` ap arjun - chitraloka.com | Kannada Movie News, Reviews | Image

ap arjun

  • A P Arjun Takes Over As The Producer Of 'Kiss'

    ap arjun takes over as the producer of kiss

    A P Arjun's new film 'Kiss' which is in the making for the last four years is finally complete and Arjun is planning to release the film in the month of September.

    'Kiss' was started by V Ravikumar of Rashtrakuta Pictures banner. Now Ravikumar has walked out of the film due to various problems and now Arjun himself has taken over the production of the film.

    'Kiss' stars newcomers Virat and Srileela in prominent roles. Arjun has himself written the story and screenplay of the film apart from direction. Girish Gowda is the cameraman, while V Harikrishna is the producer.

  • A P Arjun To Do A Film For Dhruva Sarja, But When?

    A P Arjun To Do A Film For Dhruva Sarja, But When?

    Actor Dhruva Sarja on Tuesday celebrated his birthday on the sets of 'Pogaru'. Meanwhile, director A P Arjun has announced a new film with the actor.

    It was Arjun who introduced Dhruva Sarja through 'Addhuri', which was released eight years ago. Now Arjun has announced that after eight years the 'Addhuri' combo is back. Arjun himself is producing the film under his AP Arjun films.

    Though the film has been announced, it will take another one to two years for the film to get launched. Currently, Dhruva is busy with the last leg of shooting for 'Pogaru', after which he will be participating in the shooting of Uday Mehta's new film from November.

    Apart from this, Dhruva is said to have given his dates to director Raghavendra Hegde, who had earlier directed Darshan's 'Jaggu Dada'. There is also a news that Dhruva will be acting in a new film to be jointly produced by B K Gangadhar and Shivarjun. After that, Dhruva is expected to be a part of Arjun's film. This is said to be Dhruva's schedule as per now and it is subjected to change.

  • Airavatha Releasing in 350 Theaters

    mr airavatha image

    Darshan starrer 'Airavatha' which is all set to release on the 01st of October has been censored with 'U/A' certificate and the film has created a sort of records by releasing in 350 theaters.

    Yes, producer Sandesh Nagaraj himself has confirmed that the film will be released in a record number of 350 theaters that too in Karnataka apart from releasing in other states and overseas.

    Sandesh Nagaraj has said that the film is the highest budget film in Kannada and the film has already recovered the costs even before the release. Srikanth of Gurushree theater in Mandya has bought the Bangalore-Kolar-Tumkur distribution rights, while M N Kumar has bought the distribution rights of MMHC.

  • Arjun's 'Kiss' Means Keep It Short & Sweet

    arjun's kiss means short and sweet

    Popular director A P Arjun returns after a gap of three years with a 'Kiss'. Plus, he has produced the Kiss too, which is set to hit the screens from September 27.

    The lyricist, director and producer, is introducing two new talents - Viraat and Sreeleela to the industry with Kiss. While Viraat was seen in the popular Kannada tele-serial 'Jothe Jotheyali', the other debutant, Sreeleela is fresh out of college. The two actors have worked hard for over a year, taking various classes before facing the camera for Arjun's Kiss.

    Though Arjun started Kiss as a director, circumstances led him to  become producer for it. He explains that he wanted to produce a film along with direction someday but situation made it happen a bit quicker.

    Apart from producing and directing Kiss, Arjun has penned all the songs for the movie which is composed by Harikrishna. Of all the songs, Harikrishna's son Aadi has composed one for the Kiss. The director believes that his three years of his hard work to make Kiss a better experience will definitely be appreciated by the audience. 

    Do not miss the kiss, which hits the theater this week from September 27.

  • Arjun's New Film Kiss Starts

    kiss image

    His last film 'Airavatha' starring Darshan in lead role may not have proved a huge success, but that has not deterred director A P Arjun to start another film. A P Arjun has silently started a new film called 'Kiss'. The title of the film was launched on the Valentines Day.

    'Kiss' is a film with a lot of newcomers. Arjun has himself written the story and screenplay of the film apart from direction. V Ravikumar is producing the film under the Rashtrakuta Pictures banner.

    As of now Arjun is busy finding the suitable hero and heroine for his film. He will be launching an audition soon and will be finalising the hero and heroine. Apart from newbies, Ananthnag and Sadhu Kokila will be playing prominent roles in the film. The shooting for the film will be held in Bangalore, Mysore and Australia.

    Like his previous films, Arju has roped in V Harikrishna to compose the music for the film. Girish Gowda is the cameraman.

  • ಅದ್ಧೂರಿ ಅರ್ಜುನ್ ಜೊತೆ ಮತ್ತೆ ಧ್ರುವ ಸರ್ಜಾ?

    ಅದ್ಧೂರಿ ಅರ್ಜುನ್ ಜೊತೆ ಮತ್ತೆ ಧ್ರುವ ಸರ್ಜಾ?

