` yash, - chitraloka.com | Kannada Movie News, Reviews | Image

yash,

  • ಅಖಾಡಕ್ಕೆ ರಾಕಿಭಾಯ್-ಅಧೀರ

    KGF Chapter 2 Final Schedule Shoot To Resume From Today

    ಕೆಜಿಎಫ್ ಚಾಪ್ಟರ್ 2 ಚಿತ್ರದ ಇನ್ನೊಂದು ಬ್ರೇಕ್ ಕೊನೆಯಾಗುತ್ತಿದೆ. ಇಂದಿನಿಂದ ಅಂದ್ರೆ ಗುರುವಾರದಿಂದ ಕೆಜಿಎಫ್ ಅಖಾಡಕ್ಕೆ ರಾಕಿಭಾಯ್ ಮತ್ತು ಅಧೀರ ಇಬ್ಬರೂ ಎಂಟ್ರಿ ಕೊಡುತ್ತಿದ್ದಾರೆ. ಇದು ಚಾಪ್ಟರ್ 2ನ ಕೊನೆಯ ಹಂತದ ಚಿತ್ರೀಕರಣ. ಇದಾದ ಬಳಿಕ ಕಂಪ್ಲೀಟ್ ಪೋಸ್ಟ್ ಪ್ರೊಡಕ್ಷನ್‍ಗೆ ಹೋಗಲಿದೆ ಕೆಜಿಎಫ್ ಚಾಪ್ಟರ್ 2.

    ಈ ತಿಂಗಳ ಅಂತ್ಯಕ್ಕೆ ಚಿತ್ರೀಕರಣ ಮುಗಿಸಿ ನಾವು ಚಿತ್ರದ ಬಿಡುಗಡೆಯತ್ತ ಸಾಗಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ ನಿರ್ಮಾಪಕರಲ್ಲೊಬ್ಬರಾದ ಹೊಂಬಾಳೆ ಫಿಲಂಸ್‍ನ ಕಾರ್ತಿಕ್ ಗೌಡ.

    2019ರಲ್ಲಿ ಇಂಡಿಯಾ ಲೆವೆಲ್ಲಿಗೆ ಹಿಟ್ ಆಗಿದ್ದ ಕೆಜಿಎಫ್ ಚಾಪ್ಟರ್ 1ನ ಮುಂದುವರಿದ ಭಾಗವೇ ಕೆಜಿಎಫ್ ಚಾಪ್ಟರ್ 2. ಕೊರೊನಾ ಕಾಟ ಇಲ್ಲದೇ ಹೋಗಿದ್ದರೆ ಇದೇ ಅಕ್ಟೋಬರ್‍ನಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾ. ಯಶ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಅವರನ್ನು ನ್ಯಾಷನಲ್ ಲೆವೆಲ್ಲಿನಲ್ಲಿ ಗುರುತಿಸುವಂತೆ ಮಾಡಿದ್ದ ಸಿನಿಮಾ ಇದು. ಹೀಗಾಗಿಯೇ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಇಡೀ ಭಾರತೀಯ ಚಿತ್ರರಂಗ ಕುತೂಹಲದಿಂದ ಎದುರು ನೋಡುತ್ತಿದೆ.

  • ಅಡುಗೆ ಭಟ್ಟನಾದರು ರಾಕಿಂಗ್ ಸ್ಟಾರ್

    yash cooks for his wife radhika pandit

    ರಾಕಿಂಗ್ ಸ್ಟಾರ್ ಯಶ್, ಅಡುಗೆ ಭಟ್ಟನಾಗಿದ್ದಾರೆ. ಮೊಗ್ಗಿನ ಮನಸ್ಸಿನ ಹುಡುಗಿಗಾಗಿ. ಪತ್ನಿ ರಾಧಿಕಾ ಪಂಡಿತ್‍ಗಾಗಿ ಅಡುಗೆ ಮಾಡಿ ಬಡಿಸಿದ್ದಾರೆ ಯಶ್.ಗರ್ಭಿಣಿಯಾಗಿರುವ ರಾಧಿಕಾ ಪಂಡಿತ್‍ಗೆ ಇದು ಬಸುರಿ ಬಯಕೆಯಾ..? ಗೊತ್ತಿಲ್ಲ. ಪತ್ನಿ ಕೇಳಿದ್ದೆಲ್ಲವನ್ನೂ ಪ್ರೀತಿಯಿಂದ ಮಾಡುವ ಯಶ್, ಈ ಬಾರಿ ಅಡುಗೆ ಮಾಡಿದ್ದಾರೆ. 

    ಪರವಾಗಿಲ್ಲ, ಕೆಟ್ಟ ಅಡುಗೆ ಭಟ್ಟನೇನೂ ಅಲ್ಲ. ಎಷ್ಟೆಂದ್ರೂ ರಾಕಿಂಗ್ ಸ್ಟಾರ್ ಅಲ್ವಾ.. ಎಂದು ಕಿಚಾಯಿಸಿದ್ದಾರೆ ರಾಧಿಕಾ ಪಂಡಿತ್.

  • ಅತಿರೇಕದ ಅಭಿಮಾನಿಗಳಿಗೆ ಈಗ ಯಶ್‍ರಿಂದಲೂ ಬುದ್ದಿವಾದ

    yash requests fans not to dlow things out of proportion

    ಕಿಚ್ಚ ಸುದೀಪ್, ಯಶ್‍ಗೆ ಫಿಟ್‍ನೆಸ್ ಚಾಲೆಂಜ್ ಹಾಕಿದ್ದೂ, ಅದನ್ನು ಸ್ವೀಕರಿಸಿ ಯಶ್ ಕೂಡಾ ಫಿಟ್‍ನೆಸ್ ವಿಡಿಯೋ ಮಾಡಿದ್ದು ಒಂದು ಹಂತವಾದರೆ, ಆ ವಿಡಿಯೋದಲ್ಲಿ ಸುದೀಪ್ ಅವರನ್ನು ಸುದೀಪ್ ಸರ್ ಎನ್ನಲಿಲ್ಲ ಎಂದು ಕಿಚ್ಚನ ಅಭಿಮಾನಿಗಳು ಸಿಟ್ಟಾಗಿದ್ದು ಇನ್ನೊಂದು ಕಥೆ. ಸ್ವತಃ ಸುದೀಪ್ ತಮ್ಮ ಅಭಿಮಾನಿಗಳಿಗೆ ಯಶ್‍ರನ್ನು ಬಯ್ಯಬೇಡಿ ಎಂದು ಕೇಳಿಕೊಂಡರೂ ವಾರ್ ನಿಲ್ಲಲಿಲ್ಲ. ಯಶ್ ಅಭಿಮಾನಿಗಳೂ ಅತಿರೇಕಕ್ಕೆ ಹೋಗಿಬಿಟ್ಟರು. ಈಗ ತಮ್ಮ ಅಭಿಮಾನಿಗಳಿಗೆ ಯಶ್ ಕೂಡಾ ಬುದ್ದಿವಾದ ಹೇಳಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆ ಒಳ್ಳೆಯದಲ್ಲ. ಕೆಲವು ಕಮೆಂಟ್ಸ್‍ಗಳನ್ನೂ ನಾನು ಗಮನಿಸಿದ್ದೇನೆ. ಸುದೀಪ್ ಅವರು ನನಗಿಂತ ಹಿರಿಯರು. ಅವರಿಗೆ ಗೌರವ ಕೊಡಲಿಲ್ಲ ಅಂದ್ರೆ, ನನಗೂ ನೀವು ಗೌರವ ಕೊಡದಂತೆಯೆ. ಘನತೆಯಿಂದ ವರ್ತಿಸಿ. ಇದನ್ನು ದೊಡ್ಡದು ಮಾಡಬೇಡಿ. 

    ನಾನು ಸಾರ್ ಅಂತ ಕರೆದರೆ ಮಾತ್ರ ಅವರಿಗೆ ಗೌರವ ಕೊಟ್ಟ ಹಾಗಲ್ಲ. ಅಥವಾ ನಾನು ಅಂತ ಕರೆಯದೇ ಇದ್ರೂ ಅವರ ಮೇಲಿನ ಗೌರವ ಕಮ್ಮಿಯಾಗಲ್ಲ. ನಾನು ಅವರನ್ನ ತುಂಬಾ ಗೌರವಿಸ್ತೀನಿ. ನನ್ನ ಮೇಲಿನ ಅಭಿಮಾನ ತೋರಿಸಿಕೊಳ್ಳೋಎಕ ಅವರನ್ನು ಅಗೌರವದಿಂದ ಕಾಣೋದು ಸರಿಯಲ್ಲ. ಇದನ್ನ ಇಲ್ಲಿಗೆ ಬಿಡಿ.

    ಈಗ ಇಬ್ಬರೂ ಸ್ಟಾರ್‍ಗಳು ತಮ್ಮ ತಮ್ಮ ಅಭಿಪ್ರಾಯ ಹೇಳಿದ್ಧಾಗಿದೆ. ಅತಿರೇಕದ ಅಭಿಮಾನಿಗಳು ಈಗಲಾದರೂ ವಾಸ್ತವ ಅರ್ಥ ಮಾಡಿಕೊಳ್ತಾರಾ..?

