` ganesh, - chitraloka.com | Kannada Movie News, Reviews | Image

ganesh,

 • ಭಟ್ಟರ ಗಾಳಿಪಟಕ್ಕೆ ದಾರವಾಯ್ತು ಕೆವಿಎನ್ ಪ್ರೊಡಕ್ಷನ್ಸ್

  ಭಟ್ಟರ ಗಾಳಿಪಟಕ್ಕೆ ದಾರವಾಯ್ತು ಕೆವಿಎನ್ ಪ್ರೊಡಕ್ಷನ್ಸ್

  ಯೋಗರಾಜ್ ಭಟ್ ಮತ್ತು ಗಣೇಶ್ ಮತ್ತೊಮ್ಮೆ ಒಂದಾಗಿರುವ ಸಿನಿಮಾ ಗಾಳಿಪಟ 2. ಭಟ್ಟರ ವೃತ್ತಿಜೀವನದ 3ನೇ ಸಿನಿಮಾ ಆಗಿದ್ದ ಗಾಳಿಪಟ ಆಗಿನ ಕಾಲಕ್ಕೆ ದಾಖಲೆ ಬರೆದಿದ್ದ ಸಿನಿಮಾ. ಈಗ ಗಾಳಿಪಟ 2 ರೆಡಿಯಾಗಿದೆ. ಟ್ರೇಲರ್ ಹೊರಬಂದಿದೆ. ಗಾಳಿಪಟದಲ್ಲಿ ಯೋಗರಾಜ್ ಭಟ್, ಗಣೇಶ್, ದಿಗಂತ್, ಅನಂತ್ ನಾಗ್, ಪದ್ಮಜಾ ರಾವ್, ರಂಗಾಯಣ ರಘು ಇಲ್ಲಿ ಕೂಡಾ ಕಂಟಿನ್ಯೂ ಆಗಿದ್ದಾರೆ. ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ನಿಶ್ವಿಕಾ ನಾಯ್ಡು, ಸಂಯುಕ್ತಾ ಮೆನನ್ ಇಲ್ಲಿ ಹೊಸದಾಗಿ ಸೇರಿದ್ದಾರೆ. ನಿರ್ಮಾಪಕರಾಗಿ ರಮೇಶ್ ರೆಡ್ಡಿ ಇದ್ದರೆ, ಸಂಗೀತ ನಿರ್ದೇಶಕನ ಸ್ಥಾನ ಅಲಂಕರಿಸಿರುವುದು ಅರ್ಜುನ್ ಜನ್ಯಾ.

  ಈಗ ಚಿತ್ರದ ವಿತರಣೆಗೆ ಮುಂದಾಗಿರೋದು ಕೆವಿಎನ್ ಪ್ರೊಡಕ್ಷನ್ಸ್. ಆರ್.ಆರ್.ಆರ್. ನಂತರ ಕೆವಿಎನ್ ವಿತರಣೆ ಮಾಡುತ್ತಿರೋ ದೊಡ್ಡ ಚಿತ್ರ ಗಾಳಿಪಟ 2. ಒಂದೆಡೆ ಸಿನಿಮಾ ನಿರ್ಮಾಣದಲ್ಲಿ ಬ್ಯಸಿಯಾಗಿರೋ ಕೆವಿಎನ್, ಮತ್ತೊಂದೆಡೆ ಚಿತ್ರದ ವಿತರಣೆಯಲ್ಲೂ ದೊಡ್ಡ ಹೆಜ್ಜೆ ಇಡುತ್ತಿದೆ.

