` shanvi srivatsav, - chitraloka.com | Kannada Movie News, Reviews | Image

shanvi srivatsav,

  • ಗೀತಾ ಹೆಸರೊಂದೇ ಅಲ್ಲ.. ಹೀರೋನಲ್ಲೂ ಶಂಕರ್ ನೆನಪು..!

    link between ganesh and shankaer nag in geetha

    ಗೀತಾ ಸೆ.26ರಂದು ರಿಲೀಸ್ ಆಗುತ್ತಿರುವ ಚಿತ್ರ. ಗೀತಾ, ಕನ್ನಡ ಚಿತ್ರರಂಗದ ಕ್ಲಾಸಿಕ್‍ಗಳಲ್ಲಿ ಒಂದು. ಶಂಕರ್‍ನಾಗ್ ನಟಿಸಿ ನಿರ್ದೇಶಿಸಿದ್ದ ಚಿತ್ರವದು. ಇಂದಿಗೂ ಆ ಚಿತ್ರ, ಕಥೆ, ಹಾಡು ಪ್ರೇಕ್ಷಕರ ಮನಸ್ಸಿನಲ್ಲಿ ಅಮರವಾಗಿರುವಾಗ ಅದೇ ಹೆಸರಿನ ಚಿತ್ರದಲ್ಲಿ ಗಣೇಶ್ ಅಭಿನಯಿಸಿದ್ದು ಸಹಜವಾಗಿಯೇ ಶಂಕರ್ ನಾಗ್ ನೆನಪು ತರಿಸಿತ್ತು.

    ಆ ಗೀತಾ ಚಿತ್ರದಲ್ಲಿ ಶಂಕರ್ ನಾಗ್ ಹೆಸರು ಸಂಜಯ್. ಆದರೆ, ಈ ಗೀತಾ ಚಿತ್ರದಲ್ಲಿ ಹೀರೋ ಗಣೇಶ್ ಹೆಸರೇ ಶಂಕರ್. ಆ ಮೂಲಕ ಶಂಕರ್ ಆಗಿ ನಟಿಸಿರುವ ಗಣೇಶ್, ಶಂಕರ್ ನಾಗ್‍ರನ್ನು ಆ ಮೂಲಕ ನೆನಪಿಸಿಕೊಂಡಿದ್ದಾರೆ. ವಿಜಯ್ ನಾಗೇಂದ್ರ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ಗೋಕಾಕ್ ಚಳವಳಿಯ ಕಥೆಯೂ ಇದೆ.

    ಇನ್ನೂ ಒಂದು ವಿಶೇಷವೆಂದರೆ ಗೋಕಾಕ್ ಚಳವಳಿಯ ನೇತೃತ್ವ ವಹಿಸಿದ್ದವರು ಡಾ.ರಾಜ್. ಆಗಿನ ಕಾಲದ ದೃಶ್ಯಗಳೂ ಇವೆ. ಡಾ.ರಾಜ್ ಅವರಷ್ಟೇ ಅಲ್ಲ, ಶಂಕರ್ ನಾಗ್ ಸೇರಿದಂತೆ ಆಗಿನ ಎಲ್ಲ ಸ್ಟಾರ್‍ಗಳೂ ಚಳವಳಿಯಲ್ಲಿ ನಟಿಸಿದ್ದರು.

    ಮತ್ತೊಂದು ವಿಶೇಷ, ಶಂಕರ್‍ನಾಗ್‍ರ ಗೀತಾ ಚಿತ್ರಕ್ಕೆ ಅರುಂಧತಿ ನಾಗ್ ಜೊತೆಯಾಗಿದ್ದರು. ಚಿತ್ರಕಥೆಯಲ್ಲಿ ಅರುಂಧತಿ ನಾಗ್ ಕೆಲಸ ಮಾಡಿದ್ದರು. ಗಣೇಶ್‍ರ ಈ ಗೀತಾ ಚಿತ್ರಕ್ಕೆ ಗಣೇಶ್ ಅವರ ಪತ್ನಿ ಶಿಲ್ಪಾ ಕೆಲಸ ಮಾಡಿದ್ದಾರೆ. ನಿರ್ಮಾಪಕಿಯಾಗಿ.

  • ಗೀತಾ'ದಲ್ಲಿ ಅಣ್ಣಾವ್ರ ಜೊತೆ ನಟಿಸಿದ ಥ್ರಿಲ್ ಇದೆ - ಗಣೇಶ್

    ganesh shares screen with dr raj in geetha

    ಗೀತಾ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಅಣ್ಣಾವ್ರ ಜೊತೆ ನಟಿಸಿದ್ದಾರೆ. ಡಾ.ರಾಜ್ ಕುಮಾರ್ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದೇ ನನ್ನ ಜೀವನದ ಅದ್ಭುತ ಥ್ರಿಲ್ ಎಂದಿದ್ದಾರೆ ಗಣೇಶ್. ಅರೆ.. ಇದು ಹೇಗೆ ಸಾಧ್ಯ.. ಎಂದು ಹುಬ್ಬೇರಿಸಬೇಡಿ. ಎಲ್ಲವೂ ಗ್ರಾಫಿಕ್ಸ್ ಮಹಾತ್ಮೆ.

    ಇಡೀ ಚಿತ್ರ ಗೋಕಾಕ್ ಚಳವಳಿಯ ಕಾಲದ ಕಥೆ. ಸಿನಿಮಾದಲ್ಲಿ ಗಣೇಶ್ ನಟಿಸಿರುವ ಶಂಕರ್ ಎನ್ನುವ ಪಾತ್ರ, ಕಾರ್ಮಿಕರ ನಾಯಕನದ್ದು. ಆತ ಗೋಕಾಕ್ ಚಳವಳಿಗೆ ಧುಮುಕುತ್ತಾನೆ. ಅಣ್ಣಾವ್ರ ಜೊತೆ ಹೋರಾಟಕ್ಕಿಳಿಯುತ್ತಾನೆ.

    `ಚಿತ್ರಕ್ಕಾಗಿ ಹಳೆಯ ಫುಟೇಜ್‍ಗಳನ್ನು ಮರುಸೃಷ್ಟಿಸಲಾಯ್ತು. ಸಿಜೆ ವರ್ಕ್‍ನಲ್ಲಿ ಡಾ.ರಾಜ್ ಜೊತೆ ನಾನು ಬರುವ ದೃಶ್ಯಗಳನ್ನು ಸೇರಿಸಲಾಯ್ತು. ಆ ಲೆಕ್ಕದಲ್ಲಿ ನಾನು ಅಣ್ಣಾವ್ರ ಜೊತೆ ಸೀನ್ ಹಂಚಿಕೊಂಡಿದ್ದೇನೆ. ಆ ದೃಶ್ಯವನ್ನು ಸಿಜೆನಲ್ಲಿ ನೋಡುತ್ತಿದ್ದಂತೆಯೇ ಥ್ರಿಲ್ ಆದೆ' ಎಂದಿದ್ದಾರೆ ಗಣೇಶ್.

    ಗಣೇಶ್ ಜೊತೆ ಶಾನ್ವಿ ಶ್ರೀವಾಸ್ತವ್, ಪ್ರಯಾಗ ಮಾರ್ಟಿನ್, ಪಾರ್ವತಿ ಅರುಣ್, ಸುಧಾರಾಣಿ ನಟಿಸಿದ್ದಾರೆ. ವಿಜಯ್ ನಾಗೇಂದ್ರ ಚಿತ್ರದ ನಿರ್ದೇಶಕ.

