` ganesh, - chitraloka.com | Kannada Movie News, Reviews | Image

ganesh,

 • ಗಣೇಶ್ ಗೀತಾಗೆ ಮತ್ತೊಬ್ಬ ಮಲ್ಲು ಚೆಲುವೆ ಜೋಡಿ

  malayali beauty in ganesh's next film geetha

  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರಕ್ಕೆ ಮತ್ತೊಬ್ಬ ಮಲೆಯಾಳಿ ಚೆಲುವೆಯ ಆಗಮನವಾಗಿದೆ. ಈ ಚೆಲುವೆಯ ಹೆಸರು ಪ್ರಯಾಗ್ ಮಾರ್ಟಿನ್. ಈಗಾಗಲೇ ಚಿತ್ರಕ್ಕೆ ಪಾರ್ವತಿ ಅರುಣ್ ಎಂಬ ಮಲ್ಲು ಚೆಲುವೆ ಇದ್ದಾರೆ. ಗೀತಾ ಚಿತ್ರಕ್ಕೆ ಮೂವರು ನಾಯಕಿಯರಿದ್ದು, ಇಬ್ಬರ ಆಯ್ಕೆ ಆಗಿದೆ. ಇಬ್ಬರೂ ಮಲೆಯಾಳಿಗಳು ಎನ್ನುವುದು ವಿಶೇಷ.

  ಸಂತೋಷ್ ಆನಂದ್‍ರಾಮ್ ಅವರ ಬಳಿ ಸಹಾಯಕ ನಿರ್ದೇಶಕರಾಗಿದ್ದ ವಿಜಯ್ ನಾಗೇಂದ್ರ ನಿರ್ದೇಶನದ ಮೊದಲ ಚಿತ್ರವಿದು. ಚಿತ್ರದ ಕಥೆಗೆ ತಕ್ಕಂತೆ ಮೂವರು ನಾಯಕಿಯರಿದ್ದು, 3ನೇ ನಾಯಕಿಯ ಆಯ್ಕೆಯೂ ಶೀಘ್ರದಲ್ಲೇ ಆಗಲಿದೆ ಎಂದು ತಿಳಿಸಿದ್ದಾರೆ ನಿರ್ದೇಶಕ ವಿಜಯ್ ನಾಗೇಂದ್ರ. ಡಿಸೆಂಬರ್ 3ನೇ ವಾರದಿಂದ ಗೀತಾ ಶೂಟಿಂಗ್ ಶುರುವಾಗಲಿದೆ. 

 • ಗಣೇಶ್ ಪರಿಚಯ ಆಯ್ತಾ..? ನಕ್ರಾ? ಅತ್ರಾ?

  ಗಣೇಶ್ ಪರಿಚಯ ಆಯ್ತಾ..? ನಕ್ರಾ? ಅತ್ರಾ?

  ಕಲಾವಿದರಿಗೆ ಬಹಳ ಅಪರೂಪವಾಗಿ ಒಲಿಯುವ ಕಲೆ ಅದು. ನಗಿಸುತ್ತಲೇ ಅಳಿಸುವ ಕಲೆ. ನೋಡುಗರನ್ನು ನಗಿಸುತ್ತಲೇ ಭಾವುಕರನ್ನಾಗಿಸುವ ಕಲೆ. ಅದನ್ನು ಗಣೇಶ್ ಅದ್ಭುತವಾಗಿ ಮಾಡುತ್ತಾರೆ. ಗಾಳಿಪಟ 2 ಚಿತ್ರದ ಅವರ ಪಾತ್ರ ಪರಿಚಯ ನೋಡಿದವರಿಗೆ ಮತ್ತೊಮ್ಮೆ ಗಣೇಶ್ ದರ್ಶನವಾಗಿದೆ.

  ನಗುವಿನೊಂದಿಗೇ ಶುರುವಾಗುತ್ತೆ ಗಣಿಯ ಪರಿಚಯ. ಕನ್ನಡಿಗ.. ಆದರೆ ಕನ್ನಡ ಬರಲ್ಲ. ಕಾಪಿ ಹೊಡೆಯೋಕೆ  ಕ್ವಶ್ಚನ್ ಯಾವ್ದು.. ಆನ್ಸರ್ ಯಾವ್ದು ಎನ್ನುವುದೂ ಗೊತ್ತಿಲ್ಲದ ಪ್ರತಿಭಾವಂತ. ಮಧ್ಯದಲ್ಲೊಂದು ಯುವ ಜನಾಂಗ ರೋಮಾಂಚಿತರಾಗುವ ವಿಚಿತ್ರ ಲವ್ ಸ್ಟೋರಿ..  ನಗು ನಗಿಸುತ್ತಲೇ ಸಾಗುವ ಟೀಸರ್.. ಸನ್ನಿವಶೇವೇನೆಂದು ಗೊತ್ತಾಗದೇ ಹೋದರೂ ಗಣಿ ಅವರ ಆ ದೃಶ್ಯ ನೋಡಿದರೆ ಭಾವುಕರಾಗುವುದು ಗ್ಯಾರಂಟಿ.

  ಗಾಳಿಪಟ 2 ಚಿತ್ರದ ಗಣಿ ಪಾತ್ರದ ಪರಿಚಯ ಇದು. ರಿಯಲ್ ಸ್ಟಾರ್ ಉಪೇಂದ್ರ ಗಣಿ ಪಾತ್ರದ ಪರಿಚಯದ ಟೀಸರ್ ರಿಲೀಸ್ ಮಾಡಿದ್ದಾರೆ. ಜುಲೈ 31ಕ್ಕೆ ಟ್ರೇಲರ್ ರಿಲೀಸ್ ಮಾಡಿ ಆಗಸ್ಟ್ 12ಕ್ಕೆಲ್ಲ ಸಿನಿಮಾ ತೆರೆ ಮೇಲೆ ತರೋದು ಗಾಳಿಪಟ 2 ಚಿತ್ರದ ಪ್ಲಾನ್.

  ಗಣೇಶ್-ವೈಭವಿ ಶಾಂಡಿಲ್ಯ, ದಿಗಂತ್-ಸಂಯುಕ್ತಾ ಮೆನನ್, ಪವನ್ ಕುಮಾರ್-ಶರ್ಮಿಳಾ ಮಾಂಡ್ರೆ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಅನಂತ್ ನಾಗ್, ರಂಗಾಯಣ ರಘು, ಪದ್ಮಜಾ ರಾವ್, ಬುಲೆಟ್ ಪ್ರಕಾಶ್ ಮೊದಲಾದವರಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ ಅದ್ಧೂರಿ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ.

 • ಗಣೇಶ್.. ಭಯ ಹುಟ್ಟಿಸ್ತಾರಂತೆ..!

  ganesh's next is horror movie

  ಗೋಲ್ಡನ್ ಸ್ಟಾರ್ ಗಣೇಶ್, ಮುಂಗಾರು ಮಳೆಯಿಂದ ಅಮರಪ್ರೇಮಿಯಾದವರು. ಅದಕ್ಕೂ ಮುನ್ನ ಕಾಮಿಡಿ ಟೈಂ ಗಣೇಶ್ ಆಗಿದ್ದವರು. ಶಾಲೆ, ಕಾಲೇಜು ದಿನಗಳಲ್ಲಿ ಎಚ್ಚಮನಾಯಕನ ಪಾತ್ರದಲ್ಲಿ ಮಿಂಚುತ್ತಿದ್ದವರು. ಆದರೆ, ಚಿತ್ರರಂಗಕ್ಕೆ ಬಂದ ಮೇಲೆ ಗಣೇಶ್ ಹೃದಯಕ್ಕೆ ಕೈ ಹಾಕುವ ಪಾತ್ರಗಳಲ್ಲಿ ನಟಿಸಿದರೇ ಹೊರತು, ಹೃದಯ ಬಡಿತವನ್ನು ಹೆಚ್ಚಿಸುವ ಚಿತ್ರಗಳಲ್ಲಿ ನಟಿಸಲೇ ಇಲ್ಲ. ಈಗ ಅಂಥಾದ್ದೊಂದು ಅವಕಾಶ ಗಣೇಶ್ ಅವರನ್ನು ಹುಡುಕಿಕೊಂಡು ಬಂದಿದೆ.

  ಗಣೇಶ್, ಇದೇ ಮೊದಲ ಬಾರಿಗೆ ನಾಗಣ್ಣ ನಿರ್ದೇಶನದ ಚಿತ್ರದಲ್ಲಿ ನಟಿಸೋಕೆ ಯೆಸ್ ಎಂದಿದ್ದಾರೆ. ಅದು ಹಾರರ್ ಸಿನಿಮಾ. ಅರ್ಥಾತ್ ಭಯ ಹುಟ್ಟಿಸುವ ಚಿತ್ರ. 

  ಸದ್ಯಕ್ಕೆ ಗಣೇಶ್ ಆರೆಂಜ್ ಚಿತ್ರದಲ್ಲಿ ಬ್ಯುಸಿಯಾಗಿದ್ದರೆ, ನಾಗಣ್ಣ ಕುರುಕ್ಷೇತ್ರದಲ್ಲಿ ಬ್ಯುಸಿ. ಜೂನ್ ಕೊನೆಯ ವಾರದಲ್ಲಿ ಗಣೇಶ್ ಹಾರರ್ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

 • ಗಣೇಶ್‍ಗೆ 10 ವರ್ಷದ ಬಳಿಕೆ 75 ಲಕ್ಷ

  ganesh wins 75 lakhs compensation

  ಗೋಲ್ಡನ್ ಸ್ಟಾರ್ ಗಣೇಶ್‍ಗೆ 10 ವರ್ಷಗಳ ಹಿಂದೆಯೇ ಸಿಗಬೇಕಿದ್ದ 75 ಲಕ್ಷ, ಈಗ ಸಿಕ್ಕಿದೆ. 2008ರಲ್ಲಿ ತೆರೆಗೆ ಬಂದಿದ್ದ ಚೆಲುವಿನ ಚಿತ್ತಾರ ಚಿತ್ರ ನೆನಪಿದೆ ತಾನೇ.. ಆ ಚಿತ್ರದ ನಿರ್ಮಾಪಕರು ಹಾಗೂ ಮೋಕ್ಷ ಅಗರಬತ್ತಿ ಕಂಪೆನಿ ನಡುವೆ 3 ತಿಂಗಳ ಪ್ರಚಾರದ ಒಪ್ಪಂದವಾಗಿತ್ತು.  ಆದರೆ ಮೋಕ್ಷ ಅಗರಬತ್ತಿ ಕಂಪೆನಿಯವರು ಒಪ್ಪಂದ ಮುಗಿದ ನಂತರವೂ ಗಣೇಶ್ ಫೋಟೋ ಬಳಸುವುದನ್ನು ಕೈಬಿಡಲಿಲ್ಲ. ಹೀಗಾಗಿ ಗಣೇಶ್ ಕೋರ್ಟ್ ಮೆಟ್ಟಿಲೇರಿದ್ದರು.

  2008ರಲ್ಲಿಯೇ ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣದ ತೀರ್ಪು ಈಗ ಹೊರಬಿದ್ದಿದೆ. ಮೋಕ್ಷ ಅಗರಬತ್ತಿ ಕಂಪೆನಿಯವರು ಗಣೇಶ್‍ಗೆ 75 ಲಕ್ಷ ನೀಡುವಂತೆ ಕೋರ್ಟ್ ಆದೇಶ ಕೊಟ್ಟಿದೆ. ನಿರ್ದೇಶಕ ನಾರಾಯಣ್ ಇದಕ್ಕೆ ಹೊಣೆ ಎಂಬ ಮೋಕ್ಷ ಕಂಪೆನಿ ವಾದವನ್ನು ಕೋರ್ಟ್ ತಳ್ಳಿ ಹಾಕಿದೆ. ಒಟ್ಟಿನಲ್ಲಿ ಗಣೇಶ್‍ಗೆ 10 ವರ್ಷಗಳ ನಂತರ, ಅವರಿಗೆ ಬರಬೇಕಿದ್ದ 75 ಲಕ್ಷ ಸಿಗುತ್ತಿದೆ. ಜೊತೆಗೆ ಕಲಾವಿದರ ಫೋಟೋಗಳನ್ನು ಅವರ ಒಪ್ಪಿಗೆ ಇಲ್ಲದೆ ಬಳಸುವುದು ಅಪರಾಧ ಎಂಬ ಸಂದೇಶವನ್ನೂ ಈ ಆದೇಶ ನೀಡಿದೆ.

  Related Articles :-

  Ganesh Wins Compensation In Photo Misuse Case

 • ಗಾಳಿಪಟ 2ಗೆ ಕುಂಭಳಕಾಯಿ

  ಗಾಳಿಪಟ 2ಗೆ ಕುಂಭಳಕಾಯಿ

  ಯೋಗರಾಜ್ ಭಟ್, ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ಕಾಂಬಿನೇಷನ್ನಿನ ಸಿನಿಮಾ ಗಾಳಿಪಟ 2. ಕೊರೊನಾ ಕಾರಣದಿಂದಾಗಿ ಚಿತ್ರೀಕರಣಕ್ಕೇ ಸುದೀರ್ಘ ಸಮಯ ತೆಗೆದುಕೊಂಡಿದ್ದ ಚಿತ್ರವೀಗ ಶೂಟಿಂಗ್ ಮುಗಿಸಿ ಕುಂಭಳಕಾಯಿ ಒಡೆದಿದೆ. ಡೈರೆಕ್ಟರ್ ಲೂಸಿಯಾ ಪವನ್ ಈ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ,ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್ ನಾಯಕಿಯರು. ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್‍ನಲ್ಲಿ ರಮೇಶ್ ರೆಡ್ಡಿ ನಿರ್ಮಿಸುತ್ತಿರುವ ಗಾಳಿಪಟ 2 ಚಿತ್ರ 2022ರ ಆರಂಭದಲ್ಲಿ ಬಿಡುಗಡೆಯಾಗುವ ಎಲ್ಲ ಸೂಚನೆಗಳೂ ಇವೆ.

 • ಗೀತಾ ಗಣೇಶ್ ಗೆಟಪ್ ನೋಡಿದಿರಾ..?

  ganesh's new film is geeta

  ಗಣೇಶ್, ಗೀತಾ ಅನ್ನೋ ಟೈಟಲ್‍ನಲ್ಲಿ ಸಿನಿಮಾ ಮಾಡ್ತಿದ್ದಾರೆ. ಆ ಚಿತ್ರದ ನಿರ್ದೇಶಕರು ಸಂತೋಷ್ ಆನಂದ್‍ರಾಮ್ ಅವರ ಗೆಳೆಯ ವಿಜಯ್ ನಾಗೇಂದ್ರ. ಮಿಸ್ಟರ್ & ಮಿಸಸ್ ರಾಮಾಚಾರಿ, ರಾಜಕುಮಾರ ಚಿತ್ರಗಳಿಗೆ ಸಂತೋಷ್ ಜೊತೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದ ವಿಜಯ್ ನಾಗೇಂದ್ರ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಇದೆಲ್ಲವೂ ಹಳೆಯ ವಿಷಯ. ಈಗ ಚಿತ್ರದ ಫಸ್ಟ್‍ಲುಕ್ ಹೊರಬಿದ್ದಿದೆ. ಚಿತ್ರದಲ್ಲಿ ಗಣೇಶ್ ಹೇಗೆ ಕಾಣಬಹುದು ಅನ್ನೋದಕ್ಕೆ ಉತ್ತರ ಸಿಕ್ಕಿದೆ.

  ತಲೆಯ ಮೇಲೊಂದು ಹ್ಯಾಟು, ಎಂದಿನಂತೆ ಕುರುಚಲು ಗಡ್ಡ, ಶರ್ಟ್ ಜೇಬಿನ ಮೇಲೆ ಕನ್ನಡ ಬಾವುಟ, ಹಳೆಯ ಬುಲೆಟ್ ಮೇಲೆ ಕುಳಿತಿರುವ ಗಣೇಶ್ ಅವರ ಲುಕ್ಕು, ಸೊಗಸಾಗಿದೆ. ಗಣೇಶ್ ಅವರದ್ದು ಪಕ್ಕಾ ಲವರ್‍ಬಾಯ್ ಲುಕ್ಕು. ಚಿತ್ರದ ಕಥೆಯೂ ಲವ್ ಸಬ್ಜೆಕ್ಟ್ ಅಂತೇ. ಎಂಥ ಲವ್‍ಸ್ಟೋರಿ ಅನ್ನೋದು ಸೀಕ್ರೆಟ್ ಆಗಿಯೇ ಇರಲಿ ಎನ್ನುತ್ತಿದೆ ಚಿತ್ರತಂಡ.

  ಚಿತ್ರದ ಮುಹೂರ್ತ ಜುಲೈ2ಕ್ಕೆ ಫಿಕ್ಸ್ ಆಗಿದೆ. ಏಕೆಂದರೆ, ಆ ದಿನ ಗಣೇಶ್ ಅವರ ಹುಟ್ಟುಹಬ್ಬ. ಆದರೆ ಚಿತ್ರದ ಚಿತ್ರೀಕರಣ ಶುರುವಾಗೋದು ಸೆಪ್ಟೆಂಬರ್‍ನಲ್ಲಿ. ಚಿತ್ರದ ನಿರ್ಮಾಪಕ ಸೈಯದ್ ಸಲೀಂ. ಗಣೇಶ್ ಅವರಿಗಾಗಿಯೇ ಮುಗುಳುನಗೆ ಚಿತ್ರ ನಿರ್ಮಿಸಿದ್ದ ಸೈಯದ್, ಮತ್ತೊಮ್ಮೆ ಗಣೇಶ್ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಅಂದಹಾಗೆ ಚಿತ್ರಕ್ಕೆ ಶಿಲ್ಪಾ ಗಣೇಶ್ ಕೂಡಾ ಬಂಡವಾಳ ಹೂಡುತ್ತಿರುವುದು ವಿಶೇಷ.

 • ಗೋಲ್ಡನ್ ಸ್ಟಾರ್ ಗಣೇಶ್, ಈಗ ಡಾ.ಗಣೇಶ್

  ganesh is now doctor

  ನಿಮಗೆ ಲೈಂಗಿಕ ಸಮಸ್ಯೆಗಳಿವೆಯೇ.. ಸ್ತ್ರೀ ರೋಗ ಸಮಸ್ಯೆಗಳಿವೆಯೇ.. ವೈದ್ಯರು ಸಿಗುತ್ತಿಲ್ಲವೇ.. ತಡಮಾಡಬೇಡಿ. ಇದೇ ಶುಕ್ರವಾರದಿಂದ ನಿಮಗೆ ಹೊಸ ಡಾಕ್ಟರ್ ಸಿಗುತ್ತಿದ್ದಾರೆ. ಅವರ ಹೆಸರು ಡಾ.ಗಣೇಶ್. ಗೋಲ್ಡನ್ ಸ್ಟಾರ್ ಗಣೇಶ್, ಈಗ ಡಾ.ಗಣೇಶ್ ಆಗಿದ್ದಾರೆ. ಅವರೀಗ ಗೈನಕಾಲಜಿಸ್ಟ್. ಸ್ತ್ರೀರೋಗ ತಜ್ಞರು. ಗರ್ಭಧಾರಣೆ, ಶಿಶುಪಾಲನೆ, ಹೆರಿಗೆ ಎಲ್ಲದಕ್ಕೂ ಅವರು ಚಿಕಿತ್ಸೆ ಕೊಡ್ತಾರೆ. ಚಿಕಿತ್ಸೆ ಕೊಡದೇ ಹೋದರೂ ಚಮಕ್ ಅಂತೂ ಗ್ಯಾರಂಟಿ.

  ನಗಬೇಡಿ, ಇದೂ ಚಮಕ್ಕೇ. ಚಮಕ್‍ನಲ್ಲಿ ಸಿಂಪಲ್ ಸುನಿ, ರಿಯಲ್ ಲೈಫಲ್ಲಿ ಡಿಪ್ಲೋಮಾ ಎಂಜಿನಿಯರಿಂಗ್ ಒದಿರುವ ಗಣೇಶ್‍ರನ್ನು ಎಂಬಿಬಿಎಸ್ ಓದಿಸಿ ಡಾಕ್ಟರ್ ಮಾಡಿಸಿದ್ದಾರೆ. ಸ್ಟೆತಾಸ್ಕೋಪು ಹಿಡಿಯೋದು, ಮೆಡಿಕಲ್ ಸ್ಟೋರ್‍ನವರಿಗೆ ಮಾತ್ರ ಅರ್ಥವಾಗುವ ರೀತಿಯಲ್ಲಿ ಪ್ರಿಸ್ಕಿಪ್ಷನ್ ಬರೆಯೋದು ಮೊದಲಾದ ಡಾಕ್ಟರ್ ಕಸುಬುದಾರಿಕೆಗಳನ್ನು ಗಣೇಶ್ ಕಲಿತಿದ್ದಾರೆ.

  ಈ ಡಾಕ್ಟರ್‍ಗೆ ಚಮಕ್ ಕೊಡೋದು ಅಂದ, ಅದೃಷ್ಟದ ಗೊಂಬೆ ರಶ್ಮಿಕಾ. ಇವರೆಲ್ಲರನ್ನೂ ಒಟ್ಟಿಗೇ ಕೂರಿಸಿರೋದು ಚಂದ್ರಶೇಖರ್. ಚಮಕ್, ಚಮಕ್ ಕೊಡೋಕೆ ರೆಡಿ.

   

 • ಚಮಕ್ ಕಚಗುಳಿಗೆ ಕಿಲಕಿಲ ನಗ್ತೀರ

  chamak image

  ಗಣೇಶ್‍ರ ಹೊಸ ಮ್ಯಾನರಿಸಂ, ರಶ್ಮಿಕಾ ಅವರ ಮುಗ್ದತೆ, ಎದೆಯೊಳಕ್ಕೇ ಕಚಗುಳಿ ಇಡುವ ಸಂಭಾಷಣೆ, ಕಲ್ಪನೆಗೆ ಸಾವಿರ ರೂಪ ಕಟ್ಟಿಕೊಡುವ ತುಂಟಾಟದ ಸನ್ನಿವೇಶ.. ಇವೆಲ್ಲವನ್ನೂ ಸೃಷ್ಟಿಸಿರುವ ಕಚಗುಳಿಗೆ ನಾಳೆ ಬಿಡುಗಡೆ ಭಾಗ್ಯ.

  ಕಿರಿಕ್ ಪಾರ್ಟಿ ರಶ್ಮಿಕಾ ಮಂದಣ್ಣ ಅವರಿಗೆ ಇದು 3ನೇ ಸಿನಿಮಾ. ಕಳೆದ ವಾರವಷ್ಟೇ ಅವರ 2ನೇ ಸಿನಿಮಾ ಅಂಜನೀಪುತ್ರ ರಿಲೀಸ್ ಆಗಿದೆ. ಅದು ಥಿಯೇಟರ್‍ನಲ್ಲಿ ಅಬ್ಬರಿಸುತ್ತಿರುವಾಗಲೇ, ಚಮಕ್ ನಗೆಯ ಅಲೆಯೆಬ್ಬಿಸಲು ಬರುತ್ತಿದೆ.

  ಗಣೇಶ್‍ಗೆ ಇದು ಮತ್ತೆ ಮತ್ತೆ ಮುಂಗಾರು ಮಳೆ ನೆನಪಿಸುತ್ತಿದ್ದರೆ, ಅದಕ್ಕೆ ಕಾರಣ, ಚಿತ್ರ ರಿಲೀಸ್ ಆಗುತ್ತಿರುವ ಡೇಟು. ಇದರ ಹಿಂದೆ ಯಾವುದೇ ಮೂಢನಂಬಿಕೆ ಇಲ್ಲ ಎನ್ನುವ ಗಣೇಶ್, ಡಿಸೆಂಬರ್‍ನಲ್ಲಿ ರಿಲೀಸ್ ಆದ ತಮ್ಮ ಚಿತ್ರಗಳೆಲ್ಲವೂ ಹಿಟ್ ಆಗಿವೆ ಎಂದು ಮುಗುಳ್ನಗುತ್ತಾರೆ.

  ಕಾಮಿಡಿ ಕಾಮಿಡಿಯಾಗಿಯೇ ಸೆಂಟಿಮೆಂಟ್ ಹರಿಸುವ ಸುನಿ, ಚಿತ್ರದಲ್ಲಿ ಹಲವು ವಿಶೇಷಗಳನ್ನೂ ಕೊಟ್ಟಿದ್ದಾರಂತೆ. ಸಂದೇಶವೂ ಇದೆಯಂತೆ. ಮನರಂಜನೆಗೆ ಮೋಸವಿಲ್ಲ ಎನ್ನುವ ಸುನಿ ಮಾತನ್ನು ನಂಬಬಹುದು.

 • ಚಮಕ್ ಸೆನ್ಸೇಷನ್ - ಲೈಟ್ ಯಾವಾಗ ಆಫ್ ಮಾಡ್ತೀರಾ..?

  chamak image

  ಚಮಕ್, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸಿಂಪಲ್ ಖ್ಯಾತಿಯ ಸುನಿ ಮತ್ತು ಕಿರಿಕ್ ಪಾರ್ಟಿಯ ರಶ್ಮಿಕಾ ಸಂಗಮದ ಸಿನಿಮಾ. ಚಿತ್ರದ ಕುರಿತಂತೆ ಅಭಿಮಾನಿಗಳಿಗೆ ಯಾವ ಪರಿ ಕುತೂಹಲ ಇದೆಯೆಂದರೆ, ಚಿತ್ರದ ಕಥೆ ಏನು ಅನ್ನೋದನ್ನು ಕಲ್ಪನೆ ಮಾಡಿಕೊಳ್ಳೋಕೂ ಆಗ್ತಾ ಇಲ್ಲ. ಅದಕ್ಕೆ ಕಾರಣವಾಗಿರೋದು ಚಮಕ್ ಚಿತ್ರದ ಫಸ್ಟ್ ನೈಟ್ ಟೀಸರ್.

  ಸುನಿ ರಿಲೀಸ್ ಮಾಡಿದ ಫಸ್ಟ್ ನೈಟ್ ಟೀಸರ್‍ನಲ್ಲಿನ ತುಂಟತನವಿದೆಯಲ್ಲ.. ಅದು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ. ಏನೋ ಆಗುತ್ತೆ ಅಂತಾ ಕಾಯ್ತಿರ್ತಾರೆ. ಏನೂ ಆಗಲ್ಲ. ಸುನಿ ಸ್ಟೈಲ್‍ನಲ್ಲೊಂದು ಸಿಂಗಲ್ ಮೀನಿಂಗ್ ಡೈಲಾಗ್ ಆದರೂ ಇರುತ್ತಾ ಅಂದ್ರೆ, ಅದೂ ಬರಲ್ಲ. ಆದರೂ.. ಆ ಟೀಸರ್ ಒಂದು ರೋಮಾಂಚನ ಸೃಷ್ಟಿಸಿಬಿಟ್ಟಿದೆ. ಕಲ್ಪನೆಯ ಬಲೂನುಗಳನ್ನು ಪ್ರೇಕ್ಷಕರ ಎದೆಗೂಡಲ್ಲಿ ನೆಟ್ಟುಬಿಟ್ಟಿದೆ.

  ಹೀಗಾಗಿಯೇ ರಿಲೀಸ್ ಡೇಟ್ ಅನೌನ್ಸ್ ಆಗುವ ಮುನ್ನವೇ, ಎಲ್ಲರೂ ಕೇಳ್ತಿರೋ ಪ್ರಶ್ನೆ ಅದೊಂದೇ. ಲೈಟ್ ಯಾವಾಗ ಆಫ್ ಮಾಡ್ತೀರಾ ಅಂತಾ. ಅಫ್‍ಕೋರ್ಸ್, ಸಿನಿಮಾ ರಿಲೀಸ್ ಆದ ಮೇಲೆ ಥಿಯೇಟರ್‍ನಲ್ಲಿ ಲೈಟ್ ಆಫ್ ಆಗೇ ಆಗುತ್ತೆ ಅಂತಾ ಹೇಳೋ ಸುನಿ, ಪ್ರೆಕ್ಷಕರ ತಲೆಗೆ ಹುಳ ಬಿಡ್ತಾರೆಯೇ ಹೊರತು, ಕಥೆ ಮಾತ್ರ ಹೇಳಲ್ಲ. ಎಷ್ಟು ದಿನ ಹೇಳಲ್ಲ..? ಸಿನಿಮಾ ರಿಲೀಸ್ ಆಗುತ್ತಲ್ವಾ..? ನೋಡ್ತೀವಿ ಬಿಡಿ ಅಂಥಾ ಪ್ರೇಕ್ಷಕರೇ ಸುನಿಗೆ ಚಾಲೆಂಜ್ ಹಾಕಿ ಕಾದು ಕೂರುವಂತಾಗಿದೆ.

 • ಚೆಲ್ಲಾಟ : ಗೋಲ್ಡನ್ 15

  ಚೆಲ್ಲಾಟ : ಗೋಲ್ಡನ್ 15

  ಚೆಲ್ಲಾಟ. ಕನ್ನಡಕ್ಕೆ ಗೋಲ್ಡನ್ ಸ್ಟಾರ್ ಎಂಬ ಸ್ಟಾರ್ ನಟನಿಗೆ ಜನ್ಮ ಕೊಟ್ಟ ಸಿನಿಮಾ. ಅದೂವರೆಗೆ ಸಣ್ಣ ಸಣ್ಣ ಪಾತ್ರಗಳಲ್ಲೇ ನಟಿಸುತ್ತಿದ್ದ ಗಣೇಶ್ ಅವರಿಗೆ ಹೀರೋ ಪಟ್ಟ ನೀಡಿದ್ದು ಜಗದೀಶ್ ಕೊಟ್ಯಾನ್ ಎಂಬ ಪ್ರೊಡ್ಯೂಸರ್. ಡೈರೆಕ್ಟರ್ ಎಂ.ಡಿ.ಶ್ರೀಧರ್.

  ಒಂದು ರೀತಿ ಗಣೇಶ್ ಅವರಿಗೆ ಚೆಲ್ಲಾಟ ಅದೃಷ್ಟದ ಬಾಗಿಲು ತೆರೆದ ಸಿನಿಮಾ. ಮಲಯಾಳಂನ ಪುಲಿವಲ್ ಕಲ್ಯಾಣಂ ಚಿತ್ರದ ರೀಮೇಕ್ ಆಗಿದ್ದ ಚೆಲ್ಲಾಟ, 100 ದಿನ ಓಡಿದ ಚಿತ್ರ. ಗಣೇಶ್ ಎದುರು ಹೀರೋಯಿನ್ ಆಗಿದ್ದವರು ಹುಚ್ಚ, ಚಿತ್ರ ಖ್ಯಾತಿಯ ರೇಖಾ. ಗುರುಕಿರಣ್ ಸಂಗೀತ ನೀಡಿದ್ದ ಎಲ್ಲ ಹಾಡುಗಳೂ ಹಿಟ್ ಆಗಿದ್ದವು. ಏಪ್ರಿಲ್ 21, 2006ರಲ್ಲಿ ರಿಲೀಸ್ ಆಗಿದ್ದ ಚೆಲ್ಲಾಟ, ಗಣೇಶ್ ಪಾಲಿಗೆ ಭಾಗ್ಯದ ಬಾಗಿಲನ್ನೇ ತೆರೆಯಿತು.

  ಗಣೇಶ್ ಅವರ ಡಬಲ್ ಹ್ಯಾಟ್ರಿಕ್ ಶುರುವಾಗಿದ್ದೇ ಚೆಲ್ಲಾಟ ಚಿತ್ರದಿಂದ. ಚೆಲ್ಲಾಟದಿಂದ ಶುರುವಾದ ಸಕ್ಸಸ್ ಸ್ಟೋರಿ.. ಚೆಲ್ಲಾಟ.. ಮುಂಗಾರು ಮಳೆ.. ಹುಡುಗಾಟ.. ಚೆಲುವಿನ ಚಿತ್ತಾರ.. ಕೃಷ್ಣ.. ಗಾಳಿಪಟ.. ಸತತ 6 ಚಿತ್ರಗಳು ಸೂಪರ್ ಹಿಟ್ & 100 ಡೇಸ್. ಅವುಗಳಲ್ಲಿ 3 (ಮುಂಗಾರು ಮಳೆ, ಗಾಳಿಪಟ, ಚೆಲುವಿನ ಚಿತ್ತಾರ)ಮೆಗಾ ಹಿಟ್. ಒಂದು (ಮುಂಗಾರು ಮಳೆ)ಚಿತ್ರರಂಗದ ಸಾರ್ವಕಾಲಿಕ ದಾಖಲೆ ಬರೆದ ಟ್ರೆಂಡ್ ಸೆಟ್ಟರ್ ಸಿನಿಮಾ.

  ಗಣೇಶ್ 15 ವರ್ಷದ ಕಥೆ ನೆನಪಿಸಿಕೊಂಡರೆ, ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು ಗಣೇಶ್ ಅವರಿಗೆ ಶುಭ ಕೋರಿದ್ದಾರೆ.

 • ಜಾಕಿ ಭಾವನಾಗೆ 99ನಲ್ಲಿ ಇಷ್ಟವಾಗಿದ್ದೇನು..?

  jackie bhavana talks about 99 kovie

  ಜಾಕಿ ಭಾವನಾ, ಕನ್ನಡ ಚಿತ್ರರಂಗಕ್ಕೆ ಬಂದಿದ್ದು ಜಾಕಿ ಚಿತ್ರದ ಮೂಲಕ. ಅದಾದ ಮೇಲೆ ಭಾವನಾ, ಪುನೀತ್, ಸುದೀಪ್, ಗಣೇಶ್, ಉಪೇಂದ್ರ ಸೇರಿದಂತೆ ಹಲವು ಸ್ಟಾರ್‍ಗಳ ಜೊತೆ ನಟಿಸಿದ್ದಾರೆ. ಪುನೀತ್ ಜೊತೆ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಅವರದ್ದು. ಇದರ ನಡುವೆ ಮಲಯಾಳಂ, ತಮಿಳು, ತೆಲುಗಿನಲ್ಲೂ ಭಾವನಾ ನಟಿಸಿದ್ದಾರೆ. ಇಷ್ಟೆಲ್ಲದರ ನಡುವೆಯೂ ಭಾವನಾ ಇದುವರೆಗೆ ನಟಿಸಿರುವ ರಿಮೇಕ್ ಚಿತ್ರಗಳ ಸಂಖ್ಯೆ ಕೇವಲ 2. 

  ಹೌದು, ತೆರೆಗೆ ಬರಲು ಸಜ್ಜಾಗಿರುವ 99 ಸಿನಿಮಾ, ಭಾವನಾ ಅವರ 2ನೇ ರೀಮೇಕ್ ಚಿತ್ರವಂತೆ. ಮೊದಲನೆಯದ್ದು ಯಾರೇ ಕೂಗಾಡಲಿ. ನನಗೆ ಈ ಚಿತ್ರದ ಆಫರ್ ಬಂದಾಗ ವೊರಿಜಿನಲ್ 96 ಚಿತ್ರವನ್ನು ನೋಡಿರಲಿಲ್ಲ. ನೋಡಿದ ಮೇಲೆ ತ್ರಿಷಾ ಅವರ ಪಾತ್ರ ತುಂಬಾನೆ ಹಿಡಿಸಿಬಿಟ್ಟಿತು. ಅದೊಂದು ರೀತಿ ಮೆಚ್ಯೂರ್ಡ್ ಪಾತ್ರ ಎನ್ನುವ ಭಾವನಾಗೆ, ಪಾತ್ರದಲ್ಲಿ ಹಲವು ವಿಶೇಷತೆಗಳಿವೆ ಎನ್ನುವುದೇ ಇಷ್ಟವಾಯಿತಂತೆ.

  ಮದುವೆ ಆದಮೇಲೆ ಮೊದಲಿಗಿಂತ ಹೆಚ್ಚು ಆಫರ್ ಬರುತ್ತಿವೆ ಎನ್ನುವ ಭಾವನಾ, 99 ಸಿನಿಮಾ ಪ್ಯೂರ್ ಎಮೋಷನ್ಸ್ ಮತ್ತು ಲವ್ ಫೀಲ್ ಇರುವ ಸಿನಿಮಾ. ಪ್ರತಿಯೊಬ್ಬರೂ ತಮ್ಮೊಂದಿಗೆ ಇಡೀ ಸಿನಿಮಾ ಕನೆಕ್ಟ್ ಮಾಡಿಕೊಳ್ತಾರೆ ಎನ್ನುತ್ತಾರೆ.

  ಗಣೇಶ್ ಹೀರೋ ಆಗಿರುವ ಚಿತ್ರಕ್ಕೆ ಪ್ರೀತಂ ಗುಬ್ಬಿ ನಿರ್ದೇಶನವಿದೆ. ರಾಮು ನಿರ್ಮಾಣದ ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ.

 • ತ್ರಿಬಲ್ ರೈಡಿಂಗ್ ಶೂಟಿಂಗ್ ಕಂಪ್ಲೀಟ್

  ತ್ರಿಬಲ್ ರೈಡಿಂಗ್ ಶೂಟಿಂಗ್ ಕಂಪ್ಲೀಟ್

  ಗೋಲ್ಡನ್ ಸ್ಟಾರ್ ಗಣೇಶ್, ಆದಿತಿ ಪ್ರಭುದೇವ, ಮೇಘಾ ಶೆಟ್ಟಿ ಮತ್ತು ರಚನಾ ಇಂದರ್ ನಟಿಸಿರುವ ತ್ರಿಬಲ್ ರೈಡಿಂಗ್ ಶೂಟಿಂಗ್ ಮುಗಿಸಿದೆ. ಮುಗುಳುನಗೆಯಲ್ಲಿ ನಾಲ್ವರು ನಾಯಕಿಯರ ಜೊತೆ ರೊಮ್ಯಾನ್ಸ್ ಮಾಡಿದ್ದ ಗಣೇಶ್, ಈ ಚಿತ್ರದಲ್ಲಿ ಮೂವರೊಂದಿಗೆ ಡ್ಯುಯೆಟ್ ಹಾಡಿದ್ದಾರೆ. ಮಹೇಶ್ ಗೌಡ ನಿರ್ದೇಶನದ ಈ ಚಿತ್ರದಲ್ಲಿರೋ ಪಕ್ಕಾ ರೊಮ್ಯಾಂಟಿಕ್ ಲವ್ ಸ್ಟೋರಿ.

  ರಾಮ್ ಗೋಪಾಲ್ ನಿರ್ಮಾಣದ ತ್ರಿಬಲ್ ರೈಡಿಂಗ್ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಚುರುಕಾಗಿ ಮಾಡೋಕೆ ಶುರು ಮಾಡಿದೆ. ಸಾಧುಕೋಕಿಲ, ರಂಗಾಯಣ ರಘು, ರವಿಶಂಕರ್ ಗೌಡ, ಕುರಿ ಪ್ರತಾಪ್ ಕೂಡಾ ಇರೋದ್ರಿಂದ ಇಡೀ ಚಿತ್ರದಲ್ಲಿ ನಗು ತುಂಬಿರಲಿದೆ ಎನ್ನೋದ್ರಲ್ಲಿ ಅನುಮಾನವಿಲ್ಲ. 

 • ದಿಗಂತ್ ಚಡ್ಡಿ ಬಿಚ್ಚಿಸಿದ್ರಾ ಭಟ್ಟರು..?

  ದಿಗಂತ್ ಚಡ್ಡಿ ಬಿಚ್ಚಿಸಿದ್ರಾ ಭಟ್ಟರು..?

  ದೂದ್ ಪೇಡ ದಿಗಂತ್ ಕ್ಯೂಟ್ ಕ್ಯೂಟ್. ಅಂತಹವರನ್ನ ಆಂಗ್ರಿ ಯಂಗ್ ಮ್ಯಾನ್ ಆಗಿ ತೋರಿಸಿದ್ರೆ.. ಹೆಸರು ನೋಡಿದ್ರೆ ದೂಧ್ ಪೇಡ. ಆದರೆ ಪೇಡದ ಬಾಯಲ್ಲಿ ಸದಾ ಉರಿಯುವ ಬೆಂಕಿ.. ಹೊಗೆ... ಭಗ್ನಪ್ರೇಮಿ.. ಬೆತ್ತಲಾಗದೆ ಬಯಲು ಸಿಕ್ಕದಿಲ್ಲಿ ಎಂದು ಹಿಮಾಲಯಕ್ಕೇ ಹೋಗಿ ಬೆತ್ತಲಾಗುವ.. ಹಾಗೆ ಬೆತ್ತಲಾದಾಗ ಕತ್ತಲಲ್ಲಿ ಸಕಲವನ್ನೂ ಕಿತ್ತು ಹಾಕುವ.. ಆಹಾ.. ಒಂದು ಪಾತ್ರದಲ್ಲಿ ಇಡೀ ಲೈಫನ್ನೇ ಉಲ್ಟಾಪಲ್ಟಾ ತೋರಿಸೋದ್ರಲ್ಲಿ ಭಟ್ಟರು ಎತ್ತಿದ ಕೈ.

  ಗಾಳಿಪಟ 2 ಚಿತ್ರದ ದಿಗಂತ್ ಪಾತ್ರದ ಪರಿಚಯ ಇದು. ಮೊನ್ನೆ ಮೊನ್ನೆಯಷ್ಟೇ ಗಣೇಶ್ ಪಾತ್ರದ ಪರಿಚಯ ಮಾಡಿಸಿದ್ದ ಭಟ್ಟರು ಈ ಬಾರಿ ದಿಗಂತ್ ಪಾತ್ರ ತಂದು ನಿಲ್ಲಿಸಿದ್ದಾರೆ. ಗಣೇಶ್-ವೈಭವಿ ಶಾಂಡಿಲ್ಯ, ದಿಗಂತ್-ಸಂಯುಕ್ತಾ ಮೆನನ್, ಪವನ್ ಕುಮಾರ್-ಶರ್ಮಿಳಾ ಮಾಂಡ್ರೆ ಜೋಡಿಗಳಾಗಿರೋ ಚಿತ್ರದಲ್ಲಿ ಅನಂತನಾಗ್, ರಂಗಾಯಣ ರಘು, ಬುಲೆಟ್ ಪ್ರಕಾಶ್, ಪದ್ಮಜಾ ರಾವ್.. ಹೀಗೆ ಘಟಾನುಘಟಿಗಳೇ ನಟಿಸಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ ಸಿನಿಮಾ ಆಗಸ್ಟ್ 12ಕ್ಕೆ ಥಿಯೇಟರಿಗೆ ಬರಲಿದೆ.

 • ನ.25ಕ್ಕೆ ತ್ರಿಬಲ್ ರೈಡಿಂಗ್

  ನ.25ಕ್ಕೆ ತ್ರಿಬಲ್ ರೈಡಿಂಗ್

  ಗಾಳಿಪಟ 2 ಸಕ್ಸಸ್ ಜೋಷ್‍ನಲ್ಲಿರೋ ಗೋಲ್ಡನ್ ಸ್ಟಾರ್ ಗಣೇಶ್ ಆದಿತಿ ಪ್ರಭುದೇವ, ಮೇಘಾ ಶೆಟ್ಟಿ ಹಾಗೂ ರಚನಾ ಇಂದರ್ ಜೊತೆ ತ್ರಿಬಲ್ ರೈಡಿಂಗ್ ಬರುತ್ತಿದ್ದಾರೆ. ಇದೇ ಮೊದಲ ಬಾರಿಗೆ ಗಣೇಶ್‍ಗೆ ಮೂರು ನಾಯಕಿಯರ ಜೊತೆ ರೊಮ್ಯಾನ್ಸ್ ಮಾಡುವ ಚಾನ್ಸು ಸಿಕ್ಕಿದೆ. ಆಫರ್ ಕೊಡಿಸಿರುವುದು ಡೈರೆಕ್ಟರ್ ಮಹೇಶ್ ಗೌಡ ಮತ್ತು ಪ್ರೊಡ್ಯೂಸರ್ ವೈ.ಎಂ.ರಾವ್.

  ನ.25ಕ್ಕೆ ರಿಲೀಸ್ ಆಗುತ್ತಿರೋ ಚಿತ್ರದ ಪ್ರಚಾರವೂ ಶುರುವಾಗಿದೆ. ಮೇಕಿಂಗ್ ಅದ್ಧೂರಿಯಾಗಿದ್ದು ನಿರ್ದೇಶಕ ಮಹೇಶ್ ಗೌಡ ಬಗ್ಗೆ ಪ್ರೀತಿಯ ಮಾತು ಹೇಳಿದ್ದಾರೆ ಗಣೇಶ್. ಮುಂಗಾರು ಮಳೆಯಿಂದ ಶುರುವಾದ ಪರಿಚಯ 15 ವರ್ಷಗಳ ನಂತರ ಸಿನಿಮಾ ಮಾಡುವುದಕ್ಕೆ ಪ್ರೇರೇಪಿಸಿದೆ. ಇಡೀ ಸಿನಿಮಾ ಕಾಮಿಡಿ.. ಕಾಮಿಡಿ.. ಕಾಮಿಡಿ.. ಕೊನೆಯ 20 ನಿಮಿಷವಂತೂ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ ಎಂಬ ಭರವಸೆ ಕೊಟ್ಟಿದ್ದಾರೆ ಗಣೇಶ್.

  ಚಿತ್ರದಲ್ಲಿ ಮೇಘಾ ಶೆಟ್ಟಿ ಡಾಕ್ಟರ್. ರಚನಾ ಇಂದರ್ ಹಠಮಾರಿ  ಹುಡುಗಿ. ಸಾಯಿ ಕಾರ್ತಿಕ್ ಸಂಗೀತದಲ್ಲಿ ಯಟ್ಟಾಸಟ್ಟಾ.. ಹಾಡು ಈಗಾಗಲೇ ಹಿಟ್ ಆಗಿದೆ.

 • ನಾನ್ ಪಾಸಾದೆ..ನಾನ್ ಪಾಸಾದೆ..ನಾನ್ ಪಾಸಾದೆ..

  ನಾನ್ ಪಾಸಾದೆ..ನಾನ್ ಪಾಸಾದೆ..ನಾನ್ ಪಾಸಾದೆ..

  ಕಾಲೇಜು ವಿದ್ಯಾರ್ಥಿಗಳ ಪರೀಕ್ಷೆಯನ್ನೂ ಲೇವಡಿ ಮಾಡಿ ಹಾಡಿದ್ದ ಸಿನಿಮಾ ಗಾಳಿಪಟ 2. ಅಂತಾದ್ದೊಂದು ಚಿತ್ರದ ನಿರ್ಮಾಪಕ ಪಾಸ್ ಆಗಿದ್ದಾರೆ. ಗಾಳಿಪಟ 2 ಚಿತ್ರತಂಡ ಬುಧವಾರ ಸಕ್ಸಸ್ ಮೀಟ್ ಕರೆದಿತ್ತು. ಆದರೆ ನಿರ್ಮಾಪಕರಾದ ರಮೇಶ್ ರೆಡ್ಡಿ ಇದು ಸಕ್ಸಸ್ ಮೀಟ್ ಅಲ್ಲ, ಥ್ಯಾಂಕ್ಸ್ ಮೀಟ್. ಚಿತ್ರವನ್ನು ಗೆಲ್ಲಿಸಿದ ಎಲ್ಲರಿಗೂ ಥ್ಯಾಂಕ್ಸ್ ಎಂದರು ರಮೇಶ್ ರೆಡ್ಡಿ.

  ನಾನು ಚಿತ್ರದ ಕಥೆ ಕೇಳಿಲ್ಲ. ಅನಂತ್ ಸರ್ ಓಕೆ ಅಂದ್ರು. ಅಷ್ಟೆ. ಭಟ್ಟರ ಮೇಲೆ ನಂಬಿಕೆಯಿತ್ತು ಎಂದ ರಮೇಶ್ ರೆಡ್ಡಿ ವೀರೇಶ್ ಥಿಯೇಟರಲ್ಲಿ ರಿಲೀಸ್ ದಿನ ನಾನ್ ಪಾಸಾದೆ..ನಾನ್ ಪಾಸಾದೆ..ನಾನ್ ಪಾಸಾದೆ.. ಎಂದು ಕೂಗಿದ್ದರಂತೆ. ಗಾಳಿಪಟದಲ್ಲಿ ನನಗೆ ಅತ್ಯಂತ ಖುಷಿ ಕೊಟ್ಟ ಕ್ಷಣ ನಮ್ಮ ನಿರ್ಮಾಪಕರು ವೀರೇಶ್ ಥಿಯೇಟರಲ್ಲಿ ನಾನ್ ಪಾಸಾದೆ..ನಾನ್ ಪಾಸಾದೆ..ನಾನ್ ಪಾಸಾದೆ.. ಎಂದು ಕೂಗಿದ್ದು ಎಂದರು.

  ಅನಂತನಾಗ್, ಯೋಗರಾಜ್ ಭಟ್, ಗಣೇಶ್, ಶರ್ಮಿಳಾ ಮಾಂಡ್ರೆ, ಪವನ್ ಕುಮಾರ್, ದಿಗಂತ್, ಜಯಂತ ಕಾಯ್ಕಿಣಿ, ರಂಗಾಯಣ ರಘು, ಪದ್ಮಜಾ ರಾವ್ ಎಲ್ಲರೂ ವೇದಿಕೆಯಲ್ಲಿ ಸೇರಿಕೊಂಡು ಗೆಲುವನ್ನು ಸಂಭ್ರಮಿಸಿದರು.

   

 • ನಿಮ್ಮ ನಿಮ್ಮ ಪ್ರೀತಿ ಹುಡುಕಿಕೊಳ್ಳಿ.. ಮುಗುಳುನಗೆಯಲಿ..

  ganesh image

  ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ಎಂದು ದಾಸರು ಹೇಳಿದರೆ, ನಿಮ್ಮ ನಿಮ್ಮ ಪ್ರೀತಿಯನ್ನ ನೀವೇ ಹುಡುಕಿಕೊಳ್ಳಿ ಎನ್ನುತ್ತಿದ್ದಾರೆ ಭಟ್ಟರು. ಪ್ರೀತಿಯ ಆಧ್ಯಾತ್ಮ ಹೇಳ್ತಾ ಇರೋವ್ರು ಯೋಗರಾಜ ಭಟ್ಟರು.

  ಚಿತ್ರದಲ್ಲಿ ನಾಯಕ ಪುಲಿಕೇಶಿ ಬಾಳಲ್ಲಿ ಬಂದು ಹೋಗುವ ಪ್ರೀತಿಯ ಕಥೆಗಳೇ ಮುಗುಳುನಗೆ ಸಿನಿಮಾ. ನಗುವುದನ್ನೇ ಜೀವನ ಧರ್ಮವನ್ನಾಗಿಸಿಕೊಂಡಿರುವ ನಾಯಕ ಮತ್ತು ಆತನ ಬದುಕಿನಲ್ಲಿ ಬಂದು ಹೋಗುವ ಪ್ರೇಮಿಗಳೇ ಚಿತ್ರದ ಪಾತ್ರಧಾರಿಗಳು.

  ಚಿತ್ರದಲ್ಲಿ ನಾಲ್ವರು ನಾಯಕಿಯರು. ಅಶಿಕಾ ರಂಗನಾಥ್, ಗಣೇಶ್ ಟೀನೇಜ್ ಲೈಫಲ್ಲಿ ಬಂದು ಹೋಗುವ ಹುಡುಗಿ. ಪ್ರೀತಿಯೋ..ಆಕರ್ಷಣೆಯೋ.. ಗೊತ್ತಾಗದ ವಯಸ್ಸಿನಲ್ಲಿ ಮೊಳಕೆಯೋ..ಮೊಗ್ಗೋ ಆಗಿ ಮರೆತುಹೋಗುವ ಪ್ರೇಮ.

  ಇನ್ನೊಬ್ಬ ನಾಯಕಿ ನಿಖಿತಾ ನಾರಾಯಣನ್. ಸ್ವಾತಂತ್ರ್ಯ ಮತ್ತು ಕೆರಿಯರ್‍ನ್ನೇ ಆರಾಧಿಸುವ ಮಾಡರ್ನ್ ಹುಡುಗಿ. ಆಕೆ ಗಿಟಾರ್ ವಾದಕಿಯೂ ಹೌದು. ಮೂರನೇ ನಾಯಕಿ ಅಪೂರ್ವ ಅರೋರಾ. ಪಕ್ಕಾ ಸಂಪ್ರದಾಯಸ್ಥ ಮನೆತನದ ಹುಡುಗಿ. ಮೌಲ್ಯಗಳನ್ನೇ ಜೀವನ ಎಂದು ನಂಬಿದವಳು.

  ಇನ್ನು ಕಡೆಯದಾಗಿ ಬರುವುದು ಅಮೂಲ್ಯ. ಆಕೆಯದ್ದು ಚಿತ್ರದಲ್ಲಿ ಅತಿಥಿ ಪಾತ್ರ. ನಾಯಕನಿಗೆ ಮಾರ್ಗದರ್ಶನ ನೀಡುವ ಹುಡುಗಿ. 

  ಇಷ್ಟೂ ನಾಯಕಿಯರ ಮಧ್ಯೆ ಇರುವ ಏಕೈಕ ಕೊಂಡಿ ಪುಲಿಕೇಶಿ ಗಣೇಶ್ ಮತ್ತು ಮುಗುಳುನಗೆ. ಇದು ಮುಂಗಾರು ಮಳೆ ಮತ್ತು ಗಾಳಿಪಟದ ನಂತರ ಗಣೇಶ್ ಮತ್ತು ಯೋಗರಾಜ್ ಭಟ್ಟರು ಒಟ್ಟಾಗಿರುವ ಸಿನಿಮಾ. ನಿರೀಕ್ಷೆ ಭರ್ಜರಿಯಾಗಿದೆ. ಹಾಡು ಹಿಟ್ಟಾಗಿದೆ. ಸಿನಿಮಾ ರೆಡಿಯಾಗಿದೆ. ರಿಲೀಸ್ ಡೇಟ್ ಅನೌನ್ಸಾಗಿದೆ. ಪ್ರೇಕ್ಷಕ ಕಾದು ಕುಳಿತಿದ್ದಾಗಿದೆ. ಈ ವಾರ ತಡ್ಕೊಂಡ್‍ಬಿಡಿ.

 • ಪತ್ನಿಗಾಗಿ ರಾಜಕೀಯಕ್ಕೆ ಬರ್ತಾರೆ ಗಣೇಶ್

  ganesh to enter politics

  ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿನಿಮಾ ನಟರ ರಾಜಕೀಯ ಪ್ರವೇಶ ಸುದ್ದಿಗಳಿಗೆ ವೇಗ ಬಂದುಬಿಟ್ಟಿದೆ. ಸಕ್ರಿಯ ರಾಜಕಾರಣದಲ್ಲಿರುವ ಅಂಬರೀಷ್, ಜಗ್ಗೇಶ್, ರಮ್ಯಾ, ಉಮಾಶ್ರೀ, ಜಯಮಾಲಾ, ತಾರಾ, ಭಾವನಾ, ಬಿ.ಸಿ.ಪಾಟೀಲ್ ಮೊದಲಾದವರ ಕಥೆ ಬೇರೆ. ದರ್ಶನ್, ಸುದೀಪ್ ಮೊದಲಾದವರ ಕಥೆಯೇ ಬೇರೆ. ಆದರೆ, ನಾವಿಲ್ಲಿ ಹೇಳ್ತಿರೋದು ಗಣೇಶ್ ಸಮಾಚಾರ.

  ಗೋಲ್ಡನ್ ಸ್ಟಾರ್ ಗಣೇಶ್‍ಗೆ ರಾಜಕೀಯ ಹೊಸದೇನಲ್ಲ. ಹಾಗಂತ ಅವರು ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡವರೂ ಅಲ್ಲ. ಆದರೆ. ಅವರ ಪತ್ನಿ ಶಿಲ್ಪಾ ಹಾಗಲ್ಲ. ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿರುವ ಶಿಲ್ಪಾ, ಫೈರ್‍ಬ್ರಾಂಡ್. ಅದರಲ್ಲೂ ಇತ್ತೀಚೆಗೆ ನಟಿ ರಮ್ಯಾ ಅವರನ್ನು ಟ್ವಿಟರ್‍ನಲ್ಲಿ ತರಾಟೆಗೆ ತೆಗೆದುಕೊಂಡಿದ್ದವರಲ್ಲಿ ಶಿಲ್ಪಾ ಮೊದಲಿಗರಾಗಿದ್ದರು. 

  ಈಗ ಶಿಲ್ಪಾ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯುವ ಆಕಾಂಕ್ಷಿಯಾಗಿದ್ದಾರೆ. ಅದು ಚಿತ್ರ ನಿರ್ಮಾಪಕರೂ ಆಗಿರುವ ಮುನಿರತ್ನ ಅವರ ಕ್ಷೇತ್ರ ಎನ್ನುವುದು ವಿಶೇಷ. ಪತ್ನಿಗೆ ಟಿಕೆಟ್ ಸಿಕ್ಕರೆ, ಆಕೆಯ ಪರ ಪ್ರಚಾರ ಮಾಡಲು ನಾನು ರೆಡಿ ಎಂದಿದ್ದಾರೆ ಗಣೇಶ್.

  ನಮಗೆ ರಾಜಕೀಯದಿಂದ ಹಣ ಮಾಡುವ ಅಗತ್ಯವಿಲ್ಲ. ಈಗ.. ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ರಾಜಕೀಯ ಶಿಲ್ಪಾಗೆ ಪ್ಯಾಷನ್. ಸಾಮಾಜಿಕ ಕಳಕಳಿಯಿರುವವರು. ಟಿಕೆಟ್ ಸಿಕ್ಕರೆ ಇಡೀ ಕ್ಷೇತ್ರದಲ್ಲಿ ಪ್ರಚಾರ ಮಾಡೋದಾಗಿ ಹೇಳಿದ್ದಾರೆ ಗಣೇಶ್.

 • ಪ್ರಕಾಶ್ ರೈರಿಂದ ಆರಂಭ, ಗಣೇಶ್​ರಿಂದ ಅಂತ್ಯ

  ganesh image

  ವೀಕೆಂಡ್ ವಿತ್ ರಮೇಶ್, ಈ ಬಾರಿ ಟಿಆರ್​ಪಿಯಲ್ಲಷ್ಟೇ ಅಲ್ಲ, ವಿಭಿನ್ನತೆಯಲ್ಲೂ ವಿಶೇಷ ದಾಖಲೆ ಬರೆದಿದೆ. ಝೀ ಕನ್ನಡ ವಾಹಿನಿಯ ವೀಕೆಂಡ್ ವಿತ್ ರಮೇಶ್ ಸೀಸನ್ 3 ಈ ವಾರ ಕೊನೆಯಾಗುತ್ತಿದೆ. ಕೊನೆಯ ಕಾರ್ಯಕ್ರಮದ ಅತಿಥಿ ಗೋಲ್ಡನ್ ಸ್ಟಾರ್ ಗಣೇಶ್.

  ಈ ಸರಣಿ ಶುರುವಾಗಿದ್ದು ಪ್ರಕಾಶ್ ರೈ ಅವರಿಂದ. ಈ ಬಾರಿಯ ವೀಕೆಂಡ್ ಸೀಟ್​ನಲ್ಲಿ ಸಿನಿಮಾದವರಷ್ಟೇ ಅಲ್ಲ, ಬೇರೆ ಬೇರೆ ರಂಗದವರೂ ಭಾಗವಹಿಸಿದ್ದು ವಿಶೇಷ. ಚಿತ್ರರಂಗದ ಸ್ಟಾರ್​ಗಳಲ್ಲಿ ಭಾರತಿ ವಿಷ್ಣುವರ್ಧನ್, ಜಗ್ಗೇಶ್, ಬಿ.ಜಯಶ್ರೀ, ಶೃತಿ, ರಕ್ಷಿತ್ ಶೆಟ್ಟಿ, ಪ್ರಿಯಾಮಣಿ ಮೊದಲಾದವರು ಕಾಣಿಸಿಕೊಂಡರೆ, ಸಿನಿಮಾ ಹೊರತಾಗಿ ನಿ. ಲೋಕಾಯಕ್ತ ಸಂತೋಷ್ ಹೆಗ್ಡೆ, ಹಾಸ್ಯ ಕಲಾವಿದರಾದ ಪ್ರಾಣೇಶ್, ಕೃಷ್ಣೇಗೌಡ ವೇದಿಕೆಯೇರಿದರು.

  ಆದರೆ, ವೀಕೆಂಡ್​ ಇನ್ನೊಂದು ಮಜಲು ತಲುಪಿದ್ದು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಮತ್ತು ಹಾಲಿ ಸಿಎಂ ಸಿದ್ದರಾಮಯ್ಯ ವೀಕೆಂಡ್ ಸೀಟ್​ನಲ್ಲಿ ಕುಳಿತಾಗ. ಹೀಗೆ 3 ತಿಂಗಳ ಕಾಲ ವಿಭಿನ್ನತೆ, ವಿಶಿಷ್ಟತೆ ಮೆರೆದ ವೀಕೆಂಡ್ ವಿತ್ ರಮೇಶ್ ಟಿಆರ್​ಪಿಯಲ್ಲೂ ದಾಖಲೆ ಬರೆಯಿತು.

  ಈ ವಾರ ಗೋಲ್ಡನ್ ಸ್ಟಾರ್ ಗಣೇಶ್ ಪಾಲ್ಗೊಂಡಿದ್ದು ಶನಿವಾರ ಮತ್ತು ಭಾನುವಾರ ಎರಡೂ ದಿನ ಗಣೇಶ್ ಚಿತ್ರ ಜೀವನ ವೀಕೆಂಡ್​ನಲ್ಲಿ ತೆರೆದುಕೊಳ್ಳಲಿದೆ.

 • ಪ್ರೇಮಸುಧೆ ಹರಿಸಿದ ಜಯಂತ್ ಕಾಯ್ಕಿಣಿ

  ಪ್ರೇಮಸುಧೆ ಹರಿಸಿದ ಜಯಂತ್ ಕಾಯ್ಕಿಣಿ

  ಒಂದೊಂದು ಪದದ ಅರ್ಥವನ್ನೂ ಜಯಂತ್ ಕಾಯ್ಕಿಣಿ ಬಿಡಿಸಿ ಬಿಡಿಸಿ ಹೇಳಿದ್ದಾರೆ ಎಂದಿದ್ದರು ಯೋಗರಾಜ್ ಭಟ್. ಭಟ್ಟರು ಹಾಗೇಕೆ ಹೇಳಿದರು ಎಂದು ತಲೆ ತುರಿಸಿಕೊಂಡವರಿಗೆ ಗಾಳಿಪಟ 2 ಚಿತ್ರದ ಈ ಹಾಡು ಉತ್ತರ ನೀಡಿದೆ. ಜಯಂತ್ ಕಾಯ್ಕಿಣಿ ಪ್ರೇಮಸುಧೆಯನ್ನೇ ಹರಿಸಿದ್ದಾರೆ.

  ಆಡದ ಮಾತನ್ನೆಲ್ಲ ಕದ್ದು ಕೇಳು..

  ಅದನ್ನು ನನಗೆ ಹೇಳದೆ ಒದ್ದಾಡುವಂತೆ ಮಾಡು

  ಮುಂಗೋಪದಿಂದ ಒದ್ದಾಡುವಂತೆ ಮಾಡು..

  ನಾನು ಓದದ ಪುಸ್ತಕ.. ಎದೆಗೊತ್ತಿಕೊಳ್ಳುವೆಯಾ..

  ಈ ಪುಸ್ತಕದ ಪ್ರತಿ ಸಾಲಿಗೂ ಬಿಸಿಯುಸಿರು ನೀಡಿ ಕಥೆಯಾಗಿಸು..

  ಈ ಅರ್ಥದ ಸಾಲುಗಳನ್ನು ಅರೆದು..ಅರೆದು..ಸೋಸಿ ಬರೆದಿದ್ದಾರೆ ಪ್ರೇಮಿಗಳಿಗಾಗಿ.. ಪ್ರೇಮಿಗಳ ಹೃದಯಕ್ಕಾಗಿ. ಕಾಯ್ಕಿಣಿಯವರ ಪದಗಳನ್ನು ಅಷ್ಟೇ ಸಮರ್ಥವಾಗಿ ಎದೆಗೆ ದಾಟಿಸಿರೋದು ಸೋನು ನಿಗಮ್ ಅವರ ಕಂಠ ಮತ್ತು ಅರ್ಜುನ್ ಜನ್ಯಾ ಅವರ ಸಂಗೀತ.

  ರಮೇಶ್ ರೆಡ್ಡಿ ನಿರ್ಮಾಣದ ಚಿತ್ರದಲ್ಲಿ ಗಣೇಶ್, ವೈಭವಿ ಶಾಂಡಿಲ್ಯ, ದಿಗಂತ್, ಶರ್ಮಿಳಾ ಮಾಂಡ್ರೆ, ಪವನ್ ಕುಮಾರ್, ಅನಂತ್ ನಾಗ್, ಬುಲೆಟ್ ಪ್ರಕಾಶ್ ನಟಿಸಿದ್ದಾರೆ. ಗಾಳಿಪಟ 2 ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ.

 • ಬಾನದಾರಿಯಲ್ಲಿ.. ಗಣೇಶ್-ಪ್ರೀತಮ್ ಗುಬ್ಬಿ

  ಬಾನದಾರಿಯಲ್ಲಿ.. ಗಣೇಶ್-ಪ್ರೀತಮ್ ಗುಬ್ಬಿ

  ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರೀತಮ್ ಗುಬ್ಬಿ ಮತ್ತೊಮ್ಮೆ ಒಂದಾಗುತ್ತಿರೋದು ಗೊತ್ತಿರೋ ವಿಷಯ. ಅವರ ಚಿತ್ರಕ್ಕೀಗ ಟೈಟಲ್ ಫಿಕ್ಸ್ ಆಗಿದೆ. ಬಾನದಾರಿಯಲ್ಲಿ.. ಅನ್ನೋದೇ ಚಿತ್ರದ ಟೈಟಲ್.

  ಬಾನದಾರಿಯಲ್ಲಿ.. ಎಂದ ಕೂಡಲೇ ಪುನೀತ್ ರಾಜಕುಮಾರ್ ನೆನಪಾಗುತ್ತಾರೆ. ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ.. ಹಾಡು ಕಣ್ಣೆದುರು ನಿಲ್ಲುತ್ತೆ. ಚಿತ್ರದ ಸ್ಕ್ರಿಪ್ಟ್ ಮುಗಿದ ಮೇಲೆ ಅಚಾನಕ್ಕಾಗಿ ಹೊಳೆದ ಟೈಟಲ್ ಅದು. ಚಿತ್ರದ ಕಥೆಗೆ ಅದು ಅತ್ಯಂತ ಚೆನ್ನಾಗಿ ಸೂಟ್ ಆಗುತ್ತದೆ. ಪುನೀತ್ ಅವರ ನೆನಪೂ ಕೂಡಾ ಇದೆ ಎಂದಿದ್ದಾರೆ ಪ್ರೀತಮ್ ಗುಬ್ಬಿ.

  ಸಂಗೀತ ನಿರ್ದೇಶನಕ್ಕೆ ಹರಿಕೃಷ್ಣ ಓಕೆ ಎಂದಿದ್ದಾರೆ. ಮೇ ತಿಂಗಳಲ್ಲಿ ಚಿತ್ರೀಕರಣ ಶುರುವಾಗಲಿದ್ದು, ವರ್ಷದ ಕೊನೆಗೆ ರಿಲೀಸ್ ಮಾಡುವ ಯೋಜನೆಯಲ್ಲಿದ್ದಾರೆ ಪ್ರೀತಮ್ ಗುಬ್ಬಿ.

  ಮುಂಗಾರು ಮಳೆಗೆ ಕಥೆ ಬರೆದಿದ್ದ ಪ್ರೀತಮ್ ಗುಬ್ಬಿ, ನಂತರ ಗಣೇಶ್ ಅವರಿಗಾಗಿ ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ ಮತ್ತು 99 ಚಿತ್ರಗಳನ್ನು ನಿರ್ದೇಶಿಸಿದ್ದರು. ಆ ಎಲ್ಲ ಚಿತ್ರಗಳೂ ಹಿಟ್ ಆದ ನಂತರ ಮತ್ತೊಮ್ಮೆ 4ನೇ ಬಾರಿಗೆ ಡೈರೆಕ್ಟರ್-ಹೀರೋ ಆಗಿ ಜೋಡಿಯಾಗುತ್ತಿದ್ದಾರೆ ಪ್ರೀತಮ್-ಗಣಿ.