 • ಮವಾಯ್‍ಥಾಯ್‍ಗೆ ಗಣೇಶ್ ರಾಯಭಾರಿ

  ganesh as muay thai ambadassor

  ಮವಾಯ್‍ಥಾಯ್. ಅದು ಥೈಲ್ಯಾಂಡ್‍ನ ಅದ್ಭುತ ಸಮರ ಕಲೆ. ಆ ಕಲೆಯಲ್ಲಿ ಪರಿಣತರಾದವರು ಆನೆಯನ್ನೇ ಪಳಗಿಸಬಹುದಂತೆ. ಕಿಕ್ ಬಾಕ್ಸಿಂಗ್‍ನ್ನೇ ಹೋಲುವ ಆ ಸಮರ ಕಲೆಗೆ ವಿದೇಶದಲ್ಲಿ ಭಾರಿ ಜನಪ್ರಿಯತೆಯಿದೆ. ಭಾರತದಲ್ಲಿ 15 ವರ್ಷಗಳಿಂದ ಅಸ್ಥಿತ್ವದಲ್ಲಿದ್ದರೂ, ಜನಪ್ರಿಯತೆ ಅಷ್ಟಕ್ಕಷ್ಟೆ. 

  ಅಂಥಾ ಸಮರಕಲೆಗೆ ಈಗ ಗೋಲ್ಡನ್ ಸ್ಟಾರ್ ಗಣೇಶ್ ರಾಯಭಾರಿಯಾಗುತ್ತಿದ್ದಾರೆ. ಬೆಂಗಳೂರಿನ ಅಕಾಡೆಮಿಯೊಂದು ಗಣೇಶ್ ಅವರನ್ನು ರಾಯಭಾರಿಯನ್ನಾಗಿ ಮಾಡಿಕೊಂಡು, ಕರ್ನಾಟಕದಲ್ಲಿ ಈ ಕಲೆಯನ್ನು ಪರಿಚಯಿಸೋಕೆ ಹೊರಟಿದೆ. ಹಾಗೆಂದು ಗಣೇಶ್ ಸುಮ್ಮನೆ ರಾಯಭಾರಿಯಾಗುತ್ತಿಲ್ಲ. ಇದಕ್ಕಾಗಿ 9 ತಿಂಗಳ ಕಠಿಣ ಅಭ್ಯಾಸವನ್ನೂ ನಡೆಸಿದ್ದಾರೆ. ಇತ್ತೀಚೆಗಷ್ಟೇ ಲಾರಿ, ಟ್ರ್ಯಾಕ್ಟರ್ ಟೈರುಗಳನ್ನು ಹೊತ್ತು ತಿರುಗಿದ್ದ ಗಣೇಶ್, ಆ ಕಸರತ್ತು ಮಾಡ್ತಾ ಇದ್ದದ್ದು ಇದಕ್ಕಾಗಿಯೇನಾ..? 

 • ಮುಂಗಾರು ಮಳೆಯಾಗುತ್ತಾ.. ಮುಗುಳುನಗೆ..?

  mugulunage image

  ಯೋಗರಾಜ್ ಭಟ್-ಗಣೇಶ್ ಕಾಂಬಿನೇಷನ್‍ನ ಮುಗುಳುನಗೆ ಚಿತ್ರ ಇದೇ ಶುಕ್ರವಾರ ತೆರೆಗೆ ಬರ್ತಾ ಇದೆ. ಇಬ್ಬರೂ ಮೊದಲು ಜೋಡಿಯಾಗಿದ್ದು ಮುಂಗಾರುಮಳೆಯಲ್ಲಿ. ಅದು ಕನ್ನಡದಲ್ಲಿ ದಾಖಲೆಯನ್ನೇ ಬರೆಯಿತು. ಎರಡನೇ ಚಿತ್ರ ಗಾಳಿಪಟ ಕೂಡಾ ಸೂಪರ್ ಹಿಟ್. ಅದಾದ ಮೇಲೆ ಇಬ್ಬರೂ ಒಟ್ಟಾಗಿರುವ ಚಿತ್ರ ಮುಗುಳುನಗೆ.

