` yash, - chitraloka.com | Kannada Movie News, Reviews | Image

yash,

  • ಸಿದ್ಧಗಂಗಾ ಮಠದಲ್ಲಿ ಯಶ್

    yash at siddaganga mutt

    ರಾಕಿಂಗ್ ಸ್ಟಾರ್ ಯಶ್, ಇತ್ತೀಚೆಗೆ ದಿಢೀರನೆ ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ಕೊಟ್ಟು ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದರು. ತುಮಕೂರಿನ ಕಾಲೇಜ್‍ವೊಂದರ ಕಾರ್ಯಕ್ರಮಕ್ಕೆ ಹೋಗಿದ್ದ ಯಶ್, ಮಾರ್ಗಮಧ್ಯದಲ್ಲಿಯೇ ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

    yash_siddaganga_mutt1.jpgತ್ರಿವಿಧ ದಾಸೋಹಿ ಶ್ರೀಗಳು ಅನಾರೋಗ್ಯದಿಂದ ಚೇತರಿಸಿಕೊಂಡಿದ್ದು, ಯಶ್ ಅವರಿಗೆ ಹಾರ ಹಾಕಿ ಆಶೀರ್ವದಿಸಿದ್ದಾರೆ. ಸಿದ್ಧಗಂಗಾ ಮಠದ ಕೈಂಕರ್ಯದ ಬಗ್ಗೆ ಯಶ್ ಹಲವಾರು ಬಾರಿ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಸೇವೆ ಪ್ರತಿಯೊಬ್ಬರಿಗೂ ಸ್ಪೂರ್ತಿ ಎನ್ನುವ ಯಶ್, ಶ್ರೀಗಳನ್ನು ಭೇಟಿಯಾಗಿರುವುದು ಅಭಿಮಾನಿಗಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.

    ಯಶ್, ಮಠಕ್ಕೆ ಭೇಟಿ ನೀಡುವುದು ಇದೇ ಮೊದಲೇನೂ ಅಲ್ಲ. ಆಗಾಗ್ಗೆ ಮಠಕ್ಕೆ ಭೇಟಿ ಕೊಟ್ಟು, ಸ್ವಾಮೀಜಿಗಳ ಆಶೀರ್ವಾದ ಪಡೆಯುವುದು ಯಶ್ ಅವರಿಗೆ ಮಾಮೂಲು.

  • ಸಿಂಧನೂರಿನ ಕಾಂಗ್ರೆಸ್ ಪಾದಯಾತ್ರೆಗೆ ಯಶ್ ಹೋಗುತ್ತಿಲ್ಲ - Exclusive

    yash, sindanoor function

    ಸಿಂಧನೂರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್​ಗಳಿಂದ ಸಾಲ ಮನ್ನಾ ಮಾಡಿಸುವಂತೆ ಕಾಂಗ್ರೆಸ್ ಜುಲೈ 31ರಂದು ಬೃಹತ್ ಱಲಿ ಆಯೋಜಿಸಿದೆ. ರಾಯುಚೂರು ಜಿಲ್ಲಾ ಯುವ ಕಾಂಗ್ರೆಸ್ ಆಯೋಜಿಸಿರುವ ಱಲಿಯಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್​ನ ಅತಿರಥ ನಾಯಕರೆಲ್ಲ ಭಾಗವಹಿಸುತ್ತಿದ್ದಾರೆ. 10 ಕಿ.ಮೀ. ಪಾದಯಾತ್ರೆಯನ್ನೂ ನಡೆಸಲಿದ್ದಾರೆ. ಆದರೆ, ವಿಷಯ ಅದಲ್ಲ. ಆ ಱಲಿಯಲ್ಲಿ ಚಿತ್ರನಟ ಯಶ್ ಕೂಡಾ ಭಾಗವಹಿಸುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಬಾದರ್ಲಿ ಸುದ್ದಿಗೋಷ್ಟಿಯಲ್ಲಿ ಹೇಳಿದ್ದರು. ಅಷ್ಟೇ ಅಲ್ಲ, ಆ ದಿನ ಕಾಂಗ್ರೆಸ್​ನ ಱಲಿಯಲ್ಲಿ ಭಾಗವಹಿಸಲಿರುವ ಯಶ್ ಅವರಿಗೆ ಸ್ವಾಗತ ಕೋರುವ ಪೋಸ್ಟರ್​ಗಳು, ಬ್ಯಾನರ್​ಗಳು ಅಲ್ಲಿ ರಾರಾಜಿಸುತ್ತಿವೆ. 

    ಇದು ನಿಜಾನಾ..? 

    ಯಶ್ ಆ ಱಲಿಗೆ ಹೋಗುತ್ತಿದ್ದಾರಾ ಎಂದು ಯಶ್ ಅವರನ್ನೇ ಸಂಪರ್ಕಿಸಲು ಚಿತ್ರಲೋಕ ಡಾಟ್ ಕಾಮ್ ಪ್ರಯತ್ನಿಸಿತು. ಆದರೆ, ಯಶ್ ಕೆಜಿಎಫ್​ ಶೂಟಿಂಗ್​ನಲ್ಲಿ ಬ್ಯುಸಿಯಿದ್ದ ಕಾರಣ, ಫೋನ್ ಸ್ವೀಕರಿಸಲಿಲ್ಲ. ನಂತರ ಚಿತ್ರಲೋಕ ಡಾಟ್ ಕಾಮ್​ಗೆ ಸಿಕ್ಕ ಸುದ್ದಿಮೂಲಗಳ ಪ್ರಕಾರ, ಸಿಂಧನೂರಿನಲ್ಲಿ ಅಂಥಾದ್ದೊಂದು ಕಾರ್ಯಕ್ರಮ ಇದೆ ಎನ್ನುವ ವಿಷಯವೇ ಯಶ್​ಗೆ ಗೊತ್ತಿಲ್ಲ. ಯಶ್​ ಅವರಿಗೂ ಈ ಪೋಸ್ಟರ್​ಗಳು, ಹೇಳಿಕೆಗಳು ಅಚ್ಚರಿ ತಂದಿವೆ. 

    ಕಮಿಟ್​ಮೆಂಟ್ ವಿಷಯಕ್ಕೆ ಬಂದರೆ ಯಶ್ ಚಿತ್ರವೊಂದರ ಶೂಟಿಂಗ್​ನಲ್ಲಿ ಅದು ಎಂತಹ ಕಾರ್ಯಕ್ರಮವೇ ಇದ್ದರೂ ಹೋಗೋದಿಲ್ಲ. ಶೂಟಿಂಗ್​ನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡುವುದಿಲ್ಲ. ಅದರಲ್ಲೂ ಕೆಜಿಎಫ್ ಚಿತ್ರದಲ್ಲಿ ಯಶ್ ಎಷ್ಟು ಬ್ಯುಸಿಯಾಗಿದ್ದಾರೆಂದರೆ, ಆ ಸಿನಿಮಾ ಹೊರತುಪಡಿಸಿ ಮಿಕ್ಕ ಯಾವುದರಲ್ಲೂ ಭಾಗವಹಿಸುತ್ತಿಲ್ಲ. ಕೆಜಿಎಫ್ ಎಂದೇ ಅಲ್ಲ, ಶೂಟಿಂಗ್ ಇದ್ದಾಗ ವೈಯಕ್ತಿಕ ಕೆಲಸಗಳನ್ನೂ ದೂರ ಇಡುವ ನಟ ಯಶ್. 

    ಹೀಗಾಗಿ ಯಶ್ ಆ ದಿನದ ಕಾಂಗ್ರೆಸ್ ಱಲಿಗೆ ಹೋಗುತ್ತಿಲ್ಲ ಎಂದು ಚಿತ್ರಲೋಕ ಡಾಟ್​ ಕಾಮ್ ಮೂಲಗಳು ಸ್ಪಷ್ಟಪಡಿಸಿವೆ. ಆದರೆ, ಯಶ್ ಅವರಿಗೇ ಗೊತ್ತಿಲ್ಲದೆ ಅವರ ಹೆಸರಿನಲ್ಲಿ ಪೋಸ್ಟರ್, ಬ್ಯಾನರ್​ಗಳು ಹರಿದಾಡುತ್ತಿರುವುದೇಕೆ ಎನ್ನುವುದೇ ನಿಗೂಢ.

