` shanvi srivatsav, - chitraloka.com | Kannada Movie News, Reviews | Image

shanvi srivatsav,

 • Tarak Official Trailer On September 21st

  tarak official trailer

  Darshan starrer 'Tarak' directed by 'Milana' Prakash is all set to release on the 29th of September. Meanwhile, the official trailer of the film will be releasing on 21st (Thursday) at six in the evening.

  'Tarak' is being produced by Dushyanth who earlier produced 'Monalisa', 'Sri' and 'Milana'. Shruthi Hariharan and Sanvi Srivatsav will be playing the female leads opposite Darshan. Devaraj, Sadhu Kokila and others play prominent roles in the film.

  A V Krishnakumar is the cinematographer, while Arjun Janya is the music composer of this film.

 • ಅಪ್ಪನ ಹಾಡಿನ ಮೂಲಕ ಕ್ರೇಝ್ ಸೃಷ್ಟಿಸಿದ ಕ್ರೇಜೀಸ್ಟಾರ್ ಪುತ್ರ

  yaare neenu roja hoove remixed song

  ಯಾರೆ ನೀನು.. ರೋಜಾ ಹೂವೇ.. ಯಾರೆ ನೀನು.. ಮಲ್ಲಿಗೆ ಹೂವೆ.. ಅದು ರವಿಚಂದ್ರನ್ ಅಭಿನಯದ ನಾನು ನನ್ನ ಹೆಂಡ್ತಿ ಚಿತ್ರದ ಸೂಪರ್ ಹಿಟ್ ಹಾಡು. ಆ ಹಾಡಿನ ನಂತರ, ಆ ಕಾಲದ ಹುಡುಗಿಯರ ಹೃದಯದಲ್ಲಿ ರವಿಚಂದ್ರನ್ ಪ್ರೇಮಲೋಕ ಕಟ್ಟಿದ್ದು ಸುಳ್ಳಲ್ಲ. ಈಗ ಅವರ ಮಗನ ಸರದಿ. ರವಿಚಂದ್ರನ್ ಪುತ್ರ ಮನೋರಂಜನ್ ನಟಿಸಿರುವ ಮೊದಲ ಚಿತ್ರ ಸಾಹೇಬದಲ್ಲಿ ಯಾರೆ ನೀನು ರೋಜಾ ಹೂವೆ ಹಾಡನ್ನು ಬಳಸಿಕೊಳ್ಳಲಾಗಿದೆ.

  ಆ ಹಾಡನ್ನು ರೀಮಿಕ್ಸ್ ಮಾಡಿ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಓಲ್ಡ್ ಚಿತ್ರದಲ್ಲಿ ರೋಜಾ ಹೂವುಗಳ ಜೊತೆ ರವಿಚಂದ್ರನ್ ಕುಣಿದಿದ್ದರಲ್ಲ.. ಅದಕ್ಕಿಂತ ಅದ್ಭುತವಾಗಿ ಹೆಜ್ಜೆ ಹಾಕಿದ್ದಾರೆ ರವಿ ಪುತ್ರ ಮನೋರಂಜನ್. ಜೊತೆಯಲ್ಲಿ ರೋಜಾ ಹೂವುಗಳಿವೆ. ಹಾಡು ಕ್ರೇಜ್ ಸೃಷ್ಟಿಸಿಬಿಟ್ಟಿದೆ.

   

 • ಅವನೇ ಶ್ರೀಮನ್ನಾರಾಯಣ ಟೀಸರ್ ಹಿಟ್ ಸಂಭ್ರಮ

  avane srimannarayana teser released

  ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆಂದೇ ಅವನೇ ಶ್ರೀಮನ್ನಾರಾಯಣ ಚಿತ್ರದ ಟೀಸರ್ ಹೊರಬಿತ್ತು. 80ರ ದಶಕದ ಪೊಲೀಸ್ ಕಥೆ ಹೊಂದಿರುವ ಸಿನಿಮಾದ ಟೀಸರ್, ಆನ್‍ಲೈನ್‍ನಲ್ಲಿ ಸೂಪರ್ ಡ್ಯೂಪರ್ ಹಿಟ್. ಹಳೆಯ ಕಾಲದ ಗೆಟಪ್ಪು, ಶೋಲೆಯನ್ನು ನೆನಪಿಸುವಂತಹ ವಿಲನ್‍ಗಳು, ಸ್ಟೈಲು.. ಟೀಸರ್ ನೋಡಿದವರು ಫುಲ್ ಫಿದಾ.

  ನಾಯಕಿ ಶಾನ್ವಿ ಶ್ರೀವಾಸ್ತವ್, ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ, ಮಧುಸೂದನ್ ರಾವ್ ಮೊದಲಾದವರಿರುವ ಚಿತ್ರಕ್ಕೆ ಸಚಿನ್ ನಿರ್ದೇಶನವಿದೆ. ಟೀಸರ್ ನೋಡಿದವರಿಗೆ ಇಷ್ಟವಾಗಿರೋದು ರಕ್ಷಿತ್ ಶೆಟ್ಟಿ, ಮ್ಯಾನರಿಸಂ. ಟೀಸರ್ ವೀಕ್ಷಿಸಿದವರ ಸಂಖ್ಯೆ ಈಗಾಗಲೇ 4 ಲಕ್ಷ ಗಡಿದಾಟಿರುವುದು ವಿಶೇಷ.ಮಲಯಾಳಂನಲ್ಲೂ ರಿಲೀಸ್ ಮಾಡಿ ಎಂದು ಕೇರಳದ ಅಭಿಮಾನಿಗಳು ಆನ್‍ಲೈನ್‍ನಲ್ಲೇ ಡಿಮ್ಯಾಂಡ್ ಇಟ್ಟಿರುವುದು ಅವನೇ ಶ್ರೀಮನ್ನಾರಾಯಣ ಚಿತ್ರತಂಡಕ್ಕೆ ಬೂಸ್ಟ್ ಕೊಟ್ಟಂತಾಗಿದೆ.

