` jogi prem, - chitraloka.com | Kannada Movie News, Reviews | Image

jogi prem,

 • ಎಲ್ಲಿದೆ ವಿಲನ್ ಟೀಂ..? - ಕೇಳಿದ್ದು ಕಿಚ್ಚ ಸುದೀಪ್..!

  sudeep looking for the villain's team

  ದಿ ವಿಲನ್ ಚಿತ್ರತಂಡ ಎಲ್ಲಿದೆ..? ನಾನವರನ್ನು ಹುಡುಕುತ್ತಿದ್ದೇನೆ. ದಯವಿಟ್ಟು ಯಾರಾದರೂ ಸಿಕ್ಕರೆ, ಅವರಿಗೆ ನಾನು ಹುಡುಕುತ್ತಿದ್ದೇನೆ ಎನ್ನುವುದನ್ನು ತಿಳಿಸಿ. ಹೀಗಂತ ಸ್ವತಃ ಹೇಳಿಕೊಂಡಿರೋದು ಕಿಚ್ಚ ಸುದೀಪ್. 

  ದಿ ವಿಲನ್ ಸಿನಿಮಾ ರಿಲೀಸ್ ಆಗಿ ಎರಡು ವಾರ ಪೂರೈಸಿದೆ. ಚಿತ್ರಮಂದಿರಗಳ ಸಂಖ್ಯೆ ಬಿಡುಗಡೆಯ ನಂತರ ಹೆಚ್ಚುತ್ತಿದೆ. ಬಾಕ್ಸಾಫೀಸ್‍ನಲ್ಲಿ ದಾಖಲೆ ಬರೆಯುತ್ತಿದೆ. ಆದರೆ, ಚಿತ್ರದ ಬಗ್ಗೆ ಕನ್ನಡ ಪತ್ರಿಕೆಗಳಲ್ಲಿ ಸಣ್ಣದೊಂದು ಜಾಹೀರಾತು ಕೂಡಾ ಇಲ್ಲ. ಸುದೀಪ್ ಬೇಸರಕ್ಕೆ ಕಾರಣ ಇದೇ..

  ಮರಾಠಿ ಪತ್ರಿಕೆಗಳಲ್ಲಿ ದಿ ವಿಲನ್ ಸಿನಿಮಾ ಪ್ರದರ್ಶನದ ಜಾಹೀರಾತುಗಳು ಇರುವುದನ್ನು ಅಭಿಮಾನಿಯೊಬ್ಬರು ಸುದೀಪ್‍ಗೆ ಕಳಿಸಿಕೊಟ್ಟಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್, ತಮ್ಮ ಬೇಸರವನ್ನು ಈ ರೀತಿ ಹೊರಹಾಕಿದ್ದಾರೆ.

  ಈಗ ಉತ್ತರಿಸಬೇಕಾದವರು ನಿರ್ಮಾಪಕ ಸಿ.ಆರ್.ಮನೋಹರ್. ನಿರ್ದೇಶಕ ಜೋಗಿ ಪ್ರೇಮ್. 

 • ಏಕ್ ಲವ್ ಯಾ `ಹೇಳು ಯಾಕೆ..' ಹಾಡು ರಿಲೀಸ್

  ಏಕ್ ಲವ್ ಯಾ `ಹೇಳು ಯಾಕೆ..' ಹಾಡು ರಿಲೀಸ್

  ಜೋಗಿ ಪ್ರೇಮ್ ಚಿತ್ರ ಎಂದರೆ ಹಾಡುಗಳ ಮೇಲೆ ಭಾರಿ ನಿರೀಕ್ಷೆಗಳಿದ್ದೇ ಇರುತ್ತವೆ. ಅದು ಅವರೇ ಸೃಷ್ಟಿಸಿಕೊಂಡಿರೋ ಟ್ರೆಂಡ್. ಏಕ್ ಲವ್ ಯಾ ಕೂಡಾ ಅದಕ್ಕೆ ಹೊರತಾಗಿಲ್ಲ. ರಕ್ಷಿತಾ ಪ್ರೇಮ್ ಸೋದರ ರಾಣಾ ಹೀರೋ ಆಗಿ ನಟಿಸಿರೋ ಚಿತ್ರದಲ್ಲಿ ಇಬ್ಬರು ಹೀರೋಯಿನ್ ಇದ್ದಾರೆ. ರೀಷ್ಮಾ ನಾಣಯ್ಯ ಮತ್ತು ರಚಿತಾ ಪ್ರೇಮ್. ರೀಷ್ಮಾ ಜೊತೆ ರೊಮ್ಯಾನ್ಸ್, ರಚಿತಾ ಜೊತೆ ಕಿಸ್ಸಿಂಗ್ ಸೀನ್ ನೋಡಿರುವ ಪ್ರೇಕ್ಷಕರಿಗೆ ಚಿತ್ರದಲ್ಲಿರೋ ಕಥೆಯ ಬಗ್ಗೆ ಕುತೂಹಲ ಇದ್ದೇ ಇದೆ. ಇದರ ನಡುವೆಯೇ ಇನ್ನೊಂದು ಹಾಡು ಬಿಟ್ಟಿದ್ದಾರೆ ಪ್ರೇಮ್.

  ಮುಗ್ಧ ಪ್ರೇಮಿಯೊಬ್ಬನ ವಿರಹ, ಆಕ್ರೋಶ ಎರಡೂ ಇರೋ ಹೇಳು ಯಾಕೆ ಹಾಡು.. ವಿಷಾದ ಗೀತೆಯಂತೆ ಎನಿಸಿದ್ದರೆ ಕ್ರೆಡಿಟ್ಟು ಜೋಗಿ ಪ್ರೇಮ್ ಅವರಿಗೆ. ಎದೆಯೊಳಗಿನ ಪ್ರೀತಿಯನ್ನೆಲ್ಲ ಹೊರಗೆ ಹಾಕುವ ಹಾಡಿನಂತೆ ಕೇಳಿಸಿದ್ದರೆ, ಅದರ ಕ್ರೆಡಿಟ್ಟೂ ಪ್ರೇಮ್ ಅವರಿಗೇ. ಅರ್ಜುನ್ ಜನ್ಯ ಮ್ಯೂಸಿಕ್ಕಿನಲ್ಲಿರೋ ಹಾಡಿಗೆ ಸಾಹಿತ್ಯ ಬರೆದು ಹಾಡನ್ನು ಸ್ವತಃ ಹಾಡಿರುವುದು ಪ್ರೇಮ್.

  ಪ್ರೇಮಿಗಳ ದಿನಕ್ಕೆ ಯಾರೇ ಯಾರೇ.. ನೀನು ನಂಗೆ.. ಹಾಡು ರಿಲೀಸ್ ಮಾಡಿದ್ದ ಪ್ರೇಮ್, ಯುಗಾದಿಗೆ ಹೇಳು ಯಾಕೆ ಹಾಡು ಬಿಟ್ಟಿದ್ದಾರೆ.

 • ಏಕ್ ಲವ್ ಯಾ ಟೀಸರ್ ನೋಡೋಕೆ ರೆಡಿಯಾಗಿ

  ek love ya teaser soon

  ಸೆನ್ಸೇಷನಲ್ ಡೈರೆಕ್ಟರ್ ಪ್ರೇಮ್ ನಿರ್ದೇಶನದ, ರಕ್ಷಿತಾ ತಮ್ಮ ರಾಣಾ ಅಭಿನಯಿಸುತ್ತಿರುವ ಸಿನಿಮಾ ಏಕ್ ಲವ್ ಯಾ. ಈಗಾಗಲೇ ಯಾರೇ ಯಾರೇ ನೀನು ನಂಗೆ.. ಹೇಳೋ ಆಸೆ.. ಹೇಳೋದ್ ಹೆಂಗೆ ಅನ್ನೋ ಸಾಂಗ್ನ ಪುಟ್ಟದೊಂದು ವಿಡಿಯೋ ಬಿಟ್ಟು ಹವಾ ಎಬ್ಬಿಸಿದ್ದಾರೆ ಪ್ರೇಮ್. ಈಗ ಟೀಸರ್ ಬರಲಿದೆ ಎಂದು ಎದೆಬಡಿತ ಹೆಚ್ಚಿಸಿದ್ದಾರೆ.

