ಕ್ಯೂಟ್ ಹುಡುಗಿ ಶಾನ್ವಿ ಶ್ರೀವಾಸ್ತವ, ಹೊಸದೊಂದು ಚಾಲೆಂಜ್ ಹಾಕಿದ್ದಾರೆ. ಅದು ಎಳನೀರು ಚಾಲೆಂಜ್. ಚಾಲೆಂಜ್ ಇಷ್ಟೆ, ಎಳನೀರನ್ನು ಸ್ಟ್ರಾ ಬಳಸದೆ ಕುಡಿಯಬೇಕು.. ಅಷ್ಟೆ.
ನನಗೂ ಗೊತ್ತಿರಲಿಲ್ಲ, ನನ್ನ ಫ್ರೆಂಡ್ ಒಬ್ಬರು ಚಾಲೆಂಜ್ ಮಾಡಿದ್ರು. ಮೊದಲ ನಾಲ್ಕಾರು ಸಲ ಎಳನೀರನ್ನು ಮೈಮೇಲೆಲ್ಲ ಚೆಲ್ಲಿಕೊಂಡೆ.. ಆನಂತರ ಪ್ರಾಕ್ಟೀಸ್ ಆಯ್ತು. ಮೊದಮೊದಲು ಅದು ತಮಾಷೆಯಾಗಿಯೇ ಇತ್ತು. ಆದರೆ, ಸೀರಿಯಸ್ಸಾಗಿ ಯೋಚನೆ ಮಾಡಿದಾಗ, ಸ್ಟ್ರಾ ಬಳಸೋದನ್ನು ನಿಲ್ಲಿಸಿದ್ರೆ ಎಷ್ಟೊಂದು ಪ್ಲಾಸ್ಟಿಕ್ ಬಳಕೆ ತಪ್ಪಿಸಬಹುದಲ್ವಾ ಅನ್ನಿಸ್ತು. ಹೀಗಾಗಿ ಈ ಎಳನೀರು ಚಾಲೆಂಜ್ ಎಂದಿದ್ದಾರೆ ಶಾನ್ವಿ.
ತಮ್ಮ ಆನ್‍ಲೈನ್ ಪೇಜ್‍ನಲ್ಲಿ ಎಳನೀರನ್ನು ಸ್ಟ್ರಾ ಇಲ್ಲದೆ ಕುಡಿಯುತ್ತಿವ ವಿಡಿಯೋ ಹಾಕಿದ್ದಾರೆ. ಅವರು ಈ ಚಾಲೆಂಜ್ ಹಾಕಿರೋದು ತಮ್ಮ ಸೋದರಿ ವಿದಿಷಾಗೆ, ನಂತರ ಶೃತಿ ಹರಿಹರನ್, ರಕ್ಷಿತ್ ಶೆಟ್ಟಿ, ಸಂಯುಕ್ತಾ ಹೆಗ್ಡೆ, ಮನೋರಂಜನ್ ರವಿಚಂದ್ರನ್, ರಾಧಿಕಾ ಪಂಡಿತ್ ಹಾಗೂ ಆಕಾಂಕ್ಷಾ ಸಿಂಗ್‍ಗೆ.
ನಾವು ದಿನಕ್ಕೆ ಎಷ್ಟು ಪ್ಲಾಸ್ಟಿಕ್‍ನ್ನ ರಸ್ತೆಗೆ ಎಸೆಯುತ್ತೇವೆ ಅಂತಾ ನೆನೆಸ್ಕೊಂಡ್ರೆ ಶಾಕ್ ಆಗುತ್ತೆ. ಹಸು, ನಾಯಿ, ಮೀನುಗಳನ್ನು ಕೊಲ್ಲುವ ಈ ಪ್ಲಾಸ್ಟಿಕ್ ಹಂತ ಹಂತವಾಗಿ ಮನುಷ್ಯರನ್ನೇ ಕೊಲ್ಲುತ್ತದೆ. ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಅನ್ನಿಸ್ತು ಅಷ್ಟೆ ಎಂದಿದ್ದಾರೆ ಶಾನ್ವಿ.
ಪ್ಲಾಸ್ಟಿಕ್ ವಿರುದ್ಧ ಅಭಿಯಾನಕ್ಕೆ ನೀವೂ ರೆಡಿ ಇದ್ದೀರಾದರೆ, ಎಳನೀರು ಚಾಲೆಂಜ್‍ನ್ನು ನೀವೂ ಟ್ರೈ ಮಾಡಬಹುದು.