  ನಾಲ್ವರು ನಾಯಕಿಯರ ಜೊತೆ ನಟಿಸಿರುವ ಗಣೇಶ್‍ಗೆ ಈ ಚಿತ್ರದಲ್ಲಿ ಅಮೂಲ್ಯ ಮಾರ್ಗದರ್ಶನ ನೀಡುತ್ತಾರೆ ಎನ್ನುವ ವಿಚಾರವೇ ಕುತೂಹಲ ಮೂಡಿಸಿದೆ. ಮುಂಗಾರುಮಳೆಯಲ್ಲಿ ನಟಿಸಿದ್ದ ಅನಂತ್ ನಾಗ್, ಅದ್ಭುತ ಹಾಡು ಕೊಟ್ಟಿದ್ದ ಜಯಂತ್ ಕಾಯ್ಕಿಣಿ ಈ ಚಿತ್ರದಲ್ಲೂ ಇದ್ದಾರೆ. ನಟ ಜಗ್ಗೇಶ್ ಪುಟ್ಟದೊಂದು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

  ರಂಗಾಯಣ ರಘು, ಅಚ್ಯುತ್ ಕುಮಾರ್, ರಾಮರಾಮಾ ರೆ ಧರ್ಮಣ್ಣ, ಚಂದನ್, ಮಂಜುನಾಥ್ ಹೆಗ್ಡೆ, ಸಾಗರ್..ಹೀಗೆ ತಾರಾಬಳಗ ದೊಡ್ಡದಾಗಿಯೇ ಇದೆ.

  ಮುಗುಳುನಗೆಯೇ ನೀ ಹೇಳು, ಕೆರೆ ಏರಿ ಮ್ಯಾಲೆ, ರೂಪಸಿ ಸುಮ್ಮನೆ, ಹೊಡಿ ಒಂಭತ್.. ಹಾಡುಗಳು ಜನಪ್ರಿಯವಾಗಿವೆ. ಸಾಹಿತ್ಯವನ್ನು ಅಭಿಮಾನಿಗಳು ಈಗಾಗಲೇ ಗುನುಗತೊಡಗಿದ್ದಾರೆ. ಸೈಯ್ಯದ್ ಸಲಾಂ ನಿರ್ಮಾಣದ ಚಿತ್ರಕ್ಕೆ ಹರಿಕೃಷ್ಣ ಸಂಗೀತವಿದೆ.

  Related Articles :-

  ಹೆಣ್ಮಕ್ಕಳಿಗಾಗಿ..ಹೆಣ್ಮಕ್ಕಳಿಗೆ ಮಾತ್ರ - ಮುಗುಳುನಗೆ ಸ್ಪೆಷಲ್

  ಸಭ್ಯ ತುಂಟ ಪ್ರೇಮಿಗಳ ಮನಸು ಕದ್ದ ಮುಗುಳುನಗೆ ಹಾಡುಗಳು

  ನಿಮ್ಮ ನಿಮ್ಮ ಪ್ರೀತಿ ಹುಡುಕಿಕೊಳ್ಳಿ.. ಮುಗುಳುನಗೆಯಲಿ..

  ಹಾಡು ರಿಲೀಸ್‍ನಲ್ಲೇ ಮುಗುಳುನಗೆ ಕರ್ನಾಟಕ ಯಾತ್ರೆ

  Jaggesh Dances For Mugulunage

  Mugulunage Shooting In Pondicherry

  Yogaraj Bhatt's New Film Titled Mugulunage

 • ಸಖತ್ ಮ್ಯೂಸಿಕ್ ಮುಗಿಸೇ ಬಿಟ್ರು ಸಿಂಪಲ್ ಸುನಿ

  sakkath music completed during lock down

  ಸಖತ್, ಇದು ಸಿಂಪಲ್ ಸುನಿ ಮತ್ತು ಗಣೇಶ್ ಕಾಂಬಿನೇಷನ್‍ನಲ್ಲಿ ಬರುತ್ತಿರುವ ಹೊಸ ಸಿನಿಮಾ. ಮುಹೂರ್ತವನ್ನೂ ಮುಗಿಸಿಕೊಂಡಿದ್ದ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದು ಚೈನೀಸ್ ವೈರಸ್. ಆದರೆ ಸುನಿ ಸುಮ್ಮನಾಗಲಿಲ್ಲ. ಲಾಕ್ ಡೌನ್ ನಡುವೆ ಇದ್ದ ವಿಡಿಯೋ ಕಾಲ್ ವ್ಯವಸ್ಥೆಯನ್ನೇ ಬಳಸಿಕೊಂಡು ಸಂಗೀತ ನಿರ್ದೇಶಕ ಜ್ಯೂಡಾ ಸ್ಯಾಂಡಿ ಬೆನ್ನು ಹತ್ತಿದರು.