  ಎಕ್ಸ್ ಕ್ಯೂಸ್ ಮಿ ನಂತರ ಪ್ರೇಮ್ ಪಕ್ಕಾ ಲವ್ ಸ್ಟೋರಿ ಸಿನಿಮಾ ಮಾಡಿಲ್ಲ. ಈ ಬಾರಿ ತಮ್ಮ ಬಾಮೈದ ರಾಣಾನನ್ನೇ ಹೀರೋ ಮಾಡಿದ್ದಾರೆ. ರಾಣಾಗೆ ಹೀರೋಯಿನ್ ಆಗಿ ರೀಷ್ಮಾ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಇದ್ದಾರೆ. ಜಸ್ಟ್ ವೇಯ್ಟ್..

 • ಏಕ್ ಲವ್ ಯಾ ಸ್ವಚ್ಚ ಭಾರತ್ ಅಭಿಯಾನ

  ek love ya team's swaccha bharath abhiyaan

  ಜೋಗಿ ಪ್ರೇಮ್ ನಿರ್ದೇಶನದ ಹೊಸ ಸಿನಿಮಾ ಏಕ್ ಲವ್ ಯಾ. ದಿ ವಿಲನ್ ನಂತರ ಪತ್ನಿ ರಕ್ಷಿತಾ ಪ್ರೇಮ್ ಅವರ ಸೋದರ ರಾಣಾನನ್ನೇ ಹೀರೋ ಆಗಿ ಎಂಟ್ರಿ ಕೊಡಿಸುತ್ತಿದ್ದಾರೆ ಪ್ರೇಮ್. ಚಿತ್ರದ ಶೂಟಿಂಗಿಗಾಗಿ ಊಟಿಯಲ್ಲಿರೋ ತಂಡ, ಏಕ್ ಲವ್ ಯಾ ಚಿತ್ರೀಕರಣ ಜಾಗದಲ್ಲಿನ ಪ್ಲಾಸ್ಟಿಕ್ಕುಗಳನ್ನೆಲ್ಲ ಆಯ್ದು ಸ್ವಚ್ಚ ಭಾರತ್ ಅಭಿಯಾನ ಮಾಡಿದೆ.

  ದೇಶದ ಹಲವು ಪ್ರವಾಸಿ ತಾಣಗಳಂತೆ ಊಟಿ ಕೂಡಾ ಪ್ರವಾಸಿಗರಿಂದ ಕ್ರೌರ್ಯಕ್ಕೆ ಒಳಗಾಗುತ್ತಿದೆ.. ಹೀಗಾಗಿಯೇ ಏಕ್ ಲವ್ ಯಾ ಟೀಂ ಕೆಲಸಕ್ಕೆ ಭಾರಿ ಮೆಚ್ಚುಗೆ ಪ್ರಾಪ್ತವಾಗಿದೆ. ರಾಣಾ ಎದುರು ರೀಷ್ಮಾ ನಾಯಕಿಯಾಗಿದ್ದು, ರಚಿತಾ ರಾಮ್ ಅತ್ಯಂತ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

 • ಏನ್ ಶಿವಣ್ಣ.. ಏನ್ ಕಥೆ..?

  shivanna's getup in the villain

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಮೇಲೆ ಹಾಕಲು ಗೆಟಪ್‍ಗಳಿಗಾಗಿ ಹುಡುಕಾಡಬೇಕು. ಆದರೆ, ನಿರ್ದೇಶಕರಾಗಿ ಪ್ರೇಮ್ ಇದ್ದ ಮೇಲೆ ಗೆಟಪ್ಪುಗಳಿಗೇನೂ ಬರ ಇರಲ್ಲ. ಅವರು ಒಂದೇ ಸಿನಿಮಾದಲ್ಲಿ ಹತ್ತಾರು ಗೆಟಪ್ ಹಾಕಿಸಿ, ವಿಭಿನ್ನವಾಗಿ ತೋರಿಸೋದ್ರಲ್ಲಿ ಎತ್ತಿದ ಕೈ.

  ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ಹಾಡಿನ ಶೂಟಿಂಗ್‍ನಲ್ಲಿ ಶಿವಣ್ಣ ಅಣ್ಣಾವ್ರ ಸ್ಟೈಲ್‍ನ ಗೆಟಪ್‍ನಲ್ಲಿ ಕಾಣಿಸಿದ್ದಾರೆ. ಆ್ಯಮಿ ಜಾಕ್ಸನ್, ಮುದ್ದು ಮುದ್ದು ಹಳ್ಳಿ ಬೆಡಗಿ. ಏನ್ ಕಥೆ ಇದು..? ಮದುವೆ ಸೀನಾ..? ಡ್ರೀಮ್ ಸೀನಾ..? ಡೈರೆಕ್ಟರ್ ಪ್ರೇಮ್ ಅವರೇ ಹೇಳಬೇಕು.

  ಅಂದಹಾಗೆ ಶಿವರಾಜ್ ಕುಮಾರ್ ಅವರದ್ದಾದರೂ ಒಂದೆರಡು ಫೋಟೋ ಹೊರಬಿದ್ದಿವೆ. ಸುದೀಪ್ ಅವರದ್ದು ಟೀಸರ್ ಬಿಟ್ಟರೆ ಬೇರೇನೂ ಹೊರಬಂದಿಲ್ಲ. ಸುದೀಪ್ ಇನ್ನೆಂಗಿದ್ದಾರೋ..?

 • ಒಂದು ಸೀಕ್ರೆಟ್ ಬಿಟ್ಟೇ ಬಿಟ್ರು ವಿಲನ್ ಪ್ರೇಮ್

  prem reveals one of the villain's secret

  ದಿ ವಿಲನ್ ಚಿತ್ರದ ಕಥೆಯನ್ನೇ ನಂಗೆ ಹೇಳಿಲ್ಲ. ಶಿವಣ್ಣಂಗೂ ಹೇಳಿಲ್ಲ. ಅವರಿಗೆ ಹೇಳಿದ್ದೀನಿ ಡಾರ್ಲಿಂಗ್ ಅಂತಾ ನಂಗೆ, ನಂಗೆ ಹೇಳಿದ್ದೀನಿ ಅಂಥಾ ಶಿವಣ್ಣಂಗೆ ಯಾಮಾರಿಸಿದ್ದಾರೆ ಪ್ರೇಮ್.. ಇದು ಆಗಾಗ್ಗೆ ವಿಲನ್ ನಿರ್ದೇಶಕ ಪ್ರೇಮ್ ಅವರನ್ನು ಸುದೀಪ್ ಅವರು ಗೋಳಾಡಿಸುವ ಪರಿ. ಪ್ರೇಮ್ ಇರೋದೇ ಹಾಗೆ. ಗುಟ್ಟು ಬಿಟ್ಟುಕೊಡಲ್ಲ. ಇಷ್ಟೆಲ್ಲ ಆಗಿಯೂ.. ಈ ಬಾರಿ ಪ್ರೇಮ್ ದಿ ವಿಲನ್ ಚಿತ್ರದ ಒಂದು ಮಹಾ ಸೀಕ್ರೆಟ್ ಹೊರಹಾಕಿದ್ದಾರೆ.

