` yash, - chitraloka.com | Kannada Movie News, Reviews | Image

yash,

  • 1970ರಲ್ಲಿ ಅಣ್ಣಾವ್ರು.. 2018ಕ್ಕೆ ಯಶ್..!

    then rajkumar now yash

    ಕೆಜಿಎಫ್ ಈಗ ದೇಶಾದ್ಯಂತ ಹವಾ ಎಬ್ಬಿಸಿದೆ. ಈ ಹವಾದ ನಡುವೆಯೇ ಡಾ.ರಾಜ್ ನೆನಪಾಗುವಂತೆ ಮಾಡಿದ್ದಾರೆ ಕೆಜಿಎಫ್ ಟೀಂ ಸದಸ್ಯರು. ಅದಕ್ಕೆ ಕಾರಣ ಇಲ್ಲದೇ ಇಲ್ಲ. ಈ ಚಿತ್ರದಲ್ಲಿ ಬಳಸಿಕೊಂಡಿರುವ ಹಳೆಯ ಹಾಡಿದೆಯಲ್ಲ.. ಜೋಕೆ ನಾನು ಬಳ್ಳಿಯ ಮಿಂಚು ಹಾಡು.. ಆ ಹಾಡಿನ ವೊರಿಜಿನಲ್ ಇರೋದು ಡಾ.ರಾಜ್ ಅಭಿನಯದ ಚಿತ್ರದಲ್ಲಿ.

    ಜೋಕೆ ನಾನು ಬಳ್ಳಿಯ ಮಿಂಚು ಹಾಡು 1970ರಲ್ಲಿ ರಿಲೀಸ್ ಆಗಿದ್ದ ಪರೋಪಕಾರಿ ಚಿತ್ರದ್ದು. ಆ ಚಿತ್ರದಲ್ಲಿ ಡಾ.ರಾಜ್, ಜಯಂತಿ ಜೋಡಿಯಾಗಿದ್ದರು. ಜೋಕೆ ಹಾಡಿಗೆ ಸಾಹಿತ್ಯ ಬರೆದಿದ್ದವರು ಇಬ್ಬರು ಮಹಾನ್ ಸಾಹಿತಿಗಳಾದ ಆರ್.ಎನ್.ಜಯಗೋಪಾಲ್ ಹಾಗೂ ಚಿ.ಉದಯಶಂಕರ್. ಆಗ ಹಾಡು ಹಾಡಿದ್ದವರು ಎಲ್. ಆರ್. ಈಶ್ವರಿ. ಈಗ ಹಾಡಿಗೆ ಧ್ವನಿಯಾಗಿರೋದು ಐರಾ ಉಡುಪಿ. ಆಗ ಆ ಹಾಡಿಗೆ ಹೆಜ್ಜೆ ಹಾಕಿದ್ದವರು ವಿಜಯಲಲಿತಾ. ಈಗ ಸ್ಟೆಪ್ ಹಾಕಿರೋದು ತಮನ್ನಾ ಭಾಟಿಯಾ.

    48 ವರ್ಷಗಳ ನಂತರ ಜೋಕೆ ಹಾಡನ್ನು ರೀಮಿಕ್ಸ್ ಮಾಡಿ ಬಳಸಿಕೊಳ್ಳಲಾಗಿದೆ. ವೊರಿಜಿನಲ್ ಮ್ಯೂಸಿಕ್ ಡೈರೆಕ್ಟರ್ ಉಪೇಂದ್ರ ಕುಮಾರ್. ರೀಮಿಕ್ಸ್ ಹಾಡಿಗೆ ಸಂಗೀತ ನೀಡಿರುವುದು ರವಿ ಬಸ್ರೂರು.

  • 2 ವರ್ಷದ ಹಳೆಯ ವಿಡಿಯೋ ನೋಡಿ ಕೆರಳಿದ ಯಶ್ ಫ್ಯಾನ್ಸ್

    yash fans looses cool over 2 years video leak

    ಸುದರ್ಶನ್ ರಂಗಪ್ರಸಾದ್, ಖ್ಯಾತ ಸ್ಯಾಂಡ್ ಅಪ್ ಕಮಿಡಿಯನ್. ಯೂಟ್ಯೂಬ್‍ನಲ್ಲಿ ಇವರಿಗೆ ದೊಡ್ಡ ಅಭಿಮಾನಿ ಬಳಗವೂ ಇದೆ. ನಟಿ ಸಂಗೀತಾ ಭಟ್ ಅವರ ಪತಿ, ಈ ಸುದರ್ಶನ್ ರಂಗಪ್ರಸಾದ್. ಇವರ ಮೇಲೀಗ ಯಶ್ ಅಭಿಮಾನಿಗಳ ಕೆಂಗಣ್ಣು ಬಿದ್ದಿದೆ. ಅದಕ್ಕೆ ಕಾರಣವಾಗಿರೋದು 2 ವರ್ಷದ ಹಳೆಯ ವಿಡಿಯೋ.

    ಆ ವಿಡಿಯೋದಲ್ಲಿ ಯಶ್ ಅವರ ಬಿಲ್ಡಪ್ ಡೈಲಾಗುಗಳನ್ನು ಕಾಮಿಡಿ ಮಾಡಲಾಗಿತ್ತು. ಯಶ್ ಅವರ ಡೈಲಾಗ್ ಸ್ಟೈಲನ್ನು ಇಮಿಟೇಟ್ ಮಾಡಲಾಗಿತ್ತು. ಈಗ ಇದನ್ನು ನೋಡಿರುವ ಯಶ್ ಅವರ ಕೆಲವು ಅಭಿಮಾನಿಗಳು(?) ಸುದರ್ಶನ್ ಅವರಿಗೆ ಅವಾಚ್ಯ ಶಬ್ಧಗಳಲ್ಲಿ ಧಮ್ಕಿ ಹಾಕುತ್ತಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದರ್ಶನ್ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.

