` radhika kumaraswamy, - chitraloka.com | Kannada Movie News, Reviews | Image

radhika kumaraswamy,

 • ಎಲೆಕ್ಷನ್‍ಗೆ ನಿಲ್ತಾರಾ ರಾಧಿಕಾ ಕುಮಾರಸ್ವಾಮಿ..?

  radhika kumaraswamya clears air about politics

  ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದ ಅಥವಾ ಅದಕ್ಕೂ ಮೊದಲು ಚಿತ್ರರಂಗದ ಹಲವರು ರಾಜಕೀಯ ಪ್ರವೇಶ ಘೋಷಿಸಿದ್ದಾರೆ. ಅಂಥಾದ್ದರಲ್ಲಿ ರಾಧಿಕಾ ಕುಮಾರಸ್ವಾಮಿ ಏನ್ ಮಾಡ್ತಾರೆ ಅನ್ನೋ ಕುತೂಹಲ ಎಲ್ಲರಿಗೂ ಇತ್ತು. ಈಗ ಅವುಗಳಿಗೆಲ್ಲ ಫುಲ್‍ಸ್ಟಾಪ್ ಇಟ್ಟಿರುವ ರಾಧಿಕಾ, ರಾಜಕೀಯಕ್ಕೇ ಹೋಗಲ್ಲ ಎಂದುಬಿಟ್ಟಿದ್ದಾರೆ.

  ಕೈಲಿ 3 ಸಿನಿಮಾಗಳಿವೆ. ರವಿಚಂದ್ರನ್, ಅರ್ಜುನ್ ಸರ್ಜಾ ಜೊತೆ ನಟಿಸುತ್ತಿದ್ದೇನೆ. ರಮೇಶ್ ನಿರ್ದೇಶನದ ಸಿನಿಮಾದಲ್ಲಿದ್ದೇನೆ. ಇಷ್ಟರ ಮಧ್ಯೆ ಬಿಡುವು ಸಿಕ್ಕರೆ ನನ್ನ ಮಗಳ ಜೊತೆ, ಅಣ್ಣನ ಮಗುವಿನ ಜೊತೆ ಎಂಜಾಯ್ ಮಾಡ್ತೇನೆ. ಇಷ್ಟು ಕೆಲಸಕ್ಕೇ ಬಿಡುವಿಲ್ಲ. ಇನ್ನು ರಾಜಕೀಯಕ್ಕೆ ಯಾಕೆ ಬರಲಿ. ನಾನಿಲ್ಲಿ ಹ್ಯಾಪಿಯಾಗಿದ್ದೇನೆ. ಅಷ್ಟು ಸಾಕು ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.

 • ಕನ್ನಡದ ಅರುಂಧತಿ.. ರಾಧಿಕಾ ಕುಮಾರಸ್ವಾಮಿ ದಮಯಂತಿ

  damayanthi image

  ಈಗ ಥಿಯೇಟರುಗಳಲ್ಲಿರುವ ದಮಯಂತಿ, ಕನ್ನಡದಲ್ಲಿ ಅಪರೂಪದ ಸಿನಿಮಾ ಎನ್ನಲಡ್ಡಿಯಿಲ್ಲ. ಚಿತ್ರದ ವಿಶೇಷತೆಯೆಂದರೆ ರಾಧಿಕಾ ಕುಮಾರಸ್ವಾಮಿ. ರುದ್ರತಾಂಡವ ಚಿತ್ರದ ನಂತರ ಬರುತ್ತಿರುವ ಮೊದಲ ಸಿನಿಮಾ ಇದು. ದಮಯಂತಿ. ಒಟ್ಟಾರೆ 4 ವರ್ಷಗಳ ಸುದೀರ್ಘ ಗ್ಯಾಪ್.

  ಈ 4 ವರ್ಷಗಳಲ್ಲಿ ರಾಧಿಕಾ ಇನ್ನಷ್ಟು ಸ್ಮಾರ್ಟ್ ಆಗಿದ್ದಾರೆ. ಆದರೆ, ದಮಯಂತಿಯಲ್ಲಿ ಮಾಡರ್ನ್ ಹುಡುಗಿಯಾಗಿ, ಅಘೋರಿಯಾಗಿ.. ಭಯ ಹುಟ್ಟಿಸುತ್ತಾರೆ. ಮೇಕಪ್‌ಗಾಗಿಯೇ ಪ್ರತಿದಿನ 3 ಗಂಟೆ ವ್ಯಯಿಸಿರುವ ರಾಧಿಕಾ ಕುಮಾರಸ್ವಾಮಿಗೆ, ಅಭಿಮಾನಿಗಳು ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವಿದೆ.

  ನಿರ್ದೇಶಕ ನವರಸನ್, ಚಿತ್ರವನ್ನು ಮೊದಲು ತೆಲುಗಿನಲ್ಲಿ ಮಾಡಬೇಕು ಎಂದುಕೊAಡಿದ್ದರAತೆ. ಇದಕ್ಕಾಗಿ ಅನುಷ್ಕಾ ಶೆಟ್ಟಿ ಅವರನ್ನು ಕಾಂಟ್ಯಾಕ್ಟ್ ಕೂಡಾ ಮಾಡಿದ್ದರಂತೆ. ನಂತರ ಕನ್ನಡಲದಲ್ಲಿ ಈ ಸಿನಿಮಾ ಮಾಡಬೇಕು ಎಂದು ಹೊರಟಾಗ, ರಾಧಿಕಾ ಕುಮಾರಸ್ವಾಮಿ ಬಿಟ್ಟು ಬೇರೆಯ ಮುಖವೂ ಕಣ್ಣ ಮುಂದೆ ಬರಲಿಲ್ಲ ಎನ್ನುತ್ತಾರೆ ನವರಸನ್. 

 • ತಂಗ್ಯಮ್ಮಂಗೆ ಡೇಟ್ಸ್ ಕೊಟ್ಟ ಶಿವಣ್ಣ

  shivarajkumar agrees to act with radhika

  ಶಿವರಾಜ್ ಕುಮಾರ್ ಅವರ ತಂಗ್ಯಮ್ಮ ಯಾರು ಅನ್ನೋದನ್ನು ಕನ್ನಡ ಚಿತ್ರ ಪ್ರೇಕ್ಷಕರಿಗೆ ಹೇಳಲೇಬೇಕಿಲ್ಲ. ರಾಧಿಕಾ ಕುಮಾರ ಸ್ವಾಮಿ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ರಾಧಿಕಾ, ಹೊಸ ಸಿನಿಮಾವೊಂದನ್ನು ನಿರ್ಮಿಸುತ್ತಿದ್ದು, ಅದರಲ್ಲಿ ಶಿವಣ್ಣ ಅವರನ್ನು ನಟಿಸಲು ಕೇಳಿಕೊಂಡಿದ್ದಾರೆ ಎಂಬ ಸುದ್ದಿಯಿತ್ತು. ಈಗ ಅದು ಕನ್‍ಫರ್ಮ್ ಆಗಿದೆ. ಬಹುಶಃ, ಮಾರ್ಚ್‍ನಲ್ಲಿ ಚಿತ್ರ ಸೆಟ್ ಏರುವ ಸಾಧ್ಯತೆಯಿದ್ದು, ಬಹಳ ವರ್ಷಗಳ ನಂತರ ಶಿವಣ್ಣ-ರಾಧಿಕಾ ಒಟ್ಟಿಗೇ ತೆರೆ ಹಂಚಿಕೊಳ್ಳಲಿದ್ದಾರೆ.