 • ಓಲ್ಡ್ ಈಸ್ ಗೋಲ್ಡ್.. ಶಾನ್ವಿ ಈಸ್ ಬೋಲ್ಡ್

  shanvi srivatsav in retro look for geetha

  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರದ ಚಿತ್ರೀಕರಣ ಬಿರುಸಾಗಿ ನಡೆಯುತ್ತಿದೆ. ಈ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ನಾಯಕಿ. ಇದರಲ್ಲಿ ಅವರದ್ದು ರೆಟ್ರೋ ಲುಕ್. ಅರ್ಥಾತ್ 80ರ ದಶಕದ ಚೆಲುವೆ. ಅವನೇ ಶ್ರೀಮನ್ನಾರಾಯಣದಲ್ಲೂ ರೆಟ್ರೋ ಲುಕ್ಕಿನಲ್ಲೇ ಮಿಂಚುತ್ತಿರುವ ಶಾನ್ವಿ, ಗೀತಾ ಚಿತ್ರದಲ್ಲಿ ಬೋಲ್ಡ್ & ಬ್ಯೂಟಿಫುಲ್ ಹುಡುಗಿಯಾಗಿ ನಟಿಸುತ್ತಿದ್ದಾರೆ.

  ಕಣ್ಣುಗಳಿಗೆ ದಪ್ಪ ಕಾಡಿಗೆ, ಆ ಕೇಶ ವಿನ್ಯಾಸ, ಹುಬ್ಬುಗಳ ವಿನ್ಯಾಸ ಬಹಳ ಇಷ್ಟವಾಯ್ತು ಎಂದು ಖುಷಿ ಹಂಚಿಕೊಂಡಿದ್ದಾರೆ ಶಾನ್ವಿ. ವಿಜಯ್ ನಾಗೇಂದ್ರ ನಿರ್ದೇಶನದ ಚಿತ್ರದಲ್ಲಿ ಶಾನ್ವಿಯವರೊಂದಿಗೆ ಪ್ರಯಾಗಾ ಮಾರ್ಟಿನ್ ಮತ್ತು ಪಾರ್ವತಿ ಕೂಡಾ ನಾಯಕಿಯರು. ಒಟ್ಟಿನಲ್ಲಿ ಗಣೇಶ್‍ಗೆ ಮುಗುಳುನಗೆ ನಂತರ ಈ ಚಿತ್ರದಲ್ಲೂ ಮೂರು ಮೂರು ಹೀರೋಯಿನ್ ಭಾಗ್ಯ.

 • ತಾರಕ್ ಚಿತ್ರದ ಹೀರೋ ನಾನಲ್ಲ - ದರ್ಶನ್

  i am not tarak hero

  ತಾರಕ್, ದರ್ಶನ್ ಅಭಿನಯದ 49ನೇ ಚಿತ್ರ. ಚಿತ್ರದ ಹೀರೋ ಅವರೇ. ಹೀಗಿರುವಾಗ ಚಿತ್ರದ ಹೀರೋ ನಾನಲ್ಲ  ಎಂದು ದರ್ಶನ್ ಅವರೇ ಹೇಳಿದರೆ ಏನಪ್ಪಾ ಕಥೆ ಅಂತಾ ತಲೆಗೆ ಹುಳ ಬಿಟ್ಕೋಬೇಡಿ. ದರ್ಶನ್ ಪ್ರಕಾರ ಚಿತ್ರದ ಹೀರೋ ಡೈನಮಿಕ್ ಸ್ಟಾರ್ ದೇವರಾಜ್. 

  ತಾರಕ್ ಚಿತ್ರದ ಆಡಿಯೋ ಬಿಡುಗಡೆ ವೇಳೆ, ದೇವರಾಜ್ ಅವರ ಪ್ರೀತಿ ಮತ್ತು ಪಾತ್ರವನ್ನು ಪ್ರೀತಿಯಿಂದ ಮೆಚ್ಚಿಕೊಂಡ ದರ್ಶನ್, ದೇವರಾಜ್ ಅವರನ್ನು ಹೊಗಳಿದರು. ದೇವರಾಜ್ ತಮಗಿಂತ ಎತ್ತರದ ಸ್ಥಾನದಲ್ಲಿದ್ಧಾರೆ ಎಂದು ಹೇಳಿ ಪ್ರೀತಿಯಿಂದ ಧನ್ಯವಾದ ಅರ್ಪಿಸಿದರು ದರ್ಶನ್.

  ಚಿತ್ರದಲ್ಲಿ ದೇವರಾಜ್ ದರ್ಶನ್ ತಂದೆಯ ಪಾತ್ರ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ಫುಟ್​ಬಾಲ್ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಮಗೆ ಈ ಚಿತ್ರದಲ್ಲಿ ಹಳೆಯ ದರ್ಶನ್ ಸಿಕ್ಕೋದಿಲ್ಲ. ನಿರ್ದೇಶಕ ಮಿಲನ ಪ್ರಕಾಶ್ ನಿರ್ದೇಶಿಸಿರುವ ನಟ ದರ್ಶನ್ ಅವರನ್ನಷ್ಟೇ ನೋಡಬಹುದು ಎನ್ನುವ ಮೂಲಕ ಚಿತ್ರದ ಬಗೆಗಿನ ಕುತೂಹಲವನ್ನೂ ಹೆಚ್ಚಿಸಿದ್ರು ದರ್ಶನ್.

