` radhika kumaraswamy, - chitraloka.com | Kannada Movie News, Reviews | Image

radhika kumaraswamy,

 • ರಾಧಿಕಾ ಕುಮಾರಸ್ವಾಮಿಗೆ ಪಿತೃ ವಿಯೋಗ

  radhika kumaraswamy's father no more

  ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅವರ ತಂದೆ ದೇವರಾಜ್ ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

   ಅವರ ಮೃತದೇಹವನ್ನು ಮಂಗಳೂರಿಗೆ ತೆಗೆದುಕೊಂಡು ಹೋಗಿಲಾಗಿದೆ. ಅಲ್ಲಿಯೇ ಅವರ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿದೆ. ರಾಧಿಕಾ ತಂದೆಯವರು ಮಂಗಳೂರಿನಲ್ಲಿಯೇ ನೆಲೆಸಿ ಅಲ್ಲಿಯೇ ಬಿಸನೆಸ್ ಮಾಡಿಕೊಂಡಿದ್ದರು. ಆದರೆ, ಇತ್ತೀಚೆಗೆ ಅವರಿಗೆ ಅನಾರೋಗ್ಯ ಕಾಡಿತ್ತು ಎನ್ನಲಾಗಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ಕೋಲ ಸಂಭ್ರಮದಲ್ಲಿ ಭಾಗವಹಿಸಿದ್ದ ರಾಧಿಕಾ ಕುಮಾರಸ್ವಾಮಿ ಕುಟುಂಬ, ಆನಂತರ ಆಘಾತಕ್ಕೊಳಗಾಗಿತ್ತು. ವಯಸ್ಸಾಗಿದ್ದ ದೇವರಾಜ್, ತೀವ್ರ ಅನಾರೋಗ್ಯಕ್ಕೆ ಗುರಿಯಾಗಿದ್ದರು. ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಮಂಗಳೂರಿನ ಆಸ್ಪತ್ರೆಯಿಂದ ದೇವರಾಜ್ ಅವರನ್ನು ಬೆಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಕೊನೆಗೆ 4 ದಿನಗಳ ಚಿಕಿತ್ಸೆ ಫಲಿಸದೆ, ದೇವರಾಜ್ ಕೊನೆಯುಸಿರೆಳೆದಿದ್ದಾರೆ. 

  ದೇವರಾಜ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಂಗಳೂರಿನಲ್ಲಿ ನೆರವೇರಲಿದೆ. ಪಾರ್ಥಿವ ಶರೀರವನ್ನು ಮಂಗಳೂರಿಗೆ ತೆಗೆದುಕೊಂಡು ಹೋಗಲಾಗಿದೆ.

   

 • ರಾಧಿಕಾ ಕುಮಾರಸ್ವಾಮಿಯವರ ೩ ಮಕ್ಕಳಿಗೂ ದರ್ಶನ್ ಅಂದ್ರೆ ಇಷ್ಟ..!

  radhika reveals her kids favorite actor

  ದಮಯಂತಿ ಚಿತ್ರದ ವೇಳೆ ರಾಧಿಕಾ ಕುಮಾರಸ್ವಾಮಿ ಈ ವಿಷಯ ಬಹಿರಂಗಪಡಿಸಿ ಅಚ್ಚರಿ ಮೂಡಿಸಿದ್ದಾರೆ. ಗೆಳೆಯ ದರ್ಶನ್ ಅವರಿಂದ ದಮಯಂತಿ ಟ್ರೇಲರ್ ರಿಲೀಸ್ ಮಾಡಿಸಿದ ರಾಧಿಕಾ, ದರ್ಶನ್ ಅವರನ್ನು ತಮ್ಮ ಮೂರು ಮಕ್ಕಳೂ ಇಷ್ಟಪಡುತ್ತಾರೆ ಎಂದು ತಿಳಿಸಿದರು.