    ನಾನೂ ಕೂಡಾ ಯಶ್ ಅಭಿಮಾನಿ. ಅವರ ಜೊತೆಯಲ್ಲೂ ನಟಿಸಿದ್ದೇನೆ. ಯಾವುದೇ ಕೆಟ್ಟ ಉದ್ದೇಶದಿಂದ ಮಾಡಿರುವ ವಿಡಿಯೋ ಇದಲ್ಲ. ಹಾಸ್ಯವನ್ನು ಹಾಸ್ಯವಾಗಿ ನೋಡಿ. ಯಶ್ ಅವರ ಅಭಿಮಾನಿಗಳಿಂದ ನನಗೆ, ನನ್ನ ಕುಟುಂಬಕ್ಕೆ ಬೆದರಿಕೆ ಕರೆಗಳು ಬರುತ್ತಿವೆ. ಯಶ್ ಕೂಡಾ ಇಂತಹವುಗಳನ್ನು ಮೆಚ್ಚುವುದಿಲ್ಲ. ದಯವಿಟ್ಟು ಇದನ್ನು ಇಲ್ಲಿಗೇ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ. ತಮ್ಮ ಮನವಿಯನ್ನು ಪೊಲೀಸರಿಗೂ ಟ್ಯಾಗ್ ಮಾಡಿದ್ದಾರೆ.

    ಪೊಲೀಸರು ಈ ಮನವಿಯನ್ನು ಗಂಭೀರವಾಗಿ ತೆಗೆದುಕೊಂಡು ಕಾನೂನು ಕ್ರಮಕ್ಕೆ ಮುಂದಾದರೆ, ಸೋಷಿಯಲ್ ಮೀಡಿಯಾದಲ್ಲಿ ಅಬ್ಬರಿಸಿರುವವರು ಜೈಲಿಗೆ ಹೋಗುವ ಸಾಧ್ಯತೆ ಹೆಚ್ಚಿದೆ.

  • 200 ಕೋಟಿ ಕ್ಲಬ್ ಸೇರುತ್ತಾ ಕೆಜಿಎಫ್..?

    kgf inches towards 200 crore mark

    ರಿಲೀಸ್ ಆದ ದಿನದಿಂದಲೂ ಬಾಕ್ಸಾಫೀಸ್‍ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್, 200 ಕೋಟಿ ಕ್ಲಬ್ ಸೇರುತ್ತಾ..? ಬಾಕ್ಸಾಫೀಸ್ ಪಂಡಿತರು ಇಂಥಾದ್ದೊಂದು ಲೆಕ್ಕಾಚಾರ ಹೇಳುತ್ತಿದ್ದಾರೆ. ಏಕೆಂದರೆ, ಚಿತ್ರ ಈಗಾಗಲೇ 175 ಕೋಟಿ ಕಲೆಕ್ಷನ್ ದಾಟಿದೆಯಂತೆ.

    ಹಿಂದಿಯಲ್ಲಿ 33 ಕೋಟಿ ಬಾಚಿ ಮುನ್ನುಗ್ಗುತ್ತಿರುವ ಕೆಜಿಎಫ್ ಸಿನಿಮಾ, ಕೇವಲ ಬುಕ್ ಮೈ ಶೋ ಒಂದರಲ್ಲಿಯೇ, ಅಧಿಕೃತ ಲೆಕ್ಕದ ಪ್ರಕಾರವೇ 80 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಬಾಕ್ಸಾಫೀಸ್‍ನಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಕೆಜಿಎಫ್, 200 ಕೋಟಿ ಕ್ಲಬ್ ದಾಟುವ ಸಾಧ್ಯತೆ ಇದೆ ಎಂದು ಬಾಲಿವುಡ್ ಪಂಡಿತರು ಭವಿಷ್ಯ ನುಡಿದಿದ್ದಾರೆ.

  • 2018ರ ಅರಂಭಕ್ಕೆ ತದ್ವಿರುದ್ಧ 2019ರ ಆರಂಭ

    2019 year beginning is different from 2018

    2018 ಕೊನೆಯಾಗುತ್ತಿದೆ. ಕೆಜಿಎಫ್ ಹವಾ ಈ ವಾರ. ಅದಾದ ನಂತರದ ಕೊನೆಯ ವಾರದಲ್ಲೂ 8 ಸಿನಿಮಾಗಳು ರಿಲೀಸ್‍ಗೆ ರೆಡಿಯಿವೆ. ಇಷ್ಟಿದ್ದರೂ ಈ ವರ್ಷದ ಸ್ಪೆಷಾಲಿಟಿ ಎಂದರೆ ಸ್ಟಾರ್ ನಟರ ಸಿನಿಮಾಗಳ ಕೊರತೆ.

    ವರ್ಷದ ಆರಂಭದಲ್ಲಂತೂ ಸ್ಟಾರ್ ಸಿನಿಮಾಗಳೇ ಇರಲಿಲ್ಲ. ಇಡೀ ವರ್ಷದಲ್ಲಿ ಬಹುತೇಕ ಎಲ್ಲ ಸ್ಟಾರ್‍ಗಳ ತಲಾ ಒಂದೊಂದು ಚಿತ್ರ ಬಂದವು. ಇದರ ನಡುವೆಯೂ ಪುನೀತ್, ದರ್ಶನ್, ರಕ್ಷಿತ್ ಶೆಟ್ಟಿ ಸಿನಿಮಾಗಳು ಬರಲೇ ಇಲ್ಲ. ಇದು 2018ರ ಕಥೆ. 2019ರ ಕಥೆ ಫುಲ್ ಡಿಫರೆಂಟ್.

    2019ರ ಆರಂಭದಿಂದಲೇ ಶಿವಣ್ಣ ಬರುವುದು ಬಹುತೇಕ ಖಚಿತ. ಕವಚ ರಿಲೀಸ್‍ಗೆ ರೆಡಿ. ಪುನೀತ್‍ರ ನಟಸಾರ್ವಭೌಮ, ದರ್ಶನ್‍ರ ಕುರುಕ್ಷೇತ್ರ, ಯಜಮಾನ, ಸುದೀಪ್‍ರ ಪೈಲ್ವಾನ್, ರಕ್ಷಿತ್ ಶೆಟ್ಟಿಯ ಅವನೇ ಶ್ರೀಮನ್ನಾರಾಯಣ, ಉಪೇಂದ್ರರ ಐ ಲವ್ ಯೂ, ಶಿವಣ್ಣ ಅಭಿನಯದ ರುಸ್ತುಂ, ಶ್ರೀಮುರಳಿಯವರ ಭರಾಟೆ, ಗಣೇಶ್ ಅಭಿನಯದ ಗಿಮಿಕ್ ಇವುಗಳ ಜೊತೆಗೆ ರಿಷಬ್ ಶೆಟ್ಟಿಯವರ ಬೆಲ್‍ಬಾಟಂ, ಪುನೀತ್ ಪ್ರೊಡಕ್ಷನ್ಸ್‍ನ ಕವಲುದಾರಿ.. ಮೊದಲಾದ ದೊಡ್ಡ ದೊಡ್ಡ ಸಿನಿಮಾಗಳು ಕ್ಯೂನಲ್ಲಿವೆ. ಪಟ್ಟಿಯಲ್ಲಿ ಕೆಲವು ಹೆಸರು ಮಿಸ್ ಆಗಿರಬಹುದೇನೋ.. ಆದರೆ, 2019ರ ಆರಂಭವಂತೂ ಅಬ್ಬರಿಸಿ ಘರ್ಜಿಸಲಿದೆ.

  • 255 ಕೋಟಿ ಆಫರ್ ಅಂತೆ.. ಕೆಜಿಎಫ್ ಥಿಯೇಟರಿಗೇ ಬರಲ್ವಂತೆ.. ನಿಜಾನಾ?

    255 ಕೋಟಿ ಆಫರ್ ಅಂತೆ.. ಕೆಜಿಎಫ್ ಥಿಯೇಟರಿಗೇ ಬರಲ್ವಂತೆ.. ನಿಜಾನಾ?

    ಕೆಜಿಎಫ್ ಚಾಪ್ಟರ್ 2. ಇಡೀ ಇಂಡಿಯಾದಲ್ಲಿ ಪ್ರೇಕ್ಷಕರು ನೋಡಲು ಕಾತರಿಸುತ್ತಿರುವ ಸಿನಿಮಾ. ಯಶ್, ಪ್ರಶಾಂತ್ ನೀಲ್, ಹೊಂಬಾಳೆ ಕಾಂಬಿನೇಷನ್ನಿನ ಸಿನಿಮಾದ 2ನೇ ಚಾಪ್ಟರ್‍ನಲ್ಲಿ ಸಂಜಯ್ ದತ್, ರವೀನಾ ಟಂಡನ್ ಕೂಡಾ ಜೊತೆಯಾಗಿದ್ದಾರೆ. ಚಾಪ್ಟರ್ 1, ಬಾಕ್ಸಾಫೀಸ್ ಚಿಂದಿ ಉಡಿಆಯಿಸಿತ್ತು. ಹೀಗಾಗಿಯೇ ಚಾಪ್ಟರ್ 2 ಮೇಲೆ ಭಯಂಕರ ನಿರೀಕ್ಷೆಯಿದೆ. ಈ ಸಿನಿಮಾ ಈಗ ಥಿಯೇಟರಿಗೇ ಬರಲ್ವಾ? ಅಂತಾದ್ದೊಂದು ಸುದ್ದಿ ಈಗ ಇಂಗ್ಲಿಷ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ.

    ಇಂಗ್ಲಿಷ್ ಮೀಡಿಯಾಗಳ ಪ್ರಕಾರ ಕೆಜಿಎಫ್ ಚಾಪ್ಟರ್ 2, ಒಟಿಟಿ ಪ್ಲಾಟ್‍ಫಾರ್ಮ್‍ಗಳು 255 ಕೋಟಿ ಆಫರ್ ಕೊಟ್ಟಿವೆ. ಥಿಯೇಟರಿಗೆ ರಿಲೀಸ್ ಮಾಡದೆ, ಡೈರೆಕ್ಟ್ ಆಗಿ ಒಟಿಟಿಯಲ್ಲೇ ರಿಲೀಸ್ ಮಾಡಿದರೆ 255 ಕೋಟಿ. ಮತ್ತೂ ಒಂದು ಆಫರ್ ಇದೆ. ಸಿನಿಮಾ ರಿಲೀಸ್ ಮಾಡಿ. ಆದರೆ, ಕೇವಲ 2 ವಾರದ ನಂತರ ಒಟಿಟಿಗೂ ಕೊಡಿ ಅನ್ನೋದು. ತಮಿಳಿನಲ್ಲಿ ವಿಜಯ್ ಮತ್ತು ವಿಜಯ್ ಸೇತುಪತಿ ನಟಿಸಿದ್ದ ಮಾಸ್ಟರ್ ಚಿತ್ರವನ್ನು ಇದೇ ಮಾಡೆಲ್‍ನಲ್ಲಿ ಖರೀದಿಸಿತ್ತು ಅಮೇಜಾನ್ ಪ್ರೈಮ್. ಈಗ ಕೆಜಿಎಫ್‍ಗೂ ಅದೇ ಆಫರ್ ಮುಂದಿಟ್ಟಿದೆಯಂತೆ.

    ಇದು ನಿಜಾನಾ..? ಸುಳ್ಳಾ..?

    ನೋ ವೇ..ಚಾನ್ಸೇ ಇಲ್ಲ ಎನ್ನುತ್ತಿದೆ ಹೊಂಬಾಳೆ ಟೀಂ. ಆ ಚಿತ್ರವನ್ನು ಥಿಯೇಟರಿನಲ್ಲೇ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಅವರಿಗೆ ನಿರಾಸೆ ಮಾಡುವುದಿಲ್ಲ. ಥಿಯೇಟರಿನಲ್ಲಿ ರಿಲೀಸ್ ಹಬ್ಬ ಮುಗಿದ ನಂತರವಷ್ಟೇ ಒಟಿಟಿಗೆ ಎಂದಿದೆ.

  • 3 ವರ್ಷಗಳ ಹಿಂದೆ.. ಆ ಸಿನಿಮಾನೂ ರಿಲೀಸ್ ಆಗಿತ್ತು.. ಚರಿತ್ರೆಯೂ ಸೃಷ್ಟಿಯಾಗಿತ್ತು..