  ಶಿವಣ್ಣ ಡೇಟ್ಸ್ ನೀಡಿದ್ದೇ ಸಂತೋಷ ವಿಷಯ ಎಂದು ಖುಷಿ ಹಂಚಿಕೊಂಡಿದ್ದಾರೆ ರಾಧಿಕಾ.

 • ದಮದಮ ದಮಯಂತಿ ರಾಧಿಕಾ ಕುಮಾರಸ್ವಾಮಿ ಆರ್ಭಟ

  radhika roars in damayanthi movie

  ಅನ್ಯಾಯ ಆಗ್ತಿದ್ರೂ ಅನುಸರಿಸಿಕೊಂಡು ಹೋಗೋಕೆ ನಳಚರಿತ್ರೆಯಲ್ಲಿ ಬರೋ ನಳದಮಯಂತಿ ಅಲ್ಲ ಕಣೋ ನಾನು..ಎದುರಾಳಿಗಳ ಎದೆ ಸೀಳಿ ಮೃತ್ಯುವಿನ ಜೊತೆ ರುದ್ರತಾಂಡವ ಆಡುವ ದಮ ದಮ ದಮಯಂತಿ ಕಣೋ ನಾನು.. ಅಂತಹ ನನಗೇ ದಿಗ್ಬಂಧನ ಹಾಕುವಷ್ಟು ಧಿಮಾಕೇನ್ರೋ ನಿಮಗೆ..

  ಅಪ್ಪಟ ದೇವತೆಯ ಅವತಾರದಲ್ಲಿ ರಾಧಿಕಾ ಕುಮಾರಸ್ವಾಮಿ ಅಬ್ಬರಿಸುತ್ತದ್ದರೆ ನೋಡುವವರ ಎದೆ ಝಲ್ ಎನ್ನುವುದು ದಿಟ. ಅಷ್ಟರಮಟ್ಟಿಗೆ ದಮಯಂತಿ ಪಾತ್ರದಲ್ಲಿ ಆವರಿಸಿಕೊಂಡಿದ್ದಾರೆ ರಾಧಿಕಾ ಕುಮಾರಸ್ವಾಮಿ.

  ನವರಸನ್ ನಿರ್ದೇಶನದ ದಮಯಂತಿ ಚಿತ್ರದ ಟೀಸರ್‍ನ ಆರ್ಭಟವಿದು. ಈ ಚಿತ್ರದ ಪಾತ್ರ ನೋಡಿದ ಬಳಿಕ ಚಿಕ್ಕ ಮಕ್ಕಳು ನನ್ನ ಜೊತೆ ಮಾತನಾಡಲು ಹೆದರಿಕೊಳ್ಳುವುದು ಗ್ಯಾರಂಟಿ ಎಂದಿದ್ದಾರೆ ರಾಧಿಕಾ. ಅಫ್‍ಕೋರ್ಸ್.. ಟೀಸರಿನಲ್ಲಿ ಅಷ್ಟೇ ಭಯಂಕರವಾಗಿ ಕಾಣಿಸಿದ್ದಾರೆ ರಾಧಿಕಾ. 5 ಭಾಷೆಗಳಲ್ಲಿ ದಮಯಂತಿ ಟೀಸರ್ ರಿಲೀಸ್ ಆಗಿದೆ.

 • ದಮಯಂತಿಗಿಂತ ಭಯಂಕರ ಭೈರಾದೇವಿ..!

  radhika kumaraswamy in aghori avatar

  ರಾಧಿಕಾ ಕುಮಾರಸ್ವಾಮಿ ಅಭಿನಯದ ದಮಯಂತಿ ಚಿತ್ರದ ಫಸ್ಟ್‍ಲುಕ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಆಯುಧಪೂಜೆಯ ಮುನ್ನಾ ದಿನ ದಮಯಂತಿಯಲ್ಲಿ ಅರುಂಧತಿಯ ಲುಕ್ ನೆನಪಿಸುವಂತೆ ಕಾಣಿಸಿಕೊಂಡಿದ್ದರು ರಾಧಿಕಾ ಕುಮಾರಸ್ವಾಮಿ. ಈಗ ಆ ಲುಕ್‍ನ್ನೂ ಬೆಚ್ಚಿಬೀಳಿಸುವಂತೆ ಭೈರಾದೇವಿಯಲ್ಲಿ ಕಾಣಿಸಿಕೊಂಡಿದ್ದಾರೆ.

  ಭೈರಾದೇವಿಯಲ್ಲಿ ರಾಧಿಕಾ ಅವರದ್ದು ಅಘೋರಿಯ ಪಾತ್ರವಂತೆ. ಅಘೋರಿಗಳು ಶಿವನ ಆರಾಧಕರು. ಹೀಗಾಗಿಯೇ ಪಾರ್ವತಿಯನ್ನು ತಾಯಿಯಂತೆ ಪೂಜಿಸುತ್ತಾರೆ. ಆ ತಾಯಿಯ ಒಂದು ಆವತಾರಸ್ವರೂಪಿಣಿಯೇ ಭೈರಾದೇವಿ. 

  ಶ್ರೀಜೈ ನಿರ್ದೇಶನದ ಚಿತ್ರಕ್ಕೆ ರಾಧಿಕಾ ಕುಮಾರಸ್ವಾಮಿಯೇ ನಿರ್ಮಾಪಕಿ. ರಮೇಶ್ ಅರವಿಂದ್, ಅನುಪ್ರಭಾಕರ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.

  ರಾಧಿಕಾ ಕುಮಾರಸ್ವಾಮಿಗೆ ಈ ಮೇಕಪ್ ಮಾಡಿದವರು ರಾಘವೇಂದ್ರ ಮತ್ತು ನಾಗೇಂದ್ರ. ಈ ಮೇಕಪ್ ಮಾಡೋಕೆ 5 ಗಂಟೆ ಬೇಕಾಯ್ತಂತೆ.

 • ದಮಯಂತಿಯಾಗಿ ರಾಧಿಕಾ ಕುಮಾರಸ್ವಾಮಿ

  radhika kumaraswamy to act as damayanti

  ಚಿತ್ರನಟಿ ರಾಧಿಕಾ ಕುಮಾರಸ್ವಾಮಿ, ದಮಯಂತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಧಿಕಾ ಅವರನ್ನ ದಮಯಂತಿ ಮಾಡೋಕೆ ಹೊರಟಿರುವುದು ನಿರ್ದೇಶಕ ನವರಸನ್. ಈ ಹಿಂದೆ ರಾಕ್ಷಸಿ, ವೈರ ಚಿತ್ರಗಳನ್ನು ನಿರ್ದೇಶಿಸಿದ್ದವರು. ಇದು ತೆಲುಗಿನಲ್ಲಿ ಬಂದಿದ್ದ ಅರುಂಧತಿ, ಭಾಗ್‍ಮತಿ ಮಾದರಿಯ ಚಿತ್ರ. ಮೊದಲು ಕನ್ನಡದಲ್ಲಿ ಮಾಡಿ, ನಂತರ ತೆಲುಗು, ತಮಿಳಿನಲ್ಲಿಯೂ ಮಾಡುವ ಆಲೋಚನೆ ಇದೆ ಎಂದಿದ್ದಾರೆ ನವರಸನ್.