 • ತಾರಕ್ ಡ್ಯಾನ್ಸ್ ಮಾಡಿ, ಬಹುಮಾನ ಗೆಲ್ಲಿ

  tarak dance competition

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ದರ್ಶನ್ ಅಭಿಮಾನಿಗಳಂತೂ ಕಾತುರದಿಂದ ಕಾಯುತ್ತಿದ್ದಾರೆ. ಆ ಕಾತುರಕ್ಕೆ ಕಿಚ್ಚು ಹಚ್ಚುವಂತೆ ವಿಶೇಷ ಅವಕಾಶವೊಂದನ್ನು ಒದಗಿಸಿದೆ ತಾಕರ್ ಚಿತ್ರತಂಡ.

  ತಾರಕ್ ಚಿತ್ರಗಳ ಹಾಡಿಗೆ ನೃತ್ಯ ಮಾಡುವುದು ಹಾಗೂ ಬಹುಮಾನ ಗೆಲ್ಲುವುದು. ಪ್ರಥಮ ಬಹುಮಾನ 25 ಸಾವಿರ, ದ್ವಿತೀಯ ಬಹುಮಾನ 10 ಸಾವಿರ ರೂ. ನೀವು ಮಾಡಬೇಕಾದ್ದು ಇಷ್ಟೆ..ತಾರಕ್ ಚಿತ್ರದ ಯಾವುದಾದರೂ ಹಾಡನ್ನು ಆಯ್ಕೆ ಮಾಡಿಕೊಳ್ಳಿ. ಆ ಹಾಡಿಗೆ ನಿಮ್ಮದೇ ಶೈಲಿಯಲ್ಲಿ ನೃತ್ಯ ಮಾಡಿ. ಅದನ್ನು ವಿಡಿಯೋ ಮಾಡಿ ಕಳುಹಿಸಿಕೊಡಿ. 

  ನಿಮ್ಮ ನೃತ್ಯದ ವಿಡಿಯೋಗಳನ್ನು  This email address is being protected from spambots. You need JavaScript enabled to view it.ಗೆ ಮೇಯ್ಲ್ ಮಾಡಿ. ವಿಡಿಯೋ ಕಳುಹಿಸಿಕೊಡಲು ಕೊನೆಯ ದಿನ ಸೆಪ್ಟೆಂಬರ್ 29.

 • ತಾರಕ್ ತರುಣಿಯರು..ಅವರು ಹಂಗೆ..ಇವರು ಹಿಂಗೆ..

  tarak movie image

  ತಾರಕ್ ಚಿತ್ರದಲ್ಲಿ ಶೃತಿ ಹರಿಹರನ್ ಹಾಗೂ ಶಾನ್ವಿ ಶ್ರೀವಾಸ್ತವ್ ಇಬ್ಬರೂ ನಾಯಕಿಯರು. ಆ ಇಬ್ಬರು ಸುಂದರಿಯರಲ್ಲಿ ದರ್ಶನ್ ಒಲಿಯುವುದು ಯಾರಿಗೆ..? ಅದನ್ನು ನಿರ್ದೇಶಕ ಮಿಲನ ಪ್ರಕಾಶ್ ಗುಟ್ಟಾಗಿಯೇ ಇಟ್ಟಿದ್ದಾರೆ. ಸಿನಿಮಾ ರಿಲೀಸ್ ಆಗುವವರೆಗೂ ಅದು ಗೊತ್ತಾಗಲ್ಲ. ಆದರೆ, ಚಿತ್ರದ ಚಿತ್ರೀಕರಣದ ವೇಳೆ ನಿರ್ದೇಶಕರು ಅನುಭವಿಸಿದ ಕಷ್ಟವೇ ಬೇರೆ.

  ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ಅವರದ್ದು ಬಬ್ಲಿ ಬಬ್ಲಿ ಪಾತ್ರ. ಪಟಪಟನೆ ಮಾತನಾಡುವ ತುಂಟಾಟದ ಹುಡುಗಿ. ಎನ್‍ಆರ್‍ಐ ಬೇರೆ. ಶಾನ್ವಿಯನ್ನು ನೋಡಿದವರು, ಅವರು ಹಾಗೇನೇ ಇರ್ತಾರೆ ಬಿಡಿ ಅಂದ್ಕೋತಾರೆ. ಆದರೆ, ರಿಯಲ್ ಲೈಫಲ್ಲಿ ಶಾನ್ವಿ ಅದಕ್ಕೆ ಪೂರ್ತಿ ಉಲ್ಟಾ. ಸಿಕ್ಕಾಪಟ್ಟೆ ಸೈಲೆಂಟು.

  ಇನ್ನು ಅದೇ ಚಿತ್ರದಲ್ಲಿ ಶೃತಿ ಹರಿಹರನ್ ಅವರದ್ದು ಸೈಲೆಂಟ್ ಗರ್ಲ್ ಪಾತ್ರ. ಆದರೆ, ಅದಕ್ಕೆ ಕಂಪ್ಲೀಟ್ ಉಲ್ಟಾ ವ್ಯಕ್ತಿತ್ವ ಶೃತಿ ಅವರದ್ದು. ಕಲ್ಲನ್ನೂ ಕೂಡಾ ಕರಗಿಸಿ, ಅದಕ್ಕೆ ಮಾತು ಬರಿಸುವ ಕಲೆ ಶೃತಿ ಅವರಿಗೆ ಅದು ಹೇಗೋ ಸಿದ್ಧಿಸಿಬಿಟ್ಟಿದೆ. ಅವರಿದ್ದ ಕಡೆ, ನಗು, ಉಲ್ಸಾಸ, ಉತ್ಸಾಹಗಳಿಗೆ ಬರವಿಲ್ಲ. 

  ಹೀಗೆ ಕಲಾವಿದೆಯರ ವೊರಿಜಿನಲ್ ವ್ಯಕ್ತಿತ್ವಕ್ಕೆ ತದ್ವಿರುದ್ಧವಾದ ಪಾತ್ರ ಕೊಟ್ಟು ಗೆದ್ದಿದ್ದಾರೆ ಪ್ರಕಾಶ್. ಇನ್ನು ಚಿತ್ರವನ್ನು ಗೆಲ್ಲಿಸುವ ಹೊಣೆ ದಾಸನ ಅಭಿಮಾನಿಗಳದ್ದು.