  ದಿ ವಿಲನ್ ಚಿತ್ರದ ಕ್ಲೈಮಾಕ್ಸ್‍ನಲ್ಲಿ ಫೈಟ್ ಇಲ್ಲವಂತೆ. ಅದು ಸೆಂಟಿಮೆಂಟ್ ದೃಶ್ಯ ಎಂಬ ಮಾಹಿತಿಯನ್ನು ಸ್ವತಃ ಪ್ರೇಮ್ ಅವರೇ ಹೊರಹಾಕಿರುವುದು ವಿಶೇಷ. ಶಿವಣ್ಣ ಮತ್ತು ಸುದೀಪ್ ಇಬ್ಬರೂ ಕಮರ್ಷಿಯಲ್ ಹೀರೋಗಳು. ಅವರನ್ನಿಟ್ಟುಕೊಂಡು ಆ್ಯಕ್ಷನ್ ಸಿನಿಮಾ ಮಾಡೋದು ದೊಡ್ಡದಲ್ಲ. ಒಂದು ಉದ್ದೇಶ, ಸಂದೇಶ ಇಟ್ಟುಕೊಂಡು ಸೆಂಟಿಮೆಂಟ್ ಕಥೆ ಇರುವ ಸಿನಿಮಾ ಮಾಡಿದ್ದೇನೆ ಎಂದಿದ್ದಾರೆ ಪ್ರೇಮ್.

  ಕ್ಲೈಮಾಕ್ಸ್‍ನಲ್ಲಿ ಫೈಟ್ ಸೀನ್ ಇಲ್ಲ ಎನ್ನುವ ಮೂಲಕ ಪ್ರೇಮ್ ಒಂದು ಗುಟ್ಟನ್ನಷ್ಟೇ ಹೊರಹಾಕಿದ್ದಾರೆ. ಉಳಿದ ಗುಟ್ಟುಗಳನ್ನೆಲ್ಲ ಈಗಲೇ ಹೇಳೋಕೆ ಸಾಧ್ಯವಿಲ್ಲ. ಸಿ.ಆರ್.ಮನೋಹರ್ ನಿರ್ಮಾಣದ ಈ ಸಿನಿಮಾದ ಮಿಕ್ಕ ಎಲ್ಲ ಗುಟ್ಟುಗಳನ್ನೂ ನೋಡೋಕೆ ಆಯುಧಪೂಜೆವರೆಗೆ ಕಾಯಲೇಬೇಕು.

 • ಕಲಿ ಪ್ರೇಮ್ ಚಿತ್ರದಲ್ಲಿ ಮಂಗಳೂರು ಬಾಂಬರ್ ಕಥೆ

  jogi prem's next film titled i am khalki

  ಮಂಗಳೂರು ಏರ್‍ಪೋರ್ಟ್ ಬಾಂಬ್ ಘಟನೆ ನಡೆದು ವಾರವೂ ಕಳೆದಿಲ್ಲ. ಅರೆಸ್ಟ್ ಆಗಿರುವ ಆದಿತ್ಯ ರಾವ್ ಕುರಿತಂತೆ ಒಂದು ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲ. ಆದರೆ, ಸ್ಯಾಂಡಲ್‍ವುಡ್ ಅದೆಷ್ಟು ಫಾಸ್ಟ್ ಆಗಿದೆ ಅಂದ್ರೆ, ಹೊಸ ಚಿತ್ರದಲ್ಲಿ ಬಾಂಬರ್ ಕಥೆಯೊಂದು ಎಂಟ್ರಿ ಕೊಟ್ಟಿದೆ. ಚಿತ್ರದ ಹೆಸರು ಐ ಆ್ಯಮ್ ಕಲ್ಕಿ.

  ಐ ಆ್ಯಮ್ ಕಲ್ಕಿ ಚಿತ್ರಕ್ಕೆ ಜೋಗಿ ಪ್ರೇಮ್ ಹೀರೋ. ಪ್ರೇಮ್ ಅವರೇ ನಿರ್ದೇಶಿಸಬೇಕಿದ್ದ ಶಿವಣ್ಣ-ಸುದೀಪ್ ಕಾಂಬಿನೇಷನ್ನಿನ ಕಲಿ ಚಿತ್ರ ನೆನಪಾಗಬಹುದು. ಆದರೆ, ಇದು ಅದಲ್ಲ. ಈ ಚಿತ್ರಕ್ಕೆ ಡೈರೆಕ್ಟರ್ ಚಕ್ರವರ್ತಿ ಚಂದ್ರಚೂಡ್. ಅಷ್ಟೇ ಅಲ್ಲ, ಅವರೇ ಆದಿತ್ಯ ರಾವ್ ಕ್ಯಾರೆಕ್ಟರ್ ಮಾಡುವ ಸಾಧ್ಯತೆ ಇದೆಯಂತೆ.

  ಕನ್ನಡ ಮತ್ತು ತಮಿಳಿನಲ್ಲಿ ನಿರ್ಮಾಣವಾಗುತ್ತಿರುವ ಐ ಆ್ಯಮ್ ಕಲ್ಕಿ ಚಿತ್ರಕ್ಕೆ ಆನೆ ಪಟಾಕಿ ಎಂಬ ಚಿತ್ರ ನಿರ್ಮಿಸಿದ್ದ ಸುರೇಶ್ ನಿರ್ಮಾಪಕ.

 • ಕಿತಾಪತಿ ವೀರರು ದರ್ಶನ್-ಜೋಗಿ ಪ್ರೇಮ್ ಚಿತ್ರಕ್ಕೆ ಮುಹೂರ್ತ ಇಟ್ಟಾಗ..

  ಕಿತಾಪತಿ ವೀರರು ದರ್ಶನ್-ಜೋಗಿ ಪ್ರೇಮ್ ಚಿತ್ರಕ್ಕೆ ಮುಹೂರ್ತ ಇಟ್ಟಾಗ..

  ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ದೊಡ್ಡ ಹೆಸರು ತಂದುಕೊಟ್ಟ ಚಿತ್ರ ಕರಿಯಾ. ಅದು ಜೋಗಿ ಪ್ರೇಮ್ ಅವರ ಮೊದಲ ಚಿತ್ರವೂ ಹೌದು. ಕರಿಯಾ ಚಿತ್ರದ ನಂತರ ಪ್ರೇಮ್ ಮತ್ತು ದರ್ಶನ್ ಒಂದಾಗಿಲ್ಲ. ಅವರಿಬ್ಬರೂ ಒಟ್ಟಿಗೇ ಸಿನಿಮಾ ಮಾಡೋದು ಯಾವಾಗ ಅನ್ನೋ ಪ್ರಶ್ನೆ ಅಭಿಮಾನಿಗಳದ್ದು. ಮಾಡೋಣ ಎನ್ನುವ ಉತ್ತರ ಎರಡೂ ಕಡೆಗಳಿಂದ ಬರುತ್ತಿದೆ. ಆದರೆ, ಈಗ ಆ ಚಿತ್ರಕ್ಕೆ ಮುಹೂರ್ತವನ್ನೇ ಫಿಕ್ಸ್ ಮಾಡಿದ್ದಾರೆ ಕಿತಾಪತಿ ವೀರರು.

  ನಾನು ಮತ್ತು ದರ್ಶನ್ ಒಟ್ಟಿಗೇ ಸಿನಿಮಾ ಮಾಡೋದು ಯಾವಾಗ ಅನ್ನೋ ಪ್ರಶ್ನೆಯನ್ನ ಎಲ್ಲರೂ ಕೇಳ್ತಾ ಇದ್ರು. ಇವತ್ತು ದರ್ಶನ್ ಜೊತೆಗೆ ನನ್ನ ಡಿ55 ಚಿತ್ರದ ಘೋಷಣೆ ಮಾಡುತ್ತಿದ್ದೇನೆ. ಶೀಘ್ರದಲ್ಲೇ ಟೈಟಲ್ ಮತ್ತು ಫಸ್ಟ್ ಲುಕ್ ತೋರಿಸ್ತೇನೆ ಎಂಬ ಟ್ವೀಟ್ ಸದ್ದು ಮಾಡಿತ್ತು. ಅದನ್ನು ರಾಕ್‍ಲೈನ್ ವೆಂಕಟೇಶ್ ಅವರ ಪೇಜಿನಲ್ಲಿ ನೋಡ್ತಾ ಇರಿ ಎನ್ನುವ ಮೂಲಕ ಆ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕರು ಎಂಬ ಕ್ಲೂ ಕೂಡಾ ಕೊಡಲಾಗಿತ್ತು. ಆದರೆ, ಇದೆಲ್ಲ ಕಿತಾಪತಿ ವೀರರ ಕಿತಾಪತಿ ಎಂದು ಸ್ವತಃ ರಕ್ಷಿತಾ ಪ್ರೇಮ್ ಹೇಳಿದ್ದಾರೆ.