     

  • ಗೋಕಾಕ್ ಚಳವಳಿಯಲ್ಲಿ ಕಣ್ಣೀರಿಟ್ಟಿದ್ದರು ಡಾ.ರಾಜ್. ಇಂದು..?

    gokak movement and dr rajkumar emotions in geetha movie

    ಡಾ.ರಾಜ್ ಕುಮಾರ್, ಕನ್ನಡದ ಧ್ರುವತಾರೆ. ಕನ್ನಡವನ್ನು, ಕನ್ನಡತನವನ್ನು ಎತ್ತಿ ಹಿಡಿದ ಕಲಾವಿದ. ಇಂತಹ ಡಾ.ರಾಜ್, ಗೋಕಾಕ್ ಚಳವಳಿಯ ಕಾಲದಲ್ಲಿ ವೇದಿಕೆಯಲ್ಲೇ ಕಣ್ಣೀರಿಟ್ಟಿದ್ದರು. ಅವರ ಕಣ್ಣಿರಿಗೆ ಕಾರಣವೂ ಇತ್ತು.

    `ಕರ್ನಾಟಕದಲ್ಲಿ ಕನ್ನಡಿಗರು, ಕನ್ನಡಿಗರಾದ ನಾವೇ.. ಕನ್ನಡವನ್ನು ಉಳಿಸಿ ಎಂದು ಕನ್ನಡಿಗರನ್ನೇ ಕೇಳಬೇಕಾದ ಪರಿಸ್ಥಿತಿ ಬಂದಿದೆ. ಅಧಿಕಾರದಲ್ಲಿರುವುವವರು ಕನ್ನಡಿಗರೇ ಆದರೂ ಬಾಯಿಬಡಿದುಕೊಂದು ಕೇಳಬೇಕಾದ ಪರಿಸ್ಥಿತಿ ಬರಬಾರದಿತ್ತು' ಎಂದು ಚಳವಳಿಯಲ್ಲಿ ಬಹಿರಂಗ ವೇದಿಕೆಯಲ್ಲಿ ಕಣ್ಣೀರಿಟ್ಟಿದ್ದರು ರಾಜ್.

    ಅದೆಲ್ಲವನ್ನೂ ಗೀತಾ ಚಿತ್ರದಲ್ಲಿ ಪರಿಣಾಮಕಾರಿಯಾಗಿಯೇ ಬಳಸಿಕೊಳ್ಳಲಾಗಿದೆ. 1982ರಲ್ಲಿ ಕನ್ನಡ, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದು ಕೂಗೆದ್ದಿತ್ತು. ಈಗಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಆಗಲೂ ಕನ್ನಡ ವಿರೋಧಿ ಮನಸ್ಸುಗಳು ಕರ್ನಾಟಕದಲ್ಲಿದ್ದವು. ಈಗಲೂ ಇವೆ. ಹೀಗಾಗಿಯೇ ಗೀತಾ ಚಿತ್ರ ಅತ್ಯಂತ ಪ್ರಸ್ತುತವೆನ್ನಿಸುವುದು.

    ವಿಜಯ್ ನಾಗೇಂದ್ರ ನಿರ್ದೇಶನದಲ್ಲಿ ಗೋಕಾಕ್ ಚಳವಳಿಯ ಹಿನ್ನೆಲೆಯನ್ನು ಚೆಂದವಾಗಿ ಕಟ್ಟಿಕೊಡಲಾಗಿದೆ. ಸಿನಿಮಾ ಥಿಯೇಟರುಗಳಲ್ಲಿದೆ. 

  • ಗ್ಯಾಂಗ್'ಸ್ಟರ್ ಶಾನ್ವಿ

    ಗ್ಯಾಂಗ್'ಸ್ಟರ್ ಶಾನ್ವಿ

    ಶಾನ್ವಿ ಶ್ರೀವಾತ್ಸವ್, ದೆವ್ವದ ಪಾತ್ರದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ನಂತರ ಬಬ್ಲಿ ಬಬ್ಲಿ, ಹೋಮ್ಲಿ ಪಾತ್ರಗಳಲ್ಲಿ ಮಿಂಚಿದ ಹುಡುಗಿ ಶಾನ್ವಿ, ಈಗ ಗ್ಯಾಂಗ್ ಸ್ಟರ್ ಆಗೋಕೆ ಹೊರಟಿದ್ದಾರೆ.

    ನಾನು ಅದು ಮತ್ತು ಸರೋಜ ಹಾಗೂ ಅನ ಚಿತ್ರಗಳನ್ನು ನಿರ್ಮಿಸಿದ್ದ ಪೂಜಾ ವಸಂತ್ ಕುಮಾರ್, ಬ್ಯಾಂಗ್ ಅನ್ನೋ ಚಿತ್ರಕ್ಕೆ ಕೈ ಹಾಕಿದ್ದಾರೆ. ಗಣೇಶ್ ಪರಶುರಾಮ್ ಎಂಬುವವರು ಈ ಚಿತ್ರಕ್ಕೆ ಡೈರೆಕ್ಟರ್. 2 ದಿನಗಳಲ್ಲಿ ನಡೆಯೋ ಕಥೆಯಲ್ಲಿ ಶಾನ್ವಿ ಶ್ರೀವಾತ್ಸವ್ ಜೊತೆ ಓಂಪ್ರಕಾಶ್ ರಾವ್ ಪುತ್ರಿ ಶ್ರಾವ್ಯ ಕೂಡಾ ಇದ್ದಾರೆ. ಫೆಬ್ರವರಿಯಲ್ಲಿ ರಿಲೀಸ್ ಆಗುವ ಪ್ಲಾನ್ ಹೊಂದಿರುವ ಸಿನಿಮಾ, ಈಗಾಗಲೇ ಅರ್ಧ ಶೂಟಿಂಗ್ ಮುಗಿಸಿದೆ.

  • ಗ್ಲೋಬಲ್ ವಿಮರ್ಶಕರ ಮನಗೆದ್ದ ಶ್ರೀಮನ್ನಾರಾಯಣ

    avavane srimananrayana attracts global audinece

    ಅವನೇ ಶ್ರೀಮನ್ನಾರಾಯಣ ಟ್ರೇಲರ್ ಕೇವಲ ಬರೀ ಯೂಟ್ಯೂಬ್ ಹಿಟ್ಸ್ ಗಿಟ್ಟಿಸಿಲ್ಲ. ಅಭಿಮಾನಿಗಳ ಹೃದಯ ತಣಿಸಿಲ್ಲ. ಅದೆಲ್ಲವನ್ನೂ ಮೀರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ ಅವನೇ ಶ್ರೀಮನ್ನಾರಾಯಣ.

    ಎಎಸ್‌ಎನ್ ಟ್ರೇಲರ್‌ನಲ್ಲಿ ರಕ್ಷಿತ್ ಶೆಟ್ಟಿ ಡೈಲಾಗ್, ನೆರಳು ಬೆಳಕಿನ ಆಟದ ಜೊತೆಗೆ ಇಡೀ ಟ್ರೇಲರ್‌ನ ಬಿಜಿಎಂ ಅರ್ಥಾತ್ ಹಿನ್ನೆಲೆ ಸಂಗೀತ ಮೆಚ್ಚುಗೆ ಪಡೆದಿದೆ. ಅಜನೀಶ್ ಲೋಕನಾಥ್ ಮತ್ತೊಮ್ಮೆ ತಮ್ಮ ಖದರು ತೋರಿಸಿದ್ದಾರೆ. ಎಡಿಟಿಂಗ್ ಕ್ಲಾಸ್ ಎನ್ನುತ್ತಿದ್ದಾರೆ ವಿಮರ್ಶಕರು. ಹಾಹಾಹಾ.. ಚಿತ್ರದ ಟ್ರೇಲರ್‌ಗೆ ಇಷ್ಟೆಲ್ಲ ಮೆಚ್ಚುಗೆ ಕೊಡುತ್ತಿರುವುದು ಗ್ಲೋಬಲ್ ವಿಮರ್ಶಕರು.

