` shanvi srivatsav, - chitraloka.com | Kannada Movie News, Reviews | Image

shanvi srivatsav,

  • ಅವನೇ ಶ್ರೀಮನ್ನಾರಾಯಣದಲ್ಲಿ ಕಳೆದುಕೊಂಡಿದ್ದು ಎಷ್ಟು ಕೋಟಿ..?

    ಅವನೇ ಶ್ರೀಮನ್ನಾರಾಯಣದಲ್ಲಿ ಕಳೆದುಕೊಂಡಿದ್ದು ಎಷ್ಟು ಕೋಟಿ..?

    ಅವನೇ ಶ್ರೀಮನ್ನಾರಾಯಣ. 2019ರಲ್ಲಿ ರಿಲೀಸ್ ಆದ ಸಿನಿಮಾ. ತಕ್ಕಮಟ್ಟಿಗೆ ಸದ್ದು ಮಾಡಿದ ಚಿತ್ರ, ಟೆಕ್ನಿಕಲಿ ಸ್ಟ್ರಾಂಗ್ ಇತ್ತು. ಪಂಚಭಾಷೆಗಳಲ್ಲಿ ರಿಲೀಸ್ ಆಗಿದ್ದ ಸಿನಿಮಾ, ಕನ್ನಡದಲ್ಲಿ ಹಿಟ್ ಚಿತ್ರಗಳ ಸಾಲಿಗೇ ಸೇರಿತ್ತು. ಆದರೆ, ಆ ಚಿತ್ರದಲ್ಲಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಲಾಸ್ ಮಾಡಿಕೊಂಡರಾ..?

    ಅವನೇ ಶ್ರೀಮನ್ನಾರಾಯಣ ಚಿತ್ರ ನಿರ್ಮಾಪಕರಿಗೆ ಲಾಸ್ ಮಾಡಿದ ಚಿತ್ರವಲ್ಲ. ಆದರೆ, ಚಿತ್ರಕ್ಕಾಗಿ ತಂದಿದ್ದ ಸಾಲದ ಮೇಲಿನ ಬಡ್ಡಿಯೂ ಸಾಲದಷ್ಟೇ ಬೆಳೆದ ಕಾರಣ ಕಷ್ಟವಾಯ್ತು. ಚಿತ್ರದ ನಿರ್ಮಾಪಕರಿಗೆ ರಕ್ಷಿತ್ ಶೆಟ್ಟಿ 20 ಕೋಟಿ ಕೊಟ್ಟರು. ತಂತ್ರಜ್ಞರಿಗೆ ಸಂಭಾವನೆಯನ್ನು ರಕ್ಷಿತ್ ಅವರೇ ಕೊಟ್ಟರು. 777 ಚಾರ್ಲಿ ಮತ್ತು ಸಪ್ತಸಾಗರದಾಚೆ ಎಲ್ಲೋ ಚಿತ್ರಗಳಿಗೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೂಡಿದ್ದ ಹಣವನ್ನು ವಾಪಸ್ ಕೊಟ್ಟಿದ್ದಾರೆ. ಕೋವಿಡ್ ಕಷ್ಟದಲ್ಲಿ ತಂಡದಲ್ಲಿದ್ದವರಿಗೆ ತಲಾ 5 ಸಾವಿರ ರೂ. ನೀಡಿ ಕಷ್ಟಕ್ಕೆ ನೆರವಾಗಿದ್ದಾರೆ. ಇದೆಲ್ಲವನ್ನೂ ಹೇಳಿರೋದು ರಿಷಬ್ ಶೆಟ್ಟಿ.

    ಪುಷ್ಕರ್ ಮಲ್ಲಿಕಾರ್ಜುನಯ್ಯ ಸದಭಿರುಚಿಯ ಮಹತ್ವಾಕಾಂಕ್ಷಿ ನಿರ್ಮಾಪಕ ಎನ್ನುವ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ನೆರವು ನೀಡಿದ್ದನ್ನು ನಿರ್ಮಾಪಕರಿಗೆ ನೆರವು ನೀಡುವ ಒಳ್ಳೆಯತನಕ್ಕೆ ಸಾಕ್ಷಿ ಎನ್ನುತ್ತಾರೆ.

    20 ಕೋಟಿಯನ್ನು ರಕ್ಷಿತ್ ಶೆಟ್ಟಿ ನೀಡಿರುವುದು ನಿಜ ಎನ್ನುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಚಿತ್ರದಿಂದ ಲಾಸ್ ಆಯಿತಾ.. ಅಥವಾ ನಷ್ಟವಾಯಿತಾ..? ಎಂಬ ಪ್ರಶ್ನೆಗೆ ಕರಾರುವಾಕ್ ಉತ್ತರ ಹೇಳಲ್ಲ. ಸದ್ಯಕ್ಕವರು ಅವರದೇ ಬ್ಯಾನರ್`ನ ಅವತಾರ ಪುರುಷ, ಟೆನ್ ಮತ್ತು ಮಲಯಾಳಂ ಚಿತ್ರವೊಂದರ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ.

  • ಅವನೇ ಶ್ರೀಮನ್ನಾರಾಯಣನ ಎದುರು ಬರೋ ಸ್ಟಾರ್ ಸಿನಿಮಾಗಳೆಷ್ಟು..?

    will avane srimnarayana face big star fight at box office

    ಅವನೇ ಶ್ರೀಮನ್ನಾರಾಯಣ ರಿಲೀಸ್ ಡೇಟ್ ಫಿಕ್ಸ್ ಆದ ಬೆನ್ನಲ್ಲೇ ವರ್ಷದ ಕೊನೆಯ ತಿಂಗಳು ಚಿತ್ರಮಂದಿರಗಳಲ್ಲಿ ಮಹಾಯುದ್ಧವೇ ನಡೆಯಲಿದೆಯಾ ಎಂಬ ಅನುಮಾನ ಸೃಷ್ಟಿಸಿದೆ. ಕಾರಣ ಇಷ್ಟೆ.. ಅವನೇ ಶ್ರೀಮನ್ನಾರಾಯಣ ಸಿನಿಮಾ ದೇಶಾದ್ಯಂತ ಸ್ಟಾರ್ ನಟರ ಸಿನಿಮಾಗಳನ್ನು ಎದುರಿಸಿಕೊಂಡೇ ಬರಬೇಕು.

    ಡಿಸೆಂಬರ್ 25ಕ್ಕೆ ಅವನೇ ಶ್ರೀಮನ್ನಾರಾಯಣ ಬಂದರೆ, ಅದಕ್ಕೆ ಕೆಲವು ದಿನ ಮುನ್ನ ಕ್ರಿಸ್ ಮಸ್ ಹಬ್ಬಕ್ಕೆ ಬರೋದು ದಬಾಂಗ್ 3. ಸಲ್ಮಾನ್ ಖಾನ್, ಸುದೀಪ್ ಕಾಂಬಿನೇಷನ್ನಿನ ಸಿನಿಮಾ. ಕನ್ನಡದಲ್ಲೂ ಡಬ್ ಆಗಿ ಬರುತ್ತಿರುವ ಈ ಚಿತ್ರಕ್ಕೆ ಸಲ್ಮಾನ್ ಖಾನ್ ಅವರೇ ಡಬ್ಬಿಂಗ್ ಮಾಡಿದ್ರೆ.. ಅದರ ಹವಾನೇ ಬೇರೆ.

    ಇನ್ನು ಧ್ರುವ ಸರ್ಜಾ ಅಭಿನಯದ ಪೊಗರು ಕೂಡಾ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಎನ್ನುವ ಮಾತುಗಳಿವೆ. ಅತ್ತ ರಾಬರ್ಟ್ ಕೂಡಾ ಡಿಸೆಂಬರ್ ತಿಂಗಳನ್ನೇ ಸೆಲೆಕ್ಟ್ ಮಾಡಿಕೊಂಡಿದೆಯಂತೆ. ಎಲ್ಲವೂ ಹೀಗೆಯೇ ಆಗಿಬಿಟ್ಟರೆ, ದೊಡ್ಡ ಸ್ಟಾರ್ ಸಮರವೇ ನಡೆಯಲಿದೆ ಎಂಬುದು ಪಕ್ಕಾ.

    ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ್ ಅಭಿನಯದ ಸಿನಿಮಾವನ್ನು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಕನ್ನಡವಷ್ಟೇ ಅಲ್ಲದೆ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ.

