2006 ರಲ್ಲಿ ಗಂಡ ಹೆಂಡತಿ ಚಿತ್ರದ ಮೂಲಕ ಭರ್ಜರಿ ಎಂಟ್ರಿ ಕೊಟ್ಟ ಸಂಜನಾ ಇದುವರೆಗೂ ಸುಮಾರು 45 ಚಿತ್ರಗಳಲ್ಲಿ ಅಬಿನಯಿನಿದ್ದಾರೆ.
ಶ್ಯೆಲೇಂದ್ರ ಬಾಬು ನಿರ್ಮಾಣದ ಗಂಡ ಹೆಂಡತಿ ಚಿತ್ರದ ನಿರ್ದೇಶಕರು ರವಿ ಶ್ರೀವತ್ಸ. ಈ ಚಿತ್ರದ ಪ್ರಮುಖ ಪಾತ್ರದಾರಿಗಳು ವಿಶಾಲ್, ತಿಲಕ್, ಸಂಜನಾ, ರವಿ ಬೆಳಗೆರೆ, ಮಂಜು ಭಾಷಿಣಿ ಮುಂತಾದವರು.
ಗಂಡ ಹೆಂಡತಿ ಚಿತ್ರದ ಮುಹೂರ್ತ ನಡೆದ್ದು 03-02-2006 ರಾಕ್ ಲೈನ್ ಸ್ಟುಡಿಯೋದಲ್ಲಿ. ಮೊದಲು ದೃಶ್ಯಕ್ಕೆ ಕ್ಲಾಪ್ ಮಾಡಿದ್ದು ನಿರ್ದೇಶಕ ಎಂ.ಎಸ್ ರಮೇಶ ಮತ್ತು ಕ್ಯಾಮರಾ ಸ್ವಿಚ್ ಆನ್ ಮಾಡಿದ್ದು ರವಿಚಂದ್ರನ್.
ಈ ಚಿತ್ರದ ವರದಿ
ಇತ್ತೀಚೆಗೆ ಸಂಜಾನ ಚಿತ್ರದಲ್ಲಿ ತಮ್ಮನ್ನು ಕೆಟ್ಟದಾಗಿ ತೊರಿಸಿದ್ದಾರೆಂದು ರವಿ ಶ್ರಿವತ್ಸ ಅವರ ಮೇಲೆ ಅಪಾದನೆ ಮಾಡಿದ್ದಾರೆ. ಗಂಡ ಹೆಂಡತಿ ಚಿತ್ರದ ಮುಹೂರ್ತದ ದಿನ ಸಂಜನಾ ಮಾತನಾಡಿದ್ದನ್ನು ಕನ್ನಡಪ್ರಭ ಪತ್ರಿಕೆಯಲ್ಲಿ ದಿನಾಂಕ 20-02-2006 ರಂದು ಪ್ರಕಟವಾಯಿತು.
ಅದರ ಲೇಖನ ಈ ಕೆಳಗಿನಂತಿದೆ.
ಯಾರ ತಪಸಿನ ಫಲವೋ... ಈ ಕಂಗಳು ಮಾಡಿದ ಪುಣ್ಯವೋ...
ಹಾಗಂತ ಪ್ರೇಕ್ಷಕರು ಹಾಡುವುದಕ್ಕೇನೂ ಅಡ್ಡಿಯಿಲ್ಲ. ಮಲ್ಲಿಕಾ ಶೆರಾವತ್ ಕನ್ನಡಕ್ಕೆ ಬರುತ್ತಿದ್ದಾಳೆ, ಸಂಜನಾ ರೂಪದಲ್ಲಿ. ಮಲ್ಲಿಕಾ ಶೆರಾವತ್ ಳ ಸಕಲ ಗುಣರೂಪಗಳನ್ನೂ ಸಂಜನಾ ಮೌಗೂಡಿಸಿಕೊಂಡಾಗಿದೆ. ಶೆರಾವತ್ ಶರಬತ್ತು ಆಗಷ್ಟೇ ಕುಡಿದು ಮುಗಿಸಿದ ಹುಡುಗಿಯೆತೆ ಸಂಜನಾ ಮಾತು ನಾಲಗೆಯೆಂಬ ಚಮ್ಮುಹಲಗೆಯಿಂದ ಜಿಗಿಯುತ್ತದೆ. ಮಾತೆ ಜ್ಯೋತಿರ್ಲಿಂಗ. ಮೌನವೆ ಶಿವಗಂಗಾ.
ರಾಕ್ ಲೈನ್ ಸ್ಟುಡಿಯೋದಲ್ಲಿ ಬರಿ ಬೆನ್ನನ್ನು ಲೋಕಾರ್ಪಣೆ ಮಾಡಿ ಛಾಯಾಗ್ರಾಹಕರ ಕೆಮರಾ ಮುಂದೆ ಅರಳಿಕೊಳ್ಳುತ್ತಿದ್ದ ಸಂಜನಾಳ ನಿಜವಾದ ಹೆಸರು ಅರ್ಚನಾ. ಆಕೆಯ ಅನುಮತಿಯೇ ಇಲ್ಲದೆ ಆಟೋಗ್ರಾಫ್ ಫ್ಲೀಸ್ ಚಿತ್ರದ ನಿರ್ಮಾಪಕರು ಅಕೆಯ ಹೆಸರನ್ನು ಮಂದಿರಾ ಅಂತ ಬದಲಾಯಿಸಿದ್ದರಂತೆ. ಅದನ್ನು ನಿರಾಕರಿಸಿ ಅರ್ಚನಾ ನಾನಿನ್ನು ಮುಂದೆ ಸಂಜನಾ ಎಂಬ ನಾಮಧ್ಯೇಯದಿಂದಲೇ ಭೂಲೋಕದಲ್ಲಿ ಪ್ರಸಿದ್ಧಿ ಪಡೆದು ಭಕ್ತರ ಇಷ್ಟಾರ್ಥಗಳನ್ನನು ನೆರವೇರಿಸಲು ಸಿರ್ಧರಿಸಿದ್ದೇನೆ ಎಂದು ಘೋಷಿಸಿದಳು. ಜನ ನೋಡುವ ಹುಡುಗಿ ಸಂಜನಾ ಅನ್ನುವುದು ರಸಿಕ ಸಮಾಸ.
ಸಂಜನಾ ಸಾಕಷ್ಟು ಜಾಹೀರಾತುಗಳಲ್ಲಿ ನಟಿಸಿದ್ದಾಳೆ. ಕಾಮತ್ ಹೋಟಿಲಿನ ಮಾಣಿಯ ಪರಿಣತಿಯಲ್ಲಿ ಆ ಜಾಹೀರಾತುಗಳನ್ನು ಪಟಪಟನೆ ಒಪ್ಪಿಸುತ್ತಾಳೆ. ತನಗೆ ಪ್ರಚಾರ ಬೇಕಾಗಿಲ್ಲ ಅನ್ನುವುದೂ, ತಾನೀಗಾಗಲೇ ಜಗತ್ಪ್ರಸಿದ್ಧೆಯಾಗಿದ್ದೇನೆ ಅನ್ನುವುದೂ ಆಕೆಗೆ ಗೋತ್ತಿದೆ. ಕನ್ನಡದಲ್ಲಿ ಕೊಂಚ ಒಪ್ಪುವುದಿಲ್ಲ. ಎಲ್ಲಾ ಪ್ರಶ್ನೆಗಳೂ ಆಕೆಯ ಹೊಟ್ಟೆ ಮತ್ತು ಬಟ್ಟೆಗೆ ಸಂಬಂಧಿಸಿದೇ ಆಗಿರುತ್ತವೆ ಅಂತ ನಂಬಿಕೊಂಡವಳ ಹಾಗೆ ಸಂಜನಾ ಪ್ರಶ್ನೆ ಕೇಳುವ ಮೊದಲೆ ಉತ್ತರಿಸುತ್ತಾಳೆ ಕೂಡ.