    ಪೊಗರು ಚಿತ್ರದ ನಂತರ ಧ್ರುವ ಸರ್ಜಾ ದುಬಾರಿ ಚಿತ್ರ ಮಾಡಬೇಕಿತ್ತು. ಆದರೆ ಚಿತ್ರಕ್ಕೆ ಬ್ರೇಕ್ ಹಾಕಲಾಗಿದೆ. ನಂದ ಕಿಶೋರ್ ಪ್ರಕಾರ ಚಿತ್ರದ ಶೇ.60ರಷ್ಟು ಶೂಟಿಂಗ್ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು. ಈ ಸಂದರ್ಭದಲ್ಲಿ ಅದು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮುಂದೂಡಲಾಗಿದೆ. ಇನ್ನೊಂದು ಮೂಲದ ಪ್ರಕಾರ ಪೊಗರು ಚಿತ್ರ, ನಿರೀಕ್ಷಿಸಿದ ಲೆವೆಲ್ಲಿಗೆ ಹಿಟ್ ಆಗದಿರುವುದೇ ದುಬಾರಿಗೆ ಬ್ರೇಕ್ ಬೀಳಲು ಕಾರಣ ಎನ್ನಲಾಗುತ್ತಿದೆ. ಈ ನಡುವೆ ಧ್ರುವ ಸರ್ಜಾ ಅದ್ಧೂರಿ ಅರ್ಜುನ್ ಜೊತೆ ಸಿನಿಮಾ ಮಾಡುವ ಉತ್ಸುಕತೆ ತೋರಿಸಿದ್ದಾರಂತೆ.

    ಧ್ರುವ ಸರ್ಜಾ ಅವರನ್ನು ಹೀರೋ ಆಗಿ ಲಾಂಚ್ ಮಾಡಿದ್ದು ಎ.ಪಿ.ಅರ್ಜುನ್. ಅದ್ಧೂರಿ ಮೂಲಕ ಚಿತ್ರರಂಗಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟ ಧ್ರುವ ಸತತ ಹಿಟ್ ಕೊಟ್ಟಿದ್ದಾರೆ. ಈಗ ಮತ್ತೊಮ್ಮೆ ಧ್ರುವ, ಅರ್ಜುನ್ ಅವರ ಬಳಿಯೇ ಇನ್ನೊಂದು ಸಿನಿಮಾ ಮಾಡೋಕೆ ರೆಡಿಯಾಗಿದ್ದು, ಕಥೆ ಓಕೆ ಆಗಿದೆ ಎನ್ನಲಾಗುತ್ತಿದೆ. ಅಫ್‍ಕೋರ್ಸ್, ನಿರ್ಮಾಪಕರಾಗಿ ಉದಯ್ ಕೆ.ಮೆಹ್ತಾ ಅವರೇ ಇರಲಿದ್ದಾರೆ. ಇನ್ನು ದುಬಾರಿ ಚಿತ್ರಕ್ಕೆ ನಾಯಕಿಯಾಗಿದ್ದ ಶ್ರೀಲೀಲಾ ಕೂಡಾ ಅರ್ಜುನ್ ಪರಿಚಯಿಸಿದ ನಾಯಕಿಯೇ. ನಾಯಕ, ನಾಯಕಿಯ ಬದಲಾವಣೆ ಮಾಡದೇ ಕಥೆ ಮತ್ತು ನಿರ್ದೇಶಕರನ್ನು ಚೇಂಜ್ ಮಾಡಿ ಹೊಸ ಸಿನಿಮಾ ರೆಡಿ ಮಾಡುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಅಧಿಕೃತ ಸುದ್ದಿ ಹೊರಬೀಳಬೇಕಿದೆ.

  • ಅದ್ಧೂರಿ ಟೀಂ ಬ್ಯಾಂಕ್ : ಮಾರ್ಟಿನ್

    ಅದ್ಧೂರಿ ಟೀಂ ಬ್ಯಾಂಕ್ : ಮಾರ್ಟಿನ್

    ಅದ್ಧೂರಿ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಧ್ರುವ ಸರ್ಜಾ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ಕೊಟ್ಟವರು. ಆಗ ಧ್ರುವ ಅವರನ್ನು ಪರಿಚಯಿಸಿದ್ದ ಎ.ಪಿ.ಅರ್ಜುನ್, ಈಗ ಮತ್ತೊಮ್ಮೆ ಧ್ರುವ ಅವರ ಜೊತೆ ಹೊಸ ಸಿನಿಮಾಗೆ ಮುಹೂರ್ತ ನೆರವೇರಿಸಿದ್ದಾರೆ.