  ಕೇವಲ ಒಂದು ತಿಂಗಳಲ್ಲೇ 4 ಹಾಡುಗಳ ಟ್ಯೂನ್ ಮುಗಿಸಿದ್ದೇವೆ. ಲಾಕ್ ಡೌನ್ ಇಲ್ಲದೇ ಇದ್ದರೆ, ಇನ್ನೂ ಹೆಚ್ಚು ಸಮಯ ಕೇಳುತ್ತಿತ್ತು. ಒಳ್ಳೆಯ ಟ್ಯೂನ್‍ಗಾಗಿ ಜ್ಯಾಡಾ ಸ್ಯಾಂಡಿಗೆ ಇನ್ನಿಲ್ಲದಷ್ಟು ಕಾಟ ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಸುನಿ.

  ಭರಾಟೆ ಸುಪ್ರೀತ್ ನಿರ್ಮಾಣದ ಸಖತ್, ಲಾಕ್ ಡೌನ್ ಮುಗಿಯುತ್ತಿದ್ದಂತೆಯೇ ಶುರುವಾಗಲಿದೆ. ಚಮಕ್ ನಂತರ ಗಣೇಶ್ ಮತ್ತು ಸುನಿ ಮತ್ತೆ ಜೊತೆಯಾಗಿರುವ ಚಿತ್ರವಿದು. ಸುರಭಿ ಸಖತ್ ಹೀರೋಯಿನ್.

   

 • ಸಮುದ್ರದ ನೀರಿನೊಳಗೆ ಗಣೇಶ್-ರಶ್ಮಿಕಾ ಚಮಕ್..!

  ganesh rashmika's under water duet

  ಮಳೆಯಲ್ಲಿ ನೆನೆಯೋದು ಗಣೇಶ್ ಅವರ ಟ್ರೇಡ್‍ಮಾರ್ಕ್. ಆದರೆ, ಚಮಕ್ ಚಿತ್ರದಲ್ಲಿ ಗಣೇಶ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಮುದ್ರದಲ್ಲೇ ಮುಳುಗಿಬಿಟ್ಟಿದ್ದಾರೆ. ರಶ್ಮಿಕಾ ಜೊತೆ.

  ಇದು ಚಮಕ್ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಸಿನಿಮಾದಲ್ಲಿ ಸ್ಕೂಬಾ ಡೈವಿಂಗ್ ದೃಶ್ಯವಿದೆ. ಮದುವೆಯಾದ ಮೇಲೆ ಹನಿಮೂನ್‍ಗೆ ಹೋಗುವ ಜೋಡಿ, ಸ್ಕೂಬಾ ಡೈವಿಂಗ್ ಮಾಡುವ ಸೀನ್ ಅದು. ಚಿತ್ರದಲ್ಲಿ ಅದು ಸುಮಾರು ಒಂದೂವರೆ ನಿಮಿಷ ಬರುತ್ತೆ. 

  ಆ ಒಂದೂವರೆ ನಿಮಿಷದ ಸೀನ್‍ಗಾಗಿ ಒಂದೂವರೆ ದಿನ ಖರ್ಚು ಮಾಡಿ ಶೂಟ್ ಮಾಡಿರುವುದು ವಿಶೇಷ. ಅದನ್ನೇನೂ ಫಾರಿನ್‍ನಲ್ಲಿ ಶೂಟ್ ಮಾಡಿಲ್ಲ. ಮಲ್ಪೆ ಸಮೀಪದ ನೇತ್ರಾಣಿ ದ್ವೀಪದ ಬಳಿ ಅರ್ಧ ದಿನ ಗಣೇಶ್ ಹಾಗೂ ರಶ್ಮಿಕಾಗೆ ಪ್ರಾಕ್ಟೀಸ್ ಮಾಡಿಸಿ, ಮಾರನೇ ದಿನ ಶೂಟ್ ಮಾಡಲಾಗಿದೆ. ಅರ್ಧ ದಿನ ಶೂಟಿಂಗ್ ಆದರೆ, ಇನ್ನರ್ಧ ದಿನ ಇಡೀ ತಂಡದ ಖುಷಿಗೆ. 