  Related Articles :-

  ಮನೆಯಲ್ಲೇ ತಾರಕೋತ್ಸವ ಕಣ್ತುಂಬಿಕೊಳ್ಳಿ..

  ಧೋನಿಗೂ ದರ್ಶನ್​ಗೂ ತಾರಕ್ ಲಿಂಕ್

  Tarak To Release On Sep 29th

  Tarak Teaser Gets Huge Response

  ದರ್ಶನ್ ತಾರಕ್ ಟ್ರೇಲರ್ ಸಖತ್ತಾಗಿದೆ ಗುರೂ..

  ತಾರಕ್ ಚಿತ್ರದ ಹೀರೋ ನಾನಲ್ಲ - ದರ್ಶನ್

  Tarak Songs Released

  Tarak Songs To Release Today

  Tarak Will Have 6 Audio Teasers

  Darshan Off To Switzerland For Tarak Shooting

 • ತಾರಕ್‍ನಲ್ಲಿ ದರ್ಶನ್‍ಗೆ ದೇಸೀ..ವಿದೇಶಿ ರಸಗವಳ

  desi videshi mix in tarak

  ತಾರಕ್ ಚಿತ್ರ ರಿಲೀಸ್‍ಗೆ ಹತ್ತಿರವಾಗುತ್ತಿದ್ದಂತೆ ಚಿತ್ರದಲ್ಲಿ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿರಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಅಭಿಮಾನಿಗಳಿಗೆ ಆ ಕುತೂಹಲ ಡಬಲ್ ಆಗಿದೆ. ಚಿತ್ರದಲ್ಲಿ ದರ್ಶನ್ ವಿದೇಶಿ ಹುಡುಗ. ಅಂದರೆ, ಭಾರತದಿಂದ ಹೋಗಿ ವಿದೇಶದಲ್ಲಿ ನೆಲೆಸಿರುವ ಪಾತ್ರ. ಚಿತ್ರದ ಕಥೆಯೂ ಅದೇ. ವಿದೇಶದಲ್ಲಿ ನೆಲೆಸಿರುವವರ ಸಂಭ್ರಮ, ಸಂಕಟ, ತಾಕಲಾಟ, ಸಂಬಂಧಗಳ ಕುರಿತಾದದ್ದು. 

  ಹಾಗಂತ ಸಿನಿಮಾ ಪೂರ್ತಿ ಅಲ್ಲಿಯೇ ಇರಲ್ಲ. ಸ್ವದೇಶಕ್ಕೆ ಬರುತ್ತೆ. ಹೀಗಾಗಿ ದರ್ಶನ್‍ಗೆ ಚಿತ್ರದಲ್ಲಿ ಎರಡುಮೂರು ಗೆಟಪ್‍ಗಳಿವೆ. ಸ್ವದೇಶಕ್ಕೆ ಬರುವ ನಾಯಕ, ಆತನ ತಾತ, ಮತ್ತವರ ಕುಟುಂಬದ ಜೊತೆ ದರ್ಶನ್ ಜರ್ನಿಯೇ ಸಿನಿಮಾ ಸ್ಟೋರಿ. ದರ್ಶನ್ ಕೇರ್‍ಟೇಕರ್‍ಗಳಾಗಿ ಚಿತ್ರದಲ್ಲಿ ಹಿರಿಯ ಕಲಾವಿದರ ದಂಡೇ ಇದೆ.

  ದರ್ಶನ್ ಮಾಸ್ ಹೀರೋ. ಹೀಗಾಗಿ ಅಭಿಮಾನಿಗಳಿಗೆ ನಿರಾಸೆ ಮಾಡದ ರೀತಿಯಲ್ಲಿ ಫೈಟ್ಸ್, ಡೈಲಾಗ್ಸ್ ಇವೆ. ಹಾಗೆಂದು ಸಂಪೂರ್ಣವಾಗಿ ಇದು ರೆಗ್ಯುಲರ್ ದರ್ಶನ್ ಸಿನಿಮಾ ಅಲ್ಲ. ಮಿಲನ ಪ್ರಕಾಶ್ ಅವರ ಫ್ಯಾಮಿಲಿ ಟಚ್ ಕೂಡಾ ಚಿತ್ರದಲ್ಲಿದೆ. ಹೀಗಾಗಿ ತಾರಕ್ ರಸಗವಳವಾಗುವುದು ಗ್ಯಾರಂಟಿ.

  Related Articles :-

  ತಾರಕ್ : ಬಾವ ಬಾಮೈದರೇ ನಿರ್ಮಾಪಕ, ನಿರ್ದೇಶಕ

  ಶಾನ್ವಿಗೇಕೆ ಪದೇ ಪದೇ ದೆವ್ವ ಹಿಡಿಯುತ್ತೆ..?

  ದರ್ಶನ್‍ಗೆ ಅಜ್ಜನಾಗಲು ದೇವರಾಜ್ ಒಪ್ಪಿದ್ದು ಹೇಗೆ..?