    ಮಾರ್ಟಿನ್ ಅನ್ನೋದು ಚಿತ್ರದ ಹೀರೋ ಹೆಸರು. ಚಿತ್ರದಲ್ಲಿ ಆತ ಸ್ಟೂಡೆಂಟ್. ಗ್ಯಾಂಗ್‍ಸ್ಟರ್. ದೇಶಪ್ರೇಮಿ. ಲವರ್ ಬಾಯ್. ಎಲ್ಲವೂ ಆಗಿರುತ್ತಾನೆ. ಇದೊಂದು ಪಕ್ಕಾ ಆ್ಯಕ್ಷನ್ ಥ್ರಿಲ್ಲರ್ ಎಂದಿದ್ದಾರೆ ಧ್ರುವ ಸರ್ಜಾ.

    ಈ ಚಿತ್ರದಲ್ಲಿ ಧ್ರುವ ಸರ್ಜಾ ಅವರಿಗೆ ಒಂದಿಷ್ಟು ಬೀಗ ಹಾಕುತ್ತಿದ್ದಾರಂತೆ, ಅರ್ಜುನ್. ಮಾರ್ಟಿನ್ ಸ್ವಲ್ಪ ಸೈಲೆಂಟ್ ಅಂತೆ. ಉದಯ್ ಮೆಹ್ತಾ ನಿರ್ಮಾಣದ ಚಿತ್ರದಲ್ಲಿ ಅದ್ಧೂರಿ ಟೀಂ, ಅದ್ಧೂರಿಯಾಗಿಯೇ ವಾಪಸ್ ಆಗಿದೆ.

    ಅಂದಹಾಗೆ ಇದು ಪ್ಯಾನ್ ಇಂಡಿಯಾ ಸಿನಿಮಾ. ಪೊಗರು ತೆಲುಗು, ತಮಿಳಿನಲ್ಲಿ ರಿಲೀಸ್ ಆದರೂ, ಚಿತ್ರ ರೆಡಿಯಾದ ಮೇಲೆ ಮಾಡಿದ್ದ ಪ್ಲಾನ್ ಅದು. ಆದರೆ, ಮಾರ್ಟಿನ್ ಹಾಗಲ್ಲ, ಎಲ್ಲ ಭಾಷೆಗಳಿಗೂ ತಲುಪುವ ಟೈಟಲ್, ಕಥೆ ಇಟ್ಟುಕೊಂಡು ಬಂದಿರೋ ಎ.ಪಿ.ಅರ್ಜುನ್, ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಚಿತ್ರದ ಟೀಸರ್ ಹೊರಬಿಟ್ಟಿದ್ದಾರೆ.

  • ಈಗ ಅಧಿಕೃತ : ಮತ್ತೊಮ್ಮೆ ಅದ್ಧೂರಿ ಜೋಡಿ

    ಈಗ ಅಧಿಕೃತ : ಮತ್ತೊಮ್ಮೆ ಅದ್ಧೂರಿ ಜೋಡಿ

    ಧ್ರುವ ಸರ್ಜಾರ ದುಬಾರಿ ಚಿತ್ರಕ್ಕೆ ಬ್ರೇಕ್ ಬಿದ್ದಿದೆ. ಎ.ಪಿ.ಅರ್ಜುನ್ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇತ್ತು. ಸುದ್ದಿಯ ಬಗ್ಗೆ ಧ್ರುವ ಸರ್ಜಾ ಆಗಲೀ, ಎ.ಪಿ.ಅರ್ಜುನ್ ಆಗಲೀ ಅಥವಾ ನಿರ್ಮಾಪಕ ಉದಯ್ ಮೆಹ್ತಾ ಆಗಲೀ.. ಖಚಿತವಾಗಿ ಒಪ್ಪಿಕೊಂಡಿರಲಿಲ್ಲ. ಈಗದು ಅಧಿಕೃತವಾಗಿದೆ.

    ಗವಿಪುರಂನ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಧ್ರುವ ಸರ್ಜಾರನ್ನು ಹೀರೋ ಆಗಿ ಪರಿಚಯಿಸಿದ ಅದ್ಧೂರಿ ಅರ್ಜುನ್ ಡೈರೆಕ್ಟರ್. ನಿರ್ಮಾಪಕರಾಗಿ ಉದಯ್ ಮೆಹ್ತಾ ಅವರೇ ಇರುತ್ತಾರೆ.

  • ಎ.ಪಿ. ಅರ್ಜುನ್ ಅದೃಷ್ಟವೇ ಹೊಸ ಪರಿಚಯ..!

    ap arjun's movie list

    ಸಾಮಾನ್ಯವಾಗಿ ನಿರ್ದೇಶನಕ್ಕಿಳಿಯುವವರು ತಾರಾಗಣಕ್ಕೆ ಹೊಸಬರನ್ನೇ ಆಯ್ಕೆ ಮಾಡಿಕೊಳ್ತಾರೆ. ಯುವ ನಿರ್ದೇಶಕರಿಗೆ ಸ್ಟಾರ್ ತಾರಾಗಣ ಸಿಗುವುದು ಬಹಳ ಅಪರೂಪ. ಆದರೆ, ಎ.ಪಿ.ಅರ್ಜುನ್ ವಿಚಾರದಲ್ಲಿ ಹಾಗಲ್ಲ. ಅವರು ನಿರ್ದೇಶಿಸಿದ ಮೊದಲ ಚಿತ್ರ ಅಂಬಾರಿ.