  • ಅವನೇ ಶ್ರೀಮನ್ನಾರಾಯಣನಿಗೆ ಕನ್ನಡ ಚಿತ್ರರಂಗವೇ ಬಹುಪರಾಕ್

    avane srimananrayana is appreciated by sandalwood stars

    ಅವನೇ ಶ್ರೀಮನ್ನಾರಾಯಣ ಟ್ರೇಲರ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಇದಕ್ಕಾಗಿಯೇ ಕಾಯುತ್ತಿದ್ದರೇನೋ ಎಂಬಂತೆ ಚಿತ್ರದ ಟ್ರೇಲರ್ನ್ನು ನೋಡಿ ನೋಡಿ ಆನಂದಿಸುತ್ತಿದ್ದಾರೆ. ವೀಕ್ಷಕರ ಸಂಖ್ಯೆ 9 ಮಿಲಿಯನ್ ದಾಟಿದೆ. ಲೈಕ್ಸ್ ಕೂಡಾ ಲಕ್ಷಗಳ ಲೆಕ್ಕದಲ್ಲಿದೆ. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ್, ನಿರ್ದೇಶಕ ಸಚಿನ್, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮುಖದಲ್ಲಿ ಗೆಲುವಿನ ಮುಗುಳ್ನಗೆ. ಅದಕ್ಕಿಂತಲೂ ಹೆಚ್ಚು ಖುಷಿ ಕೊಟ್ಟಿರುವುದು ಚಿತ್ರರಂಗದವರು ಅದನ್ನು ಸ್ವಾಗತಿಸಿರುವ ರೀತಿ.

    ದಕ್ಷಿಣ ಭಾರತದ ಸ್ಟಾರ್ ನಟರಾದ ಧನುಷ್, ನಾನಿ, ನಿವಿನ್ ಪೌಲ್ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದರು. ಇದರ ಜೊತೆಯಲ್ಲೇ ಪುನೀತ್ ರಾಜ್‌ಕುಮಾರ್, ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಟ್ವೀಟ್ ಮಾಡಿ ಟ್ರೇಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಧನುಷ್, ತಮಿಳು ನಟ :ರಕ್ಷಿತ್ ಶೆಟ್ಟಿ ತಂಡಕ್ಕೆ ಅಭಿನಂದನೆಗಳು. ಟ್ರೇಲರ್ನಲ್ಲಿ ಸಾಹಸ, ಫೈಟ್ಸ್ ಎಲ್ಲವೂ ಚೆನ್ನಾಗಿದೆ.

    ನಾನಿ, ತೆಲುಗು ನಟ : ಅವನೇ ಶ್ರೀಮನ್ನಾರಾಯಣ ಟ್ರೇಲರ್ ವಿಭಿನ್ನವಾಗಿದೆ. ದೃಶ್ಯಗಳು ಕೂಡ ಚೆನ್ನಾಗಿದೆ.

    ಪುನೀತ್ ರಾಜ್‌ಕುಮಾರ್ : ಅವನೇ ಶ್ರೀಮನ್ನಾರಾಯಣ ಟ್ರೇಲರ್ ಚೆನ್ನಾಗಿದೆ. ಇಡೀ ತಂಡಕ್ಕೆ ಧನ್ಯವಾದಗಳು.

    ಕಿಚ್ಚ ಸುದೀಪ್ : ಚಿತ್ರ ತಂಡದ ಅದ್ಭುತ ಕೆಲಸ ಕಾಣುತ್ತಿದೆ. ಒಳ್ಳೆಯ ಟ್ರೇಲರ್

    ರಿಷಬ್ ಶೆಟ್ಟಿ : ಗೆಳೆಯನ ಗೆಲುವಿನ ಸಂಭ್ರಮ ನೋಡಲು ಕಾಯುತ್ತಿದ್ದೇನೆ.

    ಪ್ರಶಾಂತ್ ನೀಲ್ : ಟ್ರೇಲರ್ನಲ್ಲಿ ಚಿತ್ರತಂಡದ ಶ್ರಮ ಎದ್ದು ಕಾಣುತ್ತಿದೆ. ಹೊಸ ಇತಿಹಾಸ ಸೃಷ್ಟಿಸಲಿ

    ವಿ.ಹರಿಕೃಷ್ಣ : ಅವನೇ ಶ್ರೀಮನ್ನಾರಾಯಣ ತುಂಬ ಹೊಸ ಅನುಭವ ನೀಡುತ್ತಿದೆ. ಪರ್ಫೆಕ್ಟ್  ಮತ್ತು ಎಕ್ಸಲೆಂಟ್

    ಕೆಪಿ ಶ್ರೀಕಾಂತ್ : ಟ್ರೇಲರ್ ತುಂಬ ಕುತೂಹಲಕಾರಿಯಾಗಿದೆ. ಎಎಸ್ಎನ್ ತಂಡಕ್ಕೆ ಶುಭ ಹಾರೈಕೆಗಳು.

    ಹೇಮಂತ್ ರಾವ್ : ರಿಲೀಸ್ವರೆಗೂ ಕಾಯಲು ಆಗುತ್ತಿಲ್ಲ. ಅಷ್ಟು ಕುತೂಹಲಕಾರಿಯಾಗಿದೆ

    ತರುಣ್ ಸುಧೀರ್ : ಚಿತ್ರತಂಡಕ್ಕೆ ಸಿನಿಮಾ ಮೇಲಿರುವ ಪ್ಯಾಷನ್ ಎದ್ದು ಕಾಣುತ್ತಿದೆ. ಕನ್ನಡ ಚಿತ್ರರಂಗದ ಗೌರವವನ್ನು ಈ ಸಿನಿಮಾ ಎತ್ತಿ ಹಿಡಿಯಲಿದೆ

    ವಿಜಯ್ ಕಿರಗಂದೂರು : ರಕ್ಷಿತ್ ಶೆಟ್ಟಿ ಮತ್ತು ಅವನೇ ಶ್ರೀಮನ್ನಾರಾಯಣ ಚಿತ್ರತಂಡಕ್ಕೆ ಶುಭಾಶಯಗಳು

    ನಿರೂಪ್ ಭಂಡಾರಿ : ಚಿತ್ರದ ಪ್ರತಿ ಫ್ರೇಮ್ನಲ್ಲಿಯೂ ಪ್ಯಾಷನ್ ಮತ್ತು ಶ್ರಮ ಕಣ್ಣಿಗೆ ಕಾಣುತ್ತಿದೆ

    ಸಿಂಪಲ್ ಸುನಿ : ಇದರ ರೀಚ್ ನೋಡಿದರೆ, ಹಾಲಿವುಡ್ಗೂ ಡಬ್ ಮಾಡಬಹುದು.

    ಡ್ಯಾನಿಷ್ ಸೇಟ್ : ಕರ್ನಾಟಕದಿಂದ ವಿಶ್ವ ಚಿತ್ರರಂಗಕ್ಕೆ ಇನ್ನೊಂದು ಕೊಡುಗೆ, ಅವನೇ ಶ್ರೀಮನ್ನಾರಾಯಣ

    ಚೇತನ್ ಕುಮಾರ್ : ಕನ್ನಡ ಚಿತ್ರರಂಗ ಪ್ರಜ್ವಲಿಸಲಿದೆ

  • ಅವರೇ.. ಇವರೇ.. ಶ್ರೀಮನ್ನಾರಾಯಣ ಟ್ರೇಲರ್ ರಿಲೀಸ್ ಮಾಡೋದು..

    avane srimannarayan gets star support

    ತಮಿಳಿನಲ್ಲಿ ಧನುಷ್, ತೆಲುಗಿನಲ್ಲಿ ನಾನಿ, ಮಲಯಾಳಂನಲ್ಲಿ ನಿವಿನ್ ಪೌಲ್ ಅವನೇ ಶ್ರೀಮನ್ನಾರಾಯಣ ಟ್ರೇಲರ್ ರಿಲೀಸ್ ಮಾಡಲಿದ್ದಾರೆ. ಅದೇ.. ಅದೇ ಹೊತ್ತಿನಲ್ಲಿ ಇಲ್ಲಿ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಅವನೇ ಶ್ರೀಮನ್ನಾರಾಯಣದ ಕನ್ನಡ ವರ್ಷನ್ ರಿಲೀಸ್ ಆಗಲಿದೆ. ಎಲ್ಲವೂ ಏಕಕಾಲದಲ್ಲಿ. ಸಮಯ ನವೆಂಬರ್ 28ರಂದು ಸಂಜೆ 4 ಗಂಟೆ.

    ಆ ದಿನ ಸಂಜೆ ನಾಲ್ಕು ರಾಜ್ಯಗಳ ಪತ್ರಕರ್ತರು ಬೆಂಗಳೂರಿನಲ್ಲಿರುತ್ತಾರೆ. ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಸಾಹಸಕ್ಕೆ 4 ರಾಜ್ಯಗಳ ಸ್ಟಾರ್‌ಗಳು ಹಾಗೂ ಪತ್ರಕರ್ತರು ಜೊತೆಯಾಗಲಿದ್ದಾರೆ.