  ತಾರಕ್ ತಾರಾಗಣದಲ್ಲಿ ಕಲಾವಿದರ ಹಬ್ಬ

  ಸೈಲೆಂಟ್ ಸುನಾಮಿಯಾಗುತ್ತಿದೆ ತಾರಕ್

  ಸಖತ್ತಾಗಿದೆ ತಾರಕ್ ಟ್ರೇಲರ್

  ಇಬ್ಬರು ಮಹಾಮೌನಿಗಳ ಮಿಲನ ತಾರಕ್

  ಯೂರೋಪ್‍ನ 20 ಸ್ಥಳಗಳಲ್ಲಿ ತಾರಕ್

 • ದರ್ಶನ್ ಅಭಿಮಾನಿಗಳೇ ಥ್ಯಾಂಕ್ಸ್

  arman mallik thanks darshan fans

  ದರ್ಶನ್ ಅಭಿಮಾನಿಗಳೇ ಥ್ಯಾಂಕ್ಸ್.. ಈ ಮಾತು ಹೇಳ್ತಿರೋದು ಬಾಲಿವುಡ್ ಸಿಂಗರ್ ಅರ್ಮಾನ್ ಮಲಿಕ್. ದರ್ಶನ್ ಚಿತ್ರಗಳಲ್ಲಿ ಹಾಡಿದ ನಂತರ ಸ್ಯಾಂಡಲ್‍ವುಡ್‍ನಲ್ಲಿ ನನ್ನ ಅಭಿಮಾನಿಗಳ ಸಂಖ್ಯೆ ಹೆಚ್ಚಿತು. ದರ್ಶನ್‍ಗೆ ಅತ್ಯಂತ ದೊಡ್ಡ ಸಂಖೈಎಯ ಫ್ಯಾನ್ಸ್ ಇದ್ದಾರೆ. ಅವರೆಲ್ಲ ಈಗ ನನಗೂ ಫ್ಯಾನ್ಸ್ ಆಗಿದ್ಧಾರೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.

  ಮುಂಗಾರು ಮಳೆ ಚಿತ್ರದಲ್ಲಿ ಸೋನು ನಿಗಮ್‍ರ ಹಾಡು ಕೇಳಿದ ಮೇಲೆ, ನನಗೂ ಕನ್ನಡದಲ್ಲಿ ಹಾಡಬೇಕು ಎಂಬ ಕನಸು ಹುಟ್ಟಿತ್ತು. ಅದು ಈಡೇರಿದ್ದು ಚಕ್ರವರ್ತಿ ಚಿತ್ರದಿಂದ. ಈಗ ತಾರಕ್‍ನಲ್ಲೂ ಹಾಡಿದ್ದೇನೆ ಎಂದು ಖುಷಿ ಹಂಚಿಕೊಂಡಿದ್ದಾರೆ ಅರ್ಮಾನ್ ಮಲಿಕ್.

 • ಧ್ರುವ ಸರ್ಜಾ ಪೊಗರಿಳಿಸೋಕೆ ಡಬಲ್ ಬ್ಯೂಟಿ ಕ್ವೀನ್ಸ್..!

  dhuva's double pogaru

  ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿದಿದೆ. ಈ ಬಾರಿ ಧ್ರುವ ಸರ್ಜಾ 2 ವರ್ಷ ಕಾಯುವುದಿಲ್ಲ ಎನ್ನುವ ಭರವಸೆ ಇದೆ. ಏಕೆಂದರೆ, ಚಿತ್ರದ ನಿರ್ದೇಶಕ ನಂದಕಿಶೋರ್. ಡಿಸೆಂಬರ್ 14ಕ್ಕೆ ಪೊಗರು ಚಿತ್ರದ ಮುಹೂರ್ತ ಫಿಕ್ಸ್ ಆಗಿದೆ. ಚಿತ್ರೀಕರಣ ಶುರುವಾಗುವುದು ಮುಂದಿನ ತಿಂಗಳು. ಅಂದಹಾಗೆ ಚಿತ್ರಕ್ಕೆ ಕ್ಲಾಪ್ ಮಾಡಲಿರುವುದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್.

  ಅದ್ದೂರಿಯಾಗಿ ತೆರೆಗೆ ಬಂದ ಬಹಾದ್ದೂರ್‍ನ `ಪೊಗರು' ಇಳಿಸೋಕೆ ಇಬ್ಬರು ಬ್ಯೂಟಿ ಕ್ವೀನ್‍ಗಳು ಭರ್ಜರಿಯಾಗಿ ಎಂಟ್ರಿ ಕೊಡ್ತಿರೋದು ವಿಶೇಷ. ಒಬ್ಬರು ರಶ್ಮಿಕಾ ಮಂದಣ್ಣ. ಮತ್ತೊಬ್ಬರು ಶಾನ್ವಿ ಶ್ರೀವಾಸ್ತವ್. ಗಂಗಾಧರ್ ನಿರ್ಮಾಣದ ಚಿತ್ರದಲ್ಲಿ ಜಗಪತಿ ಬಾಬು, ಚಿಕ್ಕಣ್ಣ, ಸಾಧು ಕೋಕಿಲ, ಪ್ರಕಾಶ್ ರೈ ಮೊದಲಾದ ದೊಡ್ಡ ಕಲಾವಿದರ ದಂಡೇ ಇದೆ. 

   

   

 • ಪಂಚಭಾಷಾ ಸಿನಿಮಾ ಅವನೇ ಶ್ರೀಮನ್ನಾರಾಯಣ

  after kgf avane srimananrayana to release in 5 languages

  ರಕ್ಷಿತ್ ಶೆಟ್ಟಿ ಸಿನಿಮಾ ಬಂದು ಎರಡೂವರೆ ವರ್ಷವಾಯ್ತು. ಇನ್ನೂ 3 ತಿಂಗಳು ಕಾಯಬೇಕು. ಆಗ ಬರ ನೀಗಲಿದೆ. ಅವನೇ ಶ್ರೀಮನ್ನಾರಾಯಣ ಆಗಸ್ಟ್‍ನಲ್ಲಿ ತೆರೆಗೆ ಬರ್ತಾನೆ. ಒಂದಲ್ಲ.. ಎರಡಲ್ಲ.. ಐದು ಭಾಷೆಗಳಲ್ಲಿ ಮಾತನಾಡ್ತಾನೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಮಾತನಾಡಲಿದ್ದಾನೆ ಶ್ರೀಮನ್ನಾರಾಯಣ.