    ಅಂಬಾರಿಯಲ್ಲಿ ಲೂಸ್ ಮಾದ ಖ್ಯಾತಿಯ ಯೋಗೀ ಹೀರೋ ಆಗಿದ್ದರು. ಚಿತ್ರರಂಗದಲ್ಲಿ ಗುರುತಿಸಿಕೊಂಡು, ಅಷ್ಟೊತ್ತಿಗಾಗಲೇ ಒಂದು ಹಿಟ್ ಕೊಟ್ಟಿದ್ದರೂ.. ಹೊಸಬರ ಕೆಟಗರಿಯಲ್ಲೇ ಇದ್ದವರು. ನಾಯಕಿ ಸುಪ್ರೀತಾ ಹೊಸ ಪರಿಚಯ. ಅಂಬಾರಿ ಸೂಪರ್ ಹಿಟ್.

    ಅದಾದ ಮೇಲೆ ಅರ್ಜುನ್ ನಿರ್ದೇಶಿಸಿದ ಸಿನಿಮಾ ಅದ್ಧೂರಿ. ಅದು ಧ್ರುವ ಸರ್ಜಾ ಅನ್ನೋ ಆ್ಯಕ್ಷನ್ ಪ್ರಿನ್ಸ್ ಹುಟ್ಟುಹಾಕಿದ ಸಿನಿಮಾ.

    ಅದಾದ ಮೇಲೆ ರಾಟೆ ಚಿತ್ರ ನಿರ್ದೇಶಿಸಿದರು. ಅದು ಧನಂಜಯ್ ಮತ್ತು ಶೃತಿ ಹರಿಹರನ್ ನಟಿಸಿದ್ದ ಸಿನಿಮಾ. ಅದನ್ನು ಬಿಟ್ಟರೆ ಅರ್ಜುನ್ ನಿರ್ದೇಶಿಸಿದ ಚಿತ್ರ ಐರಾವತ.

    ಹೀಗೆ ಹೊಸಬರನ್ನಿಟ್ಟುಕೊಂಡು ಬಂದಾಗಲೆಲ್ಲ ಅರ್ಜುನ್ ಗೆದ್ದಿದ್ದಾರೆ. ಈಗ ಮತ್ತೊಮ್ಮೆ ಹೊಸ ಪರಿಚಯದವರನ್ನೇ ಇಟ್ಟುಕೊಂಡು ಸಕ್ಸಸ್ಸಿಗೆ ಕಿಸ್ ಕೊಡಲು ಹೊರಟಿದ್ದಾರೆ. ನಾಯಕ ವಿರಾಟ್ ಮತ್ತು ನಾಯಕಿ ಶ್ರೀಲೀಲಾ ಇಬ್ಬರಿಗೂ ಇದು ಮೊದಲ ಸಿನಿಮಾ. ಈ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿರುವುದು ಧ್ರುವ ಸರ್ಜಾ.

  • ಕಿಸ್ ಎಂದರೇನು..?

    what is the meaning of kiss

    ಕಿಸ್ ಎಂದರೇನು..? ಅಯ್ಯೋ ಅಷ್ಟು ಗೊತ್ತಿಲ್ವಾ.. ಮುತ್ತು. ಇಷ್ಟೂ ಗೊತ್ತಿಲ್ದೇ ಪ್ರಶ್ನೆ ಕೇಳ್ತೀರಲ್ಲ. ಗೊತ್ತಿಲ್ಲ ಅಂದ್ರೆ ಹೋಗಿ ಎ.ಪಿ.ಅರ್ಜುನ್ ಅವರನ್ನೇ ಕೇಳಿ. ಅದೇ ಹೆಸರಲ್ಲಿ ಒಂದ್ ಸಿನಿಮಾನೇ ಮಾಡಿದ್ದಾರೆ ಅನ್ನೋ ಉತ್ತರ ನಿಮ್ಮದಾಗಿದ್ದರೆ... ವೇಯ್ಟ್. ಎ.ಪಿ.ಅರ್ಜುನ್ ಅವರೇ ಕಿಸ್ ಅನ್ನೋದ್ರ ಅರ್ಥವನ್ನ ಬೇರೆಯದ್ದೇ ರೀತಿಯಲ್ಲಿ ಹೇಳಿದ್ದಾರೆ.