  ನನಗೂ ಅವರಿಬ್ಬರೂ ಒಟ್ಟಿಗೇ ಸಿನಿಮಾ ಮಾಡಬೇಕು ಎಂಬ ಆಸೆಯಿದೆ. ಅದು ಕೈಗೂಡಲು ನಾನೂ ಪ್ರಯತ್ನಿಸುತ್ತೇನೆ. ಆದರೆ, ಈ ಸುದ್ದಿ ಮಾತ್ರ ಸುಳ್ಳು. ಇದನ್ನು ನಂಬಬೇಡಿ ಎಂದು ಸ್ವತಃ ರಕ್ಷಿತಾ ಪ್ರೇಮ್ ಹೇಳಿದ್ದಾರೆ.

 • ಗಾಂಧಿನಗರದಲ್ಲೇ 3 ಥಿಯೇಟರ್‍ಗಳಲ್ಲಿ ದಿ ವಿಲನ್

  the villain will release in 3 theraters in gandhinagar

  ದಿ ವಿಲನ್. ಶಿವರಾಜ್‍ಕುಮಾರ್, ಸುದೀಪ್ ಅಭಿನಯದ ಚಿತ್ರ ಬಿಡುಗಡೆಗೂ ಮೊದಲೇ ಸೆನ್ಸೇಷನ್ ಸೃಷ್ಟಿಸಿದೆ. ಎಷ್ಟರಮಟ್ಟಿಗೆಂದರೆ, ಸಾವಿರ ಥಿಯೇಟರ್‍ಗಳಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಅದರಲ್ಲೂ ಗಾಂಧಿನಗರದಲ್ಲಿ ಒಂದೇ ಕಡೆ 3 ಥಿಯೇಟರ್‍ಗಳಲ್ಲಿ ರಿಲೀಸ್ ಆಗುತ್ತಿದೆ. ಸಂತೊಷ್, ನರ್ತಕಿ ಹಾಗೂ ಪಕ್ಕದಲ್ಲೇ ಇರುವ ತ್ರಿವೇಣಿ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.

  ಸೆನ್ಸಾರ್‍ನಲ್ಲಿ ಯು/ಎ  ಪ್ರಮಾಣ ಪತ್ರ ಪಡೆದಿರವ ದಿ ವಿಲನ್, ಸೆಪ್ಟೆಂಬರ್ 20ಕ್ಕೆ ರಿಲೀಸ್ ಆಗುವ ಸಾಧ್ಯತೆ ಇದೆ. ಜೋಗಿ ಪ್ರೇಮ್ ಚಿತ್ರದ ಅದ್ಧೂರಿ ಬಿಡುಗಡೆಗೆ ಹೊಸ ಪ್ಲಾನ್ ಮಾಡಿಕೊಂಡಿದ್ದರೆ, ನಿರ್ಮಾಪಕ ಸಿ.ಆರ್.ಮನೋಹರ್.. ಒಂದು ಸಾವಿರ ಥಿಯೇಟರುಗಳಲ್ಲಿ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದಾರಂತೆ. ಕೆಲವೇ ದಿನ. ಗೌರಿ, ಗಣೇಶ ಹಬ್ಬ ಕಳೆಯುತ್ತಿದ್ದಂತೆ ವಿಲನ್ ಹಬ್ಬ ಶುರುವಾಗಲಿದೆ.

 • ಜೋಗಿ ಪ್ರೇಮ್ V/S ಕನಕಪುರ ಶ್ರೀನಿವಾಸ್ - ಏನ್ರೀ ಇದು ಜಗಳ..?

  jogi prem vs kanakpura srinivas fight

  ಜೋಗಿ ಪ್ರೇಮ್ ಇತ್ತೀಚೆಗೆ ಯಾಕೋ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ದಿ ವಿಲನ್ ಸಿನಿಮಾ ವೇಳೆ ಕೆಲವು ವಿವಾದ ಮಾಡಿಕೊಂಡಿದ್ದ ಪ್ರೇಮ್ ವಿರುದ್ಧ ಈಗ ನಿರ್ಮಾಪಕ ಕನಕಪುರ ಶ್ರೀನಿವಾಸ್ ಮುಗಿಬಿದ್ದಿದ್ದಾರೆ. ಜೋಗಿ ಪ್ರೇಮ್, ಹಲವು ವರ್ಷಗಳ ಹಿಂದೆ ಸಿನಿಮಾ ಮಾಡೋದಾಗಿ 10 ಲಕ್ಷ ರೂ. ಅಡ್ವಾನ್ಸ್ ಪಡೆದುಕೊಂಡಿದ್ದರು. ಸಿನಿಮಾನೂ ಮಾಡಲಿಲ್ಲ. ಅಡ್ವಾನ್ಸ್ ಹಣವನ್ನೂ ವಾಪಸ್ ಕೊಡಲಿಲ್ಲ. ಈಗ ಕೇಳೋಕೆ ಹೋದರೆ ಬೈದು ಕಳಿಸ್ತಾರೆ ಅನ್ನೋದು ನಿರ್ಮಾಪಕ ಕನಕಪುರ ಶ್ರೀನಿವಾಸ್ ವಾದ.

  ಅಡ್ವಾನ್ಸ್ ಪಡೆದಿದ್ದೆ ಅನ್ನೋದು ನಿಜ. 5 ಲಕ್ಷದ ಚೆಕ್, 4 ಲಕ್ಷ ಕ್ಯಾಷ್ ಪಡೆದಿದ್ದೆ. ರಾಜ್ ದಿ ಶೋಮ್ಯಾನ್ ಮುಗಿಸಿದ ಮೇಲೆ, ಅವರ ಸಿನಿಮಾಗೆಂದೇ ಒಂದುವರೆ ವರ್ಷ ಕೆಲಸ ಮಾಡಿದೆ. ನನ್ನೊಂದಿಗೆ 12-13 ಜನ ಕೆಲಸ ಮಾಡಿದ್ದರು. ಇವರನ್ನು ನಂಬಿ ಸ್ಕ್ರಿಪ್ಟ್ ಮಾಡುತ್ತಾ ಬೇರೆ ಸಿನಿಮಾಗಳನ್ನೂ ಮಿಸ್ ಮಾಡಿಕೊಂಡೆ. ಇವರು ಕೊನೆಗೂ ಸಿನಿಮಾ ಮಾಡಲಿಲ್ಲ. ನಾನೇನು ಮಾಡಲಿ ಎಂದಿದ್ದಾರೆ ಪ್ರೇಮ್.

  ಇಬ್ಬರ ನಡುವಿನ ಜಗಳ ಅಮ್ಮ, ಅಕ್ಕ, ಏಕವಚನದಲ್ಲೂ ಆಗಿದೆ. ಕನಕಪುರ ಶ್ರೀನಿವಾಸ್ ಪ್ರೇಮ್ ಕಚೇರಿ ಎದುರು ಪ್ರತಿಭಟನೆಯನ್ನೂ ಮಾಡಿದ್ದಾರೆ.