- ಅದರಲ್ಲಿ ಏನಿದೇ ತಪ್ಪು. ಯಾರು ಮಾಡದ್ದೇನೂ ನಾನು ಮಾಡ್ತಿಲ್ಲವಲ್ಲ. ಕನ್ನಡದಲ್ಲಿ ಬಂದ ಹಳೇ ನಟಿಯರನ್ನು ಬಿಟ್ಟುಬಿಡಿ. ಇತ್ತೀಚೆಗೆ ಬಂದವರಲ್ಲಿ ಯಾರು ಮೈ ತೂರಿಸಿಲ್ಲ ಹೇಳಿನೋಡೋಣ. ಅದು ಆ ವೃತ್ತಿಯ ಅವಿಭಾಜ್ಯ ಅಂಗ. ಯಾರೂ ಅದನ್ನ ನಿರಾಕರಿಸೋದಕ್ಕೆ ಆಗೋಲ್ಲ. ನಾನು ಅದೆಲ್ಲ ಆಗೋಲ್ಲ ಅಂದರೆ ಉದ್ಯಮ ನಮ್ಮನ್ನು ಹೊರಗೆ ಇಡುತ್ತೆ. ಮೈತುಂಬಾ ಬಟ್ಟೆ ತೊಟ್ಟುಕೊಂಡು ಗೌರಮ್ಮನ ತರ ಇರ್ತೀನಿ ಅಂದ್ರೆ ಯಾರು ತಿರುಗಿ ನೋಡೋಲ್ಲ.
- ಅಷ್ಟಕ್ಕೂ ನಾನು ಮಲ್ಲಿಕಾ ಶೆರಾವತ್ ಬಿಚ್ಚಿದಷ್ಟು ಬಿಚ್ತಾ ಇಲ್ಲ. ಯಾಕೆಂದರೆ ಇಲ್ಲಿ ಅದಕ್ಕೆಲ್ಲ ಅವಕಾಶ ಇಲ್ಲ. ಅಲ್ಲಿಯ ಸೆನ್ನಾರ್ ಮಂಡಳಿ ಬೆರೆ. ಇಲ್ಲಿಯ ಸೆನ್ನಾರ್ ಮಂಡಳಿ ಬೇರೆ. ತೆಲುಗಿನ ಸೆನ್ನಾರ್ ಮಂಡಳಿ ಬೇರೆ. ಒಂದೊಂದು ಕಡೆ ಒಂದೊಂದು ರೂಲ್ಸ್ ಇರುತ್ತೆ.
- ಅಷ್ಟಕ್ಕೂ ಸಿನಿಮಾ ಮಾಡಿ ಗೊತ್ತಲ್ಲದವರೇನಲ್ಲ. ಅವರು ಚಿತ್ರದ ಗಣ್ಯ ನಿರ್ಮಾಪಕರು. ಅವರು ಎಂಥಾ ಸಿನಿಮಾ ಮಾಡ್ತಾರೆ ಅಂತ ನಂಗೆ ಗೊತ್ತಿದೆ. ಎಷ್ಟು ಕೋಟಿ ಸುರೀತಿದಾರೆ ಅಂತ ಗೊತ್ತದೆ. ಯಾರೋ ಹೆಸರೆ ಇಲ್ಲದ ಹೊಸ ನಿರ್ಮಾಪಕ ಸಿನಿಮಾ ಮಾಡಿದರೆ, ಅದನ್ನು ಬ್ಲೂ ಪಿಲಂ ಥರ ಮಾಡ್ತಾರೆ ಅಂತ ಭಯ ಇದ್ದರೆ, ಅದು ರಿಲೀಸ್ ಅಗುತ್ತೋ ಇಲ್ವೋ ಅನ್ನೋ ಹೆದರಿಕೆ ಇದ್ದರೆ ನಾನು ಹೆದರಬೇಕು. ಅದರೆ ಈ ಸಿನಿಮಾ ರಿಲೀಸ್ ಅಗುತ್ತೆ. ನನಗೆ ಒಳ್ಳೆ ಹೆಸರು ತಂದುಕೊಡುತ್ತೆ ಅಂದ ಮೇಲೆ ನಾನೇಕೆ ಭಯಬೀಳಬೇಕು.