  • ಅಧೀರ ಖುಷ್ ಹುವಾ

    ಅಧೀರ ಖುಷ್ ಹುವಾ

    ಕೆಜಿಎಫ್ ಚಾಪ್ಟರ್ 2 ಚಿತ್ರದ ಒಂದೊಂದೇ ಕೆಲಸಗಳು ಮುಗಿಯುತ್ತಾ ಬರುತ್ತಿವೆ. ಇದರ ನಡುವೆಯೇ ಬಂದ ಸಂಜಯ್ ದತ್ ಹುಟ್ಟುಹಬ್ಬವನ್ನು ಕೆಜಿಎಫ್ ತಂಡ ವಿಶೇಷವಾಗಿಯೇ ಸೆಲಬ್ರೇಟ್ ಮಾಡಿದೆ. ಸಂಜಯ್ ದತ್ ಚಿತ್ರದಲ್ಲಿ ಅಧೀರನ ಪಾತ್ರ ನಿರ್ವಹಿಸುತ್ತಿದ್ದು, ಆ ಪಾತ್ರದ ಪೋಸ್ಟರ್ ಹೊರಬಿಟ್ಟಿದೆ ಕೆಜಿಎಫ್ ಟೀಂ.

    ಪ್ರಶಾಂತ್ ನೀಲ್ ಅವರ ಕಸುಬುದಾರಿಕೆ ಪೋಸ್ಟರ್‍ನಲ್ಲಿ ಎದ್ದು ಕಾಣುತ್ತಿದೆ. ಯಶ್ ಹೀರೋ ಆಗಿದ್ದರೆ, ಸಂಜಯ್ ದತ್ ಚಿತ್ರದ ಪ್ರಮುಖ ವಿಲನ್ ಅಧೀರ. ಪೋಸ್ಟರ್ ಹೊರಬಿದ್ದಿದ್ದೇ ತಡ, ಅಭಿಮಾನಿಗಳು ಹಬ್ಬವನ್ನೇ ಮಾಡಿಕೊಂಡಿದ್ದಾರೆ. ಅಭಿಮಾನಿಗಳ ಸಂಭ್ರಮ, ಸಂಜುಬಾಬಾಗೂ ಖುಷಿ ಕೊಟ್ಟಿದೆ.

    ಕೆಜಿಎಫ್ ಗಾಗಿ ಕೆಲಸ ಮಾಡಿದ್ದು ಒಂದು ಅದ್ಭುತ ಅನುಭವ. ನೀವೆಲ್ಲ ಈ ಚಿತ್ರಕ್ಕಾಗಿ ಎಷ್ಟು ಕಾತುರದಿಂದ ಕಾಯುತ್ತಿದ್ದೀರಿ ಎಂದು ಗೊತ್ತು. ಈ ಚಿತ್ರ ಖಂಡಿತಾ ನಿಮಗೆ ನಿರಾಸೆ ಮಾಡಲ್ಲ ಎಂದು ಭರವಸೆಯನ್ನೂ ಕೊಟ್ಟಿದ್ದಾರೆ ಸಂಜಯ್ ದತ್.

  • ಅಪೇಕ್ಷಾ ಪುರೋಹಿತ್ ಸಿನಿಮಾಗೆ ರಾಕಿಂಗ್ ಸ್ಟಾರ್ ಸಾಥ್

    yash to launch trailer of apeksha purohith;s movie

    ಅಪೇಕ್ಷಾ ಪುರೋಹಿತ್ ಅಭಿನಯದ ಸಾಗುತ ದೂರ ದೂರಾ ಚಿತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ಸಾಥ್ ಕೊಟ್ಟಿದ್ದಾರೆ. ಸಿನಿಮಾದ ಟ್ರೇಲರ್ ರಿಲೀಸ್ ಮಾಡ್ತಿರೋದು ಅವರೇ. ಅಮಿತ್ ಪೂಜಾರಿ ನಿರ್ಮಾಣದ ಚಿತ್ರಕ್ಕೆ ರವಿತೇಜ ನಿರ್ದೇಶಕ.

    ಚಿತ್ರದ ಟ್ರೇಲರ್ ಬಿಡುಗಡೆ ಮಾಡ್ತಿರೋದು ಯಶ್. ಅಂದಹಾಗೆ ಅಪೇಕ್ಷಾ ಪುರೋಹಿತ್, ನಿರ್ದೇಶಕ ಪವನ್ ಒಡೆಯರ್ ಅವರ ಪತ್ನಿ. ಯಶ್‍ಗೆ ಗೂಗ್ಲಿ ಮೂಲಕ ಒಳ್ಳೆಯ ಬ್ರೇಕ್ ಕೊಟ್ಟಿದ್ದವರು ಪವನ್ ಒಡೆಯರ್. 

    ಚಿತ್ರದಲ್ಲಿ ತಾಯಿ-ಮಗನ ಬಾಂಧವ್ಯದ ಕಥೆಯಿದ್ದು, ಅಪೇಕ್ಷಾ ಪುರೋಹಿತ್ ಚಿತ್ರದ ಬಗ್ಗೆ ಥ್ರಿಲ್ಲಾಗಿದ್ದಾರೆ. ಮದುವೆಯ ನಂತರ ರಿಲೀಸ್ ಆಗುತ್ತಿರುವ ಅವರ ಮೊದಲ ಚಿತ್ರ ಸಾಗುತ ದೂರ ದೂರ. 

  • ಅಪ್ಪನ ಬರ್ತ್‍ಡೇಗೆ ಮಗಳು ಐರಾ ಕೇಕ್ ತಯಾರಿ

    yash's daughter ayra prepares cake for yash

    ಅಭಿಮಾನಿಗಳು 5 ಸಾವಿರ ಕೆಜಿ ತಯಾರಿಸಿದ್ರೆ, ಮಗಳು ಐರಾ ಪುಟಾಣಿ ಕೇಕ್ ತಯಾರಿಸಿದ್ದಾಳೆ. ಯಶ್ ಹುಟ್ಟುಹಬ್ಬಕ್ಕೆ ಸ್ವತಃ ಕೇಕ್ ತಯಾರಿಸುವುದು ರಾಧಿಕಾ ಪಂಡಿತ್ ಅನುಸರಿಸ್ತಿರೋ ಪದ್ಧತಿ. ಈ ಬಾರಿ ರಾಧಿಕಾ ಕೇಕ್ ತಯಾರಿಗೆ ಸಾಥ್ ಕೊಟ್ಟಿರೋದು ಐರಾ.

    ಅಫ್‍ಕೋರ್ಸ್.. ಕೇಕ್ ಮಾಡಿದ್ದಕ್ಕಿಂತ ಚಾಕೊಲೇಟ್, ಕ್ರೀಮನ್ನು ತಿಂದಿದ್ದೇ ಹೆಚ್ಚು. ಯಶ್ ಬರ್ತ್‍ಡೇಗೆ ಕೇಕ್ ತಯಾರಿಸಿ ಡಾಡಾಗೊಂದು ವಿಶ್ ಹೇಳಿದ್ದಾಳೆ ಐರಾ. 

  • ಅಪ್ಪು ಎಕ್ಸ್`ಪ್ರೆಸ್ : ಕೊಟ್ಟ ಮಾತು ಉಳಿಸಿಕೊಂಡ ಯಶ್, ಕೆವಿಎನ್ ವೆಂಕಟ್, ಚಿರಂಜೀವಿ, ಸೂರ್ಯ

    ಅಪ್ಪು ಎಕ್ಸ್`ಪ್ರೆಸ್ : ಕೊಟ್ಟ ಮಾತು ಉಳಿಸಿಕೊಂಡ ಯಶ್, ಕೆವಿಎನ್ ವೆಂಕಟ್, ಚಿರಂಜೀವಿ, ಸೂರ್ಯ

    ಸಜ್ಜನಿಕೆಯಿಂದ, ಧಾರಾಳ ಮನಸ್ಸಿನಿಂದ, ಎಂದೆಂದಿಗೂ ಮರೆಯಲಾಗದ ನೆನಪಾಗಿರುವವರು ನಮ್ಮೆಲ್ಲರ ಕಣ್ಮಣಿ ಡಾ. ಪುನೀತ್ ರಾಜ್ಕುಮಾರ್. ಅವರು ಯಾವಾಗಲೂ ನಮ್ಮೊಂದಿಗೆ ಇರಬೇಕೆಂದರ, ಅವರು ಮಾಡುತ್ತಿದ್ದ ಕೆಲಸಗಳನ್ನು ಮುಂದುವರಿಸುವುದರಿಂದ ಮಾತ್ರ ಸಾಧ್ಯ. ಆ ಆಶಯದಿಂದ, ಆ ಕನಸಿನಿಂದ ಶುರುವಾಗಿದ್ದು ಅಪ್ಪು ಎಕ್ಸ್ಪ್ರೆಸ್ ಆಂಬುಲೆನ್ಸ್. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಒಂದೊಂದು ಈ ಆಂಬುಲೆನ್ಸ್ ಇರಬೇಕು ಎಂಬುದು ನನ್ನ ಮತ್ತು ನನ್ನ ಪ್ರಕಾಶ್ ರಾಜ್ ಫೌಂಡೇಷನ್ನ ಕನಸು. ಮೈಸೂರಿನಲ್ಲಿ ಮೊದಲ ಆಂಬುಲೆನ್ಸ್ ಶುರು ಮಾಡಿದೆವು. ಮುಂದಿನ ಭಾಗವಾಗಿ ಐದು ಆಂಬುಲೆನ್ಸ್ ನಮ್ಮ ಮುಂದಿವೆ. ಬೀದರ್, ಕಲಬುರಗಿ, ಉಡುಪಿ, ಕೊಳ್ಳೆಗಾಲ, ಕೊಪ್ಪಳ ಜಿಲ್ಲೆಗಳಿಗೆ ನೀಡಲಾಗಿದೆ.