    ಯೂಟ್ಯೂಬ್‌ನಲ್ಲಿ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿಯಾದ ಕಾರಣ, ಸಹಜವಾಗಿಯೇ ಎಎಸ್‌ಎನ್ ಟ್ರೇಲರ್ ಗ್ಲೋಬಲ್ ವಿಮರ್ಶಕರ ಕಣ್ಣಿಗೆ ಬಿದ್ದಿದೆ. ಈ ವಿದೇಶಿ ಚಿತ್ರಗಳ ವಿಮರ್ಶಕರು ಅವನೇ ಶ್ರೀಮನ್ನಾರಾಯಣನ ಅವತಾರವನ್ನು ನೋಡಿ ಮೆಚ್ಚಿದ್ದಾರೆ. ಚಿತ್ರದ ಛಾಯಾಗ್ರಹಣ, ಮ್ಯೂಸಿಕ್, ಎಡಿಟಿಂಗ್..  ಎಲ್ಲದರ ಬಗ್ಗೆಯೂ ವಿಮರ್ಶೆ ಮಾಡಿದ್ದಾರೆ. ಎಎಸ್‌ಎನ್‌ಗೆ ಸಿಗುತ್ತಿರುವ ಈ ಪ್ರತಿಕ್ರಿಯೆ ನೋಡಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಹಜವಾಗಿಯೇ ಖುಷಿಯಾಗಿದ್ದಾರೆ.

  • ಡಿಜಿಟಲ್ ಮಾರ್ಕೆಟ್ಟಿನಲ್ಲಿ ಗೀತಾಗೆ ಬಂಪರ್

    ganesh's geeth gets good price at digital market

    ಗೋಲ್ಡನ್ ಸ್ಟಾರ್ ಗಣೇಶ್, ಶಾನ್ವಿ ಶ್ರೀವಾಸ್ತವ್ ಅಭಿನಯಿಸುತ್ತಿರುವ ಗೀತಾ ಸಿನಿಮಾ, ರಿಲೀಸ್ ಆಗುವುದಕ್ಕೂ ಮೊದಲೇ ಭರ್ಜರಿಯಾಗಿ ಸೇಲ್ ಆಗುತ್ತಿದೆ. ವಿಜಯ್ ನಾಗೇಂದ್ರ ಚೊಚ್ಚಲ ನಿರ್ದೇಶನದ ಗೀತಾ, ಟೈಟಲ್ ಕಾರಣದಿಂದಾಗಿಯೇ ದೊಡ್ಡ ನಿರೀಕ್ಷೆ ಮೂಡಿಸಿದೆ. 

    ಶಂಕರ್‍ನಾಗ್ ಅವರ ಕ್ಲಾಸಿಕ್ ಸಿನಿಮಾಗಳಲ್ಲಿ ಗೀತಾ ಕೂಡಾ ಒಂದು. ಅದೇ ಟೈಟಲ್ಲಿನಲ್ಲಿ ಮತ್ತೆ ಬರುತ್ತಿರುವ ಚಿತ್ರದಲ್ಲಿ ಗಣೇಶ್‍ಗೆ ಶಾನ್ವಿ ಒಬ್ಬರೇ ಅಲ್ಲ, ಇನ್ನೂ ಇಬ್ಬರು ನಾಯಕಿಯರಿದ್ದಾರೆ. ಪ್ರಯಾಗ ಮಾರ್ಟಿನ್, ಪಾರ್ವತಿ ಅರುಣ್ ಕೂಡಾ ನಾಯಕಿಯರು.

    ಈ ಚಿತ್ರ ಈಗ ಅಮೇಜಾನ್‍ಗೆ 2.75 ಕೋಟಿಗೆ ಸೇಲ್ ಆಗಿದೆಯಂತೆ. ಶೂಟಿಂಗ್ ಮುಗಿದು, ಪ್ರಥಮ ಪ್ರತಿ ಬರುವುದಕ್ಕೂ ಮೊದಲು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರುವುದು ಚಿತ್ರದ ನಿರ್ಮಾಪಕರ ಖುಷಿ ಹೆಚ್ಚಿಸಿದೆ. 

  • ಡಿಂಪಲ್ ಸ್ಥಾನಕ್ಕೆ ಶಾನ್ವಿ..!

    Shanvi Replaces Rachita Ram In 'Kasturi Mahal'

    ರಚಿತಾ ರಾಮ್ ಮೊದಲು ಒಪ್ಪಿಕೊಂಡು ನಂತರ ನೋ ಎಂದಿದ್ದ ಸಿನಿಮಾ ಕಸ್ತೂರಿ ಮಹಲ್. ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರ ಕಸ್ತೂರಿ ಮಹಲ್ ಚಿತ್ರಕ್ಕೆ ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

    ಇದು ದಿನೇಶ್ ಬಾಬು ಚಿತ್ರ. ಕಥೆಯೂ ಚೆನ್ನಾಗಿದೆ. ಅವರ ಚಿತ್ರಗಳಲ್ಲಿ ಪಾತ್ರಗಳಿಗೆ ಒಳ್ಳೆಯ ಸ್ಕೋಪ್ ಇರುತ್ತೆ. ದಿನೇಶ್ ಬಾಬು ಚಿತ್ರಗಳಲ್ಲಿ ಅವಕಾಶ ಸಿಗುವುದೇ ಹೆಮ್ಮೆಯ ವಿಷಯ. ಹೀಗಾಗಿ ಒಪ್ಪಿಕೊಂಡೆ ಎಂದಿದ್ದಾರೆ ಶಾನ್ವಿ.

    ಚಿತ್ರದಲ್ಲಿ 300 ವರ್ಷಗಳಷ್ಟು ಹಳೆಯ ಕಥೆ ಹೇಳುತ್ತಿದ್ದು, ಇಡೀ ಚಿತ್ರದ ಕಥೆ ನನ್ನ ಸುತ್ತವೇ ಸುತ್ತಲಿದೆ. ಎಕ್ಸೈಟಿಂಗ್ ಆಗಿದ್ದೇನೆ ಎಂದಿರೋ ಶಾನ್ವಿ, ಚಿತ್ರೀಕರಣಕ್ಕೆ ರೆಡಿಯಾಗುತ್ತಿದ್ದಾರೆ.

  • ತಾರಕ್ ಚಿತ್ರದ ಹೀರೋ ನಾನಲ್ಲ - ದರ್ಶನ್

    i am not tarak hero

    ತಾರಕ್, ದರ್ಶನ್ ಅಭಿನಯದ 49ನೇ ಚಿತ್ರ. ಚಿತ್ರದ ಹೀರೋ ಅವರೇ. ಹೀಗಿರುವಾಗ ಚಿತ್ರದ ಹೀರೋ ನಾನಲ್ಲ  ಎಂದು ದರ್ಶನ್ ಅವರೇ ಹೇಳಿದರೆ ಏನಪ್ಪಾ ಕಥೆ ಅಂತಾ ತಲೆಗೆ ಹುಳ ಬಿಟ್ಕೋಬೇಡಿ. ದರ್ಶನ್ ಪ್ರಕಾರ ಚಿತ್ರದ ಹೀರೋ ಡೈನಮಿಕ್ ಸ್ಟಾರ್ ದೇವರಾಜ್. 

    ತಾರಕ್ ಚಿತ್ರದ ಆಡಿಯೋ ಬಿಡುಗಡೆ ವೇಳೆ, ದೇವರಾಜ್ ಅವರ ಪ್ರೀತಿ ಮತ್ತು ಪಾತ್ರವನ್ನು ಪ್ರೀತಿಯಿಂದ ಮೆಚ್ಚಿಕೊಂಡ ದರ್ಶನ್, ದೇವರಾಜ್ ಅವರನ್ನು ಹೊಗಳಿದರು. ದೇವರಾಜ್ ತಮಗಿಂತ ಎತ್ತರದ ಸ್ಥಾನದಲ್ಲಿದ್ಧಾರೆ ಎಂದು ಹೇಳಿ ಪ್ರೀತಿಯಿಂದ ಧನ್ಯವಾದ ಅರ್ಪಿಸಿದರು ದರ್ಶನ್.