  ಪುಷ್ಕರ್ ಮಲ್ಲಿಕಾರ್ಜುನಯ್ಯ, ಪ್ರಕಾಶ್ ಗೌಡ ನಿರ್ಮಾಣದ ಚಿತ್ರಕ್ಕೆ ಯುವ ನಿರ್ದೇಶಕ ಸಚಿನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಶ್ವೇತಾ ಶ್ರೀವಾಸ್ತವ್ ಹೀರೋಯಿನ್. 9 ಸೆಟ್ಟುಗಳಲ್ಲಿ 200 ದಿನ ಶೂಟಿಂಗ್ ಮಾಡಿರುವ ಸಿನಿಮಾ ಅವನೇ ಶ್ರೀಮನ್ನಾರಾಯಣ.

  ಆಗಸ್ಟ್‍ನಲ್ಲಿ ಯಾವಾಗ ಅನ್ನೋದು ಫೈನಲ್ ಆಗಿಲ್ಲ. ಒಬ್ಬ ನಟನಾಗಿ ನನಗೂ ಕುತೂಹಲವಿದೆ ಎಂದಿರುವ ರಕ್ಷಿತ್ ಶೆಟ್ಟಿ, ಹಿಂದಿಯಲ್ಲಿಯೂ ಅವರೇ ಡಬ್ ಮಾಡಿದ್ದಾರಂತೆ. 

 • ರಾಜ್ಯೋತ್ಸವಕ್ಕೆ ಶ್ರದ್ಧಾ-ಶಾನ್ವಿ ಕೊಡುಗೆ ಏನು..?

  shraddha shanvi's gift for rajyotsava

  ಕನ್ನಡ ರಾಜ್ಯೋತ್ಸವಕ್ಕೆ ಎಲ್ಲರೂ ಒಂದಲ್ಲ ರೀತಿಯಲ್ಲಿ ತಯಾರಾಗುತ್ತಾರೆ. ಚಿತ್ರರಂಗದವರಂತೂ ವಿಶೇಷವಾಗಿಯೇ ರಾಜ್ಯೋತ್ಸವವನ್ನು ಸಂಭ್ರಮಿಸುತ್ತಾರೆ. ಶ್ರದ್ಧಾ ಶ್ರೀನಾಥ್ ಹಾಗೂ ಶಾನ್ವಿ ಶ್ರೀವಾಸ್ತವ್ ಕನ್ನಡ ರಾಜ್ಯೋತ್ಸವಕ್ಕೆ ನಮಿಸುತ್ತಿರುವ ರೀತಿಯೇ ವಿಶೇಷ.

  ಇಬ್ಬರೂ ಸೇರಿಕೊಂಡು ಒಂದು ವಿಡಿಯೋ ಮಾಡಿದ್ದಾರೆ. ಡಾ.ರಾಜ್, ವಿಷ್ಣು, ಶಂಕರ್‍ನಾಗ್, ಅಂಬರೀಷ್, ರವಿಚಂದ್ರನ್, ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಪುನೀತ್ ಸೇರಿದಂತೆ ಒಟ್ಟು 14 ಕನ್ನಡ ಕಲಾವಿದರ ಹಾಡುಗಳ ತುಣುಕುಗಳಿಗೆ ಸ್ಟೆಪ್ ಹಾಕಿದ್ದಾರೆ. 

  ಒಬ್ಬೊಬ್ಬ ನಟನ ಸ್ಟೆಪ್ 10 ಸೆಕೆಂಡ್‍ಗಳಲ್ಲಿ ಬಂದು ಹೋಗುತ್ತೆ. ಹಾಡಿಗೆ ತಕ್ಕಂತ ಕಾಸ್ಟ್ಯೂಮ್ ಕೂಡಾ ಮಾಡಿಕೊಂಡಿದ್ದಾರೆ ಶ್ರದ್ಧಾ ಮತ್ತು ಶಾನ್ವಿ. ಇವರ ಜೊತೆ ಕಾಮಿಡಿ ಕಲಾವಿದ ಪ್ರದೀಪ್ ಕೂಡಾ ಇದ್ದಾರೆ. ಇದೇ ದಿನ ವಿಡಿಯೋ ಬಿಡುಗಡೆಯಾಗುತ್ತಿದೆ.

 • ಶಾನ್ವಿ ಹೀರೋ ರಕ್ಷಿತ್ ಶೆಟ್ಟಿ ಅಲ್ಲ.. ಲೂನಾ..!

  shanvi srivatsav talks about her movie avana srimananrayana

  ಅವನೇ ಶ್ರೀಮನ್ನಾರಾಯಣ ಚಿತ್ರದ ಹೀರೋಯಿನ್ ಶಾನ್ವಿ ಶ್ರೀವಾಸ್ತವ್. ಚಿತ್ರದ ಹೀರೋ ರಕ್ಷಿತ್ ಶೆಟ್ಟಿ. ಆದರೆ, ಸಿನಿಮಾದಲ್ಲಿ ಶಾನ್ವಿ ಅತೀ ಹೆಚ್ಚು ಜೊತೆಯಲ್ಲಿರೋದು ಲೂನಾದ ಜೊತೆಗಂತೆ. ಲಕ್ಷ್ಮೀ ಅನ್ನೋ ಹೆಸರಿನ ಬುದ್ದಿವಂತ, ಮೆಚ್ಯೂರ್ಡ್ ಹುಡುಗಿಯ ಪಾತ್ರ ಮಾಡುತ್ತಿರುವ ಶಾನ್ವಿ, ನನ್ನ ಜೊತೆ ಈ ಚಿತ್ರದಲ್ಲಿ ಲೂನಾ ಪ್ರಮುಖ ಆಕರ್ಷಣೆ ಎಂದಿದ್ದಾರೆ.