  ನೀರಿನೊಳಗೆ ಉಸಿರಾಡುವುದೇ ದೊಡ್ಡ ಚಾಲೆಂಜ್ ಎಂದು ಹೇಳಿಕೊಂಡಿದ್ದಾರೆ ಗಣೇಶ್ ಹಾಗೂ ರಶ್ಮಿಕಾ. ಸಿನಿಮಾ ಇದೇ ಡಿಸೆಂಬರ್ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಕ್ರಿಸ್ಟಲ್ ಪಾರ್ಕ್ ಬ್ಯಾನರ್‍ನಲ್ಲಿ ಚಂದ್ರಶೇಖರ್ ನಿರ್ಮಿಸಿರುವ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಸಿಂಪಲ್ ಸುನಿ. ಹ್ಞಾಂ.. ಅಲಮೇಲಮ್ಮ ಸುನಿ ಎಂದರೂ ತಪ್ಪಾಗಲಿಕ್ಕಿಲ್ಲ. ಇಬ್ಬರೂ ಒಬ್ಬರೇ. ಇದು ಚಮಕ್ ಅಷ್ಟೆ.

 • ಸುನಿ-ಗಣೇಶ್ ಜೊತೆ ದೆಹಲಿಯ ಸುರಭಿ

  simple suni ganesh combination's next movie heroine finalised

  ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ ಚಮಕ್ ನಂತರ ಮತ್ತೆ ಒಂದಾಗುತ್ತಿರುವುದು ನಿಮಗೀಗಾಗಲೇ ಗೊತ್ತಿರೋ ಸುದ್ದಿ. ಚಿತ್ರಕ್ಕಿನ್ನೂ ಟೈಟಲ್ ಇಟ್ಟಿಲ್ಲವಾದರೂ, ಒಂದು ಕಡೆ ಪ್ರಿ ಪ್ರೊಡಕ್ಷನ್ ಕೆಲಸಗಳು ಸದ್ದಿಲ್ಲದೆ ನಡೆಯುತ್ತಿವೆ. ಅತ್ತ ಅವತಾರಪುರುಷ ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಡುವೆಯೇ ಹೊಸ ಚಿತ್ರಕ್ಕೆ ಸಿದ್ಧವಾಗುತ್ತಿರುವ ಸುನಿ, ಹೊಸ ಚಿತ್ರಕ್ಕೆ ಹೀರೋಯಿನ್ ಆಯ್ಕೆ ಮಾಡಿದ್ದಾರೆ.

  ಸುರಭಿ ಪುರಾಣಿಕ್ ಎಂಬ ದೆಹಲಿಯ ಚೆಲುವೆ ಇವರಿಬ್ಬರ ಹೊಸ ಚಿತ್ರಕ್ಕೆ ಜೋಡಿ. ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಈಗಾಗಲೇ ಚಿರಪರಿಚಿತವಾಗಿರುವ ಮುಖ. ಈಗ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

  ರಿಯಾಲಿಟಿ ಶೋ ಮತ್ತು ಕೋರ್ಟ್ ರೂಂ ಕಥೆಯನ್ನಿಟ್ಟುಕೊಂಡು ಸೃಷ್ಟಿಸುತ್ತಿರುವ ಹೊಸ ಚಿತ್ರಕ್ಕಿನ್ನೂ ಟೈಟಲ್ ಇಟ್ಟಿಲ್ಲ. ಈ ಚಿತ್ರದಲ್ಲಿ ಸುರಭಿ ಪುರಾಣಿಕ್ ಆ್ಯಂಕರ್ ಆಗಿ ನಟಿಸುತ್ತಿದ್ದಾರೆ.

