ಅವನೇ ಶ್ರೀಮನ್ನಾರಾಯಣ ಚಿತ್ರದ ಮೊದಲ ಹಾಡಿದು. ಟ್ರೇಲರ್, ಟೀಸರ್ ಮೂಲಕವೇ ಹವಾ ಸೃಷ್ಟಿಸಿದ್ದ ಎಎಸ್‌ಎನ್ ಚಿತ್ರದ ಮೊದಲ ಹಾಡು ನಾಯಕನ ಇಂಟ್ರೊಡಕ್ಷನ್ ಸಾಂಗ್. ಇಡೀ ಚಿತ್ರವೇ ಭಾರಿ ಬಜೆಟ್ಟಿನದ್ದು. ಆದರೆ, ಈ ಹಾಡು ಆ ಅದ್ಧೂರಿ ಬಜೆಟ್ಟಿನ ಕೇಕ್ ಮೇಲಿನ ಹಣ್ಣಿನ ಹಾಗೆ.
ಇದು ಸಿನಿಮಾದ ಮೊದಲ ಹಾಡು. ನಾಯಕನ ಮೇಲೆಯೇ ಕೇಂದ್ರೀಕರಿಸಿರುವ ಸ್ಪೆಷಲ್ ಸಾಂಗ್.
ಇದೊAದೇ ಹಾಡಿಗಾಗಿ ಸ್ಪೆಷಲ್ ಸೆಟ್ಟಿನಲ್ಲಿ 20 ದಿನಗಳ ಶೂಟಿಂಗ್ ಮಾಡಿದ್ದಾರೆ ನಿರ್ದೇಶಕ ಸಚಿನ್.
ಹಾಡಿಗೆ ಕನ್ನಡದಲ್ಲಿ ನಾಗಾರ್ಜುನ ಶರ್ಮ, ತೆಲುಗಿನಲ್ಲಿ ರಾಮಜೋಗಯ್ಯ ಶಾಸ್ತಿç, ತಮಿಳಿನಲ್ಲಿ ವಿವೇಕ್, ಯುಗಭಾರತಿ, ಅರುಣ್ ರಾಜ್, ಕಾಮರಾಜ್, ಹಿಂದಿಯಲ್ಲಿ ಶೆಲ್ಲಿ, ಮಲಯಾಳಂನಲ್ಲಿ ಅಖಿಲ್ ಎಂ.ಬೋಸ್ ಸಾಹಿತ್ಯ ರಚಿಸಿದ್ದಾರೆ.
ಈ ಹಾಡಿನಲ್ಲಿ ಕಥೆಯ ಥೀಮ್ ಕೂಡಾ ಇದೆ.
ಅಜನೀಶ್ ಲೋಕನಾಥ್ ಅದ್ಭುತ ಮ್ಯೂಸಿಕ್ ಕೊಟ್ಟಿದ್ದಾರೆ.
ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಅದ್ಧೂರಿ ಮೇಕಿಂಗ್‌ನ ಹಾಡು 5 ಭಾಷೆಗಳಲ್ಲಿ ಬರುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ತಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