  ಸಿನಿಮಾ ತಡವಾಗಿದೆಯಾದರೂ, ಒಂದೊಳ್ಳೆ ಸಿನಿಮಾ. ಇದಕ್ಕಾಗಿ ಲೇಟ್ ಆಗಿದ್ದಕ್ಕೂ ಬೇಸರವೇನಿಲ್ಲ. ಚಿತ್ರದ ಕಥೆ ಪವರ್‍ಫುಲ್ ಆಗಿದೆ. ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ರಕ್ಷಿತ್ ಶೆಟ್ಟಿ ಜೊತೆಗೆ ಇಷ್ಟು ಬೇಗ ನಟಿಸುವ ಚಾನ್ಸ್ ಸಿಗುತ್ತೆ ಎಂದುಕೊಂಡಿರಲಿಲ್ಲ ಎಂದಿದ್ದಾರೆ ಶಾನ್ವಿ.

  ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ಮತ್ತು ಹೆಚ್.ಕೆ.ಪ್ರಕಾಶ್ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಸಚಿನ್ ರವಿ ನಿರ್ದೇಶಕ. ಚಿತ್ರದ ಹಾಡುಗಳ ಚಿತ್ರೀಕರಣ ಭರದಿಂದ ಸಾಗಿದೆ.

 • ಶಾನ್ವಿಯ ಎಳನೀರು ಚಾಲೆಂಜ್ ಏನ್ ಗೊತ್ತಾ..?

  shanvi srivatsav's tender coconut water

  ಕ್ಯೂಟ್ ಹುಡುಗಿ ಶಾನ್ವಿ ಶ್ರೀವಾಸ್ತವ, ಹೊಸದೊಂದು ಚಾಲೆಂಜ್ ಹಾಕಿದ್ದಾರೆ. ಅದು ಎಳನೀರು ಚಾಲೆಂಜ್. ಚಾಲೆಂಜ್ ಇಷ್ಟೆ, ಎಳನೀರನ್ನು ಸ್ಟ್ರಾ ಬಳಸದೆ ಕುಡಿಯಬೇಕು.. ಅಷ್ಟೆ.

  ನನಗೂ ಗೊತ್ತಿರಲಿಲ್ಲ, ನನ್ನ ಫ್ರೆಂಡ್ ಒಬ್ಬರು ಚಾಲೆಂಜ್ ಮಾಡಿದ್ರು. ಮೊದಲ ನಾಲ್ಕಾರು ಸಲ ಎಳನೀರನ್ನು ಮೈಮೇಲೆಲ್ಲ ಚೆಲ್ಲಿಕೊಂಡೆ.. ಆನಂತರ ಪ್ರಾಕ್ಟೀಸ್ ಆಯ್ತು. ಮೊದಮೊದಲು ಅದು ತಮಾಷೆಯಾಗಿಯೇ ಇತ್ತು. ಆದರೆ, ಸೀರಿಯಸ್ಸಾಗಿ ಯೋಚನೆ ಮಾಡಿದಾಗ, ಸ್ಟ್ರಾ ಬಳಸೋದನ್ನು ನಿಲ್ಲಿಸಿದ್ರೆ ಎಷ್ಟೊಂದು ಪ್ಲಾಸ್ಟಿಕ್ ಬಳಕೆ ತಪ್ಪಿಸಬಹುದಲ್ವಾ ಅನ್ನಿಸ್ತು. ಹೀಗಾಗಿ ಈ ಎಳನೀರು ಚಾಲೆಂಜ್ ಎಂದಿದ್ದಾರೆ ಶಾನ್ವಿ.

  ತಮ್ಮ ಆನ್‍ಲೈನ್ ಪೇಜ್‍ನಲ್ಲಿ ಎಳನೀರನ್ನು ಸ್ಟ್ರಾ ಇಲ್ಲದೆ ಕುಡಿಯುತ್ತಿವ ವಿಡಿಯೋ ಹಾಕಿದ್ದಾರೆ. ಅವರು ಈ ಚಾಲೆಂಜ್ ಹಾಕಿರೋದು ತಮ್ಮ ಸೋದರಿ ವಿದಿಷಾಗೆ, ನಂತರ ಶೃತಿ ಹರಿಹರನ್, ರಕ್ಷಿತ್ ಶೆಟ್ಟಿ, ಸಂಯುಕ್ತಾ ಹೆಗ್ಡೆ, ಮನೋರಂಜನ್ ರವಿಚಂದ್ರನ್, ರಾಧಿಕಾ ಪಂಡಿತ್ ಹಾಗೂ ಆಕಾಂಕ್ಷಾ ಸಿಂಗ್‍ಗೆ.

  ನಾವು ದಿನಕ್ಕೆ ಎಷ್ಟು ಪ್ಲಾಸ್ಟಿಕ್‍ನ್ನ ರಸ್ತೆಗೆ ಎಸೆಯುತ್ತೇವೆ ಅಂತಾ ನೆನೆಸ್ಕೊಂಡ್ರೆ ಶಾಕ್ ಆಗುತ್ತೆ. ಹಸು, ನಾಯಿ, ಮೀನುಗಳನ್ನು ಕೊಲ್ಲುವ  ಈ ಪ್ಲಾಸ್ಟಿಕ್ ಹಂತ ಹಂತವಾಗಿ ಮನುಷ್ಯರನ್ನೇ ಕೊಲ್ಲುತ್ತದೆ. ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಅನ್ನಿಸ್ತು ಅಷ್ಟೆ ಎಂದಿದ್ದಾರೆ ಶಾನ್ವಿ. 