    ಅಂದಹಾಗೆ ಚಿತ್ರ 2 ವರ್ಷ ಶೂಟಿಂಗ್ ಆಗಿ ಸಿದ್ಧವಾಗಿರುವಂತದ್ದು. ಕನ್ನಡದಲ್ಲಿ ಇದೊಂದು ದಾಖಲೆ. ಚಿತ್ರದ ನಾಯಕಿ ಶಾನ್ವಿ ಶ್ರೀವಾತ್ಸವ್. ನಿರ್ದೇಶಕ ಸಚಿನ್ ರವಿ. ಚಿತ್ರದ ಕುತೂಹಲದ ಒಂದೊAದೇ ಪುಟಗಳನ್ನು ಚಿತ್ರತಂಡ ತೆರೆಯುತ್ತಿದೆ. ಪ್ರತಿಯೊಂದೂ ಇಂಟರೆಸ್ಟಿAಗ್.

  • ಆಗ ಅಲೆಲೆಲೆ.. ಈಗ ಹ್ಯಾಂಡ್ಸಪ್ ಟ್ರೆಂಡಿAಗ್

    avane srimnarayna's hands up song goes viral

    ಅವನೇ ಶ್ರೀಮನ್ನಾರಾಯಣ ಚಿತ್ರದ ಹ್ಯಾಂಡ್ಸಪ್ ಹಾಡು ಹೊರಬಿದ್ದಿದ್ದೇ ತಡ ಟ್ರೆಂಡಿAಗ್ ಶುರುವಾಗಿದೆ. ರಕ್ಷಿತ್ ಶೆಟ್ಟಿ ಹಾಕಿದ ಹ್ಯಾಂಡ್ಸಪ್ ಚಾಲೆಂಜ್‌ನ್ನು ಅಭಿಮಾನಿಗಳು ಸ್ವೀಕರಿಸಿದ್ದಾರೆ. ಶಾನ್ವಿ ಶ್ರೀವಾತ್ಸವ್ ಅವರೇ ಸ್ಟೆಪ್ ಹಾಕಿದ ಮೇಲೆ ಇನ್ನೇನಿದೆ. ಸಾವಿರಾರು ಅಭಿಮಾನಿಗಳು ಇದು ದೇವರ ಸೃಷ್ಟಿಯ ಅವತಾರ ಎನ್ನುತ್ತಾ ಹ್ಯಾಂಡ್ಸಪ್ ಮಾಡುತ್ತಿದ್ದಾರೆ.

    ಕಿರಿಕ್ ಪಾರ್ಟಿ ಸಿನಿಮಾ ಬಂದಾಗ.. ಬೆಳಗೆದ್ದು ಯಾರ ಮುಖವಾ ನಾನಾನು ನೋಡಿದೆ.. ಕನಸಲ್ಲಿ ಅಲೆಲೆಲೆಲೆ.. ಅನ್ನೋದು ಟ್ರೆಂಡಿAಗ್ ಸೃಷ್ಟಿಸಿತ್ತು. ಈಗ ಹ್ಯಾಂಡ್ಸಪ್. ಅಜನೀಶ್ ಲೋಕನಾಥ್ ಸಂಗೀತ, ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿದೆ.

    ಇದನ್ನು ನಾವು ನಿರೀಕ್ಷಿಸಿದ್ದೆವು. ಇದು ಚಿತ್ರದ ಸಿಗ್ನೇಚರ್ ಟ್ಯೂನ್ ಮತ್ತು ಸ್ಟೆಪ್. ಈಗ ಜನರೇ ತಮ್ಮ ತಮ್ಮ ಗೆಳೆಯ, ಗೆಳತಿಯರಿಗೆ ಚಾಲೆಂಜ್ ಹಾಕ್ಕೊಂಡು ಸ್ಟೆಪ್‌ನ್ನು ಜನಪ್ರಿಯ ಮಾಡುತ್ತಿದ್ದಾರೆ ಎನ್ನುವ ಖುಷಿ ನಿರ್ದೇಶಕ ಸಚಿನ್ ಅವರಲ್ಲಿದೆ.

    ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಂತೂ ಹಾಡಿಗೆ ಸಿಗುತ್ತಿರುವ ರೆಸ್ಪಾನ್ಸ್ಗೆ ಥ್ರಿಲ್ ಆಗಿದ್ದಾರೆ. ಅಂದಹಾಗೆ ಹೀರೋ ಹಿಡಿದಿರುವ ಗನ್ ಹೆಸರೇ ಹ್ಯಾಂಡ್ಸಪ್.

  • ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ.. ರೈಲಲ್ಲಿ ನಾರಾಯಣ

    avane srimnannarayana promotions in train

    ಗೋಡೆಗಳ ಮೇಲೆ, ಬಸ್ಸುಗಳ ಮೇಲೆ, ಆಟೋಗಳ ಮೇಲೆ.. ಪೋಸ್ಟರ್ ಅಂಟಿಸುವುದನ್ನು ನೋಡಿದವರಿಗೆ ಅವನೇ ಶ್ರೀಮನ್ನಾರಾಯಣ ಹೊಸದೊಂದು ರೀತಿಯ ಪ್ರಚಾರ ಆರಂಭಿಸಿರುವುದು ವ್ಹಾವ್ ಎನಿಸಿದ್ದರೆ ಅಚ್ಚರಿಯಿಲ್ಲ. ಏಕೆಂದರೆ ನಾರಾಯಣ ಕಾಣಿಸಿರುವುದು ರೈಲುಗಳ ಮೇಲೆ. ಅಂದಹಾಗೆ ಇದು ದಕ್ಷಿಣ ಭಾರತ ಚಿತ್ರರಂಗದಲ್ಲೆ ಮೊದಲ ಪ್ರಯತ್ನ.

    ಬೆಂಗಳೂರು ಲೋಕಲ್ ಟ್ರೆöÊನು, ಬೆಂಗಳೂರು ಟು ರಾಮನಗರ, ಮೈಸೂರು, ಮಾರಿಕಕುಪ್ಪಂ (ಕೆಜಿಎಫ್), ಕುಪ್ಪಂ (ಆಂಧ್ರ), ಹಿಂದೂಪುರ, ಬಂಗಾರಪೇಟೆ, ವೈಟ್‌ಫೀಲ್ಡ್ ರೈಲುಗಳು, ಮೈಸೂರು-ಅರಸೀಕೆರೆ-ಶಿವಮೊಗ್ಗ ಹಾಗೂ ಹುಬ್ಬಳ್ಳಿ ಪ್ಯಾಸೆಂಜರ್ ರೈಲುಗಳಲ್ಲಿ ಅವನೇ ಶ್ರೀಮನ್ನಾರಯಣ ಪೋಸ್ಟರ್ ರಾರಾಜಿಸುತ್ತಿದೆ.

    ಇದೊಂದು ಹೊಸ ಪ್ರಯತ್ನ. ರೈಲಿನ ಬೋಗಿಗಳ ಒಳಗೆ ಸಿನಿಮಾ ಪ್ರಚಾರಕ್ಕೆ ಅವಕಾಶ ಕೊಟ್ಟಿದ್ದಾರೆ. 2020ರ ಜನವರಿ 20ರವರೆಗೆ ರೈಲುಗಳಲ್ಲಿ ಅವನೇ ಶ್ರೀಮನ್ನಾರಯಣ ಪೋಸ್ಟರ್ ಇರಲಿದೆ ಎಂದಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

  • ಇನ್ನು 70 ದಿನ ಕಾಯಿರಿ. ಅವನೇ ಬರ್ತಾನೆ.. ಬಂದೇ ಬರ್ತಾನೆ..!

    avane srimmanrayana may release in december

    ಅವನೇ ಶ್ರೀಮನ್ನಾರಾಯಣ. ಸುಮಾರು ಎರಡು ವರ್ಷಗಳಿಂದ ಸುದ್ದಿಯಲ್ಲಿರುವ ಚಿತ್ರ. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ್ ನಟಿಸಿರುವ ಚಿತ್ರದ ಪೋಸ್ಟರ್, ಟೀಸರುಗಳೇ ಭಾರಿ ಕುತೂಹಲ ಹುಟ್ಟಿಸಿವೆ. 5 ಭಾಷೆಗಳಲ್ಲಿ ರೆಡಿಯಾಗಿರುವ ಚಿತ್ರದ ಬಿಡುಗಡೆ ಯಾವಾಗ ಎನ್ನುವುದು ಅಭಿಮಾನಿಗಳ ಪ್ರಶ್ನೆಯಾಗಿತ್ತು. ಏಕೆಂದರೆ ರಕ್ಷಿತ್ ಶೆಟ್ಟಿ ಅಭಿನಯದ ಚಿತ್ರ ಬಂದು ಈ ಡಿಸೆಂಬರ್‍ಗೆ 3 ವರ್ಷ ತುಂಬಲಿದೆ. ಈ ನಿರೀಕ್ಷೆಗಳಿಗೆ, ಕಾತುರಗಳಿಗೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಉತ್ತರ ಕೊಟ್ಟಿದ್ದಾರೆ.