  ಚಿತ್ರದಲ್ಲಿ ರಾಧಿಕಾ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ನಿರ್ಮಾಣದ ಹೊಣೆಯನ್ನೂ ಹೊತ್ತಿರುವ ನವರಸನ್, ಈ ಬಾರಿ ನಟನೆಗೆ ಮಂದಾಗಿಲ್ಲ. ಚಿತ್ರದ ಕಥೆ ಕೇಳಿ ರಾಧಿಕಾ ತಕ್ಷಣ ಒಪ್ಪಿಕೊಂಡಿದ್ದಾರಂತೆ. ಈಗಾಗಲೇ ಭೈರಾದೇವಿ ಚಿತ್ರದಲ್ಲಿ ರಮೇಶ್ ಅರವಿಂದ್ ಜೊತೆ, ಅರ್ಜುನ್ ಸರ್ಜಾ ಜೊತೆ ಕಾಂಟ್ರ್ಯಾಕ್ಟ್ ಚಿತ್ರದಲ್ಲಿ ನಟಿಸುತ್ತಿರುವ ರಾಧಿಕಾ, ಈಗ ದಮಯಂತಿಯಾಗುತ್ತಿದ್ದಾರೆ.

 • ದರ್ಶನ್ ಜೊತೆ ಮತ್ತೆ ನಟಿಸುವ ಆಸೆ - ರಾಧಿಕಾ ಕುಮಾರಸ್ವಾಮಿ

  radhika kumaraswamy expresses her desire to work with darshan once again

  ದಮಯಂತಿ ಮತ್ತು ಭೈರಾದೇವಿ ಚಿತ್ರಗಳ ಚಿತ್ರೀಕರಣ ಮುಗಿಸಿ, ದಮಯಂತಿ ಬಿಡುಗಡೆಗೆ ಮುಂದಾಗಿರುವ ರಾಧಿಕಾ ಕುಮಾರಸ್ವಾಮಿ, ದರ್ಶನ್ ಜೊತೆ ಮತ್ತೆ ನಟಿಸುವ ಕನಸು ಹಂಚಿಕೊAಡಿದ್ದಾರೆ. ಲಕ್ಕಿ ಚಿತ್ರಕ್ಕೂ ಮೊದಲು ನಾನು ದರ್ಶನ್ ಚಿತ್ರವನ್ನು ನಿರ್ಮಿಸಬೇಕಿತ್ತು. ಆದರೆ, ಅವರಿಗೆ ಸೂಟ್ ಆಗುವ  ಕಥೆ ಸಿಕ್ಕಲಿಲ್ಲ. ಹೀಗಾಗಿ ಯಶ್ ಅವರನ್ನು ಹಾಕಿಕೊಂಡು ಲಕ್ಕಿ ಚಿತ್ರ ನಿರ್ಮಿಸಿದೆ ಎನ್ನುವ ರಾಧಿಕಾ, ಈಗಲೂ ದರ್ಶನ್ ಚಿತ್ರಕ್ಕೆ ನಿರ್ಮಾಪಕಿಯಾಗೋಕೆ ರೆಡಿ.

  ಸೂಕ್ತ ಎನಿಸುವ ಕಥೆ, ನನಗೂ ಸೂಕ್ತ ಎನಿಸುವ ಪಾತ್ರ ಮತ್ತು ಅವಕಾಶ ಸಿಕ್ಕರೆ ದರ್ಶನ್ ಚಿತ್ರಕ್ಕೆ ನಿರ್ಮಾಪಕಿಯಾಗಲೂ ರೆಡಿ. ನಾಯಕಿಯಾಗಲೂ ರೆಡಿ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.

 • ದೇವತೆಯ ಅವತಾರದಲ್ಲಿ ರಾಧಿಕಾ ಕುಮಾರಸ್ವಾಮಿ

  radhika kumaraswamy's bhairadevi

  ರಾಧಿಕಾ ಕುಮಾರಸ್ವಾಮಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಬಬ್ಲಿ ಬಬ್ಲೀ ಪಾತ್ರಗಳ ಮೂಲಕ. ಅದಾದ ನಂತರ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿರುವ ರಾಧಿಕಾ ಕುಮಾರಸ್ವಾಮಿ, ಕನ್ನಡದಲ್ಲಷ್ಟೇ ಅಲ್ಲ, ತೆಲುಗಿನಲ್ಲಿಯೂ ಕೂಡಾ ದೈವಭಕ್ತೆಯ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ, ಈಗ ಸ್ವತಃ ದೇವತೆಯ ಪಾತ್ರದಲ್ಲಿ ನಟಿಸಲು ಸಿದ್ಧರಾಗಿದ್ದಾರೆ ರಾಧಿಕಾ.

  ಶಮಿಕಾ ಎಂಟರ್‍ಪ್ರೈಸಸ್ ಮೂಲಕ ನಿರ್ಮಾಣವಾಗುತ್ತಿರುವ `ಭೈರಾದೇವಿ' ಚಿತ್ರಕ್ಕೆ ರಾಧಿಕಾ ನಾಯಕಿ ಮತ್ತು ನಿರ್ಮಾಪಕಿ. ರಾಧಿಕಾ ಜೊತೆ ರಮೇಶ್ ಅರವಿಂದ್ ಹಾಗೂ ಅನು ಪ್ರಭಾಕರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆರ್.ಎಕ್ಸ್. ಸೂರಿ ಚಿತ್ರ ನಿರ್ದೇಶಿಸಿದ್ದ ಶ್ರೀಜೈ, ಭೈರಾದೇವಿ ಚಿತ್ರದ ನಿರ್ದೇಶಕ.

  ಈ ಚಿತ್ರ ಕನ್ನಡದಲ್ಲಷ್ಟೇ ಅಲ್ಲ, ಏಕಕಾಲದಲ್ಲಿ ತೆಲುಗು ಹಾಗೂ ತಮಿಳಿನಲ್ಲಿಯೂ ನಿರ್ಮಾಣವಾಗಲಿದೆ. ಒಂದೊಳ್ಳೆ ಕಥೆ. ಇಷ್ಟವಾಯಿತು. ಪಾತ್ರವೂ ವಿಭಿನ್ನವಾಗಿತ್ತು. ಹೀಗಾಗಿ ನಾನೇ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡೆ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.

   

 • ನಮಗಾಗಿ ಬರ್ತಾರಾ ರಾಧಿಕಾ ಕುಮಾರಸ್ವಾಮಿ..?

  will radhka's namagagi take off

  ಇತ್ತೀಚೆಗಷ್ಟೇ ದಮಯಂತಿಯಾಗಿ ಅಬ್ಬರಿಸಿದ್ದ ರಾಧಿಕಾ ಕುಮಾರಸ್ವಾಮಿ, ಈಗ ನಮಗಾಗಿ ಚಿತ್ರಕ್ಕೆ ಟಾನಿಕ್ ನೀಡುವ ಮನಸ್ಸು ಮಾಡಿದ್ದಾರೆ. ರಘುರಾಮ್ ನಿರ್ದೇಶನದ ನಮಗಾಗಿ ಚಿತ್ರ, ಅರ್ಧಕ್ಕೇ ನಿಂತು ಹೋಗಿತ್ತು. ಆ ಚಿತ್ರದಲ್ಲಿ ರಾಧಿಕಾಗೆ ವಿಜಯ್ ರಾಘವೇಂದ್ರ ಜೋಡಿಯಾಗಿದ್ದರು.

  ವಿಜಯ್ ರಾಘವೇಂದ್ರ ಮತ್ತು ರಾಧಿಕಾಗೆ ದೊಡ್ಡ ಬ್ರೇಕ್ ಕೊಟ್ಟಿದ್ದ ಚಿತ್ರ ನಿನಗಾಗಿ. ಆ ಜೋಡಿ ಮತ್ತೆ ಒಂದಾಗಿದ್ದ ಚಿತ್ರ ನಮಗಾಗಿ. ಈ ಸೆಂಟಿಮೆAಟ್ ಕಾರಣಕ್ಕಾಗಿ ಚಿತ್ರವನ್ನು ತಾವೇ ಕೈಗೆತ್ತಿಕೊಳ್ಳುವ ನಿರ್ಧಾರ ಮಾಡಿದ್ದಾರೆ ರಾಧಿಕಾ.

  ರಘುರಾಮ್ ಅವರು ಚಿತ್ರದ ಶೂಟಿಂಗ್ ಆಗಿರುವ ಫುಟೇಜ್‌ನ್ನು ಎಡಿಟ್ ಮಾಡಿಸುತ್ತಿದ್ದಾರೆ. ಅವುಗಳನ್ನು ನೋಡಿದ ನಂತರ ರಾಧಿಕಾ ನಿರ್ಧಾರ ತೆಗೆದುಕೊಳ್ಳಲಿದ್ದಾರಂತೆ. ರಾಧಿಕಾ ಓಕೆ ಎಂದರೆ ಚಿತ್ರ ಮತ್ತೆ ಟೇಕಾಫ್ ಆಗಲಿದೆ. ಚಿತ್ರದ ಇನ್ನೂ ಶೇ.30ರಷ್ಟು ದೃಶ್ಯಗಳ ಚಿತ್ರೀಕರಣ ಪೆಂಡಿAಗ್ ಇದೆ ಎಂದಿದ್ದಾರೆ ನಿರ್ದೇಶಕ ರಘುರಾಮ್.

 • ನಾನೂ ಅವರು ಈಗಲೂ ಚೆನ್ನಾಗಿದ್ದೇವೆ - ನನ್ನನ್ನು ಬರೀ ರಾಧಿಕಾ ಎನ್ನಬೇಡಿ - ರಾಧಿಕಾ ಕುಮಾರಸ್ವಾಮಿ

  radhika speaks again

  ರಾಧಿಕಾ ಕುಮಾರಸ್ವಾಮಿ ಒಂದು ತಿಂಗಳು ಹೊರಗೆ ಕಾಣಿಸಿಕೊಳ್ಳದೇ ಹೋಗಿ, ಆಮೇಲೆ ಪ್ರತ್ಯಕ್ಷರಾದರೆ ಅವರಿಗೆ ಎದುರಾಗುವ ಅತಿ ದೊಡ್ಡ ಪ್ರಶ್ನೆ ಅದು. ನೀವೂ ಕುಮಾರಸ್ವಾಮಿ ಬೇರೆಯಾಗಿದ್ದೀರಾ..? ನೀವೂ ಕುಮಾರಸ್ವಾಮಿ ಒಟ್ಟಿಗೇ ಇದ್ದೀರಾ...? ಇಲ್ಲವಾ..? ನಿಮ್ಮ ಹೆಸರಿನ ಜೊತೆ ಕುಮಾರಸ್ವಾಮಿ ಹೆಸರನ್ನು ಸೇರಿಸಬಹುದೇ..? ಇಂಥ ಪ್ರಶ್ನೆಗಳು ತಾನೇ ತಾನಾಗಿ ಮೂಡುತ್ತವೆ. ಇವುಗಳಿಗೆ ರಾಧಿಕಾ ಉತ್ತರ ಕೊಡುತ್ತಲೇ ಇದ್ದಾರೆ.

  ಅಂಥದ್ದೇ ಪ್ರಶ್ನೆ ಕಾಂಟ್ರ್ಯಾಕ್ಟ್ ಚಿತ್ರದ ಸುದ್ದಿಗೋಷ್ಟಿಯಲ್ಲೂ ಆಯ್ತು. ಆ ಚಿತ್ರದಲ್ಲಿ ರಾಧಿಕಾ ನಾಯಕಿ. ಜೆಡಿ ಚಕ್ರವರ್ತಿ ನಾಯಕ. ಅಷ್ಟೂ ಪ್ರಶ್ನೆಗಳಿಗೆ ರಾಧಿಕಾ ಉತ್ತರಿಸಿದ್ದಾರೆ.

  ಪ್ರಶ್ನೆ - ನೀವೂ ಕುಮಾರಸ್ವಾಮಿ ಬೇರೆ ಬೇರೆಯಾಗಿದ್ದೀರಾ..?

  ರಾಧಿಕಾ - ನಾನು ಅವರು ಬೇರೆಯಾಗಿದ್ದೇವೆ ಎಂದು ಹೇಳಿದ್ದು ಯಾರು? ನಾನು ಹೇಳಿದ್ನಾ..? ಅವರು ಹೇಳಿದ್ರಾ..? ಎಲ್ಲವನ್ನೂ ನೀವೇ ಊಹೆ ಮಾಡಿಕೊಳ್ಳುತ್ತೀರಿ. ಬರೆಯುತ್ತೀರಿ. ನಾನೂ ಅವರು ದೂರವಾಗಿಲ್ಲ.

  ಪ್ರಶ್ನೆ - ನಿಮ್ಮ ಬಗ್ಗೆ, ನಿಮ್ಮ ಸಂಸಾರದ ಬಗ್ಗೆ ತುಂಬಾ ಗಾಳಿಸುದ್ದಿಗಳಿವೆ

  ರಾಧಿಕಾ - ಹೌದು, ಏನೇನೋ ಗಾಳಿ ಸುದ್ದಿಗಳಿವೆ. ನಾನು ಬೆಂಗಳೂರಿನಲ್ಲಿ ಇಲ್ಲ. ಲಂಡನ್‍ನಲ್ಲಿದ್ದೇನೆ, ಮಂಗಳೂರಿನಲ್ಲಿದ್ದೇನೆ  ಅನ್ನೋ ಸುದ್ದಿಯಿದೆ. ಅಷ್ಟೇ ಯಾಕೆ, ನನಗೆ ಮೂವರು ಮಕ್ಕಳು. ಒಬ್ಬರನ್ನು ಲಂಡನ್‍ನಲ್ಲಿ, ಮತ್ತೊಬ್ಬರನ್ನು ಯಾರಿಗೋ ಕೊಟ್ಟು ಮಂಗಳೂರಿನಲ್ಲಿ ಸಾಕಿಸುತ್ತಿದ್ದೇನೆ, ಒಂದು ಮಗುವನ್ನು ಮಾತ್ರ ನಾನು ಸಾಕುತ್ತಿದ್ದೇನೆ ಎಂದೆಲ್ಲ ಸುಳ್ಳು ಸುದ್ದಿಗಳಿವೆ. ಏನು ಹೇಳೋದು. ನಾನು ಈಗಲೂ ಬೆಂಗಳೂರಿನಲ್ಲೇ ಇದ್ದೇನೆ. ನಮಗೆ ಇರುವುದು ಒಂದೇ ಮಗು.

  ಪ್ರಶ್ನೆ - ಈ ಗಾಳಿಸುದ್ದಿಗಳು ಹುಟ್ಟಿಕೊಳ್ಳೋದು ಏಕೆ?

  ರಾಧಿಕಾ - ನನಗೂ ಗೊತ್ತಿಲ್ಲ. ಆದರೆ, ಎಷ್ಟು ಬಾರಿ ಸ್ಪಷ್ಟನೆ ಕೊಡೋದು.? 

  ಪ್ರಶ್ನೆ - ಕುಮಾರಸ್ವಾಮಿ ಜೊತೆ ಈಗ ಸಂಬಂಧ ಹೇಗಿದೆ?

  ರಾಧಿಕಾ - ನಾನೂ, ಅವರು ದೂರವಾಗಿಲ್ಲ. ನನ್ನ ಮಗಳು ಸ್ಕೂಲ್‍ಗೆ ಹೋಗುತ್ತಿದ್ದಾಳೆ. ಅದು ಅವರಿಗೆ ಗೊತ್ತಿದೆ. ಹೀಗಾಗಿ ನಾವೂ ಕುಟುಂಬದವರ ಹಾಗೆಯೇ ಇದ್ದೇವೆ. ನನ್ನ ಹೆಸರು ಸಾಯುವ ತನಕ ಅವರ ಹೆಸರಿನ ಜೊತೆ ಇರುತ್ತೆ. ನನ್ನನ್ನು ಬರೀ ರಾಧಿಕಾ ಎಂದು ಬರೆಯಬೇಡಿ. ರಾಧಿಕಾ ಕುಮಾರಸ್ವಾಮಿ ಎಂದೇ ಬರೆಯಿರಿ.

 • ಪಂಚಭಾಷಾ ಸ್ಟಾರ್ ಆಗ್ತಿದ್ದಾರೆ ರಾಧಿಕಾ ಕುಮಾರಸ್ವಾಮಿ

  radhika kumaraswamy's focus on 5 languages now

  ಸ್ಯಾಂಡಲ್‍ವುಡ್ ಸ್ಟಾರ್ ರಾಧಿಕಾ ಕುಮಾರಸ್ವಾಮಿ, ಈಗ ಪಂಚಭಾಷಾ ನಟಿಯಾಗುತ್ತಿದ್ದಾರೆ. ತೆಲುಗಿನಲ್ಲೂ ನಟಿಸಿರುವ ರಾಧಿಕಾ, ಈಗ 5 ಭಾಷೆಗಳಲ್ಲೂ ನಟಿಯಾಗುತ್ತಿದ್ದಾರೆ. ರಾಧಿಕಾ ಕುಮಾರಸ್ವಾಮಿಯವರ ದಮಯಂತಿ ಸಿನಿಮಾ, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿದೆ. ಈಗಾಗಲೇ 5 ಭಾಷೆಗಳಲ್ಲೂ ಟೀಸರ್ ರಿಲೀಸ್‍ಗೆ ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ.

  5 ಭಾಷೆಗಳ ಟೀಸರ್‍ನ್ನು ಐವರು ವಿವಿಧ ಭಾಷೆಯ ಸ್ಟಾರ್‍ಗಳು ರಿಲೀಸ್ ಮಾಡಲಿದ್ದಾರೆ. ನವರಸನ್ ನಿರ್ದೇಶನದ ಚಿತ್ರದಲ್ಲಿ ಥ್ರಿಲ್ಲರ್ ಹಾಗೂ ಹಾರರ್ ಕಥೆ ಇದೆ.

 • ಬಂಗಾರದ ಜಿಂಕೆಯಾದ ರಾಧಿಕಾ ಕುಮಾರಸ್ವಾಮಿ

  radhika kumaraswamy glitters in gold

  ಬಾಯ್ತುಂಬಾ ನಗುವ ರಾಧಿಕಾ ಕುಮಾರಸ್ವಾಮಿ, ಮೈತುಂಬಾ ಆಭರಣ ತೊಟ್ಟರೆ ಹೇಗಿರುತ್ತಾರೆ.. ಹೌದು..ರಾಧಿಕಾ ಕುಮಾರಸ್ವಾಮಿ ಈಗ ಬಂಗಾರದ ಜಿಂಕೆಯಾಗಿದ್ದಾರೆ. ಇದುವರೆಗೆ ಸಿನಿಮಾಗಳಲ್ಲಿ, ಕಿರುತೆರೆ ರಿಯಾಲಿಟಿ ಶೋಗಳಲ್ಲಿ  ಮಾತ್ರವೇ ಬಣ್ಣ ಹಚ್ಚಿದ್ದ ರಾಧಿಕಾ, ಇದೇ ಮೊದಲ ಬಾರಿಗೆ ಜಾಹೀರಾತಿನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

  ಇಷ್ಟೊಂದು ಆಭರಣ ತೊಟ್ಟಾಗ ಆಗುವ ಖುಷಿಯೇ ಬೇರೆ. ಇಷ್ಟೊಂದು ಆಭರಣಗಳನ್ನು ಈ ಹಿಂದೆ ಯಾವತ್ತೂ ಹಾಕಿರಲಿಲ್ಲ ಎನ್ನುವ ರಾಧಿಕಾ ಕುಮಾರಸ್ವಾಮಿಗೆ,ಮತ್ತೊಮ್ಮೆ ದರ್ಶನ್ ಜೊತೆ ಸಿನಿಮಾ ಮಾಡೋ ಆಸೆ ಇದೆ. ಮಗಳು ಶಮಿಕಾ ಕುಮಾರಸ್ವಾಮಿಯನ್ನು ಚಿತ್ರರಂಗಕ್ಕೆ ಕರೆತರುವ ಬಯಕೆಯೂ ಇದೆ. 

 • ಬಂದಾಳಮ್ಮಾ ಕಾಳಿಕಾ.. ಅರೆರೆರೆ.. ರಾಧಿಕಾ ಕುಮಾರಸ್ವಾಮಿ

  bhairavdeiv song released

  ರಾಧಿಕಾ ಕುಮಾರಸ್ವಾಮಿ ಅಘೋರಿಯಾಗಿ ಕಾಣಿಸಿಕೊಂಡಿರುವ ಚಿತ್ರ ಭೈರಾದೇವಿ. ಶಮಿಕಾ ಎಂಟರ್‍ಪ್ರೈಸಸ್ ನಿರ್ಮಾಣದಲ್ಲಿ ರೆಡಿಯಾಗಿರುವ ಭೈರಾದೇವಿ ಚಿತ್ರದ ಹಾಡಿನ ಲಿರಿಕಲ್ ವಿಡಿಯೋ, ಚಾಮುಂಡೇಶ್ವರಿ ಸನ್ನಿಧಿಯಲ್ಲೇ ರಿಲೀಸ್ ಆಗಿದೆ. ಯುವ ದಸರಾದಲ್ಲಿ ಭೈರಾದೇವಿ ಚಿತ್ರದ ಬಂದಾಳಮ್ಮಾ ಕಾಳಿಕಾ.. ಅನ್ನೋ ಲಿರಿಕಲ್ ಹಾಡು ಬಿಡುಗಡೆಯಾಗಿದೆ.

  ಬಂದಾಳಮ್ಮ ಕಾಳಿಕಾ.. ದುಷ್ಟರನ್ನು ಕೊಲ್ಲುತಾ.. ಬಂದಾಳಮ್ಮ ಕಾಳಿಕಾ.. ಶಿಷ್ಟರನ್ನು ಕಾಯುತಾ.. ಎಂಬ ಹಾಡು ರೋಮಾಂಚನ ಹುಟ್ಟಿಸುವಂತಿದೆ. ನಿರ್ದೇಶಕ ಶ್ರೀಜೈ ಅವರೇ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ರಮೇಶ್ ಅರವಿಂದ್-ರಾಧಿಕಾ ಕುಮಾರಸ್ವಾಮಿ ಇದೇ ಮೊದಲ ಬಾರಿ ಬೆಳ್ಳಿತೆರೆಯ ಮೇಲೆ ಒಂದಾಗಿದ್ದಾರೆ.

 • ಬಂಪರ್ ಆಫರ್ : ರಾಧಿಕಾ ಕುಮಾರಸ್ವಾಮಿ ಜೊತೆ ಸಿನಿಮಾ ನೋಡ್ಬೇಕಾ..?

  bumper offer from damayanthi movie team

  ರಾಧಿಕಾ ಕುಮಾರಸ್ವಾಮಿ ತಮ್ಮ ಅಭಿಮಾನಿಗಳಿಗೆ ಒಂದು ಬಂಪರ್ ಆಫರ್ ಕೊಟ್ಟಿದ್ದಾರೆ. ನಿಮಗೆ ಗೊತ್ತಿದೆ. ರಾಧಿಕಾ ಅವರ ದಮಯಂತಿ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ಮೂಲಕ ಬೆಚ್ಚಿ ಬೀಳಿಸಿದ್ದ ರಾಧಿಕಾ, ಈಗ ಒಂದು ಆಫರ್ ಕೊಟ್ಟಿದ್ದಾರೆ.

  `ಅನ್ಯಾಯ ಆಗ್ತಿದ್ರೂ ಅನುಸರಿಸಿಕೊಂಡು ಹೋಗೋಕೆ ನಳ ಚರಿತ್ರೆಯಲ್ಲಿ ಬರೋ ನಳದಮಯಂತಿ ಅಲ್ಲ ನಾನು. ಎದುರಾಳಿಗಳ ಎದೆ ಸೀಳಿ, ಶತ್ರುವಿನ ಜೊತೆ ರುದ್ರತಾಂಡವ ಆಡುವ ದಮದಮ ದಮಯಂತಿ ಕಣೋ ನಾನು..' ಎನ್ನುವ ರಾಧಿಕಾ ಕುಮಾರಸ್ವಾಮಿ ಡೈಲಾಗ್ ಭಯಂಕರ ಹಿಟ್ ಆಗಿದೆ.

  ನೀವು ಆ ಡೈಲಾಗ್‍ನ್ನು ಟಿಕ್ ಟಾಕ್ ಮಾಡಬೇಕು. ಒಳ್ಳೆಯ, ಅತಿ ಹೆಚ್ಚು ಲೈಕ್ಸ್ ಗಿಟ್ಟಿಸುವ ಟಿಕ್ ಟಾಕ್ ಮಾಡಿದ 10 ಜನರನ್ನು ರಾಧಿಕಾ ಅವರೇ ಆಯ್ಕೆ ಮಾಡ್ತಾರೆ. ಆ 10 ಜನ ರಾಧಿಕಾ ಕುಮಾರಸ್ವಾಮಿ ಜೊತೆ ಪ್ರೀಮಿಯರ್ ಶೋನಲ್ಲಿ ಸಿನಿಮಾ ನೋಡಬಹುದು.

  ನವರಸನ್ ನಿರ್ದೇಶನದ ದಮಯಂತಿ ಚಿತ್ರದಲ್ಲಿ ರಾಧಿಕಾ ಅವರ ಜೊತೆ ಭಜರಂಗಿ ಲೋಕಿ ಕೂಡಾ ನಟಿಸಿದ್ದಾರೆ. ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಚಿತ್ರ ರಿಲೀಸ್ ಆಗುತ್ತಿದೆ.

 • ಮಂಜು ಸ್ವರಾಜ್, ರಾಧಿಕಾ ಕುಮಾರಸ್ವಾಮಿ ಜೊತೆ ಜೊತೆಯಲಿ

  radhika kuamraswamy's next film with manju swaraj

  ಒಂದೆಡೆ ನಿರ್ದೇಶಕ ಮಂಜು ಸ್ವರಾಜ್, ಮನೆ ಮಾರಾಟಕ್ಕಿದೆ ಚಿತ್ರದ ಯಶಸ್ಸಿನ ಅಲೆಯಲ್ಲಿದ್ದಾರೆ. ಮತ್ತೊಂದೆಡೆ ರಾಧಿಕಾ ಕುಮಾರಸ್ವಾಮಿ, ದಮಯಂತಿ ಮೂಲಕ ಕಮ್‌ಬ್ಯಾಕ್ ಮಾಡಿ ಪ್ರೇಕ್ಷಕರ ರಿಯಾಕ್ಷನ್ ನೋಡುತ್ತಿದ್ದಾರೆ. ಇವರಿಬ್ಬರೂ ಈಗ ಜೊತೆ ಜೊತೆಯಾಗುತ್ತಿದ್ದಾರೆ ಅನ್ನೋದು ಗಾಂಧಿನಗರದ ಸೆನ್ಸೇಷನ್.