    ಏISS ಅಂದ್ರೆ ಕೀಪ್ ಇಟ್ ಶಾರ್ಟ್ & ಸ್ವೀಟ್ ಅಂತೆ. ಅದು ಚಿತ್ರದಲ್ಲಿ ಅವರು ಹೇಳಿರೋ ಕಿಸ್. ವಿರಾಟ್, ಶ್ರೀಲೀಲಾ ಜೊತೆಯಾಗಿ ನಟಿಸಿರುವ ಚಿತ್ರ ನಾಳೆ ರಿಲೀಸ್ ಆಗುತ್ತಿದೆ. ಅರ್ಜುನ್ ಚಿತ್ರಗಳಲ್ಲಿ ಸಹಜವಾಗಿ ಆಗುವಂತೆ ಹಾಡುಗಳೆಲ್ಲ ಮೆಲೋಡಿ ಹಿಟ್. ಚಿತ್ರದ ಟೈಟಲ್‍ನಲ್ಲಿ ಕಿಸ್ ಇದ್ದರೂ, ಇದೊಂದು ಫ್ಯಾಮಿಲಿ ಸಿನಿಮಾ ಅನ್ನೋ ಭರವಸೆ ಚಿತ್ರತಂಡದ್ದು.

  • ಕಿಸ್ ಮೆಚ್ಚಿದ ರಾಕಿಂಗ್ ಸ್ಟಾರ್

    yash likes ap arun's kiss movie

    ಯಶಸ್ವಿಯಾಗಿ 25ನೇ ದಿನದತ್ತ ಮುನ್ನುಗ್ಗುತ್ತಿರುವ ಚಿತ್ರ ಕಿಸ್. ನೀನೇ ಮೊದಲು ನೀನೇ ಕೊನೆ ಹಾಡಿನ ಮೂಲಕ ಕ್ರೇಜ್ ಹುಟ್ಟಿಸಿದ್ದ ಚಿತ್ರ, ಯುವ ಪ್ರೇಮಿಗಳ ಎದೆಯಲ್ಲಿ ಝೇಂಕಾರ ಮೊಳಗಿಸಿದೆ. ಎ.ಪಿ.ಅರ್ಜುನ್ ನಿರ್ದೇಶನದ ಚಿತ್ರವನ್ನು ರಾಕಿಂಗ್ ಸ್ಟಾರ್ ಯಶ್, ಅಭಿಮಾನಿಗಳ ಜೊತೆಯಲ್ಲಿ ನೋಡಿ ಮೆಚ್ಚಿಕೊಂಡಿದ್ದಾರೆ.

    ಇದು ಹುಡುಗ ಹುಡುಗೀರ ಚಿತ್ರವಷ್ಟೇ ಅಲ್ಲ, ಪ್ರತಿ ಮನೆಯ ಹಿರಿಯರೂ ನೋಡಬೇಕಾದ ಚಿತ್ರ ಎಂದಿದ್ದಾರೆ ಯಶ್. ಇದೊಂದು ಟ್ರೆಂಡ್ ಸೆಟ್ಟಿಂಗ್ ಲವ್ ಸ್ಟೋರಿ ಎಂದು ಶ್ರೀಲೀಲಾ, ವಿರಾಟ್ ಬೆನ್ನು ತಟ್ಟಿದ್ದಾರೆ.

  • ತುಂಟ ತುಟಿಗಳ ಆಟೋಗ್ರಾಫ್.. ಌಕ್ಷನ್ ಪ್ರಿನ್ಸ್ ವಾಯ್ಸ್..!

    dhruva sarja lends his voice to ap arjun's kiss movie

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೀರೋ ಆಗಿದ್ದು ಅದ್ದೂರಿ ಸಿನಿಮಾದಿಂದ. ಆ ಚಿತ್ರದ ನಿರ್ದೇಶಕ ಎ.ಪಿ ಅರ್ಜುನ್. ಅದಾದ ಮೇಲೆ ಹ್ಯಾಟ್ರಿಕ್ ಹಿಟ್ ಕೊಟ್ಟಿರುವ ಧ್ರುವ ಸರ್ಜಾ, ಈಗ ಪೊಗರು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ತಮ್ಮ ಮೊದಲ ಚಿತ್ರದ ನಿರ್ದೇಶಕರ ಹೊಸ ಚಿತ್ರಕ್ಕೆ ಸಪೋರ್ಟ್ ಕೊಟ್ಟಿದ್ದಾರೆ.

    ವಿರಾಟ್ ಮತ್ತು ಶ್ರೀಲೀಲಾ ಜೊತೆಯಾಗಿ ನಟಿಸಿರುವ ಕಿಸ್ ಸಿನಿಮಾಗೆ ಎ.ಪಿ.ಅರ್ಜುನ್ ನಿರ್ದೇಶಕ ಹಾಗು ನಿರ್ಮಾಪಕ. ಆ ಚಿತ್ರಕ್ಕೆ ತಮ್ಮ ಪವರ್ ಫುಲ್  ವಾಯ್ಸ್ ಕೊಟ್ಟಿದ್ದಾರೆ ಧ್ರುವ.  ಅಲ್ಲಿಗೆ ಕಿಸ್ ಚಿತ್ರಕ್ಕೆ ಇನ್ನೊಂದು ಪವರ್ ಸಿಕ್ಕಂತಾಗಿದೆ. 