    ಚಿತ್ರದಲ್ಲಿ ದೇವರಾಜ್ ದರ್ಶನ್ ತಂದೆಯ ಪಾತ್ರ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ಫುಟ್​ಬಾಲ್ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಮಗೆ ಈ ಚಿತ್ರದಲ್ಲಿ ಹಳೆಯ ದರ್ಶನ್ ಸಿಕ್ಕೋದಿಲ್ಲ. ನಿರ್ದೇಶಕ ಮಿಲನ ಪ್ರಕಾಶ್ ನಿರ್ದೇಶಿಸಿರುವ ನಟ ದರ್ಶನ್ ಅವರನ್ನಷ್ಟೇ ನೋಡಬಹುದು ಎನ್ನುವ ಮೂಲಕ ಚಿತ್ರದ ಬಗೆಗಿನ ಕುತೂಹಲವನ್ನೂ ಹೆಚ್ಚಿಸಿದ್ರು ದರ್ಶನ್.

  • ತಾರಕ್ ಡ್ಯಾನ್ಸ್ ಮಾಡಿ, ಬಹುಮಾನ ಗೆಲ್ಲಿ

    tarak dance competition

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ದರ್ಶನ್ ಅಭಿಮಾನಿಗಳಂತೂ ಕಾತುರದಿಂದ ಕಾಯುತ್ತಿದ್ದಾರೆ. ಆ ಕಾತುರಕ್ಕೆ ಕಿಚ್ಚು ಹಚ್ಚುವಂತೆ ವಿಶೇಷ ಅವಕಾಶವೊಂದನ್ನು ಒದಗಿಸಿದೆ ತಾಕರ್ ಚಿತ್ರತಂಡ.

    ತಾರಕ್ ಚಿತ್ರಗಳ ಹಾಡಿಗೆ ನೃತ್ಯ ಮಾಡುವುದು ಹಾಗೂ ಬಹುಮಾನ ಗೆಲ್ಲುವುದು. ಪ್ರಥಮ ಬಹುಮಾನ 25 ಸಾವಿರ, ದ್ವಿತೀಯ ಬಹುಮಾನ 10 ಸಾವಿರ ರೂ. ನೀವು ಮಾಡಬೇಕಾದ್ದು ಇಷ್ಟೆ..ತಾರಕ್ ಚಿತ್ರದ ಯಾವುದಾದರೂ ಹಾಡನ್ನು ಆಯ್ಕೆ ಮಾಡಿಕೊಳ್ಳಿ. ಆ ಹಾಡಿಗೆ ನಿಮ್ಮದೇ ಶೈಲಿಯಲ್ಲಿ ನೃತ್ಯ ಮಾಡಿ. ಅದನ್ನು ವಿಡಿಯೋ ಮಾಡಿ ಕಳುಹಿಸಿಕೊಡಿ. 

    ನಿಮ್ಮ ನೃತ್ಯದ ವಿಡಿಯೋಗಳನ್ನು  This email address is being protected from spambots. You need JavaScript enabled to view it.ಗೆ ಮೇಯ್ಲ್ ಮಾಡಿ. ವಿಡಿಯೋ ಕಳುಹಿಸಿಕೊಡಲು ಕೊನೆಯ ದಿನ ಸೆಪ್ಟೆಂಬರ್ 29.

  • ತಾರಕ್ ತರುಣಿಯರು..ಅವರು ಹಂಗೆ..ಇವರು ಹಿಂಗೆ..

    tarak movie image

    ತಾರಕ್ ಚಿತ್ರದಲ್ಲಿ ಶೃತಿ ಹರಿಹರನ್ ಹಾಗೂ ಶಾನ್ವಿ ಶ್ರೀವಾಸ್ತವ್ ಇಬ್ಬರೂ ನಾಯಕಿಯರು. ಆ ಇಬ್ಬರು ಸುಂದರಿಯರಲ್ಲಿ ದರ್ಶನ್ ಒಲಿಯುವುದು ಯಾರಿಗೆ..? ಅದನ್ನು ನಿರ್ದೇಶಕ ಮಿಲನ ಪ್ರಕಾಶ್ ಗುಟ್ಟಾಗಿಯೇ ಇಟ್ಟಿದ್ದಾರೆ. ಸಿನಿಮಾ ರಿಲೀಸ್ ಆಗುವವರೆಗೂ ಅದು ಗೊತ್ತಾಗಲ್ಲ. ಆದರೆ, ಚಿತ್ರದ ಚಿತ್ರೀಕರಣದ ವೇಳೆ ನಿರ್ದೇಶಕರು ಅನುಭವಿಸಿದ ಕಷ್ಟವೇ ಬೇರೆ.

    ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ಅವರದ್ದು ಬಬ್ಲಿ ಬಬ್ಲಿ ಪಾತ್ರ. ಪಟಪಟನೆ ಮಾತನಾಡುವ ತುಂಟಾಟದ ಹುಡುಗಿ. ಎನ್‍ಆರ್‍ಐ ಬೇರೆ. ಶಾನ್ವಿಯನ್ನು ನೋಡಿದವರು, ಅವರು ಹಾಗೇನೇ ಇರ್ತಾರೆ ಬಿಡಿ ಅಂದ್ಕೋತಾರೆ. ಆದರೆ, ರಿಯಲ್ ಲೈಫಲ್ಲಿ ಶಾನ್ವಿ ಅದಕ್ಕೆ ಪೂರ್ತಿ ಉಲ್ಟಾ. ಸಿಕ್ಕಾಪಟ್ಟೆ ಸೈಲೆಂಟು.

    ಇನ್ನು ಅದೇ ಚಿತ್ರದಲ್ಲಿ ಶೃತಿ ಹರಿಹರನ್ ಅವರದ್ದು ಸೈಲೆಂಟ್ ಗರ್ಲ್ ಪಾತ್ರ. ಆದರೆ, ಅದಕ್ಕೆ ಕಂಪ್ಲೀಟ್ ಉಲ್ಟಾ ವ್ಯಕ್ತಿತ್ವ ಶೃತಿ ಅವರದ್ದು. ಕಲ್ಲನ್ನೂ ಕೂಡಾ ಕರಗಿಸಿ, ಅದಕ್ಕೆ ಮಾತು ಬರಿಸುವ ಕಲೆ ಶೃತಿ ಅವರಿಗೆ ಅದು ಹೇಗೋ ಸಿದ್ಧಿಸಿಬಿಟ್ಟಿದೆ. ಅವರಿದ್ದ ಕಡೆ, ನಗು, ಉಲ್ಸಾಸ, ಉತ್ಸಾಹಗಳಿಗೆ ಬರವಿಲ್ಲ. 

    ಹೀಗೆ ಕಲಾವಿದೆಯರ ವೊರಿಜಿನಲ್ ವ್ಯಕ್ತಿತ್ವಕ್ಕೆ ತದ್ವಿರುದ್ಧವಾದ ಪಾತ್ರ ಕೊಟ್ಟು ಗೆದ್ದಿದ್ದಾರೆ ಪ್ರಕಾಶ್. ಇನ್ನು ಚಿತ್ರವನ್ನು ಗೆಲ್ಲಿಸುವ ಹೊಣೆ ದಾಸನ ಅಭಿಮಾನಿಗಳದ್ದು.

    Related Articles :-

    ಮನೆಯಲ್ಲೇ ತಾರಕೋತ್ಸವ ಕಣ್ತುಂಬಿಕೊಳ್ಳಿ..