  ಪ್ಲಾಸ್ಟಿಕ್ ವಿರುದ್ಧ ಅಭಿಯಾನಕ್ಕೆ ನೀವೂ ರೆಡಿ ಇದ್ದೀರಾದರೆ, ಎಳನೀರು ಚಾಲೆಂಜ್‍ನ್ನು ನೀವೂ ಟ್ರೈ ಮಾಡಬಹುದು.

 • ಶ್ರೀಮನ್ನಾರಾಯಣನಾದ ರಕ್ಷಿತ್ ಶೆಟ್ಟಿ

  avane srimannarayana launched

  ಕಿರಿಕ್ ಪಾರ್ಟಿಯ ನಂತರ ಹೆಚ್ಚೂ ಕಡಿಮೆ ಒಂದು ವರ್ಷ ವಿಶ್ರಾಂತಿ ತೆಗೆದುಕೊಂಡಿದ್ದ ರಕ್ಷಿತ್ ಶೆಟ್ಟಿ ಕಡೆಗೂ ಹೊಸ ಸಿನಿಮಾ ಶುರು ಮಾಡಿದ್ದಾರೆ. ವಿಶ್ರಾಂತಿ ಎಂದರೆ, ವಿಶ್ರಾಂತಿಯೇನೂ ಅಲ್ಲ. ಸ್ಕ್ರಿಪ್ಟ್ ವರ್ಕ್‍ನಲ್ಲಿ ಬ್ಯುಸಿಯಾಗಿದ್ದರು. ಅಷ್ಟೆ. ಆದರೆ, ಹೊಸ ಚಿತ್ರ ಯಾವುದೂ ಸೆಟ್ಟೇರಿರಲಿಲ್ಲ. 

  ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಬೆಂಗಳೂರಿನ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಾಯಕಿ ಶಾನ್ವಿ ಶ್ರೀವಾಸ್ತವ, ನಿರ್ದೇಶಕ ಸಚಿನ್, ರಶ್ಮಿಕಾ ಮಂದಣ್ಣ, ನಿರ್ದೇಶಕ ಸುನಿ, ಮೇಘನಾ ಗಾಂವ್ಕರ್ ಸೇರಿದಂತೆ ತಂಡದ ಸ್ನೇಹಿತರೆಲ್ಲ ಹಾಜರಿದ್ದು ಹೊಸ ಚಿತ್ರಕ್ಕೆ ಶುಭ ಹಾರೈಸಿದ್ರು.

  ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವಾಸ್ತವ್‍ಗೆ ಜೋಡಿಯಾಗಿ ಇದು ಮೊದಲ ಸಿನಿಮಾ. ಇನ್ನು ಸಂಕಲನಕಾರರಾಗಿದ್ದ ನಿರ್ದೇಶಕ ಸಚಿನ್‍ಗೂ ಇದು ಮೊದಲ ಸಿನಿಮಾ. 80ರ ದಶಕದ ಕಥೆ ಹೊಂದಿರುವ ಚಿತ್ರಕ್ಕೆ, ವಿಶೇಷವಾಗಿ ಕಾಸ್ಟ್ಯೂಮ್ ಡಿಸೈನ್ ಮಾಡಲಾಗಿದೆ. ಆ ಡಿಸೈನ್‍ನ ಒಂದು ಲುಕ್‍ನಲ್ಲಿ ಶಾನ್ವಿ ಕಂಗೊಳಿಸುತ್ತಿದ್ದರು.

 • ಹಾಡು ಕೇಳಿ ಯರ್ರಾಬಿರ್ರಿ ಲವ್ವಾಗೋಯ್ತು..!

  tarak movie image

  ತಾರಕ್ ಚಿತ್ರದ ಇನ್ನೊಂದು ಹಾಡಿನ ವಿಡಿಯೋ ಬಿಡುಗಡೆಯಾಗಿದೆ. ಸಂಜೆ ಹೊತ್ತು ನಿನ್ನ ಶ್ಯಾನೆ ನೋಡ್ತಾ ಇದ್ರೆ ಯರ್ರಾಬಿರ್ರಿ ಲವ್ವಾಯ್ತದೆ ಅನ್ನೋ ಹಾಡು ನೋಡಿ ಅಭಿಮಾನಿಗಳಿಗೂ ಯರ್ರಾಬಿರ್ರಿ ಲವ್ವಾಗೋಗಿದೆ. 

  ಹಾಡಿನಲ್ಲಿ ಮಧ್ಯೆ ಮಧ್ಯೆ ಶ್ಲೋಕಗಳೂ ಇವೆ. ಯುಗಳ ಗೀತೆಯಲ್ಲಿ ಇದೊಂದು ಹೊಸ ಪ್ರಯೋಗ. ಆ ಪ್ರಯೋಗ ಕಿವಿಗಿಂಪಾಗಿದೆ. ಶೃತಿ ಹರಿಹರನ್ ಕಣ್ಣಿಗೆ ತಂಪಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತದ ಹಾಡಿಗೆ ಸಾಹಿತ್ಯ ಕೊಟ್ಟಿರುವುದು ಹರಿ ಸಂತೋಷ್. ಹಾಡಿರುವುದು ವಿಜಯ್ ಪ್ರಕಾಶ್ ಮತ್ತು ಇಂದು ನಾಗರಾಜ್.

  ದರ್ಶನ್ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರ್ತಾ ಇದೆ. ಹಾಡು ಕೇಳಿ ಯರ್ರಾಬಿರ್ರಿ ಲವ್ವಿಗೆ ಬಿದ್ದಿದ್ದ ಅಭಿಮಾನಿಗಳು, ಈಗ ಹಾಡು ನೋಡಿ ಯರ್ರಾಬಿರ್ರಿ ಲವ್ವಲ್ಲಿದ್ದಾರೆ. ಶುಕ್ರವಾರಕ್ಕೆ ವೇಯ್ಟಿಂಗ್.

Trayambakam Movie Gallery

Rightbanner02_butterfly_inside

Paddehuli Movie Gallery