- ಈ ಜಗತ್ತು ನಡೆಯೋದೆ ಹೀಗೆ. ಎಲ್ಲರಿಗೂ ಪ್ರೊಫೆಶನಲಿಸಮ್ ಬೇಕು. ಅವರು ಹೇಳಿದ ಹಾಗೆ ನಚಿಸಬೇಕು. ಪಾತ್ರ ಏನೇನು ಬಯಸುತ್ತೋ ಅದನ್ನ ಕೊಡಬೇಕು. ನಾವು ಮಾಡೊಲ್ಲ ಅಂದರೆ ಮನೇಲಿ ಕೊತ್ಕೋಬೇಕು. ಉದ್ಯಮಕ್ಕೆ ಬಂದಿದ್ದೀನಿ, ನನಗಿಷ್ಟ ಅದ ಪಾತ್ರಗಳನ್ನು ಮಾಡ್ತೀನಿ. ಯಾರಿಗೂ ಕೇರ್ ಮಾಡೋಲ್ಲ.
- ಇದೇ ಇಮೇಜು ಬರುತ್ತೆ ಅಂತೀರಾ. ಬರಲಿ ಪರವಾಗಿಲ್ಲ. ಒಳ್ಳೇ ಬ್ಯಾನರಿನ ಚಿತ್ರ ಸಿಕ್ಕರೆ ಎಂಥಾ ಪಾತ್ರವಾದರೂ ಸೈ ಮಾಡ್ತೀನಿ. ಅದಕ್ಕೆ ಹೆದರೋ ಹುಡುಗಿ ನಾನಲ್ಲ. ನಾನು ಯಾರಿಗೊ ಕೇರ್ ಮಾಡೂದೂ ಇಲ್ಲ. ಇದು ನನ್ನ ವೃತ್ತಿ. ನನಗೆ ಬೇಕಾದನ್ನ ಆರಿಸಿಕೊಳ್ಳೊ ಹಕ್ಕು, ಸ್ವಾತಂತ್ರ್ಯ ನನಗಿದೆ. ನಮ್ಮಮ್ಮ ನನಗೆ ಬೆಂಬಲ ನೀಡುತ್ತಾರೆ.
- ಇಷ್ಟು ಮಾತುಗಳನ್ನು ಆಡುತ್ತಿದ್ದ ಮಗಳ ಬುದ್ಧಿಮತ್ತೆಯನ್ನು ಮೆಚ್ಚುತಲೆ ಪತ್ರಿಕಾಗೋಷ್ಟಿಯನ್ನನು ಆಕೆ ನಿಭಾಯಿದ ಪರಿಗೆ ಬೆರಗಾಗುತ್ತಾ ಆಕೆಯ ತಾಯಿಯು ಕುಳಿತಿದ್ದರು. ಪ್ರತಿಯೊಂದು ಉತ್ತರಕ್ಕು ಅವರು ತಲೆಯಾಡಿಸುತ್ತಾ ತಮ್ಮ ಸಮ್ಮತಿ ಸೂಚಿಸುತ್ತಿದ್ದರು.
- ಮಾತು ಮುಗಿಸಿ ಹೊರಗೆ ಬಂದ ನಂತರ ಆಕೆ ಅಭಿನಯದ ಬಗ್ಗೆ ಏನೂ ಹೇಳೇ ಇಲ್ಲವಲ್ಲ ಅನ್ನುವುದು ಹೊಳೆಯಿತು