತ್ರದ ಆಡಿಯೋ ರಿಲೀಸ್‍ನಲ್ಲಿ ಮಿಂಚಲಿದ್ದಾರೆ.

 • ಜನವರಿ 5ಕ್ಕೆ ಆಡಿಯೋ.. ಫೆಬ್ರವರಿ 7ಕ್ಕೆ ವಿಡಿಯೋ..

  natasarvabhouma audio on jan 5th

  ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 2019ರ ಆರಂಭದಲ್ಲೇ ತೆರೆಗೆ ಬರುವುದು ಅಧಿಕೃತವಾಗಿದೆ. ನಟಸಾರ್ವಭೌಮ ಚಿತ್ರದ ಬಿಡುಗಡೆಗೆ ವೇದಿಕೆ ಸಿದ್ಧಗೊಳ್ಳುತ್ತಿದ್ದು, ಜನವರಿ 5ರಂದು ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಸಿನಿಮಾ ರಿಲೀಸ್ ಆಗುವುದು ಫೆಬ್ರವರಿ 7ನೇ ತಾರೀಕಿಗೆ. ಅಂದರೆ, ಆಡಿಯೋ ರಿಲೀಸ್ ಆದ ಬರೋಬ್ಬರಿ 1 ತಿಂಗಳ ಚಿತ್ರ, ಪ್ರೇಕ್ಷಕರ ಎದುರು ಬರಲಿದೆ. ಕಳೆದ ವರ್ಷವಿಡೀ ಪುನೀತ್ ಸಿನಿಮಾ ಇರಲಿಲ್ಲ. ಹೀಗಾಗಿ ಅಪ್ಪು ಅಭಿಮಾನಿಗಳ ನಿರೀಕ್ಷೆ ಆಕಾಶದಲ್ಲಿದೆ.

  ಪವನ್ ಒಡೆಯರ್ ನಿರ್ದೇಶನದ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ. ರಚಿತಾ ರಾಮ್ ಮತ್ತೊಮ್ಮೆ ಅಪ್ಪು ಜೋಡಿಯಾಗಿದ್ದರೆ, ಅನುಪಮಾ ಪರಮೇಶ್ವರ್ ಗಮನ ಸೆಳೆಯುತ್ತಿದ್ದಾರೆ. ಬಿ.ಸರೋಜಾದೇವಿ ಹಲವು ವರ್ಷಗಳ ನಂತರ ತೆರೆ ಮೇಲೆ ಬರುತ್ತಿದ್ದಾರೆ. ಅಪ್ಪು ಜೊತೆ ಡ್ಯಾನ್ಸ್ ಮಾಡೋಕೆ ಸಿದ್ಧರಾ

 • ಡ್ಯಾನ್ಸ್ ವಿತ್ ಅಪ್ಪು.. ನಟಸಾರ್ವಭೌಮನ ಚಾಲೆಂಜ್

  natasarvabhouma's dance with appu challenge

  ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರತಂಡ ಅಭಿಮಾನಿಗಳಿಗೆ ಹೊಸದೊಂದು ಸ್ಪರ್ಧೆಯೊಡ್ಡಿದೆ. ಚಿತ್ರದ ಟ್ರೇಲರ್‍ನಲ್ಲಿ ಪುನೀತ್ ಮಾಡಿರುವ ಡ್ಯಾನ್ಸ್ ಸ್ಟೆಪ್‍ನ್ನು #Dancewihthappu ಮಾಡಿ ಅಪ್‍ಲೋಡ್ ಮಾಡುವಂತೆ ಚಾಲೆಂಜ್ ಹಾಕಿದೆ. ಇದು #Dancewihthappu... ಡ್ಯಾನ್ಸ್‍ವಿತ್‍ಅಪ್ಪು ಚಾಲೆಂಜ್. 

  ಪುನೀತ್ ನೆಲದ ಮೇಲೆ ಒಂದು ಕೈ ಊರಿಕೊಂಡು, ಜಾರಿಕೊಂಡು ಹೋಗುತ್ತಾ ಡ್ಯಾನ್ಸ್ ಮಾಡುವ ಸ್ಟೆಪ್‍ನ್ನು ಅಭಿಮಾನಿಗಳು ಮಾಡಬೇಕು. ಇದು ಪುನೀತ್ ರಾಜ್‍ಕುಮಾರ್ ಅವರೇ ಅಭಿಮಾನಿಗಳಿಗೆ ನೀಡಿರುವ ಟಾಸ್ಕ್. #Dancewihthappu

  ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ನಟಸಾರ್ವಭೌಮ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನವಿದೆ. ರಚಿತಾ ರಾಮ್, ಅನುಪಮಾ ಪರಮೇಶ್ವರನ್ ಹಾಗೂ ಬಿ.ಸರೋಜಾದೇವಿ ನಟಿಸಿರುವ ಚಿತ್ರ ಫೆಬ್ರವರಿಯಲ್ಲಿ ರಿಲೀಸ್ ಆಗುತ್ತಿದೆ.