  ಮಂಜು ಸ್ವರಾಜ್ ಅವರು ಹೇಳಿರೋ ಕಥೆಯೊಂದರ ಒನ್‌ಲೈನ್, ರಾಧಿಕಾ ಅವರಿಗೂ ಇಷ್ಟವಾಗಿದೆಯಂತೆ. ಅದೊಂದು ಕಾಮಿಡಿ ಬೇಸ್ ಇರುವ ಲವ್ ಸ್ಟೋರಿಯಾಗಿದ್ದು, ಸ್ವತಃ ನಿರ್ಮಾಪಕಿಯಾಗಲು ಆಸಕ್ತಿ ತೋರಿಸಿದ್ದಾರಂತೆ ರಾಧಿಕಾ. ಎಲ್ಲವೂ ಅಂದುಕೊAಡAತೆಯೇ ಆದರೆ, ಮುಂದಿನ ವರ್ಷದಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಶಮಿಕಾ ಬ್ಯಾನರ್‌ನಲ್ಲಿ ಮಂಜು ಸ್ವರಾಜ್ ನಿರ್ದೇಶನದ ಹೊಸ ಚಿತ್ರ ಶುರುವಾಗಲಿದೆ.

 • ರಾಧಿಕಾ ಕುಮಾರಸ್ವಾಮಿ ಚಿತ್ರ ನಿಲ್ಲೋಕೆ ಕಾರಣ ಏನು..?

  raghuram, radhika kumaraswamy

  `ನಮಗಾಗಿ' ರಾಧಿಕಾ-ವಿಜಯ್ ರಾಘವೇಂದ್ರ ಜೋಡಿಯ ಸಿನಿಮಾ. ನಿನಗಾಗಿ ಚಿತ್ರದ ನಂತರ, ರಾಧಿಕಾ ಮತ್ತು ವಿಜಯ್ ರಾಘವೇಂದ್ರ ಒಟ್ಟಿಗೇ ನಟಿಸಿದ್ದ ಸಿನಿಮಾ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟು ಹೊತ್ತಿಗೆ ನಮಗಾಗಿ ಸಿನಿಮಾ ರಿಲೀಸ್ ಆಗಿ 2 ವರ್ಷಗಳಾಗುತ್ತಿತ್ತು. ಈಗ ಚಿತ್ರವೇ ಸ್ಥಗಿತಗೊಂಡಿರುವ ಸುದ್ದಿ ಬಂದಿದೆ.

  ಸ್ವತಃ ಚಿತ್ರದ ನಿರ್ದೇಶಕ ರಘುರಾಮ್ ಇನ್ನು ನನಗೂ ಚಿತ್ರಕ್ಕೂ ಸಂಬಂಧವಿಲ್ಲ ಎಂದು ಹೇಳಿಬಿಟ್ಟಿದ್ದಾರೆ. ಚಿತ್ರ ಶುರುವಾದ ಕೆಲವೇ ದಿನಗಳಲ್ಲಿ ನಿರ್ಮಾಪಕರಿಗೆ ಸಮಸ್ಯೆಯಾಗಿ ಚಿತ್ರವನ್ನು ನಿಲ್ಲಿಸಿದರು. ನಂತರ, ನಿರ್ಮಾಣದ ಹೊಣೆಯನ್ನು ಸ್ವತಃ ರಾಧಿಕಾ ಕುಮಾರಸ್ವಾಮಿ ಹೊತ್ತುಕೊಂಡರು. 

  ಆದರೆ, ರಾಧಿಕಾ ನಿರ್ಮಾಪಕಿಯಾದ ನಂತರವೂ ಚಿತ್ರ ಅದೇಕೋ ಟೇಕಾಫ್ ಆಗಲೇ ಇಲ್ಲ. ಏನು ಕಾರಣ ಎನ್ನುವುದೂ ಗೊತ್ತಾಗಲಿಲ್ಲ. ಚಿತ್ರಕ್ಕಾಗಿ 3 ವರ್ಷ ಕಾದು, ಈಗ ಹೊರಬರುತ್ತಿದ್ದೇನೆ. ನಮಗಾಗಿ ಮುಗಿದ ಅಧ್ಯಾಯ ಎಂದಿದ್ದಾರೆ ರಘುರಾಮ್.

  ಇಷ್ಟಕ್ಕೂ ರಾಧಿಕಾ ಕುಮಾರಸ್ವಾಮಿ ಚಿತ್ರ ನಿರ್ಮಾಣದಿಂದ ಹಿಂದೆ ಸರಿದಿದ್ದು ಏಕೆ..? ಏನು ಕಾರಣವೋ.. ಏನೋ..

 • ರಾಧಿಕಾ ಕುಮಾರಸ್ವಾಮಿ ಪಾತ್ರಕ್ಕೆ ಮಂಗಳಮುಖಿ ವಾಯ್ಸ್

  radhika kumaraswamya gets a voicoover from transgender

  ಭೈರಾದೇವಿ. ರಾಧಿಕಾ ಕುಮಾರಸ್ವಾಮಿ ಅಘೋರಿಯಾಗಿ ನಟಿಸುತ್ತಿರುವ ಸಿನಿಮಾ. ಮೇಕಪ್ ಮೂಲಕ, ರಾಧಿಕಾ ಅವರ ಅಗಲವಾದ ಕಣ್ಣುಗಳ ಮೂಲಕ ಅಘೋರಿಯನ್ನಾಗಿ ತೋರಿಸುವುದು ಸುಲಭ. ಅದ್ಭುತ ನಟಿಯಾಗಿರುವ ರಾಧಿಕಾಗೆ ಅದು ಕಷ್ಟವೇನಲ್ಲ. ಆದರೆ.. ಧ್ವನಿ. 

  ಹೌದು, ಅಘೋರಿ ಪಾತ್ರಕ್ಕೆ ಧ್ವನಿ ಕರ್ಕಶವಾಗಿರಬೇಕು. ಗಟ್ಟಿಯಾಗಿರಬೇಕು. ಹೈ ಪಿಚ್‍ನಲ್ಲಿರಬೇಕು. ಹೀಗಾಗಿಯೇ ಅಘೋರಿ ಪಾತ್ರಕ್ಕೆ ನಿರ್ದೇಶಕ ಶ್ರೀ ಜೈ ಹೊಸ ಪ್ರಯತ್ನ ಮಾಡಿದ್ದಾರೆ. ಮಂಗಳಮುಖಿಯರನ್ನು ಕರೆಸಿ ಟೆಸ್ಟ್ ಮಾಡಿಸಿದ್ದಾರೆ. ಅವರಲ್ಲಿ ಭೂಮಿಕಾ ಎಂಬ ಮಂಗಳಮುಖಿಯ ಧ್ವನಿ ರಾಧಿಕಾ ಅವರ ಪಾತ್ರಕ್ಕೆ ಮ್ಯಾಚ್ ಆಗಿದೆ. ಅವರಿಗೇ ತರಬೇತಿ ನೀಡಿ ಡಬ್ಬಿಂಗ್ ಮಾಡಲು ನಿರ್ಧರಿಸಿದೆ ಭೈರಾದೇವಿ ಚಿತ್ರತಂಡ.