 • ಸ್ಟಾರ್‍ಗಳ ನಡುವೆ ಈಗ ಕಿಕ್‍ವಾರ್

  ganesh prajwal devraj

  ಸ್ಟಾರ್‍ಗಳ ನಡುವೆ ವಾರ್ ಶುರುವಾಯ್ತಾ..? ಛೆ..ಛೆ.. ಏನಾಗಿ ಹೋಯ್ತು ಅಂಥಾ ಗಾಬರಿಯಾಗಬೇಡಿ. ಇದು ಕಿಕ್ ವಾರ್ ಅನ್ನೋದೇನೋ ನಿಜ. ಆದರೆ, ಅಭಿಮಾನದ, ಪ್ರೀತಿಯ ಕಿಕ್‍ವಾರ್. ಇದನ್ನು ಶುರು ಮಾಡಿದ್ದು ಗೋಲ್ಡನ್ ಸ್ಟಾರ್ ಗಣೇಶ್.

  ಗಣೇಶ್, ಮವಾಯ್ ಥಾಯ್ ರಾಯಭಾರಿಯಾಗಿರುವುದು ಗೊತ್ತಿದೆಯಲ್ಲ. ಅದರ ಅಂಗವಾಗಿ ಅವರು ಟೀಪ್‍ಎಡೇ ಅನ್ನೋ ಚಾಲೆಂಜ್ ಹಾಕಿದರು. ಹಾಗೆಂದರೆ, ಪುಶ್ ಕಿಕ್ ಅಂತಾ ಅರ್ಥ. ಕಲ್ಲಂಗಡಿ ಹಣ್ಣಿಗೆ ಕಿಕ್ ಮಾಡಿ ಪುಡಿ ಪುಡಿ ಮಾಡಿದ ಗಣೇಶ್, ಪ್ರಜ್ವಲ್‍ಗೆ ಚಾಲೆಂಜ್ ಹಾಕಿದರು. 

  ಚಾಲೆಂಜ್ ಸ್ವೀಕರಿಸಿದ ಪ್ರಜ್ವಲ್ ದೇವರಾಜ್, ಹೆಂಚುಗಳನ್ನು ಪುಡಿ ಪುಡಿ ಮಾಡಿ ದಿಗಂತ್‍ಗೆ ಸವಾಲು ಹಾಕಿದರು. ಗಣೇಶ್‍ಗೆ ಪ್ರತಿ ಸವಾಲು ಹಾಕಿದರು. ಚಾಲೆಂಜ್ ಸ್ವೀಕರಿಸಿದ ಗಣೇಶ್ 4 ಹೆಂಚುಗಳನ್ನು ಹೊಡೆದರು. ದಿಗಂತ್‍ದು ಇನ್ನೂ ಬಾಕಿ ಇದೆ.

  ಇನ್ನು ಸಿಂಪಲ್ ಸುನಿ ಬಲೂನಿಗೆ ನೀರು ತುಂಬಿ ಹೊಡೆದು ರಶ್ಮಿಕಾ ಮಂದಣ್ಣ ಹಾಗೂ ತಮ್ಮ ಪತ್ನಿ ಸೌಂದರ್ಯಗೆ ಚಾಲೆಂಜ್ ಹಾಕಿದ್ದಾರೆ. ರಶ್ಮಿಕಾ ನೆಲದ ಮೇಲೆ ಬಲೂನ್ ಇಟ್ಟು ಒದ್ದು, ರಕ್ಷಿತ್ ಶೆಟ್ಟಿ, ಶೀತಲ್ ಶೆಟ್ಟಿಗೆ ಸವಾಲು ಹಾಕಿದ್ದಾರೆ.