 • ದರ್ಶನ್ 51ನೇ ಚಿತ್ರಕ್ಕೆ ಡೈರೆಕ್ಷನ್ - ಪವನ್ ಒಡೆಯರ್ ರೆಡಿ

  pavan vodeyar to direct darshan;s 52st movie

  ಸದ್ಯಕ್ಕೆ ದರ್ಶನ್ ಕುರುಕ್ಷೇತ್ರ ಚಿತ್ರದ ಶೂಟಿಂಗ್‍ನಲ್ಲಿ ಕಂಪ್ಲೀಟ್ ಬ್ಯುಸಿ. ಅದು ದರ್ಶನ್ ಅಭಿನಯದ 50ನೇ ಚಿತ್ರವೂ ಹೌದು. ಹೀಗಿರುವಾಗಲೇ 51ನೇ ಚಿತ್ರಕ್ಕೆ ಆಗಲೇ ವೇದಿಕೆ ಸಿದ್ಧಗೊಳ್ಳುತ್ತಿದೆ. ದರ್ಶನ್ ಅಭಿನಯದ 51ನೇ ಚಿತ್ರದ ನಿರ್ಮಾಪಕ ಸಂದೇಶ್ ನಾಗರಾಜ್, ನಿರ್ದೇಶಕ ಪವನ್ ಒಡೆಯರ್.

  ಕುರುಕ್ಷೇತ್ರ ಚಿತ್ರದ ನಂತರ ಪವನ್ ಒಡೆಯರ್ ನಿರ್ದೆಶನದ ಚಿತ್ರ ಸೆಟ್ಟೇರುತ್ತಿದೆ. ಚಿತ್ರದ ಕಥೆಯ ಎಳೆ ದರ್ಶನ್‍ಗೆ ಇಷ್ಟವಾಗಿದೆ. ಚಿತ್ರಕಥೆ ರಚಿಸುವುದರಲ್ಲಿ ಸಂಪೂರ್ಣ ಮಗ್ನನಾಗಿರುವ ಪವನ್, ಸದ್ಯಕ್ಕೆ ಬೇರೆ ಯಾವುದೇ ಯೋಚನೆಯನ್ನೂ ಮಾಡುತ್ತಿಲ್ಲವಂತೆ. ದರ್ಶನ್‍ರ 51ನೇ ಚಿತ್ರದ ಮೇಲೆ ಸಂಪೂರ್ಣ ಗಮನಹರಿಸಿದ್ದಾರಂತೆ.

 • ದಾಖಲೆ ಮೊತ್ತಕ್ಕೆ ನಟಸಾರ್ವಭೌಮ ಸೇಲ್..!

  natasarvabhouma distribution rights sold for record sum

  ಪುನೀತ್ ಚಿತ್ರಗಳು ಎಂದರೆ ವಿತರಕರು ಸಾಲುಗಟ್ಟುತ್ತಾರೆ. ಜೊತೆಗೆ ಈ ಬಾರಿ ಪುನೀತ್ ಜೊತೆ ರಾಕ್‍ಲೈನ್ ವೆಂಕಟೇಶ್ ಸಿನಿಮಾ ಎಂಬುದೂ ಸೇರಿ ನಟಸಾರ್ವಭೌಮನಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಚಿತ್ರದ ಟ್ರೇಲರ್ ಎಬ್ಬಿಸಿದ ಹವಾ ನೋಡಿದ ವಿತರಕರು, ಚಿತ್ರವನ್ನು ದಾಖಲೆ ಮೊತ್ತಕ್ಕೆ ಖರೀದಿಸಿದ್ದಾರಂತೆ.

  ಧೀರಜ್ ಎಂಟರ್‍ಪ್ರೈಸಸ್ ಚಿತ್ರವನ್ನು ಭಾರಿ ಮೊತ್ತಕ್ಕೆ ಖರೀದಿಸಿದ್ದು, 350ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಪುನೀತ್, ರಚಿತಾ ರಾಮ್, ಅನುಪಮಾ, ಚಿಕ್ಕಣ್ಣ, ಸಾಧುಕೋಕಿಲ, ಬಿ.ಸರೋಜಾದೇವಿ, ರವಿಶಂಕರ್ ಸೇರಿದಂತೆ ಭರ್ಜರಿ ತಾರಾಗಣ ಇರುವ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶಕ.

 • ದೀಪಾವಳಿಗೆ ನಟಸಾರ್ವಭೌಮ..?

  will natasarvabhouma release on deepavali

  ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾ, ದೀಪಾವಳಿಗೆ ರಿಲೀಸ್ ಆಗುತ್ತಾ..? ಅಂತಾದ್ದೊಂದು ನಿರೀಕ್ಷೆ ಈಗ ಗರಿಗೆದರುತ್ತಿದೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾದ ಕೆಲವೇ ಕೆಲವು ದೃಶ್ಯ ಹಾಗೂ ಹಾಡುಗಳ ಶೂಟಿಂಗ್ ಬಾಕಿಯಿದ್ದು, ಸೆಪ್ಟೆಂಬರ್ 18ರಿಂದ ಮತ್ತೆ ಶೂಟಿಂಗ್ ಶುರುವಾಗುತ್ತಿದೆ. ಅದು ಮುಗಿದರೆ ಕುಂಬಳಕಾಯಿ ಒಡೆದಂತೆಯೇ ಲೆಕ್ಕ. 

  ಶೂಟಿಂಗ್ ಜೊತೆ ಜೊತೆಯಲ್ಲೇ ನಿರ್ದೇಶಕ ಪವನ್ ಒಡೆಯರ್, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲೂ ತೊಡಗಿಸಿಕೊಂಡಿರೋದ್ರಿಂದ, ಶೂಟಿಂಗ್ ಮುಗಿದ ನಂತರ, ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲು ಸಿದ್ಧವಾಗಲಿದೆ. 

  ಪವನ್ ಒಡೆಯರ್ ಹಾಗೂ ರಾಕ್‍ಲೈನ್ ವೆಂಕಟೇಶ್ ಪ್ಲಾನ್ ಪ್ರಕಾರವೇ ಎಲ್ಲವೂ ನಡೆದರೆ, ದೀಪಾವಳಿಗೆ ನಟಸಾರ್ವಭೌಮನನ್ನು ತೆರೆಯ ಮೇಲೆ ನೋಡಬಹುದು.

 • ದುರ್ಯೋಧನ ದರ್ಶನ್ 51ನೇ ಚಿತ್ರ ಒಡೆಯರ್ - ನಿರ್ದೇಶಕ ಪವನ್ ಒಡೆಯರ್

  pavan wadeyar to direct darshan's 51st

  ದರ್ಶನ್, ಮೈಸೂರಿನವರು. ಅಲ್ಲಿಯೇ ಹುಟ್ಟಿ ಬೆಳೆದವರು. ಕರ್ನಾಟಕದ ಅಭಿಮಾನಿಗಳ ಚಾಲೆಂಜಿಂಗ್ ಸ್ಟಾರ್ ಆಗಿರುವ ದರ್ಶನ್‍ಗೆ, ಮೈಸೂರಿನ ಮೇಲೆ ಒಂದು ವಿಶೇಷ ಪ್ರೀತಿಯಂತೂ ಇದ್ದೇ ಇದೆ. ಅಂತಹ ದರ್ಶನ್ ಈಗ ಒಡೆಯರ್ ಸಿನಿಮಾಗೆ ರೆಡಿಯಾಗುತ್ತಿದ್ದಾರೆ.

  ಸದ್ಯಕ್ಕೆ ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನನ ಪಾತ್ರದಲ್ಲಿ ಬ್ಯುಸಿಯಾಗಿರುವ ದರ್ಶನ್, ಆ ಚಿತ್ರ ಮುಗಿದ ಮೇಲೆ ಪವನ್ ಒಡೆಯರ್ ಚಿತ್ರದಲ್ಲಿ ನಟಿಸಲಿದ್ದಾರೆ. ಚಿತ್ರದ ಸ್ಕ್ರಿಪ್ಟ್ ವರ್ಕ್‍ನ್ನು ಮುಗಿಸಿರುವ ಪವನ್, ಚಿತ್ರಕ್ಕೆ ಇಟ್ಟಿರುವ ಟೈಟಲ್ ಒಡೆಯರ್.

  ಹಾಗೆಂದು ತಮ್ಮ ಹೆಸರಿನಲ್ಲಿ ಚಿತ್ರ ನಿರ್ದೇಶಿಸುತ್ತಿದ್ದಾರೆ ಎಂದು ಕೊಳ್ಳಬೇಡಿ. ನಿರ್ಮಾಪಕ ಸಂದೇಶ್ ನಾಗರಾಜ್ ಕೂಡಾ ಮೈಸೂರಿನವರೇ. ಸುಮಾರು ರ್ಷಗಳ ಹಿಂದೆ ಅವರು ಒಡೆಯರ್ ಎಂದು ಟೈಟಲ್ ರಿಜಿಸ್ಟರ್ ಮಾಡಿಸಿದ್ದರು. ಅದೇ ಟೈಟಲ್ ಪವನ್ ಒಡೆಯರ್‍ಗೂ ಇಷ್ಟವಾಗಿ, ಚಿತ್ರಕ್ಕೆ ಆ ಹೆಸರನ್ನೇ ಫೈನಲ್ ಮಾಡಿದ್ದಾರೆ. ಒಡೆಯರ್ ಎನ್ನುವ ಹೆಸರಿನಲ್ಲೇ ಮೈಸೂರು ಮತ್ತು ಕರ್ನಾಟಕದ ಚರಿತ್ರೆಯಿದೆ ಎನ್ನುವುದನ್ನು ಮರೆಯುವಂತಿಲ್ಲ.