    ಈ ಮೊದಲು ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್, ಬೆಟ್ಟೇಗೌಡ ವರ್ಸಸ್‌ ಚಿಕ್ಕಬೋರಮ್ಮ ಅನ್ನೋ ಹಾಡು ಹಾಡಿದ್ದರು. ಈಗ ಌಕ್ಷನ್ ಪ್ರಿನ್ಸ್ ಧ್ರುವಾ ಧ್ವನಿಯ ಪವರ್ ಸಿಕ್ಕಿದೆ. ಅಂದಹಾಗೆ ಕಿಸ್ ಚಿತ್ರಕ್ಕೆ 

    ತುಂಟ ತುಟಿಗಳ ಆಟೋಗ್ರಾಫ್ ಅನ್ನೋ ಟ್ಯಾಗ್ಲೈನ್ ಇದೆ.

  • ನಿಖಿಲ್ ಕುಮಾರಸ್ವಾಮಿಗೆ ಅರ್ಜುನ್ ಸಿನಿಮಾ

    nikhil kumaeswamy's next with ap arjun

    ಲವ್ ಸ್ಟೋರಿಗಳನ್ನು ಚೆಂದವಾಗಿ ಹೇಳಿ ಗೆಲ್ಲೋ ಎ.ಪಿ.ಅರ್ಜುನ್, ಈಗಾಗಲೇ ಕಿಸ್ ಚಿತ್ರದ ಗುಂಗಿನಿಂದ ಹೊರಬಂದು ಅದ್ದೂರಿ ಲವರ್ ಬೆನ್ನು ಹತ್ತಿದ್ದಾರೆ. ಅದ್ಧೂರಿ ಲವರ್ ಶೂಟಿಂಗ್ ನಡೆಯುತ್ತಿರುವಾಗಲೇ ಮತ್ತೊಂದು ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಹೀರೋ.

    ಅತ್ತ ತೆಲುಗಿನ ವಿಜಯ್ ಕುಮಾರ್ ಕೊಂಡ ನಿರ್ದೇಶನದ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇತ್ತ ಅರ್ಜುನ್ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ತಿಂಗಳು ಸ್ಕ್ರಿಪ್ಟ್ ಪೂಜೆ ನಡೆಯಲಿದೆಯಂತೆ.

    ಸ್ವತಃ ನಿಖಿಲ್ ಕುಮಾರಸ್ವಾಮಿಯೇ ಹೀರೊ ಆಗಲಿದ್ದು, ನಿರ್ಮಾಪಕರೂ ಅವರೇ. ಹೀಗಾಗಿ ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ಸಿನಿಮಾ ಹೊರತರುವ ಯೋಜನೆಯಲ್ಲಿದ್ದಾರೆ.

  • ಮತ್ತೊಂದು ಕಿಸ್ ಮಾಡೋಕೆ ಶ್ರೀಲೀಲಾ-ವಿರಾಟ್-ಎ.ಪಿ.ಅರ್ಜುನ್ ರೆಡಿ..!

    ap arjun plans for kiss 2

    ಎ.ಪಿ.ಅರ್ಜುನ್ ಕಿಸ್ ಕೊಟ್ಟು ಗೆದ್ದಿದ್ದಾರೆ. ಶ್ರೀಲೀಲಾ-ವಿರಾಟ್ ಜೋಡಿ ಮೋಡಿ ಮಾಡಿದೆ. ಹರಿಕೃಷ್ಣ ಹಾಡುಗಳು ಪ್ರೇಮದ ಅಮಲು ಹೆಚ್ಚಿಸಿವೆ. ಥಿಯೇಟರುಗಳಲ್ಲಿ ಉತ್ತಮ ಪ್ರದರ್ಶನ ಕಾಣ್ತಿರೋ ಕಿಸ್ ಚಿತ್ರದ ಸೀಕ್ವೆಲ್ ಮಾಡಲು ಸಿದ್ಧರಾಗಿದ್ದಾರೆ ಎ.ಪಿ.ಅರ್ಜುನ್.

    ಸೀಕ್ವೆಲ್ ಮಾಡುವ ಚಿಂತನೆ ಇದೆ ಎಂದಿರೋ ಎ.ಪಿ.ಅರ್ಜುನ್, 2ನೇ ಭಾಗದಲ್ಲಿ ಇನ್ನೊಂದು ವಿಭಿನ್ನ ಲವ್ ಸ್ಟೋರಿ ಹೇಳಲಿದ್ದಾರಂತೆ. ಅದೇ ಶ್ರೀಲೀಲಾ.. ಅದೇ ವಿರಾಟ್.. ಕಂಟಿನ್ಯೂ ಆಗುವ ಸಾಧ್ಯತೆ ಹೆಚ್ಚಿದೆ. ಕಥೆ ಒಂದು ಹಂತಕ್ಕೆ ಬಂದ ಮೇಲೆ ಮುಂದಿನ ತಯಾರಿ. ಸದ್ಯಕ್ಕೆ ಕಿಸ್ ಸಕ್ಸಸ್ ಎಂಜಾಯ್ ಮಾಡ್ತಿದ್ದೇನೆ ಎಂದಿದ್ದಾರೆ ನಿರ್ಮಾಪಕರು ಆಗಿರುವ ಎ.ಪಿ.ಅರ್ಜುನ್.