    ಧೋನಿಗೂ ದರ್ಶನ್​ಗೂ ತಾರಕ್ ಲಿಂಕ್

    Tarak To Release On Sep 29th

    Tarak Teaser Gets Huge Response

    ದರ್ಶನ್ ತಾರಕ್ ಟ್ರೇಲರ್ ಸಖತ್ತಾಗಿದೆ ಗುರೂ..

    ತಾರಕ್ ಚಿತ್ರದ ಹೀರೋ ನಾನಲ್ಲ - ದರ್ಶನ್

    Tarak Songs Released

    Tarak Songs To Release Today

    Tarak Will Have 6 Audio Teasers

    Darshan Off To Switzerland For Tarak Shooting

  • ತಾರಕ್‍ನಲ್ಲಿ ದರ್ಶನ್‍ಗೆ ದೇಸೀ..ವಿದೇಶಿ ರಸಗವಳ

    desi videshi mix in tarak

    ತಾರಕ್ ಚಿತ್ರ ರಿಲೀಸ್‍ಗೆ ಹತ್ತಿರವಾಗುತ್ತಿದ್ದಂತೆ ಚಿತ್ರದಲ್ಲಿ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿರಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಅಭಿಮಾನಿಗಳಿಗೆ ಆ ಕುತೂಹಲ ಡಬಲ್ ಆಗಿದೆ. ಚಿತ್ರದಲ್ಲಿ ದರ್ಶನ್ ವಿದೇಶಿ ಹುಡುಗ. ಅಂದರೆ, ಭಾರತದಿಂದ ಹೋಗಿ ವಿದೇಶದಲ್ಲಿ ನೆಲೆಸಿರುವ ಪಾತ್ರ. ಚಿತ್ರದ ಕಥೆಯೂ ಅದೇ. ವಿದೇಶದಲ್ಲಿ ನೆಲೆಸಿರುವವರ ಸಂಭ್ರಮ, ಸಂಕಟ, ತಾಕಲಾಟ, ಸಂಬಂಧಗಳ ಕುರಿತಾದದ್ದು. 

    ಹಾಗಂತ ಸಿನಿಮಾ ಪೂರ್ತಿ ಅಲ್ಲಿಯೇ ಇರಲ್ಲ. ಸ್ವದೇಶಕ್ಕೆ ಬರುತ್ತೆ. ಹೀಗಾಗಿ ದರ್ಶನ್‍ಗೆ ಚಿತ್ರದಲ್ಲಿ ಎರಡುಮೂರು ಗೆಟಪ್‍ಗಳಿವೆ. ಸ್ವದೇಶಕ್ಕೆ ಬರುವ ನಾಯಕ, ಆತನ ತಾತ, ಮತ್ತವರ ಕುಟುಂಬದ ಜೊತೆ ದರ್ಶನ್ ಜರ್ನಿಯೇ ಸಿನಿಮಾ ಸ್ಟೋರಿ. ದರ್ಶನ್ ಕೇರ್‍ಟೇಕರ್‍ಗಳಾಗಿ ಚಿತ್ರದಲ್ಲಿ ಹಿರಿಯ ಕಲಾವಿದರ ದಂಡೇ ಇದೆ.

    ದರ್ಶನ್ ಮಾಸ್ ಹೀರೋ. ಹೀಗಾಗಿ ಅಭಿಮಾನಿಗಳಿಗೆ ನಿರಾಸೆ ಮಾಡದ ರೀತಿಯಲ್ಲಿ ಫೈಟ್ಸ್, ಡೈಲಾಗ್ಸ್ ಇವೆ. ಹಾಗೆಂದು ಸಂಪೂರ್ಣವಾಗಿ ಇದು ರೆಗ್ಯುಲರ್ ದರ್ಶನ್ ಸಿನಿಮಾ ಅಲ್ಲ. ಮಿಲನ ಪ್ರಕಾಶ್ ಅವರ ಫ್ಯಾಮಿಲಿ ಟಚ್ ಕೂಡಾ ಚಿತ್ರದಲ್ಲಿದೆ. ಹೀಗಾಗಿ ತಾರಕ್ ರಸಗವಳವಾಗುವುದು ಗ್ಯಾರಂಟಿ.

    Related Articles :-

    ತಾರಕ್ : ಬಾವ ಬಾಮೈದರೇ ನಿರ್ಮಾಪಕ, ನಿರ್ದೇಶಕ

    ಶಾನ್ವಿಗೇಕೆ ಪದೇ ಪದೇ ದೆವ್ವ ಹಿಡಿಯುತ್ತೆ..?

    ದರ್ಶನ್‍ಗೆ ಅಜ್ಜನಾಗಲು ದೇವರಾಜ್ ಒಪ್ಪಿದ್ದು ಹೇಗೆ..?

    ತಾರಕ್ ತಾರಾಗಣದಲ್ಲಿ ಕಲಾವಿದರ ಹಬ್ಬ

    ಸೈಲೆಂಟ್ ಸುನಾಮಿಯಾಗುತ್ತಿದೆ ತಾರಕ್

    ಸಖತ್ತಾಗಿದೆ ತಾರಕ್ ಟ್ರೇಲರ್

    ಇಬ್ಬರು ಮಹಾಮೌನಿಗಳ ಮಿಲನ ತಾರಕ್

    ಯೂರೋಪ್‍ನ 20 ಸ್ಥಳಗಳಲ್ಲಿ ತಾರಕ್

  • ದರ್ಶನ್ ಅಭಿಮಾನಿಗಳೇ ಥ್ಯಾಂಕ್ಸ್

    arman mallik thanks darshan fans

    ದರ್ಶನ್ ಅಭಿಮಾನಿಗಳೇ ಥ್ಯಾಂಕ್ಸ್.. ಈ ಮಾತು ಹೇಳ್ತಿರೋದು ಬಾಲಿವುಡ್ ಸಿಂಗರ್ ಅರ್ಮಾನ್ ಮಲಿಕ್. ದರ್ಶನ್ ಚಿತ್ರಗಳಲ್ಲಿ ಹಾಡಿದ ನಂತರ ಸ್ಯಾಂಡಲ್‍ವುಡ್‍ನಲ್ಲಿ ನನ್ನ ಅಭಿಮಾನಿಗಳ ಸಂಖ್ಯೆ ಹೆಚ್ಚಿತು. ದರ್ಶನ್‍ಗೆ ಅತ್ಯಂತ ದೊಡ್ಡ ಸಂಖೈಎಯ ಫ್ಯಾನ್ಸ್ ಇದ್ದಾರೆ. ಅವರೆಲ್ಲ ಈಗ ನನಗೂ ಫ್ಯಾನ್ಸ್ ಆಗಿದ್ಧಾರೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.

    ಮುಂಗಾರು ಮಳೆ ಚಿತ್ರದಲ್ಲಿ ಸೋನು ನಿಗಮ್‍ರ ಹಾಡು ಕೇಳಿದ ಮೇಲೆ, ನನಗೂ ಕನ್ನಡದಲ್ಲಿ ಹಾಡಬೇಕು ಎಂಬ ಕನಸು ಹುಟ್ಟಿತ್ತು. ಅದು ಈಡೇರಿದ್ದು ಚಕ್ರವರ್ತಿ ಚಿತ್ರದಿಂದ. ಈಗ ತಾರಕ್‍ನಲ್ಲೂ ಹಾಡಿದ್ದೇನೆ ಎಂದು ಖುಷಿ ಹಂಚಿಕೊಂಡಿದ್ದಾರೆ ಅರ್ಮಾನ್ ಮಲಿಕ್.