  ವಿಚಿತ್ರ ಅಂದ್ರೆ, ಇದೇ ಕನಕಪುರ ಶ್ರೀನಿವಾಸ್ ವಿರುದ್ಧ, ಸಿನಿಮಾ ನಿರ್ದೇಶನ ಮಾಡಿದ್ದಕ್ಕೆ ಸಂಭಾವನೆ ಕೊಟ್ಟಿಲ್ಲ ಎಂದು ನಿರ್ದೇಶಕ ಯೋಗರಾಜ್ ಭಟ್ ಕೋರ್ಟ್ ಮೆಟ್ಟಿಲೇರಿದ್ದರು. ಭರ್ಜರಿ ಯಶಸ್ಸು ಕಂಡ ಭರ್ಜರಿ ಚಿತ್ರತಂಡವೂ ಇದೇ ಶ್ರೀನಿವಾಸ್ ವಿರುದ್ಧ ಅಸಮಾಧಾನ ಹೊರಹಾಕಿತ್ತು. ಹೀಗೆ ಸಂಭಾವನೆ ನೀಡುತ್ತಿಲ್ಲ ಎಂಬ ಆರೋಪ ಹೊತ್ತಿರುವ ಕನಕಪುರ ಶ್ರೀನಿವಾಸ್ ಅವರೇ, ನಾನು ಕೊಟ್ಟಿದ್ದ ಅಡ್ವಾನ್ಸ್ ನನಗೆ ಸಿಕ್ಕಿಲ್ಲ ಎಂದು ಪ್ರೇಮ್ ವಿರುದ್ಧ ಜಗಳಕ್ಕಿಳಿದಿದ್ದಾರೆ. ವಿಚಿತ್ರ ಅಂದ್ರೆ ಇದೇ ಅಲ್ವೇ..

 • ಜೋಗಿ ಪ್ರೇಮ್ ಗಾಂಧಿಗಿರಿ ಶುರು

  prem starts gandhigiri

  ದಿ ವಿಲನ್ ಚಿತ್ರವನ್ನು ಅದ್ಧೂರಿಯಾಗಿ ತೆರೆಗೆ ತಂದ ನಿರ್ದೇಶಕ ಪ್ರೇಮ್, ಈಗ ಗಾಂಧಿಗಿರಿಗಿಳಿದಿದ್ದಾರೆ. ಗಾಂಧಿಗಿರಿ, ಸ್ವತಃ ಪ್ರೇಮ್ ಅಭಿನಯಿಸುತ್ತಿರುವ ಸಿನಿಮಾ. ಈ ಚಿತ್ರದಲ್ಲಿ ಪ್ರೇಮ್‍ರ ಪ್ರೀತಿಯ ಜೋಗಿಯ ಅಮ್ಮ ಅರುಂಧತಿ ನಾಗ್, ಪ್ರೇಮ್‍ಗೆ ತಾಯಿಯಾಗಿದ್ದಾರೆ. ರಾಗಿಣಿ ಚಿತ್ರದ ನಾಯಕಿ. ರಘು ಹಾಸನ್ ನಿರ್ದೇಶನದ ಸಿನಿಮಾದಲ್ಲಿ ಸಂಪೂರ್ಣ ಮುಳುಗಿದ್ದಾರೆ ಪ್ರೇಮ್.

  ಈ ನಡುವೆ ದಿ ವಿಲನ್ ಚಿತ್ರವನ್ನು ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೆಯುತ್ತಿದೆ. ಆ ಕೆಲಸದಲ್ಲೂ ಪ್ರೇಮ್ ತೊಡಗಿಸಿಕೊಂಡಿದ್ದಾರೆ.

 • ಜೋಗಿ ಪ್ರೇಮ್ ಚಿತ್ರಕ್ಕೂ ಕಣ್ಣು ಹೊಡ್ಯಾಕ್ ಬಂದ ಮಂಗ್ಲಿ..

  ಜೋಗಿ ಪ್ರೇಮ್ ಚಿತ್ರಕ್ಕೂ ಕಣ್ಣು ಹೊಡ್ಯಾಕ್ ಬಂದ ಮಂಗ್ಲಿ..

  ಕಣ್ಣೂ ಹೊಡಿಯಾಕ ಮೊನ್ನೀ ಕಲಿತ್ಯಾನಿ.. ಹಾಡನ್ನು ಕಣ್ಣೇ ಅದಿರಿಂದಿ.. ಎಂದು ತೆಲುಗಿನಲ್ಲಿ ಹಾಡಿ ಫೇಮಸ್ ಆದವರು ಮಂಗ್ಲಿ. ಅಪ್ಪಟ ರಾ ಲುಕ್.. ರಾ ವಾಯ್ಸ್ ಇರೋ ಮಂಗ್ಲಿ ಈಗ ಜೋಗಿ ಪ್ರೇಮ್ ಚಿತ್ರಕ್ಕೆ ಬಂದಿದ್ದಾರೆ. ಏಕ್ ಲವ್ ಯಾ ಚಿತ್ರದಲ್ಲಿ ಒಂದು ಹಾಡನ್ನೂ ಹಾಡಿದ್ದಾರೆ. ಅದು ಎಣ್ಣೆ ಹಾಡಂತೆ.

  ರಕ್ಷಿತಾ ಪ್ರೇಮ್ ಅವರ ತಮ್ಮ ರಾಣಾ ಹೀರೋ ಆಗಿ ಎಂಟ್ರಿ ಕೊಡುತ್ತಿರೋ ಚಿತ್ರ ಏಕ್ ಲವ್ ಯಾ. ರಚಿತಾ ರಾಮ್ ಮತ್ತು ರೀಷ್ಮಾ ನಾಣಯ್ಯ, ಇಬ್ಬರು ಹೀರೋಯಿನ್‍ಗಳು. ಈ ಎಣ್ಣೆ ಹಾಡಿನಲ್ಲಿ ರಕ್ಷಿತಾ ಕೂಡಾ ಹೆಜ್ಜೆ ಹಾಕಿದ್ದಾರೆ.

  ಪ್ರೇಮ್ ಚಿತ್ರಗಳಲ್ಲಿ ಹಾಡುಗಳಂತೂ ಬೊಂಬಾಟ್ ಆಗಿರುತ್ತವೆ. ಪ್ರೇಮ್-ಜನ್ಯಾ ಕಾಂಬಿನೇಷನ್ ಈಗಾಗಲೇ ವಿಲನ್ ಚಿತ್ರದಲ್ಲಿ ವ್ಹಾವ್ ಎನ್ನಿಸಿಕೊಂಡಿದೆ. ಅಂತಾದ್ದರಲ್ಲಿ ಮಂಗ್ಲಿಯ ವಾಯ್ಸ್‍ನ ಕಿಕ್ಕೂ ಸೇರಿದರೆ.. ಹಾಡು ಇನ್ನೆಷ್ಟು ಕಿಕ್ಕೇರಿಸಲಿದೆಯೋ..

 • ಜೋಗಿ ಪ್ರೇಮ್ ಜೊತೆ ಡಿಂಪಲ್ ಕ್ವೀನ್

  rachita ram in ek love ya

  ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತೊಮ್ಮೆ ಜೋಗಿ ಪ್ರೇಮ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ರಕ್ಷಿತಾ ಅವರ ತಮ್ಮನನ್ನು ಪರಿಚಯಿಸುತ್ತಿರುವ ಏಕ್ ಲವ್ ಯಾ ಚಿತ್ರದಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಹಾಗಂತ, ರಚಿತಾ ರಾಮ್ ಹೀರೋಯಿನ್ ಅಲ್ಲ, ಅರ್ಥಾತ್ ಹೀರೋನ ಪ್ರೇಯಸಿ ಅಲ್ಲ. ಆದರೆ, ಅತ್ಯಂತ ಪ್ರಮುಖವಾದ ಪಾತ್ರವಂತೆ.