    ಇನ್ನು 70 ದಿನ. ಅವನು ಬಂದೇ ಬರ್ತಾನೆ ಎಂದಿದ್ದಾರೆ. ಅಂದರೆ ನವೆಂಬರ್ ಅಥವಾ ಡಿಸೆಂಬರ್‍ನಲ್ಲಿ ಅವನೇ ಶ್ರೀಮನ್ನಾರಾಯಣ ರಿಲೀಸ್ ಎನ್ನುವುದು ಪಕ್ಕಾ. ಸಚಿನ್ ರವಿ ನಿರ್ದೇಶನದ ಸಿನಿಮಾಗೆ ಚರಣ್ ರಾಜ್ ಮತ್ತು ಅಜನೀಶ್ ಲೋಕನಾಥ್ ಇಬ್ಬರೂ ಸಂಗೀತ ನೀಡಿದ್ದಾರೆ. ಸ್ಸೋ.. ಲಾಸ್ಟ್ 70 ಡೇಸ್.

  • ಇರೋವ್ರು ಮೂರು : ಗಣೇಶ್ ಹೃದಯ ಗೆಲ್ಲೋ ಚೆಲುವೆ ಯಾರು..?

    3 beauties race to win ganesh's heart in geetha

    ರಿಲೀಸ್ ಆಗೋಕೆ ರೆಡಿಯಾಗಿ ನಿಂತಿರೋ ಗೀತಾ ಚಿತ್ರದಲ್ಲಿ ಒಬ್ಬರಲ್ಲ.. ಇಬ್ಬರಲ್ಲ.. ಮೂರು ಮೂರು ಹೀರೋಯಿನ್ಸ್. ಮೂರು ಪಾತ್ರಗಳೂ ಸಿನಿಮಾದ ಒಂದೊಂದು ಪಿಲ್ಲರ್ ಎನ್ನುತ್ತಿದ್ದಾರೆ ನಿರ್ದೇಶಕ ವಿಜಯ್ ನಾಗೇಂದ್ರ. ಮೂವರು ನಾಯಕಿಯರ ಪೈಕಿ ಕನ್ನಡಿಗರಿಗೆ ಚಿರಪರಿಚಿತವಾಗಿರುವ ಮುಖ ಶಾನ್ವಿ ಶ್ರೀವಾಸ್ತವ್.

    ಶಾನ್ವಿಯದ್ದು ಚಿತ್ರದಲ್ಲಿ 2 ಶೇಡ್ ಪಾತ್ರವಿದೆ. 80ರ ದಶಕದಲ್ಲಿ ವೆಸ್ಟರ್ನ್ ಕಲ್ಚರ್‍ಗೆ ಮಾರು ಹೋದ ಹುಡುಗಿಯಾಗಿ ಒಂದು ಪಾತ್ರ ಮತ್ತು ಈಗಿನ ಜನರೇಷನ್ನಿನ ಸಾಫ್ಟ್‍ವೇರ್ ಎಂಜಿನಿಯರ್ ಪಾತ್ರ.

    ಇನ್ನು ಪ್ರಯಾಗ ಮಾರ್ಟಿನ್ ಅವರೇ ಚಿತ್ರದ ಗೀತಾ. ಅವರ ಪಾತ್ರದ ಹೆಸರು. ಚಿತ್ರದ ಟೈಟಲ್ ಪಾತ್ರವಾದ್ದರಿಂದ ಕುತೂಹಲ ಹೆಚ್ಚೇ ಇದೆ.

    ಇನ್ನು ಪಾರ್ವತಿ ಅರುಣ್ ಹೆಸರು ಗೀತಾಂಜಲಿ ಅನ್ನೋ ಪಾತ್ರ. ಬೇರೆ ಭಾಷೆಯ ಹುಡುಗಿ.

    ಮೂರು ಬೇರೆ ಬೇರೆ ಭಾಷೆಯ ಹುಡುಗಿಯರು ಇರೋದು ಯಾಕೆ ಅನ್ನೋದು ಕೂಡಾ ಒಂದು ಸಸ್ಪೆನ್ಸ್. ಭಾಷೆ, ಪ್ರೀತಿ ಎರಡರ ನಡುವೆ ಏನ್ ಕಥೆ..? ಗಣೇಶ್ ಯಾರಿಗೆ ಒಲಿತಾರೆ.. ಇನ್ನೊಂದು ವಾರ ಕುತೂಹಲ ಕಾಯ್ದಿಟ್ಟುಕೊಂಡರೆ ಉತ್ತರ ಸಿಗಲಿದೆ.

  • ಊರ್ವಶಿಯಲ್ಲಿ ಶ್ರೀಮನ್ನಾರಾಯಣ ಬಾಕ್ಸಿಂಗ್ ಡೇ ದರ್ಶನ

    Avane Srimannarayana Premiere Show Tpday

    ಅವನೇ ಶ್ರೀಮನ್ನಾರಾಯಣ ರಿಲೀಸ್ ಆಗುವುದು ಬಾಕ್ಸಿಂಗ್ ಡೇ ಮುಗಿದ ಮೇಲೆ. ಬಾಕ್ಸಿಂಗ್ ಡೇ ಎಂದರೆ ಗೊತ್ತಲ್ಲ, ಕ್ರಿಸ್‍ಮಸ್ ಮಾರನೇ ದಿನವನ್ನ ಬಾಕ್ಸಿಂಗ್ ಡೇ ಅಂತಾ ಕರೆಯೋದು ವಾಡಿಕೆ. ಆದರೆ, ಆ ಬಾಕ್ಸಿಂಗ್ ಡೇ ದಿನವೇ ಅವನೇ ಶ್ರೀಮನ್ನಾರಾಯಣ ದರ್ಶನ ಕೊಡಲಿದ್ದಾನೆ.

    ರಿಲೀಸ್ ಆಗುವುದು ಡಿ.27ಕ್ಕೇ ಆದರೂ, ಊರ್ವಶಿಯಲ್ಲಿ ಪ್ರೀಮಿಯರ್ ಶೋ ಇದೆ. 26ನೇ ತಾರೀಕು ರಾತ್ರಿ 9ಕ್ಕೆ ಊರ್ವಶಿಯಲ್ಲಿ ನಡೆಯಲಿರುವ ಪ್ರೀಮಿಯರ್ ಶೋನಲ್ಲಿ ಸೆಲಬ್ರಿಟಿಗಳು ಭಾಗವಹಿಸಲಿದ್ದಾರೆ.

    ಸಚಿನ್ ರವಿ ನಿರ್ದೇಶನದ ಸಿನಿಮಾಗೆ ರಕ್ಷಿತ್ ಶೆಟ್ಟಿ ಹೀರೋ. 3 ವರ್ಷಗಳ ಸುದೀರ್ಘ ಗ್ಯಾಪ್ ನಂತರ ಬರುತ್ತಿರುವ ಸಿನಿಮಾಗೆ ಶಾನ್ವಿ ಶ್ರೀವಾತ್ಸವ್ ನಾಯಕಿ. ಅಜನೀಶ್ ಮತ್ತು ಚರಣ್‍ರಾಜ್ ಮ್ಯೂಸಿಕ್ ಪವರ್ ಇರುವ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ.

  • ಒಂದಾನೊ0ದು ಕಾಲದಲ್ಲಿ.. ಅಮರಾವತಿ ಎಂಬ ಊರಿನಲ್ಲಿ..

    amaravathi was created for avane srimannaryana

    ಅವನೇ ಶ್ರೀಮನ್ನಾರಾಯಣ. ರಿಲೀಸ್ ಡೇಟ್ ಹತ್ತಿರವಾಗುತ್ತಿದೆ. ೩ ವರ್ಷದ ಪರಿಶ್ರಮ ಹೇಗಿರಬಹುದು ಎಂಬ ಕುತೂಹಲವೂ ಇದೆ. ಇಡೀ ಚಿತ್ರದ ಕಥೆ ನಡೆಯುವುದು ಈಗಿನ ಕಾಲದಲ್ಲಿ ಅಲ್ಲ. ಎಲ್ಲವೂ ಕಾಲ್ಪನಿಕ. ಊರು, ಜಗತ್ತು, ಪಾತ್ರ ಎಲ್ಲವೂ ಕಲ್ಪನಾ ಲೋಕದ ಸೃಷ್ಟಿಯೇ. ಚಿತ್ರಕ್ಕಾಗಿ ಒಂದು ನಗರ, ಕಾಡು, ಕೋಟೆಯನ್ನೇ ಸೃಷ್ಟಿಸಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.