  • ದೆವ್ವ ಖ್ಯಾತಿಯ ಶಾನ್ವಿ ಈಗ ಗ್ಯಾಂಗ್`ಸ್ಟರ್

    ದೆವ್ವ ಖ್ಯಾತಿಯ ಶಾನ್ವಿ ಈಗ ಗ್ಯಾಂಗ್`ಸ್ಟರ್

    ಶಾನ್ವಿ ಶ್ರೀವಾತ್ಸವ್. ಉತ್ತರ ಭಾರತದ ಈ ಮುದ್ದು ಹುಡುಗಿ ಕನ್ನಡದಲ್ಲಿ ನಟಿಸಿದ ಚಿತ್ರಗಳು ಮತ್ತು ಆ ಚಿತ್ರಗಳ ಸಕ್ಸಸ್ಸಿನಿಂದ ದೆವ್ವದ ಹುಡುಗಿ ಎಂದೇ ಫೇಮಸ್ ಆಗಿಬಿಟ್ಟರು. ಅವರನ್ನೀಗ ಗ್ಯಾಂಗ್‍ಸ್ಟರ್ ಮಾಡಿದ್ದಾರೆ ನಿರ್ದೇಶಕ ಗಣೇಶ್ ಪರಶುರಾಮ್. ಬ್ಯಾಂಗ್ ಚಿತ್ರದಲ್ಲಿ. ಗ್ಯಾಂಗ್‍ಸ್ಟರ್ ಶಾನ್ವಿ ಎದುರು ನಟಿಸಿರೋದು ಡ್ಯಾಡಿ.. ಅರ್ಥಾತ್ ಮ್ಯೂಸಿಕ್ ಡೈರೆಕ್ಟರ್ ರಘು ದೀಕ್ಷಿತ್.

    ಇದೊಂದು ಬ್ಲಾಕ್ ಕಾಮಿಡಿ ಥ್ರಿಲ್ಲರ್. ನಾಲ್ವರು ಇಂಜಿಯರಿಂಗ್ ವಿದ್ಯಾರ್ಥಿಗಳು ನೈಟ್ ಔಟ್‍ಗೆ ಹೋದಾಗ ಆಗುವ ಭಯಾನಕ ಘಟನೆಗಳೇ ಚಿತ್ರದ ಕಥೆ. 48 ಗಂಟೆಯಲ್ಲಿ ನಡೆಯೋ ಕಥೆ ಎಂದಿದ್ದಾರೆ ಗಣೇಶ್ ಪರಶುರಾಮ್.

    ಶಾನ್ವಿಗೂ ಇದು ಹೊಸ ಅನುಭವ. ಗ್ಯಾಂಗ್‍ಸ್ಟರ್ ಇಷ್ಟು ಬ್ಯೂಟಿಫುಲ್ಲಾಗಿರುತ್ತಾರಾ ಎಂದುಕೊಂಡರೆ ನಿರ್ದೇಶಕರು ಖಂಡಿತಾ ಜವಾಬ್ದಾರರಲ್ಲ. ಅತ್ತ ರಘು ದೀಕ್ಷಿತ್‍ಗೂ ಇದು ಹೊಸ ಎಕ್ಸ್‍ಪೀರಿಯನ್ಸ್. ಮುರಳೀಧರ್, ಸುನಿಲ್, ನಾಟ್ಯರಂಗ ಭೂಷಣ್, ಸಾತ್ವಿಕ ವಿದ್ಯಾರ್ಥಿಗಳಾಗಿದ್ದಾರೆ.

    ಯುಕೆ ಪ್ರೊಡಕ್ಷನ್ಸ್‍ನ ಪೂಜಾ ವಸಂತ್ ಕುಮಾರ್ ನಿರ್ಮಾಣದ ಚಿತ್ರವಿದು. ಈಗಾಗಲೇ ಆನ, ನಾನು ಅದು ಮತ್ತು ಸರೋಜ ಚಿತ್ರಗಳನ್ನು ನಿರ್ಮಾಣ ಮಾಡಿರೋ ಅವರಿಗೆ ಇದು 3ನೇ ಸಿನಿಮಾ.

  • ಧ್ರುವ ಸರ್ಜಾ ಪೊಗರಿಳಿಸೋಕೆ ಡಬಲ್ ಬ್ಯೂಟಿ ಕ್ವೀನ್ಸ್..!

    dhuva's double pogaru

    ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿದಿದೆ. ಈ ಬಾರಿ ಧ್ರುವ ಸರ್ಜಾ 2 ವರ್ಷ ಕಾಯುವುದಿಲ್ಲ ಎನ್ನುವ ಭರವಸೆ ಇದೆ. ಏಕೆಂದರೆ, ಚಿತ್ರದ ನಿರ್ದೇಶಕ ನಂದಕಿಶೋರ್. ಡಿಸೆಂಬರ್ 14ಕ್ಕೆ ಪೊಗರು ಚಿತ್ರದ ಮುಹೂರ್ತ ಫಿಕ್ಸ್ ಆಗಿದೆ. ಚಿತ್ರೀಕರಣ ಶುರುವಾಗುವುದು ಮುಂದಿನ ತಿಂಗಳು. ಅಂದಹಾಗೆ ಚಿತ್ರಕ್ಕೆ ಕ್ಲಾಪ್ ಮಾಡಲಿರುವುದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್.

    ಅದ್ದೂರಿಯಾಗಿ ತೆರೆಗೆ ಬಂದ ಬಹಾದ್ದೂರ್‍ನ `ಪೊಗರು' ಇಳಿಸೋಕೆ ಇಬ್ಬರು ಬ್ಯೂಟಿ ಕ್ವೀನ್‍ಗಳು ಭರ್ಜರಿಯಾಗಿ ಎಂಟ್ರಿ ಕೊಡ್ತಿರೋದು ವಿಶೇಷ. ಒಬ್ಬರು ರಶ್ಮಿಕಾ ಮಂದಣ್ಣ. ಮತ್ತೊಬ್ಬರು ಶಾನ್ವಿ ಶ್ರೀವಾಸ್ತವ್. ಗಂಗಾಧರ್ ನಿರ್ಮಾಣದ ಚಿತ್ರದಲ್ಲಿ ಜಗಪತಿ ಬಾಬು, ಚಿಕ್ಕಣ್ಣ, ಸಾಧು ಕೋಕಿಲ, ಪ್ರಕಾಶ್ ರೈ ಮೊದಲಾದ ದೊಡ್ಡ ಕಲಾವಿದರ ದಂಡೇ ಇದೆ. 

     

     

  • ನ.೨೮ಕ್ಕೆ ನಾರಾಯಣ ಪ್ರತ್ಯಕ್ಷ

    avane srimannarayana trailer on nov 28th

    ಅವನೇ ಶ್ರೀಮನ್ನಾರಾಯಣ. ಕನ್ನಡದ ಬಹು ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ. ಕೆಜಿಎಫ್, ಪೈಲ್ವಾನ್ ನಂತರ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ. ಡಿಸೆಂಬರ್ ೨೭ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾದ ಟ್ರೇಲರ್, ನ.೨೮ಕ್ಕೆ ಹೊರಬರಲಿದೆ.

    ಚಿತ್ರದ ಪೋಸ್ಟರ್ ಹೊರಬಂದಿದ್ದು, ಚಿತ್ರದ ಕಥೆಯ ಬಗ್ಗೆ ಕುತೂಹಲ ಕೆರಳಿಸಿದೆ. ೮೫ ವರ್ಷದ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹಲವು ಚಿತ್ರಗಳು ಪ್ಯಾನ್ ಇಂಡಿಯಾ ಕದ ತಟ್ಟಿ ಗೆದ್ದು ಬಂದಿವೆ. ನಮಗೂ ಇದು ಹೊಸ ಸವಾಲು ಎಂದು ಸವಾಲನ್ನು ಸವಾಲಾಗಿಯೇ ಸ್ವೀಕರಿಸಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

    ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ ಪ್ರಮುಖ ಪಾತ್ರದಲ್ಲಿರೋ ಚಿತ್ರ ಕನ್ನಡದಲ್ಲಷ್ಟೇ ಅಲ್ಲದೆ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ರಿಲೀಸ್ ಆಗುತ್ತಿದೆ.