    3 ವರ್ಷಗಳ ಹಿಂದೆ.. ಆ ಸಿನಿಮಾನೂ ರಿಲೀಸ್ ಆಗಿತ್ತು.. ಚರಿತ್ರೆಯೂ ಸೃಷ್ಟಿಯಾಗಿತ್ತು..

    ಆ ಭವ್ಯ ಇತಿಹಾಸ ಸೃಷ್ಟಿಯಾಗಿ 3 ವರ್ಷ. ಸರಿಯಾಗಿ 3 ವರ್ಷಗಳ ಹಿಂದೆ.. 2018ರ ಡಿಸೆಂಬರ್ 21ರಂದು ಕೆಜಿಎಫ್ ರಿಲೀಸ್ ಆಗಿತ್ತು. ಕಡೆಯ ಕ್ಷಣದಲ್ಲಿ ಯಾರೋ ಒಬ್ಬರು ಕೋರ್ಟಿಗೆ ಹೋಗಿ ಕೊನೆ ಕ್ಷಣದಲ್ಲಿ ಸಿನಿಮಾಗೆ ತಡೆ ತರುವ ಪ್ರಯತ್ನವೂ ನಡೆದು ಗೊಂದಲ ಸೃಷ್ಟಿಯಾದರೂ.. ಅದನ್ನು ಎದುರಿಸಿ, ನಿಭಾಯಿಸಿದ ಹೊಂಬಾಳೆ ಚಿತ್ರವನ್ನು ಪ್ರೇಕ್ಷಕರ ಎದುರು ತಂದಿತ್ತು. ನಂತರ ಸೃಷ್ಟಿಯಾಗಿದ್ದು ಇತಿಹಾಸ.

    ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಹೀರೋ ಆದರು. ಪ್ರಶಾಂತ್ ನೀಲ್ ಸ್ಟಾರ್ ಡೈರೆಕ್ಟರ್ ಆದರು. ಹೊಂಬಾಳೆ ಸಂಸ್ಥೆಗೆ ದೇಶದೆಲ್ಲೆಡೆ ಹೆಸರು ಬಂತು.

    ಆ ಸಂಭ್ರಮವನ್ನು ಹೊಂಬಾಳೆ ನೆನಪಿಸಿಕೊಂಡಿದೆ. ಈಗ ಕೆಜಿಎಫ್ 2 ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ಜುಲೈ 14ಕ್ಕೆ ರಿಲೀಸ್ ಆಗುತ್ತಿದೆ ಕೆಜಿಎಫ್ ಚಾಪ್ಟರ್ 2.

  • 350.. 300.. 250.. 150.. 100+.. ಇದು ಕೆಜಿಎಫ್ ಮಾಯೆ

    kgf craze worldwide

    ಏನಿದು ಬರೀ ನಂಬರ್ ಹಾಕಬಿಟ್ಟಿದ್ದೀರಲ್ಲ.. ಏನಿದು ಅಂದ್ರಾ.. ಇದು ಕೆಜಿಎಫ್ ಕ್ರೇಜ್. ಕನ್ನಡ ಚಿತ್ರರಂಗದಲ್ಲೇ ಕಂಡು ಕೇಳರಿಯದ ದಾಖಲೆ ಬರೆಯುತ್ತಿದೆ ಕೆಜಿಎಫ್. ಅದಕ್ಕೆ ಸಂಬಂಧಪಟ್ಟ ನಂಬರ್ ಸಾಧನೆ ಇದು.

    ಕನ್ನಡದಲ್ಲಿ 350+ : ಕೆಜಿಎಫ್ ಕರ್ನಾಟಕದಲ್ಲಿ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ನರ್ತಕಿ ಮೇನ್ ಥಿಯೇಟರ್.

    ಹಿಂದಿಯಲ್ಲೂ 350+ : ಹಿಂದಿಯಲ್ಲಿ ಫರ್ಹಾನ್ ಅಖ್ತರ್, ಅನಿಲ್ ತಡ್ವಾನಿ ಚಿತ್ರವನ್ನು ರಿಲೀಸ್ ಮಾಡುತ್ತಿದ್ದು, ಅಲ್ಲಿಯೂ 350ಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

    ತೆಲುಗಿನಲ್ಲಿ 300+ : ಟಾಲಿವುಡ್‍ನಲ್ಲಿ ವರಾಹಿ ಪ್ರೊಡಕ್ಷನ್ಸ್, ಚಿತ್ರವನ್ನು ವಿತರಣೆ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಆಂಧ್ರ, ತೆಲಂಗಾಣದಲ್ಲಿ ಕನ್ನಡದ ಡಬ್ಬಿಂಗ್ ಚಿತ್ರವೊಂದು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ.

    ತಮಿಳುನಾಡಿನಲ್ಲಿ 250+ : ವಿಶಾಲ್, ತಮಿಳುನಾಡಿನಲ್ಲಿ 150 ಸ್ಕ್ರೀನ್‍ಗಳಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ.

    ಕೇರಳದಲ್ಲಿ 150+ : ಮಲಯಾಳಂನಲ್ಲಿ ಅಂದರೆ ಕೇರಳದಲ್ಲಿ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

    ವಿದೇಶಗಳಲ್ಲಿ 100+ : ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಲ್ಲಿಯೂ ಏಕಕಾಲಕ್ಕೆ ರಿಲೀಸ್ ಆಗುತ್ತಿದ್ದು, 100ಕ್ಕೂ ಹೆಚ್ಚು ಸ್ಕ್ರಿನ್‍ಗಳಲ್ಲಿ ರಿಲೀಸಾಗುತ್ತಿದೆ.

    ನಾಳೆಯಿಂದ ಅಂದರೆ ಭಾನುವಾರದಿಂದ ಕೆಜಿಎಫ್ ಬುಕ್ಕಿಂಗ್ ಶುರುವಾಗಲಿದೆ. 

  • 4 AM Shows Of KGF Sold Out

    kgf early morning shows sold out

    The fan craze for KGF continues. After the advance booking started on Sunday there is unprecedented demand for tickets. All theatres have early morning shows at 6.30 or 7 am. Some single screens in Bengaluru have started 4 am shows.

    In Urvashi and Tulasi theatres the 4am shows sold out immediately. In Urvashi 1,100 tickets were sold for two shows within 5 minutes of the opening of booking. There has been sold out bookings in all parts of Karnataka.

    All early morning shows before 10 am where bookings have started are sold out. The positive interest generated for the film is the highest ever for a Kannada film.

  • 500 ಕೋಟಿ ಕ್ಲಬ್`ಗೆ ಕೆಜಿಎಫ್ ಚಾಪ್ಟರ್ 2 : ಟಾರ್ಗೆಟ್ 1000 ಕೋಟಿ..!

    500 ಕೋಟಿ ಕ್ಲಬ್`ಗೆ ಕೆಜಿಎಫ್ ಚಾಪ್ಟರ್ 2 : ಟಾರ್ಗೆಟ್ 1000 ಕೋಟಿ..!

    ಕೆಜಿಎಫ್ ಚಾಪ್ಟರ್ 2 ಇಟ್ಟ ಪ್ರತಿ ಹೆಜ್ಜೆಯೂ ದಾಖಲೆ ಬರೆಯುತ್ತಿದೆ. ಹೊಂಬಾಳೆಯ ವಿಜಯ್ ಕಿರಗಂದೂರು ಶ್ರಮಕ್ಕೆ ಪ್ರತಿಫಲವೂ ಸಿಗುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಈಗ ಬಾಕ್ಸಾಫೀಸ್ ಡಾನ್ ಆಗಿದ್ದರೆ, ನಿರ್ದೇಶಕ ಪ್ರಶಾಂತ್ ನೀಲ್ ಈಗ ಸಿನಿಮಾ ನಿರ್ಮಾಪಕರ ಡಾರ್ಲಿಂಗ್. ಈ ಚಿತ್ರಕ್ಕೆ ಸಿಕ್ಕಿರೋ ರೆಸ್ಪಾನ್ಸ್ ಹೇಗಿದೆಯೆಂದರೆ.. ಕೆಜಿಎಫ್ 500 ಕೋಟಿ ಕ್ಲಬ್ ಸೇರಿದೆ.

    ಕರ್ನಾಟಕದಲ್ಲಿ ಎಲ್ಲ ಭಾಷೆಯ ಶೋಗಳು ಹೌಸ್‍ಫುಲ್. ಕನ್ನಡಕ್ಕೆ ಹೆಚ್ಚಿನ ಥಿಯೇಟರ್ ಸಿಕ್ಕಿತ್ತು. ವೀಕೆಂಡ್ ಹೊತ್ತಿಗೆ ಬೀಸ್ಟ್‍ಗೆ ಫಿಕ್ಸ್ ಆಗಿದ್ದ ಸ್ಕ್ರೀನ್‍ಗಳೆಲ್ಲ ಕೆಜಿಎಫ್‍ಗೆ ಸಿಕ್ಕಿವೆ. ಬೆಂಗಳೂರಿನಲ್ಲೇ 80ಕ್ಕೂ ಹೆಚ್ಚು ಸ್ಕ್ರೀನ್‍ಗಳು ಸಿಕ್ಕಿವೆ.

    ಅತ್ತ ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣದಲ್ಲೂ ಬಾಕ್ಸಾಫೀಸ್ ನಂ.1 ಚಿತ್ರವಾಗಿರೋದು ಕೆಜಿಎಫ್ ಚಾಪ್ಟರ್ 2. ತಮಿಳುನಾಡಿನಲ್ಲಿ ಓಪನಿಂಗ್ ಡೇ ಮಾತು ಬಿಡಿ, 4ನೇ ದಿನವೂ ಮಿಡ್‍ನೈಟ್ ಶೋಗಳು ನಡೆದಿರೋದು ಕೆಜಿಎಫ್ ಸೃಷ್ಟಿಸಿರೋ ಸಂಚಲನಕ್ಕೆ ಸಾಕ್ಷಿ.

    ಆಂಧ್ರದಲ್ಲಿ ಅಬ್ಬರ ಜೋರಾಗಿದ್ದರೂ, ಟಿಕೆಟ್ ರೇಟ್ ಬಗ್ಗೆ ಆಂಧ್ರ ಸರ್ಕಾರದ ಕಠಿಣ ನಿಲುವಿನಿಂದಾಗಿ ಬಾಕ್ಸಾಫೀಸ್‍ನಲ್ಲಿ ಹೊಸ ದಾಖಲೆ ಬರೆಯಲು ಆಗಿಲ್ಲ. ಆದರೆ ಚಿತ್ರ ನೋಡಿದವರ ಸಂಖ್ಯೆ ಅಲ್ಲಿ ಹೆಚ್ಚು.

    ಅಮೆರಿಕದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿರೋ ಕೆಜಿಎಫ್, ಆರ್.ಆರ್.ಆರ್. ದಾಖಲೆಯನ್ನು ಮುರಿಯುವ ಎಲ್ಲ ಸುಳಿವನ್ನೂ ಕೊಟ್ಟಿದೆ.

    ಮೊದಲ ದಿನ 134 ಕೋಟಿ ಕಲೆಕ್ಷನ್ ಮಾಡಿದ್ದ ಕೆಜಿಎಫ್, 2ನೇ ದಿನ 240 ಕೋಟಿ ಗಳಿಸಿತ್ತು. ಉಳಿದ ಅಧಿಕೃತ ಲೆಕ್ಕಗಳು ಸಿಕ್ಕಿಲ್ಲವಾದರೂ.. 4ನೇ ದಿನಕ್ಕೆ ವಿಶ್ವದಾದ್ಯಂತ ಬಾಕ್ಸಾಫೀಸ್ ಕಲೆಕ್ಷನ್ 500 ಕೋಟಿ ದಾಟಿರುವ ಎಲ್ಲ ಸೂಚನೆಗಳನ್ನೂ ಕೆಜಿಎಫ್ ಹವಾ ನೀಡಿದೆ.

  • 5000 Kg Cake & 216 Ft Cutout For Rocking Star's Birthday

    5000 Kg Cake & 216 Ft Cutout For yash's birthday

    Rocking star Yash, who has hit the pinnacle of success for his portrayal of Rocky Bhai in one of India's sensational hits in the recent times, KGF, is set to break more records. But, this time for a personal reason through his beloved fans.

    With just three days left for his birthday (Jan 8), his die-hard fans are breaking all possible records to make it even more special for the actor. One of his greatest fans, Venugowda has arranged for a cake which weighs a whopping 5000 kilograms along with 216 feet cutout on the special occasion.

    Rocking star along with his better half Radhika Pandit are expected to attend the midnight celebrations on January 7th at Nayandahalli Nandi Link Ground, where more than 20000 Yash fans are estimated to gather, celebrating the birthday of their star actor.

    Previously, the record for heaviest cake made for a star actor is held for Bollywood actor Salman Khan, which was a 4500 Kg cake and the highest cutout record stands for Tamil actor Surya which stood at 215 feet! Now, Rocking Star beats both the records through his fans with their unconditional love and support throughout his career as an actor and for all their support for his causes including Yashomarga.

  • 5000 ಕೆಜಿ ಕೇಕ್ ಗಿನ್ನಿಸ್ ದಾಖಲೆ ಸೃಷ್ಟಿ

    5000 kg cake for rocking star's birthday

    ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ಗಿನ್ನಿಸ್ ದಾಖಲೆ ಸೃಷ್ಟಿಸಿದೆ. 34ನೇ ಹುಟ್ಟುಹಬ್ಬ ಆಚರಿಸಿದ ಯಶ್ ಈ ಬಾರಿ ಅಭಿಮಾನಿಗಳ ಅಭಿಮಾನದಿಂದ ಹೊಸ ದಾಖಲೆ ಬರೆದಿದ್ದಾರೆ. ಯಶ್ ಅಭಿಮಾನಿಗಳು 5000 ಕೇಕ್ ತಯಾರಿಸಿದ್ದರು.

    ವೇಣು ಎಂಬ ಅಭಿಮಾನಿ ಕೇಕ್‍ನ್ನು ಯಶ್ ಅವರಿಗಾಗಿ ತಯಾರು ಮಾಡಿಸಿದ್ದರು. ಇದು ಈಗ ಗಿನ್ನಿಸ್ ದಾಖಲೆ ಸೇರಿದೆ. 72 ಅಡಿ ಉದ್ದ, 40 ಅಡಿ ಸುತ್ತಳತೆಯ 5000 ಕೆಜಿ ಕೇಕ್ ಗಿನ್ನಿಸ್ ದಾಖಲೆ ಸೇರಿದೆ. ಪವನ್ ಸೋಲಂಕಿ ವರ್ಡ್ ರೆಕಾರ್ಡ್ ಸಂಸ್ಥೆಯ ಅಧಿಕಾರಿ ಇದನ್ನು ದೃಢೀಕರಿಸಿದ್ದಾರೆ.

    ಕೆಲವೇ ದಿನಗಳಲ್ಲಿ ಇದು ಗಿನ್ನಿಸ್ ದಾಖಲೆಯ ಅಧಿಕೃತ ಪುಸ್ತಕದಲ್ಲಿ ದಾಖಲೆಯಾಗಿ ಸೇರಿಕೊಳ್ಳಲಿದೆ. ಯಶ್ ಹುಟ್ಟುಹಬ್ಬಕ್ಕಾಗಿ ಬೇರೆ ರಾಜ್ಯಗಳಿಂದಲೂ ಅಭಿಮಾನಿಗಳು ಬಂದಿದ್ದುದು ವಿಶೇಷವಾಗಿತ್ತು. ಮಧ್ಯರಾತ್ರಿ ಸಂಭ್ರಮಕ್ಕೆ ಯಶ್ ಅಭಿಮಾನಿಗಳಿಗಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು.

  • 51ರಲ್ಲಿ ಕೇವಲ 16 - ಕೆಜಿಎಫ್ ಕನ್ನಡಕ್ಕೆ ಡಬ್ ಆಗಬೇಕಂತೆ.. - ಏನಿದು ವಿವಾದ..?

    kgf gets into controversy

    ಕೆಜಿಎಫ್. ಕನ್ನಡ ಚಿತ್ರರಂಗದ ಈ ಬಹುನಿರೀಕ್ಷಿತ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಜೊತೆಯಲ್ಲೇ ವಿವಾದವನ್ನೂ ಮೈಮೇಲೆ ಎಳೆದುಕೊಂಡಿದೆ. ಇಷ್ಟಕ್ಕೂ ಆಗಿರೋದು ಇಷ್ಟೆ. ಸಲಾಂ ರಾಖಿ ಭಾಯ್ ಹಾಡಿನಲ್ಲಿ ಬಹುತೇಕ ಹಿಂದಿ ಪದಗಳೇ ತುಂಬಿ ಹೋಗಿವೆ. ಮಧ್ಯೆ ಮಧ್ಯೆ ಅಲ್ಲಲ್ಲಿ ಉಪ್ಪಿನ ಕಾಯಿಯಂತೆ ಕನ್ನಡ ಪದಗಳಿವೆ ಅನ್ನೋದು ಹಲವರ ಸಿಟ್ಟಿಗೆ ಕಾರಣ. ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ್‍ನ ಈ ಹಾಡನ್ನು ಟೀಕಿಸಿದ ಕನ್ನಡಿಗರೇ ಹೆಚ್ಚು.

    ಹಾಡಿನಲ್ಲಿರೋದು ಒಟ್ಟು 51 ಪದಗಳು. ಈ 51 ಪದಗಳಲ್ಲಿ ಕನ್ನಡದ ಪದಗಳು ಇರುವುದು 16 ಪದಗಳು ಮಾತ್ರ. ಇಷ್ಟೆಲ್ಲ ಲೆಕ್ಕಾಚಾರವನ್ನೂ ಕನ್ನಡ ಪ್ರೇಮಿಗಳೇ ಹಾಕಿದ್ದಾರೆ ಎನ್ನುವುದು ವಿಶೇಷ.