  ತಕ್ಷಣ ಸ್ಪಷ್ಟನೆಯನ್ನೂ ಕೊಟ್ಟ ರಾಧಿಕಾ ಮೂರು ಮಕ್ಕಳೆಂದರೆ ನನಗೆ ಇರೋದು ಒಬ್ಬಳೇ ಮಗಳು. ಇನ್ನಿಬ್ಬರು ಅಣ್ಣನ ಮಕ್ಕಳು. ಅವರನ್ನೂ ನಾನು ನನ್ನ ಮಕ್ಕಳೆಂದೇ ಭಾವಿಸುತ್ತೇನೆ. ಆಮೇಲೆ ದೊಡ್ಡ ವಿವಾದವಾಗಿಬಿಟ್ಟರೆ ಕಷ್ಟ ಎಂದು ನಕ್ಕರು.

  ದಮಯಂತಿ ಟ್ರೇಲರ್ ರಿಲೀಸ್ ಮಾಡಿದ ದರ್ಶನ್ `ರಾಧಿಕಾ ನನಗಿಂತ ಒಂದು ಸಿನಿಮಾ ಸೀನಿಯರ್. ಅವರ ಕಾಲದ ಹೀರೋಯಿನ್ಸ್ ಈಗ ಸಿನಿಮಾ ಮಾಡ್ತಿಲ್ಲ. ರಾಧಿಕಾ ಅವರು ಮಾಡುತ್ತಿದ್ದಾರೆ. ಒಳ್ಳೆಯದಾಗಲಿ' ಎಂದು ಶುಭ ಹಾರೈಸಿದ್ರು.

 • ರುದ್ರಭೂಮಿಯಲ್ಲಿ ಜಾರಿಬಿದ್ದ ರಾಧಿಕಾ ಕುಮಾರಸ್ವಾಮಿ

  radhika kumaraswamy injured while shooting for bhairadevi

  ಭೈರಾದೇವಿ ಚಿತ್ರದಲ್ಲಿ ಅಘೋರಿಯ ಪಾತ್ರದಲ್ಲಿ ನಟಿಸುತ್ತಿರುವ  ರಾಧಿಕಾ ಕುಮಾರಸ್ವಾಮಿ, ಬಿದ್ದು ಬೆನ್ನುಮೂಳೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಸ್ಪೈನಲ್ ಕಾರ್ಡ್ ಡ್ಯಾಮೇಜ್ ಆಗಿದ್ದು, ಒಂದು ತಿಂಗಳು ಬೆಡ್ ರೆಸ್ಟ್ ಹೇಳಿದ್ದಾರಂತೆ ವೈದ್ಯರು. ಹೀಗಾಗಿ ಭೈರಾದೇವಿ ಚಿತ್ರದ ಶೂಟಿಂಗ್ ಕೂಡಾ ಒಂದು ತಿಂಗಳು ಪೋಸ್ಟ್‍ಪೋನ್ ಆಗಿದೆ.

  ಬೆಂಗಳೂರಿನ ಶಾಂತಿನಗರದ ಸ್ಮಶಾನದಲ್ಲಿ ಸಮಾಧಿಯ ಮೇಲೆ ಕುಳಿತು, ಆತ್ಮಗಳನ್ನು ಆವಾಹನೆ ಮಾಡಿಕೊಳ್ಳುವ ದೃಶ್ಯದ ಶೂಟಿಂಗ್ ವೇಳೆಯಲ್ಲಿಯೇ ಈ ಅವಘಡ ಸಂಭವಿಸಿದೆ. 

 • ಸಿಎಂ ವಿರುದ್ಧ ಮೀಟೂ - ರಾಧಿಕಾ ಕುಮಾರಸ್ವಾಮಿ ಹೇಳಿದ್ದೇನು..?

  radhika kumaraswamy reacts to kumar bangarappa's statement on metoo

  ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧವೂ ಮೀಟೂ ಆರೋಪ ಕೇಳಿಬರಬಹುದು. ಕಟ್ಟಿಕೊಂಡವರಿಗೆ ಟಿಕೆಟ್ ಕೊಟ್ಟಿದ್ದೀರಿ. ಇಟ್ಟುಕೊಂಡವರನ್ನೂ ಕರೆದುಕೊಂಡು ಹೋಗಿ ಪ್ರಚಾರ ಮಾಡಿಸಿ. ನನ್ನ ವೈಯಕ್ತಿಕ ವಿಚಾರಕ್ಕೆ ಬಂದರೆ, ನಾನು ನಿಮ್ಮ ಪರ್ಸನಲ್ ವಿಷಯವನ್ನು ಬೀದಿಗೆ ತರಬೇಕಾಗುತ್ತೆ. ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹೀಗೆ ಗುಡುಗಿದ್ದರು ಕುಮಾರ್ ಬಂಗಾರಪ್ಪ. 

  ಕುಮಾರ್ ಬಂಗಾರಪ್ಪ, ಅವರ ತಂದೆಯನ್ನು ಮನೆಯಿಂದ ಹೊರಹಾಕಿದ್ದರು ಎಂದು ಶಿವಮೊಗ್ಗ ಲೋಕಸಭೆ ಪ್ರಚಾರದ ವೇಳೆ ಕುಮಾರಸ್ವಾಮಿ ಟೀಕಿಸಿದ್ದಕ್ಕೆ ಸಿಡಿದೆದ್ದಿದ್ದರು ಕುಮಾರ್ ಬಂಗಾರಪ್ಪ. ಅಲ್ಲಿ ಮಧು ಬಂಗಾರಪ್ಪ, ಜೆಡಿಎಸ್ ಅಭ್ಯರ್ಥಿ. ಚುನಾವಣೆ ಪ್ರಚಾರ ಎನ್ನುವುದು ಸಭ್ಯತೆಯ ಗಡಿ ದಾಟಿತ್ತು.

  ಪರ್ಸನಲ್ ವಿಷಯ ಬೇಡ ಎಂದು ಕುಮಾರಸ್ವಾಮಿ ಕೂಡಾ ಹೇಳಿದ್ದರು. 

  ಈ ವಿವಾದದ ಕುರಿತು ರಾಧಿಕಾ ಕುಮಾರಸ್ವಾಮಿ ಪ್ರತಿಕ್ರಿಯೆ ಕೊಟ್ಟಿದ್ದರೂ, ವಿವಾದದಿಂದ ಅಂತರ ಕಾಯ್ದುಕೊಳ್ಳೋ ಪ್ರಯತ್ನ ಮಾಡಿದ್ದಾರೆ. ಅದು ಅವರಿಬ್ಬರ ನಡುವಿನ ವಿವಾದ. ಅದರ ಮಧ್ಯೆ ಹೋಗಿ ನಾನು ಬಲಿಪಶುವಾಗೋಕೆ ಬಯಸಲ್ಲ. ಅದನ್ನು ಅವರವರೇ ಬಗೆಹರಿಸಿಕೊಳ್ತಾರೆ. ನಾನು ಸಿನಿಮಾ ಲೈಫ್‍ನತ್ತ ಗಮನ ಹರಿಸಿದ್ದೇನೆ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.

 • ಸೆ.18ಕ್ಕೆ ದಮಯಂತಿ ಟೀಸರ್ ದರ್ಶನ

  damayanthi teaser on sep 18th

  ರಾಧಿಕಾ ಕುಮಾರಸ್ವಾಮಿ ಅಭಿನಯದ ದಮಯಂತಿ ಚಿತ್ರವನ್ನ 5 ಭಾಷೆಗಳಲ್ಲಿ ರಿಲೀಸ್ ಮಾಡುವುದು ಈಗ ಪಕ್ಕಾ.  ಏಕೆಂದರೆ ಚಿತ್ರದ ಪೋಸ್ಟರ್ ರಿಲೀಸ್ ಮಾಡಿರುವ ದಮಯಂತಿ ಚಿತ್ರತಂಡ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಪೋಸ್ಟರ್ ರಿಲೀಸ್ ಮಾಡಿದೆ.

  ನವರಸನ್ ನಿರ್ದೇಶನದ ದಮಯಂತಿ ಚಿತ್ರದಲ್ಲಿ ಹಾರರ್, ಥ್ರಿಲ್ಲರ್ ಕಥಾ ಹಂದರವಿದೆ. ಚಿತ್ರದ ಟೀಸರ್‍ನ್ನು ಸೆ.18ರಂದು ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ರಾಧಿಕಾ ಕುಮಾರಸ್ವಾಮಿ ಜೊತೆ ಭಜರಂಗಿ ಲೋಕಿ, ನವೀನ್ ಕೃಷ್ಣ, ಸಾಧುಕೋಕಿಲ, ತಬಲಾ ನಾಣಿ ಮೊದಲಾದವರು ನಟಿಸಿದ್ದಾರೆ.

