ಬಿಗ್ ಬಾಸ್ ಮನೆಗೆ ಹೋಗೋರು ಯಾರು..? ಇದೊಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಯಂಕರವಾಗಿ ಚರ್ಚೆಯಾಗುತ್ತಲೇ ಇತ್ತು. ಈಗ ಬಿಗ್ ಬಾಸ್ ಶುರುವಾಗಿದೆ. ಸಸ್ಪೆನ್ಸ್‍ಗೆ ತೆರೆ ಬಿದ್ದಿದೆ. 18 ಸ್ಪರ್ಧಿಗಳನ್ನು ದೊಡ್ಮನೆಗೆ ಕರೆಸಿಕೊಂಡಿದ್ದಾರೆ ಕಿಚ್ಚ ಸುದೀಪ್. ಆ 17 ಸ್ಪರ್ಧಿಗಳ ಸ್ಪೆಷಾಲಿಟಿ
ಏನು.. ಇಲ್ಲಿದೆ ನೋಡಿ ಡೀಟೈಲ್ಸ್.
1. ಕುರಿ ಪ್ರತಾಪ್ : ಕಿರುತೆರೆ ಮತ್ತು ಸಿನಿಮಾ. ಎರಡರಲ್ಲೂ ಗುರುತಿಸಿಕೊಂಡಿರುವ ಕಾಮಿಡಿ ನಟ. ಕಿರುತೆರೆಯ ಮಜಾ ಟಾಕೀಸ್, ಕುರಿ ಪ್ರತಾಪ್‍ಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು
2. ಚಂದ್ರಿಕಾ : ಅಗ್ನಿಸಾಕ್ಷಿ ಧಾರಾವಾಹಿಯ ವಿಲನ್ ಚಂದ್ರಿಕಾ ಪಾತ್ರದ ಖ್ಯಾತಿ.
3. ರವಿ ಬೆಳಗೆರೆ : ಪತ್ರಕರ್ತ, ಕಾದಂಬರಿಕಾರ, ಕಿರುತೆರೆ, ರೇಡಿಯೋ, ಸಿನಿಮಾ ಎಲ್ಲೆಡೆಯಲ್ಲೂ ಗುರುತಿಸಿಕೊಂಡಿರುವ ಸ್ಟಾರ್. ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಇತ್ತೀಚೆಗೆ ಯೂ ಟ್ಯೂಬ್‍ನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾರೆ ಹಾಯ್ ಬೆಂಗಳೂರ್ ರವಿ ಬೆಳಗೆರೆ
4. ಚಂದನ : ರಾಜಾ ರಾಣಿ ಧಾರಾವಾಹಿಯ ಚುಕ್ಕಿ ಪಾತ್ರದ ಖ್ಯಾತಿ
5. ವಾಸುಕಿ ವೈಭವ್ : ಸಂಗೀತ ನಿರ್ದೇಶಕ. ರಾಮಾ ರಾಮಾ ರೇ, ಸರ್ಕಾರಿ ಹಿರಿಯ ಪ್ರಾ.ಪ್ರಾ. ಶಾಲೆ, ಒಂದಲ್ಲ ಎರಡಲ್ಲ ಚಿತ್ರಗಳ ಖ್ಯಾತಿ
6. ದೀಪಿಕಾ ದಾಸ್ : ನಾಗಿಣಿ ಧಾರಾವಾಹಿಯ ನಾಗಕನ್ಯೆ ಖ್ಯಾತಿ
7. ಜೈ ಜಗದೀಶ್ : ಸಿನಿಮಾ ನಟ, ನಿರ್ಮಾಪಕ, ನಿರ್ದೇಶಕ
8. ಗುರುಲಿಂಗ ಸ್ವಾಮೀಜಿ : ಹಾವೇರಿಯ ಅಗಡಿ ಗ್ರಾಮದ ಅಕ್ಕಿ ಮಠದ ಸ್ವಾಮೀಜಿ. ಶೋನಲ್ಲಿ ಬರುವ ಸಂಪೂರ್ಣ ಹಣವನ್ನು ನೆರೆ ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿದ್ದಾರೆ
9. ಭೂಮಿ ಶೆಟ್ಟಿ : ಕಿನ್ನರಿ ಧಾರಾವಾಹಿಯ ಚುಕ್ಕಿ ಪಾತ್ರಧಾರಿ. ಕುಂದಾಪುರದವರು
10. ಕಿಶನ್ : ಸ್ಟೇಜ್ ಶೋಗಳಲ್ಲಿ ಡ್ಯಾನ್ಸರ್. ಚಿಕ್ಕಮಗಳೂರಿನವರು.
11. ದುನಿಯಾ ರಶ್ಮಿ : ದುನಿಯಾ ಚಿತ್ರದಿಂದಲೇ ಕನ್ನಡಿಗರಿಗೆ ಪರಿಚಿತರಾದ ನಾಯಕಿ.
12. ಚಂದನ್ : ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ನಾಯಕ. ಕಿರಿಕ್ ಪಾರ್ಟಿ ಮೂಲಕ ಕನ್ನಡಿಗರಿಗೆ ಪರಿಚಯವಾದ ಕಲಾವಿದ
13. ಸುಜಾತ : ರಾಧಾ ರಮಣ ಧಾರಾವಾಹಿಯಲ್ಲಿ ವಿಲನ್ ಪಾತ್ರ ಸಿತಾರಾ ಖ್ಯಾತಿ
14. ರಾಜು ತಾಳಿಕೋಟೆ : ಉ. ಕರ್ನಾಟಕದ ಖ್ಯಾತ ರಂಗಭೂಮಿ ಕಲಾವಿದ, ಸಿನಿಮಾ ನಟ.
15. ಚೈತ್ರಾ ವಾಸುದೇವನ್ : ಕಿರುತೆರೆ ನಿರೂಪಕಿ
16. ಚೈತ್ರಾ ಕೊಟ್ಟೂರ್ : ನಟಿ, ಸೂಜಿದಾರ ಚಿತ್ರದಲ್ಲಿ 2ನೇ ನಾಯಕಿಯಾಗಿ ಗಮನ ಸೆಳೆದಿದ್ದರು. ರಂಗಭೂಮಿ ಕಲಾವಿದೆ
17. ಶೈನ್ ಶೆಟ್ಟಿ : ಕಿರುತೆರೆ ಮತ್ತು ಸಿನಿಮಾ ನಟ
18. ಹರೀಶ್ ರಾಜ್ : ಲಿಮ್ಕಾ ದಾಖಲೆ ಸೃಷ್ಟಿಸಿರುವ ಕನ್ನಡ ನಟ.