  ಒಟ್ಟಿನಲ್ಲೀಗ ಸ್ಯಾಂಡಲ್‍ವುಡ್‍ನಲ್ಲಿ ಕಿಕ್ ವಾರ್ ಶುರುವಾಗಿಬಿಟ್ಟಿದೆ. `ಗಣೇಶ' ಆರಂಭಿಸಿದ ಮೇಲೆ ನಿರ್ವಿಘ್ನವಾಗಿ ನಡೆಯಲೇಬೇಕಲ್ವಾ..? 

 • ಹೃದಯಕ್ಕೆ ನಶೆ ಏರಿಸುವ.. ನೀನು ಬಗೆಹರಿಯದ ಹಾಡು..

  ಹೃದಯಕ್ಕೆ ನಶೆ ಏರಿಸುವ.. ನೀನು ಬಗೆಹರಿಯದ ಹಾಡು..

  ಬರೆದವರು ಜಯಂತ ಕಾಯ್ಕಿಣಿ.

  ಹಾಡಿದವರು ನಿಹಾರ್ ತೌರೋ.

  ಸಂಗೀತ ಅರ್ಜುನ್ ಜನ್ಯಾ.

  ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಚಿತ್ರದ ಹಾಡು ಮೆಲೋಡಿ ಹಾಡುಗಳ ಲೋಕಕ್ಕೆ ಹೊಸ ಸಮರ್ಪಣೆ.

  ಗಾಳಿಪಟ 2  ಚಿತ್ರದ ಹೊಸ ಹಾಡು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುವಂತಿದೆ. ಕಾಯ್ಕಿಣಿ ಮತ್ತೊಮ್ಮೆ ಪದಪದಗಳನ್ನೂ ಹೃದಯದಿಂದ ಹೆಕ್ಕಿ ತೆಗೆದು ಬರೆದಿರುವ ಹಾಡಿದು. ಪವನ್ ಕುಮಾರ್ ಮತ್ತು ಶರ್ಮಿಳಾ ಮಾಂಡ್ರೆ ಮೇಲೆ ಚಿತ್ರೀಕರಣಗೊಂಡಿರುವ ಹಾಡು ಲೆಕ್ಚರರ್ ಜೊತೆ ಪ್ರೀತಿಗೆ ಬೀಳುವ ಬಡಪಾಯಿ ವಿದ್ಯಾರ್ಥಿಯ ಪ್ರೇಮಗೀತೆಯಂತಿದೆ.

  ಭಾವನೆಗಳಿಗೆ ಬಣ್ಣ ಹಚ್ಚಿದಂತಿರುವ ಹಾಡಿಗೆ ಧ್ವನಿ ನೀಡಿರುವ ನಿಹಾಲ್ ತೌರೋ ಹೊಸ ಸೆನ್ಸೇಷನ್ ಆದರೆ ಅಚ್ಚರಿಯಿಲ್ಲ. ಕಿಡಿಗೇಡಿ ಹೃದಯಕ್ಕೆ ನಶೆ ಏರಿಸುವ ಸಾಹಿತ್ಯವನ್ನು ಮೈಕೊರೆಯುವ ಚಳಿಯಲ್ಲಿ ಮತ್ತೆ ಮತ್ತೆ ಕೇಳುವಂತೆ ಹಾಡಿರುವುದು ನಿಹಾಲ್ ತೌರೋ. ಗಣೇಶ್, ವೈಭವಿ ಶಾಂಡಿಲ್ಯ, ಪವನ್, ಶರ್ಮಿಳಾ ಮಾಂಡ್ರೆ, ದಿಗಂತ್, ಅನಂತನಾಗ್, ಬುಲೆಟ್ ಪ್ರಕಾಶ್.. ಹೀಗೆ ದೊಡ್ಡ ತಾರಾಗಣದ ಚಿತ್ರಕ್ಕೆ ಬಂಡವಾಳ ಹೂಡಿರುವುದು ಸದಭಿರುಚಿ ಚಿತ್ರಗಳ ನಿರ್ಮಾಪಕ ರಮೇಶ್ ರೆಡ್ಡಿ ಮತ್ತು ಶ್ರೀಮತಿ ಉಮಾ ರಮೇಶ್ ರೆಡ್ಡಿ.