    ಕನ್ನಡ ಚಿತ್ರವೊಂದು ದೇಶ, ವಿದೇಶಗಳ ಗಡಿಯಲ್ಲಿ ಸದ್ದು ಮಾಡುತ್ತಿರುವಾಗ ಇಂಥ ವಿವಾದ ಬೇಕಾ ಎನ್ನುವವರು ಒಂದು ಕಡೆಯಿದ್ದರೆ, ಕನ್ನಡವೇ ಇಲ್ಲದ ಸಿನಿಮಾ ಸದ್ದು ಮಾಡಿದರೆ, ಕನ್ನಡಕ್ಕೇನು ಲಾಭ ಎನ್ನುವವರು ಮತ್ತೊಂದು ಕಡೆ. ಈ ಎಲ್ಲ ವಿವಾದಗಳ ನಡುವೆಯೂ ಕೆಜಿಎಫ್ ಸದ್ದು ಮಾತ್ರ ಜೋರಾಗಿಯೇ ಇದೆ.

  • 600 ಕೋಟಿ ಕ್ಲಬ್'ಗೆ ಕೆಜಿಎಫ್

    600 ಕೋಟಿ ಕ್ಲಬ್'ಗೆ ಕೆಜಿಎಫ್

    ದಾಖಲೆಗಳನ್ನೆಲ್ಲ ಪುಡಿಗಟ್ಟಿ ಮುನ್ನುಗ್ಗುತ್ತಿರೋ ಕೆಜಿಎಫ್ ಚಾಪ್ಟರ್ 2 ಈಗ 600 ಕೋಟಿ ಕ್ಲಬ್ ಸೇರಿದೆ. ಈ ಲಿಸ್ಟಿಗೆ ಅತ್ಯಂತ ವೇಗವಾಗಿ ಸೇರಿದ ಸಿನಿಮಾ ಎಂಬ ದಾಖಲೆ ಈಗ ಕೆಜಿಎಫ್‍ನದ್ದು. ಆ ದಾರಿಯಲ್ಲಿ ಕೆಜಿಎಫ್, ಅಮೀರ್ ಖಾನ್‍ರ ದಂಗಲ್ ಚಿತ್ರದ ವೇಗದ ಗಳಿಕೆಯ ದಾಖಲೆಯನ್ನು ಮೀರಿಸಿದೆ. ದಂಗಲ್ ಆಗ ಒಂದು ವಾರದಲ್ಲಿ 197 ಕೋಟಿ ಕಲೆಕ್ಷನ್ ಮಾಡಿತ್ತು.

    ಕನ್ನಡದಲ್ಲಿಯೇ ಬಾಕ್ಸಾಫೀಸ್ ಗಳಿಕೆ 100 ಕೋಟಿ ದಾಟಿದ್ದು, ಹಿಂದಿಯಲ್ಲಿ 200 ಕೋಟಿ ದಾಟಿದೆ. ತಮಿಳುನಾಡು ಮತ್ತು ಕೇರಳದಲ್ಲಿಯೂ ಲಾಭದಲ್ಲಿರೋ ಕೆಜಿಎಫ್ ಹೊಸ ಇತಿಹಾಸವನ್ನೇ ಬರೆಯುತ್ತಿದೆ. 600 ಕೋಟಿ ದಾಟಿರೋ ಕೆಜಿಎಫ್ ಗಳಿಕೆ 1000 ಕೋಟಿ ಮುಟ್ಟುವ ಎಲ್ಲ ಸಾಧ್ಯತೆಗಳೂ ಇವೆ.

  • 6ನೇ ವಾರಕ್ಕೆ ಕೆಜಿಎಫ್ ಚಾಪ್ಟರ್ 2

    6ನೇ ವಾರಕ್ಕೆ ಕೆಜಿಎಫ್ ಚಾಪ್ಟರ್ 2

    ಕೆಜಿಎಫ್ ಚಾಪ್ಟರ್ 2 ದಾಖಲೆಗಳ ಬೇಟೆ ಮುಗಿದಿಲ್ಲ. ಈಗಾಗಲೇ 1210 ಕೋಟಿ ಮುಟ್ಟಿರುವ ಬಾಕ್ಸಾಫೀಸ್ ಕಲೆಕ್ಷನ್ ಇಂಡಿಯಾ ಲೆವೆಲ್‍ನಲ್ಲಿ ಹೊಸ ದಾಖಲೆಯನ್ನೇ ಬರೆದಾಗಿದೆ. ಈಗ ಯಶಸ್ವೀ 6ನೇ ವಾರಕ್ಕೆ ಕಾಲಿಟ್ಟಿದೆ. ಇದರ ಜೊತೆ 50ನೇ ದಿನ ಪೂರೈಸುವತ್ತಲೂ ದಾಪುಗಾಲಿಟ್ಟಿದೆ.

    ಒಟಿಟಿಯಲ್ಲಿ 199 ರೂ.ಗೆ ಪೇ & ವ್ಯೂಗೆ ಲಭ್ಯವಿದ್ದರೂ ಥಿಯೇಟರಿಗೆ ಬರುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. 6ನೇ ವಾರದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ ಕೆಜಿಎಫ್ ಚಾಪ್ಟರ್ 2.

    ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಪ್ರಧಾನ ಪಾತ್ರದಲ್ಲಿರೋ ಕೆಜಿಎಫ್ ಚಾಪ್ಟರ್ 2 ನಿರ್ದೇಶಕ ಪ್ರಶಾಂತ್ ನೀಲ್ ಫುಲ್ ಖುಷಿಯಾಗಿದ್ದಾರೆ. ಎಲ್ಲರಿಗಿಂತಲೂ ಹೆಚ್ಚು ಖುಷಿಯಾಗಿರೋದು ಹೊಂಬಾಳೆ ಮತ್ತು ವಿಜಯ್ ಕಿರಗಂದೂರು. ಇತ್ತ ರಿಲೀಸ್ ಆದ ಪ್ರತಿ ಭಾಷೆಯಲ್ಲೂ  ವಿತರಕರಿಗೆ ಅತೀ ಹೆಚ್ಚು ಶೇರ್ ಕೊಟ್ಟ ದಾಖಲೆಯೂ ಕೆಜಿಎಫ್‍ನದ್ದೇ.

  • 7ನೇ ದಿನಕ್ಕೆ 700 ಕೋಟಿ..

    7ನೇ ದಿನಕ್ಕೆ 700 ಕೋಟಿ..

    ಕೆಜಿಎಫ್ ರಿಲೀಸ್ ಆಗಿ 7ನೇ ದಿನಕ್ಕೆ 700 ಕೋಟಿ ಕ್ಲಬ್ ಸೇರಿದೆ. ಇದು ದಾಖಲೆಯೇ. ಏಕೆಂದರೆ ಈ ಹಾದಿಯಲ್ಲಿ ಪ್ರತಿದಿನವೂ ಒಂದೊಂದು.. ಎರಡೆರಡು ಚಿತ್ರಗಳ ದಾಖಲೆಯನ್ನು ಮುರಿಯುತ್ತಲೇ ಸಾಗಿದೆ. ದಾಖಲೆಗಳಿರೋದೇ ಬ್ರೇಕ್ ಮಾಡೋಕೆ ಎನ್ನುವಂತೆ ಮುನ್ನುಗ್ಗುತ್ತಿರೋ ಕೆಜಿಎಫ್ ಚಾಪ್ಟರ್ 2, ಈಗ 700 ಕೋಟಿ ಕ್ಲಬ್ ಸೇರಿದೆ. ಪ್ರತಿ ದಿನವೂ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡೋದು ಸುಲಭವಲ್ಲ.

    ಈ ಹಾದಿಯಲ್ಲೀಗ ಕೆಜಿಎಫ್ ಆರ್.ಆರ್.ಆರ್. ಚಿತ್ರವನ್ನೂ ಹಿಂದಿಕ್ಕಿದೆ. ಹಿಂದಿಯಲ್ಲಿ 250 ಕೋಟಿ ಕ್ಲಬ್ ಸೇರಿದೆ. ಕನ್ನಡದಲ್ಲಿ 150 ಕೋಟಿ ಗುರಿ ಮುಟ್ಟುವ ಹಾದಿಯಲ್ಲಿದೆ. ತೆಲುಗಿನಲ್ಲೂ 100 ಕೋಟಿ ಮಾಡಿರೋ ಕೆಜಿಎಫ್, ತಮಿಳು ಮತ್ತು ಮಲಯಾಳಂನಲ್ಲೂ ಮೋಡಿ ಮಾಡುತ್ತಿದೆ. ವಿದೇಶಗಳಲ್ಲೂ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿದೆ.

  • Adilakshmi Purana Trailer Released

    adi lakshmi purana image

    Radhika Pandith's comeback film after marriage, 'Adilakshmi Purana' is all set for release on the 19th of July. Meanwhile, the trailer of the film was released recently.

    Actor Yash released the trailer of the film in an event held in Bangalore. The event was attended by Yash, Radhika Pandith and others.

    'Adilakshmi Purana' is produced by Rockline Venkatesh and is written and directed by Priya. The songs of 'Adilakshmi Purana' has been composed by Anup Bhandari. The film stars Nirup Bhandari, Radhika Pandith, Tara, Suchendra Prasad, Joe Simon, Yash Shetty and others in prominent roles.

  • Akira Producer Donates 10 Lakhs To Yashomarga

    yash, anish image

    Producer Chethan of Aneesh Tejeshwar starrer 'Akira' has donated Rs 10 lakhs to Yash's Yashomarga Foundation which is doing charity by distributing drinking water to thousands of people in drought struck villages in the northern parts of Karnataka.

    Recently, Yash had started Yashomarga Foundation and has distributed free drinking water to drought struck villages in North Karnataka. Now 'Akira' producer Chethan has lent his helping hand to Yashomarga foundation and has donated Rs 10 lakh towards charity

    Meanwhile, 'Akira' is running successfully and sources say the film has earned 3.25 crores in the first week.

  • Anil Thadani To Distribute KGF In Hindi? 

    yash meets anil thadani in mumbai

    Top Bollywood distributor Anil Thadani may be releasing Yash starrer KGF in Hindi. Yash, director Prashant Neel and producer Vijay Kiragandu met the top distributor in Mumbai this week leading to speculation. Thadani is considered one of the top most distributors of Bollywood.

    He has released half the films of Karan Johar. His last big distribution success is Stree last month. Thadani is more popularly known to Kannada audience as Raveena Tandon's husband. KGF is made on a mega scale and is being released in five languages. Kiragundur himself is a top distributor in Kannada. The film is being marketed aggressively in Tamil, Telugu and Malayalam. It was speculated that a big time distributor will promote the film in Hindi. It is likely to be Thadani.

  • Anish Tejeshwar's New Film Maanja Launched

    maanja launched by yash

    Anish's new film 'Maanja' was launched on Tuesday in Bangalore and actor Yash sounded the clap for the first shot of the film.

    'Maanja' is being directed by Dr Soori who is a very close friend of Yash. In fact, Yash recommended Anish to act under Dr Soori's films after 'Akira'. Chethan Reddy who had produced 'Akira' is producing this film also along with S S Reddy and Shreekanth Prasanna.

    The songs of the film is composed by Ajaneesh Lokanath and the cinematographer is Rasool Ellore.

    Related Posts:-

    Anish Tejeshwar's New Film Titled Maanja

     

     

  • Ayra's Flying Kiss To Her Brother

    ayra's flying kiss to her brother

    The eleven month old sweetheart - Ayra, daughter of Yash and Radhika Pandit gives flying kisses to her newborn baby brother! It was revealed by none other than Rocking star Yash, who along with Ayra and his family members had been to the private hospital after Radhika was discharged, welcoming the mother and newborn baby to their home.

    The actor shared that he was busy working when Ayra was born but this time he took some time off from work and even Ayra is very happy welcoming her brother, to whom she gives flying kisses.

    He goes on to add that both his children and the mother are doing good.