    ಅಮರಾವತಿ ಎಂಬ ಊರು, ಅದರ ಸುತ್ತ ಒಂದು ಕೋಟೆ, ಕೋಟೆಯ ಪಕ್ಕದಲ್ಲೊಂದು ಕಾಡು.. ಎಲ್ಲವನ್ನೂ ಕಲಾ ನಿರ್ದೇಶಕರೇ ಸೃಷ್ಟಿಸಿದ್ದಾರೆ. ಅದಕ್ಕೆ ಕಾರಣವೂ ಇತ್ತೆನ್ನಿ. ಕಾಡಿಗೆ ಹೋಗಿ ಶೂಟ್ ಮಾಡಬೇಕೆಂದರೆ ಕನಿಷ್ಠ ೨೦ ದಿನದ ಶೂಟಿಂಗ್ ಇತ್ತು. ರಾತ್ರಿಯೇ ಶೂಟಿಂಗ್ ಆಗಬೇಕಿತ್ತು. ಅದು ಮೊದಲೇ ಕಾಡು ಪ್ರಾಣಿಗಳು ಓಡಾಡುವ ಸಮಯ. ಈ ಯಾವುದೇ ರಿಸ್ಕ್ ಬೇಡ ಎಂದುಕೊAಡು ಕಾಡಿನ ಸೆಟ್ಟನ್ನೇ ಸೃಷ್ಟಿಸಿಬಿಟ್ಟರಂತೆ ರಕ್ಷಿತ್ ಶೆಟ್ಟಿ.

    ಚಿತ್ರದ ಕಥೆ ಮತ್ತು ಹೀರೋ ರಕ್ಷಿತ್ ಶೆಟ್ಟಿ. ಒಂದು ಅದ್ಭುತ ಫ್ಯಾಂಟಸಿ ಲೋಕ ಸೃಷ್ಟಿಸಲು ೨೫ಕ್ಕೂ ಹೆಚ್ಚು ಸೆಟ್ ಹಾಕಿಸಿದ್ದಾರಂತೆ. ಸಚಿನ್ ರವಿ ನಿರ್ದೇಶನದ ಚಿತ್ರ ಡಿಸೆಂಬರ್ ೨೭ರಂದು ರಿಲೀಸ್ ಆಗುತ್ತಿದೆ.

  • ಓಲ್ಡ್ ಈಸ್ ಗೋಲ್ಡ್.. ಶಾನ್ವಿ ಈಸ್ ಬೋಲ್ಡ್

    shanvi srivatsav in retro look for geetha

    ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರದ ಚಿತ್ರೀಕರಣ ಬಿರುಸಾಗಿ ನಡೆಯುತ್ತಿದೆ. ಈ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ನಾಯಕಿ. ಇದರಲ್ಲಿ ಅವರದ್ದು ರೆಟ್ರೋ ಲುಕ್. ಅರ್ಥಾತ್ 80ರ ದಶಕದ ಚೆಲುವೆ. ಅವನೇ ಶ್ರೀಮನ್ನಾರಾಯಣದಲ್ಲೂ ರೆಟ್ರೋ ಲುಕ್ಕಿನಲ್ಲೇ ಮಿಂಚುತ್ತಿರುವ ಶಾನ್ವಿ, ಗೀತಾ ಚಿತ್ರದಲ್ಲಿ ಬೋಲ್ಡ್ & ಬ್ಯೂಟಿಫುಲ್ ಹುಡುಗಿಯಾಗಿ ನಟಿಸುತ್ತಿದ್ದಾರೆ.

    ಕಣ್ಣುಗಳಿಗೆ ದಪ್ಪ ಕಾಡಿಗೆ, ಆ ಕೇಶ ವಿನ್ಯಾಸ, ಹುಬ್ಬುಗಳ ವಿನ್ಯಾಸ ಬಹಳ ಇಷ್ಟವಾಯ್ತು ಎಂದು ಖುಷಿ ಹಂಚಿಕೊಂಡಿದ್ದಾರೆ ಶಾನ್ವಿ. ವಿಜಯ್ ನಾಗೇಂದ್ರ ನಿರ್ದೇಶನದ ಚಿತ್ರದಲ್ಲಿ ಶಾನ್ವಿಯವರೊಂದಿಗೆ ಪ್ರಯಾಗಾ ಮಾರ್ಟಿನ್ ಮತ್ತು ಪಾರ್ವತಿ ಕೂಡಾ ನಾಯಕಿಯರು. ಒಟ್ಟಿನಲ್ಲಿ ಗಣೇಶ್‍ಗೆ ಮುಗುಳುನಗೆ ನಂತರ ಈ ಚಿತ್ರದಲ್ಲೂ ಮೂರು ಮೂರು ಹೀರೋಯಿನ್ ಭಾಗ್ಯ.

  • ಕನ್ನಡ ಪ್ರೇಮಿ.. ಪರಭಾಷಾ ದ್ವೇಷಿಯಲ್ಲ ಈ ಶಂಕರ್

    ganesh clarifies on geetha doubts

    ಗೀತಾ ಸಿನಿಮಾ ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲಿ ಎದ್ದಿರುವ ಪ್ರಶ್ನೆ ಇದು. ಚಿತ್ರದಲ್ಲಿ ಗೋಕಾಕ್ ಚಳವಳಿಯ ಪ್ರಸ್ತಾಪ, ಗಣೇಶ್ ಅವರ ಸಿಡಿಲಿನಂತಾ ಮಾತುಗಳು.. ಇವೆಲ್ಲವನ್ನೂ ಕೇಳಿದವರಿಗೆ ಇದು ಪರಭಾಷಾ ದ್ವೇಷಿ ಸಿನಿಮಾನ ಎಂಬ ಅನುಮಾನ ಮೂಡಿರಲಿಕ್ಕೂ ಸಾಕು. ಇದೆಲ್ಲ ಅನುಮಾನಗಳಿಗೂ ಗಣೇಶ್ ಅವರೇ ಉತ್ತರ ಕೊಟ್ಟಿದ್ದಾರೆ.

    `ಚಿತ್ರದ ನಾಯಕ ಶಂಕರ್, ಅಪ್ಪಟ ಕನ್ನಡ ಪ್ರೇಮಿ. ಆದರೆ, ಪರಭಾಷಾ ದ್ವೇಷಿಯಲ್ಲ. ಪರಭಾಷೆಗಳನ್ನು ದ್ವೇಷಿಸುವ ಸಣ್ಣ ಅಂಶವೂ ಚಿತ್ರದಲ್ಲಿಲ್ಲ. ಭಾಷೆಯ ವಿಚಾರ ಬಂದಾಗ ಅಭಿಮಾನವನ್ನೇ ಹೋರಾಟವಾಗಿ ಬದಲಿಸುವಂತಹ ಸೂಕ್ಷ್ಮ ಶಕ್ತಿ ಚಿತ್ರದ ಕಥೆಯಲ್ಲಿದೆ ಎಂದಿದ್ದಾರೆ ಗಣೇಶ್.

    ವಿಜಯ್ ನಾಗೇಂದ್ರ ನಿರ್ದೇಶಿಸಿರುವ ಚಿತ್ರಕ್ಕೆ ಶಿಲ್ಪಾ ಗಣೇಶ್, ಸೈಯದ್ ಸಲಾಂ ನಿರ್ಮಾಪಕರು.

