2 ಚಿತ್ರದ ದೃಶ್ಯವೊಂದರಲ್ಲಿ ಸಂಜನಾ ಬೆತ್ತಲಾಗಿದ್ದಾರೆ. ಚಿತ್ರದಲ್ಲಿ ಇಲ್ಲದ ಆ ಬೆತ್ತಲೆ ದೃಶ್ಯ ಲೀಕ್ ಆಗಿ ವೈರಲ್ ಆದ ಮೇಲೆ ನಟಿ ಸಂಜನಾ ಇನ್ನೊಂದು ಸ್ಪಷ್ಟನೆ ಕೊಟ್ಟಿದ್ದಾರೆ. ಚಿತ್ರದ ಇಬ್ಬರು ನಾಯಕಿಯರಲ್ಲಿ ಒಬ್ಬರಾಗಿರುವ ಸಂಜನಾ, ಆ ದೃಶ್ಯದಲ್ಲಿ ತಾನು ನಟಿಸಿರುವುದು ನಿಜ. ಚಿತ್ರಕ್ಕೆ ಅದು ಅಗತ್ಯವಾಗಿತ್ತು. ನಟಿಸಿದ್ದೇನೆ ಎಂದಿದ್ದಾರೆ. ಚಿತ್ರದ ಆ ದೃಶ್ಯದಲ್ಲಿ ಯಾವುದೇ ಗ್ರಾಫಿಕ್ಸ್ ಅಥವಾ ಬಾಡಿ ಡಬಲ್(ಡ್ಯೂಪ್) ಇಲ್ಲ ಎಂದು ಕೂಡಾ ಸ್ಪಷ್ಟನೆ ಕೊಟ್ಟಿದ್ದಾರೆ.
ಚಿತ್ರದ ಇನ್ನೊಬ್ಬ ನಾಯಕಿ ಪೂಜಾ ಗಾಂಧಿ ಕೂಡಾ ಈ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ. ಕಲಾವಿದರ ಒಪ್ಪಿಗೆಯಿಲ್ಲದೆ ಇಂತಹ ದೃಶ್ಯದ ಚಿತ್ರೀಕರಣ ಸಾಧ್ಯವೇ ಇಲ್ಲ. ಆದರೆ, ಬೆತ್ತಲೆ ದೃಶ್ಯದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎನ್ನುವುದು ಪೂಜಾ ಗಾಂಧಿ ಹೇಳಿಕೆ.
ಚಿತ್ರದ ಇನ್ನೊಬ್ಬ ನಟ ಡ್ಯಾನಿ ಕೂಡಾ ದೃಶ್ಯದಲ್ಲಿರುವುದು ಸಂಜನಾ. ಆದರೆ, ಆ ದೃಶ್ಯದ ಚಿತ್ರೀಕರಣ ವೇಳೆ ನಾವು ಇರಲಿಲ್ಲ. ನಮ್ಮ ದೃಶ್ಯಗಳನ್ನು ಪ್ರತ್ಯೇಕವಾಗಿ ಶೂಟ್ ಮಾಡಿ, ನಂತರ ಎಡಿಟಿಂಗ್ನಲ್ಲಿ ಸೇರಿಸಲಾಗಿದೆ ಎಂದಿದ್ದಾರೆ. ವೈಯಕ್ತಿಕವಾಗಿ ಹೇಳುವುದಾದರೆ ನನಗೆ ಅಂತಹ ದೃಶ್ಯದ ಚಿತ್ರೀಕರಣ ಅಗತ್ಯವೇ ಇರಲಿಲ್ಲ ಎಂದು ಕೂಡಾ ಹೇಳಿದ್ದಾರೆ.
ಮಹಿಳಾ ಆಯೋಗದ ಅಧ್ಯಕ್ಷರಾಗಿರುವ ನಾಗಲಕ್ಷ್ಮಿ ಬಾಯಿ ಕೂಡಾ ಚಿತ್ರತಂಡದ ವಿರುದ್ಧ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು ಚಿತ್ರದಲ್ಲಿ ಇಲ್ಲದೇ ಇರುವ 2 ಚಿತ್ರದ ಬೆತ್ತಲೆ ವಿಡಿಯೋ ಲೀಕ್ ಆಗಿದ್ದು ಎಲ್ಲಿ..? ಹೇಗೆ..? ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
Related Articles :-
ಬೆತ್ತಲಾಗಿದ್ದು ಬೆನ್ನು ಮಾತ್ರ..ಉಳಿದಂತೆ... ಬೆತ್ತಲೆ ವಿಡಿಯೋ ಸುದ್ದಿಗೆ ಸಂಜನಾ ಕೊಟ್ಟ ಉತ್ತರ
2ನಲ್ಲಿ ಬೆತ್ತಲಾದರಾ ನಟಿ ಸಂಜನಾ..? ಲೀಕ್ ಆಗಿದೆ ವಿಡಿಯೋ..!