  • ನಾಗತಿಹಳ್ಳಿ ಚಿತ್ರದಲ್ಲಿ ನಿರೂಪ್ ಭಂಡಾರಿ, ಶಾನ್ವಿ

    ನಾಗತಿಹಳ್ಳಿ ಚಿತ್ರದಲ್ಲಿ ನಿರೂಪ್ ಭಂಡಾರಿ, ಶಾನ್ವಿ

    ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಚಿತ್ರದಲ್ಲಿ ನಿರೂಪ್ ಭಂಡಾರಿ ಹಾಗೂ ಶಾನ್ವಿ ಶ್ರೀವಾಸ್ತವ್ ನಟಿಸುತ್ತಿದ್ದಾರೆ. ಇಂಡಿಯಾ ವರ್ಸಸ್ ಇಂಗ್ಲೆಂಡ್ ನಂತರ ನಾಗತಿಹಳ್ಳಿ ನಿರ್ದೇಶಿಸುತ್ತಿರುವ ಚಿತ್ರವಿದು. ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ರಂಗಿತರಂಗ, ವಿಕ್ರಾಂತ್ ರೋಣ ಚಿತ್ರಗಳಲ್ಲಿ ವ್ಹಾವ್ ಎನ್ನಿಸುವಂತೆ ನಟಿಸಿದ್ದ ನಿರೂಪ್ ಭಂಡಾರಿ, ಕಥೆ ಆಧರಿಸಿದ ಚಿತ್ರಗಳಿಗೆ ಮಹತ್ವ ಕೊಟ್ಟವರು.

    ನಾಗತಿಹಳ್ಳಿ ಚಿತ್ರಗಳಲ್ಲಿ ನಟಿಸುವುದೇ ಒಂದು ಖುಷಿ. ಈ ಚಿತ್ರದಲ್ಲಿಯೂ ಕಥೆ ಅದ್ಭುತವಾಗಿದೆ. ಅಮೆರಿಕಾ ಅಮೆರಿಕಾ ಮಾದರಿಯ ಭಾವನಾತ್ಮಕ ದೃಶ್ಯಗಳಿವೆ. ಮೊದಲು ಕರ್ನಾಟಕದಲ್ಲಿಯೇ ಚಿತ್ರೀಕರಣವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ ನಿರೂಪ್ ಭಂಡಾರಿ.

    ಇನ್ನು ಶಾನ್ವಿ ಶ್ರೀವಾಸ್ತವ್ ಅವರಿಗೂ ಅಷ್ಟೆ. ನಾಗತಿಹಳ್ಳಿ ಚಿತ್ರ ಎಂದ ಕೂಡಲೇ ಮರುಮಾತನಾಡದೆ ಒಪ್ಪಿಕೊಂಡಿದ್ದಾರೆ.

    ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ದೊಡ್ಡ ಮಟ್ಟದ ಹಿಟ್ ಬೇಕಾಗಿದೆ. ನಾಗತಿಹಳ್ಳಿಯವರ ಕೊನೆಯ ಹಿಟ್ ಚಿತ್ರ ಯಾವುದು ಎಂದರೆ 2005ರಲ್ಲಿ ಬಂದಿದ್ದ ಅಮೃತಧಾರೆಯನ್ನೇ ಹೇಳಬೇಕು. ಅದಾದ ಮೇಲೆ ಅವರು 6 ಚಿತ್ರಗಳನ್ನು ನಿರ್ದೇಶಿಸಿದ್ದಾರಾದರೂ ಹಿಟ್ ಸಿಕ್ಕಿಲ್ಲ. ಹೀಗಾಗಿ ನಾಗತಿಹಳ್ಳಿ ಚಂದ್ರಶೇಖರ್ ಕೂಡಾ ದೊಡ್ಡ ಹಿಟ್ ನಿರೀಕ್ಷೆಯಲ್ಲಿದ್ದಾರೆ.

  • ನಾರಾಯಣ 17 ನಿಮಿಷ ಟ್ರಿಮ್

    avane srimanarayana trimmed for 17 minutes

    ಅವನೇ ಶ್ರೀಮನ್ನಾರಾಯಣ ಸಿನಿಮಾ ಬಂಪರ್ ಸಕ್ಸಸ್ ಕಂಡಿದೆ. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್, ಸಚಿನ್ ರವಿ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ಮುಖದಲ್ಲೀಗ ಗೆಲುವಿನ ನಗೆ. 3 ವರ್ಷಗಳ ಶ್ರಮ ಸಾರ್ಥಕ ಕಂಡ ಭಾವ.

    ಹೀಗಿದ್ದರೂ ಸಿನಿಮಾದ ಲೆಂಗ್ತ್ನ್ನು ಈಗ ಕಡಿಮೆ ಮಾಡಿದ್ದಾರೆ. ಚಿತ್ರದ ಒಟ್ಟಾರೆ ಅವಧಿ 3 ಗಂಟೆ 6 ನಿಮಿಷ ಇತ್ತು. 3 ವರ್ಷದಲ್ಲಿ ಸಿನಿಮಾವನ್ನು ಹಲವು ಬಾರಿ ನೋಡಿದ್ದಕ್ಕೋ ಏನೋ.. ನಮಗೆ ಅದು ಕೊರತೆ ಎಂದು ಅನ್ನಿಸಿರಲಿಲ್ಲ. ಆದರೆ, ಸಿನಿಮಾ ನೋಡಿದವರು ಹಾಗೂ ಮೆಚ್ಚಿಕೊಂಡವರೇ ಇದನ್ನು ಹೇಳಿದಾಗ ಚಿತ್ರದ ಅವಧಿಯಲ್ಲಿ 17 ನಿಮಿಷ ಕಡಿಮೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ ನಿರ್ದೇಶಕ ಸಚಿನ್ ರವಿ.

    ಅವನೇ ಶ್ರೀಮನ್ನಾರಾಯಣ, ಹಿಂದಿಯಲ್ಲೂ ರಿಲೀಸ್ ಆಗುತ್ತಿದ್ದು, ಕರ್ನಾಟಕದ ವಿಮರ್ಶೆ ಆಧರಿಸಿಯೇ ಟ್ರಿಮ್ ಮಾಡಿ ಹಿಂದಿಯಲ್ಲಿ ರಿಲೀಸ್ ಮಾಡುತ್ತಿದ್ದೇವೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ. ಸದ್ಯಕ್ಕೆ ರಕ್ಷಿತ್ ಶೆಟ್ಟಿ ಚಾರ್ಲಿ 777 ಚಿತ್ರದಲ್ಲಿ ನಟಿಸುತ್ತಿದ್ದು, ಪುಣ್ಯಕೋಟಿ ಚಿತ್ರದ ನಿರ್ದೇಶನಕ್ಕೆ ಅಣಿಯಾಗುತ್ತಿದ್ದಾರೆ.

     

  • ನಾರಾಯಣನ ಆ 5 ನಂಬರ್ ಹುಡುಕಿದ್ರೆ.. 2.5 ಲಕ್ಷ ಧನಲಕ್ಷಿö್ಮ ಸಿಗ್ತಾಳೆ..!

    watch avane srimamnaryana and win lakshmi

    ನಂಬರ್ ಹುಡುಕಿ.. 2.5 ಲಕ್ಷ ಬಹುಮಾನ ಗೆಲ್ಲಿ. ಇದು ಅವನೇ ಶ್ರೀಮನ್ನಾರಾಯಣ ಕೊಡುತ್ತಿರುವ ವರ. ಅದಕ್ಕೆ ನೀವು ಅನ್‌ಲಾಕ್ ದಿ ಟ್ರೆಷರ್ ಚಾಲೆಂಜ್ ಸ್ವೀಕರಿಸಬೇಕು.