  • ಕನ್ನಡವೇ ಸತ್ಯ ಎಂದ ಗೀತಾಗೆ ಸ್ಟಾರ್ಸ್ ಚಪ್ಪಾಳೆ

    sandalwood stars appreciate geetha movie song

    ಗೋಲ್ಡನ್ ಸ್ಟಾರ್ ಗಣೇಶ್ ಅಭಿನದಯ ಗೀತಾ ರಿಲೀಸ್‍ಗೆ ರೆಡಿಯಾಗುತ್ತಿದೆ. ಸಿನಿಮಾ ರಿಲೀಸ್‍ಗೂ ಮೊದಲೇ ದೊಡ್ಡ ಸಂಚಲನ ಸೃಷ್ಟಿಸಿರುವುದು ಸಿನಿಮಾದ ಕನ್ನಡವೇ ಸತ್ಯ ಎಂಬ ಹಾಡು. ಸಂತೋಷ್ ಆನಂದರಾಮ್ ಬರೆದಿರುವ ಹಾಡನ್ನು ಪುನೀತ್ ರಾಜ್‍ಕುಮಾರ್ ಹಾಡಿದ್ದಾರೆ. ಹಾಡಿಗೆ ಪ್ರೇಕ್ಷಕರು ಶಿಳ್ಳೆ ಹೊಡೆಯುತ್ತಿದ್ದರೆ, ಚಿತ್ರರಂಗದ ಸ್ಟಾರ್‍ಗಳು ಚಪ್ಪಾಳೆ ಹೊಡೆಯುತ್ತಿದ್ದಾರೆ.

    ಚಿತ್ರದ ಹಾಡಿಗೆ ನಿರ್ದೇಶಕರಾದ ಯೋಗರಾಜ್ ಭಟ್, ರಿಷಬ್ ಶೆಟ್ಟಿ, ಸಿಂಪಲ್ ಸುನಿ, ರಘುರಾಮ್, ಪೈಲ್ವಾನ್ ಕೃಷ್ಣ, ಎ.ಪಿ.ಅರ್ಜುನ್, ತರುಣ್ ಸುಧೀರ್, ನಾಗಶೇಖರ್, ಪವನ್ ಒಡೆಯರ್, ಚೇತನ್, ಆರ್.ಜೆ.ಮಯೂರ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ನಟರಾದ ಕಿಚ್ಚ ಸುದೀಪ್, ಜಗ್ಗೇಶ್, ರಮೇಶ್ ಅರವಿಂದ್, ಶರಣ್, ಪ್ರೇಮ್, ಯುವರಾಜ್‍ಕುಮಾರ್, ಅಶಿಕಾ ರಂಗನಾಥ್, ಡಾಲಿ ಧನಂಜಯ್, ಹರ್ಷಿಕಾ ಪೂಣಚ್ಚ, ಬಾಲಾಜಿ, 

    ರವಿಶಂಕರ್ ಗೌಡ, ಜುಡಾನ್ ಸ್ಯಾಂಡಿ, ಧೀರನ್ ರಾಮ್‍ಕುಮಾರ್ ಹಾಗೂ ನಿರ್ಮಾಪಕರಾದ ವಿಜಯ್ ಕಿರಗಂದೂರು, ಕಾರ್ತಿಕ್ ಗೌಡ, ಕೆ.ಪಿ.ಶ್ರೀಕಾಂತ್ ಹಾಡನ್ನು ಬಹಳವಾಗಿ ಮೆಚ್ಚಿಕೊಂಡಿದ್ದಾರೆ.

  • ಕಾಮಿಡಿ ಕಿಲಾಡಿಗಳ ಜೊತೆ ಗೋಲ್ಡನ್ ಸ್ಟಾರ್

    ganesh talks about geetha movie

    ಗೋಲ್ಡನ್ ಸ್ಟಾರ್ ಗಣೇಶ್ ಕಾಮಿಡಿಗೆ ಫೇಮಸ್. ಗಣೇಶ್ ಅವರ ಟೈಮಿಂಗಿಗೆ ಸರಿಸಾಟಿಯಾಗುವುದು ಸುಲಭವಲ್ಲ. ಅಂತಹ ಗಣೇಶ್ ಕಾಮಿಡಿ ಕಿಲಾಡಿಗಳಿಗೆ ಹೋದರೆ ಹೇಗಿರುತ್ತೆ..?

    ಗೀತಾ ಚಿತ್ರದ ರಿಲೀಸ್ ಸಂಭ್ರಮದಲ್ಲಿರುವ ಗಣೇಶ್, ಕಾಮಿಡಿ ಕಿಲಾಡಿಗಳು ಶೋಗೆ ಹಾಜರಿ ಹಾಕಿದ್ದಾರೆ. ಯೋಗರಾಜ್ ಭಟ್, ಜಗ್ಗೇಶ್, ರಕ್ಷಿತಾ ಪ್ರೇಮ್ ಜಡ್ಜ್ ಆಗಿರುವ ಶೋನಲ್ಲಿ ಆನಂದ್ ನಿರೂಪಕ. ಪ್ರತಿ ವರ್ಷ ಹೊಸ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುವ ಕಾಮಿಡಿ ಶೋನಲ್ಲಿ ಗಣೇಶ್ ಉಪಸ್ಥಿತಿ, ಸ್ಪರ್ಧಿಗಳಿಗೆ ಸ್ಫೂರ್ತಿ ತುಂಬುವುದೂ ಪಕ್ಕಾ.

    ಶೋನಲ್ಲಿ ತಮ್ಮ ಗೀತಾ ಚಿತ್ರದ ಹಲವು ಸ್ಪೆಷಲ್ ಸಂಗತಿ ಹೇಳಲಿದ್ದಾರೆ ಗಣೇಶ್. ಗೋಕಾಕ್ ಚಳವಳಿ, ಕನ್ನಡಿಗರ ಹೋರಾಟ, ಪ್ರೀತಿ, ಭಾಷಾಭಿಮಾನ.. ಹೀಗೆ ಹಲವು ವಿಚಾರಗಳನ್ನಿಟ್ಟುಕೊಂಡು ಬರುತ್ತಿರುವ ಗೀತಾ ಚಿತ್ರ, ಕುತೂಹಲ ಸೃಷ್ಟಿಸಿದೆ. ವಿಜಯ್ ನಾಗೇಂದ್ರ ನಿರ್ದೇಶನದ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್, ಪ್ರಯಾಗ ಮಾರ್ಟಿನ್, ಪಾರ್ವತಿ ನಾಯಕಿಯರು. ಸುಧಾರಾಣಿ ಪ್ರಮುಖ ಪಾತ್ರದಲ್ಲಿದ್ದಾರೆ.

  • ಕಾಶಿ ಕುಮಾರಿ ಕನ್ನಡತಿಯಾಗೇಬಿಟ್ರು..!

    shanvi srivatsav dubs in kannada for the first time

    ಶಾನ್ವಿ ಶ್ರೀವಾಸ್ತವ್ ಕನ್ನಡಿಗರಿಗೆ ಚಿರಪರಿಚಿತ ಮುಖ. ಈಗಾಗಲೇ ದರ್ಶನ್, ಯಶ್, ಶ್ರೀಮುರಳಿ, ರಮೇಶ್, ಚಿರಂಜೀವಿ ಸರ್ಜಾ.. ಹೀಗೆ ಹಲವು ನಾಯಕರ ಜೊತೆ ನಟಿಸಿದ್ದಾರೆ.ಆದರೆ ಶಾನ್ವಿಯವರ ಮೂಲ ಕರ್ನಾಟಕ ಅಲ್ಲ. ಉತ್ತರ ಪ್ರದೇಶದ ಪುಣ್ಯಸ್ಥಳ ಕಾಶಿ, ಶಾನ್ವಿಯವರ ಹುಟ್ಟೂರು.

    ಈ ಕಾಶಿ ಕುಮಾರಿ ಕನ್ನಡಕ್ಕೆ ಬಂದಿದ್ದು ಚಂದ್ರಲೇಖ ಚಿತ್ರದ ಮೂಲಕ. ಅದಾದ ಮೇಲೆ ಹಲವು ಚಿತ್ರಗಳಲ್ಲಿ ನಟಿಸಿದ ಶಾನ್ವಿ, ಕನ್ನಡ ಕಲಿತರಾದರೂ.. ಕನ್ನಡದಲ್ಲಿಯೇ ಡಬ್ ಮಾಡುವಷ್ಟು ವಿಶ್ವಾಸ ಬಂದಿಲ್ಲ. ಆದರೆ ಮುಂದೊಂದು ದಿನ ಕನ್ನಡದಲ್ಲಿ ಡಬ್ ಮಾಡಿಯೇ ಮಾಡ್ತೀನಿ ಎಂದಿದ್ದರು. ಈಗ ಆ ಮಾತು ಉಳಿಸಿಕೊಂಡಿದ್ದಾರೆ.