    ಹೀಗೊಂದು ವಿಡಿಯೋ ಹೊರಬಿಟ್ಟಿರುವ ಪ್ರಕಾಶ್ ರೈ ಈ ಕನಸಿನಲ್ಲಿ ನಾನೀಗ ಒಬ್ಬನೇ ಇಲ್ಲ ಎಂದಿದ್ದಾರೆ. ಅಪ್ಪು ನಿಧನದ ನಂತರ ನಟ ಪ್ರಕಾಶ್ ರೈ ಮೈಸೂರಿನಲ್ಲಿ ತಮ್ಮ ಪ್ರಕಾಶ್ ರಾಜ್ ಫೌಂಡೇಷನ್ ಮೂಲಕ 'ಪವರ್ ಸ್ಟಾರ್' ಡಾ. ಪುನೀತ್ ರಾಜ್ಕುಮಾರ್ ಅವರ ಹೆಸರಿನಲ್ಲಿ ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಿದ್ದರು. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ 'ಅಪ್ಪು ಎಕ್ಸ್ಪ್ರೆಸ್' ಹೆಸರಿನ ಆಂಬುಲೆನ್ಸ್ ಸೇವೆ ನೀಡುವುದು ಅವರ ಉದ್ದೇಶವಾಗಿತ್ತು. ಗಂಧದ ಗುಡಿ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಯಶ್ ಆಂಬುಲೆನ್ಸ್ ಕೊಡುವ ನಿಮ್ಮ ಉದ್ದೇಶಕ್ಕೆ ನಮ್ಮ ಸಹಕಾರವೂ ಇದೆ ಎಂದಿದ್ದರು. ಯಶ್ ಜೊತೆ ಕೆವಿಎನ್ ಪ್ರೊಡಕ್ಷನ್ಸ್‍ನ ವೆಂಕಟ್ ಕೂಡಾ ಕೈ ಜೋಡಿಸಿದ್ದರು.

    ಈ ಸಲ ಈ ಕನಸು ನನಸಾಗಲು ನಾನೊಬ್ಬನೇ ಕಾರಣ ಅಲ್ಲ. ನಮ್ಮ ಜೊತೆಗೆ 'ಮೆಗಾ ಸ್ಟಾರ್' ಚಿರಂಜೀವಿ, ಸೋದರ ತಮಿಳು ನಟ ಸೂರ್ಯ ಮತ್ತು ಬಹಳ ದೊಡ್ಡ ಬೆಂಬಲವಾಗಿ ನಿಂತಿರುವವರು ನಮ್ಮ ಪ್ರೀತಿಯ ಯಶ್ ಮತ್ತು ಅವರ ಸ್ನೇಹಿತ ವೆಂಕಟ್. 'ಪ್ರಕಾಶ್ ಸರ್, ನಿಮ್ಮೊಬ್ಬರದ್ದೇ ಕನಸಲ್ಲ. ಇನ್ಮೇಲೆ ಆ ಭಾರ ನಂದು ಕೂಡ ಅಂತ ಬಹಳ ದೊಡ್ಡಸ್ತಿಕೆ ಮತ್ತು ಧಾರಾಳ ಮನಸ್ಸನ್ನು ಮೆರೆದವರು ನಟ ಯಶ್ ಅವರು ಮತ್ತು ಅವರ  ಯಶೋಮಾರ್ಗ ಎಂದಿರುವ ಪ್ರಕಾಶ್ ರೈ ಇದನ್ನು ಒಂದು ದೊಡ್ಡ ಕಾರ್ಯಕ್ರಮ ಮಾಡಿ ಹೇಳಬಹುದಿತ್ತು. ಆದರೆ ಆ ಕಾರ್ಯಕ್ರಮಕ್ಕೆ ಮಾಡುವ ಖರ್ಚಿನಲ್ಲಿ ಇನ್ನೊಂದು ಆಂಬುಲೆನ್ಸ್ ಸಿಗುತ್ತೆ. ಹೀಗಾಗಿ ನಾನು ಮತ್ತು ಯಶ್ ಕಾರ್ಯಕ್ರಮ ಬೇಡ ಎಂಬ ತೀರ್ಮಾನಕ್ಕೆ ಬಂದೆವು ಎಂದಿದ್ದಾರೆ ಪ್ರಕಾಶ್ ರೈ.

    ಜೊತೆಗೆ ಇದರ ಹಿಂದೆ ರಾಜಕೀಯ ಇದೆ ಎಂಬ ಆರೋಪವೂ ಕೇಳಿ ಬಂದಿದ್ಯಂತೆ. ಇದಕ್ಕೆ ಪ್ರಕಾಶ್ ರೈ ಕೊಡುವ ಉತ್ತರ ಇದರ ಹಿಂದೆ ರಾಜಕಾರಣ ಇದೆಯಾ ಅಂತ ಕೇಳೋರು, ಕುಹಕ ಮಾತಾಡೋರು ಇರ್ತಾರೆ, ಇರಲಿ. ಹೌದು, ಇದು ರಾಜಕಾರಣನೇ. ನನ್ನ ಮತ್ತು ಯಶ್ನ ರಾಜಕಾರಣ. ಪ್ರೀತಿಯನ್ನು ಹಂಚುವ ಮಾನವೀಯತೆಯನ್ನು ಮೆರೆಯುವ, ನಮ್ಮೆಲ್ಲರ ಪ್ರೀತಿಯ ಪುನೀತ್ ರಾಜ್ಕುಮಾರ್ ಅವರನ್ನು ಸಂಭ್ರಮಿಸುವ ರಾಜಕಾರಣ. ಇದು ಪ್ರಕಾಶ್ ರೈ ಕೊಟ್ಟಿರುವ ಉತ್ತರ.

  • ಅಪ್ಪು ಸೀಟ್ ಅಲಂಕರಿಸುತ್ತಾರಾ ಯಶ್..?

    yash to host kannadadha kotiyadhipathi?

    ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡದ ಕೋಟ್ಯಧಿಪತಿ ರಿಯಾಲಿಟಿ ಶೋ ಮತ್ತೆ ಶುರುವಾಗಲಿದೆ ಎಂಬ ಸುದ್ದಿಗೆ ಈಗ ರೆಕ್ಕೆಪುಕ್ಕ ಬಂದುಬಿಟ್ಟಿದೆ. ಕಾರ್ಯಕ್ರಮವನ್ನು ಮತ್ತೆ ಶುರು ಮಾಡುವ ಬಗ್ಗೆ ಸ್ಟಾರ್ ಸುವರ್ಣದವರು ಒಂದೆರಡು ಹೆಜ್ಜೆ ಮುಂದಿಟ್ಟಿದ್ದಾರೆ. ಆದರೆ, ಸದ್ಯಕ್ಕೆ ಅವರಿಗೆ ಪುನೀತ್ ಸಿಗಲ್ಲ. ಏಕೆಂದರೆ, ಕಲರ್ಸ್ ಕನ್ನಡ ವಾಹಿನಿಯ `ಫ್ಯಾಮಿಲಿ ಪವರ್' ರಿಯಾಲಿಟಿ ಶೋ ನಡೆಸಿಕೊಡಲು ಪುನೀತ್ ಒಪ್ಪಿಕೊಂಡಿದ್ದಾರೆ. 

    ಹೀಗಾಗಿಯೇ ಜನಮೆಚ್ಚುವ ಸ್ಟಾರ್ ಹುಡುಕಾಟದಲ್ಲಿದ್ದ ಸುವರ್ಣ ವಾಹಿನಿಯವರಿಗೆ ಯಶ್ ಈ ಕಾರ್ಯಕ್ರಮ ನಿರೂಪಿಸಿದರೆ ಹೇಗೆ ಎಂಬ ಆಲೋಚನೆ ಬಂದಿದೆ. ಯಶ್ ಅವರನ್ನು ಸಂಪರ್ಕಿಸಿಯೂ ಆಗಿದೆ.

    ಆ ಕಾರ್ಯಕ್ರಮ ನಿರ್ವಹಿಸಲು ಆಫರ್ ಬಂದಿರುವುದು ನಿಜ. ಆದರೆ, ನಾನಿನ್ನೂ ಒಪ್ಪಿಕೊಂಡಿಲ್ಲ. ಮುಂದೇನಾಗುತ್ತೋ ಗೊತ್ತಿಲ್ಲ ಎಂದಿದ್ದಾರೆ ಯಶ್. ಸದ್ಯಕ್ಕೆ ಯಶ್ ಭಾಗವಹಿಸಬೇಕೋ ಬೇಡವೋ ಎಂಬ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಂಡಿಲ್ಲ. 

    ಹಾಗೆ ನೋಡಿದರೆ ಯಶ್ ಕಿರುತೆರೆಯಿಂದಲೇ ಬಣ್ಣದ ಜಗತ್ತಿಗೆ ಕಾಲಿಟ್ಟವರು. ಒಪ್ಪಿಕೊಂಡರೆ ಮತ್ತೊಮ್ಮೆ ಕಿರುತೆರೆಯಲ್ಲಿ ಮಿಂಚಲಿದ್ದಾರೆ ಯಶ್. ಅದೂ ಕನ್ನಡದ ಕೋಟ್ಯಧಿಪತಿ ಸೀಟ್‍ನಲ್ಲಿ.