 • ಸ್ಮಶಾನದಲ್ಲಿ ಮತ್ತೆ ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್

  radhika kumaraswamy back to shooting post injury

  ಭೈರಾದೇವಿ ಚಿತ್ರದ ಚಿತ್ರೀಕರಣ ವೇಳೆ ಸ್ಮಶಾನದಲ್ಲಿ ಬಿದ್ದು ಒಂದು ತಿಂಗಳು ವಿಶ್ರಾಂತಿಯಲ್ಲಿದ್ದ ರಾಧಿಕಾ ಕುಮಾರಸ್ವಾಮಿ ರಿಕವರ್ ಆಗಿದ್ದಾರೆ. ಬಿದ್ದು ಏಟು ಮಾಡಿಕೊಂಡಿದ್ದ ಜಾಗದಲ್ಲಿಯೇ, ಅದೇ ಸ್ಮಶಾನದಲ್ಲಿ ಮತ್ತೊಮ್ಮೆ ಅಘೋರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. 

  ಶ್ರೀಜಯ್ ನಿರ್ದೇಶನದ ಚಿತ್ರದಲ್ಲಿ ರಾಧಿಕಾ, 400ಕ್ಕೂ ಹೆಚ್ಚು ಸಹಕಲಾವಿದರು, 150ಕ್ಕೂ ಹೆಚ್ಚು ನೃತ್ಯಗಾರರೊಂದಿಗೆ ಕಾಳಿಯಂತೆ ಹೆಜ್ಜೆ ಹಾಕಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ ನಿರ್ಮಾಪಕಿಯೂ ಅವರೇ.

 • ಸ್ಮಶಾನದಲ್ಲಿ ರಾಧಿಕಾ ಕುಮಾರಸ್ವಾಮಿ

  radhika kumaraswamy in burial ground

  ರಾಧಿಕಾ ಕುಮಾರಸ್ವಾಮಿ ಬೆಂಗಳೂರಿನ ಹೊರವಲಯದಲ್ಲಿರೋ ಸ್ಮಶಾನವೊಂದರಲ್ಲಿ ಬೀಡುಬಿಟ್ಟಿದ್ದಾರೆ. ಅವರ ಊಟವೂ ಅಲ್ಲೆ. ಸ್ಮಶಾನದಲ್ಲಿಯೇ ಹಣ್ಣು ತಿಂದುಕೊಂಡು, ಬರಿಗಾಲಿನಲ್ಲಿ ಓಡಾಡಿಕೊಂಡು, ಭಂಗಿ ಸೇದುತ್ತಿದ್ದಾರೆ ರಾಧಿಕಾ ಕುಮಾರಸ್ವಾಮಿ. ನಿದ್ರೆಯೂ ಅಲ್ಲೇ..

  ಇದೆಲ್ಲವನ್ನೂ ಅವರು ಮಾಡ್ತಿರೋದು ಭೈರಾದೇವಿ ಚಿತ್ರಕ್ಕಾಗಿ. ಶ್ರೀ ಜೈ ನಿರ್ದೇಶನದ ಭೈರಾದೇವಿ ಚಿತ್ರದಲ್ಲಿ ರಾಧಿಕಾ ಅಘೋರಿಯಾಗಿ ನಟಿಸುತ್ತಿದ್ದಾರೆ. ಹೆಣ ಸುಡುವ ಜಾಗದಲ್ಲಿನ ಚಿತ್ರೀಕರಣ ನಿಜಕ್ಕೂ ವಿಭಿನ್ನ ಅನುಭವ. ಥ್ರಿಲ್ ಕೊಡುತ್ತಿದೆ ಎಂದು ಹೇಳಿಕೊಂಡಿದ್ದಾರೆ ರಾಧಿಕಾ.

Sagutha Doora Doora Movie Gallery

Popcorn Monkey Tiger Movie Gallery