  Related Articles :-

  Darshan's Wodeyar Script Almost Ready

 • ನಟ ಸಾರ್ವಭೌಮನಿಗೆ ಇನ್ನೊಬ್ಬ ಹೀರೋಯಿನ್

  pavan wodeyar in search of new heroine

  ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರಕ್ಕೆ ಹೊಸ ನಾಯಕಿ ಆಯ್ಕೆಯಾಗಲಿದ್ದಾರೆ. ಕೆಲವೇ ದಿನಗಳಲ್ಲಿ ಹೊಸ ನಾಯಕಿಯ ಹೆಸರು ಫೈನಲ್ ಮಾಡಲಿದ್ದೇವೆ. ಹೀಗೆಂದು ನಿರ್ದೇಶಕ ಪವನ್ ಒಡೆಯರ್ ಹೇಳಿದ್ದಾರೆ. ಹಾಗಾದರೆ ರಚಿತಾ ರಾಮ್..?

  ಅಭಿಮಾನಿಗಳೇ.. ಡೋಂಟ್‍ವರಿ.. ಡಿಂಪಲ್ ಕ್ವೀನ್ ನಟಸಾರ್ವಭೌಮನ ನಾಯಕಿ. ಚಿತ್ರಕ್ಕೆ ಇನ್ನೊಬ್ಬ ನಾಯಕಿಯ ಪಾತ್ರದ ಅವಶ್ಯಕತೆ ಇದೆ. ಅದು ಕಥೆಗೆ ತಿರುವು ನೀಡುವಂತಹ ಪಾತ್ರ. ಆ ಪಾತ್ರಕ್ಕಾಗಿ ಅಂದರೆ 2ನೇ ನಾಯಕಿಗಾಗಿ ಪವನ್ ಒಡೆಯರ್ ಹುಡುಕಾಟ ಶುರು ಮಾಡಿದ್ದಾರೆ. ಶೀಘ್ರದಲ್ಲೇ 2ನೇ ನಾಯಕಿಯ ಆಯ್ಕೆ ಮುಗಿಯಲಿದೆ. 

 • ನಟಸಾರ್ವಭೌಮ ಆಡಿಯೋ ಅದ್ಧೂರಿ

  natavabhouma audio launch in hubbali

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಅಡಿಯೋ ಲಾಂಚ್ ಅದ್ಧೂರಿಯಾಗಿ ನೆರವೇರಿದೆ. ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅಪ್ಪು ಸಿನಿಮಾದ ಹಾಡುಗಳ ಬಿಡುಗಡೆಯಾಗಿದೆ. 

  ಐಟಿ ದಾಳಿ ಹಿನ್ನೆಲೆಯಲ್ಲಿ ಪುನೀತ್ ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್ ಕಾರ್ಯಕ್ರಮಕ್ಕೆ ಬರುವ ಬಗ್ಗೆ ಸಂಶಯಗಳಿದ್ದವು. ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸಮಾರಂಭಕ್ಕೆ ಬರಲು ಸಾಧ್ಯವಾಗಲಿಲ್ಲ. ಪುನೀತ್ ಕಾರ್ಯಕ್ರಮಕ್ಕೆ ಆಗಮಿಸಿದ್ದಷ್ಟೇ ಅಲ್ಲ, ಅದ್ಭುತ ಡ್ಯಾನ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ರು.

  ಪುನೀತ್ ಜೊತೆ ಅಷ್ಟೇ ಅದ್ಭುತವಾಗಿ ಹೆಜ್ಜೆ ಹಾಕಿದ ರಚಿತಾ ರಾಮ್, ಪ್ರೇಕ್ಷಕರ ಶಿಳ್ಳೆ ಚಪ್ಪಾಳೆ ಗಿಟ್ಟಿಸಿದ್ರು. ನಿರೂಪಕಿ ಅನುಶ್ರೀ ಅವರ ಉತ್ತರ ಕರ್ನಾಟಕ ಶೈಲಿಯ ನಿರೂಪಣೆ ಗಮನ ಸೆಳೆಯಿತು.

  ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ, ರಿಲೀಸ್‍ಗೆ ರೆಡಿಯಾಗಿದ್ದು, ಪ್ರಚಾರದ ಕೆಲಸಕ್ಕೆ ಆಡಿಯೋ ಲಾಂಚ್ ಮೂಲಕ ಮುಂದಾಗಿದೆ ಚಿತ್ರತಂಡ.

 • ನಟಸಾರ್ವಭೌಮ ಆನ್‍ಲೈನ್ ಲೀಕ್

  natasarvabhouma suffers pn;ine piracy problem

  ಇತ್ತೀಚೆಗೆ ಹಿಂದಿ, ತಮಿಳು ಹಾಗೂ ತೆಲುಗು ಚಿತ್ರರಂಗಗಳನ್ನು ಅತಿ ದೊಡ್ಡ ಭೂತವಾಗಿ ಕಾಡ್ತಿರೋದು ಪೈರಸಿ. ಅದರಲ್ಲೂ ತಮಿಳು ರಾಕರ್ಸ್. ಈಗ ಆ ಕಂಟಕ ಕನ್ನಡ ಚಿತ್ರರಂಗಕ್ಕೂ ಎದುರಾಗಿದೆ. ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರವನ್ನು ತಮಿಳು ರಾಕರ್ಸ್ ಆನ್‍ಲೈನ್‍ಗೆ ಬಿಟ್ಟಿದ್ದಾರೆ. 25 ದಿನ ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ನಟಸಾರ್ವಭೌಮನಿಗೆ ನಿಜವಾದ ವಿಲನ್ ಆಗಿ ಕಾಡ್ತಿದೆ ತಮಿಳು ರಾಕರ್ಸ್.

  ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ. ಈ ಪೈರಸಿ ದಂಧೆಕೋರರ ವಿರುದ್ಧ ರಾಕ್‍ಲೈನ್ ಸಮರ ಸಾರುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ. ತಮಿಳು ರಾಕರ್ಸ್ ಸಿಕ್ಕಿಬೀಳ್ತಾರಾ..?

 • ನಟಸಾರ್ವಭೌಮ ಟೈಟಲ್ ಇಡೋಕೆ ಏನು ಕಾರಣ..?

  reason behind natasarvabhouma trailer

  ನಟಸಾರ್ವಭೌಮ ಎಂದಾಕ್ಷಣ ಕನ್ನಡಿಗರ ಕಣ್ಣ ಮುಂದೆ ಬರೋದು ಡಾ.ರಾಜ್‍ಕುಮಾರ್. ಅದು ಅವರಿಗೆ ಅಭಿಮಾನಿಗಳು ನೀಡಿದ್ದ ಬಿರುದೂ ಹೌದು. ಅವರ ಚಿತ್ರದ ಹೆಸರೂ ಹೌದು. ಹೀಗಾಗಿಯೇ ಪುನೀತ್ ಚಿತ್ರಕ್ಕೆ ನಟಸಾರ್ವಭೌಮ ಎಂದು ಟೈಟಲ್ ಕೊಟ್ಟಾಗ ಕೆಲವರು ಬೇಡ ಎಂದಿದ್ದರಂತೆ. 

  ಕಾರಣ ಇಷ್ಟೆ, ಡಾ.ರಾಜ್ ಹೆಸರು ಮತ್ತು ಬಿರುದಿನ ತೂಕವೇ ಚಿತ್ರದ ನಿರೀಕ್ಷೆಯನ್ನು ಭಾರಿ ಭಾರಿ ಪ್ರಮಾಣದಲ್ಲಿ ಏರಿಸುತ್ತೆ. ಮತ್ತೊಂದು ಇದು ಪಕ್ಕಾ ಕಮರ್ಷಿಯಲ್ ಸಿನಿಮಾ. ಈ ಟೈಟಲ್ ಬೇಕಾ..? ಎಂಬ ಪ್ರಶ್ನೆಗಳು ಎದ್ದಿದ್ದವಂತೆ.

  `ಆದರೆ, ಚಿತ್ರದ ಕಥೆಗೆ ಆ ಟೈಟಲ್ ಅತ್ಯುತ್ತಮವಾಗಿ ಹೊಂದಾಣಿಕೆಯಾಗುತ್ತೆ. ನೀವೂ ಅಷ್ಟೆ, ಸಿನಿಮಾ ನೋಡಿದ ಮೇಲೆ ಟೈಟಲ್ ಸರಿಯಾಗಿದೆ ಎಂದು ಖಂಡಿತಾ ಹೇಳುತ್ತೀರಿ' ಎಂದು ಭರವಸೆ ಕೊಡ್ತಾರೆ ನಿರ್ದೇಶಕ ಪವನ್ ಒಡೆಯರ್.

