ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಚೇತನ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ನಿರ್ಮಾಪಕ ಸುಪ್ರೀತ್ ಧಾರಾಳವಾಗಿ ಖರ್ಚು ಮಾಡುತ್ತಿದ್ದಾರೆ. ಎಷ್ಟರಮಟ್ಟಿಗೆಂದರೆ, ಚಿತ್ರದ ಒಂದು ಫೈಟ್ ಸೀನ್‍ಗಾಗಿ ಒಂದು ಕೋಟಿ 60 ಲಕ್ಷ ಬಜೆಟ್ ತೆಗೆದಿಟ್ಟಿದ್ದಾರೆ ಸುಪ್ರೀತ್.
ಆ ಸೀನ್‍ಗಾಗಿ 10ರಿಂದ 15 ಅಡಿ ಎತ್ತರದ ದುರ್ಗಾಮಾತೆಯ ಪ್ರತಿಮೆಗಳನ್ನು ನಿರ್ಮಿಸಲಾಗಿದ್ದು, ಸೆಟ್ ಹಾಕಲಾಗಿದೆ. 85ಕ್ಕೂ ಹೆಚ್ಚು ಫೈಟರ್‍ಗಳು, 120 ಬಾಡಿ ಬಿಲ್ಡರ್‍ಗಳು, 400 ಜನ ಜೂನಿಯರ್ ಆರ್ಟಿಸ್ಟ್‍ಗಳಿರುವ ಸಾಹಸ ದೃಶ್ಯದ ಚಿತ್ರೀಕರಣ ಬರೋಬ್ಬರಿ 8 ದಿನ ನಡೆಯಲಿದೆ. ಸಾಹಸ ನಿರ್ದೇಶಕ ರವಿವರ್ಮ ಈ ಅದ್ಧೂರಿ ಫೈಟ್ ಸಂಯೋಜಿಸಿದ್ದಾರೆ.
ಶ್ರೀಮುರಳಿ, ಶ್ರೀಲೀಲ, ಸಾಯಿ ಕುಮಾರ್, ರವಿಶಂಕರ್, ಅಯ್ಯಪ್ಪ ನಟಿಸಿರುವ ಚಿತ್ರವಂತೂ ಅದ್ಧೂರಿಯಾಗಿ ಮೂಡಿ ಬರುತ್ತಿದೆ.