  • ಅಬ್ಬಾ..! ಇತಿಹಾಸ ನಿರ್ಮಿಸುತ್ತಿದೆ ಕೆಜಿಎಫ್

    kgf breaks all records

    ಕೆಜಿಎಫ್... ಬಿಡುಗಡೆಗೆ ಮೊದಲೇ ಒಂದೊಂದೇ ಇತಿಹಾಸ ನಿರ್ಮಿಸುತ್ತಾ ಹೊರಟಿದೆ. ಬಿಡುಗಡೆಯಾಗುವುದು ಡಿಸೆಂಬರ್ ಕೊನೆಯ ವಾರದಲ್ಲಿ. ಟ್ರೇಲರ್ ರಿಲೀಸ್ ಆಗಿ ಒಂದು ವಾರವೂ ಆಗಿಲ್ಲ. ಕ್ರೇಝ್ ಮಾತ್ರ.. ಮೌಂಟ್ ಎವರೆಸ್ಟ್ ಎತ್ತರದಲ್ಲಿ ಬೆಳೆಯುತ್ತಿದೆ.

    ಕೆಜಿಎಫ್ ಚಿತ್ರದ ಟ್ರೇಲರ್ ನೋಡಿದವರ ಸಂಖ್ಯೆ 2 ಕೋಟಿ ದಾಟಿದೆ. ಕನ್ನಡದಲ್ಲಿ ಟ್ರೇಲರ್ ನೋಡಿದವರಿಗಿಂತ, ಹಿಂದಿಯ ಟ್ರೇಲರ್ ನೋಡಿದವರ ಸಂಖ್ಯೆಯೇ ಹೆಚ್ಚು. ಕೆಜಿಎಫ್ ಟ್ರೇಲರ್ ನೋಡಿದವರು, ಕನ್ನಡದ ಬಗ್ಗೆ ಗೊತ್ತಿಲ್ಲದೇ ಇರುವವರು ಯಶ್ ಬಗ್ಗೆ ಹುಡುಕಾಡುವುದು ಹೆಚ್ಚಾಗಿದೆ. ಗೂಗಲ್ ಸರ್ಚ್‍ನಲ್ಲಿಯೂ ಯಶ್ ಟಾಪ್ 10ನಲ್ಲಿದ್ದಾರೆ. ಟ್ರೆಂಡಿಂಗ್‍ನಲ್ಲಿಯೂ ಕೆಜಿಎಫ್ ಟಾಪ್‍ನಲ್ಲಿದೆ.

    ಕೆಜಿಎಫ್ ಸೃಷ್ಟಿಸುತ್ತಿರುವ ಕ್ರೇಝ್ ನೋಡಿ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಖುಷಿಯಾಗಿದ್ದಾರೆ. ಯಶ್, ಹೊಂಬಾಳೆ ಫಿಲಂಸ್, ಪ್ರಶಾಂತ್ ನೀಲ್ ಎಲ್ಲರೊಂದಿಗೆ ಖುಷಿ ಹಂಚಿಕೊಂಡಿದ್ದಾರೆ.

  • ಅಭಿಮಾನಿಗಳ ಅತಿರೇಕ - ಸುದೀಪ್ ಬುದ್ದಿವಾದ

    sudeep requests fans not to use harsh words against yash

    ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆ ನಿರಂತರವಾಗಿರುತ್ತಾರಷ್ಟೇ ಅಲ್ಲ, ಆಗಾಗ್ಗೆ ಬುದ್ದಿವಾದವನ್ನೂ ಹೇಳುತ್ತಿರುತ್ತಾರೆ. ಈ ಬಾರಿಯೂ ಹಾಗೆಯೇ ಆಗಿದೆ. ಕಿಚ್ಚ ಸುದೀಪ್, ಯಶ್‍ಗೆ ಫಿಟ್‍ನೆಸ್ ಚಾಲೆಂಜ್ ಹಾಕಿದ್ದರು. ಅದಕ್ಕೆ ಪ್ರತಿಯಾಗಿ ಟ್ವಿಸ್ಟ್ ಕೊಟ್ಟ ಯಶ್, ತಮ್ಮ ಬಾಲ್ಯಸ್ನೇಹಿತನ ವ್ಯಾಯಾಮದ ವಿಡಿಯೋ ಹಾಕಿದ್ದರು. ಆದರೆ, ಆ ವಿಡಿಯೋದಲ್ಲಿ ಯಶ್ ಆಡಿರುವ ಮಾತು, ಸುದೀಪ್ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. 

    ಇಷ್ಟಕ್ಕೂ ಆಗಿರೋದೇನಂದ್ರೆ, ಯಶ್ ತಮ್ಮ ವಿಡಿಯೋದಲ್ಲಿ ಹಾಯ್ ಸುದೀಪ್.. ಎಂದಿರೋದು. ಇಷ್ಟಕ್ಕೆ ಕೆಲವು ಅಭಿಮಾನಿಗಳು ಯಶ್ ವಿರುದ್ಧ ಮುಗಿಬಿದ್ದರು. ಸುದೀಪ್ ಅವರನ್ನು ಏಕವಚನದಲ್ಲಿ ಕರೆಯೋದು ಸರೀನಾ..? ದೊಡ್ಡವರಿಗೆ ಗೌರವ ಕೊಡಬೇಕು ಎಂದೆಲ್ಲ ಯಶ್ ವಿರುದ್ಧ ಟೀಕೆಯ ಸುರಿಮಳೆಗೈದರು. ಕೆಲವು ಹತೋಟಿ ಮೀರಿಯೂ ಬಂದವು. ಆಗ ಕಿಚ್ಚ ಸುದೀಪ್ ಅವರೇ ಅಭಿಮಾನಿಗಳಿಗೆ ಬುದ್ದಿವಾದ ಹೇಳಿದ್ದಾರೆ.

    ನನ್ನ ಅಭಿಮಾನಿಗಳಿಗೆ ನನ್ನದೊಂದು ಮನವಿ. ದಯವಿಟ್ಟು ಯಶ್ ವಿರುದ್ಧ ಯಾರೂ ಕೆಟ್ಟ ಪದ ಬಳಸಬೇಡಿ. ಅವರು ವಿಡಿಯೋದಲ್ಲಿ ನನ್ನ ಹೆಸರು ಹೇಳಿರೋದ್ರಲ್ಲಿ ತಪ್ಪೇನೂ ಇಲ್ಲ. ನನ್ನ ಫಿಟ್‍ನೆಸ್ ಚಾಲೆಂಜ್‍ನ್ನು ಸ್ವೀಕರಿಸಿರುವುದೇ ಅವರು ನನಗೆ ನೀಡಿರುವ ಗೌರವ. ದಯವಿಟ್ಟು ನನ್ನ ಮನಸ್ಸಿನ ಭಾವನೆಯನ್ನು ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ ಸುದೀಪ್.

    ಕಿಚ್ಚ ಸುದೀಪ್ ಸೇರಿದಂತೆ ಸ್ಯಾಂಡಲ್‍ವುಡ್ ತಾರೆಯರು ವೈಯಕ್ತಿಕ ಮಟ್ಟದಲ್ಲಿ ಸ್ನೇಹ, ಸೌಹಾರ್ದತೆ ಕಾಪಾಡಿಕೊಂಡು ಬಂದಿದ್ದಾರೆ. ಅದು ಅಭಿಮಾನಿಗಳಿಗೆ ಅರ್ಥವಾದರೆ ಸಾಕು.

    Related Articles :-

    ಕಿಚ್ಚನ ಚಾಲೆಂಜ್ ಸ್ವೀಕರಿಸಿದ ಯಶ್, ಪ್ರಿಯಾ ಸುದೀಪ್

  • ಅಭಿಮಾನಿಯ ಕಷ್ಟಕ್ಕೆ ಸ್ಪಂದಿಸಿದ ಯಶ್

    yash with his fan

    ಚಿತ್ರನಟರ ಬಗ್ಗೆ ಅಭಿಮಾನಿಗಳು ತೋರುವ ಅಭಿಮಾನ ಕೆಲವು ಬಾರಿ ಅನಾಹುತಗಳನ್ನೇ ತಂದುಬಿಡುತ್ತವೆ. ಅಂಥದ್ದೇ ಒಂದು ಅನಾಹುತ ಉತ್ತರ ಕರ್ನಾಟಕ ಭಾಗದ ಅಗಡಿ ಅನ್ನೋ ಊರಿನಲ್ಲಿ ನಡೆದಿತ್ತು. ಊರ ಹಬ್ಬದ ದಿನ ಯಶ್ ಅವರ ಕಟೌಟ್ ಹಾಕಲು ಹೋಗಿ, ವಿದ್ಯುತ್ ತಂತಿ ತಗಲು ಅಭಿಮಾನಿಯೊಬ್ಬ ಕೈಕಳೆದುಕೊಂಡಿದ್ದ.

    ವಿಷಯ ತಿಳಿದ ನಂತರ, ಯಶ್ ಅಭಿಮಾನಿಯ ಕಷ್ಟಕ್ಕೆ ಸ್ಪಂದಿಸಿದ್ದಾರೆ.

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಭಿಮಾನಿಯ ನೆರವಿಗೆ ಧಾವಿಸಿರುವ ಅಖಿಲ ಕರ್ನಾಟಕ ಯಶ್ ಅಭಿಮಾನಿಗಳ ಸಂಘದ ಸದಸ್ಯರು, ಆ ಯುವಕನಿಗೆ ಒಂದು ಲಕ್ಷ ರೂ. ಚೆಕ್ ನೀಡಿದ್ದಾರೆ. ಅಭಿಮಾನವಿರಲಿ, ಆದರೆ, ಅತಿರೇಕವಾಗುವುದು ಬೇಡ ಎಂದು ಬುದ್ದಿವಾದವನ್ನೂ ಹೇಳಿದ್ದಾರೆ.

    ಒಂದಂತೂ ಸತ್ಯ. ಎಲ್ಲ ಅಭಿಮಾನಿಗಳ ಕಷ್ಟಕ್ಕೂ ಸ್ಟಾರ್‍ನಟರು ಸಹಾಯಕ್ಕೆ ಬರೋಕೆ ಸಾಧ್ಯವಿಲ್ಲ. ಅಭಿಮಾನ ಖುಷಿ ಕೊಡುವಂತಿರಬೇಕೇ ಹೊರತು, ಜೀವಕ್ಕೇ, ಜೀವನಕ್ಕೆ ಎರವಾಗುವಂತಿರಬಾರದು. 

  • ಅಮೀರ್ ಖಾನ್ ಅಲ್ಲ, ಕೆಜಿಎಫ್-2ಗೆ ಹೊಸ ಚಾಲೆಂಜ್..!

    ಅಮೀರ್ ಖಾನ್ ಅಲ್ಲ, ಕೆಜಿಎಫ್-2ಗೆ ಹೊಸ ಚಾಲೆಂಜ್..!

    ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ರಿಲೀಸ್ ಡೇಟ್ ಘೋಷಣೆಯಾಗಿದ್ದು 2021ರಲ್ಲಿ. ಏಪ್ರಿಲ್ 14ಕ್ಕೆ ರಿಲೀಸ್ ಆಗುತ್ತಿರೋ ಚಿತ್ರ, 2022ರ ಸೆನ್ಸೇಷನಲ್ ಸಿನಿಮಾಗಳಲ್ಲಿ ನಂಬರ್ 1 ಸ್ಥಾನದಲ್ಲಿದೆ. ಈ ಚಿತ್ರಕ್ಕೆ ಮೊದಲು ಎದುರಾಗಿದ್ದದ್ದು ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ.

    ಏಪ್ರಿಲ್ 14ರಂದೇ ಸಿಖ್ಖರ ಪವಿತ್ರ ದಿನವಿದ್ದು, ಅದೇ ದಿನ ಸಿನಿಮಾ ರಿಲೀಸ್ ಮಾಡುತ್ತೇವೆ. ವಿಜಯ್ ಕಿರಗಂದೂರು ಮತ್ತು ಯಶ್ ಜೊತೆ ಮಾತನಾಡಿದ್ದೇವೆ ಎಂದೆಲ್ಲ ಹೇಳಿದ್ದರು ಅಮೀರ್ ಖಾನ್. ಈಗ ಲಾಲ್ ಸಿಂಗ್ ಚಡ್ಡಾ ಮುಂದಕ್ಕೆ ಹೋಗಿದೆ. ದಿಢೀರನೆ ತಮ್ಮ ರಿಲೀಸ್ ಡೇಟ್ ಬದಲಿಸಿ ಆಗಸ್ಟ್‍ಗೆ ಹೋಗಿದ್ದಾರೆ. ಹಾಗಂತ ಕೆಜಿಎಫ್ ಚಾಪ್ಟರ್ 2 ಏಕಾಂಗಿಯಾಗಿಯೇನೂ ಬರುತ್ತಿಲ್ಲ. ಹೊಸ ಚಾಲೆಂಜ್ ಸಿದ್ಧವಾಗಿದೆ.

    ಏಪ್ರಿಲ್ 14ರಂದು ಶಾಹಿದ್ ಕಪೂರ್ ಅಭಿನಯದ ಜೆರ್ಸಿ ರಿಲೀಸ್ ಆಗುತ್ತಿದೆ. ಲಾಲ್ ಸಿಂಗ್ ಚಡ್ಡಾ ಹಿಂದೆ ಸರಿದ ಬೆನ್ನಲ್ಲೇ ಜೆರ್ಸಿ ರಿಲೀಸ್ ಡೇಟ್ ಘೋಷಿಸಿದೆ. ಹಾಗಂತ ಜೆರ್ಸಿಯೇನೂ ವೊರಿಜಿನಲ್ ಸಿನಿಮಾ ಅಲ್ಲ. ತೆಲುಗಿನ ಜೆರ್ಸಿ ಚಿತ್ರದ ಯಥಾವತ್ ರೀಮೇಕ್.

    ಸದ್ಯಕ್ಕೆ ಕೆಜಿಎಫ್ ಚಾಪ್ಟರ್ 2 ಎದುರು ಬರುವ ಧೈರ್ಯ ಸಣ್ಣ ಬಜೆಟ್ ಚಿತ್ರಗಳಿಗೂ ಇಲ್ಲ. ದೊಡ್ಡ ಬಜೆಟ್ ಚಿತ್ರಗಳಿಗೂ ಇಲ್ಲ. ಅದು ಕೆಜಿಎಫ್ ಚಾಪ್ಟರ್ 2 ಸೃಷ್ಟಿಸಿರುವ ಸಂಚಲನ.

  • ಅಮೀರ್ ಖಾನ್‍ಗೆ ರಾಕಿಂಗ್ ಸ್ಟಾರ್ ಯಶ್ ಶಾಕ್

    yash's kgf rocks pan india

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್, ಅಮೀರ್ ಖಾನ್, ಅಮಿತಾಬ್ ಬಚ್ಚನ್, ಕತ್ರಿನಾ ಕೈಫ್ ಅಭಿನಯದ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರಕ್ಕೇ ಶಾಕ್ ಕೊಟ್ಟಿದೆ. ಐಎಂಡಿಬಿಯಲ್ಲಿ ದೇಶದ ಬಹುನಿರೀಕ್ಷಿತ ಚಿತ್ರಗಳ ಲಿಸ್ಟ್‍ನಲ್ಲಿ ಯಶ್‍ರ ಕೆಜಿಎಫ್ 4ನೇ ಸ್ಥಾನದಲ್ಲಿದೆ. ಆನಂತರದ ಸ್ಥಾನ, ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ್ದು.

    ನಂ.1 ಸ್ಥಾನದಲ್ಲಿ ರಜನಿ, ಅಕ್ಷಯ್ ಅಭಿನಯದ 2.0, 2ನೇ ಸ್ಥಾನದಲ್ಲಿ ವಿಜಯ್ ಅಭಿನಯದ ಸರ್ಕಾರ್, 3ನೇ ಸ್ಥಾನದಲ್ಲಿ ಶಾರುಕ್ ಅಭಿನಯದ ಝೀರೋ ಇದ್ದರೆ, 4ನೇ ಸ್ಥಾನದಲ್ಲಿರೋದು ಹೊಂಬಾಳೆ ಬ್ಯಾನರ್‍ನ ಕೆಜಿಎಫ್.

    ಡಿಸೆಂಬರ್‍ನಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾ, ಕರ್ನಾಟಕ ಮಾತ್ರವಲ್ಲ, ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲೂ ಹವಾ ಸೃಷ್ಟಿಸುತ್ತಿದೆ.

  • ಅರ್ಜುನ್ ರೆಡ್ಡಿ ಆಗ್ತಾರಾ ಯಶ್..?

    will yash act in arun reddy remake movie

    ರಾಕಿಂಗ್ ಸ್ಟಾರ್ ಮುಂದಿನ ಚಿತ್ರ ರೀಮೇಕಾ..? ತೆಲುಗಿನ ಸೂಪರ್ ಹಿಟ್ ಸಿನಿಮಾ ಅರ್ಜುನ್ ರೆಡ್ಡಿ ಚಿತ್ರದಲ್ಲಿ ಯಶ್ ನಟಿಸಲಿದ್ದಾರಾ..? ಗಾಂಧಿನಗರದಲ್ಲಿ ಯಶ್ ಕುರಿತು ಇಂಥಾದ್ದೊಂದು ಸುದ್ದಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ.

    ಅರ್ಜುನ್ ರೆಡ್ಡಿ, ತೆಲುಗಿನ ಚಿತ್ರ. ರೊಮ್ಯಾಂಟಿಕ್ ಮತ್ತು ಹಸಿಬಿಸಿ ದೃಶ್ಯಗಳು ಹೆಚ್ಚಿರುವ ಚಿತ್ರ. ಕಥೆ ನಡೆಯುವುದೂ ಕೂಡಾ ಕನ್ನಡ ಪರಿಸರದಲ್ಲಿ. ಆ ಚಿತ್ರವನ್ನು ಕನ್ನಡದಲ್ಲಿ ಮಾಡಬೇಕು ಎಂದು ರಾಕ್‍ಲೈನ್ ವೆಂಕಟೇಶ್ ರೀಮೇಕ್ ಹಕ್ಕು ಖರೀದಿಸಿದ್ದಾರಂತೆ. ಈಗಾಗಲೇ ತಮಿಳಿನಲ್ಲಿ ಧನುಷ್ ಈ ಪಾತ್ರ ಮಾಡುತ್ತಿದ್ದಾರೆ. ಕನ್ನಡದಲ್ಲಿ ಯಶ್ ಅವರನ್ನೇ ಆಯ್ಕೆ ಮಾಡಿಕೊಂಡರೆ ಚೆನ್ನಾಗಿರುತ್ತೆ ಎಂಬ ಅಭಿಪ್ರಾಯ ಕೇಳಿಬಂದಿದೆ.

    ಯಶ್ ಚಿತ್ರದಲ್ಲಿ ರೊಮ್ಯಾನ್ಸ್ ಇರುತ್ತಾದರೂ, ಅದು ಒಂದು ಲಿಮಿಟ್ ಮೀರುವುದಿಲ್ಲ. ಕಿಸ್ಸಿಂಗ್ ಸೀನ್‍ಗಳಂತೂ ಇಲ್ಲವೇ ಇಲ್ಲ. ಆದರೆ, ಅರ್ಜುನ್ ರೆಡ್ಡಿ ಚಿತ್ರದಲ್ಲಿ ಹಸಿಬಿಸಿ ದೃಶ್ಯಗಳು, ಓವರ್ ರೊಮ್ಯಾಂಟಿಕ್ ಸೀನ್‍ಗಳು, ಕಿಸ್ಸಿಂಗ್ ಸೀನ್‍ಗಳು ಬೇಜಾನ್ ಇವೆ. ಹೀಗಾಗಿ ಅದನ್ನು ಯಶ್ ಒಪ್ಪಿಕೊಳ್ಳುವುದೇ ಡೌಟು ಎಂಬ ಸುದ್ದಿಯೂ ಇದೆ. ಒಟ್ಟಿನಲ್ಲಿ ಅರ್ಜುನ್ ರೆಡ್ಡಿ ಕನ್ನಡಕ್ಕೆ ಬರುತ್ತಿರುವ ಸುದ್ದಿಗೆ ವೇಗ ಸಿಕ್ಕಿದೆ.

     

  • ಅಲಲಾ.. ಯಶ್ ಹಿಂಗೆಲ್ಲ ನಾಚಿಕೊಳ್ತಾರಾ..?

    yash is too shy when camera is turned on

    ರಾಕಿಂಗ್ ಸ್ಟಾರ್ ಯಶ್ ಲವ್ ಮಾಡೋದನ್ನು ನೋಡಿದ್ದೀರಿ. ಫೈಟ್ ಮಾಡೋದನ್ನು ನೋಡಿದ್ದೀರಿ. ಅಲ್ಲಲ್ಲಿ.. ಸಿನಿಮಾಗಳಲ್ಲಿ ನಾಚಿಕೊಂಡು ನಟಿಸೋದನ್ನೂ ನೋಡಿದ್ದೀರಿ. ರೀಲ್ ಮೇಲೆ ಭಯಂಕರ ಡೈಲಾಗ್ ಹೊಡೆಯೋ ಯಶ್ , ರಿಯಲ್ ಲೈಫಲ್ಲಿ ಎಷ್ಟೆಲ್ಲ ನಾಚ್ಕೋತಾರೆ ಗೊತ್ತಾ..? ಈ ಫೋಟೋ ನೋಡಿ.

    ಇದು ರಾಧಿಕಾ ಪಂಡಿತ್ ತೆಗೆದಿರೋ ಫೋಟೋ. ಫೋಟೋಗೆ ಪೋಸ್ ಕೊಡಿ ಅಂದ್ರೆ ಹೇಗೆ ನಾಚ್ಕೋತಾರೆ ನೋಡಿ ಅಂತಾ ಸ್ವತಃ ರಾಧಿಕಾ ಅವರೇ ತೆಗೆದು ಹಾಕಿರೋ ಫೋಟೋ ಇದು.

  • ಆಂಧ್ರದ ಆ ರೂಲ್ಸ್ ಕೆಜಿಎಫ್ ಚಾಪ್ಟರ್ 2ಗೆ ಶಾಕ್. ಪ್ರೇಕ್ಷಕರು ರಾಕ್ಸ್

    ಆಂಧ್ರದ ಆ ರೂಲ್ಸ್ ಕೆಜಿಎಫ್ ಚಾಪ್ಟರ್ 2ಗೆ ಶಾಕ್. ಪ್ರೇಕ್ಷಕರು ರಾಕ್ಸ್

    ಕೆಜಿಎಫ್ ಚಾಪ್ಟರ್ 2. ಕನ್ನಡ ಚಿತ್ರರಂಗದ ದುಬಾರಿ ಬಜೆಟ್‍ನ ಸಿನಿಮಾ. ಒಟ್ಟಾರೆ ಬಜೆಟ್ ಎಷ್ಟಿರಬಹುದು ಅನ್ನೋ ಅಧಿಕೃತ ಲೆಕ್ಕ ಸಿಕ್ಕಿಲ್ಲವಾದರೂ, ಅದು ಮೂರಂಕಿಯ ಮೇಲಿದೆ ಅನ್ನೋದ್ರಲ್ಲಿ ಅನುಮಾನವೇನಿಲ್ಲ. ಹೊಂಬಾಳೆ, ಪ್ರಶಾಂತ್ ನೀಲ್, ರಾಕಿಭಾಯ್ ಯಶ್, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಮಾಳವಿಕಾ ಅವಿನಾಶ್, ನಾಗಾಭರಣ, ಅಚ್ಯುತ್ ಕುಮಾರ್.. ಹೀಗೆ ಎಲ್ಲ ದೊಡ್ಡ ದೊಡ್ಡ ನಟರೇ ಇರುವಾಗ.. ಖರ್ಚೂ ಜಾಸ್ತಿ. ಇನ್ನು ಸೆಟ್ಟು, ಮ್ಯೂಸಿಕ್ಕು ಎಲ್ಲವನ್ನೂ ಬೆಸ್ಟ್ ಕ್ವಾಲಿಟಿಯಲ್ಲೇ ಕೊಟ್ಟಿರೋ ಹೊಂಬಾಳೆಯ ಬಜೆಟ್ ಸಹಜವಾಗಿಯೇ ದೊಡ್ಡದು.

    ಕೆಜಿಎಫ್ ಚಾಪ್ಟರ್ 1 ಹಿಟ್ ಆದ ನಂತರ ಯಶ್ ನ್ಯಾಷನಲ್ ಸ್ಟಾರ್ ಆದರು. ಕನ್ನಡದಲ್ಲಿರುವಷ್ಟೇ ಕ್ರೇಜ್ ಯಶ್ ಅವರಿಗೆ ತೆಲುಗು ಮತ್ತು ಹಿಂದಿಯಲ್ಲಿ ಸೃಷ್ಟಿಯಾಯ್ತು. ತೆಲುಗಿನ ಮಾರ್ಕೆಟ್ ದೊಡ್ಡದು. ಅಲ್ಲಿ ಸಿನಿಮಾ ನೋಡಿದವರ ಸಂಖ್ಯೆ ಕರ್ನಾಟಕಕ್ಕಿಂತ ಹೆಚ್ಚು. ಏಕೆಂದರೆ ಅದು 2 ರಾಜ್ಯ. ಜನಸಂಖ್ಯೆ ಹಾಗೂ ಸ್ಕ್ರೀನ್‍ಗಳ ಸಂಖ್ಯೆಯೂ ಹೆಚ್ಚು. ಇಷ್ಟೆಲ್ಲ ಇದ್ದರೂ ಗಳಿಕೆ ಮಾತ್ರ ಕನ್ನಡಕ್ಕಿಂತ ಕಡಿಮೆ. ಕರ್ನಾಟಕದ ಗಳಿಕೆ 35 ಕೋಟಿಯಾದರೆ, ತೆಲುಗು ಮಾರ್ಕೆಟ್‍ನ ಒಟ್ಟಾರೆ ಫಸ್ಟ್ ಡೇ ಕಲೆಕ್ಷನ್ 30 ಕೋಟಿ. ಹೀಗೇಕೆ ಎಂದು ಹುಡುಕಿದರೆ ಉತ್ತರ ಸಿಗೋದು ಆಂಧ್ರಪ್ರದೇಶ ಸಿಎಂ ಜಗನ್ ಅವರ ಒಂದು ರೂಲ್ಸ್‍ನಲ್ಲಿ. ತೆಲಂಗಾಣಕ್ಕೆ ಹೋಲಿಸಿದರೆ ಆಂಧ್ರದ ಮಾರ್ಕೆಟ್ ದೊಡ್ಡದು.

    ಆಂಧ್ರದಲ್ಲಿ ಟಿಕೆಟ್ ರೇಟ್ ಅದು ಯಾವುದೇ ಮಲ್ಟಿಪ್ಲೆಕ್ಸ್ ಇರಲಿ, 125 ರೂ.ನಿಂದ 250 ರೂ. ಗರಿಷ್ಠ ಬೆಲೆ. ಸಿಂಗಲ್ ಸ್ಕ್ರೀನ್ ಥಿಯೇಟರುಗಳ ಟಿಕೆಟ್ ಬೆಲೆ 70ರಿಂದ 100 ರೂ. ಎಸಿಯಿಲ್ಲದ ಥಿಯೇಟರುಗಳಲ್ಲಿ 40 ರೂ.ನಿಂದ 60 ರೂ. ಅಷ್ಟೆ. ಅಕಸ್ಮಾತ್ ಟಿಕೆಟ್ ದರ ಹೆಚ್ಚಿಸಬೇಕು ಎಂದರೆ ಚಿತ್ರಗಳ ನಿರ್ಮಾಪಕರು ಸರ್ಕಾರಕ್ಕೆ ಮೊದಲೇ ಮನವಿ ಮಾಡಬೇಕು. ಅಂತಹ ಚಿತ್ರಗಳ ಬಜೆಟ್ 100 ಕೋಟಿಗೂ ಜಾಸ್ತಿ ಇರಬೇಕು. ಆ 100 ಕೋಟಿ+ ಬಜೆಟ್‍ನಲ್ಲಿ ಕಲಾವಿದರು ಮತ್ತು ತಂತ್ರಜ್ಞರ ಸಂಭಾವನೆ ಲೆಕ್ಕಕ್ಕೆ ಬರುವುದಿಲ್ಲ. ಕೇವಲ ಸಿನಿಮಾ ನಿರ್ಮಾಣದ ಖರ್ಚು ಮಾತ್ರ ಇರಬೇಕು.

