ತುಣಕ್ ತುಣಕ್ ತುಣು ತುಣಕ್ ತುಣಕ್ ತುಣು ದಾದಾದಾದಾದಾ.. ಬಲ್ಲೇ ಬಲ್ಲೇ.. ಅನ್ನೋ ಸೌಂಡು ಕಿವಿಗೆ ಬಿದ್ದರೆ, ತಕ್ಷಣ ಕಣ್ಣೆದುರು ಪ್ರತ್ಯಕ್ಷವಾಗೋದು ದಲೇರ್ ಮೆಹಂದಿ ಅನ್ನೋ ಸಿಖ್ ಗಾಯಕ. ಈಗಾಗಲೇ ಕನ್ನಡದಲ್ಲಿ ಕೆಲವು ಚಿತ್ರಗಳಿಗೆ ಹಾಡಿರುವ ದಲೇರ್ ಮೆಹಂದಿ, ದಿ ವಿಲನ್ ಚಿತ್ರದ ಹಾಡಿಗೆ ಧ್ವನಿ ಕೊಟ್ಟಿದ್ದಾರೆ.
ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡನ್ನು ದಲೇರ್ ಮೆಹಂದಿ ಹಾಡಿದ್ದಾರೆ. ಮೊದಲೇ ವಿಲನ್ ಚಿತ್ರ ಕನ್ನಡ ಚಿತ್ರರಂಗದ ದಿಗ್ಗಜರ ಸಮಾಗಮವಾಗಿರುವ ಚಿತ್ರ. ಶಿವರಾಜ್‍ಕುಮಾರ್, ಸುದೀಪ್, ಪ್ರೇಮ್, ಸಿ.ಆರ್.ಮನೋಹರ್, ಆ್ಯಮಿ ಜಾಕ್ಸನ್, ಮಿಥುನ್ ಚಕ್ರವರ್ತಿ, ಶ್ರೀಕಾಂತ್.. ಹೀಗೆ ಚಿತ್ರದ ತುಂಬಾ ದೊಡ್ಡ ದೊಡ್ಡವರೇ ಇದ್ದಾರೆ. ಈಗ ದಲೇರ್ ಮೆಹಂದಿ ಸೇರ್ಪಡೆಯಾಗಿದೆ.
ಆಂದಹಾಗೆ ದಿ ವಿಲನ್ ಚಿತ್ರದ ಬಾಕಿಯಿರುವ ಏಕೈಕ ಹಾಡಿನ ಶೂಟಿಂಗ್, ಇದೇ ಹಾಡಿನದ್ದಂತೆ. ಗೆಟ್ ರೆಡಿ.
Related Articles :-
After 'Namo Bhootatma', Daler Mehandi sings for 'The Villain'