    ಗಣೇಶ್ ಜೊತೆಗೆ ಗೀತಾ ಚಿತ್ರದಲ್ಲಿ ಶಾನ್ವಿಯವರದ್ದು ಮೇಯ್ನ್ ರೋಲ್. ಪ್ರಿಯಾ ಅನ್ನೋ ಸಾಫ್ಟ್‍ವೇರ್ ಎಂಜಿನಿಯರ್ ಆಗಿ ನಟಿಸಿರುವ ಶಾನ್ವಿ, ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ. ಗೀತಾ ಚಿತ್ರದಲ್ಲಿ ಕನ್ನಡ ಚಳವಳಿಯ ಪಾತ್ರವೂ ದೊಡ್ಡದು. ವಿಜಯ ನಾಗೇಂದ್ರ ನಿರ್ದೇಶನದ ಗೀತಾ ಇದೇ ವಾರ ರಿಲೀಸ್ ಆಗುತ್ತಿದೆ.

  • ಕಿರಿಕ್ ಪಾರ್ಟಿ ಡೇಟಿಗೇ ಅವನೇ ಶ್ರೀಮನ್ನಾರಾಯಣ

    avane srimanarayana to release in december

    ಅವನೇ ಶ್ರೀಮನ್ನಾರಾಯಣ. ಕನ್ನಡದ ಬಹುಕೋಟಿ ಬಜೆಟ್ ಸಿನಿಮಾ. ರಕ್ಷಿತ್ ಶೆಟ್ಟಿ, ಶಾನ್ವಿ ಅಭಿನಯದ ಚಿತ್ರ ಪ್ರೊಡಕ್ಷನ್ ಹಂತದಲ್ಲೇ 2 ವರ್ಷ ಪೂರೈಸಿದೆ. ಬರೋಬ್ಬರಿ 200 ದಿನಗಳ ಶೂಟಿಂಗ್ ಆಗಿದೆ. ಸಿನಿಮಾ ರಿಲೀಸ್ ಯಾವಾಗ ಎಂಬ ಪ್ರಶ್ನೆಗೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಇತ್ತೀಚೆಗೆ 70 ದಿನಗಳ ಕೌಂಟ್ ಡೌನ್ ಕೊಟ್ಟಿದ್ದರು. ಈಗ ರಿಲೀಸ್ ಡೇಟ್ ಹೊರಬಿದ್ದಿದೆ.

    ಎಲ್ಲವೂ ಪ್ಲಾನ್ ಪ್ರಕಾರವೇ ಆದರೆ, ಡಿಸೆಂಬರ್ ಕೊನೆಯಲ್ಲಿ ಅವನೇ ಶ್ರೀಮನ್ನಾರಾಯಣ ರಿಲೀಸ್ ಆಗಲಿದೆ. ಅದು ಕಿರಿಕ್ ಪಾರ್ಟಿ ರಿಲೀಸ್ ಆದ ಡೇಟ್ನಲ್ಲೇ ಬರುವ ಸಾಧ್ಯತೆ ಹೆಚ್ಚು. 2016ರಲ್ಲಿ ಕಿರಿಕ್ ಪಾರ್ಟಿ ಬಾಕ್ಸಾಫೀಸ್ನಲ್ಲಿ ಅಲೆಲೆಲೆಲೆ.. ಎಂದೇ ಸದ್ದು ಮಾಡಿತ್ತು. ಈಗ ಶ್ರೀಮನ್ನಾರಾಯಣನ ಟೈಂ.

     

  • ಕಿರಿಕ್ ಪಾರ್ಟಿ ರೆಕಾರ್ಡ್ ಮೊದಲ ವಾರಕ್ಕೇ ಮುರಿದ ನಾರಾಯಣ

    avane srimannarayana breaks kirik party record

    ಕಿರಿಕ್ ಪಾರ್ಟಿ, ರಕ್ಷಿತ್ ಶೆಟ್ಟಿ ವೃತ್ತಿ ಜೀವನದ ಸೂಪರ್ ಡ್ಯೂಪರ್ ಹಿಟ್ ಸಿನಿಮಾ. ಆ ಚಿತ್ರ ರಿಲೀಸ್ ಆದ 3 ವರ್ಷಗಳ ನಂತರ ತೆರೆಗೆ ಬಂದ ಅವನೇ ಶ್ರೀಮನ್ನಾರಾಯಣ, ಮೊದಲ ವಾರವೇ ಬಾಕ್ಸಾಫೀಸ್ ದಾಖಲೆ ಮುರಿದಿದೆ. 400 ಚಿತ್ರಮಂದಿರಗಳಲ್ಲಿ ತೆರೆ ಕಂಡಿರುವ ಅವನೇ ಶ್ರೀಮನ್ನಾರಾಯಣ, ಮೊದಲ ವಾರವೇ ಕಿರಿಕ್‌ ಪಾರ್ಟಿ ಸಿನಿಮಾಗಿಂತ ನಾಲ್ಕು ಪಟ್ಟು ಹೆಚ್ಚು ಗಳಿಸಿದೆ ಎಂದು ಸ್ವತಃ ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ.

    ಹುಬ್ಬಳ್ಳಿಯಲ್ಲಿ ಥಿಯೇಟರ್ ವಿಸಿಟ್ ನಂತರ ಮಾತನಾಡಿದ ರಕ್ಷಿತ್ ಶೆಟ್ಟಿ, ಈ ಚಿತ್ರ ಮಾಸ್ ಪ್ರೇಕ್ಷಕರ ಜತೆಗೆ, ಕೌಟುಂಬಿಕ ಪ್ರೇಕ್ಷಕರನ್ನೂ ಸೆಳೆದಿದೆ ಎಂದು ತಿಳಿಸಿದ್ದಾರೆ. ವಿಜಯಯಾತ್ರೆ ನಡೆಸುತ್ತಿರುವ ರಕ್ಷಿತ್ ಶೆಟ್ಟಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ನಾವು ನಿರೀಕ್ಷಿಸಿದಷ್ಟು ಪ್ರತಿಕ್ರಿಯೆ ಸಿಗಲಿಲ್ಲ ಎಂದು ಪ್ರಾಮಾಣಿಕವಾಗಿಯೇ ಒಪ್ಪಿಕೊಂಡಿದ್ದಾರೆ. ಆದರೆ, ವಿಮರ್ಶೆ ನೋಡಿ ಹಾಗೂ ಸಿನಿಮಾ ನೋಡಿದವರ ಬಾಯಿ ಮಾತಿನ ಪ್ರಚಾರದಿಂದಾಗಿ ಸಿನಿಮಾಗೆ ಜನ ಬರುವ ಸಂಖ್ಯೆ ಹೆಚ್ಚುತ್ತಿದೆ ಎಂಬ ಖುಷಿಯನ್ನೂ ಹಂಚಿಕೊಂಡಿದ್ದಾರೆ.

    ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ನಾಯಕಿ. ಸಚಿನ್ ರವಿ ನಿರ್ದೇಶಕ. ಒಟ್ಟಾರೆ ಇಡೀ ಚಿತ್ರತಂಡ ಸಂಭ್ರಮ ಯಾತ್ರೆಯಲ್ಲಿದೆ.

  • ಗೀತಾ ಕೊಟ್ಟ ಆತ್ಮವಿಶ್ವಾಸ.. ಕನ್ನಡತಿಯಾದರು ಶಾನ್ವಿ..!

    geetha movie gave me confidence

    ಅವನೇ ಶ್ರೀಮನ್ನಾರಾಯಣ. ರಕ್ಷಿತ್ ಶೆಟ್ಟಿ-ಪುಷ್ಕರ್ ಕಾಂಬಿನೇಷನ್ನಿನಲ್ಲಿ ಬರುತ್ತಿರೋ ಅತಿ ದೊಡ್ಡ ಸಿನಿಮಾ. 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ಹೀರೋಯಿನ್. ಅವರು ಕಾಶಿಯ ಚೆಲುವೆ. ಕನ್ನಡ ಗೊತ್ತಿಲ್ಲ. ಆದರೆ ಗೀತಾ ಚಿತ್ರ ಕೊಟ್ಟಿರುವ ಕಾನ್ಫಿಡೆನ್ಸ್ ಹೇಗಿದೆ ಎಂದರೆ, ತಮ್ಮ ಚಿತ್ರಗಳಿಗೆ ತಾವೇ ಡಬ್ ಮಾಡೋಕೆ ಮುಂದಾಗಿದ್ದಾರೆ. ಅವನೇ ಶ್ರೀಮನ್ನಾರಾಯಣ ಚಿತ್ರದ ಲಕ್ಷ್ಮಿ ಪಾತ್ರಕ್ಕೂ ಅವರೇ ಡಬ್ ಮಾಡಿದ್ದಾರೆ.