    ಈಗಾಗಲೇ ರಿಲೀಸ್ ಆಗಿರುವ ಎಎಸ್‌ಎನ್ ಟ್ರೇಲರಿನಲ್ಲಿ 5 ನಂಬರುಗಳಿವೆ. ಅವು ಎಲ್ಲೆಲ್ಲಿಯೋ ಇವೆ. ಅವುಗಳನ್ನು ಹುಡುಕೋದು ನಿಮಗಿರೋ ಚಾಲೆಂಜ್.

    ಪುಷ್ಕರ್ ವೆಬ್‌ಸೈಟ್‌ಗೆ ಹೋಗಿ. ಅಲ್ಲೊಂದು ಲಾಕ್ ಆಗಿರುವ ಟ್ರೇಲರ್ ಸಿಗುತ್ತೆ. 5 ಸಿಂಗಲ್ ನಂಬರ್ ಡಿಜಿಟ್ ಹಾಕುವ ಜಾಗವೂ ಇದೆ. ನೀವು ಅಲ್ಲಿ ಆ 5 ನಂಬರ್ ಹಾಕಿದರೆ, ಟ್ರೇಲರ್ ಓಪನ್ ಆಗುತ್ತೆ. 2.5 ಲಕ್ಷ ಬಹುಮಾನವೂ ಸಿಗುತ್ತೆ ಎಂದಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

    ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ನಟಿಸಿರುವ ಚಿತ್ರಕ್ಕೆ ಸಚಿನ್ ನಿರ್ದೇಶನವಿದೆ. ಅತೀ ಹೆಚ್ಚು ಜನ ವೀಕ್ಷಿಸಿರುವ ಟ್ರೇಲರ್ ಆಗಿ ದಾಖಲೆ ಬರೆದಿರುವ ಅವನೇ ಶ್ರೀಮನ್ನಾರಾಯಣ ಡಿ.27ರಂದು ರಿಲೀಸ್ ಆಗಲಿದೆ.

  • ನಾರಾಯಣನ ದಿಗ್ವಿಜಯ ದಂಡಯಾತ್ರೆ

    avane srimnanarayna vijaya yatre

    ಅವನೇ ಶ್ರೀಮನ್ನಾರಾಯಣ ಚಿತ್ರದ ಯಶಸ್ಸು, ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸುವತ್ತ ಹೊರಟಿದೆ. ಸಹಜವಾಗಿಯೇ ಚಿತ್ರತಂಡ ಸಂಭ್ರಮದಲ್ಲಿದೆ. ಹೀಗಾಗಿ ಇಡೀ ಚಿತ್ರತಂಡ ಧನ್ಯವಾದ ದಂಡಯಾತ್ರೆ ಹೊರಟಿದೆ. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ದೇಶಕ ಸಚಿನ್ ರವಿ ಇಡೀ ಕರ್ನಾಟಕವನ್ನು ಸುತ್ತಲು ಹೊರಟಿದ್ದಾರೆ.

    ಈಗಾಗಲೇ ತುಮಕೂರು, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಯಾತ್ರೆ ಮುಗಿಸಿದ್ದಾರೆ.

    ಇಂದು ಅಂದರೆ ಜನವರಿ 6ರಂದು ಮಂಗಳೂರು, ಉಡುಪಿ ಹಾಗೂ ನಾಳೆ ಅಂದರೆ ಜನವರಿ 7ರಂದು ಮೈಸೂರು, ಮಂಡ್ಯದಲ್ಲಿ ಅಭಿಮಾನಿಗಳ ಜೊತೆ ಚಿತ್ರಮಂದಿರಕ್ಕೇ ಬರಲಿದ್ದಾರೆ.

  • ನಾರಾಯಣನ ಲಕ್ಷ್ಮಿ    Birthdayಗೆ  ಲಕ್ಷ್ಮಿ  ಕೊಟ್ಟರಮ್ಮ..!

    avane srimnarayana wshes lakshmi on her borthday

    ಅವನೇ ಶ್ರೀಮನ್ನಾರಾಯಣನ ಲಕ್ಷ್ಮೀದೇವಿ ಶಾನ್ವಿ ಶ್ರೀವಾಸ್ತವ್. ಅವರಿಗೆ ಲಕ್ಷ್ಮಿಯನ್ನೇ ಉಡುಗೊರೆಯಾಗಿ ಕೊಟ್ಟಿದ್ದಾರೆ ಅವನೇ ಶ್ರೀಮನ್ನಾರಾಯಣ. ಚಿತ್ರದ ನಾಯಕಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದೆ ಎಎಸ್ಎನ್ ಟೀಂ.

    ಲಕ್ಷ್ಮಿಗೆ ನಾರಾಯಣ ಪ್ರೀತಿಯಿಂದ ಹಾರೈಸಿದ್ದಾರೆ. ಭಾನುವಾರ ಶಾನ್ವಿ ಹುಟ್ಟುಹಬ್ಬವಿತ್ತು. ನಾರಾಯಣ ರಕ್ಷಿತ್‌ ಶೆಟ್ಟಿ, ‘ಸದಾ ನಗುವ ಕ್ಯೂಟ್‌ ಕಣ್ಣುಗಳಲ್ಲಿ ದೊಡ್ಡ ದೊಡ್ಡ ಕನಸುಗಳನ್ನು ಹೊತ್ತ ಈ ದೇವತೆಯನ್ನು ನೋಡುತ್ತಿದ್ದರೆ ನನಗೆ ಯಾವಾಗಲೂ ಆಶ್ರ‍್ಯ ಆಗುತ್ತೆ. ಮುಂದೊಂದು ದಿನ ಈ ದೇವತೆ ಎತ್ತರಕ್ಕೆ ಹಾರಬಹುದು ಅಂತ ಯೋಚಿಸುತ್ತೇನೆ. ಸುಂದರ ಆತ್ಮವಿರುವ ಚೇತನ ನೀವಾಗಿದ್ದು, ಎಂದೆಂದೂ ನಿಮ್ಮ ಜೀವನ ಹೀಗೇ ಇರಲಿ ಎಂದು ಹಾರೈಸುತ್ತೇನೆ’ ಎಂದು ಹಾರೈಸಿದ್ದಾರೆ. ಅಲ್ಲದೆ ಕಷ್ಟ ಸುಖದ ದಿನಗಳಲ್ಲಿ ಜೊತೆಯಾದ ಗೆಳತಿ ನೀವು. ಯು ಆರ್ ಮೈ ಬೆಸ್ಟ್ ಫ್ರೆಂಡ್ ಎಂದಿದ್ದಾರೆ ರಕ್ಷಿತ್.

    ಶಾನ್ವಿ ಹುಟ್ಟುಹಬ್ಬಕ್ಕೆ ಅವನೇ ಶ್ರೀಮನ್ನಾರಾಯಣ ತಂಡ, ಧನಲಕ್ಷ್ಮೀ ಅವತಾರದ ಲಕ್ಷ್ಮೀ ಪೋಸ್ಟರ್ ರಿಲೀಸ್ ಮಾಡಿತ್ತು. ಸಿನಿಮಾ ತಂಡ ಮಧ್ಯರಾತ್ರಿಯೇ ಪೋಸ್ಟರ್‌ ರಿಲೀಸ್‌ ಮಾಡಿದೆ. ಇಂಥದ್ದೊಂದು ಸರ್‌ಪ್ರೈಸ್‌ ಇದೆ ಎಂದು ನನಗೆ ಗೊತ್ತಿರಲಿಲ್ಲ. ಈ ಬಾರಿಯ ಹುಟ್ಟುಹಬ್ಬದಲ್ಲಿ ಎಕ್ಸೈಟ್‌ ಮೆಂಟ್‌ ಇದೆ ಎಂದಿದ್ದಾರೆ ಶಾನ್ವಿ. ಎಂದಿನಂತೆ ಈ ಬಾರಿಯೂ ಮನೆಯಲ್ಲಿ ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಶಾನ್ವಿ.