 • ನಟಸಾರ್ವಭೌಮ ಯಾವ ರೀತಿಯ ಸಿನಿಮಾ..?

  natasarvabhouma photo generates curiosity

  ನಟ ಸಾರ್ವಭೌಮ ಸಿನಿಮಾದ ಕಥೆ ಏನು..? ಕೌಟುಂಬಿಕ ಕಥಾ ಹಂದರದ ಚಿತ್ರವಾ..? ಇಬ್ಬರು ನಾಯಕಿಯರಿದ್ದಾರೆ, ತ್ರಿಕೋನ ಪ್ರೇಮಕಥೆಯಾ..? ಚಿತ್ರದ ಕಥಾನಾಯಕ ಫೋಟೋಗ್ರಾಫರ್. ಹಾಗಾದರೆ, ಮೀಡಿಯಾ ಸ್ಟೋರಿನಾ..? ಹೀಗೆ ಹಲವಾರು ಪ್ರಶ್ನೆ ಹುಟ್ಟಿ ಹಾಕಿದೆ ನಟಸಾರ್ವಭೌಮ. ಆ ಕುತೂಹಲಕ್ಕೆ ಇನ್ನೊಂದು ಸೇರ್ಪಡೆ ಇದು, ಈ ಫೋಟೋ.

  ನಟಸಾರ್ವಭೌಮ ಚಿತ್ರದ ಶೂಟಿಂಗ್ ಸೆಟ್‍ನಿಂದ ಹೊರಬಂದಿರುವ ಈ ಫೋಟೋ, ಬಾದಾಮಿಯಲ್ಲಿ ನಡೆದ ಚಿತ್ರೀಕರಣದ ವೇಳೆ ಪುನೀತ್  ಪೂಜೆಯಲ್ಲಿ ತೊಡಗಿಸಿಕೊಂಡಿರುವ ಒಂದು ಫೋಟೋ.  

  ಹೀಗೆ ಹಲವು ಅಂಶಗಳು ಇದು ಯಾವ ರೀತಿಯ ಸಿನಿಮಾ ಇರಬಹುದು ಎಂಬ ಕುತೂಹಲ ಸೃಷ್ಟಿಸಿವೆ. 

  ಪವನ್ ಒಡೆಯರ್ ನಿರ್ದೇಶನದ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದರೆ, ಬಿ.ಸರೋಜಾದೇವಿ ಹಲವು ವರ್ಷಗಳ ನಂತರ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಬಾಹುಬಲಿಯ ಕಾಲಕೇಯ ಖ್ಯಾತಿಯ ಪ್ರಭಾಕರ್ ಕೂಡಾ ಚಿತ್ರದಲ್ಲಿದ್ದಾರೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಈ ಸಿನಿಮಾ ಅಂತಿಮ ಹಂತದ ಚಿತ್ರೀಕರಣದಲ್ಲಿದೆ.

 • ನಟಸಾರ್ವಭೌಮನ ಜೊತೆ ಚಿಕ್ಕಣ್ಣ, ಕಿರಿಕ್ ರಘು ಡ್ಯಾನ್ಸ್

  natasarvabhouma shoots a party song

  ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರಕ್ಕೆ ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡುತ್ತಿರುವುದೇ ಸೆನ್ಸೇಷನ್ ಸೃಷ್ಟಿಸಿದೆ. ಹಾಡಿನ ಚಿತ್ರೀಕರಣವೂ ಈಗಾಗಲೇ ನಡೆದಿದ್ದು, ಪುನೀತ್ ಹೆಜ್ಜೆ ಹಾಕಿರೋದು ಪಾರ್ಟಿ ಸಾಂಗ್‍ಗಂತೆ. ಯೋಗರಾಜ್ ಭಟ್ಟರ ಸಾಹಿತ್ಯಕ್ಕೆ ಡಿಫರೆಂಟ್ ಸ್ಟೆಪ್ಸ್ ಕೊಟ್ಟಿರೊದು ಜಾನಿ ಮಾಸ್ಟರ್. ರಾಜಕುಮಾರ ಚಿತ್ರದಲ್ಲಿ ಅಪ್ಪು ಡ್ಯಾನ್ಸ್ ಡ್ಯಾನ್ಸ್.. ನೃತ್ಯ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರನ್ನೂ ಥ್ರಿಲ್ಲಾಗಿಸಿತ್ತು. ಅದಕ್ಕಿಂತ ವಿಭಿನ್ನವಾದ ಸ್ಟೆಪ್ಸ್ ಹಾಕಿಸಿದ್ದಾರೆ ಎಂದು ಖುಷಿಯಾಗಿದ್ದಾರೆ ನಿರ್ದೇಶಕ ಪವನ್ ಒಡೆಯರ್.