    ಗೀತಾ ಚಿತ್ರದಲ್ಲಿನ ಅವರ ವಾಯ್ಸ್‍ಗೆ ಸಿಕ್ಕ ಮೆಚ್ಚುಗೆಯೇ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೂ ಡಬ್ ಮಾಡಲು ಪ್ರೇರಣೆ ನೀಡಿದೆಯಂತೆ. ಡೈಲಾಗ್‍ಗಳು ಉದ್ದುದ್ದ ಇದ್ದವು. ಶೂಟಿಂಗ್ ವೇಳೆ ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡೆ. ಈಗ ಡಬ್ ಮಾಡಿದ್ದೇನೆ. ನನಗೀಗ ಕನ್ನಡ ಚೆನ್ನಾಗಿಯೇ ಬರುತ್ತೆ ಎನ್ನುವ ಶಾನ್ವಿ ಶ್ರೀವಾಸ್ತವ್, ಈಗ ಕಾಶಿ ಹುಡುಗಿಯೇನಲ್ಲ. ಕನ್ನಡತಿಯೇ.

  • ಗೀತಾ ಟೀಂ ವಿರುದ್ಧ ಶಾನ್ವಿ ಅಸಮಾಧಾನ..?

    why is shanvi srivatsav upset

    ಒಂದು ಒಳ್ಳೆಯ ಸಿನಿಮಾ ನೋಡೋಕೆ ಯಾರು ತಾನೆ ಇಷ್ಟಪಡಲ್ಲ. ನಾವೆಲ್ಲ ನೋಡ್ತೀವಲ್ಲ. ಪ್ರೇಕ್ಷಕರಿಗಾಗಿ, ಒಳ್ಳೆಯ ಸಿನಿಮಾ ಮಾಡೋಕೆ ಯಾರು ತಾನೇ ಬಯಸಲ್ಲ. ಆದರೆ, ಪ್ರತಿಯೊಂದಕ್ಕೂ ಪ್ರಾಮಾಣಿಕತೆ ಇರಬೇಕು. ಆಟಗಳಲ್ಲಿ ಗೆಲ್ಲಲು ಹೇಗೆ ಒಬ್ಬ ಕ್ರೀಡಾಪಟು, ತನ್ನ ಶಕ್ತಿಯೆಲ್ಲವನ್ನೂ ಧಾರೆಯೆರೆಯುತ್ತಾನೋ.. ಹಾಗೆ.. ನನ್ನ ಮನವಿ ಇಷ್ಟೆ.. ವೃತ್ತಿ ಪರತೆ, ಶಿಸ್ತು, ಪ್ರಾಮಾಣಿಕತೆ ಎಲ್ಲವೂ ಜೊತೆಗೂಡಿದಾಗ ಮಾತ್ರವೇ ಒಳ್ಳೆಯ ಸಿನಿಮಾ ಬರಲು ಸಾಧ್ಯ.

    ಒಂದು ಸಿನಿಮಾದಲ್ಲಿ ಪ್ರತಿಯೊಬ್ಬ ಕಲಾವಿದನೂ ಮುಖ್ಯ. ನಮಗೆ ಹೇಳುವ ಕಥೆಯೇ ಒಂದು, ತೆರೆ ಮೇಲೆ ಬರುವುದೇ ಮತ್ತೊಂದು ಎಂದಾಗಬಾರದು. ಬದಲಾವಣೆಗಳಾದರೆ, ಕನಿಷ್ಠ ಮಾಹಿತಿಯನ್ನಾದರೂ ನೀಡಬೇಕು. ಬದಲಾವಣೆ ಓಕೆ ಎನ್ನಿಸಿದರೆ, ಸಮಸ್ಯೆ ಇಲ್ಲ. ನಮಗೂ ಅರ್ಥವಾಗುತ್ತೆ.

    ನಾನು ಹೇಳೋದಿಷ್ಟೆ.. ಸುಳ್ಳು ಸುಳ್ಳು ಭರವಸೆ, ಇನ್ಯಾರನ್ನೋ ಓಲೈಸುವುದು ಒಳ್ಳೆಯದಲ್ಲ. ಅದು ಅನ್‍ಪ್ರೊಫೆಷನಲಿಸಂನ ಪರಾಕಾಷ್ಠೆಯಷ್ಟೆ.

    ಇಂಥಾದ್ದೊಂದು ಪತ್ರವನ್ನು ಸೋಷಿಯಲ್ ಮೀಡಿಯಾದ ತಮ್ಮ ಪೇಜ್‍ನಲ್ಲಿ ಬರೆದುಕೊಂಡಿದ್ದಾರೆ ಶಾನ್ವಿ. ಒಂದು ಮೂಲದ ಪ್ರಕಾರ ಗೀತಾ ಚಿತ್ರದಲ್ಲಿನ ಅವರ ಪಾತ್ರವನ್ನು ಚಿಕ್ಕದು ಮಾಡಿ, ಹಾಡೊಂದನ್ನು ಕಟ್ ಮಾಡಲಾಗಿದೆಯಂತೆ. ಈ ಬೇಸರಕ್ಕೇ ಶಾನ್ವಿ ಈ ರೀತಿ ಬರೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಸತ್ಯ ಇದೇನಾ.. ಗೊತ್ತಿಲ್ಲ. ಶಾನ್ವಿಯ ಪತ್ರ ಪ್ರಶ್ನೆಗಳನ್ನು ಸೃಷ್ಟಿಸಿರುವುದಂತೂ ಸತ್ಯ.

  • ಗೀತಾ ಪ್ರೀತಿ ಕಥೆನಾ..? ಕನ್ನಡ ಹೋರಾಟದ ಕಥೆನಾ..?

    geetha trailer released

    ಗೀತಾ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಒಬ್ಬರಲ್ಲ.. ಇಬ್ಬರಲ್ಲ.. ಮೂವರು ಹೀರೋಯಿನ್ಗಳಿರೋ ಚಿತ್ರವಿದು.ಗಣೇಶ್ ಎದುರು ಶಾನ್ವಿ ಶ್ರೀವಾಸ್ತವ, ಪ್ರಯಾಗ ಮಾರ್ಟಿನ್, ಪಾರ್ವತಿ ಅರೂಣ್ ಇದ್ಧಾರೆ. ದೇವರಾಜ್, ಸುಧಾರಾಣಿ, ರಂಗಾಯಣ ರಘು, ಅಚ್ಯುತ್ ಕುಮಾರ್.. ಹೀಗೆ ಘಟಾನುಘಟಿಗಳ ದಂಡೇ ಇದೆ. ವಿಜಯ್ ನಾಗೇಂದ್ರ ನಿರ್ದೇಶನದ ಚೊಚ್ಚಲ ಸಿನಿಮಾವಿದು.

    ಈಗಾಗಲೇ ಪುನೀತ್ ಹಾಡಿನಿಂದ ಕನ್ನಡಿಗ.. ಕನ್ನಡಿಗ.. ಎನ್ನುವ ಸೆನ್ಸೇಷನ್ ಸೃಷ್ಟಿಸಿರುವ ಗೀತಾ ಟ್ರೇಲರ್ ನೋಡಿದವರಿಗೆ ಒಂದು ಕುತೂಹಲ ಹುಟ್ಟುವುದು ಸಹಜ. ಚಿತ್ರದಲ್ಲಿರೋದು ಪ್ರೇಮ ಕಥೆನಾ..? ಅಥವಾ ಕನ್ನಡಿಗರ ಸ್ವಾಭಿಮಾನದ ಹೋರಾಟದ ಕಥೆನಾ..? ರಾಜ್ ಭಾಗವಹಿಸಿದ್ದ ಗೋಕಾಕ್ ಚಳವಳಿಗೂ, ಗೀತಾ ಚಿತ್ರಕ್ಕೂ ಏನು ಸಂಬಂಧ..? ಇದು 80ರ ದಶಕದ ಕಥೆನಾ.. ಅಥವಾ ಈಗಿನ ಕಾಲದ ಲವ್ ಸ್ಟೋರಿನಾ..?

    ಸೈಯದ್ ಸಲಾಂ, ಶಿಲ್ಪಾ ಗಣೇಶ್ ನಿರ್ಮಾಣದ ಗೀತಾ ಇಂತಹ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಲ್ಲಿಗೆ ಚಿತ್ರ ಅರ್ಧ ಗೆದ್ದಂತೆ. ಟ್ರೇಲರ್ ಉದ್ದೇಶವೇ ಅದು, ಚಿತ್ರದ ಬಗ್ಗೆ ಕುತೂಹಲ ಹುಟ್ಟಿಸುವುದು. ಸೆನ್ಸಾರ್ ಮೆಚ್ಚುಗೆ ಪಡೆದಿರುವ ಸಿನಿಮಾ ಇದೇ ತಿಂಗಳ ಕೊನೆಯಲ್ಲಿ 27ನೇ ತಾರೀಕು ರಿಲೀಸ್ ಆಗುತ್ತಿದೆ.