  ವಿಲನ್ ಚಿತ್ರದ ಹಾಡೊಂದರಲ್ಲಿ ನಾನು ನಟಿಸಿದ್ದೆ. ಆದರೆ, ಪ್ರೇಮ್ ಅವರ ಡೆಡಿಕೇಷನ್ ಬಹಳ ಇಷ್ಟವಾಗಿತ್ತು. ಅವರು ಬಹಳ ಒಳ್ಳೆಯ ನಿರ್ದೇಶಕ. ಅವರು ನನ್ನನ್ನು ಸೆಟ್‍ನಲ್ಲಿ ಗೌಡ್ತಿ  ಅಂತಾ ಕರೀತಿದ್ರೆ, ನಾನು ಗೌಡಾ ಸರ್ ಅಂತ ಕೂಗ್ತಿದ್ದೆ. ಈ ಚಿತ್ರದಲ್ಲಿ ನನ್ನದು ಅತ್ಯಂತ ಮುಖ್ಯ ಪಾತ್ರ ಎಂದಿದ್ದಾರೆ ರಚಿತಾ ರಾಮ್.

  ರಕ್ಷಿತಾ ಪ್ರೇಮ್ ಅವರ ಸೋದರ ರಾಣಾ  ಏಕ್ ಲವ್ ಯಾ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಕ್ಷಿತಾ ಅವರೇ ಚಿತ್ರದ ನಿರ್ಮಾಪಕಿ.

 • ಜೋಗಿ ಪ್ರೇಮ್ ಮನೆಗೆ ಮಂಡೋದರಿ.. ಭೈರವಿ.

  Jogi Prem Buys 2 Buffaloes In Gujarat

  ಜೋಗಿ ಪ್ರೇಮ್ ತಮ್ಮ ಮನೆಗೆ ಒಬ್ಬ ಮಂಡೋದರಿಯನ್ನೂ.. ಮತ್ತೊಬ್ಬ ಭೈರವಿಯನ್ನೂ ಕರೆದು ತಂದಿದ್ದಾರೆ. ಈ ಮಂಡೋದರಿ, ಭೈರವಿ ಯಾರು ಅಂತೀರಾ.. ಎರಡು ಒಳ್ಳೆಯ ಎಮ್ಮೆಗಳು. ಒಂದು ತಾಯಿ ಎಮ್ಮೆ.. ಇನ್ನೊಂದು ಅದರ ಮಗಳು ಎಮ್ಮೆ.

  ಪ್ರೇಮ್ ಇತ್ತೀಚೆಗೆ ಏಕ್ ಲವ್ ಯಾ ಚಿತ್ರದ ಶೂಟಿಂಗ್`ಗೆ ಲೊಕೇಷನ್ ನೋಡಲೆಂದು ಗುಜರಾತ್‍ನ ಕಛ್`ಗೆ ಹೋಗಿದ್ದರು. ಅಲ್ಲಿ ಅವರಿಗೆ ಒಂದು ಎಮ್ಮೆ ಇಷ್ಟವಾಗಿಬಿಡ್ತು. ಸ್ಸೋ.. ಸೀದಾ ಎರಡು ಎಮ್ಮೆ ಖರೀದಿಸಿಕೊಂಡು ಮಂಡ್ಯಕ್ಕೆ ತಂದೇಬಿಟ್ರು.

  2 ಸಾವಿರ ಕಿ.ಮೀ. ದೂರದಿಂದ ಬಂದ ಆ ಎಮ್ಮೆಗಳಿಗೆ ಮಂಡೋದರಿ, ಭೈರವಿ ಅನ್ನೋ ಹೆಸರಿಟ್ಟು ನಾಮಕರಣ ಮಾಡಿದ ಪ್ರೇಮ್, ಅಮ್ಮನ ತೋಟದಲ್ಲಿ ಸಾಕುತ್ತಿದ್ದಾರೆ.

 • ಜೋಗಿ ಪ್ರೇಮ್‍ಗಾಗಿ ಪ್ರತಿಜ್ಞೆ ಮುರಿದ ದರ್ಶನ್

  darshan breaks his rules for prem

  ಜೋಗಿ ಪ್ರೇಮ್ ಮತ್ತು ದರ್ಶನ್, ಇಬ್ಬರೂ ಜೊತೆಯಾಗಿ ಕೆಲಸ ಮಾಡಿದವರೇ. ದರ್ಶನ್ ಅಭಿನಯದ ಕರಿಯ ಚಿತ್ರ, ಪ್ರೇಮ್ ನಿರ್ದೇಶನದ ಮೊದಲ ಚಿತ್ರ. ಆ ಸಿನಿಮಾ ದರ್ಶನ್‍ಗೆ ದೊಡ್ಡ ಇಮೇಜ್ ನೀಡಿದ ಚಿತ್ರವೂ ಹೌದು. ಇವರಿಬ್ಬರೂ ಈಗ ಮತ್ತೆ ಒಟ್ಟಾಗುತ್ತಿದ್ದಾರಂತೆ.

  ಶೈಲಜಾ ನಾಗ್ ನಿರ್ಮಾಣದ ಚಿತ್ರ ಮುಗಿದ ನಂತರ ಪ್ರೇಮ್ & ದರ್ಶನ್ ಜೋಡಿಯ ಚಿತ್ರ ಸೆಟ್ಟೇರುವ ಸಾಧ್ಯತೆಗಳಿವೆ. ತಾರಕ್ ಚಿತ್ರದ ನಂತರ 65 ದಿನಕ್ಕಿಂತ ಹೆಚ್ಚಿಗೆ ಯಾರಿಗೂ ಕಾಲ್‍ಶೀಟ್ ಕೊಡಲ್ಲ ಎಂದು ಪ್ರತಿಜ್ಞೆ ಮಾಡಿದ್ದ ದರ್ಶನ್, ಪ್ರೇಮ್‍ಗಾಗಿ ಆ ಪ್ರತಿಜ್ಞೆಯನ್ನೂ ಮುರಿದಿದ್ದಾರೆ. 85 ದಿನಗಳ ಕಾಲ್‍ಶೀಟ್ ಕೊಟ್ಟಿದ್ದಾರಂತೆ. 

  ಪ್ರೇಮ್-ದರ್ಶನ್ ಜೋಡಿಯ ಚಿತ್ರಕ್ಕೆ ನಿರ್ಮಾಪಕರಾಗುತ್ತಿರುವುದು ಹೆಬ್ಬುಲಿ ಉಮಾಪತಿ. ಸದ್ಯಕ್ಕೆ ದಿ ವಿಲನ್ ಬ್ಯುಸಿಯಲ್ಲಿರುವ ಪ್ರೇಮ್, ಆ ನಂತರ ಈ ಮೆಗಾ ಚಿತ್ರಕ್ಕೆ ಸಿದ್ಧವಾಗಲಿದ್ದಾರೆ.

   

 • ಜೋಗಿ ಪ್ರೇಮ್‍ಗೆ ಧೈರ್ಯ ಹೇಳಿದ ಕಿಚ್ಚ

  sudeep wishes prem

  ದಿ ವಿಲನ್ ಚಿತ್ರದ ಸಕ್ಸಸ್ ಖುಷಿಯಲ್ಲಿರುವ ನಿರ್ದೇಶಕ ಜೋಗಿ ಪ್ರೇಮ್, ಅಷ್ಟೇ ಪ್ರಮಾಣದ ಟೀಕೆಯನ್ನೂ ಎದುರಿಸುತ್ತಿದ್ದಾರೆ. ಹೀಗೆ ಟೀಕೆ ಎದುರಿಸುತ್ತಿದ್ದ ವೇಳೆಯಲ್ಲೇ ಪ್ರೇಮ್‍ಗೆ ಹುಟ್ಟುಹಬ್ಬದ ಸಂಭ್ರಮ. ಆ ಸಂಭ್ರಮಕ್ಕೆ ವಿಶ್ ಮಾಡಿರುವ ಕಿಚ್ಚ ಸುದೀಪ್, ಧೈರ್ಯವನ್ನೂ ತುಂಬಿದ್ದಾರೆ.