  • ಸುದೀಪ್ ವಿಡಿಯೋ.. ಕೇಳಿದ್ದೊಂದು.. ಹೇಳಿದ್ದೊಂದು.. ತೋರಿಸಿದ್ದೇ ಇನ್ನೊಂದು..

    ಸುದೀಪ್ ವಿಡಿಯೋ.. ಕೇಳಿದ್ದೊಂದು.. ಹೇಳಿದ್ದೊಂದು.. ತೋರಿಸಿದ್ದೇ ಇನ್ನೊಂದು..

    ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹರಿದಾಡುತ್ತಿದೆ. ಕೆಜಿಎಫ್ ಬಗ್ಗೆ ನಿಮ್ಮ ಪ್ರತಿಕ್ರಿಯೆ ಹೇಳಿ ಎಂದು ವರದಿಗಾರನೊಬ್ಬ ಸುದೀಪ್ ಅವರಲ್ಲಿ ಕೇಳುತ್ತಾನೆ. ಆಗ ಸುದೀಪ್ ನಾನು ಕೆಜಿಎಫ್‍ನಲ್ಲಿ ಇಲ್ಲ ಎನ್ನುತ್ತಾರೆ. ಅಷ್ಟೇ ವಿಡಿಯೋ..  ವೈರಲ್ ಆಗಿ ಹೋಯ್ತು.

    ಏನಾಗುತ್ತಿದೆ ಎಂದು ಗೊತ್ತಾಗೋದರ ಒಳಗೆ ಒಂದಷ್ಟು ಯಶ್ ಫ್ಯಾನ್ಸ್ ಸುದೀಪ್ ಮೇಲೆ ಮುಗಿಬಿದ್ದರು. ಕನ್ನಡದ ಅತ್ಯಂತ ಯಶಸ್ವಿ ಚಿತ್ರದ ಬಗ್ಗೆ ಕನ್ನಡ ನಟನಾಗಿ ಒಂದೊಳ್ಳೆ ಮಾತು ಹೇಳೋಕೆ ಆಗಲ್ವಾ ಎಂದು ರೊಚ್ಚಿಗೆದ್ದರು. ಅತ್ತ ಸುದೀಪ್ ಫ್ಯಾನ್ಸ್ ಸುಮ್ಮನೆ ಕೂಡಲಿಲ್ಲ. ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗುವ ವೇಳೆ ಸುದೀಪ್ ಮಾಡಿದ್ದ ಟ್ವೀಟ್‍ನ್ನು ಹುಡುಕಿ ತೆಗೆದು ತೋರಿಸಿದರು. 2018, ನವೆಂಬರ್ 9ರಂದು ಕೆಜಿಎಫ್ ಚಾಪ್ಟರ್ 1ಗೆ ಶುಭ ಕೋರಿ ಮಾಡಿದ್ದ ಟ್ವೀಟ್. ಆ ಟ್ವೀಟ್‍ನಲ್ಲಿ ಕೆಜಿಎಫ್‍ನ್ನು ಜ್ವಾಲಾಮುಖಿಗೆ ಹೋಲಿಸಿದ್ದ ಸುದೀಪ್, ಯಶ್, ಪ್ರಶಾಂತ್ ನೀಲ್ ಹಾಗೂ ವಿಜಯ್ ಕಿರಗಂದೂರು ಅವರನ್ನು ಅಭಿನಂದಿಸಿದ್ದರು. ಆದರೆ ಈಗ ಆಗಿರೋದೇ ಬೇರೆ.

    ಅಂದಹಾಗೆ ಈ ವಿಡಿಯೋ ಇತ್ತೀಚಿನದ್ದಲ್ಲ. ಇದು ಸುಮಾರು 3 ವರ್ಷಗಳ ಹಿಂದಿನ ವಿಡಿಯೋ. ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸುದೀಪ್ ನೀಡಿದ್ದ ಬೈಟ್ ಅದು. ಆಗ ಅವರಿಗೆ ಕೇಳಿದ್ದ ಪ್ರಶ್ನೆ ಕೆಜಿಎಫ್‍ನಲ್ಲಿ ನಿಮ್ಮ ರೋಲ್ ಏನು ಅನ್ನೋದು. ಅದು ಮುಂದುವರಿದು ಕೆಜಿಎಫ್ ಬಗ್ಗೆ ಏನು ಹೇಳ್ತೀರಿ ಅನ್ನೋ ಪ್ರಶ್ನೆಗೆ ಬಂದಿತ್ತು. ಈಗ ವೈರಲ್ ಆಗಿರೋ ವಿಡಿಯೋದಲ್ಲಿ ರೋಲ್ ಬಗ್ಗೆ ಕೇಳಿದ್ದ ಪ್ರಶ್ನೆಯನ್ನು ಎಡಿಟ್ ಮಾಡಲಾಗಿದೆಯಂತೆ. ಚಿತ್ರದಲ್ಲಿ ನಟಿಸದೇ ಇರುವವರು ರೋಲ್ ಬಗ್ಗೆ ಕೇಳಿದಾಗ ಸಹಜವಾಗಿ ಹೇಳುವ ಉತ್ತರವನ್ನೇ ಸುದೀಪ್ ಹೇಳಿದ್ದಾರೆ. ವಿವಾದ ಮಾಡಿದ್ದು ಯಾರು? ತಂದಿಟ್ಟು ತಮಾಷೆ ನೋಡಿದ್ದು ಯಾರು ಅನ್ನೋದು ಗೊತ್ತಾಗಿಲ್ಲ.

    ಈಗ ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ನೋಡುತ್ತಿದೆ. ಇಂತ ಹೊತ್ತಿನಲ್ಲಿ ವಿವಾದ ಬೇಡ. ಸುದೀಪ್ ಅವರು ಅದೆಷ್ಟು ಹೊಸಬರಿಗೆ ಪ್ರೋತ್ಸಾಹ ನೀಡಿದ್ದಾರೆ.. ನೀಡುತ್ತಿದ್ದಾರೆ.. ಅನ್ನೋದು ಚಿತ್ರರಂಗಕ್ಕೆ ಗೊತ್ತಿದೆ. ಸುಮ್ಮನೆ ಇಂತಹ ವಿವಾದವನ್ನು ಸೃಷ್ಟಿಸೋದು ಬೇಡ ಎಂದಿದ್ದಾರೆ ಸುದೀಪ್ ಆಪ್ತ ಸ್ನೇಹಿತ ಜಾಕ್ ಮಂಜು. ಸುದೀಪ್ ಅವರ ಮುಂಬರುವ ಚಿತ್ರ ವಿಕ್ರಾಂತ್ ರೋಣ ಚಿತ್ರದ ನಿರ್ಮಾಪಕರೂ ಅವರೇ.

  • ಸುದೀಪ್, ದರ್ಶನ್, ಯಶ್ ಪ್ರಚಾರ.. ಗೆದ್ದವರೆಷ್ಟು ಜನ..?

    results of stars campaigned constants in election

    ಈ ಬಾರಿಯ ಚುನಾವಣೆಯಲ್ಲಿ ಚಿತ್ರರಂಗದ ಹಲವು ತಾರೆಯರು ಪ್ರಚಾರ ಮಾಡಿದ್ದರು. ಪಕ್ಷಾತೀತವಾಗಿ ಪ್ರಚಾರ ಮಾಡಿದ್ದವರಲ್ಲಿ ಗೆದ್ದವರೆಷ್ಟು ಜನ.. ಸೋತವರೆಷ್ಟು ಜನ ಎಂದು ನೋಡಿದರೆ, ಫಲಿತಾಂಶ ಸ್ವಾರಸ್ಯಕರವಾಗಿದೆ.