  ಪಾರ್ಟಿ ಸಾಂಗ್‍ನಲ್ಲಿ ಪುನೀತ್ ಜೊತೆ ಚಿಕ್ಕಣ್ಣ, ಕಿರಿಕ್ ಪಾರ್ಟಿ ಖ್ಯಾತಿಯ ರಘು ಕೂಡಾ ಹೆಜ್ಜೆ ಹಾಕಿರೋದು ವಿಶೇಷ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ರಚಿತಾ ರಾಮ್, ಅನುಪಮಾ ನಾಯಕಿಯರು. ಬಿ.ಸರೋಜಾದೇವಿ ಬಹಳ ವರ್ಷಗಳ ನಂತರ ಬಣ್ಣ ಹಚ್ಚುತ್ತಿರುವುದು ನಟಸಾರ್ವಭೌಮನ ಸ್ಪೆಷಲ್.

 • ನಟಸಾರ್ವಭೌಮನ ಮದ್ಯಪ್ರಾಚ್ಯ ಓಟ ಶುರು

  natasarvabhouma releasing today in middle east

  ರಾಜ್ಯಾದ್ಯಂತ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ನಟಸಾರ್ವಭೌಮ ಸಿನಿಮಾ, ಮದ್ಯಪ್ರಾಚ್ಯ ದೇಶಗಳ ಸವಾರಿ ಶುರು ಮಾಡಿದೆ. ಇಂದಿನಿಂದ ಅಂದ್ರೆ, ಫೆಬ್ರವರಿ 21ರಿಂದ ಫೆಬ್ರವರಿ 27ರವರೆಗೆ ಮದ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

  ಯುಎಇ, ಒಮನ್, ಕುವೈತ್, ಕತಾರ್, ಬಹರೈನ್, ಶಾರ್ಜಾ, ಅಬುಧಾಬಿಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. 

  ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ನಟಸಾರ್ವಭೌಮ ಚಿತ್ರದಲ್ಲಿ ಪುನೀತ್, ರಚಿತಾ ರಾಮ್, ಅನುಪಮಾ ಪರಮೇಶ್ವರನ್ ನಟಿಸಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ.

 • ನಟಸಾರ್ವಭೌಮನನ್ನು ಮೊದಲ ದಿನವೇ ಕಣ್ತುಂಬಿಕೊಂಡ ಕ್ರಿಕೆಟ್ ಸ್ಟಾರಿಣಿ

  veda krishnamurthy appreciated natasarvabhouma

  ನಟಸಾರ್ವಭೌಮ ಚಿತ್ರ ಅಭಿಮಾನಿಗಳಿಗೆ ಥ್ರಿಲ್ ನೀಡುತ್ತಿರುವಾಗಲೇ ವಿಶೇಷ ಅಭಿಮಾನಿಯೊಬ್ಬರಿಂದ ಅಪ್ಪುಗೆ ಮೆಚ್ಚುಗೆಯ ಅಪ್ಪುಗೆ ಸಿಕ್ಕಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಕೆಟ್ ಆಟಗಾರ್ತಿ, ಭಾರತೀಯ ಮಹಿಳಾ ಕ್ರಿಕೆಟ್‍ನ ಅವಿಭಾಜ್ಯ ಅಂಗವಾಗಿರುವ ವೇದಾ ಕೃಷ್ಣಮೂರ್ತಿ, ನಟಸಾರ್ವಭೌಮ ಚಿತ್ರವನ್ನು ಮೊದಲ ದಿನವೇ ನೋಡಿ, ಮೆಚ್ಚಿ ಥ್ರಿಲ್ಲಾಗಿ.. ಅಪ್ಪುಗೆ ಶುಭ ಕೋರಿದ್ದಾರೆ.

  ಅಪ್ಪಟ ಅಭಿಮಾನಿಯಂತೆ ಮೊದಲ ದಿನವೇ ಚಿತ್ರ ನೋಡಿದ್ದ ವೇದಾ `ಇದು ಅದ್ಭುತ ಸಿನಿಮಾ. ಅದರಲ್ಲೂ ಕ್ಲೈಮಾಕ್ಸ್ ಸೂಪರ್. ಎಲ್ಲರೂ ನೋಡಲೇಬೇಕು. ಈ ಚಿತ್ರ ಎಲ್ಲ ದಾಖಲೆಗಳನ್ನೂ ಮುರಿಯಲಿ. ಆಲ್ ದಿ ಬೆಸ್ಟ್ ಸರ್' ಎಂದು ಶುಭ ಕೋರಿದ್ದರು.

  ಪುನೀತ್ ರಾಜ್‍ಕುಮಾರ್ ಎಂದಿನ ಸ್ಟೈಲ್‍ನಲ್ಲಿಯೇ `ಚಿತ್ರ ನೋಡಿದ್ದಕ್ಕೆ ಧನ್ಯವಾದ. ನೀವು ಸಿನಿಮಾ ನೋಡಿದ್ದು, ಮೆಚ್ಚಿಕೊಂಡಿದ್ದು ನನಗೆ ನಿಜಕ್ಕೂ ಖುಷಿಯಾಯ್ತು' ಎಂದು ಪ್ರತಿಕ್ರಿಯಿಸಿದ್ದಾರೆ.