  • ಮಾರ್ಟಿನ್ ನಂತರ ಅರ್ಜುನ್ ಜೊತೆ ಇನ್ನೊಂದು ಸಿನಿಮಾ

    ಮಾರ್ಟಿನ್ ನಂತರ ಅರ್ಜುನ್ ಜೊತೆ ಇನ್ನೊಂದು ಸಿನಿಮಾ

    ಅದ್ಧೂರಿ ನಂತರ ಧ್ರುವ ಸರ್ಜಾ ಮತ್ತು ಎ.ಪಿ.ಅರ್ಜುನ್ ಮತ್ತೆ ಜೊತೆಯಾಗಿರುವ ಚಿತ್ರ ಮಾರ್ಟಿನ್. ಧ್ರುವ ಸರ್ಜಾರನ್ನು ಬೆಳ್ಳಿತೆರೆಗೆ ಪರಿಚಯಿಸಿದ ನಿರ್ದೇಶಕ ಅರ್ಜುನ್, ಮಾರ್ಟಿನ್ ನಂತರ ಮತ್ತೊಮ್ಮೆ ಧ್ರುವ ಸರ್ಜಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

    ಧ್ರುವ ಸರ್ಜಾ ಹುಟ್ಟುಹಬ್ಬದ ದಿನ ಮಾರ್ಟಿನ್ ಚಿತ್ರದ ಪೋಸ್ಟರ್ ಹೊರಬಿದ್ದಿದೆ. ಧ್ರುವ ಸರ್ಜಾ ಕೈಗೆ ಬೇಡಿ ಹಾಕಿರುವ ಲುಕ್ ಸಂಚಲನ ಸೃಷ್ಟಿಸಿದೆ. ಮಾರ್ಟಿನ್ ಚಿತ್ರ ಮುಗಿಸಿದ ಕೂಡಲೇ ಅರ್ಜುನ್, ಧ್ರುವ ಜೊತೆ ಇನ್ನೊಂದು ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಮಾರ್ಟಿನ್ ಚಿತ್ರಕ್ಕೆ ಉದಯ್ ಮೆಹತಾ ನಿರ್ಮಾಪಕರಾದರೆ, ಹೊಸ ಚಿತ್ರಕ್ಕೆ ಸ್ವತಃ ಅರ್ಜುನ್ ಅವರೇ ಪ್ರೊಡ್ಯೂಸರ್.

  • ಮಾರ್ಟಿನ್ ಲೇಟ್ ಆಗಿದ್ದೇಕೆ? ನಿರ್ದೇಶಕರು ಹೇಳಿದ ಕಾರಣ

    ಮಾರ್ಟಿನ್ ಲೇಟ್ ಆಗಿದ್ದೇಕೆ? ನಿರ್ದೇಶಕರು ಹೇಳಿದ ಕಾರಣ

    2021ರ ಸೆಪ್ಟೆಂಬರ್ನಲ್ಲಿ ಈ ಸಿನಿಮಾ ಶುರುವಾಯಿತು. ಆದರೆ ಇದು ಇಷ್ಟೊಂದು ದಿನ ತೆಗೆದುಕೊಳ್ಳುತ್ತದೆ ಎಂದುಕೊಂಡಿರಲಿಲ್ಲ. ಹೈದರಾಬಾದ್ನಲ್ಲಿ ಸೆಟ್ ಹಾಕಿ 45 ದಿನ ಶೂಟಿಂಗ್ ಮಾಡಿದ್ದೇವೆ. ವಿಶಾಖಪಟ್ಟಣದಲ್ಲಿ 20 ದಿನ ಬರೀ ಚೇಸಿಂಗ್ ಸೀನ್ಗಳನ್ನೇ ಚಿತ್ರೀಕರಣ ಮಾಡಿದ್ದೇವೆ. ಈ ಮಧ್ಯೆ ಮಳೆಯಿಂದ ಕೊಂಚ ಸಮಸ್ಯೆ ಆಯಿತು. ಕಾಶ್ಮೀರದಲ್ಲಿ 25 ದಿನ ಶೂಟಿಂಗ್ ಮುಗಿಸಿ, ನಂತರ ಮುಂಬೈನಲ್ಲಿ ಚೇಸಿಂಗ್ ಸೀನ್ ಶೂಟಿಂಗ್ ಮಾಡಿದ್ದೇವೆ. ಒಂದೊಂದು ಶೆಡ್ಯೂಲ್ಗೂ ಒಂದಷ್ಟು ಗ್ಯಾಪ್ ಆಗುತ್ತಲೇ ಇತ್ತುಈ ಸಿನಿಮಾದಲ್ಲಿ ಧ್ರುವ ಸರ್ಜಾಗೆ ಹಲವು ಗೆಟಪ್ ಇದೆ. ನನ್ನ ವೃತ್ತಿ ಬದುಕಿನಲ್ಲಿ ಅತಿದೊಡ್ಡ ಪವರ್ ಪ್ಯಾಕ್ಡ್ ಚಿತ್ರವಿದು. ವಿಶೇಷವಾದ ಮೋಕೋಬೋಟ್ ಕ್ಯಾಮೆರಾದಲ್ಲಿ ಬಳಸಿ 52 ದಿನ ಬರೀ ಕ್ಲೈಮ್ಯಾಕ್ಸ್ ಅನ್ನೇ ಶೂಟಿಂಗ್ ಮಾಡಿದ್ದೇವೆ. ರಾಮ್ ಲಕ್ಷ್ಮಣ್, ರವಿವರ್ಮಾ ಇದರ ಚಿತ್ರೀಕರಣ ಮಾಡಿದ್ದಾರೆ.