    ಸುದೀಪ್ ಪ್ರಚಾರ ಮಾಡಿದವರಲ್ಲಿ ಇಬ್ಬರಿಗೆ ಇಬ್ಬರೂ ಗೆದ್ದಿದ್ದಾರೆ. ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಹಾಗೂ ಸುರಪುರದಲ್ಲಿ ರಾಜು ಗೌಡ ಪರ ಪ್ರಚಾರ ಮಾಡಿದ್ದರು. ಇಬ್ಬರೂ ಗೆದ್ದಿದ್ದಾರೆ.

    ದರ್ಶನ್ ಪ್ರಚಾರ ಮಾಡಿದವರಲ್ಲಿ ಸಿಎಂ ಸಿದ್ದರಾಮಯ್ಯ ಸೋತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದರ್ಶನ್ ಪ್ರಚಾರ ಮಾಡಿದ್ದರು.

    ಯಶ್ ಪ್ರಚಾರ ಮಾಡಿದವರಲ್ಲಿ 50:50 ಫಲಿತಾಂಶ ಬಂದಿದೆ. ಯಶ್ ಪ್ರಚಾರ ಮಾಡಿದ್ದವರಲ್ಲಿ ಬಬಲೇಶ್ವರದ ಎಂ.ಬಿ.ಪಾಟೀಲ್, ಕೃಷ್ಣರಾಜ ಕ್ಷೇತ್ರದ ರಾಮದಾಸ್, ಕೆ.ಆರ್.ನಗರ ಕ್ಷೇತ್ರದ ಸಾ.ರಾ. ಮಹೇಶ್, ಬೊಮ್ಮನಹಳ್ಳಿಯಲ್ಲಿ ಸತೀಶ್ ರೆಡ್ಡಿ, ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಗೆದ್ದಿದ್ದಾರೆ.

    ಪ್ರಚಾರದಲ್ಲಿ ಅತಿ ದೊಡ್ಡ ಸೋಲು ಅನುಭವಿಸಿರುವುದು ನಟ ಪ್ರಕಾಶ್ ರೈ. ಹಲವು ತಿಂಗಳ ಕಾಲ ಬಿಜೆಪಿ ವಿರುದ್ಧ ಆಂದೋಲನವನ್ನೇ ನಡೆಸಿದ್ದ ಪ್ರಕಾಶ್ ರೈ ನಿರೀಕ್ಷೆಗೆ ವಿರುದ್ಧವಾಗಿ ಫಲಿತಾಂಶ ಬಂದಿದೆ. ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ.

  • ಸುಮಲತಾ ಪರ ಪ್ರಚಾರ - ಯಶ್, ದರ್ಶನ್‍ಗೆ ಕೆಡುತ್ತಾ ಗ್ರಹಚಾರ..?

    jds mla warns sumalatha supporters

    ಮಂಡ್ಯದಿಂದ ಚುನಾವಣಾ ಅಖಾಡಕ್ಕಿಳಿಯುತ್ತಿರುವ ಸುಮಲತಾ ಪರ ಬಹುತೇಕ ಚಿತ್ರರಂಗದ ಸ್ಟಾರ್ ನಟರು ಒಗ್ಗೂಡುತ್ತಿದ್ದಾರೆ. ಕೆಲವರು ಹೋಗಲಾಗದೇ ಇದ್ದರೂ, ಬೆಂಬಲ ನೀಡುತ್ತಿದ್ದಾರೆ. ಹೀಗಿರುವಾಗಲೇ, ಸುಮಲತಾ ಪರ ಪ್ರಚಾರಕ್ಕೆ ಹೋದವರಿಗೆ ಗ್ರಹಚಾರ ಕೆಡುತ್ತಾ..? ಅಂಥಾದ್ದೊಂದು ಅನುಮಾನ ಮೂಡಿಸಿರುವುದು ಜೆಡಿಎಸ್ ಶಾಸಕ ಕೆ.ಸಿ. ನಾರಾಯಣ ಗೌಡ ಹೇಳಿಕೆ.

    ಸುಮ್ಮನೆ ದೇವೇಗೌಡ, ಕುಮಾರಸ್ವಾಮಿ ಬಗ್ಗೆ ಮಾತನಾಡಬೇಡಿ. ನಿಮ್ಮ ಪಾಡಿಗೆ ನೀವು ಶೂಟಿಂಗ್ ಮಾಡಿಕೊಂಡಿರಿ. ನಿಮಗೂ ರಾಜಕಾರಣಕ್ಕೂ ಸಂಬಂಧ ಇಲ್ಲ. ಗೌರವದಿಂದ ಮನೆಯಲ್ಲಿರಿ. ಇಲ್ಲದೇ ಹೋದರೆ, ನಿಮ್ಮ ಆಸ್ತಿಪಾಸ್ತಿ ತನಿಖೆ ಮಾಡಿಸಬೇಕಾಗಬಹುದು. ಸರ್ಕಾರ ನಮ್ಮದಿದೆ ಎಂದಿದ್ದಾರೆ ನಾರಾಯಣ ಗೌಡ. 

    ಸಿನಿಮಾ ನಟರು ಒಬ್ಬ ವ್ಯಕ್ತಿಯ ಪರ ಪ್ರಚಾರಕ್ಕೆ ಬಂದ್ರೆ ಹುಷಾರ್. ಪರಿಣಾಮ ನೆಟ್ಟಗಿರಲ್ಲ ಎಂದಿದ್ದಾರೆ ನಾರಾಯಣ ಗೌಡ. ಈ ಹಿಂದೆ ಸಚಿವ ಡಿ.ಸಿ.ತಮ್ಮಣ್ಣ, ಎಚ್.ಡಿ.ರೇವಣ್ಣ, ಶಾಸಕ ಕೆ.ಟಿ.ಶ್ರೀಕಂಠೇಗೌಡ ಸುಮಲತಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈಗ ಜೆಡಿಎಸ್ ಶಾಸಕ ಚಿತ್ರರಂಗದವರಿಗೆ ಬೆದರಿಕೆ ಹಾಕುವ ಮಟ್ಟಕ್ಕೆ ಬಂದಿದ್ದಾರೆ.

    ಹಾಗಾದರೆ, ಸುಮಲತಾ ಪರ ಬಹಿರಂಗವಾಗಿ ಬೆಂಬಲ ಘೋಷಿಸಿರುವ ದರ್ಶನ್, ಯಶ್, ರಾಕ್‍ಲೈನ್ ವೆಂಕಟೇಶ್, ದೊಡ್ಡಣ್ಣ, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್ ಹಾಗೂ ಶುಭ ಹಾರೈಸಿರುವ ಕಿಚ್ಚ ಸುದೀಪ್, ಶಿವರಾಜ್‍ಕುಮಾರ್, ಜೋಗಿ ಪ್ರೇಮ್ ಸೇರಿದಂತೆ ಚಿತ್ರರಂಗದ ಬಹುತೇಕರ ಮೇಲೆ ಸರ್ಕಾರ ಕೆಂಗಣ್ಣು ಬೀರುತ್ತಾ..? ನೋಡಬೇಕಷ್ಟೆ.

  • ಸುಮಲತಾಗೆ ಡಬಲ್ ಗಜ ಬಲ - ಮಂಡ್ಯ ಸ್ಟಾರ್ ವಾರ್

    sumalatha gets double power support

    ಮಂಡ್ಯದಲ್ಲೀಗ ಸ್ಟಾರ್ ವಾರ್. ಒಂದು ಕಡೆ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ. ಅವರೂ ಸಿನಿಮಾದವರೇ. ಇನ್ನೊಂದ್ ಕಡೆ ಸುಮಲತಾ ಅಂಬರೀಷ್. ಅವರೂ ಸಿನಿಮಾದವರೇ. ಇಬ್ಬರಿಗೂ ಮಂಡ್ಯ ಬೇಕು. 