 • ನಟಸಾರ್ವಭೌಮನಲ್ಲೂ ಇರಲಿದೆ ಅಪ್ಪು ವಂಡರ್ಸ್

  johnny master to choregraph puneeth again

  ರಾಜಕುಮಾರ ಚಿತ್ರ, ಸೂಪರ್ ಡ್ಯೂಪರ್ ಹಿಟ್ ಆಗಿದ್ದಷ್ಟೇ ಅಲ್ಲ, ಪುನೀತ್ ರಾಜ್‍ಕುಮಾರ್ ಸ್ಟೆಪ್ಪುಗಳೂ ಪ್ರೇಕ್ಷಕರನ್ನು ಬೆರಗಾಗಿಸಿದ್ದವು. ಡ್ಯಾನ್ಸ್ ಅಪ್ಪು ಡ್ಯಾನ್ಸ್ ಅಂತೂ ಚಿಕ್ಕಮಕ್ಕಳಿಗೂ ಫೇವರಿಟ್ ಆಗಿ ಹೋಗಿತ್ತು. ಹೀಗೆ ಹೆಜ್ಜೆಗಳ ಮೂಲಕವೇ ಮೋಡಿ ಮಾಡಿದ್ದರ ಹಿಂದಿದ್ದವರು ಜಾನಿ ಮಾಸ್ಟರ್. ಅವರೀಗ ಮತ್ತೆ ಬಂದಿದ್ದಾರೆ. ನಟಸಾರ್ವಭೌಮನಿಗಾಗಿ.

  ರಾಕ್‍ಲೈನ್ ನಿರ್ಮಾಣದ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನವಿದೆ. ರಚಿತಾ ರಾಮ್ ನಾಯಕಿಯಾಗಿದ್ದು, ಬಿ.ಸರೋಜಾದೇವಿ ದಶಕಗಳ ನಂತರ ಬಣ್ಣ ಹಚ್ಚಿದ್ದಾರೆ. ಹೀಗೆ ಸ್ಪೆಷಲ್‍ಗಳ ಸ್ಪೆಷಲ್ ಹೊತ್ತಿರುವ ಚಿತ್ರಕ್ಕೆ ಈಗ ಜಾನಿ ಮಾಸ್ಟರ್ ಕ್ರೇಜ್. ಅಭಿಮಾನಿಗಳು, ಈ ಚಿತ್ರದಲ್ಲೂ ಅಪ್ಪು ಅವರಿಂದ ಅದ್ಭುತ ಡ್ಯಾನ್ಸ್ ನಿರೀಕ್ಷೆ ಮಾಡಬಹುದು.

 • ನಟಸಾರ್ವಭೌಮನಿಗೆ ಕುಂಭಳಕಾಯಿ 

  puneeth's natasarvabhouma shooting completed

  ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್, ಪವನ್ ಒಡೆಯರ್, ರಾಕ್‍ಲೈನ್ ವೆಂಕಟೇಶ್ ಕಾಂಬಿನೇಷನ್‍ನ ನಟಸಾರ್ವಭೌಮ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ನಾಯಕನ ಇಂಟ್ರೊಡಕ್ಷನ್ ಸಾಂಗ್‍ನ್ನು ಐದು ಸೆಟ್‍ಗಳಲ್ಲಿ ಚಿತ್ರೀಕರಿಸಿದ ಚಿತ್ರತಂಡ ಶೂಟಿಂಗ್ ಮುಗಿಸಿದೆ.

  natasarvabhouma_shooting2.jpgಬೆಂಗಳೂರು, ಹೈದರಾಬಾದ್, ವಿಜಯಪುರಗಳಲ್ಲಿ ಚಿತ್ರೀಕರಣ ನಡೆಸಿರುವ ಚಿತ್ರದಲ್ಲಿ ಪುನೀತ್ ಇದೇ ಮೊದಲ ಬಾರಿಗೆ ಜರ್ನಲಿಸ್ಟ್ ಪಾತ್ರ ಮಾಡಿದ್ದಾರೆ. ರಚಿತಾ ರಾಮ್, ಅನುಪಮಾ ಪರಮೇಶ್ವರನ್ ನಾಯಕಿಯರು. ಬಿ.ಸರೋಜಾದೇವಿ ಹಲವು ವರ್ಷಗಳ ನಂತರ ಬಣ್ಣ ಹಚ್ಚಿದ್ದಾರೆ. ಜನವರಿ 2ನೇ ವಾರದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery