` aru gowda - chitraloka.com | Kannada Movie News, Reviews | Image

aru gowda

  • ಕಣ್ಣಿಲ್ಲ..ಕಿವಿಯಿಲ್ಲ..ಮಾತಿಲ್ಲ.. - ಪ್ರೀತಿಗೆ ಇದ್ಯಾವುದೂ ಅಡ್ಡಿ ಅಲ್ಲ..!

    3 gante 30 minutes 30 seconds movie image

    ಕಣ್ಣಿಲ್ಲದ ನಾಯಕ, ನಾಯಕಿಯ ಪ್ರೇಮಕಥೆ, ಕಾಲಿಲ್ಲದವರ ಲವ್‍ಸ್ಟೋರಿಗಳನ್ನು ನೀವು ಹಲವು ಚಿತ್ರಗಳಲ್ಲಿ ನೋಡಿದ್ದೀರಿ. ಆದರೆ, ಕಣ್ಣು ಕಾಣದ, ಕಿವಿ ಕೇಳದ, ಮಾತನಾಡಲು ಆಗದವನ ಪ್ರೇಮಕಥೆಯನ್ನು ಎಲ್ಲಾದರೂ ಕೇಳಿದ್ದೀರಾ..? ಅಂಥಾದ್ದೊಂದು ಅದ್ಭುತ ಪ್ರೇಮಕಥೆ, 3 ಗಂಟೆ, 30 ದಿನ 30 ಸೆಕೆಂಡ್ ಚಿತ್ರದಲ್ಲಿದೆ.

    ಚಿತ್ರದಲ್ಲಿ ದೇವರಾಜ್ ಕ್ಯಾ.ಸುಂದರಮ್ ಪಾತ್ರದಲ್ಲಿ ನಟಿಸಿದ್ದಾರೆ. ಅದು ಪಾಕ್ ವಿರುದ್ಧದ ಯುದ್ಧದಲ್ಲಿ ತನ್ನ ಜೀವವನ್ನೇ ಮುಡುಪಾಗಿಟ್ಟು, ದೇಶವನ್ನು ರಕ್ಷಿಸಿದ ಯೋಧನ ಕಥೆ. ದೇಶವನ್ನು ಗೆಲ್ಲಿಸಿದರೂ, ದೇಹದ ಮೇಲೆ ನಿಯಂತ್ರಣವನ್ನೇ ಕಳೆದುಕೊಳ್ಳುವ ಸೈನಿಕನಿಗೆ ಆಸರೆಯಾಗಿ ಬರುವುದು ಸುಧಾರಾಣಿ.

    ಸುಲೋಚನಾ ಪಾತ್ರದಲ್ಲಿ ನಟಿಸಿರುವ ಸುಧಾರಾಣಿ, ದೇವರಾಜ್‍ರ ದೇಶಪ್ರೇಮವೇ ಇಷ್ಟವಾಗಿ ಪ್ರೀತಿಸುತ್ತಾರೆ. ಅವರಿಬ್ಬರ ನಡುವಿನ 25 ವರ್ಷಗಳ ಪ್ರೀತಿಯಲ್ಲಿ ಅವರಿಬ್ಬರ ಮಧ್ಯೆ ಒಂದು ವಿಚಿತ್ರ ಭಾಷೆಯೊಂದು ಬೆಳೆಯುತ್ತದೆ.

    ಈ ಹಿಂದೆ ಹಲವು ಚಿತ್ರಗಳಲ್ಲಿ ಸುಧಾರಾಣಿ ಮತ್ತು ದೇವರಾಜ್ ಒಟ್ಟಿಗೇ ನಟಿಸಿದ್ದಾರೆ. ಆದರೆ, ಇದು ಸಂಪೂರ್ಣ ವಿಭಿನ್ನ. ಮಧುಸೂದನ್ ಗೌಡ ನಿರ್ದೇಶನದ ವಿಭಿನ್ನ ಕಥಾಹಂದರದ ಸಿನಿಮಾ ವಿಭಿನ್ನ ಅನುಭವ ನೀಡುವುದು ಸುಳ್ಳಲ್ಲ. ಇದೇ ಶುಕ್ರವಾರ ತೆರೆಗೆ ಬರುತ್ತಿರುವ ಚಿತ್ರ, ಒಂದು ವಿಶೇಷ ಪ್ರೇಮಕಥೆ ಹೇಳಲಿದೆ. 

     

  • ನೀವು ಕನ್ನಡ ಮೀಡಿಯಂ ಹುಡುಗ್ರಾ..? ಈ ಸಿನಿಮಾ ಮಿಸ್ ಮಾಡ್ಕೊಬೇಡಿ

    raju kannada medium image

    ರಾಜು ಕನ್ನಡ ಮೀಡಿಯಂ. ಹೆಸರಿಗೆ ತಕ್ಕಂತೆ ಕನ್ನಡ ಮೀಡಿಯಂನಲ್ಲಿ ಓದಿದ ಹಳ್ಳಿ ಹುಡುಗನ ಕಥೆ. ಆತ ವಿದ್ಯಾಭ್ಯಾಸ ಮುಗಿಸಿದ ಮೇಲೆ ಕೆಲಸಕ್ಕೆ ಹುಡುಕುವ ಸಂಕಷ್ಟ, ಕೆಲಸ ಸಿಕ್ಕಮೇಲೆ ಇಂಗ್ಲಿಷ್ ಬಾರದೆ ಆತ ಅನುಭವಿಸುವ ಅವಮಾನಗಳನ್ನೆಲ್ಲ ಚಿತ್ರದಲ್ಲಿ ರಂಜನಾತ್ಮಕವಾಗಿಯೇ ಹೇಳಲಾಗಿದೆ. 

    ಫಸ್ಟ್ ರ್ಯಾಂಕ್ ರಾಜು ಚಿತ್ರದಲ್ಲಿ ಸಿಟಿಯಲ್ಲಿಯೇ ಹುಟ್ಟಿ ಬೆಳೆದ ಹುಡುಗನ ಕಥೆಯಿತ್ತು. ರ್ಯಾಂಕ್ ಹಿಂದೆ ಬಿದ್ದ ಅಪ್ಪ, ಅಮ್ಮ ತಮ್ಮ ಮಕ್ಕಳನ್ನು ಯಾವ ರೀತಿ ಹಾಳು ಮಾಡುತ್ತಾರೆ ಎಂಬ ಚಿತ್ರಣವಿತ್ತು. ಅದೇ ಚಿತ್ರತಂಡ ಈಗ ರಾಜು ಕನ್ನಡ ಮೀಡಿಯಂ ಚಿತ್ರ ಮಾಡಿದೆ.

    ಈ ಸಿನಿಮಾ ಕೇವಲ ಮನರಂಜನೆಗಷ್ಟೇ ಅಲ್ಲ, ಸಿನಿಮಾ ನೋಡಿದವರಿಗೆ ಇದು ಸ್ಫೂರ್ತಿಯನ್ನೂ ತುಂಬಬಲ್ಲ ಚಿತ್ರ ಎಂದು ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದಾರೆ ನಿರ್ದೇಶಕ ನರೇಶ್. 

    ಅದಕ್ಕೇ ಹೇಳಿದ್ದು ನೀವು ಕನ್ನಡ ಮೀಡಿಯಂನಲ್ಲಿ ಓದಿದವರಾಗಿದ್ದರೆ, ಈ ಸಿನಿಮಾ ಮಿಸ್ ಮಾಡ್ಕೋಬೇಡಿ.   ಇಂಗ್ಲಿಷ್ ಮೀಡಿಯಂನಲ್ಲಿ ಓದಿದವರಾಗಿದ್ದರೆ, ನೀವು ಯಾವ ರೀತಿ ಕನ್ನಡದ ಮಕ್ಕಳನ್ನು ಗೋಳು ಹೊಯ್ಕೊಳ್ತೀರಿ, ಅದರಿಂದ ಅವರು ಅನುಭವಿಸುವ ಕಷ್ಟನಷ್ಟಗಳೇನು, ಅವಮಾನಗಳೇನು ಎಂಬುದನ್ನು ತಿಳಿದುಕೊಳ್ಳೋಕೆ ಸಿನಿಮಾ ನೋಡಿ.

     

  • '3 Gante 30 Dina 30 Second' On Jan 19th

    3 gante 30 dina 30 second

    Aru Gowda starrer '3 Gante 30 Dhina 30 Second' is all set to be released on the 19th of January in Anupama and other theaters across Karnataka.

    '3 Gante 30 Dhina 30 Second' is being produced by Brain Share Creations Private Limited and is directed by G K Madhusudhan. The film stars Aru Gowda, Kavya Shetty, Yamuna Srinidhi, Sundar and others in prominent roles. 

    Srinivas Ramaiah is the cameraman, while Sridhar Sambhram is the music director.

     

  • 2ನೇ ಕ್ಲಾಸ್‍ನಿಂದ ಶುರುವಾದ ಡೈರೆಕ್ಟರ್ ಕಥೆ..!

    director used to tell story from 2nd std

    3 ದಿನ 30 ಗಂಟೆ 30 ಸೆಕೆಂಡ್ ಅನ್ನೋ ವಿಭಿನ್ನ ಟೈಟಲ್ ಸಿನಿಮಾದಿಂದ ಗಮನ ಸೆಳೆದಿರುವ ಚಿತ್ರದ ನಿರ್ದೇಶಕ ಮಧುಸೂದನ್. ನಿರ್ದೇಶನ ಹೊಸದಲ್ಲ. ಆ್ಯಡ್ ಫಿಲಂ, ಕಿರುಚಿತ್ರ, ಟೆಲಿ ಸೀರಿಯಲ್ ಮಾಡಿದ ಅನುಭವವಿದೆ. ಸಿನಿಮಾ ಮಾತ್ರ ಹೊಸದು. ವಿಭಿನ್ನವಾಗಿ ಕಥೆ ಹೇಳುವ ಮಧುಸೂದನ್ ಅವರಿಗೆ ಕಥೆ ಹೇಳುವ ಖಯಾಲಿ ಶುರುವಾಗಿದ್ದು ಅವರು 2ನೇ ಕ್ಲಾಸ್‍ನಲ್ಲಿದ್ದಾಗ.

    ಅಪ್ಪ ಸಿನಿಮಾ ಆಪರೇಟರ್ ಆಗಿದ್ದರು. ಚಿತ್ರದ ಪ್ರಿಂಟ್‍ಗಳನ್ನು ಒಮ್ಮೊಮ್ಮೆ ಮನೆಗೂ ತಂದು ಪರಿಶೀಲಿಸುತ್ತಿದ್ದರು. ಆದರೆ, ಮಧುಸೂದನ್‍ಗೆ ಇಷ್ಟವಾಗಿದ್ದು ಆ ನೆಗೆಟಿವ್, ತಂತ್ರಜ್ಞಾನಕ್ಕಿಂತ ಕಥೆ. ಹೀಗಾಗಿ 2ನೇ ಕ್ಲಾಸ್‍ನಲ್ಲಿದ್ದಾಗಲೇ ಕಥೆ ಹೇಳುವ ಖಯಾಲಿಗೆ ಬಿದ್ದರು. 

    ಪುಟ್ಟ ಹುಡುಗನ ಉತ್ಸಾಹಕ್ಕೆ ಶಾಲೆಯಲ್ಲಿ ಪ್ರೋತ್ಸಾಹವೂ ಸಿಕ್ಕಿತು. ಮಧುಸೂದನ್ ಕತೆ, ಕವನಗಳನ್ನೆಲ್ಲ ಬರೆದು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಮಿಂಚಿದರು. ದೊಡ್ಡವರಾಗುತ್ತಾ ಆಗುತ್ತಾ ಹೆಚ್ಚು ಹೆಚ್ಚು ಓದುತ್ತಾ ಹೋದರು. ತೇಜಸ್ವಿ, ಯಂಡಮೂರಿ ವೀರೇಂದ್ರನಾಥ್, ನಾಗೇಶ್ ಹೆಗಡೆ, ತರಾಸು, ಎಸ್.ಎಲ್.ಭೈರಪ್ಪ ಮೊದಲಾದವರೆಂದರೆ ಇಷ್ಟ.

    ಹೀಗೆ ಚಿಕ್ಕ ವಯಸ್ಸಿನಿಂದ ಶುರುವಾದ ಕಥೆ ಹೇಳುವ ಅಭ್ಯಾಸ, ಓದಿನ ವ್ಯಾಪ್ತಿ, ಜೀವನ ಹಾಗೂ ಜೀವನದ ಸಾಹಸಗಳೇ ಸಿನಿಮಾದಲ್ಲಿದೆ. ಅಫ್‍ಕೋರ್ಸ್ ಅದೊಂದು ಜೀವನ ಕಥೆಯೂ ಹೌದು. ಒಂದು ಅಪ್ಪಟ ಮನರಂಜನೆಯ ಜೊತೆ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ಮಧುಸೂದನ್.

  • 3 Gante 30 Dina 30 Second Releasing on January 19th

    3 gante 30 dina 30 second

    The much publicized movie 3 Gante 30 Dina 30 Second starring Aru Gowda and Kavya Shetty is releasing on January 19th. Aru Gowda who made his debut in Muddu Manase plays an advocate in 3 Gante 30 Dina 30 Seconds

    It is a thriller directed by new director GK Madhusudhan. Chandrashekhar R Padmashali is the producer. The film has music by Sridhar R Sambhram and Sri CrzayMindz is the editor. Devaraj, Sudharani, Chandrashekar (Edakau Gudda) are playing important roles in the film.

    Sridhar Sambhram is the music director for the movie. Chandan Shetty has sung the title track of the film which has become a sensational hit.

     

  • 3 Gante 30 Dina 30 Second Review, Chitraloka Rating 3/5

    3 gante 30 minutes 30 seconds movie review

    3 Gante 30 Dina 30 Second is a thriller, every second of it. It is several thrilling elements packed into one quick and fast narrative that gives goosebumps to the audience in every scene. The first scene is about how the hero solves a very complicated problem in just three hours. Then has faces the toughest challenge of his life and it is a personal challenge. He has to win this in 30 days. Most of the story is about this 30-day-challenge. He has to get a TV anchor to make him love him. She is also the daughter of the owner of that channel. She is immune to love because of various personal reasons. How our hero manages to convince her forms this romantic tale. 

    Finally there is also a smaller thriller he has to fulfill in the end. Overall the film is an entertainment package. Arun Gowda and Kavya Shetty play the lead roles. Arun is an advocate while Kavya is the TV anchor. They have great chemistry between them and it is a treat to watch them on screen. They are ably supported by the other cast that includes Sudha Rani, Devaraj, Chandrashekar, Sundar, Ramesh Bhat and others. The incidents and characters of Devaraj and Sudharani are special. Devaraj plays an army man who has lost his vision, hearing and speech also. He gives an amazing performance without being able to show his eyes or speak. It is an award winning performance. 

    There are also very good technical details in the film. The cinematography is top class. There are some good songs which add value to the film. Crisp editing by Sri and the narrative that blends emotion and thrill elements in one flow are major advantages for the film. All the various characters are perfectly put together in an engaging story. The film also has a good message in the end. The explanation for love will sometimes leave you confused but that is how love is; confusing to most people and beyond definition. Many people have tried to clearly define love and failed. This film encompasses all of them and more than that. Even if you agree with love or are against it does not matter. This film will entertain you with love. 

    Chitraloka Rating - 3/5

  • 3 ಗಂಟೆ 30 ದಿನ 30 ಸೆಕೆಂಡ್ ಮರ್ಮವೇನು ಗೊತ್ತಾ..?

    3 gante 30 minutes 30 seconds movie image

    3 ಗಂಟೆ 30 ದಿನ 30 ಸೆಕೆಂಡು. ಟೈಟಲ್ಲೇ ವಿಚಿತ್ರ ಮತ್ತು ವಿಭಿನ್ನ. ಚಿತ್ರದ ಕಥೆಯೂ ಹಾಗೇ ವಿಭಿನ್ನವಾಗಿಯೇ ಇದೆ. ಸಿನಿಮಾದ ಟೈಟಲ್ ನೋಡಿದವರು, ಏನಿದರ ಮೀನಿಂಗು ಅಂತಾ ತಲೆಗೆ ಹುಳ ಬಿಟ್ಕೊಂಡಿರೋದಂತೂ ನಿಜ. ಲೆಕ್ಕದ ಪ್ರಕಾರ ಬಂದಿದ್ದರೆ, 30 ದಿನ ಮೊದಲು ಬರಬೇಕಿತ್ತು. ಆದರೆ, 3 ಗಂಟೆ ಬಂದು ಆಮೇಲೆ 30 ದಿನ ದಿ ಬರುತ್ತೆ. 30 ದಿನ ಆದ ಮೇಲೆ ಅರ್ಧ ನಿಮಿಷದ 30 ಸೆಕೆಂಡ್ ಯಾಕೆ ಬಂತು..? ಹೀಗೆ ಹತ್ತಾರು ಪ್ರಶ್ನೆಗಳು.

    ಇವುಗಳಿಗೆ ಕಾರಣ ಹೇಳ್ತೀವಿ. ಚಿತ್ರದ ಹೀರೋ ಅರೂ ಗೌಡ ವಕೀಲ. ಎಂಥ ಕೇಸೇ ಇರಲಿ, ಇತ್ಯರ್ಥವಾಗದೆ ಒದ್ದಾಡುತ್ತಿರಲಿ, ಅದರಲ್ಲಿ ಎಂಥದ್ದೇ ಸಮಸ್ಯೆ ಇರಲಿ.. ಕೇವಲ 3 ಗಂಟೆಯಲ್ಲಿ.. ಅದೂ ಕೋರ್ಟ್‍ನ ಹೊರಗೇ ಪರಿಹಾರ ಹೇಳ್ತಾನೆ. ಅದು ಕೇವಲ 3 ಗಂಟೆಯಲ್ಲಿ.

    ಹೀಗೆ 3 ಗಂಟೆಯಲ್ಲಿ ಪರಿಹಾರ ಹೇಳುವ ನಾಯಕ ಮತ್ತು ರಾಜ್ಯಕ್ಕೆಲ್ಲ ಬುದ್ದಿ ಹೇಳೋ ನಾಯಕಿ ಕಾವ್ಯಾಶೆಟ್ಟಿ ಮಧ್ಯೆ ಒಂದು ಚಾಲೆಂಜ್ ಉದ್ಭವವಾಗುತ್ತೆ. ಅದು 30 ದಿನಗಳ ರಿಯಾಲಿಟಿ ಶೋ. ಅದು ಮೇಲ್ನೋಟಕ್ಕೆ ಸರಳವಾಗಿ ಕಂಡರೂ, ಅಷ್ಟು ಸರಳವಲ್ಲ. ಅದು 30 ದಿನ.

    ಆದರೆ, ಇಡೀ ಸಿನಿಮಾಗೆ 30 ಸೆಕೆಂಡ್‍ನಲ್ಲಿ ಪರಿಹಾರ, ತಿರುವು ಸಿಗ್ತಾ ಹೋಗುತ್ತೆ. ಅರ್ಧ ನಿಮಿಷದಲ್ಲಿ ಆಗುವ ಬದಲಾವಣೆಗಳೇ ಚಿತ್ರದ ಹೈಲೈಟ್ಸ್. ಅದು 30 ಸೆಕೆಂಡ್ಸ್.

    ಜನವರಿ 19ಕ್ಕೆ 3 ಗಂಟೆ ಬಿಡುವು ಮಾಡಿಕೊಳ್ಳಿ. 30 ದಿನ, 30 ಸೆಕೆಂಡ್‍ನ ಲವ್ & ಥ್ರಿಲ್ ಅನುಭವಿಸಿ.

  • 3 ಗಂಟೆ 30 ದಿನ 30 ಸೆಕೆಂಡ್ ಹಿಂದಿನ ನೈಜ ಕಥೆ

    3 gante movie real story

    3 ಗಂಟೆ 30 ದಿನ 30 ಸೆಕೆಂಡ್ ಚಿತ್ರದ ಕಥೆಯಲ್ಲಿ ಹೀರೋ ಲಾಯರ್, ಹೀರೋಯಿನ್ ಟಿವಿ ಆ್ಯಂಕರ್. ದೇವರಾಜ್ ಅಂಗವಿಕಲ ಯೋಧರಾದರೆ, ಅವರ ಸಂಗಾತಿ ಸುಧಾರಾಣಿ. ಎಡಕಲ್ಲುಗುಡ್ಡದ ಚಂದ್ರಶೇಖರ್, ನಾಯಕಿಯ ತಂದೆ. ನಾಯಕ ಮತ್ತು ನಾಯಕಿಯ ಮಧ್ಯೆ ಒಂದು ಚಾಲೆಂಜ್ ಬಿದ್ದು ಶುರುವಾಗುವ ಕಥೆ, ವಿಭಿನ್ನ ಆಯಾಮಕ್ಕೆ ಹೊರಳಿಕೊಳ್ಳುತ್ತೆ. ಈಗಿನ ಯೂತ್ ಟ್ರೆಂಡ್‍ಗೆ ತಕ್ಕಂತೆ ಸಿದ್ಧವಾಗಿರುವ ಚಿತ್ರದಲ್ಲಿ ಪ್ರೀತಿ, ಥ್ರಿಲ್ಲರ್, ಮನರಂಜನೆ, ಕಚಗುಳಿ ಇಡುವ ಡೈಲಾಗ್, ಇಂಪಾದ ಹಾಡುಗಳು, ಮನಸೆಳೆಯುವ ಛಾಯಾಗ್ರಹಣ ಎಲ್ಲವೂ ಇದೆ.

    ಜಾಹೀರಾತು ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಮಧುಸೂದನ್ ನಿರ್ದೇಶನದ ಈ ಚಿತ್ರಕ್ಕೆ ನಿಜವಾಗಲೂ ಸ್ಫೂರ್ತಿಯಾಗಿದ್ದು ಒಂದು ನೈಜಕಥೆಯಂತೆ. ಅವರು ಕಣ್ಣಾರೆ ಕಂಡ ಪ್ರೇಮ ಪ್ರಕರಣವೊಂದರಲ್ಲಿ ಮದುವೆಗೆ ಜಾತಿ ಅಡ್ಡಿಯಾಯ್ತು. ಅಂತಸ್ತಿನ ಸಮಸ್ಯೆಯೂ ಉದ್ಭವವಾಯ್ತು. ನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ. ಆಗ ಶುರುವಾದ ತಳಮಳ 3 ಗಂಟೆ 30 ದಿನ 30 ಸೆಕೆಂಡ್ ಚಿತ್ರಕ್ಕೆ ಕಥೆಯಾಯ್ತು ಎಂದು ಹೇಳಿಕೊಂಡಿದ್ದಾರೆ ಮಧುಸೂದನ್.

    ಆ ಸಾವಿನಿಂದ ಅವನು ಸಾಧಿಸಿದ್ದಾದರೂ ಏನು..? ಮನೆಯವರು, ಗೆಳೆಯರು ಒಂದಷ್ಟು ದಿನ ಕಣ್ಣೀರು ಹಾಕಿದರು. ಆಮೇಲೆ ಮರೆತರು. ಜೀವನ ನಡೆಯುತ್ತಲೇ ಇತ್ತು. ಯೌವ್ವನದಲ್ಲಿ ಹುಟ್ಟಿಕೊಳ್ಳುವ ಭಾವನೆಗಳಿಗೆ ನಾವು ಪ್ರೀತಿಯ ಮುದ್ರೆ ಒತ್ತುದ್ದೀವೆಯೋ.. ಅಥವಾ ಪ್ರೀತಿಯನ್ನು ಉಳಿಸಿಕೊಳ್ಳಲು ನಮಗೆ ಶಕ್ತಿಯಿಲ್ಲವೋ ಎಂಬ ತಾಕಲಾಟಗಳನ್ನಿಟ್ಟುಕೊಂಡು ಚಿತ್ರದ ಕಥೆ ಹೆಣೆದಿದ್ದಾರೆ ನಿರ್ದೇಶಕರು. ಸಿನಿಮಾ ಥಿಯೇಟರುಗಳಲ್ಲಿದೆ.

  • 30 ಸೆಕೆಂಡ್ ಅರುಣ್ ಗೌಡಗೆ ಕಿಚ್ಚ ಕೊಟ್ಟ ಬಿರುದು

    sudeep gives title to aru gowda

    3 ಗಂಟೆ 30 ದಿನ 30 ಸೆಕೆಂಡು ಚಿತ್ರ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವಾಗಲೇ ಚಿತ್ರದ ಹೀರೋ ಅರುಣ್ ಗೌಡಗೆ ಹೊಸದೊಂದು ಬಿರುದು ಸಿಕ್ಕಿದೆ. ಬಿರುದೇನು ಗೊತ್ತಾ..? ಇನ್-ಕಂಪ್ಲೀಟ್ ಸ್ಟಾರ್. ಕೊಟ್ಟಿರುವುದು ಕನ್ನಡಿಗರ ಕಿಚ್ಚ ಸುದೀಪ್.

    kavyashetty_arugowda_sudeep.jpgಚಿತ್ರದ ಪ್ರಚಾರದ ಸಲುವಾಗಿ ಬಿಗ್‍ಬಾಸ್ ಶೋಗೆ ಎಂಟ್ರಿ ಕೊಟ್ಟಿದ್ದ ಅರುಣ್ ಗೌಡ ಹಾಗೂ ಕಾವ್ಯ ಶ್ರೀ ಜೊತೆ ಮಾತನಾಡುವಾಗ, ಅರುಣ್ ಗೌಡ ತಮ್ಮ ಇನ್-ಕಂಪ್ಲೀಟ್ ಕಥೆ  ಹೇಳಿಕೊಂಡರು. ಅವರು ಈಗಲೂ ಡಿಗ್ರಿ ಕಂಲೀಟ್ ಮಾಡಿಲ್ಲ. ಅಷ್ಟೇ ಅಲ್ಲ, ಯಾವುದೇ ಕೆಲಸ ಹಿಡಿದರೂ ಅದನ್ನು ಮುಗಿಸುವಷ್ಟರಲ್ಲಿ ಇನ್ನೇನೋ ಆಗಿ ಅರ್ಧಕ್ಕೆ ನಿಂತು ಹೋಗುತ್ತಂತೆ. ಇದನ್ನೆಲ್ಲ ಕೇಳಿದ ಕಿಚ್ಚ ಅರುಣ್ ಗೌಡಗೆ ಇನ್-ಕಂಪ್ಲೀಟ್ ಸ್ಟಾರ್ ಅನ್ನೋ ಬಿರುದನ್ನೂ ಕೊಟ್ಟರು.

    ಕಿಚ್ಚ ಸುದೀಪ್ ಬಿರುದು ಕೊಟ್ಟಿದ್ದರ ಎಫೆಕ್ಟು, ಅವರ ಚಿತ್ರ ಚಿತ್ರಮಂದಿರಗಳಲ್ಲಿ, ಅದರಲ್ಲೂ ಮಲ್ಟಿಪ್ಲೆಕ್ಸುಗಳಲ್ಲಿ ಭರ್ಜರಿಯಾಗಿ ಪ್ರದರ್ಶನವಾಗುತ್ತಿದೆ.

     

  • 30 ಸೆಕೆಂಡ್ ಚಿತ್ರಕ್ಕೆ 35 ದಿನ ಮ್ಯೂಸಿಕ್

    3 gante 30 minutes 30 seconds movie image

    3 ಗಂಟೆ 30 ದಿನ 30 ಸೆಕೆಂಡ್ ಚಿತ್ರದಲ್ಲಿ ಥ್ರಿಲ್ಲರ್ ಸ್ಟೋರಿ ಇದೆ. ಥ್ರಿಲ್ಲರ್ ಕಥೆಯೇ ಚಿತ್ರದ ಅತಿ ದೊಡ್ಡ ಆಕರ್ಷಣೆ. ಥ್ರಿಲ್ಲರ್ ಸಿನಿಮಾಗಳಲ್ಲಿ ಅತ್ಯಂತ ಮುಖ್ಯವಾಗಿ ಬೇಕಿರುವುದು ಹಿನ್ನೆಲೆ ಸಂಗೀತ. ಹಿನ್ನೆಲೆ ಸಂಗೀತ ಕೈ ಕೊಟ್ಟರೆ, ಇಡೀ ಚಿತ್ರವೇ ದಾರಿ ತಪ್ಪುವ ಭೀತಿ ಇರುತ್ತೆ. ಹೀಗಾಗಿಯೇ ಈ ಚಿತ್ರಕ್ಕೆ ಸತತ 35 ದಿನ ಬ್ಯಾಕ್‍ಗ್ರೌಂಡ್ ಮ್ಯೂಸಿಕ್‍ಗಾಗಿಯೇ ಕೆಲಸ ಮಾಡಿದೆ ಈ ಟೀಂ.

    ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಅವರಿಗಂತೂ ಇದೊಂದು ಮರೆಯಲಾಗದ ಅನುಭವ. ಪ್ರತಿ ದೃಶ್ಯಕ್ಕೂ ಸರಿಯಾದ ಬಿಟ್ಸ್ ಕೂಡಿಸುವ ಕೆಲಸ ಸುಲಭದ್ದಾಗಿರಲಿಲ್ಲ ಎಂದಿದ್ದಾರೆ ಶ್ರೀಧರ್. ಸೆಕೆಂಡು ಸೆಕೆಂಡುಗಳಲ್ಲಿ ಚಿತ್ರದ ಮೂಡ್ ಬದಲಾಗುತ್ತೆ. ಅದಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತವೂ ಬದಲಾಗಬೇಕು. ಅದು ಸಹಜವಾಗಿ ಕೇಳಿಸಬೇಕು. ಯಾವುದೇ ಸಂಗೀತ ನಿರ್ದೇಶಕನಿಗೆ ಅದೊಂದು ದೊಡ್ಡ ಸವಾಲು ಎನ್ನುವುದು ಶ್ರೀಧರ್ ಅವರ ಆಭಿಪ್ರಾಯ.

    ಅರೂ ಗೌಡ, ಕಾವ್ಯಾಶೆಟ್ಟಿ ನಾಯಕ-ನಾಯಕಿಯರಾಗಿದ್ದರೆ, ದೇವರಾಜ್,ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಡಕಲ್ಲು ಗುಡ್ಡದ ಚಂದ್ರಶೇಖರ್, ಯಮುನಾ, ಮೇಘನಾ, ಜಯಲಕ್ಷ್ಮೀ ಪಾಟೀಲ್, ಸುಂದರ್ ಮೊದಲಾದವರು ನಟಿಸಿರುವ ಚಿತ್ರದಲ್ಲಿ ಸಂಗೀತದ ಪಾತ್ರ ದೊಡ್ಡದು ಎಂದು ಖುಷಿಪಟ್ಟಿದ್ದಾರೆ ಅರೂಗೌಡ.

     

  • 30 ಸೆಕೆಂಡ್‍ಗೆ ಇನ್ನು ಮೂರು ದಿನ..!

    countdown begins for 3 gante

    3 ಗಂಟೆ 30 ದಿನ 30 ಸೆಕೆಂಡ್. ವಿಭಿನ್ನ ಟೈಟಲ್‍ನಿಂದ ಗಮನ ಸೆಳೆದಿರುವ ಈ ಸಿನಿಮಾ ಈ ವಾರವೇ ತೆರೆಗೆ ಬರುತ್ತಿದೆ. ಯಾವುದೇ ಫಾರ್ಮುಲಾ, ಟ್ರೆಂಡ್‍ನ ಹಿಂದೆ ಬೀಳದೆ ವಿಭಿನ್ನವಾಗಿ ಮಾಡಿರುವ ಸಿನಿಮಾ ನಮ್ಮದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ ನಿರ್ದೇಶಕ ಮಧುಸೂದನ್.

    ಚಿತ್ರದ ಕಥೆಯೇನು ಎಂದರೆ ಅದೊಂದು ಟಾಸ್ಕ್ ಅಂತಾರೆ ಡೈರೆಕ್ಟರ್. ಮೊದಲು ಅದು 30 ಗಂಟೆಗಳ ಟಾಸ್ಕ್. ನಂತರ 30 ದಿನಗಳ ಸೀರಿಯಸ್ ಚಾಲೆಂಜ್ ಆಗುತ್ತೆ. ಕೊನೆಗೆ 30 ಸೆಕೆಂಡ್‍ನಲ್ಲಿ ಟ್ವಿಸ್ಟ್ ಇಡೀ ಚಿತ್ರವನ್ನೇ ಬದಲಾಯಿಸುತ್ತೆ. ಈ ಕಾರಣಕ್ಕಾಗಿ 3 ಗಂಟೆ, 30 ದಿನ, 30 ಸೆಕೆಂಡ್ ಅನ್ನೋ ಟೈಟಲ್ ಚಿತ್ರಕ್ಕೆ ಹೇಳಿ ಮಾಡಿಸಿದಂತಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ ನಿರ್ಮಾಪಕ ಮಧುಸೂದನ್.

     

  • Aru Back with 3 Hours 30 Days 30 Seconds

    aru gowda image

    Though his debut film Muddu Manase got him some recognition, it didn't get him much offers except Naati Koli. However, the film was shelved due to various reasons. Now the actor is back with a new film called '3 Hours 30 Days 30 Seconds'. 3 Hours 30 Days 30 Seconds' is a thriller film being written and directed by Madhusudhan. Chandrashekhar R Padmashali is the producer of the film.

    30seconds_30minutes.jpg

    The film was launched recently and actor Murali came and sounded the clap for the first shot of the film. Aru plays a lawyer in his second film, while Kavya Shetty is the heroine. Sridhar R Sambhram is composing the music for the film

  • Aru Gowda joins the list of baddies in 'Yuvaratna'

    aru gowda joins yuvaratna

    The shooting for Puneeth Rajakumar starrer 'Yuvaratna' is in full zoom and the latest to join the bandwagon is none other than actor Aru Gowda. Arun will be seen in a negative role in this film.

    Aru Gowda himself has confirmed that he is acting in the film and has shared a picture with Puneeth and director Santhosh Anandaram. As of now John Kokken and Dhananjay has been roped into play negative characters in the film. Aru has joined the list of baddies in the film.

    'Yuvaratna' is being scripted and directed by Santhosh Anandaram and produced by Vijay Kiragandoor under Hombale Films. Sayesh Sehgal is the heroine. V Harikrishna is the music composer of the film, while Venkatesh Anguraj is behind the camera.

  • Ghouse Peer's Next Film is Bhagna Premigala Sanga

    bhagna premigala sanga image

    Lyricist turned director Ghouse Peer is looking for his directorial debut 'Sharp Shooter' to release. Meanwhile, Ghouse Peer has silently started work for his second film which is titled as 'Bhagna Premigala Sangha'.

    Ghouse Peer himself has written the story and screenplay of 'Bhagna Premigala Sangha' apart from directing it. Raghavendra Bunty, M S Srikanth and M S Shashikanth is producing the film.

    Aru Gowda who had earlier acted in 'Muddu Manase' has been roped in to play the hero of the film along with Chikkanna. The heroine is yet to be finalised. Naveen kumar is the cinematographer, while Elwin Joshua is the music director of the film.

  • ಓಲ್ಡ್ ಈಸ್ ಗೋಲ್ಡ್ ತಾರೆಯರೆಲ್ಲ 30 ಸೆಕೆಂಡ್‍ನಲ್ಲಿ..

    30 seconds special stars

    30 ಗಂಟೆ 30 ದಿನ 30 ಸೆಕೆಂಡು.. ಕೇವಲ ಟೈಟಲ್‍ನಿಂದಷ್ಟೇ ಅಲ್ಲ, ವಿಭಿನ್ನ ಕಥಾ ಹಂದರವೂ ಕುತೂಹಲ ಕೆರಳಿಸುತ್ತಿದೆ. ಸ್ಪೆಷಲ್‍ಗಳ ಮೂಟೆಯನ್ನೇ ಹೊತ್ತು ತರುತ್ತಿರುವ ಚಿತ್ರದಲ್ಲಿ 80, 90ರ ದಶಕದ ಹಲವು ತಾರೆಯರು ಒಟ್ಟಿಗೇ ಸೇರಿರುವುದು ಇನ್ನೊಂದು ವಿಶೇಷ.

    ನಾಯಕ ಅರೂ ಗೌಡ, ನಾಯಕಿ ಕಾವ್ಯಾ ಶೆಟ್ಟಿ. ಇಬ್ಬರ ಚಾಲೆಂಜ್‍ನಿಂದ ಶುರುವಾಗುವ ಕಥೆಯಲ್ಲಿ ಎಡಕಲ್ಲು ಗುಡ್ಡದ ಚಂದ್ರಶೇಖರ್, ನಾಯಕಿಯ ತಂದೆಯ ಪಾತ್ರದಲ್ಲಿದ್ದಾರೆ. ಮಗಳ ಮೇಲಿನ ಮಮಕಾರದಿಂದ ಎಲ್ಲ ಅಪಾಯಗಳನ್ನೂ ಮೈಮೇಲೆ ಎಳೆದುಕೊಳ್ಳುವ ಅಪ್ಪನ ಪಾತ್ರ ಚಂದ್ರಶೇಖರ್ ಅವರದ್ದು.

    ಮುಕ್ತಮುಕ್ತ ಖ್ಯಾತಿಯ ಜಯಲಕ್ಷ್ಮಿ ಅವರದ್ದು ತ್ಯಾಗಮಯಿ ಪಾತ್ರದಲ್ಲಿದ್ದರೆ, ನಟಿ ಯಮುನಾ ನಾಯಕನ ತಾಯಿಯ ಪಾತ್ರದಲ್ಲಿದ್ದಾರೆ. ಮಗನ ಒಳಿತಿಗಾಗಿ ಸದಾ ಪರಿತಪಿಸುವ ಹೆಂಗರುಳಿನ ಪಾತ್ರ ಯಮುನಾ ಅವರದ್ದು. ಇನ್ನು ಸುಂದರ್ ಅವರದ್ದು ನಾಯಕನ ತಂದೆಯ ಪಾತ್ರ. 

    ಇನ್ನು ಇಡೀ ಚಿತ್ರದಲ್ಲಿನ ಅತಿ ದೊಡ್ಡ ಅಟ್ರ್ಯಾಕ್ಷನ್ ದೇವರಾಜ್-ಸುಧಾರಾಣಿ. ದೇವರಾಜ್ ಕಣ್ಣು ಕಾಣಿಸದ, ಕಿವಿ ಕೇಳಿಸದ, ಮಾತೂ ಬಾರದ ನಿವೃತ್ತ ಮಿಲಿಟರಿ ಆಫೀಸರ್ ಪಾತ್ರದಲ್ಲಿದ್ದರೆ, ಸುಧಾರಾಣಿ ದೇವರಾಜ್‍ಗೆ ಜೋಡಿಯಾಗಿದ್ದಾರೆ. ಆಕೆ ದೇವರಾಜ್‍ಗೆ ಟೀಚರ್ ಕೂಡಾ ಹೌದು.

    30 ಸೆಕೆಂಡ್‍ನ ವಿಶೇಷಗಳು ಇನ್ನೂ ಹಲವಾರಿವೆ. ವಿಶೇಷಗಳನ್ನೆಲ್ಲ ಜನವರಿ 19ರ ಥಿಯೇಟರುಗಳಲ್ಲಿ ಕಣ್ತುಂಬಿಕೊಳ್ಳಬಹುದು.

  • ಲಾಯರ್ ಮತ್ತು ನ್ಯೂಸ್ ಆ್ಯಂಕರ್ ಮಧ್ಯೆ ಚಾಲೆಂಜ್..!

    lawyer vs new anchor

    ಅವನು ಲಾಯರ್.. ಯಂಡಮೂರಿ ವೀರೇಂದ್ರನಾಥ್ ಅವರ ಕಾದಂಬರಿಯೊಂದರಲ್ಲಿನ ಪಾತ್ರದಂತೆ ಎಂಕೆಲಾ. ಅಂದರೆ, ಮರದ ಕೆಳಗಿನ ಲಾಯರು. ಇವಳು ನ್ಯೂಸ್ ಆ್ಯಂಕರ್.. ಹಾಗಂತ ಇಬ್ಬರ ಮಧ್ಯೆ ಪ್ರೀತಿಯಾಗುತ್ತಾ..? ಇಲ್ಲ. ಬದಲಿಗೆ ಜಗಳವಾಗುತ್ತೆ. 

    ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದನ್ನೇ ಕೆಲಸ ಮಾಡಿಕೊಂಡಿರುವ ವಕೀಲ, ಕೇಸ್ ಗೆಲ್ಲೋಕೆ ಬುದ್ದಿಮತ್ತೆ, ಚಾಕಚಕ್ಯತೆಯ ತಂತ್ರ ರೂಪಿಸೋ ತಂತ್ರಗಾರ. ಅವನಿಗೆ ಸವಾಲು ಹಾಕುವ ನಾಯಕಿ, ಕಿರಿಯಳಾದರೂ ಪ್ರಬುದ್ಧೆ. ಶಿಸ್ತು, ಗಾಂಭೀರ್ಯಕ್ಕೆ ಇನ್ನೊಂದು ಹೆಸರು.

    ಅವರಿಬ್ಬರ ಮಧ್ಯೆ ಒಂದು ಚಾಲೆಂಜ್ ಬೀಳುತ್ತೆ. ಗೆಲ್ಲಲೇಬೇಕು ಎಂದು ಇಬ್ಬರೂ ಹೊರಡುತ್ತಾರೆ. ಆ ಚಾಲೆಂಜ್ ಗೆಲ್ಲುವ ಹಾದಿಯಲ್ಲಿ ಅವರಿಬ್ಬರೂ ಬದಲಾಗುತ್ತಾರೆ. ಏಕೆ..? ಹೇಗೆ..? 

    ಎಲ್ಲವನ್ನೂ ನಾವೇ ಹೇಳಿಬಿಟ್ಟರೆ.. ಜನವರಿ 19ಕ್ಕೆ 3 ಗಂಟೆ, 30 ದಿನ 30 ಸೆಕೆಂಡ್ ನೋಡಿ. ಜನವರಿ 19ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾದಲ್ಲಿ ಖುಷಿ, ಸಂಭ್ರಮ, ಪ್ರೇಮ, ತಲ್ಲಣ.. ಎಲ್ಲವೂ ಇದೆ. 

    ಮಧುಸೂದನ್ ನಿರ್ದೇಶನದ ಚಿತ್ರದಲ್ಲಿ ಅರುಣ್ ಗೌಡ, ಕಾವ್ಯಾಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ. ದೇವರಾಜ್, ಸುಧಾರಾಣಿ ನಾಯಕ,ನಾಯಕಿಯರಷ್ಠೇ ಪ್ರಮುಖ ರೋಲ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ.

  • ಲಾಯರ್.. ಲವ್ವರ್.. 30 ಸೆಕೆಂಡ್.. ಥ್ರಿಲ್ಲರ್..!

    30 seconds thriller

    ಟೈಟಲ್‍ನಿಂದಾಗಿಯೇ ಕನ್ನಡ ಚಿತ್ರರಸಿಕರಲ್ಲಿ ನಿರೀಕ್ಷೆ ಮೂಡಿಸಿರುವ ಚಿತ್ರ 3 ಗಂಟೆ 30 ದಿನ 30 ಸೆಕೆಂಡು. 3 ಗಂಟೆ 30 ದಿನ 30 ಸೆಕೆಂಡುಗಳಲ್ಲಿಯೇ ನಡೆಯುವ ಕಥೆಯೇ ಈ ಸಿನಿಮಾ. ಚಿತ್ರದಲ್ಲಿ ಯೋಧನ ಕಥೆ, ಪ್ರೀತಿಯ ಕಥೆ, ರಿಯಾಲಿಟಿ ಶೋ.. ಎಲ್ಲವೂ ಇದೆ.

    ಚಿತ್ರದ ಹೀರೋ ಆರೂ ಗೌಡ. ಲಾಯರ್ ಪಾತ್ರದಲ್ಲಿ ನಟಿಸಿರುವ ಆರೂಗೌಡ, ಚಿತ್ರದಲ್ಲಿ ಲವ್ವರ್ ಬಾಯ್ ಕೂಡಾ ಹೌದು. ಕೋರ್ಟ್‍ಗೆ ಹೋಗದೆ, ಕೋರ್ಟ್‍ನ ಹೊರಗೇ ಡೀಲ್ ಮಾಡಿಸುವ ಡೀಲ್ ಮಾಸ್ಟರ್ ಪಾತ್ರ ಮಾಡುತ್ತಿರುವ ಆರೂಗೌಡ, ಅದರಿಂದಾಗಿಯೇ ಒಂದು ವಿಚಿತ್ರ ಸಮಸ್ಯೆಗೆ ಸಿಕ್ಕಬಿಡ್ತಾನೆ. ಅದರಿಂದ ಹೊರಬರಲು ಆತ ನಡೆಸುವ ಸಾಹಸವೇ ಚಿತ್ರದ ಕಥೆ.

    ದೇವರಾಜ್, ಸುಧಾರಾಣಿಯಂತಹವರ ಜೊತೆ ನಟಿಸುವ ಸಲುವಾಗಿ ಭಾರಿ ತಯಾರಿ ಮಾಡಿಕೊಂಡೆ ಎಂದು ಹೆಳಿಕೊಳ್ಳುವ ಆರೂಗೌಡ ಅವರಿಗೆ ಚಿತ್ರ ವಿಭಿನ್ನ ಅನುಭವ ನೀಡಿದೆ. ಜಿ.ಕೆ. ಮಧೂಸೂದನ್ ಕಥೆ ಹೇಳುವ ಶೈಲಿಯೇ ಡಿಫರೆಂಟ್ ಎನ್ನವ ಆರೂಗೌಡ, ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

     

     

  • ಹೀರೋಯಿನ್ ಕಾವ್ಯಾಶೆಟ್ಟಿ, ಜರ್ನಲಿಸ್ಟ್ ಬನ್‍ಗಯಾ

    3 gante 30 dina 30 seconds movie image

    ಕಾವ್ಯಾಶೆಟ್ಟಿ. ಇಷ್ಟಕಾಮ್ಯ, ಸ್ಮೈಲ್ ಪ್ಲೀಸ್, ಸಿಲಿಕಾನ್ ಸಿಟಿ ಚಿತ್ರಗಳಲ್ಲಿ ನಟಿಸಿದ್ದ ಸುಂದರಿ. ಇಗ ಅವರ ಎರಡು ಚಿತ್ರಗಳು ರಿಲೀಸ್‍ಗೆ ರೆಡಿಯಾಗಿವೆ. ಎರಡೂ ಚಿತ್ರಗಳಲ್ಲಿ ಕಾವ್ಯಾಶೆಟ್ಟಿ ಅವರದ್ದು ಪತ್ರಕರ್ತೆಯ ಪಾತ್ರ ಎನ್ನುವುದು ವಿಶೇಷ.

    ಜನವರಿ 19ಕ್ಕೆ 3 ಗಂಟೆ, 30 ದಿನ, 30 ಸೆಕೆಂಡ್ ರಿಲೀಸ್ ಆಗುತ್ತಿದೆ. ಆ ಚಿತ್ರದಲ್ಲಿ ಕಾವ್ಯಾಶೆಟ್ಟಿಯವರದ್ದು ಟಿವಿ ಚಾನಲ್ ಮಾಲಕಿಯ ಪಾತ್ರ. 30 ಸೆಕೆಂಡ್ ಚಿತ್ರದ ನಿರ್ದೇಶಕ ಮಧುಸೂದನ್ ಅವರಿಗೆ ಸಿನಿಮಾ ಹೊಸದೇ ಹೊರತು, ನಿರ್ದೇಶನ ಹೊಸದಲ್ಲ. ಹೀಗಾಗಿ ಪ್ರತಿಯೊಂದನ್ನೂ ಪ್ಲಾನ್ ಮಾಡಿಕೊಂಡೇ ಮಾಡಿದ್ದರು ಎಂದು ಅನುಭವ ಹಂಚಿಕೊಂಡಿದ್ದಾರೆ ನಟಿ ಕಾವ್ಯಾಶೆಟ್ಟಿ.

    ಆ್ಯಂಕರ್ ಆಗಿದ್ದರೂ, ಸಿನಿಮಾದಲ್ಲಿ ಕಾವ್ಯಾ ಶೆಟ್ಟಿ ತುಂಬಾ ಹೊತ್ತು ಪತ್ರಕರ್ತೆಯಾಗಿಯೇ ಇರೋದಿಲ್ಲ. ಪ್ರೀತಿ, ಪ್ರೇಮದಲ್ಲಿ ಮುಳುಗ್ತಾರೆ. ಚಾಲೆಂಜ್‍ಗಳನ್ನು ಹಾಕುತ್ತಾ, ಗೆಲ್ಲುತ್ತಾ, ಸೋಲುತ್ತಾ ಹೋಗುವ ವಿಭಿನ್ನ ಪಾತ್ರ ಅದು. ಸಿನಿಮಾ ಅಂತೂ ಬಿಡುಗಡೆಗೆ ಮೊದಲೇ ವಿಚಿತ್ರ ಕುತೂಹಲ ಸೃಷ್ಟಿಸಿದೆ. ಉತ್ತರ ಸಿಗೋದು ಮುಂದಿನ ವಾರ.

  • ಹೊಸ ನ್ಯೂಸ್ ಚಾನೆಲ್ ಹಂಸ.. ರೆಡಿನಾ..?

    3 gante 30 minutes 30 seconds movie image

    ಹಂಸ ಟಿವಿ ಚಾನೆಲ್. ಇದು ಕನ್ನಡಕ್ಕೆ ಬರುತ್ತಿರುವ ಹೊಸ ನ್ಯೂಸ್ ಚಾನೆಲ್. ಸಂಪಾದಕರು ಯಾರು..? ಆಫೀಸ್ ಎಲ್ಲಿದೆ..? ಮಾಲೀಕರು ಯಾರು..? ಇಂಥ ಪ್ರಶ್ನೆಗಳೆಲ್ಲ ಬ್ರೇಕಿಂಗ್ ನ್ಯೂಸ್‍ನಂತೆ ತಲೆಯೊಳಗೆ ಮೂಡಿದ್ರೆ, ಅದಕ್ಕೆನಾವು ಜವಾಬ್ದಾರರಲ್ಲ. 

    ಈ ಹಂಸ ಚಾನೆಲ್ ಬರ್ತಿರೋದು 3 ಗಂಟೆ, 30 ದಿನ, 30 ಸೆಕೆಂಡ್ ಸಿನಿಮಾದಲ್ಲಿ. ಆ ಸಿನಿಮಾದಲ್ಲಿ ನಾಯಕಿ ಹಂಸ ಟಿವಿ ಚಾನೆಲ್ ಮಾಲಕಿ. ಟಿವಿ ಚಾನೆಲ್ ಓನರ್ ಮಗಳಾಗಿ ನಟಿಸಿರುವ ಕಾವ್ಯಾ ಶೆಟ್ಟಿ, ಲೇಡಿ ಅರ್ನಾಬ್ ಗೋಸ್ವಾಮಿ ಎಂದೇ ಫೇಮಸ್ ಆಗಿರ್ತಾರೆ. ಆಕೆ ಒಂದು ಶೋ ನಡೆಸಿಕೊಟ್ಟರೆ, ಮಿನಿಮಮ್ ಇಬ್ಬರು ರಾಜಕಾರಣಿಗಳು ರಾಜೀನಾಮೆ ಕೊಡುವ ಪರಿಸ್ಥಿತಿ ನಿರ್ಮಾಣ ಆಗಿರುತ್ತೆ.

    ಇಂಥಾ ಸ್ಥಾನದಲ್ಲಿರುವ ನಾಯಕಿಗೆ ಲಾಯರ್ ಪಾತ್ರಧಾರಿ ನಾಯಕ ಚಾಲೆಂಜ್ ಹಾಕ್ತಾನೆ. ಚಿತ್ರಕ್ಕೆ ಟರ್ನಿಂಗ್ ಸಿಕ್ಕಿಬಿಡುತ್ತೆ. ಅನಂತರದ್ದು ಲವ್, ಥ್ರಿಲ್ಲರ್, ಸಸ್ಪೆನ್ಸ್ ಸ್ಟೋರಿ. ಜನವರಿ 19ಕ್ಕೆ ರೆಡಿಯಾಗಿ.