    ಅಂಬರೀಷ್ ಪತ್ನಿ ಎಂದೇ ಗುರುತಿಸಿಕೊಂಡಿದ್ದ ಸುಮಲತಾ ಈಗ ಮಂಡ್ಯ ಚುನಾವಣೆ ಯುದ್ಧಕ್ಕಿಳಿದಿದ್ದಾರೆ. ಅವರ ಜೊತೆಗೀಗ ನಿಂತಿರುವುದು ದರ್ಶನ್, ಯಶ್, ರಾಕ್‍ಲೈನ್ ವೆಂಕಟೇಶ್, ದೊಡ್ಡಣ್ಣ, ಜೈ ಜಗದೀಶ್, ವಿಜಯಲಕ್ಷ್ಮಿ ಸಿಂಗ್ ಮೊದಲಾದವರು. ಗಜಕೇಸರಿ ಯಶ್ ಮತ್ತು ಗಜ ದರ್ಶನ್ ಎಡಬಲಗಳಲ್ಲಿ ಕುಳಿತು ಅಮ್ಮನಿಗೆ ಬೆಂಬಲ ಘೋಷಿಸಿದ್ರು.

    ದರ್ಶನ್ ನನ್ನ ದೊಡ್ಡ ಮಗ, ಯಶ್ ನನ್ನ ಮನೆ ಮಗ ಎಂದಿದ್ದರು ಸುಮಲತಾ. ವಿಧೇಯ ಮಕ್ಕಳಂತೆ ಸುಮಲತಾ ಅಕ್ಕಪಕ್ಕ ಕುಳಿತಿದ್ದ ದರ್ಶನ್-ಯಶ್, ತಾಯಿಗೆ ಬೆಂಬಲ ಎಂದು ಹೇಳಿದರು. ನನ್ನ ಇಬ್ಬರು ಅಣ್ಣಂದಿರು ಇವತ್ತು ನಮ್ಮ ಜೊತೆಗಿದ್ದಾರೆ ಎಂದರು ಅಭಿಷೇಕ್ ಅಂಬರೀಷ್.

    ಎಲ್ಲಿಯೂ ನಿಖಿಲ್ ಬಗ್ಗೆ ಕೆಟ್ಟದಾಗಿ ಮಾತನಾಡದ ಸುಮಲತಾಗೆ ಎದುರಾದ ದೊಡ್ಡ ಪ್ರಶ್ನೆ, ಗೆದ್ದರೆ.. ನೀವು ಗೆದ್ದ ಮೇಲೆ ಬಿಜೆಪಿಗೆ ಹೋಗ್ತೀರಾ.. ಕಾಂಗ್ರೆಸ್‍ಗೆ ಹೋಗ್ತೀರಾ ಎಂಬುದು. ಅದನ್ನು ನಾನು ಜನರ ಮುಂದಿಡುತ್ತೇನೆ. ಜನ ಏನ್ ಹೇಳ್ತಾರೋ ಹಾಗೆ ನಡೆದುಕೊಳ್ತೇನೆ ಎಂದರು ಸುಮಲತಾ.

  • ಸುಮಲತಾಗೆ ದರ್ಶನ್ ಮಾಡಿರೋ ಪ್ರಾಮಿಸ್ ಇದು

    sumalatha talks about darshan and yash in mandya

    ದರ್ಶನ್ ನನ್ನ ದೊಡ್ಡ ಮಗ ಇದ್ದಂತೆ ಎನ್ನುತ್ತಿದ್ದರು ಅಂಬರೀಷ್. ದರ್ಶನ್ ಕೂಡಾ ಹಾಗೆಯೇ ಇದ್ದಾರೆ. ಅಭಿಷೇಕ್‍ರನ್ನು ಅಷ್ಟೇ ಪ್ರೀತಿಯಿಂದ ತಮ್ಮ ಎನ್ನುತ್ತಾರೆ. ಅದೇ ಮಾತನ್ನು ಈಗ ಸುಮಲತಾ ಕೂಡಾ ಹೇಳಿದ್ದಾರೆ. 

    ದರ್ಶನ್ ನನ್ನ ದೊಡ್ಡ ಮಗ. ಯಶ್ ಮನೆ ಮಗ ಎಂದಿರೋ ಸುಮಲತಾ ದರ್ಶನ್‍ಗೆ ನೋಡಪ್ಪ, ನಾನು ಅಭಿಷೇಕ್ ಕಡೆಯಿಂದ ಏನೇನೆಲ್ಲ ನಿರೀಕ್ಷೆ ಮಾಡ್ತೀನೋ, ನಿನ್ನಿಂದಲೂ ಅದನ್ನೇ ನಿರೀಕ್ಷೆ ಮಾಡ್ತೀನಿ ಅಂತಾರಂತೆ. ಆಗೆಲ್ಲ ದರ್ಶನ್ ಹೇಳೋದು ಒಂದೇ ಮಾತು. ನೀವು ಅಭಿಷೇಕ್ ಕಡೆಯಿಂದ ಏನೇನು ನೋಡ್ತೀರೋ, ನನ್ನಿಂದ ಅದರ ಎರಡರಷ್ಟು ನಿರೀಕ್ಷೆ ಮಾಡಿ ಅಂತಾನೆ.

    ಮಂಡ್ಯದಲ್ಲಿ ಚುನಾವಣಾ ಅಖಾಡಕ್ಕಿಳಿದಿರುವ ಸುಮಲತಾ, ಸ್ವತಃ ಈ ಮಾತು ಹೇಳಿದ್ದಾರೆ. ಅಲ್ಲಿಗೆ ದರ್ಶನ್ ಮತ್ತು ಯಶ್ ಸುಮಲತಾ ಪರ ಪ್ರಚಾರಕ್ಕೆ ಬರೋದು ಹೆಚ್ಚು ಕಡಿಮೆ ಕನ್‍ಫರ್ಮ್.

    ದರ್ಶನ್ ಅವರಂತೂ ನಾನು ಸುಮಲತಾ ಅವರ ಜೊತೆ ಇರ್ತೇನೆ. ನನಗೆ ಪಕ್ಷ ಬೇಕಿಲ್ಲ. ನನ್ನವರು ಮುಖ್ಯ ಎಂದಿದ್ದಾರೆ.

  • ಸೈಮಾ ಅವಾರ್ಡ್ 2019 : ಇವರೇ ದಿ ಬೆಸ್ಟ್...

    kgf steals show at siima

    ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಮುಕ್ತಾಯವಾಗಿದೆ. ಕತಾರ್‍ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರತಾರೆಯರು ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದ್ದಾರೆ. ಸೈಮಾ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ ನೋಡಿ. ಅತೀ ಹೆಚ್ಚು ಪ್ರಶಸ್ತಿ ಪಡೆದಿರುವುದು ಕೆಜಿಎಫ್. ಅಯೋಗ್ಯ 2ನೇ ಸ್ಥಾನದಲ್ಲಿದೆ.

    ಅತ್ಯುತ್ತಮ ನಾಯಕ ನಟ - ಯಶ್: ಕೆಜಿಎಫ್ ಚಾಪ್ಟರ್ 1

    ಅತ್ಯುತ್ತಮ ನಾಯಕ ನಟಿ - ರಚಿತಾ ರಾಮ್ : ಅಯೋಗ್ಯ

    ಅತ್ಯುತ್ತಮ ನಿರ್ದೇಶಕ - ಪ್ರಶಾಂತ್ ನೀಲ್ : ಕೆಜಿಎಫ್ ಚಾಪ್ಟರ್ 1

    ಅತ್ಯುತ್ತಮ ಹೊಸ ನಿರ್ದೇಶಕ - ಮಹೇಶ್ ಕುಮಾರ್ : ಅಯೋಗ್ಯ

    ಅತ್ಯುತ್ತಮ ಹೊಸ ನಟ - ಡ್ಯಾನಿಷ್ ಸೇಠ್ : ಹಂಬಲ್ ಪೊಲಿಟಿಷಿಯನ್ ನೊಗ್ರಾಜ್

    ಅತ್ಯುತ್ತಮ ಹೊಸ ನಟಿ - ಅನುಪಮಾ ಗೌಡ : ಆ ಕರಾಳ ರಾತ್ರಿ

    ಅತ್ಯುತ್ತಮ ಹಾಸ್ಯ ನಟ - ಪ್ರಕಾಶ್ ತುಮಿನಾಡು : ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ

    ಅತ್ಯುತ್ತಮ ಪೋಷಕ ನಟ - ಅಚ್ಯುತ್ ಕುಮಾರ್ 

    ಅತ್ಯುತ್ತಮ ಪೋಷಕ ನಟಿ - ಅರ್ಚನಾ : ಕೆಜಿಎಫ್ ಚಾಪ್ಟರ್ 1

    ಅತ್ಯುತ್ತಮ ಖಳನಟ - ಧನಂಜಯ್ : ಟಗರು

    ವಿಮರ್ಶಕರ ಪ್ರಶಸ್ತಿ- ಮಾನ್ವಿತಾ ಹರೀಶ್ : ಟಗರು

    ಅತ್ಯುತ್ತಮ ಗೀತ ರಚನೆ - ಚೇತನ್ ಕುಮಾರ್ : ಅಯೋಗ್ಯ (ಏನಮ್ಮಿ.. ಏನಮ್ಮಿ..)

    ಅತ್ಯುತ್ತಮ ಗಾಯಕಿ - ಅನನ್ಯಾ ಭಟ್ : ಟಗರು (ಹೋಲ್ಡನ್ ಹೋಲ್ಡಾನ್..)

    ಅತ್ಯುತ್ತಮ ಛಾಯಾಗ್ರಹಣ - ಭುವನ್ ಗೌಡ : ಕೆಜಿಎಫ್ ಚಾಪ್ಟರ್ 1

    ಅತ್ಯುತ್ತಮ ಸಂಗೀತ ನಿರ್ದೇಶನ - ರವಿ ಬಸ್ರೂರ್ : ಕೆಜಿಎಫ್ ಚಾಪ್ಟರ್ 1

  • ಸ್ಯಾಟಲೈಟ್, ಡಿಜಿಟಲ್ ರೈಟ್ಸ್‍ನಲ್ಲೂ ಕೆಜಿಎಫ್‍ಗೆ ಬಂಪರ್

    kgf records in satellte and digital marketing

    ಕೆಜಿಎಫ್ ದೇಶ, ವಿದೇಶಗಳಲ್ಲಿ ಬಾಕ್ಸಾಫೀಸ್ ಚಿಂದಿ ಉಡಾಯಿಸುತ್ತಿದ್ದರೆ, ಇತ್ತ ಚಿತ್ರದ ಸ್ಯಾಟಲೈಟ್ ಹಾಗೂ ಡಿಜಿಟಲ್ ರೈಟ್ಸ್‍ನಲ್ಲೂ ದಾಖಲೆ ಬರೆದಿದೆ. ಮೂಲಗಳ ಪ್ರಕಾರ, ಅಮೇಜಾನ್ ಪ್ರೈಮ್ ಕೆಜಿಎಫ್ ಇಂಟರ್‍ನೆಟ್ ಅಂದರೆ ಡಿಜಿಟಲ್ ಹಕ್ಕನ್ನು 18 ಕೋಟಿ ರೂ. ಕೊಟ್ಟು ಖರೀದಿಸಿದೆ. ನೆಟ್‍ಫ್ಲಿಕ್ಸ್ ಮತ್ತು ಅಮೇಜಾನ್ ಪ್ರೈಮ್ ನಡುವಣ ಪೈಪೋಟಿಯಲ್ಲಿ ಗೆದ್ದಿರುವುದು ಅಮೇಜಾನ್ ಪ್ರೈಮ್.

    ಇನ್ನು ಚಿತ್ರದ ಕನ್ನಡ ಸ್ಯಾಟಲೈಟ್ ಹಕ್ಕನ್ನು ಕಲರ್ಸ್ ಕನ್ನಡ ಭಾರಿ ಮೊತ್ತಕ್ಕೆ ಖರೀದಿಸಿದ್ದರೆ, ಹಿಂದಿ ಹಕ್ಕನ್ನು ಸೋನಿ ಖರೀದಿಸಿದೆ. ತೆಲುಗು, ತಮಿಳು ಹಾಗೂ ಮಲಯಾಳಂ ರೈಟ್ಸ್‍ಗಳು ಬೇರೆ ಬೇರೆ ಚಾನೆಲ್ ಪಾಲಾಗಿವೆ. 

    ಒಂದು ಲೆಕ್ಕಾಚಾರದ ಪ್ರಕಾರ, ಕೆಜಿಎಫ್‍ಗೆ ಹಾಕಿದ್ದ ಬಂಡವಾಳ, ಕೇವಲ ಸ್ಯಾಟಲೈಟ್, ಡಿಜಿಟಲ್ ಹಕ್ಕುಗಳ ಮಾರಾಟದಿಂದಲೇ ವಾಪಸ್ ಬಂದುಬಿಟ್ಟಿದೆ. ಥಿಯೇಟರ್‍ನಲ್ಲಿ ಬರುತ್ತಿರುವುದೆಲ್ಲವೂ ನಿರ್ಮಾಪಕರಿಗೆ ಬೋನಸ್.

  • ಹಾಲಿವುಡ್ ಪ್ರಮೋಷನ್ನಿಗೂ ಕೆಜಿಎಫ್ ಡೈಲಾಗ್

    ಹಾಲಿವುಡ್ ಪ್ರಮೋಷನ್ನಿಗೂ ಕೆಜಿಎಫ್ ಡೈಲಾಗ್

    ಕೆಜಿಎಫ್ 2ನಿಂದ ಹೊರಬಂದಿರೋದು ಇದುವರೆಗೆ ಒಂದೇ ಒಂದು ಟೀಸರ್. ಅದರಲ್ಲೂ ಒಂದು ಡೈಲಾಗ್ ಇಲ್ಲ. ಇರೋದು ಒಂದೆರಡು ಸ್ಲೋಗನ್ ರೀತಿಯ ಬರಹಗಳಷ್ಟೇ.. ಆದರೆ, ಅವೇ ಈಗ ಹಾಲಿವುಡ್ ಲೆವೆಲ್ಲಿನಲ್ಲಿ ಸದ್ದು ಮಾಡುತ್ತಿವೆ. ಚಾಪ್ಟರ್ 2ನ ಒಂದು ಬರಹ ಈಗ ಹಾಲಿವುಡ್ ಪ್ರಮೋಷನ್ನಿಗೆ ಬಳಕೆಯಾಗುತ್ತಿದೆ.

    ಹಾಲಿವುಡ್‍ನಲ್ಲಿ ಈಗ ಗಾಡ್ಜಿಲ್ಲ ವರ್ಸಸ್ ಕಿಂಗ್ ಕಾಂಗ್ ಸಿನಿಮಾ ಬರುತ್ತಿರೋದು ಗೊತ್ತಿದೆಯಷ್ಟೆ, ಆ ಚಿತ್ರದ ಅಫಿಷಿಯಲ್ ಪೇಜ್‍ನಲ್ಲಿ ಕೆಜಿಎಫ್ ಚಾಪ್ಟರ್ 2 ಟೀಸರ್‍ನಲ್ಲಿ ಕಾಣಿಸಿಕೊಂಡಿದ್ದ ಎ ಪ್ರಾಮಿಸ್ ವಾಸ್ ಮೇಡ್.. ಅಂಡ್ ಇಟ್ ವಾಸ್ ಕೆಪ್ಟ್.. ಅನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ.

    ಒಮ್ಮೆ ಆಣೆ ಮಾಡಿದರೆ ಅಥವಾ ವಚನ ನೀಡಿದರೆ ಅದನ್ನು ಉಳಿಸಿಕೊಳ್ಳುತ್ತೇವೆ ಅನ್ನೋದು ಇದರ ಅರ್ಥ. ಅನುಮಾನವೇನೂ ಇಲ್ಲ. ಪ್ರಶಾಂತ್ ನೀಲ್ ಪ್ರಾಮಿಸ್‍ನ್ನು ಉಳಿಸಿಕೊಳ್ತಾರೆ ಅಂತಾ ನಾವು ನಂಬಬಹುದು.

  • ಹಿಂದಿ ಕೆಜಿಎಫ್ - ಯಥಾವತ್ ಡಬ್ಬಿಂಗ್ ಅಲ್ವಂತೆ..!

    kgf hindi version dialogues is different

    ಕೆಜಿಎಫ್ ಇಡೀ ಇಂಡಿಯಾದಲ್ಲಿ ದೊಡ್ಡದೊಂದು ಹವಾ ಸೃಷ್ಟಿಸುತ್ತಿದೆ. ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್, ಹೊಂಬಾಳೆ ಫಿಲಂಸ್ ಕಾಂಬಿನೇಷನ್‍ನ ಕೆಜಿಎಫ್ 5 ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗುತ್ತಿದೆ. ಕನ್ನಡದ ಈ ಬಹುನಿರೀಕ್ಷಿತ ಚಿತ್ರ ಹಿಂದಿಯಲ್ಲಿ ಸ್ವಲ್ಪ ಡಿಫರೆಂಟ್ ಆಗಿಯೇ ಮೂಡಿ ಬರಲಿದೆ.

    ಹಿಂದಿ ಕೆಜಿಎಫ್‍ಗೆ ಕನ್ನಡದ ಡೈಲಾಗ್‍ಗಳನ್ನು ಯಥಾವತ್ ಡಬ್ ಮಾಡಿಲ್ಲ. ಬದಲಿಗೆ, ಹಿಂದಿಗೆ ಒಗ್ಗುವಂತೆ ಕೆಲವು ದೃಶ್ಯಗಳನ್ನು ಸೇರಿಸಲಾಗಿದೆ. ಡೈಲಾಗ್‍ಗಳನ್ನು ಹಿಂದಿಗೆ ತಕ್ಕಂತೆ ಹೊಸದಾಗಿ ಮಾಡಿದ್ದೇವೆ. ಹಿಂದಿಯ ಕೆಜಿಎಫ್, ಕನ್ನಡದ ಡಬ್ಬಿಂಗ್ ಸಿನಿಮಾದಂತೆ ಕಾಣೋದಿಲ್ಲ ಎಂದು ಹೇಳಿಕೊಂಡಿದೆ ಸಿನಿಮಾ ಟೀಂ.

    ಡಿಸೆಂಬರ್ 21ಕ್ಕೆ ತೆರೆಗೆ ಬರುತ್ತಿರುವ ಕೆಜಿಎಫ್‍ನ ಹಿಂದಿ ಆವೃತ್ತಿಯನ್ನು ಫರ್ಹಾನ್ ಅಖ್ತರ್ ಬಿಡುಗಡೆ ಮಾಡುತ್ತಿದ್ದಾರೆ.

  • ಹಿಂದಿಯಲ್ಲಿ 300 ಕೋಟಿ : ನಂ.7 ಸ್ಥಾನಕ್ಕೇರಿದ ಕೆಜಿಎಫ್

    ಹಿಂದಿಯಲ್ಲಿ 300 ಕೋಟಿ : ನಂ.7 ಸ್ಥಾನಕ್ಕೇರಿದ ಕೆಜಿಎಫ್

    ಕೆಜಿಎಫ್ ಚಾಪ್ಟರ್ 2 ದಾಖಲೆಗಳನ್ನು ಬರೆಯುತ್ತಿದೆ. ಈ ವಾರಾಂತ್ಯಕ್ಕೆ ಎಲ್ಲ ಭಾಷೆಗಳ ಒಟ್ಟಾರೆ ಕಲೆಕ್ಷನ್ ಸಾವಿರ ಕೋಟಿ ಮುಟ್ಟುವ ಅಥವಾ ದಾಟುವ ಎಲ್ಲ ಸಾಧ್ಯತೆಗಳೂ ಇವೆ. ಇದರ ನಡುವೆ ಹಿಂದಿಯಲ್ಲಿಯೇ ವಿಶೇಷ ದಾಖಲೆ ಬರೆದಿದೆ ಕೆಜಿಎಫ್. ಭಾನುವಾರ 300 ಕೋಟಿಯ ಗಡಿ ದಾಟಿದೆ. ಈ ದಾಖಲೆ ಬರೆದ ಒಟ್ಟಾರೆ 10ನೇ ಸಿನಿಮಾ ಕೆಜಿಎಫ್ ಚಾಪ್ಟರ್ 2.

    ಈ ಮೊದಲು ಪಿಕೆ, ಭಜರಂಗಿ ಭಾಯಿಜಾನ್, ಸುಲ್ತಾನ್, ದಂಗಲ್, ಟೈಗರ್ ಜಿಂದಾ ಹೈ, ಪದ್ಮಾವತ್, ಸಂಜು, ವಾರ್ ಹಾಗೂ ಬಾಹುಬಲಿ 2 ಚಿತ್ರಗಳು ಈ ದಾಖಲೆ ಬರೆದಿದ್ದವು. ಇವುಗಳಲ್ಲಿ ಇಂಡಿಯನ್ ಮಾರ್ಕೆಟ್‍ನಲ್ಲಿ ಹಿಂದಿಯಲ್ಲಿಯೇ 500 ಕೋಟಿ ಗಳಿಸಿದ್ದ ಸಿನಿಮಾ ಬಾಹುಬಲಿ 2 ಮಾತ್ರ. ಈಗ 300 ಕೋಟಿ ಕ್ಲಬ್ ಸೇರಿರುವ ಕೆಜಿಎಫ್ ಚಾಪ್ಟರ್ 2 ಮುನ್ನುಗ್ಗುತ್ತಿರುವ ವೇಗ ನೋಡಿದರೆ ಅದು 500 ಕೋಟಿ ಕಲೆಕ್ಷನ್ ದಾಟಿದರೂ ಆಶ್ಚರ್ಯವಿಲ್ಲ.

    ಅಂದಹಾಗೆ ಕೆಜಿಎಫ್ ಚಾಪ್ಟರ್ 2 ಹಿಂದಿಯಲ್ಲಿ ಕೇವಲ 11 ದಿನದಲ್ಲಿ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ದಾಖಲೆ ಬರೆದಿದೆ. ಸದ್ಯಕ್ಕೆ ಕೆಜಿಎಫ್ ಚಾಪ್ಟರ್ 2ಗೀಗ ಒಟ್ಟಾರೆ ಜೀವಮಾನದ ಕಲೆಕ್ಷನ್ ಟಾಪ್ 10 ಸಿನಿಮಾಗಳ ಲಿಸ್ಟಿನಲ್ಲಿ 7ನೇ ಸ್ಥಾನವಿದೆ. ನಂ. 1 ಸ್ಥಾನಕ್ಕೇರುವುದು ಕಷ್ಟವಾಗಲಾರದು.

    ಕೇರಳದಲ್ಲಿ.. 11 ದಿನದಲ್ಲಿ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಕೇರಳದಲ್ಲಿ ಆ್ಯಕ್ಷನ್ ಮಾಸ್ ಸಿನಿಮಾಗಳು ಕ್ಲಿಕ್ ಆಗುವುದು ಅಪರೂಪದಲ್ಲಿ ಅಪರೂಪ. ಹೀಗಾಗಿ.. ಅದೂ ಒಂದು ದಾಖಲೆಯೇ.

  • ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಧಿಕಾ ಪಂಡಿತ್

    yash and radhika pandit blessed with baby girl

    ರಾಕಿಂಗ್ ಸ್ಟಾರ್ ಯಶ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ರಾಧಿಕಾ ಪಂಡಿತ್, ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇಂದು ಬೆಳಗ್ಗೆ 6 ಗಂಟೆ 20 ನಿಮಿಷಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ರಾಧಿಕಾ ಪಂಡಿತ್. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ.

    ಯಶ್ ತಮಗೆ ಹೆಣ್ಣು ಮಗು ಬೇಕು ಎಂದು ಆಸೆಪಟ್ಟಿದ್ದರು. ಅವರ ಆಸೆ ಈಡೇರಿದಂತಾಗಿದೆ.

  • ಹೇಗಿದ್ದಾನೆ ಜೂ.ಯಶ್ : ಹೊರಬಂತು ಫೋಟೋ

    yash rdhika pose with their son

    ರಾಕಿ ಭಾಯ್ ಯಶ್, ಸ್ಯಾಂಡಲ್‍ವುಡ್ ಸಿಂಡ್ರೆಲಾ ದಂಪತಿಯ ಪುತ್ರ ಹೇಗಿದ್ದಾನೆ..? ಈ ಒಂದು ಕುತೂಹಲ ಹಾಗೆಯೇ ಇತ್ತು. ಮಗಳು ಐರಾಳನ್ನು ನೋಡಿ ಖುಷಿಪಟ್ಟಿದ್ದವರಿಗೆ ಯಶ್ ಪುತ್ರನ ದರ್ಶನ ಭಾಗ್ಯ ಸಿಕ್ಕಿರಲಿಲ್ಲ. ಈಗ ದಂಪತಿ ಹೊಸ ವರ್ಷದ ದಿನ ಮಗನ ದರ್ಶನ ಮಾಡಿಸಿದ್ದಾರೆ.

    ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಶುಭ ಕೋರುವಾಗ ಯಶ್ ಐರಾಳನ್ನು ಎತ್ತಿಕೊಂಡಿದ್ದರೆ, ರಾಧಿಕಾ ಜ್ಯೂ.ಯಶ್‍ನನ್ನು ಎತ್ತಿಕೊಂಡಿದ್ದಾರೆ. 

  • ಹೈದರಾಬಾದ್ ಮುಗೀತು.. ಮಿಕ್ಕಿದ್ದೆಲ್ಲ ಕರ್ನಾಟಕದಲ್ಲಿ.. ಕೆಜಿಎಪ್ ಚಾಪ್ಟರ್ 2 UPDATE

    kgf hyderabad shooting complete

    ಹೈದರಾಬಾದ್ ಮುಗೀತು.. ಮಿಕ್ಕಿದ್ದೆಲ್ಲ ಕರ್ನಾಟಕದಲ್ಲಿ.. ಕೆಜಿಎಪ್ ಚಾಪ್ಟರ್ 2 UPDATE

    ಕೆಜಿಎಫ್‌ ಚಾಪ್ಟರ್‌-2 ಚಿತ್ರದ ಬಗ್ಗೆ ಯಾವುದೇ ಅಪ್ಡೇಟ್ ಕೊಡ್ತಿಲ್ಲ. ಒಂದೇ ಒಂದು ಟೀಸರ್ ತೋರಿಸಿಲ್ಲ. ಫಸ್ಟ್ ಲುಕ್ ಹೊರಬಿದ್ದಿಲ್ಲ. ಏನಾಗ್ತಿದೆ ಕೆಜಿಎಪ್ ಚಾಪ್ಟರ್ 2..? ಇದು ಅಭಿಮಾನಿಗಳು ಇತ್ತೀಚೆಗೆ ಹೊಂಬಾಳೆ ಫಿಲ್ಮ್ಸ್ನವರನ್ನು ಕೇಳ್ತಿರೋ ಪ್ರಶ್ನೆ. ಆ ಪ್ರಶ್ನೆಗೆ ಸಂಪೂರ್ಣ ಉತ್ತರ ಅಲ್ಲದೇ ಹೋದರೂ, ಒಂದು ಅಪ್ಡೇಟ್ ಇದು.

    ಕೆಜಿಎಫ್ ಚಾಪ್ಟರ್ 2 ಟೀಂ, ಹೈದರಾಬಾದ್ನ ಶೂಟಿಂಗ್ ಮುಗಿಸಿದೆ. ಇದು ಅತ್ಯಂತ ದೀರ್ಘವಾದ ಶೂಟಿಂಗ್ ಶೆಡ್ಯೂಲ್ ಎಂದು ಸ್ವತಃ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ. ಮುಂದಿನ ಭಾಗದ ಚಿತ್ರೀಕರಣ ಕರ್ನಾಟಕ ಕೆಜಿಎಫ್ ಹಾಗೂ ಸೆಟ್ನಲ್ಲಿ ನಡೆಯಲಿದೆ. ಹೈದರಾಬಾದ್ನಲ್ಲಿ ಪ್ರಮುಖವಾಗಿ ಸಂಜಯ್ ದತ್ ಅವರ ಅಧೀರ ಪಾತ್ರದ ಪೋರ್ಷನ್ ಶೂಟಿಂಗ್ ಆಗಿದೆ.

  • ಹೊಗಳಿದ ಬೇರೆ ಭಾಷೆಯವರ ಜೊತೆ ಕನ್ನಡತನ ಬಿಡದ ಯಶ್

    ಹೊಗಳಿದ ಬೇರೆ ಭಾಷೆಯವರ ಜೊತೆ ಕನ್ನಡತನ ಬಿಡದ ಯಶ್

    ಯಶ್ ಎಲ್ಲಿಯೇ ಹೋಗಲಿ.. ಕನ್ನಡವನ್ನು ಬಿಟ್ಟುಕೊಟ್ಟವರಲ್ಲ. ಬಿಟ್ಟುಕೊಟ್ಟೂ ಇಲ್ಲ. ಹಾಗಂತ ಹಾರಾಡುವುದೂ ಇಲ್ಲ. ಘೋಷಣೆಯನ್ನೂ ಮೊಳಗಿಸಲ್ಲ. ಟೀಕಿಸಿದವರ ಜೊತೆ ಮನಸ್ಸುಗಳೂ ಮುರಿಯದಂತೆ.. ಅವರೇ ಮುಂದೆ ಮಾತನಾಡುವಾಗ ಎಚ್ಚರಿಕೆಯಿಂದ ಇರುವ ರೀತಿ ತಣ್ಣನೆಯ ಧ್ವನಿಯಲ್ಲೇ ಕನ್ನಡತನ ಸಾರುತ್ತಿದ್ದಾರೆ.

    ಹಿಂದಿಯಲ್ಲಿ ಕೆಜಿಎಫ್ ಪ್ರಚಾರ ಕಾರ್ಯಕ್ರಮದಲ್ಲಿ ಆಂಕರ್ ಒಬ್ಬರು ಯಶ್ ಎದುರು ಒಂದು ಪ್ರಶ್ನೆ ಇಟ್ಟಿದ್ದರು. ನೀವು ಮುಂದೆ ಬಾಲಿವುಡ್‍ಗೆ ಬರುತ್ತೀರಾ? ಹಿಂದಿ ಸಿನಿಮಾಗಳನ್ನಷ್ಟೇ ಮಾಡ್ತೀರಾ? ಅನ್ನೋ ಪ್ರಶ್ನೆಗೆ ಯಶ್ ಕೊಟ್ಟಿದ್ದ ಉತ್ತರವೇನು ಗೊತ್ತೇ?

    ನಾನು ಮುಂದೆಯೂ ಕನ್ನಡದಲ್ಲೇ ಸಿನಿಮಾ ಮಾಡ್ತೇನೆ. ಆ ಸಿನಿಮಾಗಳನ್ನೇ ಹಿಂದಿಗೂ ತರುತ್ತೇನೆ ಎಂದಿದ್ದರು.

    ಆಂಧ್ರದಲ್ಲಿ ವಿತರಕ ದಿಲ್ ರಾಜು ಕನ್ನಡ ಸಿನಿಮಾಗಳ ಬಜೆಟ್ ಮತ್ತು ಕಲೆಕ್ಷನ್ ಬಗ್ಗೆ ಕೇವಲವೇನೋ ಅನ್ನೋ ರೀತಿಯಲ್ಲಿ ಮಾತನಾಡಿದಾಗಲೂ ಅಷ್ಟೆ. ಕನ್ನಡ ಚಿತ್ರಗಳ ಬಜೆಟ್ ಮತ್ತು ಕಲೆಕ್ಷನ್ ಕುರಿತು ಪುಟ್ಟ ಭಾಷಣವನ್ನೇ ಮಾಡಿದ್ದ ಯಶ್ ವೇದಿಕೆಯಲ್ಲೇ ಕನ್ನಡ ಯಾರಿಗೂ.. ಯಾವುದಕ್ಕೂ ಕಡಿಮೆ ಇಲ್ಲ ಎಂದು ಸಾರಿದ್ದರು.

    ನಾನು ಬೇರೆ ಭಾಷೆಗಳನ್ನು ಕಲಿಯುವ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಕನ್ನಡದಷ್ಟು ಸುಲಲಿತವಾಗಿ ಬೇರೆ ಭಾಷೆಗಳು ಬರಲ್ಲ ಎಂದು ಹೇಳಿದ್ದ ಯಶ್ ಈಗ ಅಲ್ಲು ಅರ್ಜುನ್ ಅವರಿಗೆ ಧನ್ಯವಾದ ಹೇಳುವಾಗಲೂ ಕನ್ನಡತನ ಬಿಟ್ಟುಕೊಟ್ಟಿಲ್ಲ. ಅಲ್ಲು ಅರ್ಜುನ್ ಯಶ್ ಅವರಿಗೆ ವಿಶ್ ಮಾಡುತ್ತಾ ಯಶ್`ಗಾರು' ಎಂದು ಬಳಸಿದ್ದರು. ಗಾರು ಅನ್ನೋದು ತೆಲುಗಿನಲ್ಲಿ ಗೌರವ ಸೂಚಕ ಬಹುವಚನ ಪದ. ಅದಕ್ಕೆ ಅಲ್ಲು ಅರ್ಜುನ್ ಗಾರು ಎಂದು ಉತ್ತರ ಕೊಟ್ಟಿದ್ದರೆ ತೆಲುಗರೂ ಖುಷಿಯಾಗುತ್ತಿದ್ದರು. ಅದರೆ.. ಅಲ್ಲಿ ಪ್ರತಿಕ್ರಿಯೆ ಕೊಡುವಾಗ ಅಲ್ಲು ಅರ್ಜುನ್ `ಅವರೇ' ಎಂದು ಬಳಸಿರೋ ಯಶ್ ತಣ್ಣನೆಯ ಧ್ವನಿಯಲ್ಲೇ ಕನ್ನಡತನ ಸಾರಿದ್ದಾರೆ.

    ಅಂದ ಹಾಗೆ ಇದು ಹೆಮ್ಮೆ ಎಂದೋ... ನೋಡು ನಮ್ ಹುಡ್ಗ ಹೆಂಗೆ ಎಂದೋ ಎದೆಯುಬ್ಬಿಸಿ ಹೇಳಿ ಇನ್ನೊಬ್ಬರನ್ನು ಕೆಣಕುವ ರೀತಿಯೂ ಅಲ್ಲ. ಕೆಣಕಿ ಕೌಂಟರ್ ಕೊಟ್ಟರೆ ಕನ್ನಡ ಬೆಳೆಯಲ್ಲ. ಬೆಳೆಯಬೇಕಿರೋದು ಹೀಗೆ.. ಪ್ರೀತಿಯಿಂದ.. ಸ್ನೇಹದಿಂದ..

  • ಹೊಸ ಕಿರಾತಕ ಹಿಂಗವ್ನೆ ನೋಡಿ

    new kirataka's new avatar

    ಕಿರಾತಕ. ಯಶ್ ಸಿನಿ ಜರ್ನಿಯ ಸೂಪರ್ ಹಿಟ್ ಸಿನಿಮಾ. ಈಗ ಅದೇ ಚಿತ್ರದ ಸೀಕ್ವೆಲ್ ರೆಡಿಯಾಗುತ್ತಿದೆ. ಕಿರಾತಕದಲ್ಲಿ ಪಕ್ಕಾ ಮಂಡ್ಯ ಸ್ಟೈಲ್‍ನಲ್ಲಿ ಕಿರಿಕ್ ಮಾಡುತ್ತಿದ್ದ ಯಶ್, ಮೈ ನೇಮ್ ಈಸ್ ಕಿರಾತಕ ಚಿತ್ರದಲ್ಲಿ ಸಿಟಿ ಗೆಟಪ್‍ನಲ್ಲಿರ್ತಾರೆ. ಹಳೇ ಕಿರಾತಕದಲ್ಲಿ ಶರಟು, ಲುಂಗಿ, ಹೆಗಲ ಮೇಲೊಂದು ಕೆಂಪು ವಸ್ತ್ರ ಹಾಕಿಕೊಂಡೇ ಮೋಡಿ ಮಾಡಿದ್ದ ಯಶ್, ಹೊಸ ಕಿರಾತಕನಾಗಿ ಬೇರೆಯೇ ಸ್ಟೈಲ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

    ಬಿಳಿ ಪಂಚೆ, ಕಲರ್ ಕಲರ್ ಶರಟು, ಕಣ್ಣಿಗೆ ಕೂಲಿಂಗ್ ಗ್ಲಾಸು.. ಥೇಟು ಅಣ್ತಮ್ಮ ಸ್ಟೈಲು. ಅನಿಲ್ ನಿರ್ದೇಶನದ ಮೈ ನೇಮ್ ಈಸ್ ಕಿರಾತಕ ಚಿತ್ರ, ಬಿರುಸಿನಿಂದ ಚಿತ್ರೀಕರಣ ಆರಂಭಿಸಿದೆ.

  • ಹೊಸ ದಾಖಲೆ ಬರೆಯಲಿದೆ ಕಟಕ ಟ್ರೇಲರ್

    kataka trailer

    ರವಿ ಬಸ್ರೂರ್‌ ನಿರ್ದೇಶನದ 'ಕಟಕ' ಚಿತ್ರದ ಟ್ರೇಲರ್‌ ಹೊಸ ದಾಖಲೆ ಬರೆಯಲು ಸಿದ್ಧವಾಗಿದೆ. ಶನಿವಾರ ಸಂಜೆ ಚಿತ್ರದ ಟ್ರೇಲರ್ ರಿಲೀಸ್ ಆಗುತ್ತಿದೆ. ಟ್ರೇಲರ್ ರಿಲೀಸ್ ಮಾಡಲಿರುವುದು ಪವರ್ ಸ್ಟಾರ್ ಮತ್ತು ರಾಕಿಂಗ್ ಸ್ಟಾರ್. 

    ಇಲ್ಲಿ ದಾಖಲೆ ಬರೆಯುತ್ತಿರುವುದು ಯಾವ ವಿಚಾರದಲ್ಲಿ ಗೊತ್ತಾ..? ಕಟಕ ಚಿತ್ರದ ಟ್ರೇಲರ್ ಏಕಕಾಲಕ್ಕೆ 13 ಭಾಷೆಗಳಲ್ಲಿ ರಿಲೀಸ್ ಅಗುತ್ತಿದೆ. ಕನ್ನಡ, ತುಳು, ಕೊಡವ, ಹಿಂದಿ, ಮಲಯಾಳಂ, ತಮಿಳು ಸೇರಿದಂತೆ 13 ಭಾಷೆಗಳಲ್ಲಿ ಕಟಕ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.

    ಇದೊಂದು ವಿಭಿನ್ನ ಪ್ರಯತ್ನವಾಗಿದ್ದು ಭಾರತದ ಚಿತ್ರರಂಗದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಒಂದು ಚಿತ್ರದ ಟ್ರೇಲರ್‌ ಅತೀ ಹೆಚ್ಚು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

    Related Articles :-

    Puneeth and Yash To Release The Trailer of Kataka