 • ರಾಧಿಕಾ ಕುಮಾರಸ್ವಾಮಿ ಮತ್ತು ನೆನಪರಲಿ ಪ್ರೇಮ್ ಜೊತೆ ಜೊತೆಯಲಿ

  Prem and Radhika Kumaraswamy Together

  ಚೌಕ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ನಟ ನೆನಪಿರಲಿ ಪ್ರೇಮ್, ರಾಧಿಕಾ ಕುಮಾರ ಸ್ವಾಮಿ ಜೊತೆಗೆ ಬರುತ್ತಿದ್ದಾರೆ. ಟಿವಿ ಶೋನಲ್ಲಿ. ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್ ಸೀಸನ್ 2ನಲ್ಲಿ ನೆನಪಿರಲಿ ಪ್ರೇಮ್ ಜಡ್ಜ್. ಅವರ ಜೊತೆಗೆ ಜಡ್ಜ್ ಆಗಿ ಕೂರುತ್ತಿರುವ ನಾಯಕಿ ರಾಧಿಕಾ ಕುಮಾರಸ್ವಾಮ

  ನೆನಪಿರಲಿ ಪ್ರೇಮ್​ಗೆ ಟಿವಿ ಶೋ ಹೊಸದಲ್ಲ. ಈ ಮೊದಲು ಪುಟಾಣಿ ಪಂಟ್ರು ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದ ಪ್ರೇಮ್​ಗೆ, ಕಿರುತೆರೆಯಲ್ಲಿ ಇದು 2ನೇ ಅನುಭವ. ಹೆಚ್ಚೂ ಕಡಿಮೆ ತೆರೆಮರೆಗೆ ಸರಿದವರಂತೆ ಇರುವ ರಾಧಿಕಾ ಕುಮಾರಸ್ವಾಮಿ, ಈ ಶೋ ಮೂಲಕ ಟಿವಿಯಲ್ಲಿ ಬರುತ್ತಿರುವುದು ಈ ರಿಯಾಲಿಟಿ ಶೋನ ವಿಶೇಷ.

  ಇವರಿಬ್ಬರ ಜೊತೆ 3ನೇ ಜಡ್ಜ್ ಆಗಿರುವದು ಕೊರಿಯೋಗ್ರಾಫರ್ ಸಲ್ಮಾನ್. ಜೂನ್ 24ರಿಂದ ಸ್ಟಾರ್ ಸುವರ್ಣದಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ

 • ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬದ ಸಂಭ್ರಮಕ್ಕೆ ದರ್ಶನ್ ಮುಖ್ಯ ಅತಿಥಿ

  darshan is chief for radhka's birthday function

  ರಾಧಿಕಾ ಕುಮಾರಸ್ವಾಮಿ ಕಂಬ್ಯಾಕ್ ಮಾಡುತ್ತಿದ್ದಾರೆ. ದಮಯಂತಿ ಮತ್ತು ಭೈರಾದೇವಿ ಅನ್ನೋ ಎರಡು ಸಿನಿಮಾಗಳ ಮೂಲಕ ಬರುತ್ತಿದ್ದಾರೆ. ಇವುಗಳಲ್ಲಿ ಭೈರಾದೇವಿಗೆ ಅವರೇ ನಿರ್ಮಾಪಕಿ. ಇದೇ ಮೊದಲ ಬಾರಿಗೆ ನಾಯಕಿ ನಟಿಯೊಬ್ಬರು ಅಘೋರಿಯಾಗಿ ನಟಿಸಿರುವ ಚಿತ್ರವದು. ಇನ್ನೊಂದು ದಮಯಂತಿ. ಈ ಎರಡೂ ಚಿತ್ರಗಳ ಆಡಿಯೋ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ನವೆಂಬರ್ ೧೨.

  ನವೆಂಬರ್ ೧೨, ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬ. ಆ ದಿನವೇ ಆಡಿಯೋ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುಖ್ಯ ಅತಿಥಿಯಾಗಿ ಬರುತ್ತಿರುವುದು ಚಾಲೆಂಜಿAಗ್ ಸ್ಟಾರ್ ದರ್ಶನ್. ಈ ಹಿಂದೆ ದರ್ಶನ್ ರಾಧಿಕಾ ಅವರ ಜೊತೆ ಮಂಡ್ಯ ಮತ್ತು ಅನಾಥರು ಚಿತ್ರದಲ್ಲಿ ನಟಿಸಿದ್ದಾರೆ. ಈಗ ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಬರುತ್ತಿದ್ದಾರೆ.ಅಂದಹಾಗೆ ರಾಧಿಕಾ ಕುಮಾರಸ್ವಾಮಿಗೆ ನವೆಂಬರ್ ೧೨ಕ್ಕೆ ೩೨ ವರ್ಷ ತುಂಬುತ್ತಿದೆ.

 • ರಾಧಿಕಾ ಕುಮಾರಸ್ವಾಮಿಗೆ 1 ಕೋಟಿ ಸಂಭಾವನೆ..?

  did radhika kumaraswamy get 1 cr remunaration for damayanthi

  ದಮಯಂತಿ ಚಿತ್ರದಲ್ಲಿ ಅಘೋರಿಯಾಗಿ ನಟಿಸುತ್ತಿರುವ ರಾಧಿಕಾ ಕುಮಾರಸ್ವಾಮಿ, ಆ ಚಿತ್ರಕ್ಕಾಗಿ 1 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಇಂಥದ್ದೊಂದು ಗುಸುಗುಸು ಗಾಂಧಿನಗರದಲ್ಲಿ ಓಡಾಡುತ್ತಿದೆ. ಈಗಾಗಲೇ ಶೇ. 80 ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ, 80 ಲಕ್ಷ ರೂ.ಗಳನ್ನು ಅಡ್ವಾನ್ಸ್ ಆಗಿ ಕೊಟ್ಟಿದೆಯಂತೆ.

  ಅನುಷ್ಕಾ ಶೆಟ್ಟಿಯವರನ್ನು ಮನಸ್ಸಿನಲ್ಲಿಟ್ಟುಕೊಂಡು ರೂಪಿಸಿದ್ದ ಪಾತ್ರ, ಅವರ ಡೇಟ್ಸ್ ಸಿಗದ ಕಾರಣ ರಾಧಿಕಾ ಕುಮಾರಸ್ವಾಮಿ ಪಾಲಾಯಿತು. ನವರಸನ್ ನಿರ್ದೇಶನದ ಚಿತ್ರಕ್ಕೆ ಅವರೇ ನಿರ್ಮಾಪಕರು. 80ರ ದಶಕದ ಕಥೆಗೆ, ಈಗಿನ ವಾಸ್ತವದ ಕಥೆಯೂ ಮಿಕ್ಸ್ ಆಗಿದೆ. ಚಿತ್ರದ ರಷಸ್‍ಗಳು ಅದ್ಭುತವಾಗಿ ಮೂಡಿ ಬಂದಿವೆ ಎನ್ನುತ್ತಿದೆ ಚಿತ್ರತಂಡ.

Matthe Udbhava Trailer Launch Gallery

Maya Bazaar Pressmeet Gallery