    ಇದು ಮಾರ್ಟಿನ್ ಚಿತ್ರದ ಡೈರೆಕ್ಟರ್ ಎ.ಪಿ.ಅರ್ಜುನ್ ಹೇಳಿದ ಕಾರಣ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಪರೀಕ್ಷೆ, ಐಪಿಎಲ್, ಚುನಾವಣೆ ಇವೆಲ್ಲ ಮುಗಿದ ನಂತರ ಸಿನಿಮಾವನ್ನು ರಿಲೀಸ್ ಮಾಡಲಿದ್ದೇವೆ ಎಂದಿದ್ದಾರೆ ಅರ್ಜುನ್.

    ಈ ಸಿನಿಮಾದಲ್ಲಿ ನನ್ನ ಪಾತ್ರ ತುಂಬ ಭಿನ್ನವಾಗಿದ್ದು, ಈವರೆಗೂ ಮಾಡಿರುವ ಪಾತ್ರಗಳಿಗಿಂತ ಬೇರೆ ಥರ ಇದೆ. ನನಗೆ ಇಲ್ಲಿ ಡೈಲಾಗ್ ಕೂಡ ಕಡಿಮೆ ಇದೆ. ಫೈಟ್ ಸೀನ್ ಜಾಸ್ತಿ ಇದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕಳೆದ ವರ್ಷವೇ ಈ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಸಿನಿಮಾ ದೊಡ್ಡಮಟ್ಟದಲ್ಲಿ ನಿರ್ಮಾಣ ಆಗುತ್ತಿರುವುದರಿಂದ ಸಮಯ ತೆಗೆದುಕೊಳ್ಳುತ್ತಿದೆ.ಇನ್ನೂಹಾಡಿನ ಚಿತ್ರೀಕರಣ ಬಾಕಿ ಇದೆ ಎಂದು ಮಾಹಿತಿ ನೀಡಿದ್ದಾರೆ ನಾಯಕ ನಟ ಧ್ರುವ ಸರ್ಜಾ.

    ಮಾರ್ಟಿನ್ ಮೊದಲ ಟೀಸರ್ ಅನ್ನು ಫೆ.23ಕ್ಕೆ ರಿಲೀಸ್ ಆಗಲಿದೆ. ಫೆ.23ರಂದು ಅಭಿಮಾನಿಗಳಿಗೋಸ್ಕರ ಪೇಯ್ಡ್ ಪ್ರೀಮಿಯರ್ ಟೀಸರ್ ಪ್ರದರ್ಶನವನ್ನು ಬೆಂಗಳೂರಿನ ವೀರೇಶ್ ಥಿಯೇಟರ್ನಲ್ಲಿ ಏರ್ಪಡಿಸಿದ್ದೇವೆ. ಹಾಗಂತ ಇದರಿಂದ ಹಣ ಮಾಡುವ ಉದ್ದೇಶವಿಲ್ಲ. ಇದರಿಂದ ಬಂದ ಹಣವನ್ನು ಗೋಶಾಲೆಗೆ ಕೊಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ ನಿರ್ಮಾಪಕ ಉದಯ್ ಕೆ.ಮೆಹ್ತಾ. . ರವಿ ಬಸ್ರೂರು ಹಿನ್ನೆಲೆ ಸಂಗೀತ ನೀಡಿದ್ದರೆ, ತೆಲುಗಿನ ಮಣಿಶರ್ಮಾ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಧ್ರುವ ಸರ್ಜಾಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿದ್ದು, ಅಚ್ಯುತ್ ಕುಮಾರ್, ಮಾಳವಿಕ ಅವಿನಾಶ್, ಸಾಧು ಕೋಕಿಲ ಮೊದಲಾದವರು ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಏಕಕಾಲದಲ್ಲಿ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.