  `ಹುಟ್ಟುಹಬ್ಬದ ಶುಭಾಶಯಗಳು ಪ್ರೇಮ್. ಇಡೀ ವರ್ಷ ನಿನಗೆ ಶುಭವಾಗಲಿ. ಸದಾ ನಗುನಗುತ್ತಲೇ ಇರಿ. ಮರೆಯಬೇಡ.. ನೀನು ಯಾವಾಗ್ಯಾವಾಗ ದಾಳಿಗೆ ಒಳಗಾಗುತ್ತೀಯೋ.. ಆಗೆಲ್ಲ ನೀನು ಗಮನ ಸೆಳೆಯುವಂತಹ ಕೆಲಸ ಮಾಡುತ್ತಲೇ ಇರುತ್ತೀಯ ಎಂದರ್ಥ. ಈ ಹಂತವನ್ನು ಎಂಜಾಯ್ ಮಾಡು. ಸಕ್ಸಸ್‍ನ ಖುಷಿ ಅನುಭವಿಸು'

  ಇದು ಪ್ರೇಮ್‍ಗೆ ಕಿಚ್ಚ ಹೇಳಿರುವ ಧೈರ್ಯ ಮತ್ತು ಹುಟ್ಟುಹಬ್ಬದ ಶುಭಾಶಯ.

 • ಜೋಗಿ ಪ್ರೇಮ್‍ರಿಂದ ಮತ್ತೊಮ್ಮೆ ಅಮ್ಮನ ಹಾಡು

  jogi prem is back with amma song

  ಜೋಗಿ ಪ್ರೇಮ್ ಅವರ ಚಿತ್ರಗಳಲ್ಲಿ ಮದರ್ ಸೆಂಟಿಮೆಂಟ್ ಕಡ್ಡಾಯ. ಇವತ್ತಿಗೂ ಜೋಗಿ ಚಿತ್ರದ ಬೇಡುವೆನು ವರವನ್ನು ಕೊಡುತಾಯೆ ಜನ್ಮವನು ಹಾಗೂ ಎಕ್ಸ್‍ಕ್ಯೂಸ್ ಮಿ ಚಿತ್ರದ ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ.. ಹಾಡು ಕೇಳದವರಿಲ್ಲ. ಮೆಚ್ಚದವರಿಲ್ಲ. ಕಣ್ಣೀರು ಹಾಕದವರೂ ಇಲ್ಲ. ಇಂತಹ ಪ್ರೇಮ್, ಈಗ ಮತ್ತೊಂದು ತಾಯಿಗೆ ಧ್ವನಿಯಾಗುತ್ತಿದ್ದಾರೆ.

  ಚಿರಂಜೀವಿ ಸರ್ಜಾ, ಆದಿತಿ ಪ್ರಭುದೇವ ನಟನೆಯ ಸಿಂಗ ಚಿತ್ರದಲ್ಲಿ ಪ್ರೇಮ್ ತಾಯಿ ಸೆಂಟಿಮೆಂಟ್ ಹಾಡು ಹಾಡೋಕೆ ಓಕೆ ಎಂದಿದ್ದಾರೆ. ಕಣ್ಣು ಮರೆಯಬಹುದು ಕಂದನನ್ನು.. ಕರುಳು ಮರೆಯಬಹುದೇ ತನ್ನ ಕೂಸನ್ನು.. ಎಂಬ ಈ ಹಾಡಿನ ಟ್ಯೂನ್, ಸಾಹಿತ್ಯ ಪ್ರೇಮ್ ಅವರಿಗೆ ಇಷ್ಟವಾಗಿದೆ. ಪ್ರೇಮ್ ಅವರಿಂದಲೇ ಈ ಹಾಡು ಹಾಡಿಸಬೇಕು ಎಂದುಕೊಂಡಿದ್ದ ಸಿಂಗ ಚಿತ್ರದ ನಿರ್ದೇಶಕ ವಿಜಯ್ ಕಿರಣ್ ಅವರಿಗೆ ಪ್ರೇಮ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಧರ್ಮವಿಶ್ ಟ್ಯೂನ್ ಕೂಡಾ ಇಷ್ಟವಾಗಿದೆ.

  ಅಮ್ಮ ಐ ಲವ್ ಯೂ ಚಿತ್ರದಲ್ಲಿ ಅಮ್ಮಾ.. ನನ್ನ ಈ ಜನುಮ.. ನಿನ್ನಾ ವರದಾನವನ್ನ.. ಎಂಬ ಹಾಡಿಗೆ ಸಾಹಿತ್ಯ ಬರೆದಿದ್ದ ನಾಗೇಂದ್ರ ಪ್ರಸಾದ್ ಅವರದ್ದೇ ಸಾಹಿತ್ಯ, ಈ ಹಾಡಿಗಿದೆ. ಉದಯ್ ಮೆಹ್ತಾ ನಿರ್ಮಾಣದ ಸಿಂಗ ಚಿತ್ರದಲ್ಲಿ ಚಿರು ತಾಯಿಯಾಗಿ ನಟಿಸುತ್ತಿರುವುದು ತಾರಾ.

 • ಜೋಗಿಗೆ 15 : ಸಂಭ್ರಮಕ್ಕೆ ಜೊತೆಯಾಗಲಿದ್ದಾರೆ ಪ್ರೇಮ್

  jogi launch image

  ದೂರಾ ಹೋದರೂ.. ಎಲ್ಲೇ ಇದ್ದರೂ.. ನೀನೇ ಮರೆತರೂ ತಾಯಿ ಮರೆಯಲ್ಲ.. ಸಾವೇ ಬಂದರೂ.. ಮಣ್ಣೇ ಆದರೂ.. ತಾಯೀ ಪ್ರೀತಿಗೆಂದೆಂದೂ ಕೊನೆಯಿಲ್ಲ..

  ಈ ಹಾಡಿನ ಸಾಹಿತ್ಯ ಅದೆಷ್ಟು ತಾಯಿ ಮಕ್ಕಳಲ್ಲಿ ಕಣ್ಣೀರು ಹಾಕಿಸಿದೆಯೋ.. ಅಂತಾದ್ದೊಂದು ಸಾಹಿತ್ಯವನ್ನು ಜೋಗಿ ಪ್ರೇಮ್ ಸ್ವಲ್ಪವೇ ಸ್ವಲ್ಪ ಬದಲಿಸಿದ್ದಾರೆ. ಸಾವೇ ಬಂದರೂ.. ಮಣ್ಣೇ ಆದರೂ.. ನಿಮ್ಮ ಪ್ರೀತಿ ಅಭಿಮಾನಕ್ಕೆಂದೆಂದೂ ಕೊನೆಯಿಲ್ಲ.. ಎಂದಿದ್ದಾರೆ ಪ್ರೇಮ್.

  ಪ್ರೇಮ್ ಈ ಮಾತು ಹೇಳೋಕೆ ಕಾರಣ ಇಷ್ಟೆ, ನಾಳೆ ಅಂದ್ರೆ ಆಗಸ್ಟ್ 19ರಂದು ಜೋಗಿ ಸಿನಿಮಾ ರಿಲೀಸ್ ಆಗಿ 15 ವರ್ಷ. ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದು ಹೊಸ ಇತಿಹಾಸ ಸೃಷ್ಟಿಸಿದ್ದ ಚಿತ್ರದ 15ನೇ ವರ್ಷದ ಸಂಭ್ರಮವನ್ನು ಶಿವಣ್ಣ ಫ್ಯಾನ್ಸ್ ಹಬ್ಬ ಮಾಡುತ್ತಿದ್ದಾರೆ. ಹೀಗಾಗಿ ಜೋಗಿ ಪ್ರೇಮ್ 19ರ ಸಂಜೆ 5 ಗಂಟೆಗೆ ತಮ್ಮ ಎಲ್ಲ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಲೈವ್ ಬರಲಿದ್ದಾರೆ.

