ಒಬ್ಬ ನಟರ ಬಗ್ಗೆ, ನಾಯಕರ ಬಗ್ಗೆ ಒಬ್ಬೊಬ್ಬರ ಅಭಿಪ್ರಾಯವೂ ಒಂದೊಂದು ರೀತಿ ಇರುತ್ತೆ. ಅಂಥಾದ್ದರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಕಣ್ಣಲ್ಲಿ ಕರ್ನಾಟಕದ, ದೇಶದ ನಾಯಕರ ಬಗ್ಗೆ, ಚಿತ್ರರಂಗದ ಇತರೆ ಸ್ಟಾರ್‍ಗಳ ಬಗ್ಗೆ ತಮ್ಮದೇ ಆದ ಅಭಿಪ್ರಾಯ ಮುಂದಿಟ್ಟಿದ್ದಾರೆ.
ಯಶ್ ಕಂಡಂತೆ ಮೋದಿ - ಚಾಯ್‍ವಾಲಾ ಒಬ್ಬರು ದೇಶದ ಪ್ರದಾನಿಯಾಗುವುದು ಸುಲಭದ ಮಾತಲ್ಲ. ದೇಶಕ್ಕಾಗಿ ಇಡೀ ಜೀವನವನ್ನೇ ಮುಡುಪಾಗಿಟ್ಟು, ಅಭಿವೃದ್ಧಿಯ ಕನಸು ನನಸು ಮಾಡಲು ಶ್ರಮಿಸುತ್ತಿದ್ದಾರೆ.
ಯಶ್ ಕಂಡಂತೆ ಸಿದ್ದರಾಮಯ್ಯ - ತುಂಬಾ ಗಟ್ಟಿ ನಾಯಕ. ಯಾವುದೇ ಸಮಸ್ಯೆ ಇರಲಿ, ಅದಕ್ಕೆ ಕೂಲ್ ಆಗಿ ಕೌಂಟರ್ ಕೊಟ್ಟು ಹೋಗುವ ಕಲೆ ಅವರಿಗೆ ಸಿದ್ಧಿಸಿದೆ.
ಯಶ್ ಕಂಡಂತೆ ದೇವೇಗೌಡ - ಇಡೀ ದೇಶವನ್ನು ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ ನಾಯಕ. ದೊಡ್ಡತನ ಮೆರೆದುಬಿಡುತ್ತಾರೆ. ಅವರ ನಡವಳಿಕೆ ನಮಗೆ ಕೆಲವು ಸಲ ಮುಜುಗರ ಉಂಟು ಮಾಡುತ್ತೆ. ನಾವು ಅವರ ಮನೆಗೆ ಮದುವೆ ಆಹ್ವಾನ ಪತ್ರಿಕೆ ಕೊಡಲು ಹೋದಾಗ, ಅವರಿಗೆ ಹಾಕಲು ತೆಗೆದುಕೊಂಡು ಹೋಗಿದ್ದ ಹಾರವನ್ನು ನಮಗೆ ಹಾಕಿ ಶುಭ ಹಾರೈಸಿದರು. ಅವರ ದೊಡ್ಡತನದ ಎದುರು ಮೂಕನಾಗಿ ಹೋಗಿದ್ದೆ.
ಯಶ್ ಕಂಡಂತೆ ಯಡಿಯೂರಪ್ಪ - ಹುಟ್ಟು ಹೋರಾಟಗಾರರು. ಶ್ರಮಜೀವಿ. ನಿದ್ದೆ ಬಿಟ್ಟು ಜನರಿಗಾಗಿ ಕೆಲಸ ಮಾಡುವ ವ್ಯಕ್ತಿ
ಯಶ್ ಕಂಡಂತೆ ಕುಮಾರಸ್ವಾಮಿ - ತುಂಬಾ ಸರಳ ವ್ಯಕ್ತಿ. ಹಿರಿಯರು, ಕಿರಿಯರೆನ್ನದೆ ಎಲ್ಲರಿಗೂ ಗೌರವ ಕೊಡುತ್ತಾರೆ. ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ.
ಯಶ್ ಕಂಡಂತೆ ಪುನೀತ್ - ಅವರ ಸರಳತೆಯೇ ನನಗೆ ತುಂಬಾ ಇಷ್ಟ. ಎಲ್ಲವೂ ಇದ್ದು, ತಾನು ಮಾತ್ರ ಏನೇನೂ ಅಲ್ಲವೇನೋ ಎಂಬಂತೆ ಬದುಕುವ ಅವರ ವ್ಯಕ್ತಿತ್ವವೇ ಸೂಪರ್.
ಯಶ್ ಕಂಡಂತೆ ಸುದೀಪ್ - ಅದೊಂಥರಾ ಆಳೆತ್ತರದ ಕಲಾಕೃತಿ. ನನಗೆ ಅವರ ವಾಯ್ಸ್ ಇಷ್ಟ. ಅವರ ವಾಯ್ಸ್‍ನಲ್ಲಿ ಎಂಥದ್ದೋ ಶಕ್ತಿ ಇದೆ.
ಯಶ್ ಕಂಡಂತೆ ದರ್ಶನ್ - ಕನ್ನಡ ಚಿತ್ರರಂಗದ ಮಾಸ್ ಹೀರೋ ಅವರು. ಅವರ ಎದುರು ನಿಂತರೆ ಬೇರೆಯವರು ಕಾಣೋದಿಲ್ಲ. ಕುರುಕ್ಷೇತ್ರದ ಫೋಟೋ ನೋಡಿದಾಗ, ಇವರು ನಮ್ಮವರು ಎಂಬುದೇ ಹೆಮ್ಮೆ ಮೂಡಿಸಿತು.
ಯಶ್ ಕಂಡಂತೆ ಜಗ್ಗೇಶ್ - ಅವರೊಬ್ಬರು ಜಒತೆಯಲ್ಲಿದ್ದರೆ, ಎಂಥ ಒತ್ತಡದಲ್ಲೂ ನಗು ನಗುತ್ತಾ ಬದುಕಿಬಿಡಬಹುದು. ಒತ್ತಡವೇ ಇರೋದಿಲ್ಲ. ಯಾರಿಗೆ ಏನೇ ಕಷ್ಟ ಬಂದರೂ ಮೊದಲು ನುಗ್ಗುವ ವ್ಯಕ್ತಿ ಜಗ್ಗೇಶ್. ಕನ್ನಡ ನಾಡು, ನುಡಿ ವಿಚಾರದಲ್ಲಿ ಅವರಿಗೆ ತುಂಬಾ ಅಭಿಮಾನ.