    ಇದರಿಂದಾಗಿ ಆಂಧ್ರದಲ್ಲಿ 250 ರೂ.ಗಿಂತ ಹೆಚ್ಚು ದರಕ್ಕೆ ಟಿಕೆಟ್ ಮಾರಲು ಅವಕಾಶವೇ ಆಗಲಿಲ್ಲ. ಆದರೆ ಕರ್ನಾಟಕದಲ್ಲಿ ಹಾಗಲ್ಲ. 250 ರೂ.ಗೆ ಒಂದೂ ಟಿಕೆಟ್ ಸಿಗಲಿಲ್ಲ. ಮಿನಿಮಮ್ 500 ರೂ.ನಿಂದ 2000 ರೂ. ವರೆಗೂ ಟಿಕೆಟ್ ದರವಿತ್ತು.

    ಇದು ನಿರ್ಮಾಪಕರಿಗೆ ಲಾಭವಾಗಬಹುದಾದರೂ, ಟಿಕೆಟ್ ದರ ಹೆಚ್ಚಿದಷ್ಟೂ ಫ್ಯಾಮಿಲಿ ಆಡಿಯನ್ಸ್ ಕಡಿಮೆಯಾಗುತ್ತಾರೆ. ಇದು ವಾಸ್ತವ. ಕನಿಷ್ಠ 5 ಜನರ ಒಂದು ಫ್ಯಾಮಿಲಿ ಸಿನಿಮಾಗೆ ಬರಬೇಕೆಂದರೆ ಕನಿಷ್ಠವೆಂದರೂ 3 ಸಾವಿರ ಖರ್ಚು ಮಾಡಬೇಕಾಗುತ್ತದೆ. ಅದೇ ಆಂಧ್ರದಲ್ಲಿ ಗರಿಷ್ಠ 1500 ರೂ.ಗಳಲ್ಲಿ ಫ್ಯಾಮಿಲಿ ಥಿಯೇಟರ್ ಟ್ರಿಪ್ ಮುಗಿದು ಹೋಗುತ್ತದೆ. ಅದರಿಂದ ಆಗುವ ಲಾಭವೇನೆಂದರೆ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚುತ್ತದೆ. ಅರ್ಥಾತ್ ಗ್ರಾಹಕರು ಹೆಚ್ಚಿದಷ್ಟೂ.. ಬಿಸಿನೆಸ್ ಹೆಚ್ಚಿದಷ್ಟೂ.. ಆಗಲೂ ಲಾಭವಾಗುವುದು ನಿರ್ಮಾಪಕರಿಗೇ. ಅತ್ತ ಪ್ರೇಕ್ಷಕರೂ ಖುಷಿ.. ಇತ್ತ ನಿರ್ಮಾಪಕರೂ ಖುಷಿ.

    ಆದರೆ ಕರ್ನಾಟಕದಲ್ಲಿ ಇದು ಸಾಧ್ಯವೇ ಇಲ್ಲ ಎನ್ನಬೇಕು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಲ್ಟಿಪ್ಲೆಕ್ಸ್ ಟಿಕೆಟ್ ದರವನ್ನು 200 ರೂ.ಗೆ ಫಿಕ್ಸ್ ಮಾಡಿ ಆದೇಶ ಹೊರಡಿಸಿದ್ದರು. ಆದರೆ, ಅದನ್ನು ಜಾರಿಗೆ ತರುವುದಕ್ಕೆ ಮನಸ್ಸನ್ನೇ ಮಾಡಲಿಲ್ಲ.

  • ಇನ್ನು ಮುಂದೆ ಮೊಬೈಲ್‍ನಲ್ಲೇ ಸಿಗುತ್ತೆ ಕೆಜಿಎಫ್ 

    kgf in mobile phones

    ಜಗತ್ತಿನಾದ್ಯಂತ ಬಾಕ್ಸಾಫೀಸ್ ಚಿಂದಿ ಉಡಾಯಿಸಿದ ಕೆಜಿಎಫ್ ಸಿನಿಮಾ ಈಗ ಮೊಬೈಲ್‍ಗೇ ಬರುತ್ತಿದೆ. ಥಿಯೇಟರ್‍ನಲ್ಲಿ ಕೆಜಿಎಫ್ ಇನ್ನೂ 50 ದಿನ ಪೂರೈಸಿಲ್ಲ. ಆಗಲೇ ಅಮೇಜಾನ್ ಪ್ರೈಮ್ ಆ್ಯಪ್‍ನಲ್ಲಿ ರಿಲೀಸ್ ಆಗುತ್ತಿದೆ. ಹೀಗೆ ರಿಲೀಸ್ ಆಗುತ್ತಿರುವ ಮೊದಲ ಕನ್ನಡ ಸಿನಿಮಾ ಕೆಜಿಎಫ್ ಚಾಪ್ಟರ್ 1.

    ಫೆಬ್ರವರಿ 5ರಿಂದ ಕೆಜಿಎಫ್ ಸ್ಟ್ರೀಮಿಂಗ್ ಆರಂಭ ಎಂದು ಜಾಹೀರಾತು ನೀಡಿದೆ ಅಮೇಜಾನ್. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯ 5 ಆವೃತ್ತಿಗಳಲ್ಲೂ ಸಿನಿಮಾ ಬಿಡುಗಡೆಯಾಗುತ್ತಿದೆ. ಕೆಜಿಎಫ್ ಚಾಪ್ಟರ್ 1 ಸಿನಿಮಾವನ್ನು ಅಮೇಜಾನ್ 17 ಕೋಟಿಗೆ ಖರೀದಿಸಿತ್ತು ಎನ್ನುತ್ತಿವೆ ಮೂಲಗಳು.

  • ಈ ಪರಿಸ್ಥಿತಿ ಊಹಿಸಿಯೇ ಏಪ್ರಿಲ್ ಡೇಟ್ ಫಿಕ್ಸ್ ಮಾಡಿದ್ದು : ಯಶ್

    ಈ ಪರಿಸ್ಥಿತಿ ಊಹಿಸಿಯೇ ಏಪ್ರಿಲ್ ಡೇಟ್ ಫಿಕ್ಸ್ ಮಾಡಿದ್ದು : ಯಶ್

    ಯಾವುದೇ ಅಡ್ಡಿ ಆತಂಕ ಬರದೇ ಇದ್ದರೆ 2021ರ ಜುಲೈನಲ್ಲೇ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಬೇಕಿತ್ತು. ಕೊರೊನಾ ಕಾರಣದಿಂದ ಚಿತ್ರೀಕರಣವೂ ಲೇಟ್ ಆಗಿ ಚಿತ್ರ ಮುಗಿದಾಗ 2021 ಮುಗಿಯುವ ಹಂತದಲ್ಲಿತ್ತು. ಕೊರೊನಾ ಕೂಡಾ ತಣ್ಣಗಾಗಿತ್ತು. ಆದರೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಡೇಟ್ ಅನೌನ್ಸ್ ಮಾಡಿದಾಗ ಎಲ್ಲರೂ ಹುಬ್ಬೇರಿಸಿದ್ದರು. ಹೆಚ್ಚೂ ಕಡಿಮೆ 6 ತಿಂಗಳು ಲೇಟ್ ಆಯ್ತು, ಯಾಕೆ ಸುಮ್ಮನೆ ಅಷ್ಟೊಂದು ಮುಂದಕ್ಕೆ ಹೋದರು ಎಂದುಕೊಂಡಿದ್ದರು. ಡಿಸೆಂಬರ್ ಅಥವಾ ಜನವರಿಯಲ್ಲಿ ಬರಬಹುದಿತ್ತಲ್ಲಾ ಎಂದಿದ್ದರು. ಅದಕ್ಕೆಲ್ಲ ಉತ್ತರವಾಗಿ ಈಗಿನ ಪರಿಸ್ಥಿತಿ ಇದೆ.

    ಅದೊಂದು ಊಹೆ, ನಿರೀಕ್ಷೆ ಆತಂಕವನ್ನು ನಾವು ಮುಂದಾಲೋಚಿಸಿದ್ದೆವು. ಈ ಸನ್ನಿವೇಶ ನಮ್ಮ ಊಹೆಯಲ್ಲಿದ್ದ ಕಾರಣಕ್ಕೇ ಏಪ್ರಿಲ್ ಡೇಟ್ ಅನೌನ್ಸ್ ಮಾಡಿದ್ದು.  ಈಗಿನ್ನೂ ಜನವರಿ, ಏಪ್ರಿಲ್ ಹೊತ್ತಿಗೆ ಎಲ್ಲವೂ ಸುಸೂತ್ರವಾಗಲಿದೆ ಎಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್.

    ನಮಗೆ ಕ್ಲಾರಿಟಿ ಇದೆ. ನಾವು ಒಳ್ಳೆಯ ಸಿನಿಮಾ ಕೊಡುತ್ತೇವೆ ಎಂಬ ಕಾರಣಕ್ಕಾಗಿಯೇ ಜನ ಕಾಯುತ್ತಿದ್ದಾರೆ. ಅದನ್ನು ಸುಳ್ಳು ಮಾಡಲ್ಲ. ಈಗಲೇ ಟೀಸರ್, ಟ್ರೇಲರ್ ರಿಲೀಸ್ ಮಾಡೋಕೆ ಹೋದರೆ ತುಂಬಾ ಬೇಗ ಆಗುತ್ತೆ. ಸಿನಿಮಾದ ಪ್ರಚಾರವನ್ನೂ ಚೆನ್ನಾಗಿ ಮಾಡ್ತೇವೆ. ಈ ಬಾರಿ ಚಿತ್ರವನ್ನು ಗ್ಲೋಬಲ್ ಲೆವೆಲ್ಲಿಗೆ ತೆಗೆದುಕೊಂಡು ಹೋಗುತ್ತೇವೆ ಎಂದಿದ್ದಾರೆ ಯಶ್.

  • ಈ ಹುಟ್ಟುಹಬ್ಬಕ್ಕೂ ಅಭಿಮಾನಿಗಳಿಗೆ ಯಶ್ ಸಿಕ್ಕಲ್ಲ..!

    ಈ ಹುಟ್ಟುಹಬ್ಬಕ್ಕೂ ಅಭಿಮಾನಿಗಳಿಗೆ ಯಶ್ ಸಿಕ್ಕಲ್ಲ..!

    ಕೆಜಿಎಫ್ ಚಾಪ್ಟರ್ 1 ಬಿಡುಗಡೆ ಸಮಯದಲ್ಲಿ ಒಂದು ಅದ್ಧೂರಿ ಸಮಾರಂಭವೇ ನಡೆದಿತ್ತು. ಅಂದು ಯಶ್ ಅಭಿಮಾನಿಗಳ ಜಾತ್ರೆ ನಡೆದು ಸಾವಿರಾರು ಅಭಿಮಾನಿಗಳ ಜೊತೆ ಯಶ್ ಹಬ್ಬ ಮಾಡಿಕೊಂಡಿದ್ದರು. ಅದೇ ಕೊನೆ, ಅದಾದ ಮೇಲೆ ಕೊರೊನಾ ಹಾಗೂ ಅಪ್ಪು ನಿಧನದಿಂದಾಗಿ ಅಭಿಮಾನಿಗಳಿಗೆ ಯಶ್ ಸಿಕ್ಕಿಲ್ಲ. ಈ ವರ್ಷವಾದರೂ ಸಿಗಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಯಶ್ ನಿರಾಸೆಯ ಉತ್ತರ ಕೊಟ್ಟಿದ್ದಾರೆ.

    ಅಭಿಮಾನಿಗಳಿಗೆ ನಮಸ್ಕಾರ...

    ನಿಮ್ಮ ಕಲ್ಮಶವಿಲ್ಲದ ಪ್ರೀತಿ, ಸಾಟಿಯೇ ಇಲ್ಲದ ಅಭಿಮಾನ, ನನ್ನ ಹೃದಯ ತುಂಬುವಂತೆ ಮಾಡಿದೆ. ನನಗೆ ಗೊತ್ತು ನೀವೆಲ್ಲಾ ಕಾಯುತ್ತಿದ್ದೀರಾ. ಹುಟ್ಟಿದ ದಿನ ತುಂಬಾ ವಿಶೇಷ ಅಂತ ನನಗೆ ಅನ್ನಿಸೋಕೆ ಶುರುವಾಗಿದ್ದೆ ಇತ್ತೀಚಿನ ವರ್ಷಗಳಲ್ಲಿ. ಯಾವಾಗ ನೀವು ನನ್ನ ದಿನವನ್ನ ನಿಮ್ಮ ದಿನವನ್ನಾಗಿಸಿಕೊಂಡು ಆಚರಿಸಿ ವಿಜೃಂಭಿಸೋಕೆ ಶುರು ಮಾಡಿದ್ದರಿಂದ. ಹಾಗಾಗಿ ನಾನು ಕೂಡ ಈ ವರ್ಷದ ಹುಟ್ಟುಹಬ್ಬದಂದು ನಿಮ್ಮನ್ನ ನೋಡಬೇಕು. ನಿಮ್ಮೊಂದಿಗೆ ಸಮಯ ಕಳೆಯಬೇಕು ಅಂದುಕೊಂಡಿದ್ದೆ. ಆದರೆ ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಇನ್ನೂ ಸ್ವಲ್ಪವೇ ಸ್ವಲ್ಪ ಸಮಯ ಕೊಡಿ

    ನಿಮಗಾಗಿ ವಿಭಿನ್ನವಾಗಿರೋದೆನನ್ನೂ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿಯವರೆಗೂ ನಿಮ್ಮ ತಾಳ್ಮೆ ಮತ್ತು ಪ್ರೀತಿಯೇ ನನಗೆ ಈ ವರ್ಷದ ಹುಟ್ಟುಹಬ್ಬದ ನಿಮ್ಮ ಉಡುಗೊರೆ . ಕ್ಷಮಿಸಿ..ಈ ವರ್ಷದ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ, ಆದರೆ ಆದಷ್ಟು ಬೇಗ ನಿಮಗೆ ಸಿಗುತ್ತೇನೆ ಮತ್ತು ನಿಮ್ಮ ಕಾಯುವಿಕೆಯನ್ನು ಅರ್ಥಪೂರ್ಣವಾಗಿಸುತ್ತೇನೆ

    ನಿಮ್ಮ ಪ್ರೀತಿಯ ಯಶ್

    ತಮ್ಮ ಟ್ವಿಟರ್ ಖಾತೆಯಲ್ಲಿ ಹೀಗೊಂದು ಪತ್ರ ಬರೆದು ಹಾಕಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಯಶ್ ಹುಟ್ಟುಹಬ್ಬಕ್ಕಾಗಿ ವಿಶೇಷ ಡಿಪಿಯನ್ನು ರೆಡಿ ಮಾಡಿದ್ದ, ರಾಮಾಚಾರಿ ಚಿತ್ರದ 8ನೇ ವರ್ಷದ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲು ಎಲ್ಲ ಪ್ಲಾನ್ ಮಾಡಿಕೊಂಡಿದ್ದ ಯಶ್ ಅಭಿಮಾನಿಗಳಿಗೆ ಖಂಡಿತಾ ಇದು ನಿರಾಸೆಯ ವಿಷಯವೇ. ಆದರೆ ಯಶ್ ಸಮಯ ಕೇಳಿದ್ದಾರೆ. ಹೊಸದನ್ನು ಹೊಸದಾಗಿ ನಿರೀಕ್ಷೆ ಮುಟ್ಟುವಂತೆ ನೀಡುತ್ತೇನೆ ಎಂದಿದ್ದಾರೆ. ಅಭಿಮಾನಿಗಳು ಕಾಯುತ್ತಿದ್ದಾರೆ.

  • ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಯಶ್ ಶುಭ ಹಾರೈಕೆ

    upendra, yash

    ಉಪೇಂದ್ರ ರಾಜಕೀಯ ಪ್ರವೇಶಕ್ಕೆ ರಾಕಿಂಗ್ ಸ್ಟಾರ್ ಯಶ್ ಶುಭ ಕೋರಿದ್ದಾರೆ. ನನ್ನ ಪ್ರಕಾರ ಉಪೇಂದ್ರ ತುಂಬಾ ಲೇಟ್ ಮಾಡಿದ್ರು. ಇನ್ನೂ ಬೇಗ ಬರಬೇಕಿತ್ತು.

    ಅವರ ಕನಸುಗಳ ಬಗ್ಗೆ ನಮಗೆಲ್ಲ ಚೆನ್ನಾಗಿ ಗೊತ್ತು. ಅವರಿಂದ ಸ್ಫೂರ್ತಿ ಪಡೆದು ಚಿತ್ರರಂಗಕ್ಕೆ ಬಂದವನು ನಾನು. ಜೊತೆಯಲ್ಲಿರುವವರನ್ನು `ಗೋ' ಎನ್ನುವವರು ಲೀಡರ್ ಆಗಲ್ಲ. `ಲೆಟ್ ಅಸ್ ಗೋ' ಎಂದು ಜೊತೆಯಲ್ಲಿ ಕರೆದುಕೊಂಡು ಹೋಗುವವರು ಲೀಡರ್ ಆಗ್ತಾರೆ.

    ಅವರಲ್ಲಿ ಲೀಡರ್ ಶಿಪ್ ಕ್ವಾಲಿಟಿ ಇದೆ. ಅವರ ಕನಸುಗಳು ನನಸಾಗಲಿ. ಅವರ ಜೊತೆ ಕೈಜೋಡಿಸೋಣ. ಅವರು ಹೋಗುತ್ತಿರುವ ಸರಿಯಾಗಿಯೇ ಇದೆ. ಪ್ರಜಾಕೀಯ ಎಂಬ ಹೊಸ ಹೆಸರನ್ನು ಕೊಟ್ಟಿದ್ದಾರೆ. ಅವರು ಒಳ್ಳೆಯದನ್ನೇ ಮಾಡುತ್ತಾರೆ. ಆ ನಂಬಿಕೆ ನನಗಿದೆ. ಅವರಿಗೆ ನನ್ನ ಬೆಂಬಲವಿದೆ ಎಂದಿದ್ದಾರೆ ಯಶ್.