 • ಟೀಸರ್‍ನಲ್ಲಿ ಗೆದ್ದ ವಿಲನ್ ಪ್ರೇಮ್

  two teasers of the villain released

  ನಿರ್ದೇಶಕ ಪ್ರೇಮ್ ಮೇಲೆ ಒಂದು ಕಂಪ್ಲೇಂಟ್ ಇದೆ. ಅವರು ಬಿಲ್ಡಪ್ ಜಾಸ್ತಿ ಕೊಡ್ತಾರೆ ಅನ್ನೋದು. ನಮ್ಮ ಸಿನಿಮಾಗೆ ನಾವೇ ಬಿಲ್ಡಪ್ ಕೊಡದೇ ಇದ್ರೆ ಇನ್ಯಾರ್ ಕೊಡ್ತಾರೆ ಅನ್ನೋದು ಪ್ರೇಮ್ ಅವರ ಸಮರ್ಥನೆ. ಆದರೆ, ದಿ ವಿಲನ್ ಟೀಸರ್‍ನಲ್ಲಿ ಬಿಲ್ಡಪ್‍ನ್ನೂ ಆಚೆಗಿಟ್ಟು ಪ್ರೇಮ್ ಗೆದ್ದಿರುವುದು ವಿಶೇಷ. 

  thevillain_teaser_launch.jpgಟೀಸರ್ ಎಂದರೆ, ಚಿತ್ರದ ಬಗ್ಗೆ ಕುತೂಹಲ, ನಿರೀಕ್ಷೆ ಹೆಚ್ಚಿಸುವಂತಿರಬೇಕು. ಶೋಕೇಸ್‍ನಲ್ಲಿರುವ ಬೊಂಬೆಯ ಹಾಗೆ. ಅಷ್ಟರಮಟ್ಟಿಗೆ ಟೀಸರ್ ಗೆದ್ದಿದೆ. 

  ಶಿವರಾಜ್‍ಕುಮಾರ್ ಮತ್ತು ಸುದೀಪ್‍ಗೆ ಪ್ರತ್ಯೇಕ ಟೀಸರ್ ಕೊಟ್ಟಿರುವ ಪ್ರೇಮ್, ರಾಮ, ರಾವಣರ ಕಥೆ ಹೇಳುತ್ತಿದ್ದಾರಾ..? ರಾಮ ಯಾರು..? ರಾವಣ ಯಾರು..? ಕುತೂಹಲ ಹೆಚ್ಚಿದೆ.

  ಕಣ್ಣು, ಧ್ವನಿಗಳ ಮೂಲಕ ನಟಿಸುತ್ತಿದ್ದ ಸುದೀಪ್, ಈ ಬಾರಿ ಬೆರಳುಗಳ ಮೂಲಕವೂ ನಟಿಸಿರೋದು ಸ್ಪೆಷಲ್. ಶಿವರಾಜ್‍ಕುಮಾರ್ ಕೂಡಾ ಅಷ್ಟೆ...ಕಣ್ಣಲ್ಲೇ ಬೆಂಕಿಯುಂಡೆ. ಟೀಸರ್‍ನಲ್ಲಿ ಗೆದ್ದಿರುವ ಪ್ರೇಮ್, ಸಿನಿಮಾದಲ್ಲೂ ಗೆಲ್ಲಲಿ. ಏಕೆಂದರೆ, ಇದು ಕನ್ನಡ ಚಿತ್ರರಂಗವೇ ಬಹುನಿರೀಕ್ಷೆಯಿಂದ ಎದುರು ನೋಡುತ್ತಿರುವ ಸಿನಿಮಾ. ಸಿ.ಆರ್.ಮನೋಹರ್ ನಿರ್ಮಾಣದ ಚಿತ್ರದಲ್ಲಿ ಆ್ಯಮಿ ಜಾಕ್ಸನ್ ನಾಯಕಿ. ಸಿನಿಮಾ ಆಗಸ್ಟ್‍ನಲ್ಲೇ ತೆರೆಗೆ ಬಂದರೂ ಅಚ್ಚರಿಯಿಲ್ಲ ಎನ್ನಲಾಗಿದೆ.

 • ತೆಲುಗಿಗೂ ಏಕ್ ಲವ್ ಯಾ : ರಕ್ಷಿತಾ ಪ್ರೇಮ್ ಭರ್ಜರಿ ಪ್ಲಾನ್

  ತೆಲುಗಿಗೂ ಏಕ್ ಲವ್ ಯಾ : ರಕ್ಷಿತಾ ಪ್ರೇಮ್ ಭರ್ಜರಿ ಪ್ಲಾನ್

  ಏಕ್ ಲವ್ ಯಾ ಚಿತ್ರ ಜನವರಿಯಲ್ಲಿ ರಿಲೀಸ್ ಆಗುತ್ತಿದೆ. 5 ಭಾಷಗಳಲ್ಲಿ ಬರುತ್ತಿರೋ ಚಿತ್ರದ ಹಾಡು, ಟೀಸರ್ ನೋಡಿದವರಿಗೆ ಇದು ಹೊಸ ನಟನ ಚಿತ್ರ ಎಂಬ ಫೀಲಿಂಗ್ ಬರುತ್ತಿಲ್ಲ. ಬದಲಿಗೆ ಇದು ಒಬ್ಬ ಸ್ಟಾರ್ ನಟನ ಚಿತ್ರ ಇರಬೇಕು ಎಂಬ ಭಾವನೆ ಬರುತ್ತಿದೆ. ಜೋಗಿ ಪ್ರೇಮ್ ಮೋಡಿಯೇ ಅಂಥದ್ದು. ಚಿತ್ರದ ಹಾಡು, ಟೀಸರ್‍ಗಳು ಕನ್ನಡದಲ್ಲಿ ಮೋಡಿ ಮಾಡಿವೆ. ಆ ಚಿತ್ರವನ್ನು ತೆಲುಗಿಗೂ ಕೊಂಡೊಯ್ಯೋಕೆ, ತಮ್ಮ ಪ್ರೀತಿಯ ತಮ್ಮನನ್ನು ತೆಲುಗಿನಲ್ಲಿ ಲಾಂಚ್ ಮಾಡೋಕೆ ಹೊರಟಿದ್ದಾರೆ ರಕ್ಷಿತಾ ಪ್ರೇಮ್.

  ರಕ್ಷಿತಾಗೆ ತೆಲುಗು ಇಂಡಸ್ಟ್ರಿ ಹೊಸದಲ್ಲ. ಒಂದು ಕಾಲದಲ್ಲಿ ರಕ್ಷಿತಾ ಆಳಿದ್ದ ಚಿತ್ರರಂಗವದು. ಅಲ್ಲಿ ಏಕ್ ಲವ್ ಯಾ ಚಿತ್ರದ ಈವೆಂಟ್ ಮಾಡುವುದು ರಕ್ಷಿತಾ ಯೋಜನೆ. ಇನ್ನು ರಕ್ಷಿತಾಗೆ ಪುರಿ ಜಗನ್ನಾಥ್, ಮಹೇಶ್ ಬಾಬು, ರವಿತೇಜ ಸೇರಿದಂತೆ ತೆಲುಗು ಇಂಡಸ್ಟ್ರಿಯ ದಿಗ್ಗಜರ ಜೊತೆ ಒಳ್ಳೆಯ ಬಾಂಧವ್ಯ ಈಗಲೂ ಇದೆ. ತಮ್ಮ ರಾಣಾನನ್ನು ಪರಿಚಯಿಸುವ ಕಾರ್ಯಕ್ರಮವನ್ನು ಅವರೆಲ್ಲರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮಾಡೋಕೆ ರಕ್ಷಿತಾ ರೆಡಿಯಾಗಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery